Ganayogi Pandit Puttaraj Gawai Question Answers 2026 | SSLC Kannada Notes PDF
Looking for SSLC /Class 10th Siri Kannada textbook answers? You can download Chapter 3: Ganayogi Pandit Puttaraj Gawai Questions and Answers PDF, Notes, and Summary here. SSLC /Class 10th Tili Kannada Gadyabhaga solutions follow the Karnataka State Board Syllabus, making it easier for students to revise and score higher in exams.
Karnataka SSLC/Class 10th Tili Kannada Textbook Answers—Reflections Chapter 3
Ganayogi Pandit Puttaraj Gawai Questions and Answers, Notes, and Summary
Class 10 Tili Kannada Chapter 3
ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ
Ganayogi Pandit Puttaraj Gawai
Scroll Down to Download Ganayagi Pandit Puttaraj Gawai PDF
ಒಂದೆರಡು ವಾಕ್ಯದಲ್ಲಿ ಉತ್ತರ ಬರೆಯಿರಿ.
Question 1.
ಪುಟ್ಟರಾಜರ ತಂದೆ ತಾಯಿಯ ಹೆಸರೇನು?
Answer:
ಪುಟ್ಟಯ್ಯನ ತಂದೆ ರೇವಯ್ಯ ತಾಯಿ ಸಿದ್ದಮ್ಮ.
Question 2.
ಶ್ರೇಷ್ಟ ಗುರುವಿನಲ್ಲಿ ಎಂತಹ ಶಕ್ತಿ ಇರುತ್ತದೆ?
Answer:
ಶ್ರೇಷ್ಠ ಗುರು ಶಿಷ್ಯರ ಮನಸ್ಸನ್ನು ಓದಿ ಅವರ ಅಭಿಲಾಶೆಗೆ ತಕ್ಕಂತೆ ಜ್ಞಾನ ಕೊಡುವ ಶಕ್ತಿ ಇರುತ್ತದೆ.
Question 3.
ತಾಯಿ ಸಿದ್ದಮ್ಮ ಪಂಚಾಕ್ಷರಿ ಗವಾಯಿಯಲ್ಲಿ ಏನೆಂದು ಬೇಡಿಕೊಂಡಳು?
Answer:
ತಾಯಿ ಸಿದ್ದಮ್ಮ ಮಗನನ್ನು ಮನೆಗೆ ಕಳುಹಿಸಿಕೊಡುವಂತೆ ಪಮಚಾಕ್ಷರಿ ಗವಾಯಿಗಳಲ್ಲಿ ಬೇಡಿಕೊಂಡಳು.
Question 4.
ಪುಟ್ಟರಾಜರು ಯಾವ ಯಾವ ಬಾಶೆಗಳಲ್ಲಿ ಪಾಂಡಿತ್ಯ ಗಳಿಸಿದ್ದರು?
Answer:
ಪುಟ್ಟರಜರು ಕನ್ನಡ, ಹಿಂದಿ, ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದ್ದರು.
Question 5.
ಪುಟ್ಟರಾಜರು ಖಾದಿ ಬಟ್ಟೆ ತೊಡಲು ನಿರ್ಧರಿಸಿದ್ದು ಏಕೆ?
Answer:
ಪಂಚಾಕ್ಷರಿ ಗವಾಯಿ ಖಾದಿ ಬಟ್ಟೆಯನ್ನು ಧರಿಸಿಕೊಂಡಾಗ ಪುಟ್ಟರಾಜರು ಸಹ ಖಾದಿ ಬಟ್ಟೆ ತೊಡಲು ನಿರ್ಧರಿಸಿದರು.
ಈ ಪಶ್ನೆಗಳಿಗೆ 3 -4 ವಾಕ್ಯಗಳಲ್ಲಿ ಉತ್ತರ ಬರೆಯಿರಿ.
Question 1.
ಬಾಲಕ ಪುಟ್ಟಯ್ಯ ಕಣ್ಣುಗಳನ್ನು ಕಳೆದುಕೊಂಡದ್ದು ಹೇಗೆ?
Answer:
ಬಾಲಕ ಪುಟ್ಟಯ್ಯನಿಗೆ ಕಣ್ಣು ಬೇನೆ ಬಂದು ಕಣ್ಣಿಗೆ ಪರಿ ಬಂದಿತ್ತು. ಕಣ್ಣಿಗೆ ತೊನಸಿ ತೋರಿಸುವಾಗ ತೊನಸಿ ಕಣ್ಣಿನಲ್ಲಿ ಬಿದ್ದುಬಿಟ್ಟವು. ಅರಿ ಹರಿಯುವ ಬದಲು ಗುಡ್ಡಿ ಹರಿದು ಕಣ್ಣು ಹೋದವು.
Question 2.
ಬಾಲಕ ಪುಟ್ಟಯ್ಯ ಪಂಚಾಕ್ಷರಿ ಗವಾಯಿಗಳ ಶಿಷ್ಯನಾದುದು ಹೇಗೆ?
Answer:
ಪಂಚಾಕ್ಷರಿ ಗವಾಯಿಯ ಸಂಚಾರಿ ಸಂಗೀತ ಶಾಲೆ ಒಮ್ಮೆ ಗವಿಮಠದಲ್ಲಿ ಕ್ಯಾಂಪ ಹಾಕಿತು. ಮಾವನ ಜೊತೆ ಪುಟ್ಟಯ್ಯ ಬಂದು ಶಿಷ್ಯತ್ವ ಸ್ವೀಕರಿಸಿ ಅವರ ಶಷ್ಯರಾದರು.
Question 3.
ಪಂಚಾಕ್ಷರಿ ಗವಾಯಿಗಳ ಶಿಷ್ಯತ್ವ ಪಡೆದ ಬಾಲಕ ಪುಟ್ಟಯ್ಯ ಯಾವ ಯಾವ ಮನಸ್ಥಿತಿ ಹೊಂದಿದ್ದನು?
Answer:
ಪಂಚಾಕ್ಷರಿ ಗವಾಯಿಗಳ ಶಿಷ್ಯತ್ವ ಪಡೆದ ಪುಟ್ಟಯ್ಯ ಪಂಚಾಕ್ಷರಿ ಗುರುಗಳನ್ನು ಅನುಸರಿಸಬೇಕು. ಅವರ ನುಡಿಯೆ ನನಗೆ ಮಂತ್ರ. ಅವರ ನಡೆಯೆ ನನಗೆ ಆಚಾರವಾಗಬೇಕು. ಎಂಬ ಮನ:ಸ್ಥಿತಿ ಹೊಂದಿದ್ದರು.
Question 4.
ಪುಟ್ಟರಾಜ ಗವಾಯಿ ಯಾವ ಯಾವ ವಿದ್ಯೆಗಳಲ್ಲಿ ನಿಷ್ಟತರಾದರು?
Answer:
ಪುಟ್ಟರಾಜರಿಗೆ ಅಷ್ಟಧ್ಯಾಯಿ, ಕಾತಂತ್ರ, ಶಬ್ದಮಣಿ ದರ್ಪಣ, ಕೈವಲ್ಯ ಪದ್ದತಿ, ತರ್ಕಶಾಸ್ತ್ರ, ನ್ಯಾಯ ಶಾಸ್ತ್ರ, ಶಬ್ದಾನುಶಾಸ್ತ್ರ, ಛಂದಶಾಸ್ತ್ರ, ಮತ್ತು ಕನ್ನಡ ವ್ಯಾಕರ್ಣ, ಮುಂತಾದ ವಿದ್ಯೆಗಳಲ್ಲಿ ನಿಷ್ಠತರಾದರು.
Question 5.
ತಾಯಿ ಸಿದ್ದಮ್ಮ ಪುಟ್ಟರಾಜನ್ನು ಏನೆಂದು ಆಶಿರ್ವಾದಿಸಿದರು?
Answer:
ನಿನ್ನಂಥ ಶ್ರೇಷ್ಠ ಪುತ್ರ ರತ್ನ ಒಂದನ್ನು ಹೆತ್ತ ಭಾಗ್ಯ ನನ್ನದಾಗಲಿ. ಹೆಂಡತಿ ಮಕ್ಕಳು ಸಂಸಾರವೆಂಬ ಬಂಧನದಲ್ಲಿ ಬಂಧಿತನಾಗುವದು ನಿನಗೆ ಇಷ್ಟವಿಲ್ಲದಿದ್ದರೆ ನನ್ನ ಜೊತೆ ಬರುವದು ಬಾಡ. ಪಂಚಾಕ್ಷರರು ತೋರುವ ಮಾರ್ಗದಲ್ಲಿ ನೀನು ನಡೆ ಎಂದು ಆಶಿರ್ವಾದಿಸಿದರು.
Question 6.
ಪುಟ್ಟರಾಜರ ವೇಷಾಭೂಶಣಗಳು ಹೇಗಿದ್ದವು?
Answer:
ಪುಟ್ಟರಾಜ ಬಿಳಿ ಉದ್ದನೆಯ ಅಂಗಿ ಪಂಚೆ, ತಲೆಯ ಮೇಲೆ ಪಟಗ, ನೊಸಲಲ್ಲಿ ತ್ರಿಪುಂಡ ಭಸ್ಮ, ಯಲ್ಲಿ ಬೆತ್ತ. ಇವು ಪುಟ್ಟರಾಜರ ಕೊರಳಲ್ಲಿ ರುದ್ರಾಕ್ಷಿ ಮಾಲೆ, ಪಾದದಲ್ಲಿ ಕಟ್ಟಿಗೆಯ ಆವುಗೆಗಳು, ಕೈ ಯಲ್ಲಿ ವೆಷಾಭೋಷಣಗಳು.
Question 7.
ಪುಟ್ಟರಾಜರಿಗೆ ದೊರೆತ ಪ್ರಶಸ್ತಿಗಳಾವುವು?
Answer:
ಪುಟ್ಟರಾಜರಿಗೆ ನಾಡೋಜ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ಪದ್ಮಭೋಷಣ ಪ್ರಶಸ್ತಿ, ಗೌರವ ಡಾಕ್ಟರೇಟ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ.
Question 8.
ವಿಶೇಷ ಚೇತನರಿಗೆ ನೀವು ಯಾವ ಮಾತುಗಳಿಂದ ನೀವು ಧೈರ್ಯ ತುಂಬುವಿರಿ?
Answer:
ನೀವು ಎಲ್ಲರಂತೆ ಇರದಿದ್ದರು ನಿಮ್ಮಲ್ಲಿರುವ ಸೂಕ್ಷ್ಮಮತಿ, ಬುದ್ಧಿಶಕ್ತಿಯಿಂದ ಏಕಾಗ್ರತೆಯಿಂದ ಕಲಿಕೆಯಲ್ಲಿ ತೊಡಗಿದರೆ ಸಾಧ್ಯವಾದದನ್ನು ಸಾಧಿಸಬಹುದು. ಪಂಚಾಕ್ಷರಿ ಗವಾಯಿ, ಪುಟ್ಟರಾಜಗವಾಯಿ ಗಳಂತೆ ಸಾಧಕರಾಗಬಹುದು. ದೇವರು ಒಂದು ಅಂಗವನ್ನು ಕಡಿಮೆ ಕೊಟ್ಟಿದ್ದರು ಬೇರೆ ಅಂಗಗಳಿಗೆ ಅಪರಿಮಿತವಾದ ಶಕ್ತಿಯನ್ನು ನೀಡಿರುತ್ತಾನೆ ಎಂದು ಅವರಲ್ಲಿ ಉತ್ಸಾಹ ತುಂಬಬಹುದು.
ಸುಮಾರು ಹತ್ತು ವಾಕ್ಯಗಳಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
Question 1.
ಅಂಗಹೀನತೆ ಸಾಧನೆಗೆ ಅಡ್ಡಿಯಾಗದು ಎಂಬ ಮಾತು ಪುಟ್ಟರಾಜರ ಜೀವದಲ್ಲಿ ನಿಜವಾಗಿದೆ ಹೇಗೆ? ಇದನ್ನು ಸಮರ್ಥಿಸಿ,
Answer:
ತಬಲಾ ಪುಟ್ಟರಾಜರು ಸಂಗೀತದೊಂದಿಗೆ ಸ್ವರಮಂಡಲ, ಸಾರಂಗಿ, ಸರೋದ, ಪಿಟೀಲು, ಹಾರ್ಮೋನಿಯಂ ಮತ್ತು ವಾದನದಲ್ಲಿ ಪ್ರಾವೀಣ್ಯವನ್ನು ಪಡೆದರು. ಹಿಂದೂಸ್ತಾನಿ ಕರ್ನಾಟಕ ಸಂಗೀತವನ್ನು ಸಿದ್ಧಿಗಳಿಸಿಕೊಂಡರು. ಅಂಧರ ಓದಿನ ಬ್ರೇಲ್ ಲಿಪಿಯನ್ನು ಕಲಿತರು. ಕನ್ನಡದಲ್ಲಿ ಅರವತ್ತಕ್ಕೂ ಹೆಚ್ಚಿನ ಸಂಖ್ಯೆಯ ಕೃತಿರಚನೆ ಮಾಡಿದರು. ಬಸವೇಶ್ವರ, ಶ್ರೀ ಶಿವಲಿಂಗೇಶ್ವರ, ಅಡವಿ ಸಿದ್ದೇಶ್ವರ, ಗುಡ್ಡಾಪುರದ ದಾನಮ್ಮ ಮೊದಲಾದ ಹದಿನೆಂಟು ನಾಟಕಗಳನ್ನು ರಚಿಸಿದ್ದಾರೆ.
ಪಂಚಾಕ್ಷರಿವಾಣಿ ಎಂಬ ಸಾರ್ವಜನಿಕ ಪತ್ರಿಕೆಗೆ ಮಾರ್ಗದರ್ಶಕರೂ ಆಗಿದ್ದರು. ಗದುಗಿನ ವೀರೇಶ್ವರ ಪುಣ್ಯಾಶ್ರಮದ ಜವಾಬ್ದಾರಿಯನ್ನು ಹೊತ್ತು ಶಿಕ್ಷಣ ಸಂಸ್ಥೆಗಳನ್ನು ವಿಸ್ತರಿಸುತ್ತಾ ಬಡಮಕ್ಕಳ ಜ್ಞಾನದಾಹವನ್ನು ಹಿಂಗಿಸಿದ್ದರು. ಈ ಎಲ್ಲಾ ಸಾಧನೆಗಳನ್ನು ನೋಡಿದರೆ ಅಂಗಹೀನತೆ ಸಾಧನೆಗೆ ಅಡ್ಡಿಯಾಗದು ಎಂಬುದು ಪುಟ್ಟರಾಜರ ವಿಷಯದಲ್ಲಿ ನಿಜವಾಗಿದೆ.
Question 2.
ಬಾಲಕ ಪುಟ್ಟಯ್ಯ ಹಾರ್ಮುನಿಯಂ ನುಡಿಸಿದ ಪ್ರಸಂಗ ವಿವರಿಸಿರಿ.
Answer:
ಬಾಲಕ ಪುಟ್ಟಯ್ಯನಿಗೆ ಹಾರ್ಮೋನಿಯಂ ನುಡಿಸುವ ಆಸೆ. ಒಮ್ಮೆ ಮನೆಯಲ್ಲಿ ಯಾರೂ ಇಲ್ಲದಸಮಯದಲ್ಲಿ ತನ್ನ ಮಾವನ ಹಾರ್ಮೋನಿಯಂ ಹಿಡಿದು ನುಡಿಸಲಾರಂಭಿಸಿದ. ಹಾರ್ಮೋನಿಯಂ ನಿಂದ ಹೊರಟ ನಾದ ಮನೆಯ ಮುಂದೆ ಹಾಯ್ದು ಹೋಗುತ್ತಿದ್ದ ಜನರೆಲ್ಲರ ಮನವನ್ನು ತುಂಬಿತು. ಜನರು ಮನೆಯ ಒಳಗೆ ಬಂದು ಕುಳಿತುಕೊಂಡರು. ಹೊಲಕ್ಕೆ ಹೋಗಿದ್ದ ಮಾವ ಮನೆಯ ಹೊರಗೆ, ಒಳಗೆ ಜನರನ್ನು ಕಂಡು ಆಶ್ಚರ್ಯಚಕಿತರಾದರು. ಮನೆಯ ಒಳಗೆ ಹಾರ್ಮೋನಿಯಮ್ ನುಡಿಸುತ್ತಿರುವವರು ಯೋಗಿಗಳೇ ಇರಬಹುದೆಂದು ಭಾವಿಸಿ ಒಳಗೆ ಬಂದರು.
ಹಾರ್ಮೋನಿಯಂ ನುಡಿಸುತ್ತಿದ್ದ ಪುಟ್ಟ ಬಾಲಕನನ್ನು ಕಂಡು ನಿಬ್ಬೆರಗಾದರು. ಮಾವನ ಪಾದ ಸಪ್ಪಳದಿಂದ ವಿಚಲಿತನಾದ ಬಾಲಕ ಒಮ್ಮೆಲೇ ಹಾರ್ಮೋನಿಯಂ ನುಡಿಸುವುದನ್ನು ನಿಲ್ಲಿಸಿ, ಮಾವ ತಪ್ಪಾತು ಕ್ಷಮಿಸು, ನೀನು ಮುಟ್ಟು ಎಂದರೂ ನಾನು ಇನ್ನೆಂದೂ ನಿನ್ನ ಹಾರ್ಮೋನಿಯಮ್ ಮುಟ್ಟುವುದಿಲ್ಲ ಎನ್ನುತ್ತ ಮಾವನ ಪಾದಗಳಿಗೆ ತಡವಡಿಸಿದನು. ಆಗ ಮಾವ ಮಗು ಇಂದಿನಿಂದ ಇದು ನನ್ನ ಹಾರ್ಮೋನಿಯಂ ಅಲ್ಲ,ನಿನ್ನದು ಅದು ನಿನ್ನ ಆಸ್ತಿ ಎಂದರು. ಹೀಗೆ ಹಾರ್ಮೋನಿಯಂ ನುಡಿಸಿದನು.
Question 3.
ಪುಟ್ಟಯ್ಯ ಸಮಾಜಕ್ಕೆ ಮುಡುಪಾದ ಪ್ರಸಂಗವನ್ನು ವಿವರಿಸಿ.
Answer:
ಪಂಚಾಕ್ಷರ ಗವಾಯಿಗಳ ಸಂಚಾರಿ ಪಾಠಶಾಲೆಯು ಹೊಳೆ-ಆಲೂರಿನಲ್ಲಿ ಕ್ಯಾಂಪ್ ಹಾಕಿದ್ದ ಸಂದರ್ಭದಲ್ಲಿ ತಾಯಿಯಾದ ಸಿದ್ದಮ್ಮನವರು ಬೆಳೆದು ದೊಡ್ಡವನಾದ ಪುಟ್ಟರಾಜನನ್ನು ಕಾಣಲು ಬಂದರು. ಸಂಗೀತದ ಸಕಲ ವಿದ್ಯೆಗಳಲ್ಲಿ ಪಾರಂಗತನಾದ ಮುದ್ದು ಮಗನನ್ನು ನೋಡಿದ ತಾಯಿ ಪಂಚಾಕ್ಷರ ಗವಾಯಿಗಳ ಪಾದಕ್ಕೆರಗಿ ಸೆರಗೊಡ್ಡಿ ಮಗನನ್ನು ಮನೆಗೆ ಕಳುಹಿಸಿಕೊಡುವಂತೆ ಬೇಡಿಕೊಂಡರು. ಗವಾಯಿಗಳು ಅವನು ಬಂದರೆ ಕರೆದುಕೊಂಡು ಹೋಗು ತಾಯಿ ಎಂದು ಹೇಳಿದರು. ಸಿದ್ದಮ್ಮನವರು ಪುಟ್ಟಯ್ಯ ಕಡೆ ಬಂದು ಮನೆಗೆ ಬರುವಂತೆ ಕೇಳಿಕೊಂಡರು.
ಆದರೆ ಪುಟ್ಟಯ್ಯನ ನನಗೆ, ನನ್ನ ಸರ್ವಸ್ವವೂ ಗುರುಗಳು. ಸಮಾಜದ ಹಣದಿಂದ ನನಗೆ ವಿದ್ಯೆ ಕೊಟ್ಟಿದ್ದಾರೆ. ಸಮಾಜದ ಋಣವನ್ನು ತೀರಿಸದೆ ಹೇಗೆ ನಿನ್ನ ಜೊತೆ ಬರಲಿ ತಾಯಿ, ನೀನೆ ಹೇಳು ಭವದಲ್ಲಿಯ ಎಲ್ಲ ಬಂಧನಗಳನ್ನು ತೊಡೆದು ಹಾಕಿರುವೆ. ಗುರು ಪಂಚಾಕ್ಷರರೇ ನನ್ನ ಸರ್ವಸ್ವ. ಅವರ ಆಜ್ಞಾಧಾರಕ ನಾನು. ನನ್ನ ಮಗನೆಂಬ ಭಾವವನ್ನು ತೊಡೆದು ಹಾಕಿ ನನ್ನನ್ನು ಸಮಾಜಕ್ಕೆ ಅರ್ಪಿಸು ತಾಯಿ ಎಂದು ಸಿದ್ದಮ್ಮನವರ ಪಾದಕ್ಕೆರಗಿ ಆರ್ತರಾದರು.
Question 4.
ವಿಶೇಷ ಚೇತನರ ವಿಷಯದಲ್ಲಿ ನಮ್ಮ ಹೊಣೆಗಾರಿಕೆಗಳೇನು?
Answer:
ವಿಶೇಷ ಚೇತನರನ್ನು ಪ್ರೋತ್ಸಹಿಸಬೇಕು. ಅವರಲ್ಲಿ ಅಡಗಿರುವ ಶಕ್ತಿ ಹೊರಬರುವಂತೆ ಹುರಿದುಂಬಿಸಬೇಕು. ಅವರಿಗೆ ತಕ್ಕ ಸ್ಥಾನವನ್ನು ಕೊಟ್ಟು ಗೌರವಿಸಬೇಕು. ಸಾಮಾಜಿಕ ಸ್ಥಳಗಳಲ್ಲಿ ಅವರಿಗಾಗಿ ಮೀಸಲಾತಿ ಇಡಬೇಕು. ಅವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಹಾಗು ಪುಟ್ಟರಾಜ ಗವಾಯಿ ಅಂಥ ಗಣ್ಯ ವ್ಯಕ್ತಿಗಳ ಕಥೆಗಳನ್ನು ಹೇಳಿ ಪ್ರೋತ್ಸಹಿಸಬೇಕು. ಅವರಿಗೆ ಬೇಕಾದ ಸಾಮಗ್ರಿಗಳನ್ನು ಒದಗಿಸಬೇಕು ಪುರೈಸಬೇಕು. ಈ ರೀತಿಯಾಗಿ ನಾವು ವಿಷೇಶ ಚೇತನರಿಗೆ ಪ್ರೋತ್ಸಹಿಸಬೇಕು.
ಸಂದರ್ಭದೊಡನೆ ವಿವರಿಸಿರಿ.
Question 1.
ಅರಿ ಹರಿಯುವುದರ ಬದಲು, ಗುಡ್ಡಿನ ಹರಿದು ಕಣ್ಣು ಹೋಗಿಬಿಟ್ಟವು.
Answer:
ಸಂದರ್ಭ:
ಈ ವಾಕ್ಯವನ್ನು ರಮೇಶಗೌಡ ಮಲ್ಲನಗೌಡ ಕಲ್ಲನಗೌಡ ಬರೆದಿರುವ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ
ಸ್ವಾರಸ್ಯ:
ಈ ಸಾಲನ್ನು ಪುಟ್ಟರಾಜರು ಹೇಳದ ಮಾತುಗಳಲ್ಲೇ ಲೇಖಕರು ಹೇಳಿದ್ದಾರೆ. ಪುಟ್ಟರಾಜರ ಕಣ್ಣಿಗೆ ಪರಿ ಬಂದಾಗ ಕಣ್ಣಿಗೆ ತೋನಸಿ ತೋರಿಸಲು ಹೋಗಿ ತೋನಸಿ ಕಣ್ಣಿನಲ್ಲಿ ಬಿದ್ದು ಅರಿ ಹರಿಯುವ ಬದಲು ಕಣ್ಣಿನ ಗುಡ್ಡಿನ ಹರಿದುಹಾಕಿತು. ಎಂದು ಹೇಳುವಾಗ ಮೇಲಿನ ಮಾತು ಬಂದಿದೆ
Question 2.
”ಮಗು ಇಂದಿನಿಂದ ಈ ಹಾರ್ಮುನಿಯಂ ನನ್ನದಲ್ಲ”
Answer:
ಸಂದರ್ಭ:
ಈ ವಾಕ್ಯವನ್ನು ರಮೇಶಗೌಡ ಮಲ್ಲನಗೌಡ ಕಲ್ಲನಗೌಡ ಬರೆದಿರುವ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ
ಸ್ವಾರಸ್ಯ;
ಈ ಮತನ್ನು ಪುಟ್ಟರಾಜರ ಸೋದರಮಾವ ಹೇಳಿದ್ದಾರೆ. ಪುಟ್ಟರಾಜರು ಹಾರ್ಮುನಿಯಂ ಬಾರಿಸಿದಾಗ ಅದರ ಧ್ವನಿ ಕೇಳಿ ಊರಿನ ಜನ ಮನೆಯ ಒಳಹೊರಗೆ ಬಂದು ಕೇಳುತ್ತಾರೆ. ಸೋದರ ಮಾವ ಬಂದದ್ದುನೋಡಿ ಪುಟ್ಟರಾಜ ತಪ್ಪಾಯಿತು ಮಾವ ಇನ್ನು ಮುಂದೆ ಹಾರ್ಮುನಿಯಂ ಮುಟ್ಟುವದಿಲ್ಲ ಎಂದು ಹೇಳಿದಾಗ ಸೋದರಮಾವ ಮೇಲಿನ ಮಾತು ಹೇಳುತ್ತಾರೆ.
Question 3.
”ಅವನು ಬಂದರೆ ಕರೆದುಕೊಂಡು ಹೋಗು ತಾಯಿ”
Answer:
ಸಂದರ್ಭ;
ಈ ವಾಕ್ಯವನ್ನು ರಮೇಶಗೌಡ ಮಲ್ಲನಗೌಡ ಕಲ್ಲನಗೌಡ ಬರೆದಿರುವ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ
ಸ್ವಾರಸ್ಯ:
ಈ ಮಾತನ್ನು ಪಂಚಾಕ್ಷರಿ ಗವಾಯಿ ಪುಟ್ಟರಾಜರ ತಾಯಿಗೆ ಹೇಳುತ್ತಾರೆ. ಪಂಚಾಕ್ಷರಿ ಗವಾಯಿಯ ಸಂಚಾರಿ ಶಾಲೆ ಹೊಳೆ ಆಲೋರಿನಲ್ಲಿ ಕ್ಯಾಂಪ ಹಾಕಿದಾಗ ಪುಟ್ಟರಾಜರ ತಾಯಿ ಮಗನನ್ನು ಮನಗೆ ಬರುವದಕ್ಕೆ ಹೇಳಿದಾಗ ಪಂಚಾಕ್ಷರಿ ಮೇಲಿನ ಮಾತು ಹೇಳುತ್ತಾರೆ.
Question 4.
”ಸಮಾಜದ ಹಣದಿಂದ ನನಗೆ ವಿದ್ಯೆ ಕೊಟ್ಟಿದ್ದಾರೆ”
Answer:
ಸಂದರ್ಭ:
ಈ ವಾಕ್ಯವನ್ನು ರಮೇಶಗೌಡ ಮಲ್ಲನಗೌಡ ಕಲ್ಲನಗೌಡ ಬರೆದಿರುವ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ
ಸ್ವಾರಸ್ಯ;
ಈ ಮಾತನ್ನು ಪುಟ್ಟರಾಜ ತನ್ನ ತಾಯಿಗೆ ಹೇಳಿದ್ದಾರೆ. ತಾಯಿ ಮಗನನ್ನು ಮನೆಗೆ ಬರುವಂತೆ ಕೇಳಿಕೋಂಡಾಗ ತಾಯಿಯ ಪಾದವನ್ನು ಹಿಡಿದು ಮೇಲಿನ ಮಾತು ಹೇಳುತ್ತಾರೆ
Question 5.
“ಅವರ ಬಾಹ್ಯ ಕಣ್ಣು ಅರಳಿಸಿದ್ದರೂ ಅಂತರಂಗದ ಕಣ್ಣು ಅರಳಿತ್ತು”
Answer:
ಸಂದರ್ಭ:
ಈ ವಾಕ್ಯವನ್ನು ರಮೇಶಗೌಡ ಮಲ್ಲನಗೌಡ ಕಲ್ಲನಗೌಡ ಬರೆದಿರುವ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ
ಸ್ವಾರಸ್ಯ:
ಈ ಮಾತು ಲೇಖಕರು ಗುರು ಶಿಷ್ಯರ ಬಗ್ಗೆ ಹೇಳಿದ್ದಾರೆ. ಪುಟ್ಟರಾಜರು ಆಶ್ರಮದ ಎಲ್ಲಾ ಸಹಪಾಠಿ ಗಳಿಕಿಂತ ಬಹಳ ಬೇಗ ಗುರುಗಳು ಹೇಳಿದ್ದನ್ನು ಕಲಿತುಕೊಂಡರು. ಎಂದು ಹೇಳುವಾಗ ಮೇಲಿನ ಮಾತು ಬಂದಿದೆ.
ಉ) ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ:
೧. ಪುಟ್ಟರಾಜರ ಜನ್ಮಸ್ಥಳ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ದೇವರ ಹೊಸಪೇಟೆ (ವೆಂಕಟಾಪುರ ಮಠ)
೨. ಪುಟ್ಟರಾಜರು ೧೯೧೪ರ ಮಾರ್ಚ್ ೩ ರಂದು ಜನಿಸಿದರು.
೩. ಪುಟ್ಟರಾಜರ ಗುರುಗಳ ಹೆಸರು ಪಂಚಾಕ್ಷರ ಗವಾಯಿಗಳು
೪. ಪುಟ್ಟರಾಜರ ಮಾವನ ಹೆಸರು ಚಂದ್ರಶೇಖರಯ್ಯ
೫. ಪುಟ್ಟರಾಜರು ೧೭-೦೯-೨೦೧೦ ರಂದು ಅನಂತದಲ್ಲಿ ಅನಂತವಾದರು.
ಊ) ಹೊಂದಿಸಿ ಬರೆಯಿರಿ.
೧. ಪಾಣಿನಿ → ಇ. ಅಷ್ಟಾಧ್ಯಾಯಿ
೨. ಶರ್ವವರ್ಮ → ಈ. ಕಾತಂತ್ರ
೩. ಕೇಶಿರಾಜ → ಆ. ಶಬ್ದಮಣಿ ದರ್ಪಣ
೪. ನಿಜಗುಣ ಶಿವಯೋಗಿಗಳು → ಅ. ಕೈವಲ್ಯ ಪದ್ಧತಿ
ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಸಾರಾಂಶ
Summary
ಈ ಪಾಠವು ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ಜೀವನ ಮತ್ತು ಸಾಧನೆಗಳನ್ನು ವಿವರಿಸುತ್ತದೆ. ದೈಹಿಕ ನ್ಯೂನತೆಗಳು ಇದ್ದರೂ ದೃಢಸಂಕಲ್ಪ ಮತ್ತು ಪರಿಶ್ರಮದಿಂದ ಯಾವುದೇ ಗುರಿಯನ್ನು ಸಾಧಿಸಬಹುದು ಎಂಬ ಸಂದೇಶವನ್ನು ಈ ಪಾಠ ನೀಡುತ್ತದೆ.
ಪುಟ್ಟರಾಜ ಗವಾಯಿಗಳು ೧೯೧೪ರ ಮಾರ್ಚ್ ೩ರಂದು ಹಾವೇರಿ ಜಿಲ್ಲೆಯ ದೇವರ ಹೊಸಪೇಟೆಯಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಕಣ್ಣು ಕಳೆದುಕೊಂಡರೂ ಅವರು ಅದನ್ನು ಅಡ್ಡಿಯೆಂದು ಪರಿಗಣಿಸಲಿಲ್ಲ. ಸಂಗೀತದ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಅವರು ಹಾರ್ಮೋನಿಯಮ್ ನುಡಿಸುವುದರಲ್ಲಿ ತಲ್ಲೀನರಾಗುತ್ತಿದ್ದರು.
ಪಂಚಾಕ್ಷರ ಗವಾಯಿಗಳ ಶಿಷ್ಯತ್ವ ಸ್ವೀಕರಿಸಿದ ನಂತರ ಪುಟ್ಟರಾಜರು ಸಂಗೀತ ಹಾಗೂ ಶಾಸ್ತ್ರಗಳಲ್ಲಿ ಪಾಂಡಿತ್ಯ ಗಳಿಸಿದರು. ಗುರುಭಕ್ತಿಯಿಂದ ಹಾಗೂ ಶ್ರಮದಿಂದ ಅವರು ಕನ್ನಡ, ಹಿಂದಿ, ಸಂಸ್ಕೃತ ಭಾಷೆಗಳಲ್ಲಿ ಪರಿಣತಿ ಪಡೆದರು. ಅವರು ಅನೇಕ ಗ್ರಂಥಗಳನ್ನು ರಚಿಸಿ ತ್ರಿಭಾಷಾ ಕವಿಯಾಗಿ ಖ್ಯಾತರಾದರು.
ಪುಟ್ಟರಾಜರು ತಮ್ಮ ಜೀವನವನ್ನು ಸಮಾಜ ಸೇವೆಗೆ ಅರ್ಪಿಸಿದರು. ತಾಯಿಯ ಮನವಿಗೂ ಸ್ಪಂದಿಸದೆ ಸಮಾಜದ ಋಣ ತೀರಿಸಲು ನಿರ್ಧರಿಸಿದರು. ಗಾಂಧೀಜಿ ತತ್ವಗಳನ್ನು ಅನುಸರಿಸಿ ಖಾದಿ ಬಟ್ಟೆ ಧರಿಸಿದರು.
ಸಂಗೀತ, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ ಪುಟ್ಟರಾಜರು ಸಾವಿರಾರು ಶಿಷ್ಯರಿಗೆ ದಾರಿದೀಪರಾಗಿದ್ದರು. ಅವರ ಸಾಧನೆಗೆ ಹಲವು ಪ್ರಶಸ್ತಿಗಳು ಲಭಿಸಿವೆ.
ಕೊನೆಗೆ, ೧೭-೦೯-೨೦೧೦ರಂದು ಅವರು ಅಗಲಿದರೂ, ಅವರ ಸಾಧನೆ ಮತ್ತು ಆದರ್ಶಗಳು ಇಂದಿಗೂ ನಮ್ಮಗೆ ಪ್ರೇರಣೆಯಾಗಿವೆ.
III. ಭಾಷಾಭ್ಯಾಸ :
ಅ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ.
- ಸಿಂಹಾವಲೋಕನ – ನಮ್ಮ ದೇಶದ ಇತಿಹಾಸವನ್ನು ಸಿಂಹಾವಲೋಕನ ಮಾಡಿದಾಗ ಅನೇಕ ಮಹನೀಯರು ಕಾಣುತ್ತಾರೆ.
- ನಿಬ್ಬೆರಗಾಗು – ಅವನ ಸಾಧನೆ ನೋಡಿ ಎಲ್ಲರೂ ನಿಬ್ಬೆರಗಾದರು.
- ಕಣ್ಮಣಿ – ನನ್ನ ತಾಯಿ ನನ್ನನ್ನು ತನ್ನ ಕಣ್ಮಣಿಯಂತೆ ನೋಡಿಕೊಳ್ಳುತ್ತಾಳೆ.
- ತಲ್ಲೀನತೆ – ಅವನು ಸಂಗೀತದಲ್ಲಿ ತಲ್ಲೀನತೆಯಿಂದ ಹಾಡುತ್ತಿದ್ದನು.
- ಗುರುಸೇವೆ – ವಿದ್ಯಾರ್ಥಿಯು ಗುರುಸೇವೆಯನ್ನು ಅತ್ಯಂತ ಗೌರವದಿಂದ ಮಾಡಬೇಕು.
ಆ) ತತ್ಸಮ – ತದ್ಭವ ರೂಪಗಳು.
- ದೃಷ್ಟಿ – ದಿಟ್ಟಿ
- ಸಂಸ್ಕೃತ – ಸಂಸ್ಕೃತ (ತದ್ಭವ ರೂಪ ಇಲ್ಲ/ಅದೇ ಬಳಸಲಾಗುತ್ತದೆ)
- ಯೋಗಿ – ಜೋಗಿ
- ಆಶ್ಚರ್ಯ – ಅಚ್ಚರಿ
- ಜ್ಞಾನ – ಜಾಣ
ಇ) ಪದಗಳನ್ನು ಬಿಡಿಸಿ, ಸಂಧಿ ಹೆಸರಿಸಿ.
- ಪಂಚಾಕ್ಷರಿ = ಪಂಚ + ಅಕ್ಷರಿ (ಸ್ವರ ಸಂಧಿ)
- ಸುವರ್ಣಾಕ್ಷರ = ಸುವರ್ಣ + ಅಕ್ಷರ (ಸ್ವರ ಸಂಧಿ)
- ತನ್ನಿಚ್ಛೆ = ತನ್ನ + ಇಚ್ಛೆ (ಸ್ವರ ಸಂಧಿ)
- ರುದ್ರಾಕ್ಷಿ = ರುದ್ರ + ಅಕ್ಷಿ (ಸ್ವರ ಸಂಧಿ)
- ಹಿಮಾಲಯ = ಹಿಮ + ಆಲಯ (ಸ್ವರ ಸಂಧಿ)
ಈ) ವಿರುದ್ಧಾರ್ಥಕ ಪದಗಳು.
- ಆಸಕ್ತಿ – ಅನಾಸಕ್ತಿ
- ಗೌರವ – ಅವಮಾನ
- ಸ್ವೀಕರಿಸು – ನಿರಾಕರಿಸು
- ಸ್ವದೇಶಿ – ವಿದೇಶಿ
- ಸ್ವಾತಂತ್ರ್ಯ – ದಾಸ್ಯ
Additional Questions & Answers.
1 Mark Questions (ಅತಿಸಂಕ್ಷಿಪ್ತ ಉತ್ತರ).
Question 1.
ಪುಟ್ಟರಾಜ ಗವಾಯಿಗಳು ಯಾವ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದರು?
Answer:
ಸಂಗೀತ ಕ್ಷೇತ್ರದಲ್ಲಿ
Question 2.
ಪುಟ್ಟರಾಜರು ಯಾವ ಕಾರಣದಿಂದ ಅಂಧರಾದರು?
Answer:
ಬಾಲ್ಯದಲ್ಲಿ ಕಣ್ಣಿನ ರೋಗದಿಂದ
Question 3.
ಪುಟ್ಟರಾಜರು ಯಾವ ವಾದ್ಯವನ್ನು ನುಡಿಸುತ್ತಿದ್ದರು?
Answer:
ಹಾರ್ಮೋನಿಯಮ್
Question 4.
ಪುಟ್ಟರಾಜರು ಯಾವ ವಸ್ತ್ರವನ್ನು ಧರಿಸುತ್ತಿದ್ದರು?
Answer:
ಖಾದಿ ಬಟ್ಟೆ
Question 5.
ಪುಟ್ಟರಾಜರು ಎಷ್ಟು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು?
Answer:
ಮೂರು (ಕನ್ನಡ, ಹಿಂದಿ, ಸಂಸ್ಕೃತ)
2 Marks Questions.
Question 1.
ಪುಟ್ಟರಾಜರು ಸಮಾಜಕ್ಕೆ ಹೇಗೆ ಸೇವೆ ಸಲ್ಲಿಸಿದರು?
Answer:
ಪುಟ್ಟರಾಜರು ತಮ್ಮ ಜೀವನವನ್ನು ಸಮಾಜಕ್ಕೆ ಅರ್ಪಿಸಿ, ಸಂಗೀತ ಹಾಗೂ ಶಿಕ್ಷಣದ ಮೂಲಕ ಸಾವಿರಾರು ಶಿಷ್ಯರಿಗೆ ಮಾರ್ಗದರ್ಶನ ನೀಡಿದರು.
Question 2.
ಪುಟ್ಟರಾಜರು ಗುರುಗಳಿಗೆ ಏಕೆ ಹೆಚ್ಚಿನ ಗೌರವ ನೀಡಿದರು?
Answer:
ಗುರುಗಳು ಅವರಿಗೆ ಸಂಗೀತ ಮತ್ತು ವಿದ್ಯೆ ಕಲಿಸಿ ಜೀವನದ ದಾರಿಯನ್ನು ತೋರಿಸಿದ್ದರಿಂದ ಅವರು ಗುರುಗಳನ್ನು ತಮ್ಮ ಸರ್ವಸ್ವವೆಂದು ಕಂಡರು.
Question 3.
ಪುಟ್ಟರಾಜರ ತಾಯಿಯ ಪಾತ್ರವನ್ನು ವಿವರಿಸಿ.
Answer:
ಅವರ ತಾಯಿ ಸಿದ್ಧಮ್ಮ ಮಗನನ್ನು ಸಮಾಜ ಸೇವೆಗೆ ಸಮರ್ಪಿಸಲು ಒಪ್ಪಿಕೊಂಡು ಆಶೀರ್ವದಿಸಿದರು.
Question 4.
ಪುಟ್ಟರಾಜರು ಖಾದಿ ಬಟ್ಟೆಯನ್ನು ಏಕೆ ಧರಿಸಿದರು?
Answer:
ಗಾಂಧೀಜಿ ತತ್ವಗಳನ್ನು ಅನುಸರಿಸಲು ಮತ್ತು ಸ್ವದೇಶಿ ಚಳವಳಿಗೆ ಬೆಂಬಲ ನೀಡಲು.
MCQs (Multiple Choice Questions):
- ಪುಟ್ಟರಾಜರು ಜನಿಸಿದ ವರ್ಷ ಯಾವುದು?
A) 1910
B) 1914 ✅
C) 1920
D) 1930 - ಪುಟ್ಟರಾಜರ ಗುರು ಯಾರು?
A) ಬಸವಣ್ಣ
B) ಗಾಂಧೀಜಿ
C) ಪಂಚಾಕ್ಷರ ಗವಾಯಿಗಳು ✅
D) ಟ್ಯಾಗೋರ್ - ಪುಟ್ಟರಾಜರು ಯಾವ ವಾದ್ಯದಲ್ಲಿ ಪ್ರಸಿದ್ಧರಾಗಿದ್ದರು?
A) ತಬಲಾ
B) ವೀಣೆ
C) ಹಾರ್ಮೋನಿಯಮ್ ✅
D) ಬಾಸುರಿ
Click Here to Download Ganayogi Pandit Puttaraj Gawai PDF Notes
Click Here to Watch Ganayogi Pandit Puttaraj Gawai Video
Ganayogi Pandit Puttaraj Gawai question answers, asi masi krushi summary, sslc kannada chapter 3 notes, karnataka board kannada notes 2026