Class 10 Tili Kannada Pome Chapter 6

Nittotadali Haydanu Bittamandeyali Question Answers 2026 | SSLC Kannada Notes PDF

Looking for SSLC /Class 10th Tili Kannada textbook answers? You can download Chapter 6: Nittotadali Haydanu Bittamandeyali Questions and Answers PDF, Notes, and Summary here. SSLC /Class 10th Tili Kannada Padyabhaga solutions follow the Karnataka State Board Syllabus, making it easier for students to revise and score higher in exams.

Karnataka SSLC/Class 10th Tili Kannada Textbook Answers—Reflections Chapter 6

Nittotadali Haydanu Bittamandeyali Questions and Answers, Notes, and Summary

Class 10 Tili Kannada Pome Chapter 6

ನಿಟ್ಟೋಟದಲಿ ಹಾಯ್ದನು ಬಿಟ್ಟ ಮಂಡೆಯಲಿ

Nittotadali Haydanu Bittamandeyali
Class 10 Tili Kannada Pome Chapter 6 ನಿಟ್ಟೋಟದಲಿ ಹಾಯ್ದನು ಬಿಟ್ಟ ಮಂಡೆಯಲಿ Nittotadali Haydanu Bittamandeyali
Scroll Down to Download Nittotadali Haydanu Bittamandeyali PDF 

ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

Question 1.
ಕೌರವನ ಸೇನೆಯು ಉತ್ತರನಿಗೆ ಹೇಗೆ ಕಾಣಿಸಿತು?
Answer:
ಕೌರವನ ಸೇನೆಯು ಉತ್ತರನಿಗೆ ವಿಶಾಲವಾದ ಸಮುದ್ರದಂತೆ ಕಂಡಿತು.

Question 2.
ಉತ್ತರನು ನಿಟ್ಟೋಟದಲ್ಲಿ ಓಡಿದ್ದು ಏಕೆ?
Answer:
ವಿಸ್ತಾರವಾದ ಸಮುದ್ರದಂತೆ ಕಾಣುವ ಸೈನ್ಯವನ್ನು ಕಂಡು ಹೆದರಿ ಓಡಿದನು,

Question 3.
ಧುರಕ್ಕೆ ಬೆನ್ನು ಹಾಕಿದರೆ ಏನು ಪ್ರಾಪ್ತಿಯಾಗುತ್ತದೆ?
Answer:
ಪಾಪ ಪ್ರಾಪ್ತಿಯಾಗುತ್ತದೆ

Question 4.
ಅರ್ಜುನನು ಯಾರನ್ನು ನಾಡನರಿ ಎಂದು ಕರೆದಿದ್ದಾನೆ?
Answer:
ಉತ್ತರನನ್ನು ನಾಡನರಿ ಎಂದು ಕರೆದಿದ್ದಾನೆ.

Question 5.
ಉತ್ತರನಿಗೆ ಇಂದ್ರಪದವಿಯು ಏಕೆ ಬೇಕಿಲ್ಲ?
Answer:
ಇಂದ್ರ ಪದವಿ ಪಡೆಯುವುದಕ್ಕಿಂತ ಜೀವ ಉಳಿಸಿಕೊಂಡು ಬದುಕುವುದೇ ಒಳ್ಳೆಯದು.

Question 6.
ಸುರರ ಸತಿಯರ ಸ್ಥಾನವನ್ನು ಯಾರು ತುಂಬುತ್ತಾರೆ?
Answer:
ಅರಮನೆಯ ನಾರಿಯರು ತುಂಬುತ್ತಾರೆ.

ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

Question 1.
ಶತ್ರುಬಲಕ್ಕೆ ನಮೋ ಎಂದು ಉತ್ತರನು ಏಕೆ ಹೇಳಿದನು?
Answer:
ಕೌರವರ ಸೇನೆಯನ್ನು ಕಂಡ ಉತ್ತರನಿಗೆ ಯಾವಾಗಲು ಕಾಣದ ಅದ್ಭುತವನ್ನು ಕಂಡಂತಾಯಿತು. ಇಡೀ ಭೂಮಿ ಸೈನ್ಯದಿಂದ ತುಂಬಿತ್ತು. ಇವರೊಡನೆ ಕಾದಲು ಸಾಕ್ಷಾತ್ ಶಿವನಿಂದ ಮಾತ್ರ ಸಾಧ್ಯ ಇವರೊಡನೆ ಯುದ್ಧ ಮಾಡಿ ಗೆದ್ದಂತೆಯೇ ಈ ಸೈನ್ಯಕ್ಕೆ ನಮೋ ಎಂದು ಹೇಳಿದನು.

Question 2.
ಒಡಲು ಒಡೆವಂತೆ ಅರ್ಜುನನು ಮನದಲ್ಲಿ ನಗಲು ಕಾರಣವೇನು?
Answer:
ಅರ್ಜುನನು ರಥವನ್ನು ನಾಲ್ಕೆಂಟು ಅಡಿಗಳಷ್ಟು ಮುಂದಕ್ಕೆ ಹೋದಾಗ ಈ ಸಾರದಿ ನನ್ನನ್ನು ಕೊಂದು ಬಿಟ್ಟನು ಎಂದು ಮೈ ಮೇಲಿನ ಸೆರಗನ್ನು ಒಟ್ಟುಗೂಡಿಸಿ ರಥದಲ್ಲಿ ಹಿಂದಕ್ಕೆ ಬಂದು ನಿಂತು ಕೆಳಗೆ ಧುಮ್ಮಿಕ್ಕಿದನು. ಬದುಕಿದೆ ಎಂದು ತಲೆಗೂದಲು ಕೆದರಿ ಹಾರಾಡುವಂತಹ ವೇಗದಿಂದ ಓಡಲು ಪ್ರಾರಂಭಿಸಿದನು. ಅದನ್ನು ನೋಡಿ ಅರ್ಜುನನು ಒಡಲು ಒಡೆವಂತೆಮನದಲ್ಲಿ ನಕ್ಕನು.

Question 3.
ಕಾದುನಡೆ ಎಂದು ಅರ್ಜುನನು ಉತ್ತರನನ್ನು ಏಕೆ ಒತ್ತಾಯಿಸಿದನು?
Answer:
ಉತ್ತರನು ಹೆಂಗೆಳೆಯರ ಮುಂದೆ ಕೌರವನ ಸೇನೆಯನ್ನು ಸುಲಭವಾಗಿ ಎದುರಿಸಬಹುದು ಎಂದು ಬಾಯ್ ಬಮದಂತೆ ಮಾತನಾಡಿದನು. ಆದರೆ ಯುದ್ಧದಲ್ಲಿ ಕೌರವ ಸೇನೆಯನ್ನು ಕಂಡು ಹೆದರಿ ಓಡಲು ಪ್ರಾರಂಭಿಸಿದನು. ಆಗ ಅರ್ಜುನನು ಸೈನ್ಯವನ್ನು ಸರಿಯಾಗಿ ಅರಿಯದೆ ಹಲ್ಲುಕಿರಿದು ಮಾತನಾಡಿದನು. ಈಗ ಅಂಜುಬುರಕ ನರಿಯಂತೆ ಓಡುವುದು ಸರಿಯಲ್ಲ.ಕಾದುನಡೆ ಎಂದು ಅರ್ಜುನನು ಉತ್ತರನಿಗೆ ಹೇಳಿದನು.

Question 4.
ಯುದ್ಧವನ್ನು ಮಾಡದಯ ಸುಖಪಡಬಹುದು ಎಂಬುದನ್ನು ಉತ್ತರನು ಹೇಗೆ ಸಮರ್ಥಿಸಿದನು?
Answer:
ಯುದ್ಧ ಭೂಮಿಯಿಂದ ಓಡಿ ಬಂದ ಪಾತಕವನ್ನು ಬ್ರಾಹ್ಮಣರು ಕಳೆಯುತ್ತಾರೆ. ಅಶ್ವಮೇಧ ಯಾಗಮಾಡಬಹುದು. ಫಲವನ್ನು ಪ್ರತ್ಯಕ್ಷವಾಗಿಯೇ ಮಾಡಬಹುದು. ಅದರ ಫಲವನ್ನು ಪಡೆಯಲು ಸ್ವರ್ಗಲೋಕದ ಅಪ್ಸರೆಯರು ಬೇಕಾಗಿಲ್ಲ ನನ್ನ ಅರಮನೆಯ ನಾರಿಯರೇ ಸಾಕು. ನಮ್ಮ ದೊರೆತನವೇ ನಮಗೆ ಇಂದ್ರ ಪದವಿ ಎಂಬುದಾಗಿ ಯುದ್ಧವನ್ನು ಮಾಡದೆಯೇ ಸುಖಪಡಬಹುದು ಎಂಬುದನ್ನು ಉತ್ತರನು ಸಮರ್ಥಿಸಿದನು.

ಸುಮಾರು ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

Question 1.
ಅರ್ಜುನ ಮತ್ತು ಉತ್ತರ ಇವರ ಸಂಭಾಷಣೆಯ ಸ್ವಾರಸ್ಯವನ್ನು ಬರೆಯಿರಿ.

Answer:
ಕೌರವರು ವಿರಾಟರಾಜನ ಗೋವುಗಳನ್ನು ಅಪಹರಿಸುತ್ತಾರೆ. ಪಾಂಡವರನ್ನು ಹುಡುಕುವ ಉದ್ದೇಶ ಅವರದಾಗಿರುತ್ತದೆ. ಉತ್ತರ ಕುಮಾರನ ಸಾರಥಿಯಾಗಿ ಅರ್ಜುನನು ಬೃಹನ್ನೆಳೆಯ ವೇಷದಲ್ಲಿ ರಣರಂಗಕ್ಕೆ ಬಂದಾಗ ಕೌರವರ ಭಯಂಕರ ಸೈನ್ಯವನ್ನು ಕಂಡು, ಶಿವನಿಂದ ಮಾತ್ರ ಈ ಸೇನೆಯನ್ನು ಗೆಲ್ಲುವುದಕ್ಕೆ ಸಾಧ್ಯ ತನ್ನಿಂದಾಗದು, ಎಂದು ಉತ್ತರನು ರಥದ ಹಿಂಬದಿಯಿಂದ ಧುಮ್ಮಿಕ್ಕಿ, ಬೆನ್ನು ತಿರುಗಿಸಿ ಬಿಟ್ಟಮಂಡೆಯಲ್ಲಿ ಓಡಲು ತೊಡಗುತ್ತಾನೆ. 

ಆಗ ಅರ್ಜುನ ಅವನನ್ನು ತಡೆದು ಅರಮನೆಯಲ್ಲಿ ಹೆಂಗೆಳೆಯರ ಮುಂದೆ ಜಂಭ ಕೊಚ್ಚಿದ ಪ್ರಸಂಗವನ್ನು ನೆನೆಪಿಸುತ್ತಾನೆ. ಆದರೆ ಉತ್ತರ ಕುಮಾರನು ತನಗೆ ತನ್ನ ಅರಮನೆಯ ಸೌಖ್ಯವೇ ಸಾಕು ಎಂದು ಉತ್ತರಿಸುತ್ತಾನೆ. ಇಂದ್ರಪದವಿಯು ತನಗೆ ಬೇಡ, ಅಪ್ಸರೆಯರು ಬೇಡ, ನನಗೆ ನಮ್ಮ ಅರಮನೆಯ ಸ್ತ್ರೀಯರೇ ಸಾಕು, ನನ್ನ ಜೀವ ಉಳಿದರೆ ಅಷ್ಟೇ ಸಾಕೆಂದು ಓಡತೊಡಗಿದನು. ಆಗ ಅರ್ಜುನನು ಉತ್ತರನಿಗೆ ಅಂಜುಬುರುಕ ನಾಡನರಿಯ ಹಾಗೆ ಓಡುವುದು ಸರಿಯಲ್ಲ ಕಾದು ನಡೆ ಎಂದನು.

Question 2.
ಅರ್ಜುನ ಮತ್ತು ಉತ್ತರ ಇವರ ಗುಣ ಸ್ವಭಾವದಲ್ಲಿಯ ವ್ಯತ್ಯಾಸಗಳನ್ನು ಬರೆಯಿರಿ.

Answer:
ಅರ್ಜುನನು ಧೈರ್ಯ, ಪರಾಕ್ರಮ, ವೀರತನದ ಸಂಕೇತವಾದರೆ ಉತ್ತರನು ಹೇಡಿತನ ಜಂಭದ ಪ್ರತಿಕವಾಗಿದ್ದಾನೆ. ಅಚಿಜಬುರುಕನಾದ ಉತ್ತರನಂತಹ ಬದುಕು ಬೇಡ ಅರ್ಜುನನ ಹಾಗೆ ಧೀರವಂತರಾಗಬೇಕು ಎಂಬ ಸಂದೇಶವೂ ಇವರ ಗುಣಸ್ವ ಭಾವಗಳಲ್ಲಿ ಡಗಿದೆ. ಅರಮನೆಯಲ್ಲಿ ಹೆಂಗೆಳೆಯರ ಮುಂದೆ ಜಂಭ ಕೊಚ್ಚಿಕೊಂಡ ಉತ್ತರ ಕುಮಾರ ಕೌರವ ಸೈನ್ಯವನ್ನು ನೋಡಿ ಭಯದಿಂದ ಬಿಟ್ಟಮಂಡೆಯಲಿ ಓಡುತ್ತಾನೆ. ಇವನನ್ನು ನೋಡಿ ಎಲ್ಲರೂ ನಗುತ್ತಾರೆ. 

ನನಗೆ ಇಂದ್ರಪದವಿಯು ಬೇಡ, ಅಪ್ಸರೆಯರು ಬೇಡ, ನನ್ನ ಅರಮನೆಯ ಸ್ತ್ರೀಯರೇ ಸಾಕು, ನನ್ನ ಜೀವ ಉಳಿದರೆ ಅಷ್ಟೇ ಸಾಕೆಂದು ಓಡತೊಡಗಿದನು. ಅವನ ಈ ನಡುವಳಿಕೆ ಎಲ್ಲರಿಗೂ ನಗುವನ್ನು ತರಿಸುತ್ತದೆ. ಆದರೆ ಅರ್ಜುನ ಶೌರ್ಯದ ಪ್ರತೀಕವಾಗಿದ್ದಾನೆ. ತನ್ನ ಪರಾಕ್ರಮದಿಂದ ಕೌರವರ ಸೇನೆಯೊಡನೆ ಹೋರಾಡಿ, ವಿಕ್ರಮವನ್ನು ಪಡೆದು, ವಿಜಯಶಾಲಿಯಾ ಆದುದು ಅವನ ಭುಜಭಲ ಪರಾಕ್ರಮಕ್ಕೆ ಕನ್ನಡಿಯಾಗಿದೆ. ಇದಕ್ಕಾಗಿಯೇ ಎಲ್ಲರೂ ಬಯಸುವುದು ಅರ್ಜುನನಂತಹ ಆಗುವದು ಉತ್ತರಕುಮಾರನಂತೆ ಅಲ್ಲ.

ಸಂದರ್ಭದೊಡನೆ ವಿವರಿಸಿರಿ.

Question 1.
ಶಿವಶಿವ ಕಾದಿಗೆಲಿದವು.

Answer:
ಸಂದರ್ಭ:
ಈ ವಾಕ್ಯವನ್ನು ಗದುಗಿನ ನಾರಾಯಣಪ್ಪನವರು ಬರೆದಿರುವ ಕರ್ಣಾಟ ಭಾರತ ಕಥಾಮಂಜರಿ ಎಂಬ ಮಹಾಕಾವ್ಯದಿಂದ ಆಯ್ದ ನಿಟ್ಟೋಟದಲಿ ಹಾಯ್ದನು ಬಿಟ್ಟಮಂಡೆಯಲಿ ಎಂಬ ಪದ್ಯದಿಂದ ಆರಿಸಲಾಗಿದೆ.

ಸ್ವಾರಸ್ಯ:
ಈ ಮಾತನ್ನು ವಿರಾಟರಾಜನ ಮಗನಾದ ಉತ್ತರಕುಮಾರನು ಬೃಹನ್ನಳೆ ವೇಷಧಾರಿ ಅರ್ಜುನನಿಗೆ ಹೇಳಿದನು. ಕೌರವರ ಭಯಂಕರ ಸೇನೆಯನ್ನು ಕಂಡು ಹೆದರಿ ರಣರಂಗದಿಂದ ಓಡಲು ತೊಡಗಿದಾಗ ಬೃಹನ್ನಳೆ ವೇಷ ಧರಿಸಿದ್ದ ಅರ್ಜುನನು ತಡೆದು ಯುದ್ಧ ಭೂಮಿಯಿಂದ ಓಡುವುದು ಪಾಪವೆಂದು ಹೇಳಿದಾಗ ಈ ಮೇಲಿನ ಮಾತನ್ನು ಉತ್ತರ ಕುಮಾಅರ ಹೇಳುತ್ತಾನೆ.

Question 2.
ನಿಟ್ಟೋಟದಲಿ ಹಾಯ್ದನು ಬಿಟ್ಟಮಂಡೆಯಲಿ.

Answer:
ಸಂದರ್ಭ:
ಈ ವಾಕ್ಯವನ್ನು ಗದುಗಿನ ನಾರಾಯಣಪ್ಪನವರು ಬರೆದಿರುವ ಕರ್ಣಾಟ ಭಾರತ ಕಥಾಮಂಜರಿ ಎಂಬ ಮಹಾಕಾವ್ಯದಿಂದ ಆಯ್ದ ನಿಟ್ಟೋಟದಲಿ ಹಾಯ್ದನು ಬಿಟ್ಟಮಂಡೆಯಲಿ ಎಂಬ ಪದ್ಯದಿಂದ ಆರಿಸಲಾಗಿದೆ.

ಸ್ವಾರಸ್ಯ:
ಕೌರವ ಸೇನೆಯನ್ನು ಕಂಡು ಹೆದರಿದ ಉತ್ತರನು ಕೌರವ ಸೇನೆಯೊಡನೆ ಯುದ್ಧ ಮಾಡಲು ತನ್ನಿಂದ ಸಾದ್ಯವಿಲ್ಲವೆಂದು ನಿದಾನವಾಗಿ ರಥದ ಹಿಂದಿನಿಂದ ಓಡಲು ಪ್ರಾರಂಭಿಸಿದಾಗ ಮೇಲಿನ ಮಾತು ಬಂದಿದೆ.

Question 3.
ನಾಡನರಿಯೊಲ್ ಹಲುಗಿರಿಯ ಬಿಡುವೆನೆ.

Answer:
ಸಂದರ್ಭ:
ಈ ವಾಕ್ಯವನ್ನು ಗದುಗಿನ ನಾರಾಯಣಪ್ಪನವರು ಬರೆದಿರುವ ಕರ್ಣಾಟ ಭಾರತ ಕಥಾಮಂಜರಿ ಎಂಬ

ಸ್ವಾರಸ್ಯ:
ಮಹಾಕಾವ್ಯದಿಂದ ಆಯ್ದು ನಿಟ್ಟೋಟದಲಿ ಹಾಯ್ದನು ಬಿಟ್ಟಮಂಡೆಯಲಿ ఎంబ ಪದ್ಯದಿಂದ ಆರಿಸಲಾಗಿದೆ.

ಸ್ವಾರಸಸ್ಯ:
ಈ ಮಾತನ್ನು ಅರ್ಜುನ ಉತ್ತರನಿಗೆ ಹೇಳಿದನು.ಉತ್ತರನು ಹೆಂಗಳೆಯರ ಮುಂದೆ ಬಾಯ್ದೆ ಬಂದಂತೆ ಮಾತನಾಡಿದನು. ಆದರೆ ಯುದ್ಧರಂಗದಲ್ಲಿ ಕೌರವಸೇನೆಯನ್ನು ಕಂಡು ಹೆದರಿ ಓಡಲು ಪ್ರಾರಂಭಿಸಿದನು. ಆಗ ಅರ್ಜುನನು ಹಲ್ಲು ಕಿರಿದು ಅಂಜುಬುರುಕ ನರಿಯಂತೆ ಓಡಿಹೋಗಲು ಬಿಡುವುದಿಲ್ಲ ಕಾದು ನಡೆ ಎಂದು ಉತ್ತರನಿಗೆ ಹೇಳಿದನು. 3

Question 4.
ಎಮ್ಮರಮನೆಯ ನಾರಿಯರೆ ಸಾಕು.

Answer:
ಸಂದರ್ಭ:
ಈ ವಾಕ್ಯವನ್ನು ಗದುಗಿನ ನಾರಾಯಣಪ್ಪನವರು ಬರೆದಿರುವ ಕರ್ಣಾಟ ಭಾರತ ಕಥಾಮಂಜರಿ ಎಂಬ

ಸ್ವಾರಸ್ಯ:
ಮಹಾಕಾವ್ಯದಿಂದ ಆಯ್ದ ನಿಟ್ಟೋಟದಲಿ ಹಾಯ್ದನು ಬಿಟ್ಟಮಂಡೆಯಲಿ ಎಂಬ ಪದ್ಯದಿಂದ ಆರಿಸಲಾಗಿದೆ.

ಸ್ವಾರಸ್ಯ:
ಈ ಮಾತನ್ನು ಉತ್ತರನು ಅರ್ಜುನನಿಗೆ ಹೇಳಿದನು. ಯುದ್ಧರಂಗದಿಂದ ಓಡಿಹೋದರೆ ಪಾಪ ಸುತ್ತಿಕೊಳ್ಳುವುದು. ಎಂದಾಗ ಉತ್ತರ ನನಗೆ ಯುದ್ಧದಲ್ಲಿ ಸೋತು ವೀರ ಸ್ವರ್ಗ ಸೇರುವುದು ಬೇಡ ಇಂದ್ರ ಪದವಿಯೂ ಬೇಡ ಸುರರಸತಿಯರೂ ಬೇಡ ಎಂದು ಹೇಳುವಾಗ ಈ ಮಾತು ಬಂದಿದೆ.

ಭಾಷಾಭ್ಯಾಸ :
ಅ) ಕೆಳಗಿನ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ.
  1. ಸೈನ್ಯ — ಪಡೆ, ಸೇನೆ
  2. ಹೆಣ್ಣು — ಸ್ತ್ರೀ, ನಾರಿ
  3. ಯುದ್ಧ — ಸಮರ, ಕಾಳಗ
  4. ಭೂಮಿ — ಧರೆ, ಭೂತಾಯಿ
  5. ಶಿವ — ಶಂಕರ, ಮಹೇಶ
ಆ) ಕೆಳಗಿನ ಪದಗಳಿಗೆ ತತ್ಸಮ-ತದ್ಭವ ರೂಪಗಳನ್ನು ಬರೆಯಿರಿ.

ತದ್ಭವ

ತತ್ಸಮ

ಪೊಡವಿ

ಪೃಥ್ವಿ

ಮುಖ

ಮುಖ

ಅದ್ಭುತ

ಅದ್ಭುತ

ಇ) ಕೆಳಗಿನ ಪದಗಳನ್ನು ವಿಗ್ರಹವಾಕ್ಯ ಮಾಡಿ.
  1. ಅರಮನೆ — ಅರಸನ ಮನೆ
  2. ವನಜಮುಖಿ — ವನಜದಂತೆ ಇರುವ ಮುಖವುಳ್ಳವಳು
  3. ನಿಟ್ಟೋಟ — ನಿಟ್ಟಾಗಿ ಓಡುವುದು
  4. ಬಲಗಡಲು — ಬಲವಾದ ಕಡಲು
ಈ) ಕೆಳಗಿನ ಅಲಂಕಾರಿಕ ಪದಗಳನ್ನು ಸಮನ್ವಯಗೊಳಿಸಿ ಅಲಂಕಾರದ ಹೆಸರು ತಿಳಿಸಿರಿ.
  1. ವನಜಮುಖಿ — ರೂಪಕ ಅಲಂಕಾರ
  2. ನಾಡನರಿ — ರೂಪಕ ಅಲಂಕಾರ
  3. ಬಲಗಡಲು — ರೂಪಕ ಅಲಂಕಾರ

ನಿಟ್ಟೋಟದಲಿ ಹಾಯ್ದನು ಬಿಟ್ಟಮಂಡೆಯಲಿ ಸಾರಾಂಶ
Summary

Class 10 Tili Kannada Pome Chapter 6 ನಿಟ್ಟೋಟದಲಿ ಹಾಯ್ದನು ಬಿಟ್ಟ ಮಂಡೆಯಲಿ Nittotadali Haydanu Bittamandeyali

ಈ ಪದ್ಯವು ಕುಮಾರವ್ಯಾಸ ರಚಿಸಿದ ಗದುಗಿನ ಭಾರತ ಕೃತಿಯಿಂದ ಆಯ್ದುಕೊಳ್ಳಲಾಗಿದೆ. ಮಹಾಭಾರತದ “ಉತ್ತರನ ಪೌರುಷ” ಎಂಬ ಪ್ರಸಂಗವನ್ನು ಇಲ್ಲಿ ರಸಪೂರ್ಣವಾಗಿ ಚಿತ್ರಿಸಲಾಗಿದೆ.

ಪಾಂಡವರು ಅಜ್ಞಾತವಾಸದಲ್ಲಿರುವಾಗ ವಿರಾಟರಾಜನ ರಾಜ್ಯದ ಮೇಲೆ ಕೌರವರು ದಾಳಿ ಮಾಡಿ ಗೋವುಗಳನ್ನು ಕದ್ದೊಯ್ಯುತ್ತಾರೆ. ಆಗ ವಿರಾಟನ ಮಗ ಉತ್ತರಕುಮಾರನು ಹೆಂಗಳೆಯರ ಮುಂದೆ ತಾನು ದೊಡ್ಡ ವೀರನೆಂದು ಜಂಭಕೊಚ್ಚಿಕೊಳ್ಳುತ್ತಾನೆ. ಆದರೆ ಯುದ್ಧಭೂಮಿಗೆ ಬಂದಾಗ ಕೌರವಸೇನೆಯ ವೈಭವವನ್ನು ನೋಡಿ ಭಯಪಡುತ್ತಾನೆ.

ಅರ್ಜುನನು ಆ ಸಮಯದಲ್ಲಿ “ಬೃಹನ್ನಳೆ” ಎಂಬ ವೇಷದಲ್ಲಿದ್ದನು. ಆತನು ಸಾರಥಿಯಾಗಿ ಉತ್ತರನೊಂದಿಗೆ ಯುದ್ಧಭೂಮಿಗೆ ಬರುತ್ತಾನೆ. ಕುರುಸೇನೆಯನ್ನು ಕಂಡ ಉತ್ತರನು ಧೈರ್ಯ ಕಳೆದುಕೊಂಡು ರಥದಿಂದ ಇಳಿದು ಓಡಲು ಯತ್ನಿಸುತ್ತಾನೆ. ಅರ್ಜುನನು ಅವನ ಭಯಭೀತ ಸ್ಥಿತಿಯನ್ನು ನೋಡಿ ನಗುತ್ತಾ ಅವನನ್ನು ಗದರಿಸುತ್ತಾನೆ. ಸಭೆಯಲ್ಲಿ ಹೆಂಗಳೆಯರ ಮುಂದೆ ಬಡಾಯಿ ಮಾತು ಆಡಿದ ನೀನು ಈಗ ಯುದ್ಧದಿಂದ ಓಡುತ್ತಿರುವುದು ಯೋಗ್ಯವಲ್ಲ ಎಂದು ಹೇಳುತ್ತಾನೆ.

ಅರ್ಜುನನು ಉತ್ತರನಿಗೆ ಧೈರ್ಯ ತುಂಬಿ, ತಾನೇ ಯುದ್ಧಕ್ಕೆ ಸಿದ್ಧನಾಗುತ್ತಾನೆ. ಈ ಪದ್ಯದಲ್ಲಿ ಬರಿಯ ಮಾತುಗಳಿಂದ ಶೂರನಾಗುವುದಕ್ಕಿಂತ ಕಾರ್ಯದಲ್ಲಿ ಧೈರ್ಯ ತೋರಿಸುವುದೇ ಮುಖ್ಯ ಎಂಬ ಸಂದೇಶವನ್ನು ಕವಿ ನೀಡಿದ್ದಾರೆ.

ಈ ಪದ್ಯದಲ್ಲಿ ಕುಮಾರವ್ಯಾಸರು ರೂಪಕ ಅಲಂಕಾರಗಳನ್ನು ಸುಂದರವಾಗಿ ಬಳಸಿದ್ದು, ಹಾಸ್ಯ ಹಾಗೂ ವೀರರಸದ ಸಂಯೋಜನೆಯ ಮೂಲಕ ಉತ್ತರನ ಭಯಭೀತ ಸ್ಥಿತಿಯನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ.

Additional Question and Answer

Question 1.
ಉತ್ತರಕುಮಾರನು ಯಾರ ಮುಂದೆ ಜಂಭಕೊಚ್ಚಿಕೊಂಡನು?
Answer:
ಉತ್ತರಕುಮಾರನು ಹೆಂಗಳೆಯರ ಮುಂದೆ ಜಂಭಕೊಚ್ಚಿಕೊಂಡನು.

Question 2.
ವಿರಾಟರಾಜನ ಗೋವುಗಳನ್ನು ಯಾರು ಅಪಹರಿಸಿದರು?
Answer:
ಕೌರವರು ವಿರಾಟರಾಜನ ಗೋವುಗಳನ್ನು ಅಪಹರಿಸಿದರು.

Question 3.
ಬೃಹನ್ನಳೆಯ ವೇಷದಲ್ಲಿದ್ದವರು ಯಾರು?
Answer:
ಅರ್ಜುನನು ಬೃಹನ್ನಳೆಯ ವೇಷದಲ್ಲಿದ್ದನು.

Question 4.
ಉತ್ತರಕುಮಾರನು ಯುದ್ಧಭೂಮಿಯಲ್ಲಿ ಏಕೆ ಹೆದರಿದನು?
Answer:
ಕೌರವಸೇನೆಯ ಬಲ ಮತ್ತು ವೈಭವವನ್ನು ನೋಡಿ ಉತ್ತರಕುಮಾರನು ಹೆದರಿದನು.

Question 5.
ಉತ್ತರನು ರಥದಿಂದ ಇಳಿದು ಏನು ಮಾಡಲು ಯತ್ನಿಸಿದನು?
Answer:
ಉತ್ತರನು ರಥದಿಂದ ಇಳಿದು ಓಡಿ ಹೋಗಲು ಯತ್ನಿಸಿದನು.

Question 6.
ಅರ್ಜುನನು ಉತ್ತರನಿಗೆ ಏನು ಹೇಳಿದನು?
Answer:
ಸಭೆಯಲ್ಲಿ ಬಡಾಯಿ ಮಾತು ಆಡಿದ ನೀನು ಈಗ ಯುದ್ಧದಿಂದ ಓಡುವುದು ಸರಿಯಲ್ಲ ಎಂದು ಹೇಳಿದನು.

Question 7.
ಈ ಪದ್ಯದ ಮೂಲಕ ಕವಿ ಯಾವ ಸಂದೇಶವನ್ನು ನೀಡಿದ್ದಾರೆ?
Answer:
ಮಾತಿನ ಬಡಾಯಿ ಬಿಡಿಸಿ ಕಾರ್ಯದಲ್ಲಿ ಧೈರ್ಯ ತೋರಿಸಬೇಕು ಎಂಬ ಸಂದೇಶವನ್ನು ನೀಡಿದ್ದಾರೆ.

Question 8.
ಕುಮಾರವ್ಯಾಸರನ್ನು ಏಕೆ “ರೂಪಕ ಸಾಮ್ರಾಜ್ಯ ಚಕ್ರವರ್ತಿ” ಎಂದು ಕರೆಯುತ್ತಾರೆ?
Answer:
ಕಾವ್ಯದಲ್ಲಿ ರೂಪಕ ಅಲಂಕಾರಗಳನ್ನು ಹೆಚ್ಚಾಗಿ ಬಳಸಿದ ಕಾರಣ ಅವರನ್ನು “ರೂಪಕ ಸಾಮ್ರಾಜ್ಯ ಚಕ್ರವರ್ತಿ” ಎಂದು ಕರೆಯುತ್ತಾರೆ.

Question 9.
“ಗದುಗಿನ ಭಾರತ” ಇನ್ನಾವ ಹೆಸರಿನಿಂದ ಪ್ರಸಿದ್ಧವಾಗಿದೆ?
Answer:
 “ಕರ್ಣಾಟ ಭಾರತ ಕಥಾಮಂಜರಿ” ಎಂಬ ಹೆಸರಿನಿಂದಲೂ ಪ್ರಸಿದ್ಧವಾಗಿದೆ.

Question 10.
ಈ ಪದ್ಯದಲ್ಲಿ ಯಾವ ಯಾವ ರಸಗಳು ವ್ಯಕ್ತವಾಗಿವೆ?
Answer:
ಹಾಸ್ಯರಸ ಮತ್ತು ವೀರರಸ ವ್ಯಕ್ತವಾಗಿವೆ.

Question 11.
ಉತ್ತರಕುಮಾರನ ವರ್ತನೆ ಯಾವ ಗಾದೆಯನ್ನು ನೆನಪಿಗೆ ತರುತ್ತದೆ?
Answer:
 “ಉತ್ತರನ ಪೌರುಷ ಒಲೆಯ ಮುಂದೆ” ಎಂಬ ಗಾದೆಯನ್ನು ನೆನಪಿಗೆ ತರುತ್ತದೆ.

Question 12.
ಪಾಂಡವರು ಎಷ್ಟು ವರ್ಷ ಅಜ್ಞಾತವಾಸ ನಡೆಸಿದರು?
Answer:
ಪಾಂಡವರು ಒಂದು ವರ್ಷ ಅಜ್ಞಾತವಾಸ ನಡೆಸಿದರು.

Question 13.
ಕೀಚಕನನ್ನು ಯಾರು ಸಂಹರಿಸಿದರು?
Answer:
ಭೀಮನಿಂದ ಕೀಚಕನ ವಧೆಯಾಯಿತು.

Question 14.
ಉತ್ತರನಿಗೆ ಸಾರಥಿಯಾಗಲು ಯಾರು ಒಪ್ಪಿಸಿದರು?
Answer:
ಸೈರಂಧ್ರಿಯು ಬೃಹನ್ನಳೆಯನ್ನು ಸಾರಥಿಯಾಗಲು ಒಪ್ಪಿಸಿದಳು.

Question 15.
ಉತ್ತರನು ಯುದ್ಧಭೂಮಿಯಲ್ಲಿ ತನ್ನ ಭಯವನ್ನು ಹೇಗೆ ವ್ಯಕ್ತಪಡಿಸಿದನು?
Answer:
ತನ್ನ ದೇಹ ನಡುಗುತ್ತಿದೆ, ಮನಸ್ಸು ಸ್ಥಿರವಾಗಿಲ್ಲ ಎಂದು ಹೇಳಿ ಭಯವನ್ನು ವ್ಯಕ್ತಪಡಿಸಿದನು.

Multiple Choice Answer:

  1. “ನಿಟ್ಟೋಟದಲಿ ಹಾಯ್ದನು ಬಿಟ್ಟಮಂಡೆಯಲಿ” ಪದ್ಯದ ಕವಿ ಯಾರು?
    A) ಪಂಪ
    B) ಕುಮಾರವ್ಯಾಸ
    C) ರನ್ನ
    D) ಜನ್ನ
    Answer:
    B) ಕುಮಾರವ್ಯಾಸ

  2. ಕುಮಾರವ್ಯಾಸನ ಮೂಲ ಹೆಸರು ಏನು?
    A) ನಾರಣಪ್ಪ
    B) ಬಸವಣ್ಣ
    C) ಹರಿಹರ
    D) ರಾಘವಾಂಕ
    Answer:
    A) ನಾರಣಪ್ಪ

  3. “ಗದುಗಿನ ಭಾರತ” ಯಾವ ಕೃತಿಯ ಆಧಾರದ ಮೇಲೆ ರಚಿಸಲಾಗಿದೆ?
    A) ರಾಮಾಯಣ
    B) ಭಾಗವತ
    C) ಮಹಾಭಾರತ
    D) ಗೀತಾ
    Answer:
    C) ಮಹಾಭಾರತ

  4. ಪಾಂಡವರು ಯಾವ ರಾಜ್ಯದಲ್ಲಿ ಅಜ್ಞಾತವಾಸ ನಡೆಸಿದರು?
    A) ಹಸ್ತಿನಾಪುರ
    B) ಮತ್ಸ್ಯ ದೇಶ
    C) ದ್ವಾರಕಾ
    D) ಅಯೋಧ್ಯೆ
    Answer:
    B) ಮತ್ಸ್ಯ ದೇಶ

  5. ವಿರಾಟರಾಜನ ಮಗ ಯಾರು?
    A) ಅಭಿಮನ್ಯು
    B) ಉತ್ತರಕುಮಾರ
    C) ದುರ್ಯೋಧನ
    D) ಭೀಮ
    Answer:
    B) ಉತ್ತರಕುಮಾರ

  6. ಬೃಹನ್ನಳೆಯ ವೇಷದಲ್ಲಿದ್ದವರು ಯಾರು?
    A) ಭೀಮ
    B) ಯುಧಿಷ್ಠಿರ
    C) ಅರ್ಜುನ
    D) ನಕುಲ
    Answer:
    C) ಅರ್ಜುನ

  7. ವಿರಾಟರಾಜನ ಗೋವುಗಳನ್ನು ಯಾರು ಅಪಹರಿಸಿದರು?
    A) ಪಾಂಡವರು
    B) ಕೌರವರು
    C) ಯಾದವರು
    D) ರಾಕ್ಷಸರು
    Answer:
    B) ಕೌರವರು

  8. ಉತ್ತರಕುಮಾರನು ಯಾರ ಮುಂದೆ ಜಂಭಕೊಚ್ಚಿಕೊಂಡನು?
    A) ಸೈನಿಕರ ಮುಂದೆ
    B) ಹೆಂಗಳೆಯರ ಮುಂದೆ
    C) ರಾಜನ ಮುಂದೆ
    D) ಗುರುಗಳ ಮುಂದೆ
    Answer:
    B) ಹೆಂಗಳೆಯರ ಮುಂದೆ

  9. ಯುದ್ಧಭೂಮಿಯಲ್ಲಿ ಉತ್ತರನು ಏನು ಮಾಡಲು ಯತ್ನಿಸಿದನು?
    A) ಯುದ್ಧ ಮಾಡಲು
    B) ನಿದ್ರೆ ಮಾಡಲು
    C) ಓಡಿ ಹೋಗಲು
    D) ಕುದುರೆ ಓಡಿಸಲು
    Answer:
    C) ಓಡಿ ಹೋಗಲು

  10. ಉತ್ತರನಿಗೆ ಧೈರ್ಯ ತುಂಬಿದವರು ಯಾರು?
    A) ಭೀಮ
    B) ಕೃಷ್ಣ
    C) ಅರ್ಜುನ
    D) ದ್ರೋಣ
    Answer:
    C) ಅರ್ಜುನ

  11. “ರೂಪಕ ಸಾಮ್ರಾಜ್ಯ ಚಕ್ರವರ್ತಿ” ಎಂದು ಯಾರನ್ನು ಕರೆಯುತ್ತಾರೆ?
    A) ಪಂಪ
    B) ಕುಮಾರವ್ಯಾಸ
    C) ಬಸವಣ್ಣ
    D) ಜನ್ನ
    Answer:
    B) ಕುಮಾರವ್ಯಾಸ

  12. “ಗದುಗಿನ ಭಾರತ” ಯಾವ ಛಂದಸ್ಸಿನಲ್ಲಿ ರಚಿತವಾಗಿದೆ?
    A) ವಚನ
    B) ರಗಳೆ
    C) ಭಾಮಿನಿ ಷಟ್ಟದಿ
    D) ಸಂಗತ್ಯ
    Answer:
    C) ಭಾಮಿನಿ ಷಟ್ಟದಿ

  13. ಕೀಚಕನನ್ನು ಯಾರು ಸಂಹರಿಸಿದರು?
    A) ಅರ್ಜುನ
    B) ಭೀಮ
    C) ಕೃಷ್ಣ
    D) ಸಹದೇವ
    Answer:
    B) ಭೀಮ

  14. “ವನಜಮುಖಿ” ಎಂಬ ಪದದಲ್ಲಿ ಯಾವ ಅಲಂಕಾರ ಇದೆ?
    A) ಉಪಮೆ
    B) ಶ್ಲೇಷ
    C) ರೂಪಕ
    D) ಯಮಕ
    Answer:
    C) ರೂಪಕ

  15. ಉತ್ತರನ ಪೌರುಷ ಯಾವದ ಮುಂದೆ ಎಂದು ಗಾದೆಯಲ್ಲಿ ಹೇಳಲಾಗಿದೆ?
    A) ಯುದ್ಧದ ಮುಂದೆ
    B) ಒಲೆಯ ಮುಂದೆ
    C) ರಾಜನ ಮುಂದೆ
    D) ಸೈನ್ಯದ ಮುಂದೆ
    Answer:
    B) ಒಲೆಯ ಮುಂದೆ

  16. ಉತ್ತರನು ಯುದ್ಧಭೂಮಿಯಲ್ಲಿ ಏನನ್ನು ನೋಡಿ ಹೆದರಿದನು?
    A) ಕುದುರೆಗಳನ್ನು
    B) ಕೌರವ ಸೇನೆಯನ್ನು
    C) ರಥವನ್ನು
    D) ಆನೆಗಳನ್ನು
    Answer:
    B) ಕೌರವ ಸೇನೆಯನ್ನು

  17. ಸೈರಂಧ್ರಿ ಯಾರು?
    A) ದ್ರೌಪದಿ
    B) ಕುಂತಿ
    C) ಸುಭದ್ರೆ
    D) ಗಾಂಧಾರಿ
    Answer:
    A) ದ್ರೌಪದಿ

  18. ಈ ಪದ್ಯದಲ್ಲಿ ಮುಖ್ಯವಾಗಿ ವ್ಯಕ್ತವಾಗಿರುವ ರಸ ಯಾವುದು?
    A) ಕರುಣರಸ
    B) ಶೃಂಗಾರರಸ
    C) ಹಾಸ್ಯ ಮತ್ತು ವೀರರಸ
    D) ಭಯಾನಕರಸ
    Answer:
    C) ಹಾಸ್ಯ ಮತ್ತು ವೀರರಸ

  19. “ಪೊಡವಿ” ಪದದ ಅರ್ಥ ಏನು?
    A) ಆಕಾಶ
    B) ಭೂಮಿ
    C) ಸಮುದ್ರ
    D) ಬೆಟ್ಟ
    Answer:
    B) ಭೂಮಿ

  20. ಈ ಪದ್ಯದ ಮುಖ್ಯ ಆಶಯ ಯಾವುದು?
    A) ಧನದ ಮಹತ್ವ
    B) ಯುದ್ಧದ ನಾಶ
    C) ಮಾತಿಗಿಂತ ಕಾರ್ಯ ಮುಖ್ಯ
    D) ಸ್ನೇಹದ ಮಹತ್ವ
    Answer:
    C) ಮಾತಿಗಿಂತ ಕಾರ್ಯ ಮುಖ್ಯ

Nittotadali Haydanu Bittamandeyali question answers, Nittotadali Haydanu Bittamandeyali summary, sslc kannada chapter 6 notes, karnataka board kannada notes 2026

📘 2nd PUC 📗 1st PUC 📙 SSLC

You cannot copy content of this page