Vachana Question Answers 2026 | SSLC Kannada Notes PDF
Looking for SSLC /Class 10th Tili Kannada textbook answers? You can download Chapter 5: Vachana Questions and Answers PDF, Notes, and Summary here. SSLC /Class 10th Tili Kannada Padyabhaga solutions follow the Karnataka State Board Syllabus, making it easier for students to revise and score higher in exams.
Karnataka SSLC/Class 10th Tili Kannada Textbook Answers—Reflections Chapter 5
Vachana Questions and Answers, Notes, and Summary
Class 10 Tili Kannada Poem Chapter 5
ವಚನಗಳು
Vachana
Scroll Down to Download Vachana PDF
ಈ ಪ್ರಶ್ನೆಗಳಿಗೆ ಒಂದೆರಡು ವಾಕ್ಯಗಳಲ್ಲಿ ಉತ್ತರಿಸಿರಿ.
Question 1.
ಬಸವಣ್ಣನವರು ಜನರ ಯಾವ ನಂಬಿಕೆಯನ್ನು ಖಂಡಿಸಿದ್ದಾರೆ?
Answer :
ಬಸವಣ್ಣನವರು ಜನರ ನೀರುಕಂಡಲ್ಲಿ ಮುಳುಗುವದು ಮರವನ್ನು ಕಂಡಲ್ಲಿ ಸುತ್ತುವ ನಂಬಿಕೆಯನ್ನು ಖಂಡಿಸಿದ್ದಾರೆ.
Question 2.
ವೇಷ ಮತ್ತು ಆಚರಣೆಯ ಸಂಬಂಧ ಹೇಗಿರಬೇಕು?
Answer :
ವೇಷ ಧರಿಸಿದ ಮೇಲೆ ವೇಷಕ್ಕೆ ತಕ್ಕ ಆಚರಣೆ ಇರಬೇಕು.
Question 3.
ವೇದಾಂತವನ್ನು ಓದಿವನು ಹೇಗಿರಬೇಕೆಂದು ಸಿದ್ದರಾಮ ಹೇಳುತ್ತಾನೆ?
Answer :
ವೇದಾಂತವನು ಓದಿದವನು ಬ್ರಹ್ಮನ್ನು ಒಲಿಸಿಕೊಳ್ಳು ವನು ಆಗಬೇಕೆಂದು ಸಿದ್ದರಾಮ ಹೇಳೂತ್ತಾನೆ.
Question 4.
ಕೆರೆಗಳು ನಿಷ್ಟ್ರಯೋಜಕ ಆಗುವದು ಯಾವಾಗ?
Answer :
ಪುಣ್ಯ ತೀರ್ಥಗಳು ಬರದಿದ್ದಾಗ ಕೆರೆ ತೋಡಿದ್ದು ನಿಷ್ಟ್ರಯೋಜಕ ಆಗುವದು.
Question 5.
ಧನವಿದ್ದವರಲ್ಲಿ ಇರಬೇಕಾದ ಗುಣ ಯಾವುದು?
Answer :
ಧನವಿದ್ದವರಲ್ಲಿ ಇರಬೇಕಾದ ಗುಣ ದಯೆ.
Question 6.
ಅಕ್ಕಮಹಾದೇವಿಯು ತನ್ನ ಬದುಕು ಯಾವಾಗ ಫಲದಾಯಕ ಆಗುತ್ತದೆ ಎಂದು
ಹೇಳುತ್ತಾಳೆ?
Answer :
ಚನ್ನಮಲ್ಲಿಕಾರ್ಜುನ ಜ್ಞಾನ ಇದ್ದಾಗ ತನ್ನ ಬದುಕು ಫಲದಾಯಕ ಆಗುತ್ತದೆ ಎಂದು ಅಕ್ಕಮಹಾದೇವಿ ಹೇಳುತ್ತಾರೆ.
ವಾಕ್ಯಗಳಲ್ಲಿ ಉತ್ತರಿಸಿ ಈ ಪ್ರಶ್ನೆಗಳಿಗೆ 3-4 ವಾಕ್ಯಗಳಲ್ಲಿ ಉತ್ತರಿಸಿರಿ.
Question 1.
ಬಸವಣ್ಣನವರು ಜನರ ಧಾರ್ಮಿಕ ನಂಬಿಕೆಯನ್ನು ಏಕೆ ಖಂಡಿಸಿದ್ದಾರೆ?
Answer :
ಜನರು ನೀರು ಕಂಡಲ್ಲಿ ಮುಳುಗುತ್ತಾರೆ. ಮರವನ್ನು ಕಂಡರೆ ಸುತ್ತುತ್ತಾರೆ. ಬತ್ತುವ ಜಲ ಒಣಗುವ ಮರವನ್ನು ಮೆಚ್ಚುವ ಜನ ಕೂಡಲ ಸಂಗಮನನ್ನು ತಿಳಿಯಲು ಸಾಧ್ಯವಿಲ್ಲ ಎಂದು ಕುರುಡು ಸಂಪ್ರದಾಯವನ್ನು ಸವಣ್ಣನವರು ಲೇವಡಿ ಮಾಡಿದ್ದಾರೆ.
Question 2.
ರೂಪಿದ್ದು ಫಲವೇನು ಗುಣವಿಲ್ಲದನಕ ಈ ಮಾತಿನ ಅರ್ಥವೈಶಿಷ್ಟ್ಯವೇನು?
Answer :
ನೆರಳನ್ನು ಕೊಡದಿರುವ ಮರದಿಂದ ಯಾವ ಫಲವೂ ಇಲ್ಲ. ದವಿಲ್ಲದವನಿಗೆ ಧನವಿದ್ದರೂ ಪ್ರಯೋಜನವಿಲ್ಲ. ಹಾಲು ಕೊಡದ ಹಸುವಿದ್ದರೂ ಫಲವಿಲ್ಲ. ಹಾಗೆಯೇ ಗುಣವಿಲ್ಲದ ರೂಪವೂ ಕೂಡ ವ್ಯರ್ಥ. ಮನುಷ್ಯನಿಗೆ ಗುಣ ಮುಖ್ಯವೇ ಹೊರತು ಸುಂದರವಾದ ರೂಪವಲ್ಲ ಎಂಬುದನ್ನು ಈ ವಾಕ್ಯ ತಿಳಿಸುತ್ತದೆ.
ಈ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.
Question 1.
ಬಸವಣ್ಣವರು ಜನರ ಮೌಡ್ಯತೆಯನ್ನು ಯಾವ ರೀತಿ ಖಂಡಿಸಿದ್ದಾರೆ?
Answer :
ಬಸವಣ್ಣನವರು ಜನರ ಮೌಡ್ಯತೆಯ ಬಗ್ಗೆ ಬಹಳ ಮಾರ್ಮಿಕವಾಗಿ ಹೇಳಿದ್ದಾರೆ. ಜನರು ನೀರು ಕಂಡರೆ ಮುಳುಗುತ್ತಾರೆ. ಮರವನ್ನು ಕಂಡರೆ ಸುತ್ತುತ್ತಾರೆ. ಬತ್ತುವ ಜಲ ಒಣಗುವ ಮರವನ್ನು ಮೆಚ್ಚುವ ಜನ ಕೂಡಲ ಸಂಗಮನನ್ನು ತಿಳಿಯಲು ಸಾಧ್ಯವಿಲ್ಲ. ಮೊಡನಂಬಿಕೆಯನ್ನು ನಂಬಿ ಜನರು ಮಾಡುವ ಕಾರ್ಯ ನಮ್ಮನ್ನು ಶಾಂತಿ ಕೊಡುವದಿಲ್ಲ. ಇದರಿಂದ ಏನು ಲಾಭ ಆಗುವದಿಲ್ಲ. ಭಗವಂತ ನಮ್ಮಿಂದ ಸಂತೋಷ ಪಡುವದಿಲ್ಲ ಎಂದು ಬಸವಣ್ಣ ಹೇಳಿದ್ದಾರೆ.
Question 2.
ಬಾಹ್ಯ ಹಾಗು ಆಂತರಿಕ ನಡುವಳಿಕೆಯಲ್ಲಿ ಸಾಮ್ಯತೆ ಇರಬೇಕೆಂದು ಸಿದ್ಧರಾಮನು ತನ್ನ ವಚನದಲ್ಲಿ ಹೇಗೆ ಪ್ರತಿಪಾದಿಸಿದ್ದಾರೆ?
Answer :
ಸಿದ್ದರಾಮ ಮನುಷ್ಯ ಬಾಹ್ಯ ಹಾಗು ಆಂತರಿಕ ನಡುವಳಿಕೆಯಲ್ಲಿ ಒಂದೇ ರೀತಿ ಇರಬೇಕೆಂದು ಹೇಳಿದ್ದಾರೆ. ಕಾವಿ ತೊಟ್ಟು ಅವರಲ್ಲಿ ಒಳ್ಳೆಯ ಜ್ಞಾನ ಇಲ್ಲದಿದ್ದರೆ ಅದು ತೋಡಿದ್ದು ವ್ಯಾರ್ಥವಾಗುತ್ತದೆ. ವೇದವನ್ನು ಓದಿಯೂ ಫಲವಿಲ್ಲ. ಓದಿದ ಹಾಗೆ ನಡುವಳಿಕೆ ಇಲ್ಲದಿದ್ದರೆ. ದೇವರು ನಮಗೆ ಒಲಿಯದಿದ್ದರೆ ಕೆರೆಗಳನ್ನು ತೋಡಿದರೆ ನೀರು ಬರಬೇಕು, ಇಲ್ಲದಿದ್ದರೆ ಅವು ವ್ಯರ್ಥ ವಾಗುತ್ತವೆ. ಎಂದು ಸಿದ್ಧರಾಮ ತನ್ನ ವಚನಗಳಲ್ಲಿ ಬಹಳ ಮಾರ್ಮಿಕವಾಗಿ ಹೇಳುತ್ತಾರೆ. ಎಂದು ಸಿದ್ದರಾಮ
Question 3.
ಅಕ್ಕಮಹಾದೇವಿ ತನ್ನ ಬದುಕು ಫಲದಾಯಕ ಆಗುವದನ್ನು ಯಾವ ನಿದರ್ಶನಗಳೊಂದಿಗೆ
ಸಮರ್ಥಿಸುತ್ತಾಳೆ?
Answer :
ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನನ ಜ್ಞಾನವಿಲ್ಲದೆ ಅಂದರೆ ಭಕ್ತಿ ಇಲ್ಲದೆ ಬದುಕಲು ಬಯಸುವುದಿಲ್ಲ. ಯಾವ ರೀತಿ ಮರ ಇದ್ದು ನೆರಳು ನೀಡದಿದ್ದರೆ ಮರ ಇದ್ದು ಫಲವಿಲ್ಲ ಧನವಿದ್ದರೂ ದಯೆ ಇರದಿದ್ದರೆ ಫಲವಿಲ್ಲ, ಹಾಲು ನೀಡದ ಹಸು ಇದ್ದು ಫಲವಿಲ್ಲ. ರೋಪ ಇದ್ದು ಗುಣ ಇರದಿದ್ದರೆ ರೂಪವ್ಯಾರ್ಥ. ಹಾಗೆಯೇ ಅನ್ನವಿಲ್ಲದ ತಟ್ಟೆ ಇದ್ದರೆ ಅದರಿಂದ ಪ್ರಯೋಜನವಿಲ್ಲ ಅದು ವ್ಯರ್ಥ ಎಂದಿದ್ದಾರೆ. ಮನುಷ್ಯನ ಜೀವನದಲ್ಲಿ ಭಗವಂತನ ಜ್ಞಾನ ಇದ್ದಾಗ ಮಾತ್ರ ಜೀವನ ಫಲದಾಯಕ ಆಗುತ್ತದೆ ಎಂದು ಅಕ್ಕಮಹಾದೇವಿ ಹೇಳಿದ್ದಾರೆ.
ಸಂದರ್ಭದೊಡನೆ ವಿವರಿಸಿರಿ.
Question 1.
ನೀರ ಕಂಡಲ್ಲಿ ಮುಳುಗುವರಯ್ಯಾ
Answer :
ಸಂದರ್ಭ:
ಈ ವಾಕ್ಯವನ್ನು ಬಸವಣ್ಣನವರು ಬರೆದಿರುವ ವಚನಗಳು ಎಂಬ ಪದ್ಯದಿಂದ ಆರಿಸಲಾಗಿದೆ.
ಸ್ವಾರಸ್ಯ:
ಈ ಮಾತನ್ನು ಬಸವಣ್ಣನವರು ಹೇಳಿದ್ದಾರೆ. ಜನರು ನಿಜವಾಗಿ ಹೊಂದಿರಬೇಕದ ಭಕ್ತಿಯನ್ನು ವಿವರಿಸುತ್ತಾ ಜನರು ನೀರನ್ನು ಕಂಡಲ್ಲಿ ಮುಳುಗುವರು ಮರ ಕಂಡಲ್ಲಿ ಸುತ್ತುವರು ಬತ್ತುವ ಜಲವ ಒಣಗುವ ಮರವ ಮೆಚ್ಚಿದವರು ದೇವರ ಜ್ಞಾನವನ್ನು ತಿಳಿಯುತ್ತಾರೆಯೆ? ಎಂದು ಪ್ರಶ್ನಿಸುತ್ತ ಮೂಢನಂಬಿಕೆಯನ್ನು ಖಂಡಿಸುತ್ತ ಅರ್ಥವಿಲ್ಲದ ಆಚರಣೆ ಬಿಡಬೇಕೆಂದು ತಿಳಿಸುವಾಗ ಈ ಮಾತು ಬಂದಿದೆ.
Question 2.
ವೇದಾಂತವನೋದಿ ಫಲವೇನಯ್ಯ.
Answer :
ಸಂದರ್ಭ :
ಈ ವಾಕ್ಯವನ್ನು ಸೊನ್ನಲಿಗೆ ಸಿದ್ಧರಾಮ ಬರೆದಿರುವ “ವಚನಗಳು “ಎಂಬ ಪದ್ಯದಿಂದ ಆರಿಸಲಾಗಿದೆ.
ಸ್ವಾರಸ್ಯ :
ಈ ಮಾತನ್ನು ಸಿದ್ಧರಾಮ ಹೇಳಿದ್ದಾರೆ. ಮನುಷ್ಯ ವೇಶಕ್ಕೆ ತಕ್ಕಂತೆ ನಡೆಯದಿದ್ದರೆ ವೇಶ ಧಿರಿಸಿ ಫಲವಿಲ್ಲ. ನುಡಿದ ಹಾಗೆ ನಡೆಯಬೇಕು. ಮನುಷ್ಯ ವೇದಗಳನ್ನು ಓದಿ ಅದನ್ನು ಪಾಲಿಸಬೇಕು. ಭಗವಂತನ್ನು ಒಲಿಸಿಕೊಳ್ಳಬೇಕು. ಆಗ ಲಾಭಆಗುತ್ತದೆ ಎಂದು ಹೇಳುವಾಗ ಮೇಲಿನ ಮಾತು ಬಂದಿದೆ.
Question 3.
ಅಗಲಿದ್ದು ಫಲವೇನು ಬಾನವಿಲ್ಲದನ್ನಕ್ಕ.
Answer :
ಸಂದರ್ಭ :
ಈ ವಾಕ್ಯವನ್ನು ವಚನಗಳು ಎಂಬ ಪದ್ಯದಿಂದ ಆರಿಸಲಾಗಿದೆ. ಈ ಮಾತನ್ನು ಅಕ್ಕಮಹಾದೇವಿ ಹೇಳಿದ್ದಾರೆ.
ಸ್ವಾರಸ್ಯ:
ನಿಜವಾದ ಜ್ಞಾನವಿರಬೇಕು ಎಂದು ವಿವರಿಸುತ್ತಾ ನೆರಳು ನೀಡದ ಮರ, ಹಾಲು ಕೊಡದ ಹಸು, ಗುಣವಿಲ್ಲದ ರೂಪದಿಂದ ಯಾವ ಪಲವಿಲ್ಲವೋ ಹಾಗೆ ಅನ್ನವಿಲ್ಲದ ತಟ್ಟೆಯಿಂದ ಏನು ಪ್ರಯೋಜನವಿಲ್ಲ ಎಂದು ತಿಳಿಸುವಾಗ ಅಕ್ಕಮಹಾದೇವಿ ಈ ಮಾತನ್ನು ಹೇಳಿದ್ದಾರೆ.
‘ಅ‘ ಪಟ್ಟಿಯನ್ನು ‘ಬ‘ ಪಟ್ಟಿಯೊಂದಿಗೆ ಸರಿಯಾಗಿ ಹೊಂದಿಸಿ ಬರೆಯಿರಿ :
‘ಅ’ ಪಟ್ಟಿ ‘ಬ’ ಪಟ್ಟಿ
೧) ಬಸವಣ್ಣ ಇ) ಕೂಡಲಸಂಗಮದೇವ
೨) ಸಿದ್ಧರಾಮ ಅ) ಕಪಿಲಸಿದ್ದ ಸಕಾರ್ಜುನ
೩) ಅಕ್ಕಮಹಾದೇವಿ ಈ) ಚೆನ್ನಮಲ್ಲಿಕಾರ್ಜುನ
ವಚನಗಳು ಸಾರಾಂಶ
Summary
ಈ ಪಾಠದಲ್ಲಿ ಕನ್ನಡದ ಮಹಾನ್ ವಚನಕಾರರಾದ ಬಸವಣ್ಣ, ಸಿದ್ಧರಾಮ ಮತ್ತು ಅಕ್ಕಮಹಾದೇವಿ ಅವರ ವಚನಗಳ ಮೂಲಕ ಭಕ್ತಿ, ನೈತಿಕತೆ ಮತ್ತು ಜೀವನದ ಮೌಲ್ಯಗಳನ್ನು ತಿಳಿಸಲಾಗುತ್ತದೆ.
ಬಸವಣ್ಣನವರು ತಮ್ಮ ವಚನದಲ್ಲಿ ದೇವಾಲಯ ಕಟ್ಟುವುದಕ್ಕಿಂತ ಮನಸ್ಸು ಮತ್ತು ದೇಹವನ್ನು ಪವಿತ್ರವಾಗಿಟ್ಟುಕೊಳ್ಳುವುದು ಮುಖ್ಯ ಎಂದು ಹೇಳಿದ್ದಾರೆ. “ದೇಹವೇ ದೇಗುಲ” ಎಂದು ಹೇಳುವ ಮೂಲಕ ಆಂತರಿಕ ಶುದ್ಧತೆಯ ಮಹತ್ವವನ್ನು ಒತ್ತಿಹೇಳುತ್ತಾರೆ. ಅವರು ಕಾಯಕ (ಕೆಲಸ) ಮತ್ತು ಸತ್ಯಜೀವನವನ್ನು ಶ್ರೇಷ್ಠವೆಂದು ಬೋಧಿಸಿದರು.
ಸಿದ್ಧರಾಮರು ವೇಷಧಾರಣೆ ಮಾತ್ರದಿಂದ ಭಕ್ತಿ ಸಿಗುವುದಿಲ್ಲ ಎಂದು ಹೇಳಿದ್ದಾರೆ. ಒಬ್ಬನು ಹೇಗೆ ಕಾಣುತ್ತಾನೆ ಎಂಬುದಕ್ಕಿಂತ ಅವನ ನಡೆ-ನುಡಿಗಳು ಮುಖ್ಯ. ನಿಜವಾದ ಭಕ್ತಿ ಎಂದರೆ ನಡವಳಿಕೆಯಲ್ಲಿ ಕಾಣಿಸಬೇಕು ಎಂದು ಅವರು ತಿಳಿಸುತ್ತಾರೆ.
ಅಕ್ಕಮಹಾದೇವಿಯವರು ತಮ್ಮ ವಚನದಲ್ಲಿ ಜೀವನದಲ್ಲಿ ಎದುರಾಗುವ ಕಷ್ಟ, ಶಬ್ದ, ಭಯ ಇತ್ಯಾದಿಗಳನ್ನು ಸಮಾಧಾನದಿಂದ ಎದುರಿಸಬೇಕು ಎಂದು ಹೇಳಿದ್ದಾರೆ. ಲೋಕದಲ್ಲಿ ಬದುಕುವಾಗ ಸಹನೆ ಮತ್ತು ಶಾಂತಿ ಇರಬೇಕು ಎಂಬ ಸಂದೇಶವನ್ನು ನೀಡಿದ್ದಾರೆ.
ಭಾಷಾಭ್ಯಾಸ
ಅ) ನಾನಾರ್ಥಗಳು (Multiple meanings):
- ಕಾಡು
- ಅರಣ್ಯ
- ಅಸಭ್ಯ / ಅಶಿಸ್ತಿನ
- ಕೆರೆ
- ನೀರಿನ ಸಂಗ್ರಹ ಸ್ಥಳ
- ಗುಂಡಿ / ತಳ
- ಅಗಲು
- ದೂರವಾಗು
- ಅಗಲ (ವಿಸ್ತಾರ)
- ತೊರೆ
- ಬಿಟ್ಟುಬಿಡು
- ಸಣ್ಣ ಹೊಳೆ
- ಎತ್ತು
- ಜಾನುವಾರು
- ಎತ್ತುವುದು (ಮೇಲಕ್ಕೆತ್ತುವುದು)
ಆ) ಸಂಧಿ ಬಿಡಿಸಿ, ಸಂಧಿ ಹೆಸರು:
- ವೇಷದಂತಾಚರಣೆ
→ ವೇಷದಂತೆ + ಆಚರಣೆ
→ ಸಂಧಿ: ಸ್ವರ ಸಂಧಿ - ವೇದಾಂತವನೋದಿ
→ ವೇದಾಂತವನ್ನು + ಓದಿ
→ ಸಂಧಿ: ಸ್ವರ ಸಂಧಿ - ನೋದಿ
→ ನೋಡು + ಇ
→ ಸಂಧಿ: ಸ್ವರ ಸಂಧಿ - ನಾಚಿದಡೆಂತಯ್ಯಾ
→ ನಾಚಿದ + ಅಡೆ + ಅಂತಯ್ಯಾ
→ ಸಂಧಿ: ವ್ಯಂಜನ ಸಂಧಿ - ಸ್ಥಾವರಕ್ಕಳಿವುಂಟು
→ ಸ್ಥಾವರಕ್ಕೆ + ಅಳಿವು + ಉಂಟು
→ ಸಂಧಿ: ವ್ಯಂಜನ ಸಂಧಿ
ಇ) ತತ್ಸಮ – ತದ್ಭವ ರೂಪಗಳು:
- ಬ್ರಹ್ಮ → ಬ್ರಮ್ಮ
- ಪುಣ್ಯ → ಪುಣ್ಣ
- ಶಿರ → ಸಿರ
- ಮೃಗ → ಮಿಗ
ಈ) ವಿರುದ್ಧಾರ್ಥ ಪದಗಳು (Antonyms):
- ಬಡವ → ಶ್ರೀಮಂತ
- ಫಲ → ನಷ್ಟ / ವ್ಯರ್ಥ
- ಪುಣ್ಯ → ಪಾಪ
- ಶಬ್ದ → ನಿಶ್ಶಬ್ದ / ಮೌನ
Additional Question and Answer:
ಒಂದು ವಾಕ್ಯ ಪ್ರಶ್ನೆ–ಉತ್ತರಗಳು:
Question 1.
“ದೇಹವೇ ದೇಗುಲ” ಎಂದವರು ಯಾರು?
Answer:
ಬಸವಣ್ಣ.
Question 2.
ಬಸವಣ್ಣನವರ ವಚನಗಳ ಅಂಕಿತ ಏನು?
Answer:
ಕೂಡಲಸಂಗಮದೇವ.
Question 3.
ಸಿದ್ಧರಾಮರ ವಚನಗಳ ಅಂಕಿತ ಏನು?
Answer:
ಕಪಿಲಸಿದ್ಧ ಮಲ್ಲಿಕಾರ್ಜುನ.
Question 4.
ಅಕ್ಕಮಹಾದೇವಿಯವರ ವಚನಗಳ ಅಂಕಿತ ಏನು?
Answer:
ಚೆನ್ನಮಲ್ಲಿಕಾರ್ಜುನ.
Question 5.
ಅಕ್ಕಮಹಾದೇವಿ ಯಾವ ಜಿಲ್ಲೆಯಲ್ಲಿ ಜನಿಸಿದರು?
Answer:
ಶಿವಮೊಗ್ಗ ಜಿಲ್ಲೆ (ಉಡುತಡಿ).
ಎರಡು–ಮೂರು ವಾಕ್ಯ ಪ್ರಶ್ನೆ–ಉತ್ತರಗಳು:
Question 1.
ಬಸವಣ್ಣನವರ ವಚನದ ಮುಖ್ಯ ಸಂದೇಶವೇನು?
Answer:
ದೇವಾಲಯ ಕಟ್ಟುವುದಕ್ಕಿಂತ ದೇಹ ಮತ್ತು ಮನಸ್ಸನ್ನು ಪವಿತ್ರವಾಗಿಡುವುದು ಮುಖ್ಯ. ಆಂತರಿಕ ಶುದ್ಧತೆ ಮತ್ತು ಸತ್ಯ ಜೀವನವೇ ಭಕ್ತಿಯ ಮೂಲ ಎಂದು ಅವರು ಹೇಳಿದ್ದಾರೆ.
Question 2.
ಸಿದ್ಧರಾಮರು ವೇಷಧಾರಣೆಯ ಬಗ್ಗೆ ಏನು ಹೇಳುತ್ತಾರೆ?
Answer:
ವೇಷ ಧರಿಸುವುದರಿಂದ ಮಾತ್ರ ಭಕ್ತಿ ಸಿಗುವುದಿಲ್ಲ. ನಡವಳಿಕೆ ಶುದ್ಧವಾಗಿದ್ದರೆ ಮಾತ್ರ ನಿಜವಾದ ಭಕ್ತಿ ಸಾಧ್ಯ.
Question 3.
ಅಕ್ಕಮಹಾದೇವಿಯವರ ವಚನದ ಸಂದೇಶವೇನು?
Answer:
ಜೀವನದಲ್ಲಿ ಎದುರಾಗುವ ಭಯ, ಶಬ್ದ, ಕಷ್ಟಗಳನ್ನು ಸಮಾಧಾನದಿಂದ ಎದುರಿಸಬೇಕು. ಸಹನೆ ಮತ್ತು ಶಾಂತಿ ಇರಬೇಕು ಎಂದು ಅವರು ಬೋಧಿಸಿದ್ದಾರೆ.
Question 4.
“ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ” ಎಂಬುದರ ಅರ್ಥವನ್ನು ವಿವರಿಸಿ.
Answer:
ಸ್ಥಿರವಾದ ವಸ್ತುಗಳು (ದೇವಾಲಯಗಳು) ಕಾಲದೊಂದಿಗೆ ನಾಶವಾಗುತ್ತವೆ. ಆದರೆ ಚಲಿಸುವ ಜೀವಿಗಳು (ಮಾನವರು) ತಮ್ಮ ಸತ್ಕಾರ್ಯಗಳಿಂದ ಶಾಶ್ವತ ಮೌಲ್ಯವನ್ನು ಹೊಂದುತ್ತಾರೆ. ಆದ್ದರಿಂದ ಜೀವಂತ ಭಕ್ತಿ ಮುಖ್ಯ.
Question 5.
ಅಕ್ಕಮಹಾದೇವಿಯವರ ಜೀವನದ ವೈಶಿಷ್ಟ್ಯವನ್ನು ವಿವರಿಸಿ.
Answer:
ಅಕ್ಕಮಹಾದೇವಿಯವರು ಸಂಪ್ರದಾಯಗಳನ್ನು ಮೀರಿ ವೈರಾಗ್ಯ ಜೀವನ ನಡೆಸಿದರು. ಅವರು ದೇವರನ್ನು ಪತಿಯಾಗಿ ಭಾವಿಸಿ ಭಕ್ತಿ, ಜ್ಞಾನ ಮತ್ತು ತ್ಯಾಗದ ಮೂಲಕ ವಿಶಿಷ್ಟ ಸ್ಥಾನ ಪಡೆದರು.
Multiple Choice Questions (MCQs)
- “ದೇಹವೇ ದೇಗುಲ” ಎಂದವರು ಯಾರು?
A) ಸಿದ್ಧರಾಮ
B) ಬಸವಣ್ಣ ✅
C) ಅಕ್ಕಮಹಾದೇವಿ
D) ಅಲ್ಲಮಪ್ರಭು - ಬಸವಣ್ಣನವರ ಅಂಕಿತ ಏನು?
A) ಚೆನ್ನಮಲ್ಲಿಕಾರ್ಜುನ
B) ಕಪಿಲಸಿದ್ಧ ಮಲ್ಲಿಕಾರ್ಜುನ
C) ಕೂಡಲಸಂಗಮದೇವ ✅
D) ಶಿವಶರಣೆ - ಸಿದ್ಧರಾಮರ ಊರು ಯಾವುದು?
A) ಉಡುತಡಿ
B) ಬಸವನಬಾಗೇವಾಡಿ
C) ಸೊನ್ನಲಿಗೆ ✅
D) ಶ್ರೀಶೈಲ - ಅಕ್ಕಮಹಾದೇವಿಯವರ ಜನ್ಮಸ್ಥಳ ಯಾವುದು?
A) ಮೈಸೂರು
B) ಉಡುತಡಿ ✅
C) ಬೆಂಗಳೂರು
D) ಹುಬ್ಬಳ್ಳಿ - “ಕಾಯಕವೇ ಕೈಲಾಸ” ಎಂದವರು ಯಾರು?
A) ಅಕ್ಕಮಹಾದೇವಿ
B) ಬಸವಣ್ಣ ✅
C) ಸಿದ್ಧರಾಮ
D) ಅಲ್ಲಮಪ್ರಭು - ಸಿದ್ಧರಾಮರ ಅಂಕಿತ ಏನು?
A) ಕೂಡಲಸಂಗಮದೇವ
B) ಕಪಿಲಸಿದ್ಧ ಮಲ್ಲಿಕಾರ್ಜುನ ✅
C) ಚೆನ್ನಮಲ್ಲಿಕಾರ್ಜುನ
D) ಶಿವ - ಅಕ್ಕಮಹಾದೇವಿಯವರ ಅಂಕಿತ ಏನು?
A) ಕೂಡಲಸಂಗಮದೇವ
B) ಕಪಿಲಸಿದ್ಧ ಮಲ್ಲಿಕಾರ್ಜುನ
C) ಚೆನ್ನಮಲ್ಲಿಕಾರ್ಜುನ ✅
D) ಶಿವಶರಣೆ - ಅನುಭವ ಮಂಟಪವನ್ನು ಯಾರು ಸ್ಥಾಪಿಸಿದರು?
A) ಸಿದ್ಧರಾಮ
B) ಬಸವಣ್ಣ ✅
C) ಅಕ್ಕಮಹಾದೇವಿ
D) ಅಲ್ಲಮಪ್ರಭು - ಬಸವಣ್ಣ ಯಾವ ಶತಮಾನದಲ್ಲಿ ಬದುಕಿದ್ದರು?
A) 10ನೇ
B) 11ನೇ
C) 12ನೇ ✅
D) 13ನೇ - ಸಿದ್ಧರಾಮರು ಯಾರ ಮಾರ್ಗದರ್ಶನ ಪಡೆದರು?
A) ಬಸವಣ್ಣ
B) ಅಲ್ಲಮಪ್ರಭು ✅
C) ಅಕ್ಕಮಹಾದೇವಿ
D) ಬಿಜ್ಜಳ - ಅಕ್ಕಮಹಾದೇವಿಯನ್ನು “ವೈರಾಗ್ಯನಿಧಿ” ಎಂದು ಯಾರು ಕರೆಯಿದರು?
A) ಬಸವಣ್ಣ
B) ಅಲ್ಲಮಪ್ರಭು ✅
C) ಸಿದ್ಧರಾಮ
D) ಬಿಜ್ಜಳ - ಬಸವಣ್ಣ ಯಾವ ರಾಜನ ಆಸ್ಥಾನದಲ್ಲಿ ಇದ್ದರು?
A) ಕೃಷ್ಣದೇವರಾಯ
B) ಬಿಜ್ಜಳ ✅
C) ಅಶೋಕ
D) ಹರ್ಷ - “ವೇಷ ಧರಿಸಿ ಫಲವೇನಯ್ಯ” ಎಂದವರು ಯಾರು?
A) ಬಸವಣ್ಣ
B) ಸಿದ್ಧರಾಮ ✅
C) ಅಕ್ಕಮಹಾದೇವಿ
D) ಅಲ್ಲಮಪ್ರಭು - ಅಕ್ಕಮಹಾದೇವಿಯವರು ಯಾರನ್ನು ಪತಿಯಾಗಿ ಭಾವಿಸಿದರು?
A) ಶಿವ
B) ಚೆನ್ನಮಲ್ಲಿಕಾರ್ಜುನ ✅
C) ಬಸವಣ್ಣ
D) ಅಲ್ಲಮಪ್ರಭು - “ಸ್ಥಾವರಕ್ಕಳಿವುಂಟು” ಎಂದರೆ ಏನು?
A) ಶಾಶ್ವತ
B) ನಾಶವಾಗುವುದು ✅
C) ಬೆಳೆಯುವುದು
D) ಉಳಿಯುವುದು - ಜಂಗಮ ಎಂದರೆ ಏನು?
A) ಸ್ಥಿರ
B) ಚಲಿಸುವುದು ✅
C) ಸಣ್ಣದು
D) ದೊಡ್ಡದು - ಬಸವಣ್ಣನವರ ವಚನಗಳ ಸಂಖ್ಯೆ ಎಷ್ಟು?
A) 500
B) 1000
C) 1500 ✅
D) 2000 - ಅಕ್ಕಮಹಾದೇವಿಯವರು ಎಲ್ಲಿ ಐಕ್ಯರಾದರು?
A) ಮೈಸೂರು
B) ಶ್ರೀಶೈಲ ✅
C) ಬೆಂಗಳೂರು
D) ಧಾರವಾಡ - ಸಿದ್ಧರಾಮರು ಯಾವ ಮಾರ್ಗದಲ್ಲಿ ನಂಬಿಕೆ ಇಟ್ಟಿದ್ದರು?
A) ಭಕ್ತಿ
B) ಕರ್ಮ ✅
C) ಜ್ಞಾನ
D) ಯೋಗ - ವೇಷದಂತಾಚರಣೆ ಇಲ್ಲದಿದ್ದರೆ ಏನು ಆಗುತ್ತದೆ?
A) ಯಶಸ್ಸು
B) ಫಲವಿಲ್ಲ ✅
C) ಸಂತೋಷ
D) ಜಯ
Click Here to Downlaod Vachana PDF Notes
Click Here to Watch Vachana Video
Vachana question answers, Vachana summary, sslc kannada chapter 2 notes, karnataka board kannada notes 2026