Class 10 Tili Kannada Pome Chapter 4

Guru Question Answers 2026 | SSLC Kannada Notes PDF

Looking for SSLC /Class 10th Tili Kannada textbook answers? You can download Chapter 4: Guru Questions and Answers PDF, Notes, and Summary here. SSLC /Class 10th Tili Kannada Padyabhaga solutions follow the Karnataka State Board Syllabus, making it easier for students to revise and score higher in exams.

Karnataka SSLC/Class 10th Tili Kannada Textbook Answers—Reflections Chapter 4

Guru Questions and Answers, Notes, and Summary

Class 10 Tili Kannada Pome Chapter 4

ಗುರಿ

Guru
Class 10 Tili Kannada Pome Chapter 4 ಗುರಿ Guru
Scroll Down to Donwload Guru PDF

ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

Question 1.
ಮನಸ್ಸು ಅಳಿಯಾಸೆಗಳ ಸುಳಿಗೆಸಿಲುಕಬಾರದು ಏಕೆ?
Answer:
ನಮ್ಮ ಮನಸ್ಸು ನೆಲೆ ಇರದೆ ತೊಳಲುತ್ತ ಇರುತ್ತದೆ. ಅದಕ್ಕೆ ಅಳಿಯಾಸೆಗಳ ಸುಳಿವಿಗೆ ಸಿಲುಕಬಾರದು.

Question 2.
ನಮ್ಮ ದುಡಿಮೆಗೆ ಹೊವು ಫಲಿಸುವದು ಯಾವಾಗ?
Answer:
ಮನುಷ್ಯನ ಜೀವನಕ್ಕೆ ನೆನೆ ಕೊನೆ ಇದ್ದಾಗ ದಿನದ ದುಡಿಮೆಗೆಹುವು ಫಲಿಸುವದು..

Question 3.
ಅಡಿಗರ ಪ್ರಕಾರ ಪೌರುಷದಬಾಳ್ವೆ ಯಾವುದು?
Answer:
ಹಿಡಿದ ಕೆಲಸವನ್ನು ಕೊನೆಯವರೆಗೆ ಮುಟ್ಟಿಸಬೇಕು ಇದು ಅಡಿಗರ ಪ್ರಕಾರ ಪೌರುಷದ ಬಾಳ್ವೆ.

Question 4.
ಅಡಿಗರು ಹಗಲಿರುಳು ಯಾವುದಕ್ಕೆ ಹೋರಾಡಬೇಕೆಂದು ಕವಿ ಹೇಳಿದ್ದಾರೆ?
Answer:
ಜೀವನದಲ್ಲಿ ಒಂದುಗುರಿ ಇರಬೇಕು ಅದಕ್ಕೆ ಹೋರಾಡಬೇಕು ಎಂದು ಕವಿ ಹೇಳಿದ್ದಾರೆ.

ಕೆಳಗಿನ ಪ್ರಶ್ನೆಗಳಿಗೆ ಮೂರುನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

Question 1.
ನಮ್ಮ ಬದುಕು ಕೆಸರಿನ ಕಮಲದಂತಿರಬೇಕು ಏಕೆ?
Answer:
ಕೆಸರಿನಲ್ಲಿ ಇದ್ದು ಕಮಲದ ಹೂ ಆಕಾಶವನ್ನು ನೋಡಿ ಸೂರ್ಯನ ಕಿಣನಗಳನ್ನು ನೋಡಿ ಮರೆಯುತ್ತದೆ. ಹಾಗೆ ನಮ್ಮ ಬದುಕಿನಲ್ಲಿ ನಮಗೆ ಇದ್ದ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಕೆಲಸ ಮಾಡಬೇಕು. ಆಗ ನಮ್ಮ ಜೀವನ ಸಾರ್ಥಕಗೊಳ್ಳುತ್ತದೆ.

Question 2.

ಅಡಿಗರು ಯಾವುದು ಹೇಡಿತನ ಹಾಗು ಹೆಣ್ಣನ ಎಂದು ಕವಿ ಹೇಳಿದ್ದಾರೆ?
Answer:
ಗಾಳಿ ಬಂದ ಕಡೆ ತಿರುಗುವದು ಹೇಡಿತನ. ದಾಳಿ ಬಂದಕೂಡಲೆ ಶರಣಾಗುವದು ಹೆಣ್ಣನ. ಹೇಳಿದಹಾಗೆ ಅಂಜಿ ಕೇಳುವದು ಹೇಡಿತನ ಅಂಜಿಸಿದರೆ ಅಂಜುವದು ಹೆಣ್ಣನ ಎಂದು ಕವಿ ಹೇಳಿದ್ದಾರೆ.

Question 3.
ಜೀವನದಲ್ಲಿ ಒಂದೇ ಹೆಗ್ಗುರಿ ಇರಬೇಕು? ಏಕೆ?
Answer:
ಜೀವನದಲ್ಲಿ ಎದುರಾಗುವ ತೊಂದರೆಗಳನ್ನು ಆತಂಕಗಳನ್ನು ನಿವಾರಿಸಿಕೊಳ್ಳಬೇಕು. ಬದುಕಿನಲ್ಲಿ ಮುಂದೆ ಸಾಗಲು ಒಂದೇ ಹೆಗ್ಗುರಿ ಇರಿಸಿಕೊಳ್ಳ ಬೇಕು. ಅದಕ್ಕಾಗಿ ದುಡಿಯಬೇಕು. ಆಗ ಮಾತ್ರ ಗುರಿಯನ್ನು ತಲುಪಲು ಸಾಧ್ಯ.

Question 4.
ಜೀವನದಲ್ಲಿ ಒಂದೇ ಗುರಿ ಇರಬೇಕು ಎಂಬುದಕ್ಕೆ ಅಡಿಗರು ನೀಡಿರುವ ನಿದರ್ಶನಗಳಾವುವು?
Answer:
ಒಂದು ಬಾಣಕ್ಕೆ ಒಂದೇ ಗುರಿ ಇರುತ್ತದೆಯೇ ಹೊರತು ಹಲವು ಗುರಿಗಳು ಇರುವುದಿಲ್ಲ. ದೇಹದಲ್ಲಿ ಒಚಿದೇ ಆತ್ಮವಿರುತ್ತದೆ ಹೊರತು ಎರಡು ಆತ್ಮಗಳು ಇರುವುದಿಲ್ಲ. ಅಂತೆಯೇ ಒಂದು ಜೀವನಕ್ಕೆ ಹಲವು ಸಾಧ್ಯಗಳು ಏಕೆ? ಬದಲಾಗಿ ಒಂದೇ ಹೆಗ್ಗುರಿಗೆ ಹಗಲಿರುಳು ಹೋರಾಡ ಬೇಕು. ಎಂದು ಕವಿ ನಿದರ್ಶನಗಳು ನೀಡಿದ್ದಾರೆ.

ಕೆಳಗಿನ ಪ್ರಶ್ನೆಗಳಿಗೆ ಎಂಟುಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

Question 1.
ನರನ ಜೀವನದ ಗುರಿ ಯಾವುದಾಗಿರಬೇಕೆಂದು ಅಡಿಗರು ಆಶಿಸಿದ್ದಾರೆ?
Answer:
ಮಾನವನ ಜೀವನವು ಸಾರ್ಥಕಆಗಗಬೇಕಾದರೆ ನಮ್ಮ ದುಡಿಮೆಗೆ ಫಲವು ಸಿಗಬೇಕಾದರೆ ಒಂದು ನಿಯಮವು ಇರಬೇಕು. ಯಾವ ರೀತಿ ಕೆಸರಿನಲ್ಲಿ ಇದ್ದರೂ ಕಮಲದ ಹೂ ಸೂರ್ಯನ ಕಿರಣಕೆ ಅರಳುವಂತೆ ಕೆಟ್ಟಗುಣಗಳನ್ನು ಅಂಟಿಸಿ ಕೊಳ್ಳದೆ ಬಾಳಬೇಕು. ಗಾಳಿ ಬಂದಡೆ ತಿರುಗುವಾ ಹೇಡಿತನ ಬೇಡ ಹೆಣ್ಣನವು ಬೇಡ, ಪೌರುಷದಿಂದ ಸರಿಯಾದ ದಾರಿಯಲ್ಲಿ ಸಾಗಬೇಕು. ಒಂದು ಬಾಣಕೆ ಒಂದೇ ಗುರಿ, ಒಂದು ದೇಹದಲ್ಲಿ ಒಂದೇ ಆತ್ಮವಿರುವಂತೆ ಜೀವನದಲ್ಲಿ ಅವಕಾಶವು ಒಂದೆ ಸಾರಿ ಸಿಗುತ್ತದೆ. ಅದಕ್ಕೆ ಒಂದೇ ಗುರಿಗಾಗಿ ಹೋರಾಡಬೇಕು. ಪರಹಿತಕ್ಕಾಗಿ ಬಾಳಬೇಕು. ನರನಲ್ಲಿ ನಾರಾಯಣನನ್ನು ಕಾಣಬೇಕು. ಸ್ವಾರ್ಥವನ್ನು ಮರೆತು ಪರಹಿತಕ್ಕಾಗಿ ದುಡಿಯಬೇಕು ಎಂದು ಕವಿ ತಿಳಿಸಿದ್ದಾರೆ.

Question 2.
ಅಡಿಗರ ಪ್ರಕಾರ ಜೀವನ ಯಾವಾಗ ಸಾರ್ಥಕವಾಗುತ್ತದೆ?
Answer:
ಮಾನವನ ಜೀವನ ಸಾರ್ಥಕವಾಗಬೇಕಾದರೆ ಪರಹಿತಕ್ಕಾಗಿ ದುಡಿಯಬೇಕು. ಸ್ವಾರ್ಥವನ್ನು ಮರೆತು ಪರಹಿತಕ್ಕಾಗಿ ದುಡಿಯಬೇಕು. ಮಾನವನ ಜೀವನವು ಸಾರ್ಥಕವಾಗಬೇಕಾದರೆ, ನಮ್ಮ ದುಡಿಮೆಗೆ ಫಲವು ಸಿಗಬೇಕಾದರೆ ಒಂದು ನಿಯಮವು ಇರಬೇಕು. ಯಾವ ರೀತಿ ಕೆಸರಿನಲ್ಲಿದ್ದರೂ ಕಮಲದ ಹೂ ಸೂರ್ಯನ ಕಿರಣಗಳಿಗೆ ಅರಳುವಂತೆ ಕೆಟ್ಟ ಗುಣಗಳನ್ನು ಅಂಟಿಸಿ ಕೊಳ್ಳದೆ ಬಾಳಬೇಕು. ಗಾಳಿ ಬಂದಡೆ ತಿರುಗುವಾ ಹೇಡಿತನ ಬೇಡ ಹೆಣ್ಣನವು ಬೇಡ, ಪೌರುಷದಿಂದ ಸರಿದಾರಿಯಲ್ಲಿ ಸಾಗುಬೇಕು. ಒಂದು ಬಾಣಕೆ ಒಂದೇ ಗುರಿ, ಒಂದು ದೇಹದಲ್ಲಿ ಒಂದೇ ಆತ್ಮವಿರುವಂತೆ ಜೀವನದಲ್ಲಿ ಅವಕಾಶವು ಒಂದೆ ಸಾರಿ ಸಿಗುತ್ತದೆ. ಅದಕ್ಕೆ ಒಂದೇ ಗುರಿಗಾಗಿ ಹೋರಾಡಬೇಕು ಎಂದು ಕವಿ ತಿಳಿಸಿದ್ದಾರೆ.

Question 3.
ಗುರಿ ಪದ್ಯದ ಸಾರಾಂಶವನ್ನು ಬರೆಯಿರಿ.
Answer:
ಬದುಕಿಗೊಂದು ಗುರಿ ಇಲ್ಲದಿದ್ದರೆ ಅದು ಎಲ್ಲಿಗೆ ಹೋಗಬೇಕೆಂಬ ನಿಶ್ಚಿತತೆ ಇಲ್ಲದೆ ಅಪಾರವಾದ ಕಡಲಿನಲ್ಲಿ ಚುಕಾಣಿ ಇಲ್ಲದೆ ನೌಕೆಯನ್ನು ನಡೆಸಿದಂತೆ ಆಗುತ್ತದೆ. ಜೀವನವು ಸಾರ್ಥಕವಾಗಬೇಕಾದರೆ, ನಮ್ಮ ದುಡಿಮೆಗೆ ಫಲವು ಸಿಗಬೇಕಾದರೆ ಒಂದು ನಿಯಮವು ಇರಬೇಕು. ಕೆಸರಿನಲ್ಲಿದ್ದರೂ ಕಮಲದ ಹೂ ಸೂರ್ಯನ ಕಿರಣಕೆ ಅರಳುವಂತೆ ಕೆಟ್ಟಗುಣಗಳನ್ನು ಅಂಟಿಸಿ ಕೊಳ್ಳದೆ ಬಾಳಬೇಕು. ಗಾಳಿ ಬಂದಡೆ ತಿರುಗುವವದು ಹೇಡಿತನ ಬೇಡ ಹೆಣ್ಣನವು ಬೇಡ, ಪೌರುಷದಿಂದ ಸರಿದಾರಿಯಲ್ಲಿ ಸಾಗುಬೇಕು. ಒಂದು ಬಾಣಕೆ ಒಂದೇ ಗುರಿ, ಒಂದು ದೇಹದಲ್ಲಿ ಒಂದೇ ಆತ್ಮವಿರುವಂತೆ ಜೀವನದಲ್ಲಿ ಅವಕಾಶವು ಒಂದೆ ಸಾರಿ ಸಿಗುತ್ತದೆ. ಅದಕ್ಕೆ ಒಂದೇ ಗುರಿಗಾಗಿ ಹೋರಾಡಬೇಕು. ಪರಹಿತಕ್ಕಾಗಿ ಬಾಳಬೇಕು. ನರನಲ್ಲಿ ನಾರಾಯಣನನ್ನು ಕಾಣಬೇಕು. ಸಾ ರ್ಥವನ್ನು ಮರೆತು ಪರಹಿತಕ್ಕಾಗಿ ದುಡಿಯಬೇಕು ಎಂದು ಕವಿ ತಿಳಿಸಿದ್ದಾರೆ.

ಸಂದರ್ಭದೊಡನೆ ವಿವರಿಸಿರಿ.

Question 1.
ದಾಳಿ ಬಂದೊಡನೆ ಶರಣೆಂಬ ಹೆಣ್ಣನವು.

Answer:
ಸಂದರ್ಭ:
ಈ ವಾಕ್ಯವನ್ನು ಎಂ. ಗೋಪಾಲಕೃಷ್ಣ ಅಡಿಗರು ಬರೆದಿರುವ ಸಮಗ್ರ ಕಾವ್ಯ ಕವನಸಂಕಲನ ದಿಂದ ಆಯ್ದ ಗುರಿ ಎಂಬ ಪದ್ಯದಿಂದ ಆರಿಸಲಾಗಿದೆ.

ಸ್ವಾರಸ್ಯ:
ಈ ಮಾತನ್ನು ಕವಿಯು ಹೇಳಿದ್ದಾರೆ. ಮನುಷ್ಯನು ಜೀವನದಲ್ಲಿ ಒಂದೇ ಗುರಿ ಹೊಂದಿರಬೇಕು ಗಾಳಿ ಬಂದ ಕಡೆ ತಿರುಗುವಂತ ಹೇಡಿತನವು ಬೇಡವೆಂದು ಹೇಳುವಾಗ ಈ ಮೇಲಿನ ಮಾತು ಬಂದಿದೆ. ದಾಳಿ ಬಂದೊಡನೆ ಶರಣೆಂಬ ಹೆಣ್ಣನವು ಬೇಡ ಎಂದು ತಿಳಿಸಿದ್ದಾರೆ. ಹೇಡಿತನ ವಿದ್ದರೆ ಏನನ್ನು ಸಾಧಿಸಲು ಸಾಧ್ಯ ಆಗುವುದಿಲ್ಲ ಎಂದು ತಿಳಿಸುವಾಗ ಈ ಮಾತು ಬಂದಿದೆ.

Question 2
ಒಂದು ಜೀವನಕೇಕೆ ಹಲವು ಸಾಧ್ಯಗಳು.

Answer:
ಸಂದರ್ಭ:
ಈ ವಾಕ್ಯವನ್ನು ಎಂ.ಗೋಪಾಲಕೃಷ್ಣ ಅಡಿಗರು ಬರೆದಿರುವ ಸಮಗ್ರ ಕಾವ್ಯ ಕವನಸಂಕಲನದಿಂದ ಆಯ್ದ ಗುರಿ ಎಂಬ ಪದ್ಯದಿಂದ ಆರಿಸಲಾಗಿದೆ.

ಸ್ವಾರಸ್ಯ:
ಈ ಮಾತನ್ನು ಕವಿಯು ಹೇಳಿದ್ದಾರೆ. ಒಂದು ಬಾಣಕ್ಕೆ ಒಂದೇ ಗುರಿ ಇರುವಂತೆ ಒಂದು ದೇಹದೊಳಗೆ ಒಂದೇ ಆತ್ಮವು ಇರುವ ಹಾಗೆ ಈ ಜೀವನದಲ್ಲಿ ಅವಕಾಶವು ಒಂದೇ ಬಾರಿ ಸಿಗುತ್ತದೆ. ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಎಂದು ತಿಳಿಸುತ್ತಾ, ಈ ಮಾತನ್ನು ಹೇಳಿದ್ದಾರೆ. ಒಂದೇ ಹೆಗ್ಗುರಿಯ ಸಾಧನೆಗಾಗಿ ಹಗಲಿರುಳು ಹೋರಾಡಬೇಕೆಂದು ಕವಿಗಳು ತಿಳಿಸಿದ್ದಾರೆ.

Question 3.
ಪರಹಿತಕೆ ಬಳಲುತಿರಲದುವೆ ಜೀವನವು.

Answer:
ಸಂದರ್ಭ:
ಈ ವಾಕ್ಯವನ್ನು ಎಂ. ಗೋಪಾಲಕೃಷ್ಣ ಅಡಿಗರು ಬರೆದಿರುವ ಸಮಗ್ರ ಕಾವ್ಯ ಕವನ ಸಂಕಲನದಿಂದ ಆಯ್ದ ಗುರಿ ಎಂಬ ಪದ್ಯದಿಂದ ಆರಿಸಲಾಗಿದೆ.

ಸ್ವಾರಸ್ಯ:
ಈ ಮಾತನ್ನು ಕವಿಯು ಹೇಳಿದ್ದಾರೆ. ಮನುಷ್ಯನು ಜೀವನದಲ್ಲಿ ಖಚಿತವಾದ ಗುರಿಯನ್ನು ಹೊಂದಿರಬೇಕು. ಅದನ್ನು ಸಾಧಿಸುವಾಗ ಅಡ್ಡಿ ಆತಂಕಗಳು ಎದುರಾದರೆ ಹೆದರದೆ ಅದನ್ನು ನಿವಾರಿಸಿಕೊಳ್ಳಬೇಕು. ಅಡ್ಡ ದಾರಿ ಹಿಡಿಯದೆ ಸರಿಯಾದ ಒಳ್ಳೆಯ ಮಾರ್ಗದಲ್ಲಿ ನಡೆಯಬೇಕು ಮಾನವನಲ್ಲಿ ಭಗವಂತನ ರೋಪ ಕಂಡು ಸುರಪುರದ ವಾತಾವಣ ನಿರ್ಮಾಣ ಮಾಡಬೇಕು ಎಂದು ಹೇಳುವಾಗ ಮೇಲಿನ ಮಾತು ಬಂದಿದೆ.

ಬಿಟ್ಟ ಸ್ಥಳಗಳನ್ನು ನೀಡಿರುವ ನಾಲ್ಕು ಆಯ್ಕೆಗಳಲ್ಲಿ ಸೂಕ್ತವಾದುದನ್ನು ಆರಿಸಿ ಪೂರ್ಣಗೊಳಿಸಿರಿ.

1. ಮಾನವನ ದುಡಿಯೇ ಫಲ ದೊರೆಯುವುದಾಗಿ ನಿಶ್ಚಯ ______ ಇರುವುದು.
Answer:
ಕ) ಗುರು

2. ಜೀವನದ ಗುರಿ ಬಂದಂತೆ ತಿರುಗುವುದು ______
Answer:
ಕ) ನೀಚತೆ

3. ಅಡಿಗರ ‘ಕವನ’ ಸಮಗ್ರ ಪ್ರಶಸ್ತಿಯನ್ನು ______ ರಾಜ್ಯ ನೀಡಿದೆ.
Answer:
ಗ) ಮಧ್ಯಪ್ರದೇಶ

4. ‘ಹೆಗ್ಗುರಿ’ ಇದು ______ ಸಮಾಸವಾಗಿದೆ.
Answer:
ಕ) ದ್ವಂದ್ವ

ಭಾಷಾಭ್ಯಾಸದ
) ಪದಗಳನ್ನು ಬಿಡಿಸಿ, ಸಂಧಿ ಹೆಸರು ತಿಳಿಸಿ.
  1. ಅಳಿಯಾಸೆ → ಅಳಿ + ಆಸೆ
    ಸಂಧಿ: ಸ್ವರ ಸಂಧಿ
  2. ದೇಹದೊಳಾತ್ಮ → ದೇಹದೊಳ್ + ಆತ್ಮ
    ಸಂಧಿ: ವ್ಯಂಜನ ಸಂಧಿ
  3. ಜೀವನಕೇಕೆ → ಜೀವನಕ್ಕೆ + ಏಕೆ
    ಸಂಧಿ: ಸ್ವರ ಸಂಧಿ
  4. ಹಿಡಿದೊಳ್ಳಾರಿ → ಹಿಡಿದು + ಒಳಾರಿ
    ಸಂಧಿ: ಲೋಪ ಸಂಧಿ
  5. ಹಗಲಿರುಳು → ಹಗಲು + ಇರುಳು
    ಸಂಧಿ: ಸ್ವರ ಸಂಧಿ
  6. ಶರಣೆಂಬೆ → ಶರಣೆ + ಎಂಬೆ
    ಸಂಧಿ: ಸ್ವರ ಸಂಧಿ
) ಸ್ವಂತ ವಾಕ್ಯಗಳಲ್ಲಿ ಬಳಕೆ.
  1. ಧೈರ್ಯ → ಕಷ್ಟ ಬಂದಾಗ ಧೈರ್ಯದಿಂದ ಎದುರಿಸಬೇಕು.
  2. ಪರಹಿತ → ಪರಹಿತಕ್ಕಾಗಿ ದುಡಿಯುವುದು ಮಹತ್ವದ ಗುಣ.
  3. ಗೈಮೆ → ಅವನ ಗೈಮೆ ಎಲ್ಲರಿಗೂ ಮಾದರಿಯಾಗಿದೆ.
  4. ಮೈಸಿರಿ → ಪ್ರಕೃತಿಯ ಮೈಸಿರಿ ಮನಸ್ಸಿಗೆ ಆನಂದ ಕೊಡುತ್ತದೆ.
) ವಿರುದ್ಧಾರ್ಥಕ ಪದಗಳು.
  1. ಆಸೆ ↔ ನಿರಾಸೆ
  2. ಪರಹಿತ ↔ ಸ್ವಾರ್ಥ
  3. ಇರುಳು ↔ ಬೆಳಕು
  4. ಹೇಡಿ ↔ ಧೈರ್ಯಶಾಲಿ

ಸಾರಾಂಶ – “ಗುರಿ” (ಎಂ. ಗೋಪಾಲಕೃಷ್ಣ ಅಡಿಗ)
Summary

Class 10 Tili Kannada Pome Chapter 4 ಗುರಿ Guru

ಈ ಪಾಠದಲ್ಲಿ ಕವಿ ಜೀವನದಲ್ಲಿ ಗುರಿಯ ಮಹತ್ವವನ್ನು ಸ್ಪಷ್ಟವಾಗಿ ತಿಳಿಸುತ್ತಾರೆ. ಗುರಿಯಿಲ್ಲದ ಜೀವನವು ಚುಕ್ಕಾಣಿ ಇಲ್ಲದ ನೌಕೆಯಂತೆ ಅಲೆಮಾರಿ ಆಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಬದುಕಿಗೆ ಒಂದು ಸ್ಪಷ್ಟ ಗುರಿಯನ್ನು ಹೊಂದಬೇಕು ಮತ್ತು ಅದನ್ನು ಸಾಧಿಸಲು ನಿರಂತರವಾಗಿ ಪ್ರಯತ್ನಿಸಬೇಕು.

ಕವಿ ಹೇಳುವಂತೆ, ಜೀವನದಲ್ಲಿ ಹಲವಾರು ಗುರಿಗಳನ್ನು ಇಟ್ಟುಕೊಳ್ಳುವುದರಿಂದ ಯಶಸ್ಸು ಸಿಗುವುದಿಲ್ಲ. ಒಂದು ಬಾಣಕ್ಕೆ ಒಂದೇ ಗುರಿಯಿರುವಂತೆ, ನಮ್ಮ ಜೀವನಕ್ಕೂ ಒಂದೇ ಪ್ರಮುಖ ಗುರಿ ಇರಬೇಕು. ಆ ಗುರಿಯನ್ನು ಸಾಧಿಸಲು ಹಗಲಿರುಳು ಶ್ರಮಿಸಬೇಕು ಮತ್ತು ಎದುರಾಗುವ ಕಷ್ಟಗಳನ್ನು ಧೈರ್ಯದಿಂದ ಎದುರಿಸಬೇಕು.

ಈ ಕವನವು ಧೈರ್ಯ, ಆತ್ಮವಿಶ್ವಾಸ ಮತ್ತು ಪರಿಶ್ರಮ ಇವುಗಳ ಅಗತ್ಯತೆಯನ್ನು ಒತ್ತಿ ಹೇಳುತ್ತದೆ. ಹೇಡಿತನವನ್ನು ತೊರೆದು ಪೌರುಷದಿಂದ ಬದುಕಬೇಕು ಎಂದು ಕವಿ ಸಲಹೆ ನೀಡುತ್ತಾರೆ. ಗಾಳಿ ಬಂದೆಡೆ ತಿರುಗುವ ಸ್ವಭಾವವನ್ನು ಬಿಟ್ಟು, ನಮ್ಮ ನಿಶ್ಚಯದಲ್ಲಿ ಸ್ಥಿರರಾಗಬೇಕು.

ಇದರ ಜೊತೆಗೆ, ಕವಿ ಪರಹಿತ ಮತ್ತು ಸಮಾಜ ಸೇವೆಯ ಮಹತ್ವವನ್ನೂ ವಿವರಿಸುತ್ತಾರೆ. ನಾವು ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೇ ಮರಳಿ ಕೊಡಬೇಕು. ಪರರ ಹಿತಕ್ಕಾಗಿ ದುಡಿಯುವುದು ಜೀವನದ ಸಾರ್ಥಕತೆಯಾಗಿದೆ.

ಒಟ್ಟಿನಲ್ಲಿ, ಈ ಪಾಠವು ನಿಶ್ಚಿತ ಗುರಿ, ಪರಿಶ್ರಮ, ಧೈರ್ಯ ಮತ್ತು ಸಮಾಜಸೇವೆಯ ಮೂಲಕ ಜೀವನವನ್ನು ಯಶಸ್ವಿಯಾಗಿಸಬಹುದು ಎಂಬ ಸಂದೇಶವನ್ನು ನೀಡುತ್ತದೆ.

Additional Question and Answer

ಒಂದು ವಾಕ್ಯದಲ್ಲಿ ಉತ್ತರಿಸುವ ಪ್ರಶ್ನೆಗಳು.

Question 1.
ಗುರಿಯಿಲ್ಲದ ಜೀವನವನ್ನು ಕವಿ ಯಾವುದಕ್ಕೆ ಹೋಲಿಸಿದ್ದಾರೆ?
Answer:
ಚುಕ್ಕಾಣಿ ಇಲ್ಲದ ನೌಕೆಗೆ ಹೋಲಿಸಿದ್ದಾರೆ.

Question 2.
ಜೀವನದಲ್ಲಿ ಎಷ್ಟು ಗುರಿ ಇರಬೇಕು ಎಂದು ಕವಿ ಹೇಳುತ್ತಾರೆ?
Answer:
ಒಂದೇ ಗುರಿ ಇರಬೇಕು ಎಂದು ಹೇಳಿದ್ದಾರೆ.

Question 3.
ಗುರಿ ಸಾಧನೆಗೆ ಅಗತ್ಯವಾದ ಗುಣಗಳು ಯಾವುವು?
Answer:
ಧೈರ್ಯ, ಆತ್ಮವಿಶ್ವಾಸ ಮತ್ತು ಪರಿಶ್ರಮ.

Question 4.
ಹೇಡಿತನ ಎಂದರೆ ಏನು?
Answer:
ಗಾಳಿ ಬಂದೆಡೆ ತಿರುಗುವ ಸ್ವಭಾವವೇ ಹೇಡಿತನ.

Question 5.
ಪರಹಿತ ಎಂದರೆ ಏನು?
Answer:
ಇತರರ ಹಿತಕ್ಕಾಗಿ ಮಾಡುವ ಕಾರ್ಯ.

ಎರಡು ವಾಕ್ಯಗಳಲ್ಲಿ ಉತ್ತರಿಸುವ ಪ್ರಶ್ನೆಗಳು.

Question 1.
ಗುರಿ ಸಾಧನೆಗೆ ಎದುರಾಗುವ ಅಡೆತಡೆಗಳನ್ನು ಹೇಗೆ ಎದುರಿಸಬೇಕು?
Answer:
ಗುರಿ ಸಾಧನೆಗೆ ಹಲವಾರು ಕಷ್ಟಗಳು ಎದುರಾಗುತ್ತವೆ. ಅವನ್ನು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಎದುರಿಸಿ ಮುಂದೆ ಸಾಗಬೇಕು.

Question 2.
ಒಂದು ಬಾಣಕ್ಕೆ ಒಂದು ಗುರಿ ಎನ್ನುವುದರ ಅರ್ಥವೇನು?
Answer:
ಒಂದೇ ಸಮಯದಲ್ಲಿ ಹಲವು ಗುರಿಗಳನ್ನು ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ ಒಂದು ಗುರಿಯ ಮೇಲೆ ಮಾತ್ರ ಗಮನ ಕೇಂದ್ರೀಕರಿಸಬೇಕು.

Question 3.
ಜೀವನದಲ್ಲಿ ಪರಹಿತದ ಮಹತ್ವವೇನು?
Answer:
ಪರಹಿತಕ್ಕಾಗಿ ದುಡಿಯುವುದರಿಂದ ಜೀವನ ಸಾರ್ಥಕವಾಗುತ್ತದೆ. ಇದು ಸಮಾಜದ ಏಳಿಗೆಗೆ ಸಹಕಾರಿಯಾಗುತ್ತದೆ.

Multiple Choice Questions (MCQs)

  1. ‘ಗುರಿ’ ಪಾಠದ ಕವಿ ಯಾರು?
    a) ಕುವೆಂಪು
    b) ಬೇಂದ್ರೆ
    c) ಎಂ. ಗೋಪಾಲಕೃಷ್ಣ ಅಡಿಗ ✅
    d) ಶಿವರಾಮ ಕಾರಂತ

  2. ಗುರಿಯಿಲ್ಲದ ಜೀವನವನ್ನು ಯಾವುದಕ್ಕೆ ಹೋಲಿಸಿದ್ದಾರೆ?
    a) ಮರ
    b) ಚುಕ್ಕಾಣಿ ಇಲ್ಲದ ನೌಕೆ ✅
    c) ಹಕ್ಕಿ
    d) ಗಾಳಿ

  3. ಜೀವನದಲ್ಲಿ ಎಷ್ಟು ಗುರಿ ಇರಬೇಕು?
    a) ಎರಡು
    b) ಮೂರು
    c) ಹಲವಾರು
    d) ಒಂದು ✅

  4. ಗುರಿ ಸಾಧನೆಗೆ ಯಾವುದು ಮುಖ್ಯ?
    a) ಆಟ
    b) ಪರಿಶ್ರಮ ✅
    c) ನಿದ್ರೆ
    d) ಮೋಜು

  5. ಗಾಳಿ ಬಂದೆಡೆ ತಿರುಗುವುದು ಯಾವ ಗುಣ?
    a) ಧೈರ್ಯ
    b) ಶಕ್ತಿ
    c) ಹೇಡಿತನ ✅
    d) ಬುದ್ಧಿ

  6. ‘ಪರಹಿತ’ ಎಂದರೇನು?
    a) ಸ್ವಾರ್ಥ
    b) ಇತರರ ಹಿತ ✅
    c) ಕೋಪ
    d) ದ್ವೇಷ

  7. ಗುರಿ ಸಾಧನೆಗೆ ಬೇಕಾದ ಗುಣ ಯಾವುದು?
    a) ಆಲಸ್ಯ
    b) ಧೈರ್ಯ ✅
    c) ಭಯ
    d) ಅಸಡ್ಡೆ

  8. ಕಷ್ಟಗಳನ್ನು ಹೇಗೆ ಎದುರಿಸಬೇಕು?
    a) ಓಡಿ ಹೋಗಬೇಕು
    b) ಭಯಪಡುವುದು
    c) ಧೈರ್ಯದಿಂದ ಎದುರಿಸಬೇಕು ✅
    d) ಬಿಡಬೇಕು

  9. ‘ಒಂದು ಬಾಣಕ್ಕೆ’ ಎಂದರೆ ಏನು ಸೂಚಿಸುತ್ತದೆ?
    a) ಹಲವು ಗುರಿ
    b) ಒಂದು ಗುರಿ ✅
    c) ಆಟ
    d) ಬೇಡಿಕೆ

  10. ‘ಹಗಲಿರುಳು’ ಎಂದರೇನು?
    a) ಬೆಳಗ್ಗೆ
    b) ರಾತ್ರಿ
    c) ಸದಾ ✅
    d) ಮಧ್ಯಾಹ್ನ

  11. ಸಮಾಜದಿಂದ ನಾವು ಏನು ಮಾಡಬೇಕು?
    a) ದೂರ ಇರಬೇಕು
    b) ಸಹಾಯ ಮಾಡಬೇಕು ✅
    c) ವಿರೋಧಿಸಬೇಕು
    d) ನಿರ್ಲಕ್ಷ್ಯ ಮಾಡಬೇಕು

  12. ಕವಿ ಯಾವ ಗುಣವನ್ನು ತೊರೆಯಲು ಹೇಳುತ್ತಾರೆ?
    a) ಧೈರ್ಯ
    b) ಹೇಡಿತನ ✅
    c) ಶಕ್ತಿ
    d) ಬುದ್ಧಿ

  13. ‘ಆತ್ಮವಿಶ್ವಾಸ’ ಎಂದರೇನು?
    a) ಭಯ
    b) ನಂಬಿಕೆ ✅
    c) ಕೋಪ
    d) ದುಃಖ

  14. ಯಶಸ್ಸಿಗೆ ಯಾವುದು ಮುಖ್ಯ?
    a) ಆಲಸ್ಯ
    b) ಪರಿಶ್ರಮ ✅
    c) ನಿದ್ರೆ
    d) ಆಟ

  15. ಜೀವನದ ಸಾರ್ಥಕತೆ ಯಾವಾಗ ಸಿಗುತ್ತದೆ?
    a) ಆಟದಿಂದ
    b) ಪರಹಿತದಿಂದ ✅
    c) ನಿದ್ರೆಯಿಂದ
    d) ಭಯದಿಂದ

  16. ‘ಹೇಡಿ’ ಎಂದರೆ ಯಾರು?
    a) ಧೈರ್ಯಶಾಲಿ
    b) ಭಯಪಡುವವನು ✅
    c) ಬುದ್ಧಿವಂತ
    d) ಶಕ್ತಿವಂತ

  17. ‘ಪೌರುಷ’ ಎಂದರೆ ಏನು?
    a) ಧೈರ್ಯ ✅
    b) ಭಯ
    c) ಕೋಪ
    d) ದುಃಖ

  18. ‘ನರನೊಳಗೆ ನಾರಾಯಣ’ ಎಂದರೇನು?
    a) ದೇವರು ಹೊರಗೆ
    b) ದೇವರು ಒಳಗೆ ✅
    c) ದೇವರು ಇಲ್ಲ
    d) ದೇವರು ದೂರ

  19. ಗುರಿ ಸಾಧನೆಗೆ ಏನು ಬೇಕು?
    a) ಭಯ
    b) ಶ್ರಮ ✅
    c) ಕೋಪ
    d) ಅಸಡ್ಡೆ

  20. ‘ಮೈಸಿರಿ’ ಎಂದರೇನು?
    a) ಸೌಂದರ್ಯ ✅
    b) ಕೋಪ
    c) ದುಃಖ
    d) ಭಯ
Click Here to Download Guru PDF Notes
Click Here to Watch Guru Video

Guru question answers, Guru summary, sslc kannada chapter 2 notes, karnataka board kannada notes 2026

 

📘 2nd PUC 📗 1st PUC 📙 SSLC

You cannot copy content of this page