Class 10 Tili Kannada Pome Chapter 3

Saddu Madadiru Question Answers 2026 | SSLC Kannada Notes PDF

Looking for SSLC /Class 10th Tili Kannada textbook answers? You can download Chapter 3: Saddu Madadiru Questions and Answers PDF, Notes, and Summary here. SSLC /Class 10th Tili Kannada Padyabhaga solutions follow the Karnataka State Board Syllabus, making it easier for students to revise and score higher in exams.

Karnataka SSLC/Class 10th Tili Kannada Textbook Answers—Reflections Chapter 3

Saddu Madadiru Questions and Answers, Notes, and Summary

Class 10 Tili Kannada Pome Chapter 3

ಸದ್ದು ಮಾಡದಿರು !

Saddu Madadiru
Class 10 Tili Kannada Pome Chapter 3 Saddu Madadiru ಸದ್ದು ಮಾಡದಿರು !
Scroll Down to Download Saddu Madadiru PDF

ಪ್ರಶ್ನೆಗಳಿಗೆ ಒಂದೆರಡು ವಾಕ್ಯಗಳಲ್ಲಿ ಉತ್ತರಿಸಿ.

Question 1.
ತಿಮಿರಕ್ಕೆ ವೈರಿ ಯಾವುದು?
Answer:
ತಿಮಿರಕ್ಕೆ ವೈರಿ ದೀಪ.

Question 2.
ಕವಿ ಮಾನವನ ಬದುಕನ್ನು ಇಬ್ಬನಿಗೆ ಏಕೆ ಹೋಲಿಸಿದ್ದಾನೆ?
Answer:
ಇಬ್ಬನಿ ರವಿಕಿರಣಕ್ಕೆ ಕರಗಿ ಮಾಯವಾಗುತ್ತದೆ ಹಾಗೆ ಮಾನವನು ಶಾಂತಿಯಿಂದ ಬದುಕಬೇಕು ಎಂದು ಕವಿ ಇಬ್ಬನಿಎ ಹೋಲಿಸಿದ್ದಾರೆ.

Question 3.
ನಮ್ಮ ಕರ್ತವ್ಯವನ್ನು ಹೇಗೆ ಮುಗಿಸಬೇಕೆಂದು ಕವಿ ಹೇಳಿದ್ದಾರೆ?
Answer:
ನಮ್ಮ ಕರ್ತವ್ಯವನ್ನು ಶಾಂತಿಯಿಂದ ಮುಗಿಸಬೇಕೆಂದು ಕವಿ ಹೇಳಿದ್ದಾರೆ

ಪ್ರಶ್ನೆಗಳಿಗೆ 3-4 ವಾಕ್ಯಗಳಲ್ಲಿ ಉತ್ತರಿಸಿ.

Question 1.
ಸದ್ದು ಮಾಡದೆ ಬಾಳಬೇಕು ಎಂಬುವದಕ್ಕೆ ಕವಿ ನೀಡುವ ಹೋಲಿಕೆಗಳಾವುವು?
Answer:
ಪ್ರಕೃತಿಯು ಯಾವುದೇ ಕೆಲಸ ಸದ್ದು ಗದ್ದಲವಿಲ್ಲದೆ ತನ್ನ ಕಾರ್ಯವನ್ನು ಮಾಡುತ್ತದೆ. ಮನುಷ್ಯರಾದ ನಾವು ಶಾಂತಿಯಿದ ಬದುಕಿ ನಮ್ಮ ಕರ್ತವ್ಯವನ್ನು ಮುಗಿಸಬೇಕು. ಕರ್ಪೂರ ಉರಿದು ಬೆಳಕನ್ನು ನೀಡುವಚಿತೆ. ದೀಪದ ಎದುರಿಗೆ ಕತ್ತಲೆ ಮಾಯವಾಗುವ ಹಾಗೆ ನಾವು ನಮ್ಮ ಪಾಲಿನ ಕೆಲಸ ಮಾಡಬೇಕು.

Question 2.
ಕೊಗಾಟದ ಬದುಕು ನಿಷ್ಟ್ರಯೋಜಕ ಎಂಬುವದಕ್ಕೆ ಕವಿ ನೀಡುವ ನಿದರ್ಶನಗಳಾವುವು?
Answer:
ಕರ್ಪೂರ ಮತ್ತು ದೀಪದ ಹಾಗೆ ಮೌನವಾಗಿ ಶಾಂತಿ ಸಹನೆ ಪ್ರೀತಿಗಳಿಂದ ನಮ್ಮ ಕರ್ತವ್ಯ ಮಾಡಿ ಮುಗಿಸಬೇಕು. ಕೂಗಾಡಿ ಹಾರಾಡಿದರೆ ಯಾವ ಪಲ ಸಿಗುವುದಿಲ್ಲ ಆದ್ದರಿಂದ ಸಿಡುಕನ್ನು ಬಿಟ್ಟು ಪ್ರತಿಯೊಬ್ಬನೂ ತನ್ನದಾದ ಕರ್ತವ್ಯವನ್ನು ಮಾಡಬೇಕು ಎಂದು ಕವಿ ಹೇಳುತ್ತಾರೆ.

Question 3.
ಕರ್ಪುರದ ಕೆಲಸವೇನು? ಅದು ತನ್ನ ಕೆಲಸವನ್ನು ಹೇಗೆ ಪುರೈಸುತ್ತದೆ?
Answer:
ಕರ್ಪುರದ ಕೆಲಸ ಉರಿಯುವದು. ಅದು ಶಾಂತರೀತಿಯಿಂದ ಉರಿದು ಕರಗಿ ತನ್ನ ಪಾಡಿನ ಕೆಲಸವನ್ನು ಪುರೈಸುತ್ತದೆ. ಸದ್ದು ಗದ್ದಲ ಮಾಡುವದಿಲ್ಲ ಎಂದು ಕವಿ ಹೇಳಿದ್ದಾರೆ.

Question 4.
ಮಾನವನ ಬದುಕು ಕರ್ಪುರದಂತೆ ಇರಬೇಕು ಏಕೆ?
Answer:
ಮಾನವನ ಬದುಕು ಶಾಂತರೀತಿಯಿಂದ ಸದ್ದು ಗದ್ದಲವಿಲ್ಲದೆ ಮುಗಿಸಬೇಕು. ಅದರಲ್ಲಿ ತನ್ನ ಕರ್ತವ್ಯವನ್ನು ಮುಗಿಯಬೇಕು. ಕೂಗಾಡಿದರೆ, ಹಾರಾಡಿದರೆ ಏನು ಸಿಗುವದಿಲ್ಲ. ಕಾರಣ ಮಾನವನ ಬದುಕು ಕರ್ಪುರದಂತೆ ಇರಬೇಕೆಂದು ಕವಿ ಹೇಳಿದ್ದಾರೆ.

ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

Question 1.
ಸದ್ದು ಮಾಡದಿರು ಕವಿತೆ ನೀಡುವ ಸಂದೇಶವೇನು?

Answer:
ಜೀವನದಲ್ಲಿ ಆಡಂಬರ ಕೀರ್ತಿ ಇವುಗಳಿಗೆ ಜನ ಮನಸೋಲುವುದು ಸಾಮಾನ್ಯ. ಇವುಗಳನ್ನು ಪಡೆಯುವುದು ಜೀವನದ ಸಾರ್ಥಕ್ಯಂದು ಬಹಳ ಜನ ತಿಳಿದಿದ್ದಾರೆ. ಆದರೆ ನಮ್ಮ ಬಾಳಿಗೆ ಆದಾರವಾಗಿರುವದು ಪ್ರಕೃತಿ. ಇದು ಯಾವುದೇ ಸದ್ದು ಗದ್ದಲವಿಲ್ಲದೆ ತನ್ನ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುತ್ತದೆ ನಾವು ಕೂಡ ನಮ್ಮ ಜೀವನದ ಕಲಸವನ್ನು ಸದ್ದು ಮಾಡದೆ ಮಾಡಬೇಕು. ಕರ್ಪೂರ, ದೀಪದಂತೆ ಬೆಳಗಬೇಕು. ಹಸಿಸೌದೆ ಸಿಡಿಮದ್ದು ಗದ್ದಲ ಮಾಡುವಂತೆ ಮಾಡದೆ ಇಬ್ಬನಿಯಂತೆ ಮೌನಿಯಾಗಿ ಕೋಪವನ್ನು ಬಿಟ್ಟು ಬಾಳಬೇಕು. ಶಾಂತಿಯಿಂದ ಜೀವನವನ್ನು ನಡೆಸಬೇಕು ಎಂಬುದೇ ಈ ಪದ್ಯದ ಸಾರವಾಗಿದೆ.

Question 2.
ಸದ್ದು ಮಾಡದೇ ಬಾಳಬೇಕು ಎಂಬುದನ್ನು ಕವಿ ಯಾವ ಯಾವ ನಿರ್ದೆಶನಗಳ ಮೂಲಕ ತಿಳಿಹೇಳಿದ್ದಾರೆ?

Answer:
ಮನುಷ್ಯನು ಬದುಕಿನಲ್ಲಿ ತನ್ನ ಕರ್ತವ್ಯವನ್ನು ಮೌನವಾಗಿ ನಡೆಸಬೇಕು. ಯಾವ ರೀತಿ ತಟ್ಟೆಯಲ್ಲಿನ ಕರ್ಪೂರವು ಮೌನವಾಗಿ ಉರಿದು ಕರಗುತ್ತದೆ ಹಾಗೆ ದೀಪದ ಎದುರಿಗೆ ಕತ್ತಲೆಯು ಸರಿಯುವ ಹಾಗೆ ಬಾಳಬೇಕು. ಕೂಗಾಡಿ ಹಾರಾಡಿ ಫಲವೇನು. ಹಸಿಸೌದೆಯು ಬುಸುಗುಡುತ್ತದೆ. ಸಿಡಿ ಮದ್ದು ಬರೆ ಸದ್ದು ಮಾಡುತ್ತದೆ. ಹಾಗೆ ಬಾಳದೆ ಸೂರ್ಯನ ಕಿರಣಕೆ ಇಬ್ಬನಿಯು ಮೌನವಾಗಿ ಕರಗುವಂತೆ ಕೋಪ ತಾಪಗಳನ್ನು ತೊರೆದು ಮೌನಿಯಾಗಿ ಕರ್ತವ್ಯವನ್ನು ಮುಗಿಸು ಎಂದು ಸಿ.ಪಿ.ಕೆ ಯವರು ಸದ್ದು ಮಾಡದಿರು ಪದ್ಯದಲ್ಲಿ ತಮ್ಮ ಧೋರಣೆಯನ್ನು ತಿಳಿಸಿದ್ದಾರೆ.

Question 3.
ಬದುಕಿನಲ್ಲಿ ಶಾಂತಿ ಮತ್ತು ಸದ್ದು ಇವುಗಳಲ್ಲಿ ಯಾವುದು ಹೆಚ್ಚು ಸುಖ ನೀಡುತ್ತದೆ? ಏಕೆ?

Answer:
ಬದುಕಿನಲ್ಲಿ ಶಾಂತಿ ಹಿಚ್ಚಾಗಿ ಸುಖ ನೀಡುತ್ತದೆ. ಹೇಗೆ ಎಂದರೆ ಶಾಂತಿಯಿಂದ ಮಾಡಿದ ಕೆಲಸ ಸರಿಯಾಗಿ ಆಗುತ್ತದೆ. ಮತ್ತು ಸುಖ ನೀಡುತ್ತದೆ. ಅದೆ ಸದ್ದಿನಿಂದ ಬಾಳಿದರೆ ನಮಗೆ ಶಾಂತಿ ಸಿಗುವದಿಲ್ಲಾ. ಕೂಗಾಡಿ ಹಾರಾಡಿ ಫಲವೇನು. ಹಸಿಸೌದೆಯು ಬುಸುಗುಡುತ್ತದೆ ಆದರೆ ಸ್ವಲ್ಪ ಮದ್ದು ಸಿಡಿದು ಅಬ್ಬರಿಸುತ್ತದೆ. ಹಾಗೆ ಬಾಳದೆ ಸೂರ್ಯನ ಕಿರಣಕೆ ಇಬ್ಬನಿಯು ಮೌನವಾಗಿ ಕರಗುವಂತೆ ಕೋಪ ತಾಪಗಳನ್ನು ತೊರೆದು ಮೌನಿಯಾಗಿ ಕರ್ತವ್ಯವನ್ನು ಮುಗಿಸು ಎಂದು ಸಿ.ಪಿ.ಕೆ ಯವರು ಬಹಳ ಮಾರ್ಮಿಕವಾಗಿ ಕರೆದಿದ್ದಾರೆ.

ಸಂದರ್ಭದೊಡನೆ ವಿವರಿಸಿರಿ.

Question 1.
ಶಾಂತಿಯಲಿ ಬದುಕಿನಿ ಕರ್ತವ್ಯವನು ಮುಗಿಸು.

Answer:
ಸಂದರ್ಭ:
ಈ ವಾಕ್ಯವನ್ನು ಸಿ.ಪಿ.ಕೃಷ್ಣಕುಮಾರ್ ಅವರು ಬರೆದಿರುವ ಬೊಗಸೆ ಕವನ ಸಂಕಲನದಿಂದ ಆಯ್ದ ಸದ್ದು ಮಾಡದಿರು ಎಂಬ ಪದ್ಯದಿಂದ ಆರಿಸಲಾಗಿದೆ.
ಸ್ವಾರಸ್ಯ:
ಈ ಮಾತನ್ನು ಕವಿಯು ಹೇಳಿದ್ದಾರೆ. ನಾವು ಪ್ರಕೃತಿಯನ್ನು ಆದರ್ಶವಾಗಿಟ್ಟು ಕೊಂಡು ಬಾಳಬೇಕು. ಹಾಗೆ ಮೌನವಾಗಿ ನಮ್ಮ ಕಾರ್ಯವನ್ನು ಮಾಡಿ ಮುಗಿಸಬೇಕು. ದೀಪದ ಎದುರಿಗೆ ಕತ್ತಲೆ ಹರಿಯುವಂತೆ, ತಟ್ಟೆಯಲ್ಲಿ ಕರ್ಪೂರವು ಉರಿಯುವಂತೆ ಶಾಂತಿಯಲ್ಲಿ ಬದುಕಬೇಕು ಎಂದು ಹೇಳುವಾಗ ಈ ಮೇಲಿನ ಮಾತು ಬಂದಿದೆ.

Question 2.
ಸಿಡುಕು ಮಿಡುಕನ್ನು ತೊರೆದು ಮೌನಿಯಾಗು

Answer:
ಸಂದರ್ಭ:
ಈ ವಾಕ್ಯವನ್ನು ಸಿ.ಪಿ.ಕೃಷ್ಣಕುಮಾರ್ ಅವರು ಬರೆದಿರುವ ಬೊಗಸೆ ಕವನ ಸಂಕಲನದಿಂದ ಆಯ್ದ ಸದ್ದು ಮಾಡದಿರು ಎಂಬ ಪದ್ಯದಿಂದ ಆರಿಸಲಾಗಿದೆ.
ಸ್ವಾರಸ್ಯ:
ಈ ಮಾತನ್ನು ಕವಿಯು ಹೇಳಿದ್ದಾರೆ. ಮನುಷ್ಯನ ಜೀವನದಲ್ಲಿ ಹಸಿ ಸೌದೆಯಂತೆ ಬುಸುಗುಡದೆ ಬರೇ ಸದ್ದು ಮಾಡುವಂತೆ ಬದುಕದೆ ರವಿಕಿರಣಕ್ಕೆ ಮೌನವಾಗಿ ಇಬ್ಬನಿಯು ಕರಗುವಂತೆ ಮೌನವಾಗಿ ಬಾಳುವುದನ್ನು ಕಲಿಯಬೇಕೆಂದು ಕವಿಗಳು ಹೇಳಿದ್ದಾರೆ.

ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.

  1. ‘ಸದ್ದು ಮಾಡದಿರು’ ಕವಿತೆಯ ಆಕರ ಕೃತಿ ಬೊಗಸೆ
  2. ಸಿಪಿಕೆ ಅವರ ಪೂರ್ಣ ಹೆಸರು ಡಾ. ಚಿಕ್ಕನಾಯಕನಹಳ್ಳಿ ಪುಟ್ಟೇಗೌಡ ಕೃಷ್ಣಕುಮಾರ್
  3. ತಿಮಿರ ಪದದ ಅರ್ಥ ಕತ್ತಲೆ

ಸದ್ದು ಮಾಡದಿರು’ – ಸಾರಾಂಶ
Summary

Class 10 Tili Kannada Pome Chapter 3 Saddu Madadiru ಸದ್ದು ಮಾಡದಿರು !

ಸಿ.ಪಿ. ಕೃಷ್ಣಕುಮಾರ್ ಅವರ ‘ಸದ್ದು ಮಾಡದಿರು’ ಕವಿತೆ ಮನುಷ್ಯನ ಅಹಂಕಾರವನ್ನು ತೊರೆದು ಮೌನವಾಗಿ ಕರ್ತವ್ಯ ನಿರ್ವಹಿಸುವುದನ್ನು ಬೋಧಿಸುತ್ತದೆ. ಜನರು ಸಾಮಾನ್ಯವಾಗಿ ತಮ್ಮ ಸಾಧನೆಗಳನ್ನು ಜೋರಾಗಿ ಹೇಳಿಕೊಳ್ಳುತ್ತಾರೆ ಮತ್ತು ಪ್ರಶಂಸೆ ಪಡೆಯಲು ಪ್ರಯತ್ನಿಸುತ್ತಾರೆ. ಆದರೆ ಪ್ರಕೃತಿ ತನ್ನ ಎಲ್ಲಾ ಅದ್ಭುತ ಕಾರ್ಯಗಳನ್ನು ಯಾವುದೇ ಗದ್ದಲವಿಲ್ಲದೆ ಶಾಂತವಾಗಿ ನಡೆಸುತ್ತದೆ.

ಕವಿಯು ಕರ್ಪೂರದ ಉದಾಹರಣೆಯ ಮೂಲಕ ಮೌನದ ಮಹತ್ವವನ್ನು ವಿವರಿಸುತ್ತಾರೆ. ಕರ್ಪೂರವು ಶಬ್ದ ಮಾಡದೆ ಕರಗುತ್ತದೆ, ಆದರೆ ಅದು ಬೆಳಕನ್ನು ನೀಡುತ್ತದೆ. ಅದೇ ರೀತಿ ಮನುಷ್ಯನು ಕೂಡ ಶಾಂತಿ, ಸಹನೆ ಮತ್ತು ಪ್ರೀತಿಯಿಂದ ತನ್ನ ಕರ್ತವ್ಯವನ್ನು ನಿರ್ವಹಿಸಬೇಕು. ಗದ್ದಲ, ಅಹಂಕಾರ, ಅಬ್ಬರ ಇವುಗಳಿಂದ ಯಾವುದೇ ಫಲವಿಲ್ಲ.

ಈ ಕವಿತೆ ನಮಗೆ ಮೌನ, ವಿನಯ, ಮತ್ತು ಶಾಂತಿಯ ಮೂಲಕ ಜೀವನವನ್ನು ಉತ್ತಮವಾಗಿ ನಡೆಸುವ ಸಂದೇಶವನ್ನು ನೀಡುತ್ತದೆ.

ಭಾಷಾಭ್ಯಾಸ

) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.
  1. ಬಿರುದಿರದೆ → ಬಿರುದು + ಇರದೆ
  2. ದೀಪದೆದುರಿಗೆ → ದೀಪದ + ಎದುರಿಗೆ
  3. ದನಿಯನೆತ್ತುವುದಲ್ಲೆ → ದನಿಯನ್ನು + ಎತ್ತುವುದು + ಅಲ್ಲೆ
  4. ಸಿಡಿದಬ್ಬರಿಸುವುದು → ಸಿಡಿದು + ಅಬ್ಬರಿಸುವುದು
  5. ಅಂತಿರದೆ → ಅಂತು + ಇರದೆ
  6. ಮೌನಿಯಾಗು → ಮೌನ + ಆಗು
  7. ಕರಗುವಿಬ್ಬನಿವೊಲಿರು → ಕರಗುವ + ಇಿಬ್ಬನಿ + ಒಲಿರು
) ಕೆಳಗಿನ ಪದಗಳಿಗೆ ನಾನಾರ್ಥಕ ಬರೆಯಿರಿ.
  1. ತೊರೆ → ನದಿ, ಕಾಲುವೆ, ಬಿಟ್ಟುಹೋಗು
  2. ಮದ್ದು → ಔಷಧಿ, ಸಿಡಿಮದ್ದು
) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಬರೆಯಿರಿ.
  1. ಶಾಂತಿ → ಅಶಾಂತಿ
  2. ಸದ್ದು → ಮೌನ
  3. ಹಸಿ → ಒಣ / ಬೇಯಿಸಿದ
  4. ಜೀವ → ಮರಣ

Additional Question and Answer

ಒಂದು ವಾಕ್ಯದಲ್ಲಿ ಉತ್ತರಿಸಿರಿ.

Question 1.
ಕವಿಯ ಪ್ರಕಾರ ಮನುಷ್ಯನು ಏನು ತೊರೆಯಬೇಕು?
Answer:
ಮನುಷ್ಯನು ಅಹಂಕಾರವನ್ನು ತೊರೆಯಬೇಕು.

Question 2.
ಪ್ರಕೃತಿ ತನ್ನ ಕಾರ್ಯಗಳನ್ನು ಹೇಗೆ ನಡೆಸುತ್ತದೆ?
Answer:
ಪ್ರಕೃತಿ ತನ್ನ ಕಾರ್ಯಗಳನ್ನು ಮೌನವಾಗಿ ನಡೆಸುತ್ತದೆ.

Question 3.
ಕರ್ಪೂರದ ಉದಾಹರಣೆ ಏನನ್ನು ಸೂಚಿಸುತ್ತದೆ?
Answer:
ಮೌನವಾಗಿ ಸೇವೆ ಮಾಡುವ ಗುಣವನ್ನು ಸೂಚಿಸುತ್ತದೆ.

Question 4.
ಗದ್ದಲದಿಂದ ಏನು ಫಲ ಸಿಗುತ್ತದೆ?
Answer:
ಗದ್ದಲದಿಂದ ಯಾವುದೇ ಫಲ ಸಿಗುವುದಿಲ್ಲ.

ಎರಡುಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

Question 1.
‘ಸದ್ದು ಮಾಡದಿರು’ ಎಂಬ ಶೀರ್ಷಿಕೆಯ ಅರ್ಥವೇನು?
Answer:
ಈ ಶೀರ್ಷಿಕೆ ಮನುಷ್ಯನು ತನ್ನ ಕೆಲಸವನ್ನು ಜೋರಾಗಿ ಹೇಳಿಕೊಳ್ಳದೆ ಮೌನವಾಗಿ ಮಾಡಬೇಕು ಎಂಬುದನ್ನು ಸೂಚಿಸುತ್ತದೆ. ಅಹಂಕಾರವಿಲ್ಲದೆ ಬದುಕುವ ಸಂದೇಶವನ್ನು ನೀಡುತ್ತದೆ.

Question 2.
ಕವಿಯು ಪ್ರಕೃತಿಯ ಉದಾಹರಣೆಗಳನ್ನು ಏಕೆ ನೀಡಿದ್ದಾನೆ?
Answer:
ಪ್ರಕೃತಿ ಶಾಂತವಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿರುವುದನ್ನು ತೋರಿಸಲು ಕವಿ ಉದಾಹರಣೆಗಳನ್ನು ನೀಡಿದ್ದಾನೆ. ಇದರಿಂದ ಮನುಷ್ಯನು ಕೂಡ ಅದನ್ನು ಅನುಸರಿಸಬೇಕು ಎಂದು ಸೂಚಿಸುತ್ತಾನೆ.

Question 3.
‘ಕೂಗಾಡಿ, ಹಾರಾಡಿ ಫಲವದೇನು?’ ಎಂಬ ಸಾಲಿನ ಅರ್ಥವನ್ನು ವಿವರಿಸಿ.
Answer:
ಈ ಸಾಲು ಗದ್ದಲ ಮತ್ತು ಅಬ್ಬರದಿಂದ ಯಾವುದೇ ಉಪಯೋಗವಿಲ್ಲ ಎಂಬುದನ್ನು ಸೂಚಿಸುತ್ತದೆ. ಮೌನವಾಗಿ ಕೆಲಸ ಮಾಡಿದಾಗ ಮಾತ್ರ ನಿಜವಾದ ಫಲ ಸಿಗುತ್ತದೆ.

Multiple Choice Questions (MCQs)

  1. ಸದ್ದು ಮಾಡದಿರುಕವಿತೆಯ ಕವಿ ಯಾರು?
    a) ಕುವೆಂಪು
    b) ಸಿ.ಪಿ. ಕೃಷ್ಣಕುಮಾರ್
    c) ದ.ರಾ. ಬೇಂದ್ರೆ
    d) ಗೋಪಾಲಕೃಷ್ಣ ಅಡಿಗ
    Answer: b) ಸಿ.ಪಿ. ಕೃಷ್ಣಕುಮಾರ್

  2. ಕವಿತೆಯ ಆಕರ ಕೃತಿ ಯಾವುದು?
    a) ತಾರಾ ಸುಖ
    b) ಬೊಗಸೆ
    c) ಆನಂತಪೃಥ್ವಿ
    d) ಕಾವ್ಯಾರಾಧನಾ
    Answer: b) ಬೊಗಸೆ

  3. ಕವಿತೆಯ ಮುಖ್ಯ ಸಂದೇಶವೇನು?
    a) ಗದ್ದಲ ಮಾಡುವುದು
    b) ಅಹಂಕಾರ ಹೆಚ್ಚಿಸುವುದು
    c) ಮೌನವಾಗಿ ಕರ್ತವ್ಯ ಮಾಡುವುದು
    d) ಪ್ರಸಿದ್ಧಿ ಪಡೆಯುವುದು
    Answer: c) ಮೌನವಾಗಿ ಕರ್ತವ್ಯ ಮಾಡುವುದು

  4. ಪ್ರಕೃತಿ ತನ್ನ ಕಾರ್ಯಗಳನ್ನು ಹೇಗೆ ನಡೆಸುತ್ತದೆ?
    a) ಗದ್ದಲದಿಂದ
    b) ಮೌನವಾಗಿ
    c) ಬೇಗನೆ
    d) ನಿಧಾನವಾಗಿ
    Answer: b) ಮೌನವಾಗಿ

  5. ಕರ್ಪೂರದ ಉದಾಹರಣೆ ಏನನ್ನು ಸೂಚಿಸುತ್ತದೆ?
    a) ಅಬ್ಬರ
    b) ಶಕ್ತಿ
    c) ಮೌನ ಸೇವೆ
    d) ಭಯ
    Answer: c) ಮೌನ ಸೇವೆ

  6. ತಿಮಿರಪದದ ಅರ್ಥ ಏನು?
    a) ಬೆಳಕು
    b) ಕತ್ತಲೆ
    c) ನೆರಳು
    d) ಮಿಂಚು
    Answer: b) ಕತ್ತಲೆ

  7. ಕೂಗಾಡಿ, ಹಾರಾಡಿ ಫಲವದೇನು?’ ಎಂಬ ಸಾಲಿನ ಅರ್ಥವೇನು?
    a) ಗದ್ದಲದಿಂದ ಫಲ ಸಿಗುತ್ತದೆ
    b) ಮೌನದಿಂದ ಫಲ ಸಿಗುವುದಿಲ್ಲ
    c) ಗದ್ದಲದಿಂದ ಫಲವಿಲ್ಲ
    d) ಕೆಲಸ ಮಾಡಬಾರದು
    Answer: c) ಗದ್ದಲದಿಂದ ಫಲವಿಲ್ಲ

  8. ಮನುಷ್ಯನು ಏನನ್ನು ತೊರೆಯಬೇಕು ಎಂದು ಕವಿ ಹೇಳುತ್ತಾನೆ?
    a) ಕೆಲಸ
    b) ಅಹಂಕಾರ
    c) ಸ್ನೇಹ
    d) ಸಂಪತ್ತು
    Answer: b) ಅಹಂಕಾರ

  9. ಹಸಿ ಸೌದೆ ಹೇಗೆ ದನಿ ಎತ್ತುತ್ತದೆ?
    a) ಶಾಂತವಾಗಿ
    b) ನಿಧಾನವಾಗಿ
    c) ಬುಸುಗುಟ್ಟಿ
    d) ಮೌನವಾಗಿ
    Answer: c) ಬುಸುಗುಟ್ಟಿ

  10. ಕವಿತೆಯಲ್ಲಿ ಮನುಷ್ಯನಿಗೆ ನೀಡಿದ ಸಲಹೆ ಯಾವುದು?
    a) ಹೆಚ್ಚು ಮಾತನಾಡು
    b) ಗದ್ದಲ ಮಾಡು
    c) ಮೌನವಾಗಿರು
    d) ಓಡಾಡು
    Answer: c) ಮೌನವಾಗಿರು

  11. ಕರ್ಪೂರವು ಹೇಗೆ ಕರಗುತ್ತದೆ?
    a) ಶಬ್ದದಿಂದ
    b) ಮೌನವಾಗಿ
    c) ನಿಧಾನವಾಗಿ
    d) ವೇಗವಾಗಿ
    Answer: b) ಮೌನವಾಗಿ

  12. ಸದ್ದುಪದದ ವಿರುದ್ಧಾರ್ಥಕ ಪದ ಯಾವುದು?
    a) ಶಬ್ದ
    b) ಗದ್ದಲ
    c) ಮೌನ
    d) ಕೂಗು
    Answer: c) ಮೌನ

  13. ಪ್ರಕೃತಿಯ ಉದಾಹರಣೆಗಳನ್ನು ಕವಿ ಏಕೆ ಕೊಟ್ಟಿದ್ದಾನೆ?
    a) ಕಥೆ ಹೇಳಲು
    b) ಮನುಷ್ಯನಿಗೆ ಪಾಠ ಕಲಿಸಲು
    c) ಮನರಂಜನೆಗೆ
    d) ಸಮಯ ಕಳೆಯಲು
    Answer: b) ಮನುಷ್ಯನಿಗೆ ಪಾಠ ಕಲಿಸಲು

  14. ಕವಿತೆಯ ಶೀರ್ಷಿಕೆಯ ಅರ್ಥವೇನು?
    a) ಶಬ್ದ ಮಾಡು
    b) ಗದ್ದಲ ಮಾಡು
    c) ಶಾಂತವಾಗಿರು
    d) ಕೂಗಾಡು
    Answer: c) ಶಾಂತವಾಗಿರು

  15. ಗದ್ದಲ, ಅಬ್ಬರ ಇವುಗಳಿಂದ ಏನು ಸಿಗುತ್ತದೆ?
    a) ಯಶಸ್ಸು
    b) ಸಂತೋಷ
    c) ಯಾವುದೇ ಫಲವಿಲ್ಲ
    d) ಪ್ರಶಸ್ತಿ
    Answer: c) ಯಾವುದೇ ಫಲವಿಲ್ಲ
Click Here to Download Saddu Madadiru PDF Notes
Click Here to Watch Saddu Madadiru Video
📘 2nd PUC 📗 1st PUC 📙 SSLC

You cannot copy content of this page