Nanna Gopala Question Answers 2026 | SSLC Kannada Notes PDF
Looking for SSLC /Class 10th Tili Kannada textbook answers? You can download Chapter 7: Nanna Gopala Questions and Answers PDF, Notes, and Summary here. SSLC /Class 10th Tili Kannada Gadyabhaga solutions follow the Karnataka State Board Syllabus, making it easier for students to revise and score higher in exams.
Karnataka SSLC/Class 10th Tili Kannada Textbook Answers—Reflections Chapter 7
Nanna Gopala Questions and Answers, Notes, and Summary
Class 10 Tili Kannada Chapter 7
ನನ್ನ ಗೋಪಾಲ
Nanna Gopala
Scroll Down to Download Nanna Gopala
ಈ ಪ್ರಶ್ನೆಗಳಿಗೆ ಒಂದೆರಡು ವಾಕ್ಯಗಳಲ್ಲಿ ಉತ್ತರಿಸಿ.
Question 1.
ಗೋಪಾಲನ ಬೆಳಗಿನ ಮುಖ್ಯ ಕೆಲಸ ಯಾವುದಾಗಿತ್ತು?
Answer:
ಬೆಳಗಿನ ಮುಖ್ಯ ಕೆಲಸವಾಗಿತ್ತು. ಉತ್ತರ:ಬೆಳಗ್ಗೆ ಎದ್ದು ಸ್ನಾನ ಮಾಡಿ ಕಾಡಿನಿಂದ ಪೂಜೆಗೆ ಹೂಗಳನ್ನು ಕೊಯ್ದು ತರುವುದು ಗೋಪಾಲನ
Question 2.
ಗೊಪಾಲನಿಗೆ ಬಣ್ಣಬಣ್ಣದ ಹೂಗಳು ಹೇಗೆ ಕಾಣಿ ಸುತ್ತಿತ್ತು?
Answer:
ಸಾವಿರಾರು ಮಳೆಬಿಲ್ಲು ಸೇರಿ ಕುಣಿದಂತೆ ಬಣ್ಣಬಣ್ಣದ ಹೂಗಳು ಗೊಪಲನಿಗೆ ಕಾಣಿಸುತ್ತಿದ್ದವು.
Question 3.
ಗೋಪಾಲನ ಗೆಳೆಯರ ಹೆಸರೇನು?
Answer:
ಗೋಪಾಲನ ಗೆಳೆಯರ ಹೆಸರು ರಾಮು, ಕಿಟ್ಟಿ, ನಾಣಿ, ಮಾಧು.
Question 4.
ಗೋಪಾಲನು ಶಾಲೆಯಿಂದ ಮನೆಗೆ ಮರಳುವಾಗ ಏಕೆ ಭಯ ಪಡುತ್ತಿದ್ದನು?
Answer:
ಗೋಪಾಲನು ಶಾಲೆಯಿಂದ ಮನೆಗೆ ಬರುವಾಗ ಕಾಡುದಾಟಿ ಪಡುತ್ತಿದ್ದನು. ಬರಬೇಕಾದ್ದರಿಂದ ಅವನು ಭಯ
Question 5.
ಗೋಪಾಲನು ಹೊಸ ಪಂಚೆ ಬಯಸಿದ್ದೇಕೆ?
Answer:
ಗೋಪಾಲನ ಗೆಳೆಯರು ಬೆಲೆಬಾಳುವ ಬಟ್ಟೆ ಹಾಕಿಕೊಂಡು ಹಾಸ್ಯ ಮಾಡುತ್ತಿದ್ದರು. ಅದಕ್ಕಾಗಿ ಹೊಸ ಪಂಚೆಯನ್ನು ಗೋಪಾಲನು ಬಯಸಿದನು.
Question 6.
ಬನದ ಗೋಪಾಲ ಯಾರು? ಕಾಡಿನಲ್ಲಿ ಅವನ ಕೆಲಸವೇನು?
Answer:
ಶ್ರೀಕೃಷ್ಣ ಬನದ ಗೋಪಾಲ. ಕಾಡಿನಲ್ಲಿ ದನಗಳನ್ನು ಕಾಯುವದು ಅವನ ಕೆಲಸ.
ಈ ಪ್ರಶ್ನೆಗಳಿಗೆ 3-4 ವಾಕ್ಯಗಳಲ್ಲಿ ಉತ್ತರಿಸಿ.
Question 1.
ಮಲಗಿದ್ದ ಗೋಪಾಲನ್ನು ತಾಯಿ ಯಾವ ಮಾತುಗಳಿಂದ ಏಳಿಸಿದಳು?
Answer:
ಗೊಪಾಲ ಬೆಳಗಾಯ್ತು ಮೇಲೇಳು. ಸೂರ್ಯ ತನ್ನ ಕಿರಣಗಳಿಂದ ಬಾವಿಯ ಬಳಿ ಇದ್ದ ತೆಂಗಿನ ಮರದ ತುದಿಯಲ್ಲಿ ಬಂದಿದ್ದಾನೆ. ಹಕ್ಕಿಗಳು ಹಾರಾಡಿ ನಿನ್ನನ್ನು ಕರೆಯುತ್ತಿವೆ. ಬನದಲ್ಲಿ ಹೊಗಳು ಅರಳಿ ನಿನಗಾಗಿ ಕಾಯುತ್ತಿವೆ. ಶಾಲೆಗೆ ತಡವಾಗುತ್ತಿದೆ. ಏಳು ಕಂದಾ ಎಂದು ತಾಯಿ ಗೋಪಾಲನ್ನು ಏಳಿಸುತ್ತಾಳೆ.
Question 2.
ಗೋಪಾಲನು ಹೂ ಬನದ ಸೊಗಸನ್ನು ಯಾವ ರೀತಿ ವರ್ಣಿಸಿದನು?
Answer:
ಎಷ್ಟು ಸುಂದವಾಗಿದೆ ಬನ. ಮಲ್ಲಿಗೆ, ಕೇದಗೆ, ಸಂಪಿಗೆ, ಪರ್ವತಬಾಳೆ ಗೋರಂಟಿಯ ಹೂಗಳು ಅರಳಿ ಪರಿಮಳವನ್ನು ಬೀರುತ್ತವೆ. ಅಲ್ಲಿ ಸಾವಿರಾರು ಕಾಮನಬಿಲ್ಲುಗಳು ಸೇರಿ ಕುಣಿದಂತೆ ಕಾಣುತ್ತವೆ. ಹಕ್ಕಿಗಳ ಇಂಪಾದ ಗಾನ, ಸೂರ್ಯನ ಹೊಂಬೆಳಕು, ಹಸುರಾದ ಬನ. ಈ ರೀತಿ ವರ್ಣಿಸಿದ್ದಾನೆ.
Question 3.
ಗೋಪಾಲನ ತಾಯಿ ಬಡತನದಿಂದ ಹೇಗೆ ಜೀವನ ನಡೆಸುತ್ತಿದ್ದಳು?
Answer:
ಗೋಪಾಲನ ತಾಯಿ ನೋಲು ಮಾರಿ ಅದರಿಂದ ಬರುವ ಮೂರು ಕಾಸಿನಲ್ಲಿ ತಮ್ಮ ಸಂಸಾರ ನಡೆಸುತ್ತಿದ್ದಳು. ಮಗುವಿಗೆ ಕಾಡು ದಾಟಿ ಬರಲು ಹೆದರಿಕೆ ಆಗುತ್ತದೆ. ಒಬ್ಬ ಆಳು ಬೇಕು ಎಂದು ಕೇಳುತ್ತಾನೆ. ಮತ್ತು ಮಗು ಹೊಸ ಪಂಚೆ ಬೇಕೆಂದು ಕೇಳುತ್ತಾನೆ. ಇವು ಎಲ್ಲವುಗಳನ್ನು ಪುರೈಸಲು ಆಗುತ್ತರಲಿಲ್ಲ. ಈ ರೀತಿ ಗೋಪಾಲನ ತಾಯಿ ಬಡತನದಲ್ಲಿ ಜೀವನ ನಡೆಸುತ್ತಿದ್ದಳು.
Question 4.
ಬನದ ಗೋಪಾಲನ ವೇಶಭೂಷಣಗಳು ಹೇಗಿದ್ದವು?
Answer:
ಬನದ ಗೋಪಾಲನ ತಲೆಯ ಮೇಲೆ ಒಂದು ಸಣ್ಣಕಿರಿಟ. ನವಿಲುಗರಿ. ಕೈಯಲ್ಲಿ ಒಂದು ಕೊಳಲು. ಇವು ಬನದ ಗೋಪಾಲನ ವೇಶಾಭೂಷಣಗಳು.
ಸುಮಾರು ಹತ್ತು ವಾಕ್ಯದಲ್ಲಿ ಉತ್ತರಿಸಿ.
Question 1.
ಗೋಪಾಲ ಮತ್ತು ಬನದ ಗೋಪಾಲನ ನಡುವೆ ನಡೆದ ಸಂಭಾಶಣೆ ಏನು?
Answer:
ಗೋಪಾಲನ ತಾಯಿ ಹೇಳಿದ ಪ್ರಕಾರ ಗೊಪಾಲ ಮನೆಗೆ ಬರುವಾಗ ಹೆದರಿಕೆ ಆಗುತ್ತದೆ. ಆಗ ಬನದ ಗೋಪಾಲನಿಗೆ ಕರೆಯುತ್ತಾನೆ. ಬನದ ಗೋಪಾಲ ಏನೋ, ಗೋಪಾಲ? ಎಂದು ಕೇಳುತ್ತಾನೆ. ಆಗ ಮಗು ಗೋಪಾಲ ಹೇಳುತ್ತಾನೆ. ಎಲ್ಲಿದ್ದೀಯಾ? ಹೆದರಿಕೆ ಆಗುತ್ತಿದೆ ನನಗೆ. ಅಮ್ಮ ಹೇಳಿದ್ದಳು, ಹೆದರಿಕೆಯಾದರೆ ನಿನ್ನನ್ನು ಕರೆ ಅಂತ. ಆಗ ಬನದ ಗೋಪಾಲ ಹೇಳತ್ತಾನೆ. ದರಬೇಡ ನಾನಿಲ್ಲಿಯೇ ಇದ್ದೇನೆ. ಧೈರ್ಯವಾಗಿ ಹೋಗು ಮನೆಗೆ. ಎಂದಾಗ ಮಗು ಎಲ್ಲಿದ್ದೀಯೆ, ಬಾ ಅಣ್ಣಾ ಎಂದಾಗ ಬನದ ಗೋಪಾಲ ಹೇಳುತ್ತನೆ. ಇಲ್ಲೇ ಇದ್ದೇನೆ ಕಣೋ ಈಗ ತುಂಬಾ ಕೆಲಸವಿದೆ. ಬರುವದಕ್ಕೆ ಆಗುವದಿಲ್ಲ.
ನೀನು ಮನೆಗೆ ಹೋಗು. ಎಂದಾಗ ಮಗು ನೀನು ಮನೆಗೆ ಅಮ್ಮನನ್ನು ನೋಡಲು ಬರುವದಿಲ್ಲವೆ? ಕತ್ತಲಲ್ಲಿ ಕಾಡಿನ ನಡುವೆ ಏಕಿರುವೆ ಎಂದು ಕೇಳುತ್ತಾನೆ. ಆಗ ಬನದ ಗೋಪಾಲ ನಾನು ಹಿಂದಿನಿಂದ ಬರುತ್ತೇನೆ ಅಮ್ಮನನ್ನು ಹೇಳು. ಅಮ್ಮ ನಿನಗಾಗಿ ಕಾದಿದ್ದಾಳೆ ಬೇಗ ಹೋಗು. ಹೋಹಪ್ಪ ಎಂದು ಹೇಳುತ್ತಾನೆ. ಇದು ಗೋಪಾಲ ಹಾಗು ಬನದ ಗೋಪಾಲನ ಮಧ್ಯದ ಸಂಭಾಷಣೆ.
Question 2.
ಗೋಪಾಲನು ತನ್ನ ತಾಯಿಯೊಂದಿಗೆ ನಡಿಸಿದ ಸಂಭಾಷಣೆಯ ಸಾರವೇನು?
Answer:
ಗೋಪಾಲನ ತಾಯಿಯು ಮುಂಜಾನೆ ಗೋಪಾಲನನ್ನು ಎಬ್ಬಿಸುತ್ತಾಳೆ. ಗೋಪಾಲ ಬೆಳಗಾಯ್ತು ಏಳು. ಎಂದಾಗ ಗೋಪಾಲ ಅಲ್ಲಿ ಇರುವದಿಲ್ಲ. ಅವನು ಬನಕ್ಕೆ ಹೋಗಿ ಹೊ ಕೊಯ್ದು ತರಲು ಹೋಗಿದ್ದನು. ಅಲ್ಲಿಂದ ಬಂದಾಗ ತಾಯಿ ಶಾಲೆಗೆ ಹೋಗಲು ಹೇಳುತ್ತಾಳೆ. ಅವಳು ಬಹಳ ಬಡವಳಾಗಿದ್ದಳು. ಜೀವನ ನಿರ್ವಹಣೆ ಮಾಡಿ ಕೊಂಡು ಒಚಿದು ಸಣ್ಣ ಗುಡಿಸಲಲ್ಲಿ ವಾಸವಾಗಿದ್ದಳು. ಮಗನನ್ನು ಬಹಳವಾಗಿ ಪ್ರೀತಿಸುತ್ತಿದ್ದಳು ಅವಳು ಚರಕದಿಂದ ನೂಲು ತೆಗೆದು ಮಗನ ಓದಿಗೆ ಸಂಸಾರದ ಖರ್ಚನ್ನು ಬಹಳ ಕಷ್ಟದಿಂದಲೇ ನಿಭಾಯಿಸುತ್ತಿದ್ದಳು.
ಮಗನು ಹೊಸ ಪಂಚೆ ಕೇಳಿದಾಗ ಹಗಲಿರುಳೂ ನೂತು ಸಂಪಾದಿಸಿ ಅದನ್ನು ಕೊಡಿಸಿದಳು. ಸಂಜೆಯ ವೇಳೆ ಶಾಲೆಯಿಂದ ಬರುವಾಗ ಕಾಡು ದಾಟುವ ಸಮಯ ಭಯವೆಂದಾಗ ಶ್ರೀಕೃಷ್ಣನನ್ನು ಪ್ರಾರ್ಥಿಸಿದಳು. ದೇವರು ನಿನ್ನ ರಕ್ಷಣೆಯನ್ನು ಮಾಡುವನೆಂದು ಹೇಳಿ ಅವನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ ಕಳುಹಿಸಿದಳು. ನಿನ್ನ ಅಣ್ಣ ಗೋಪಾಲನು ನಿನ್ನನ್ನು ಕಾಡು ದಾಟಿಸುವನು ಎಂದು ಹೇಳಿ ಶಾಲೆಗೆ ಕಳುಹಿಸಿ, ಅವನಲ್ಲಿ ಧೈರ್ಯ ತುಂಬುತ್ತಿದ್ದಳು.
Question 3.
ನನ್ನ ಗೋಪಾಲ ಪಾಠದಲ್ಲಿ ಪ್ರಕೃತಿಯನ್ನು ಹೇಗೆ ವರ್ಣಿಸಲಾಗಿದೆ.
Answer:
ಬೆಳಗಿನಲ್ಲಿ ಸೂರ್ಯನು ಚಿನ್ನದ ಕಿರಣಗಳಿಂದ ಬಾವಿಯ ಬಳಿಯ ತೆಂಗಿನ ಮರದಲ್ಲಿ ಮಿರುಗುತ್ತಿದ್ದಾನೆ .ಕಾಡಿನಲ್ಲಿ ಮಲ್ಲಿಗೆಯ ಹೂವು, ಕೇದಗೆಯ ಹೂವು, ಸಂಪಿಗೆಯ ಹೂವು, ಪರ್ವತ ಬಾಳೆಯ ಹೂವು, ಗೋರಂಟಿಯ ಹೂವುಗಳು ಅರಳಿ ಸಾವಿರಾರು ಮಳೆಬಿಲ್ಲುಗಳು ಸೇರಿ ಕುಣಿದಂತೆ ಕಾಣುತ್ತಿದ್ದವು. ಅದರ ಸುಗಂಧ ಸುತ್ತಲೂ ಹರಡಿ ಹೊಸ ಸಂತೋಷವನ್ನು ಕೊಡುತ್ತಿತ್ತು. ಹಕ್ಕಿಗಳ ಇಂಪಾದ ಗಾನ, ತಂಗಾಳಿ, ಸೂರ್ಯದೇವನ ಹೊಂಬೆಳಕು ಹಸುರಾದ ಚಿಗುರು ಹುಲ್ಲಿನ ಮೇಲೆ ಕೋಟ್ಯಂತರ ಹಿಮಮಣಿಗಳು ಮಿರುಗುವ ಲೀಲೆ ಬಹಳ ಸೊಗಸಾಗಿತ್ತು. ಹೀಗೆ ಪ್ರಕೃತಿಯು ನಯನ ಮನೋಹರವಾಗಿ ಕಾಣುತ್ತಿತ್ತು.
Question 4.
ಬನದ ಗೋಪಾಲನ ಹಾಡಿನ ಸಾರವನ್ನು ಬರೆಯಿರಿ.
Answer:
ಗೋಪಾಲನು ತಪಸ್ಸನ್ನು ಮಾಡಿದ ಮನುಷ್ಯರ ಒಲುಮೆಗೆ ಸೆರೆಯಾಗುವನು ಎನ್ನುತ್ತಾನೆ. ತಪಸ್ವಿಗಳು ಯುಗಯುಗಗಳು ತಪಸ್ಸನ್ನು ಮಾಡಿ ಯೋಗಿಗಳಾಗಲು ಸಾಧನೆಯನ್ನು ಮಾಡುವರು. ವಿಶಾಲವಾದ ಕಡಲಿಗಿಂತ ಭಕ್ತರ ಕಣ್ಣೀರು ಅವನ ಇರುವಿಕೆಯ ಸ್ಥಾನವಾಗಿದೆ. ಪರ್ವತದ ಎತ್ತರಕ್ಕಿಂತ ಭಕ್ತರ ಹೃದಯ ಮಂದಿರವನ್ನು ಆತನು ಬಯಸುತ್ತಾನೆ. ಬೃಂದಾವನದಲ್ಲಿ ಗೋಪಿಕೆಯರು ಆಡುವ ಮಾತಿನಲ್ಲಿ ವೇದಗಳಲ್ಲಿ ಇರುವ ಸಾರವು ಸತ್ಯವು ಅಡಗಿದೆ. ಹಾಲನ್ನು ಮಾರುವ ಹೆಣ್ಣುಗಳ ಪ್ರೀತಿಯು ಯೋಗಿಯ ಸಾಧನೆಯನ್ನು ಕೂಡಾ ಮೀರಿದ್ದು ಎಂದು ಗೋಪಾಲನು ಕೊಳಲನ್ನು ಊದುತ್ತಾ ಹಾಡುತ್ತಾನೆ.
Question 5.
ಗೋಪಾಲನಿಗೆ ಇದ್ದ ಕಷ್ಟವೇನು?ಅದು ಹೇಗೆ ಪರಿಹಾರವಾಯಿತು?
Answer:
ಗೋಪಾಲನ ಗೆಳೆಯರು ಅವನ ಹಳೆಯ ಬಟ್ಟಿಯನ್ನು ನೋಡಿ ಹಾಸ್ಯ ಮಾಡುತ್ತದ್ದರು. ಮತ್ತು ಸಂಜೆಯ ವೇಳೆ ಶಾಲೆಯಿಂದ ಬರುವಾಗ ಕಾಡು ದಾಟಿ ಬರುವಾಗ ಭಯವಾಗುತಿತ್ತು. ಇದು ಗೋಪಾಲನ ಕಷ್ಟಗಳು. ಗೋಪಾಲನ ತಾಯಿ ಹಗಲಿರುಳು ನೂತು ಸಂಪಾದಿಸಿದ ಹಣದಿಂದ ಪಂಚೆ ಕೊಡಿಸಿದಳು. ಶಲೆಯಿಂದ ಬರುವಾಗ ಹೆದರಿಕೆ ಆದರೆ ಬನದ ಗೋಪಾಲನ್ನು ಕರೆಯಲು ಹೇಳಿದಳು. ಮತ್ತು ಶ್ರೀಕೃಷ್ಣನನ್ನು ಪ್ರಾರ್ಥಿಸಿದಳು. ದೇವರು ನಿನ್ನ ರಕ್ಷಣೆಯನ್ನು ಮಾಡುವನು ಎಂದು ಹೇಳಿ ಅವನ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ ಕಳುಹಿಸಿದಳು. ನಿನ್ನ ಅಣ್ಣ ಗೋಪಾಲನು ನಿನ್ನನ್ನು ಕಾಡು ದಾಟಿಸುವನು ಎಂದು ಹೇಳಿ ಶಾಲೆಗೆ ಕಳುಹಿಸಿ ಅವನಲ್ಲಿ ಧೈರ್ಯ ತುಂಬಿಳು. ಈ ರೀತಿಯಾಗಿ ಗೋಪಾಲನ ಕಷ್ಟ ಪರಿಹಾರವಾಯಿತು.
ಸಂದರ್ಭದೊಂದಿಗೆ ಅರ್ಧವಿಶೇಷವನ್ನು ಬರೆಯಿರಿ.
Question 1.
ಸಾವಿರಾರು ಮಳೆಬಿಲ್ಲುಗಳು ಸೇರಿಕುಣಿದಂತೆ ತೋರುತ್ತಿತ್ತು
Answer:
ಸಂದರ್ಭ:
ಈ ವಾಕ್ಯವನ್ನು ಕುವೆಂಪು ಅವರು ಬರೆದಿರುವ ನನ್ನ ಗೋಪಾಲ ఎంబ ನಾಟಕದಿಂದ ಆರಿಸಲಾಗಿದೆ.
ಸ್ವಾರಸ್ಯ:
ಈ ಮಾತನ್ನು ಗೋಪಾಲನು ತನ್ನ ಅಮ್ಮನಿಗೆ ಹೇಳಿದನು. ಬನದಲ್ಲಿ ಕಂಡುಬರುವ ಪ್ರಕೃತಿಯನ್ನು ವರ್ಣಿಸುತ್ತಾ ಮಲ್ಲಿಗೆ ಹೂ, ಕೇದಿಗೆ ಹೂ, ಸಂಪಿಗೆಹೂ, ಪರ್ವತ ಬಾಳೆಯ ಹೂ ಗೋರಂಟಿಯ ಹೂ ಅರಳಿ ಸಾವಿರಾರು ಮಳೆಬಿಲ್ಲುಗಳು ಕುಣಿದಂತೆ ತೆ ತೋರುತ್ತಿತ್ತು ಎಂದು ವರ್ಣಿಸುತ್ತಾ ಈ ಮಾತನ್ನು ಹೇಳಿದನು.
Question 2.
ಆಗೋಪಾಲ ಕೊಡ ಬೇಕು ನಾವು ಉಣಬೇಕು
Answer:
ಸಂದರ್ಭ:
ಈ ವಾಕ್ಯವನ್ನು ಕುವೆಂಪು ಅವರು ಬರೆದಿರುವ ನನ್ನ ಆರಿಸಲಾಗಿದೆ. ಬರೆದಿರುವ ನನ್ನ ಗೋಪಾಲ ఎంబ ನಾಟಕದಿಂದ
ಸ್ವಾರಸ್ಯ:
ಈ ಮಾತನ್ನು ಗೋಪಾಲನ ತಾಯಿ ಮಗನಿಗೆ ಹೇಳಿದಳು. ಗೋಪಾಲ ತಾನು ಒಂಟಿಯಾಗಿ ಕಾಡು ದಾಟಿಬರುವಾಗ ಭಯವಾಗುತ್ತದೆ. ನನ್ನ ಗೆಳೆಯರ ಜೊತೆ ಆಳು ಇರುತ್ತಾರೆ. ನನ್ನ ಜೊತೆ ಮಾತ್ರ ಯಾರೂ ಇಲ್ಲ ಎಂದಾಗ ತಾಯಿ ಅವರೆಲ್ಲ ಶ್ರೀಮಂತರು ಎಂದು ಹೇಳುತ್ತಾ ಹೀಗೆ ಹೇಳಿದಳು.
Question 3.
ಆಮಗುವಿಗೆ ಬಡತನದ ಬವಣೆಯೇಕೆ ?
Answer:
ಸಂದರ್ಭ:
ಈ ವಾಕ್ಯವನ್ನು ಕುವೆಂಪು ಅವರು ಬರೆದಿರುವ ನನ್ನ ಗೋಪಾಲ ఎంబ ನಾಟಕದಿಂದ ಆರಿಸಲಾಗಿದೆ.
ಸ್ವಾರಸ್ಯ:
ಈ ಮಾತನ್ನು ಗೋಪಾಲನ ತಾಯಿ ತನ್ನ ಮನಸ್ಸಿನಲ್ಲೇ ಹೇಳಿಕೊಂಡಳು. ಇಲ್ಲಿಯವರೆಗೆ ತನ್ನ ಮಗನಿಗೆ ಬಡತನದ ಬಗ್ಗೆ ತಿಳಿಯದಂತೆ ಬೆಳೆಸಿದೆ. ಆದರೆ ಈಗ ನನಗೆ ಇನ್ನು ಮುಂದೆ ತಮ್ಮ ಬಡತನವನ್ನು ತಿಳಿಸದೇ ಬೇರೆ ದಾರಿ ಇಲ್ಲ. ಎಂದು ದುಃಖಿಸುತ್ತಾ ದೇವರಿಗೆ ಹೀಗೆ ಬೇಡುತ್ತಾ ಮೇಲಿನ ಮಾತು ಹೇಳುತ್ತಾಳೆ.
Question 4.
ಅಮ್ಮನ ಮಾತು ಸುಳ್ಳಾಗ ಲಾರದು?
Answer:
ಸಂದರ್ಭ:
ಈ ವಾಕ್ಯವನ್ನು ಕುವೆಂಪು ಅವರು ಬರೆದಿರುವ ನನ್ನ ಗೋಪಾಲ ಎಂಬ ನಾಟಕದಿಂದ ಆರಿಸಲಾಗಿದೆ.
ಸ್ವಾರಸ್ಯ:
ಈ ಮಾತನ್ನು ಗೋಪಾಲನು ತನ್ನಲ್ಲೆ ಹೇಳಿಕೊಂಡನು. ಕಾಡಿನಲ್ಲಿ ಗೋಪಾಲನು ಭಯಗೊಂಡು ತಾಯಿ ಹೇಳಿದಂತೆ ಅಣ್ಣನನ್ನು ಕರೆಯುತ್ತಾನೆ. ಆಗ ಅಣ್ಣ ಬರಲಿಲ್ಲ, ಅವನು ಅನುಮಾನದಿಂದ ಹೀಗೆ ಮೇಲಿನ ಮಾತು ಹೇಳಿದ್ದಾನೆ.
“ನನ್ನ ಗೋಪಾಲ” ಪಾಠದ ಸಾರಾಂಶ
Summary
“ನನ್ನ ಗೋಪಾಲ” ಎಂಬ ಪಾಠವನ್ನು ಕುವೆಂಪು ರಚಿಸಿದ್ದು, ಇದು ತಾಯಿ-ಮಗನ ಪ್ರೀತಿ, ಬಡತನದ ಜೀವನ ಮತ್ತು ಭಕ್ತಿಯ ಮಹತ್ವವನ್ನು ಮನಮುಟ್ಟುವ ರೀತಿಯಲ್ಲಿ ಚಿತ್ರಿಸುತ್ತದೆ.
ಈ ಕಥೆಯಲ್ಲಿ ಗೋಪಾಲ ಎಂಬ ಬಡ ಬಾಲಕ ತನ್ನ ತಾಯಿಯೊಂದಿಗೆ ವಾಸಿಸುತ್ತಾನೆ. ಅವನ ತಾಯಿ ನೂಲು ನೆಯ್ದು ಜೀವನ ನಡೆಸುತ್ತಾಳೆ. ಗೋಪಾಲನು ದೇವರಾದ ಗೋಪಾಲನ ಮೇಲೆ ಅಪಾರ ಭಕ್ತಿ ಹೊಂದಿದ್ದಾನೆ. ಪ್ರತಿದಿನ ಬೆಳಗ್ಗೆ ಬನಕ್ಕೆ ಹೋಗಿ ಹೂಗಳನ್ನು ಕಯ್ಯಿ ದೇವರಿಗೆ ಪೂಜೆ ಮಾಡುತ್ತಾನೆ.
ಗೋಪಾಲನು ಶಾಲೆಗೆ ಹೋಗಲು ಕಾಡು ದಾಟಬೇಕು. ಸಂಜೆ ಮನೆಗೆ ಹಿಂದಿರುಗುವಾಗ ಅವನಿಗೆ ಒಬ್ಬನೇ ಹೋಗಲು ಹೆದರಿಕೆ ಉಂಟಾಗುತ್ತದೆ. ಆಗ ಅವನ ತಾಯಿ “ಹೆದರಿಕೆಯಾದರೆ ಗೋಪಾಲನನ್ನು ಕರೆಯು” ಎಂದು ಹೇಳುತ್ತಾಳೆ. ತಾಯಿಯ ಮಾತನ್ನು ನಂಬಿದ ಗೋಪಾಲನು ಕಾಡಿನಲ್ಲಿ ಹೆದರಿದಾಗ “ಗೋಪಾಲ” ಎಂದು ಕರೆಯುತ್ತಾನೆ.
ಆ ಸಮಯದಲ್ಲಿ ಬನದ ಗೋಪಾಲ (ಶ್ರೀಕೃಷ್ಣ) ಅವನಿಗೆ ಧೈರ್ಯ ನೀಡಿ ಸಹಾಯ ಮಾಡುತ್ತಾನೆ. ಇದರಿಂದ ತಾಯಿಯ ಭಕ್ತಿ ಮತ್ತು ಮಗನ ನಂಬಿಕೆ ಸತ್ಯವಾಗುತ್ತದೆ.
ಈ ಪಾಠವು ನಮಗೆ ಭಕ್ತಿ, ನಂಬಿಕೆ, ತಾಯಿಯ ಪ್ರೀತಿ ಮತ್ತು ದೇವರ ಕರುಣೆ ಜೀವನದಲ್ಲಿ ಅತ್ಯಂತ ಮುಖ್ಯವೆಂದು ತಿಳಿಸುತ್ತದೆ.
III. ಭಾಷಾಭ್ಯಾಸಕ್ಕೆ
ಅ) ತತ್ಸಮ–ತದ್ಭವ ರೂಪಗಳು
ಪದ | ತತ್ಸಮ | ತದ್ಭವ |
ಸಿರಿ | ಶ್ರೀ | ಸಿರಿ |
ಬನ | ವನ | ಬನ |
ಮಲ್ಲಿಗೆ | ಮಲ್ಲಿಕಾ | ಮಲ್ಲಿಗೆ |
ಸಂಪಿಗೆ | ಚಂಪಕ | ಸಂಪಿಗೆ |
ಹಕ್ಕಿ | ಪಕ್ಷಿ | ಹಕ್ಕಿ |
ಸಂಜೆ | ಸಂಧ್ಯಾ | ಸಂಜೆ |
ಜನುಮ | ಜನ್ಮ | ಜನುಮ |
ಯೋಗಿ | ಯೋಗಿ | ಯೋಗಿ |
ಭಕ್ತಿ | ಭಕ್ತಿ | ಭಕ್ತಿ |
ಬಿತ್ತರ | ವಿಸ್ತಾರ | ಬಿತ್ತರ |
ಆ) ವಿರುದ್ಧಾರ್ಥ ಪದಗಳು
- ಕರುಣೆ → ಕ್ರೂರತೆ
- ತುದಿ → ಆರಂಭ
- ಮುದುಡು → ಹೊಸದು
- ಸ್ವೀಕರಿಸು → ತಿರಸ್ಕರಿಸು
- ಬೈಗು → ಹೊಗಳಿಕೆ
- ಬಡತನ → ಐಶ್ವರ್ಯ
- ಅಜ್ಞಾನ → ಜ್ಞಾನ
ಇ) ಸ್ವಂತ ವಾಕ್ಯಗಳು
- ಬವಣೆ → ಅವನು ಬಡತನದ ಬವಣೆಯನ್ನು ಅನುಭವಿಸಿದನು.
- ಒಲುಮೆ → ತಾಯಿಯ ಒಲುಮೆ ಅಪಾರವಾಗಿರುತ್ತದೆ.
- ಕರುಣೆ → ಅವಳು ಬಡವರಿಗೆ ಕರುಣೆ ತೋರಿದಳು.
- ಲೀಲೆ → ಪ್ರಕೃತಿಯ ಲೀಲೆ ಅಚ್ಚರಿಯಾಗಿದೆ.
- ಸಂಪಾದನೆ → ಪರಿಶ್ರಮದಿಂದ ಸಂಪಾದನೆ ಮಾಡಬೇಕು.
- ತಂಗಾಳಿ → ಸಂಜೆ ತಂಗಾಳಿ ಮನಸ್ಸಿಗೆ ಹಿತಕರವಾಗಿತ್ತು.
ಈ) ವಿಗ್ರಹವಾಕ್ಯ ಮತ್ತು ಸಮಾಸ
- ತಂಗಾಳಿ → ತಂಪಾದ ಗಾಳಿ — ಕರ್ಮಧಾರಯ ಸಮಾಸ
- ಹಿಮಮಣಿ → ಹಿಮದ ಮಣಿ — ಷಷ್ಠೀ ತತ್ಪುರುಷ ಸಮಾಸ
- ಗಂಜಿಯುಂಡು → ಗಂಜಿ ಉಂಡು — ಕ್ರಿಯಾಪದ ಸಮಾಸ
- ಹೊಂಬೆಳಕು → ಹೊಂ ಬಣ್ಣದ ಬೆಳಕು — ಕರ್ಮಧಾರಯ ಸಮಾಸ
- ಸ್ನಾನಮಾಡ → ಸ್ನಾನ ಮಾಡು — ಕ್ರಿಯಾಪದ ಸಮಾಸ
ಉ) ಸಂಧಿ ಬಿಡಿಸಿ, ಸಂಧಿ ಹೆಸರು
- ಕಂಬನಿ → ಕಣ್ಣು + ಬನಿ — ಗುಣ ಸಂಧಿ
- ಕೋಟ್ಯಂತರ → ಕೋಟಿ + ಅಂತರ್ — ಸ್ವರ ಸಂಧಿ
- ಲಕ್ಷ್ಮೀಶ → ಲಕ್ಷ್ಮೀ + ಈಶ — ಸ್ವರ ಸಂಧಿ
- ಕೊಳಲೂದಿ → ಕೊಳಲು + ಊದಿ — ಗುಣ ಸಂಧಿ
- ಈರಿಗಿ → ಈರಿ + ಇಗಿ — ಸ್ವರ ಸಂಧಿ
- ಹೆದರಿಕೆಯಾದರೆ → ಹೆದರಿಕೆ + ಆದರೆ — ಸ್ವರ ಸಂಧಿ
- ಮೇಲೇಳು → ಮೇಲೆ + ಏಳು — ಸ್ವರ ಸಂಧಿ
ಊ) ಕೆಳಗಿನ ವಾಕ್ಯಗಳಿಗೆ ಸೂಕ್ತ ಲೇಖನ ಚಿಹ್ನೆಗಳನ್ನು ಬಳಸಿ ಬರೆಯಿರಿ.
Question 1.
ಗೋಪಾಲನೆಲ್ಲಿ ಹಾಸಿಗೆಯಿಂದ ಇನ್ನೂ ಏಳಲಿಲ್ಲವೋ ಏನೋ
Answer:
ಗೋಪಾಲನೆಲ್ಲಿ? ಹಾಸಿಗೆಯಿಂದ ಇನ್ನೂ ಏಳಲಿಲ್ಲವೋ ಏನೋ!
Question 2.
ಕೇಳಲ್ಲಿ ಹಕ್ಕಿಗಳು ಹಾಡುತ್ತ ಹಾರಾಡಿ ಕರೆಯುತ್ತಿವೆ ನಿನ್ನ
Answer:
ಕೇಳಲ್ಲಿ, ಹಕ್ಕಿಗಳು ಹಾಡುತ್ತ ಹಾರಾಡಿ ಕರೆಯುತ್ತಿವೆ ನಿನ್ನ.
Question 3.
ಬನದಲ್ಲಿ ಏನಮ್ಮ ಸೊಗಸು ಏನು ಆನಂದ
Answer:
ಬನದಲ್ಲಿ ಏನಮ್ಮ ಸೊಗಸು! ಏನು ಆನಂದ!
Additional Question & Answers
1-mark Questions
Question 1.
ಗೋಪಾಲನ ತಾಯಿ ಯಾವ ಕೆಲಸ ಮಾಡುತ್ತಿದ್ದಳು?
Answer:
ನೂಲು ನೆಯುವ ಕೆಲಸ ಮಾಡುತ್ತಿದ್ದಳು.
Question 2.
ಗೋಪಾಲನು ಬೆಳಿಗ್ಗೆ ಎಲ್ಲಿಗೆ ಹೋಗಿದ್ದನು?
Answer:
ಬನಕ್ಕೆ ಹೂಗಳನ್ನು ಕಯ್ಯಲು ಹೋಗಿದ್ದನು.
Question 3.
ಗೋಪಾಲನು ಯಾವ ದೇವರನ್ನು ಪೂಜಿಸುತ್ತಿದ್ದನು?
Answer:
ಗೋಪಾಲನ ವಿಗ್ರಹವನ್ನು ಪೂಜಿಸುತ್ತಿದ್ದನು.
Question 4.
ಗೋಪಾಲನಿಗೆ ಏಕೆ ಹೆದರಿಕೆ?
Answer:
ಕಾಡಿನಲ್ಲಿ ಒಬ್ಬನೇ ಹೋಗಬೇಕಾದ್ದರಿಂದ.
2-mark Questions
Question 1.
ಗೋಪಾಲನು ಬನದ ಸೌಂದರ್ಯವನ್ನು ಹೇಗೆ ವರ್ಣಿಸಿದ್ದಾನೆ?
Answer:
ಮಲ್ಲಿಗೆ, ಸಂಪಿಗೆ ಹೂಗಳು, ಹಕ್ಕಿಗಳ ಗಾನ, ತಂಗಾಳಿ, ಸೂರ್ಯನ ಬೆಳಕು ಇತ್ಯಾದಿಗಳನ್ನು ನೋಡಿ ಆನಂದಪಟ್ಟನು.
Question 2.
ಗೋಪಾಲನ ತಾಯಿ ಏಕೆ ಕಳವಳಗೊಂಡಳು?
Answer:
ಮಗನಿಗೆ ಜೊತೆಯಾಗಲು ಯಾರೂ ಇಲ್ಲದ ಕಾರಣ ಕಳವಳಗೊಂಡಳು.
3-mark Questions
Question 1.
ಬಡತನದ ಜೀವನವನ್ನು ಪಾಠದಲ್ಲಿ ಹೇಗೆ ಚಿತ್ರಿಸಲಾಗಿದೆ?
Answer:
ತಾಯಿ ನೂಲು ನೆಯ್ದು ಕಡಿಮೆ ಹಣದಲ್ಲಿ ಜೀವನ ಸಾಗಿಸುತ್ತಿದ್ದಳು. ಮಗನ ಬಯಕೆಗಳನ್ನು ಪೂರೈಸಲು ಕಷ್ಟಪಡುತ್ತಿದ್ದಳು.
Question 2.
ತಾಯಿ ಮತ್ತು ಮಗನ ನಡುವಿನ ಪ್ರೀತಿ ಹೇಗಿದೆ?
Answer:
ತಾಯಿ ತನ್ನ ಮಗನನ್ನು ತುಂಬ ಪ್ರೀತಿಸುತ್ತಾಳೆ. ಅವನ ಸುರಕ್ಷತೆಗಾಗಿ ದೇವರಲ್ಲಿ ಭರವಸೆ ಇಡುತ್ತಾಳೆ.
Multiple Choice Questions (MCQs)
- ಗೋಪಾಲನ ತಾಯಿ ಯಾವ ಕೆಲಸ ಮಾಡುತ್ತಿದ್ದಳು?
A) ಕೃಷಿ
B) ನೂಲಾಟ ✔
C) ವ್ಯಾಪಾರ
D) ಕೂಲಿ - ಗೋಪಾಲನು ಹೂಗಳನ್ನು ಎಲ್ಲಿಂದ ತರುತ್ತಾನೆ?
A) ಮಾರುಕಟ್ಟೆ
B) ಬನ ✔
C) ಮನೆ
D) ಶಾಲೆ - ಗೋಪಾಲನಿಗೆ ಹೆದರಿಕೆ ಆಗುವ ಸ್ಥಳ ಯಾವುದು?
A) ಮನೆ
B) ಶಾಲೆ
C) ಕಾಡು ✔
D) ಬನ - ತಾಯಿ ಯಾರನ್ನು ಕರೆಯಲು ಹೇಳುತ್ತಾಳೆ?
A) ಸ್ನೇಹಿತ
B) ಗುರು
C) ಗೋಪಾಲ ✔
D) ಅಣ್ಣ - ಬನದ ಗೋಪಾಲನ ಕೈಯಲ್ಲಿ ಏನು ಇತ್ತು?
A) ಪುಸ್ತಕ
B) ಕೊಳಲು ✔
C) ದಂಡ
D) ಹೂ
Click Here to Download Nanna Gopala PDF Notes
Click Here to Watch Nanna Gopala Video
Nanna Gopala question answers, Nanna Gopala summary, sslc kannada chapter 2 notes, karnataka board kannada notes 2026