Class 10 NudiKannada Text Book Solution Chapter 3

SSLC Nudi Kannada Question and Answer -Shishunala Sharifa Sahebaru

Looking for SSLC /Class 10th Nudi Kannada textbook answers? You can download Chapter 3: Shishunala Sharifa Sahebaru Questions and Answers PDF, Notes, and Summary here. SSLC /Class 10th Nudi Kannada Gadyabhaga solutions follow the Karnataka State Board Syllabus, making it easier for students to revise and score higher in exams.

Karnataka SSLC/Class 10th Nudi Kannada Textbook Answers—Reflections Chapter 3

Shishunala Sharifa Sahebaru Questions and Answers, Notes, and Summary

Class 10 Nudi Kannada Chapter 3

ಶಿಶುನಾಳ ಶರೀಫ ಸಾಹೇಬರು

Shishunala Sharifa Sahebaru
Scroll Down to Download Shishunala Sharifa Sahebaru PDF

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

Question 1.
ಶರೀಫರು ಯಾವ ಮಾತನ್ನು ಹುಸಿಗೊಳಿಸಿದರು?
Answer:
ತತ್ವ ವಿವೇಚನೆ, ಶಾಸ್ತ್ರಶ್ರವಣ, ಮುಂತಾದವುಗಳು ಕೇವಲ ಉಚ್ಚ ಜನರ ಸೊತ್ತೆಂಬ ಮೂಢ ತಿಳುವಳಿಕೆಯನ್ನು ಶರೀಫರು ಹುಸಿಗೊಳಿಸಿದರು.

Question 2.
ಶರೀಫರು ಸ್ವಪ್ರಯತ್ನದಿಂದ ಏನನ್ನು ಕಲಿತರು? (2018)
Answer:
ಶರೀಫರು ಸ್ವಪ್ರಯತ್ನದಿಂದ ಉರ್ದು ಹಾಗೂ ಮೋಡಿ ಭಾಷೆಯನ್ನು ಕಲಿತರು.

Question 3.
ಶರೀಫರು ಭಾಗವಹಿಸುತ್ತಿದ್ದ ಇಸ್ಲಾಂ ಹಬ್ಬ ಮತ್ತು ಮೇಳಗಳಾವುವು?
Answer:
ಇಸ್ಲಾಂ ಹಬ್ಬಗಳಲ್ಲಿ ಒಂದಾದ ಮೊಹರಂ ಮತ್ತು ಅದರ ಭಾಗವಾದ ಅಲಾವಿ, ಕರ್ಬಲಾ ಆಚರಣೆಗಳಲ್ಲಿ ಶರೀಫರು ಭಾಗವಹಿಸುತ್ತಿದ್ದರು.

Question 4.
ಶರೀಫರಿಗೆ ಸಹಿಸಲಾಗದ ಆಘಾತವಾಯಿತು ಏಕೆ?
Answer:
ಶರೀಫರು ಏಕೈಕ ಪುತ್ರಿಯು ಕಾಲರಾ ರೋಗಕ್ಕೆ ಬಲಿಯಾದಳು. ಶರೀಫರ ನಡು ಹರೆಯದಲ್ಲಿಯೇ ಮಡದಿಯೂ ತೀರಿಕೊಂಡಳು. ಮಗಳ ಮತ್ತು ಹೆಂಡತಿಯ ಮರಣಗಳಿಂದ ಶರೀಫರಿಗೆ ಸಹಿಸಲಾಗದ ಆಘಾತವಾಯಿತು.

Question 5.
ಗುರುಪಂಥ ಎಂದರೇನು?
Answer:
ಗುರುಗಳಲ್ಲಿ ಭಕ್ತಿ ಭಾವವನ್ನು ತೋರಿ ನಡೆಯುವವರನ್ನು ಗುರುಪಂಥದವರೆಂದು ಕರೆಯುತ್ತಾರೆ.

ಆ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

Question 1.
ಶರೀಫರ ಬಾಲ್ಯವು ಹಿಂದೂ ಪರಂಪರೆಯೊಂದಿಗೆ ಹೇಗೆ ಬೆರೆತು ಹೋಗಿತ್ತು? ವಿವರಿಸಿ.
Answer:
ಶರೀಫರ ಬಾಲ್ಯ ಶಿಶುನಾಳ ಗ್ರಾಮದಲ್ಲಿಯೇ ಕಳೆಯಿತು. ಅವರ ವಿದ್ಯಾಭ್ಯಾಸ ಕನ್ನಡ ಮುಲ್ಕಿಯವರೆಗೆ ಇದೇ ಗ್ರಾಮದಲ್ಲಾಯಿತು. ಬಾಲ್ಯದಲ್ಲಿ ರಾಮಾಯಣ, ಮಹಾಭಾರತ, ಅಲ್ಲಮಪ್ರಭು ಬಯಲಾಟಗಳಲ್ಲಿ ಪಾತ್ರವಹಿಸಿ ಪ್ರೇಕ್ಷಕರ ಕಣ್ಮನ ತಣಿಸುತ್ತಿದ್ದರು. ಜಾತ್ರೆ ಉತ್ಸವಗಳಲ್ಲಿ ಶರಣರ ಕಾವ್ಯವಾಚನ ಮಾಡುತ್ತಿದ್ದರು. ಹೀಗೆ ಶರೀಫರ ಜನ್ಮ ಮುಸ್ಲಿಂ ಕುಟುಂಬದಲ್ಲಾದರೂ ಹಿಂದೂ ಪರಂಪರೆಯೊಂದಿಗೆ ಅವರ ಬಾಲ್ಯ ಬೆರೆತು ಹೋಗಿತ್ತು.

Question 2.
ಶರೀಫರು ತಮಗಾದ ದುಃಖವನ್ನು ಕಡಿಮೆ ಮಾಡಿಕೊಂಡ ಬಗೆಯನ್ನು ತಿಳಿಸಿ.
Answer:
ಮಗಳ ಮತ್ತು ಹೆಂಡತಿಯ ಮರಣಗಳಿಂದ ಶರೀಫರಿಗೆ ಸಹಿಸಲಾಗದ ಆಘಾತವಾಯಿತು. ಧೃತಿಗೆಡದೆ ಶರೀಫರು ತಮಗಾದ ದುಃಖವನ್ನು ಸಾಧು ಸತ್ಪುರುಷರ ಸಹವಾಸದಲ್ಲಿ ಕಳೆಯುತ್ತ, ಅಧ್ಯಾತ್ಮ-ಸುಬೋಧ, ಧರ್ಮ-ನೀತಿ ಮಾತುಗಳನ್ನು ಬೋಧಿಸುತ್ತ ಕಡಿಮೆ ಮಾಡಿಕೊಂಡರು.

Question 3.
ಗುರುಪಂಥ ಎಂದರೇನು? ಗುರುಗಳ ಮಹತ್ವವೇನು?
Answer:
ಯಾರಲ್ಲಿ ಗುರುಗಳ ಬಗೆಗೆ ಭಕ್ತಿಭಾವವಿರುತ್ತದೆಯೋ ಅಂಥವರನ್ನು “ಗುರುಪಂಥ”ದವರು ಎಂದು ಕರೆಯುತ್ತಾರೆ. ಕರ್ನಾಟಕದಲ್ಲಿ ಗುರುಗಳಿಗೆ ಅಗ್ರಸ್ಥಾನಮಾನವಿದೆ. ಜನರು ಗುರುಗಳ ಆಶೀರ್ವಾದ ಬಯಸಿ ಮಠ, ಮಂದಿರಗಳಿಗೆ ಹೋಗುತ್ತಾರೆ. ಶರೀಫರಿಗೆ ಕಳಸ ಗ್ರಾಮದ ‘ಗುರುಗೋವಿಂದಭಟ್ಟ’ರೆಂಬ ಆದರ್ಶ ಗುರುಗಳು ದೊರೆತರು.

ಇ) ಕೆಳಗಿನ ಪ್ರಶ್ನೆಗಳಿಗೆ ಏಳು-ಎಂಟು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

Question 1.
ಗೋವಿಂದಭಟ್ಟರು ಯಾರು? ಅವರ ಗುಣ ಸ್ವಭಾವವನ್ನು ತಿಳಿಸಿರಿ.

Answer:
ಗೋವಿಂದಭಟ್ಟರು ಕಳಸ ಗ್ರಾಮದವರು. ಜ್ಞಾನಿ ಹಾಗೂ ವಿದ್ಯಾವಂತರೆಂದು ಖ್ಯಾತಿವೆತ್ತವರಾಗಿದ್ದರು. ನಗುಮುಖದ ಪ್ರಸಾದ ವಾಣಿಯ ದಿವ್ಯ ವ್ಯಕ್ತಿಗಳಾಗಿದ್ದರು. ಕೈಯಲ್ಲಿ ತಾಮ್ರದ ತಂಬಿಗೆ ಹೆಗಲ ಮೇಲೆ ಪಂಜೆ, ನಡುವಿನಲ್ಲಿ ಲಂಗೋಟಿ ಇವು ಇವರ ವೇಷಭೂಷಣಗಳಾಗಿದ್ದವು. ಗುರುಗೋವಿಂದರು ಶಕ್ತಿಯ ಉಪಾಸಕರಾಗಿದ್ದರು. ಉದಾರ ಹೃದಯಿಗಳಾದ ಇವರು ಮಾನವಕುಲ ಒಂದೇ ಎಂಬ ಭಾವನೆಯುಳ್ಳವರಾಗಿದ್ದರು. ಜಾತಿ ಮತಗಳೆಂದರೆ ಇವರಿಗಾಗುತ್ತಿರಲಿಲ್ಲ. ಸ್ವಜಾತೀಯನಲ್ಲದ ತಮ್ಮ ಮುಸ್ಲಿಂ ಶಿಷ್ಯನಿಗೆ ಮುಕ್ತ ಹೃದಯದಿಂದ ವಿದ್ಯಾದಾನ ಮಾಡಿದರು. ಗುರು ಶಿಷುರಿಬ್ಬರಿಗೂ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು. ಅವರು ವಿಶೇಷವಾಗಿ ಕೂಡಿಕೊಂಡೆ ಇರುತ್ತಿದ್ದರು.

Question 2.
ಶರೀಫರ ತತ್ವಪದಗಳ ವೈಶಿಷ್ಟ್ಯವನ್ನು ವಿವರಿಸಿರಿ.

Answer:
ಭರತ ಭೂಮಿಯ ಪುಣ್ಯ ಪುರುಷರಲ್ಲಿ ಶಿಶುನಾಳ ಶರೀಫರು ಒಬ್ಬರು. ಜಾನಪದದ ಪ್ರತಿನಿಧಿಯಾದ ಈ ಸಂತಕವಿ ಸಾಮಾನ್ಯ ಮಾನವನಿಗೂ ಅರ್ಥವಾಗುವಂತೆ ಮಾನವತೆಯ ತತ್ವ ಬೋಧನೆ ಮಾಡಿದ್ದಾರೆ. ತತ್ವ ವಿವೇಚನೆ, ಶಾಸ್ತ್ರಶ್ರವಣ ಮುಂತಾದವುಗಳು ಕೇವಲ ಉಚ್ಛ ಜನರ ಸ್ವತ್ತೆಂಬ ಮೂಢ ತಿಳುವಳಿಕೆ ನಮ್ಮಲ್ಲಿದೆ. ಆದರೆ ಶರೀಫರು ಈ ಮಾತನ್ನು ಹುಸಿಯಾಗಿಸಿದ್ದಾರೆ. ಧರ್ಮ ಪರಿಪಾಲನೆ ಹಾಗೂ ತತ್ವ ಸೌರಭವನ್ನು ಪ್ರತಿಯೊಬ್ಬರೂ ಸವಿಯಲು ಅರ್ಹರೆಂದು ಸಾರಿದ್ದಾರೆ.

ಆದ್ದರಿಂದಲೇ ಶರೀಫರ ತತ್ವಪದಗಳನ್ನು ವೇದಶಾಸ್ತ್ರ ಅರಿಯದವರೂ, ಗವಾರರೂ ಗುನುಗುಡುತ್ತಿರುತ್ತಾರೆ. ಮನೆಮನೆಗೆ ಅಲೆದಾಡುವ ದಾಸಯ್ಯಗಳು, ಭಿಕ್ಷಕರು ಇಂಥ ತತ್ವ ಪದಗಳನ್ನು ಹಾಡುತ್ತಾರೆ. ಶ್ರೀಸಾಮಾನ್ಯನು ತನ್ನ ಜೀವನವನ್ನು ಸಾಫಲ್ಯಗೊಳಿಸಿಕೊಳ್ಳುವ ರಹಸ್ಯ ಈ ಹಾಡುಗಳಲ್ಲಿವೆ. ಅಲ್ಲದೆ ಶರೀಫರು ರಚಿಸಿದ ಹಾಡುಗಳ ಗತಿ ಗತ್ತುಗಳು ಜನಮನವನ್ನು ಹಿಡಿಸುವಂಥವುಗಳಾಗಿವೆ.

Question 3.
ಶರೀಫರು ಮತ್ತು ಗೋವಿಂದಭಟ್ಟರ ನಡುವಿನ ಅನ್ನೋನ್ಯತೆಯನ್ನು ಕುರಿತು ಬರೆಯಿರಿ.

Answer:
ಜಾತಿ ಮತಗಳಲ್ಲಿ ಭೇದ ಮಾಡದೆ ಗುರು-ಶಿಷ್ಯರಿಬ್ಬರೂ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು. ಇವರಿಬ್ಬರಿಗೂ ಅಂದಿನ ಸಮಾಜ ಬಹಿಷ್ಕಾರ ಹಾಕಿತ್ತು. ಹಾಳು ದೇವಾಲಯ ಮತ್ತು ಸಾರ್ವಜನಿಕ ಗುಡಿಗುಂಡಾರುಗಳಲ್ಲಿ ಇವರು ಕೂಡಿಯೇ ವಾಸಿಸುತ್ತಿದ್ದರು. ಶರೀಫ ಹಾಗೂ ಗೋವಿಂದಭಟ್ಟರು ಸುತ್ತಲಿನ ಗ್ರಾಮಗಳಿಗೆ ಒಟ್ಟಿಗೆ ಹೋಗಿ ಅಲ್ಲಿನ ಜನರ ತಿಳುವಳಿಕೆಯ ಮಟ್ಟದಲ್ಲಿ ಬೆರೆತು ಉಪದೇಶ ಮಾಡುತ್ತಿದ್ದರು. ಗುಡಿಗೇರಿಯ ಕುಂಬಾರ ಮುದುಕಪ್ಪನ ಮನೆಗೆ ವಿಶೇಷವಾಗಿ ಬರುವ ಹಾಗೂ ಅಲ್ಲಿಯೇ ಊಟ ಉಪಚಾರಗಳನ್ನು ತೀರಿಸಿಕೊಳ್ಳುವ ರೂಢಿಯನ್ನು ಇಟ್ಟುಕೊಂಡಿದ್ದರು.

ಉಪವಾಸವಿರುವ ಪ್ರಸಂಗ ಬಂದಾಗ ಬೇಡಿ ತಿಂದರೆ ಋಣಭಾರದಲ್ಲಿ ಸಿಲುಕಬೇಕಾಗುತ್ತದೆ ಎಂದು ತಿಳಿದು ಉಪವಾಸವಿರುತ್ತಿದ್ದರು. ಯಾರಾದರೂ ಪ್ರೀತಿಯಿಂದ ಕರೆದು ನೀಡಿದರೆ ಮಾತ್ರ ಪ್ರಸಾದವೆಂದು ತಿಳಿದು ಸ್ವೀಕರಿಸುತ್ತಿದ್ದರು. ಹೀಗೆ ಗುರು-ಶಿಷ್ಯರ ಸಂಬಂಧ ಅನ್ನೋನ್ಯವಾಗಿತ್ತು.

Question 4.
ಕರ್ಬಲಾ ಮತ್ತು ಅಲಾವಿಗಳ ನಡುವಿನ ವ್ಯತ್ಯಾಸವೇನು?

Answer:
ಕರ್ಬಲಾ ಇರಾಕ್ ದೇಶದಲ್ಲಿರುವ ಒಂದು ಸ್ಥಳ. ಹಜರತ್ ಹುಸೇನರು ಈ ಸ್ಥಳದಲ್ಲಿ ಶತ್ರುಗಳೊಡನೆ ಹೋರಾಡಿ ಹುತಾತ್ಮರಾಗಿದ್ದರು. ಮೊಹರಂ ಹಬ್ಬದ ಕೊನೆಯ ದಿನ ಹಜರತ್ ಹುಸೇನರನ್ನು ಸಾಂಕೇತಿಸುವ ಲೋಹದ ಹಸ್ತಗಳನ್ನು ಮೆರವಣಿಗೆಯಲ್ಲಿ ಊರ ಹೊರಗೆ ತಂದು ಸ್ನಾನ ಮಾಡಿಸಿ ಬಿಳಿ ಬಟ್ಟೆಯಲ್ಲಿ ಅವುಗಳನ್ನು ಗಟ್ಟು ಕಟ್ಟುತ್ತಾರೆ. ಇದು ಹುತಾತ್ಮರಾದ ಹುಸೇನರನ್ನು ಸಾಂಕೇತಿಸುವ ಆಚರಣೆಯಾಗಿದೆ.

ಅಲಾವಿ ಎಂದರೆ, ಮೊಹರಂ ಹಬ್ಬದ ಸಂದರ್ಭದಲ್ಲಿ ಲೋಹದ ಹಸ್ತವಾದ ‘ಬಾಬಯ್ಯ’ನನ್ನು ಕೂಡಿಸುವುದು. ಬಾಬಯ್ಯನ ಗುಡಿಯ ಮುಂದೆ ಗುಂಡಿ ತೋಡಿ ಅದರಲ್ಲಿ ಬೆಂಕಿ ಉರಿಸುತ್ತಾರೆ. ಆ ಗುಂಡಿಗೆ ‘ಅಲಾವಿ’ ಎಂದು ಕರೆಯುತ್ತಾರೆ..

ಈ) ಕೆಳಗಿನ ಸಂದರ್ಭಗಳನ್ನು ಸ್ವಾರಸ್ಯದೊಂದಿಗೆ ಬರೆಯಿರಿ.

Question 1.
ಮುಕ್ತ ಹೃದಯದಿಂದ ವಿದ್ಯಾದಾನ ಮಾಡಿದರು.

Answer:
ಪಾಠದ ಹೆಸರು: ಶಿಶುನಾಳ ಶರೀಫ ಸಾಹೇಬರು.
ಲೇಖಕರ ಹೆಸರು: ಆರ್.ಎಸ್. ಸುಂಕದ.
ಸಂದರ್ಭ: ಲೇಖಕರು ಈ ಮಾತನ್ನು ಗುರು ಗೋವಿಂದ ಭಟ್ಟರ ಕುರಿತು ನುಡಿದಿದ್ದಾರೆ.

ವಿವರಣೆ:
ಶರೀಫರಿಗೆ ಗುರು ಗೋವಿಂದಭಟ್ಟರೆಂಬ ಗುರುಗಳು ದೊರಕಿದರು. ಅವರು ಕಳಸ ಗ್ರಾಮದವರಾಗಿದ್ದರು. ಜ್ಞಾನಿಗಳು.
ವಿದ್ಯಾವಂತರು, ಶಕ್ತಿಯ ಉಪಾಸಕರು, ಮಾನವ ಕುಲ ಒಂದೇ ಎಂಬ ಭಾವನೆಯನ್ನು ಹೊಂದಿದ್ದರು. ಜಾತಿ, ಮತ ಭೇದ ಮಾಡದ ಇವರು ಸ್ವಜಾತೀಯನಲ್ಲದ ತಮ್ಮ ಮುಸಲ್ಮಾನ ಶಿಷ್ಯನಿಗೆ ಮುಕ್ತ ಹೃದಯದಿಂದ ವಿದ್ಯಾದಾನ ಮಾಡಿದರು ಎಂದು ಹೇಳುವ ಸಂದರ್ಭದಲ್ಲಿ ಲೇಖಕರು ಈ ಮೇಲಿನ ಮಾತನ್ನು ಹೇಳಿದ್ದಾರೆ.

Question 2.
“ದೊರಕಿದಾ ಗುರು ದೊರಕಿದಾ ಸದ್ಗುರು.” (2018)

Answer:
ಪಾಠದ ಹೆಸರು: ಶಿಶುನಾಳ ಶರೀಫ ಸಾಹೇಬರು.
ಲೇಖಕರ ಹೆಸರು: ಆರ್.ಎಸ್. ಸುಂಕದ.
ಸಂದರ್ಭ: ಶರೀಫರು ರಚಿಸಿದ ಪದ್ಯದಲ್ಲಿ ಈ ಮೇಲಿನ ಮಾತು ಬಂದಿದೆ.

ವಿವರಣೆ:
ಶರೀಫರಿಗೆ ಗುರುಗೋವಿಂದ ಭಟ್ಟರೆಂಬ ಆದರ್ಶ ಗುರುಗಳು ದೊರೆತರು. ಸ್ವಜಾತಿಯನಲ್ಲದ ಶರೀಫರಿಗೆ ಗುರುಗಳು ವಿದ್ಯಾದಾನ ಮಾಡಿದರು. ಗುರುಗೋವಿಂದ ಭಟ್ಟರು ‘ಮಾನವ ಕುಲ ಒಂದೇ’ ಎಂಬ ಭಾವನೆಯುಳ್ಳವರಾಗಿದ್ದರು. ಗುರು ಶಿಷ್ಯರಿಬ್ಬರೂ ಒಂದೇತಟ್ಟೆಯಲ್ಲಿ ಊಟ ಮಾಡುತ್ತಿದ್ದರು. ಶರೀಫರು ಗುರುಗಳ ಮಹಿಮೆಯನ್ನು ಸ್ತುತಿಸುವ ಒಂದು ಕವನದಲ್ಲಿ ಈ ಮೇಲಿನ ಸಾಲನ್ನು ಭಯ ಭಕ್ತಿಗಳಿಂದ ಹಾಡಿದ್ದರು.

Question 3.
“ಅಲ್ಲಾಹೂ ಅಕ್ಷರ.”

Answer:
ಪಾಠದ ಹೆಸರು: ಶಿಶುನಾಳ ಶರೀಫ ಸಾಹೇಬರು.
ಲೇಖಕರ ಹೆಸರು: ಆರ್.ಎಸ್. ಸುಂಕದ.
ಸಂದರ್ಭ: ಮುಸ್ಲಿಂ ಜನಾಂಗದವರ ಕುರಾನ್ ಪಠಣದಲ್ಲಿ ಈ ಮಾತು ಕೇಳಿ ಬರುತ್ತಿತ್ತು.

ವಿವರಣೆ:
ಕರ್ನಾಟಕದ ಕಬೀರರು ಎಂದು ಖ್ಯಾತಿ ಪಡೆದ ಶರೀಫರು ಮೃತರಾದಾಗ ಅವರ ಶವ ಸಂಸ್ಕಾರವನ್ನು ಹಿಂದೂ, ಮುಸ್ಲಿಂ ಸಮುದಾಯದವರು ತಮ್ಮ ಧಾರ್ಮಿಕ ವಿಧಿಯಂತೆ ಮಾಡಲು ಮುಂದಾದರು. ಒಂದು ಕಡೆ ಕುರಾನಿನ ಪಠಣದೊಳಗೆ ಈ ಮೇಲಿನ ಮಾತು ಕೇಳಿ ಬರುತ್ತಿತ್ತು. ಇನ್ನೊಂದೆಡೆ ವೇದ ಮಂತ್ರ ಪಠಣದೊಳಗೆ ‘ಹರ ಹರ ಮಹಾದೇವ’ ಎಂಬ ಉದ್ವೇಷ ಕೇಳಿ ಬರುತ್ತಿತ್ತು ಎಂದು ಲೇಖಕರು ಹೇಳಿದ್ದಾರೆ.

Question 4.
“ಭೂಮಿಗೆ ಕೊಡತೇನೀ ದೇಹಾ.”

Answer:
ಪಾಠದ ಹೆಸರು: ಶಿಶುನಾಳ ಶರೀಫ ಸಾಹೇಬರು.
ಲೇಖಕರ ಹೆಸರು: ಆರ್.ಎಸ್. ಸುಂಕದ.
ಸಂದರ್ಭ: ಶರೀಫರು ತಮ್ಮ ದೇಹ ತ್ಯಜಿಸುವ ಮುನ್ನ ಈ ಮೇಲಿನ ಮಾತನ್ನು ನುಡಿದಿದ್ದರು.

ವಿವರಣೆ:
ಶರೀಫರ ಅಂತ್ಯವು ಶಾಂತಿಯುತವಾಗಿತ್ತು. ಮರಣಕ್ಕೆ ಮುಂಚೆ ಅವರು ಗುರು ಹಿರಿಯರನ್ನೆಲ್ಲಾ ಸ್ಮರಿಸಿದರು. ಅವಸಾನ ಹೊಂದುವ ಕೆಲವು ನಿಮಿಷಗಳ ಮುಂಚೆ ಈ ಮೇಲಿನ ಸಾಲನ್ನು ಹಾಡಿದ್ದರು ಎಂದು ಲೇಖಕರು ಹೇಳಿದ್ದಾರೆ.

ಉ) ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1) ಶರೀಫರ ಜನ್ಮಸ್ಥಳ ಶಿಶುನಾಳ.

2) ಶರೀಫರ ಆದರ್ಶ ಗುರುವಿನ ಹೆಸರು ಗುರುಗೋವಿಂದಭಟ್ಟ,

3) ಶರೀಫರ ಹಾಡುಗಳನ್ನು ಬರೆದು ಕೊಳ್ಳುತ್ತಿದ್ದವರು ಕುಂಬಾರ ಮುದುಕಪ್ಪ,

4) ಶರೀಫರ ಪತ್ನಿಯ ಹೆಸರು ಫಾತಿಮಾ.

ಊ) ಮೊದಲೆರಡು ಪದಗಳಿಗಿರುವ ಸಂಬಂಧವನ್ನು ಗಮನಿಸಿ, ಮೂರನೇ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ.

1) ಶರೀಫರತಂದೆ : ಹಜರತಇಮಾಮ :: ಶರೀಫರತಾಯಿ : ಹಾಜುಮ್.

2) ಶಿಶುನಾಳದ ಸಂತ : ಶರೀಫರು :: ಹುಲಗೂರಿನ ಸಂತ :ಖಾದರ್ ಷಾ ವಲಿ.

3) ಹಜರತ್‌ ಇಮಾಮ : ಹಾಜುಮ್ :: ಶರೀಫರು : ಫಾತಿಮಾ.

ಶಿಶುನಾಳ ಶರೀಫ ಸಾಹೇಬರುಸಾರಾಂಶ
Summary

ಶಿಶುನಾಳ ಶರೀಫ ಸಾಹೇಬರು’ ಗದ್ಯಪಾಠವು ಕರ್ನಾಟಕದ ಪ್ರಸಿದ್ಧ ಸಂತಕವಿ, ತತ್ತ್ವಪದಕಾರ ಹಾಗೂ ಮಾನವತಾವಾದಿಯಾದ ಶಿಶುನಾಳ ಶರೀಫ ಸಾಹೇಬರ ಜೀವನ ಮತ್ತು ಆದರ್ಶಗಳನ್ನು ಪರಿಚಯಿಸುತ್ತದೆ. ಅವರು 1819ರ ಮಾರ್ಚ್ 7ರಂದು ಹಾವೇರಿ ಜಿಲ್ಲೆಯ ಶಿಶುನಾಳ ಗ್ರಾಮದಲ್ಲಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಬಾಲ್ಯದಿಂದಲೇ ಕನ್ನಡ, ಉರ್ದು, ರಾಮಾಯಣ ಮತ್ತು ಮಹಾಭಾರತಗಳ ಬಗ್ಗೆ ಆಸಕ್ತಿ ಹೊಂದಿದ್ದರು.

ಕೆಲವು ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅವರು, ಪತ್ನಿ ಮತ್ತು ಪುತ್ರಿಯ ಮರಣದ ಬಳಿಕ ಆಧ್ಯಾತ್ಮಿಕ ಜೀವನದತ್ತ ತಿರುಗಿದರು. ಗುರು ಗೋವಿಂದ ಭಟ್ಟರ ಮಾರ್ಗದರ್ಶನದಲ್ಲಿ ತತ್ತ್ವಜ್ಞಾನವನ್ನು ಪಡೆದು, ಜಾತಿ-ಮತ ಭೇದವಿಲ್ಲದೆ ಮಾನವತೆ, ಸಮಾನತೆ ಮತ್ತು ಧಾರ್ಮಿಕ ಸಾಮರಸ್ಯದ ಸಂದೇಶವನ್ನು ತಮ್ಮ ತತ್ತ್ವಪದಗಳ ಮೂಲಕ ಜನರಿಗೆ ಬೋಧಿಸಿದರು.

ಸರಳ ಭಾಷೆಯಲ್ಲಿ ರಚಿಸಿದ ಅವರ ಹಾಡುಗಳು ಜನಸಾಮಾನ್ಯರ ಮನಸ್ಸನ್ನು ತಲುಪಿದವು. 1889ರಲ್ಲಿ ಅವರು ಶಾಂತಿಯುತವಾಗಿ ನಿಧನರಾದರು. ಅವರ ಅಂತ್ಯಸಂಸ್ಕಾರವನ್ನು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಸೇರಿ ನಡೆಸಿದ್ದು, ಅವರ ಧರ್ಮಸೌಹಾರ್ದತೆಯ ಜೀವನಕ್ಕೆ ಸಾಕ್ಷಿಯಾಗಿದೆ. ಕರ್ನಾಟಕದ ಕಬೀರ ಎಂದು ಪ್ರಸಿದ್ಧರಾದ ಶಿಶುನಾಳ ಶರೀಫ ಸಾಹೇಬರ ಜೀವನ ಮತ್ತು ಸಾಹಿತ್ಯ ಇಂದಿಗೂ ಮಾನವೀಯತೆ, ಸಹೋದರತೆ ಮತ್ತು ಸೌಹಾರ್ದತೆಯ ಆದರ್ಶವಾಗಿ ಉಳಿದಿವೆ.

ಭಾಷಾಭ್ಯಾಸ
ಅ) ಕೆಳಗಿನ ತತ್ಸಮ ಪದಗಳಿಗೆ ತದ್ಭವ ರೂಪಗಳನ್ನು ಬರೆಯಿರಿ.
  • ಧರ್ಮ – ದರುಮ, ದಮ್ಮ
  • ಜನ್ಮ – ಜನುಮ
  • ಭಿಕ್ಷು – ಭಿಕ್ಕು
  • ವ್ಯವಸಾಯ – ಬೇಸಾಯ
  • ಭಕ್ತ – ಭಕುತ
  • ಮುಕ್ತಿ –  ಮುಕುತಿ
  • ಪ್ರಸಾದ – ಹಸಾದ
ಆ) ಕೆಳಗಿನ ತದ್ಭವ ಪದಗಳಿಗೆ ತತ್ಸಮರೂಪವನ್ನು ಬರೆಯಿರಿ.
  • ವರುಷ –  ವರ್ಷ
  • ಬಿಜ್ಜೆ – ವಿದ್ಯೆ
  • ಮೊಗ – ಮುಖ
  • ಬಣ್ಣ – ವರ್ಣ
  • ರಿಣ –  ಋಣ
  • ಬೊಮ್ಮ – ಬ್ರಹ್ಮ
  • ಜೋಗಿ – ಯೋಗಿ.
ಇ) ಕೆಳಗಿನ ಪದಗಳನ್ನು ಬಿಡಿಸಿ ಬರೆದು, ಸಂಧಿಗಳನ್ನು ಹೆಸರಿಸಿರಿ.
  • ಸತ್ + ಗುರು = ಸದ್ಗುರು (ಜತ್ತ್ವ ಸಂಧಿ)
  • ಬಾಷ್ಪ + ಅಂಜಲಿ = ಬಾಷ್ಪಾಂಜಲಿ (ಸವರ್ಣದೀರ್ಘ ಸಂಧಿ)
  • ದೇವ + ಉನ್ಮಾದ = ದೇವೋನ್ಮಾದ (ಗುಣ ಸಂಧಿ)
  • ಜೀವ + ಒಂದು = ಜೀವವೊಂದು (‘ವ’ ಕಾರಾಗಮ ಸಂಧಿ)
  • ವಿದ್ಯಾ + ಅಭ್ಯಾಸ = ವಿದ್ಯಾಭ್ಯಾಸ (ಸವರ್ಣದೀರ್ಘ ಸಂಧಿ)
ಈ) ಕೆಳಗಿನ ಪದಗಳಿಗೆ ವಿಗ್ರಹವಾಕ್ಯವನ್ನು ಮಾಡಿ, ಸಮಾಸದ ಹೆಸರನ್ನು ತಿಳಿಸಿರಿ.
  • ಕಾವ್ಯದ + ವಾಚನ = ಕಾವ್ಯವಾಚನ = ತತ್ಪುರುಷ ಸಮಾಸ.
  • ಮೈಯನ್ನು + ಮರೆತು = ಮೈಮರೆತು = ಕ್ರಿಯಾ ಸಮಾಸ
  • ಚಕ್ರದ + ಆಕಾರ = ಚಕ್ರಾಕಾರ = ತತ್ಪರುಷ ಸಮಾಸ.
  • ತತ್ವದ + ಪದ = ತತ್ವಪದ = ತತ್ಪುರುಷ ಸಮಾಸ
  • ಹಿರಿದಾದ + ಗುರಿ = ಹೆಗ್ಗುರಿ = ಕರ್ಮಧಾರೆಯ ಸಮಾಸ
Additional Questions and Answers .
ಒಂದು ವಾಕ್ಯದಲ್ಲಿ ಉತ್ತರಿಸಿ

Question 1.
ಶಿಶುನಾಳ ಶರೀಫ ಸಾಹೇಬರು ಯಾವ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ?
Answer:
ಶಿಶುನಾಳ ಶರೀಫ ಸಾಹೇಬರು “ಕರ್ನಾಟಕದ ಕಬೀರ” ಎಂದು ಪ್ರಸಿದ್ಧರಾಗಿದ್ದಾರೆ.

Question 2.
ಶರೀಫ ಸಾಹೇಬರ ಗುರು ಯಾರು?
Answer:
ಶರೀಫ ಸಾಹೇಬರ ಗುರು ಗುರು ಗೋವಿಂದ ಭಟ್ಟರು.

Question 3.
ಶರೀಫ ಸಾಹೇಬರು ಯಾವ ಗ್ರಾಮದವರು?
Answer:
ಅವರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಶಿಶುನಾಳ ಗ್ರಾಮದವರು.

Question 4.
ಶರೀಫ ಸಾಹೇಬರ ಸಾಹಿತ್ಯದ ಮುಖ್ಯ ಉದ್ದೇಶವೇನು?
Answer:
ಮಾನವತೆ, ಸಮಾನತೆ ಹಾಗೂ ಧಾರ್ಮಿಕ ಸಾಮರಸ್ಯವನ್ನು ಸಾರುವುದು.

Question 5.
ಶರೀಫ ಸಾಹೇಬರು ತಮ್ಮ ತತ್ತ್ವಪದಗಳನ್ನು ಯಾವ ಭಾಷೆಯಲ್ಲಿ ರಚಿಸಿದರು?
Answer:
ಅವರು ಸರಳ ಕನ್ನಡ ಭಾಷೆಯಲ್ಲಿ ತತ್ತ್ವಪದಗಳನ್ನು ರಚಿಸಿದರು.

ಎರಡುಮೂರು ವಾಕ್ಯಗಳಲ್ಲಿ ಉತ್ತರಿಸಿ

Question 1.
ಶರೀಫ ಸಾಹೇಬರು ಜನಸಾಮಾನ್ಯರ ಮನಸ್ಸನ್ನು ಹೇಗೆ ಗೆದ್ದರು?
Answer:
ಶರೀಫ ಸಾಹೇಬರು ಸರಳ ಕನ್ನಡ ಭಾಷೆಯಲ್ಲಿ ತತ್ತ್ವಪದಗಳನ್ನು ರಚಿಸಿ, ಗ್ರಾಮದಿಂದ ಗ್ರಾಮಕ್ಕೆ ಸಂಚರಿಸಿ ಮಾನವೀಯತೆ ಮತ್ತು ಸತ್ಯದ ಸಂದೇಶವನ್ನು ಬೋಧಿಸಿದರು. ಇದರಿಂದ ಅವರ ಹಾಡುಗಳು ಜನಸಾಮಾನ್ಯರ ಮನಸ್ಸನ್ನು ಗೆದ್ದವು.

Question 2.
ಗುರು ಗೋವಿಂದ ಭಟ್ಟರ ವಿಶೇಷತೆ ಏನು?
Answer:
ಗುರು ಗೋವಿಂದ ಭಟ್ಟರು ಜಾತಿ-ಮತ ಭೇದವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣುತ್ತಿದ್ದರು. ಅವರು ಶರೀಫ ಸಾಹೇಬರಿಗೆ ತತ್ತ್ವಜ್ಞಾನವನ್ನು ಬೋಧಿಸಿ ಆದರ್ಶ ಗುರುವಾಗಿದ್ದರು.

Question 3.
ಶರೀಫ ಸಾಹೇಬರ ಅಂತ್ಯಸಂಸ್ಕಾರ ವಿಶೇಷವಾಗಿದ್ದುದೇಕೆ?
Answer:
ಅವರ ಅಂತ್ಯಸಂಸ್ಕಾರವನ್ನು ಹಿಂದೂ ಹಾಗೂ ಮುಸ್ಲಿಂ ಸಮುದಾಯದವರು ತಮ್ಮ ತಮ್ಮ ಸಂಪ್ರದಾಯದಂತೆ ನಡೆಸಿದರು. ಇದು ಅವರ ಧಾರ್ಮಿಕ ಸಾಮರಸ್ಯದ ಸಂಕೇತವಾಗಿದೆ.

Multiple Choice Questions – MCQs

1. ಶಿಶುನಾಳ ಶರೀಫ ಸಾಹೇಬರು ಯಾವ ವರ್ಷದಲ್ಲಿ ಜನಿಸಿದರು?
A) 1815
B) 1819
C) 1825
D) 1830

Answer:
B) 1819

2. ಶಿಶುನಾಳ ಶರೀಫ ಸಾಹೇಬರು ಯಾವ ಜಿಲ್ಲೆಯ ಶಿಶುನಾಳ ಗ್ರಾಮದಲ್ಲಿ ಜನಿಸಿದರು?
A) ಧಾರವಾಡ
B) ಬೆಳಗಾವಿ
C) ಹಾವೇರಿ
D) ವಿಜಯಪುರ

Answer:
C)
ಹಾವೇರಿ

3. ಶರೀಫ ಸಾಹೇಬರ ತಂದೆಯ ಹೆಸರು ಯಾವುದು?
A) ಫಕೀರ ಸಾಹೇಬ
B) ಗೋವಿಂದ ಭಟ್ಟ
C) ಹಜರತ್ ಇಮಾಮ ಸಾಹೇಬರು
D) ಖಾದರ್ ಷಾ

Answer:
C)
ಹಜರತ್ ಇಮಾಮ ಸಾಹೇಬರು

4. ಶರೀಫ ಸಾಹೇಬರ ಗುರು ಯಾರು?
A) ಸರ್ಪಭೂಷಣ ಶಿವಯೋಗಿ
B) ಖಾದರ್ ಷಾ
C) ಅಲ್ಲಮಪ್ರಭು
D) ಗುರು ಗೋವಿಂದ ಭಟ್ಟರು

Answer:
D)
ಗುರು ಗೋವಿಂದ ಭಟ್ಟರು

5. ಶರೀಫ ಸಾಹೇಬರು ಕೆಲವು ಕಾಲ ಯಾವ ವೃತ್ತಿಯಲ್ಲಿ ಕೆಲಸ ಮಾಡಿದರು?
A) ವೈದ್ಯರು
B) ರೈತರು
C) ಕನ್ನಡ ಶಿಕ್ಷಕರು
D) ವ್ಯಾಪಾರಿಗಳು

Answer:
C)
ಕನ್ನಡ ಶಿಕ್ಷಕರು

6. ಶರೀಫ ಸಾಹೇಬರ ಪತ್ನಿಯ ಹೆಸರು ಯಾವುದು?
A) ಹಾಜುಮ್
B) ಬಸಮ್ಮ
C) ಫಾತಿಮಾ
D) ಆಯಿಷಾ

Answer:
C)
ಫಾತಿಮಾ

7. ಶರೀಫ ಸಾಹೇಬರ ಗುರುಗಳು ಯಾವ ಗುಣಕ್ಕೆ ಪ್ರಸಿದ್ಧರಾಗಿದ್ದರು?
A) ಐಶ್ವರ್ಯಕ್ಕೆ
B) ಯುದ್ಧಕಲೆಗೆ
C) ಜಾತಿ-ಮತ ಭೇದವಿಲ್ಲದ ಉದಾರ ಮನೋಭಾವಕ್ಕೆ
D) ವ್ಯಾಪಾರಕ್ಕೆ

Answer:
C)
ಜಾತಿಮತ ಭೇದವಿಲ್ಲದ ಉದಾರ ಮನೋಭಾವಕ್ಕೆ

8. ಶರೀಫ ಸಾಹೇಬರ ಹಾಡುಗಳನ್ನು ಬರೆದುಕೊಳ್ಳುತ್ತಿದ್ದವರು ಯಾರು?
A) ಗೋವಿಂದ ಭಟ್ಟರು
B) ಕುಂಬಾರ ಮುದುಕಪ್ಪ
C) ಫಕೀರ ಸಾಹೇಬರು
D) ಬಸವಣ್ಣ

Answer:
B)
ಕುಂಬಾರ ಮುದುಕಪ್ಪ

9. ಶಿಶುನಾಳ ಶರೀಫ ಸಾಹೇಬರು ಯಾವ ವರ್ಷದಲ್ಲಿ ನಿಧನರಾದರು?
A) 1885
B) 1887
C) 1889
D) 1895

Answer:
C) 1889

10. ಶಿಶುನಾಳ ಶರೀಫ ಸಾಹೇಬರನ್ನು ಯಾವ ಹೆಸರಿನಿಂದ ಕರೆಯಲಾಗುತ್ತದೆ?
A) ಕನ್ನಡದ ಕಾಳಿದಾಸ
B) ಕರ್ನಾಟಕದ ವಾಲ್ಮೀಕಿ
C) ಕರ್ನಾಟಕದ ಕಬೀರ
D) ಕನ್ನಡದ ಭರತ

Answer:
C)
ಕರ್ನಾಟಕದ ಕಬೀರ

11. ಶರೀಫ ಸಾಹೇಬರ ಸಾಹಿತ್ಯದ ಪ್ರಮುಖ ಸಂದೇಶ ಯಾವುದು?
A) ಯುದ್ಧ ಮತ್ತು ಶೌರ್ಯ
B) ರಾಜಕೀಯ
C) ಮಾನವತೆ ಮತ್ತು ಧಾರ್ಮಿಕ ಸಾಮರಸ್ಯ
D) ವ್ಯಾಪಾರ ಮತ್ತು ಕೃಷಿ

Answer:
C)
ಮಾನವತೆ ಮತ್ತು ಧಾರ್ಮಿಕ ಸಾಮರಸ್ಯ

12. ಶರೀಫ ಸಾಹೇಬರ ಅಂತ್ಯಸಂಸ್ಕಾರವನ್ನು ಯಾರು ನೆರವೇರಿಸಿದರು?
A) ಮುಸ್ಲಿಂ ಸಮುದಾಯದವರು ಮಾತ್ರ
B) ಹಿಂದೂ ಸಮುದಾಯದವರು ಮಾತ್ರ
C) ಸರ್ಕಾರ
D) ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಸೇರಿ

Answer:
D)
ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಸೇರಿ

You cannot copy content of this page