SSLC Nudi Kannada Question and Answer -Udara Vairaga
Looking for SSLC /Class 10th Nudi Kannada textbook answers? You can download Chapter 5: Udara Vairaga Questions and Answers PDF, Notes, and Summary here. SSLC /Class 10th Nudi Kannada Padyabhaga solutions follow the Karnataka State Board Syllabus, making it easier for students to revise and score higher in exams.
Karnataka SSLC/Class 10th Nudi Kannada Textbook Answers—Reflections Chapter 5
Udara Vairaga Questions and Answers, Notes, and Summary
Class 10 Nudi Kannada Poem Chapter 5
Udara Vairaga
ಉದರ ವೈರಾಗ್ಯ
Scroll Down to Downlaod Udara Vairaga PDF
ಅ) ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದ ಉತ್ತರಗಳನ್ನು ಬರೆಯಿರಿ.
Question 1.
ಉದರ ವೈರಾಗ್ಯ ಎಂದರೇನು?
Answer:
ಹೊಟ್ಟೆಪಾಡಿಗಾಗಿ ವೈರಾಗ್ಯದ ಸೋಗು ಹಾಕುವುದನ್ನೇ “ಉದರ ವೈರಾಗ್ಯ” ಎನ್ನುವರು.
Question 2.
ಪುರಂದರದಾಸರು ಯಾವುದನ್ನು ಉದರ ವೈರಾಗ್ಯ ಎಂದಿದ್ದಾರೆ? (2018)
Answer:
ಪದ್ಮನಾಭನಲ್ಲಿ ಸ್ವಲ್ಪವೂ ಭಯ, ಭಕ್ತಿಯಿಲ್ಲದೆ ಮಹಾಭಕ್ತನಂತೆ ನಟಿಸುವ ಡಾಂಭಿಕ ಭಕ್ತಿಯನ್ನು ಪುರಂದರದಾಸರು ಉದರ ವೈರಾಗ್ಯ ಎಂದು ಕರೆದಿದ್ದಾರೆ.
Question 3.
ಡಾಂಭಿಕ ಭಕ್ತನ ಮನಸ್ಸು ಯಾವ ಗುಣಗಳಿಂದ ತುಂಬಿದೆ ಎಂದು ಪುರಂದರದಾಸರು ಹೇಳಿದ್ದಾರೆ?
Answer:
ಡಾಂಭಿಕ ಭಕ್ತನ ಮನಸ್ಸು ಮದ, ಮತ್ಸರ, ಕ್ರೋಧ ಮುಂತಾದ ಕೆಟ್ಟಗುಣಗಳಿಂದ ತುಂಬಿದೆ ಎಂದು ಪುರಂದರದಾಸರು ಹೇಳಿದ್ದಾರೆ.
Question 4.
ಪುರಂದರದಾಸರು ಡಾಂಭಿಕ ಭಕ್ತನ ದೇವರ ಕೋಣೆಯನ್ನು ಯಾವುದಕ್ಕೆ ಹೋಲಿಸಿದ್ದಾರೆ?
Answer:
ಪುರಂದರದಾಸರು ಡಾಂಭಿಕ ಭಕ್ತನ ದೇವರ ಕೋಣೆಯನ್ನು ಕಂಚುಗಾರನ ಬಿಡಾರಕ್ಕೆ ಹೋಲಿಸಿದ್ದಾರೆ.
Question 5
ಪುರಂದರದಾಸರ ಪದಗಳ ಅಂಕಿತಯಾವುದು?
Answer:
ಪುರಂದರದಾಸರ ಪದಗಳ ಅಂಕಿತನಾಮ ‘ಪುರಂದರವಿಠಲ’.
ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ.
Question 1.
ಡಾಂಭಿಕನ ಭಕ್ತಿ ಬದಿಯಲ್ಲಿದ್ದವರಿಗೆ ಆಶ್ಚರ್ಯವಾಗುವುದು ಯಾವುದು?
Answer:
ಡಾಂಭಿಕ ಭಕ್ತನು ಉದಯ ಕಾಲದಲ್ಲಿ ಎದ್ದು ನದಿಯಲ್ಲಿ ಮಿಂದು ಗಡಗಡ ನಡುಗುತ್ತ ಹಿಗ್ಗುತ್ತ ಮಹಾಭಕ್ತನಂತೆ ನಟಿಸುತ್ತಾನೆ. ಆದರೆ ಅವನ ಮನದಲ್ಲಿ ಮದ, ಮತ್ಸರ, ಕ್ರೋಧ ಮುಂತಾದ ಕೆಟ್ಟಗುಣಗಳೇ ತುಂಬಿಕೊಂಡಿರುತ್ತವೆ. ಅವನ ಈ ರೀತಿಯ ಭಕ್ತಿ ಬದಿಯಲ್ಲಿದ್ದವರಿಗೆ ಆಶ್ಚರ್ಯವನ್ನುಂಟು ಮಾಡುತ್ತದೆ.
Question 2.
ಪುರಂದರದಾಸರು ಡಾಂಭಿಕ ಭಕ್ತನ ವೈರಾಗ್ಯಶಾಲಿ ಎಂದೆನಿಸುವ ಪೂಜೆಯನ್ನು ಹೇಗೆ ವರ್ಣಿಸಿದ್ದಾರೆ?
Answer:
ಡಾಂಭಿಕ ಭಕ್ತನು ತನ್ನ ಮನೆಯ ದೇವರ ಜಗುಲಿಯ ಮೇಲೆ ಕಂಚು, ಹಿತ್ತಾಳೆ, ತಾಮ್ರಗಳಿಂದ ತಯಾರಿಸಲ್ಪಟ್ಟ ದೇವರ ಪ್ರತಿಮೆಗಳನ್ನು ಜೋಡಿಸಿಟ್ಟಿರುತ್ತಾನೆ. ಆ ಪ್ರತಿಮೆಗಳೆಲ್ಲಾ ಮಿಂಚಬೇಕೆಂದು ಹೆಚ್ಚಿನ ಸಂಖ್ಯೆಯಲ್ಲಿ ದೀಪಗಳನ್ನು ಹಚ್ಚಿರುತ್ತಾನೆ. ಆದರೆ ಆ ದೇವರ ಮೂರ್ತಿಗಳ ಬಗೆಗೆ ಡಾಂಭಿಕ ಭಕ್ತನ ಮನದಲ್ಲಿ ಸ್ವಲ್ಪವೂ ಭಯ, ಭಕ್ತಿಗಳಿರುವುದಿಲ್ಲ. ಹೀಗೆ ಪುರಂದರದಾಸರು ಡಾಂಭಿಕ ಭಕ್ತನ ವೈರಾಗ್ಯಶಾಲಿ ಎಂದೆನಿಸುವ ಪೂಜೆಯನ್ನು ವರ್ಣಿಸಿದ್ದಾರೆ.
Question 3.
ಪುರಂದರದಾಸರು ಡಾಂಭಿಕನ ಭಕ್ತಿಯನ್ನು ನಾಟಕ ಸ್ತ್ರೀಗೆ ಏಕೆ ಹೋಲಿಸಿದ್ದಾರೆ?
Answer:
ಡಾಂಭಿಕ ಭಕ್ತ ತಾನೇ ಪರಮ ವೈರಾಗ್ಯಶಾಲಿ ಭಕ್ತನಂತೆ ನಟಿಸುತ್ತಾನೆ. ಆತನ ಭಕ್ತಿ ಕೇವಲ ನಟನೆಯ ಭಕ್ತಿಯಾಗಿರುತ್ತದೆ. ಆದರೆ ಅವನ ತೋರಿಕೆಯ ಭಕ್ತಿಯನ್ನು ಕಂಡವರು ಈತನೇ ನಿಜವಾದ ಭಕ್ತ. ಈತನ ಸರಿಸಮಾನ ಭಕ್ತ ಮತ್ತೊಬ್ಬನಾರಿಲ್ಲ ಅಂದುಕೊಳ್ಳುತ್ತಾರೆ. ಇದು ಕೇವಲ ನಾಟಕ ಸ್ತ್ರೀಯ ಅಭಿನಯದಂತೆ ಬಯಲು ಡಂಭವಾಗಿರುತ್ತದೆ. ಕೇವಲ ಊಟದ ಮಾರ್ಗದ ಜ್ಞಾನವಾಗಿರುತ್ತದೆ. ಡಾಂಭಿಕನ ಭಕ್ತಿ ಕೇವಲ ಉದರ ವೈರಾಗ್ಯವಾಗಿರುವುದರಿಂದ ಪುರಂದರದಾಸರು ಡಾಂಭಿಕನ ಭಕ್ತಿಯನ್ನು ನಾಟಕ ಸ್ತ್ರೀಗೆ ಹೋಲಿಸಿದ್ದಾರೆ.
Question 4.
ನಿಜವಾಗಿ ಪುರಂದರ ವಿಠಲನನ್ನು ಯಾವಾಗ ಕಾಣಬಹುದು ಎಂದು ಪುರಂದರದಾಸರು ಹೇಳುತ್ತಾರೆ?
Answer:
ನಾನು ಎಂಬುವುದನ್ನು ಬಿಟ್ಟು ಜ್ಞಾನಿಗಳ ಜೊತೆಗೂಡಿ ನಾವು ಬಾಳಬೇಕು. ಜೀವನದಲ್ಲಿ ಯಾವ ತೊಂದರೆಗಳು ಬಂದರೂಎಲ್ಲವೂ ಹರಿ ಪ್ರೇರಣೆ ಎಂದು ಭಾವಿಸಬೇಕು. ಸದಾಕಾಲ ಪುರಂದರವಿಠಲನನ್ನು ಮೌನವಾಗಿ ಧ್ಯಾನಿಸಿ ಕಾರ್ಯ ಪ್ರವೃತ್ತರಾದವರು, ತಮ್ಮ ಕಾರ್ಯದಲ್ಲಿ ನಿಜವಾದ ಪುರಂದರವಿಠಲನನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಪುರಂದರದಾಸರು ಹೇಳಿದ್ದಾರೆ.
ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಗಳನ್ನು ಬರೆಯಿರಿ.
Question 1.
ಪುರಂದರದಾಸರ ಕೀರ್ತನೆಯಲ್ಲಿ ಡಂಭಾಚಾರದ ಭಕ್ತಿಯ ಸ್ಪಷ್ಟ ಚಿತ್ರಣವು ಹೇಗೆ ಚಿತ್ರಿತವಾಗಿದೆ?
Answer:
ಡಾಂಭಿಕ ಭಕ್ತನು ಕೇವಲ ತನ್ನ ಹೊಟ್ಟೆಪಾಡಿಗಾಗಿ ನಟನೆಯ ಭಕ್ತಿಯನ್ನು ಪ್ರದರ್ಶಿಸುತ್ತಾನೆ. ಆತ ಉದಯ ಕಾಲದಲ್ಲಿ ಎದ್ದು ನದಿಯಲಿ ಮಿಂದೆನೆಂದು ಹಿಗ್ಗುತ್ತಾನೆ. ಆತನ ಮನೆಯ ದೇವರ ಕೋಣೆ ಕಂಚುಗಾರನ ಬಿಡಾರಕ್ಕೆ ಸಮಾನವಾಗಿರುತ್ತದೆ. ದೇವರ ಮೂರ್ತಿಗಳನ್ನು ಆತ ಸರಿಯಾಗಿ ಜೋಡಿಸಿಟ್ಟು ಅವೆಲ್ಲ ಹೊಳೆಯಬೇಕೆಂದು ಹೆಚ್ಚಿನ ಸಂಖ್ಯೆಯಲ್ಲಿ ದೀಪಗಳನ್ನು ಹಚ್ಚಿರುತ್ತಾನೆ.
ಆತ ಕೇವಲ ವಂಚನೆಯಿಂದಲೇ ದೇವರನ್ನು ಪೂಜಿಸುತ್ತಾನೆ. ಆತನ ಕೈಯಲ್ಲಿ ಜಪಮಣಿ ಇರುತ್ತದೆ. ಬಾಯಲ್ಲಿ ಮಂತ್ರಪಠಣವಿರುತ್ತದೆ. ಮುಖದ ಮೇಲೆ ಅರಿವೆಯ ಮುಸುಕು ಹಾಕಿಕೊಂಡು ಮನದಲ್ಲಿ ಪರಸತಿಯರ ಗುಣಗಾನವಿರುತ್ತದೆ. ಹೀಗೆ ಪುರಂದರದಾಸರು ಡಂಭಾಚಾರದ ಭಕ್ತಿಯ ಸ್ಪಷ್ಟ ಚಿತ್ರಣವನ್ನು ಈ ಕೀರ್ತನೆಯಲ್ಲಿ ಚಿತ್ರಿಸಿದ್ದಾರೆ.
Question 2.
ಪುರಂದರದಾಸರು ಕಪಟ ಭಕ್ತಿಯ ಆರಾಧಕರನ್ನು ಹೇಗೆ ಅಣಕಿಸಿ ಅವಹೇಳನ ಮಾಡಿದ್ದಾರೆ?
Answer:
ಡಾಂಭಿಕ ಭಕ್ತರ ತೋರಿಕೆಯ ಭಕ್ತಿ ಪ್ರದರ್ಶನವನ್ನು ಪುರಂದರದಾಸರು ಉದರ ವೈರಾಗ್ಯ ಹೊಟ್ಟೆಪಾಡಿಗಾಗಿ ಮಾಡುವ ಸೋಗಿನ ನಾಟಕ ಎಂದು ಕರೆದಿದ್ದಾರೆ. ದಾಸರು ಈ ಡಾಂಭಿಕ ಭಕ್ತನ ಮನೆಯ ದೇವರಕೋಣೆಯನ್ನು ಕಂಚುಗಾರನ ಬಿಡಾರಕ್ಕೆ ಹೋಲಿಸಿದ್ದಾರೆ. ಕಂಚುಗಾರನಿಗೆ ಆ ಮೂರ್ತಿಗಳ ಮೇಲೆ ಯಾವುದೇ ರೀತಿಯ ಭಯ, ಭಕ್ತಿ ಇರುವುದಿಲ್ಲ. ಅವು ಕೇವಲ ಆತನಿಗೆ ಮಾರಾಟದ ವಸ್ತುಗಳಾಗಿರುತ್ತವೆ. ಅದೇ ರೀತಿ ಡಾಂಭಿಕ ಭಕ್ತ ತನ್ನ ಮನೆಯ ಕೋಣೆಯಲ್ಲಿ ದೇವರ ಮೂರ್ತಿಗಳನ್ನು ವ್ಯವಸ್ಥಿತವಾಗಿ ಜೋಡಿಸಿಟ್ಟು ಅವೆಲ್ಲ ಮಿಂಚಬೇಕೆಂದು ಬಲು ದೀಪಗಳನ್ನು ಹಚ್ಚಿರುತ್ತಾನೆ. ಮೋಸದಿಂದಲೇ ಪೂಜೆ ಮಾಡಿ ಪರಮ ವೈರಾಗ್ಯಶಾಲಿ ಭಕ್ತನೆನಿಸಿಕೊಳ್ಳುತ್ತಾನೆ. ಹೀಗೆ ಪುರಂದರದಾಸರು ಕಪಟ ಭಕ್ತಿಯ ಆರಾಧಕರನ್ನು ಅಣಕಿಸಿ ಅವಹೇಳನ ಮಾಡಿದ್ದಾರೆ.
ಈ) ಕೆಳಗಿನ ಸಾಲುಗಳ ಸ್ವಾರಸ್ಯವನ್ನು ವಿವರಸಿ.
Question 1.
” ಕರದೊಳು ಜಪಮಣಿ ಬಾಯೊಳು ಮಂತ್ರವು”
Answer:
ಪದ್ಯದ ಹೆಸರು: ಉದರ ವೈರಾಗ್ಯ.
ಕವಿಗಳ ಹೆಸರು: ಪುರಂದರದಾಸರು.
ಸಂದರ್ಭ: ಡಾಂಭಿಕ ಭಕ್ತನ ಸೋಗಿನ ಭಕ್ತಿಯ ಬಗೆಗೆ ಹೇಳುವಾಗು ದಾಸರು ಈ ಮಾತನ್ನು ನುಡಿದಿದ್ದಾರೆ.
ವಿವರಣೆ: ಡಾಂಭಿಕ ಭಕ್ತರು ತಮ್ಮ ಹೊಟ್ಟೆಪಾಡಿಗಾಗಿ ಸೋಗಿನ ಭಕ್ತಿ ಪ್ರದರ್ಶನ ಮಾಡುತ್ತಾರೆ. ಅವರು ಕೈಯಲ್ಲಿ ಜಪಮಣಿ ಹಿಡಿದಿರುತ್ತಾರೆ. ಬಾಯಿಂದ ಮಂತ್ರವನ್ನು ಪಠಿಸುತ್ತಾರೆ. ಇದು ಕೇವಲ ಡಂಭಾಚಾರದ ಭಕ್ತಿಯಾಗಿರುತ್ತದೆ ಎಂದು ದಾಸರು ಹೇಳಿದ್ದಾರೆ.
Question 2.
“ಪರಸತಿ ಪರಧನಕಾಗಿ ಚಿಂತಿಸುತ”
Answer:
ಪದ್ಯದ ಹೆಸರು: ಉದರ ವೈರಾಗ್ಯ.
ಕವಿಗಳ ಹೆಸರು: ಪುರಂದರದಾಸರು.
ಸಂದರ್ಭ: ಡಾಂಭಿಕ ಭಕ್ತನ ಸೋಗಿನ ಭಕ್ತಿಯ ಬಗೆಗೆ ಹೇಳುವಾಗು ದಾಸರು ಈ ಮಾತನ್ನು ನುಡಿದಿದ್ದಾರೆ.
ವಿವರಣೆ: ಡಾಂಭಿಕ ಭಕ್ತರು ಸೋಗಿನ ಭಕ್ತಿ ಪ್ರದರ್ಶಿಸುತ್ತಾರೆ. ಅವರು ಕೈಯಲ್ಲಿ ಜಪಮಣಿ ಹಿಡಿದು ಬಾಯಿಂದ ಮಂತ್ರ ಪಠಿಸುತ್ತಾರೆ.
ಮುಖದ ಮೇಲೆ ಅರಿವೆಯ ಮುಸುಕು ಹಾಕಿರುತ್ತಾರೆ. ಮನದಲಿ ಮಾತ್ರ ಪರಸತಿ, ಪರಧನಕ್ಕಾಗಿ ಚಿಂತಿಸುತ್ತ ಮೋಸದ ಭಕ್ತಿ ಪ್ರದರ್ಶನ ಮಾಡುತ್ತರೆಂದು ದಾಸರು ಹೇಳಿದ್ದಾರೆ.
Question 3.
“ನಾನು ಎಂಬುದು ಬಿಡದೆ, ಅಜ್ಞಾನಿಗಳೊಡಗೂಡಿ”
Answer:
ಪದ್ಯದ ಹೆಸರು: ಉದರ ವೈರಾಗ್ಯ.
ಹೆಸರು: ಪುರಂದರದಾಸರು.
ಸಂದರ್ಭ: ಪುರಂದರದಾಸರು ನಮ್ಮನ್ನು ಉದ್ದೇಶಿಸಿ ಈ ಮಾತನ್ನು ನುಡಿದಿದ್ದಾರೆ.
ವಿವರಣೆ: ನಾನು, ನಾನು ಎಂಬ ಅಹಂಕಾರವನ್ನು ಬಿಟ್ಟು, ನಾವು ಜ್ಞಾನಿಗಳ ಜೊತೆಗೂಡಬೇಕು. ನಮ್ಮ ಜೀವನವೇ ಹರಿ ಪ್ರೇರಣೆಯ ಒಂದು ಅಂಗವೆಂದು ಭಾವಿಸಬೇಕೆಂದು ದಾಸರು ಹೇಳಿದ್ದಾರೆ.
Question 4.
“ನಾಟಕ ಸ್ತ್ರೀಯಂತೆ ಬಯಲಡಂಭವತೋರಿ”
Answer:
ಪದ್ಯದ ಹೆಸರು: ಉದರ ವೈರಾಗ್ಯ.
ಕವಿಗಳ ಹೆಸರು: ಪುರಂದರದಾಸರು.
ಸಂದರ್ಭ: ಡಾಂಭಿಕ ಭಕ್ತನ ಭಕ್ತಿ ಪ್ರದರ್ಶನವನ್ನು ವಿಡಂಭಿಸುತ್ತ ದಾಸರು ಈ ಮಾತನ್ನು ನುಡಿದಿದ್ದಾರೆ.
ವಿವರಣೆ: ಡಾಂಭಿಕ ಭಕ್ತರು ಮಹಾಭಕ್ತರಂತೆ ನಟಿಸುತ್ತಾರೆ. ಅವರ ಭಕ್ತಿ ಕೇವಲ ತೋರಿಕೆಯ ಭಕ್ತಿಯಾಗಿರುತ್ತದೆ. ಇಂತಹವರನ್ನು ಜನರು ಈತನೇ ನಿಜವಾದ ಭಕ್ತ ಎನ್ನುತ್ತಾರೆ. ಆದರೆ ಈತನ ಭಕ್ತಿ ನಾಟಕ ಸ್ತ್ರೀಯಂತೆ ಮೋಸದ ಭಕ್ತಿಯಾಗಿರುತ್ತದೆ ಎಂದು ದಾಸರು ಹೇಳಿದ್ದಾರೆ.
Question 5.
“ವಂಚನೆಯಿಂದಲಿ ಪೂಜೆ ಮಾಡುವುದು.”
Answer:
ಪದ್ಯದ ಹೆಸರು: ಉದರ ವೈರಾಗ್ಯ.
ಕವಿಗಳ ಹೆಸರು: ಪುರಂದರದಾಸರು.
ಸಂದರ್ಭ: ಡಾಂಭಿಕ ಭಕ್ತನ ಭಕ್ತಿಯನ್ನು ವಿಡಂಭಿಸುತ್ತ ದಾಸರು ಈ ಮಾತನ್ನು ನುಡಿದಿದ್ದಾರೆ.
ವಿವರಣೆ: ಪುರಂದರದಾಸರು ಡಾಂಭಿಕ ಭಕ್ತನ ಮನೆಯನ್ನು ಕಂಚುಗಾರನ ಬಿಡಾರಕ್ಕೆ ಹೋಲಿಸಿದ್ದಾರೆ. ಕಂಚುಗಾರ ತನ್ನ ಬಿಡಾರದಲ್ಲಿ ಕಂಚು, ತಾಮ್ರ, ಹಿತ್ತಾಳೆಗಳ ವಿಗ್ರಹಗಳನ್ನು ಜೋಡಿಸಿರುವಂತೆ ಡಾಂಭಿಕ ಭಕ್ತರು ತಮ್ಮ ಮನೆಯ ದೇವರ ಕೋಣೆಯಲ್ಲಿ ದೇವರ ಪ್ರತಿಮೆಗಳನ್ನು ಸಾಲಾಗಿ ಜೋಡಿಸಿ ಅವೆಲ್ಲ ಮಿಂಚಬೇಕೆಂದು ಹಲವಾರು ದೀಪಗಳನ್ನು ಹಚ್ಚಿರುತ್ತಾರೆ. ಹೀಗೆ ವಂಚನೆಯಿಂದಲೇ ಅವರು ಪೂಜೆ ಮಾಡುತ್ತಾರೆಂದು ದಾಸರು ಹೇಳಿದ್ದಾರೆ.
ಉದರ ವೈರಾಗ್ಯ – ಸಾರಾಂಶ
Summary
ಪುರಂದರದಾಸರ “ಉದರ ವೈರಾಗ್ಯ” ಎಂಬ ಕೀರ್ತನೆಯು ಸಮಾಜದಲ್ಲಿರುವ ಡಾಂಭಿಕ ಭಕ್ತರನ್ನು ತೀವ್ರವಾಗಿ ಟೀಕಿಸುವ ಒಂದು ಅರ್ಥಪೂರ್ಣ ಕೃತಿ. ಈ ಕೀರ್ತನೆಯಲ್ಲಿ ಕವಿ ನಿಜವಾದ ಭಕ್ತಿ ಮತ್ತು ನಕಲಿ ಭಕ್ತಿಯ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಚಿತ್ರಿಸಿದ್ದಾರೆ.
ಕೀರ್ತನೆಯ ಆರಂಭದಲ್ಲಿ, ಹೊಟ್ಟೆಪಾಡಿಗಾಗಿ ವೈರಾಗ್ಯದ ವೇಷ ಧರಿಸುವವರನ್ನು ಕವಿ ಖಂಡಿಸುತ್ತಾರೆ. ಅವರು ಬೆಳಿಗ್ಗೆ ಬೇಗನೆ ಎದ್ದು ನದಿಯಲ್ಲಿ ಸ್ನಾನ ಮಾಡಿದಂತೆ ತೋರಿಸಿಕೊಂಡು, ಒಳಗೆ ಅಹಂಕಾರ, ಅಸೂಯೆ ಮತ್ತು ಕೋಪವನ್ನು ತುಂಬಿಕೊಂಡಿರುತ್ತಾರೆ. ಇಂತಹವರು ತಮ್ಮ ನಡವಳಿಕೆಯಿಂದ ಇತರರನ್ನು ಆಶ್ಚರ್ಯಗೊಳಿಸಲು ಪ್ರಯತ್ನಿಸುತ್ತಾರೆ.
ಮುಂದೆ, ಕಂಚಿನ ಮತ್ತು ಹಿತ್ತಾಳೆಯ ಪ್ರತಿಮೆಗಳನ್ನು ಅಲಂಕರಿಸಿ, ಅನೇಕ ದೀಪಗಳನ್ನು ಹಚ್ಚಿ, ಕೇವಲ ಪ್ರದರ್ಶನಕ್ಕಾಗಿ ಪೂಜೆ ಮಾಡುವವರನ್ನು ಕವಿ ಟೀಕಿಸುತ್ತಾರೆ. ಕೈಯಲ್ಲಿ ಜಪಮಾಲೆ ಹಿಡಿದು, ಬಾಯಲ್ಲಿ ಮಂತ್ರಗಳನ್ನು ಜಪಿಸುತ್ತಾ, ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನು ಇಟ್ಟುಕೊಂಡು ತಾವು ಮಹಾ ವೈರಾಗಿಗಳು ಎಂದು ತೋರಿಸಿಕೊಳ್ಳುವವರ ನಕಲಿ ಭಕ್ತಿಯನ್ನು ಅವರು ಬಯಲಿಗೆಳೆಯುತ್ತಾರೆ.
ಪುರಂದರದಾಸರು, ನಿಜವಾದ ಭಕ್ತಿ ಎಂದರೆ ಡಾಂಭಿಕತೆ ಅಲ್ಲ, ಬದಲಿಗೆ “ನಾನು” ಎಂಬ ಅಹಂಕಾರವನ್ನು ತ್ಯಜಿಸಿ, ಜ್ಞಾನಿಗಳೊಂದಿಗೆ ಸೇರಿ, ಎಲ್ಲವೂ ಹರಿಯ ಪ್ರೇರಣೆಯಿಂದ ನಡೆಯುತ್ತದೆ ಎಂಬ ಭಾವನೆಯೊಂದಿಗೆ ಜೀವನ ನಡೆಸುವುದು ಎಂದು ತಿಳಿಸುತ್ತಾರೆ. ಭಗವಂತನ ನಿಜವಾದ ಅನುಭವವಿಲ್ಲದೆ ಮಾಡುವ ಎಲ್ಲಾ ಕಾರ್ಯಗಳೂ ವ್ಯರ್ಥವೆಂದು ಅವರು ಸಾರುತ್ತಾರೆ.
ಈ ಕೀರ್ತನೆಯ ಮೂಲಕ ಪುರಂದರದಾಸರು ಸಮಾಜದಲ್ಲಿನ ಕಪಟ ಭಕ್ತಿ, ಆಡಂಬರ ಮತ್ತು ತೋರಿಕೆಯ ವೈರಾಗ್ಯವನ್ನು ಖಂಡಿಸಿ, ಸರಳತೆ, ವಿನಯ ಮತ್ತು ನಿಜವಾದ ಭಕ್ತಿಯ ಮಹತ್ವವನ್ನು ಪ್ರತಿಪಾದಿಸಿದ್ದಾರೆ.
ಭಾಷಾಭ್ಯಾಸ
ಅ) ಕೆಳಗಿನ ಪದಗಳನ್ನು ಬಿಡಿಸಿ ಬರೆದು, ಸಂಧಿಯನ್ನು ಹೆಸರಿಸಿ.
- ವೈರಾಗ್ಯ + ಇದು = ವೈರಾಗ್ಯವಿದು (‘ವ’ ಕಾರಾಗಮ ಸಂಧಿ)
- ನದಿ + ಒಳು = ನದಿಯೊಳು (‘ಯ ‘ಕಾರಾಗಮ ಸಂಧಿ)
- ಪ್ರೇರಣೆ + ಎಂದು = ಪ್ರೇರಣೆಯೆಂದು (‘ಯ’ಕಾರಾಗಮ ಸಂಧಿ)
- ಏನು + ಎಲ್ಲಕೆ = ಏನೆಲ್ಲಕೆ (ಲೋಪ ಸಂಧಿ)
- ಅಂಗಡಿ + ಅಂದದಿ = ಅಂಗಡಿಯಂದದಿ (‘ಯ’ಕಾರಾಗಮ ಸಂಧಿ)
ಆ) ಕೆಳಗಿನ ತದ್ಭವಗಳಿಗೆ ತತ್ಸಮಗಳನ್ನು ಬರೆಯಿರಿ.
- ಪದುಮ – ಪದ
- ಬಕುತಿ – ಭಕ್ತಿ
- ಅಚರಿ – ಆಶ್ಚರ್ಯ
- ಮೂರುತಿ – ಮೂರ್ತಿ
- ಕಜ – ಕಾರ್ಯ
Additional Question and Answer:
Question 1.
ಪುರಂದರದಾಸರು ತಮ್ಮ ಕೀರ್ತನೆಯಲ್ಲಿ ಯಾರನ್ನು ಟೀಕಿಸಿದ್ದಾರೆ?
Answer:
ಪುರಂದರದಾಸರು ತಮ್ಮ ಕೀರ್ತನೆಯಲ್ಲಿ ತೋರಿಕೆಯ ಭಕ್ತಿ ಮತ್ತು ಡಾಂಭಿಕ ವೈರಾಗ್ಯ ಪ್ರದರ್ಶಿಸುವ ಕಪಟ ಭಕ್ತರನ್ನು ಟೀಕಿಸಿದ್ದಾರೆ.
Question 2.
“ಉದರ ವೈರಾಗ್ಯ” ಎಂಬ ಪದದ ಅರ್ಥವೇನು?
Answer:
ಹೊಟ್ಟೆಪಾಡಿಗಾಗಿ ಅಥವಾ ಸ್ವಾರ್ಥಕ್ಕಾಗಿ ತೋರಿಕೆಯ ವೈರಾಗ್ಯವನ್ನು ಪ್ರದರ್ಶಿಸುವುದನ್ನು “ಉದರ ವೈರಾಗ್ಯ” ಎಂದು ಕರೆಯುತ್ತಾರೆ.
Question 3.
ಕಪಟ ಭಕ್ತರ ಮನಸ್ಸಿನಲ್ಲಿ ಯಾವ ದುರ್ಗುಣಗಳು ತುಂಬಿರುತ್ತವೆ?
Answer:
ಕಪಟ ಭಕ್ತರ ಮನಸ್ಸಿನಲ್ಲಿ ಅಹಂಕಾರ, ಅಸೂಯೆ, ಕ್ರೋಧ ಮತ್ತು ಮದ ಮುಂತಾದ ದುರ್ಗುಣಗಳು ತುಂಬಿರುತ್ತವೆ.
Question 4.
ಕಂಚು ಮತ್ತು ಹಿತ್ತಾಳೆಯ ಪ್ರತಿಮೆಗಳನ್ನು ಅಲಂಕರಿಸಿ ಪೂಜೆ ಮಾಡುವುದರ ಮೂಲಕ ಕವಿ ಏನನ್ನು ಸೂಚಿಸಿದ್ದಾರೆ?
Answer:
ಕವಿ ಆಡಂಬರ ಮತ್ತು ತೋರಿಕೆಯ ಭಕ್ತಿಯನ್ನು ಸೂಚಿಸಿದ್ದಾರೆ.
Question 5.
ಕೈಯಲ್ಲಿ ಜಪಮಾಲೆ ಮತ್ತು ಬಾಯಲ್ಲಿ ಮಂತ್ರವಿದ್ದರೂ ನಿಜವಾದ ಭಕ್ತಿ ಏಕೆ ಸಾಧ್ಯವಾಗುವುದಿಲ್ಲ?
Answer:
ಮನಸ್ಸು ಶುದ್ಧವಾಗಿರದೆ, ಕೆಟ್ಟ ಆಲೋಚನೆಗಳಿಂದ ತುಂಬಿದ್ದರೆ ನಿಜವಾದ ಭಕ್ತಿ ಸಾಧ್ಯವಾಗುವುದಿಲ್ಲ.
Question 6.
ಪುರಂದರದಾಸರ ಪ್ರಕಾರ ನಿಜವಾದ ವೈರಾಗ್ಯ ಎಂದರೇನು?
Answer:
ಅಹಂಕಾರವನ್ನು ತ್ಯಜಿಸಿ, ಭಗವಂತನನ್ನು ಮನಃಪೂರ್ವಕವಾಗಿ ಆರಾಧಿಸುವುದೇ ನಿಜವಾದ ವೈರಾಗ್ಯ.
Question 7.
“ನಾಟಕ ಸ್ತ್ರೀಯಂತೆ ಬಯಲ ಡಂಭವ ತೋರಿ” ಎಂಬ ಸಾಲಿನ ಅರ್ಥವೇನು?
Answer:
ಕೆಲವರು ಕೇವಲ ಜನರ ಗಮನ ಸೆಳೆಯಲು ಮತ್ತು ಹೊಗಳಿಕೆ ಪಡೆಯಲು ಆಡಂಬರದ ಭಕ್ತಿಯನ್ನು ಪ್ರದರ್ಶಿಸುತ್ತಾರೆ ಎಂಬ ಅರ್ಥ.
Question 8.
ಪುರಂದರದಾಸರು ನಿಜವಾದ ಭಕ್ತರಿಗೆ ಯಾವ ಸಲಹೆಯನ್ನು ನೀಡಿದ್ದಾರೆ?
Answer:
“ನಾನು” ಎಂಬ ಅಹಂಕಾರವನ್ನು ಬಿಟ್ಟು, ಜ್ಞಾನಿಗಳ ಸಂಗಡ ಸೇರಿ, ಎಲ್ಲವೂ ಹರಿಯ ಪ್ರೇರಣೆಯಿಂದ ನಡೆಯುತ್ತದೆ ಎಂದು ಭಾವಿಸಿ ಬದುಕಬೇಕು ಎಂದು ಸಲಹೆ ನೀಡಿದ್ದಾರೆ.
Question 9.
“ಪುರಂದರವಿಠಲ” ಎಂಬುದು ಏನು?
Answer:
“ಪುರಂದರವಿಠಲ” ಎಂಬುದು ಪುರಂದರದಾಸರ ಕೀರ್ತನೆಗಳಲ್ಲಿ ಬಳಸಿದ ಅಂಕಿತನಾಮವಾಗಿದೆ.
Question 10.
ಪುರಂದರದಾಸರನ್ನು ಏಕೆ “ಕರ್ನಾಟಕ ಸಂಗೀತ ಪಿತಾಮಹ” ಎಂದು ಕರೆಯುತ್ತಾರೆ?
Answer:
ಕರ್ನಾಟಕ ಸಂಗೀತಕ್ಕೆ ಅಪಾರ ಕೊಡುಗೆ ನೀಡಿದ ಕಾರಣದಿಂದ ಅವರನ್ನು “ಕರ್ನಾಟಕ ಸಂಗೀತ ಪಿತಾಮಹ” ಎಂದು ಕರೆಯುತ್ತಾರೆ.
Multiple Choice Question
- “ಉದರ ವೈರಾಗ್ಯ” ಪದ್ಯದ ಕವಿ ಯಾರು?
A) ಕನಕದಾಸರು
B) ಪುರಂದರದಾಸರು
C) ಬಸವಣ್ಣ
D) ಅಕ್ಕಮಹಾದೇವಿ
Answer:
B) ಪುರಂದರದಾಸರು - “ಉದರ ವೈರಾಗ್ಯ” ಪದ್ಯವು ಯಾವ ಸಾಹಿತ್ಯ ಪ್ರಕಾರಕ್ಕೆ ಸೇರಿದೆ?
A) ವಚನ
B) ಗದ್ಯ
C) ಕೀರ್ತನೆ
D) ಮಹಾಕಾವ್ಯ
Answer:
C) ಕೀರ್ತನೆ - ಪುರಂದರದಾಸರು ಯಾವ ರೀತಿಯ ಭಕ್ತರನ್ನು ಟೀಕಿಸಿದ್ದಾರೆ?
A) ನಿಜವಾದ ಭಕ್ತರನ್ನು
B) ಜ್ಞಾನಿಗಳನ್ನು
C) ಡಾಂಭಿಕ ಭಕ್ತರನ್ನು
D) ಸಂತರನ್ನು
Answer:
C) ಡಾಂಭಿಕ ಭಕ್ತರನ್ನು - “ಉದರ ವೈರಾಗ್ಯ” ಎಂದರೆ ಏನು?
A) ನಿಜವಾದ ವೈರಾಗ್ಯ
B) ಜ್ಞಾನದ ಮಾರ್ಗ
C) ಹೊಟ್ಟೆಪಾಡಿಗಾಗಿ ತೋರಿಕೆಯ ವೈರಾಗ್ಯ
D) ಭಕ್ತಿಯ ಮಾರ್ಗ
Answer:
C) ಹೊಟ್ಟೆಪಾಡಿಗಾಗಿ ತೋರಿಕೆಯ ವೈರಾಗ್ಯ - ಕಪಟ ಭಕ್ತರ ಒಳಗೆ ಯಾವ ಗುಣಗಳು ತುಂಬಿರುತ್ತವೆ ಎಂದು ಕವಿ ಹೇಳಿದ್ದಾರೆ?
A) ಪ್ರೀತಿ ಮತ್ತು ಕರುಣೆ
B) ಮದ, ಮತ್ಸರ ಮತ್ತು ಕ್ರೋಧ
C) ಸತ್ಯ ಮತ್ತು ಧರ್ಮ
D) ದಯೆ ಮತ್ತು ಕ್ಷಮೆ
Answer:
B) ಮದ, ಮತ್ಸರ ಮತ್ತು ಕ್ರೋಧ - ಕಪಟ ಭಕ್ತರು ಬೆಳಿಗ್ಗೆ ಎದ್ದು ಏನು ಮಾಡಿದಂತೆ ತೋರಿಸುತ್ತಾರೆ?
A) ಧ್ಯಾನ ಮಾಡಿದಂತೆ
B) ಪೂಜೆ ಮಾಡಿದಂತೆ
C) ನದಿಯಲ್ಲಿ ಸ್ನಾನ ಮಾಡಿದಂತೆ
D) ಯಜ್ಞ ಮಾಡಿದಂತೆ
Answer:
C) ನದಿಯಲ್ಲಿ ಸ್ನಾನ ಮಾಡಿದಂತೆ - ಕಂಚು ಮತ್ತು ಹಿತ್ತಾಳೆಯ ಪ್ರತಿಮೆಗಳನ್ನು ಅಲಂಕರಿಸಿ ಪೂಜೆ ಮಾಡುವುದರಿಂದ ಏನನ್ನು ಸೂಚಿಸಲಾಗಿದೆ?
A) ನಿಜವಾದ ಭಕ್ತಿ
B) ಜ್ಞಾನ
C) ಆಡಂಬರ ಮತ್ತು ತೋರಿಕೆಯ ಭಕ್ತಿ
D) ತ್ಯಾಗ
Answer:
C) ಆಡಂಬರ ಮತ್ತು ತೋರಿಕೆಯ ಭಕ್ತಿ - ಕಪಟ ಭಕ್ತರ ಕೈಯಲ್ಲಿ ಏನಿರುತ್ತದೆ?
A) ಪುಸ್ತಕ
B) ಜಪಮಣಿ
C) ಹೂವು
D) ದೀಪ
Answer:
B) ಜಪಮಣಿ - ಬಾಯಲ್ಲಿ ಏನಿರುತ್ತದೆ ಎಂದು ಕವಿ ಹೇಳಿದ್ದಾರೆ?
A) ಹಾಡು
B) ಶ್ಲೋಕ
C) ಮಂತ್ರ
D) ಉಪದೇಶ
Answer:
C) ಮಂತ್ರ - ಮನಸ್ಸಿನಲ್ಲಿ ಕಪಟ ಭಕ್ತರು ಯಾರನ್ನು ಸ್ಮರಿಸುತ್ತಾರೆ?
A) ಭಗವಂತನನ್ನು
B) ಗುರುಗಳನ್ನು
C) ಪರಸತಿಯರ ಗುಣಗಳನ್ನು
D) ಜ್ಞಾನಿಗಳನ್ನು
Answer:
C) ಪರಸತಿಯರ ಗುಣಗಳನ್ನು - “ನಾಟಕ ಸ್ತ್ರೀಯಂತೆ ಬಯಲ ಡಂಭವ ತೋರಿ” ಎಂಬುದು ಯಾವುದನ್ನು ಸೂಚಿಸುತ್ತದೆ?
A) ಕಲೆಯನ್ನು
B) ಭಕ್ತಿಯನ್ನು
C) ಆಡಂಬರ ಮತ್ತು ನಟನೆ
D) ಸಂಗೀತವನ್ನು
Answer:
C) ಆಡಂಬರ ಮತ್ತು ನಟನೆ - ಪುರಂದರದಾಸರ ಪ್ರಕಾರ “ನಾನು” ಎಂಬುದನ್ನು ಏನು ಮಾಡಬೇಕು?
A) ಹೆಚ್ಚಿಸಬೇಕು
B) ಗೌರವಿಸಬೇಕು
C) ಬಿಡಬೇಕು
D) ನೆನಪಿಡಬೇಕು
Answer:
C) ಬಿಡಬೇಕು - ನಿಜವಾದ ಭಕ್ತನು ಯಾರೊಂದಿಗೆ ಒಡನಾಡಬೇಕು?
A) ಶ್ರೀಮಂತರೊಂದಿಗೆ
B) ಸ್ನೇಹಿತರೊಂದಿಗೆ
C) ಜ್ಞಾನಿಗಳೊಂದಿಗೆ
D) ರಾಜರೊಂದಿಗೆ
Answer:
C) ಜ್ಞಾನಿಗಳೊಂದಿಗೆ - ಪುರಂದರದಾಸರ ಅಂಕಿತನಾಮ ಯಾವುದು?
A) ಕನಕವಿಠಲ
B) ಆದಿಕೇಶವ
C) ಪುರಂದರವಿಠಲ
D) ಚೆನ್ನಮಲ್ಲಿಕಾರ್ಜುನ
Answer:
C) ಪುರಂದರವಿಠಲ - ಪುರಂದರದಾಸರ ಮೂಲ ಹೆಸರು ಯಾವುದು?
A) ತಿಮ್ಮಪ್ಪ ನಾಯಕ
B) ಶ್ರೀನಿವಾಸ ನಾಯಕ
C) ರಾಮನಾಯಕ
D) ವಿಷ್ಣುನಾಯಕ
Answer:
B) ಶ್ರೀನಿವಾಸ ನಾಯಕ - ಪುರಂದರದಾಸರು ಯಾವ ಶತಮಾನದಲ್ಲಿ ಜೀವಿಸಿದ್ದರು?
A) 12ನೇ ಶತಮಾನ
B) 14ನೇ ಶತಮಾನ
C) 16ನೇ ಶತಮಾನ
D) 18ನೇ ಶತಮಾನ
Answer:
C) 16ನೇ ಶತಮಾನ - ಪುರಂದರದಾಸರನ್ನು ಯಾವ ಬಿರುದಿನಿಂದ ಕರೆಯುತ್ತಾರೆ?
A) ಕವಿಚಕ್ರವರ್ತಿ
B) ಕರ್ನಾಟಕ ಸಂಗೀತ ಪಿತಾಮಹ
C) ವಚನ ಪಿತಾಮಹ
D) ರಾಷ್ಟ್ರಕವಿ
Answer:
B) ಕರ್ನಾಟಕ ಸಂಗೀತ ಪಿತಾಮಹ - ಪುರಂದರದಾಸರ ದೀಕ್ಷಾಗುರು ಯಾರು?
A) ಬಸವಣ್ಣ
B) ರಾಮಾನುಜಾಚಾರ್ಯರು
C) ವ್ಯಾಸರಾಯರು
D) ಮಧ್ವಾಚಾರ್ಯರು
Answer:
C) ವ್ಯಾಸರಾಯರು - ಈ ಕೀರ್ತನೆಯ ಮುಖ್ಯ ಉದ್ದೇಶವೇನು?
A) ಸಂಗೀತ ಕಲಿಸುವುದು
B) ಯುದ್ಧದ ವರ್ಣನೆ
C) ಡಾಂಭಿಕ ಭಕ್ತಿಯನ್ನು ಖಂಡಿಸುವುದು
D) ಪ್ರಕೃತಿ ವರ್ಣನೆ
Answer:
C) ಡಾಂಭಿಕ ಭಕ್ತಿಯನ್ನು ಖಂಡಿಸುವುದು - “ಉದರ ವೈರಾಗ್ಯ” ಪದ್ಯವು ಯಾವ ಮೌಲ್ಯವನ್ನು ಸಾರುತ್ತದೆ?
A) ಸಂಪತ್ತಿನ ಮಹತ್ವ
B) ನಿಜವಾದ ಭಕ್ತಿ ಮತ್ತು ವಿನಯ
C) ಅಧಿಕಾರದ ಮಹತ್ವ
D) ಕೀರ್ತಿಯ ಮಹತ್ವ
Answer:
B) ನಿಜವಾದ ಭಕ್ತಿ ಮತ್ತು ವಿನಯ