SSLC Nudi Kannada Question and Answer -Granthaalayadalli
Looking for SSLC /Class 10th Nudi Kannada textbook answers? You can download Chapter 3: Granthaalayadalli Questions and Answers PDF, Notes, and Summary here. SSLC /Class 10th Nudi Kannada Padyabhaga solutions follow the Karnataka State Board Syllabus, making it easier for students to revise and score higher in exams.
Karnataka SSLC/Class 10th Nudi Kannada Textbook Answers—Reflections Chapter 3
Granthaalayadalli Questions and Answers, Notes, and Summary
Class 10 Nudi Kannada Poem Chapter 3
Granthaalayadalli
ಗ್ರಂಥಾಲಯದಲ್ಲಿ
Scroll Down to Downlaod Granthaalayadalli PDF
ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
Question 1.
ಸಿ.ಪಿ.ಕೆ.ಯವರು ಯಾವುದರ ಅಡಿಯಲ್ಲಿ ತಾನು ಧೂಳು ಕಣವಾಗಿ ಬಿಡುತ್ತೇನೆಂದು ಹೇಳಿದ್ದಾರೆ?
Answer:
ಸಿ.ಪಿ.ಕೆಯವರು ಗ್ರಂಥಾಲಯದಲ್ಲಿ ಜೋಡಿಸಿಟ್ಟಿರುವ ಗ್ರಂಥಗಿರಿ ಪಂಕ್ತಿಗಳ ಅಡಿಯಲ್ಲಿ ತಾನು ಧೂಳು ಕಣವಾಗಿ ಬಿಡುತ್ತೇನೆಂದು ಹೇಳಿದ್ದಾರೆ.
Question 2.
ಕವಿಯು ತನ್ನ ಮತಿ ಎಲ್ಲಿ ಮುದುಡಿ ಹೋಗುತ್ತದೆ ಎಂದಿದ್ದಾರೆ?
Answer:
ಕವಿಯು ತನ್ನ ಮತಿ ಗ್ರಂಥಾಲಯದಲ್ಲಿ ಮುದುಡಿ ಹೋಗುತ್ತದೆ ಎಂದಿದ್ದಾರೆ.
Question 3.
ಅಹಂಕಾರವನ್ನು ನುಚ್ಚು ನೂರಾಗಿಸುವ ತಾಣ ಯಾವುದೆಂದು ಸಿ.ಪಿ.ಕೆಯವರು ಹೇಳಿದ್ದಾರೆ?
Answer:
ಗ್ರಂಥಾಲಯವು ತನ್ನ ಅಹಂಕಾರವನ್ನು ನುಚ್ಚು ನೂರಾಗಿಸುವ ತಾಣವೆಂದು ಸಿ.ಪಿ.ಕೆಯವರು ಹೇಳಿದ್ದಾರೆ.
Question 4.
ಸಿ.ಪಿ.ಕೆಯವರು ಗ್ರಂಥಗಳನ್ನು ಯಾವುದರ ಪಳೆಯುಳಿಕೆ ಎಂದಿದ್ದಾರೆ?
Answer:
ಸಿ.ಪಿ.ಕೆಯವರು ಗ್ರಂಥಗಳನ್ನು
ಅನೇಕಾನೇಕ ಹಿರಿಬಾಳುಗಳ ಪಳೆಯುಳಿಕೆ ಎಂದಿದ್ದಾರೆ.
Question 5.
ಸಿ.ಪಿ.ಕೆ.ಯವರು ಯಾವುದನ್ನು ವಿಶ್ವರೂಪಾವಲೋಕನ ಎಂದಿದ್ದಾರೆ?
Answer:
ಸಿ.ಪಿ.ಕೆ.ಯವರು ಹಲವಾರು ಹಿರಿಬಾಳ ಪಳೆಯುಳಿಕೆಯಾದ ಗ್ರಂಥಗಳ ಮೂಲವನ್ನು ವಿಶ್ವರೂಪಾವಲೋಕನ ಎಂದಿದ್ದಾರೆ.
Question 6.
ಭೀತ ವಿಸ್ಮಿತರಾದ ಕವಿ ಯಾರ ಹಾಗೆ ತತ್ತರಿಸಿದರು?
Answer:
ಭೀತ ವಿಸ್ಮಿತರಾದ ಕವಿ ಪಾರ್ಥನಂತೆ ತತ್ತರಿಸಿದರು.
Question 7.
ಭೀತ ವಿಸ್ಮಿತರಾದ ಕವಿ ಯಾರ ಹಾಗೆ ತತ್ತರಿಸಿದರು?
Answer:
ಭೀತ ವಿಸ್ಮಿತರಾದ ಕವಿ ಪಾರ್ಥನಂತೆ ತತ್ತರಿಸಿದರು.
ಆ) ಕೆಳಗಿನ ಪ್ರಶ್ನೆಗಳಿಗೆ ಎರಡು/ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
Question 1.
ಗ್ರಂಥಾಲಯವನ್ನು ಹೊಕ್ಕಾಗ ಕವಿಗೆ ಆದ ಅನುಭವವನ್ನು ತಿಳಿಸಿ.
Answer:
ಕವಿ ಸಿ. ಪಿ. ಕೆಯವರುಗ್ರಂಥಾಲಯವನ್ನು ಪ್ರವೇಶಿಸಿ ಕಣ್ಣಿನದೃಷ್ಟಿ ಹರಿಸಿದ ಎಲ್ಲ ಕಡೆ ಅವರಿಗೆ ಗ್ರಂಥಗಿರಿ ಪಂಕ್ತಿಗಳು ಇರುವುದು ಕಂಡುಬಂದಿತು. ಆ ಪಂಕ್ತಿಗಳ ಕೆಳಗೆ ತಾನು ಧೂಳು ಕಣವಾಗಿ ನಿಂತಂತೆ ಭಾಸವಾಯಿತು. ಗ್ರಂಥಾಲಯದಲ್ಲಿ ತನ್ನ ಮತಿ ಮುದುಡಿ ಹೋಗಿ, ಅಹಂಕಾರವು ನುಚ್ಚುನೂರಾದಂತೆ ಕವಿಗಳಿಗೆ ಅನುಭವವಾಯಿತು.
Question 2.
ಕವಿ ಸಿ. ಪಿ. ಕೆಯವರು ಗ್ರಂಥಾಲಯದಲ್ಲಿ ಭೀತ ವಿಸ್ಮಿತರಾಗಿ ನಿಂತದ್ದು ಏಕೆ?
Answer:
ಕವಿ ಸಿ. ಪಿ. ಕೆಯವರು ಗ್ರಂಥಾಲಯದಲ್ಲಿರುವ ಗ್ರಂಥಗಿರಿಗಳ ಪಂಕ್ತಿಗಳನ್ನು ನೋಡಿ ಆಶ್ಚರ್ಯಚಕಿತರಾಗುತ್ತಾರೆ. ಹಲವಾರು ಕವಿಗಳ, ಲೇಖಕರ ಕೃತಿಗಳನ್ನು ನೋಡಿ ಅವರಿಗೆ ತನ್ನ ಮತಿ ಮುದುಡಿದಂತೆ, ಅಹಂಕಾರ ನುಚ್ಚುನೂರಾದಂತೆ ಭಾಸವಾಗುತ್ತದೆ. ಹಲವಾರು ಹಿರಿಬಾಳುಗಳ ಪಳೆಯುಳಿಕೆಗಳ ಮೇಳ ಅಲ್ಲಿ ನೆರೆದಂತೆ ಭಾಸವಾಗುತ್ತದೆ. ಆ ಗ್ರಂಥಗಳ ಮೂಲವನ್ನು ಚಿತ್ರಿಸಲು ಪ್ರಯತ್ನಿಸಿದಾಗ ಮಹಾಭಾರತ ಯುದ್ಧದ ಮುನ್ನ ಶ್ರೀಕೃಷ್ಣನ ವಿಶ್ವರೂಪದರ್ಶನವನ್ನು ಕಂಡು ಭೀತ ವಿಸ್ಮಿತನಾದ ಅರ್ಜುನನಂತಹ ಅವಸ್ಥೆ ಸಿ.ಪಿ.ಕೆಯವರದ್ದಾಗಿದೆ.
Question 3.
ಸಿ.ಪಿ.ಕೆಯವರು ‘ಹಿರಿಬಾಳು ಪಳೆಯುಳಿಕೆ’ ಎಂದು ಯಾವುದನ್ನು ಕರೆದಿದ್ದಾರೆ. ಏಕೆ?
Answer:
ಸಿ.ಪಿ.ಕೆಯವರು ಗ್ರಂಥಾಲಯದಲ್ಲಿ ಅಸಂಖ್ಯ ಕವಿ, ಲೇಖಕರು ಬರೆದಿರುವ ಸಹಸ್ರಾರು ಪುಸ್ತಕಗಳನ್ನು ನೋಡಿ ಬೆರಗಾಗುತ್ತಾರೆ. ಆ ಪುಸ್ತಕಗಳನ್ನು ನೋಡುತ್ತಿದ್ದಂತೆಯೇ ಕವಿಗಳ ಅಹಂಕಾರ ನುಚ್ಚುನೂರಾಗಿ ಅಲ್ಲಿ ಹಲವಾರು ಹಿರಿಬಾಳು ಪಳೆಯುಳಿಕೆ ಇರುವಂತೆ ಭಾಸವಾಗುತ್ತದೆ. ಆ ಹಿರಿಯ ಕವಿಗಳ ಸಾಧನೆ ಮತ್ತು ಕೃತಿಗಳನ್ನು ಕಂಡು ಕವಿ ಸಿ.ಪಿ.ಕೆಯವರು ಹಳೆಯ ಗ್ರಂಥಗಳನ್ನು ಹಿರಿಬಾಳುಗಳ ಪಳೆಯುಳಿಕೆ ಎಂದು ಕರೆದಿದ್ದಾರೆ.
ಇ) ಕೆಳಗಿನ ಹೇಳಿಕೆಗಳ ಸಂದರ್ಭವನ್ನು ಸ್ವಾರಸ್ಯ ಸಹಿತ ವಿವರಿಸಿ.
Question 1.
“ಕಣ್‌ದಿಟ್ಟಿ ಹರಿದತ್ತ ಗ್ರಂಥಗಿರಿ ಪಂಕ್ತಿಗಳು”
Answer:
ಪದ್ಯದ ಹೆಸರು : ಗ್ರಂಥಾಲಯದಲ್ಲಿ.
ಕವಿಗಳ ಹೆಸರು: ಸಿ. ಪಿ. ಕೃಷ್ಣಕುಮಾರ್.
ಸಂದರ್ಭ: ಕವಿಗಳು ಈ ಮಾತನ್ನು ನಮಗೆ ನುಡಿದಿದ್ದಾರೆ.
ವಿವರಣೆ: ಕವಿ ಸಿ. ಪಿ. ಕೆಯವರು ಗ್ರಂಥಾಲಯವನ್ನು ಪ್ರವೇಶಿಸಿದಾಗ ಅವರು ಕಣ್ಣಿನದೃಷ್ಟಿ ಹರಿಸಿದಲ್ಲೆಲ್ಲಾ ಗ್ರಂಥಗಳ ಗಿರಿ ಪಂಕ್ತಿಗಳನ್ನೇ ಕಾಣುತ್ತಾರೆ. ಸರಿಯಾಗಿ ಜೋಡಿಸಿಟ್ಟಿರುವ ಗ್ರಂಥಗಳನ್ನು ನೋಡಿ ಬೆರಗಾದ ಕವಿಗಳು ಈ ಮೇಲಿನ ಮಾತನ್ನು ನಮಗೆ ನುಡಿಯುತ್ತಾರೆ.
Question 2.
“ಮುದುಡಿ ಹೋಗುವುದಿಲ್ಲಿ: ನನ್ನ ಅಹಂಕಾರ”
Answer:
ಪದ್ಯದ ಹೆಸರು: ಗ್ರಂಥಾಲಯದಲ್ಲಿ
ಕವಿಗಳ ಹೆಸರು: ಸಿ. ಪಿ. ಕೃಷ್ಣಕುಮಾರ್.
ಸಂದರ್ಭ: ಗ್ರಂಥಾಲಯದೊಳಗಿನ ಅನುಭವ ಹೇಳುತ್ತಾ ಕವಿ ಈ ಮಾತನ್ನು ನುಡಿದಿದ್ದಾರೆ.
ವಿವರಣೆ: ಗ್ರಂಥಾಲಯದೊಳಗೆ ಗ್ರಂಥಗಿರಿ ಪಂಕ್ತಿಗಳ ಕೆಳಗೆ ಕವಿಗಳು ನಿಂತಾಗ ತಾನೊಂದು ಧೂಳಿನ ಕಣವೆಂಬಂತೆ ಕವಿಗಳಿಗೆ ಅನಿಸಿ, ಒಂದು ಕ್ಷಣ ಗ್ರಂಥಾಲಯದಲ್ಲಿ ಬಂದು ನಿಂತರೆ ಸಾಕು ತನ್ನ ಮತಿ ಮುದುಡಿ ಹೋಗಿ ತನ್ನ ಅಹಂಕಾರವೆಲ್ಲಾ ಈ ಗ್ರಂಥಾಲಯದಲ್ಲಿ ಅಪ್ಪಳಿಸಿ ನುಚ್ಚುನೂರಾಗಿ ಬಿಡುತ್ತದೆ ಎಂಬ ಭಾವನೆ ಕವಿಗಳಲ್ಲಿ ಮೂಡಿದೆ.
Question 3.
“ಪಾರ್ಥನೊಲು ತತ್ತರಿಸಿ ವಿಸ್ಮಿತನಾಗಿ”
Answer:
ಪದ್ಯದ ಹೆಸರು: ಗ್ರಂಥಾಲಯದಲ್ಲಿ
ಕವಿಗಳ ಹೆಸರು: ಸಿ. ಪಿ. ಕೃಷ್ಣಕುಮಾರ್.
ಸಂದರ್ಭ: ಕವಿಗಳು ತನ್ನಲ್ಲಿ ಉಂಟಾದ ಭಯ ಹಾಗೂ ಆಶ್ಚರ್ಯದ ಬಗೆಗೆ ಹೇಳುವಾಗ ಈ ಮೇಲಿನ ಮಾತನ್ನು ಹೇಳಿದ್ದಾರೆ.
ವಿವರಣೆ: ಕವಿ ಸಿ. ಪಿ. ಕೆಯವರು ಗ್ರಂಥಾಲಯದಲ್ಲಿ ಅನೇಕ ಹಿರಿಯ ಕವಿ ಹಾಗೂ ಲೇಖಕರು ಬರೆದಿರುವ ಪುಸ್ತಕಗಳನ್ನು ಕಾಣುತ್ತಾರೆ. ಆ ಪುಸ್ತಕಗಳ ಮೂಲ ಹುಡುಕಲು ಪ್ರಯತ್ನಿಸಿದಾಗ ಅವರಿಗೆ ವಿಶ್ವರೂಪದ ಅವಲೋಕನವೇ ಆಯಿತು. ಶ್ರೀಕೃಷ್ಣನ ವಿಶ್ವರೂಪದರ್ಶನವನ್ನು ಕಂಡ ಪಾರ್ಥ ಹೇಗೆ ಭಯಭೀತ ವಿಸ್ಮಿತನಾದನೋ ಅದೇರೀತಿಯ ಭಾಸ ಕವಿಗಳಿಗೆ ಗ್ರಂಥಾಲಯದಲ್ಲಿ ಆಯಿತು ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.
ಈ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
Question 1.
ಗ್ರಂಥಾಲಯದ ಬಗ್ಗೆ ಕವಿ ವ್ಯಕ್ತಪಡಿಸಿರುವ ಭಾವನೆಗಳನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ. ಗ್ರಂಥರಾಶಿಯ ಮುಂದೆ ಮನುಷ್ಯನ ಅಹಂಕಾರ ನುಚ್ಚು ನೂರಾಗುತ್ತದೆ ಎಂಬ ಭಾವನೆ ‘ಗ್ರಂಥಾಲಯದಲ್ಲಿ’ ಕವನದಲ್ಲಿ ಹೇಗೆ ವ್ಯಕ್ತವಾಗಿದೆ? ವಿವರಿಸಿ. (ಇವೆರಡೂ ಪ್ರಶ್ನೆಗಳಿಗೆ ಒಂದೇ ಈ ಕೆಳಗಿನ ಉತ್ತರ)
Answer:
ಕವಿಗಳು ಗ್ರಂಥಾಲಯವನ್ನು ಪ್ರವೇಶಿಸಿದಾಗ ಅಲ್ಲಿರುವ ಪುಸ್ತಕಗಳ ಭಂಡಾರವನ್ನು ಕಂಡು ತಾನು ಆ ಗ್ರಂಥಗಳೆಂಬ ಗಿರಿ ಪಂಕ್ತಿಗಳ ಕೆಳಗೆ ನಿಂತು ಧೂಳಿನ ಕಣಕ್ಕೆ ಸಮನಾಗಿದ್ದೇನೆ ಎನಿಸುತ್ತದೆ. ಗ್ರಂಥಾಲಯದೊಳಗೆ ಬಂದು ಒಂದು ಕ್ಷಣಕಾಲ ನಿಂತರೂ ಸಾಕು ಅವರ ಮತಿ ಮದುಡಿ ಹೋಗುತ್ತದೆ. ಗ್ರಂಥಾಲಯ ಕವಿಗಳ ಅಹಂಕಾರವನ್ನು ಅಪ್ಪಳಿಸಿ ನುಚ್ಚುನೂರು ಮಾಡುತ್ತದೆ. ಕವಿಗಳಿಗೆ ಗ್ರಂಥಾಲಯದಲ್ಲಿ ಭಯ ಉಂಟಾಗಿ ಆದಷ್ಟೂ ಬೇಗ ಹೊರಗೆ ಓಡಿ ಹೋಗಬೇಕೆಂದೆನಿಸುತ್ತದೆ.
ಇಂತಹ ಶಿಕ್ಷೆ ನನಗೆ ಬೇಡ, ಆದಷ್ಟೂ ಗ್ರಂಥಾಲಯ ನನ್ನಿಂದ ದೂರದಲ್ಲಿಯೇ ಇರಲಿ ಎನಿಸುತ್ತದೆ.ಗ್ರಂಥಾಲಯದಲ್ಲಿ ಹಲವಾರು ಕವಿ, ಲೇಖಕರು ಬರೆದ ಗ್ರಂಥಗಳನ್ನು ಕಂಡು ಲೇಖಕರಿಗೆ ಆ ಗ್ರಂಥಾಲಯ ಹಿರಿಬಾಳುಗಳ ಪಳೆಯುಳಿಕೆಯಂತೆ ಭಾಸವಾಗುತ್ತದೆ. ಕವಿಗಳು ಇದರ ಮೂಲವನ್ನು ಚಿತ್ರಿಸಲು ಪ್ರಯತ್ನಿಸಿದಾಗ ವಿಶ್ವರೂಪದ ಅವಲೋಕನವನ್ನೇ ಕವಿಗಳಿಗೆ ಮಾಡಿದಂತಾಗುತ್ತದೆ. ಶ್ರೀಕೃಷ್ಣನ ವಿಶ್ವರೂಪದರ್ಶನವನ್ನು ಕಂಡು ಅರ್ಜುನ ತತ್ತರಿಸಿ ಭೀತ ವಿಸ್ಮಿತನಾದಂತೆ ಕವಿಗಳೂ ಗ್ರಂಥಾಲಯದಲ್ಲಿ ಭೀತ ವಿಸ್ಮಿತರಾಗುತ್ತಾರೆ.
‘ಗ್ರಂಥಾಲಯದಲ್ಲಿ‘ ಪದ್ಯದ ಸಾರಾಂಶ
Summary
ಸಿ.ಪಿ. ಕೃಷ್ಣಕುಮಾರ್ ಅವರ ‘ಗ್ರಂಥಾಲಯದಲ್ಲಿ’ ಪದ್ಯವು ಗ್ರಂಥಾಲಯದ ಮಹತ್ವ ಮತ್ತು ಜ್ಞಾನದ ಅಪಾರತ್ವವನ್ನು ಚಿತ್ರಿಸುತ್ತದೆ. ಕವಿ ಗ್ರಂಥಾಲಯಕ್ಕೆ ಪ್ರವೇಶಿಸಿದಾಗ ಅಲ್ಲಿ ಸಾಲುಸಾಲಾಗಿ ನಿಂತಿರುವ ಅಪಾರ ಗ್ರಂಥರಾಶಿಯನ್ನು ನೋಡಿ ಆಶ್ಚರ್ಯಚಕಿತರಾಗುತ್ತಾರೆ. ಸಾವಿರಾರು ವರ್ಷಗಳ ಜ್ಞಾನ ಮತ್ತು ಅನುಭವಗಳು ಪುಸ್ತಕಗಳಲ್ಲಿ ಅಡಕವಾಗಿರುವುದನ್ನು ಅರಿತು, ತಮ್ಮ ಅಲ್ಪತೆಯ ಭಾವನೆ ಅವರಿಗೆ ಉಂಟಾಗುತ್ತದೆ.
ಗ್ರಂಥಾಲಯದಲ್ಲಿರುವ ಪ್ರತಿಯೊಂದು ಪುಸ್ತಕವೂ ಮಹಾನ್ ವ್ಯಕ್ತಿಗಳ ಜೀವನಾನುಭವ ಮತ್ತು ಜ್ಞಾನಸಂಪತ್ತಿನ ಪ್ರತೀಕವಾಗಿದೆ ಎಂದು ಕವಿ ತಿಳಿಸುತ್ತಾರೆ. ಆ ಗ್ರಂಥರಾಶಿಯ ಮುಂದೆ ನಿಂತಾಗ ಅವರ ಅಹಂಕಾರವು ನಾಶವಾಗುತ್ತದೆ ಮತ್ತು ವಿನಯದ ಭಾವನೆ ಮೂಡುತ್ತದೆ. ಇಂತಹ ಮಹಾನ್ ಜ್ಞಾನಸಂಪತ್ತಿನ ನಡುವೆ ತಾವು ಅತಿ ಚಿಕ್ಕವರಾಗಿರುವುದನ್ನು ಕವಿ ಅನುಭವಿಸುತ್ತಾರೆ.
ಕೊನೆಯಲ್ಲಿ, ಕವಿ ಈ ಅನುಭವವನ್ನು ಮಹಾಭಾರತದಲ್ಲಿ ಅರ್ಜುನನು ಶ್ರೀಕೃಷ್ಣನ ವಿಶ್ವರೂಪವನ್ನು ಕಂಡಾಗ ಉಂಟಾದ ಭಯ, ಆಶ್ಚರ್ಯ ಮತ್ತು ವಿಸ್ಮಯದ ಅನುಭವಕ್ಕೆ ಹೋಲಿಸುತ್ತಾರೆ. ಹೀಗೆ ಈ ಪದ್ಯವು ಗ್ರಂಥಾಲಯವು ಕೇವಲ ಪುಸ್ತಕಗಳ ಸಂಗ್ರಹಾಲಯವಲ್ಲ, ಅದು ಜ್ಞಾನದ ಮಹಾಸಾಗರ ಮತ್ತು ಮಾನವನಿಗೆ ವಿನಯವನ್ನು ಕಲಿಸುವ ಪವಿತ್ರ ಸ್ಥಳ ಎಂಬ ಸಂದೇಶವನ್ನು ಸಾರುತ್ತದೆ.
ಭಾಷಾಭ್ಯಾಸ
ಅ) ಕೆಳಗೆ ಕೊಟ್ಟಿರುವ ಪದಗಳನ್ನು ಬಿಡಿಸಿ ಬರೆದು, ಸಂಧಿಗಳನ್ನು ಹೆಸರಿಸಿರಿ.
- ಪುಸ್ತಕ + ಆಲಯ = ಪುಸ್ತಕಾಲಯ (ಸ. ದೀ. ಸಂ.)
- ನನಗೆ + ಇಲ್ಲ = ನನಗಿಲ್ಲ (ಲೋಪ ಸಂಧಿ)
- ರೂಪ + ಅವಲೋಕನ = ರೂಪಾವಲೋಕನ (ಸ.ದೀ.ಸಂ.)
- ಪಾರ್ಥನ + ಒಲು = ಪಾರ್ಥನೋಲು (ಲೋಪ ಸಂಧಿ)
ಆ) ತತ್ಸಮ–ತದ್ಭವಗಳನ್ನು ಬರೆಯಿರಿ.
- ದಿಟ್ಟಿ – ದೃಷ್ಟಿ
- ಪುಸ್ತಕ – ಹೊತ್ತಿಗೆ
- ಚಣ – ಕ್ಷಣ
- ತಾಣ – ಸ್ಥಾನ
ಇ) ಕೆಳಗಿನ ಪದಗಳನ್ನು ಸ್ವಂತ ವಾಕ್ಯಗಳಲ್ಲಿ ಬಳಸಿರಿ.
- ಗ್ರಂಥಾಲಯ: ಜ್ಞಾನ ವೃದ್ಧಿಸಿಕೊಳ್ಳುವ ತಾಣವೇ ಗ್ರಂಥಾಲಯ.
- ಮೇಳ: ಅನೇಕ ವಿದ್ಯಾವಂತರಿಗಾಗಿ ಸರ್ಕಾರವು ಉದ್ಯೋಗ ಮೇಳವನ್ನು ಆಯೋಜಿಸುತ್ತದೆ.
- ಪಳೆಯುಳಿಕೆ: ಸಿಂಧೂ ನದಿ ನಾಗರಿಕತೆಯ ಅನೇಕ ಪಳಿಯುಳಿಕೆಗಳು ಹರಪ್ಪ, ಮಹೊಂಜೊದಾರೋ ನಗರಗಳಲ್ಲಿ ಕಂಡುಬರುತ್ತವೆ.
- ಭೀತ ವಿಸ್ಮಿತ: ಧಾರಾಕಾರವಾಗಿ ಬೀಳುವ ಮಳೆಯು ಎಲ್ಲರನ್ನು ಭೀತ ವಿಸ್ಮಿತರನ್ನಾಗಿ ಮಾಡುತ್ತದೆ.
Additional Questions & Answers
Question 1.
‘ಗ್ರಂಥಾಲಯದಲ್ಲಿ’ ಪದ್ಯದ ಕವಿ ಯಾರು?
Answer:
ಸಿ.ಪಿ. ಕೃಷ್ಣಕುಮಾರ್ ಅವರು ‘ಗ್ರಂಥಾಲಯದಲ್ಲಿ’ ಪದ್ಯದ ಕವಿ.
Question 2.
ಗ್ರಂಥಾಲಯದಲ್ಲಿ ಕವಿ ಏನನ್ನು ಕಂಡು ಬೆರಗಾದರು?
Answer:
ಸಾಲುಸಾಲಾಗಿ ನಿಂತಿದ್ದ ಅಪಾರ ಗ್ರಂಥರಾಶಿಯನ್ನು ಕಂಡು ಕವಿ ಬೆರಗಾದರು.
Question 3.
ಗ್ರಂಥಾಲಯದಲ್ಲಿ ಕವಿಗೆ ಯಾವ ಭಾವನೆ ಉಂಟಾಯಿತು?
Answer:
ತಮ್ಮ ಅಲ್ಪತೆಯ ಅರಿವು ಮತ್ತು ವಿನಯದ ಭಾವನೆ ಉಂಟಾಯಿತು.
Question 4.
ಕವಿಯ ಅಹಂಕಾರವನ್ನು ನುಚ್ಚುನೂರಾಗಿಸಿದುದು ಯಾವುದು?
Answer:
ಗ್ರಂಥಾಲಯದಲ್ಲಿರುವ ಅಪಾರ ಜ್ಞಾನಸಂಪತ್ತು ಮತ್ತು ಗ್ರಂಥರಾಶಿ ಕವಿಯ ಅಹಂಕಾರವನ್ನು ನುಚ್ಚುನೂರಾಗಿಸಿತು.
Question 5.
ಕವಿ ಗ್ರಂಥಗಳನ್ನು ಯಾವುದಕ್ಕೆ ಹೋಲಿಸಿದ್ದಾರೆ?
Answer:
ಗ್ರಂಥಗಳನ್ನು ಮಹಾನ್ ವ್ಯಕ್ತಿಗಳ ಜೀವನದ ಪಳೆಯುಳಿಕೆಗಳಿಗೆ ಹೋಲಿಸಿದ್ದಾರೆ.
Question 6.
ಗ್ರಂಥಾಲಯಕ್ಕೆ ಪ್ರವೇಶಿಸಿದಾಗ ಕವಿಗೆ ಏಕೆ ಭಯ ಉಂಟಾಯಿತು?
Answer:
ಜ್ಞಾನದ ಅಪಾರತ್ವವನ್ನು ಕಂಡು ತಮ್ಮ ಅಲ್ಪತೆಯನ್ನು ಅರಿತ ಕಾರಣ ಭಯ ಉಂಟಾಯಿತು.
Question 7.
‘ವಿಶ್ವರೂಪಾವಲೋಕನ’ ಎಂಬ ಪದವನ್ನು ಕವಿ ಯಾವ ಸಂದರ್ಭದಲ್ಲಿ ಬಳಸಿದ್ದಾರೆ?
Answer:
ಗ್ರಂಥಾಲಯದ ಜ್ಞಾನಸಂಪತ್ತನ್ನು ಕಂಡು ಅರ್ಜುನನ ವಿಶ್ವರೂಪದರ್ಶನದ ಅನುಭವಕ್ಕೆ ಹೋಲಿಸಿ ಬಳಸಿದ್ದಾರೆ.
Question 8.
ಈ ಪದ್ಯದ ಮುಖ್ಯ ಸಂದೇಶವೇನು?
Answer:
ಜ್ಞಾನವು ಅಪಾರವಾಗಿದ್ದು, ಗ್ರಂಥಾಲಯವು ಮಾನವನಲ್ಲಿ ವಿನಯ ಮತ್ತು ಜ್ಞಾನದ ಅರಿವನ್ನು ಬೆಳೆಸುವ ಪವಿತ್ರ ಸ್ಥಳವಾಗಿದೆ.
Multiple Choice Question and Answer
1. ‘ಗ್ರಂಥಾಲಯದಲ್ಲಿ’ ಪದ್ಯದ ಕವಿ ಯಾರು?
A) ಕುವೆಂಪು
B) ಡಾ. ರಾಜ್‌ಕುಮಾರ್
C) ಸಿ.ಪಿ. ಕೃಷ್ಣಕುಮಾರ್
D) ಬೇಂದ್ರೆ
Answer:
C) ಸಿ.ಪಿ. ಕೃಷ್ಣಕುಮಾರ್
2. ಕವಿ ಎಲ್ಲಿಗೆ ಹೋದಾಗ ಆಶ್ಚರ್ಯಚಕಿತರಾದರು?
A) ದೇವಾಲಯಕ್ಕೆ
B) ಶಾಲೆಗೆ
C) ಗ್ರಂಥಾಲಯಕ್ಕೆ
D) ಉದ್ಯಾನವನಕ್ಕೆ
Answer:
C) ಗ್ರಂಥಾಲಯಕ್ಕೆ
3. ಕವಿಯ ಅಹಂಕಾರವನ್ನು ನಾಶಮಾಡಿದುದು ಯಾವುದು?
A) ಶಿಕ್ಷಕರು
B) ಗ್ರಂಥರಾಶಿ
C) ಸ್ನೇಹಿತರು
D) ಕುಟುಂಬ
Answer:
B) ಗ್ರಂಥರಾಶಿ
4. ಕವಿ ತಮ್ಮನ್ನು ಯಾವುದಕ್ಕೆ ಹೋಲಿಸಿಕೊಂಡಿದ್ದಾರೆ?
A) ಬೆಟ್ಟಕ್ಕೆ
B) ಸಾಗರಕ್ಕೆ
C) ಧೂಳಿನ ಕಣಕ್ಕೆ
D) ನಕ್ಷತ್ರಕ್ಕೆ
Answer:
C) ಧೂಳಿನ ಕಣಕ್ಕೆ
5. ಗ್ರಂಥಗಳು ಯಾವುದರ ಪಳೆಯುಳಿಕೆಗಳಾಗಿವೆ ಎಂದು ಕವಿ ಹೇಳುತ್ತಾರೆ?
A) ಪ್ರಾಣಿಗಳ
B) ಮರಗಳ
C) ಹಿರಿಬಾಳುಗಳ
D) ನಗರಗಳ
Answer:
C) ಹಿರಿಬಾಳುಗಳ
6. ಕವಿ ಕೊನೆಯಲ್ಲಿ ಯಾರ ಅನುಭವವನ್ನು ನೆನಪಿಸಿಕೊಳ್ಳುತ್ತಾರೆ?
A) ರಾಮನ
B) ಕೃಷ್ಣನ
C) ಅರ್ಜುನನ
D) ಭೀಮನ
Answer:
C) ಅರ್ಜುನನ
7. ‘ಪಳೆಯುಳಿಕೆ’ ಎಂಬ ಪದದ ಅರ್ಥವೇನು?
A) ಹೊಸದು
B) ಅವಶೇಷ
C) ಸಂಪತ್ತು
D) ಭಂಡಾರ
Answer:
B) ಅವಶೇಷ
8. ಈ ಪದ್ಯವು ಮುಖ್ಯವಾಗಿ ಯಾವುದರ ಮಹತ್ವವನ್ನು ತಿಳಿಸುತ್ತದೆ?
A) ಹಣದ ಮಹತ್ವ
B) ಅಧಿಕಾರದ ಮಹತ್ವ
C) ಜ್ಞಾನದ ಮಹತ್ವ
D) ಸ್ನೇಹದ ಮಹತ್ವ
Answer:
C) ಜ್ಞಾನದ ಮಹತ್ವ