Asi Masi Krushi Question Answers 2026 | SSLC Kannada Notes PDF
Asi Masi Krushi is an important lesson in SSLC Tili Kannada. Here you can download Asi Masi Krushi Question Answers, Summary, Notes, and Important Questions PDF for Karnataka Board 2026. This chapter explains the importance of soldiers, writers, and farmers in the development of the nation. These notes help students understand the lesson easily and score high marks in exams.
Karnataka SSLC/Class 10th Tili Kannada Textbook Answers—Reflections Chapter 2
Asi Masi Krushi Questions and Answers, Notes, and Summary
Class 10 Tili Kannada Chapter 2
ಅಸಿ-ಮಸಿ-ಕೃಷಿ
Asi Masi Krushi
👉 Scroll Down to Download Asi Masi Krushi Notes PDF
ಒಂದು ಎರಡು ವಾಕ್ಯಗಳಲ್ಲಿ ಉತ್ತರಿಸಿ
Question 1.
ದೇಶದ ಉದ್ದಾರ ಯಾರು ಯಾರನ್ನು ಅವಲಂಬಿಸಿದೆ ಎಂದು ಲೇಖಕರು ಹೇಳಿದ್ದಾರೆ?
Answer:
ದೇಶದ ಉದ್ದಾರ ಅಸಿ ಮಸಿ ಕೃಷಿಯನ್ನು ಅವಲಂಬಿಸಿದೆ ಎಂದು ಲೇಖಕರು ಹೇಳೆದ್ದಾರೆ.
Question 2.
ಅಸಿ-ಮಸಿ ಎಂದರೇನು?
Answer:
ಅಸಿ ಅಂದರೆ ಕೃಷಿ ಮಸಿ ಅಂದರೆ ಸಾಹಿತ್ಯ.
Question 3.
ಈ ನಾಡಿನ ಬೆನ್ನೆಲುಬು ಯಾರು?
Answer:
ಈ ನಾಡಿನ ಬೆನ್ನಲಬು ರೈತ.
Question 4.
ಪಂಡಿತಾರಾಧ್ಯ ಶಿವಾಚಾರ್ಯರು ಏನೆಂದು ಖ್ಯಾತರಾಗಿದ್ದಾರೆ?
Answer:
ಪಂಡಿತಾರಾಧ್ಯ ಶಿವಾಚಾರ್ಯ ರಂಗ ಜಂಗಮ ಎಂದು ಖ್ಯಾತರಾಗಿದ್ದಾರೆ.
Question 5.
ಪಂಡಿತಾರಾಧ್ಯ ಶಿವಾಚಾರ್ಯರಿಗೆ ರೋಟರಿ ಸಂಸ್ಥೆ ಯಾವ ಪ್ರಶಸ್ತಿ ನೀಡಿದೆ?
Answer:
ಪಂಡಿತರಾಧ್ಯ ಶಿವಚಾರ್ಯರಿಗೆ ರೋಡರಿ ಸಂಸ್ಥೆ ಪಾಲ್ ಹ್ಯಾರಿಸ್ ಪ್ರಶಸ್ತಿ ನೀಡಿದೆ.
ಈ ಪ್ರಶ್ನೆಗಳಿಗೆ 3-4 ವಾಕ್ಯಗಳಲ್ಲಿ ಉತ್ತರಿಸಿ.
Question 1.
ದೇಶದ ಅಭಿವೃದ್ಧಿ ಕುರಿತು ಜನರಾಡುವ ಮಾತುಗಳಾವುವು?
Answer:
ದೇಶದ ಪ್ರಗತಿ, ಜನರಕರಿತು ಜನರಾಡುವ ಮಾತುಗಳೆಂದರೆ ವೈಜ್ಞಾನಿಕ ಬೆಳವಣಿಗೆಯೇ ನಿಜವಾದ ಪ್ರಗತಿ, ದೊಡ್ಡದೊಡ್ಡ ಅಣೆಕಟ್ಟುಗಳ ನಿರ್ಮಾಣವೇ ಜನರ ಉದ್ದಾರದ ದಾರಿ, ವಿದ್ಯುತ್ ಉತ್ಪಾದನೆಯೇ ಇವೆಲ್ಲಕ್ಕೂ ಮೂಲ ಪ್ರೇರಣೆ ಎಂದು ಹೇಳಬಹುದು.
Question 2.
ನಮ್ಮ ದೇಶದ ರಕ್ಷಣಾಪಡೆ ಏಕೆ ಪ್ರಬಲವಾಗಿರಬೇಕು?
Answer:
ನಮ್ಮ ದೇಶದ ರಕ್ಷಣಾಪಡೆ ಇದ್ದಾಗ ದೇಶದ ಸಂರಕ್ಷಣೆ ಸಾಧ್ಯ. ಇಲ್ಲದಿದ್ದರೆ ಬೇರೆ ದೇಶದವರು ಸುಲಭವಾಗಿ ನಮ್ಮ ದೇಶದ ಮೇಲೆ ದುರಾಕ್ರಮಣ ಮಾಡಿ ಯುದ್ಧ ಸಾರಿ ನಮ್ಮನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಳ್ಳಬಹುದು. ಮತ್ತು ಬಲಿಷ್ಠ ದೇಶ ಎಲ್ಲರನ್ನೂ ಹೊಡೆದುಹಾಕಿ ತಾನೇ ಸರ್ವಾಧಿಕಾರಿಯಂತೆ ಮೆರೆಯಬಹುದು. ಆದುದರಿಂದ ನಮ್ಮ ರಕ್ಷಣಾಪಡೆ ತುಂಬಾ ಪ್ರಬಲವಾಗಿರಬೇಕು.
Question 3.
ಪೆನ್ನು ಖಡ್ಗಕ್ಕಿಂತ ಹರಿತವಾದುದು ಏಕೆ?
Answer:
ಖಡ್ಗದಿಂದ ಸಾಧಿಸಲು ಸಾಧ್ಯವಾಗದ್ದನ್ನು ಪೆನ್ನಿನ ಮೂಲಕ ಸಾಧಿಸಬಹುದು. ಅಂದರೆ ಬರೆವಣಿಗೆ ಅಷ್ಟೊಂದು ಪರಿಣಾಮಕಾರಿ ಆದುದು. ಪತ್ರಿಕೆಯ ಒಂದು ಲೇಖನ, ಕಾದಂಬರಿ, ಕತೆ, ಕವನ ಹಲವರ ಬದುಕನ್ನು ಬದಲಾಯಿಸ ಬಲ್ಲುದು. ಒಂದು ಸರ್ಕಾರ ಉರುಳಿಸಿ ಮತ್ತೊಂದು ಸರ್ಕಾರ ತರಬಹುದು. ಈ ನಿಟ್ಟಿನಲ್ಲಿ ಬರವಣಿಗೆ ಹೆಚ್ಚು ಶಕ್ತಿಶಾಲಿಯಾದುದು.
Question 4.
ರೈತರು ಎದುರಿಸುತ್ತಿರುವ ಸಮಸ್ಯೆಗಳಾವುವು?
Answer:
ಸಕಾಲಕ್ಕೆ ಸರಿಯಾಗಿ ಮಳೆ ಬರುವುದಿಲ್ಲ. ಉತ್ತಮ ಬೀಜ ಸಿಗುವುದಿಲ್ಲ. ಭೂಮಿ ಬರಡಾಗುತ್ತಿದೆ. ಕ್ರಿಮಿಕೀಟಗಳ ಹಾವಳಿಯಿಂದ ಬೆಳೆಗೆ ವಿವಿಧ ರೀತಿಯ ರೋಗಗಳು ಬರುತ್ತಿವೆ. ಮತ್ತು ತಾನು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಇವೆಲ್ಲ ರೈತರ ಸಮಸ್ಯೆಗಳು.
Question 5.
ಕೃಷಿಕರು ಭೂಮಿಯನ್ನು ಉಳುವುದಿಲ್ಲ ಎಂದು ಸತ್ಯಾಗ್ರಹ ಮಾಡಿದರೆ ಏನಾಗಬಹುದು?
Answer:
ಕೃಷಿಕರು ಭೂಮಿಯನ್ನು ಉಳುವುದಿಲ್ಲ ಎಂದು ಸತ್ಯಾಗ್ರಹ ಮಾಡಿದರೆ ದೇಶದ ಆಟ ನಡೆಯುವದಿಲ್ಲ. ಆಹಾರವಿಲ್ಲದೆ ಬರೀ ವೈಜ್ಞಾನಿಕ ಬೆಳವಣಿಗೆಯಿಂದ ಬದುಕಲು ಸಾಧ್ಯವಿಲ್ಲ. ನಾವು ಯಾವ ಕಾರ್ಖಾನೆಯಿಂದಲೂ ಟೊಮೆಟೊ, ಅಕ್ಕಿ, ರಾಗಿ ಬೆಳೆಯಲು ಸಾಧ್ಯವಿಲ್ಲ. ಇವಕ್ಕೆಲ್ಲ ಭೂಮಿ ರೈತ ಬೇಕು.
Question 6.
ಸರ್ವಜ್ಞ ಕವಿಯು ಕೃಷಿಯ ಬಗ್ಗೆ ಹೇಳಿರುವ ವಚನ ಯಾವುದು?
Answer:
ಕೋಟಿ ವಿದ್ಯೆಗಳಲಿ ಮೇಟಿ ವಿದ್ಯೆಯೇ ಮೇಲು, ಮೇಟಿಯಿಂ ರಾಟೆ ನಡೆದುದಲ್ಲದೆ ದೇಶದಾಟವೆ ಕೆಡಗುಂ ಕೋಟಿ ವಿದ್ಯೆಗಳಲ್ಲಿ ವ್ಯವಸಾಯವೇ ಮೇಲು, ಆ ವ್ಯವಸಾಯ ಇಲ್ಲದಿದ್ದರೆ ದೇಶದ ಆಟಿವೆ ನಡೆಯದು. ಎಂದು ಸರ್ವಜ್ಞ ಕವಿಯು ಕೃಷಿಯ ಬಗ್ಗೆ ಹೇಳಿದ್ದಾರೆ.
ಕೆಳಗಿನ ಪೂಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ:
Question 1.
ದೇಶದ ಬಜೆಟ್‌ನಲ್ಲಿ ರಕ್ಷಣಾ ಇಲಾಖೆಗೆ ಹೆಚ್ಚಿನ ಹಣವನ್ನು ಏಕೆ ಮೀಸಲಾಗಿರುತ್ತದೆ?
Answer:
ಸೈನಿಕರು ತಮ್ಮ ತಾಯಿ ನಾಡಿಗಾಗಿ ದೂರದಲ್ಲಿ ಗಡಿಕಾಯುತ್ತಾರೆ. ದಾಳಿಯನ್ನು ತಡೆಯಲು ಹಗಲು ರಾತ್ರಿ ಗಡಿ ಕಾಯುವ ಕೆಲಸವನ್ನು ಮಳೆ ಚಳಿ ಬಿಸಿಲಿನಲ್ಲಿ ಎಷ್ಟು ಕಷ್ಟ ಬಂದರೂ ಧೈರ್ಯದಿಂದ ಎದುರಿಸುತ್ತಾರೆ. ಸೈನಿಕ ಬಲ ಇದ್ದಾಗ ಮಾತ್ರ ರಕ್ಷಣೆ ಸಾಧ್ಯ. ಇಲ್ಲದಿದ್ದರೆ ಬೇರೆ ದೇಶದವರು ಸುಲಭವಾಗಿ ನಮ್ಮ ದೇಶಕ್ಕೆ ನುಗ್ಗಿ ನಮ್ಮ ಮೇಲೆ ದರಾಕ್ರಮ ಮಾಡಿ ಯುದ್ದದಿಂದ ನಮ್ಮನ್ನು ಸೋಲಿಸಿ. ಗುಲಾಮರನ್ನಾಗಿ ಮಾಡಿಕೊಳ್ಳಬಹುದು. ಆದ್ದರಿಂದ ದೇಶದ ರಕ್ಷಣೆಗೆ ಸೈನಿಕರು ಅಗತ್ಯ, ಸೈನಿಕರು ಪ್ರಬಲರಿದ್ದಾಗ ಮಾತ್ರ ದೇಶವನ್ನು ರಕ್ಷಿಸಿಕೊಳ್ಳಲು ಸಾಧ್ಯ. ದೇಶದಲ್ಲಿ ಸೈನ್ಯವನ್ನು ಭೂಸೇನೆ, ವಾಯುಸೇನೆ, ಜಲಸೇನೆ ವಿಭಾಗಿಸಿ ಎಷ್ಟೇ ಖರ್ಚಾದರು ಚಿಂತೆ ಇಲ್ಲ ಎಂದು ನಮ್ಮ ದೇಶವನ್ನು ಕಾಪಾಡುವುದು ನಮ್ಮ ಧರ್ಮ ಎಂದು ತಿಳಿದು ಮಿಸಲಾಗಿಡುತ್ತಾರೆ.
Question 2.
ದೇಶದ ಪ್ರಗತಿಯಲ್ಲಿ ಸಾಹಿತಿಗಳ ಪಾತ್ರವೇನು?
Answer:
ಆಸಿಯ ನಂತರ ಮಸಿಯ ಪ್ರಾಮುಖ್ಯತೆ ಬಗ್ಗೆ ಅಂದರೆ ಸಾಹಿತ್ಯದ ಬಗ್ಗೆ ವಿವರಿಸುವುದು ಏನೆಂದರೆ ಆಸಿಗಿಂತ ಮಸಿ ಮುಖ್ಯವಾಗಿದೆ. ಸಾಹಿತ್ಯದ ರಚನೆಯಿಂದ ಉನ್ನತಿ ಸಾಧಿಸಬಹುದಾಗಿದೆ. ಲೇಖಕರು ಪೆನ್ನು ಖಡ್ಗಕ್ಕಿಂತ ಹರಿತ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಏಕೆಂದರೆ ಖಡ್ಗದಿಂದ ಸಾಧಿಸಾಲಗದಿದ್ದನ್ನು ಪೆನ್ನಿನ ಮೂಲಕ ಸಾಧಿಸಬಹುದು. ಉದಾಹರಣೆಗೆ ಒಂದು ಲೇಖನದಿಂದ ಆ ರಾಜ್ಯ ಅಥವಾ ದೇಶದ ಸರ್ಕಾರವನ್ನು ಉರುಳಿಸಿ ಮುಂದೊಂದು ದಿನ ಹೊಸ ಸರ್ಕಾರವನ್ನೇ ರಚಿಸಬಹುದು ಅಂಥಹ ಎಷ್ಟೋ ಉದಾಹರಣೆಗಳನ್ನು ದಿನನಿತ್ಯ ಪತ್ರಿಕೆಗಳಲ್ಲಿ ಕಾಣಬಹುದು. ಇದರ ಅರ್ಧ ಬರವಣಿಗೆ ಎಷ್ಟೊಂದು ಪರಿಣಾಮಕಾರಿ ಎಂದು ಬಿಂಬಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಲ್ಲಿಯವರೆಗೆ ಸಾಹಿತಿಗಳಿಗೆ ನಮ್ಮ ನಾಡಿನಲ್ಲಿ ಅಪಾರ ಗೌರವವಿದೆ. ಈ ಗೌರವಿರುವುದು ಅವರ ಸಾಹಿತ್ಯದ ಸತ್ವದಿಂದಾಗಿ ಅಭಿವೃದ್ಧಿಯ ಮೆಟ್ಟಿಲು ಯುಳಿಯಲು ಸಾಧ್ಯ. ಬದುಕಿಗೆ ಶಿವಶರಣ ಬಸವಾದಿಗಳ ವಚನಗಳನ್ನು ದಾಸ ಕಿರ್ತನೆಗಳು ಇಂದಿಗೂ ಪ್ರಸ್ತುತ ಅವರು ಬರೆದಿರುವ ಸಾಹಿತ್ಯ ಈಗಿನವರಿಗೆ ಮುನ್ನಡಿಯಂತಾಗಿದೆ.
Question 3.
ಕೃಷಿ ನಾಡಿನ ಬೆನ್ನೆಲುಬು ಈ ಮಾತನ್ನು ಸಮರ್ಥಿಸಿರಿ.
Answer:
ಆಸಿ ಮತ್ತು ಮಸಿಗಳಿಗಿಂತ ಮಹತ್ವವಾದದ್ದು ಕೃಷಿ ಅಂದರೆ ಒಕ್ಕಲಿಗ, ಒಕ್ಕಲಿಗ ಒಕ್ಕಿದರೆ ಜಗವೇಲ್ಲಾ ಬಿಕ್ಕುವುದು ಎನ್ನುವ ಮಾತನ್ನು ಉಲ್ಲೇಖಿಸಿದ್ದಾರೆ. ಇದರ ಅರ್ಥ ಒಂದು ವೇಳೆ ಕೃಷಿಯನ್ನು ಮಾಡದೆ ಕೃಷಿಕ ಸತ್ಯಾಗ್ರಹ ಮಾಡಿಸದರೆ ನಾವು ಭಿಕ್ಷುಕರಂತೆ ಆಗುತ್ತೇವೆ. ತಿನ್ನಲು ಆಹಾರವಿಲ್ಲದೆ ನರಳುತ್ತೇವೆ ಎಲ್ಲಾ ವರ್ಗದ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಇವತ್ತು ಜಗತ್ತಿನಲ್ಲಿ ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಬದುಕುವದು ಅಸಾಧ್ಯ ಯಾರೂ ಕಾರ್ಖಾನೆಗಳಿಂದ ಅಕ್ಕಿ, ರಾಗಿ ಪಡೆಯಲು ಸಾಧ್ಯವಿಲ್ಲ. ಇದಕ್ಕೆ ಭೂಮಿ ಬೇಕು. ರೈತರು ಬೆವರು ಸುರಿಸಿ ಭೂಮಿಯನ್ನು ಹದಮಾಡಿ ಬೆಳೆಯನ್ನು ಬೆಳೆಯಲೇ ಬೇಕು ಹಾಗಾದರೆ ಮಾತ್ರ ಪ್ರಗತಿ ಸಾಧ್ಯ. ಲೇಖಕರು ರೈತರನ್ನು ಅವರ ವೃತ್ತಿಯನ್ನು ತಮ್ಮ ಲೇಖನದಲ್ಲಿ ಸೊಗಸಾಗಿ ವರ್ಣಿಸಿದ್ದಾರೆ. ಎಲ್ಲಾ ವಿದ್ಯೆಗಳಿಗಿಂತ ವ್ಯವಸಾಯ ವಿದ್ಯೆಯೇ ಮೇಲು ಎನ್ನಬಹುದು.
ಸಂದರ್ಭವನ್ನು ಸ್ವಾರಸ್ಯದೊಡನೆ ವಿವರಿಸಿರಿ.
Question 1.
ವ್ಯವಸಾಯ ಇಲ್ಲದಿದ್ದರೆ ದೇಶದ ಆಟವೇ ನಡೆಯದು.
Answer:
ಸಂದರ್ಭ:
ಈ ವಾಕ್ಯವನ್ನು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಬರೆದಿರುವ ಆಸಿ-ಮಸಿ-ಕೃಷಿ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸ್ವಾರಸ್ಯ:
ಈ ವಾಕ್ಯವನ್ನು ಲೇಖಕರು ಕೃಷಿ ಮತ್ತು ರೈತನ ಸಂಕಷ್ಟ ಮತ್ತು ಅದರ ಮಹತ್ವವನ್ನು ವಿವರಿಸುವ ಸಂಧರ್ಭದಲ್ಲಿ ಹೇಳಿದ್ದಾರೆ. ಅಸಿ-ಮಸಿಗಿಂತ ಕೃಷಿ ಮಹತ್ವದ್ದು ಅಂದರೆ ದೇಶದ ಸೈನಿಕರು ಮತ್ತು ಸಾಹಿತ್ಯಗಿಂತ ಕೃಷಿ ವೃತ್ತಿ ಮತ್ತು ಕೃಷಿಕರು ಪ್ರಮುಖವಾಗಿದೆ. ಇದು ಇಲ್ಲದೇ ದೇಶ ಪ್ರಗತಿ ಹೊಂದಲು ಅಸಾಧ್ಯ.
Question 2.
ರೈತರು ನಿರಾಶಾವಾದಿಗಳಾದರೆ ಆಶಾವಾದಿಗಳಾಗಿ ಬಾಳನ್ನು ಸಾಗಿಸುತ್ತಿದ್ದಾರೆ.
Answer:
ಸಂದರ್ಭ:
ಈ ವಾಕ್ಯವನ್ನು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಬರೆದಿರುವ ಅಸಿ -ಮಸಿ ಕೃಷಿ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸ್ವಾರಸ್ಯ:
ರೈತರನ್ನು ಕಾಣುವ ದೃಷ್ಟಿಯನ್ನು ವಿವರಿಸುವಾಗ ಅವರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಅವರು ಕೆಲಸವನ್ನು ಶ್ರದ್ದೆಯಿಂದ ಮಾಡುತ್ತಾರೆ ಎಂದು ವಿವರಿಸುವಾಗ ಲೇಖಕರು ಹೇಳಿದ್ದಾರೆ. ಪ್ರತಿಯೊಬ್ಬರು ಬದಕು ಕೃಷಿಕರನ್ನು ಅವಲಂಬಿಸಿದರೆ ಅವರೆಲ್ಲರು ಕೃಷಿಯನ್ನು ಮಾಡುವ ರೈತನನ್ನು ನಿರ್ಲಕ್ಷಿಸಿದ್ದಾರೆ. ತಮ್ಮ ಮನದಾಳದ ಮಾತುಗಳಿಂದ ಲೇಖಕರು ಹೇಳಿದ್ದಾರೆ.
Question 3.
ಅವರು ಯಾರಿಗೂ ಮೋಸ, ವಂಚನೆ ಮಾಡುವವರೆಲ್ಲ.
Answer:
ಸಂದರ್ಭ:
ಈ ವಾಕ್ಯವನ್ನು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಬರೆದಿರುವ ಅಸಿ-ಮಸಿ ಕೃಷಿ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸ್ವಾರಸ್ಯ:
ಈ ವಾಕ್ಯವನ್ನು ಲೇಖಕರು ಕೃಷಿಕರ ಮುಗ್ಧತೆಯನ್ನು ಎತ್ತಿ ಹಡಿದಿದ್ದಾರೆ. ಕಳಪೆ ಬಿಜ ಸಿಕ್ಕಿದರೆ ಉತ್ತಮವಾದ ಬೆಳೆ ಬೆಳೆಯುತ್ತಾರೆ. ಸರಿಯಾಗಿ ಮಳೆ ಬಾರದಿದ್ದರೂ, ನೀರನ್ನು ಸಂಗ್ರಹಿಸಿ ಭೂಮಿಯನ್ನು ಉಳುಮೆ ಮಾಡುತ್ತಾರೆ. ಆದರೆ ಇವರು ಎಲ್ಲರಿಂದ ಮೋಸ ವಂಚನೆಗೆ ಒಳಗಾಗುತ್ತಾರೆ ಎಂದು ಲೇಖಕರು ಮೇಲಿನ ಮಾತು ಹೇಳಿದ್ದಾರೆ.
Question 4.
ಸಾಹಿತಿಗಳು ನಾಡಿನಲ್ಲಿ ಹೆಚ್ಚಿದಷ್ಟು ಸಮಾಜವು ಪ್ರಗತಿಯಮೆಟ್ಟಿಲು ತುಳಿಯಲು ಸಾಧ್ಯ?
Answer:
ಸಂದರ್ಭ:
ಈ ವಾಕ್ಯವನ್ನು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಬರೆದಿರುವ ಆಸಿ-ಮಸಿ-ಕೃಷಿ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸ್ವಾರಸ್ಯ:
ಈ ವಾಕ್ಯವನ್ನು ಲೇಖಕರು ಆಸಿಗಂತ ಮಸಿ ಮುಖ್ಯವಾದದ್ದು ಎಂದು ಹೇಳುವ ಸಂದರ್ಭದಲ್ಲಿ ಹೇಳಿದ್ದಾರೆ. ಪತ್ರಿಕೆಯಲ್ಲಿ ಬರುವ ಒಂದು ಲೇಖನ ಸರ್ಕಾರವನ್ನು ಉರಳಿಸುವಷ್ಟು ಪ್ರಭಾವಶಾಲಿ ಇರುತ್ತದೆ, ನಾಳೆ ಮತ್ತೊಂದು ಸರ್ಕಾರವನ್ನು ತರಬಹುದು. ಸಾಹಿತ್ಯದ ಸತ್ವದಿಂದ ಇಂತಹ ಸಾಹಿತಿಗಳು ನಾಡಿನಲ್ಲಿ ಹೆಚ್ಚು ಇದ್ದರೆ ಸಮಾಜ ಪ್ರಗತಿಯ ಮೆಟ್ಟಿಲು ತುಳಿವುದು ಸಾಧ್ಯ.
‘ಅಸಿ–ಮಸಿ–ಕೃಷಿ’ ಸಾರಾಂಶ
Summary
‘ಅಸಿ–ಮಸಿ–ಕೃಷಿ’ ಎಂಬ ಪ್ರಬಂಧದಲ್ಲಿ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ದೇಶದ ಪ್ರಗತಿ ಮತ್ತು ಜನರ ಉದ್ಧಾರ ಯಾವ ಅಂಶಗಳ ಮೇಲೆ ಅವಲಂಬಿತವಾಗಿದೆ ಎಂಬುದನ್ನು ವಿವರಿಸುತ್ತಾರೆ. ಲೇಖಕರು ದೇಶದ ಅಭಿವೃದ್ಧಿಗೆ ಮುಖ್ಯವಾಗಿ ಮೂರು ಅಂಶಗಳನ್ನು ಸೂಚಿಸುತ್ತಾರೆ—ಅಸಿ (ಸೈನಿಕ ಶಕ್ತಿ), ಮಸಿ (ಸಾಹಿತ್ಯ/ಶಿಕ್ಷಣ) ಮತ್ತು ಕೃಷಿ (ವ್ಯವಸಾಯ).
ಅಸಿ ಎಂದರೆ ಸೈನಿಕ ಶಕ್ತಿ. ದೇಶವನ್ನು ಶತ್ರುಗಳಿಂದ ರಕ್ಷಿಸಲು ಬಲಿಷ್ಠ ಸೈನ್ಯ ಅಗತ್ಯ. ಸೈನಿಕರು ಹಗಲು-ರಾತ್ರಿ ದೇಶದ ಗಡಿಗಳನ್ನು ಕಾಪಾಡುತ್ತಾ ನಮ್ಮ ಭದ್ರತೆಯನ್ನು ಖಾತ್ರಿಪಡಿಸುತ್ತಾರೆ. ಆದ್ದರಿಂದ ದೇಶದ ರಕ್ಷಣೆಗೆ ಅಸಿ ಬಹಳ ಮುಖ್ಯ.
ಮಸಿ ಎಂದರೆ ಬರೆವಣಿಗೆ ಅಥವಾ ಸಾಹಿತ್ಯ. ಪೆನ್ನು ಖಡ್ಗಕ್ಕಿಂತ ಶಕ್ತಿಯುತ ಎಂಬ ಗಾದೆ ಮಾತಿನಂತೆ, ಸಾಹಿತ್ಯವು ಸಮಾಜದ ಚಿಂತನೆಗಳನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ಕವಿಗಳು, ಸಾಹಿತಿಗಳು ಮತ್ತು ಲೇಖಕರು ತಮ್ಮ ಕೃತಿಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಸಮಾಜದ ಪ್ರಗತಿಗೆ ಕಾರಣರಾಗುತ್ತಾರೆ.
ಕೃಷಿ ಅತ್ಯಂತ ಮಹತ್ವದ್ದಾಗಿದೆ. ರೈತನು ದೇಶದ ಬೆನ್ನೆಲುಬು. ಆಹಾರ ಉತ್ಪಾದನೆಗಾಗಿ ಕೃಷಿ ಅಗತ್ಯವಾಗಿದ್ದು, ಕೃಷಿಯಿಲ್ಲದೆ ಯಾವುದೇ ದೇಶವೂ ಬದುಕಲು ಸಾಧ್ಯವಿಲ್ಲ. ಆದರೆ ಇಂದಿನ ರೈತರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ—ಮಳೆಯ ಅಭಾವ, ಕಳಪೆ ಬೀಜಗಳು, ಸರಿಯಾದ ಬೆಲೆ ಸಿಗದಿರುವುದು ಇತ್ಯಾದಿ.
ಇದರಿಂದ ಲೇಖಕರು ಹೇಳುವುದೇನೆಂದರೆ ದೇಶದ ಸಂರಕ್ಷಣೆ, ಪ್ರಗತಿ ಮತ್ತು ಸಮೃದ್ಧಿ ಈ ಮೂರು ಅಂಶಗಳಾದ ಅಸಿ, ಮಸಿ ಮತ್ತು ಕೃಷಿಯನ್ನು ಅವಲಂಬಿಸಿದೆ. ಆದ್ದರಿಂದ ಯೋಧರು, ಸಾಹಿತಿಗಳು ಮತ್ತು ರೈತರ ಜೀವನ ಸುಧಾರಣೆಗೆ ಎಲ್ಲರೂ ಶ್ರಮಿಸಬೇಕು ಎಂಬ ಸಂದೇಶವನ್ನು ಈ ಪ್ರಬಂಧ ನೀಡುತ್ತದೆ.
III. ಭಾಷಾಭ್ಯಾಸದ ಉತ್ತರಗಳನ್ನು ಸರಿಯಾಗಿ ನೀಡಲಾಗಿದೆ
ಅ) ಕೆಳಗಿನ ಪದಗಳನ್ನು ಬಿಡಿಸಿ ಬರೆದು ಸಂಧಿಯ ಹೆಸರು ತಿಳಿಸಿರಿ.
- ಒಬ್ಬೊಬ್ಬರು = ಒಬ್ಬ + ಒಬ್ಬರು — ದ್ವಿತ್ವ ಸಂಧಿ
- ಸರ್ವಾಧಿ = ಸರ್ವ + ಅಧಿ — ಸ್ವರ ಸಂಧಿ
- ಬೆನ್ನೆಲುಬು = ಬೆನ್ನು + ಎಲುಬು — ಸ್ವರ ಸಂಧಿ
- ಸತ್ಯಾಗ್ರಹ = ಸತ್ಯ + ಆಗ್ರಹ — ಸ್ವರ ಸಂಧಿ
ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕಗಳನ್ನು ಬರೆಯಿರಿ.
- ಪ್ರಗತಿ — ಹಿಂಜರಿತ / ಅವನತಿ
- ಅವಲಂಬನೆ — ಸ್ವಾವಲಂಬನೆ
- ಪ್ರಬಲ — ದೌರ್ಬಲ್ಯ / ದುರ್ಬಲ
- ಸತ್ಪರಿಣಾಮ — ದುಷ್ಪರಿಣಾಮ
- ಆಶಾವಾದಿ — ನಿರಾಶಾವಾದಿ
- ಅತಿವೃಷ್ಟಿ — ಅನವೃಷ್ಟಿ
ಇ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ.
- ಉತ್ತೇಕ್ಷೆ — ಈ ಕಥೆಯಲ್ಲಿ ಸಮಾಜದ ಸಮಸ್ಯೆಗಳ ಬಗ್ಗೆ ಲೇಖಕರು ಉತ್ತೇಕ್ಷೆ ವ್ಯಕ್ತಪಡಿಸಿದ್ದಾರೆ.
- ಸತ್ಪರಿಣಾಮ — ಉತ್ತಮ ಶಿಕ್ಷಣದಿಂದ ಮಕ್ಕಳಲ್ಲಿ ಸತ್ಪರಿಣಾಮ ಉಂಟಾಗುತ್ತದೆ.
- ಸಮೃದ್ಧಿ — ಕೃಷಿಯ ಅಭಿವೃದ್ಧಿಯಿಂದ ದೇಶದಲ್ಲಿ ಸಮೃದ್ಧಿ ಹೆಚ್ಚುತ್ತದೆ.
- ಸತ್ಯಾಗ್ರಹ — ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ನಡೆಸಿದರು.
- ಸೆಣಸು — ರೈತನು ಪ್ರಕೃತಿಯೊಂದಿಗೆ ಪ್ರತಿದಿನ ಸೆಣಸುತ್ತಾನೆ.
- ಉಪೇಕ್ಷೆ — ಸಮಾಜದಲ್ಲಿ ಬಡವರನ್ನು ಉಪೇಕ್ಷೆ ಮಾಡಬಾರದು.
ಈ) ಕೆಳಗಿನ ಪದಗಳಿಗೆ ತತ್ಸಮ–ತದ್ಭವ ರೂಪ ಬರೆಯಿರಿ.
- ವರ್ಷ — ವರ್ಷ (ತತ್ಸಮ), ವರ್ಷ / ವರ್ಷಾ (ತದ್ಭವ)
- ಭೂಮಿ — ಭೂಮಿ (ತತ್ಸಮ), ಬೂಮಿ (ತದ್ಭವ)
- ಕತೆ — ಕಥಾ (ತತ್ಸಮ), ಕತೆ (ತದ್ಭವ)
- ಬೇಸಾಯ — ವ್ಯವಸಾಯ (ತತ್ಸಮ), ಬೇಸಾಯ (ತದ್ಭವ)
- ಕಾರ್ಯ — ಕಾರ್ಯ (ತತ್ಸಮ), ಕೇಲಸ / ಕೆಲಸ (ತದ್ಭವ)
- ಕಾವ್ಯ — ಕಾವ್ಯ (ತತ್ಸಮ), ಕವಿತೆ (ತದ್ಭವ)
ಉ) ಮೊದಲೆರಡು ಪದಗಳಿಗಿರುವ ಸಂಬಂಧದಂತೆ, ಮೂರನೇ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ.
- ಅಸಿ : ಯುದ್ಧ :: ಮಸಿ : ಸಾಹಿತ್ಯ / ಬರೆವಣಿಗೆ
- ಕ್ರಿಮಿಕೀಟ : ಜೋಡುನುಡಿ :: ದೊಡ್ಡ : ದೊಡ್ಡ ದೊಡ್ಡ
- ಯುದ್ಧ : ಜುದ್ದ :: ದೇಶ : ದೇಸ (ತದ್ಭವ ರೂಪ)
- ಯೋಧ : ರಕ್ಷಣೆ :: ರೈತ : ಆಹಾರ / ಕೃಷಿ
Frequently Asked Questions
- -ಅಸಿ–ಮಸಿ–ಕೃಷಿ ಎಂದರೇನು?
- ರೈತನು ದೇಶದ ಬೆನ್ನೆಲುಬು ಎನ್ನುವುದಕ್ಕೆ ಕಾರಣವೇನು?
- ಪೆನ್ನು ಖಡ್ಗಕ್ಕಿಂತ ಹರಿತವಾದುದು ಏಕೆ?
- ದೇಶದ ಅಭಿವೃದ್ಧಿಗೆ ಯಾವ ಮೂರು ಅಂಶಗಳು ಮುಖ್ಯ?
- ರೈತರ ಸಮಸ್ಯೆಗಳು ಯಾವುವು?
👉 Scroll above to find detailed answers.
Additional Question and Answer
Question 1.
‘ಅಸಿ–ಮಸಿ–ಕೃಷಿ’ ಎಂಬ ಪದಗಳ ಅರ್ಥವೇನು?
Answer:
ಅಸಿ ಎಂದರೆ ಸೈನಿಕ ಶಕ್ತಿ, ಮಸಿ ಎಂದರೆ ಸಾಹಿತ್ಯ/ಬರೆವಣಿಗೆ ಮತ್ತು ಕೃಷಿ ಎಂದರೆ ವ್ಯವಸಾಯ.
Question 2.
ಲೇಖಕರು ಕೃಷಿಗೆ ಏಕೆ ಹೆಚ್ಚಿನ ಮಹತ್ವ ನೀಡಿದ್ದಾರೆ?
Answer:
ಆಹಾರ ಉತ್ಪಾದನೆ ಕೃಷಿಯಿಂದ ಮಾತ್ರ ಸಾಧ್ಯವಾಗುವುದರಿಂದ ಲೇಖಕರು ಕೃಷಿಗೆ ಹೆಚ್ಚಿನ ಮಹತ್ವ ನೀಡಿದ್ದಾರೆ.
Question 3.
ರೈತನು ಎದುರಿಸುವ ಪ್ರಮುಖ ಸಮಸ್ಯೆಗಳು ಯಾವುವು?
Answer:
ಮಳೆಯ ಅಭಾವ, ಕಳಪೆ ಬೀಜಗಳು, ಬೆಳೆಗಳಿಗೆ ರೋಗಗಳು ಮತ್ತು ಸರಿಯಾದ ಬೆಲೆ ಸಿಗದಿರುವುದು ರೈತನ ಪ್ರಮುಖ ಸಮಸ್ಯೆಗಳು.
Question 4.
‘ಪೆನ್ನು ಖಡ್ಗಕ್ಕಿಂತ ಹರಿತವು’ ಎಂಬುದರ ಅರ್ಥವೇನು?
Answer:
ಬರೆವಣಿಗೆ (ಸಾಹಿತ್ಯ) ಯುದ್ಧಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂಬುದನ್ನು ಸೂಚಿಸುತ್ತದೆ.
Question 5.
ಯೋಧನ ಪಾತ್ರ ದೇಶದಲ್ಲಿ ಏನು?
Answer:
ಯೋಧನು ದೇಶವನ್ನು ಶತ್ರುಗಳಿಂದ ರಕ್ಷಿಸುವ ಪ್ರಮುಖ ಪಾತ್ರವಹಿಸುತ್ತಾನೆ.
Question 6.
ಸಾಹಿತಿಗಳ ಪಾತ್ರ ಏನು?
Answer:
ಸಾಹಿತಿಗಳು ತಮ್ಮ ಸಾಹಿತ್ಯದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿ ಜನರನ್ನು ಪ್ರೇರೇಪಿಸುತ್ತಾರೆ.
Question 7.
ರೈತನು ದೇಶದ ಬೆನ್ನೆಲುಬು ಎನ್ನುವುದಕ್ಕೆ ಕಾರಣವೇನು?
Answer:
ದೇಶದ ಜನರಿಗೆ ಅಗತ್ಯವಾದ ಆಹಾರವನ್ನು ರೈತನು ಉತ್ಪಾದಿಸುತ್ತಾನೆ.
Question 8.
ದೇಶದ ಅಭಿವೃದ್ಧಿಗೆ ಯಾವ ಮೂರು ಅಂಶಗಳು ಮುಖ್ಯ?
Answer:
ಅಸಿ, ಮಸಿ ಮತ್ತು ಕೃಷಿ ದೇಶದ ಅಭಿವೃದ್ಧಿಗೆ ಮುಖ್ಯ ಅಂಶಗಳು.
Question 9.
ಸಾಹಿತ್ಯ ಸಮಾಜದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
Answer:
ಸಾಹಿತ್ಯವು ಜನರ ಚಿಂತನೆಗಳನ್ನು ಬದಲಾಯಿಸಿ ಉತ್ತಮ ಮಾರ್ಗದಲ್ಲಿ ನಡೆಸುತ್ತದೆ.
Question 10.
ರೈತರ ಬದುಕು ಸುಧಾರಿಸಲು ಏನು ಮಾಡಬೇಕು?
Answer:
ಸರ್ಕಾರಗಳು, ವಿಜ್ಞಾನಿಗಳು ಮತ್ತು ಸಮಾಜದ ಎಲ್ಲ ವರ್ಗದವರು ರೈತರಿಗೆ ಸಹಾಯ ಮಾಡಬೇಕು.
Click Here to Download Asi Masi Krushi PDF Notes
Click Here to Watch Asi Masi Krushi Video
asi masi krushi question answers, asi masi krushi summary, sslc kannada chapter 2 notes, karnataka board kannada notes 2026