Class 10 Nudi Kannada Padya Solution Chapter 2

SSLC Nudi Kannada Question and Answer -Bhumitaya Kudigalu

Looking for SSLC /Class 10th Nudi Kannada textbook answers? You can download Chapter 2: Bhumitaya Kudigalui Questions and Answers PDF, Notes, and Summary here. SSLC /Class 10th Nudi Kannada Padyabhaga solutions follow the Karnataka State Board Syllabus, making it easier for students to revise and score higher in exams.

Karnataka SSLC/Class 10th Nudi Kannada Textbook Answers—Reflections Chapter 2

Bhumitaya Kudigalu Questions and Answers, Notes, and Summary

Class 10 Nudi Kannada Pome Chapter 2

Bhumitaya Kudigalu

ಭೂಮಿತಾಯ ಕುಡಿಗಳು
Scroll Down to Download Bhumitaya Kudigalu PDF

ಅ) ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದ ಉತ್ತರಗಳನ್ನು ಬರೆಯಿರಿ.

Question 1.
‘ಭೂಮಿ ತಾಯ ಕುಡಿಗಳು’ ಪದ್ಯದಲ್ಲಿ ಕವಿ ಯಾರು ಯಾರು ಒಂದು ಎಂದು ಹೇಳಿದ್ದಾರೆ?
Answer:
‘ಭೂಮಿ ತಾಯ ಕುಡಿಗಳು’ ಪದ್ಯದಲ್ಲಿ ಕವಿಗಳು ಭಾರತೀಯರಾದ ನಾವು, ನೀವು, ಅವರು, ಇವರು ಎಲ್ಲರೂ ಒಂದು ಎಂದು ಹೇಳಿದ್ದಾರೆ.

Question 2.
ಎಲ್ಲರೂ ಇಂದೇ ಏನೆಂದು ಪಣ ತೊಡಬೇಕೆಂದು ಕವಿ ನಿಸಾರ್ ಅಹಮದ್ ಆಶಿಸಿದ್ದಾರೆ?
Answer:
ನಾವೆಲ್ಲರೂ ಒಂದೇ, ಈ ಭಾರತ ಭೂಮಾತೆಯ ಕುಡಿಗಳೆಂದು ಪಣ ತೊಡಬೇಕೆಂದು ಕವಿಗಳಾದ ನಿಸಾರ್ ಅಹಮದ್ ಆಶಿಸಿದ್ದಾರೆ.

Question 3.
ಕಳಸ, ಶಿಲುಬೆ, ಬಿಳಿಮಿನಾರು ಇವು ಯಾವ ಧರ್ಮದ ಸಂಕೇತಗಳಾಗಿವೆ?
Answer:
ಕಳಸ, ಶಿಲುಬೆ ಬಿಳಿಮಿನಾರು ಇವು ಕ್ರಮವಾಗಿ ಹಿಂದೂ, ಕ್ರಿಶ್ಚನ್, ಮುಸ್ಲಿಂ ಧರ್ಮಗಳ ಸಂಕೇತಗಳಾಗಿವೆ.

Question 4.
ರಸ ಕವಿತ್ವ ಒಂದೇ ಆದರೂ ಅದರ ರಚನೆಗೆ ಬಳಕೆಯಾಗುತ್ತಿರುವ ಛಂದೋ ಪ್ರಕಾರಗಳು ಯಾವುವು?
Answer:
ಕಂದ, ವೃತ್ತ, ತ್ರಿಪದಿ ಮತ್ತು ವಚನಸಾಹಿತ್ಯ ಇವೆಲ್ಲ ಸಾಹಿತ್ಯ ಮತ್ತು ಕಾವ್ಯಗಳ ವಿವಿಧ ಪ್ರಕಾರಗಳಾದರೂ ಅವುಗಳ ರಸ ಕವಿತ್ವ, ಒಂದೇ ಆಗಿದೆ.

Question 5.
‘ನಿತ್ಯೋತ್ಸವ ಕವಿ’ ಎಂದೇ ಪ್ರಸಿದ್ಧರಾಗಿರುವ ಕವಿ ಯಾರು?
Answer:
‘ನಿತ್ಯೋತ್ಸವ ಕವಿ’ ಎಂದೇ ಪ್ರಸಿದ್ಧರಾಗಿರುವ ಕವಿ ಪ್ರೊ. ಕೆ. ಎಸ್. ನಿಸಾರ್ ಅಹಮದ್.

ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

Question 1.
ಆಂಗ್ಲರು, ಆಫ್ರಿಕನ್ನರಲ್ಲಿ ಹರಿವ ನೆತ್ತರೊಂದೇ ಎಂದು ಕವಿ ಹೇಳಿರುವುದರ ಔಚಿತ್ಯವೇನು?
Answer:
ಆಂಗ್ಲ ಜನರ ಮೈಬಣ್ಣ ಕೆಂಪಾಗಿರುತ್ತದೆ. ಆಫ್ರಿಕನ್ ಜನರ ಮೈಬಣ್ಣ ಕಪ್ಪಾಗಿರುತ್ತದೆ. ಆದರೆ ಅವರವರ ಮೈಯಲ್ಲಿ ಹರಿಯುವ ರಕ್ತದ ಬಣ್ಣ ಕೆಂಪು ಒಂದೇ ಆಗಿರುತ್ತದೆ. ವಿಶ್ವದ ಮಾನವರು ಹೇಗೆ ಕಾಣಿಸಲಿ ಎಲ್ಲೆ ಇರಲಿ ಅವರೆಲ್ಲರೂ ಮಾನವ ಸಮುದಾಯಕ್ಕೆ ಸೇರಿರುವವರು ಎಂದು ಕವಿಗಳು ಹೇಳಿರುವುದು ಔಚಿತ್ಯವೇ ಸರಿ.

Question 2.
ಭೌಗೋಳಿಕವಾಗಿ ಭಾರತೀಯರೆಲ್ಲಾ ಒಂದೇ ಎಂದು ನಿಸಾರ್ ಅಹಮದ್ ಅವರು ಹೇಗೆ ನಿರೂಪಿಸಿದ್ದಾರೆ?
Answer:
ಭಾರತೀಯರಾದ ನಾವು ಕರ್ನಾಟಕ, ವಂಗ, ಆಂಧ್ರಪ್ರದೇಶ ಎಲ್ಲಿಯೇ ವಾಸವಾಗಿದ್ದರೂ ಮೂಲತಃ ನಾವೆಲ್ಲರೂ ಭಾರತೀಯರೆ. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ದಿಕ್ಕುಗಳಲ್ಲಿ ಬೀಸುವ ಗಾಳಿ, ಮೇಲೆ ಕಾಣಿಸುವ ಆಕಾಶ ಎಲ್ಲರಿಗೂ ಒಂದೇ ಎಂದು ಕವಿಗಳು ಭೌಗೋಳಿಕವಾಗಿಯೂ ಭಾರತೀಯರೆಲ್ಲಾ ಒಂದೇ ಎಂದು ನಿರೂಪಿಸಿದ್ದಾರೆ.

Question 3.
ಬಣ್ಣ ಬೇರೆಯಾದರೂ, ಜೀವರಸ ಒಂದೇ ಎಂಬ ಭಾವನೆ ‘ಭೂಮಿತಾಯ ಕುಡಿಗಳು’ ಕವನದಲ್ಲಿ ಹೇಗೆ ವ್ಯಕ್ತವಾಗಿದೆ?
Answer:
ಆಂಗ್ಲ, ಆಫ್ರಿಕನ್‌ರ ಮೈಬಣ್ಣ ವಿಭಿನ್ನವಾದರೂ ಅವರವರಲ್ಲಿ ಹರಿಯುವ ರಕ್ತದ ಬಣ್ಣ ಕೆಂಪು ಆಗಿರುತ್ತದೆ. ಅದರಂತೆಯೇ, ಅಕ್ಕಿ, ರಾಗಿ, ಗೋಧಿ, ಜೋಳ ಈ ಎಲ್ಲ ದವಸಧಾನ್ಯಗಳ ಬಣ್ಣ ಬೇರೆ ಬೇರೆಯಾದರೂ ರೈತ ಹೊಲದಲ್ಲಿ ಧಾನ್ಯ ಬೆಳೆಯುವ ಪೈರಿನ ಬಣ್ಣ ಹಸಿರೊಂದೆ ಆಗಿರುತ್ತದೆ. ಹೀಗೆ ಬಣ್ಣ ಬೇರೆಯಾದರೂ. ಜೀವರಸ ಒಂದೇ ಆಗಿರುವುದೆಂದು ಕವಿಗಳು ಈ ಪದ್ಯದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Question 4.
ಬೆಳಕಿನ ಸತ್ವ ಮತ್ತು ರಸಕವಿತ್ವ ಒಂದೇ ಎನ್ನುವುದಕ್ಕೆ ನಿಸಾರ್ ಅಹಮದ್‌ರವರು ನೀಡಿರುವ ನಿದರ್ಶನಗಳಾವುವು?
Answer:
ಬಾಣ, ಬಿರುಸು, ಕುಂಡ, ಹಣತೆ ಇವುಗಳ ಸ್ವರೂಪ ಬೇರೆ ಬೇರೆಯಾದರೂ ಇವುಗಳಲ್ಲಿರುವ ಬೆಳಕಿನ ಸತ್ವ ಒಂದೇ ಆಗಿರುತ್ತದೆ. ಅದರಂತೆಯೇ ಕಂದ, ವೃತ್ತ, ತ್ರಿಪದಿ, ವಚನ ಇವೆಲ್ಲ ಸಾಹಿತ್ಯದ ವಿವಿಧ ಪ್ರಕಾರಗಳಾದರೂ ಇವುಗಳ ಒಳಗಿರುವ ರಸಕವಿತ್ವ ಒಂದೇ ಆಗಿರುವುದು ಎಂದು ಕವಿ ನಿಸಾರ್ ಅಹಮದ್ ಅವರು ಕೆಲವು ನಿದರ್ಶನಗಳನ್ನು ನೀಡಿದ್ದಾರೆ.

ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

Question 1.
‘ಮನುಜ ಜಾತಿ ತಾನೊಂದೆ ವಲಂ’ ಎಂಬ ಭಾವನೆ ‘ಭೂಮಿ ತಾಯಿ ಕುಡಿಗಳು’ ಕವನದಲ್ಲಿ ಹೇಗೆ ವ್ಯಕ್ತವಾಗಿದೆ? ವಿವರಿಸಿ.

Answer:
ಪ್ರಕೃತಿಯಲ್ಲಿ ವೈವಿಧ್ಯತೆಯಿದ್ದರೂ ಮೂಲತಃ ಏಕತೆ ಇರುವಂತೆ ಭಾರತ ಭೂ ತಾಯಿಯ ಮಕ್ಕಳಾದ ನಾವೆಲ್ಲರೂ ಒಂದೇ. ನಾವು ಒಗ್ಗಟ್ಟಿನಿಂದ ಬಾಳಬೇಕು. ಪ್ರಪಂಚದ ಒಂದೊಂದು ದೇಶಗಳಲ್ಲಿ ಆಚಾರ-ವಿಚಾರ, ರೂಢಿ-ಸಂಪ್ರದಾಯ, ಉಡುಗೆ-ತೊಡುಗೆ, ಭಾಷೆ, ಸಂಸ್ಕೃತಿ, ಆಹಾರ ಮೊದಲಾದವುಗಳಲ್ಲಿ ವಿಭಿನ್ನತೆಗಳಿದ್ದರೂ ವಿಶ್ವ ಮಾನವರಾದ ನಾವೆಲ್ಲರೂ ಒಂದೇ. ನಾಗರಿಕತೆ ಬೆಳೆದಂತೆ, ನಾವೇ ಮಾಡಿಕೊಂಡಿರುವ ಧರ್ಮ, ಭಾಷೆ, ಜಾತಿ, ಜನಾಂಗ, ಸಂಪ್ರದಾಯಗಳು ಬೇರೆ ಬೇರೆಯಾಗಿರಬಹುದು. ಪಂಚಭೂತಗಳಾದ ಭೂಮಿ, ಆಕಾಶ, ಅಗ್ನಿ, ನೀರು, ಗಾಳಿ ಎಲ್ಲರಿಗೂ ಒಂದೇ ಆಗಿರುವಾಗ ಭೂಮಿ ತಾಯಿಯ ಮಕ್ಕಳೇ ಆದ ನಾವೆಲ್ಲರೂ ಒಂದಾಗಿರಬೇಕು. ಆದಿಕವಿ ಪಂಪ ಹೇಳಿದಂತೆ ‘ಮನುಜ ಜಾತಿ ತಾನೊಂದೆ ವಲಂ’ ಎಂಬ ಮಾತಿನಂತೆ ನಾವು ಒಂದಾಗಿ ಬಾಳಬೇಕು ಎಂಬ ಭಾವನೆ ಈ ಕವನದಲ್ಲಿ ಅರ್ಥಪೂರ್ಣವಾಗಿ ವ್ಯಕ್ತವಾಗಿದೆ.

Question 2.
‘ಭೂಮಿ ತಾಯ ಕುಡಿಗಳು’ ಈ ಕವನದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.

Answer:
ನಾವು-ನೀವು, ಅವರು-ಇವರು, ಎಲ್ಲರೂ ಒಂದೇ. ಈ ಭಾರತ ಭೂಮಾತೆಯ ವಂಶದ ಕುಡಿಗಳೇ ಆಗಿದ್ದೇವೆ. ನಮ್ಮನಮ್ಮಲ್ಲಿ ಸ್ವಭಾವ, ಚಹರೆ, ಧರ್ಮ, ಜಾತಿ, ಭಾಷೆ ಹೀಗೆಲ್ಲ ವಿಭಿನ್ನತೆಗಳಿದ್ದರೂ, ನಾವೆಲ್ಲರೂ ಭಾರತೀಯರೆ. ಜಗತ್ತಿನ ಯಾವುದೇ ದೇಶದ ವ್ಯಕ್ತಿಯಾಗಿರಲಿ ಮೊದಲು ಅವರು ವಿಶ್ವ ಮಾನವರೆನಿಸಿಕೊಳ್ಳುತ್ತಾರೆ. ಆಂಗ್ಲರಿರಲಿ, ಆಫ್ರಿಕನ್ನರೇ ಇರಲಿ ಅವರವರಲ್ಲಿ ಹರಿಯುವ ರಕ್ತದ ಬಣ್ಣ ಒಂದೇ ಆಗಿದೆ. ದವಸ ಧಾನ್ಯಗಳ ಬಣ್ಣ ಬೇರೆ ಬೇರೆಯಾದರೂ ಹೊಲದಲ್ಲಿ ಆ ಬೆಳೆಯ ಪೈರಿನ ಬಣ್ಣ ಹಸಿರೊಂದೆ ಆಗಿರುತ್ತದೆ.

ಬಾಣ, ಬಿರುಸು, ಕುಂಡ, ಹಣತೆ ಇವೆಲ್ಲ ಕಾಣಲು ಬೇರೆ ಬೇರೆ ಎನಿಸಿದರೂ ಅವುಗಳ ಒಳಗಿನ ಬೆಳಕಿನ ಸತ್ವ ಒಂದೇ ಆಗಿರುವುದು. ಸಾಹಿತ್ಯದ ವಿವಿಧ ರೂಪಗಳಾದ ಕಂದ, ವೃತ್ತ, ತ್ರಿಪದಿ, ವಚನ ಇವೆಲ್ಲವುಗಳ ರಸಕವಿತ್ವ ಒಂದೇಯಾಗಿರುತ್ತದೆ. ಭಾರತವಾಸಿಗಳಾದ ನಾವು ಯಾವುದೇ ರಾಜ್ಯದಲ್ಲಿ ವಾಸಿಸಲಿ ಮೊದಲು ನಾವೆಲ್ಲರೂ ಭಾರತೀಯರೆ. ನಾಲ್ಕು ದಿಕ್ಕುಗಳಲ್ಲಿ ಬೀಸುವ ಗಾಳಿ ಮೇಲೆ ಕಾಣಿಸುವ ಆಕಾಶ ಎಲ್ಲರಿಗೂ ಒಂದೇ ಆಗಿರುವಾಗ ನಾವೆಲ್ಲರೂ ಕೂಡಾ ಒಂದಾಗಿ ಒಗ್ಗಟ್ಟಿನಿಂದ ಬಾಳಬೇಕೆಂದು ಕೆ. ಎಸ್. ನಿಸಾರ್ ಅಹಮದ್ ಅವರು ಹೇಳಿದ್ದಾರೆ.

Question 3.
ನಿಸಾರ್ ಅಹಮದ್‌ರವರು ನಾವೆಲ್ಲರೂ ಭೂಮಿ ತಾಯಿಯ ಕುಡಿಗಳೆಂದು ಏಕೆ ಪಣ ತೊಡಬೇಕೆಂದು ಹೇಳಿದ್ದಾರೆ?

Answer:
ಪ್ರಕೃತಿಯಲ್ಲಿ ಅಪಾರ ವೈವಿಧ್ಯ ಇದ್ದರೂ ಒಳಗೆ ಸಾಮರಸ್ಯ ಇರುವಂತೆ ಭಾರತ ಭೂಮಿತಾಯ ಮಕ್ಕಳಾದ ನಾವೆಲ್ಲರೂ ಒಗ್ಗಟ್ಟಾಗಿರಬೇಕು. ಜಗತ್ತಿನ ವಿವಿಧ ದೇಶಗಳಲ್ಲಿ ಒಂದೊಂದು ರೀತಿಯ ಆಚಾರ-ವಿಚಾರ, ಉಡುಗೆ-ತೊಡುಗೆ, ರೂಢಿ-ಸಂಪ್ರದಾಯ, ಆಹಾರ ಪದ್ಧತಿಗಳನ್ನು ಹೊಂದಿದ್ದರೂ ಮಾನವರಾದ ನಾವೆಲ್ಲರೂ ಒಂದೇ ನಾಗರಿಕತೆ ಬೆಳೆದಂತೆ ನಾವೇ ಮಾಡಿಕೊಂಡಿರುವ ಧರ್ಮ, ಜಾತಿ, ಭಾಷೆ, ಜನಾಂಗ ಮತ್ತು ಸಂಪ್ರದಾಯಗಳು ಬೇರೆ ಬೇರೆಯಾಗಿರಬಹುದು. ಪಂಚಭೂತಗಳಾದ ಭೂಮಿ, ಆಕಾಶ, ಅಗ್ನಿ, ಜಲ, ಗಾಳಿ ಒಂದೇ ಆಗಿರುವಾಗ ಈ ಭೂಮಿತಾಯಿಯ ಮಕ್ಕಳಾದ ನಾವೆಲ್ಲರೂ ಒಂದಾಗಬೇಕು. ಏಕತೆಯ ಭಾವನೆಯನ್ನು ಹೊಂದಬೇಕು. ನಾವೆಲ್ಲರೂ ಸರಿಸಮಾನರು ಈ ಭೂಮಿತಾಯಿಯ ಕುಡಿಗಳೆಂದು ಪಣ ತೊಡಬೇಕೆಂದು ಕವಿಗಳಾದ ನಿಸಾರ್ ಅಹಮದ್ ಅವರು ಹೇಳುತ್ತಾರೆ.

ಈ) ಕೆಳಗಿನ ಸಾಲುಗಳ ಸಂದರ್ಭಗಳನ್ನು ಸ್ವಾರಸ್ಯಸಹಿತ ವಿವರಿಸಿ.

Question 1.
“ಭೂಮಿ ತಾಯ ಕುಡಿಗಳೆಂದು ಪಣವ ತೊಡಿರಿ ಇದೆ.”

Answer:
ಪದ್ಯದ ಹೆಸರು: ಭೂಮಿ ತಾಯ ಕುಡಿಗಳು.
ಕವಿಗಳ ಹೆಸರು: ಪ್ರೊ. ಕೆ. ಎಸ್. ನಿಸಾರ್ ಅಹಮದ್.
ಸಂದರ್ಭ: ಕವಿಗಳು ನಮ್ಮನ್ನು ಉದ್ದೇಶಿಸಿ ಮಾತನಾಡುವಾಗ ಈ ಮಾತನ್ನು ನುಡಿದಿದ್ದಾರೆ.
ವಿವರಣೆ: ಭಾರತ ದೇಶದಲ್ಲಿ ಹುಟ್ಟಿದವರಾದ ನಾವೆಲ್ಲರೂ ಒಂದೇ. ನಾವೆಲ್ಲರೂ ಈ ಭಾರತ ಭೂಮಾತೆಯ ವಂಶದ ಕುಡಿಗಳೇ ಆಗಿದ್ದೇವೆ ಎಂದು ಇಂದೇ ಪ್ರಮಾಣ ಮಾಡೋಣವೆಂದು ಕವಿಗಳು ಮಾನವ ಸಮುದಾಯಕ್ಕೆ ಕರೆ ನೀಡಿದ್ದಾರೆ.

Question 2.
“ಸ್ವಸ್ವಭಾವ ಚಹರೆ ಬೇರೆ ತಾಯ ಬಸಿರು ಒಂದೆ.”

Answer:
ಪದ್ಯದ ಹೆಸರು: ಭೂಮಿ ತಾಯ ಕುಡಿಗಳು.
ಕವಿಗಳ ಹೆಸರು: ಪ್ರೊ. ಕೆ. ಎಸ್. ನಿಸಾರ್ ಅಹಮದ್.
ಸಂದರ್ಭ: ನಮ್ಮಲ್ಲಿರುವ ವಿಭಿನ್ನ ಗುಣಲಕ್ಷಣ ಹಾಗೂ ಭಾರತಾಂಬೆಯ ಕುರಿತು ಹೇಳುವಾಗ ಕವಿಗಳು ಈ ಮಾತನ್ನು ನುಡಿದಿದ್ದಾರೆ.
ವಿವರಣೆ: ಭಾರತೀಯರಾದ ನಮ್ಮಲ್ಲಿ ಸ್ವಭಾವಗಳಲ್ಲಿ ಹಾಗೂ ಚಹರೆಗಳಲ್ಲಿ ಭಿನ್ನತೆಗಳು ಕಂಡು ಬಂದರೂ ಮೂಲತಃ ನಾವೆಲ್ಲರೂ ಭಾರತೀಯರೆ, ನಮ್ಮೆಲ್ಲರಿಗೂ ಆಸರೆ ನೀಡುವ ಭೂಮಿ ತಾಯಿಯ ಬಸಿರು ಒಂದೇ ಆಗಿದೆ ಎಂದು ಹೇಳುವಾಗ ಕವಿಗಳು ಈ ಮೇಲಿನ ಮಾತನ್ನು ನುಡಿದಿದ್ದಾರೆ.

Question 3.
“ಕರ್ನಾಟಕದ ವಂಗ ಆಂಧ್ರ ಭಾರತೀಯರೊಂದೆ”

Answer:
ಪದ್ಯದ ಹೆಸರು: ಭೂಮಿ ತಾಯ ಕುಡಿಗಳು.
ಕವಿಗಳ ಹೆಸರು: ಪ್ರೊ. ಕೆ. ಎಸ್. ನಿಸಾರ್ ಅಹಮದ್.
ಸಂದರ್ಭ: ಕವಿಗಳು ಈ ಮಾತನ್ನು ನಮ್ಮನ್ನು ಉದ್ದೇಶಿಸಿ ನುಡಿದಿದ್ದಾರೆ.
ವಿವರಣೆ: ಭಾರತವಾಸಿಗಳಾದ ನಾವು ಯಾವುದೇ ರಾಜ್ಯಕ್ಕೆ ಸೇರಿದವರಾದರೂ ನಾವೆಲ್ಲರೂ ಭಾರತೀಯರೆ, ನಾಲ್ಕು ದಿಕ್ಕುಗಳಲ್ಲಿ ಬೀಸುವ ಗಾಳಿ ಮೇಲೆ ಕಾಣಿಸುವ ಆಕಾಶ ಎಲ್ಲರಿಗೂ ಒಂದೇ ಆಗಿರುವಂತೆ ನಾವೆಲ್ಲರೂ ಕೂಡ ಒಗ್ಗಟ್ಟಾಗಿರಬೇಕು ಎಂದು ಹೇಳುವಾಗ ಕವಿಗಳು ಈ ಮೇಲಿನ ಮಾತನ್ನು ನುಡಿದಿದ್ದಾರೆ.

ಉ) ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ.
  1. ಕಂದ, ವೃತ್ತ, ಉಪಮಾ, ತ್ರಿಪದಿ = ಉಪಮಾ
  2. ನಾನು, ನೀನು, ಅವರು, ಒಂದೆ = ಒಂದೆ
  3. ಅಕ್ಕಿ, ರಾಗಿ, ಮಾವು, ಗೋಧಿ = ಮಾವು
  4. ಬಾಣ, ಹಣತೆ, ಕುಂಡ, ಬಿರುಸು = ಹಣತೆ
  5. ಕಳಸ, ವಚನ, ಶಿಲುಬೆ, ಮಿನಾರ್ = ವಚನ

ಭೂಮಿತಾಯ ಕುಡಿಗಳು – ಸಾರಾಂಶ
Summary

S. Nissar Ahmed ಅವರ ‘ಭೂಮಿತಾಯ ಕುಡಿಗಳು’ ಎಂಬ ಪದ್ಯವು ಮಾನವ ಏಕತೆ ಮತ್ತು ವಿಶ್ವಮಾನವತ್ವದ ಸಂದೇಶವನ್ನು ಸಾರುತ್ತದೆ. ಪ್ರಕೃತಿಯಲ್ಲಿ ಅನೇಕ ವೈವಿಧ್ಯಗಳಿದ್ದರೂ ಅದರ ಮೂಲ ಒಂದೇ ಆಗಿರುವಂತೆ, ಈ ಭೂಮಿಯ ಮೇಲೆ ವಾಸಿಸುವ ಎಲ್ಲ ಮಾನವರೂ ಒಂದೇ ಎಂಬ ಭಾವನೆಯನ್ನು ಕವಿ ವ್ಯಕ್ತಪಡಿಸಿದ್ದಾರೆ.

ಮಾನವರಲ್ಲಿ ಭಾಷೆ, ಧರ್ಮ, ಜನಾಂಗ, ಉಡುಗೆ-ತೊಡುಗೆ, ಆಹಾರ ಪದ್ಧತಿ ಮತ್ತು ಸಂಪ್ರದಾಯಗಳಲ್ಲಿ ಭಿನ್ನತೆಗಳಿದ್ದರೂ, ಎಲ್ಲರೂ ಭೂಮಿತಾಯಿಯ ಮಕ್ಕಳೇ ಎಂದು ಕವಿ ಹೇಳಿದ್ದಾರೆ. ಕಳಸ, ಶಿಲುಬೆ, ಮಿನಾರಗಳಂತಹ ಧಾರ್ಮಿಕ ಸಂಕೇತಗಳು ಬೇರೆಬೇರೆಯಾಗಿದ್ದರೂ ಅವುಗಳ ಮೂಲ ಉದ್ದೇಶ ಮಾನವ ಕಲ್ಯಾಣವೇ ಆಗಿದೆ. ಆಂಗ್ಲರು ಮತ್ತು ಆಫ್ರಿಕನ್ನರ ದೇಹದಲ್ಲಿ ಹರಿಯುವ ರಕ್ತ ಒಂದೇ ಆಗಿರುವಂತೆ, ಎಲ್ಲ ಮನುಷ್ಯರೂ ಸಮಾನರು ಎಂಬ ಸಂದೇಶವನ್ನು ಕವಿ ನೀಡಿದ್ದಾರೆ.

ಅಕ್ಕಿ, ರಾಗಿ, ಬಿಳಿ ಮತ್ತು ಕಪ್ಪು ಬಣ್ಣಗಳಂತಹ ಭಿನ್ನತೆಗಳಿದ್ದರೂ ಅವುಗಳ ಮೂಲ ಸ್ವರೂಪ ಒಂದೇ ಎಂಬುದನ್ನು ಕವಿ ಉದಾಹರಣೆಗಳ ಮೂಲಕ ವಿವರಿಸುತ್ತಾರೆ. ಬಾಣ, ಕುಂಡ ಮತ್ತು ಹಣತೆಗಳ ರೂಪಗಳು ಬೇರೆಬೇರೆಯಾಗಿದ್ದರೂ ಅವುಗಳ ಬೆಳಕಿನ ತತ್ವ ಒಂದೇ ಆಗಿದೆ. ಹಾಗೆಯೇ ಕಾವ್ಯ ರೂಪಗಳು ಬೇರೆಬೇರೆಯಾಗಿದ್ದರೂ ಅವುಗಳ ರಸ ಮತ್ತು ಸೌಂದರ್ಯ ಒಂದೇ ಆಗಿರುತ್ತದೆ.

ಕರ್ನಾಟಕ, ವಂಗ, ಆಂಧ್ರ ಹಾಗೂ ಭಾರತದ ಎಲ್ಲ ಪ್ರದೇಶಗಳ ಜನರು ಭಾರತೀಯರೆಂಬ ಒಂದೇ ಗುರುತನ್ನು ಹೊಂದಿದ್ದಾರೆ. ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಬೀಸುವ ಗಾಳಿ ಮತ್ತು ಹರಡುವ ಆಕಾಶ ಒಂದೇ ಆಗಿರುವಂತೆ, ನಾವೆಲ್ಲರೂ ಒಗ್ಗಟ್ಟಿನಿಂದ ಬದುಕಬೇಕು ಎಂಬ ಮಹತ್ವದ ಸಂದೇಶವನ್ನು ಈ ಪದ್ಯವು ಸಾರುತ್ತದೆ. ಈ ಪದ್ಯವು ವೈವಿಧ್ಯದಲ್ಲಿ ಏಕತೆ” ಮತ್ತು “ವಿಶ್ವಮಾನವತ್ವ” ಎಂಬ ಆದರ್ಶಗಳನ್ನು ಪ್ರತಿಪಾದಿಸುತ್ತದೆ.

ಭಾಷಾಭ್ಯಾಸ
ಅ) ಕೆಳಗಿನ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ.

1) ನೆತ್ತರು: ರಕ್ತ : ರುಧಿರ : ರಕುತ

2) ಭೂಮಿ : ಇಳೆ; ಧರೆ; ವಸುಂಧರೆ; ಧರಣಿ; ಭುವಿ; ಧಾತ್ರಿ; ಭೂ

3) ತಾಯಿ: ಜನನಿ; ಮಾತೆ; ಅಂಬೆ; ಅಮ್ಮ

4) ಬಸಿರು: ಹೊಟ್ಟೆ; ಉದರ

5) ಮುಗಿಲು: ಆಕಾಶ; ನಭ; ಗಗನ; ಬಾನು; ಆಗಸ; ಅಂಬರ

6) ಗಾಳಿ: ಪವನ; ವಾಯು; ಹವೆ.

ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ರೂಪವನ್ನು ಬರೆಯಿರಿ.

1) ಧರ್ಮ X ಅಧರ್ಮ

2) ಕರಿದು X ಬಿಳಿದು

3) ಬಿಳುಪು X ಕಪ್ಪು

4) ಹಗಲು X ಇರುಳು

5) ಬೆಳಕು X ಕತ್ತಲು

ಇ) ಕೆಳಗಿನ ತತ್ಸಮಗಳಿಗೆ ತದ್ಭವ ರೂಪವನ್ನು ಬರೆಯಿರಿ.

1) ವರ್ಣ-ಬಣ್ಣ

2) ಧರ್ಮ-ದಮ್ಮ, ದರುಮ

3) ಪ್ರಣತಿ-ಹಣತೆ

4) ಭೂಮಿ-ಬುವಿ

ಈ) ಕೆಳಗಿನ ಪದಗಳನ್ನು ಬಿಡಿಸಿ ಬರೆದು, ಸಂಧಿಗಳನ್ನು ಹೆಸರಿಸಿ.

1) ಕುಡಿಗಳು + ಎಂದು = ಕುಡಿಗಳೆಂದು (ಲೋಪ ಸಂಧಿ)

2) ಧರ್ಮದ + ಉಸಿರು = ಧರ್ಮದುಸಿರು (ಲೋಪ ಸಂಧಿ)

3) ನೆತ್ತರು + ಒಂದೆ = ನೆತ್ತರೊಂದೆ (ಲೋಪಸಂಧಿ)

4) ಪೂರ್ವ + ಉತ್ತರ = ಪೂರ್ವೋತ್ತರ (ಗುಣಸಂಧಿ)

5) ಭಾರತೀಯರು + ಒಂದೆ = ಭಾರತೀಯರೊಂದೆ (ಲೋಪಸಂಧಿ)

ಉ) “ಅ” ಪಟ್ಟಿಯನ್ನು “ಬ” ಪಟ್ಟಿಗೆ ಹೊಂದಿಸಿ ಬರೆಯಿರಿ.

ಅ ಪಟ್ಟಿ

ಬ ಪಟ್ಟಿ

ಉತ್ತರ

೧. ಪೂರ್ವ

ಉ) ಮೂಡಣ

೧ – ಉ

೨. ಪಶ್ಚಿಮ

ಈ) ಪಡುವಣ

೨ – ಈ

೩. ಉತ್ತರ

ಅ) ಬಡಗಣ

೩ – ಅ

೪. ದಕ್ಷಿಣ

ಆ) ತೆಂಕಣ

೪ – ಆ


✅ ಸರಿಯಾದ ಹೊಂದಾಣಿಕೆಗಳು:

  • ಪೂರ್ವ – ಮೂಡಣ
  • ಪಶ್ಚಿಮ – ಪಡುವಣ
  • ಉತ್ತರ – ಬಡಗಣ
  • ದಕ್ಷಿಣ – ತೆಂಕಣ
Additional Question and Answer

Question 1.
‘ಭೂಮಿತಾಯ ಕುಡಿಗಳು’ ಪದ್ಯದ ಮುಖ್ಯ ಸಂದೇಶವೇನು?
Answer:
ಈ ಪದ್ಯದ ಮುಖ್ಯ ಸಂದೇಶವೆಂದರೆ ಧರ್ಮ, ಭಾಷೆ, ಜನಾಂಗ, ಸಂಸ್ಕೃತಿ ಮುಂತಾದವುಗಳಲ್ಲಿ ಭಿನ್ನತೆಗಳಿದ್ದರೂ ಎಲ್ಲ ಮಾನವರೂ ಭೂಮಿತಾಯಿಯ ಮಕ್ಕಳಾಗಿದ್ದು, ಒಗ್ಗಟ್ಟಿನಿಂದ ಬದುಕಬೇಕು ಎಂಬುದು.

Question 2.
ಕವಿ ಮಾನವರನ್ನು ಯಾವುದಕ್ಕೆ ಹೋಲಿಸಿದ್ದಾರೆ?
Answer:
ಕವಿ ಮಾನವರನ್ನು ಭೂಮಿತಾಯಿಯ ಮಕ್ಕಳಿಗೆ ಹೋಲಿಸಿ, ಎಲ್ಲರೂ ಒಂದೇ ಕುಟುಂಬದ ಸದಸ್ಯರು ಎಂದು ಹೇಳಿದ್ದಾರೆ.

Question 3.
‘ತಾಯ ಬಸಿರು ಒಂದೆ’ ಎಂಬ ಸಾಲಿನ ಅರ್ಥವೇನು?
Answer:
ಎಲ್ಲ ಮಾನವರೂ ಒಂದೇ ಭೂಮಿತಾಯಿಯ ಮಕ್ಕಳಾಗಿದ್ದು, ಅವರ ಮೂಲ ಒಂದೇ ಎಂಬ ಅರ್ಥವನ್ನು ಈ ಸಾಲು ಸೂಚಿಸುತ್ತದೆ.

Question 4.
ಕವಿ ಧರ್ಮಗಳ ಏಕತೆಯನ್ನು ಹೇಗೆ ವಿವರಿಸಿದ್ದಾರೆ?
Answer:
ಕಳಸ, ಶಿಲುಬೆ ಮತ್ತು ಮಿನಾರಗಳು ಬೇರೆಬೇರೆ ಧರ್ಮಗಳ ಸಂಕೇತಗಳಾದರೂ, ಅವುಗಳ ಧರ್ಮದ ಉಸಿರು ಒಂದೇ ಎಂದು ಕವಿ ಹೇಳಿದ್ದಾರೆ.

Question 5.
‘ಆಂಗ್ಲ ಆಫ್ರಿಕನ್ನರಲ್ಲಿ ಹರಿವ ನೆತ್ತರೊಂದೆ’ ಎಂಬ ಸಾಲು ಏನನ್ನು ಸೂಚಿಸುತ್ತದೆ?
Answer:
ಈ ಸಾಲು ಎಲ್ಲ ಮಾನವರ ದೇಹದಲ್ಲಿ ಹರಿಯುವ ರಕ್ತ ಒಂದೇ ಆಗಿದ್ದು, ಎಲ್ಲರೂ ಸಮಾನರು ಎಂಬುದನ್ನು ಸೂಚಿಸುತ್ತದೆ.

Question 6.
ಕವಿ ಆಹಾರದ ಮೂಲಕ ಯಾವ ಸಂದೇಶವನ್ನು ನೀಡಿದ್ದಾರೆ?
Answer:
ಅಕ್ಕಿ ಮತ್ತು ರಾಗಿಯ ಬಣ್ಣ ಬೇರೆಬೇರೆಯಾಗಿದ್ದರೂ ಅವು ಆಹಾರವಾಗಿರುವಂತೆ, ಮಾನವರಲ್ಲಿ ಭಿನ್ನತೆಗಳಿದ್ದರೂ ಎಲ್ಲರೂ ಒಂದೇ ಎಂಬ ಸಂದೇಶವನ್ನು ನೀಡಿದ್ದಾರೆ.

Question 7.
‘ಬೆಳಕ ಸತ್ವ ಒಂದೆ’ ಎಂಬುದರ ಅರ್ಥವೇನು?
Answer:
ಬಾಣ, ಕುಂಡ ಮತ್ತು ಹಣತೆಗಳ ರೂಪ ಬೇರೆಬೇರೆಯಾಗಿದ್ದರೂ ಅವುಗಳ ಉದ್ದೇಶ ಬೆಳಕನ್ನು ನೀಡುವುದೇ ಎಂಬ ಅರ್ಥ.

Question 8.
ಕವಿ ಭಾರತದ ಏಕತೆಯನ್ನು ಹೇಗೆ ವಿವರಿಸಿದ್ದಾರೆ?
Answer:
ಕರ್ನಾಟಕ, ವಂಗ ಮತ್ತು ಆಂಧ್ರ ರಾಜ್ಯಗಳ ಜನರು ಎಲ್ಲರೂ ಭಾರತೀಯರು ಎಂದು ಹೇಳುವ ಮೂಲಕ ಭಾರತದ ಏಕತೆಯನ್ನು ಕವಿ ವಿವರಿಸಿದ್ದಾರೆ.

Question 9.
ಪದ್ಯದಲ್ಲಿ ಉಲ್ಲೇಖಿಸಿರುವ ಪಂಚಭೂತಗಳು ಯಾವುವು?
Answer:
ಭೂಮಿ, ಆಕಾಶ, ಅಗ್ನಿ, ಜಲ ಮತ್ತು ಗಾಳಿ.

Question 10.
‘ವಿಶ್ವಮಾನವ’ ಎಂಬ ಪರಿಕಲ್ಪನೆಯ ಅರ್ಥವೇನು?
Answer:
ಎಲ್ಲ ಮಾನವರನ್ನೂ ಸಮಾನವಾಗಿ ನೋಡುವ ಮತ್ತು ವಿಶ್ವವನ್ನು ಒಂದು ಕುಟುಂಬವೆಂದು ಪರಿಗಣಿಸುವ ಮನೋಭಾವವೇ ವಿಶ್ವಮಾನವತ್ವ.

Multiple Choice Question

1. ‘ಭೂಮಿತಾಯ ಕುಡಿಗಳು’ ಪದ್ಯದ ಕವಿ ಯಾರು?
A) ಕುವೆಂಪು
B) ಡಿ.ವಿ.ಜಿ.
C) ಕೆ.ಎಸ್. ನಿಸಾರ್ ಅಹಮದ್
D) ಬೇಂದ್ರೆ

Answer:
C) ಕೆ.ಎಸ್. ನಿಸಾರ್ ಅಹಮದ್

2. ‘ಭೂಮಿ ತಾಕುಡಿಗಳು’ ಎಂದರೆ ಯಾರು?
A) ರೈತರು
B) ಭಾರತದ ಜನರು
C) ಭೂಮಿಯ ಮೇಲಿರುವ ಎಲ್ಲ ಮಾನವರು
D) ವಿದ್ಯಾರ್ಥಿಗಳು

Answer:
C) ಭೂಮಿಯ ಮೇಲಿರುವ ಎಲ್ಲ ಮಾನವರು

3. ಕವಿ ಯಾವ ಭಾವನೆಯನ್ನು ಸಾರಿದ್ದಾರೆ?
A) ದೇಶಭಕ್ತಿ
B) ವೈವಿಧ್ಯದಲ್ಲಿ ಏಕತೆ
C) ಶೌರ್ಯ
D) ಭಕ್ತಿ

Answer:
B) ವೈವಿಧ್ಯದಲ್ಲಿ ಏಕತೆ

4. ಕವಿ ಯಾವ ಧಾರ್ಮಿಕ ಸಂಕೇತಗಳನ್ನು ಉಲ್ಲೇಖಿಸಿದ್ದಾರೆ?
A) ದೇವಾಲಯ, ಮಸೀದಿ
B) ಕಳಸ, ಶಿಲುಬೆ, ಮಿನಾರು
C) ಚರ್ಚ್, ದೇವಸ್ಥಾನ
D) ಮಂದಿರ, ಗುರುದ್ವಾರ

Answer:
B) ಕಳಸ, ಶಿಲುಬೆ, ಮಿನಾರು

5. ಆಂಗ್ಲರು ಮತ್ತು ಆಫ್ರಿಕನ್ನರಲ್ಲಿ ಏನು ಒಂದೇ ಎಂದು ಕವಿ ಹೇಳಿದ್ದಾರೆ?
A) ಭಾಷೆ
B) ಸಂಸ್ಕೃತಿ
C) ನೆತ್ತರ (ರಕ್ತ)
D) ಉಡುಗೆ

Answer:
C) ನೆತ್ತರ (ರಕ್ತ)

6. ಬಾಣ, ಕುಂಡ ಮತ್ತು ಹಣತೆಗಳಲ್ಲಿ ಯಾವುದು ಒಂದೇ?
A) ಬಣ್ಣ
B) ಆಕಾರ
C) ಬೆಳಕಿನ ಸತ್ವ
D) ಗಾತ್ರ

Answer:
C) ಬೆಳಕಿನ ಸತ್ವ

7. ಕವಿ ಯಾವ ರಾಜ್ಯಗಳನ್ನು ಉಲ್ಲೇಖಿಸಿದ್ದಾರೆ?
A) ಕರ್ನಾಟಕ, ಕೇರಳ, ತಮಿಳುನಾಡು
B) ಕರ್ನಾಟಕ, ವಂಗ, ಆಂಧ್ರ
C) ಆಂಧ್ರ, ಗುಜರಾತ್, ಪಂಜಾಬ್
D) ಕರ್ನಾಟಕ, ಮಹಾರಾಷ್ಟ್ರ, ಗೋವಾ

Answer:
B) ಕರ್ನಾಟಕ, ವಂಗ, ಆಂಧ್ರ

8. ‘ಪೂರ್ವೋತ್ತರ ಪಡು ತೆಂಕಣ’ ಎಂಬುದು ಯಾವುದನ್ನು ಸೂಚಿಸುತ್ತದೆ?
A) ಭಾಷೆಗಳನ್ನು
B) ರಾಜ್ಯಗಳನ್ನು
C) ಭಾರತದ ದಿಕ್ಕುಗಳನ್ನು
D) ಧರ್ಮಗಳನ್ನು

Answer:
C) ಭಾರತದ ದಿಕ್ಕುಗಳನ್ನು

9. ಕೆ.ಎಸ್. ನಿಸಾರ್ ಅಹಮದ್ ಅವರನ್ನು ಯಾವ ಹೆಸರಿನಿಂದ ಕರೆಯಲಾಗುತ್ತದೆ?
A) ರಾಷ್ಟ್ರಕವಿ
B) ನಿತ್ಯೋತ್ಸವದ ಕವಿ
C) ಜನಪದ ಕವಿ
D) ಕುವೆಂಪು

Answer:
B) ನಿತ್ಯೋತ್ಸವದ ಕವಿ

10. ‘ಭೂಮಿತಾಯ ಕುಡಿಗಳು’ ಪದ್ಯದ ಮೂಲ ಸಂದೇಶ ಯಾವುದು?
A) ಪರಿಸರ ಸಂರಕ್ಷಣೆ
B) ಶಿಕ್ಷಣದ ಮಹತ್ವ
C) ಮಾನವ ಏಕತೆ ಮತ್ತು ವಿಶ್ವಮಾನವತ್ವ
D) ದೇಶಭಕ್ತಿ

Answer:
C) ಮಾನವ ಏಕತೆ ಮತ್ತು ವಿಶ್ವಮಾನವತ್ವ

 

Click Here to Download Bhumitaya Kudigalu PDF Notes
Click Here to Watch Bhumitaya Kudigalu Video

You cannot copy content of this page