SSLC Nudi Kannada Question and Answer -Nanna Pustaka Prapancha
Looking for SSLC /Class 10th Nudi Kannada textbook answers? You can download Chapter 6: Nanna Pustaka Prapancha Questions and Answers PDF, Notes, and Summary here. SSLC /Class 10th Nudi Kannada Gadyabhaga solutions follow the Karnataka State Board Syllabus, making it easier for students to revise and score higher in exams.
Karnataka SSLC/Class 10th Nudi Kannada Textbook Answers—Reflections Chapter 6
Nanna Pustaka Prapancha Questions and Answers, Notes, and Summary
Class 10 Nudi Kannada Chapter 6
ನನ್ನ ಪುಸ್ತಕ ಪ್ರಪಂಚ
Nanna Pustaka Prapancha
Scroll Down to Download Nanna Pustaka Prapancha PDF
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
Question 1.
ಇಂಗ್ಲಿಷ್ನ ಹೇಳಿಕೆಯೊಂದನ್ನು ಕೊಂಚ ಮಾರ್ಪಡಿಸಿ ಬೀಚಿಯವರು ಸೃಷ್ಟಿಸಿರುವ ಹೇಳಿಕೆ ಯಾವುದು?
Answer:
‘ನೀನಾವ ಪುಸ್ತಕಗಳನ್ನು ಓದುತ್ತಿ ಎಂಬುದನ್ನು ಹೇಳು, ನಿನ್ನ ತಲೆ ಏನೆಂಬುದನ್ನು ಹೇಳುತ್ತೇನೆ.’ ಎಂಬ ಹೇಳಿಕೆಯನ್ನು ಬೀಚಿಯವರು ಇಂಗ್ಲಿಷ್ನ ಹೇಳಿಕೆಯೊಂದನ್ನು ಕೊಂಚ ಮಾರ್ಪಡಿಸಿ ಸೃಷ್ಟಿಸಿದ್ದರು.
Question 2.
ಹುಬ್ಬಳ್ಳಿಯಲ್ಲಿ ಲೈಫ ಇನ್ಜೂರೆನ್ಸ್ ಕಂಪನಿಯ ಏಜೆಂಟರ ಆಫೀಸಿನಲ್ಲಿ ಬೀಚಿಯವರ ನಿತ್ಯದ ಕಾರ್ಯಕ್ರಮ ಯಾವುದಾಗಿತ್ತು?
Answer:
ಆಫೀಸಿನ ಎದುರು ಇದ್ದ ಮಂಗಳೂರಿನ ಗೋವಿಂದರಾಯರ ಅಂಗಡಿಯಲ್ಲಿ ಕುಳಿತು ತವುಡು ಕಟ್ಟುವುದು ಬೀಚಿಯವರ ನಿತ್ಯದ ಕಾರ್ಯಕ್ರಮ ಅಂದರೆ ಕೆಲಸವಾಗಿತ್ತು.
Question 3.
‘ಸಂಧ್ಯಾರಾಗ’ ಪುಸ್ತಕವನ್ನು ಬೀಚಿಯವರು ಏಕೆ ಓದಿದರು? (2018)
Answer:
ಬೀಚಿಯವರ ಹೆಂಡತಿ ಬಹಳ ಭೇಷ್ ಅದರೀ ಪುಸ್ತಕ ನೀವೂ ಓದಬೇಕು ಇದನೊಮ್ಮೆ ಎಂದು ಹೇಳಿದ್ದಕ್ಕಾಗಿ ‘ಸಂಧ್ಯಾರಾಗ’ ಪುಸ್ತಕವನ್ನು ಬೀಚಿಯವರು ಓದಿದರು.
Question 4.
ಟ್ರೇನಿನಲ್ಲಿ ಪುಸ್ತಕವನ್ನು ಬಚ್ಚಿಟ್ಟುಕೊಂಡು ಬೀಚಿಯವರು ಓದಲಾರಂಭಿಸಿದ್ದೇಕೆ?
Answer:
‘ಟ್ರೇನಿನಲ್ಲಿ ಕನ್ನಡ ಪುಸ್ತಕ ಕೈಲಿ ಹಿಡಿದು ಕುಳಿತರೆ ನನ್ನ ಮಾನ ಉಳಿಯುತ್ತದೆಯೇ? ಎಂಬ ವಿಚಾರ ಬೀಚಿಯವರ ಮನದಲ್ಲಿ ಬಂದ ಕಾರಣ ಅವರು ಆ ಪುಸ್ತಕವನ್ನು ಬಚ್ಚಿಟ್ಟುಕೊಂಡು ಓದಲಾರಂಭಿಸಿದರು.
Question 5.
ಕನ್ನಡದ ದೀಕ್ಷೆಯನ್ನು ಬೀಚಿಯವರು ಸ್ವೀಕರಿಸಿದ ಶುಭಮುಹೂರ್ತ ಯಾವುದು?
Answer:
ಅ. ನ. ಕೃಷ್ಣರಾಯರ ‘ಸಂಧ್ಯಾರಾಗ’ ಕನ್ನಡ ಕೃತಿಯನ್ನು ಓದಿದ ನಂತರ. ಕನ್ನಡದಲ್ಲಿಯೂ ಒಳೊಳ್ಳೆ ಬರಹಗಾರರಿದ್ದಾರೆಂದು ಬೀಚಿಯವರಿಗೆ ಅನಿಸಿ, ಅಂದಿನಿಂದಲೇ ಅವರು ಕನ್ನಡದ ದೀಕ್ಷೆಯನ್ನು ಪಡೆದರು.
Question 6.
ಬೀಚಿಯವರೇ ಹೇಳಿರುವಂತೆ ಡಿ. ವಿ. ಜಿ. ಯವರ ತಿಮ್ಮನಿಗೂ, ಬೀಚಿಯವರ ತಿಂಮನಿಗೂ ಇರುವ ವ್ಯತ್ಯಾಸವೇನು?
Answer:
ಬೀಚಿಯವರು ಹೇಳಿರುವಂತೆ ನನ್ನ ತಿಂಮನಿಗೂ ಡಿ.ವಿ.ಜಿ.ಯವರ ತಿಮ್ಮನಿಗೂ ಕೇವಲ ಹೊರ ಹೋಲಿಕೆ ಅಷ್ಟಿಷ್ಟು ಇರಬಹುದಾದರೂ, ನಮ್ಮಿಬ್ಬರಲ್ಲಿ ಅಜಗಜಾಂತರವಿದೆ. ಗುಂಡಪ್ಪನವರ ತಿಮ್ಮ ಸೂರ್ಯ. ನನ್ನ ತಿಂಮ ‘ಬೆಡ್ ಲ್ಯಾಂಪ್’.
Question 7.
ಬಿಚೀಯವರನ್ನು ಮಂತ್ರಮುಗ್ಧಗೊಳಿಸಿದ ಕೃತಿ ಯಾವುದು?
Answer:
ಜಿ. ಪಿ. ರಾಜರತ್ನಂ ಅವರ ‘ರತ್ನನ ಪದಗಳು’ ಎಂಬ ಕೃತಿಯು ಬಿಚೀಯವರನ್ನು ಮಂತ್ರಮುಗ್ಧಗೊಳಿಸಿತು.
ಆ) ಕೆಳಗಿನ ಪ್ರಶ್ನೆಗಳಿಗೆ ಮೂರು/ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
Question 1.
ಪುಸ್ತಕ ಪ್ರಪಂಚವು ನನ್ನ ಆತ್ಮಚರಿತ್ರೆಯಲ್ಲಿ ಅತಿ ಮುಖ್ಯವಾದ ಭಾಗ ಎಂದು ಬೀಚಿಯವರು ಏಕೆ ಹೇಳಿದ್ದಾರೆ?
Answer:
ಬೀಚಿಯವರು ನನ್ನ ಆತ್ಮಚರಿತ್ರೆಯಲ್ಲಿ ಅತಿ ಮುಖ್ಯವಾದ ಭಾಗವೇ ಪುಸ್ತಕ ಪ್ರಪಂಚವೆಂದು ಹೇಳಿದ್ದಾರೆ. ಪುಸ್ತಕ ಪ್ರಪಂಚವಿಲ್ಲದ ನನ್ನ ಪ್ರಪಂಚ ಬರಡು, ಸಹಾರಾ ಮರುಭೂಮಿ. ನನ್ನ ಜೀವಾಳವೇ ಪುಸ್ತಕವಾಗಿರುವಾಗ ಪುಸ್ತಕವಿಲ್ಲದ ಬೀಚಿ ಜೀವವಿಲ್ಲದ ದೇಹವಿದ್ದಂತೆ. ರೆಡಿಮೇಡ್ ಅಂಗಡಿಯ ಮುಂದೆ ನಿಂತಿರುವ ಚೆಂದದ ಬೊಂಬೆಯಂತೆ ಎಂದು ಬೀಚಿಯವರು ಹೇಳಿದ್ದಾರೆ.
Question 2.
ಹೈಸ್ಕೂಲ್ನ ಗ್ರಂಥಾಲಯದಲ್ಲಿದ್ದ ಪುಸ್ತಕಗಳು ಬೀಚಿಯವರ ಮೇಲೆ ಯಾವ ಪ್ರಭಾವವನ್ನು ಬೀರಲಿಲ್ಲ. ಏಕೆ?
Answer:
ಬೀಚಿಯವರು ಕಲಿತ ಹೈಸ್ಕೂಲಿನಲ್ಲಿ ಒಂದು ಗ್ರಂಥಾಲಯವಿತ್ತು. ಸರಸ್ವತಿ ಪೂಜೆಯ ದಿನದಂದು ಮಾತ್ರ ಅದರ ದರ್ಶನವಾಗುತ್ತಿತ್ತು. ಬೀಗ ಹಾಕಿದ ಆ ಪುಸ್ತಕಗಳ ಕಪಾಟುಗಳಿಗೆ ಅರಿಸಿನ, ಕುಂಕುಮ ಹಚ್ಚಿ, ಪೂಜೆ ಆರತಿ ಮಾಡಿ, ತಂಗಿನಕಾಯಿ ಒಡೆದು, ಚರುಪು ಮಾತ್ರ ತಿನ್ನಲು ಸಿಗುತ್ತಿತ್ತು. ಆದರೆ, ಪುಸ್ತಕಗಳು ಮಾತ್ರ ಓದಲು ಸಿಗುತ್ತಿರಲಿಲ್ಲ. ಆ ಕಾರಣದಿಂದಾಗಿ ಬೀಚಿಯವರ ಮೇಲೆ ಹೈಸ್ಕೂಲಿನ ಗ್ರಂಥಾಲಯದೊಳಗಿರುವ ಪುಸ್ತಕಗಳು ಯಾವ ಪ್ರಭಾವವನ್ನೂ ಬೀರಲಿಲ್ಲ.
Question 3.
ಈಗಿನ ವಿದ್ಯಾರ್ಥಿಗಳು ಪುಣ್ಯವಂತರು ಎಂದು ಬೀಚಿಯವರು ಹೇಳಲು ಕಾರಣವೇನು?
Answer:
ಈಗಿನ ವಿದ್ಯಾರ್ಥಿಗಳು ಬಹಳ ಪುಣ್ಯವಂತರು ಯಾಕೆಂದರೆ ನರ್ಸರಿ ಕ್ಲಾಸಿನಲ್ಲಿಯ ಪುಸ್ತಕಕ್ಕೇ ನೋಟ್ಗಗಳು ಬಂದಿವೆ. ಆ ನೋಟ್ಗಗಳಿಗೆ ಡೈಜಿಸ್ಟ್ ಇವೆ. ಆದರೆ ಆಗ ನಮಗೆ ಪಠ್ಯ ಪುಸ್ತಕವೇ ಗತಿಯಾಗಿತ್ತು. ಹೀಗಾಗಿ ಈಗಿನ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕದೊಂದಿಗೆ ಓದಲು ಪೂರಕವಾದ ಬೇರೆ ಬೇರೆ ಪುಸ್ತಕಗಳಿವೆ. ಆದ್ದರಿಂದ ಈಗಿನ ವಿದ್ಯಾರ್ಥಿಗಳು ಪುಣ್ಯವಂತರು ಎಂದು ಬೀಚಿಯವರು ಹೇಳಿದ್ದಾರೆ.
Question 4.
ಯಾವುದಾದರು ಒಂದು ಕನ್ನಡ ಕತೆ ಪುಸ್ತಕವನ್ನು ಕೊಡುವಂತೆ ಬೀಚಿಯವರು ಗೋವಿಂದರಾಯರನ್ನು ಏಕೆ ಕೇಳಿದರು?
Answer:
ಒಂದು ದಿನ ಬೀಚಿಯವರು ಪತ್ನಿಯೊಂದಿಗೆ ವಾಕಿಂಗ್ ಹೋಗುತ್ತಿದ್ದಾಗ ಸಾಹಿತ್ಯ ಭಂಡಾರದತ್ತ ಬೆರಳು ತೋರಿಸಿ. ಇದೇ ನನ್ನ ಆಫೀಸು. ಈ ಪುಸ್ತಕದಂಗಡಿಯಲ್ಲೇ ಹೆಚ್ಚು ಕಾಲ ಕಳೆಯುತ್ತೇನೆ ಎಂದು ಹೇಳಿದ್ದರು. ಇದನ್ನು ನೆನಪಿನಲ್ಲಿಟ್ಟುಕೊಂಡಿದ್ದ ಅವರ ಪತ್ನಿ ಒಂದು ದಿನ ಮಧ್ಯಾಹ್ನದ ವೇಳೆ ಕಳೆಯುವುದು ಬಹಳ ಕಷ್ಟವಾಗುತ್ತಿದೆ. ಯಾವುದಾದರೂ ಒಂದು ಕನ್ನಡ ಪುಸ್ತಕ ತಂದುಕೊಡುವಂತೆ ಕೇಳಿದಾಗ ಬೀಚಿಯವರು ತನ್ನ ಹೆಂಡತಿಗಾಗಿ ಒಂದು ಕನ್ನಡ ಪುಸ್ತಕ ಕೊಡುವಂತೆ ಗೋವಿಂದರಾಯರನ್ನು ಕೇಳಿದರು.
Question 5.
‘ವಿಶ್ವಾಮಿತ್ರ ಸೃಷ್ಟಿ’ಯು ಬೀಚಿಯವರ ಮೇಲೆ ಬೀರಿದ ಪ್ರಭಾವವೇನು?
Answer:
ಬೀಚಿಯವರ ಸಹೋದರ ಪ್ರೊ.ಜಹಗೀರ್ದಾರ್ರವರು ‘ವಿಶ್ವಾಮಿತ್ರ ಸೃಷ್ಟಿ’ಯ ಎರಡು ಸಂಪುಟಗಳನ್ನು ತಂದುಕೊಟ್ಟರು. ಅವು ಬೀಚಿಯವರನ್ನು ಬಹುಬೇಗ ಸೆರೆ ಹಿಡಿದವು. ಜಹಗೀರ್ದಾರರ ಆ ಮಾತಿನ ಚಮತ್ಕಾರ, ವಿಚಾರ ಮಂಡನೆ, ಕಲಾಕುಶಲತೆಗೆ ಬಿಚೀ ಮಾರು ಹೋದರು. ರಾಯರು ಬೀಚಿಯವರ ಹೃದಯವನ್ನು ಗೆದ್ದರು. ಈ ಎರಡು ಪುಸ್ತಕಗಳು ಬೀಚಿಯವರ ಮೇಲೆ ತುಂಬಾ ಪ್ರಭಾವ ಬೀರಿದವು.
ಇ) ಕೆಳಗಿನ ಪ್ರಶ್ನೆಗಳಿಗೆ ಏಳು/ಎಂಟು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
Question 1.
ಜಿ. ಪಿ. ರಾಜರತ್ನಂ ಅವರ ‘ರತ್ನನ ಪದಗಳು’ ಕೃತಿಯ ಕುರಿತು ಬೀಚಿ ಮತ್ತು
ಅ.ನ.ಕೃ. ಅವರ ಅಭಿಪ್ರಾಯವೇನು?
Answer:
ಜಿ. ಪಿ. ರಾಜರತ್ನಂ ಅವರ ‘ರತ್ನನ ಪದಗಳು’ ಕೃತಿಯ ಕುರಿತು ಮಾತನಾಡುತ್ತಿದ್ದಾಗ ಅ.ನ.ಕೃ.ರವರು ಹೀಗೆ ಅಭಿಪ್ರಾಯಪಟ್ಟಿದ್ದಾರೆ. It is a master work in Kannada (ಕನ್ನಡದಲ್ಲಿ ಅದೊಂದು ಬೃಹತ್ ಕೃತಿ) ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೀಚಿಯವರು ರಾಜರತ್ನಂ ಅವರ ‘ರತ್ನನ ಪದಗಳು’ ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿವೆ ಎಂದು ಹೇಳಿ, ಅವರ ಗೆಳೆಯರಾದ ಕಾಳಿಂಗರಾಯರು ಸಭೆ ಸಮಾರಂಭಗಳಲ್ಲಿ ಇವನ್ನು ಹಾಡುವಾಗ ನನ್ನ ಮೈಮನ ಪುಳಿಕಿತಗೊಳ್ಳುತ್ತಿದ್ದವು ಎಂದು ಹೇಳಿದ್ದಾರೆ. ಜಿ. ಪಿ.ಯವರು ಇಂತಹ ಸಾಹಿತ್ಯವನ್ನು ಮುಂದುರಿಸಿದ್ದಿದ್ದರೆ ಕನ್ನಡ ಸಾಹಿತ್ಯಕ್ಕೆ ಎಂತಹ ಉಪಕಾರವಾಗುತ್ತಿತ್ತಲ್ಲಾ ಎಂಬ ಪೇಚಾಟವು ಬೀಚಿಯವರಲ್ಲಿದೆ. ಈ ರೀತಿಯಾಗಿ ಜಿ. ಪಿ.ರಾಜರತ್ನಂ ಅವರ ‘ರತ್ನನ ಪದಗಳು’ ಕುರಿತು ಬೀಚಿ ಹಾಗೂ ಅ.ನ.ಕೃ. ಅವರು ತಮ್ಮತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
Question 2.
ಡಿ.ವಿ.ಜಿ. ಯವರ ‘ಮಂಕುತಿಮ್ಮನ ಕಗ್ಗ’ ಬೀಚಿಯವರಿಗೆ ಮೆಚ್ಚುಗೆ ಯಾಗಲು ಕಾರಣಗಳೇನು?
Answer:
ಡಿ.ವಿ.ಜಿ. ಯವರ ‘ಮಂಕುತಿಮ್ಮನ ಕಗ್ಗ’ ದಲ್ಲಿ ಲೌಕಿಕವೂ ಇದೆ. ಪರಮಾರ್ಥಿಕವೂ ಇದೆ. ಎಂತಹ ಶುಷ್ಕ ವೇದಾಂತವನ್ನೂ ಶೃಂಗಾರದಷ್ಟು ಸ್ವಾರಸ್ಯಕರವಾಗಿ ಡಿ.ವಿ.ಜಿ.ಯವರು ತಮ್ಮ ಈ ಕೃತಿಯಲ್ಲಿ ತಿಳಿಸಿದ್ದಾರೆ. ಉಪಮಾನಗಳಂತೂ ಚಿಕ್ಕಮಕ್ಕಳಿಗೂ ಅರ್ಥವಾಗುವಷ್ಟು ಸಾಮಾನ್ಯ ಭಾಷೆಯಲ್ಲಿದೆ. ಬೀಚಿಯವರು ‘ಅಂದನಾ ತಿಂಮ’ ಬರೆಯಲು ಡಿ.ವಿ.ಜಿ.ಯವರ ಮಂಕುತಿಮ್ಮನೇ ಕಾರಣ. ಮಂಕುತಿಮ್ಮನ ಕಗ್ಗದಲ್ಲಿ ರಾಜ್ಯದ ರಾಜಕಾರಣದ ಕೂಡಾ ಪ್ರಸ್ತಾಪವಿದೆ. ಇಲ್ಲಿ ಬೀಚಿಯವರ ತಿಂಮನಿಗೂ ಡಿ.ವಿ.ಜಿ.ಯವರ ತಿಮ್ಮನಿಗೂ ಕೇವಲ ಹೋಲಿಕೆ ಇದೆಯೇ ಹೊರತು ಎರಡಕ್ಕೂ ಅಜಗಜಾಂತರವಿದೆ. ಗುಂಡಪ್ಪನವರ ತಿಮ್ಮ ಸೂರ್ಯನಾದರೆ ಬೀಚಿಯವರ ತಿಂಮ ‘ಬೆಡ್ ಲ್ಯಾಂಪ್’ ಎಂದು ಹೋಲಿಕೆ ಮಾಡಿ ಬೀಚಿಯವರು ಡಿ.ವಿ.ಜಿ.ಯವರ ‘ಮಂಕುತಿಮ್ಮನ ಕಗ್ಗ’ ಕೃತಿಯ ಬಗೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
Question 3.
ಶಂ. ಬಾ. ಜೋಶಿಯವರ ‘ಯಕ್ಷಪ್ರಶ್ನೆ’ ಬೀಚಿಯವರ ಮನಸ್ಸನ್ನು ಸೂರೆಗೊಂಡಿತು ಏಕೆ?
Answer:
ಬೀಚಿಯವರು ಓದಿದ ನಾಲ್ಕನೇ ಪುಸ್ತಕ ಶಂ.ಬಾ.ಜೋಶಿಯವರ ‘ಯಕ್ಷಪ್ರಶ್ನೆ ಹಳೆಯ ಪೌರಾಣಿಕ ಕಥೆಯನ್ನು ಹೊಸ ಕಣ್ಣಿನಿಂದ ನೋಡುವ ಅವರ ಸಂಶೋಧನಾ ಪದ್ಧತಿ ಕನ್ನಡಿಗರಲ್ಲಿ ಅಸದೃಶ್ಯ. ಹೊರ ನೋಟಕ್ಕೆ ಕೇವಲ ಗೊಡ್ಡು ಕತೆಗಳಾಗಿ ಕಾಣುವ ನಮ್ಮ ಧರ್ಮಗ್ರಂಥಗಳಲ್ಲಿ ಬರುವ ಕಥೆ, ಉಪಕಥೆಗಳಿಗೆ ಜೋಶಿಯವರು ಕೊಡುವ ಅರ್ಥ ಕನ್ನಡಕ್ಕೆ ಹೊಸದು. ಅಂದಿನ ಯಕ್ಷಪ್ರಶ್ನೆಯ ಕಥೆ ನಮಗಿಂದು ಬರಲಿರುವ ಸಮಾಜದ ದರ್ಶನವನ್ನು ಮಾಡಿಸುತ್ತದೆ. ಹೀಗಾಗಿ ಶಂ.ಬಾ.ಜೋಶಿಯವರ ‘ಯಕ್ಷಪ್ರಶ್ನೆ’ ಕೃತಿಯು ಬೀಚಿಯವರ ಮನಸ್ಸನ್ನು ಸೂರೆಗೊಂಡಿತು.
ಈ) ಕೆಳಗಿನ ಹೇಳಿಕೆಯ ಸಂದರ್ಭವನ್ನು ಸ್ವಾರಸ್ಯ ಸಹಿತ ವಿವರಿಸಿರಿ.
Question 1.
“ಭಾಳ ಭೇಷ್ ಅದರೀ ಪುಸ್ತಕ. ನೀವೂ ಓದಬೇಕು ಇದನ್ನೊಮ್ಮೆ.”
Answer:
ಪಾಠದ ಹೆಸರು: ನನ್ನ ಪುಸ್ತಕ ಪ್ರಪಂಚ
ಲೇಖಕರ ಹೆಸರು: ಬೀಚಿ
ಸಂದರ್ಭ: ಬೀಚಿಯವರ ಹೆಂಡತಿ ಈ ಮಾತನ್ನು ಬೀಚಿಯವರಿಗೆ ನುಡಿದಿದ್ದಾರೆ.
ವಿವರಣೆ: ಬೀಚಿಯವರ ಹೆಂಡತಿಗೆ ಮಧ್ಯಾಹ್ನದ ವೇಳೆ ಕಳೆಯೋದು ಕಷ್ಟವಾಗುತ್ತಿತ್ತು. ಆ ಕಾರಣ ಅವರು ಬೀಚಿಯವರಿಗೆ ಯಾವುದಾದರೂ ಒಂದು ಕನ್ನಡ ಪುಸ್ತಕ ಓದಲು ತಂದುಕೊಡಿ ಎಂದು ಕೇಳಿಕೊಂಡಿದ್ದರು. ಬೀಚಿ ‘ಸಂಧ್ಯಾರಾಗ’ ಪುಸ್ತಕ ತಂದುಕೊಟ್ಟಿದ್ದರು. ಅದನ್ನು ಓದಿದ ನಂತರ ಬೀಚಿಯವರ ಹೆಂಡತಿ ಬೀಚಿಯವರಿಗೆ ಈ ಮೇಲಿನ ಮಾತನ್ನು ನುಡಿದಿದ್ದರು.
Question 2.
“ದಯವಿಟ್ಟು ಇದನ್ನು ಓದಿ.”
Answer:
ಪಾಠದ ಹೆಸರು: ನನ್ನ ಪುಸ್ತಕ ಪ್ರಪಂಚ
ಲೇಖಕರ ಹೆಸರು: ಬೀಚಿ
ಸಂದರ್ಭ: ಬೀಚಿಯವರು ನಮ್ಮನ್ನು ಉದ್ದೇಶಿಸಿ ಈ ಮಾತನ್ನು ನುಡಿದಿದ್ದಾರೆ.
ವಿವರಣೆ: ಶಂ.ಬಾ.ಜೋಶಿಯವರ ‘ಯಕ್ಷಪ್ರಶ್ನೆ’ ಕೃತಿ ಬೀಚಿಯವರ ಮನಸ್ಸನ್ನು ಸೂರೆಗೊಂಡಿತು. ಹಳೆಯ ಪೌರಾಣಿಕ ಕಥೆಯನ್ನು ಹೊಸ ಕಣ್ಣಿನಿಂದ ನೋಡುವ ಅವರ ಸಂಶೋಧನಾ ಪದ್ಧತಿ ಕನ್ನಡಿಗರಲ್ಲಿ ಅಸದೃಶ್ಯ. ಹೀಗಾಗಿ ಆ ಕೃತಿಯನ್ನು ನಾವು ಓದಲೇಬೇಕೆಂದು ಬೀಚಿಯವರು ಹೇಳಿದ್ದಾರೆ.
Question 3.
“ನೀವು ದಯಮಾಡಿ ಇದನ್ನು ಓದಿ ನಿಮ್ಮ ಅಭಿಪ್ರಾಯವನ್ನು ಹೇಳಿ.”
Answer:
ಪಾಠದ ಹೆಸರು: ನನ್ನ ಪುಸ್ತಕ ಪ್ರಪಂಚ
ಲೇಖಕರ ಹೆಸರು: ಬೀಚಿ
ಸಂದರ್ಭ: ಲೇಖಕರ ಕಿರಿಯ ಮಗ ಲೇಖಕರಿಗೆ ಈ ಮಾತನ್ನು ನುಡಿದಿದ್ದಾರೆ.
ವಿವರಣೆ: ಬೀಚಿಯವರ ಕಿರಿಯ ಮಗ ಪಾಪಟ್ಟೆ ಬೀಚಿಯವರ ಮೇಜಿನ ಮೇಲೆ ಕೆ.ವಿ.ಅಯ್ಯರ್ ಅವರ ‘ರೂಪದರ್ಶಿ’ ಪುಸ್ತಕವನ್ನು ಇಟ್ಟಿದ್ದರು. ಸಂಜೆ ಹೊತ್ತು ಬೀಚಿಯವರು ಆಫೀಸಿನಿಂದ ಮನೆಗೆ ಬಂದಾಗ ಪಾಪಣ್ಣಿಯವರು ಈ ಮೇಲಿನ ಮಾತನ್ನು ಬೀಚಿಯವರಿಗೆ ನುಡಿದಿದ್ದರು.
Question 4.
“ಇಂತಹ ಮನೋಜ್ಞವಾದ ಕೃತಿಯಿಂದ ಯಾರೂ ಸ್ಪೂರ್ತಿಯನ್ನು ಪಡೆಯಬಹುದು.”
Answer:
ಪಾಠದ ಹೆಸರು: ನನ್ನ ಪುಸ್ತಕ ಪ್ರಪಂಚ
ಲೇಖಕರ ಹೆಸರು: ಬೀಚಿ
ಸಂದರ್ಭ: ಬೀಚಿಯವರು ಡಿ.ವಿ.ಜಿ ಹಾಗೂ ಜಿ.ಪಿ.ಯವರ ಕೃತಿಗಳ ಬಗೆಗೆ ಹೇಳುವಾಗ ಈ ಮಾತನ್ನು ನುಡಿದಿದ್ದಾರೆ.
ವಿವರಣೆ: ಬೀಚಿಯವರು ಡಿ.ವಿ.ಜಿ.ಯವರ ‘ಮಂಕುತಿಮ್ಮನ ಕಗ್ಗ’ ಹಾಗೂ ಜಿ.ಪಿ. ರಾಜರತ್ನಂ ಅವರ ‘ರತ್ನನ ಪದಗಳು’ ಈ ಎರಡೂ ಕೃತಿಗಳನ್ನು ಓದಿ ಅವುಗಳಿಂದ ಸ್ಪೂರ್ತಿ ಪಡೆದು ಈ ಮೇಲಿನ ಮಾತನ್ನು ನುಡಿದಿದ್ದಾರೆ.
Question 5.
“ಓದಬೇಕಾದುದು ಬಹಳ ಜಾಸ್ತಿ ಇದೆ. ಆಯುಷ್ಯ ಮಾತ್ರ ಬಹಳ ಕಡಿಮೆ ಇದೆ.”
Answer:
ಪಾಠದ ಹೆಸರು: ನನ್ನ ಪುಸ್ತಕ ಪ್ರಪಂಚ
ಲೇಖಕರ ಹೆಸರು: ಬೀಚಿ
ಸಂದರ್ಭ: ಬೀಚಿಯವರು ಪುಸ್ತಕಗಳ ಬಗೆಗೆ ತಮ್ಮ ಅಭಿಪ್ರಾಯ ತಿಳಿಸುತ್ತ ಈ ಮಾತನ್ನು ನುಡಿದಿದ್ದಾರೆ.
ವಿವರಣೆ: ಬೀಚಿಯವರು ತಾನಿನ್ನೂ ಓದದೇ ಇರುವ ಇನ್ನೂ ಅನೇಕ ಪುಸ್ತಕಗಳಿವೆ ಎಂದು ಹೇಳಿದ್ದಾರೆ. ತಾವು ಶಿವರಾಂ ಕಾರಂತರ ‘ಮರಳಿ ಮಣ್ಣಿಗೆ’ ಪುಸ್ತಕ ಓದಬೇಕಾಗಿದೆ ಎಂದು ಹೇಳುತ್ತ ಈ ಮೇಲಿನ ಮಾತನ್ನು ನುಡಿದಿದ್ದಾರೆ.
ಉ) ಬಿಟ್ಟಿರುವ ಪದಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.
1) ‘ಸಂಧ್ಯಾರಾಗ’ದ ಕರ್ತೃ ಅ. ನ. ಕೃಷ್ಣರಾಯರು.
2) ‘ಅಂದನಾ ತಿಂಮ’ ಸೃಷ್ಟಿಗೆ ಕಾರಣವಾದಕೃತಿ ಡಿ.ವಿ.ಜಿ.ಯವರ ಮಂಕುತಿಮ್ಮ.
3) ‘ವಿಶ್ವಾಮಿತ್ರ ಸೃಷ್ಟಿ’ಯನ್ನು ಬೀಚಿಯವರಿಗೆ ತಂದುಕೊಟ್ಟವರು ಅವರಣ್ಣ.
4) ಬೀಚಿಯವರು ಓದಲು ಇನ್ನೂ ಆಗಿಲ್ಲವೆಂದು ಹೇಳಿರುವ ಶಿವರಾಂ ಕಾರಂತರ ಕೃತಿ ‘ಮರಳಿ ಮಣ್ಣಿಗೆ’.
5) ಗುಂಡಪ್ಪನವರ ತಿಮ್ಮ ಸೂರ್ಯ, ಬೀಚಿಯವರ ತಿಂಮ ಬೆಡ್ ಲ್ಯಾಂಪ್.
ನನ್ನ ಪುಸ್ತಕ ಪ್ರಪಂಚ ಸಾರಾಂಶ
Summary
ರಾಯಸಂ ಭೀಮಸೇನರಾವ್ ಅವರ ‘ನನ್ನ ಪುಸ್ತಕ ಪ್ರಪಂಚ’ ಎಂಬ ಗದ್ಯಭಾಗವು ಅವರ ಆತ್ಮಚರಿತ್ರೆ ‘ನನ್ನ ಭಯಾಗ್ರಫಿ’ ಯಿಂದ ಆಯ್ದುಕೊಳ್ಳಲಾಗಿದೆ. ಈ ಲೇಖನದಲ್ಲಿ ಲೇಖಕರು ತಮ್ಮ ಜೀವನದ ಮೇಲೆ ಪ್ರಭಾವ ಬೀರಿದ ಪುಸ್ತಕಗಳು ಮತ್ತು ಲೇಖಕರ ಬಗ್ಗೆ ವಿವರಿಸಿದ್ದಾರೆ.
ಬೀಚಿಯವರು ತಮ್ಮ ಜೀವನದಲ್ಲಿ ಪುಸ್ತಕಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳುತ್ತಾರೆ. ಪುಸ್ತಕಗಳಿಲ್ಲದ ಜೀವನವನ್ನು ಅವರು ಸಹಾರಾ ಮರುಭೂಮಿಗೆ ಹೋಲಿಸಿದ್ದಾರೆ. ಹೈಸ್ಕೂಲು ಶಿಕ್ಷಣದ ಅವಧಿಯಲ್ಲಿ ಅವರು ಪಠ್ಯಪುಸ್ತಕಗಳನ್ನಷ್ಟೇ ಓದುತ್ತಿದ್ದರು. ಆ ಸಮಯದಲ್ಲಿ ಪಠ್ಯೇತರ ಪುಸ್ತಕಗಳನ್ನು ಓದುವುದು ಮನೆಯವರಿಗೂ ಶಿಕ್ಷಕರಿಗೂ ಇಷ್ಟವಾಗುತ್ತಿರಲಿಲ್ಲ. ಶಾಲೆಯಲ್ಲಿದ್ದ ಗ್ರಂಥಾಲಯವೂ ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತಿರಲಿಲ್ಲ.
ನಂತರ ಹುಬ್ಬಳ್ಳಿಯಲ್ಲಿ ಕೆಲಸ ಮಾಡುತ್ತಿದ್ದಾಗ ಸಾಹಿತ್ಯ ಭಂಡಾರದ ಮಾಲೀಕರಾದ ಶ್ರೀ ಮಂಗಳೂರು ಗೋವಿಂದರಾಯರ ಪರಿಚಯವಾಯಿತು. ಅವರ ಮೂಲಕ ಕನ್ನಡ ಸಾಹಿತ್ಯದ ಪರಿಚಯವಾಯಿತು. ತಮ್ಮ ಪತ್ನಿಯ ಒತ್ತಾಯದಿಂದ ಸಂಧ್ಯಾರಾಗ ಕೃತಿಯನ್ನು ಓದಿದ ನಂತರ ಕನ್ನಡ ಸಾಹಿತ್ಯದ ಮಹತ್ವವನ್ನು ಅರಿತುಕೊಂಡರು. ಈ ಕೃತಿಯು ಅವರ ಹೃದಯವನ್ನು ಸ್ಪರ್ಶಿಸಿತು.
ಅದಾದ ಬಳಿಕ ವಿಶ್ವಾಮಿತ್ರ ಸೃಷ್ಟಿ, ರತ್ನನ ಪದಗಳು, ಯಕ್ಷಪ್ರಶ್ನೆ, ರೂಪದರ್ಶಿ ಮತ್ತು ಮಂಕುತಿಮ್ಮನ ಕಗ್ಗ ಮುಂತಾದ ಕೃತಿಗಳು ಅವರ ವ್ಯಕ್ತಿತ್ವ ಮತ್ತು ಚಿಂತನೆಗಳ ಮೇಲೆ ಗಾಢವಾದ ಪ್ರಭಾವ ಬೀರಿದವು. ಈ ಕೃತಿಗಳ ಮೂಲಕ ಅವರು ಜೀವನದ ಮೌಲ್ಯಗಳು, ಚಿಂತನಾ ಶೈಲಿ ಮತ್ತು ಸಾಹಿತ್ಯದ ಸೌಂದರ್ಯವನ್ನು ಅರಿತುಕೊಂಡರು.
ಈ ಗದ್ಯಭಾಗದ ಮುಖ್ಯ ಸಂದೇಶವೆಂದರೆ, ಉತ್ತಮ ಪುಸ್ತಕಗಳು ಮನುಷ್ಯನ ಜೀವನದ ದೃಷ್ಟಿಕೋನವನ್ನು ಬದಲಾಯಿಸುತ್ತವೆ, ಜ್ಞಾನವನ್ನು ವೃದ್ಧಿಸುತ್ತವೆ ಮತ್ತು ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗುತ್ತವೆ. ಪುಸ್ತಕಗಳು ಮನುಷ್ಯನ ನಿಜವಾದ ಸ್ನೇಹಿತರಾಗಿದ್ದು, ಜೀವನಕ್ಕೆ ಸರಿಯಾದ ದಿಕ್ಕನ್ನು ತೋರಿಸುವ ಶಕ್ತಿಯನ್ನು ಹೊಂದಿವೆ.
ಭಾಷಾಭ್ಯಾಸ-
ಅ) ಕೆಳಗಿನ ಪದಗಳಿಗೆ ತತ್ಸಮ – ತದ್ಭವಗಳನ್ನು ಬರೆಯಿರಿ
ತತ್ಸಮ | ತದ್ಭವ |
ಪುಸ್ತಕ | ಪೊತ್ತಕ |
ದೃಷ್ಟಿ | ದಿಟ್ಟಿ |
ದರ್ಶನ | ದರುಶನ |
ನಿತ್ಯ | ನಿಚ್ಚ |
ರಾಜ | ರಾಯ |
ಸಂಧ್ಯಾ | ಸಂದೆ |
ರತ್ನ | ರತ್ನ / ರತನ |
ಶೃಂಗಾರ | ಸಿಂಗಾರ |
ಆ) ಕೆಳಗಿನ ಪದಗಳನ್ನು ಬಿಡಿಸಿ ಬರೆದು ಸಂಧಿಯ ಹೆಸರನ್ನು ತಿಳಿಸಿರಿ
ಪದ | ಬಿಡಿಸಿ ಬರೆದ ರೂಪ | ಸಂಧಿಯ ಹೆಸರು |
ಅತ್ಯಂತ | ಅತಿ + ಅಂತ | ಯಣ್ ಸಂಧಿ |
ಗ್ರಂಥಾಲಯ | ಗ್ರಂಥ + ಆಲಯ | ದೀರ್ಘ ಸಂಧಿ |
ಸರ್ವಾರ್ಪಣ | ಸರ್ವ + ಅರ್ಪಣ | ದೀರ್ಘ ಸಂಧಿ |
ತಲೆಯನ್ನು | ತಲೆ + ಅನ್ನು | ಲೋಪ ಸಂಧಿ |
ಅಜಗಜಾಂತರ | ಅಜ + ಗಜ + ಅಂತರ | ಸವರ್ಣ ದೀರ್ಘ ಸಂಧಿ |
ಸೂರ್ತಿಯನ್ನು | ಸೂರ್ತಿ + ಅನ್ನು | ಲೋಪ ಸಂಧಿ |
ಹೃದಯವನ್ನು | ಹೃದಯ + ಅನ್ನು | ಲೋಪ ಸಂಧಿ |
ಒಳೊಳ್ಳೆ | ಒಳ್ + ಒಳ್ಳೆ | ಲೋಪ ಸಂಧಿ |
ಇ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ
ಪದ | ವಿರುದ್ಧಾರ್ಥಕ ಪದ |
ಮಾನ | ಅಪಮಾನ |
ಸತ್ಯ | ಅಸತ್ಯ |
ಮುಖ್ಯ | ಗೌಣ |
ಅಕ್ಷಮ್ಯ | ಕ್ಷಮ್ಯ |
ಪುಣ್ಯ | ಪಾಪ |
ಈ) ಕೆಳಗಿನ ನುಡಿಗಟ್ಟುಗಳ ಅರ್ಥವನ್ನು ತಿಳಿದು ಸ್ವಂತ ವಾಕ್ಯಗಳಲ್ಲಿ ಬಳಸಿರಿ
- ತವುಡು ಕುಟ್ಟು
ಅರ್ಥ: ಸಮಯ ಕಳೆಯುವುದು, ಕೆಲಸವಿಲ್ಲದೆ ಕುಳಿತುಕೊಳ್ಳುವುದು.
ವಾಕ್ಯ: ಬೇಸಿಗೆ ರಜೆಯಲ್ಲಿ ಸ್ನೇಹಿತರೊಂದಿಗೆ ಮಾತನಾಡುತ್ತ ತವುಡು ಕುಟ್ಟಿದೆನು.
- ಅಜಗಜಾಂತರ
ಅರ್ಥ: ಬಹಳ ವ್ಯತ್ಯಾಸ, ಅಪಾರ ಅಂತರ.
ವಾಕ್ಯ: ಗ್ರಾಮೀಣ ಮತ್ತು ನಗರ ಜೀವನದ ನಡುವೆ ಅಜಗಜಾಂತರ ವ್ಯತ್ಯಾಸವಿದೆ.
- ದುಂಬಾಲು ಬೀಳು
ಅರ್ಥ: ಹಠದಿಂದ ಒತ್ತಾಯ ಮಾಡುವುದು.
ವಾಕ್ಯ: ಹೊಸ ಸೈಕಲ್ ಕೊಡಿಸಬೇಕೆಂದು ಮಗ ತಂದೆಯ ಹಿಂದೆ ದುಂಬಾಲು ಬಿದ್ದನು.
- ಮಂತ್ರಮುಗ್ಧನಾಗು
ಅರ್ಥ: ಬಹಳ ಆಕರ್ಷಿತನಾಗುವುದು, ಮೈಮರೆತು ಹೋಗುವುದು.
ವಾಕ್ಯ: ಗಾಯಕನ ಸುಮಧುರ ಗಾಯನವನ್ನು ಕೇಳಿ ಎಲ್ಲರೂ ಮಂತ್ರಮುಗ್ಧರಾದರು.
- ಸೆರೆಹಿಡಿ
ಅರ್ಥ: ಮನಸ್ಸನ್ನು ಆಕರ್ಷಿಸು, ತನ್ನ ವಶಕ್ಕೆ ತೆಗೆದುಕೊಳ್ಳು.
ವಾಕ್ಯ: ಆ ಕಾದಂಬರಿಯ ಕಥಾವಸ್ತು ನನ್ನ ಮನಸ್ಸನ್ನು ಸಂಪೂರ್ಣವಾಗಿ ಸೆರೆಹಿಡಿಯಿತು.
Additional Question and Answer
ಒಂದು ಅಥವಾ ಎರಡು ವಾಕ್ಯಗಳಲ್ಲಿ ಉತ್ತರಿಸಿ.
Question 1.
ಬೀಚಿಯವರ ಪ್ರಕಾರ ಪುಸ್ತಕಗಳಿಲ್ಲದ ಅವರ ಪ್ರಪಂಚ ಹೇಗಿತ್ತು?
Answer:
ಪುಸ್ತಕಗಳಿಲ್ಲದ ಅವರ ಪ್ರಪಂಚವು ಬರಡು ಭೂಮಿಯಂತಿದ್ದು, ಸಹಾರಾ ಮರುಭೂಮಿಯಂತೆ ಕಾಣುತ್ತಿತ್ತು.
Question 2.
ಹೈಸ್ಕೂಲ್ ದಿನಗಳಲ್ಲಿ ಬೀಚಿಯವರು ಯಾವ ಪುಸ್ತಕಗಳನ್ನು ಓದುತ್ತಿದ್ದರು?
Answer:
ಅವರು ಮುಖ್ಯವಾಗಿ ಪಠ್ಯಪುಸ್ತಕಗಳನ್ನಷ್ಟೇ ಓದುತ್ತಿದ್ದರು.
Question 3.
ಬೀಚಿಯವರಿಗೆ ಸಾಹಿತ್ಯ ಭಂಡಾರದ ಪರಿಚಯವನ್ನು ಯಾರು ಮಾಡಿಕೊಟ್ಟರು?
Answer:
ಶ್ರೀ ಮಂಗಳೂರು ಗೋವಿಂದರಾಯರ ಪರಿಚಯ ಬೀಚಿಯವರಿಗೆ ಸಾಹಿತ್ಯ ಲೋಕವನ್ನು ಪರಿಚಯಿಸಿತು.
Question 4.
ಬೀಚಿಯವರ ಪತ್ನಿ ಯಾವ ಬೇಡಿಕೆಯನ್ನು ಇಟ್ಟಳು?
Answer:
ಓದಲು ಒಂದು ಕನ್ನಡ ಪುಸ್ತಕವನ್ನು ತಂದುಕೊಡಬೇಕೆಂದು ಕೇಳಿದಳು.
Question 5.
ಬೀಚಿಯವರ ಮೇಲೆ ಪ್ರಭಾವ ಬೀರಿದ ಮೊದಲ ಕನ್ನಡ ಪುಸ್ತಕ ಯಾವುದು?
Answer:
ಅ.ನ. ಕೃಷ್ಣರಾಯರ ‘ಸಂಧ್ಯಾರಾಗ’ ಕೃತಿ.
Question 6.
‘ರಾಯರು ನನ್ನ ಹೃದಯವನ್ನು ಗೆದ್ದರೆ, ಆಚಾರ್ಯರು ನನ್ನ ತಲೆಯನ್ನು ಗೆದ್ದರು’ ಎಂಬುದರ ಅರ್ಥವೇನು?
Answer:
ಅ.ನ. ಕೃಷ್ಣರಾಯರ ಕೃತಿ ಭಾವನಾತ್ಮಕವಾಗಿ ಸ್ಪರ್ಶಿಸಿದರೆ, ಆದ್ಯ ರಂಗಾಚಾರ್ಯರ ಕೃತಿ ಅವರ ಬೌದ್ಧಿಕ ಚಿಂತನೆಯನ್ನು ಪ್ರಭಾವಿಸಿತು.
Question 7.
ಬೀಚಿಯವರನ್ನು ಮಂತ್ರಮುಗ್ಧರನ್ನಾಗಿಸಿದ ಕೃತಿ ಯಾವುದು?
Answer:
ಜಿ.ಪಿ. ರಾಜರತ್ನಂ ಅವರ ‘ರತ್ನನ ಪದಗಳು’ ಕೃತಿ.
Question 8.
ಶಂ.ಬಾ. ಜೋಷಿಯವರ ‘ಯಕ್ಷಪ್ರಶ್ನೆ’ ಕೃತಿಯ ವಿಶೇಷತೆ ಏನು?
Answer:
ಪೌರಾಣಿಕ ಕಥೆಗಳನ್ನು ಹೊಸ ದೃಷ್ಟಿಕೋನದಿಂದ ವಿಶ್ಲೇಷಿಸಿರುವುದು ಅದರ ವಿಶೇಷತೆ.
Question 9.
ಬೀಚಿಯವರು ‘ರೂಪದರ್ಶಿ’ ಕೃತಿಯ ಬಗ್ಗೆ ಏನು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ?
Answer:
ಮಾನವ ಜೀವನದ ನಿಜವಾದ ಅರ್ಥವನ್ನು ಅರಿಯಲು ಈ ಕೃತಿಯನ್ನು ಓದಲೇಬೇಕು ಎಂದು ಹೇಳಿದ್ದಾರೆ.
Question 10.
ಬೀಚಿಯವರ ಪ್ರಕಾರ ‘ಮಂಕುತಿಮ್ಮನ ಕಗ್ಗ’ ಯ ವಿಶೇಷತೆ ಏನು?
Answer:
ಅದು ಲೌಕಿಕ ಮತ್ತು ಪಾರಮಾರ್ಥಿಕ ವಿಚಾರಗಳನ್ನು ಸರಳವಾಗಿ ಮತ್ತು ಆಸಕ್ತಿದಾಯಕವಾಗಿ ನಿರೂಪಿಸುತ್ತದೆ.
ವಿಸ್ತೃತ ಪ್ರಶ್ನೋತ್ತರಗಳು.
Question 1.
ಬೀಚಿಯವರ ಜೀವನದಲ್ಲಿ ‘ಸಂಧ್ಯಾರಾಗ’ ಕೃತಿಯ ಪ್ರಭಾವವನ್ನು ವಿವರಿಸಿ.
Answer:
ಅ.ನ. ಕೃಷ್ಣರಾಯರ ‘ಸಂಧ್ಯಾರಾಗ’ ಕೃತಿಯು ಬೀಚಿಯವರ ಜೀವನದಲ್ಲಿ ಮಹತ್ವದ ತಿರುವು ನೀಡಿತು. ಆರಂಭದಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಹೆಚ್ಚಿನ ಆಸಕ್ತಿ ಇಲ್ಲದಿದ್ದ ಅವರು, ತಮ್ಮ ಪತ್ನಿಯ ಒತ್ತಾಯದಿಂದ ಈ ಪುಸ್ತಕವನ್ನು ಓದಿದರು. ಪುಸ್ತಕದ ಕಥಾವಸ್ತು ಮತ್ತು ಭಾವನಾತ್ಮಕ ಚಿತ್ರಣವು ಅವರನ್ನು ಆಳವಾಗಿ ಸ್ಪರ್ಶಿಸಿತು. ಈ ಕೃತಿಯ ಮೂಲಕ ಕನ್ನಡ ಸಾಹಿತ್ಯದ ಶ್ರೇಷ್ಠತೆಯನ್ನು ಅರಿತುಕೊಂಡ ಅವರು ಕನ್ನಡ ಸಾಹಿತ್ಯದ ಅಭಿಮಾನಿಯಾಗಿ ರೂಪುಗೊಂಡರು.
Question 2.
ಬೀಚಿಯವರ ಮೇಲೆ ಪ್ರಭಾವ ಬೀರಿದ ಕನ್ನಡ ಕೃತಿಗಳನ್ನು ಹೆಸರಿಸಿ ವಿವರಿಸಿ.
Answer:
ಬೀಚಿಯವರ ಮೇಲೆ ಪ್ರಮುಖವಾಗಿ ಆರು ಕನ್ನಡ ಕೃತಿಗಳು ಪ್ರಭಾವ ಬೀರಿದವು. ಅವುಗಳೆಂದರೆ ‘ಸಂಧ್ಯಾರಾಗ’, ‘ವಿಶ್ವಾಮಿತ್ರ ಸೃಷ್ಟಿ’, ‘ರತ್ನನ ಪದಗಳು’, ‘ಯಕ್ಷಪ್ರಶ್ನೆ’, ‘ರೂಪದರ್ಶಿ’ ಮತ್ತು ‘ಮಂಕುತಿಮ್ಮನ ಕಗ್ಗ’. ಈ ಕೃತಿಗಳು ಅವರ ಹೃದಯ, ಚಿಂತನೆ, ಸಾಹಿತ್ಯಾಸಕ್ತಿ ಮತ್ತು ಜೀವನದ ದೃಷ್ಟಿಕೋನವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದವು.
Multiple Choice Question
1. ‘ನನ್ನ ಪುಸ್ತಕ ಪ್ರಪಂಚ’ ಗದ್ಯಭಾಗವು ಯಾವ ಕೃತಿಯಿಂದ ಆಯ್ಕೆಯಾಗಿದೆ?
A) ಕನ್ನಡ ಎಮ್ಮೆ
B) ನನ್ನ ಭಯಾಗ್ರಫಿ
C) ಅಂದನಾ ತಿಂಮ
D) ಕೆನೆಮೊಸರು
Answer:
B) ನನ್ನ ಭಯಾಗ್ರಫಿ
2. ಬೀಚಿಯವರ ಕಾವ್ಯನಾಮ ಯಾವುದು?
A) ಡಿ.ವಿ.ಜಿ.
B) ಅ.ನ.ಕೃ.
C) ಬೀಚಿ
D) ಜಿ.ಪಿ.
Answer:
C) ಬೀಚಿ
3. ಬೀಚಿಯವರ ಮೇಲೆ ಪ್ರಭಾವ ಬೀರಿದ ಮೊದಲ ಕನ್ನಡ ಕೃತಿ ಯಾವುದು?
A) ರತ್ನನ ಪದಗಳು
B) ವಿಶ್ವಾಮಿತ್ರ ಸೃಷ್ಟಿ
C) ಸಂಧ್ಯಾರಾಗ
D) ಯಕ್ಷಪ್ರಶ್ನೆ
Answer:
C) ಸಂಧ್ಯಾರಾಗ
4. ‘ಸಂಧ್ಯಾರಾಗ’ ಕೃತಿಯ ಕರ್ತೃ ಯಾರು?
A) ಡಿ.ವಿ. ಗುಂಡಪ್ಪ
B) ಅ.ನ. ಕೃಷ್ಣರಾಯ
C) ಶಂ.ಬಾ. ಜೋಷಿ
D) ಕೆ.ವಿ. ಅಯ್ಯರ್
Answer:
B) ಅ.ನ. ಕೃಷ್ಣರಾಯ
5. ಬೀಚಿಯವರು ಹುಬ್ಬಳ್ಳಿಯಲ್ಲಿ ಯಾವ ಕೆಲಸ ಮಾಡುತ್ತಿದ್ದರು?
A) ಶಿಕ್ಷಕ
B) ವಕೀಲ
C) ವಿಮಾ ಕಂಪನಿಯ ಏಜೆಂಟ್
D) ಬ್ಯಾಂಕ್ ಉದ್ಯೋಗಿ
Answer:
C) ವಿಮಾ ಕಂಪನಿಯ ಏಜೆಂಟ್
6. ‘ವಿಶ್ವಾಮಿತ್ರ ಸೃಷ್ಟಿ’ ಕೃತಿಯ ಕರ್ತೃ ಯಾರು?
A) ಆದ್ಯ ರಂಗಾಚಾರ್ಯ
B) ಜಿ.ಪಿ. ರಾಜರತ್ನಂ
C) ಡಿ.ವಿ. ಗುಂಡಪ್ಪ
D) ಕೆ.ವಿ. ಅಯ್ಯರ್
Answer:
A) ಆದ್ಯ ರಂಗಾಚಾರ್ಯ
7. ಬೀಚಿಯವರನ್ನು ಮಂತ್ರಮುಗ್ಧರನ್ನಾಗಿಸಿದ ಕೃತಿ ಯಾವುದು?
A) ರೂಪದರ್ಶಿ
B) ಯಕ್ಷಪ್ರಶ್ನೆ
C) ರತ್ನನ ಪದಗಳು
D) ಸಂಧ್ಯಾರಾಗ
Answer:
C) ರತ್ನನ ಪದಗಳು
8. ‘ಯಕ್ಷಪ್ರಶ್ನೆ’ ಕೃತಿಯ ಕರ್ತೃ ಯಾರು?
A) ಅ.ನ. ಕೃಷ್ಣರಾಯ
B) ಶಂ.ಬಾ. ಜೋಷಿ
C) ಡಿ.ವಿ.ಜಿ.
D) ಕೆ.ವಿ. ಅಯ್ಯರ್
Answer:
B) ಶಂ.ಬಾ. ಜೋಷಿ
9. ‘ರೂಪದರ್ಶಿ’ ಕೃತಿಯ ಕರ್ತೃ ಯಾರು?
A) ಕೆ.ವಿ. ಅಯ್ಯರ್
B) ಡಿ.ವಿ.ಜಿ.
C) ಜಿ.ಪಿ. ರಾಜರತ್ನಂ
D) ಆದ್ಯ ರಂಗಾಚಾರ್ಯ
Answer:
A) ಕೆ.ವಿ. ಅಯ್ಯರ್
10. ‘ಮಂಕುತಿಮ್ಮನ ಕಗ್ಗ’ ಕೃತಿಯ ಕರ್ತೃ ಯಾರು?
A) ಬೀಚಿ
B) ಅ.ನ. ಕೃಷ್ಣರಾಯ
C) ಡಿ.ವಿ. ಗುಂಡಪ್ಪ
D) ಶಂ.ಬಾ. ಜೋಷಿ
Answer:
C) ಡಿ.ವಿ. ಗುಂಡಪ್ಪ
11. ಬೀಚಿಯವರ ಪ್ರಕಾರ ಪುಸ್ತಕಗಳು ಏನನ್ನು ಹೆಚ್ಚಿಸುತ್ತವೆ?
A) ಹಣವನ್ನು
B) ಅಧಿಕಾರವನ್ನು
C) ಜ್ಞಾನದ ಹರವನ್ನು
D) ಖ್ಯಾತಿಯನ್ನು
Answer:
C) ಜ್ಞಾನದ ಹರವನ್ನು
12. ಬೀಚಿಯವರು ಇನ್ನೂ ಓದಬೇಕೆಂದು ಬಯಸಿದ ಕೃತಿ ಯಾವುದು?
A) ಸಂಧ್ಯಾರಾಗ
B) ಮಂಕುತಿಮ್ಮನ ಕಗ್ಗ
C) ಮರಳಿ ಮಣ್ಣಿಗೆ
D) ರೂಪದರ್ಶಿ
Answer:
C) ಮರಳಿ ಮಣ್ಣಿಗೆ