Class 10 NudiKannada Text Book Solution Chapter 4

SSLC Nudi Kannada Question and Answer -Dhwaja Rakshane

Looking for SSLC /Class 10th Nudi Kannada textbook answers? You can download Chapter 4: Dhwaja Rakshane Questions and Answers PDF, Notes, and Summary here. SSLC /Class 10th Nudi Kannada Gadyabhaga solutions follow the Karnataka State Board Syllabus, making it easier for students to revise and score higher in exams.

Karnataka SSLC/Class 10th Nudi Kannada Textbook Answers—Reflections Chapter 4

Dhwaja Rakshane Questions and Answers, Notes, and Summary

Class 10 Nudi Kannada Chapter 3

ಧ್ವಜ ರಕ್ಷಣೆ

Dhwaja Rakshane
Scroll Down to Download Dhwaja Rakshane PDF

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

Question 1.
ಮೋಹನಪುರದಲ್ಲಿ ನಡೆದ ಚಳವಳಿ ಯಾವುದು?
Answer:
ಮೋಹನಪುರದಲ್ಲಿ ಚಲೇಜಾವ್ ಚಳುವಳಿ ನಡೆಯಿತು.

Question 2.
ಗಾಂಧೀಜಿಯವರು ಕೊಟ್ಟ ಮಂತ್ರ ಯಾವುದು?
Answer:
‘ಮಾಡು ಇಲ್ಲವೆ ಮಡಿ’ ಎಂಬುದು ಗಾಂಧೀಜಿಯವರು ಕೊಟ್ಟ ಮಂತ್ರವಾಗಿತ್ತು.

Question 3.
ಸತ್ಯಾಗ್ರಹಿಗಳನ್ನು ಚದುರಿಸಲು ಕುಲಕರ್ಣಿಯವರು ಏನು ಮಾಡಿದರು?
Answer:
ಸತ್ಯಾಗ್ರಹಿಗಳನ್ನು ಚದುರಿಸಲು ಕುಲಕರ್ಣಿಯವರು ಗಾಳಿಯಲ್ಲಿ ಗುಂಡು ಹಾರಿಸಿದರು.

Question 4.
ಮೋಹನಪುರದ ಪರಿಸ್ಥಿತಿಯನ್ನು ನಿಯಂತ್ರಿಸಲು ಡಿ.ಎಸ್.ಪಿ ಏನು ಮಾಡಿದನು?
Answer:
ಮೋಹನಪುರದ ಪರಿಸ್ಥಿತಿಯನ್ನು ನಿಯಂತ್ರಿಸಲು ಡಿ. ಎಸ್. ಪಿಯವರು ತಮ್ಮ ಇಲಾಖೆಯ ನಿಷ್ಠಾವಂತ ಅಧಿಕಾರಿ ಮಿ ಕುಲಕರ್ಣಿಯವರನ್ನು ಕರ್ತವ್ಯದ ಮೇಲೆ ಹೋಗುವಂತೆ ಆದೇಶಿಸಿದರು.

Question 5.
ರಾಮಸಿಂಗ್ ಶಿಪಾಯಿಗಳಿಗೆ ಯಾವ ಮಾತನ್ನು ಸೆರಗಿಗೆ ಗಂಟು ಹಾಕಿಕೊಳ್ಳುವಂತೆ ಹೇಳಿದನು?
Answer:
ರಾಮಸಿಂಗ್ ಸಿಪಾಯಿಗಳಿಗೆ “ಜನರೊಪ್ಪದ ಬ್ರಿಟಿಷರ ಆಟ ಇನ್ನು ಭಾರತದಲ್ಲಿ ನಡೆಯಲಾರದು.” ಎಂಬ ಮಾತನ್ನು ಸೆರಗಿಗೆ ಗಂಟು ಹಾಕಿಕೊಳ್ಳುವಂತೆ ಹೇಳಿದನು.

ಆ) ಕೆಳಗಿನ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.

Question 1.
ತುಳಜಾಬಾಯಿಯ ದೇಶಪ್ರೇಮ ಮತ್ತು ತ್ಯಾಗವನ್ನು ಕುರಿತು ಬರೆಯಿರಿ.
Answer:
ತುಳಜಾಬಾಯಿ ರಾಮಸಿಂಗನ ತಾಯಿ. ಸ್ವಾತಂತ್ರ್ಯ ಸಂಗ್ರಾಮದ ಚಳುವಳಿಯಲ್ಲಿ ತನ್ನ ಮಗನನ್ನು ಬಲಿ ಕೊಡುವ ಸಾಧ್ಯತೆಯ ಅರಿವಿದ್ದರೂ ಧೈರ್ಯ ತಂದುಕೊಂಡು ಒಂದು ವರ್ಷದ ಹಿಂದಷ್ಟೆ ಈ ಹೋರಾಟದಲ್ಲಿ ತನ್ನ ಪತಿ ಗತಿಸಿದ್ದರೂ ಲೆಕ್ಕಿಸದೆ ತುಳಜಾಬಾಯಿಯು ತನ್ನ ಮಗನನ್ನು ಆಶೀರ್ವದಿಸಿ ಮೋಹನಪುರದಲ್ಲಿನ ಹೋರಾಟಕ್ಕೆ ಶುಭಕೋರಿ ಕಳುಹಿಸಿಕೊಟ್ಟಿದ್ದಳು.

Question 2.
ರಾಮಸಿಂಗನಿಗೂ ಶಿಪಾಯಿಗಳಿಗೂ ನಡೆದ ಸಂಭಾಷಣೆಯನ್ನು ನಿಮ್ಮ ಮಾತುಗಳಲ್ಲಿ ಸಂಗ್ರಹಿಸಿ.
Answer:
ಸಿಪಾಯಿ – 1:
ಇಲ್ಲಿ ಸಭೆ ಸೇರಿಸಕೂಡದೆಂದು ಡಂಗುರ ಸಾರಿದ್ದನ್ನು ಕೇಳಿಲ್ಲವೇ?

ರಾಮಸಿಂಗ್: ಹಾಗೆ ಡಂಗುರ ಸಾರಲು, ಇದು ನಿಮ್ಮಪ್ಪನ ಮನೆಯಲ್ಲ, ಇದು ನಮ್ಮ ಊರು.

ಸಿಪಾಯಿ 2: ಆದರೆ ಇಲ್ಲಿ ರಾಜ್ಯವಾಳುವವರು ನೀವಲ್ಲ, ಬ್ರಿಟಿಶ್ ಸರಕಾರ.

ರಾಮಸಿಂಗ್: ನೀವು ಬ್ರಿಟಿಶ್‌ರಲ್ಲವಲ್ಲ !

ಸಿಪಾಯಿ-1: ನಾವು ಬ್ರಿಟಿಶ್ ಸರಕಾರದ ನೌಕರರು.

ರಾಮಸಿಂಗ್‌: ನೌಕರರಲ್ಲ, ಗುಲಾಮರು.

ಈ ರೀತಿಯಾಗಿ ರಾಮಸಿಂಗ್ ಮತ್ತು ಸಿಪಾಯಿಗಳ ನಡುವೆ ಸಂಭಾಷಣೆ ನಡೆಯುತ್ತದೆ.

Question 3.
“ಅರಿಯದ ಬಾಲಕನನ್ನು ಅಡ್ಡದಾರಿಗೆ ಎಳೆದು ಅವರ ಬದುಕನ್ನು ಹಾಳು ಮಾಡಿದಿರಿ” ಎಂದು ಕುಲಕರ್ಣಿಯು ಸೋಮಣ್ಣನಿಗೆ ಏಕೆ ಹೇಳಿದನು.?
Answer:
ರಾಮಸಿಂಗ್ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಪ್ರಭಾತಪೇರಿಯನ್ನು ಮುನ್ನಡೆಸುತ್ತ ಮೋಹನಪುರದ ಎರಡು ರಸ್ತೆಗಳು ಕೂಡುವ ಸ್ಥಳದಲ್ಲಿ ತನ್ನ ಮಿತ್ರರೊಂದಿಗೆ ಬಂದಿದ್ದ, ಕುಲಕರ್ಣಿಯೊಂದಿಗೆ ಮಾತಿಗೆ ಮಾತು ಬೆಳೆಸಿ ಪ್ರತ್ಯುತ್ತರ ನೀಡುತ್ತಿದ್ದ, ಘೋಷಣೆಗಳನ್ನು ಮಾಡುತ್ತಿದ್ದ. ಸುಮ್ಮನಾಗಿ ಇಲ್ಲಿಂದ ಚದುರಿರಿ ಎಂದು ಹೇಳಿದರೂ ಕೇಳಲಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಕುಲಕರ್ಣಿಯು ಸೋಮಣ್ಣನಿಗೆ ಅರಿಯದ ಬಾಲಕರನ್ನು ಅಡ್ಡದಾರಿಗೆ ಎಳೆದು ಅವರ ಬದುಕು ಹಾಳು ಮಾಡದಿರಿ ಎಂದು ಹೇಳಿದನು.

Question 4.
ಮೋಹನಪುರದ ಸತ್ಯಾಗ್ರಹಿಗಳು ಮಾಡುತ್ತಿದ್ದ ಘೋಷಣೆಗಳಾವುವು?
Answer:
‘ಬೋಲೋ ಭಾರತ ಮಾತಾ ಕೀ ಜೈ’, ‘ವಂದೇ ಮಾತರಂ’, ‘ಮಹಾತ್ಮಾ ಗಾಂಧೀಜಿ ಕೀ ಜೈ’ ವಂದೆ ಮಾತರಂ ‘ಭಾರತ ಮಾತಾಕಿ ಜೈ’ ‘ರಾಮಸಿಂಗ್ ಕೀ ಜೈ’ ಈ ರೀತಿಯಾಗಿ ಮೋಹನಪುರದ ಸತ್ಯಾಗ್ರಹಿಗಳು ಘೋಷಣೆಗಳನ್ನು ಮಾಡುತ್ತಿದ್ದರು.

Question 5.
ಕುಲಕರ್ಣಿಯು ರಾಮಸಿಂಗ್‌ನ ಮೇಲೆ ಗುಂಡುಹಾರಿಸಿದ್ದೇಕೆ?
Answer:
ರಾಮಸಿಂಗ್ ಕುಲಕರ್ಣಿಯೊಂದಿಗೆ ವಾದ ಮಾಡುತ್ತಾನೆ. ಕುಲಕರ್ಣಿಯ ಆಜ್ಞೆ ಪಾಲಿಸದೇ ಪ್ರತಿರೋಧ ವ್ಯಕ್ತಪಡಿಸುತ್ತಾನೆ. ಕುಲಕರ್ಣಿ ಮುಂದಡಿ ಇಟ್ಟರೆ ಗತಿ ಚೆನ್ನಾಗಿರುವುದಿಲ್ಲ ಎಂದಾಗ ರಾಮಸಿಂಗ್ ಎರಡು ಹೆಜ್ಜೆ ಮುಂದಡಿ ಇಟ್ಟು “ಭಾರತ ಮಾತಾಕೀ ಜೈ” ಎಂದು ಘೋಷಿಸಿದಾಗ ಕುಲಕರ್ಣಿ ಸಿಟ್ಟಿನಿಂದ ಆತನ ಮೇಲೆ ಗುಂಡು ಹಾರಿಸಿ ಕೊಲ್ಲುತ್ತಾನೆ.

ಇ) ಸಂದರ್ಭ ಸಹಿತ ಕೆಳಗಿನ ಮಾತುಗಳ ಸ್ವಾರಸ್ಯವನ್ನು ವಿವರಿಸಿರಿ.

Question 1.
“ನಾವು ತಿನ್ನುವ ಮಾವಿನ ಹಣ್ಣಿನ ಗಿಡಗಳನ್ನು ನಾವೆ ಹಚ್ಚಿಲ್ಲ”
Answer:
ಪಾಠದ ಹೆಸರು:
ಧ್ವಜ ರಕ್ಷಣೆ
ಲೇಖಕರ ಹೆಸರು: ಪ್ರೊ|| ಎಸ್. ಆರ್. ರೋಹಿಡೇಕರ್,
ಸಂದರ್ಭ: ಸೋಮಣ್ಣ ಈ ಮಾತನ್ನು ಕುಲಕರ್ಣಿಗೆ ನುಡಿದಿದ್ದಾನೆ.
ವಿವರಣೆ: ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮ ಪಾತ್ರವೇನೆಂಬುದರ ಕುರಿತು ಸೋಮಣ್ಣ ತನ್ನ ವಿಚಾರ ವ್ಯಕ್ತ ಪಡಿಸುವಾಗ ಈ ಮೇಲಿನ ಮಾತನ್ನು ಕುಲಕರ್ಣಿಗೆ ನುಡಿಯುತ್ತಾನೆ.

Question 2.
 “ಸಾಕು ಮಾಡಿರಿ ನಿಮ್ಮ ಪುರಾಣ”
Answer:
ಲೇಖಕರ ಹೆಸರು:
ಪ್ರೊ।। ಎಸ್. ಆರ್. ರೋಹಿಡೇಕರ್.
ಸಂದರ್ಭ: ಕುಲಕರ್ಣಿ ಈ ಮಾತನ್ನು ಸೋಮಣ್ಣನಿಗೆ ನುಡಿದಿದ್ದಾನೆ.
ವಿವರಣೆ: ಸೋಮಣ್ಣ ಕುಲಕರ್ಣಿಗೆ – “ನೀವು ಫೌಜುದಾರರಾದಕ್ಷಣ ನಿಮಗೆ ಸುಖ ಸಿಗುವುದೆಂಬ ಭ್ರಾಂತಿ ಬಿಡಿ. ನಿಮ್ಮ ಸುತ್ತಮುತ್ತಲಿನ ಜನರ ಗೋಳಿಗೆ ನೀವೇ ಕಾರಣರು” ಎನ್ನುತ್ತಾನೆ. ಆಗ ಕುಲಕರ್ಣಿ ಸಿಟ್ಟಿನಿಂದ ಈ ಮೇಲಿನ ಮಾತನ್ನು ಸೋಮಣ್ಣನಿಗೆ ನುಡಿಯುತ್ತಾನೆ.

Question 3.
“ಹೆಣ್ಣುಮಗಳೇ, ಆ ಧ್ವಜವನ್ನು ಮೊದಲು ಕೆಳಗಿಡು”
Answer:
ಪಾಠದ ಹೆಸರು:
ಧ್ವಜ ರಕ್ಷಣೆ
ಲೇಖಕರ ಹೆಸರು: ಪ್ರೊ|| ಎಸ್. ಆರ್. ರೋಹಿಡೇಕರ್.
ಸಂದರ್ಭ: ಕುಲಕರ್ಣಿ ಈ ಮಾತನ್ನು ತುಳಜಾಬಾಯಿಗೆ ನುಡಿದಿದ್ದಾನೆ.
ವಿವರಣೆ: ರಾಮಸಿಂಗ್‌ನಿಗೆ ಗುಂಡು ತಗುಲಿ ಸಾವನ್ನಪ್ಪಿದ ಸುದ್ದಿ ತಿಳಿದು ತುಳಜಾಬಾಯಿ ಗೋಳಿಡುತ್ತ ರಭಸದಿಂದ ಓಡೋಡಿ ಬರುವಳು. ರಾಮಸಿಂಗ್‌ನ ಕೈಯಲ್ಲಿ ಧ್ವಜ ಇಲ್ಲದಿರುವುದನ್ನು ಗಮನಿಸಿ ತಾನು ತಂದ ಧ್ವಜವನ್ನು ಕೊಡಲು ಪ್ರಯತ್ನಿಸುವಳು. ಆಗ ಕುಲಕರ್ಣಿ ಈ ಮೇಲಿನ ಮಾತನ್ನು ತುಳಜಾಬಾಯಿಗೆ ನುಡಿಯುವನು.

Question 4.
 “ಕವಡಿ ಕಿಮ್ಮತ್ತಿನ ಗುಲಾಮರಿಗೆ ಮುಂದಾಳುಗಳೇಕೆ?”
Answer:
ಪಾಠದ ಹೆಸರು:
ಧ್ವಜ ರಕ್ಷಣೆ
ಲೇಖಕರ ಹೆಸರು: ಪ್ರೊ|| ಎಸ್. ಆರ್. ರೋಹಿಡೇಕರ್.
ಸಂದರ್ಭ: ರಾಮಸಿಂಗ್ ಈ ಮಾತನ್ನು ಸಿಪಾಯಿಗೆ ನುಡಿದಿದ್ದಾನೆ.
ವಿವರಣೆ: ಫೌಜುದಾರ ಕುಲಕರ್ಣಿಯ ಬಗೆಗೆ ತನ್ನ ಅಭಿಪ್ರಾಯ ತಿಳಿಸುತ್ತ ರಾಮಸಿಂಗ್ ಈ ಮಾತನ್ನು ಸಿಪಾಯಿಗೆ ನುಡಿಯುತ್ತಾನೆ. ಕವಡಿ ಕಿಮ್ಮತ್ತಿನ ಗುಲಾಮರಿಗಿಂತ ನನ್ನಂತಹ ದೇಶಾಭಿಮಾನ ಹುಡುಗನೊಬ್ಬ ಸಾಕು ಎಂದು ರಾಮಸಿಂಗ್ ಸಿಪಾಯಿಗೆ ಹೇಳುತ್ತಾನೆ.

Question 5.
“ಒಂದು ಪಿಳ್ಳೆ ಜೀವಂತವಿರುವವರೆಗೆ, ನಿಮ್ಮ ಆಜ್ಞೆ ನಡೆಯಲಾರದು ಇಲ್ಲಿ.”
Answer:
ಪಾಠದ ಹೆಸರು:
ಧ್ವಜ ರಕ್ಷಣೆ
ಲೇಖಕರ ಹೆಸರು: ಪ್ರೊ।। ಎಸ್. ಆರ್. ರೋಹಿಡೇಕರ್.
ಸಂದರ್ಭ: ರಾಮಸಿಂಗ್ ಈ ಮಾತನ್ನು ಫೌಜದಾರ ಕುಲಕರ್ಣಿಗೆ ನುಡಿದಿದ್ದಾನೆ.
ವಿವರಣೆ: ರಾಮಸಿಂಗ್ ಹಾಗೂ ಆತನ ಮಿತ್ರರು ಚಲೇಜಾವ್ ಚಳವಳಿಯನ್ನು ಯಶಸ್ವಿಗೊಳಿಸಲು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಪ್ರಭಾತಪೇರಿಯೊಂದಿಗೆ ಸಭೆ ನಡೆಸಲು ನಿರ್ಧರಿಸುತ್ತಾರೆ. ಸತ್ಯಾಗ್ರಹಿಗಳೇ ಇಲ್ಲಿಂದ ಚದುರಿರಿ ಎಂದು ಫೌಜುದಾರ ಕುಲಕರ್ಣಿ ಆದೇಶಿಸುತ್ತಾರೆ. ಇದಕ್ಕೆ ಪ್ರತಿಯಾಗಿ ರಾಮಸಿಂಗ್ ಈ ಮೇಲಿನ ಮಾತನ್ನು ಕುಲಕರ್ಣಿಗೆ ನುಡಿಯುತ್ತಾನೆ.

Question 6.
“ದೇಹದಲ್ಲಿ ಪ್ರಾಣವಿರುವವರೆಗೆ ಇದನ್ನು ಕೆಳಗಿಡಲಾರೆ.”
Answer:
ಪಾಠದ ಹೆಸರು:
ಧ್ವಜ ರಕ್ಷಣೆ
ಲೇಖಕರ ಹೆಸರು: ಪ್ರೊ|| ಎಸ್. ಆರ್. ರೋಹಿಡೇಕರ್.
ಸಂದರ್ಭ: ರಾಮಸಿಂಗ್ ಈ ಮಾತನ್ನು ಫೌಜುದಾರ ಕುಲಕರ್ಣಿಗೆ ನುಡಿದಿದ್ದಾನೆ.
ವಿವರಣೆ: ಫೌಜುದಾರ ಕುಲಕರ್ಣಿ ರಾಮಸಿಂಗ್‌ನಿಗೆ ಹೆದರಿಸಲು ಪಿಸ್ತೂಲು ತೋರಿಸುವನು. ಅದಕ್ಕೆ ಪ್ರತಿರೋಧವಾಗಿ ರಾಮಸಿಂಗ್ ರಾಷ್ಟ್ರಧ್ವಜ ಎತ್ತಿ ತೋರಿಸಿ ಈ ಧ್ವಜದ ಶಕ್ತಿಯ ಮುಂದೆ ನೀವು ನಿಲ್ಲಬಲ್ಲಿರಾ? ಎಂದು ಕೇಳುವನು. ಕುಲಕರ್ಣಿ ಸುಮ್ಮನೆ ಕೆಳಗಿಡು ಅದನ್ನು ಎಂದಾಗ ರಾಮಸಿಂಗ್ ಕುಲಕರ್ಣಿಗೆ ಈ ಮೇಲಿನ ಮಾತನ್ನು ನುಡಿಯುವನು.

ಈ) ಕೆಳಗಿನ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

Question 1.
ರಾಮಸಿಂಗನು ತನ್ನ ಛಲವನ್ನು ಹೇಗೆ ಸಾಧಿಸಿದನು?ವಿವರಿಸಿರಿ.
Answer:
ರಾಮಸಿಂಗ್ ಮೋಹನಪುರದ ತರುಣ ಉತ್ಸಾಹಿಯಾಗಿದ್ದ. ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಲು ಸರ್ವಸಿದ್ಧತೆ ಮಾಡಿಕೊಂಡಿದ್ದನು. ಆತನಲ್ಲಿ ದೇಶಭಕ್ತಿಯ ಜೊತೆಗೆ ಛಲವೂ ಇತ್ತು. ಮೋಹನಪುರದಲ್ಲಿ ಚಲೇಜಾವ್ ಚಳುವಳಿ ನಡೆಯುತ್ತಿತ್ತು. ರಾಮಸಿಂಗ್‌ನಿಗೆ ಆ ದಿನದ ಬೆಳಗಿನ ಪ್ರಭಾತಫೇರಿ ಮುನ್ನಡೆಸುವ ಅವಕಾಶ ಅವನಿಗೆ ಬಂದಿತ್ತು. ಇಬ್ಬರು ಸಿಪಾಯಿಗಳೊಂದಿಗೆ ಫೌಜುದಾರ ಕುಲಕರ್ಣಿ ಆಗಮಿಸಿ ಸತ್ಯಾಗ್ರಹಿಗಳನ್ನು ಹೋರಾಟ ನಿಲ್ಲಿಸುವಂತೆ ಇಲ್ಲಿಂದ ಚದುರಿ ಹೋಗುವಂತೆ ಆದೇಶಿಸುತ್ತಾನೆ. ರಾಮಸಿಂಗ್‌ನಿಗೆ ಧ್ವಜವನ್ನು ಕೆಳಗಿಡುವಂತೆ ಸೂಚಿಸುತ್ತಾನೆ. ರಾಮಸಿಂಗ್ ಕುಲಕರ್ಣಿಯೊಂದಿಗೆ ವಾದವಿವಾದ ಬೆಳೆಸುತ್ತಾನೆ. ಕುಲಕರ್ಣಿ ಅಧಿಕಾರದ ದರ್ಪದಿಂದ ರಾಮಸಿಂಗ್‌ನ ಮೇಲೆ ಗುಂಡು ಹಾರಿಸುತ್ತಾನೆ. ಈ ರೀತಿಯಾಗಿ ರಾಮಸಿಂಗ್ ಸಾವಿಗೆ ಶರಣಾದರೂ ತನ್ನ ಛಲವನ್ನು ಸಾಧಿಸಿಯೇ ಬಿಡುತ್ತಾನೆ.

Question 2.
ಕುಲಕರ್ಣಿ ಅವರಿಗೂ ರಾಮಸಿಂಗನಿಗೂ ನಡೆದ ಸಂಭಾಷಣೆಯನ್ನು ಸಂಗ್ರಹಿಸಿ ಬರೆಯಿರಿ.
Answer:
ಕುಲಕರ್ಣಿ ರಾಮಸಿಂಗ್‌ನನ್ನು ಕುರಿತು “ಇಲ್ಲಿಂದ ಹೊರಟು ಹೋಗಿರಿ ನನ್ನ ಸಿಟ್ಟು ನೆತ್ತಿಗೇರುತ್ತಿದೆ! ನನ್ನ ಕೈಯಲ್ಲಿ ಏನಿದೆ ನೋಡುವೆಯಾ ! ಎನ್ನುತ್ತ ಪಿಸ್ತೂಲು ತೋರಿಸಿ ಹೆದರಿಸುವನು.” ರಾಮಸಿಂಗ್ ಕುಲಕರ್ಣಿಗೆ ನಿಮ್ಮ ಸಿಟ್ಟು ಇಳಿಸುವ ಮಾಂತ್ರಿಕರು ನಮ್ಮಲ್ಲಿದ್ದಾರೆ ಎನ್ನುತ್ತ ರಾಷ್ಟ್ರಧ್ವಜವನ್ನು ಪಿಸ್ತೂಲಿಗೆ ಪ್ರತಿಯಾಗಿ ತೋರಿಸುವನು. ಕುಲಕರ್ಣಿ ಪಿಸ್ತೂಲಿನ ಶಕ್ತಿಯ ಮುಂದೆ ನೀನು ನಿಲ್ಲಬಲ್ಲೆಯಾ? ಎಂದಾಗ ರಾಮಸಿಂಗ್ ಈ ಧ್ವಜದ ಶಕ್ತಿಯ ಮುಂದೆ ನೀವು ನಿಲ್ಲಬಲ್ಲಿರಾ? ಎಂದು ಕೇಳುವನು. ಕುಲಕರ್ಣಿ ಧ್ವಜವನ್ನು ಕೆಳಗಿಡುವಂತೆ ಸೂಚಿಸಿದಾಗ ರಾಮಸಿಂಗ್ ‘ಈ ದೇಹದಲ್ಲಿ ಪ್ರಾಣವಿರುವವರೆಗೂ ಇದನ್ನು ಕೆಳಗಿಡಲಾರೆ’ ಎಂದು ವಾದಿಸುವನು. ಅಲ್ಲದೇ ‘ಮೋಹನಪುರದಲ್ಲಿ ಒಂದು ಒಳ್ಳೆ ಜೀವಂತವಿರುವವರೆಗೂ ನಿಮ್ಮ ಆಜ್ಞೆ ನಡೆಯಲಾರದು’ ಎಂದು ರಾಮಸಿಂಗ್ ಅಂಜದೇ ಅಳುಕದೇ ಕುಲಕರ್ಣಿಗೆ ಹೇಳುವನು.

Question 3.
ಸೋಮಣ್ಣನು ಕುಲಕರ್ಣಿಯ ಕೃತ್ಯವನ್ನು ಹೇಗೆ ಖಂಡಿಸಿದನು? ವಿವರಿಸಿರಿ.
Answer:
ಫೌಜುದಾರ ಕುಲಕರ್ಣಿಯವರೇ ಇಂತಹ ಬಾಲಕನ ಮೇಲೆ ಗುಂಡು ಹಾರಿಸಿರುವಿರಾ? ಈ ಹೀನ ಕಾರ್ಯಕ್ಕೆ ನಿಮ್ಮ ಕೈಗಳಾದರೂ ಹೇಗೆ ಮೇಲೆತ್ತಿದವು? ಇವನನ್ನು ಹಿಡಿದು ಜೈಲಿಗೆ ಹಾಕಬಹುದಿತ್ತು. ಅದನ್ನು ಬಿಟ್ಟು, ಗುಂಡಿಟ್ಟು ಅವನನ್ನು ಕೊಂದದ್ದು, ನಿಮ್ಮ ಪರಾಕ್ರಮವೇ? ನೀವು ಫೌಜುದಾರ ಆದ ಕ್ಷಣ ನಿಮಗೆ ಸುಖ ಸಿಗುತ್ತದೆ ಎಂಬ ಭ್ರಾಂತಿ ಬಿಡಿ. ನಿಮ್ಮ ಸುತ್ತಮುತ್ತಲಿನ ಜನರ ಗೋಳಿಗೆ ನೀವೇ ಕಾರಣರು. ಗೇಣು ಹೊಟ್ಟೆಗಾಗಿ ದೇಶದ ಕಂದಮ್ಮರನ್ನು ಕೊಂದು ಅವರ ರಕ್ತದ ಮಡುವಿನಲ್ಲಿ ಮೆರೆಯುವುದು ನಿಮ್ಮ ಕರ್ತವ್ಯನಿಷ್ಠೆಯೇ? ಧಿಕ್ಕಾರವಿರಲಿ ನಿಮ್ಮ ಬದುಕಿಗೆ, ಶತಧಿಕ್ಕಾರ ! ಈ ರೀತಿಯಾಗಿ ಸೋಮಣ್ಣ ಕುಲಕರ್ಣಿಯ ಕೃತ್ಯವನ್ನು ಖಂಡಿಸಿದನು.

Question 4.
ರಾಮಸಿಂಗ್ ಕುಟುಂಬದವರ ದೇಶಪ್ರೇಮ ಮತ್ತು ತ್ಯಾಗವನ್ನು ಕುರಿತು ಬರೆಯಿರಿ.
Answer:
ರಾಮಸಿಂಗ್ ಮೋಹನಪುರದ ಉತ್ಸಾಹಿ ತರುಣ. ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಲು ಸರ್ವಸಿದ್ಧತೆ ಮಾಡಿಕೊಂಡಿದ್ದನು. ಒಂದು ವರ್ಷದ ಹಿಂದಷ್ಟೆ ಇದೇ ಹೋರಾಟದಲ್ಲಿ ಆತನ ತಂದೆ ಸಾವನ್ನಪ್ಪಿದರು. ರಾಮಸಿಂಗ್‌ನಿಗೆ ಆ ದಿನದ ಚಳುವಳಿಯನ್ನು ಮುನ್ನಡೆಸುವ ಅವಕಾಶ ಸಿಕ್ಕಿತು. ಈ ಹೋರಾಟದಲ್ಲಿ ಮಗನನ್ನು ಬಲಿಕೊಡುವ ಸಾಧ್ಯತೆಯ ಅರಿವಿದ್ದರೂ ತಾಯಿ ತುಳಜಾಬಾಯಿ ಮಗನಿಗೆ ಆಶೀರ್ವದಿಸಿ ಮೋಹನಪುರದಲ್ಲಿನ ಹೋರಾಟಕ್ಕೆ ಶುಭ ಕೋರಿ ಕಳುಹಿಸುತ್ತಾಳೆ. ರಾಮಸಿಂಗ್ ಕುಲಕರ್ಣಿಯ ಗುಂಡಿಗೆ ಬಲಿಯಾದಾಗ ತುಳಜಾಬಾಯಿ ಇನ್ನೊಂದು ಧ್ವಜ ತಂದು ರಾಮಸಿಂಗ್‌ನಿಗೆ ಕೊಡಲು ಪ್ರಯತ್ನಿಸುತ್ತಾಳೆ. ಆಗ ಕುಲಕರ್ಣಿ ತುಳಜಾಬಾಯಿಗೆ ಆ ಧ್ವಜವನ್ನು ಕೆಳಗಿಡುವಂತೆ ಸೂಚಿಸುತ್ತಾನೆ. ಅದಕ್ಕೆ ತುಳಾಜಾಬಾಯಿ – “ಹೊಟ್ಟೆಯಲ್ಲಿ ಹುಟ್ಟಿದ ಮಗನನ್ನೇ ಬಲಿಕೊಟ್ಟಿರುವೆ. ನನ್ನ ಪ್ರಾಣವನ್ನೇ ತ್ಯಜಿಸಲು ನಾನು ಸಿದ್ಧಳಿದ್ದೇನೆ. ಆದರೆ ಈ ಧ್ವಜವನ್ನು ಕೆಳಗಿಡಲಾರೆ ಎಂದು ಹೇಳಿ ಚಳುವಳಿಯನ್ನು ಮುಂದುವರೆಸುತ್ತಾಳೆ.

ಊ) ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.
  1. ಚಲೇಜಾವ್ ಚಳುವಳಿಯು ನಡೆದ ವರ್ಷ, 9 ಅಗಸ್ಟ್ 1942.
  2. ಮೋಹನಪುರದ ಚಳುವಳಿಯನ್ನು ಮುನ್ನಡೆಸಿದ ಉತ್ಸಾಹಿ ತರುಣನ ಹೆಸರು ರಾಮಸಿಂಗ್.
  3. ರಾಮಸಿಂಗ್‌ನ ತಾಯಿಯ ಹೆಸರು ತುಳಜಾಬಾಯಿ.
  4. ಇಬ್ಬರು ಪೊಲೀಸ್‌ನವರ ಜತೆ ಸೇರಿದ ಅಧಿಕಾರಿಯ ಹೆಸರು ಮಿ॥ ಕುಲಕರ್ಣಿ.
  5. ಸತ್ಯಾಗ್ರಹಿಗಳನ್ನು ಚದುರಿಸಲು ಕುಲಕರ್ಣಿಯು ಮಾಡಿದ ಕೆಲಸ ಗಾಳಿಯಲ್ಲಿ ಗುಂಡು ಹಾರಿಸಿದ.

ಧ್ವಜ ರಕ್ಷಣೆಸಂಕ್ಷಿಪ್ತ ಸಾರಾಂಶ
Summary

ಧ್ವಜ ರಕ್ಷಣೆ’ ಎಂಬುದು ಪ್ರೊ. ಎಸ್.ಆರ್. ರೋಹಿಡೇಕರ್ ಅವರ ದೇಶಭಕ್ತಿ ಪ್ರಧಾನ ಏಕಾಂಕ ನಾಟಕದ ಒಂದು ಭಾಗವಾಗಿದೆ. ಈ ನಾಟಕವು 1942ಭಾರತ ಬಿಟ್ಟು ತೊಲಗಿ’ (Quit India) ಚಳವಳಿಯ ಹಿನ್ನೆಲೆಯನ್ನು ಹೊಂದಿದೆ.

ಮೋಹನಪುರ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟ ಉಗ್ರವಾಗಿರುತ್ತದೆ. ಯುವ ದೇಶಭಕ್ತ ರಾಮ್‌ಸಿಂಗ್ ರಾಷ್ಟ್ರಧ್ವಜ ಹಿಡಿದು ಸತ್ಯಾಗ್ರಹಿಗಳನ್ನು ಮುನ್ನಡೆಸುತ್ತಾನೆ. ಬ್ರಿಟಿಷ್ ಸರ್ಕಾರದ ಪರವಾಗಿ ಬಂದ ಕುಲಕರ್ಣಿ ಸಭೆಯನ್ನು ಚದುರಿಸಲು ಆದೇಶಿಸುತ್ತಾನೆ. ಆದರೆ ರಾಮ್‌ಸಿಂಗ್ ಧೈರ್ಯದಿಂದ ಬ್ರಿಟಿಷರ ಆಜ್ಞೆಗೆ ತಲೆಬಾಗದೆ ರಾಷ್ಟ್ರಧ್ವಜವನ್ನು ಕೆಳಗಿಡಲು ನಿರಾಕರಿಸುತ್ತಾನೆ. ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೂ ತ್ಯಾಗ ಮಾಡಲು ಸಿದ್ಧನಾಗಿರುವುದಾಗಿ ಘೋಷಿಸುತ್ತಾನೆ.

ಕೊನೆಗೆ ಕುಲಕರ್ಣಿ ರಾಮ್‌ಸಿಂಗ್‌ನ ಮೇಲೆ ಗುಂಡು ಹಾರಿಸುತ್ತಾನೆ. ರಾಮ್‌ಸಿಂಗ್ ದೇಶಕ್ಕಾಗಿ ಹುತಾತ್ಮನಾಗುತ್ತಾನೆ. ನಂತರ ಸ್ವಾತಂತ್ರ್ಯ ಹೋರಾಟಗಾರ ಸೋಮಣ್ಣ ಬ್ರಿಟಿಷ್ ಸರ್ಕಾರದ ಅನ್ಯಾಯವನ್ನು ಖಂಡಿಸಿ ದೇಶಭಕ್ತಿಯ ಮಹತ್ವವನ್ನು ವಿವರಿಸುತ್ತಾನೆ. ರಾಮ್‌ಸಿಂಗ್‌ನ ತಾಯಿ ತುಳಜಾಬಾಯಿ ಮಗನ ಮರಣಕ್ಕೂ ಕುಗ್ಗದೆ ಮತ್ತೊಂದು ರಾಷ್ಟ್ರಧ್ವಜವನ್ನು ಎತ್ತಿ ಹಿಡಿದು ಭಾರತ ಮಾತೆಗೆ ಜಯವಾಗಲಿ!” ಎಂದು ಘೋಷಿಸುತ್ತಾಳೆ.

ಈ ನಾಟಕವು ದೇಶಭಕ್ತಿ, ತ್ಯಾಗ, ಧೈರ್ಯ, ಸ್ವಾತಂತ್ರ್ಯದ ಮಹತ್ವ ಮತ್ತು ರಾಷ್ಟ್ರಧ್ವಜದ ಗೌರವವನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ.

ಭಾಷಾಭ್ಯಾಸ

ಅ) ಕೆಳಗೆ ಕೊಟ್ಟಿರುವ ಪದಗಳನ್ನು ಬಿಡಿಸಿ ಬರೆದು ಸಂಧಿಗಳನ್ನು ಹೆಸರಿಸಿರಿ.
  1. ಜನರೊಪ್ಪದೆ → ಜನರು + ಒಪ್ಪದೆಸವರ್ಣ ದೀರ್ಘ ಸಂಧಿ
  2. ಮುಚ್ಚೆಂದಾಗ → ಮುಚ್ಚು + ಎಂದಾಗಗುಣ ಸಂಧಿ
  3. ದೇಶಾಭಿಮಾನ → ದೇಶ + ಅಭಿಮಾನಸವರ್ಣ ದೀರ್ಘ ಸಂಧಿ
ಆ) ಧ್ವಜ ರಕ್ಷಣೆಪಾಠದಲ್ಲಿ ಬಂದಿರುವ ಅನ್ಯದೇಶೀಯ ಪದಗಳನ್ನು ಪಟ್ಟಿ ಮಾಡಿರಿ.
  • ಡಿ.ಎಸ್.ಪಿ.
  • ಬ್ರಿಟಿಷ್
  • ಪೊಲೀಸ್
  • ಫೌಜುದಾರ
  • ಪಿಸ್ತೂಲು
  • ಡಿಪಾರ್ಟಮೆಂಟು
  • ಸರಕಾರ
  • ನೌಕರ
  • ಜೈಲು
  • ಶಿಪಾಯಿ
  • ಟೋಪಿ
  • ಜಾಕೀಟು
  • ಶರ್ಟು
ಇ) ಕೆಳಗೆ ಕೊಟ್ಟಿರುವ ನುಡಿಗಟ್ಟುಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿರಿ.

೧) ಸಿಟ್ಟು ನೆತ್ತಿಗೇರು:
ತರಗತಿಯಲ್ಲಿ ವಿದ್ಯಾರ್ಥಿಗಳು ಗದ್ದಲ ಮಾಡಿದಾಗ ಶಿಕ್ಷಕರಿಗೆ ಸಿಟ್ಟು ನೆತ್ತಿಗೇರಿತು.

೨) ಪಣತೊಡು:
ದೇಶದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಸೇವೆ ಮಾಡುವುದಾಗಿ ಯುವಕರು ಪಣತೊಟ್ಟರು.

೩) ಕವಡಿ ಕಿಮ್ಮತ್ತು:
ಸುಳ್ಳು ಹೇಳುವವನ ಮಾತಿಗೆ ಕವಡಿ ಕಿಮ್ಮತ್ತೂ ಇರುವುದಿಲ್ಲ.

Additional Question and Answer:

ಒಂದು ವಾಕ್ಯದಲ್ಲಿ ಉತ್ತರಿಸಿರಿ

Question 1.
‘ಧ್ವಜ ರಕ್ಷಣೆ’ ನಾಟಕದ ಕೃತಿಕಾರರು ಯಾರು?
Answer:
ಪ್ರೊ. ಎಸ್. ಆರ್. ರೋಹಿಡೇಕರ್.

Question 2.
‘ಚಲೇಜಾವ್’ ಚಳವಳಿ ಯಾವ ವರ್ಷ ನಡೆಯಿತು?
Answer:
1942ರಲ್ಲಿ.

Question 3.
ಮೋಹನಪುರದಲ್ಲಿ ಚಳವಳಿಯನ್ನು ಮುನ್ನಡೆಸಿದ ಯುವಕ ಯಾರು?
Answer:
ರಾಮ್‌ಸಿಂಗ್.

Question 4.
ರಾಮ್‌ಸಿಂಗ್ ಯಾವ ವಸ್ತುವನ್ನು ಕೈಯಲ್ಲಿ ಹಿಡಿದಿದ್ದನು?
Answer:
ರಾಷ್ಟ್ರಧ್ವಜವನ್ನು.

Question 5.
ರಾಮ್‌ಸಿಂಗ್‌ನ ತಾಯಿ ಯಾರು?
Answer:
ತುಳಜಾಬಾಯಿ.

Question 6.
ಬ್ರಿಟಿಷ್ ಸರ್ಕಾರದ ಪರವಾಗಿ ಬಂದ ಪೊಲೀಸ್ ಅಧಿಕಾರಿ ಯಾರು?
Answer:
ಕುಲಕರ್ಣಿ.

Question 7.
ರಾಮ್‌ಸಿಂಗ್ ಯಾವ ಘೋಷಣೆಯನ್ನು ಕೂಗಿದನು?
Answer:
“ಭಾರತ ಮಾತಾಕಿ ಜೈ” ಮತ್ತು “ವಂದೇ ಮಾತರಂ”.

Question 8.
ರಾಮ್‌ಸಿಂಗ್‌ನನ್ನು ಯಾರು ಗುಂಡಿಕ್ಕಿದರು?
Answer:
ಕುಲಕರ್ಣಿ.

Question 9.
ರಾಮ್‌ಸಿಂಗ್ ಮರಣದ ನಂತರ ದೇಶಭಕ್ತಿಯ ಭಾಷಣ ಮಾಡಿದವರು ಯಾರು?
Answer:
ಸೋಮಣ್ಣ.

Question 10.
ನಾಟಕದ ಕೊನೆಯಲ್ಲಿ ತುಳಜಾಬಾಯಿ ಏನು ಮಾಡುತ್ತಾಳೆ?
Answer:
ರಾಷ್ಟ್ರಧ್ವಜವನ್ನು ಎತ್ತಿ ಹಿಡಿದು “ಭಾರತ ಮಾತೆಗೆ ಜಯವಾಗಲಿ” ಎಂದು ಘೋಷಿಸುತ್ತಾಳೆ.

ಎರಡುಮೂರು ವಾಕ್ಯಗಳಲ್ಲಿ ಉತ್ತರಿಸಿರಿ

Question 1.
ರಾಮ್‌ಸಿಂಗ್ ಏಕೆ ರಾಷ್ಟ್ರಧ್ವಜವನ್ನು ಕೆಳಗಿಡಲು ನಿರಾಕರಿಸಿದನು?
Answer:
ರಾಷ್ಟ್ರಧ್ವಜವು ದೇಶದ ಗೌರವದ ಸಂಕೇತವೆಂದು ರಾಮ್‌ಸಿಂಗ್ ನಂಬಿದ್ದನು. ಪ್ರಾಣ ಹೋದರೂ ಧ್ವಜವನ್ನು ಕೆಳಗಿಡುವುದಿಲ್ಲ ಎಂದು ದೃಢವಾಗಿ ಹೇಳಿದನು.

Question 2.
ಸೋಮಣ್ಣನು ಕುಲಕರ್ಣಿಯನ್ನು ಏಕೆ ಖಂಡಿಸಿದನು?
Answer:
ನಿರಾಯುಧ ಸತ್ಯಾಗ್ರಹಿಗಳ ಮೇಲೆ ಗುಂಡು ಹಾರಿಸಿದ್ದು ಅನ್ಯಾಯವೆಂದು ಸೋಮಣ್ಣ ಖಂಡಿಸಿದನು. ದೇಶಕ್ಕಾಗಿ ಹೋರಾಡುವವರನ್ನು ಕೊಲ್ಲುವುದು ಕರ್ತವ್ಯನಿಷ್ಠೆಯಲ್ಲ ಎಂದು ತಿಳಿಸಿದನು.

Question 3.
ತುಳಜಾಬಾಯಿಯ ದೇಶಭಕ್ತಿಯನ್ನು ವಿವರಿಸಿ.
Answer:
ತನ್ನ ಮಗ ದೇಶಕ್ಕಾಗಿ ಹುತಾತ್ಮನಾದರೂ ತುಳಜಾಬಾಯಿ ಧೈರ್ಯ ಕಳೆದುಕೊಳ್ಳಲಿಲ್ಲ. ಮತ್ತೊಂದು ರಾಷ್ಟ್ರಧ್ವಜವನ್ನು ಎತ್ತಿ ಹಿಡಿದು ದೇಶಭಕ್ತಿಯ ಸಂದೇಶ ನೀಡಿದಳು.

Question 4.
‘ಮಾಡು ಇಲ್ಲವೇ ಮಡಿ’ ಎಂಬ ಮಾತಿನ ಅರ್ಥವೇನು?
Answer:
ಗುರಿ ಸಾಧನೆಗಾಗಿ ಸಂಪೂರ್ಣ ಸಮರ್ಪಣೆಯಿಂದ ಪ್ರಯತ್ನಿಸಬೇಕು. ಅಗತ್ಯವಿದ್ದರೆ ಪ್ರಾಣ ತ್ಯಾಗಕ್ಕೂ ಸಿದ್ಧರಾಗಬೇಕು ಎಂಬುದು ಇದರ ಅರ್ಥ.

Question 5.
ಈ ನಾಟಕದ ಮುಖ್ಯ ಸಂದೇಶವೇನು?
Answer:
ದೇಶಭಕ್ತಿ, ತ್ಯಾಗ, ಧೈರ್ಯ ಮತ್ತು ರಾಷ್ಟ್ರಧ್ವಜದ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂಬುದೇ ಮುಖ್ಯ ಸಂದೇಶ.

Multiple Choice Questions
  1. ‘ಧ್ವಜ ರಕ್ಷಣೆ’ ನಾಟಕದ ಕೃತಿಕಾರರು ಯಾರು?
    A) ಕುವೆಂಪು
    B) ಎಸ್. ಆರ್. ರೋಹಿಡೇಕರ್
    C) ಡಿ. ಆರ್. ಬೇಂದ್ರೆ
    D) ಮಾಸ್ತಿ ವೆಂಕಟೇಶ ಅಯ್ಯಂಗಾರ್

       Answer:
       B) ಎಸ್. ಆರ್. ರೋಹಿಡೇಕರ್

  1. ‘ಚಲೇಜಾವ್’ ಚಳವಳಿ ನಡೆದ ವರ್ಷ ಯಾವುದು?
    A) 1930
    B) 1947
    C) 1942
    D) 1920

       Answer:
       C) 1942

  1. ಮೋಹನಪುರದ ಉತ್ಸಾಹಿ ಯುವಕ ಯಾರು?
    A) ಸೋಮಣ್ಣ
    B) ರಾಮ್‌ಸಿಂಗ್
    C) ಕುಲಕರ್ಣಿ
    D) ಡಿ.ಎಸ್.ಪಿ.

       Answer:
       B) ರಾಮ್‌ಸಿಂಗ್

  1. ರಾಮ್‌ಸಿಂಗ್ ಕೈಯಲ್ಲಿ ಏನಿತ್ತು?
    A) ಕತ್ತಿ
    B) ಲಾಠಿ
    C) ರಾಷ್ಟ್ರಧ್ವಜ
    D) ಪುಸ್ತಕ

       Answer:
       C) ರಾಷ್ಟ್ರಧ್ವಜ

  1. ರಾಮ್‌ಸಿಂಗ್‌ನ ತಾಯಿಯ ಹೆಸರು ಏನು?
    A) ಲಕ್ಷ್ಮೀಬಾಯಿ
    B) ತುಳಜಾಬಾಯಿ
    C) ಸಾವಿತ್ರಿಬಾಯಿ
    D) ಪಾರ್ವತಿಬಾಯಿ

        Answer:
        B) ತುಳಜಾಬಾಯಿ

  1. ರಾಮ್‌ಸಿಂಗ್‌ನ ಮೇಲೆ ಗುಂಡು ಹಾರಿಸಿದವರು ಯಾರು?
    A) ಸೋಮಣ್ಣ
    B) ಡಿ.ಎಸ್.ಪಿ.
    C) ಕುಲಕರ್ಣಿ
    D) ಶಿಪಾಯಿ

        Answer:
        C) ಕುಲಕರ್ಣಿ

  1. ರಾಮ್‌ಸಿಂಗ್ ಯಾವ ಘೋಷಣೆಯನ್ನು ಕೂಗಿದನು?
    A) ಜಯ ಕರ್ನಾಟಕ
    B) ಭಾರತ ಮಾತಾಕಿ ಜೈ
    C) ಇಂಕಿಲಾಬ್ ಜಿಂದಾಬಾದ್
    D) ಜೈ ಹಿಂದ್

         Answer:
         B) ಭಾರತ ಮಾತಾಕಿ ಜೈ

  1. ರಾಮ್‌ಸಿಂಗ್ ಮರಣದ ನಂತರ ಮಾತನಾಡಿದವರು ಯಾರು?
    A) ತುಳಜಾಬಾಯಿ
    B) ಡಿ.ಎಸ್.ಪಿ.
    C) ಸೋಮಣ್ಣ
    D) ಶಿಪಾಯಿ

        Answer:
        C) ಸೋಮಣ್ಣ

  1. ತುಳಜಾಬಾಯಿ ಕೊನೆಯಲ್ಲಿ ಏನನ್ನು ಎತ್ತಿ ಹಿಡಿದಳು?
    A) ಲಾಠಿ
    B) ರಾಷ್ಟ್ರಧ್ವಜ
    C) ಪುಸ್ತಕ
    D) ಕತ್ತಿ

         Answer:
         B) ರಾಷ್ಟ್ರಧ್ವಜ

  1. ‘ಧ್ವಜ ರಕ್ಷಣೆ’ ನಾಟಕವು ಯಾವ ಮೌಲ್ಯವನ್ನು ಸಾರುತ್ತದೆ?
    A) ಸಂಪತ್ತಿನ ಮಹತ್ವ
    B) ಶಿಕ್ಷಣದ ಮಹತ್ವ
    C) ದೇಶಭಕ್ತಿ ಮತ್ತು ತ್ಯಾಗ
    D) ವ್ಯಾಪಾರದ ಮಹತ್ವ

        Answer:
       C) ದೇಶಭಕ್ತಿ ಮತ್ತು ತ್ಯಾಗ

Click Here to Download Dhwaja Rakshane PDF Notes
Click Here to Watch Dhwaja Rakshane Video
 

You cannot copy content of this page