Class 10 NudiKannada Solution Chapter 2

SSLC Nudi Kannada Question and Answer -Kodagina Gowramma

Looking for SSLC /Class 10th Nudi Kannada textbook answers? You can download Chapter 2: Kodagina Gowramma Questions and Answers PDF, Notes, and Summary here. SSLC /Class 10th Nudi Kannada Gadyabhaga solutions follow the Karnataka State Board Syllabus, making it easier for students to revise and score higher in exams.

Karnataka SSLC/Class 10th Nudi Kannada Textbook Answers—Reflections Chapter 2

Kodagina Gowramma Questions and Answers, Notes, and Summary

Class 10 Nudi Kannada Chapter 2

ಕೊಡಗಿನ ಗೌರಮ್ಮ

Kodagina Gowramma
Scroll Down to Downlaod Kodagina Gowramma PDF

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

Question 1.
ಆಧುನಿಕ ಕನ್ನಡ ಸಾಹಿತ್ಯದ ಮೊದಲ ಸಮಕಾಲೀನ ಸಂವೇದನಾಶೀಲ ಲೇಖಕಿಯರು ಯಾರು ಯಾರು?
Answer:
ನಂಜನಗೂಡಿನ ತಿರುಮಲಾಂಬ, ಬೆಂಗಳೂರಿನ ಆರ್.ಕಲ್ಯಾಣಮ್ಮ, ತಿರುಮಲೆ ರಾಜಮ್ಮ, ದಕ್ಷಿಣಕನ್ನಡದ ಸರಸ್ವತಿಬಾಯಿ ರಾಜವಾಡೆ, ಕೊಡಗಿನ ಗೌರಮ್ಮ ಮುಂತಾದವರೆಲ್ಲಾ ಆಧುನಿಕ ಕನ್ನಡ ಸಾಹಿತ್ಯದ ಮೊದಲ ಸಮಕಾಲೀನ ಸಂವೇದನಾಶೀಲ ಲೇಖಕಿಯರು.

Question 2.
ಕೊಡಗಿನ ಗೌರಮ್ಮನವರ ವಿವಾಹವು ಯಾರೊಡನೆ ಆಯಿತು?
Answer:
ಕೊಡಗಿನ ಗೌರಮ್ಮನವರ ವಿವಾಹವು ಶ್ರೀ. ಬಿ. ಟಿ. ಗೋಪಾಲಕೃಷ್ಣಯ್ಯನವರೊಡನೆ 1925ರಲ್ಲಿ ಆಯಿತು.

Question 3.
ಮಂಜುನಾಥಯ್ಯನವರ ಮನೆಯಲ್ಲಿ ಆಗಾಗ್ಗೆ ಮೊಕ್ಕಾಂ ಹೂಡುತ್ತಿದ್ದ ಸಾಹಿತಿಗಳು ಯಾರು?
Answer:
ಶಿವರಾಮ ಕಾರಂತ, ಮಾಸ್ತಿ ವೆಂಕಟೇಶಅಯ್ಯಂಗಾರ್, ದ.ರಾ. ಬೇಂದ್ರೆ ಮುಂತಾದ ಹೆಸರಾಂತ ಲೇಖಕರು ಮಂಜುನಾಥಯ್ಯನವರ ಮನೆಯಲ್ಲಿ ಆಗಾಗ್ಗೆ ಮೊಕ್ಕಾಂ ಹೂಡುತ್ತಿದ್ದರು.

Question 4.
ಕೊಡಗಿನ ಗೌರಮ್ಮನವರು ಯಾವುದರ ಬಗೆಗೆ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು?
Answer:
ಕೊಡಗಿನ ಗೌರಮ್ಮನವರು ಸ್ವಾತಂತ್ರ್ಯ ಚಳುವಳಿಯ ಬಗೆಗೆ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು.

Question 5.
ಕೊಡಗಿನ ಗೌರಮ್ಮನವರು ಅಕಾಲಿಕ ಮರಣ ಹೊಂದಿದ್ದೇಕೆ?
Answer:
ಹರಿಯುವ ಹಟ್ಟಿಹೊಳೆಯಲ್ಲಿ ಈಜಾಡುವಾಗ ಸುಳಿಗೆ ಸಿಲುಕಿ ಗೌರಮ್ಮನವರು ಅಕಾಲಿಕ ಮರಣ ಹೊಂದಿದರು.

Question 6.
ಆ‌ರ್. ಕಲ್ಯಾಣಮ್ಮ ಯಾರು?
Answer:
ಆರ್. ಕಲ್ಯಾಣಮ್ಮ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತೆ ಹಾಗೂ ಪ್ರಸಿದ್ದ ಕನ್ನಡ ಲೇಖಕಿಯಾಗಿದ್ದರು.

ಆ) ಕೆಳಗಿನ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.

Question 1.
ಕೊಡಗಿನ ಗೌರಮ್ಮನವರ ಬರವಣಿಗೆಗೆ ಪೂರಕ ಹಾಗೂ ಪ್ರೇರಕವಾದ ವಿಚಾರಗಳು ಯಾವುವು?
Answer:
ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತೆ ಹಾಗೂ ಲೇಖಕಿಯಾಗಿದ್ ಆರ್.ಕಲ್ಯಾಣಮ್ಮನವರೊಡನೆ ಕೊಡಗಿನ ಗೌರಮ್ಮನವರು ಸಂಪರ್ಕಇಟ್ಟುಕೊಂಡಿದ್ದರು.ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ಚರ್ಚೆ, ಬದಲಾವಣೆಗಳು ಮತ್ತು ಹೊಸ ಬರವಣಿಗೆಯ ಸಂಪರ್ಕ ಇವೆಲ್ಲ ಗೌರಮ್ಮನವರ ಬರವಣಿಗೆಗೆ ಪೂರಕ ಹಾಗೂ ಪ್ರೇರಕವಾದ ವಿಚಾರಗಳಾಗಿದ್ದವು.

Question 2.
ಗಾಂಧೀಜಿಯವರು ಗೌರಮ್ಮನವರ ಮನೆಗೆ ಏಕೆ ಬಂದರು?
Answer:
ಕೊಡಗಿನ ಗೌರಮ್ಮ ಮಹಾತ್ಮ ಗಾಂಧೀಜಿಯವರ ಪರಮ ಅನುಯಾಯಿಯಾಗಿದ್ದರು. ಇವರು ತಮ್ಮ 21ನೇ ವಯಸ್ಸಿನಲ್ಲಿಯೇ ಉಪವಾಸ ಸತ್ಯಾಗ್ರಹ ಮಾಡಿ, ಗಾಂಧೀಜಿಯವರು ತಮ್ಮಂತಹ ಸಾಧಾರಣ ಕುಟುಂಬದವರ ಮನೆಗೆ ಬರಬೇಕೆಂದು ಆಗ್ರಹಿಸಿದ್ದರು. ಗಾಂಧೀಜಿ ಕರ್ನಾಟಕದ ಪ್ರವಾಸ ಕೈಗೊಂಡಾಗ ಗೌರಮ್ಮನವರ ಉಪವಾಸ ಅಂತ್ಯಗೊಳಿಸಿ, ಅವರ ಮನೆಗೆ ಹೋಗಿದ್ದರು.

Question 3.
ಕೊಡಗಿನ ಗೌರಮ್ಮನವರು ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮನ್ನು ಹೇಗೆ ತೊಡಗಿಸಿಕೊಂಡರು?
Answer:
ಕೊಡಗಿನ ಗೌರಮ್ಮನವರು ಸ್ವಾತಂತ್ರ್ಯ ಚಳುವಳಿಯ ಬಗೆಗೆ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಇವರು ಸ್ವತಃ ಖಾದಿ ಬಟ್ಟೆಯನ್ನು ಧರಿಸುತ್ತಿದ್ದರು. ಗಾಂಧೀಜಿಯವರ ಪರಮ ಅನುಯಾಯಿಗಳಾಗಿದ್ದರು. ಈ ರೀತಿಯಾಗಿ ಗೌರಮ್ಮನವರು ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.

Question 4.
ಗಾಂಧೀಜಿಯವರು ಅವಾಕ್ಕಾಗಲು ಕಾರಣವೇನು?
Answer:
ಕೊಡಗಿನ ಗೌರಮ್ಮನವರು ಗಾಂಧೀಜಿಯವರ ಸ್ವಾತಂತ್ರ್ಯ ಸಂಗ್ರಾಮ ಮತ್ತು ಹರಿಜನೋದ್ಧಾರ ಸಂಬಂಧ ನಿಧಿಗೆ ತನ್ನ ಕೊರಳಿನ ಮಂಗಳಸೂತ್ರ, ಕಿವಿಯ ಓಲೆ ಮತ್ತು ಮೂಗುಬೊಟ್ಟಿನ ಹೊರತಾಗಿ ಉಳಿದೆಲ್ಲಾ ಒಡವೆಗಳನ್ನು ಗಾಂಧೀಜಿಯವರ ಕೈಗೆ ಕೊಟ್ಟಾಗ ಅವರು ಅವಕ್ಕಾದರು.

Question 5.
ಕೊಡಗಿನ ಗೌರಮ್ಮನವರ ಬರವಣಿಗೆಯಲ್ಲಿ ಕಂಡುಬರುವ ಪ್ರಮುಖ ವಿಚಾರಗಳಾವುವು?
Answer:
ಕೊಡಗಿನ ಗೌರಮ್ಮನವರ ಬರವಣಿಗೆಯಲ್ಲಿ ಮಹಿಳೆಯರ ಸಮಸ್ಯೆ, ಮಹಿಳಾ ಲೋಕದ ಕನಸುಗಳ ಆದರ್ಶಗಳು, ಮಾನವ ಜೀವಿಗಳ ಸ್ವಾತಂತ್ರ್ಯ ಸದಭಿರುಚಿ, ಹೊಸ ಜಾತ್ಯಾತೀಯ ಮನೋಧರ್ಮದ ಸಮಾಜ ನಿರ್ಮಾಣ ಈ ಎಲ್ಲ ಪ್ರಮುಖ ವಿಚಾರಗಳು ಕಂಡು ಬರುತ್ತವೆ.

ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

Question 1.
ಗಾಂಧೀಜಿಯವರು ಕೊಡಗಿನಲ್ಲಿ ತಂಗಿದ್ದಾಗ ನಡೆದ ಸಂಗತಿಗಳನ್ನು ಕುರಿತು ಬರೆಯಿರಿ.
Answer:
1933ನೇ ವರ್ಷದ ಕೊನೆಯಲ್ಲಿ ಗಾಂಧೀಜಿಯವರು ಕರ್ನಾಟಕದ ಪ್ರವಾಸ ಕೈಗೊಂಡು ಕೊಡಗಿನಲ್ಲಿ ಎರಡು ದಿನ ನಿಲ್ಲುವ ಕಾರ್ಯಕ್ರಮ ಹಾಕಿಕೊಂಡಿದ್ದರು. ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಗೌರಮ್ಮರನ್ನು ಭೇಟಿಯಾಗಿ ಕಿತ್ತಲೆ ಹಣ್ಣು ನೀಡಿ ಉಪವಾಸ ಅಂತ್ಯಗೊಳಿಸಿ ಅವರ ಇಚ್ಛೆಯಂತೆ ಅವರ ಮನೆಗೂ ಹೋಗಿದ್ದರು. ಆಗ ಗೌರಮ್ಮ ಗಾಂಧೀಜಿಯವರಿಗೆ ಸ್ವಾತಂತ್ರ್ಯ ಸಂಗ್ರಾಮ ಮತ್ತು ಹರಿಜನರ ಉದ್ಧಾರ ನಿಧಿಗೆ ತನ್ನ ಕೊರಳಿನ ಮಂಗಳಸೂತ್ರ, ಕಿವಿಯ ಓಲೆ ಮತ್ತು ಮೂಗುಬೊಟ್ಟಿನ ಹೊರತಾಗಿ ಉಳಿದೆಲ್ಲಾ ಒಡವೆಗಳನ್ನು ನೀಡಿದ್ದರು. ಗೌರಮ್ಮನವರ ಉದಾರ ಮನಸ್ಸು ನೋಡಿ ಗಾಂಧೀಜಿ ಅಕ್ಷರಶಃ ಅವಕ್ಕಾಗಿದ್ದರು.

Question 2.
ಕೊಡಗಿನ ಗೌರಮ್ಮನವರ ಸಾಹಿತ್ಯ ಸೃಷ್ಟಿಗೆ ಪೂರಕವಾದ ವಿಚಾರಗಳನ್ನು ಕುರಿತು ಬರೆಯಿರಿ.
Answer:
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮೊದಲೆ ಕೊಡಗಿನ ಗೌರಮ್ಮನವರು ಮಹಿಳೆಯರ ಸಮಸ್ಯೆ ಕುರಿತು ಬರೆಯುವ ಗಟ್ಟಿತನವನ್ನು ತೋರಿದ್ದರು. ಬೆಂಗಳೂರಿನ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತೆ ಹಾಗೂ ಲೇಖಕಿಯರಾಗಿದ್ದ ಆರ್. ಕಲ್ಯಾಣಮ್ಮ ಅವರೊಡನೆ ಸಂಪರ್ಕವನ್ನು ಇವರು ಇಟ್ಟುಕೊಂಡಿದ್ದರು. ಹೀಗಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ಚರ್ಚೆ, ಬದಲಾವಣೆಗಳು ಮತ್ತು ಹೊಸ ಬರವಣಿಗೆಯ ಸಂಪರ್ಕ ಗೌರಮ್ಮನವರ ಬರವಣಿಗೆಗೆ ಪೂರಕವಾದವು. ಜಾನಪದ ಸಾಹಿತ್ಯದ ಬಗೆಗೆ ಕುತೂಹಲ ಇದ್ದ ಇವರು ಕೆಲವು ಜನಪದ ಗೀತೆಗಳನ್ನು ಸಂಗ್ರಹಿಸಿದ್ದರು. ಗೌರಮ್ಮ ತಮ್ಮ ಕಥೆಗಳಲ್ಲಿ ಮಹಿಳಾ ಲೋಕದ ಕನಸುಗಳ, ಆದರ್ಶಗಳ ಚಿತ್ರಣವನ್ನು ನೀಡಲು ಪ್ರಯತ್ನಿಸಿದರು. ಮಾನವಜೀವಿಗಳ ಸ್ವಾತಂತ್ರ್ಯ ಸದಭಿರುಚಿಯ ಹಾಗೂ ಮನದಾಳದ ಅನಿಸಿಕೆಗಳಿಗೆ ಪೂರಕವಾಗಿ ನಿಲ್ಲಬಲ್ಲ ಹೊಸ ಸಮಾಜವೊಂದರ ನಿರ್ಮಾಣದ ಶಕ್ತಿಯಿರುವುದು ಪ್ರತಿಬಿಂಬಿತವಾಗುತ್ತಿತ್ತು.

Question 3.
‘ಕೊಡಗಿನ ಗೌರಮ್ಮನವರು ಆ ಕಾಲದ ಮಹಿಳಾ ಸದಭಿರುಚಿಯ ದ್ಯೋತಕವಾಗಿದ್ದರು’ ಈ ಹೇಳಿಕೆಯನ್ನು ಸಮರ್ಥಿಸಿರಿ.
Answer:
ಗೌರಮ್ಮ ಸಮುದಾಯದ ಬದುಕಿನಲ್ಲಿ ಕಂಡು ಕೇಳಿದ ಘಟನೆಗಳನ್ನು ತಮ್ಮ ಅನುಭವದ ಹಿನ್ನಲೆಯಲ್ಲಿ ಮಹಿಳಾ ಲೋಕದ ಕನಸುಗಳ, ಆದರ್ಶಗಳ ಚಿತ್ರಣವನ್ನು ತಮ್ಮ ಕಥೆಗಳಲ್ಲಿ ನೀಡಲು ಪ್ರಯತ್ನಸಿದರು. ಆರೋಗ್ಯಕರ ನಿಲುವು. ಜಾತ್ಯಾತೀತ ಮನೋಧರ್ಮ, ಮಾನವೀಯ ವಿಚಾರಗಳು ಹಾಗೂ ಅಪಾರ ಜೀವನ ಪ್ರೀತಿಯನ್ನು ಹೊಂದಿದ್ದ ಕತೆಗಾರ್ತಿಯಾಗಿದ್ದರು ಗೌರಮ್ಮ. ಭಾರತದ ಸಮಾಜದಲ್ಲಿ ಮಹಿಳೆಯರು ತಮ್ಮದೇ ಆದ ಸಂಕೋಲೆಗಳು ಮತ್ತು ನಿಸ್ಸಾಹಯಕತೆಯ ಇಕ್ಕಟ್ಟಿನಲ್ಲಿ ನರಳುವುದನ್ನು ಗ್ರಹಿಸಿ ಸಮಾಜದೊಳಗಿನ ಮಹಿಳೆಯರ ಮೇಲಾಗುವ ಕೌರ್ಯದ ನಾನಾ ಮುಖಗಳನ್ನು ಸೂಕ್ಷ್ಮವಾದ ಅನಾವರಣವನ್ನು ತಮ್ಮ ಕಥೆಗಳಲ್ಲಿ ಮಾಡಿದರು. ಮಹಿಳೆಯರ ಬದುಕಿನ ಬಗೆಗೆ ಅಪಾರ ಕಾಳಜಿಯನ್ನು ಹೊಂದಿದ್ದ ಗೌರಮ್ಮ ಆ ಕಾಲದ ಮಹಿಳಾ ಸದಭಿರುಚಿಯ ದ್ಯೋತಕವಾಗಿದ್ದರು.

ಈ) ಕೆಳಗಿನ ಅಪೂರ್ಣ ವಾಕ್ಯಗಳ ಮುಂದೆ ಕೊಟ್ಟಿರುವ ಸ್ಥಳದಲ್ಲಿ ಆ ವಾಕ್ಯಗಳಿಗೆ ಸಂಬಂಧಿಸಿದ ಹೆಸರನ್ನು ಬರೆದು ಪೂರ್ಣಗೊಳಿಸಿರಿ.

  1. ಕೊಡಗಿನ ಗೌರಮ್ಮನವರು ಬರೆದ ಮೊದಲ ಕತೆಯ ಹೆಸರು ಪುನರ್ವಿವಾಹ.
  2. ಕೊಡಗಿನ ಗೌರಮ್ಮನವರ ತಾಯಿಯ ಹೆಸರು ನಂಜಕ್ಕ.
  3. ಕೊಡಗಿನ ಗೌರಮ್ಮನವರ ತಂದೆಯ ಹೆಸರು ಎನ್. ಎಸ್. ರಾಮಯ್ಯ.
  4. ಕೊಡಗಿನ ಗೌರಮ್ಮನವರ ಪತಿಯ ಹೆಸರು ಬಿ. ಟಿ. ಗೋಪಾಲಕೃಷ್ಣಯ್ಯ,
  5. ಕೊಡಗಿನ ಗೌರಮ್ಮನವರು ಅಕಾಲ ಮರಣಕ್ಕೆ ಗುರಿಯಾಗುವಂತೆ ಮಾಡಿದ ಹೊಳೆಯ ಹೆಸರು ಹಟ್ಟಿಹೊಳೆ.
  6. ಕೊಡಗಿನ ಗೌರಮ್ಮನವರ ಪೂರ್ವಜರ ಸೀಮೆಯ ಹೆಸರು ವಿಟ್ಲ.

ಭಾಷಾಭ್ಯಾಸ
ಅ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.
  • ನಿರಾಡಂಬರ X ಆಡಂಬರ
  • ಸ್ವಾತಂತ್ರ್ಯ  X ಪರಾತಂತ್ರ್ಯ
  • ಗಟ್ಟಿತನ    X ಪೊಳ್ಳುತನ
  • ಆಸಕ್ತಿ      X ಅನಾಸಕ್ತಿ
  • ಅಪರಿಮಿತ X ಪರಿಮಿತ

ಆ) ಕೆಳಗಿನ ಪದಗಳನ್ನು ಬಿಡಿಸಿ ಬರೆದು ಸಂಧಿಯನ್ನು ಹೆಸರಿಸಿರಿ.

  1. ಮಹಾ + ಆತ್ಮ = ಮಹಾತ್ಮ (ಸ. ದೀ. ಸಂಧಿ)
  2. ಪರಿಜ್ಞಾನ + ಅನ್ನು = ಪರಿಜ್ಞಾನವನ್ನು (‘ವ’ ಕಾರಾಗಮ ಸಂಧಿ)
  3. ಹರಿಜನ + ಉದ್ದಾರ = ಹರಿಜನೋದ್ಧಾರ (ಗುಣಸಂಧಿ)
  4. ಸತ್ + ಅಭಿರುಚಿ = ಸದಭಿರುಚಿ (ಜಸ್ತ್ರ ಸಂಧಿ)
  5. ಸತ್ಯ + ಆಗ್ರಹ = ಸತ್ಯಾಗ್ರಹ( ಸ. ದೀ. ಸಂಧಿ)
  6. ನವ + ಉದಯ = ನವೋದಯ (ಗುಣ ಸಂಧಿ)
  7. ಜಾತಿ + ಅತೀತ = ಜಾತ್ಯಾತೀತ ( ಯಣ್ ಸಂಧಿ)
ಇ) ಕೆಳಗಿನ ತತ್ಸಮಗಳಿಗೆ ತದ್ಭವಗಳನ್ನು ಬರೆಯಿರಿ.

  1. ಕವಿ    –  ಕಬ್ಬಿಗ
  2. ಕಾವ್ಯ – ಕಬ್ಬ
  3. ವರ್ಷ – ವರುಷ
  4. ಶ್ರೇಣಿ – ಸರಣಿ

ಕೊಡಗಿನ ಗೌರಮ್ಮಸಾರಾಂಶ
Summary

‘ಕೊಡಗಿನ ಗೌರಮ್ಮ’ ಪಾಠವನ್ನು ಮ. ನ. ಮುಕ್ತಾಯಿ ಅವರು ಬರೆದಿದ್ದಾರೆ. ಈ ಲೇಖನವು ಕನ್ನಡದ ಪ್ರಮುಖ ಮಹಿಳಾ ಲೇಖಕಿಯರಲ್ಲಿ ಒಬ್ಬರಾದ ಕೊಡಗಿನ ಗೌರಮ್ಮ ಅವರ ಜೀವನ ಮತ್ತು ಸಾಹಿತ್ಯ ಸಾಧನೆಯನ್ನು ಪರಿಚಯಿಸುತ್ತದೆ.

ಕೊಡಗಿನ ಗೌರಮ್ಮ ಅವರು ಕೊಡಗಿನ ಮಡಿಕೇರಿಯಲ್ಲಿ ಜನಿಸಿದರು. ಅವರ ತಂದೆ ಎನ್. ಎಸ್. ಅಯ್ಯಮಯ್ಯ ಮತ್ತು ತಾಯಿ ನಂಜಕ್ಕ. ಬಾಲ್ಯದಿಂದಲೇ ಸಾಹಿತ್ಯ, ಸಂಸ್ಕೃತಿ ಹಾಗೂ ಸಮಾಜದ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದ ಅವರು ಹತ್ತೊಂಬತ್ತನೇ ವಯಸ್ಸಿನಲ್ಲಿ ಪುನರ್ವಿವಾಹ’ ಎಂಬ ಕಥೆಯ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸಿದರು. ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ದ.ರಾ. ಬೇಂದ್ರೆ ಮೊದಲಾದ ಖ್ಯಾತ ಸಾಹಿತಿಗಳ ಪರಿಚಯವು ಅವರ ಸಾಹಿತ್ಯಾಭಿವೃದ್ಧಿಗೆ ಸಹಕಾರಿಯಾಯಿತು.

ಗೌರಮ್ಮ ಅವರು ಈಜು ಮತ್ತು ಟೆನಿಸ್‌ನಲ್ಲಿ ಆಸಕ್ತಿ ಹೊಂದಿದ್ದ ಧೈರ್ಯಶಾಲಿ ಮಹಿಳೆಯಾಗಿದ್ದರು. ಮಹಾತ್ಮ ಗಾಂಧೀಜಿಯವರ ಆದರ್ಶಗಳಿಂದ ಪ್ರಭಾವಿತರಾಗಿ ಖಾದಿ ಬಟ್ಟೆಗಳನ್ನು ಧರಿಸುತ್ತಿದ್ದರು ಹಾಗೂ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಗಾಂಧೀಜಿಯವರನ್ನು ತಮ್ಮ ಮನೆಗೆ ಕರೆಸಿಕೊಳ್ಳಲು ಉಪವಾಸ ಸತ್ಯಾಗ್ರಹ ನಡೆಸಿದರು. ಗಾಂಧೀಜಿಯವರು ಅವರ ಮನೆಗೆ ಭೇಟಿ ನೀಡಿದಾಗ ತಮ್ಮ ಮಂಗಳಸೂತ್ರ, ಕಿವಿಯ ಓಲೆ ಮತ್ತು ಮೂಗುಬೊಟ್ಟನ್ನು ಹೊರತುಪಡಿಸಿ ಉಳಿದ ಎಲ್ಲಾ ಆಭರಣಗಳನ್ನು ಸ್ವಾತಂತ್ರ್ಯ ಹೋರಾಟ ಮತ್ತು ಹರಿಜನೋದ್ಧಾರ ನಿಧಿಗೆ ದಾನ ಮಾಡಿದರು.

ಗೌರಮ್ಮ ಅವರು ತಮ್ಮ ಕಥೆಗಳಲ್ಲಿ ಮಹಿಳೆಯರ ಕನಸುಗಳು, ಸಮಸ್ಯೆಗಳು, ಸ್ವಾತಂತ್ರ್ಯ ಮತ್ತು ಸಮಾನತೆಯ ಆಶಯಗಳನ್ನು ಚಿತ್ರಿಸಿದ್ದಾರೆ. ಅವರ ಇಪ್ಪತ್ತೊಂದು ಕಥೆಗಳಲ್ಲಿ ಮಾನವೀಯ ಮೌಲ್ಯಗಳು, ಜಾತ್ಯತೀತ ಮನೋಭಾವ ಮತ್ತು ಹೊಸ ಸಮಾಜ ನಿರ್ಮಾಣದ ಆಶಯಗಳು ಪ್ರತಿಬಿಂಬಿತವಾಗಿವೆ.

ಅಪಾರ ಜೀವನಪ್ರೀತಿ ಹೊಂದಿದ್ದ ಗೌರಮ್ಮ ಅವರು ಕೇವಲ ಇಪ್ಪತ್ತಾರು ವರ್ಷಗಳಷ್ಟೇ ಬದುಕಿದರು. 1939ರ ಏಪ್ರಿಲ್ 13ರಂದು ಹಟ್ಟಿಹೊಳೆಯಲ್ಲಿ ಈಜುವಾಗ ಸುಳಿಗೆ ಸಿಕ್ಕಿ ಅಕಾಲಿಕ ಮರಣ ಹೊಂದಿದರು. ಅವರ ಅಕಾಲಿಕ ನಿಧನ ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಯಿತು. ಆದರೂ ಅವರ ಸಾಹಿತ್ಯ ಕೃತಿಗಳು ಇಂದಿಗೂ ಕನ್ನಡ ಸಾಹಿತ್ಯದಲ್ಲಿ ಮಹತ್ವದ ಸ್ಥಾನವನ್ನು ಹೊಂದಿವೆ.

Additional Question and Answer:


Question 1.

ಕೊಡಗಿನ ಗೌರಮ್ಮ ಅವರು ಯಾವ ಪ್ರದೇಶದ ಪ್ರಮುಖ ಲೇಖಕಿಯಾಗಿದ್ದರು?
Answer:
ಕೊಡಗಿನ ಗೌರಮ್ಮ ಅವರು ಕೊಡಗು ಪ್ರದೇಶದ ಪ್ರಮುಖ ಲೇಖಕಿಯಾಗಿದ್ದರು.

Question 2.
ಗೌರಮ್ಮ ಅವರು ಸಾಹಿತ್ಯ ಕ್ಷೇತ್ರಕ್ಕೆ ಯಾವ ಕಥೆಯ ಮೂಲಕ ಪ್ರವೇಶಿಸಿದರು?
Answer:
‘ಪುನರ್ವಿವಾಹ’ ಕಥೆಯ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸಿದರು.

Question 3.
ಗೌರಮ್ಮ ಅವರ ವಿವಾಹ ಯಾರೊಂದಿಗೆ ನಡೆಯಿತು?
Answer:
ಬಿ. ಟಿ. ಗೋಪಾಲಕೃಷ್ಣಯ್ಯ ಅವರೊಂದಿಗೆ ವಿವಾಹ ನಡೆಯಿತು.

Question 4.
ಗೌರಮ್ಮ ಅವರಿಗೆ ಸಾಹಿತ್ಯಿಕ ಪ್ರೇರಣೆ ದೊರಕಲು ಕಾರಣರಾದವರು ಯಾರು?
Answer:
ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ದ. ರಾ. ಬೇಂದ್ರೆ ಹಾಗೂ ಆರ್. ಕಲ್ಯಾಣಮ್ಮ ಅವರಂತಹ ಸಾಹಿತಿಗಳ ಪರಿಚಯದಿಂದ ಸಾಹಿತ್ಯಿಕ ಪ್ರೇರಣೆ ದೊರೆಯಿತು.

Question 5.
ಗೌರಮ್ಮ ಅವರು ಯಾವ ಯಾವ ಕಲಾ ಪ್ರಕಾರಗಳಲ್ಲಿ ಆಸಕ್ತಿ ಹೊಂದಿದ್ದರು?
Answer:
ಯಕ್ಷಗಾನ, ತಾಳಮದ್ದಲೆ, ಕುಮಾರವ್ಯಾಸ ಮತ್ತು ಉಮರ್ ಖಯಾಮನ ಕಾವ್ಯಗಳಲ್ಲಿ ಆಸಕ್ತಿ ಹೊಂದಿದ್ದರು.

Question 6.
ಗೌರಮ್ಮ ಅವರು ಗಾಂಧೀಜಿಯವರ ಬಗ್ಗೆ ಹೇಸಿಗೆಯ ಭಾವನೆ ಹೊಂದಿದ್ದರು?
Answer:
ಅಪಾರ ಅಭಿಮಾನ ಮತ್ತು ಭಕ್ತಿಯನ್ನು ಹೊಂದಿದ್ದರು.

Question 7.
ಗಾಂಧೀಜಿಯವರು ಗೌರಮ್ಮನವರ ಉಪವಾಸವನ್ನು ಹೇಗೆ ಅಂತ್ಯಗೊಳಿಸಿದರು?
Answer:
ಕೊಡಗಿನ ಕಿತ್ತಲೆ ಹಣ್ಣು ನೀಡಿ ಉಪವಾಸವನ್ನು ಅಂತ್ಯಗೊಳಿಸಿದರು.

Question 8.
ಗೌರಮ್ಮ ಅವರು ಗಾಂಧೀಜಿಯವರಿಗೆ ಏನು ದಾನ ಮಾಡಿದರು?
Answer:
ತಮ್ಮ ಮಂಗಳಸೂತ್ರ, ಕಿವಿಯ ಓಲೆ ಮತ್ತು ಮೂಗುಬೊಟ್ಟನ್ನು ಹೊರತುಪಡಿಸಿ ಉಳಿದ ಎಲ್ಲಾ ಒಡವೆಗಳನ್ನು ದಾನ ಮಾಡಿದರು.

Question 9.
ಗೌರಮ್ಮ ಅವರ ಕಥೆಗಳ ಮುಖ್ಯ ಆಶಯವೇನು?
Answer:
ಮಹಿಳೆಯರ ಸ್ವಾತಂತ್ರ್ಯ, ಸಮಾನತೆ, ಮಾನವೀಯತೆ ಮತ್ತು ಉತ್ತಮ ಸಮಾಜ ನಿರ್ಮಾಣ.

Question 10.
ಗೌರಮ್ಮ ಅವರು ಯಾವಾಗ ಮತ್ತು ಹೇಗೆ ನಿಧನರಾದರು?
Answer:
1939ರ ಏಪ್ರಿಲ್ 13ರಂದು ಹಟ್ಟಿಹೊಳೆಯಲ್ಲಿ ಈಜುವಾಗ ಸುಳಿಗೆ ಸಿಕ್ಕಿ ನಿಧನರಾದರು.

Multiple Choice:

1. ಕೊಡಗಿನ ಗೌರಮ್ಮ ಅವರು ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸಿದ ಕಥೆ ಯಾವುದು?

A) ಕನ್ಯಾದಾನ
B) ಪುನರ್ವಿವಾಹ
C) ಹರಿಜನ
D) ತ್ಯಾಗ

Answer:
B) ಪುನರ್ವಿವಾಹ

2. ಗೌರಮ್ಮ ಅವರು ಜನಿಸಿದ ಸ್ಥಳ ಯಾವುದು?

A) ಮೈಸೂರು
B) ಬೆಂಗಳೂರು
C) ಮಡಿಕೇರಿ
D) ಶಿವಮೊಗ್ಗ

Answer:
C) ಮಡಿಕೇರಿ

3. ಗೌರಮ್ಮ ಅವರ ತಾಯಿಯ ಹೆಸರು ಏನು?

A) ಲಕ್ಷ್ಮಮ್ಮ
B) ನಂಜಕ್ಕ
C) ಗೌರಮ್ಮ
D) ಕಮಲಮ್ಮ

Answer:
B) ನಂಜಕ್ಕ

4. ಗೌರಮ್ಮ ಅವರು ಯಾವ ವಯಸ್ಸಿನಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸಿದರು?

A) 17 ವರ್ಷ
B) 18 ವರ್ಷ
C) 19 ವರ್ಷ
D) 20 ವರ್ಷ

Answer:
C) 19 ವರ್ಷ

5. ಗೌರಮ್ಮ ಅವರು ಯಾವ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದರು?

A) ಕ್ರಿಕೆಟ್
B) ಹಾಕಿ
C) ಟೆನಿಸ್
D) ಕಬಡ್ಡಿ

Answer:
C) ಟೆನಿಸ್

6. ಗೌರಮ್ಮ ಅವರು ಯಾವ ನಾಯಕರ ಅನುಯಾಯಿಯಾಗಿದ್ದರು?

A) ಸುಭಾಷ್ ಚಂದ್ರ ಬೋಸ್
B) ಜವಾಹರಲಾಲ್ ನೆಹರು
C) ಮಹಾತ್ಮ ಗಾಂಧೀಜಿ
D) ಬಾಲಗಂಗಾಧರ ತಿಲಕ್

Answer:
C) ಮಹಾತ್ಮ ಗಾಂಧೀಜಿ

7. ಗಾಂಧೀಜಿಯವರು ಗೌರಮ್ಮನವರ ಉಪವಾಸವನ್ನು ಯಾವುದನ್ನು ನೀಡಿ ಅಂತ್ಯಗೊಳಿಸಿದರು?

A) ಸೇಬು
B) ಬಾಳೆಹಣ್ಣು
C) ಕಿತ್ತಲೆ ಹಣ್ಣು
D) ದ್ರಾಕ್ಷಿ

Answer:
C) ಕಿತ್ತಲೆ ಹಣ್ಣು

8. ಗೌರಮ್ಮ ಅವರು ಸ್ವಾತಂತ್ರ್ಯ ಹೋರಾಟದ ನಿಧಿಗೆ ಏನು ನೀಡಿದರು?

A) ಭೂಮಿ
B) ಹಣ
C) ಮನೆ
D) ತಮ್ಮ ಒಡವೆಗಳು

Answer:
D) ತಮ್ಮ ಒಡವೆಗಳು

9. ಗೌರಮ್ಮ ಅವರು ಒಟ್ಟು ಎಷ್ಟು ಕಥೆಗಳನ್ನು ಬರೆದಿದ್ದಾರೆ?

A) 15
B) 18
C) 21
D) 25

Answer:
C) 21

10. ಗೌರಮ್ಮ ಅವರು ಯಾವ ವರ್ಷದಲ್ಲಿ ನಿಧನರಾದರು?

A) 1937
B) 1938
C) 1939
D) 1940

Answer:
C) 1939

11. ಗೌರಮ್ಮ ಅವರ ಜೀವನ ಚರಿತ್ರೆಯನ್ನು ಬರೆದವರು ಯಾರು?

A) ಶಿವರಾಮ ಕಾರಂತ
B) ಮ. ನ. ಮುಕ್ತಾಯಿ
C) ದ. ರಾ. ಬೇಂದ್ರೆ
D) ಮಾಸ್ತಿ ವೆಂಕಟೇಶ ಅಯ್ಯಂಗಾರ್

Answer:
B) ಮ. ನ. ಮುಕ್ತಾಯಿ

12. ಗೌರಮ್ಮ ಅವರು ಈಜಾಡುವಾಗ ಯಾವ ಹೊಳೆಯಲ್ಲಿ ಸುಳಿಗೆ ಸಿಕ್ಕರು?

A) ಕಾವೇರಿ
B) ಹಟ್ಟಿಹೊಳೆ
C) ಲಕ್ಷ್ಮಣತೀರ್ಥ
D) ನೇತ್ರಾವತಿ

Answer:
B) ಹಟ್ಟಿಹೊಳೆ

13. ಗೌರಮ್ಮ ಅವರ ಕಥೆಗಳು ಮುಖ್ಯವಾಗಿ ಯಾರ ಬದುಕನ್ನು ಚಿತ್ರಿಸುತ್ತವೆ?

A) ರಾಜರ ಬದುಕು
B) ರೈತರ ಬದುಕು
C) ಮಹಿಳೆಯರ ಬದುಕು
D) ಸೈನಿಕರ ಬದುಕು

Answer:
C) ಮಹಿಳೆಯರ ಬದುಕು

14. ಗೌರಮ್ಮ ಅವರು ಯಾವ ಬಟ್ಟೆಗಳನ್ನು ಧರಿಸುತ್ತಿದ್ದರು?

A) ರೇಷ್ಮೆ
B) ಖಾದಿ
C) ನೈಲಾನ್
D) ಉಣ್ಣೆ

Answer:
B) ಖಾದಿ

15. ಗೌರಮ್ಮ ಅವರು ಬದುಕಿದ್ದ ಅವಧಿ ಎಷ್ಟು ವರ್ಷ?

A) 24 ವರ್ಷ
B) 25 ವರ್ಷ
C) 26 ವರ್ಷ
D) 27 ವರ್ಷ

Answer:
C) 26 ವರ್ಷ.

Click Here to  Download Kodagina Gowramma PDF Notes
Click Here To Watch Kodagina Gowramma Video

You cannot copy content of this page