Class 10 Nudi Kannada Text Book Solution Chapter 1

SSLC Tili Kannada Question and Answer -Laakappinalli Ondu Ratri

Looking for SSLC /Class 10th Nudi Kannada textbook answers? You can download Chapter 1: Laakappinalli Ondu Ratri Questions and Answers PDF, Notes, and Summary here. SSLC /Class 10th Nudi Kannada Gadyabhaga solutions follow the Karnataka State Board Syllabus, making it easier for students to revise and score higher in exams.

Karnataka SSLC/Class 10th Nudi Kannada Textbook Answers—Reflections Chapter 1

Laakappinalli Ondu Ratri Questions and Answers, Notes, and Summary

Class 10 Nudi Kannada Chapter 1

ಲಾಕಪ್ಪಿನಲ್ಲಿ ಒಂದು ರಾತ್ರಿ

Laakappinalli Ondu Ratri

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

Question 1.
ಬೆಳಗಾಗುವ ವೇಳೆಗೆ ಕಾಲು ಕೊರಡಾಗಬಹುದೆಂಬ ಭಾವನೆಯು ಗೊರೂರರ ಮನಸ್ಸಿಗೆ ಏಕೆ ಬಂದಿತು?
Answer:
ರಾತ್ರಿ ಚಳಿ ಆರಂಭವಾದ ಕಾರಣ ಕಾಲು ಕೊರಡಾಗಬಹುದೆಂಬ ಭಾವನೆಯು ಗೊರೂರರ ಮನಸ್ಸಿಗೆ ಬಂದಿತು.

Question 2.
ಭಾರತದಲ್ಲಿರುವ ಅಲೆಮಾರಿಗಳು ರಾತ್ರಿವೇಳೆಯಲ್ಲಿ ತಂಗಲು ಇರುವ ಸ್ಥಳಗಳಾವುವು?
Answer:
ಛತ್ರ, ಧರ್ಮಶಾಲೆ, ದೇವಾಲಯ, ರೇಲ್ವೆಸ್ಟೇಷನ್, ವಿಮಾನ ನಿಲ್ದಾಣ ಇವು ಭಾರತದಲ್ಲಿರುವ ಅಲೆಮಾರಿಗಳಿಗೆ ರಾತ್ರಿ ವೇಳೆ ತಂಗಲು ಇರುವಂಥ ಸ್ಥಳಗಳು.

Question 3.
ಅಮೆರಿಕಾದ ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿವೇಳೆ ತಂಗುವಂತಿಲ್ಲ ಏಕೆ?
Answer:
ಕಾರಣ ಅಂತಹ ಸ್ಥಳಗಳಲ್ಲಿ ರಾತ್ರಿ ತಂಗಿದರೆ ಅಲೆಮಾರಿ ಎಂದು ತಿಳಿದು ಲಾಕಪ್ಪಿಗೆ ಹಾಕುತ್ತಾರೆ.

Question 4.
ಮಿನಿಪೊಲೀಸ್ ನಗರದಲ್ಲಿ ದಾರಿತಪ್ಪಿದ ಗೊರೂರರು ರಾತ್ರಿ ಕಳೆಯಲು ಹೋಟೆಲ್ಲಿಗೆ ಹೋಗಲಾಗಲಿಲ್ಲ. ಏಕೆ?
Answer:
ಕಾರಣ ಅವರ ಹತ್ತಿರ ಹೆಚ್ಚು ಡಾಲರ್‌ಗಳಿರಲಿಲ್ಲ.

Question 5.
ಅಮೆರಿಕಾದ ಪೊಲೀಸರು ಭಾರತದ ಪೊಲೀಸರ ಬಗೆಗೆ ಗೊರೂರರಲ್ಲಿ ಯಾವ ವಿಚಾರವನ್ನು ಕೇಳಿ ತಿಳಿದುಕೊಂಡರು?
Answer:
ಸಂಬಳ ಮತ್ತು ಸಾರಿಗೆ ಈ ಎರಡು ವಿಚಾರಗಳನ್ನು ಕೇಳಿ ತಿಳಿದುಕೊಂಡರು.

ಆ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.

Question 1.
ಗೊರೂರರು ಮಿನಿಪೊಲೀಸ್ ನಗರದಲ್ಲಿ ಕಾರು ಇಳಿದ ಸ್ಥಳದಿಂದ ಏಕೆ ತಪ್ಪಿಸಿಕೊಂಡರು?
Answer:
ಮಿನಿ ಪೋಲೀಸ್ ನಗರದಲ್ಲಿ ಲೇಖಕರು ತನಗೆ ಅರಿವಿಲ್ಲದಂತೆ ಸುತ್ತುತ್ತ ಬಣ್ಣದ ಬಲ್ಬುಗಳನ್ನು, ಕಮಾನುಗಳನ್ನು, ಕಿಟಕಿಗಳನ್ನು ನೋಡುತ್ತ ರಸ್ತೆಯ ಆಚೆ-ಈಚೆ ಹೊರಟು ಹೋದ ಕಾರಣ ಅವರು ಕಾರು ಇಳಿದ ಸ್ಥಳದಿಂದ ತಪ್ಪಿಸಿಕೊಂಡರು.

Question 2.
ಮಿನಿ ಪೊಲೀಸ್‌ ನಗರದ ಪೊಲೀಸರು ಗೊರೂರರನ್ನು ಹೇಗೆ ಉಪಚರಿಸಿದರು?
Answer:
ಮಿನಿಪೋಲೀಸ್ ನಗರದಲ್ಲಿ ಪೋಲೀಸ್‌ರು ಗೊರೂರರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಮನೆಗೆ ಕರೆದುಕೊಂಡು ಹೋದರು. ರಾತ್ರಿಯ ಊಟವೆಂದು ಬ್ರೆಡ್, ಹಾಲು, ಹಣ್ಣು, ಬಿಸ್ಕಿಟ್‌ಗಳನ್ನು ನೀಡಿದರು. ತಮ್ಮ ಮನೆಯ ಹಾಸಿಗೆ ಧೂಳು ತುಂಬಿದ ಕಾರಣ ತಮ್ಮ ವಶದಲ್ಲಿರುವ ಲಾಕಪ್ಪಿನಲ್ಲಿ ಮಲಗುವ ವ್ಯವಸ್ಥೆ ಮಾಡಿ ಚೆನ್ನಾಗಿಯೇ ಉಪಚರಿಸಿದರು.

Question 3.
ಗೊರೂರರು ಒಂದು ರಾತ್ರಿಯನ್ನು ಲಾಕಪ್ಪಿನಲ್ಲಿ ಕಳೆಯಬೇಕಾಯಿತು. ಏಕೆ?
Answer:
ಲೇಖಕರು ತಮಗೆ ಅರಿವಿಲ್ಲದಂತೆ ಬಣ್ಣದ ಬಲ್ಬುಗಳು, ಕಿಟಕಿಗಳು, ಕಿಟಕಿಗಳ ದೀಪಾಲಂಕಾರ, ಕಮಾನುಗಳು, ದೀಪ ರಾಶಿ ಮುಂತಾದವುಗಳನ್ನೆಲ್ಲಾ ನೋಡುತ್ತ ರಸ್ತೆಯ ಆಚೆ-ಈಚೆ ಹೊರಟು ಹೋದರು. ಮಿತ್ರರ ಪರಿಚಿತ ವ್ಯಕ್ತಿ ಕರೆದುಕೊಂಡು ಹೋಗುವುದಾಗಿ ಹೇಳಿದ್ದ ಆ ಸ್ಥಳ ಸಿಗದೇ ಹೋಯಿತು. ನಂತರ ಗೊರೂರರು ಟ್ರಾಫಿಕ್ ಪೋಲೀಸನವರ ಕೈಗೆ ಸಿಕ್ಕಿಹಾಕಿಕೊಂಡ ಕಾರಣ ಒಂದು ರಾತ್ರಿ ಲಾಕಪ್ಪಿನಲ್ಲಿ ಕಳೆಯಬೇಕಾಯಿತು.

Question 4.
ಪೊಲೀಸರು ಗೊರೂರರನ್ನು ಲಾಕಪ್ಪಿನಲ್ಲಿ ಮಲಗಿಸಲು ಯೋಚಿಸಿದ್ದೇಕೆ?
Answer:
ಟ್ರಾಫಿಕ್ ಪೋಲೀಸ್‌ನವರ ಮನೆಯ ಹಾಸಿಗೆ ಧೂಳಿನಿಂದ ತುಂಬಿತ್ತು, ಆ ಕಾರಣದಿಂದಾಗಿ ಪೊಲೀಸ್‌ನವರು ಗೊರೂರರನ್ನು ತಮ್ಮ ವಶದಲ್ಲಿರುವ ಲಾಕಪ್ಪಿನಲ್ಲಿ ಮಲಗಿಸಲು ಯೋಚಿಸಿದರು.

ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

Question 1.
ಮಿನಿಪೊಲೀಸ್‌ ನಗರದಲ್ಲಿ ಗೊರೂರರಿಗೆ ಎದುರಾದ ಸಮಸ್ಯೆಗಳು ಯಾವುವು? ವಿವರಿಸಿರಿ.

Answer:
ಮಿನಿಪೊಲೀಸ್ ನಗರಕ್ಕೆ ಲೇಖಕರು ತಮ್ಮ ಮಿತ್ರರನ್ನು ನೋಡಲು ಹೋದಾಗ ಅವರು ಭೇಟಿಯಾಗಲಿಲ್ಲ.

ಅವರ ಪರಿಚಯವಿರುವ ವ್ಯಕ್ತಿಯೊಬ್ಬರು ಭೇಟಿಯಾದರು. ಅವರು ಲೇಖಕರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ತಮ್ಮ ಕೆಲಸದ ಮೇಲೆ ಹೋದಾಗ ಲೇಖಕರು ನಡುದಾರಿಯಲ್ಲಿ ಇಳಿದುಕೊಂಡರು. ಮಧ್ಯರಾತ್ರಿ 2-00 ಗಂಟೆಗೆ ತಮ್ಮನ್ನು ಕರೆದುಕೊಂಡು ಹೋಗಲು ಹೇಳಿದರು. ಸಂಜೆ ದೀಪ ಹೊತ್ತಿದ ನಂತರ ಲೇಖಕರು ತಮಗೆ ಅರಿವಿಲ್ಲದಂತೆ ಸುಂದರ ನಗರದ ದೃಶ್ಯಾವಳಿಗಳನ್ನು ನೋಡುತ್ತ ರಸ್ತೆಯ ಆಚೆ-ಈಚೆ ಹೊರಟು ಹೋದರು. ಆಮೇಲೆ ಆ ನಿಗದಿಪಡಿಸಿದ ಜಾಗ ಸಿಗದೇ ಹೋಗಿ, ರಾತ್ರಿ 9 ಗಂಟೆಯಾಯಿತು.

ರಾತ್ರಿ ಚಳಿ ಬೇರೆ ಜೋರಾಗಿತ್ತು. ಹೋಟೆಲಿನಲ್ಲಿ ಉಳಿಯಲು ಇವರ ಹತ್ತಿರ ಹೆಚ್ಚು ಡಾಲರ್‌ಗಳು ಇರಲಿಲ್ಲ. ಅಮೇರಿಕಾದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಲಗಿದರೆ ಅಲೆಮಾರಿ ಎಂದು ತಿಳಿದು ಲಾಕಪ್ಪಿಗೆ ಹಾಕುತ್ತಾರೆ. ಇಂತಹ ಸ್ಥಿತಿಯಲ್ಲಿ ಅವರಿಗೆ ಒಬ್ಬ ಟ್ರಾಫಿಕ್ ಪೊಲೀಸ್ ಭೇಟಿಯಾಗಿ, ಅವರೇ ಲೇಖಕರನ್ನು ಸರಿಯಾಗಿ ಉಪಚರಿಸಿ ಲಾಕಪ್ಪಿನಲ್ಲಿ ಮಲಗುವ ವ್ಯವಸ್ಥೆ ಮಾಡಿದರು.

Question 2.
ಮಿನಿಪೊಲೀಸ್‌ ನಗರದಲ್ಲಿ ಎದುರಾದ ಸಮಸ್ಯೆಯಿಂದ ಲೇಖಕರು ಪಾರಾದುದು ಹೇಗೆ? ವಿವರಿಸಿರಿ.

Answer:
ಮಿನಿಪೊಲೀಸ್ ನಗರದಲ್ಲಿ ಲೇಖಕರು ದಾರಿತಪ್ಪಿ ಅಲೆದಾಡುವಾಗ, ಆಗ ತಾನೇ ಕರ್ತವ್ಯ ಮುಗಿಸಿ ಬರುತ್ತಿದ್ದ ಟ್ರಾಫಿಕ್ ಪೋಲೀಸ್‌ನವನು ಸಿಕ್ಕಿದನು. ಅವನಿಗೆ ಲೇಖಕರು ತಮ್ಮ ಸಮಸ್ಯೆಯನ್ನು ಹೇಳಿಕೊಂಡಾಗ. ಅವನು ತನ್ನ ಮನೆಗೆ ಕರೆದುಕೊಂಡು ಹೋದನು. ರಾತ್ರಿ ಊಟವೆಂದು ಬ್ರೆಡ್, ಹಾಲು, ಹಣ್ಣು ಬಿಸ್ಕಿಟ್ ಗಳನ್ನು ನೀಡಿದನು. ತನ್ನ ಮನೆಯ ಹಾಸಿಗೆ ಅನೇಕ ದಿನಗಳಿಂದ ಉಪಯೋಗಿಸದೇ ಇರುವುದರಿಂದ ಧೂಳು ತುಂಬಿದೆ. ಆ ಕಾರಣ ತನ್ನ ವಶದಲ್ಲಿರುವ ಲಾಕಪ್ಪಿನಲ್ಲಿ ಹೋಗಿ ಮಲಗಿರಿ ಎಂದು ಹೇಳಿದನು. ಈ ರೀತಿಯಾಗಿ ಲೇಖಕರು ತನಗೆ ಎದುರಾದ ಸಮಸ್ಯೆಗಳಿಂದ ಪಾರಾದರು.

Question 3.
ಮಿನಿಪೊಲೀಸ್ ನಗರದಲ್ಲಿ ಗೊರೂರರು ತಪ್ಪಿಸಿಕೊಂಡ ಪ್ರಕರಣವನ್ನು ಮರು ನಿರೂಪಿಸಿ ಬರೆಯಿರಿ.

Answer:
ಗೊರೂರರು ಅಮೆರಿಕಾದ ಮಿನಿಪೊಲೀಸ್ ನಗರಕ್ಕೆ ತಮ್ಮ ಮಿತ್ರರನ್ನು ಭೇಟಿಯಾಗಲು ಹೋಗಿದ್ದರು. ಮಿತ್ರರು ಸಿಗದ ಕಾರಣ ಅವರ ಪರಿಚಿತರೊಬ್ಬರೊಂದಿಗೆ ಕಾರಿನಲ್ಲಿ ತೆರಳಿದರು. ಮಧ್ಯದಲ್ಲಿ ಇಳಿದು ರಾತ್ರಿ ಎರಡು ಗಂಟೆಗೆ ಮರಳಿ ಕರೆದುಕೊಂಡು ಹೋಗುವಂತೆ ತಿಳಿಸಿದರು. ನಗರದಲ್ಲಿನ ಬಣ್ಣಬಣ್ಣದ ದೀಪಗಳು, ಕಮಾನುಗಳು ಮತ್ತು ಅಲಂಕಾರಗಳನ್ನು ನೋಡುತ್ತಾ ಸುತ್ತಾಡುತ್ತಿದ್ದಾಗ ತಾವು ನಿಂತಿದ್ದ ಸ್ಥಳವನ್ನು ಮರೆತು ದಾರಿ ತಪ್ಪಿದರು. ರಾತ್ರಿ ಒಂಬತ್ತು ಗಂಟೆಯಾದರೂ ಆ ಸ್ಥಳವನ್ನು ಹುಡುಕಲು ಸಾಧ್ಯವಾಗಲಿಲ್ಲ.

ಅವರ ಬಳಿ ಅಲ್ಪ ಹಣ ಮಾತ್ರ ಇತ್ತು ಮತ್ತು ಮಿತ್ರರ ವಿಳಾಸವೂ ಇರಲಿಲ್ಲ. ಶೀತ ಹೆಚ್ಚಾಗುತ್ತಿದ್ದುದರಿಂದ ಅವರು ತುಂಬಾ ಆತಂಕಗೊಂಡರು. ಆಗ ಒಬ್ಬ ಟ್ರಾಫಿಕ್ ಪೊಲೀಸಿನ ಸಹಾಯ ಕೋರಿದರು. ಪೊಲೀಸ್ ಅವರ ಸಮಸ್ಯೆಯನ್ನು ಅರ್ಥಮಾಡಿಕೊಂಡು ತನ್ನ ಮನೆಯಿಗೆ ಕರೆದುಕೊಂಡು ಹೋದನು. ಊಟ ಮಾಡಿಸಿ ರಾತ್ರಿ ಲಾಕಪ್‌ನಲ್ಲಿ ಸುರಕ್ಷಿತವಾಗಿ ಮಲಗುವ ವ್ಯವಸ್ಥೆ ಮಾಡಿದನು. ಮರುದಿನ ಗೊರೂರರಿಗೆ ತಮ್ಮ ಮಿತ್ರರ ಮನೆ ಸಿಕ್ಕಿತು. ಈ ಘಟನೆ ಲೇಖಕರ ಜೀವನದ ಒಂದು ಮರೆಯಲಾಗದ ಅನುಭವವಾಯಿತು.


ಈ) ಕೆಳಗಿನ ಸಂದರ್ಭಗಳನ್ನು ಸ್ವಾರಸ್ಯದೊಂದಿಗೆ ವಿವರಿಸಿ.

Question 1.
“ಈಗ ನೀವು ನನ್ನ ವಶವಾದಿರಿ. ನಾನು ನಿಮ್ಮನ್ನು ಕೈ ಬಿಡುವಂತಿಲ್ಲ”.

Answer:
ಪಾಠದ ಹೆಸರು: ಲಾಕಪ್ಪಿನಲ್ಲಿ ಒಂದು ರಾತ್ರಿ.

ಲೇಖಕರ ಹೆಸರು: ಗೊ.ರಾ.ಅಯ್ಯಂಗಾರ್.

ಸಂದರ್ಭ: ಟ್ರಾಫಿಕ್ ಪೋಲೀಸ್‌ನವರು ಈ ಮಾತನ್ನು ಲೇಖಕರಿಗೆ ನುಡಿದಿದ್ದಾರೆ.

ವಿವರಣೆ: ಮಿನಿಪೋಲೀಸ್ ನಗರದ ದೀಪರಾಶಿ ಕಮಾನುಗಳು, ಕಿಟಕಿಗಳು, ಕಿಟಕಿಗಳ ದೀಪಾಲಂಕಾರ ಮೊದಲಾದವುಗಳನ್ನೆಲ್ಲಾ ನೋಡುತ್ತ ಲೇಖಕರು ರಸ್ತೆಯ ಆಕಡೆ ಈಕಡೆ ಹೊರಟು ಹೋದರು. ನಂತರ ಮಿತ್ರರ ಪರಿಚಿತರು ಕರೆದುಕೊಂಡು ಹೋಗಲು ಹೇಳಿದ ಜಾಗ ಏನು ಮಾಡಿದರು ಸಿಗಲೇ ಇಲ್ಲ. ಕೊನೆಗೆ ಲೇಖಕರು ಟ್ರಾಫಿಕ್ ಪೋಲೀಸನವರ ಕೈಗೆ ಸಿಕ್ಕಿ ಹಾಕಿಕೊಂಡಾಗ ಅವರು ಮೇಲಿನ ಈ ಮಾತನ್ನು ಲೇಖಕರಿಗೆ ನುಡಿಯುವರು.

Question 2.
“ನನ್ನ ಖೈದಿಯ ರಕ್ಷಣೆಯನ್ನು ನಾನು ಸರಿಯಾಗಿ ಮಾಡಬೇಕಷ್ಟೆ”.

Answer:
ಪಾಠದ ಹೆಸರು: ಲಾಕಪ್ಪಿನಲ್ಲಿ ಒಂದು ರಾತ್ರಿ.

ಲೇಖಕರ ಹೆಸರು: ಗೊ.ರಾ.ಅಯ್ಯಂಗಾರ್.

ಸಂದರ್ಭ: ಟ್ರಾಫಿಕ್ ಪೊಲೀಸ್‌ನವರು ಈ ಮಾತನ್ನು ಲೇಖಕರಿಗೆ ನುಡಿದಿದ್ದಾರೆ.

ವಿವರಣೆ: ಲೇಖಕರು ತಮ್ಮ ಸಮಸ್ಯೆಯನ್ನು ಟ್ರಾಫಿಕ್ ಪೊಲೀಸ್‌ನವರಿಗೆ ಹೇಳಿದರು. ಪೋಲೀಸ್ನವರು ಲೇಖಕರನ್ನು ತನ್ನ ಕಾರಿನಲ್ಲಿ ಕೂರಿಸಿಕೊಂಡು ಮನೆಗೆ ಬಂದರು. ರಾತ್ರಿಯ ಊಟಕೆಂದು ಬ್ರೆಡ್, ಹಾಲು, ಹಣ್ಣು, ಬಿಸ್ಕಿಟ್‌ಗಳನ್ನು ನೀಡಿದರು. ನಂತರ ತನ್ನ ವಶದಲ್ಲಿರುವ ಲಾಕಪ್ಪಿನಲ್ಲಿ ಎಲ್ಲ ವ್ಯವಸ್ಥೆ ಇದೆ. ಅಲ್ಲಿ ಹೋಗಿ ಮಲಗಿದರೆ ಸೊಗಸಾದ ನಿದ್ರೆ ಬರುತ್ತದೆ ಎಂದು ಹೇಳುತ್ತ ಈ ಮೇಲಿನ ಮಾತನ್ನು ಅವರು ಲೇಖಕರಿಗೆ ನುಡಿದರು.

Question 3.
“ಪೊಲೀಸ್‌ನವರ ಸಹವಾಸವಾದ ಮೇಲೆ ಲಾಕಪ್ ಆಗಲೇಬೇಕಷ್ಟೆ.”

Answer:
ಪಾಠದ ಹೆಸರು: ಲಾಕಪ್ಪಿನಲ್ಲಿ ಒಂದು ರಾತ್ರಿ.

ಲೇಖಕರ ಹೆಸರ: ಗೊ.ರಾ.ಅಯ್ಯಂಗಾರ್.

ಸಂದರ್ಭ: ಲೇಖಕರು ಈ ಮಾತನ್ನು ಟ್ರಾಫಿಕ್ ಪೋಲೀಸ್‌ನವರ ಕುರಿತು ತನ್ನ ಮನದೊಳಗೆ ಅಂದುಕೊಂಡಿದ್ದಾರೆ.

ವಿವರಣೆ: ಟ್ರಾಫಿಕ್ ಪೊಲೀಸ್‌ನವರು ಲೇಖಕರನ್ನು ತನ್ನ ಮನೆಗೆ ಕರೆದುಕೊಂಡು ಬಂದರು. ರಾತ್ರಿಯ ಊಟ ನೀಡಿದರು. ತನ್ನ ಮನೆಯ ಹಾಸಿಗೆ ಸ್ವಚ್ಛವಿರದ ಕಾರಣ ತನ್ನ ವಶದಲ್ಲಿರುವ ಲಾಕಪ್ಪಿನಲ್ಲಿ ಹೋಗಿ ಮಲಗಿರಿ. ಸೊಗಸಾದ ನಿದ್ರೆ ಬರುತ್ತದೆ ಎಂದು ಹೇಳಿದಾಗ ಈ ಮೇಲಿನ ಮಾತನ್ನು ಲೇಖಕರು ತನ್ನ ಮನದೊಳಗೆ ಅಂದುಕೊಂಡರು.

Question 4.
“ನಾನು ಏನು ಮಾಡಿದರೂ ಕಾನೂನು ಬಿಟ್ಟು ಹೋಗುವುದಿಲ್ಲ”.

Answer:
ಪಾಠದ ಹೆಸರು: ಲಾಕಪ್ಪಿನಲ್ಲಿ ಒಂದು ರಾತ್ರಿ.

ಲೇಖಕರ ಹೆಸರು: ಗೊ.ರಾ.ಅಯ್ಯಂಗಾರ್.

ಸಂದರ್ಭ: ಟ್ರಾಫಿಕ್ ಪೋಲೀಸ್‌ನವರು ಈ ಮಾತನ್ನು ಲೇಖಕರಿಗೆ ನುಡಿದಿದ್ದಾರೆ.

ವಿವರಣೆ: ಟ್ರಾಫಿಕ್ ಪೊಲೀಸ್‌ನವರು ಲೇಖಕರಿಗೆ ರಾತ್ರಿಯ ಊಟ ನೀಡುತ್ತಾರೆ. ಊಟವಾದ ನಂತರ ಅಮೇರಿಕಾದ ಪೊಲೀಸ್‌ನವರ ಕರ್ತವ್ಯಗಳ ಕುರಿತು ಮಾತನಾಡುತ್ತ ಈ ಮೇಲಿನ ಮಾತನ್ನು ಲೇಖಕರಿಗೆ ನುಡಿಯುತ್ತಾರೆ.

ಭಾಷಾಭ್ಯಾಸ
ಅ) ಕೆಳಗೆ ಕೊಟ್ಟಿರುವ ಪದಗಳನ್ನು ಬಿಡಿಸಿ, ಬರೆದು ಸಂಧಿಯನ್ನು ಹೆಸರಿಸಿ.
  1. ದೇವ+ಆಲಯ=ದೇವಾಲಯ (ಸವರ್ಣದೀರ್ಘ ಸಂಧಿ)
  2. ಧರ್ಮ+ಅರ್ಥ= ಧರ್ಮಾರ್ಥ (ಸವರ್ಣದೀರ್ಘ ಸಂಧಿ)
  3. ರಕ್ಷಣೆ+ಅನ್ನು=ರಕ್ಷಣೆಯನ್ನು (ಯ’ಕಾರಾಗಮ ಸಂಧಿ)
  4. ಅರಿವು+ಇಲ್ಲ=ಅರಿವಿಲ್ಲ (ಲೋಪಸಂಧಿ)
  5. ಸ್ವಚ್ಛ+ಆದ=ಸ್ವಚ್ಛವಾದ (ವ’ಕಾರಾಗಮ ಸಂಧಿ)
  6. ದೀಪ+ಅಲಂಕಾರ=ದೀಪಾಲಂಕಾರ (ಸವರ್ಣದೀರ್ಘ ಸಂಧಿ)
  7. ಊಟ+ಆಯಿತು=ಊಟವಾಯಿತು (ವ’ಕಾರಾಗಮ ಸಂಧಿ)
  8. ಬೇಕು+ಅಷ್ಟೇ=ಬೇಕಷ್ಟೇ (ಲೋಪಸಂಧಿ)
  9. ವಾರಕ್ಕೆ+ಎರಡು=ವಾರಕ್ಕೆರಡು (ಲೋಪಸಂಧಿ)
  10. ನನ್ನ+ಅಲ್ಲಿ=ನನ್ನಲ್ಲಿ (ಲೋಪಸಂಧಿ)
ಆ) “ಲಾಕಪ್ಪಿನಲ್ಲಿ ಒಂದು ರಾತ್ರಿ” ಗದ್ಯಭಾಗದಲ್ಲಿ ಬಂದಿರುವ ಅನ್ಯದೇಶ್ಯ ಪದಗಳನ್ನು ಆರಿಸಿ ಬರೆಯಿರಿ.

ಮಿನಿ, ಪೊಲೀಸ್, ಲಾಕಪ್, ಮೋಟಾರು, ಬಲ್ಬು, ಡಾಲರು, ಹೋಟಲು, ಬ್ರೆಡ್, ಬಿಸ್ಕಿಟ್, ರಿಟಸ್ರ್, ಟಿಕೇಟು, ರೈಲ್ವೆ, ಸ್ಟೇಷನ್, ಕಾರು,

ಇ) ಪದಗಳ ವಿರುದ್ಧಾರ್ಥಕ ರೂಪ ಬರೆಯಿರಿ.
  1. ಪರಿಚಿತರು X ಅಪರಿಚಿತರು
  2. ಹಗಲು       X ಇರುಳು
  3. ಧರ್ಮ       X ಅಧರ್ಮ
  4. ಮಿತ್ರ         X ಶತ್ರು
  5. ಬೆಳಕು       X ಕತ್ತಲು.
ಈ) ಕೆಳಗೆ ಕೊಟ್ಟಿರುವ ಪದಗಳ ಬಹುವಚನ ರೂಪ ಬರೆಯಿರಿ.
  1. ಕಣ್ಣು-ಕಣ್ಣುಗಳು
  2. ಮರ-ಮರಗಳು
  3. ಕಾರು-ಕಾರುಗಳು
  4. ನಗರ-ನಗರಗಳು
  5. ಮನೆ-ಮನೆಗಳು
  6. ದಿನ-ದಿನಗಳು
  7. ಮಿತ್ರ-ಮಿತ್ರರು
  8. ದೀಪ-ದೀಪಗಳು.
ಉ) ಕೆಳಗೆ ಕೊಟ್ಟಿರುವ ಪದಗಳ ಲಿಂಗವನ್ನು ಹೆಸರಿಸಿ.
  1. ಹುಡುಗಿ-ಸ್ತ್ರೀಲಿಂಗ
  2. ಅಣ್ಣ-ಪುಲ್ಲಿಂಗ
  3. ಹುಡುಗ-ಪುಲ್ಲಿಂಗ
  4. ಕವಯಿತ್ರಿ-ಸ್ತ್ರೀಲಿಂಗ
  5. ರಾಮ-ಪುಲ್ಲಿಂಗ.
ಊ) ಕೆಳಗೆ ಕೊಟ್ಟಿರುವ ಪದಗಳನ್ನು ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ.

ಪದ

ಲಿಂಗ

ಹುಡುಗಿ

ಸ್ತ್ರೀಲಿಂಗ

ಅಣ್ಣ

ಪುಲ್ಲಿಂಗ

ಹುಡುಗ

ಪುಲ್ಲಿಂಗ

ಕವಯಿತ್ರಿ

ಸ್ತ್ರೀಲಿಂಗ

ರಾಮ

ಪುಲ್ಲಿಂಗ

ಹೆಚ್ಚುವರಿಯಾಗಿ:

  • ಹುಡುಗ → ಹುಡುಗಿ
  • ಅಣ್ಣ → ಅಕ್ಕ
  • ಕವಿ → ಕವಯಿತ್ರಿ
  • ರಾಮ → ಸೀತೆ (ಲಿಂಗ ಬದಲಾವಣೆಯ ಉದಾಹರಣೆ)
  • ರಾಜ → ರಾಣಿ

ಪುಲ್ಲಿಂಗ – ಗಂಡು ಜಾತಿಯನ್ನು ಸೂಚಿಸುವ ಪದಗಳು.
ಸ್ತ್ರೀಲಿಂಗ – ಹೆಣ್ಣು ಜಾತಿಯನ್ನು ಸೂಚಿಸುವ ಪದಗಳು.

ಋ) ಕೆಳಗಿನ ವಾಕ್ಯಗಳಲ್ಲಿ ಖಾಲಿಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1) ಗೊರೂರರು ಅಮೇರಿಕಾದಲ್ಲಿ ಮಿತ್ರರನ್ನು ನೋಡಲು ಹೋಗಿದ್ದ ಸ್ಥಳದ ಹೆಸರು ಮಿನಿಪೊಲೀಸ್ ನಗರ.

2) ಮಿನಿ ಪೊಲೀಸ್ ನಗರದಲ್ಲಿ ದಾರಿತಪ್ಪಿದ ಗೊರೂರರಿಗೆ ಆಶ್ರಯ ನೀಡಿದಾತ ಟ್ರಾಫಿಕ್ ಪೊಲೀಸ್.

3) ಮಿನಿ ಪೊಲೀಸ್ ನಗರದಲ್ಲಿ ಗೊರೂರರ ಜೇಬಿನಲ್ಲಿ ಎರಡು ಡಾಲರ್ ಜೊತೆಗೆ ಇದ್ದುದು ಒಂದು ರಿಟರ್ ಟಿಕೇಟು.

4) ಮಿನಿಪೊಲೀಸ್ ನಗರದ ಲಾಕಪ್‌ನ್ನು ಸಾರಣೆ ಮಾಡಲು ಬಳಸುತ್ತಿದ್ದ ವಸ್ತು ಕ್ರಿಮಿನಾಶಕ.

5) ಗೊರೂರರು ಬರೆದಿರುವ ಪ್ರವಾಸಕಥನದ ಹೆಸರು “ಅಮೆರಿಕಾದಲ್ಲಿ ಗೊರೂರು.”

ಲಾಕಪ್ಪಿನಲ್ಲಿ ಒಂದು ರಾತ್ರಿಸಾರಾಂಶ
Summary

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಅಮೆರಿಕಾದ ಪ್ರವಾಸದ ಸಂದರ್ಭದಲ್ಲಿ ಮಿನಿಪೊಲೀಸ್ ನಗರದಲ್ಲಿ ತಮಗಾದ ಒಂದು ವಿಶಿಷ್ಟ ಅನುಭವವನ್ನು ಈ ಗದ್ಯಭಾಗದಲ್ಲಿ ಹಾಸ್ಯಮಯವಾಗಿ ವಿವರಿಸಿದ್ದಾರೆ. ಲೇಖಕರು ತಮ್ಮ ಮಿತ್ರರನ್ನು ಭೇಟಿ ಮಾಡಲು ಮಿನಿಪೊಲೀಸ್ ನಗರಕ್ಕೆ ಹೋಗುತ್ತಾರೆ. ಆದರೆ ಮಿತ್ರರು ಸಿಗದೇ, ಅವರ ಪರಿಚಿತರೊಬ್ಬರೊಂದಿಗೆ ಕಾರಿನಲ್ಲಿ ಹೋಗಿ ಮಧ್ಯದಲ್ಲಿ ಇಳಿಯುತ್ತಾರೆ. ನಂತರ ನಗರದ ಸೌಂದರ್ಯವನ್ನು ವೀಕ್ಷಿಸುತ್ತಾ ಸುತ್ತಾಡುವಾಗ ತಾವು ಮರಳಿ ಸೇರಬೇಕಿದ್ದ ಸ್ಥಳವನ್ನು ಮರೆತು ದಾರಿ ತಪ್ಪುತ್ತಾರೆ.

ರಾತ್ರಿ ಒಂಬತ್ತು ಗಂಟೆಯಾದರೂ ಸರಿಯಾದ ಸ್ಥಳ ಸಿಗುವುದಿಲ್ಲ. ಅವರ ಬಳಿ ಕೇವಲ ಎರಡು ಡಾಲರ್ ಹಣ ಮತ್ತು ಒಂದು ರಿಟರ್ನ್ ಟಿಕೆಟ್ ಮಾತ್ರ ಇರುತ್ತದೆ. ಮಿತ್ರರ ವಿಳಾಸವೂ ಇಲ್ಲದೆ, ಕೈಚೀಲ ಕಾರಿನಲ್ಲಿಯೇ ಉಳಿದಿರುತ್ತದೆ. ಚಳಿಯೂ ಹೆಚ್ಚಾಗುತ್ತಿರುವುದರಿಂದ ಅವರು ಸಂಕಷ್ಟಕ್ಕೆ ಸಿಲುಕುತ್ತಾರೆ. ಆಗ ಒಬ್ಬ ಟ್ರಾಫಿಕ್ ಪೊಲೀಸನನ್ನು ಕಂಡು ತಮ್ಮ ಸಮಸ್ಯೆಯನ್ನು ವಿವರಿಸುತ್ತಾರೆ.

ಪೊಲೀಸ್ ಲೇಖಕರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಅವರನ್ನು ತನ್ನ ಮನೆಯಿಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಅವರಿಗೆ ಬ್ರೆಡ್, ಹಾಲು, ಹಣ್ಣು ಮತ್ತು ಬಿಸ್ಕತ್‌ಗಳನ್ನು ನೀಡಿ ಆತಿಥ್ಯ ನೀಡುತ್ತಾನೆ. ನಂತರ ತನ್ನ ವಶದಲ್ಲಿದ್ದ ಸ್ವಚ್ಛವಾದ ಲಾಕಪ್‌ನಲ್ಲಿ ರಾತ್ರಿ ಮಲಗುವ ವ್ಯವಸ್ಥೆ ಮಾಡುತ್ತಾನೆ. ಲೇಖಕರು ಅಲ್ಲಿ ನೆಮ್ಮದಿಯಿಂದ ನಿದ್ರೆ ಮಾಡುತ್ತಾರೆ.

ಮರುದಿನ ಬೆಳಿಗ್ಗೆ ತಮ್ಮ ಮಿತ್ರರ ಮನೆಯ ವಿಳಾಸವನ್ನು ಪತ್ತೆಹಚ್ಚಿ ಅವರನ್ನು ಭೇಟಿ ಮಾಡುತ್ತಾರೆ. ಈ ಘಟನೆಯ ಮೂಲಕ ಅಮೆರಿಕಾದ ಪೊಲೀಸರ ಕರ್ತವ್ಯನಿಷ್ಠೆ, ಮಾನವೀಯತೆ ಹಾಗೂ ಸಹಾಯ ಮನೋಭಾವವನ್ನು ಲೇಖಕರು ಚಿತ್ರಿಸಿದ್ದಾರೆ. ಈ ಪಾಠವು ಸಂಕಷ್ಟದ ಸಮಯದಲ್ಲಿ ಸಹಾಯ ಮಾಡುವ ವ್ಯಕ್ತಿಯೇ ನಿಜವಾದ ಮಿತ್ರನೆಂಬ ಸಂದೇಶವನ್ನು ನೀಡುತ್ತದೆ.

Additional Question and Answer
ಒಂದು ವಾಕ್ಯದಲ್ಲಿ ಉತ್ತರಿಸಿ.

Question 1.
ಗೊರೂರರು ಯಾವ ನಗರಕ್ಕೆ ತಮ್ಮ ಮಿತ್ರರನ್ನು ನೋಡಲು ಹೋಗಿದ್ದರು?
Answer:
ಗೊರೂರರು ಮಿನಿಪೊಲೀಸ್ ನಗರಕ್ಕೆ ತಮ್ಮ ಮಿತ್ರರನ್ನು ನೋಡಲು ಹೋಗಿದ್ದರು.

Question 2.
ಗೊರೂರರ ಬಳಿ ಎಷ್ಟು ಡಾಲರ್ ಹಣ ಇತ್ತು?
Answer:
ಗೊರೂರರ ಬಳಿ ಎರಡು ಡಾಲರ್ ಹಣ ಇತ್ತು.

Question 3.
ಗೊರೂರರ ಕೈಚೀಲ ಎಲ್ಲಿತ್ತು?
Answer:
ಗೊರೂರರ ಕೈಚೀಲ ಅವರ ಮಿತ್ರರ ಪರಿಚಿತರ ಕಾರಿನಲ್ಲಿತ್ತು.

Question 4.
ಗೊರೂರರಿಗೆ ಸಹಾಯ ಮಾಡಿದವರು ಯಾರು?
Answer:
ಒಬ್ಬ ಟ್ರಾಫಿಕ್ ಪೊಲೀಸ್ ಗೊರೂರರಿಗೆ ಸಹಾಯ ಮಾಡಿದರು.

Question 5.
ಪೊಲೀಸ್ ಗೊರೂರರನ್ನು ಎಲ್ಲಿಗೆ ಕರೆದುಕೊಂಡು ಹೋದನು?
Answer:
ಪೊಲೀಸ್ ಗೊರೂರರನ್ನು ತನ್ನ ಮನೆಯಿಗೆ ಕರೆದುಕೊಂಡು ಹೋದನು.

ಎರಡುಮೂರು ವಾಕ್ಯಗಳಲ್ಲಿ ಉತ್ತರಿಸಿ.

Question 1.
ಗೊರೂರರು ದಾರಿ ತಪ್ಪಲು ಕಾರಣವೇನು?
Answer:
ನಗರದ ಬಣ್ಣಬಣ್ಣದ ದೀಪಗಳು, ಕಮಾನುಗಳು ಹಾಗೂ ಅಲಂಕಾರಗಳನ್ನು ನೋಡುತ್ತಾ ಸುತ್ತಾಡುತ್ತಿದ್ದಾಗ ತಾವು ಮರಳಿ ಬರಬೇಕಿದ್ದ ಸ್ಥಳವನ್ನು ಮರೆತು ದಾರಿ ತಪ್ಪಿದರು.

Question 2.
ಗೊರೂರರಿಗೆ ಹೋಟೆಲ್‌ನಲ್ಲಿ ಉಳಿಯಲು ಏಕೆ ಸಾಧ್ಯವಾಗಲಿಲ್ಲ?
Answer:
ಅವರ ಬಳಿ ಸಾಕಷ್ಟು ಹಣ ಇರಲಿಲ್ಲ. ಕಡಿಮೆ ದರದ ಕೊಠಡಿಗಳೂ ಖಾಲಿ ಇರಲಿಲ್ಲ.

Question 3.
ಅಮೆರಿಕಾದ ಪೊಲೀಸರ ಬಗ್ಗೆ ಲೇಖಕರು ಏನು ತಿಳಿದುಕೊಂಡರು?
Answer:
ಅಮೆರಿಕಾದ ಪೊಲೀಸರು ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ ಮತ್ತು ಜನರಿಗೆ ಮಾನವೀಯತೆಯಿಂದ ಸಹಾಯ ಮಾಡುತ್ತಾರೆ ಎಂಬುದನ್ನು ತಿಳಿದುಕೊಂಡರು.

Question 4.
ಪೊಲೀಸನ ಸಹಾಯದಿಂದ ಗೊರೂರರಿಗೆ ಏನು ಲಾಭವಾಯಿತು?
Answer:
ಅವರಿಗೆ ಸುರಕ್ಷಿತ ವಸತಿ, ಆಹಾರ ಮತ್ತು ಮಿತ್ರರ ಮನೆಯ ವಿಳಾಸ ದೊರೆಯಿತು.

Question 5.
ಈ ಪಾಠದ ಮುಖ್ಯ ಸಂದೇಶವೇನು?
Answer:
ಸಂಕಷ್ಟದ ಸಮಯದಲ್ಲಿ ಸಹಾಯ ಮಾಡುವ ವ್ಯಕ್ತಿಯೇ ನಿಜವಾದ ಮಿತ್ರ ಎಂಬುದು ಪಾಠದ ಮುಖ್ಯ ಸಂದೇಶವಾಗಿದೆ.

Multiple Choice:

1. ಗೊರೂರರು ಯಾವ ನಗರದಲ್ಲಿ ದಾರಿ ತಪ್ಪಿದರು?

A) ನ್ಯೂಯಾರ್ಕ್
B) ಚಿಕಾಗೋ
C) ಮಿನಿಪೊಲೀಸ್
D) ವಾಷಿಂಗ್ಟನ್

Answer:
C) ಮಿನಿಪೊಲೀಸ್

  1. ಗೊರೂರರ ಬಳಿ ಎಷ್ಟು ಡಾಲರ್ ಇತ್ತು?
  2. A) 5
    B) 10
    C) 2
    D) 20

Answer:
C) 2

  1. ಗೊರೂರರಿಗೆ ಸಹಾಯ ಮಾಡಿದವರು ಯಾರು?
  2. A) ಮಿತ್ರ
    B) ಹೋಟೆಲ್ ಮಾಲೀಕ
    C) ಟ್ರಾಫಿಕ್ ಪೊಲೀಸ್
    D) ಅಂಗಡಿಯವ

Answer:
C) ಟ್ರಾಫಿಕ್ ಪೊಲೀಸ್

  1. ಗೊರೂರರ ಕೈಚೀಲ ಎಲ್ಲಿತ್ತು?
  2. A) ಹೋಟೆಲ್‌ನಲ್ಲಿ
    B) ಮನೆಯಲ್ಲಿತ್ತು
    C) ಕಾರಿನಲ್ಲಿ ಉಳಿದಿತ್ತು
    D) ಲಾಕಪ್‌ನಲ್ಲಿ

Answer:
C) ಕಾರಿನಲ್ಲಿ ಉಳಿದಿತ್ತು

  1. ಪೊಲೀಸ್ ಗೊರೂರರನ್ನು ಎಲ್ಲಿಗೆ ಕರೆದುಕೊಂಡು ಹೋದನು?
  2. A) ಹೋಟೆಲ್‌ಗೆ
    B) ತನ್ನ ಮನೆಯಿಗೆ
    C) ರೈಲು ನಿಲ್ದಾಣಕ್ಕೆ
    D) ವಿಮಾನ ನಿಲ್ದಾಣಕ್ಕೆ

Answer:
B) ತನ್ನ ಮನೆಯಿಗೆ

  1. ಪೊಲೀಸನ ಮನೆಯಲ್ಲಿ ಯಾವ ಆಹಾರ ನೀಡಲಾಯಿತು?
  2. A) ಅನ್ನ ಮತ್ತು ಸಾರು
    B) ಇಡ್ಲಿ ಮತ್ತು ದೋಸೆ
    C) ಬ್ರೆಡ್, ಹಾಲು, ಹಣ್ಣು ಮತ್ತು ಬಿಸ್ಕತ್
    D) ಚಪಾತಿ ಮತ್ತು ಪಲ್ಯ

Answer:
C) ಬ್ರೆಡ್, ಹಾಲು, ಹಣ್ಣು ಮತ್ತು ಬಿಸ್ಕತ್

 

  1. ಗೊರೂರರು ರಾತ್ರಿ ಎಲ್ಲಿ ಮಲಗಿದರು?
  2. A) ಹೋಟೆಲ್‌ನಲ್ಲಿ
    B) ಮಿತ್ರರ ಮನೆಯಲ್ಲಿ
    C) ರೈಲು ನಿಲ್ದಾಣದಲ್ಲಿ
    D) ಲಾಕಪ್‌ನಲ್ಲಿ

Answer:
D) ಲಾಕಪ್‌ನಲ್ಲಿ

  1. ‘ಅಮೆರಿಕಾದಲ್ಲಿ ಗೊರೂರು’ ಕೃತಿಯ ಕರ್ತೃ ಯಾರು?
  2. A) ಶಿವರಾಮ ಕಾರಂತ
    B) ಜಿ.ಎಸ್. ಶಿವರುದ್ರಪ್ಪ
    C) ಗೊರೂರು ರಾಮಸ್ವಾಮಿ ಅಯ್ಯಂಗಾರ್
    D) ನೇಮಿಚಂದ್ರ

Answer:
C) ಗೊರೂರು ರಾಮಸ್ವಾಮಿ ಅಯ್ಯಂಗಾರ್

  1. ಗೊರೂರರು ಯಾವ ಚಳುವಳಿಯಲ್ಲಿ ಭಾಗವಹಿಸಿದ್ದರು?
  2. A) ಅಸಹಕಾರ ಚಳುವಳಿ
    B) ಸ್ವಾತಂತ್ರ್ಯ ಚಳುವಳಿ
    C) ಭಾಷಾ ಚಳುವಳಿ
    D) ರೈತ ಚಳುವಳಿ

Answer:
B) ಸ್ವಾತಂತ್ರ್ಯ ಚಳುವಳಿ

  1. ‘ಲಾಕಪ್ಪಿನಲ್ಲಿ ಒಂದು ರಾತ್ರಿ’ ಪಾಠವು ಯಾವ ಕೃತಿಯಿಂದ ಆಯ್ದುಕೊಳ್ಳಲಾಗಿದೆ?
  2. A) ನಮ್ಮ ಊರಿನ ರಸಿಕರು
    B) ಹೇಮಾವತಿ
    C) ಅಮೆರಿಕಾದಲ್ಲಿ ಗೊರೂರು
    D) ಹಳ್ಳಿಯ ಹಾಡು

Answer:
C) ಅಮೆರಿಕಾದಲ್ಲಿ ಗೊರೂರು

You cannot copy content of this page