Class10 Kannada Question and Answer: Letter Writing
Looking for Class 10 2nd Language Kannada Letter writing Studies textbook answers? You can download Letter Writing PDF, Notes, and Summary here. SSLC 2nd Language Kannada solutions follow the Karnataka State Board Syllabus, making it easier for students to revise and score higher in exams.
Karnataka SSLC Kannada Textbook Answers—Reflections Letter Writing
Letter Writing Questions and Answers, Notes, and Summary
Class 10 Tili Kannada
Letter Writing
Scroll Down to Download Letter Writing PDF
ಪತ್ರ ಲೇಖನ
ದೂರವಾಣಿ. ಮಿಂಚಂಚೆ, ಗಣಕಯಂತ್ರ ಮುಂತಾದ ಆಧುನಿಕ ಸೌಲಭ್ಯಗಳಿಂದ ಪತ್ರ ಸಂಸ್ಕೃತಿ ಸ್ವಲ್ಪಮಟ್ಟಿಗೆ ದೂರವಾಗಿದೆ. ಕೈಬರೆಹದ ಪತ್ರವು ನೀಡುವ ಆತ್ಮೀಯತೆ, ಆಪ್ತತೆ ಮತ್ತು ಭಾವ ಸಂಬಂಧಿ ಸಂವೇದನೆಗಳು ಮಾಯವಾಗಿವೆ. ಪತ್ರರಚನೆಯಲ್ಲಿ ಒಂದು ಸೊಗಸಿದೆ, ಅಭಿರುಚಿಯ ಅನಾವರಣ ಇದೆ. ಶಿಸ್ತು ಇದೆ, ಆನಂದ ಇದೆ, ಸೃಜನಶೀಲತೆಗೆ ಅವಕಾಶ ಇದೆ.
ಇಂದು ಪತ್ರದ ಮೂಲಕವೇ ಹೇಳಬೇಕೆಂಬ ಅಗತ್ಯ ಏನೂ ಇಲ್ಲ, ನಿಜ. ಈ ಬದಲಾವಣೆಯನ್ನು ಒಪ್ಪಿಕೊಳ್ಳೋಣ. ಆದರೆ ಪತ್ರ ರಚನೆಯೇ ಬೇಡ ಎನ್ನುವ ಹಾಗಿಲ್ಲ. ಅರ್ಜಿ, ಬೇಡಿಕೆ, ಮನವಿ, ಮಾಹಿತಿ ಇತ್ಯಾದಿಗಳು ಕಂಪ್ಯೂಟರ್‌ನಲ್ಲಿ ಸಿದ್ದಗೊಂಡು ಸಾಮಾನ್ಯ ಅಂಚೆ, ಮಿಂಚಂಚೆ, ಫ್ಯಾಕ್ಸ್‌ಗಳ ಮೂಲಕ ರವಾನೆಯಾಗುತ್ತಿವೆ. ಆದರೆ, ಕೈಯಲ್ಲಿ ಬರೆಯಬೇಕಿಲ್ಲ ಅಷ್ಟೆ.
ನಮ್ಮ ರಾಜ್ಯದ ಆಡಳಿತ ಭಾಷೆ ಕನ್ನಡ. ಹೀಗಾಗಿ ಸರಕಾರಿ ಪತ್ರಗಳು, ಮನವಿಗಳು ಕನ್ನಡದಲ್ಲೇ ಇರಬೇಕಾಗುತ್ತದೆ. ಜನಸಾಮಾನ್ಯರ ವ್ಯವಹಾರಗಳು ಹೆಚ್ಚಾಗಿ ಕನ್ನಡದಲ್ಲೇ ಇರುವುದರಿಂದ ಕನ್ನಡದಲ್ಲಿ ಪತ್ರ ರಚಿಸುವ ಸಾಮಾನ್ಯ ಜ್ಞಾನ ನಮಗೆ ಇರಲೇಬೇಕಾಗುತ್ತದೆ.
ಕಳೆದ ತರಗತಿಗಳಲ್ಲಿ ನೀವು ಪತ್ರ ರಚನೆಯ ಸ್ವರೂಪ ಮತ್ತು ಅದರ ವಿವಿಧ ಹಂತಗಳನ್ನು ತಿಳಿದಿದ್ದೀರಿ. ಬಂಧುಗಳಿಗೆ, ಸ್ನೇಹಿತರಿಗೆ ಬರೆಯುವ ಪತ್ರದಲ್ಲಿ ಆತ್ಮೀಯತೆ ಇರುತ್ತದೆ. ಅದು ಮನಮುಟ್ಟುವಂತೆ ಇರುತ್ತದೆ. ಅಂತಹ ಪತ್ರಗಳನ್ನು ಖಾಸಗೀ ಪತ್ರಗಳು ಎಂದು ಕರೆಯುತ್ತೇವೆ.
ಮನವಿ ಪತ್ರಗಳಲ್ಲಾದರೆ ಸೌಜನ್ಯದೊಂದಿಗೆ ನಿಖರವಾದ ಮಾಹಿತಿ, ನೇರ ನಿರೂಪಣೆ. ವಸ್ತುನಿಷ್ಠತೆ ಇರುತ್ತದೆ. ತನಗೂ, ಸಾರ್ವಜನಿಕರಿಗೂ ಉಪಯೋಗವಾಗುವಂತಹ ಎಲ್ಲಾ ರೀತಿಯ ಪತ್ರಗಳನ್ನು ವ್ಯಾವಹಾರಿಕ ಪತ್ರಗಳು ಎಂದು ಕರೆಯುತ್ತೇವೆ.
ಇಲ್ಲಿ ನಿಮಗೆ ಖಾಸಗಿ ಮತ್ತು ವ್ಯಾವಹಾರಿಕ ಪತ್ರಗಳಿಗೆ ಉದಾಹರಣೆಯನ್ನು ನೀಡಲಾಗಿದೆ. ನೀವು ಅವುಗಳನ್ನು ಗಮನಿಸಿ ಪತ್ರ ಬರೆಯುವ ಕ್ರಮವನ್ನು ಅಭ್ಯಾಸ ಮಾಡಿರಿ.
ವ್ಯಾವಹಾರಿಕ ಪತ್ರ
ಇವರಿಂದ. ದಿನಾಂಕ :10-01-2025
ತನುಜ ಎಸ್. ಎಂ.
೧೦ ನೇ ತರಗತಿ,
ಸರ್ಕಾರಿ ಪ್ರೌಢಶಾಲೆ,
ಗುಬ್ಬಿಹಳ್ಳಿ, ಕಡೂರು ತಾಲ್ಲೂಕು,
ಚಿಕ್ಕಮಗಳೂರು ಜಿಲ್ಲೆ.
ಇವರಿಗೆ,
ಅಧ್ಯಕ್ಷರು.
ಗ್ರಾಮ ಪಂಚಾಯಿತಿ, ಗುಬ್ಬಿಹಳ್ಳಿ,
ಕಡೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.
ಮಾನ್ಯರೇ,
ವಿಷಯ: ನಮ್ಮ ಊರಿನ ಬೀದಿ ದೀಪಗಳನು ಸರಿಪಡಿಸುವಂತೆ ಕೋರಿ.
ವಿಷಯಕ್ಕೆ ಸಂಬಂಧಿಸಿದಂತೆ, ತಮ್ಮ ಗಮನಕ್ಕೆ ತರಬಯಸುವುದೇನೆಂದರೆ, ನಮ್ಮ ಊರಿನ ಬೀದಿ ದೀಪಗಳು ಕೆಲವು ದಿನಗಳಿಂದ ಕೆಟ್ಟುಹೋಗಿವೆ. ಇದರಿಂದ ರಸ್ತೆಯಲ್ಲಿ ರಾತ್ರಿ ಹೊತ್ತು ಮುದುಕರು. ಹೆಣ್ಣುಮಕ್ಕಳು ಹಾಗೂ ಮಕ್ಕಳು ಏಕಾಂಗಿಯಾಗಿ ಸಂಚರಿಸಲು ಭಯಪಡುವಂತಾಗಿದೆ. ಹೀಗಾಗಿ, ಜನಪರ ಕಾಳಜಿ ಹೊಂದಿರುವ ತಾವು ಈ ಕೂಡಲೇ ನಮ್ಮ ಗ್ರಾಮದ ಬೀದಿ ದೀಪಗಳನ್ನು ಸರಿಪಡಿಸಿ ಜನರಿಗಾಗುತ್ತಿರುವ ತೊಂದರೆಗಳನ್ನು ನಿವಾರಿಸಬೇಕೆಂದು ಗ್ರಾಮಸ್ಥರ ಪರವಾಗಿ ಮನವಿ ಮಾಡಿಕೊಳ್ಳುತ್ತೇನೆ.
ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ, (ತನುಜ ಎಸ್. ಎಂ.)
ಖಾಸಗಿ ಪತ್ರ
ಇವರಿಂದ, ದಿನಾಂಕ:25.06.2025
ಪ್ರೀತಿಯ ಮಮತ ಕೆ. ಎಲ್.
೧೦ ನೇ ತರಗತಿ, ‘ಬಿ’ ವಿಭಾಗ.
ವಿನಾಯಕ ಪ್ರೌಢಶಾಲೆ, ಗೌರಿಬಿದನೂರು.
ಪ್ರೀತಿಯ ತಂದೆಯವರಿಗೆ ನಿಮ್ಮ ಮಗಳು ಮಾಡುವ ನಮಸ್ಕಾರಗಳು.
ನಾನು ಇಲ್ಲಿ ಆರೋಗ್ಯವಾಗಿದ್ದೇನೆ. ನಿಮ್ಮ ಯೋಗಕ್ಷೇಮದ ವಿಚಾರವಾಗಿ ಪತ್ರವನ್ನು ಬರೆಯಿರಿ. ಇಲ್ಲಿ ಈಗ ವಿಪರೀತ ಮಳೆ ಬರುತ್ತಿದೆ. ಮಳೆಯ ವಾತಾವರಣ ತುಂಬಾ ಹರ್ಷದಾಯಕವಾಗಿದೆ. ಎಲ್ಲೆಡೆ ಹಸಿರು ಕಂಗೊಳಿಸುತ್ತಿದೆ. ಈ ನಡುವೆ ನಮ್ಮ ನಿತ್ಯದ ಶಾಲಾ ಚಟುವಟಿಕೆಗಳು ಯಾವ ತೊಂದರೆಯೂ ಇಲ್ಲದಂತೆ ನಡೆಯುತ್ತಿವೆ. ಕಳೆದ ವಾರ ಮಾಸಿಕ ಪರೀಕ್ಷೆಗಳು ನಡೆದಿದ್ದವು. ಆ ಪರೀಕ್ಷೆಯಲ್ಲಿ ನಾನು ತರಗತಿಗೆ ದ್ವಿತೀಯ ಸ್ಥಾನವನ್ನು ಪಡೆದಿದ್ದೇನೆ. ಮುಂದಿನ ಪರೀಕ್ಷೆಯಲ್ಲಿ ಇನ್ನೂ ಸ್ವಲ್ಪ ಪ್ರಯತ್ನ ಮಾಡಿದಲ್ಲಿ ನೀನು ಪ್ರಥಮ ಸ್ಥಾನವನ್ನು ಪಡೆದೇ ಪಡೆಯುತ್ತೀಯ ಎಂದು ನನ್ನ ಗುರುಗಳು ಹೇಳಿದರು. ನಾನು ಅವರ ಮಾರ್ಗದರ್ಶನದಂತೆ ವ್ಯಾಸಂಗವನ್ನು ಮಾಡಿ, ಶಾಲೆಗೆ ಹಾಗೂ ನಿಮಗೆ ಕೀರ್ತಿಯನ್ನು ತರುತೇನೆ.
೧೦ ನೇ ತರಗತಿಯ ಫಲಿತಾಂಶ ನಮ್ಮ ಮುಂದಿನ ವ್ಯಾಸಂಗಕ್ಕೆ ದಾರಿದೀಪವಾಗುವುದರಿಂದ ಶಾಲಾ ಶಿಕ್ಷಕರು ತುಂಬಾ ಕಾಳಜಿವಹಿಸಿ ಪಾಠಗಳನ್ನು ಮಾಡುತ್ತಿದ್ದಾರೆ. ನಾವೂ ಕೂಡ ಶ್ರದ್ದೆವಹಿಸಿ ಕಲಿಯುತ್ತಿದ್ದೇವೆ. ಒಳ್ಳೆಯ ಶಾಲೆ ಹಾಗೂ ಗುರುಗಳನ್ನು ಪಡೆದ ನಾವು ನಿಜಕ್ಕೂ ಧನ್ಯರು.
ಮನೆಯಲ್ಲಿ ನನ್ನ ಪ್ರೀತಿಯ ಅಮ್ಮ ಮತ್ತು ಅಣ್ಣನಿಗೆ ನನ್ನ ನಮಸ್ಕಾರಗಳನ್ನು ತಿಳಿಸಿರಿ.
ನಿಮ್ಮ ಪ್ರೀತಿಯ
(ಮಮತ ಕೆ. ಎಲ್.)
ಇವರಿಗೆ,
ಶ್ರೀ ಬಸವರಾಜ ಕೆ. ಎಲ್.
ಮನೆ ನಂ – ೧೧೯೯. ಬನಶಂಕರಿ ನಿಲಯ,
ರಾಜಕುಮಾರ್ ರಸ್ತೆ, ತುಮಕೂರು.