2nd PUC Kannada Chapter 15

2nd PUC Kannada Question and Answer – Ayke Ide Namma Kaiyalli

Looking for 2nd PUC Kannada textbook answers? You can download Chapter 15: Ayke Ide Namma Kaiyalli Questions and Answers PDF, Notes, and Summary here. 2nd PUC Kannada Gadyabhaga solutions follow the Karnataka State Board Syllabus, making it easier for students to revise and score higher in exams.

Karnataka 2nd PUC Kannada Textbook Answers—Reflections Chapter 15

Ayke Ide Namma Kaiyalli Questions and Answers, Notes, and Summary

2nd PUC Kannada Gadyabhaga Chapter 15

ಆಯ್ಕೆಯಿದೆ ನಮ್ಮ ಕೆೈಯಲ

Ayke Ide Namma Kaiyalli

2nd PUC Kannada Chapter 15 Ayke Ide Namma Kaiyalli
Scroll Down to Download Ayke Ide Namma Kaiyalli PDF
I. ಒಂದು ಅಂಕದ ಪ್ರಶ್ನೆಗಳು:

Question 1.
ಲೇಖಕಿಗೆ ಯಾವಾಗ ರೇಗಿ ಹೋಗುತ್ತಿತ್ತು?
Answer:
‘ಏನ್ ಮಾಡೋಕಾಗುತ್ತೆ ಎಲ್ಲಾ ಹಣೆ ಬರಹ, ಆಗೋದು ಆಗೇ ಆಗುತ್ತೆ’ ಎಂದು ಯಾರಾದರೂ ಹೇಳಿದರೆ ಲೇಖಕಿಗೆ ರೇಗಿ ಹೋಗುತ್ತಿತ್ತು.

Question 2.
ಲೇಖಕಿಯ ಪತಿ ಯಾವ ತೊಂದರೆಯಿಂದ ಬಳಲಿದರು?
Answer:
ಲೇಖಕಿಯ ಪತಿ ಮೂತ್ರಪಿಂಡದ ಕಲ್ಲಿನ ತೊಂದರೆಯಿಂದ ಬಳಲಿದರು.

Question 3.
‘ಕಿಡ್ನಿಸ್ಟೋನ್’ ಬಗ್ಗೆ ತಿಳಿಯಲು ಲೇಖಕಿ ಯಾರನ್ನು ಭೇಟಿ ಮಾಡಿದರು?
Answer:
‘ಕಿಡ್ನಿಸ್ಟೋನ್’ ಬಗ್ಗೆ ತಿಳಿಯಲು ಲೇಖಕಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೂಲೆಮನೆ ಮುದ್ದೇಗೌಡರು ಮತ್ತು ಕಮಲಮ್ಮನವರನ್ನು ಭೇಟಿ ಮಾಡಿದರು.

Question 4.
ಲೇಖಕಿಯ ಪತಿಯನ್ನು ಸೋನಗ್ರಫಿ ರೂಮಿಗೆ ಕರೆದೊಯ್ದುದೇಕೆ?
Answer:
ಮೂತ್ರಪಿಂಡದಲ್ಲಿನ ಕಲ್ಲು ಇರುವ ಸ್ಥಳವನ್ನು ಬದಲಿಸಿದೆಯೇ ಎಂದು ತಿಳಿದುಕೊಳ್ಳಲು ಲೇಖಕಿಯ ಪತಿಯನ್ನು ಸೋನಗ್ರಫಿ ಕರೆದೊಯ್ಯಲಾಯಿತು.

Question 5.
ಅದೃಷ್ಟದ ಪ್ರಶ್ನೆ ಬಂದಾಗ ಲೇಖಕಿಗೆ ಯಾರು ನೆನಪಾಗುತ್ತಾರೆ?
Answer:
ಅದೃಷ್ಟದ ಪ್ರಶ್ನೆ ಬಂದಾಗ ಲೇಖಕಿಗೆ ತಮ್ಮ ಹೈಸ್ಕೂಲ್ ಸಹಪಾಠಿ ಸೀತಾ ನೆನಪಾಗುತ್ತಾರೆ.

Question 6.
ದುರಾಸೆಯ ಹುಡುಗನನ್ನು ನಿರಾಕರಿಸಿದವರು ಯಾರು?
Answer:
ದುರಾಸೆಯ ಹುಡುಗನನ್ನು ನಿರಾಕರಿಸಿದವರು ನಿಶಾ ಶರ್ಮ.

II. ಎರಡು ಅಂಕಗಳ ಪ್ರಶ್ನೆಗಳು:

Question 1.
ಯಾವ ಉತ್ತರಗಳಿಂದ ಲೇಖಕಿಗೆ ತೃಪ್ತಿಯಾಗಲಿಲ್ಲ?
Answer:
ಲೇಖಕಿಗೆ ಕಿಡ್ನಿಸ್ಟೋನ್ ಯಾಕಾಗುತ್ತೆ ಎಂದು ತಿಳಿದುಕೊಳ್ಳುವ ಕುತೂಹಲವಿತ್ತು. ಅದಕ್ಕಾಗಿ ಅವರು ಕೆಲವರಲ್ಲಿ ಕಿಡ್ನಿಸ್ಟೋನಿನ ಬಗ್ಗೆ ವಿಚಾರಿಸಿ ಅಭಿಪ್ರಾಯ ಕಲೆಹಾಕಲು ಮುಂದಾದರು. ‘ಅಯ್ಯೋ ಈ ಕಿಡ್ನಿಸ್ಟೋನ್ ಕೆಲವರಿಗೆ ಆಗುತ್ತೆ. ಕೆಲವರಿಗೆ ಇಲ್ಲ ಅವರವರ ಅದೃಷ್ಟ’ ಎಂಬಂಥ ಉತ್ತರಗಳು ತೃಪ್ತಿಯಾಗಲಿಲ್ಲ.

Question 2.
ಕಮಲ ಮೇಡಂ ವೈದ್ಯರ ಯಾವ ಸಲಹೆಯನ್ನು ರೂಢಿಸಿಕೊಂಡರು?
Answer:
ಶೌಚಾಲಯದ ಸಮಸ್ಯೆಯಿಂದ ಜಲಬಾಧೆ ತಡೆದುಕೊಂಡ ಪರಿಣಾಮವಾಗಿ ಎದುರು ಮನೆಯ ಕಮಲ ಮೇಡಂಗೆ ಕಿಡ್ನಿಸ್ಟೋನ್ ಆಗಿತ್ತು. ವೈದ್ಯರ ಬಳಿಗೆ ಹೋಗಿ ಅವರ ಸಲಹೆಯಂತೆ ಯಥೇಚ್ಚವಾಗಿ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರು. ವೈದ್ಯರು ಹೇಳಿದ್ದ ಕೆಲವು ಆಹಾರದ ಬದಲಾವಣೆಗಳನ್ನೂ ಜಾರಿಗೆ ತಂದರು. ವೈದ್ಯರ ಸಲಹೆಯನ್ನು ರೂಢಿಸಿಕೊಂಡ ಕಾರಣ ಕಳೆದ ಇಪ್ಪತ್ತು ವರ್ಷಗಳಲ್ಲಿ ಮತ್ತೆ ಅವರಿಗೆ ಮೂತ್ರಪಿಂಡದ ಕಲ್ಲು ಕಾಣಿಸಿರಲಿಲ್ಲ.

Question 3.
ಮುದ್ದೇಗೌಡರು ಪಥ್ಯದ ವಿಚಾರವಾಗಿ ಹೊಂದಿದ್ದ ನಿಲುವು ಯಾವುದು?
Answer:
ಮುದ್ದೇಗೌಡರು ಪಥ್ಯದ ವಿಚಾರದಲ್ಲಿ ಉದಾಸೀನದಿಂದಿದ್ದರು. ಲೇಖಕಿ ಕೇಳಿದಾಗ ‘ಅಯ್ಯೋ ಅದೆಲ್ಲಾ ಪಥ್ಯ ಯಾರು ಮಾಡೋಕೆ ಆಗುತ್ತೆ? ಬಾಡು ತಿನೋಡಿ, ಹಾಲಿನ ಪದಾರ್ಥಗಳನ್ನು ಜಾಸ್ತಿ ಸೇವಸಬೇಡಿ, ಸದಾ ನೀರು ಕುಡೀರಿ ಅಂತಾರೆ, ಅದೆಲ್ಲಾ ಆಗೋ ಮಾತಲ್ಲ ಬಿಡಿ’ ಎಂದು ತಲೆ ಕೊಡವಿದರು.

Question 4.
ಸೀತಾಳ ಓದುವ ಆಸಕ್ತಿ ಹೇಗಿತ್ತು?
Answer:
ಸೀತಾಳಿಗೆ ಓದಿನಲ್ಲಿ ಆಸಕ್ತಿ ಇರಲಿಲ್ಲ. ಎಸ್.ಎಸ್.ಎಲ್.ಸಿಯಲ್ಲಿ ಎಲ್ಲಾ ವಿಷಯದಲ್ಲೂ ಫೇಲ್ ಆದಳು. ಮತ್ತೊಮ್ಮೆ ಪರೀಕ್ಷೆ ಕಟ್ಟುವ ತಾಪತ್ರಯಕ್ಕೇ ಹೋಗಲಿಲ್ಲ. ಸದಾ ಯಾರಾದರೂ ಗೆಳತಿಯನ್ನು ಜೊತೆ ಮಾಡಿಕೊಂಡು ಮಾರ್ಕೆಟ್, ಸಿನೆಮಾ ಎಂದು ಸುತ್ತಾಡುತ್ತಿದ್ದಳು.

Question 5.
ಸೀತಾಳ ಬಯಕೆ, ನಂಬಿಕೆಗಳು ಹೇಗಿದ್ದವು?
Answer:
ಸೀತಾ ಕಷ್ಟ ಪಡುವವಳಲ್ಲ. ಎಲ್ಲವೂ ತಟ್ಟನೆ ಸರಿಹೋಗಿ ಬಿಡಬೇಕು ಎಂದು ಬಯಸುತ್ತಿದ್ದಳು. ಕೈ ತುಂಬಾ ಸಂಪಾದಿಸಿ ತಂದು ಹಾಕಿ ಹೆಂಡ್ತಿನಾ ಚೆನ್ನಾಗಿ ಇಟ್ಟುಕೊಳ್ಳುವುದು ಗಂಡನ ಜವಾಬ್ದಾರಿ ಎಂದು ಬಲವಾಗಿ ನಂಬಿದ್ದ ಸೀತಾ ತನ್ನ ಕಿರುಬೆರಳನ್ನು ಎತ್ತಲು ಸಿದ್ಧವಿರಲಿಲ್ಲ.

Question 6.
ತಾನು ಅದೃಷ್ಟವಂತೆಯೆಂದು ಲೇಖಕಿ ಭಾವಿಸಲು ಕಾರಣವೇನು?
Answer:
ಒಂದು ದಿನ ನಿರೂಪಕಿಯ ಮನೆಗೆ ಬಂದ ಸೀತಾ ನಿರೂಪಕಿಯಲ್ಲಿ ‘ನೀನು ಬಿಡೆ ತುಂಬಾ ಅದೃಷ್ಟವಂತೆ ಎಂದು ಹಲುಬಿದಳು. ಆಗ ನಿರೂಪಕಿಯವರು ಖಂಡಿತಾ ನಾನು ಅದೃಷ್ಟವಂತೆ ಕಣೆ. ನಮ್ಮ ಭಾರತದಲ್ಲಿ ಎಷ್ಟು ಜನ ಹೆಣ್ಣು ಮಕ್ಕಳಿಗೆ ಓದೋ ಅವಕಾಶ ಸಿಗುತ್ತೆ ಹೇಳು. ವಿದ್ಯಾವಂತರ ಕುಟುಂಬದಲ್ಲಿ ಹುಟ್ಟಿದೆನಲ್ಲಾ ಅದು ನನ್ನ ಅದೃಷ್ಟ ಎಷ್ಟು ಬೇಕಾದರೂ ಓದಿಸ್ತೇನೆ ಅಂದ ಅಪ್ಪ ಇದ್ದಾರಲ್ಲ ಅದು ನನ್ನ ಅದೃಷ್ಟ ಎನ್ನುತ್ತಾರೆ.

III. ಸಾಂದರ್ಭಿಕ ವಿವರಣೆ ಬಯಸುವ ವಾಕ್ಯಗಳು

Question 1.
‘ಅದೃಷ್ಟವನ್ನೇ’ ಅವಲಂಬಿಸಿ ಬದುಕಲು ಸಾಧ್ಯವೇ?

Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ‘ಶ್ರೀಮತಿ ನೇಮಿಚಂದ್ರ’ರವರು ಬರೆದ ‘ಬದುಕು ಬದಲಿಸಬಹುದು’ ಎಂಬ ಕೃತಿಯಿಂದ ಆಯ್ದ ‘ಆಯ್ಕೆಯಿದೆ ನಮ್ಮ ಕೈಯಲ್ಲಿ’ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಲೇಖಕಿ ನೇಮಿಚಂದ್ರರವರು ಅದೃಷ್ಟವನ್ನೇ ಅವಲಂಬಿಸಿ ಬದುಕುವುದು ಸರಿಯಲ್ಲ ಎನ್ನುವಾಗ ಹೇಳುವ ಮಾತು ಇದಾಗಿದೆ.
ವಿವರಣೆ: ನೇಮಿಚಂದ್ರರವರು ಅದೃಷ್ಟವನ್ನೇ ಅವಲಂಬಿಸಿ ಬದುಕುವವರ ಕುರಿತು ಸಿಟ್ಟನ್ನು ವ್ಯಕ್ತಪಡಿಸುತ್ತಾರೆ. ಕೆಲವರನ್ನು ಅವರ ಜೀವನದ ಕುರಿತು ವಿಚಾರಿಸುವಾಗ ‘ಏನ್ ಮಾಡೋಕಾಗುತ್ತೆ ಎಲ್ಲಾ ಹಣೆ ಬರಹ, ಆಗೋದು ಆಗೇ ಆಗುತ್ತೆ’ ಎನ್ನುತ್ತಾರೆ. ಹಾಗೆ ಹೇಳುವವರ ಬಗ್ಗೆ ಲೇಖಕಿ ಪ್ರತಿಕ್ರಿಯಿಸುತ್ತಾ, ನಿಜ ಕೆಲವೊಮ್ಮೆ ಆಗುವುದನ್ನು ತಡೆಯಲು ಆಗದಿರಬಹುದು. ಆದರೆ ಪ್ರಯತ್ನಿಸಬಹುದಲ್ಲ ಎನ್ನುತ್ತಾ ಈ ಮೇಲಿನಂತೆ ಹೇಳುತ್ತಾರೆ.

Question 2.
ಮತ್ತೆ ಅವರಿಗೆ ಮೂತ್ರಪಿಂಡದ ಕಲ್ಲು ಕಾಣಿಸಿರಲಿಲ್ಲ.

Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ‘ಶ್ರೀಮತಿ ನೇಮಿಚಂದ್ರರವರು ಬರೆದ ‘ಬದುಕು ಬದಲಿಸಬಹುದು’ ಎಂಬ ಕೃತಿಯಿಂದ ಆಯ್ದ ‘ಆಯ್ಕೆಯಿದೆ ನಮ್ಮ ಕೈಯಲ್ಲಿ’ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಕಿಡ್ನಿಸ್ಟೋನ್‌ನಿಂದ ಬಳಲಿ ಗುಣಮುಖರಾದ ಕಮಲ ಮೇಡಂ ಕುರಿತು ಲೇಖಕಿ ವಿವರಿಸುವ ಸಂದರ್ಭ ಇದು.
ವಿವರಣೆ: ಕಮಲಮ್ಮ ಮೇಡಂ ಹೋಗುತ್ತಿದ್ದ ಶಾಲೆಯಲ್ಲಿ ಶೌಚಾಲಯವಿರಲಿಲ್ಲ. ನೀರು ಜಾಸ್ತಿ ಕುಡಿದು ಜಲಬಾಧೆಯ ಸಮಸ್ಯೆ ಎದುರಾಗಬಾರದು ಎಂದು ಆಕೆ ನೀರು ಕುಡಿಯುವುದನ್ನೇ ಕಡಿಮೆ ಮಾಡಿದ್ದರು. ಒಂದು ದಿನ ಅವರು ಹೆರಿಗೆ ನೋವಿಗಿಂತ ತೀವ್ರವಾದ ನೋವಿಗೆ ತುತ್ತಾದರು. ವೈದ್ಯರ ಸಲಹೆಯಂತೆ ಯಥೇಚ್ಚವಾಗಿ ನೀರು ಕುಡಿಯುವ ಅಭ್ಯಾಸ ಮಾಡಿದರು. ವೈದ್ಯರು ಹೇಳಿದ್ದ ಕೆಲವು ಆಹಾರದ ಬದಲಾವಣೆಗಳನ್ನೂ ಜಾರಿಗೆ ತಂದರು. ಕಳೆದ ಇಪ್ಪತ್ತು ವರ್ಷಗಳಲ್ಲಿ ಮತ್ತೆ ಅವರಿಗೆ ಮೂತ್ರಪಿಂಡದಲ್ಲಿ ಕಲ್ಲು ಕಾಣಿಸಲಿಲ್ಲ ಎಂದು ಲೇಖಕರು ಹೇಳುವಾಗ ಈ ಮಾತು ಬಂದಿದೆ.

Question 3.
ನೋಡು ನಿನ್ನ ಎದುರು ಎರಡು ಆಯ್ಕೆಗಳಿವೆ.

Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ‘ಶ್ರೀಮತಿ ನೇಮಿಚಂದ್ರ’ರವರು ಬರೆದ ‘ಬದುಕು ಬದಲಿಸಬಹುದು’ ಎಂಬ ಕೃತಿಯಿಂದ ಆಯ್ದ ‘ಆಯ್ಕೆಯಿದೆ ನಮ್ಮ ಕೈಯಲ್ಲಿ’ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಲೇಖಕಿ ನೇಮಿಚಂದ್ರರವರು ತನ್ನ ಪತಿ ಕೀರ್ತಿಗೆ ಹೇಳುತ್ತಾರೆ.
ವಿವರಣೆ: ಲೇಖಕಿ ನೇಮಿಚಂದ್ರರವರು ಪತಿ ಕೀರ್ತಿಯಲ್ಲಿ ಕಂಡು ಬಂದ ಕಿಡ್ನಿಸೋನ್ ಯಾಕಾಗುತ್ತದೆ ಎಂದು ತಿಳಿಯುವ ಕುತೂಹಲ ಹೊಂದಿದ್ದರು. ಈ ಕುರಿತಂತೆ ಅಕ್ಕಪಕ್ಕ ಮನೆಯವರಲ್ಲಿ ಯಾರಿಗಾದರೂ ಆಗಿದೆಯೇ ವಿಚಾರಿಸಲು ಮುಂದಾದರು. ಎದುರು ಮನೆಯ ಕಮಲ ಮೇಡಂ ಮತ್ತು ಮೂಲೆ ಮನೆ ಮುದ್ದೇಗೌಡರನ್ನು ಭೇಟಿಮಾಡಿ ಕಾರಣ ತಿಳಿದುಕೊಂಡರು. ಆದರೆ ಇಬ್ಬರೂ ಕೂಡ ಕಿಡ್ನಿಸ್ಟೋನ್‌ಗೆ ಕಂಡುಕೊಂಡ ಪರಿಹಾರ ಬೇರೆ ಬೇರೆಯಾಗಿತ್ತು. ನಂತರ ಕೀರ್ತಿಯ ಬಳಿ ಬಂದು ಇಬ್ಬರ ವಿಷಯ ತಿಳಿಸುವ ಸಂದರ್ಭದಲ್ಲಿ ಈ ಮೇಲಿನಂತೆ ಹೇಳುತ್ತಾರೆ.

Question 4.
ಈ ಅದೃಷ್ಟ ನಿನಗೂ ಇತ್ತಲ್ಲೆ?

Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ‘ಶ್ರೀಮತಿ ನೇಮಿಚಂದ್ರರವರು ಬರೆದ ‘ಬದುಕು ಬದಲಿಸಬಹುದು’ ಎಂಬ ಕೃತಿಯಿಂದ ಆಯ್ದ ‘ಆಯ್ಕೆಯಿದೆ ನಮ್ಮ ಕೈಯಲ್ಲಿ’ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಲೇಖಕಿ ನೇಮಿಚಂದ್ರರವರು ಗೆಳತಿ ಸೀತಾ ಹತ್ತಿರ ಹೇಳುತ್ತಾರೆ.
ವಿವರಣೆ: ಲೇಖಕಿ ನೇಮಿಚಂದ್ರ ಸಂಶೋಧನೆ ಮುಗಿಸಿ ಬೆಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡರು, ಬಾಡಿಗೆ ಮನೆಯಲ್ಲಿ ರೋಸಿಹೋಗಿ, ಬ್ಯಾಂಕ್‌ನಿಂದ ಸಾಲ ಪಡೆದು ಸಣ್ಣ ಫ್ಲಾಟ್ ಕೂಡ ಕೊಂಡುಕೊಂಡಿದ್ದರು. ಒಮ್ಮೆ ಸೀತಾ ಅವರ ಮನೆಗೆ ಬಂದಾಗ ನೀನು ಬಿಡೆ ತುಂಬಾ ಅದೃಷ್ಟವಂತೆ ಎಂದು ಹಲುಬಿದಳು. ಅದಕ್ಕೆ ಲೇಖಕಿಯವರು ಖಂಡಿತ ನಾನು ಅದೃಷ್ಟವಂತೆ ಭಾರತದಲ್ಲಿ ಹೆಚ್ಚಿನ ಹೆಣ್ಣು ಮಕ್ಕಳಿಗೆ ಓದುವ ಅವಕಾಶವಿಲ್ಲ. ಆದರೆ ನನಗೆ ಆ ಅವಕಾಶ ದೊರೆತಿದೆ. ಎಷ್ಟು ಬೇಕಾದರೂ ಓದಿಸುತ್ತೇನೆ ಎನ್ನುವ ತಂದೆ ಇದ್ದಾರೆ. ಇವೆಲ್ಲ ನನ್ನ ಅದೃಷ್ಟ ಎನ್ನುತ್ತಾ ಸೀತಾಳನ್ನು ಉದ್ದೇಶಿಸಿ ಮರು ಪ್ರಶ್ನಿಸುವಾಗ ಈ ಮೇಲಿನ ಮಾತು ಬಂದಿದೆ.

Question 5.
ಮುಂಬಯಿಯ ಪ್ರಸಿದ್ದ ನ್ಯಾಯವಾದಿಯಾದರು?

Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ‘ಶ್ರೀಮತಿ ನೇಮಿಚಂದ್ರರವರು ಬರೆದ ‘ಬದುಕು ಬದಲಿಸಬಹುದು’ ಎಂಬ ಕೃತಿಯಿಂದ ಆಯ್ದ ‘ಆಯ್ಕೆಯಿದೆ ನಮ್ಮ ಕೈಯಲ್ಲಿ’ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಲೇಖಕಿ ನೇಮಿಚಂದ್ರರವರು ಕಷ್ಟದ ಬದುಕಿನಲ್ಲೂ, ತನ್ನ ಹಠದಿಂದ ಮತ್ತೆ ಓದಿ ಪಸಿದ್ಧ ನ್ಯಾಯವಾದಿಯಾದ ಪ್ಲೇವಿಯಾರವರ ಕುರಿತು ಹೇಳುವ ಮಾತು ಇದಾಗಿದೆ.
ವಿವರಣೆ: ಬದುಕು ಸದಾ ಅದೃಷ್ಟಗಳನ್ನು ನಮ್ಮತ್ತ ಎಸೆಯದಿದ್ದರೂ, ನಮ್ಮೆದುರು ನೂರು ಸಾವಿರ ಅವಕಾಶಗಳನ್ನು ತೆರೆದಿಡುತ್ತದೆ ಎನ್ನುವ ಲೇಖಕಿಯು, ಅಂತಹ ಅವಕಾಶಗಳನ್ನು ಉಪಯೋಗಿಸಿಕೊಂಡು ಬದುಕಿನಲ್ಲಿ ಮೇಲೆ ಬಂದ ಪ್ಲೇವಿಯಾ ಬಗ್ಗೆ ಹೆಮ್ಮೆ ಪಡುತ್ತಾರೆ. ಪ್ಲೇವಿಯಾ ಓದಿದ್ದು ಕೇವಲ ಹತ್ತನೆ ತರಗತಿ ಮಾತ್ರ. ಮದುವೆಯಾದ ಪ್ಲೇವಿಯಾಗೆ ಮೂರು ಮಕ್ಕಳು, ಜೊತೆಯಲ್ಲಿ ಗಂಡ ಕೆಟ್ಟವನು. ಇಷ್ಟೇ ಅಲ್ಲದೆ ಆಕೆಯ ಮನೆಯಲ್ಲಿಯೂ ಹೇಳಿಕೊಳ್ಳುವಂತಹ ಯಾವ ಆಸ್ತಿಯೂ ಇರಲಿಲ್ಲ. ಆದರೆ ಆಕೆ ಎದುರು ಆಯ್ಕೆಗಳಿದ್ದವು. ತನ್ನ ಆ ದುಃಸ್ಥಿತಿಯ ಸಂದರ್ಭದಲ್ಲಿಯೂ, ನಲವತ್ತರ ವಯಸ್ಸಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿದ ಪ್ಲೇವಿಯಾ ಮುಂಬಯಿಯ ನ್ಯಾಯವಾದಿಯಾದರು ಎನ್ನುವುದನ್ನು ಲೇಖಕಿ ವಿವರಿಸುತ್ತಾರೆ.

IV. ನಾಲ್ಕು ಅಂಕಗಳ ಪ್ರಶ್ನೆಗಳು:

Question 1 .
ರಜೆಗೆಂದು ಮೈಸೂರಿಗೆ ಹೋದಾಗ ಲೇಖಕಿಯ ಪತಿಗಾದ ತೊಂದರೆಯೇನು?

Answer:
ಲೇಖಕಿಯು ನಾಲ್ಕು ವರ್ಷಗಳ ಹಿಂದೆ ರಜೆಗೆಂದು ತಮ್ಮ ಕುಟುಂಬ ಸಮೇತರಾಗಿ ಮೈಸೂರಿನಲ್ಲಿರುವ ತನ್ನ ಅಮ್ಮನ ಮನೆಗೆ ಹೋಗಿದ್ದರು. ಆ ರಾತ್ರಿ ಇದ್ದಕಿದ್ದಂತೆ ಲೇಖಕಿಯ ಪತಿ ಕೀರ್ತಿಗೆ ಎಲ್ಲಿಲ್ಲದ ಕೆಳಹೊಟ್ಟೆಯ ನೋವು ಕಾಣಿಸಿಕೊಂಡಿತು. ಅದೆಲ್ಲೋ ಬೆನ್ನ ಹಿಂಬದಿಯಲ್ಲಿ ಹುಟ್ಟಿದ ನೋವು, ಕಿಬ್ಬೊಟ್ಟೆಯವರೆಗೂ ವ್ಯಾಪಿಸಿ ಕೀರ್ತಿ ನೋವಿನಿಂದ ಒದ್ದಾಡ ತೊಡಗಿದರು. ಕೂಡಲೇ ಮಿಶನ್ ಆಸ್ಪತ್ರೆಗೂ ಕೂಡ ಸೇರಿಸಲಾಯಿತು.

ಸೋನೋಗ್ರಫಿ ಎಂಬ ತಪಾಸಣೆಯನ್ನು ಮಾಡಿದರು. ಆಗ 8 ಮಿ.ಮೀ ಉದ್ದದ ಕಲ್ಲು ಮೂತ್ರಪಿಂಡದಲ್ಲಿ ಇರುವುದು ಖಚಿತವಾಯಿತು. ಅಲ್ಲದೆ ಎರಡು ದಿನದ ಅನಂತರ ಶಸ್ತ್ರಚಿಕಿತ್ಸೆಗೂ ಕೂಡ ದಿನಾಂಕ ನಿಗದಿಯಾಯಿತು. ನೋವು ಕಡಿಮೆ ಮಾಡಲು ಮಾತ್ರೆಯನ್ನು ಕೊಟ್ಟು ಕಳುಹಿಸಿದರು. ಹೀಗೆ ರಜೆಗೆಂದು ಹೋದ ಲೇಖಕಿಯವರು ಪತಿಗೆ ಕಾಣಿಸಿಕೊಂಡ ನೋವಿನಿಂದ ತೊಂದರೆ ಅನುಭವಿಸುವಂತಾಯಿತು.

Question 2.
ಕಮಲಾ ಮೇಡಂಗೆ ಮೂತ್ರಪಿಂಡದಲ್ಲಿ ಕಲ್ಲು ಮೂಡಿದ್ದೇಕೆ?

Answer:
ಕಿಡ್ನಿಸ್ಟೋನ್ ಯಾಕಾಗುತ್ತೆ ಎಂದು ತಿಳಿಯಲು ಹೊರಟ ಲೇಖಕಿಯವರು ಈ ಕುರಿತಂತೆ ಅಕ್ಕಪಕ್ಕದಲ್ಲಿ ವಿಚಾರಿಸಿದರು. ಎದುರು ಮನೆಯ ಕಮಲ ಮೇಡಂ ಕಿಡ್ನಿಸ್ಟೋನ್ ಆಗಿತ್ತು ಎಂದು ತಿಳಿದು ಅವರ ಮನೆಗೆ ಹೋದರು. ಸಾಮಾನ್ಯವಾಗಿ ಗಂಡಸರಲ್ಲಿ ಮೂತ್ರಪಿಂಡದ ಕಲ್ಲುಗಳು ಹೆಚ್ಚು ಕಾಣಿಸಿಕೊಳ್ಳುವುದನ್ನು ನೋಡಿದ್ದೆ, ನಿಮಗೆ ಹೇಗೆ ಬಂತು ಮೇಡಂ? ಎಂದು ಕೇಳಿದರು. ಆಗ ಲೇಖಕಿಗೆ ಕೆಲವು ವಿಚಾರಗಳು ಮನವರಿಕೆಯಾದವು. ಕಮಲಮ್ಮ ಮೇಡಂ ರವರ ಶಾಲೆಯಲ್ಲಿ ಮಹಿಳೆಯರಿಗೆ ಶೌಚಾಲಯವಿರಲಿಲ್ಲ.

ಹಾಗಾಗಿ ಬೆಳಿಗ್ಗೆ ಮನೆಯಿಂದ ಹೊರಟರೆ ಮತ್ತೆ ಸಂಜೆ ಹಿಂದಿರುಗಿ ಬರುವವರೆಗೂ ಜಲಬಾಧೆಯನ್ನು ತಡೆದುಕೊಳ್ಳದೆ ಬೇರೆ ದಾರಿ ಇರಲಿಲ್ಲ. ನೀರು ಕುಡಿದರೆ ಶೌಚಾಲಕ್ಕೆ ಹೋಗಬೇಕಾಗುತ್ತದೆ ಎಂದು ಈ ಮಹಿಳೆ ದಿನವೆಲ್ಲ ನೀರು ಕುಡಿಯುವುದನ್ನೇ ಬಿಟ್ಟಿದ್ದರು. ಒಂದು ದಿನ ಹೆರಿಗೆ ನೋವನ್ನು ಮೀರಿಸಿದ ನೋವಿನಿಂದ ಬೊಬ್ಬೆಯಿಟ್ಟು ವದ್ಯರಲ್ಲಿ ಪರಿಶೀಲಿಸಿದಾಗ ಮೂತ್ರಪಿಂಡಗಳಲ್ಲಿ ಕಲ್ಲಿರುವುದು ತಿಳಿದು ಬಂತು. ನೀರು ಕಡಿಮೆ ಕುಡಿದ ಕಾರಣಕ್ಕಾಗಿಯೇ ಕಮಲ ಮೇಡಂಗೆ ಮೂತ್ರಪಿಂಡದಲ್ಲಿ ಕಲ್ಲು ಕಾಣಿಸಿತ್ತು.

Question 3.
ಲೇಖಕಿಯ ಪತಿಯ ಮೂತ್ರಪಿಂಡದ ಕಲ್ಲು ಕರಗಿಹೋಗಿದ್ದು ಹೇಗೆ?

Answer:
ಲೇಖಕಿಯು ಕಮಲಮ್ಮ ಮೇಡಂ ಮತ್ತು ಮುದ್ದೇಗೌಡರನ್ನು ಭೇಟಿ ಮಾಡಿ ಇಬ್ಬರಲ್ಲೂ ಕಾಣಿಸಿಕೊಂಡ ಕಿಡ್ನಿಸ್ಟೋನ್ ಮತ್ತು ಇಬ್ಬರೂ ಕಂಡುಕೊಂಡ ಪರಿಹಾರ ಮಾರ್ಗವನ್ನು ತಿಳಿದುಕೊಂಡು ಮರಳಿ ಮನೆಗೆ ಬಂದರು. ಬಂದು ತನ್ನ ಪತಿ ಕೀರ್ತಿಗೆ ಹೀಗೆ ಹೇಳಿದರು. ನೋಡು ನಿನ್ನ ಎದುರು ಎರಡು ಆಯ್ಕೆಗಳಿವೆ. ಏನೂ ಮಾಡದೆ ಮುದ್ದೇಗೌಡರ ತರಹ ಎರಡೆರಡು ವರ್ಷಕ್ಕೆ ಆಪರೇಷನ್ ಮಾಡಿಸಿಕೊಳ್ಳೋದು.

ಇಲ್ಲ ಕಮಲಮ್ಮ ಮೇಡಂ ತರಹ ಇನ್ನು ಮೇಲೆ ಚೆನ್ನಾಗಿ ನೀರು ಕುಡಿಯೋದು. ನೀರು, ಎಳನೀರು, ಬಾರ್ಲಿ ವಾಟರ್ ಜಾಸ್ತಿ ಸೇವಿಸುವಂತೆ ಹೇಳುತ್ತಾ, ಮೊಳದುದ್ದ ಪಂಜಾಬಿ ಲೋಟದಲ್ಲಿ ಹಾಲನ್ನು ಕುಡಿಯುವುದನ್ನು ಕಡಿಮೆ ಮಾಡುವಂತೆ ಹೇಳಿದಳು. ಆರಂಭದಲ್ಲಿ ಲೇಖಕಿಯ ಸಲಹೆಗಳನ್ನು ಆಕೆಯ ಪತಿ ನಿರಾಕರಿಸಿದರೂ ನಿಧಾನವಾಗಿ ನೀರಿನ ಅಂಶದ ವಸ್ತುಗಳನ್ನು ದಿನದಿಂದ ದಿನಕ್ಕೆ ಹೆಚ್ಚು ಸೇವಿಸುತ್ತಾ ಬಂದರು. ಎರಡು ದಿನ ನೀರು ಕುಡಿದೂ ಕುಡಿದೂ ನೀರಿನಲ್ಲಿ ಕೀರ್ತಿ ತೇಲಿ ಮುಳುಗಿದ್ದರು. ಅಂತು ಆಪರೇಷನ್ ದಿನ ಬಂತು. ಮತ್ತೊಮ್ಮೆ ಕಲ್ಲು ಇರುವ ಜಾಗವೇನಾದರೂ ಸರಿದಿದೆಯೇ ಎಂದು ಸೋನೋಗ್ರಫಿ ಕೋಣೆಗೆ ಕರೆದೊಯ್ದಾಗ ಅಲ್ಲಿ ಕಲ್ಲಿನ ಪತ್ತೆಯೇ ಇರಲಿಲ್ಲ. ಕಲ್ಲು ಕೀರ್ತಿ ಕುಡಿದ ನೀರಿಗೆ ಎಲ್ಲೋ ಜಾರಿ ಹೋಗಿತ್ತು.

Question 4.
ಸೀತಾ ಎಂಬ ಗೆಳತಿಯ ಗುಣ-ಸ್ವಭಾವವನ್ನು ಲೇಖಕಿ ಹೇಗೆ ಚಿತ್ರಿಸಿದ್ದಾರೆ?

Answer:
ಲೇಖಕಿಗೆ ಆದೃಷ್ಟ-ಆಯ್ಕೆ ಪ್ರಶ್ನೆ ಬಂದಾಗ ತನ್ನ ಹೈಸ್ಕೂಲು ಗೆಳತಿ ಸೀತಾ ನೆನೆಪಿಗೆ ಬರುತ್ತಾಳೆ. ಇಬ್ಬರ ತಂದೆ ಕೂಡ ಕಾಲೇಜು ಪ್ರಾಧ್ಯಾಪಕರಾಗಿದ್ದರು. ಎರಡು ಮನೆಯವರ ನಡುವೆ ಒಳ್ಳೆ ಸ್ನೇಹವೂ ಇತ್ತು. ಇಬ್ಬರ ಮನೆಯಲ್ಲೂ ಗಂಡು-ಹೆಣ್ಣು ಭೇದವಿಲ್ಲದೆ ಎಷ್ಟು ಬೇಕಾದರೂ ಓದಿಸಲು ಅಪ್ಪಂದಿರು ಸಿದ್ಧರಿದ್ದರು.

ಆದರೆ ಸೀತಾ ಮಾತ್ರ ಓದಿನಲ್ಲಿ ಆಸಕ್ತಿ ಹೊಂದಿರಲಿಲ್ಲ. ಎಸ್.ಎಸ್.ಎಲ್.ಸಿ ಯಲ್ಲಿ ಎಲ್ಲ ವಿಷಯದಲ್ಲೂ ಫೇಲ್ ಆದಳು. ಮತ್ತೆ ಕಟ್ಟಿ ಪಾಸ್ ಮಾಡಿಕೊಳ್ಳುವ ತಾಪತ್ರಯಕ್ಕೇ ಹೋಗಲಿಲ್ಲ. ಸದಾ ಯಾರಾದರೂ ಗೆಳತಿಯನ್ನು ಜೊತೆ ಮಾಡಿಕೊಂಡು ಮಾರ್ಕೆಟ್, ಸಿನೆಮಾ ಎಂದು ಸುತ್ತುತ್ತಿದ್ದಳು. ಆದರೆ ಓದಿನಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದಿದ್ದ ಲೇಖಕಿ ಇಂಜಿನಿಯರ್ ಅದರು. ಓದಿನಲ್ಲಿ ಹಿಂದೆ ಉಳಿದಿದ್ದ ಸೀತಾ ಮಾತ್ರ ಸಾಮಾನ್ಯವಾದ ಹುಡುಗನನ್ನು ಮದುವೆಯಾಗ ಬೇಕಾಯಿತು.

ಆದರೆ ಸೀತಾಳಿಗೆ ಗಂಡನ ಮನೆಗೆ ಹೊಂದಿಕೊಳ್ಳುವುದು ಬಹಳ ಕಷ್ಟವಾಯಿತು. ಸಣ್ಣ ಮನೆ, ಅದಿಲ್ಲ ಇದಿಲ್ಲ. ನಮ್ಮ ಮನೆ ಮೈಸೂರಿನಲ್ಲಿ ಹೇಗಿತ್ತು ಎಂದು ಆಲೋಚಿಸುತ್ತಿದ್ದಳು. ಅಲ್ಲದೆ ತನ್ನ ಸಮಸ್ಯೆಯನ್ನು ಆಗಾಗ ಲೇಖಕಿಯ ಬಳಿಗೆ ಹೋಗಿ ಹೇಳಿಕೊಳ್ಳುತ್ತಿದ್ದಳು. ಆದರೆ ಲೇಖಕಿಯು ಹೇಳಿದ ಯಾವ ದಾರಿಗಳು ಸೀತಾಳಿಗೆ ಬಲು ಪ್ರಯಾಸದ್ದಾಗಿ ಕಾಣುತ್ತಿತ್ತು. ತಟ್ಟನೆ ಎಲ್ಲ ಸರಿಹೋಗಿ ಬಿಡಬೇಕು ಎಂದು ಬಯಸುತ್ತಿದ್ದಳು. ಅಲ್ಲದೆ ಕೈತುಂಬ ಸಂಪಾದಿಸಿ ತಂದು ಹಾಕಿ ಹೆಂಡ್ತಿನಾ ಚೆನ್ನಾಗಿ ಇಟ್ಟುಕೊಳ್ಳುವುದು ಗಂಡನ ಜವಾಬ್ದಾರಿ ಎಂದು ಬಲವಾಗಿ ನಂಬಿದ್ದ ಸೀತಾ ತನ್ನ ಕಿರುಬೆರುಳನ್ನು ಎತ್ತಲೂ ಸಿದ್ಧವಿರಲಿಲ್ಲ. ಇರುವುದು ಆಕೆಗೆ ಸಾಲುತ್ತಿರಲಿಲ್ಲ. ಬೇಕು ಅಂದದ್ದನ್ನು ದುಡಿದು ಗಳಿಸಲು ಸಿದ್ಧವಿರಲಿಲ್ಲ. ಸೀತಾಳಿಗೆ ಬದುಕೆಲ್ಲ ಅದೃಷ್ಟದ ಆಟದಂತೆ ಕಾಣುತಿತ್ತು. ಕೊನೆಯಲ್ಲಿ ಅವಳ ಬದುಕು ದುರಂತದಲ್ಲಿ ಅಂತ್ಯವಾಯಿತು.

Question 5.
ಬದುಕಿನಲ್ಲಿ ಆಯ್ಕೆಗಳು ಮುಖ್ಯ ಎಂಬುದನ್ನು ಲೇಖಕಿ ಹೇಗೆ ನಿರೂಪಿಸಿದ್ದಾರೆ?

Answer:
ಲೇಖಕಿ ನೇಮಿಚಂದ್ರರ ಪ್ರಕಾರ ಬದುಕಿನಲ್ಲಿ ಸುಖ ಕಷ್ಟಗಳು ಸಾಮಾನ್ಯ ಸೋಲು ಅಥವಾ ಕಷ್ಟ ಬಂದಾಗ ನನ್ನ ದುರದೃಷ್ಟ ಎಂದು ಸುಮ್ಮನೆ ಕೂರದೆ ಪ್ರಯತ್ನ ಮಾಡಿದರೆ ನಾವು ಕಳೆದು ಕಳೆದುಕೊಂಡ ಸಂತೋಷವನ್ನು ಮರಳಿ ಪಡೆಯಬಹುದು ಎಂಬುದು ಅವರ ಅಭಿಪ್ರಾಯ. ಆದರೆ ಏನು ಮಾಡಬೇಕು ಎನ್ನುವ ಆಯ್ಕೆ ಮುಖ್ಯ ಎನ್ನುತ್ತಾರೆ. ಅದಕ್ಕಾಗಿಯೇ ಅವರು ಕಮಲ ಮೇಡಂ, ಮುದ್ದೇಗೌಡರು, ಸೀತಾ, ಪ್ಲೇವಿಯಾ, ನಿಶಾ ಶರ್ಮರ ದೃಷ್ಟಾಂತಗಳನ್ನು ಕೊಡುತ್ತಾರೆ.

ಕಿಡ್ನಿಸ್ಟೋನ್ ಆದ ಕಮಲ ಮೇಡಂ ವೈದ್ಯರ ಸಲಹೆಯನ್ನು ಪಾಲಿಸಿ ಹೆಚ್ಚು ನೀರು ಸೇವಿಸಿದ್ದರಿಂದ ತನ್ನ ಸಮಸ್ಯೆಯಿಂದ ಪಾರಾದರು. ಆದರೆ ಮುದ್ದೇಗೌಡರು ಅದೇ ಸಮಸ್ಯೆಗೆ ನಾಲ್ಕು ಬಾರಿ ಆಪರೇಷನ್ ಮಾಡಿಕೊಂಡರು. ಆದರೆ ಲೇಖಕಿಯ ಗೆಳತಿ ಸೀತಾ ಸರಿಯಾದ ಆಯ್ಕೆ ಮಾಡದೇ ಜೀವನದುದ್ದಕ್ಕೂ ಕಷ್ಟವನ್ನು ಅನುಭವಿಸುತ್ತಾ ದುರಂತಮಯವಾದ ಬದುಕಿಗೆ ಸಾಕ್ಷಿಯಾದರು. ಆದರೆ ನಿಶಾ ಶರ್ಮ, ಪ್ಲೇವಿಯಾ ಮಾತ್ರ ಕಷ್ಟದ ಸಂದರ್ಭದಲ್ಲಿಯೂ ಸರಿಯಾದ ಆಯ್ಕೆಯನ್ನು ಮಾಡಿದರು. ನಿಶಾ ಶರ್ಮ ದುರಾಸೆಯ ಗಂಡನನ್ನು ಹಸೆ ಮಣೆಯೇರುವ ಸಂದರ್ಭದಲ್ಲಿ ನಿರಾಕರಿಸದರು. ತನ್ನ ಬಡಿಯುವ ಗಂಡನನ್ನು ಯಾವುದೇ ಸುದೃಢ ಹಿನ್ನಲೆಯಿರದ ಪ್ಲೇವಿಯಾ ನಿರಾಕರಿಸಿ ತನ್ನ ನಲವತ್ತರ ವಯಸ್ಸಿನಲ್ಲಿಯೂ ಕಾನೂನು ವಿಷಯ ಆಯ್ಕೆ ಮಾಡಿಕೊಂಡು ಓದಿ, ತನ್ನ ಮಕ್ಕಳನ್ನೂ ಸಾಕಿಕೊಂಡು, ಮುಂಬಯಿಯ ಪ್ರಸಿದ್ದ ನ್ಯಾಯವಾದಿಯಾದರು. ಹೀಗೆ ಲೇಖಕಿ ಇವರೆಲ್ಲರ ವಿಚಾರಗಳನ್ನು ಮುಂದಿಟ್ಟುಕೊಂಡು ಆಯ್ಕೆ ಮುಖ್ಯ ಎಂಬುದನ್ನು ನಿರೂಪಿಸಿದ್ದಾರೆ.

ಲೇಖಕರ ಪರಿಚಯ

2nd PUC Kannada Chapter 15 Ayke Ide Namma Kaiyalli
2nd PUC Kannada Chapter 15 Ayke Ide Namma Kaiyalli

ಶ್ರೀಮತಿ ನೇಮಿಚಂದ್ರ (ಜನನ : ೧೬-೭-೧೯೫೯) ಎಚ್.ಎ.ಎಲ್.ನಲ್ಲಿ ಹಿರಿಯ ಇಂಜಿನಿಯರ್ ಆಗಿದ್ದಾರೆ. ತಂದೆ: ಶ್ರೀ ಜಿ. ಗುಂಡಪ್ಪ, ತಾಯಿ: ಶ್ರೀಮತಿ ತಿಮ್ಮಕ್ಕನವರು. ಸ್ತ್ರೀಸಂವೇದನೆಯುಳ್ಳ ಕಥೆಗಾರ್ತಿ ಎನಿಸಿರುವ ಇವರು ಉದಯವಾಣಿ ದಿನಪತ್ರಿಕೆಯ ಬದುಕು ಬದಲಿಸಬಹುದು ಎಂಬ ಅಂಕಣ ಬರಹದಿಂದ ಸುಪ್ರಸಿದ್ದರಾಗಿದ್ದಾರೆ. ನಮ್ಮ ಕನಸುಗಳಲ್ಲಿ ನೀವಿದ್ದೀರಿ. ಮತ್ತೆ ಬರೆದ ಕತೆಗಳು, ಒಂದು ಶ್ಯಾಮಲ ಸಂಜೆ ಎಂಬ ಕಥಾಸಂಕಲನಗಳನ್ನು ಇವರು ಪ್ರಕಟಿಸಿದ್ದಾರೆ.

ನೇಮಿಚಂದ್ರರ ಕಥೆಗಳು ಎಂಬ ಶೀರ್ಷಿಕೆಯಲ್ಲಿ ಇವರ ಸಮಗ್ರ ಕಥೆಗಳು ಬೆಳಕುಕಂಡಿವೆ. ಥಾಮಸ್ ಅಲ್ವಾ ಎಡಿಸನ್. ನೋವಿಗದ್ದಿದ ಕುಂಚ, ಬೆಳಕಿನೊಂದು ಕಿರಣ ಮೇರಿಕ್ಯೂರಿ ಎಂಬ ಜೀವನ ಚರಿತ್ರೆಗಳನ್ನೂ ಒಂದು ಕನಸಿನ ಪಯಣ.

ಪೆರುವಿನ ಪವಿತ್ರ ಕಣಿವೆ ಎಂಬೆರಡು ಪ್ರವಾಸ ಕಥನಗಳನ್ನು ನೇಮಿಚಂದ್ರ ರಚಿಸಿದ್ದಾರೆ. ದುಡಿವ ಹಾದಿಯಲ್ಲಿ ಜೊತೆಗಾಗಿ, ನ್ಯಾಯಕ್ಕಾಗಿ ಕಾದ ಭಾಂದ್ರಿದೇವಿ, ನನ್ನ ಕತೆ-ನಮ್ಮಕತೆ, ಬೆಳಗೆರೆ ಜಾನಕಮ್ಮ, ಮಹಿಳಾಲೋಕ ಇವು ನೇಮಿಚಂದ್ರರ ಇತರ ಕೃತಿಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮೂರು ಬಾರಿ ಪಡೆದಿರುವ ನೇಮಿಚಂದ್ರರಿಗೆ ಡಾ। ಹಾ.ಮಾ.

ನಾಯಕ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ‘ಯಾದ್ ವಶೇಮ್’ ಕಾದಂಬರಿಗೆ ‘ಅಕ್ಕ’ ಪ್ರಶಸ್ತಿ, ಕಥಾಸಾಹಿತ್ಯಕ್ಕೆ ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್‌ನ ‘ಇಂದಿರಾತನಯ’ ಪ್ರಶಸ್ತಿ, ವಿಜ್ಞಾನ, ಸಾಹಿತ್ಯ, ಮಹಿಳಾ ಅಧ್ಯಯನವನ್ನು ಕುರಿತಂತೆ ಮಂಗಳೂರಿನ ‘ಸಂದೇಶ ಪ್ರಶಸ್ತಿ’ ಹಾಗೂ ಗದಗದ ‘ಕಲಾಚೇತನ’ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ.

Click Here to Download Ayke Ide Namma Kaiyalli PDF Notes
Click Here to Watch Ayke Ide Namma Kaiyalli Video

You cannot copy content of this page