2nd PUC Kannada Urilingapeddiya 

2nd PUC Kannada Question and Answer – Urilingapeddiya Vachana 

Looking for 2nd PUC Kannada textbook answers? You can download Chapter 2: Urilingapeddiya Vachana Questions and Answers PDF, Notes, and Summary here. 2nd PUC Kannada Kavyabhaga solutions follow the Karnataka State Board Syllabus, making it easier for students to revise and score higher in exams.

Karnataka 2nd PUC Kannada Textbook Answers—Reflections Chapter 2

Urilingapeddiya Vachana Questions and Answers, Notes, and Summary

2nd PUC Kannada Kavyabhaga Vachana 2

ಉರಿಲಿಂಗಪೆದ್ದಿಯ ವಚನಗಳು

Urilingapeddiya Vachana

2nd PUC Kannada Vachana Urilingapeddi
Scroll Down to Download Urilingapeddiya Vachana PDF
I. ಒಂದು ವಾಕ್ಯದಲ್ಲಿ ಉತ್ತರಿಸಿ :

Question 1.
ಉರಿಲಿಂಗಪೆದ್ದಿಯ ವಚನಗಳ ಅಂಕಿತ ಯಾವುದು?
Answer:
ಉರಿಲಿಂಗಪೆದ್ದಿಯ ವಚನಗಳ ಅಂಕಿತ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

Question 2.
ಯಾವುದರಿಂದ ಪರಿಮಳವನ್ನು ಅರಿಯಬಹುದು?
Answer:
ಪುಷ್ಪದಿಂದ ಪರಿಮಳವನ್ನು ಅರಿಯಬಹುದು.

Question 3.
ಯಾರು ಅನ್ಯಲಿಂಗವನ್ನು ನೆನೆಯುವುದಿಲ್ಲ?
Answer:
ಮಂಗಳ ಲಿಂಗವನ್ನು ಅಂಗದ ಮೇಲೆ ಧರಿಸಿದವನು ಅನ್ಯಲಿಂಗವನ್ನು ನೆನೆಯಲಾರ.

Question 4.
ಗುರು ಹೇಗೆ ವರ್ತಿಸಬಾರದು?
Answer:
ಗುರು ಲಘುವಾಗಿ ವರ್ತಿಸಬಾರದು.

II. ಎರಡು ಮೂರುವಾಕ್ಯಗಳಲ್ಲಿ ಉತ್ತರಿಸಿ :

Question 1.
ಸೂರ್ಯ ಮತ್ತು ದೀಪಗಳಿಂದಾಗುವ ಉಪಯೋಗಗಳಾವುವು?
Answer:
ಸೂರ್ಯನಿಂದ ಹಗಲು ಉಂಟಾಗುತ್ತದೆ. ಹಗಲಿನಿಂದ ಸಕಲ ಪ್ರಾಣಿ ಪಕ್ಷಿಗಳಿಗೂ ಚಟುವಟಿಕೆಯಿಂದ ಇರಲು ಸಾಧ್ಯ. ದೀಪ ಇಲ್ಲದೇ ರಾತ್ರಿಯಲ್ಲಿ ಬೆಳಕುಂಟಾಗದು. ದೀಪದ ಬೆಳಕೇ ಕತ್ತಲಲ್ಲಿ ಮಾರ್ಗದರ್ಶಕವಾಗಿರುತ್ತದೆ. ಇಲ್ಲೆಲ್ಲ ಒಂದಕ್ಕೊಂದು ಸಂಬಂಧ ಹೊಂದಿದೆ. ದೀಪ ಹಾಗೂ ಸೂರ್ಯನನ್ನು ಬಿಟ್ಟು ಬೆಳಕಿನ ಬಗ್ಗೆ ಯೋಚಿಸಲು ಸಾಧ್ಯವೇ ಇಲ್ಲ.

Question 2.
ಯಾರು ಮನೆಮನೆಯನ್ನು ತಿರಿಯನು? ಕೆರೆಯುದಕವನ್ನರಸದವನು ಯಾರು?
Answer:
ಪರುಷದ ಮನೆಯಲ್ಲಿ ವಾಸಿಸುವವನು ಭಿಕ್ಷೆಗಾಗಿ ಮನೆ ಮನೆಯನ್ನು ತಿರುಗುವುದಿಲ್ಲ. ನದಿಯಲ್ಲಿರುವವನು ಬಾಯಾರಿಕೆಯಾದ ಕೂಡಲೇ ಕೆರೆಯ ನೀರನ್ನು ಅರಸಿಕೊಂಡು ಹೋಗುವುದಿಲ್ಲ.

Question 3.
ಗುರುವಿನ ಲಕ್ಷಣಗಳೇನು?
Answer:
ಗುರುವು ಯಾವಾಗಲೂ ಲಘುವಾಗಿ ವರ್ತಿಸಬಾರದು. ಗುರು ಯಾವಾಗಲೂ ಶಿಷ್ಯನ ಮೋಕ್ಷದ ಹಾದಿಗೆ ದಾರಿದೀಪವಾಗಿರಬೇಕು. ಗುರು ಲಿಂಗ ಜಂಗಮವೆಂಬ ತ್ರಿವಿಧವನ್ನು ಲಘುವಾಗಿ ಭಾವಿಸದೇ ಆಚರಿಸುವುದು ಗುರುವಿನ ಲಕ್ಷಣ. ಗುರು ಲಿಂಗ ಜಂಗಮಮನ್ನು ಲಘುವಾಗಿ ಕಂಡ ವ್ಯಕ್ತಿ ತಾನೇ ಲಘುವಾಗುವನು ಎಂದು ಇಲ್ಲಿ ಹೇಳುತ್ತಾನೆ. ಗುರುವು ಲಿಂಗಪೂಜೆಯಲ್ಲಿ ಪ್ರಸಾದದಲ್ಲಿ ಕಡಿಮೆ ಮಾಡದೇ ಭಕ್ತಿಯನ್ನು ತೋರಿಸಬೇಕು. ಹಿರಿಯರು ತಮ್ಮ ಹಿರಿತನ ಬಿಟ್ಟು ಸಣ್ಣತನ ತೋರಿದಾಗ ತಮ್ಮ ಮರ್ಯಾದೆಯನ್ನು ಕಳೆದುಕೊಳ್ಳುತ್ತಾರೆ.

III. ಸಂದರ್ಭ:

Question 1.
ಪುಷ್ಪವಿಲ್ಲದೆ ಪರಿಮಳವನರಿಯಬಹುದೆ.

Answer:
ಆಯ್ಕೆ : ಈ ಸಾಲನ್ನು ಉರಿಲಿಂಗಪೆದ್ದಿ ಬರೆದಿರುವ ವಚನಗಳಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಮಹಾಘನ ನಿರಾಳನಾದ [ಚಿಂತೆಯಿಲ್ಲದ] ಪರಶಿವನಿಂದ ಲಿಂಗವು [ವೇದ್ಯವಾಗುತ್ತದೆ. ಕಾಣಿಸುತ್ತದೆ ಎನ್ನುವುದನ್ನು ನಿರೂಪಿಸುವಾಗ ವಚನಕಾರ ಈ ನಿದರ್ಶನದ ಮೂಲಕ ವಿವರಿಸಿದ್ದಾನೆ.
ವಿವರಣೆ: ಸೂರ್ಯನಿಲ್ಲದೆ ಹಗಲು ಸಾಧ್ಯವಿಲ್ಲ. ದೀಪವಿಲ್ಲದೆ ಬೆಳಕು ಇರಲು ಸಾಧ್ಯವಿಲ್ಲ. ಹೂವು ಇಲ್ಲದೆ ಪರಿಮಳ ಇರಲು ಸಾಧ್ಯವಿಲ್ಲ. ಸಕಲವೂ ಇಲ್ಲದೆ ಪರಿಶುದ್ಧತೆಯನ್ನು ಕಾಣಲು ಸಾಧ್ಯವಿಲ್ಲ. ಅದೇರೀತಿ ಪರಿಶುದ್ಧನಾದ ಅತ್ಯಂತ ಶ್ರೇಷ್ಠನಾದ ಪರಶಿವನ ಮೂಲಕ ಲಿಂಗವು ಕಾಣುತ್ತದೆ.ಶಿವನಿಂದಲೇ ಲಿಂಗವು ಅನುಭವಕ್ಕೆ ಬರುತ್ತದೆ. ಹೂವು ಪರಿಮಳ ಹೇಗೆ ಅಭಿನ್ನವೋ ಅದೇ ರೀತಿ ಪರಶಿವ-ಲಿಂಗಗಳೂ ಭಿನ್ನವಲ್ಲವೆಂಬುದನ್ನು ಇಲ್ಲಿ ಹೇಳಲಾಗಿದೆ.

Question 2.
ಅನ್ಯಲಿಂಗಗಳ ನೆನೆವನೆ ನಿಮ್ಮ ಭಕ್ತನು.

Answer:
ಆಯ್ಕೆ: ಈ ಸಾಲನ್ನು ಉರಿಲಿಂಗಪೆದ್ದಿ ಬರೆದಿರುವ ವಚನಗಳಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ : ವಚನಕಾರರು ಭಕ್ತನ ಭಕ್ತಿಯನ್ನು ಮತ್ತು ಆರಾಧ್ಯದೇವರ ಮಹಿಮೆಯನ್ನು ಕುರಿತು ಹೇಳುವಾಗ ಈ ಸಾಲು ಬಂದಿದೆ.
ವಿವರಣೆ: ಪರುಷ ಮಣಿಯ ಮನೆಯಲ್ಲಿರುವವನು ಭಿಕ್ಷೆಗಾಗಿ ಮನೆ-ಮನೆ ತಿರುಗುವುದಿಲ್ಲ. ಅದೇ ರೀತಿ ಮೈಮೇಲೆ ಲಿಂಗವನ್ನು ಧರಿಸಿದ ಮಹಾಭಕ್ತನು ಅನ್ಯಲಿಂಗಗಳನ್ನು ನೆನೆಯುವುದಿಲ್ಲ ಎನ್ನುವುದಾಗಿ ಉರಿಲಿಂಗಪೆದ್ದಿ ಹೇಳುತ್ತಾನೆ.

Question 3.
ತಾನೆ ಲಘುಮಾಡಿ ಲಘುವಾದನಯ್ಯ.

Answer:
ಆಯ್ಕೆ : ಈ ಸಾಲನ್ನು ಉರಿಲಿಂಗಪೆದ್ದಿ ಬರೆದಿರುವ ವಚನಗಳಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಗುರುವಿನ ಶ್ರೇಷ್ಠತೆಯನ್ನು ಹೇಳುವಾಗ, ಗುರುವು ಲಘುವರ್ತನದಲ್ಲಿ ವರ್ತಿಸಬಾರದು ಎನ್ನುವಾಗ ವಚನಕಾರ ಈ ಮಾತನ್ನು ಹೇಳಿದ್ದಾನೆ.
ವಿವರಣೆ: ಗುರುವು ತನ್ನ ಸಚ್ಚಾರಿತ್ರ್ಯ ಮತ್ತು ವ್ಯಕ್ತಿತ್ವದಿಂದ ತನ್ನ ಘನತೆಯನ್ನು ಕಾಪಾಡಿಕೊಳ್ಳಬೇಕು. ಉಳಿದವರಿಗೆ ಮಾದರಿಯಾಗಿ ಬದುಕಬೇಕು. ಲಘುವರ್ತನವನ್ನು ತೋರಬಾರದು. ಲಘುವರ್ತನ ತೋರಿದರೆ ಉಳಿದವರ ದೃಷ್ಟಿಯಲ್ಲಿ ಲಘುವಾಗಿ ಹೋಗುತ್ತಾನೆ. ಲಘುವರ್ತನೆಯನ್ನು ತೋರದೆ ಶ್ರೇಷ್ಠವಾದ ವ್ಯಕ್ತಿತ್ವವನ್ನು ಕಾಯ್ದುಕೊಳ್ಳುವುದು ಗುರುವಿನ ಕರ್ತವ್ಯವಾಗಿದೆ ಎನ್ನುತ್ತಾನೆ. ಉರಿಲಿಂಗಪೆದ್ದಿ ಪೂಜೆ ಮತ್ತು ಭಕ್ತಿಯ ವಿಚಾರದಲ್ಲಿ ಅದರ ಬಗ್ಗೆ ಅನಾಸಕ್ತಿಯನ್ನು ತೋರಿ, ಹಗುರಮಾಡಿದರೆ ತಾನೂ ಲಘುವಾಗುತ್ತಾನೆ. ಎನ್ನಲಾಗಿದೆ.

IV. ವಾಕ್ಯಗಳಲ್ಲಿ ಉತ್ತರಿಸಿ :

Question 1.
ಮಂಗಳ ಲಿಂಗದ ಮಹತ್ವವನ್ನು ಹೇಗೆ ವಿವರಿಸಲಾಗಿದೆ?

Answer:
ಮಂಗಳ ಲಿಂಗದ ಮಹತ್ವವನ್ನು ಉರಿಲಿಂಗ ಪೆದ್ದಿಯು ಕೆಲವು ದೃಷ್ಟಾಂತಗಳ ಮೂಲಕ ವಿವರಿಸಿದ್ದಾನೆ. ಪರುಷದ ಗೃಹದೊಳಗೆ ವಾಸವಾಗಿರುವವನಿಗೆ ಸಂಪತ್ತಿನ ಕೊರತೆ ಇರುವುದಿಲ್ಲ. ಅವನು ಭಿಕ್ಷೆಗಾಗಿ ಮನೆ ಮನೆಯನ್ನು ತಿರುಗುವುದಿಲ್ಲ. ನದಿಯೊಳಗೆ ಇಳಿದವನಿಗೆ ಒಂದು ವೇಳೆ ಬಾಯಾರಿಕೆಯಾದರೆ, ನೀರಿಗಾಗಿ ಕೆರೆಯನ್ನು ಹುಡುಕುತ್ತಾ ಹೋಗುವುದಿಲ್ಲ.

ಅದೇ ರೀತಿ ಶರೀರದ ಮೇಲೆ ಮಂಗಳ ಲಿಂಗವನ್ನು ಧರಿಸಿದವನಿಗೆ ಅನ್ಯಲಿಂಗವನ್ನು ನೆನೆಯುವ ಅಗತ್ಯ ಬರುವುದಿಲ್ಲ. ಅನ್ಯಲಿಂಗಗಳನ್ನು ನೆನೆಯುವುದೂ ಇಲ್ಲ. ಶರೀರದ ಮೇಲಿನ ಮಂಗಳಲಿಂಗವು ಅತ್ಯಂತ ಪವಿತ್ರವಾದದ್ದು. ಅಂತಹ ಪವಿತ್ರವಾದ ಮಂಗಳಲಿಂಗವನ್ನು ಧರಿಸಿದವನಿಗೆ ಅನ್ಯದೇವರ ಅವಶ್ಯಕತೆಯಿರುವುದಿಲ್ಲ ಎಂಬುದಾಗಿ ವಚನಕಾರರು ಮಂಗಳಲಿಂಗದ ಮಹತ್ವವನ್ನು ಸಾರಿದ್ದಾರೆ.

ಚಿಂತೆಯಿಲ್ಲದ ಅತಿಶ್ರೇಷ್ಠವಾದ ಮನಸ್ಥಿತಿಯನ್ನು ಶಿವಧ್ಯಾನದಿಂದ ಸಾಧಿಸಬಹುದೆಂಬುದನ್ನು ಇಲ್ಲಿ ತಿಳಿಸಲಾಗಿದೆ. ಮಂಗಳಕರವಾದ ಅಂಗದ ಸಾಂಗತ್ಯವುಳ್ಳವನು ಬೇರೆಯವರ ಬಗ್ಗೆ, ಬೇರೆಯದರ ಬಗ್ಗೆ ಚಿಂತಿಸನೆಂಬುದನ್ನು ಇಲ್ಲಿನ ವಚನಗಳು ನಿರೂಪಿಸುತ್ತವೆ.

Question 2.
ಗುರು ಲಘುವರ್ತನದಲ್ಲಿ ವರ್ತಿಸಬಾರದೇಕೆ?

Answer:
ಗುರುವಿನ ನಡತೆಯು ಘನತೆಯುಳ್ಳದ್ದಾಗಿರಬೇಕೆಂಬುದನ್ನು ಉರಿಲಿಂಗಪೆದ್ದಿಯ ವಚನಗಳು ನಿರೂಪಿಸುತ್ತವೆ. ಗುರು ಒಬ್ಬ ಶ್ರೇಷ್ಠ ವ್ಯಕ್ತಿ. ಅನ್ಯರಿಗೆ ದಾರಿಯನ್ನು ತೋರುವವನು ಭಕ್ತಿಗೆ ತಾನೇ ಮಾದರಿಯಾಗಬೇಕಾದವನು. ಅಂತಹ ಗುರುವಿನಿಂದ ಕೆಳಮಟ್ಟದ ನಡತೆ ಸರಿಹೊಂದುವುದಿಲ್ಲ.

 ಗುರುವು ಲಘುವರ್ತನದಲ್ಲಿ ವರ್ತಿಸಿದರೆ ಅದು ಆಚಾರ ಎನಿಸಿಕೊಳ್ಳುವುದಿಲ್ಲ. ಗುರುವು ಆಚಾರವಂತನಾಗಬೇಕಾದರೆ ಆತನ ನಡತೆಯೂ ಶ್ರೇಷ್ಠವಾಗಿರಬೇಕು. ಲಘುವಿಗೆ ಗುರುವಿನ ವರ್ತನೆ ಅಸಾಧ್ಯ ಹಾಗಾಗಿ ಲಘು, ಎಂದಿಗೂ ಲಘುವಾಗಿಯೇ ವರ್ತಿಸುತ್ತಾನೆ. ಆದರೆ ಎಂದಿಗೂ ಗುರುವಾದವನು ಲಘುವಾಗಿ ವರ್ತಿಸಬಾರದು. ಇದು ಸಲ್ಲದ ಆಚಾರವಾಗುವುದು. ಸದಾ ಗುರುವರ್ತನೆಯಲ್ಲೇ ಮುನ್ನಡೆಯಬೇಕು.

ಗುರು-ಲಿಂಗ-ಜಂಗಮವೆಂಬ ತ್ರಿವಿಧವನ್ನು ಲಘುವಾಗಿ ಭಾವಿಸದೆ ಆಚರಿಸುವುದು ಗುರುವಿನ ಲಕ್ಷಣ. ಗುರುವು ಲಿಂಗ ಪೂಜೆಯಲ್ಲಿ, ಪ್ರಸಾದದಲ್ಲಿ ಕಡಿಮೆಯನ್ನು ಮಾಡದೇ ನಿಜ ಭಕ್ತಿಯನ್ನು ತೋರಿಸಬೇಕು. ಎಂದಿಗೂ ಲಘುವರ್ತನದಲ್ಲಿ ನಡೆದುಕೊಂಡು ತನ್ನ ಘನತೆಯನ್ನು ಹಾಳು ಮಾಡಿ ಕೊಳ್ಳಬಾರದು. ಘನತೆಯನ್ನು ಹಾಳುಮಾಡಿಕೊಂಡಲ್ಲಿ ಗುರುವೇ ಸಮಾಜಕ್ಕೆ ಲಘುವಾದಂತೆ ತೋರುತ್ತಾನೆ. ಹಾಗಾಗಿ ಗುರು ಲಘುವರ್ತನದಲ್ಲಿ ವರ್ತಿಸಬಾರದು.

Question 3.
ಉರಿಲಿಂಗಪೆದ್ದಿಯ ವಚನಗಳಲ್ಲಿನ ಆಶಯವೇನು?

Answer:
ಉರಿಲಿಂಗ ಪೆದ್ದಿಯು ಒಬ್ಬ ಚಿಂತಕನೆಂಬುದು ಆತನ ವಚನಗಳ ಆಶಯದಿಂದ ಅರಿವಾಗುತ್ತದೆ. ಈತ ಶಿವ ಮತ್ತು ಲಿಂಗವನ್ನು ಅಭೇದ್ಯವಾಗಿ ಪ್ರತಿಪಾದಿಸಿದ್ದಾನೆ. ಸೂರ್ಯನಿಲ್ಲದೇ ಹಗಲು ಸಾಧ್ಯವಿಲ್ಲ. ದೀಪವಿಲ್ಲದೇ ಬೆಳಕು ಇರಲು ಸಾಧ್ಯವಿಲ್ಲ, ಪುಷ್ಪವಿಲ್ಲದೆ ಪರಿಮಳವಿಲ್ಲ. ಅದೇ ರೀತಿ ಸಕಲವೂ ಇಲ್ಲದೆ ಪರಿಶುದ್ಧತೆಯನ್ನು ಕಾಣಲು ಸಾಧ್ಯವಿಲ್ಲ. ಅದೇ ರೀತಿ ಪರಿಶುದ್ಧನಾದ ಅತ್ಯಂತ ಶ್ರೇಷ್ಠವಾದ ಪರಶಿವನ ಮೂಲಕ ಲಿಂಗವು ಕಾಣುತ್ತದೆ. ಶಿವನಿಂದಲೇ ಲಿಂಗವು ಅನುಭವಕ್ಕೆ ಬರುತ್ತದೆ. ಹೂವು- ಪರಿಮಳ ಹೇಗೆ ಅಭಿನ್ನವೋ ಅದೇ ರೀತಿ ಪರಶಿವ-ಲಿಂಗಗಳೂ ಭಿನ್ನವಲ್ಲ ಎಂಬುದನ್ನು ಹೇಳಲಾಗಿದೆ.

ಮುಟ್ಟಿದ್ದೆಲ್ಲವನ್ನೂ ಚಿನ್ನವಾಗಿಸುವ ಮಣಿಯ ಮನೆಯೊಳಗಿದ್ದವನು ಭಿಕ್ಷೆಗಾಗಿ ಮನೆ ಮನೆ ತಿರುಗುವುದಿಲ್ಲ. ಸಂಪತ್ತಿನ ಕೊರತೆ ಆತನಿಗೆ ಇರುವುದಿಲ್ಲ. ನದಿಯಲ್ಲಿರುವವನಿಗೆ ಬಾಯಾರಿಕೆಯಾದರೆ ನೀರಿಗಾಗಿ ಕೆರೆಯನ್ನು ಹುಡುಕುತ್ತಾ ಹೋಗುವುದಿಲ್ಲ. ಅದೇ ರೀತಿ ಮೈಮೇಲೆ ಲಿಂಗವನ್ನು ಧರಿಸಿದ ಮಹಾಭಕ್ತನು ಅನ್ಯಲಿಂಗವನ್ನು ನೆನೆಯುವುದಿಲ್ಲ.

ಗುರು ಒಬ್ಬ ಶ್ರೇಷ್ಠ ವ್ಯಕ್ತಿ, ಅನ್ಯರಿಗೆ ದಾರಿಯನ್ನು ತೋರುವವನು, ಭಕ್ತಿಗೆ ಮಾದರಿಯಾಗಿರುವವನು. ಭಕ್ತಿಯನ್ನು ಮೂಡಿಸುವ ಗುರುವು ಘನತೆಯುಳ್ಳವನಾಗಿರಬೇಕು. ಆಚಾರವಂತನಾಗಿರಬೇಕು, ಗುರುವು ಲಘುವಾಗಿ ವರ್ತಿಸಬಾರದು. ಗುರುವು ಲಿಂಗಪೂಜೆಯಲ್ಲಿ, ಪ್ರಸಾದದಲ್ಲಿ ಕಡಿಮೆಯನ್ನು ಮಾಡದೇ ನಿಜಭಕ್ತಿಯನ್ನು ತೋರಿಸಬೇಕು ಎಂದಿದ್ದಾನೆ. ನಿಜಭಕ್ತಿಯಿಂದ ಜೀವನ ಸಾಗಿಸಬೇಕು. ನಿರ್ಮಲ ಮತ್ತು ಶುದ್ಧವಾದ ಮನಸ್ಸನ್ನು ಹೊಂದಲು ಶಿವಪೂಜೆಯ ಅಗತ್ಯವಿದೆ ಎನ್ನುವುದರ ಮೂಲಕ ಒಟ್ಟಾರೆಯಾಗಿ ಈತನ ವಚನಗಳಲ್ಲಿ ಲಿಂಗದ ಮಹತ್ವವನ್ನು ಪ್ರತಿಪಾದಿಸುವ ಆಶಯವಿದೆ ಎನ್ನಬಹುದು.

ಉರಿಲಿಂಗಪೆದ್ದಿಯ ವಚನಗಳು
Urilingapeddi Summary

2nd PUC Kannada Vachana Urilingapeddi
2nd PUC Kannada Vachana Urilingapeddi

ಸಾರಾಂಶ :

ಶಿವ ಹಾಗೂ ಶಿವಲಿಂಗದಲ್ಲಿ ಯಾವುದೇ ಬೇಧವಿಲ್ಲ ಎಂಬುದನ್ನು ಉದಾಹರಣೆಗಳ ಮೂಲಕ ಇಲ್ಲಿ ಸಾರಿದ್ದಾನೆ. ಸೂರ್ಯನಿಲ್ಲದೆ ಹಗಲು ಇರುವುದಿಲ್ಲ, ದೀಪವಿಲ್ಲದೆ ಬೆಳಕು, ಹೂವಿಲ್ಲದೆ ಪರಿಮಳ ಇರಲು ಸಾಧ್ಯವಿಲ್ಲ. ಅಂತೆಯೇ ಅತಿ ಶ್ರೇಷ್ಠವಾದ ವಿಚಾರವು ಶಿವನಿಂದ ಮಾತ್ರವೇ ತೋರಿಸಲ್ಪಡುವುದು.

ಇಲ್ಲೆಲ್ಲ ಒಂದಕ್ಕೊಂದು ಸಂಬಂಧ ಹೊಂದಿದೆ. ಸೂರ್ಯನನ್ನು ಬಿಟ್ಟು ಹಗಲು, ದೀಪವನ್ನು ಬಿಟ್ಟು ಬೆಳಕಿನ ಬಗ್ಗೆ ಯೋಚಿಸಲು ಸಾಧ್ಯವೇ ಇಲ್ಲ. ಅಂತೆಯೇ ಹೂವಿಲ್ಲದೆ ಪರಿಮಳದ ಯೋಚನೆ ಮಾಡಲು ಸಾಧ್ಯವೇ? ಎಲ್ಲವೂ ಶಿವನಿಂದ ಆಗಿರುವುದರಿಂದ ಎಲ್ಲೆಡೆ ಶಿವನೇ ತೋರುತ್ತಿದ್ದಾನೆ.

ಪರುಷಮಣಿಯು ಮುಟ್ಟಿದ್ದನ್ನು ಚಿನ್ನವಾಗಿಸುವ ಶಿಲೆ. ಇದರಿಂದ ಮಾಡಿದ ಮನೆಯಲ್ಲಿ ವಾಸಿಸುವವನು ಎಂದಾದರೂ ಭಿಕ್ಷೆಗೆ ಹೋಗುವನೇ? ಸದಾ ಶುಭ್ರಜಲ ಹರಿವ ತೊರೆಯಲ್ಲಿ ನಿಂತಿರುವ ವ್ಯಕ್ತಿ ಬಾಯಾರಿತು ಎಂದು ಕೆರೆಯನ್ನು ಹುಡುಕಿ ಹೋಗುವುದಿಲ್ಲ, ಅಂತೆಯೇ ಮಂಗಳಕರವಾದ ಲಿಂಗವನ್ನು ಧರಿಸಿದ ವ್ಯಕ್ತಿ ಇತರ ದೈವವನ್ನು ನೆನಪಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾನೆ.

ಗುರುವಾದವರು ಲಘುವಾಗಿ ವರ್ತಿಸಬಾರದು ಗುರುಗುರುವೇ ಲಘು ಲಘುವೇ. ಗುರು ಲಘುವಾಗಿ ವರ್ತಿಸಿದರೆ ಅದು ಅನಾಚಾರ, ಗುರು ಲಿಂಗ ಜಂಗಮವನ್ನು ಲಘುವಾಗಿ ಕಂಡ ವ್ಯಕ್ತಿ ತಾನೇ ಲಘುವಾಗುವನು ಎಂದು ಇಲ್ಲಿ ಹೇಳುತ್ತಾನೆ.

ಹಿರಿಯರು ತಮ್ಮ ಹಿರಿತನ ಬಿಟ್ಟು ಸಣ್ಣತನ ತೋರಿದಾಗ ತಮ್ಮ ಮರ್ಯಾದೆಯನ್ನು ಕಳೆದುಕೊಳ್ಳುತ್ತಾರೆ. ಅವರು ಮರ್ಯಾದೆ ಕಳೆದುಕೊಂಡಾಗ ಅದು ಅಪಚಾರ. ಹಾಗಾಗಿ ತಮ್ಮ ತಮ್ಮ ನಡವಳಿಕೆ ತಮ್ಮ ತಮ್ಮ ಘನತೆಗೆ ತಕ್ಕಂತೆ ಇರಬೇಕು ಎಂಬುದು ವಚನಕಾರನ ಆಶಯ.

Click Here to Download Urilingapeddi Vachana PDF Notes
Click Here to Watch Urilingapeddi Vachana Video

You cannot copy content of this page