2nd PUC Kannada Nataka Chapter 21

2nd PUC Kannada Question and Answer – Krishna Gowdana Aane

Looking for 2nd PUC Kannada textbook answers? You can download Chapter 21: Krishna Gowdana Aane Questions and Answers PDF, Notes, and Summary here. 2nd PUC Kannada Natakabhaga solutions follow the Karnataka State Board Syllabus, making it easier for students to revise and score higher in exams.

Karnataka 2nd PUC Kannada Textbook Answers—Reflections Chapter 21

Krishna Gowdana Aane Questions and Answers, Notes, and Summary

2nd PUC Kannada Natakabhaga Chapter 21

ಕೃಷ್ಣಗೌಡನ ಆನೆ

Krishna Gowdana Aane

2nd PUC Kannada Chapter 21 Krishna Gowdana Aane.
Scroll Down to Download Krishna Gowdana Aane PDF
I. ಒಂದು ಅಂಕದ ಪ್ರಶ್ನೆಗಳು

Question 1.
ನಿರೂಪಕರಿಗೆ ಯಾವ ಕೆಲಸ ಖಾಯಮ್ಮಾಗಿತ್ತು?
Answer:
ನಿರೂಪಕರಿಗೆ ತಿಂಗಳಿಗೊಮ್ಮೆ ಜೀಪಿನ ಅಡಿ ಬಿದ್ದುಕೊಂಡು ಅದರ ಗೇರ್‌ಬಾಕ್ಸ್ ಬಿಚ್ಚಿ ರಿಪೇರಿಮಾಡುವ ಕೆಲಸ ಖಾಯಮ್ಮಾಗಿತ್ತು.

Question 2.
ದುರ್ಗಪ್ಪ ಏನನ್ನು ಕೇಳಿ ಪಡೆಯಲು ಬಂದಿದ್ದನು?
Answer:
ದುರ್ಗಪ್ಪ ನಿರೂಪಕರಿಂದ ಕೊಡಲಿ ಕೇಳಿ ಪಡೆಯಲು ಬಂದಿದ್ದನು.

Question 3.
ದುರ್ಗಪ್ಪನ ಪ್ರಕಾರ ತರೆ ಡಿಪಾರ್ಟ್‌ ಮೆಂಟ್ ಯಾವುದು?
Answer:
ಟೆಲಿಫೋನ್ ಡಿಪಾರ್ಟ್‌ಮೆಂಟ್ ದುರ್ಗಪ್ಪನ ಪ್ರಕಾರ ತರೆ ಡಿಪಾರ್ಟ್‌ ಮೆಂಟ್ ಆಗಿತ್ತು.

Question 4.
ಕೃಷ್ಣಗೌಡರ ಆನೆ ಮೊದಲು ಯಾವ ಮಠದಲ್ಲಿತ್ತು?
Answer:
ಕೃಷ್ಣಗೌಡರ ಆನೆಯು ಮೊದಲು ಗೂಳೂರು ಮಠದಲ್ಲಿತ್ತು.

Question 5.
ಕೃಷ್ಣಗೌಡರ ಆನೆಯ ಹೆಸರೇನು?
Answer:
ಕೃಷ್ಣಗೌಡರ ಆನೆಯ ಹೆಸರು ಗೌರಿ.

Question 6.
ಅನೆಗೆ ಜಗದ್ಗುರುಗಳನ್ನು ಹೊರುವ ಕೆಲಸ ತಪ್ಪಿಹೋದುದೇಕೆ?
Answer:
ಮಠದ ಜಗದ್ಗುರುಗಳನ್ನು ಜನರು ಅಡ್ಡಪಲ್ಲಕ್ಕಿಯಲ್ಲಿ ತಮ್ಮ ಹೆಗಲ ಮೇಲೆ ಹೊರತೊಡಗಿದ್ದರಿಂದ ಆನೆಗೆ ಜಗದ್ಗುರುಗಳನ್ನು ಹೊರುವ ಕೆಲಸ ತಪ್ಪಿಹೋಯಿತು.

Question 7.
ಆನೆಯ ಮಾವುತನ ಹೆಸರೇನು?
Answer:
ಆನೆಯ ಮಾವುತನ ಹೆಸರು ವೇಲಾಯುಧ.

Question 8.
ರಹಮಾನ್ ‘ಐ ವಿಟ್‌ನೆಸ್’ ಎಂದು ಯಾರನ್ನು ತೋರಿಸಿದನು?
Answer:
ರಹಮಾನ್ ‘ಐ ವಿಟ್‌ನೆಸ್’ ಎಂದು ಜುಬೇದಳನ್ನು ತೋರಿಸಿದ.

Question 9.
ನಿರೂಪಕರ ಇಕಾಲಜಿಸ್ಟ್ ಗೆಳೆಯ ಯಾರು?
Answer:
ನಿರೂಪಕರ ಇಕಾಲಜಿಸ್ಟ್ ಗೆಳೆಯ ಪ್ರಕಾಶ್,

Question 10.
ಆನೆ ಇಲ್ಲದ್ದರಿಂದ ವೇಲಾಯುಧ ಎಲ್ಲಿ ಕೆಲಸಕ್ಕೆ ಸೇರಿದ?
Answer:
ಆನೆ ಇಲ್ಲದ್ದರಿಂದ ವೇಲಾಯುಧ ಶಿವೇಗೌಡರ ಸಾಮಿಲ್ಲಿನಲ್ಲಿ ಕೆಲಸಕ್ಕೆ ಸೇರಿದ.

Question 11.
ಶಿವೇಗೌಡರು ರಾತ್ರೋ ರಾತ್ರಿ ಆನೆ ಕರೆದುಕೊಂಡು ಹೋದುದ್ದೇಕೆ?
Answer:
ಶಿವೇಗೌಡರು ತಮ್ಮ ಸಾಮಿಲಿನಲ್ಲಿ ಕಳ್ಳನಾಟ ಇಳಿಸಲು ರಾತ್ರೋ ರಾತ್ರಿ ಆನೆ ಕರೆದುಕೊಂಡು ಹೋದರು.

Question 12.
ಪೋಸ್ಟ್‌ಮನ್ ಜಬ್ಬಾರನಿಗೆ ಒದಗಿದ ತೊಂದರೆ ಏನು?
Answer:
ಪೋಸ್ಟ್‌ಮನ್ ಜಬ್ಬಾರನಿಗೆ ಒದಗಿದ ತೊಂದರೆ ಎಂದರೆ, ಪೋಸ್ಟ್ ಕೊಡುವುದಲ್ಲದೆ ಪ್ರತಿದಿನ ಪೋಸ್ಟ್ ಬಾಕ್ಸ್ ಇರುವವರೆಗೂ ಹೋಗಿ ಪೋಸ್ಟ್ ಸಂಗ್ರಹಿಸಿ ಹೆಡ್ಡಾಫೀಸಿಗೆ ಕೊಡಬೇಕಾಗಿತ್ತು.

Question 13.
ಜಬ್ಬಾರ್ ವೆಟಲ್ನರಿ ಆಸ್ಪತ್ರೆಗೆ ಬರಲು ಕಾರಣವೇನು?
Answer:
ನಾಯಿ ಕಚ್ಚಿದ್ದರಿಂದ ಇಂಜೆಕ್ಷನ್ ತೆಗೆದುಕೊಳ್ಳಲು ಜಬ್ಬಾರ್ ವೆಟಯರಿ ಆಸ್ಪತ್ರೆಗೆ ಬಂದಿದ್ದ.

Question 14.
ಮುನ್ಸಿಪಾಲಿಟಿ ಪ್ರೆಸಿಡೆಂಟರ ಹೆಸರೇನು?
Answer:
ಮುನ್ಸಿಪಾಲಿಟಿ ಪ್ರೆಸಿಡೆಂಟರ ಹೆಸರು ಖಾನ್ ಸಾಹೇಬ್.

Question 15.
ನಿರೂಪಕರ ಪ್ರಕಾರ ಮುನ್ಸಿಪಾಲಿಟಿ ಪ್ರೆಸಿಡೆಂಟರ ಕರ್ತವ್ಯ ಯಾವುದು?
Answer:
ನಿರೂಪಕರ ಪ್ರಕಾರ ಮುನ್ಸಿಪಾಲಿಟಿ ಪ್ರೆಸಿಡೆಂಟರ ಕರ್ತವ್ಯ ಊರನ್ನು ಸ್ವಚ್ಛವಾಗಿಡೋದು.

Question 16.
ಟೆಲಿಪೋನ್ ಕಂಬದ ಮೇಲೆ ಮೃತನಾದ ಲೈನ್‌ಮನ್‌ ಯಾರು?
Answer:
ಟೆಲಿಪೋನ್ ಕಂಬದ ಮೇಲೆ ಮೃತನಾದ ಲೈನ್‌ಮನ್ ತಿಪ್ಪಣ್ಣ.

Question 17.
ಟೆಲಿಫೋನ್ ಸಿಬ್ಬಂದಿ ಯಾರ ವಿರುದ್ಧ ಮುಷ್ಕರ ಹೂಡಿದರು?
Answer:
ಟೆಲಿಫೋನ್ ಸಿಬ್ಬಂದಿ ವಿದ್ಯುತ್ ಇಲಾಖೆಯ ವಿರುದ್ಧ ಮುಷ್ಕರ ಹೂಡಿದರು.

Question 18.
ಯಾವ ವಿಷಯ ಪ್ರಸ್ತಾಪಿಸಲು ಲೇಖಕರು ಮೀಟಿಂಗಿಗೆ ಹೋಗಿದ್ದರು?
Answer:
ಮೂಡಿಗೆರೆಯಲ್ಲಿ ಇರುವ ಕಂತ್ರಿ ನಾಯಿಗಳ ಕಾಟವನ್ನು ಪ್ರಸ್ತಾಪಿಸಲೆಂದು ಲೇಖಕರು ಮೀಟಿಂಗ್‌ಗೆ ಹೋಗಿದ್ದರು.

Question 19.
ರೇಂಜರ್ ಆನೆಗೆ ಶೂಟ್ ಮಾಡುವಂತೆ ಯಾರಿಗೆ ಸೂಚಿಸಿದರು?
Answer:
ರೇಂಜರ್ ಆನೆಗೆ ಶೂಟ್ ಮಾಡುವಂತೆ ಫಾರೆಸ್ಟ್ ಆಫೀಸರ್ ನಾಗರಾಜನಿಗೆ ಸೂಚಿಸಿದರು.

Question 20.
ಆನೆಶಾಸ್ತ್ರದವನು ಏನೆಂದು ಭವಿಷ್ಯ ನುಡಿದಿದ್ದನು?
Answer:
ಆನೆಶಾಸ್ತ್ರದವನು ಈ ಆನೆಯಿಂದ ಐದು ಜನ ಪ್ರಾಣ ಕಳೆದುಕೊಳ್ಳುತ್ತಾರೆಂದು ಭವಿಷ್ಯ ನುಡಿದಿದ್ದನು.

Question 21.
ನಾಗರಾಜ ಕೋವಿ ಹಿಡಿದು ಎಲ್ಲಿ ಕುಳಿತಿದ್ದ?
Answer:
ನಾಗರಾಜ ಕೃಷ್ಣಗೌಡರ ತೋಟದ ಬೇಲಿ ಮೂಲೆಯಲ್ಲಿ ಬಿಳಿ ಬೂರುಗದ ಮರದ ಕೆಳಗೆ ಒಳ್ಳೆ ಆಯಕಟ್ಟಿನ ಗಂಡಿಯಲ್ಲಿ ಕೋವಿ ಹಿಡಿದು ಕುಳಿತಿದ್ದ.

Question 22.
ಪೊಲೀಸರು ಏನೆಂದು ಮಹಜರು ಬರೆದುಕೊಂಡರು?
Answer:
ಪೊಲೀಸರು ಕಾಡಲ್ಲ ಹುಡುಕಾಡಿ ಕೊನೆಗೆ ‘ನಾಗರಾಜನ ಕೋವಿ ಸಿಕ್ಕಿದೆ. ಆದರೆ ಹೆಣ ಸಿಗಲಿಲ್ಲ’ ಎಂದು ಮಹಜರು ಬರೆದುಕೊಂಡರು.

II.ಎರಡು ಅಂಕಗಳ ಪ್ರಶ್ನೆಗಳು (ಎರಡುಮೂರು ವಾಕ್ಯಗಳಲ್ಲಿ ಉತ್ತರಿಸಿ):

Question 1.
ನಮ್ಮ ಕಡೆ ಕೆಮ್ಮುವುದು ಕಾಲಿಂಗ್ ಬೆಲ್ ಇದ್ದಹಾಗೆ ಎಂದು ನಿರೂಪಕರು ಹೇಳುವುದೇಕೆ?
Answer:
ಮನೆ ಬಳಿ ಬಂದವರು ಗಮನ ಸೆಳೆಯಲು ಕೆಮ್ಮುವುದು, ಕ್ಯಾಕರಿಸುವುದು ಮಾಡಿ ಗಲಾಟೆ ಮಾಡುತ್ತಿದ್ದರು. ಬಹುಶಃ ಭಾಷೆ ಉಪಯೋಗಿಸಿ ಕರೆಯಬೇಕೆಂದಾದರೆ ಮನೆಯವರ ಹೆಸರೇನು? ಹೆಸರು ಹಿಡಿದು ಕರೆಯಬೇಕೋ? ಸ್ವಾಮಿ ಎನ್ನಬೇಕೋ? ಬಹುವಚನ ಉಪಯೋಗಿಸಬೇಕೋ? ಏಕವಚನವೋ? ಭಾಷೆ ಉಪಯೋಗಿಸಿ ಕರೆಯಬೇಕೆಂದಾದಲ್ಲಿ ಹಲವು ಬಿಕ್ಕಟ್ಟುಗಳನ್ನು ಎದುರಿಸಬೇಕು. ಅದರ ಬದಲು ಒಂದೆರಡು ಸಾರಿ ಕೆಮ್ಮಿದರೆ ಈ ಎಲ್ಲ ತೊಂದರೆಗಳೇ ಇರುವುದಿಲ್ಲ ಎನ್ನುವುದು ನಿರೂಪಕರ ಅಭಿಪ್ರಾಯ.

Question 2.
ದುರ್ಗಪ್ಪ ಏಕೆ ಬಂದಿರಬಹುದೆಂದು ನಿರೂಪಕರು ಯೋಚಿಸಿದರು?
Answer:
ನಿರೂಪಕರು ದುರ್ಗಪ್ಪನ ಮಾತುಗಳನ್ನು ಕೇಳಿದಾಗ ಏನೂ ಕೆಲಸವಿಲ್ಲದೆ ಆತ ಪುರುಸೊತ್ತಾಗಿದ್ದ ಎಂದು ಅರ್ಥಬರುತಿತ್ತು. ಹಾಗಿದ್ದರೆ ಏನೋ ಇನಾಮು ಕೇಳಲೋ ಅಥವಾ ಚಂದಾವಸೂಲಿಗೋ ಇಲ್ಲವೇ ಮನೆ ಉಪಯೋಗಕ್ಕೆ ಕಾಫಿ ಬೀಜವನ್ನೋ ಏಲಕ್ಕಿಯನ್ನೋ ಕೇಳಲು ಈ ರೀತಿ ಪೀಠಿಕೆ ಹಾಕಿರಬಹುದೆಂದು ಯೋಚಿಸಿದರು.

Question 3.
ಕೃಷ್ಣಗೌಡರ ಆನೆ ಹುಟ್ಟಿ ಬೆಳೆದ ಬಗೆ ಹೇಗೆ?
Answer:
ಕೃಷ್ಣಗೌಡರ ಆನೆ ಕಾಡಿನಿಂದ ಹಿಡಿದು ತಂದು ಪಳಗಿಸಿದ ಆನೆಯಲ್ಲ. ಘಟ್ಟದ ಕೆಳಗಿದ್ದ ಗೂಳೂರು ಮಠದ ಆನೆ ಹಾಕಿದ ಮರಿಯೇ ಇದಾಗಿತ್ತು. ಇದು ಹುಟ್ಟಿದ್ದು ಬೆಳೆದದ್ದು ಎಲ್ಲ ಜನಗಳ ನಡುವೆಯೇ. ಹಾಗಾಗಿ ಅದಕ್ಕೆ ಕಾಡಿನ ಬಗ್ಗೆಯಾಗಲಿ ಕಾಡಿನಲ್ಲಿರುವ ಇತರ ಕಾಡಾನೆಗಳ ಬಗ್ಗೆಯಾಗಲಿ ಏನೂ ತಿಳಿವಳಿಕೆ ಇರಲಿಲ್ಲ.

Question 4.
ಮಠದವರಿಗೆ ಆನೆಗಿಂತ ವೇಲಾಯುಧನನ್ನು ಸಾಕಲು ತ್ರಾಸವಾದುದೇಕೆ?
Answer:
ಮಠದವರಿಗೆ ಆನೆಗಿಂತ ವೇಲಾಯುಧನನ್ನು ಸಾಕಲು ತ್ರಾಸದಾಯಕವಾಗಿತ್ತು ಏಕೆಂದರೆ, ಇಪ್ಪತ್ತನಾಲ್ಕು ಗಂಟೆಯು ಕುಡಿದೇ ಇರುತ್ತಿದ್ದ. ಅಲ್ಲದೆ ಮಠದ ಸಾತ್ವಿಕ ವಾತಾವರಣಕ್ಕೂ ದೊಡ್ಡ ತಲೆನೋವಾಗಿದ್ದ. ಒಮ್ಮೆ ಆತನ ದುರ್ನಡತೆಗಾಗಿ ಛೀಮಾರಿ ಹಾಕಿಸಿ ಓಡಿಸಿದಾಗ ಆನೆ ಅನೇಕ ದಿನಗಳ ವರೆಗೆ ಯಾರ ಮಾತನ್ನು ಕೇಳದೆ ಊಟವನ್ನೇ ವರ್ಜಿಸಿತ್ತು. ಆನೆ ಇರುವವರೆಗೆ ತನ್ನ ಅನಿವಾರ್ಯತೆಯನ್ನು ಮನಗಂಡವೇಲಾಯುಧ ಮಠಕ್ಕೆ ಇನ್ನಷ್ಟು ಕಿರುಕುಳ ಕೊಡಲಾರಂಭಿಸಿದ.

Question 5.
ಆನೆ ಸಾಕುವುದರ ಬಗ್ಗೆ ಜನರ ನಂಬಿಕೆ ಏನಾಗಿತ್ತು?
Answer:
ಆನೆ ಸಾಕುವುದು ಎಂದರೆ ಎಲೆಕ್ಷನ್ನಿಗೆ ನಿಂತ ಹಾಗೆ. ಮನೆ ಮಠ ಸಂಪೂರ್ಣ ಹಾಳುಮಾಡಿಕೊಂಡು ಹೆಂಡತಿ ಮಕ್ಕಳ ಬಾಯಿಗೆ ಮಣ್ಣು ಹಾಕುವ ಕ್ಷಿಪ್ರ ಮಾರ್ಗ ಇದೆಂದು ಎಲ್ಲರೂ ದೃಢವಾಗಿ ನಂಬಿದ್ದರು.

Question 6.
ಸೊರಗಿದ್ದ ಆನೆಯನ್ನು ಕೃಷ್ಣಗೌಡ ಹೇಗೆ ಸಾಕಿದ?
Answer:
ಮಠದಲ್ಲಿ ಬರಿ ಒಣಹುಲ್ಲು ಮೊಸರನ್ನ ತಿಂದು ಸೊರಗಿದ್ದ ಆನೆಗೆ ಬಯನೆ ಸೊಪ್ಪು, ಹಸಿ ಹುಲ್ಲು, ಹಿಂಡಿ, ಬೆಲ್ಲ ಗೆಣಸು ಎಲ್ಲ ಕೊಟ್ಟು ಕೃಷ್ಣಗೌಡ ಪಗಡುದಸ್ತಾಗಿ ಬೆಳೆಸಿದ. ಆನೆ ಮರ ಎಳೆದು ತಂದ ಬಾಡಿಗೆಯಿಂದ ಕೃಷ್ಣಗೌಡನಿಗೆ ಒಳ್ಳೆಯ ಲಾಭವೂ ಕೂಡ ಬಂತು.

Question 7.
ಕಾಡಾನೆಗಳ ಹಾವಳಿಗೆ ಪ್ರಕಾಶ್ ನೀಡಿದ ಕಾರಣಗಳೇನು?
Answer:
ಅಪ್ಪರ್ ಭದ್ರಾ ಅಣೆಕಟ್ಟಿನಿಂದ ಮುಳುಗಡೆಯಾಗುವ ಕಾಡುಗಳನ್ನು ಸರ್ವೆ ಮಾಡಲು ಬಂದಿದ್ದ ಇಕಾಲಜಿಸ್ಟ್ ಪ್ರಕಾಶ್ ಮೂಡಿಗೆರೆಯಲ್ಲಿ ಒಂದು ಭಾಷಣ ಮಾಡುತ್ತ, ಕಾಡಾನೆಗಳ ಹಾವಳಿಗೆ ಕಾರಣ ಅರಣ್ಯ ಇಲಾಖೆಯವರು ಕಾಡಿನ ಮರಗಳನ್ನು ತೆಗೆದು ನೀಲಗಿರಿ, ಅಕೇಶಿಯಾ ಮುಂತಾದ ಆನೆಗಳಿಗೆ ನಿರುಪಯುಕ್ತವಾದುದನ್ನು ನೆಡುತ್ತಿರುವುದು ಎಂಬುದು.

Question 8.
ಫಾರೆಸ್ಟ್ ಡಿಪಾರ್ಟ್‌ ಮೆಂಟಿನವರ ನಂಬರ್ ಒನ್ ಎನಿಮಿಗಳು ಯಾರು?
Answer:
ಫಾರೆಸ್ಟ್ ಡಿಪಾರ್ಟ್‌ ಮೆಂಟಿನವರಿಗೆ, ಮೂರು ಡಿಪಾರ್ಟಮೆಂಟಗಳು ನಂಬರ್ ಒನ್ ಎನಿಮಿಗಳು, ಪಿಡಬ್ಲ್ಯು ಡಿನವರು, ಕರೆಂಟಿನವರು, ಟೆಲಿಫೋನಿನವರು. ಪಿಡಬ್ಲ್ಯು ಡಿನವರು ರಸ್ತೆಗೆ ಟಾರು ಹಾಕಲು ಮರಾನೆಲ್ಲ ಕಡಿದು ಟಾರು ಕಾಯಿಸ್ಕೋತಾರೆ. ಟೆಲಿಫೋನಿನವರು ಕರೆಂಟಿನವರು ಲೈನ್ ಎಳಿತೀವಿ ಅಂತ ಸಾವಿರಾರು ಎಕರೆ ಕಾಡು ಕಡಿದು ಹಾಳುಮಾಡುತ್ತಾರೆ ಎನ್ನುವುದಾಗಿ ಫಾರೆಸ್ಟ್ ಆಫೀಸರ್ ನಾಗರಾಜ ಹೇಳುತ್ತಾನೆ.

Question 9.
ನಾಗರಾಜ ದುರ್ಗಪ್ಪನ ಮೇಲೆ ಏನೆಂದು ರೇಗಿದನು?
Answer:
ನಾಗರಾಜ ದುರ್ಗಪ್ಪನ ಮೇಲೆ ‘ಏನೋ ಮರ ಯಾಕೆ ಕಡೀತೀಯಾಂತ ಕೇಳಿದರೆ ಮ್ಯಾಲಿನೋರ ಕೇಳ್ಳಳಿ ಅಂತ ಉಚಾಯಿಸಿ ಮಾತಾಡ್ತೀಯಾ? ಹೇಳದೆ ಕೇಳದೆ ಡಿಪಾರ್ಟ್‌ ಮೆಂಟಿನ ಮರ ಕಡಿದರೆ ಇನ್ನೊಂದ್ ಸಾರಿ, ಮತ್ತೇನಿಲ್ಲ! ನಿನ್ನೆ ಲಾಕಪ್ಪಿಗೆ ಹಾಕಿಸಿ ಬಿಡ್ತೀನಿ. ಏನಂತ ತಿಳ್ಕೊಂಡಿದ್ದೀಯ’. ಎಂದು ರೇಗಿದನು.

Question 10.
ಡ್ರೈವರ್‌ನ ತಲೆ ಜಜ್ಜಿ ಹೋದದ್ದು ಹೇಗೆ? ಆನೆ ಅದಕ್ಕೆ ಕಾರಣವೇ?
Answer:
ವೇಲಾಯುಧ ಆನೆಯಲ್ಲಿ ಲಾರಿಯಲ್ಲಿರುವ ಮರದ ದಿಮ್ಮಿಗಳನ್ನು ತಳ್ಳಿ ಉರುಳಿಸಲು ಹೇಳಿದ. ಆದರೆ ಲಾರಿಗೂ ನಾಟಗಳಿಗೂ ಹಗ್ಗ ಬಿಗಿದು ಕಟ್ಟಿದ್ದು ಬಿಚ್ಚಬೇಕೆಂದು ಮರತೇಹೋಗಿತ್ತು. ಆನೆ ನಾಟಾಗಳನ್ನು ಹಗ್ಗದ ಸಮೇತ ಎಳೆದದ್ದರಿಂದ ಲಾರಿ ಮೆಲ್ಲಗೆ ವಾಲುತ್ತ ಒಂದು ಕಡೆಗೆ ಉರುಳಿತು. ಆದರೆ ಕ್ಯಾಬಿನ್ನಿನಲ್ಲಿ ಇಟ್ಟಿದ್ದ ಲಾರಿ ಜಾಕ್ ಲಾರಿ ಸ್ಟೇರಿಂಗ್ ಮೇಲೆ ಮಲಗಿದ್ದ ಡ್ರೈವರ್ ತಲೆ ಬುರುಡೆಯ ಮೇಲೆ ಬಿದ್ದ ಕಾರಣ ಡ್ರೈವರ್ ತಲೆ ಜಜ್ಜಿ ಹೋಯಿತು. ಆದರೆ ಅದಕ್ಕೆ ಆನೆ ಕಾರಣವಲ್ಲ. ಆನೆ ವೇಲಾಯುಧ ಏನು ಹೇಳಿದನೋ ಅದರಂತೆ ಆನೆ ನಡೆಯಿತು.

Question 11.
ತನ್ನ ಕೆಲಸ ಅತ್ಯಂತ ಅಪಾಯಕಾರಿಯೆಂದು ದುರ್ಗಪ್ಪ ವಿವರಿಸಿದ್ದು ಹೇಗೆ?
Answer:
ಲೈನ್‌ಮನ್ ಕೆಲಸಕ್ಕೆ ಸೇರಿದ ಮೇಲೆ ಪ್ರಾಣದ ಆಸೆ ಇಡ್ಕೊಂಡ್ರೆ ಆಗುತ್ತ? ನಮ್ಮ ಡಿಪಾರ್ಟ್‌ ಮೆಂಟಿನ ಲೈನ್‌ಮನ್‌ಗಳ್ಳಾರದ್ರೂ ಈ ವರೆಗೆ ಸರ್ವಿಸ್ ಮುಗಿಸಿ ರಿಟೈರಾಗಿರೋದನ್ನ ನೋಡಿದ್ದೀರಾ?
ಕರೆಂಟಿನ ಜೊತೆ ಕೆಲಸ ಅದು. ಒಂದಲ್ಲ ಒಂದು ದಿನ ಸ್ವಲ್ಪ ಎಚ್ಚರ ತಪ್ಪಿದರೂ ಅಲ್ಲಿಗೆ ನಮ್ಮ ಸರ್ವಿಸ್ ಮುಗಿದಂಗೆ ಎಂದು ತನ್ನ ಕೆಲಸ ಅತ್ಯಂತ ಅಪಾಯಕಾರಿಯೆಂದು ದುರ್ಗಪ್ಪ ವಿವರಿಸಿದ.

Question 12.
ಜಬ್ಬಾರ್ ನಿರೂಪಕರಿಗೆ ಅಂಚೆ ವಿಲೇವಾರಿ ಬಗ್ಗೆ ಅಸಡ್ಡೆಯಿಂದ ಏನು ಹೇಳಿದ ?
Answer:
ಜಬ್ಬಾರ್ ನಿರೂಪಕರಿಗೆ ಅಂಚೆ ವಿಲೇವಾರಿ ಬಗ್ಗೆ ಆಸಡ್ಡೆಯಿಂದ “ಆಯ್ಯೋ ಯಾವೋ ಮದ್ದೆಮನೆ ಕಾಗದ ಸಾರ್. ನೀವೇನು ಹೋಗೋದಿಲ್ಲ ಏನಿಲ್ಲ. ಅವನ್ನು ಇವತ್ತು ಕೊಟ್ಟರೂ ಒಂದೆ. ನಾಳೆ ಕೊಟ್ಟರೂ ಒಂದ” ಎಂದು ಹೇಳಿದ.

Question 13.
ನಾಯಿ ಕಚ್ಚಿದ್ದೆಲ್ಲಿ ಎಂದಾಗ ಜಬ್ಬಾರ್ ಇರುಸುಮುರುಸುನಿಂದ ಏನು ಹೇಳಿದನು?
Answer:
ನಾಯಿ ಕಚ್ಚಿದ್ದೆಲ್ಲಿ ಎಂದಾಗ ಜಬ್ಬಾರ್ ಇರುಸು ಮುರುಸುನಿಂದ; ಹೋಗಲಿ ಬಿಡಿ. ಅದು ಬೀದೀಲಿ ತೋರಿಸೋ ಹಂಗಿಲ್ಲ. ನನ್ನಗಂದು ಅಂಥಾ ಜಾಗದಲ್ಲಿ ಕಚ್ಚಿದೆ. ಪ್ಯಾಂಟು ಬಿಚ್ಚಬೇಕಾಗುತ್ತೆ ಎಂದು ದನಿ ತಗ್ಗಿಸಿ ಹೇಳಿದ.

Question 14.
ಹುಚ್ಚುನಾಯಿಗಳು ಆಸ್ಪತ್ರೆಯಲ್ಲಿ ಹೇಗೆ ವರ್ತಿಸುತ್ತವೆಂದು ಪುಟ್ಟಯ್ಯ ಹೇಳಿದನು?
Answer:
ಹುಚ್ಚುನಾಯಿಗಳು ಆಸ್ಪತ್ರೆಯಲ್ಲಿ ವರ್ತಿಸುವ ಬಗ್ಗೆ ಪುಟ್ಟಯ್ಯ ಹೀಗೆ ಹೇಳುತ್ತಾನೆ: ಹುಚ್ಚುನಾಯಿ ಹತ್ರ ಧೈರ್ಯದ ಪ್ರಶ್ನೆನೆ ಬರೋದಿಲ್ಲ. ಅವಕ್ಕೆ ತಲೆಕೆಟ್ಟು ಕಂಡಕಂಡಿದ್ದಕ್ಕೆಲ್ಲಾ ಕಚ್ಚುತ್ತವೆ. ಆಸ್ಪತ್ರೆಗೆ ತಗೊಂಡು ಬಂದವನ್ನ ನೋಡಿದೀನಲ್ಲ. ಮೇಜು ಕುರ್ಚಿ ಕಾಲಿಗೆಲ್ಲ ಕಚ್ಚುತ್ತವೆ ಎಂದನು.

Question 15.
ನಾಯನ್ನು ಕೊಲ್ಲದೆ ನೌಕರರು ಸುಳ್ಳು ಹೇಳಿರುವರೆಂದು ನಿರೂಪಕರು ಯಾವ ಸಲಹೆ ನೀಡಿದರು?
Answer:
ನಿರೂಪಕರು ಖಾನ್‌ಸಾಬ್‌ ಗೆ; ಒಂದು ಕೆಲಸ ಮಾಡಿ. ಇನ್ನು ಮೇಲೆ ನಾಯಿ ಕೊಂದರೆ ಬಾಲ ತಗೊಂಡು ಬಂದು ತೋರಿಸಬೇಕು ಅಂತ ಹೇಳಿ. ಅವರ ಲೆಕ್ಕ ಸುಳ್ಳೋ ನಿಜವೋ ನಿಮಗೆ ಗೊತ್ತಾಗುತ್ತೆ ಎಂದು ಸಲಹೆ ನೀಡಿದರು.

Question 16.
ಆನೆಯೇ ತಿಪ್ಪಣ್ಣನ ಸಾವಿಗೆ ಕಾರಣವೆಂದು ದುರ್ಗಪ್ಪ ಹೇಳಿದಾಗ ನಿರೂಪಕರ ಪ್ರತಿಕ್ರಿಯೆ ಏನು?
Answer:
ಆನೆಯೇ ತಿಪ್ಪಣ್ಣನ ಸಾವಿಗೆ ಕಾರಣವೆಂದು ದುರ್ಗಪ್ಪ ಹೇಳಿದಾಗ ನಿರೂಪಕರು “ಅದೇನ್ಮಾಡುತ್ತಯ್ಯಾ ಆನೆ. ಎಲ್ಲೋ ಕಂಬದ ಮೇಲೆ ಸತ್ತಿರೋ ತಿಪ್ಪಣ್ಣನಿಗೂ, ಎಲ್ಲೋ ಓಡಾಡಿಕೊಂಡಿರೋ ಆನೆಗೂ ಕಟೀರಲ್ಲಯ್ಯ. ಬಾಯಿಲ್ಲದೋರು ಈ ಪ್ರಪಂಚದಲ್ಲಿ ಬದುಕೋಹಂಗೇ ಇಲ್ಲವೇನಯ್ಯ?” ಎಂದು ಪ್ರತಿಕ್ರಿಯಿಸಿದರು.

Question 17.
ಡ್ರೈವರ್ ಅಬ್ಬಾಸ್, ಕ್ಲೀನರ್ ಕೃಷ್ಣರ ಸಾವಿಗೆ ಕಾರಣವೇನು?
Answer:
ಲೋಡು ಲಾರಿ ಬಿಟ್ಟುಕೊಂಡು ಬರುತ್ತಿದ್ದ ಅಬ್ಬಾಸ್‌ಗೆ, ಎರಡು ದಂ ಬೀಡಿ ಎಳೆಯಬೇಕೆನ್ನುವ ತೆವಲು ಉಂಟಾಯಿತು. ಬೀಡಿ ಹಚ್ಚಿಕೊಳ್ಳುವವರೆಗೆ ಕ್ಲೀರ್ನ ಕೃಷ್ಣನಲ್ಲಿ ಸ್ಟೇರಿಂಗ್ ಹಿಡಿಯಲು ಹೇಳುತ್ತಾನೆ. ಆದರೆ ಕ್ಲೀನರ್ ಕೃಷ್ಣ ನಿದ್ದೆಯ ಮಂಪರಿನಲ್ಲಿ ಇದ್ದ ಕಾರಣ ಆತ ಸ್ಟೇರಿಂಗನ್ನು ಆಚೀಚೆ ಅಲ್ಲಾಡದಂತೆ ವಜ್ರಮುಷ್ಟಿಯಲ್ಲಿ ಹಿಡಿಯುತ್ತಾನೆ. ಆದರೆ ನೇರವಾಗಿ ಮರದ ದೊಡ್ಡ ಕಾಂಡದ ಕಡೆಗೆ ಮುನ್ನುಗ್ಗುತ್ತಿದ್ದ ಲಾರಿಯನ್ನು ತಪ್ಪಿಸಲು ಡ್ರೈವರ್ ಅಬ್ಬಾಸ್ ಕೃಷ್ಣನಲ್ಲಿ ಸ್ಟೇರಿಂಗ್ ಬಿಡೊ ಎನ್ನುತ್ತಾನೆ. ಆದರೆ ಕೃಷ್ಣ ಬಿಡದೇ ಇದ್ದಾಗ ಕೊನೆ ಕ್ಷಣದಲ್ಲಿ ಬ್ರೇಕ್ ಹಾಕಲು ಮುಂದಾಗುತ್ತಾನೆ. ಆದರೆ ಅಷ್ಟೊತ್ತಿಗಾಗಲೇ ಪರಿಸ್ಥಿತಿ ಕೈಮೀರಿ ಲಾರಿ ಮರಕ್ಕೆ ಡಿಕ್ಕಿ ಹೊಡೆಯುತ್ತದೆ. ಆ ತೀವ್ರತೆಗೆ ಡ್ರೈವರ್ ಅಬ್ಬಾಸ್ ಕ್ಲೀನರ್ ಕೃಷ್ಣ ಇಬ್ಬರೂ ಪ್ರಾಣ ಕಳೆದುಕೊಳ್ಳುತ್ತಾರೆ.

Question 18.
ಡ್ರೈವರ್ ಅಬ್ಬಾಸ್ ಮತ್ತು ಕ್ಲೀನರ್ ಕೃಷ್ಣರ ಸಾವಿಗೆ ಆನೆ ಕಾರಣವಲ್ಲವೆಂದು ಕೃಷ್ಣಗೌಡರಿಗೆ ಏಕೆ ಹೇಳಲಾಗಲಿಲ್ಲ?
Answer:
ಡ್ರೈವರ್ ಅಬ್ಬಾಸ್ ಮತ್ತು ಕ್ಲೀನರ್ ಕೃಷ್ಣರ ಸಾವಿಗೆ ಆನೆ ಕಾರಣವಲ್ಲವೆಂದು ಕೃಷ್ಣಗೌಡರಿಗೆ ಹೇಳಲಾಗಲಿಲ್ಲ ಏಕೆಂದರೆ, ಅವರಿಬ್ಬರು ಸತ್ತ ಸಮಯದಲ್ಲಿ ವೇಲಾಯುಧ ಆನೆಯ ಜೊತೆಗೆ ಶಿವೇಗೌಡರ ಸಾಮಿಲಿನಲ್ಲಿ ಲಾರಿ ತರುವ ಕಳ್ಳನಾಟಕ್ಕಾಗಿ ಕಾಯುತ್ತಾ ನಿಂತಿದ್ದೆ. ಆದರೆ ಈ ವಿಷಯ ಹೇಳುವುದು ಅಸಾಧ್ಯವಾಗಿತ್ತು. ಏಕೆಂದರೆ ಅದು ಕಳ್ಳತನದ ವ್ಯವಹಾರವಾಗಿತ್ತು.

Question 19.
ಆನೆಯನ್ನು ಹದ್ದುಬಸ್ತಿನಲ್ಲಿಡುವುದರ ಬಗ್ಗೆ ವೇಲಾಯುಧನ ಅಪ್ಪ ಏನು ತಿಳಿಸಿದ್ದ?
Answer:
ಆನೆಯನ್ನು ಹದ್ದುಬಸ್ತಿನಲ್ಲಿಡುವುದರ ಬಗ್ಗೆ ವೇಲಾಯುಧನ ಅಪ್ಪ ಹೀಗೆ ಹೇಳಿದ್ದ: ಆನೆಯ ಕಾಲಿನ ಉಗುರುಗಳ ಬಳಿ ಅಂಕುಶದಿಂದ ತಿವಿದರೆ ಅದಕ್ಕೆ ಪ್ರಾಣವೇ ಹೋಗುವಷ್ಟು ನೋವಾಗುತ್ತದೆಂದೂ, ಆ ಭಯಂಕರ ನೋವಿಗೆ ನಾಲ್ಕು ಸಾರಿ ತಿವಿಯುವುದರೊಳಗೆ ಎಂಥ ಪುಂಡು ಆನೆಯಾದರೂ ಶರಣಾಗಿ ನೆಲದ ಮೇಲೆ ಮಲಗಿಬಿಡುತ್ತದೆಂದೂ ಹೇಳಿದ್ದ.

Question 20.
ಅರಣ್ಯ ಇಲಾಖೆಯವರು ನಾಗರಾಜನನ್ನು ಕುರಿತು ಏನೆಂದು ಜಾಹೀರಾತು ನೀಡಿದರು?
Answer:
ಅರಣ್ಯ ಇಲಾಖೆಯವರು ನಾಗರಾಜನ ಫೋಟೋವನ್ನು ಪತ್ರಿಕೆಗಳಲ್ಲಿ ಕೊಟ್ಟು, ಮನೆಯವರು. ಮೇಲಧಿಕಾರಿಗಳು ಹಾಗೂ ಊರಿನ ಜನರೆಲ್ಲಾ ನಿನ್ನದೇ ನಿರೀಕ್ಷೆಯಲ್ಲಿದ್ದಾರೆಂದೂ, ನಿನ್ನ ವಿರುದ್ಧ ಯಾವುದೇ ಕ್ರಮ ಅಥವಾ ಷೋಕಾಸ್ ನೋಟೀಸ್ ಅಥವಾ ತನಿಖೆ ನಡೆಸುವುದಿಲ್ಲವೆಂದೂ, ಈ ಮನವಿ ನೋಡಿದ ಕೂಡಲೇ ಎಲ್ಲಿದ್ದರೂ ಹಿಂದಿರುಗಿ ಬರತಕ್ಕದೆಂದೂ ಜಾಹೀರಾತು ನೀಡಿದರು.

2nd PUC Kannada Chapter 21 Krishna Gowdana Aane.
2nd PUC Kannada Chapter 21 Krishna Gowdana Aane.
III.ಸಂದರ್ಭ ಸಹಿತ ವಿವರಿಸಿ.

Question 1.
ನಮ್ಮ ಕಡೆ ಕೆಮ್ಮು ಕಾಲಿಂಗ್‌ಬೆಲ್ ಇದ್ದ ಹಾಗೆ..

Answer:
ಆಯ್ಕೆ : ಈ ಮೇಲಿನ ವಾಕ್ಯವನ್ನು ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರು ರಚಿಸಿದ. ‘ಕಿರಗೂರಿನ ಗಯ್ಯಾಳಿಗಳು’ ಎಂಬ ಕೃತಿಯಿಂದ ಆಯ್ದ, ‘ಕೃಷ್ಣಗೌಡನ ಆನೆ’ ಎಂಬ ನೀಳತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ನಿರೂಪಕರು ಲೈನ್‌ ಮನ್ ದುರ್ಗಪ್ಪನು ಕೆಮ್ಮಿದ ಸಂದರ್ಭವನ್ನು ನೆನಪಿಸುತ್ತಾ ಹೇಳುವ ಮಾತು ಇದಾಗಿದೆ.
ವಿವರಣೆ: ನಿರೂಪಕರು ಹಳೆಯ ಫೋರ್ಡ್ ಜೀಪಿನ ಗೇರ್‌ಬಾಕ್ಸ್‌ನ್ನು ಅದರ ಅಡಿ ಬಿದ್ದುಕೊಂಡು ರಿಪೇರಿ ಮಾಡುತ್ತಿರುತ್ತಾರೆ. ಆಗ ಅಲ್ಲಿಗೆ ಲೈನ್‌ಮನ್ ದುರ್ಗಪ್ಪ ಕೊಡಲಿ ಕೇಳಲಿಕ್ಕಾಗಿ ಬರುತ್ತಾನೆ. ಬಂದವನಿಗೆ ನಿರೂಪಕರನ್ನು ಹೇಗೆ ಮಾತನಾಡಿಸುವುದು ಎಂದು ತಿಳಿಯದೇ ಒಂದೆರಡು ಬಾರಿ ಕೆಯ್ಯುತ್ತಾನೆ. ಆತನ ಕೆಮ್ಮನ್ನು ಗಮನಿಸಿದ ನಿರೂಪಕರು ಈ ಮೇಲಿನಂತೆ ಹೇಳುತ್ತಾರೆ.

Question 2.
ಆನೆ ಸಾಕುವುದು ಎಂದರೆ ಎಲೆಕ್ಷನ್ನಿಗೆ ನಿಂತ ಹಾಗೆ.

Answer:
ಆಯ್ಕೆ: ಈ ವಾಕ್ಯವನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ರಚಿಸಿದ ‘ಕಿರಗೂರಿನ ಗಯ್ಯಾಳಿಗಳು’ ಎಂಬ ಕೃತಿಯಿಂದ ಆಯ್ದ, ‘ಕೃಷ್ಣಗೌಡನ ಆನೆ’ ಎಂಬ ನೀಳತೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಎಲ್ಲಾ ತರಹದ ವ್ಯವಹಾರಗಳಲ್ಲಿ ಸೋತ ಕೃಷ್ಣಗೌಡರು ಆನೆಯನ್ನು ಖರೀದಿಸಿದಾಗ ಅವರ ಬಗ್ಗೆ ಜನರು ಪಟ್ಟ ಅಭಿಪ್ರಾಯ ಇಲ್ಲಿದೆ.
ವಿವರಣೆ: ವಿಮ್ ಕೋ ಕಂಪೆನಿಯವರು ಬೆಂಕಿಕಡ್ಡಿ ಮರ ಕಡಿಯಲು ಗುತ್ತಿಗೆ ಪಡೆದು ಕೊಂಡಾಗ, ಚಾರ್ಮಡಿ ಕಣಿವೆಯ ಪಾತಾಳದಲ್ಲಿದ್ದ ಮರಗಳನ್ನು ಲಾರಿ ದಾರಿಗೆ ಸಾಗಿಸಲು ಆನೆಯ ಅಗತ್ಯ ಇತ್ತು.
ಆಗ ಮರಗಳನ್ನು ಸಾಗಿಸುವ ಗುತ್ತಿಗೆಯನ್ನು ಕೃಷ್ಣಗೌಡರು ತಾನು ತೆಗೆದುಕೊಂಡು ಆನೆಯನ್ನು ಗೂಳೂರು ಮಠದಿಂದ ಖರೀದಿ ಮಾಡುತ್ತಾರೆ. ಆದರೆ ಎಲ್ಲಾ ತರಹದ ವ್ಯವಹಾರಗಳನ್ನು ಮಾಡಿ ಎಲ್ಲದರಲ್ಲೂ ನಷ್ಟ ಅನುಭವಿಸಿ ಸೋತು ಕೃಷ್ಣಗೌಡ ಆನೆಯನ್ನು ತಂದಾಗ ಇಲ್ಲಿಗೆ ಇವನ ಕತೆ ಮುಗಿದಂತೆಯೇ ಎಂದು ಎಲ್ಲಾ ತೀರ್ಮಾನಿಸಿದರು. ಆಗ ಈ ಮೇಲಿನ ಮಾತು ಉಲ್ಲೇಖಿತವಾಗುತ್ತದೆ.

Question 3.
ಆನೆಗೂ ಮಾನ ಮರ್ಯಾದೆ ಇರುತ್ತೆ ತಿಳುಕೊ.

Answer:
ಆಯ್ಕೆ: ಈ ವಾಕ್ಯವನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ರಚಿಸಿದ ‘ಕಿರಗೂರಿನ ಗಯ್ಯಾಳಿಗಳು’ ಎಂಬ ಕೃತಿಯಿಂದ ಆಯ್ದ, ‘ಕೃಷ್ಣಗೌಡನ ಆನೆ’ ಎಂಬ ನೀಳತೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ನೆರೆದಿದ್ದ ಜನರು ರಹಮಾನ್ ಸಾಬಿಗೆ ಹೇಳುವ ಮಾತು ಇದಾಗಿದೆ.
ವಿವರಣೆ: ಒಮ್ಮೆ ಆನೆಯು ರಹಮಾನ್ ಸಾಬಿಯ ಪೆಟ್ಟಿಗೆ ಅಂಗಡಿಯನ್ನು ದೂಡಿ ಬೀಳಿಸಿತು. ಆಗ ರಹಮಾನ್ ದೊಡ್ಡ ರಂಪಾಟವನ್ನೇ ಮಾಡಿದ. ಈ ನಡುವೆ ವೇಲಾಯುಧ ಅಲ್ಲಿಗೆ ಆಗಮಿಸಿ ಆನೆಯ ಪರ ನಿಂತ. ಆಗ ರಹಮಾನ್, ಜುಬೇದಾಳನ್ನು ಪ್ರತ್ಯಕ್ಷ ಸಾಕ್ಷಿಯೆಂಬಂತೆ ಆಕೆಯಲ್ಲಿ ಕೇಳಿ ಎಂದ. ಆದರೆ ಆಕೆ ರಹಮಾನ್‌ನ ಪರ ಮಾತನಾಡದೆ ಆನೆಯ ಪರವಾಗಿ ಮತನಾಡುತ್ತ, ರೆಹಮಾನ್ ಏನೋ ಅನ್ನ ಬಾರದ್ದನ್ನು ಅಂದ ಎಂದು ಹೇಳುತ್ತಾಳೆ. ಆಗ ಅಲ್ಲಿ ನೆರೆದಿರುವ ಎಲ್ಲರೂ ಆನೆಗೆ ಒಂದು ವ್ಯಕ್ತಿತ್ವವನ್ನು ಆರೋಪಿಸುತ್ತಾ ಈ ಮೇಲಿನಂತೆ ಹೇಳುತ್ತಾರೆ.

Question 4.
ನನ್ನ ಕೊಡಲಿ ಯಾಕೆ ತಂದು ಆಫೀಸಿನಲ್ಲಿ ಇಡ್ಕೊಂಡಿದ್ದೀರ?

Answer:
ಆಯ್ಕೆ: ಈ ವಾಕ್ಯವನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ರಚಿಸಿದ ‘ಕಿರಗೂರಿನ ಗಯ್ಯಾಳಿಗಳು’ ಎಂಬ ಕೃತಿಯಿಂದ ಆಯ್ದ, ‘ಕೃಷ್ಣಗೌಡನ ಆನೆ’ ಎಂಬ ನೀಳತೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ನಿರೂಪಕರು ಫಾರೆಸ್ಟ್ ಆಫೀಸರ್ ನಾಗರಾಜ್‌ನಲ್ಲಿ ಕೇಳುವ ಮಾತು ಇದಾಗಿದೆ.
ವಿವರಣೆ: ದುರ್ಗಪ್ಪ ತೆಗೆದುಕೊಂಡು ಹೋಗಿರುವ ಕೊಡಲಿಯು ನಿರೂಪಕರದ್ದಾಗಿದ್ದಿತು. ದುರ್ಗಪ್ಪ ಮರ ಕಡಿಯುವುದನ್ನು ಕಂಡ ಅರಣ್ಯ ಇಲಾಖೆಯವರು ಸಾಕ್ಷ್ಯಕ್ಕೆ ಕೊಡಲಿ ತಂದಿಟ್ಟುಕೊಂಡಿದ್ದರು. ಇದನ್ನು ತಿಳಿದ ನಿರೂಪಕರು ನಾಗರಾಜನ ಬಳಿ ವಿಚಾರಿಸುವಾಗ ಈ ಮೇಲಿನ ಮಾತು ಬಂದಿದೆ.

Question 5.
ವೆಪನ್ ಸಾರ್, ವೆಪನ್ ನಮಗೆ ಮುಖ್ಯ.

Answer:
ಆಯ್ಕೆ: ಈ ವಾಕ್ಯವನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ರಚಿಸಿದ ‘ಕಿರಗೂರಿನ ಗಯ್ಯಾಳಿಗಳು’ ಎಂಬ ಕೃತಿಯಿಂದ ಆಯ್ದ, ‘ಕೃಷ್ಣಗೌಡನ ಆನೆ’ ಎಂಬ ನೀಳ್ಳತೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ನಾಗರಾಜ್ ನಿರೂಪಕರಲ್ಲಿ ಹೇಳುತ್ತಾನೆ.
ವಿವರಣೆ: ನಾಗರಾಜ್‌ನ ಕಚೇರಿಗೆ ಬಂದ ನಿರೂಪಕರು ‘ಆಶ್ರೀ ನಾಗರಾಜ್ ನಿಮ್ಮ ಡಿಪಾರ್ಟ್ ಮೆಂಟಿನ ಮರ ಕಡಿದರೆ ನೀವು ಅವನ ಮೇಲೆ ಕ್ರಮ ತೆಗೆದುಕೊಳ್ಳಿ. ನನ್ನ ಕೊಡಲಿ ಯಾಕೆ ತಂದು ಇಟ್ಟುಕೊಂಡಿದ್ದೀರಾ’ ಎಂದು ಕೇಳುತ್ತಾರೆ. ಆಗ ನಾಗರಾಜ ತನ್ನ ಎದುರಿನ ಕುರ್ಚಿ ತೋರಿಸಿ ಕೂತ್ಕಳ್ಳಿ ಎನ್ನುತ್ತಾ ಈ ಮೇಲಿನಂತೆ ಹೇಳುತ್ತಾನೆ.

Question 6.
ನಿನ್ನ ಪುಕಾರೇನಿದ್ರೂ ಬರಣಿಗೇಲಿ ಇರಬೇಕು.

Answer:
ಆಯ್ಕೆ: ಈ ವಾಕ್ಯವನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ರಚಿಸಿದ ‘ಕಿರಗೂರಿನ ಗಯ್ಯಾಳಿಗಳು” ಎಂಬ ಕೃತಿಯಿಂದ ಆಯ್ದ. ‘ಕೃಷ್ಣಗೌಡನ ಆನೆ’ ಎಂಬ ನೀಳತೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ನಾಗರಾಜ ದುರ್ಗಪ್ಪನಲ್ಲಿ ಹೇಳುತ್ತಾನೆ.
ವಿವರಣೆ: ಮರ ಕಡಿಯುತ್ತಿದ್ದ ಆರೋಪದ ಮೇಲೆ ದುರ್ಗಪ್ಪನನ್ನು ಲಾಕಪ್ಪಿಗೆ ಹಾಕಿಸುವೆನೆಂದು ನಾಗರಾಜ ಹೇಳಿದಾಗ, ದುರ್ಗಪ್ಪ ಮರವನ್ನು ತಾನು ಕಡಿದಿಲ್ಲವೆಂದು ಕೃಷ್ಣಗೌಡರ ಆನೆ ಮುರಿದು ಬೀಳಿಸಿದ್ದೆಂದು ಹಳೆ ಪ್ರವರ ಪುನರಾವರ್ತನೆ ಮಾಡುತ್ತಾನೆ. ಅವನು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುವುದನ್ನು ನೋಡಿ, ನಾಗರಾಜ ಹಾಗಂತ ಹೇಳಿಕೆ ಬಡ್ತೀಯಾ ಎನ್ನುತ್ತಾ ಈ ಮೇಲಿನಂತೆ ಹೇಳುತ್ತಾನೆ.

Question 7.
ಡ್ರೈವರಣ್ಣ ಎತ್ತಾಗಿ ಹೋದ! ಇಲ್ಲೇ ಇದ್ದನಲ್ಲ!

Answer:
ಆಯ್ಕೆ: ಈ ವಾಕ್ಯವನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ರಚಿಸಿದ ‘ಕಿರಗೂರಿನ ಗಯ್ಯಾಳಿಗಳು’ ಎಂಬ ಕೃತಿಯಿಂದ ಆಯ್ದ, ‘ಕೃಷ್ಣಗೌಡನ ಆನೆ’ ಎಂಬ ನೀಳತೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಕ್ಲೀನ‌ರ್, ಡ್ರೈವರಣ್ಣನನ್ನು ಹುಡುಕುತ್ತಾ ಹೇಳುವ ಮಾತು ಇದಾಗಿದೆ.
ವಿವರಣೆ: ಶಿವೇಗೌಡರ ಸಾಮಿಲ್ಲಿನಲ್ಲಿ ವೇಲಾಯುಧ ಮತ್ತು ಆನೆ ಇಬ್ಬರೂ ಪಾನಮತ್ತರಾಗಿದ್ದ ನಿಮಿತ್ತ ಲಾರಿ ಮತ್ತು ನಾಟಾಗಳಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚದೆ ವೇಲಾಯುಧ ಆನೆಗೆ ನಾಟಗಳನ್ನು ಇಳಿಸಲು ಆದೇಶಿಸಿದ. ವೇಲಾಯುಧನ ಆದೇಶದಂತೆ ಆನೆ ನಾಟಾಗಳನ್ನು ತಳ್ಳಿ ಬೀಳಿಸಿತು. ಲಾರಿ ಧಡಾರನೆ ಬಿದ್ದ ಸದ್ದು ಕೇಳಿ ಶಿವೆಗೌಡರು ಮತ್ತು ಲಾರಿ ಕ್ಲೀನರ್ ಎಲ್ಲರೂ ಓಡಿ ಬಂದು ಉರುಳಿ ಬಿದ್ದಿರುವ ಲಾರಿ ನೋಡಿ ಕಂಗಾಲಾಗಿ ಹೋಗುವರು. ಆದರೆ ಕ್ಲೀನರ ಹಗ್ಗ ಬಿಚ್ಚುವ ಬದಲು ಯಾರನ್ನೋ ಹುಡುಕುತ್ತಿರುವುದನ್ನು ಕಂಡಿತು. ಏನೆಂದು ಕೇಳುವಾಗ ಈ ಮೇಲಿನಂತೆ ಕ್ಲೀನ‌ರ್ ಹೇಳುತ್ತಾನೆ.

Question 8.
ಕುಶಾಲಿಗಂತ ಸೊಂಡಿಲು ಬೀಸಿದರೆ ಸಾಕಲ್ಲ.

Answer:
ಆಯ್ಕೆ: ಈ ವಾಕ್ಯವನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ರಚಿಸಿದ ‘ಕಿರಗೂರಿನ ಗಯ್ಯಾಳಿಗಳು’ ಎಂಬ ಕೃತಿಯಿಂದ ಆಯ್ದ, ‘ಕೃಷ್ಣಗೌಡನ ಆನೆ’ ಎಂಬ ನೀಳತೆಯಿಂದ ಆರಿಸಿಕೊಳ್ಳಲಾಗಿದೆ
ಸಂದರ್ಭ: ಈ ಮಾತನ್ನು ದುರ್ಗಪ್ಪ ನಿರೂಪಕರಲ್ಲಿ ಹೇಳುತ್ತಾನೆ.
ವಿವರಣೆ: ಕೊಡಲಿ ವಾಪಸ್ ಕೊಡಲು ಬಂದ ದುರ್ಗಪ್ಪ ಕೃಷ್ಣಗೌಡರ ಅನೆಯನ್ನು ಮನಸಾರೆ ಶಪಿಸುತ್ತಾನೆ. ಅಲ್ಲದೆ ಅದು ಕೊಂದ ಡ್ರೈವರ್ ಹೆಣವನ್ನು ಮರದ ಹೊಟ್ಟಿನೊಳಗೆ ಹಾಕಿ ಆಗಾಗ ಬೆಂಕಿ ಕೊಡುವಂತೆ ಬೆಂಕಿ ಕೊಟ್ಟು ಬೂದಿ ಮಾಡಿದರೆಂದು ಹೇಳುತ್ತಾನೆ. ಆತ ನಿರೂಪಕರಲ್ಲಿ ಆ ಆನೆಗೆ ಹೆಂಡ ಕುಡಿಸಿದರೆ ಹೇಗಾಗಬಹುದು ಹೇಳಿ. ಮಕ್ಕಳು ಮರಿ ಓಡಾಡೋ ಜಾಗದಲ್ಲಿ ಓಡಾಡುತ್ತದೆ ಎನ್ನುತ್ತಾ ಆನೆಯ ಬಗ್ಗೆ ಈ ಮೇಲಿನಂತೆ ಹೇಳುತ್ತಾನೆ. ಒಂದೊಂದು ಕೆಂಪು ಪೋಸ್ಟ್‌ ಬಾಕ್ಸ್‌ಗಳನ್ನು ನೇತುಹಾಕಿದರು. ಈ ಎಲ್ಲಾ ಬೆಳವಣಿಗೆಗಳನ್ನು ವಿವರಿಸುತ್ತಾನಿರೂಪಕರು ಈ ಮೇಲಿನಂತೆ ಹೇಳುತ್ತಾರೆ.

Question 9.
ಹದಿನಾಲ್ಕು ಇಂಜಕ್ಷನ್ ಹೊಟ್ಟೆಗೆ ಚುಚ್ಚಿಸ್ಕೋತೀನಿ.

Answer:
ಆಯ್ಕೆ: ಈ ವಾಕ್ಯವನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ರಚಿಸಿದ ‘ಕಿರಗೂರಿನ ಗಯ್ಯಾಳಿಗಳು ಎಂಬ ಕೃತಿಯಿಂದ ಆಯ್ದ, ‘ಕೃಷ್ಣಗೌಡನ ಆನೆ’ ಎಂಬ ನೀಳತೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಪೋಸ್ಟ್ಮನ್ ಜಬ್ಬಾರ್ ನಿರೂಪಕರಲ್ಲಿ ಹೇಳುತ್ತಾನೆ.
ವಿವರಣೆ: ಜಬ್ಬಾರ್ ನಿರೂಪಕರಲ್ಲಿ ತನ್ನ ಬವಣೆಗಳನ್ನು ವಿವರಿಸುತ್ತಾ ಪೋಸ್ಟ್ ಕೊಡಲು ಹೋದಲ್ಲಿ ಎಲ್ಲರ ಮನೆಯ ಮುಂದೇಯೂ ನಾಲ್ಕು ನಾಲ್ಕು ನಾಯಿ ಮಲಗಿದ್ದವೆ. ಪ್ರತಿ ವರ್ಷ ಒಂದಲ್ಲ ಒಂದು ನಾಯಿ ಕಚ್ಚೇಕಚ್ಚುತ್ತೇ. ಹುಚ್ಚು ಬಂದ ಮೇಲೆ ಔಷಧ ಇಲ್ಲವಾದ ಕಾರಣ ತನಗೆ ಕಚ್ಚಿರುವುದು ಹುಚ್ಚು ನಾಯಿ ಹೌದೋ ಅಲ್ಲೋ ಒಟ್ಟಿನಲ್ಲಿ ಹದಿನಾಲ್ಕು ಇಂಜೆಕ್ಷನ್ ಹೊಟ್ಟಿಗೆ ಚುಚ್ಚಿಸ್ಕೋತೀನಿ ಎಂದು ಹೇಳುತ್ತಾನೆ.

Question 10.
ಕೃಷ್ಣಗೌಡರ ಆನೆಗೂ ಕಚ್ಚಿದೆ ಅಂತ ವರ್ತಮಾನ ಉಂಟಪ್ಪ

Answer:
ಆಯ್ಕೆ: ಈ ವಾಕ್ಯವನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ರಚಿಸಿದ ‘ಕಿರಗೂರಿನ ಗಯ್ಯಾಳಿಗಳು’ ಎಂಬ ಕೃತಿಯಿಂದ ಆಯ್ದ, ‘ಕೃಷ್ಣಗೌಡನ ಆನೆ’ ಎಂಬ ನೀಳತೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಪುಟ್ಟಯ್ಯ ನಿರೂಪಕರಲ್ಲಿ ಹೇಳುತ್ತಾನೆ.
ವಿವರಣೆ: ಪುಟ್ಟಯ್ಯನು ನಿರೂಪಕರ ಬಳಿ ಮಾತನಾಡುತ್ತಾ, ನಿನ್ನೆ ಒಂದು ಹುಚ್ಚು ನಾಯಿ ಏಳು ಜನಕ್ಕೆ, ಹತ್ತಾರು ದನಗಳಿಗೆ ಕಚ್ಚಿದೆ. ಅವರಿಗೆಲ್ಲ ಎಲ್ಲಿಂದ ಇಂಜೆಕ್ಷನ್ ಸಪ್ಲೆ ಮಾಡೋಕಾಗುತ್ತೆ ಹೇಳಿ ಎಂದು ಹೇಳುತ್ತಾ ಕೊಂಚ ದನಿ ತಗ್ಗಿಸಿ ಕೃಷ್ಣಗೌಡರ ಆನೆಗೂ ಕಚ್ಚಿದೆ ಎಂದು ವರ್ತಮಾನ ಉಂಟಪ್ಪ ಎಂದು ಹೇಳುತ್ತಾನೆ.

Question 11.
ನಂಗೇನು ಈ ನಾಯಿಗಳನ್ನು ಕಂಡರೆ ಪ್ರೀತಿನಾ ಸ್ವಾಮಿ!

Answer:
ಆಯ್ಕೆ: ಈ ವಾಕ್ಯವನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ರಚಿಸಿದ ‘ಕಿರಗೂರಿನ ಗಯ್ಯಾಳಿಗಳು’ ಎಂಬ ಕೃತಿಯಿಂದ ಆಯ್ದ, ‘ಕೃಷ್ಣಗೌಡನ ಆನೆ’ ಎಂಬ ನೀಳತೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಮುನ್ಸಿಪಾಲಿಟಿ ಪ್ರೆಸಿಡೆಂಟರಾದ ಖಾನ್ ಸಾಬರು ನಿರೂಪಕರಲ್ಲಿ ಹೇಳುತ್ತಾರೆ.
ವಿವರಣೆ: ಮೂಡಿಗೆರೆಯಲ್ಲಿ ಉಂಟಾದ ಕಂತ್ರಿನಾಯಿಗಳ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ನಿರೂಪಕರು, ಜಬ್ಬಾರ್, ಪುಟ್ಟಯ್ಯ ಮುನ್ಸಿಪಾಲಿಟಿ ಪ್ರೆಸಿಡೆಂಟರಾದ ಖಾನ್ ಸಾಬ್ ರಲ್ಲಿ ಕೇಳಬೇಕು ಎಂದು ಅವರಲ್ಲಿಗೆ ಬರಲು ತಯಾರಾಗುತ್ತಾರೆ. ಆದರೆ ಜಬ್ಬಾರ್ ಮತ್ತು ಪುಟ್ಟಯ್ಯ ಇಬ್ಬರೂ ಅಲ್ಲಿಯೇ ಜಾರಿಕೊಂಡಿರುವುದನ್ನು ಗಮನಿಸಿದ ನಿರೂಪಕರು ತಾನೊಬ್ಬನೆ ಕೇಳುತ್ತೇನೆ ಎಂದು ಕೊಂಡು ಕಛೇರಿಗೆ ಬಂದು ಖಾನ್ ಸಾಬ್‌ರಲ್ಲಿ ಕೇಳುವಾಗ ಈ ಮಾತು ಬಂದಿದೆ.

Question 12.
ಹೊರಗಡೆಯಿಂದ ಎಕ್ಸ್‌ಪೋರ್ಟ್ ಆದವು.

Answer:
ಆಯ್ಕೆ: ಈ ವಾಕ್ಯವನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ರಚಿಸಿದ ‘ಕಿರಗೂರಿನ ಗಯ್ಯಾಳಿಗಳು’ ಎಂಬ ಕೃತಿಯಿಂದ ಆಯ್ದ, ‘ಕೃಷ್ಣಗೌಡನ ಆನೆ’ ಎಂಬ ನೀಳತೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಮುನ್ಸಿಪಾಲಿಟಿ ಪ್ರೆಸಿಡೆಂಟರಾದ ಖಾನ್ ಸಾಬ್‌ರು ನಿರೂಪಕರಲ್ಲಿ ಹೇಳುವ ಮಾತಿದು.
ವಿವರಣೆ: ಮುನ್ಸಿಪಾಲಿಟಿ ಪ್ರೆಸಿಡೆಂಟರಾದ ಖಾನ್ ಸಾಹೇಬರನ್ನು ಭೇಟಿಯಾಗಲು ಹೋದ ಲೇಖಕರು ಊರಿನಲ್ಲಿ ಹೆಚ್ಚಿರುವ ಕಂತ್ರಿನಾಯಿಯ ಕುರಿತು ಪ್ರಸ್ತಾಪಿಸಿದಾಗ ಅದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಅವೆಲ್ಲಾ ಇಲ್ಲಿಯ ನಾಯಿಗಳಲ್ಲ. ಯಾರೋ ಹೊರಗಡೆಯಿಂದ ಲಾರಿಯಲ್ಲಿ ನಾಯಿಗಳನ್ನು ತುಂಬಿಕೊಂಡು ಬಂದು ಇಲ್ಲಿ ರಾತ್ರೋ ರಾತ್ರಿ ಬಿಟ್ಟು ಹೋಗಿದ್ದಾರೆ ಎಂದು ಹೇಳುತ್ತಾ ತಾನು ತನ್ನ ಕಡೆಯಿಂದ ಆದ ಪ್ರಯತ್ನವೆಲ್ಲ ಮಾಡಿದ್ದೇನೆ ಎಂದು ಹೇಳುತ್ತಾರೆ.

Question 13.
ಮುನ್ಸಿಪಾಲ್ ಪ್ರೆಸಿಡೆಂಟಾಗಿ ಊರನ್ನು ಸ್ವಚ್ಛವಾಗಿಡೋದು ನಿಮ್ಮ ಕರ್ತವ್ಯ.

Answer:
ಆಯ್ಕೆ: ಈ ವಾಕ್ಯವನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ರಚಿಸಿದ ‘ಕಿರಗೂರಿನ ಗಯ್ಯಾಳಿಗಳು’ ಎಂಬ ಕೃತಿಯಿಂದ ಆಯ್ದ, ‘ಕೃಷ್ಣಗೌಡನ ಆನೆ’ ಎಂಬ ನೀಳ್ಳತೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ನಿರೂಪಕರು ಮುನ್ಸಿಪಾಲಿಟಿ ಪ್ರೆಸಿಡೆಂಟ್ ಖಾನ್ ಸಾಬ್‌ರಲ್ಲಿ ಹೇಳುತ್ತಾರೆ.
ವಿವರಣೆ: ಕಂತ್ರಿನಾಯಿಗಳು ಹೆಚ್ಚಾಗಿರುವ ಪ್ರಸ್ತಾಪವನ್ನು ಖಾನ್ ಸಾಬರು ಹಿಂದೂ ಮುಸ್ಲಿಂ ಧರ್ಮದೊಂದಿಗೆ ಗಂಟು ಹಾಕುತ್ತಿದ್ದಾರೆಂದು ನಿರೂಪಕರಿಗೆ ಅನ್ನಿಸಿತು. ಆದ್ದರಿಂದ ನಿರೂಪಕರು. ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದೆ ಧರ್ಮಗಳ ಕಾರಣ ಕೊಡುತ್ತಿರುವ ಖಾನ್ ಸಾಬರಿಗೆ ಕರ್ತವ್ಯ ಪ್ರಜ್ಞೆಯನ್ನು ನೆನಪಿಸುತ್ತಾ ಈ ಮೇಲಿನಂತೆ ಹೇಳುತ್ತಾರೆ.

Question 14.
ಕಂಬದ ಮೇಲೇ ಯಾಕೋ ಕೈಲಾಸ ಕಂಡಹಾಗೆ ಇದೆಯಲ್ಲಾ,

Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ರಚಿಸಿದ. ‘ಕಿರಗೂರಿನ ಗಯ್ಯಾಳಿಗಳು’ ಎಂಬ ಕೃತಿಯಿಂದ ಆಯ್ದ, ‘ಕೃಷ್ಣಗೌಡನ ಆನೆ’ ಎಂಬ ನೀಳತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಲೈನ್‌ಮನ್ ಶಂಕ್ರಪ್ಪ, ಜೂನಿಯರ್ ಇಂಜಿನಿಯರ್ ರಮೇಶ್‌ ಬಾಬುವಿನ ಹತ್ತಿರ ಹೇಳುತ್ತಾನೆ.
ವಿವರಣೆ: ಟೆಲಿಫೋನ್ ಲೈನು ಸರಿ ಮಾಡಲು ಹೋದ ತಿಪ್ಪಣ್ಣನ ಸುದ್ದಿ ಇಲ್ಲದಾಗ, ರಮೇಶ್‌ ಬಾಬು ತಿಪ್ಪಣ್ಣನ ಸೋಮಾರಿತನವನ್ನು ಶಪಿಸುತ್ತಾ ಲೈನ್‌ಮನ್ ಶಂಕ್ರಪ್ಪನನ್ನು ಕರೆದುಕೊಂಡು ನುಗ್ಗೇಹಳ್ಳಿ ಲೈನು ನೋಡುತ್ತ ಹೊರಡುತ್ತಾನೆ. ಅಲ್ಲಿ ಜಂಕ್ಷನ್ ಬಾಕ್ಸ್ ಇದ್ದ ಹದಿನೇಳನೇ ಕಂಬದ ಮೇಲೆ ಕುಳಿತಿದ್ದ ತಿಪ್ಪಣ್ಣ ಕೂಗಿದರೂ, ಕರೆದರೂ ಮಾತಾಡದೇ ಇದ್ದಾಗ, ಶಂಕ್ರಪ್ಪ ಆತನನ್ನು ನೋಡಿ ಕೈಯಲ್ಲಿದ್ದ ತಂತಿ, ಮೇಲಿಂದಲೇ ಆಫೀಸಿಗೆ ಮಾತಾಡುವ ಫೋನ್ ಕೆಳಗಿಡುತ್ತಾ ಏನ್ ಸಾರ್ ಇದು ಏನಾಯ್ತು ಇವನಿಗೆ ಎನ್ನುತ್ತಾ ತನ್ನ ಇಂಜಿನಿಯರ್ ರಮೇಶ್‌ಬಾಬುವನ್ನು ನೋಡಿ ಈ ಮೇಲಿನಂತೆ ಹೇಳುತ್ತಾನೆ.

Question 15.
ಈ ಕಂಬದೊಳೆ ಏನೋ ಸೇರೊಂಡಿದೆ.

Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ರಚಿಸಿದ. ‘ಕಿರಗೂರಿನ ಗಯ್ಯಾಳಿಗಳು’ ಎಂಬ ಕೃತಿಯಿಂದ ಆಯ್ದ, ‘ಕೃಷ್ಣಗೌಡನ ಆನೆ’ ಎಂಬ ನೀಳತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಲೈನ್‌ಮನ್ ಶಂಕ್ರಪ್ಪ ಇಂಜಿನಿಯರ್ ರಮೇಶ್‌ ಬಾಬುವಿನಲ್ಲಿ ಹೇಳುವ ಮಾತಿದು.
ವಿವರಣೆ: ತಿಪ್ಪಣ್ಣನನ್ನು ನೋಡಿದ ರಮೇಶ್ ಬಾಬು ಶಂಕ್ರಪ್ಪನಲ್ಲಿ; ಕಂಬ ಹತ್ತಿ ಒಮ್ಮೆ ನೋಡೋ ಮಾರಾಯ, ಅಕಸ್ಮಾತ್ ಜೀವ ಇದ್ದರೆ ಆಸ್ಪತ್ರೆಗೆ ಸೇರಿಸೋಣ ಎನ್ನುತ್ತಾನೆ. ಅವನ ಮಾತಿನಂತೆ ಕಂಬ ಹತ್ತಿದ ಶಂಕ್ರಪ್ಪ, ಕಂಬವನ್ನು ಅರ್ಧ ಹತ್ತುವಷ್ಟರಲ್ಲಿ ಕೈಕಾಲು ಜುಮ್ಮೆಂದು ನಡುಗಿದಂತಾಗಿ ಅಯ್ಯಯ್ಯೋ ಎಂದು ಕಿರುಚಿ ಕಂಬದಿಂದ ದೂರನಿಲ್ಲುತ್ತಾನೆ. ಇದನ್ನು ಗಮನಿಸಿದ ರಮೇಶ್‌ ಬಾಬು ಏನಾಯ್ತು ಎಂದು ಕೇಳಿದಾಗ ಶಂಕ್ರಪ್ಪ ಈ ಮೇಲಿನಂತೆ ಹೇಳುತ್ತಾನೆ.

Question 16.
ಆನೆ ಬೇಲಿ ದಾಟಿ ಹೋಯ್ತು ಸಾರ್.

Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ರಚಿಸಿದ. ‘ಕಿರಗೂರಿನ ಗಯ್ಯಾಳಿಗಳು’ ಎಂಬ ಕೃತಿಯಿಂದ ಆಯ್ದ, ‘ಕೃಷ್ಣಗೌಡನ ಆನೆ’ ಎಂಬ ನೀಳತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಗಾರ್ಡ್ ರಾಮಪ್ಪ ನಾಗರಾಜನಲ್ಲಿ ಹೇಳುತ್ತಾನೆ.
ವಿವರಣೆ: ಆನೆಯನ್ನು ಕೊಲ್ಲಬೇಕು ಎಂದು ನಾಗರಾಜ ಒಳ್ಳೆ ಆಯಕಟ್ಟಿನ ಗಂಡಿಯಲ್ಲಿ ಕೋವಿ ಹಿಡಿದು ಕೊಂಡು ಕುಳಿತಿದ್ದ. ಅವನು ಕುಳಿತಿದ್ದ ಗಂಡಿ ಬಹಳ ಹೆಸರುವಾಸಿಯಾದ ಗಂಡಿಯಾಗಿತ್ತು. ಕಾಡು ಪ್ರಾಣಿಗಳು ಅಲ್ಲಿಂದಲೇ ದಾಟಿ ಹೋಗ ಬೇಕಾದ ಕಾರಣ ಕೃಷ್ಣಗೌಡರ ಆನೆಗಾಗಿ ಕಾಯುತ್ತಿದ್ದ. ಅಷ್ಟರಲ್ಲಿ ಅಲ್ಲಿಗೆ ಬಂದ ಗಾರ್ಡ್ ರಾಮಪ್ಪ ಆನೆಯು ಬೇಲಿ ದಾಟಿ ಹೋದ ವಿಚಾರವನ್ನು ತಿಳಿಸಿದಾಗ ಈ ಮೇಲಿನ ಮಾತು ಬಂದಿದೆ.

Question 17.
ಕೋವಿ ಸಿಕ್ಕಿದೆ ಆದರೆ ಹೆಣ ಸಿಗಲಿಲ್ಲ.

Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ರಚಿಸಿದ, ‘ಕಿರಗೂರಿನ ಗಯ್ಯಾಳಿಗಳು’ ಎಂಬ ಕೃತಿಯಿಂದ ಆಯ್ದ, ‘ಕೃಷ್ಣಗೌಡನ ಆನೆ’ ಎಂಬ ನೀಳತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಪೋಲೀಸರು ನಾಪತ್ತೆಯಾದ ನಾಗರಾಜನ ಕುರಿತು ಮಹಜರು ಮಾಡಿಕೊಂಡ ಸಂದರ್ಭ ಇದಾಗಿದೆ.
ವಿವರಣೆ: ನಾಗರಾಜನು ಏಕಾಏಕಿ ನಾಪತ್ತೆಯಾದುದು ದೊಡ್ಡ ಸಮಸ್ಯೆಯಾಗಿ ಹೋಯಿತು. ಆತನನ್ನು ಆನೆ ತುಳಿದು ಸಾಯಿಸಿತೋ, ಕೊಲೆಯಾದನೋ, ಆತ್ಮಹತ್ಯೆ ಮಾಡಿಕೊಂಡನೋ ಎಂಬ ಹಲವಾರು ಪ್ರಶ್ನೆಗಳು ಉಗಮವಾದವು. ಈ ನಡುವೆ ಪೊಲೀಸರು ಕಾಡೆಲ್ಲಾ ಹುಡುಕಾಡಿ ಮಹಜರು ಮಾಡಲು ಮುಂದಾದಾಗ ಈ ಮೇಲಿನ ಮಾತು ಬಂದಿದೆ.

2nd PUC Kannada Chapter 21 Krishna Gowdana Aane.
2nd PUC Kannada Chapter 21 Krishna Gowdana Aane.
IV. ನಾಲ್ಕು ಅಂಕಗಳ ಪ್ರಶ್ನೆಗಳು.

Question 1.
ದುರ್ಗಪ್ಪ ನಿರೂಪಕರ ಬಳಿಗೆ ಬಂದ ಸಂದರ್ಭವನ್ನು ವಿವರಿಸಿ.

Answer:
ದುರ್ಗಪ್ಪ ಎಲೆಕ್ನಿಕ್ ಡಿಪಾರ್ಟ್‌ ಮೆಂಟ್‌ನ ಲೈನ್‌ನ್ ಆಗಿದ್ದನು. ಈತ ನಿರೂಪಕರ ಬಳಿಗೆ ಬಂದಾಗ ನಿರೂಪಕರು ಜೇಪಿನ ಅಡಿಯಲ್ಲಿ ಮಲಗಿಕೊಂಡು ಜೀಪು ರಿಪೇರಿ ಮಾಡುತ್ತಿದ್ದರು. ಅಲ್ಲಿಂದ ಅವರಿಗೆ ಎರಡು ಖಾಕಿ ಪ್ಯಾಂಟ್‌ ಧಾರಿ ಕಾಲುಗಳು ಅವರತ್ತ ಬರುವುದು ಕಾಣಿಸಿತು. ಬಂದಾತ ನಿರೂಪಕರು ಗಮನಿಸಲಿಲ್ಲವೆಂದು ಒಂದೆರಡು ಬಾರಿ ಕೆಮ್ಮಿದೆ. ಏಕೆಂದರೆ ನಿರೂಪಕರ ಊರಿನಲ್ಲಿ ಕೆಮ್ಮು ಕಾಲಿಂಗ್‌ ಬೆಲ್ ಇದ್ದ ಹಾಗೆ.

ಯಾರೆಂದು ನಿರೂಪಕರು ಕೇಳಿದಾಗ ‘ನಾನು ಲೈನ್‌ಮನ್ ಸ್ವಾಮಿ ಎನ್ನುತ್ತಾನೆ’ ಯಾರು ಲೈನ್‌ಮನ್ ತಿಪ್ಪಣ್ಣಾನೇನಯ್ಯಾ? ಎಂದಾಗ ಹುಥು ! ಟೆಲಿಫೋನ್ ಡಿಪಾರ್ಟ್‌ ಮೆಂಟ್ ಅಲ್ಲ ಸ್ವಾಮಿ. ನಾವು ಕರೆಂಟಿನೋರು. ನಾನು ಲೈನ್‌ಮನ್ ದುರ್ಗಪ್ಪ ಸ್ವಾಮಿ, ಎನ್ನುತ್ತಾನೆ. ಆಗ ನಿರೂಪಕರು ಅದ್ಯಾಕೆ ಟೆಲಿಫೋನ್ ಡಿಪಾರ್ಟ್‌ ಮೆಂಟ್‌ಗೆ ಹೂ ಅಂತೀಯ ಎಂದಾಗ, ಅದೊಂದು ತರೆ ಡಿಪಾರ್ಟ್ ಮೆಂಟ್ ಅಲ್ಲವ ಸಾರ್. ನಮ್ಮ ತಂತಿ ತರಬ್ಯಾಡ್ರಿ, ಟೆಲಿಫೋನು ಗೊರಾಗೊರಾ ಅನ್ಸುತ್ತೆ. ಹಾಗೆ ಹೀಗೆ ಅಂತೆಲ್ಲಾ ದಿನಾ ನಮ್ ಜೊತೆ ಪುಕಾರ್ ತೆಗೀತಾನೆ ಇದ್ದಾರೆ. ಜೀಪಿನ ಅಡಿಯಿಂದ ಹೊರಬಂದ ನಿರೂಪಕರು : ಹಾಗಾದರೆ ಮತ್ತೇಕೆ ಬಂದೆ? ಎಂದು ನಿರೂಪಕರು ಕೇಳಿದಾಗ ಸುಮ್ಮನೆ ಬಂದೆ ಎಂದು ಹೇಳಿದ ಅವನ ಮಾತು ಕೇಳಿದರೆ ಏನೂ ಕೆಲಸವಿಲ್ಲದೆ ಪುರುಸೊತ್ತಾಗಿದ್ದರಿಂದ ಇಲ್ಲಿಯವರೆಗೂ ಬಂದಿದ್ದಾನೆಂದು ಅರ್ಥ ಬರುತ್ತಿತ್ತು.

ಹಾಗಿದ್ದರೆ ಏನೋ ಇನಾಮು ಕೇಳಲೋ ಅಥವಾ ಚಂದಾವಸೂಲಿಗೋ ಇಲ್ಲವೇ ಮನೆ ಉಪಯೋಗಕ್ಕೆ ಕಾಫಿ ಬೀಜವನ್ನೋ ಏಲಕ್ಕಿಯನ್ನೋ ಕೇಳಲು ಈ ರೀತಿ ಪೀಠಿಕೆ ಹಾಕಿರಬಹುದೆಂದು ಯೋಚಿಸಿದರು. ಆತ ಬಂದ ವಿಷಯ ಹೇಳದೇ ಇದ್ದಾಗ ನಿರೂಪಕರೇ ಬಾಯಿ ಬಿಡಿಸಲು ಮುಂದಾಗುತ್ತಾರೆ. ಆಗ ಆತ ಏನಿಲ್ಲ, ಸ್ವಲ್ಪ ಕೊಡಲಿ ಇದ್ರೆ ಬೇಕಿತ್ತು ಸ್ವಾಮಿ, ಒಂದು ಮರ ಮುಕ್ಕೊಂಡು ತಂತಿ ಮೇಲೆ ಬಿದ್ದಿದೆ. ಅದನ್ನು ಕಡಿದು ಲೈನ್ ಕ್ಲೀಯರ್ ಮಾಡಲು ಕೊಡಲಿ ಬೇಕಾಗಿತ್ತೆಂದು. ಕೃಷ್ಣಗೌಡರ ಆನೆಯದೇ ಕೆಲಸವೆಂದು ಕೊಡಲಿ ತಗೊಂಡು ಹೋಗುತ್ತಾನೆ.

Question 2.
ನಿರೂಪಕರು ಕೊಡಲಿ ವಸೂಲಿ ಮಾಡಲು ಹೋಗಲಿಲ್ಲವೇಕೆ? ವಿವರಿಸಿ.

Answer:
ದುರ್ಗಪ್ಪ ಕೊಡಲಿ ತಗೊಂಡು ನಿರ್ಗಮಿಸಿದವ ಮತ್ತೆ ಬರಲೇ ಇಲ್ಲ. ಮೂರು ನಾಲ್ಕು ದಿನವಾದರೂ ದುರ್ಗಪ್ಪನೂ ಪತ್ತೆ ಇಲ್ಲ. ಕೊಡಲಿಯೂ ಪತ್ತೆ ಇಲ್ಲ. ಆ ಕೊಡಲಿಯಾದರೋ ಸುಳ್ಳು ಹೇಳಿ ಕದ್ದುಕೊಂಡು ಹೋಗಬೇಕಾದಷ್ಟು ಅಮೂಲ್ಯವಾದುದೇನೂ ಅಲ್ಲ. ಕೆರೆ ಕೆಲಸಕ್ಕೆಂದು ಬಂದಿದ್ದ ಮಣ್ಣು ಒಡ್ಡರು ಆಗೆಯುವಾಗ ಆಡ್ಡಾಗುವ ಬೇರುಗಳನ್ನು ಕಡಿಯಲೆಂದು ನನ್ನ ಕೊಡಲಿ ತಗೊಂಡು ಕಲ್ಲುಮಣ್ಣು ನೋಡದೇ ಯರ್ರಾಬಿರಿ ಜಪ್ಪಿ ಅದರ ಹಿಂಬಾಗ ಯಾವುದು ಮುಂಬಾಗ ಯಾವುದು ಗೊತ್ತಾಗದಷ್ಟು ಹಾಳುಮಾಡಿದ್ದರು. ಈಗ ಅದನ್ನು ಸುತ್ತಿಗೆ ಎಂದು ಸಹ ಕರೆಯಬಹುದಿತ್ತು. ಅದರಲ್ಲಿ ದುರ್ಗಪ್ಪ ಹೇಗೆ ಮರ ಕಡಿಯುತ್ತಾನೋ ಗೊತ್ತಾಗಲಿಲ್ಲ.

ಏನೇ ಇರಲಿ ಅದನ್ನು ಅವನೇ ಹುಡುಕಿ ತೆಗೊಂಡು ಹೋಗಿದ್ದರಿಂದ ಮೊಂಡು ಕೊಡಲಿ ಕೊಟ್ಟಿದ್ದಕ್ಕೆ ನನ್ನನ್ನು ಅವನು ದೂಷಿಸುವಂತೆ ಇರಲಿಲ್ಲ. ಅದನ್ನು ಅವನು ಅಕಸ್ಮಾತ್ ಕದ್ದರೂ ನನಗೇನೂ ಕೊಡಲಿ ಹೋಯ್ತಂದು ದುಃಖವಾಗುತ್ತಿರಲಿಲ್ಲ. ಹಾಗಾಗಿ ನಾನು ದುರ್ಗಪ್ಪನನ್ನು ಹುಡುಕಿ ಕೊಡಲಿ ವಸೂಲಿ ಮಾಡುವ ಗೋಜಿಗೇ ಹೋಗಲಿಲ್ಲ.

Question 3.
ಕೃಷ್ಣಗೌಡರ ಆನೆ ಹುಟ್ಟಿ ಬೆಳೆದ ಬಗೆಯನ್ನು ವಿವರಿಸಿ.

Answer:
ಕೃಷ್ಣಗೌಡರ ಆನೆ ಕಾಡಿನಿಂದ ಹಿಡಿದುತಂದು ಪಳಗಿಸಿದ ಆನೆ ಅಲ್ಲ. ಗಟ್ಟದ ಕೆಳಗಿದ್ದ ಗೂಳೂರು ಮಠದ ಆನೆ ಹಾಕಿದ ಮರಿಯೇ ಕೃಷ್ಣಗೌಡರ ಬಳಿ ಇದ್ದ ಆನೆ. ಇದು ಹುಟ್ಟಿದ್ದು ಬೆಳೆದಿದ್ದು ಎಲ್ಲ ಊರಿನಲ್ಲಿ ಜನಗಳ ನಡುವೆಯೇ. ಹಾಗಾಗಿ ಅದಕ್ಕೆ ಕಾಡಿನ ಬಗ್ಗೆಯಾಗಲಿ ಕಾಡಿನಲ್ಲಿರುವ ಇತರ ಕಾಡಾನೆಗಳ ಬಗ್ಗೆಯಾಗಲೀ ಎನೂ ತಿಳುವಳಿಕೆ ಇರಲಿಲ್ಲವೆಂದು ಕಾಣುತ್ತದೆ. ಅದು ಮೂಡಿಗೆರೆಯ ಪೇಟೆಗೆ ಎಷ್ಟೊಂದು ಒಗ್ಗಿತ್ತೆಂದರೆ ಯಾವ ಲಂಗುಲಗಾಮಿಲ್ಲದೆ ದನಕರುಗಳ ರೀತಿಯಲ್ಲಿ ಪೇಟೆಯೊಳಗೆ ತಿರುಗಿಕೊಂಡಿರುತ್ತಿತ್ತು. ಸ್ಕೂಲು ಮಕ್ಕಳು ಅದರ ಹತ್ತಿರ ಬರಲು ಹೆದರುತ್ತಿದ್ದವಾದರೂ ಅವರು ದೂರದಿಂದಲೇ ಗೌರಿ ಎಂದು ಕೂಗಿದರೆ ಸಾಕು ಸೊಂಡಿಲೆತ್ತಿ ಸಲಾಮ್ ಮಾಡುತ್ತಿತ್ತು. ದಾರಿ ಬದಿಯ ಪೆಟ್ಟಿಗೆ ಅಂಗಡಿಗಳವರು ಹಣ್ಣು, ಖರ್ಚಾದ ಬಾಳೆಗೊನೆಗಳ ದಿಂಡು, ಸಿಪ್ಪೆಗಳನ್ನೂ, ಜಜ್ಜಿದ, ಹಾಳಾದ ಹಣ್ಣುಗಳನ್ನೂ, ಅದಕ್ಕೆ ಕೊಡಲು ಇಟ್ಟಿರುತ್ತಿದ್ದರು. ಈ ಆನೆ ಖಾಯಮ್ಮಾಗಿ ಎಲ್ಲಾ ಪೆಟ್ಟಿಗೆ ಅಂಗಡಿಗಳ ಬಳಿಗೂ ಹೋಗಿ ಅವನ್ನೆಲ್ಲಾ ಸೊಂಡಿಲಲ್ಲಿ ತಗೊಂಡು ತಿನ್ನುತ್ತಿತ್ತು.

Question 4.
ಆನೆ ಮತ್ತು ಮಾವುತ ವೇಲಾಯುಧನನ್ನು ಸಾಗಹಾಕಲು ಮಠದವರು ಹವಣಿಸಿದ್ದೇಕೆ?

Answer:
ಕೃಷ್ಣಗೌಡರ ಆನೆ ಊರಿನಲ್ಲಿ ಇತರ ದನಕರುಗಳಂತೆ ಲಂಗುಲಗಾಮಿಲ್ಲದೆ ಪೇಟೆಯೊಳಗೆ ತಿರುಗಿಕೊಂಡಿರುತ್ತಿತ್ತು. ಆದರೆ ಇದಕ್ಕೆ ಮೊದಲು ಅದು ಗೂಳೂರು ಮಠದ ಜಗದ್ಗುರುಗಳನ್ನು ಹೊರುವ ಕಾಯಕ ನಿರ್ವಹಿಸುತ್ತಿತ್ತು. ಮಠದ ಜಗದ್ಗುರುಗಳನ್ನು ಜನರು ಯಾವಾಗ ಅಡ್ಡಪಲ್ಲಕ್ಕಿಯಲ್ಲಿ ಹೊರಲು ಆರಂಭಿಸಿದರೋ ಆಗ ಆನೆ ನಿರುಪಯುಕ್ತ ಎನಿಸತೊಡಗಿತು. ಆನೆಯ ಪುಂಡಾಟದ ಜೊತೆಗೆ ಆನೆಯ ಮಾವುತ ವೇಲಾಯುಧನೂ ಕೂಡ ನಿರುಪಯುಕ್ತನಾಗಿದ್ದ. ಇಪ್ಪತ್ತನಾಲ್ಕು ಗಂಟೆಯು ಕುಡಿದೇ ಇರುತ್ತಿದ್ದ ಈತ ಮಠದ ಸಾತ್ವಿಕ ವಾತಾವರಣಕ್ಕೂ ದೊಡ್ಡ ತಲೆನೋವಾಗಿದ್ದ.

ಒಮ್ಮೆ ಆತನ ದುರ್ನಡತೆಗಾಗಿ ಛೀಮಾರಿ ಹಾಕಿಸಿ ಓಡಿಸಿದಾಗ ಆನೆ ಅನೇಕ ದಿನಗಳ ವರೆಗೆ ಯಾರ ಮಾತನ್ನು ಕೇಳದೆ ಊಟವನ್ನೇ ವರ್ಜಿಸಿತ್ತು. ಆನೆ ಇರುವವರೆಗೆ ತನ್ನ ಅನಿವಾರ್ಯತೆಯನ್ನು ಮನಗಂಡ ವೇಲಾಯುಧ ಮಠಕ್ಕೆ ಇನ್ನಷ್ಟು ಕಿರುಕುಳವನ್ನು ಕೊಡಲು ಆರಂಭಿಸಿದ್ದ. ಹೀಗಾಗಿ ಆನೆ ಮತ್ತು ಮಾವುತ ವೇಲಾಯುಧನನ್ನು ಸಾಗಹಾಕಲು ಮಠದವರು ಹವಣಿಸುತ್ತಿದ್ದರು.

Question 5.
ಎಲ್ಲರ ನಿರೀಕ್ಷೆ ಸುಳ್ಳಾಗುವಂತೆ ಕೃಷ್ಣಗೌಡ ಆನೆಯನ್ನು ಹೇಗೆ ಸಾಕಿದನು?

Answer:
ಎಲ್ಲಾ ತರಹದ ವ್ಯವಹಾರಗಳನ್ನು ಮಾಡಿ ಎಲ್ಲದರಲ್ಲೂ ನಷ್ಟ ಅನುಭವಿಸಿ ಸೋತು ಹೋಗಿದ್ದ ಕೃಷ್ಣಗೌಡ ಆನೆಯನ್ನು ತಂದಾಗ ಇಲ್ಲಿಗೆ ಇವನ ಕತೆ ಮುಗಿದಂತೆಯೇ ಎಂದು ಎಲ್ಲಾ ತೀರ್ಮಾನಿಸಿದರು. ಆನೆ ಸಾಕುವುದು ಎಂದರೆ ಎಲೆಕ್ಷನ್ನಿಗೆ ನಿಂತೆ ಹಾಗೆ. ಮನೆ ಮಠ ಸಂಪೂರ್ಣ ಹಾಳುಮಾಡಿಕೊಂಡು ಹೆಂಡತಿ ಮಕ್ಕಳ ಬಾಯಿಗೆ ಮಣ್ಣು ಹಾಕುವ ಕ್ಷಿಪ್ರ ಮಾರ್ಗ ಇದೆಂದು ಎಲ್ಲರೂ ದೃಢವಾಗಿ ನಂಬಿದ್ದರು.

ಆದರೆ ಆಗಿದ್ದು ಇದರ ತದ್ವಿರುದ್ಧ! ಮಠದಲ್ಲಿ ಬರಿ ಒಣಹುಲ್ಲು ಮೊಸರನ್ನ ತಿಂದು ಸೊರಗಿದ್ದ ಆನೆಗೆ ಬಯನೆ ಸೊಪ್ಪು, ಹಸಿ ಹುಲ್ಲು, ಹಿಂಡಿ, ಬೆಲ್ಲ ಗೆಣಸು ಎಲ್ಲ ಕೊಟ್ಟು ಕೃಷ್ಣಗೌಡ ಪಗಡದಸ್ತಾಗಿ ಬೆಳೆಸಿದ. ಆನೆ ಮರ ಎಳೆದು ತಂದ ಬಾಡಿಗೆಯಿಂದ ಕೃಷ್ಣಗೌಡನಿಗೆ ಒಳ್ಳೆಯ ಲಾಭವೂ ಕೂಡ ಬಂತು. ಕೃಷ್ಣಗೌಡ ದುಡ್ಡಿನ ಮುಖ ನೋಡಿದ್ದೇ ಆನೆ ಬಂದ ಮೇಲಿಂದ.

Question 6.
ಕಾಡಾನೆಗಳ ಹಾವಳಿ ನಿರೂಪಕರಿಗೆ ಅನುಭವಕ್ಕೆ ಬಂದದ್ದು ಹೇಗೆ?

Answer:
ಒಮ್ಮೆ ನಿರೂಪಕರು ಮನೆ ನಲ್ಲಿಗೆ ಹಾಕಿದ್ದ ಪೈಪನಲ್ಲಿ ನೀರು ಬರುವುದು ನಿಂತು ಹೋಯ್ತು. ಮನೆಯ ಪಕ್ಕದ ಗುಡ್ಡದ ಮೇಲಿನ ಒರತೆಗೆ (ನೀರು ಜಿನುಗುವ ತಗ್ಗು) ನೇರ ಪೈಪು ಹಾಕಿ ನೀರು ಬರುವಂತೆ ಮಾಡಿಕೊಂಡಿದ್ದರು. ಪೈಪಿನೊಳಗೆ ಆಗೀಗ ಕಪ್ಪಗಳೋ ನೀರು ಹಾವುಗಳೋ ನುಗ್ಗಿ ಸಿಕ್ಕಿಕೊಂಡು ನೀರು ಬರಲು ಅಡಚಣೆ ಒಡ್ಡುತ್ತಿದ್ದವೇನೋ ಎಂಬುದು ಅವರ ಊಹೆ ಆಗಿತ್ತು. ಹಾಗೇ ಆಗಿರಬಹುದೆಂದು ತಿಳಿದು ಪೈಪಿನ ಉದ್ದಕ್ಕೂ ನೋಡುತ್ತಾ ಹೋದರು. ಕೊಂಚ ದೂರದೊಳಗೆ ಪೈಪು ಇಡಲು ಮಾಡಿದ್ದ ದಾರಿ ಎಲ್ಲಾ ಗುಂಡಿ ಬಿದ್ದು ಪೈಪುಗಳು ಪುಡಿಪುಡಿಯಾಗಿ ಗುಂಡಿಯ ಒಳಗೆ ಹುದುಗಿಹೋಗಿದ್ದು ಕಾಣಿಸಿತು.

ಗುಂಡಿಗಳೊಳಗೆಲ್ಲಾ ನೀರು ತುಂಬಿಕೊಂಡಿತ್ತು. ತೇವದ ನೆಲದಲ್ಲಿ ಆನೆಗಳು ಹೆಜ್ಜೆ ಇಟ್ಟರೆ ಸಣ್ಣ ಸಣ್ಣ ಬಾವಿಗಳೇ ನಿರ್ಮಾಣವಾಗುತ್ತವೆಂದಾಗಲಿ, ಪೈಪುಗಳು ಪುಡಿಪುಡಿಯಾಗಿ ಪಾತಾಳದವರೆಗೆ ಹುಗಿದು ಹೋಗುತ್ತವೆಂದಾಗಲೀ ನಿರೂಪಕರಿಗೆ ಅಂದಾಜೇ ಇರಲಿಲ್ಲ. ಎಲ್ಲರೂ ಆನೆಕಾಟ ಎಂದು ಕೂಗಾಡುವವರೆಗೂ ನಿರೂಪಕರು ಮಾತ್ರ ಯಾರೋ ಒಬ್ಬ ಮನುಷ್ಯ ಈ ಕೆಲಸ ಮಾಡಿರಬೇಕೆಂದು ಯೋಚಿಸುತ್ತಿದ್ದರು. ಹೀಗೆ ಕಾಡಾನೆಗಳ ಹಾವಳಿ ನಿರೂಪಕರಿಗೆ ಅನುಭವಕ್ಕೆ ಬಂತು.

Question 7.
ಅರಣ್ಯ ಇಲಾಖೆಯ ಶತ್ರುಗಳ ಕಾರ್ಯಭಾರವನ್ನು ನಾಗರಾಜ ವಿವರಿಸಿದ್ದು ಹೇಗೆ?

Answer:
ಒಮ್ಮೆ ನಿರೂಪಕರು ದುರ್ಗಪ್ಪನಿಂದ ವಶಪಡಿಸಿಕೊಂಡ ಕೊಡಲಿಯನ್ನು ಬಿಡಿಸಿತರುವ ಸಲುವಾಗಿ ಫಾರೆಸ್ಟ್ ಆಫೀಸರ್ ನಾಗರಾಜನ ಬಳಿಗೆ ಹೋಗಿದ್ದರು. ಇದನ್ನು ಅರಿತ ನಾಗರಾಜ್ ನಿರೂಪಕರಲ್ಲಿ ಹೀಗೆ ಹೇಳುತ್ತಾನೆ: ನೋಡಿ ಸಾರ್, ಬೆಳ್ಳಗಿರೋದೆಲ್ಲ ಹಾಲೂಂತ ನಂಬೋರು ನೀವು. ಇದೆಲ್ಲಾ ನೀವು ಹೇಳ್ತಿರೋ ಅಷ್ಟು ಸಿಂಪಲ್ಲಾಗಿಲ್ಲ ಸಾರ್. ನೀವಾಗೆ ಕೇಳ್ತಿರೋದ್ರಿಂದ ವಿಧಿ ಇಲ್ಲದೆ ಹೇಳ್ತಿದೇನೆ. ಪಿಡಬ್ಲ್ಯು ಡಿನವರು.

ಕರೆಂಟಿನವರು, ಟೆಲಿಫೋನಿನವರು, ಈ ಮೂರು ಡಿಪಾರ್ಟ್ ಮೆಂಟಗಳು ನಮಗೆ ಎನಿಮಿ ನಂಬರ್ ಒನ್. ಇವರಿಗೆ ಬುದ್ದಿ ಕಲಿಸೋದಕ್ಕೆ ನಮಗೆ ಗೊತ್ತಿದೆ. ರಸ್ತೆಗೆ ಟಾರು ಹಾಕಲು ನಮ್ಮ ರಸ್ತೆ ಮರಾನೆಲ್ಲಾ ಕಡಿದು ಟಾರು ಕಾಯಿಸ್ಕೋತಾರೆ ಕಾಯಿಸ್ಕೋತಾರೆ ಪಿಡಬ್ಲ್ಯು ಡಿನವರು. ಈ ಕರೆಂಟಿವನರು ಟೆಲಿಫೋನಿನವರು ಅವರ ಲೈನು ಎಳೆಯೋದಕ್ಕೆ ಫಾರೆಸ್ಟು ಕ್ಲಿಯರ್ ಮಾಡ್ತೀವಿ ಅಂತ ಎಲ್ಲೆಂದರಲ್ಲಿ ಸಾವಿರಾರು ಎಕರೆ ಕಾಡು ಕಡಿದು ಹಾಳುಮಾಡಿದ್ದಾರೆ. ಈಗ ಹಳ್ಳಿಹಳ್ಳಿಗೆ ಕರೆಂಟು, ಟೆಲಿಫೋನ್ಕೊಡಬೇಕಂತ ಸರ್ಕಾರ ಪಾಲಿಸಿಮಾಡಿ ಇವರ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಿದೆ ಸಾರ್! ಲೈನು ಕ್ಲಿಯರ್ ಮಾಡೋ ನೆವದಲ್ಲಿ ಇವರು ಯಾರೂ ಮನೆಗೆ ಸೌದೆ ಕೊಳ್ತಾನೆ ಇಲ್ಲಾ. ನೀವು ಹೇಳಿದ ಹಾಗೆ ಇವರೂ ಸರ್ಕಾರದ ಡಿಪಾರ್ಟ್‌ ಮೆಂಟೇ.

ನಾವೂ ಡಿಪಾರ್ಟ್‌ಮೆಂಟೇ. ಆದರೆ ಇವರನ್ನು ಹೀಗೆ ಬಾಲಬಿಟ್ಟೋದಕ್ಕೆ ಬಿಟ್ರೆ ಫಾರೆಸ್ಟು ಡಿಪಾರ್ಟುಮೆಂಟು ಬಾಗಿಲು ಮುಚ್ಚಬೇಕಾಗುತ್ತೆ. ಇವರಿಗೆ ಬುದ್ದಿ ಕಲಿಸಬೇಕೋ ಬೇಡವೋ ನೀವೇ ಹೇಳಿ. ಎಂದು ನಾಗರಾಜ ಅರಣ್ಯ ಇಲಾಖೆಯ ಶತ್ರುಗಳ ಕಾರ್ಯಭಾರವನ್ನು ವಿವರಿಸಿದನು.’

Question 8.
ನಿದ್ರೆ ಮಂಪರಿನಲ್ಲಿದ್ದ ಡ್ರೈವರ್ ಪರಂಧಾಮಕ್ಕೆ ಹೋದ ಸಂದರ್ಭವನ್ನು ವಿವರಿಸಿ.

Answer:
ಒಂದು ದಿನ ಶಿವೇಗೌಡರ ಸಾಮಿಲ್ಲಿನಲ್ಲಿ ಕಳ್ಳನಾಟ ಇಳಿಸಲು ರಾತ್ರೋರಾತ್ರಿ ಆನೆ ಕರೆದುಕೊಂಡು ಹೋದರಂತೆ. ಈಚೆಗೆ ಮರ ಕಡಿಯುವುದರ ಬಗ್ಗೆ ನಾಟಿ ಸಾಗಿಸುವುದರ ಬಗ್ಗೆ ಸರ್ಕಾರದ ಕಾನೂನು ನಿಬಂಧನೆಗಳು ವಿಪರೀತ ಬಿಗಿಯಾದ್ದರಿಂದ ಸಾಮಿಲ್ಲಿನವರ ಅರ್ಧಕ್ಕರ್ಧ ಕೆಲಸವೆಲ್ಲ ರಾತ್ರಿಯೇ ನಡೆಯುತ್ತಿದ್ದುದು. ಆನೆಯ ಮಾವುತ ಇಬ್ಬರೂ ತಮ್ಮ ತಮ್ಮ ಕೋಟ ಷರಾಬು ಕುಡಿದು ಬಿಗಿಯಾಗಿದ್ದರು. ವೇಲಾಯುಧನಿಗೆ ರಾತ್ರಿ ಸಹ ಕೆಲಸ ಮಾಡಬೇಕಲ್ಲ ಎಂದು ಸಿಟ್ಟೇ ಬಂದಿತ್ತು. ಸಾಮಿಲ್ಲಿನ ಒಳಗೆ ಲೋಡು ಲಾರಿ ನಿಂತಿತ್ತು. ಕ್ಲೀನರು ನಾಯರ್ ಹೋಟೆಲಿನಲ್ಲಿ ಚಾ ಕುಡಿದು ಬರಲು ಹೋಗಿದ್ದ. ಡ್ರೈವರ್ ಒಬ್ಬನೆ ನಿದ್ರೆ ಮಂಪರಿನಲ್ಲಿ ತೂಕಡಿಸುತ್ತ ಸ್ಟಿಯರಿಂಗ್ ಚಕ್ರದ ಮೇಲೆ ತಲೆ ವಾಲಿಸಿಕೊಂಡು ಅರೆನಿದ್ದೆಯಲ್ಲಿದ್ದ.

ಷರಾಬಿನ ನಿಷಾದಲ್ಲಿದ್ದ ವೇಲಾಯುಧನಿಗೆ ಲಾರಿಗೂ ನಾಟಾಗಳಿಗೂ ಹಗ್ಗ ಬಿಗಿದು ಕಟ್ಟಿದ್ದು ಬಿಚ್ಚಬೇಕೆಂದು ಮರತೇಹೋಯ್ತು. ಹಿಂದು ಮುಂದು ನೋಡದೆ ಆನೆಗೆ ಲಾರಿ ಮೇಲಿನ ದಿಮ್ಮಿಗಳನ್ನು ತಳ್ಳಿ ಉರುಳಿಸಲು ಹೇಳಿದ. ನಿದ್ದೆಯ ಜೋಂಪಿನಲ್ಲಿದ್ದ ಡ್ರೈವರ್‌ಗೆ ಎಚ್ಚರಾದಾಗ ಪ್ರಪಂಚ ಯಾಕೋ ತಲೆಕೆಳಗಾಗುತ್ತಿದೆ ಎನ್ನಿಸಿತು. ಲಾರಿಗೆ ನಾಟ ಬಿಗಿದು ಕಟ್ಟಿದ್ದರಿಂದ ನಾಟ ಉರುಳದೆ ಲಾರಿ ಸಮೇತ ಮೆಲ್ಲಗೆ ವಾಲಿ ಒಂದು ಕಡೆ ದೊಪ್ಪನೆ ಉರುಳಿ ಬಿತ್ತು. ಲಾರಿ ಮೆಲ್ಲಗೆ ವಾಲುತ್ತ ಒಂದು ಕಡೆ ಉರುಳಿದ್ದರಿಂದ ಡ್ರೈವರ್ ಮಹಾಶಯನಿಗೆ ಹೆಚ್ಚಿಗೆ ಏನೂ ಅಪಾಯವಾಗುವ ಸಂಭವವೇ ಇರಲಿಲ್ಲ. ಆದರೆ ಕ್ಯಾಬಿನ್ನಿನಲ್ಲಿ ಇಟ್ಟಿದ್ದ ಮಣಬಾರದ ಲಾರಿ ಜಾಕ್ ದೊಪ್ಪನೆ ಅವನ ಬುರುಡೆಯ ಮೇಲೆ ಬಿದ್ದ ಹೊಡೆತಕ್ಕೆ ಅವನ ತಲೆ ಜಜ್ಜಿ ಕಮಕ್ ಕಿಮಕ್ ಎನ್ನದೆ ಪರಂಧಾಮಕ್ಕೆ ಹೋದ.

Question 9.
ಡ್ರೈವರ್ ಸಾವಿನ ಸುದ್ದಿಯನ್ನು ಶಿವೇಗೌಡ ಮತ್ತಿತರರು ಹೇಗೆ ಮುಚ್ಚಿಹಾಕಿದರು?

Answer:
ಒಂದು ದಿನ ಶಿವೇಗೌಡರ ಸಾಮಿಲ್ಲಿನಲ್ಲಿ ಕಳ್ಳನಾಟ ಇಳಿಸಲು ರಾತ್ರೋರಾತ್ರಿ ಆನೆ ಕರೆದುಕೊಂಡು ಹೋದರು. ಷರಾಬಿನ ಮತ್ತಿನಲ್ಲಿದ್ದ ವೇಲಾಯುಧನು ಲಾರಿಗೆ ಕಟ್ಟಿದ್ದ ಹಗ್ಗವನ್ನು ಚಿಚ್ಚಲು ಮರೆತು, ಆನೆ ಮರದ ದಿಮ್ಮಿಗಳನ್ನು ಎಳೆದಾಗ ಇಡೀ ಲಾರಿಯೇ ವಾಲಿ, ಕ್ಯಾಬಿನ್ನಿನಲ್ಲಿ ಇಟ್ಟಿದ್ದ ಮಣಭಾರದ ಜಾಕು ದೊಪ್ಪನೆ ಬಿದ್ದು, ಡ್ರೈವರ್ ಅಲ್ಲಿಯೇ ಸತ್ತು ಹೋದ. ಇದರಿಂದ ಸಾಮಿಲ್ಲಿನ ಮಾಲಕರಾದ ಶಿವೇಗೌಡರು ಗಾಬರಿಗೊಂಡರು. ಸಾಗಿಸುತ್ತಿರುವ ನಾಟ ಕಳ್ಳ ಮಾಲಾಗಿರುವುದರಿಂದ ಈ ವಿಷಯ ಪೊಲೀಸರಿಗೆ ಗೊತ್ತಾದರೆ ಜೈಲು ಸೇರಬೇಕಾಗಬಹುದು ಎಂಬ ಭಯ ಅವರನ್ನು ಅವರಿಸುತು.

ಸಿಟ್ಟುಗೊಂಡ ಶಿವೇಗೌಡರು ವೇಲಾಯುಧನಿಗೆ ‘ಕುಡುಕ ಸೂಳೇಮಗನೆ ಎಂಥ ಗಂಡಾಂತ್ರ ತಂದಿಟ್ಟೆ ನೋಡು’ ಎಂದು ಬೈಯ್ದರು. ಮುಂದೇನಾಯ್ತು ಎಂದು ಯಾರಿಗೂ ಗೊತ್ತಾಗಲಿಲ್ಲ. ಬೆಳಿಗ್ಗೆ ನೋಡಬೇಕಾದರೆ ಲಾರಿ ಸರಿಯಾಗಿ ನಿಂತಿತ್ತು.

ಈ ವಾರ್ತೆ ಬರೇ ಪಿಸುಮಾತಿನಲ್ಲೇ ಮುಕ್ತಾಯವಾದ್ದರಿಂದ ಶಿವೇಗೌಡರು ಕೃಷ್ಣಗೌಡರು ಇಬ್ಬರೂ ಸೇರಿ ಇದನ್ನು ಮುಚ್ಚಿಹಾಕಿರಬೇಕು. ಯಾರೂ ದೂರು ಕೊಡದ ಕಾರಣ ಕಾನೂನಿನ ಕ್ರಮ ಯಾರ ಮೇಲೂ ಜಾರಿ ಆಗಲಿಲ್ಲ. ಲಾರಿ ಟ್ರಿಪ್ಪಿಗೆ ಹೋದ ದಿಕ್ಕಿನಲ್ಲೆಲ್ಲ ಆ ಡ್ರೈವರಿಗೆ ಒಂದೊಂದು ಸಂಸಾರ ಇದ್ದದ್ದರಿಂದ ಆ ಹದಿನೇಳು ಜನರಲ್ಲಿ ಯಾರು ಅಧಿಕೃತ ಯಾರು ಅನಧಿಕೃತ ನಿರ್ಧರಿಸಲಾರದೆ ಕ್ಲೀನರ್ ಯಾರಿಗೂ ವಿಷಯ ತಿಳಿಸ ಹೋಗಲಿಲ್ಲ. ಕೊಡಲಿ ವಾಪಾಸ್ ಕೊಡಲೆಂದು ಬಂದ ದುರ್ಗಪ್ಪ ಕೃಷ್ಣಗೌಡರ ಆನೆಯನ್ನು ಶಪಿಸಿದ್ದಲ್ಲದೆ, ಅದು ಕೊಂದ ಡ್ರೈವರ್ ಹೆಣವನ್ನು ಮರದ ಹೊಟ್ಟಿನೊಳಗೆ ಹಾಕಿ ಆಗಾಗ ಬೆಂಕಿ ಕೊಡುವಂತೆ ಬೆಂಕಿ ಕೊಟ್ಟು ಬೂದಿ ಮಾಡಿದರೆಂದು ಹೇಳಿದ. ಹೀಗೆ ಡ್ರೈವರ್ ಸಾವಿನ ಸುದ್ದಿಯನ್ನು ಶಿವೇಗೌಡ ಮತ್ತಿತರರು ಮುಚ್ಚಿಹಾಕಿದರು.

Question 10.
ದುರ್ಗಪ್ಪನಿಗೆ ಲೈನ್‌ಮ್ಯನ್ ಕೆಲಸ ರೋಸಿ ಹೋಗಲು ಕಾರಣವೇನು?

Answer:
ದುರ್ಗಪ್ಪನಿಗೆ ಲೈನ್‌ಮನ್ ಕೆಲಸ ರೋಸಿಹೋದಂತೆ ಕಂಡಿತು. ಅದಕ್ಕೆ ಮುಖ್ಯ ಕಾರಣ ಅವನಿಗೆ ಶಿವೇಗೌಡರ ಸಾಮಿಲ್ಲಿನ ಎದುರು ಹೋಗಿದ್ದ ಕಳಸಾ ಲೈನು ನೋಡಿಕೊಳ್ಳಲು ಕೊಟ್ಟಿದ್ದರು. ಆ ವಿದ್ಯುತ್ಲೈನು ಇಡೀ ಮೂಡಿಗೆರೆಗೆ ತರಲಿ ಲೈನು ಎಂದು ಹೆಸರುವಾಸಿಯಾಗಿತ್ತು. ಒಂದು ಕಡೆ ಹಳೇಕೋಟೆ, ಗೌಡಳ್ಳಿ, ಭೈರಾಪುರದವರೆಗೆ, ಇನ್ನೊಂದು ಕಡೆ ಬಣಕಲ್ಲು, ನಿಡುವಾಳೆ. ಜಾವಳಿವರೆಗೆ, ಎಲ್ಲೆಲ್ಲೋ ಕಗ್ಗಾಡಿನ ನಡುವೆ ಎಲ್ಲ ನುಗ್ಗಿ ನುಸುಳಿ ಹೋಗಿತ್ತು. ಈ ದರಿದ್ರ ಲೈನಿನ ಯೋಗಕ್ಷೇಮ ನೋಡಿಕೊಳ್ಳಲು ಹೋಗಿ ಅವನಿಗೆ ಬದುಕಿನ ಆಸೆಯೇ ಬತ್ತಿ ಹೋಗಿತ್ತು.

ಕಾಡಿನ ಯಾವ ಮೂಲೆಯಲ್ಲಿ ಕೊಂಬೆ ಮುರಿದು ಬೀಳಲಿ, ಎಲ್ಲಿ ಲೈನಿಗೆ ಬಾವಲಿಗಳು ಸಿಕ್ಕಿಕೊಳ್ಳಲಿ ಇಡೀ ಲೈನು ಕಟ್ಟಾಗುತ್ತಿತ್ತು. ಬೆಳಿಗ್ಗೆ ಎದ್ದು ದುರ್ಗಪ್ಪ ತಂತಿ ಸುರುಳಿ ಕಟ್ಟಿಂಗ್‌ಪ್ಲೇಯರು ಹಿಡಿದು ಎಲ್ಲಿ ಟ್ರಬಲ್ ಇದೆ ಎಂದು ಹುಡುಕಿ ಹೊರಡುತ್ತಿದ್ದ. ಜನಕ್ಕಾಗಲೀ ಡಿಪಾರ್ಟ್‌ ಮೆಂಟಿನವರಿಗಾಗಲಿ ಫಾರೆಸ್ಸಿನವರಿಗಾಗಲಿ ಅವನ ಕಷ್ಟ ಏನು ತಾನೆ ಗೊತ್ತಾದೀತು. ನಾಗರಾಜ ಸೌದೆ ಮಾಡುತ್ತಾರೆ ಎಂದು ಜರೆದರೆ, ಡಿಪಾರ್ಟ್‌ ಮೆಂಟಿನವರು ಲೈನು ಸರಿಯಾಗಿ ಮೇಂಟೇನ್ ಮಾಡಿಲ್ಲ ಎಂದು ಬಯ್ಯುತ್ತಿದ್ದರು.

Question 11.
ಪೋಸ್ಟ್‌ಮನ್ ಜಬ್ಬಾರನ ಬವಣೆಗಳನ್ನು ನಿರೂಪಕರು ಹೇಗೆ ವಿವರಿಸಿದ್ದಾರೆ?

Answer:
ಜಬ್ಬಾರ್ ಲೈನ್‌ಮನ್ ದುರ್ಗಪ್ಪನ ರೀತಿಯಲ್ಲೇ ತೊಂದರೆಗೆ ಸಿಕ್ಕಿಕೊಂಡಿದ್ದ ಮನುಷ್ಯ. ಹೆಸರಿಗೆ ಇವನು ಕೇಂದ್ರ ಸರ್ಕಾರದ ನೌಕರನಷ್ಟೆ, ಹದಿನಾರು ವರ್ಷದಿಂದ ಕೆಲಸ ಮಾಡುತ್ತಿದ್ದರೂ ಇನ್ನೂ ಟೆಂಪರ್ವರಿ ಯಾಗೆ ಇದ್ದುದರಿಂದ ಅವನ ಸಂಬಳ ಅರವತ್ತು ರೂಪಾಯಿ. ಆ ಸಂಬಳದಿಂದ ಹೊಟ್ಟೆಹೊರೆಯಲು ಸಾಧ್ಯವಿಲ್ಲದೆ ನೂರೆಂಟು ಪತ್ರಿಕೆಗಳ ಏಜೆನ್ಸಿ ತಗೊಂಡು ಪೋಸ್ಟ್ ಕೊಡುವಲೆಲ್ಲಾ ಚಂದಾದಾರರನ್ನು ಮಾಡಲು ಪ್ರಯತ್ನಿಸುತ್ತಿದ್ದ. ಪೋಸ್ಸಿನ ಜೊತೆಗೆ ಮ್ಯಾಗಝೀನುಗಳ ಕಂತೆಯನ್ನೂ ಹೊತ್ತುಕೊಂಡು ಅವನು ತಿರುಗಬೇಕಾಗಿತ್ತು. ಅದೂ ಎಷ್ಟು ದೂರ? ದಿನ ಹದಿನೆಂಟು ಕಿಲೋಮೀಟರು ಹೋಗಿ ಬರಬೇಕಿತ್ತು.

ನಿರೂಪಕರೂ ಕೂಡ ಅವನ ತಿರುಗಾಟವನ್ನು ಗಮನಿಸಿ, ಲೆಕ್ಕಹಾಕಿ: ಅವನ ಮೂಗಿನ ನೇರಕ್ಕೆ ನೆಟ್ಟಗೆ ನೆಡೆದಿದ್ದರೆ ಇಡೀ ಭೂಮಂಡಲ ಸುತ್ತಿ ಬರಬಹುದಾಗಿತ್ತು ಎಂದಿದ್ದರು. ಅಲ್ಲದೆ ಮೂಡಿಗೆರೆಯಂತ ಕುಗ್ರಾಮ ಆಧುನೀಕರಣಗೊಳ್ಳುತ್ತ ಟೆಲಿಫೋನ್ ಎಕ್ಸ್‌ ಛೇಂಜ್, ವಿದ್ಯುತ್ ಎಲ್ಲ ಬಂದ ಹಾಗೆ ಪೋಸ್ಟಲ್ ಡಿಪಾರ್ಟ್ ಮೆಂಟ್ ನವರು ಸೇವೆಯನ್ನು ವಿಸ್ತರಿಸುತ್ತಾ ಹೋಗಿ ಪೋಸ್ಟ್ ಆಫೀಸ್‌ಗಳ ಬದಲು ಪೋಸ್ಟ್ ಬಾಕ್ಸ್‌ಗಳನ್ನು ಬಿದಿರಳ್ಳಿ ಇಲ್ಲೆಲ್ಲ ನೇತು ಹಾಕಿದರು. ಇದರಿಂದ ತೊಂದರೆಗೆ ಸಿಕ್ಕಿ ಹಾಕಿಕೊಂಡವನು ಜಬ್ಬಾರ್ ಪೋಸ್ಟ್ ಕೊಡುವುದಲ್ಲದೆ ಪ್ರತಿ ದಿನ ಪೋಸ್ಟ್‌ಬಾಕ್ಸ್ ಇರುವವರೆಗೂ ಹೋಗಿ ಪೋಸ್ಟ್ ಸಂಗ್ರಹಿಸಿ ಹೆಡ್ಡಾಫೀಸಿಗೆ ಕೊಡಬೇಕಾಗಿತ್ತು. ಅಲ್ಲದೆ ಪೋಸ್ಟ್ ಕೊಡಲು ಹೋದಾಗ ಅಲ್ಲಲ್ಲಿ ನಾಯಿಗಳಿಂದ ಕಚ್ಚಿಸಿಕೊಳ್ಳಬೇಕಾಗಿತ್ತು. ಇದು ಪೋಸ್ಟ್‌ಮನ್ ಜಬ್ಬಾರನ ಬವಣೆಗಳಾಗಿವೆ.

Question 12.
ಪುಟ್ಟಯ್ಯ ತನ್ನ ಅಸಹಾಯಕತೆಯನ್ನು ಹೇಗೆ ವಿವರಿಸುತ್ತಾನೆ?

Answer:
ಪುಟ್ಟಯ್ಯ ವೆಟರರಿ ಸ್ಟಾಕ್‌ಮನ್ ಆಗಿ ಸೇವೆ ನಿರ್ವಹಿಸುತ್ತಿದ್ದ. ಜಬ್ಬಾರ್ ಮತ್ತು ನಿರೂಪಕರು ಮಾತನಾಡುತ್ತಿರುವಾಗ ಮಧ್ಯ ಪ್ರವೇಶಿಸಿದ ಪುಟ್ಟಯ್ಯ ತನ್ನ ಅಸಹಾಯಕತೆಯನ್ನು ತೋಡಿಕೊಳ್ಳುತ್ತಾನೆ. ಹುಚ್ಚುನಾಯಿ ಇಂಜೆಕ್ಷನ್ ಏನೋ ಇದೆ. ಆದರೆ ಅದು ಗ್ಯಾರೆಂಟಿ ಇಲ್ಲ. ದನ ಎಮ್ಮೆಗಾದ್ರೆ ಹ್ಯಾಗೋ ರಿಸ್ಕ್ ತಗೊಂಡು ಅದನ್ನೇ ಚುಚ್ಚಬಹುದು. ಆದರೆ ಮನುಷ್ಯರ ವಿಷಯಕ್ಕೆ ಸ್ವಲ್ಪ ಯೋಚನೆ ಮಾಡಬೇಕು. ಒಂದು ವಾರದಿಂದ ನಮಗೆ ಕರೆಂಟ್ ಇಲ್ಲ ನೋಡಿ. ರೆಫ್ರಿಜಿರೇಟರ್ ಒಳಗೆ ಸಾವಿರಾರು ರೂಪಾಯಿಗಳ ಔಷಧಿ ಇಟ್ಟಿದ್ದೀವಿ, ಕರೆಂಟಿನವರಿಗೆ ಏನು ಗೊತ್ತಾಗುತ್ತೆ ಹೇಳಿ ಅವೆಲ್ಲಾ.

ಒಟ್ಟಿನಲ್ಲಿ ಲೈನು ಟ್ರಬಲ್ಲಿದೆ ಅಂತ ಕರೆಂಟ್ ತೆಗೆದು ಹಾಕಿಬಿಡುತ್ತಾರೆ. ಯಾರ್ಯಾರಿಗೆ ಎಷ್ಟೆಷ್ಟು ನಷ್ಟ ಆಗುತ್ತೆ ಅಂತ ಏನಾದರೂ ಯೋಚನೆ ಮಾಡ್ತಾರ ಸಾರ್! ನಿಮ್ಮಂತೋರು ಚೆನ್ನಾಗಿ ಉಗಿಬೇಕು ಸಾರ್. ಇಲ್ಲದಿದ್ರೆ ಸರಿ ಹೋಗಲ್ಲ. ನಮ್ಮಂತೋರ ಮಾತಿಗೆ ಅವರು ಬಿಲ್‌ಕುಲ್ ಬಗ್ಗೋದಿಲ್ಲ. ಇವತ್ತು ಹುಚ್ಚುನಾಯಿ ಕಚ್ಚಿದೆ ಅಂತ ಸುಮಾರು ದನಗಳು ಬಂದಿದ್ದು, ರೆಫ್ರಿಜಿರೇಟರ್ ಕೆಲಸ ಮಾಡುತ್ತಿಲ್ಲ. ಸಿರಂ ಕೆಟ್ಟೋಗಿದೆ ಅಂತ ಅವರನ್ನೆಲ್ಲಾ ಹಿಂದಕ್ಕೆ ಕಳಿಸಿದೀನಿ. ಹೊಸ ಸಿರಂ ಕಳಿಸೋದಕ್ಕೆ ಕೂನೂರಿಗೆ ಇಂಡೆಂಟ್ ಹಾಕಿದ್ದೇನೆ. ಯಾವಾಗ ಕನ್‌ಸೈನ್‌ಮೆಂಟ್ ಕಳಿಸ್ತಾರೋ ನೋಡಬೇಕು. ಎಂದು ತನ್ನ ಅಸಹಾಯಕತೆಯನ್ನು ತೋಡಿಕೊಂಡನು.

Question 13.
ಬೀದಿನಾಯಿಗಳ ನಿವಾರಣೆಗೆ ಖಾನ್ ಸಾಹೇಬರು ತೆಗೆದುಕೊಂಡಿದ್ದ ಕ್ರಮಗಳಾವುವು?

Answer:
ಬೀದಿನಾಯಿಗಳನ್ನು ಎರಾಡಿಕೇಟ್ ಮಾಡೋದಕ್ಕೆ ನಾವು ಕೈಲಾದದ್ದೆಲ್ಲ ಪ್ರಯತ್ನ ಮಾಡಿದ್ದೇವೆ. ಶೂಟ್ ಮಾಡಿಸಿದ್ದೇನೆ. ಪಾಯ್ಸನ್ ತರಿಸಿ ಹಾಕಿಸಿದ್ದೇನೆ. ಒಬ್ಬ ಮುನಿಸಿಪಲ್ ಪ್ರೆಸಿಡೆಂಟ್ ಆದೋನು ಇನ್ನೇನು ಮಾಡಬಹುದು ಹೇಳಿ? ಈ ಸಾರಿ ನಾವು ತರಿಸಿದ ಡಾಗ್ ಪಾಯ್ಸನ್ ಅಷ್ಟೊಂದು ಎಫೆಕ್ಟಿವ್ ಆದ ಹಾಗೆ ಕಾಣಲಿಲ್ಲ. ಅದೇನು ಅದನ್ನೂ ಕಲಬೆರಕೆ ಮಾಡ್ತಾರೋ ಏನೋ. ಆದರೂ ಈ ವರ್ಷ ಇನ್ನೂರುಮುನ್ನೂರು ನಾಯಿನಾದ್ರೂ ಸಾಯಿಸಿದ್ದೇವೆ ನೋಡಿ. ಎನಪ್ಪಾ ಅಂದರೆ ಅವು ಮುನಿಸಿಪಾಲಿಟಿ ಹದ್ದು ಬಸ್ತಿನ ಒಳಗೆ ಇದ್ರೆ ಮಾತ್ರ ನಾವು ಆಕ್ಷನ್ ತಗೋಬಹುದು.

ಮೂಡಿಗೆರೆ ಒಳಗೆ ಇನ್ನೂ ತುಂಬಾ ಕಂತ್ರಿ ನಾಯಿಗಳಿರೋದು ನಿಜ. ಅದಕ್ಕೆ ಕಾರಣ ಹೆಳ್ತಿನಿ ಕೇಳಿ. ಅವೆಲ್ಲಾ ಇಲ್ಲಿ ನಾಯಿಗಳಲ್ಲಾ! ಹೊರಗಡೆಯಿಂದ ಇಲ್ಲಿಗೆ ಎಕ್ಸಪೋರ್ಟ್ ಅದವು. ಲಾರೀಲಿ ನಾಯಿಗಳನ್ನ ತುಂಬಿಕೊಂಡು ಬಂದು ಇಲ್ಲಿ ರಾತ್ರೋರಾತ್ರಿ ಬಿಟ್ಟು ಹೋಗಿದ್ದಾರೆ. ನಾಯಿ ಕಾಟ ವಿಪ್ರೀತ ಆದ ಕೂಡಲೆ ಲಾರೀಲಿ ತುಂಬಿಸಿ ದೂರ ಎಲ್ಲಾದರೂ ಬಿಡ್ತಾರೆ ಎನ್ನುತ್ತಾ ತಾನು ಕೈಗೊಂಡ ಕ್ರಮಗಳ ಬಗ್ಗೆ ಸಮಜಾಯಿಸಿ ಮಾಡಿಕೊಂಡರು.

Question 14.
ಟೆಲಿಫೋನ್ ಲೈನ್‌ನ್ ತಿಪ್ಪಣ್ಣನ ಸಾವಿನ ಸಂದರ್ಭವನ್ನು ವಿವರಿಸಿ.

Answer:
ತಿಪ್ಪಣ್ಣ ಟೆಲಿಫೋನ್ ಇಲಾಖೆಯಲ್ಲಿ ಲೈನ್‌ ಮನ್ ಕಾಯಕ ನಿರ್ವಹಿಸುತ್ತಿದ್ದ. ತಿಪ್ಪಣ್ಣನಿಗೆ ನುಗ್ಗೇಹಳ್ಳಿಯ ಕಡೆಗೆ ಹೋದ ಲೈನುಗಳು ಮೃತ್ಯುಸ್ಥಂಭವಾದೀತೆಂದು ತಿಳಿದಿರಲಿಲ್ಲ. ಆತ ಬೆಳಿಗ್ಗೆ ಎಕ್ಸ್‌ಛೇಂಜ್ ಬಳಿಗೆ ಬಂದಾಗ ನುಗ್ಗೇಹಳ್ಳಿ ಕಡೆಯ ಅಷ್ಟೂ ಲೈನುಗಳು ಡೆಡ್ಡಾಗಿವೆ ಎಂದು ಮೇಂಟೆನೆನ್ಸ್‌ನವರು ಹೇಳಿ ಕಳಿಸಿದರು. ಊರಿನಿಂದ ಸಾಕಷ್ಟು ದೂರದಲ್ಲಿದ್ದ ಹದಿನೇಳನೇ ಕಂಬದ ಜಂಕ್ಷನ್ ಬಾಕ್ಸ್ ಪರಿಶೀಲನೆ ಮಾಡಿ, ಯಾವ ಯಾವ ಲೈನು ಡೆಡ್ಡಾಗಿದೆ ತಿಳಿಯಲು ತಿಪ್ಪಣ್ಣ ಆ ಕಂಬ ಹತ್ತಿದ. ಮೂವತ್ತು ನಲವತ್ತು ತಂತಿಗಳ ತೊಡಕಿನೊಳಗೆ ನುಸುಳಿ ತಿಪ್ಪಣ್ಣ ಜಂಕ್ಷನ್ ಬಾಕ್ಸ್ ಬಿಚ್ಚಿ ಸೂಡ್ರೈವರಿನಲ್ಲಿಎಂಥದನ್ನೊ ಮೀಟುತ್ತಿರಬೇಕಾದರೆ ಇದ್ದಕ್ಕಿದ್ದಂತೆ ಅಲ್ಲೇ ಸತ್ತು ಹೋದ.

ಅನೇಕ ತಂತಿಗಳ ಗೋಜಲಿನೊಳಗೆ ಸಿಕ್ಕಿಕೊಂಡಿದ್ದ ತಿಪ್ಪಣ್ಣನ ಹೆಣ ರಿಪೇರಿ ಭಂಗಿಯಲ್ಲೇ ಕುಳಿತುಕೊಂಡು ಸತ್ತಹಾಗೇ ಕಾಣುತ್ತಲೇ ಇರಲಿಲ್ಲ. ನೋಡಿದವರೆಲ್ಲಾ ಏನೋ ಕಂಬ ಹತ್ತಿ ರಿಪೇರಿ ಮಾಡುತ್ತಿದ್ದಾನೆಂದು ತಿಳಿದು ಅಲಕ್ಷಿಸಿ ತಮ್ಮ ಪಾಡಿಗೆ ನಡೆದರು. ದಿನ ಕಳೆದ ಮೇಲೆ ನುಗ್ಗೇಹಳ್ಳಿಯ ರಾಮೇಗೌಡರು ಇನ್ನೂ ಯಾಕೆ ತಮ್ಮ ಫೋನು ಸರಿಯಾಗಿಲ್ಲವೆಂದು ಎಕ್ಸ್‌ ಛೇಂಜ್‌ಗೆ ಬಂದು ಕೂಗಾಡಿದಾಗಲೇ ಜೂನಿಯರ್ ಇಂಜಿನಿಯರ್ ರಮೇಶ್‌ ಬಾಬು ಗಮನ ಅತ್ತ ಹೋದುದು. ರಮೇಶ್‌ ಬಾಬು ಲೈನ್‌ಮನ್ ಶಂಕ್ರಪ್ಪನನ್ನು ಕರೆದುಕೊಂಡು ಹೋಗಿ ನೋಡಿದಾಗ ತಿಪ್ಪಣ್ಣ ಸತ್ತಿರುವುದು ಖಾತ್ರಿಯಾಯಿತು.

Question 15.
ಡ್ರೈವರ್ ಅಬ್ಬಾಸ್ ಮತ್ತು ಕ್ಲೀನರ್ ಕೃಷ್ಣನ ಸಾವಿಗೆ ಕೃಷ್ಣಗೌಡರ ಆನೆ ಕಾರಣವೆ ವಿವರಿಸಿ.

Answer:
ಡ್ರೈವರ್ ಅಬ್ಬಾಸ್ ಮತ್ತು ಕ್ಲೀನರ್ ಕೃಷ್ಣನ ಸಾವಿಗೆ ಕೃಷ್ಣಗೌಡರ ಆನೆ ಕಾರಣವಲ್ಲ. ಏಕೆಂದರೆ, ಅವರಿಬ್ಬರು ಸತ್ತ ಸಮಯದಲ್ಲಿ ವೇಲಾಯುಧ ಅನೆಯ ಜೊತೆಗೆ ಶಿವೇಗೌಡರ ಸಾಮಿಲಿನಲ್ಲಿ ಲಾರಿ ತರುವ ಕಳ್ಳನಾಟಕ್ಕಾಗಿ ಕಾಯುತ್ತಾ ನಿಂತಿದ್ದ. ಅಬ್ಬಾಸ್ ಮತ್ತು ಕೃಷ್ಣನ ಸಾವಿಗೆ ಅವರ ಅಜಾಗರೂಕತೆಯೇ ಕಾರಣ. ಲೋಡು ಲಾರಿ ಬಿಟ್ಟುಕೊಂಡು ಬರುತ್ತಿದ್ದ ಅಬ್ಬಾಸ್‌ಗೆ ಇದ್ದಕ್ಕಿದ್ದಂತೆ ಎರಡು ದಂ ಬೀಡಿ ಎಳೆಯುವ ತೆವಲು ಶುರುವಾಯ್ತು. ಕ್ಲೀನರ್ ಕೃಷ್ಣನಿಗೆ ಚೂರು ಸ್ಟೇರಿಂಗ್ ಹಿಡಿಯೋ, ಬೀಡಿ ಹತ್ತಿಸಿಕೋತೀನಿ, ಬಾಯಿ ಯಾಕೋ ಒಂಥರಾ ಆಗ್ತಿದೆ ಎಂದು ಅವನ ಕೈಗೆ ಸ್ಟೇರಿಂಗ್ ಕೊಟ್ಟ, ಜೇಬಿನಿಂದ ಬೀಡಿ ತೆಗೆದು ಬಾಯಿಗಿಟ್ಟು, ಬೆಂಕಿ ಕಡ್ಡಿ ಗೀರಿ ಒಂದು ದಂ ಎಳೆದು, ಅದರ ಹೊಗೆಯಲ್ಲೇ ಊದಿ ಕಡ್ಡಿ ನಂದಿಸಿ.

ತಲೆ ಎತ್ತಿ ಎದುರು ನೋಡಿದ! ಲಾರಿ ಎದುರು ಮರದ ದೊಡ್ಡ ಕಾಂಡ ಒಂದು ನೇರವಾಗಿ ನುಗ್ಗುತ್ತಿದೆ. ಆದರೂ ಕೈ ಮೀರಿಲ್ಲ, “ಏ ಕೃಷ್ಣಾ, ಸ್ಪೇರಿಂಗ್ ಬಿಡೋ” ಎಂದು ಕೂಗುತ್ತಾ ಸ್ಟೇರಿಂಗ್‌ಗೆ ಕೈ ಹಾಕಿ ಲಾರಿ ಮೂತಿಯನ್ನು ದಾರಿ ಕಡೆಗೆ ತಿರುಗಿಸಲು ಯತ್ನಿಸಿದ. ಆದರೆ ಕೃಷ್ಣನಿಗೆ ಮೈ ಮೀಲಿನ ಪರಿವೇ ಇದ್ದ ಹಾಗೆ ಕಾಣಲಿಲ್ಲ. ಸ್ಟೇರಿಂಗ್ ಹಿಡಿ ಎಂದು ಡ್ರೈವರಣ್ಣಾ ಹೇಳಿದ್ದೊಂದೇ ಅವನ ತಲೆಯೊಳಗಿತ್ತೋ ಏನೋ. ಸ್ಟೇರಿಂಗ ಅಲ್ಲಾಡದ ಹಾಗೆ ವಜ್ರಮುಷ್ಟಿಯಲ್ಲಿ ಹಿಡಿದಿದ್ದ. ಗಡಿಬಿಡಿಯಲ್ಲಿ ನಿಸ್ಸಾಹಕವಾಗಿ ಒದ್ದಾಡುತ್ತಿದ್ದ ಅಬ್ಬಾಸ್‌ಗೆ ಬ್ರೇಕ್ ಹಾಕಬೇಕೆಂದು ತಲೆಗೆ ಹೊಳೆದಿದ್ದು ತುಂಬಾ ತಡವಾಗಿ. ಲಾರಿ ಮರಕ್ಕೆ ಢಿಕ್ಕಿ ಹೊಡೆದ ಕೂಡಲೆ ಹಿಂದುಗಡೆ ಇದ್ದ ಅಪಾರ ತೂಕದ ದಿಮ್ಮಿಗಳು ಕ್ಯಾಬಿನ್ ಮುರಿದು ಮುನ್ನುಗಿದವು. ಮರಕ್ಕೂ ದಿಮ್ಮಿಗಳಿಗೂ ನಡುವೆ ಸಿಕ್ಕಿದ ಕ್ಲೀನರ್, ಡ್ರೈವರ್ ಇಬ್ಬರೂ ಅಲ್ಲೇ ಸತ್ತು ಹೋದರು.

Question 16.
ವೇಲಾಯುಧನ ಹೆಂಡತಿಗೆ ಆನೆಯ ಬಗ್ಗೆ ಸವತಿ ಮಾತ್ಸರ್ಯ ಮೂಡಲು ಕಾರಣಗಳೇನು?

Answer:
ಮನುಷ್ಯನ ಹಣೆಬರಹವನ್ನು ಎಷ್ಟು ಸಣ್ಣ ಸೂಕ್ಷ್ಮ ಸಂಗತಿಗಳು ನಿಯಂತ್ರಿತ್ತವೆ ಎಂದು ಯೋಚಿಸಿದರೆ ಆಶ್ಚರ್ಯ ಆಗುತ್ತದೆ. ಮಕ್ಕಳಿಲ್ಲದ ವೇಲಾಯುಧನಿಗೆ ಮನಸ್ಸಿನ ಆಳದಲ್ಲಿ ಎನೇನು ಅಳುಕುಗಳಿತ್ತೋ ಗೊತ್ತಿಲ್ಲ. ಕೃಷ್ಣಗೌಡನ ಹೆಣ್ಣಾನೆ ಹುಡುಕಿಕೊಂಡು ಕಾಡಿನ ಆನೆಗಳು ಊರಿನ ಬಳಿ ಸುಳಿದಾಡಿದ್ದು ಅವನಿಗೆ ಆನೆಯ ಮೇಲೆ ದ್ವೇಷ ಸಾಧನೆ ಮೂಡಲು ಪ್ರೇರಣೆಯಾಯ್ಯೋ ಏನೋ. ಮಠದವರು ಇವನನ್ನು ಓಡಿಸಿದಾಗ ಆ ಆನೆ ಊಟ ಬಿಟ್ಟು ಸೊರಗಿದ್ದು ಈಗ ಕಾಡಿಗೆ ಹೋಗಿ ಬಂದುದರಿಂದ ಅದು ದೊಡ್ಡ ಅಧಿಕಪ್ರಸಂಗವಾಗಿ ಕಂಡಿರಲೂ ಸಾಕು.

ಆ ಆನೆಯ ಮಾವುತ ಆಗಿದ್ದರಿಂದಲೇ ಇವನಿಗೆ ಸಂಬಳಸಿಗುತ್ತಿದ್ದರೂ ಅದು ಹೆಣ್ಣಾನೆಯಾದ್ದರಿಂದಲೂ ಮತ್ತು ಅದನ್ನು ಕರೆದುಕೊಂಡು ಹಗಲೆನ್ನದೆ ರಾತ್ರಿ ಎನ್ನದೆ ವೇಲಾಯುಧ ಕೆಲಸಕ್ಕೆ ಹೋಗಬೇಕಾದ್ದರಿಂದಲೂ ವೇಲಾಯುಧನ ಹೆಂಡತಿಗೆ ಮಾತ್ರ ಒಂದು ರೀತಿಯ ವಿಚಿತ್ರ ಮಾತ್ಸರ್ಯ ಅದರ ಮೇಲೆ ಇದ್ದುದು ನಿಜ. ಬಸುರಿಯಾಗದೆ ವರ್ಷ ಕಳೆದ ಹಾಗೂ ವಿನಾಕಾರಣ ಅವರ ಸಂಸಾರಕ್ಕೆ ಅನ್ನ ಕೊಡುತ್ತಿದ್ದ ಈ ಆನೆ ವಿಷಯದಲ್ಲಿ ಸೂಕ್ಷ್ಮವಾದ ದ್ವೇಷ ಅವಳಲ್ಲಿ ರೂಪುಗೊಳ್ಳುತ್ತಾ ಇತ್ತು. ತನ್ನ ಸಿಟ್ಟನ್ನು ಆಕೆ “ಆನೆ ಜೊತೆ ಮಲಗುತ್ತೀಯಾ; ನೀನ್ಯಾವ ಗಂಡಸು” ಎನ್ನುವ ಮೂಲಕ ಹೊರಹಾಕಿದ್ದಳು. ಕಾರೋ ಲಾರಿಯೋ ಟ್ರಾಕ್ಟರೋ ಯಾವುದನ್ನೇ ಆಗಲಿ ಗಂಡಸರು ಅಷ್ಟೊಂದು ಹಚ್ಚಿಕೊಂಡರೆ ಕೆಲವು ಹೆಂಗಸರಿಗೆ ಸಿಟ್ಟುಬರುತ್ತದೆ. ತಮ್ಮ ಆಕರ್ಷಣಾ ಶಕ್ತಿಗೆ ಇವು ಸವಾಲು ಎಂದೇ ತಿಳಿಯುತ್ತಾರೆ. ಅಂಥದರಲ್ಲಿ ಆನೆಯಂಥ ಒಂದು ಜೀವ, ಅದೂ ಹೆಣ್ಣಾನೆ ವೇಲಾಯುಧನನ್ನು ಹಚ್ಚಿಕೊಂಡರೆ! ಇನ್ನೂ ಸಹಿಸಲಸಾಧ್ಯ.

Question 17.
ನಾಗರಾಜನ ನಿಗೂಢ ಸಾವಿನ ಬಗ್ಗೆ ಜನರ ಅಭಿಪ್ರಾಯಗಳೇನು?

Answer:
ನಾಗರಾಜನ ನಿಗೂಢ ಸಾವಿನ ಬಗ್ಗೆ ಹಲವಾರು ಅಭಿಪ್ರಾಯಗಳು ಹುಟ್ಟಿಕೊಂಡಿದ್ದವು. ಕೆಲವರು ಸಾರ್ವಜನಿಕ ಸಭೆಯಲ್ಲಾದ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡನೆಂದು ಹೇಳಿದರು. ಮೊದಲಿಗೆ ಕೃಷ್ಣಗೌಡರ ಆನೆಯೇ ಅವನನ್ನು ದುರ್ಗಮವಾದ ಕಾಡಿನಲ್ಲಿ ಎಲ್ಲೋ ಒಂದು ಕಡೆ ಕೊಂದು ನೆಲಕ್ಕೆ ಹಾಕಿ ತಿಕ್ಕಿದೆ ಎಂದು ಶಂಕಿಸಿದರು. ಹಾಗೇ ಆಗಿದ್ದರೆ ಆ ಆನೆಯ ನಿಮಿತ್ತ ನಡೆದ ಎಲ್ಲಾ ಘಟನೆಗಳಿಗೂ ಒಂದು ಅರ್ಥ ಸ್ಪುರಿಸುತ್ತಿತ್ತೋ ಏನೋ! ಪೊಲೀಸರು ಕಾಡೆಲ್ಲ ಹುಡುಕಾಡಿ ನಾಗರಾಜನ ಕೋವಿ ಸಿಕ್ಕಿದೆ. ಆದರೆ ಹೆಣ ಸಿಗಲಿಲ್ಲ ಎಂದು ಮಹಜರು ಬರೆದುಕೊಂಡರು.

ಇನ್ನು ಕೆಲವರು ಅಭಿಪ್ರಾಯಪಡುವ ಪ್ರಕಾರ ನಾಗರಾಜನಿಗೆ ಇದ್ದಕ್ಕಿದ್ದಂತೆ ಮನಃಪರಿವರ್ತನೆಯಾಗಿ ಕೋವಿ ತೆಗೆದು ಚರಂಡಿಗೆ ಎಸೆದು ಧರ್ಮಸ್ಥಳದ ಬಸ್ಸು ಹತ್ತಿದನೆಂದೂ ತಲೆಬೋಳಿಸಿಕೊಂಡು ಧರ್ಮಸ್ಥಳದಲ್ಲಿ ಓಡಾಡುತ್ತಿರುವುದನ್ನು ತಾವು ಕಣ್ಣಾರೆ ಕಂಡೆವೆಂದೂ ಹೇಳಿದರು. ಕೆಲವರು ನಾಗರಾಜ ಆನೆ ಬೆನ್ನಟ್ಟಿದವನು ದಾರಿಯಲ್ಲಿ ಹಿಂದಿರುಗಿ ಬರುತ್ತಿರಬೇಕಾದರೆ ಎದುರಿಗೆ ಸಿಕ್ಕ ಗಂಧ ಸಾಗಾಣಿಕೆಯ ಗಂಗಾಧರನ ಕಾರಿಗೆ ಕೈ ಅಡ್ಡಹಾಕಿ ಹಿಂದುಮುಂದು ನೋಡದೆ ಅದರೊಳಗೆ ಕುಳಿತು ಆನೆಯನ್ನು ಬೆನ್ನಟ್ಟುವಂತೆ ಹೇಳಿದನೆಂದು. ನಾಗರಾಜನನ್ನು ಅವನ ಗ್ಯಾಂಗೇ ಕೂನಿ ಮಾಡಿ ಹೆಣ ನಾಪತ್ತೆ ಮಾಡಿದರಬೇಕೆಂದು ಹೇಳಿದರು. ಗಾರ್ಡ್ ರಾಮಪ್ಪ ಕೂಡ ನಾಗರಾಜನ ಸಾವಿನ ಬಗ್ಗೆ ಹೇಳಿದ ದೃಢವಾದ ಮಾತುಗಳು ಆತನ ಸಾವಿನ ಕುರಿತಂತೆ ಇನ್ನು ಕೆಲವು ಅನುಮನಕ್ಕೆ ಎಡೆಮಾಡುವಂತಿತ್ತು.

Question 18.
ತನ್ನ ಆನೆಯ ಬಗ್ಗೆ ಕೃಷ್ಣಗೌಡನಲ್ಲಿ ಬೇಸರ ಮೂಡಲು ಕಾರಣಗಳೇನು?

Answer:
ಕೃಷ್ಣಗೌಡ ಆನೆಯಿಂದ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ರೋಸಿ ಹೋಗಿದ್ದ. ಹಿಂದೊಮ್ಮೆ ಇದೇ ಆನೆ ಆತನ ಮನೆಗೆ ಲಕ್ಷ್ಮೀ ಬಂದ ಹಾಗೆ ಆಗಿತ್ತು. ಆದರೆ ಈಗ ಅದೇ ಆನೆಯನ್ನು ಸಾಗಹಾಕುವುದು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಊರಿನಲ್ಲಿ ಏನೇ ನಡೆದರು ಅದಕ್ಕೆ ಆನೆಯೇ ಕಾರಣ ಎನ್ನುವ ಅಪವಾದದ ಮಾತುಗಳು ಆತನನ್ನು ಸಂಕಷ್ಟಕ್ಕೆ ಗುರಿಪಡಿಸಿತ್ತು. ಹಿಂದೊಮ್ಮೆ ಮಠದವರು ಅದನ್ನು ಯಾರಿಗಾದರು ದಾಟಿಸಿದಂತೆ ತಾನೂ ದಾಟಿಸಬೇಕೆಂದು ಯೋಚಿಸಿದ.

ಆದರೆ ಯಾರಿಗೆ ಮಾರುವುದು? ಸರ್ಕಸ್ ಕಂಪೆನಿಗಲೆಲ್ಲಾ ಪಾಪರ್ ಎದ್ದಿವೆ. ಜಗದ್ಗುರುಗಳೆಲ್ಲಾ ಅಡ್ಡಪಲ್ಲಕ್ಕಿ ಇಲ್ಲವೆ ಬೆಂಜ್ ಕಾರುಗಳನ್ನು ಹಿಡಿದಿದ್ದಾರೆ. ಮರದ ವ್ಯಾಪಾರಿಗಳಂತೂ ಸರ್ಕಾರದ ಬಿಗಿ ಧೋರಣೆಯಿಂದ ಮತ್ತು ಲಂಚದ ಕಾಟದಿಂದ ಸುಸ್ತಾಗಿ ಹೋಗಿದ್ದಾರೆ. ಕಾಡಿಗೇ ಅಟ್ಟಿ ಬಿಡೋಣವೆಂದರೆ ಅದು ಊರಿನ ಆನೆ. ಕಾಡಿಗೆ ಹೋಗಿದ್ದು ಸಹ ಮತ್ತೆ ಬಂದು ಲಾಯದೊಳಗೆ ನಿಂತಿದೆ. ಆತನಿಗೆ ಆನೆ ಕುತ್ತಿಗೆಗೆ ಕಟ್ಟಿಕೊಂಡ ಕಲ್ಲುಗುಂಡಿನಂತೆ ಭಾಸವಾಯ್ತು.

V. ಭಾಷಾಭ್ಯಾಸ
1. ನಾಟಿ, ನಾಟು, ನಾಟ ಪದಗಳ ಅರ್ಥ ವ್ಯತ್ಯಾಸ:

ಪದ

ಅರ್ಥ

ನಾಟಿ

ಸ್ಥಳೀಯ ತಳಿ ಅಥವಾ ದೇಸಿ ತಳಿಯದ್ದೆಂದು ಸೂಚಿಸುತ್ತದೆ. ಉದಾ: ನಾಟಿ ಹಣ್ಣು, ನಾಟಿ ಬೇಳೆ.

ನಾಟು

ನೆಡುವ ಕ್ರಿಯೆಯನ್ನು ಸೂಚಿಸುತ್ತದೆ. ಉದಾ: ಗಿಡವನ್ನು ನಾಟು.

ನಾಟ

ಅದು ಕ್ರಿಯಾಪದದಿಂದ ಬಂದ ರೂಪ – “ನಾಟುವುದು” ಎಂಬ ಕ್ರಿಯೆಯ ರೂಪ. ಉದಾ: ಗಿಡ ನಾಟ ಮಾಡಲಾಗಿದೆ.

2. ಧೇನಿಸುತ್ತ, ಗ್ರಾಚಾರ ಮುಂತಾದ ಪದಗಳ ಗ್ರಾಂಥಿಕ ರೂಪ:

ಪ್ರಾಚಲಿತ ರೂಪ

ಗ್ರಾಂಥಿಕ ರೂಪ

ಧೇನಿಸುತ್ತ

ಧ್ವನಿಸುತ್ತ

ಗ್ರಾಚಾರ

ಗೃಹಾಚಾರ

ಊರಿಗೆ

ಉರಿಗೆ

ನಾಚಿ

ಲಜ್ಜಿಸಿ

ಕೂಸು

ಶಿಶು

3. ಕಂಟ್ರಿ ಡಾಗ್ಕಂತ್ರಿನಾಯಿ:

ಇದು ಅನ್ಯದೇಶ ಪದ (ಇಂಗ್ಲಿಷ್) ಮತ್ತು ದೇಸಿ ಪದಗಳ ಸಂಯೋಜನೆಯ ರೂಪಾಂತರವಾಗಿದೆ.

ಕಂಟ್ರಿ ಡಾಗ್ – Country Dog (ಅರ್ಥ: ದೇಶೀಯ ನಾಯಿ)

ಕಂತ್ರಿನಾಯಿ – ದೇಸಿ ಪದ ರೂಪಾಂತರ, ನಾಟಕೀಯ ಅಥವಾ ಹಾಸ್ಯಾತ್ಮಕ ಉಪಯೋಗದಲ್ಲಿರುವುದು.
ಇದನ್ನು ನುಡಿಭಂಗಿಯ ಹಾಸ್ಯ ರೂಪವಾಗಿ ಬಳಸುತ್ತಾರೆ.

4. ಅಡಿ, ಕಳೆ, ಬಗೆ, ಹಿಡಿ, ಹದ್ದುನಾನಾರ್ಥ ರೂಪಗಳು:

ಪದ

ಅರ್ಥಗಳು

ಅಡಿ

ಕೆಳಭಾಗ, ಪಾದ, ಸಂಕಷ್ಟ, ಇಳಿಜಾರು

ಕಳೆ

ಕಳೆದುಹೋಗು, ಸೌಂದರ್ಯ, ನಾಶ, ಕಸ

ಬಗೆ

ವಿಧ, ಪ್ರಕಾರ, ಅರ್ಥ, ತೆರೆ (ಉದಾ: ಬಾಗಿಲು ಬಗೆ)

ಹಿಡಿ

ಕೈಯಲ್ಲಿ ಹಿಡಿಯುವುದು, ಒತ್ತಡ, ಹಿಡಿತ, ರೋಗದ ಆವರಣ

ಹದ್ದು

ಗಡಿ, ನಿಯಮ, ಮಿತಿ, ಸಹನೆಯ ಮಟ್ಟ

5. ನುಡಿಗಟ್ಟುಗಳು ಮತ್ತು ಅವರ ಅರ್ಥಗಳು (ಕೃಷ್ಣಗೌಡನ ಆನೆ ಕಥೆಯಲ್ಲಿ):

ನುಡಿಗಟ್ಟು

ಅರ್ಥ

ತುತ್ತೂರಿ ಊದು

ದೊಡ್ಡ ಘೋಷಣೆ ಮಾಡಿ ಕಾರ್ಯ ಆರಂಭಿಸುವುದು

ತರ್ಪಣ ಬಿಡು

(ಇಲ್ಲಿ) ನಿರಾಕರಣೆ ಮಾಡು ಅಥವಾ ದೂರವಿಡು ಎಂಬ ಅರ್ಥದಲ್ಲಿ

ನರಪೇತಲ ನಾರಾಯಣ

ಸಾಮಾನ್ಯ, ನಿರ್ಗತಿಕ ವ್ಯಕ್ತಿ

ಗಾಳಿಸುದ್ದಿ ಹಬ್ಬು

ನಂಬಲಾರಾದ ಸುಳ್ಳು ಸುದ್ದಿ ಹರಡಿಸು

ಹೆಸರುವಾಸಿಯಾಗು

ಹೆಸರು ಮಾತ್ರ ಇರಲು, ಕೀರ್ತಿ ಇಲ್ಲದಿರಿ

ಮುಖ ಹಿಂಜಿಕೊಳ್ಳು

ಹಿಂಬದಿಗೆ ಹೋಗು, ಲಜ್ಜೆಪಡುವುದು

ಅಧಿಕಪ್ರಸಂಗ ಮಾಡು

ಅತಿಯಾದ ಮಾತನಾಡುವುದು ಅಥವಾ ಆಡಳಿತ ಮಾಡುವುದು

ಕಾಲುಕೀಳು

ತೊಂದರೆ ಕೊಡುವುದು, ಅಡಚಣೆ

ಕಣ್ಣಿಗೆ ಒತ್ತಿಕೋ

ಕಾಣಿಸಿಕೊಳ್ಳುವುದು ಅಥವಾ ಗಮನ ಸೆಳೆಯುವುದು

ಗಾಳಿಗೆ ಉಗಿ

ವ್ಯರ್ಥ ಪ್ರಯತ್ನ ಮಾಡುವುದು

ದೇಶಾವರಿ ನಗೆ ಬೀರು

ಎಲ್ಲಿಗೆ ಬೇಕಾದರೂ ನಗೆಯ ಹುಟ್ಟುಹಾಕು

ಮೂಗು ಹಾಕು

ತೊಂದರೆಗೀಡು, ಮಧ್ಯಸ್ಥಿಕೆ ತೋರಿಸು

ಮೇಲೆ ಎತ್ತಿ ಕಟ್ಟು

ಹೆಚ್ಚು ಗೌರವ ತೋರಿಸು ಅಥವಾ ದೊಡ್ಡದಾಗಿ ಮಾಡಿ ತೋರಿಸು

ಉರಿಯುವ ಬೆಂಕಿಗೆ ತುಪ್ಪ ಸುರಿ

ತೀವ್ರ ಪರಿಸ್ಥಿತಿಯನ್ನು ಮತ್ತಷ್ಟು ಕೆಡಿಸು

ಹದ್ದುಬಸ್ತಿನಲ್ಲಿಡು

ಕಟ್ಟುನಿಟ್ಟಾಗಿ ನಿಯಂತ್ರಿಸು

6. ಅನ್ಯದೇಶ ಪದಗಳ ಪಟ್ಟಿ ( ಕಥೆಯಲ್ಲಿರುವ):

ಅನ್ಯದೇಶ ಪದ

ಮೂಲಭಾಷೆ

ಅರ್ಥ

ಟಾರ್ಚು

ಇಂಗ್ಲಿಷ್ (Torch)

ಬೆಳಕಿಗಾಗಿ ಉಪಯೋಗಿಸುವ ಸಾಧನ

ಕಂಟ್ರಿ ಡಾಗ್

ಇಂಗ್ಲಿಷ್ (Country Dog)

ದೇಶೀಯ ತಳಿಯ ನಾಯಿ

ಪೈಲ್ವಾನ್

ಉರ್ದು

ಕುಸ್ತಿ ಹೊಡೆಯುವ ವ್ಯಕ್ತಿ

ಆಫೀಸು

ಇಂಗ್ಲಿಷ್ (Office)

ಕಚೇರಿ

ಬೈಸಿಕಲ್

ಇಂಗ್ಲಿಷ್ (Bicycle)

ಸೈಕಲ್

ಲೇಖಕರ ಪರಿಚಯ

2nd PUC Kannada Chapter 21 Krishna Gowdana Aane.
2nd PUC Kannada Chapter 21 Krishna Gowdana Aane.

ಶ್ರೀಯುತ ಕೆ.ಪಿ. ಪೂರ್ಣಚಂದ್ರ ತೇಜಸ್ವಿ (೧೯೩೮-೨೦೦೭) ಕನ್ನಡ ಅಗ್ರಮಾನ್ಯ ಗಣ್ಯಲೇಖಕರಲ್ಲಿ ಮುಖ್ಯರು. ಕುವೆಂಪು-ಹೇಮಾವತಿ ದಂಪತಿಗಳ ಮಗನಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಜನಿಸಿದರು. ಬದುಕಿದ್ದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸಮೀಪದ ನಿಂಬೆಮೂಲೆಯ ‘ನಿರುತ್ತರ’ದಲ್ಲಿ, ಕೃಷಿ, ಸಾಹಿತ್ಯಕೃಷಿ, ಕಾಫಿ ತೋಟಗಾರಿಕೆ, ಛಾಯಾಗ್ರಹಣ, ಪುಸ್ತಕ ಪ್ರಕಾಶನ, ಶಿಕಾರಿ ಮುಂತಾದ ವೃತ್ತಿಗಳಲ್ಲಿ ತೊಡಗಿಕೊಂಡಿದ್ದ ತೇಜಸ್ವಿಯವರು ನಿಜವಾದ ಅರ್ಥದಲ್ಲಿ ನಿರಂಕುಶಮತಿಗಳಾಗಿದ್ದವರು.

ಇವರ ವಿದ್ಯಾಭ್ಯಾಸ ಮೈಸೂರು, ಶಿವಮೊಗ್ಗ ಮುಂತಾದೆಡೆ ನಡೆಯಿತು. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರೂ ಸರ್ಕಾರಿ ಕೆಲಸವನ್ನು ಒಲ್ಲದೆ ಕೃಷಿಯತ್ತ ಮುಖಮಾಡಿದರು. ಲೋಹಿಯಾರವರ ತತ್ವಚಿಂತನೆ, ಕುವೆಂಪು ಅವರ ಕಲಾಸೃಷ್ಟಿ, ಕಾರಂತರ ಜೀವನದೃಷ್ಟಿ ಮತ್ತು ಬದುಕಿನ ಪ್ರಯೋಗಶೀಲತೆಗಳು ತೇಜಸ್ವಿಯವರ ಸಾಹಿತ್ಯ ರಚನೆಯ ಮೇಲೆ ಗಾಢ ಪರಿಣಾಮವನ್ನು ಉಂಟುಮಾಡಿವೆ.

ಆದ್ದರಿಂದಲೇ ಅವರು ಜಾತ್ಯತೀತವಾದ, ವರ್ಗಾತೀತವಾದ, ಲಿಂಗಾತೀತವಾದ ಹಾಗೂ ಶ್ರೀಸಾಮಾನ್ಯರ ಸಮಾಜವನ್ನು ಸೃಷ್ಟಿಸಿರುವುದನ್ನು ಕಾಣಬಹುದು. ಸೃಷ್ಟಿಯ ವಿಸ್ಮಯವನ್ನು ನಿಗೂಢವನ್ನು ತೇಜಸ್ವಿ ಕುತೂಹಲದಿಂದ ನೋಡಬಲ್ಲರು. ಸಮಾಜ ಮತ್ತು ಪ್ರಕೃತಿ ಇವೆರಡರ ತೀವ್ರವಾದ ಮುಖಾಮುಖಿಯನ್ನು ಇವರು ತಮ್ಮ ಕೃತಿಗಳಲ್ಲಿ ಚಿತ್ರಿಸಿದ್ದಾರೆ. ಸಮಾಜವಾದಿ ಚಳುವಳಿ, ರೈತ ಚಳುವಳಿ, ಜಾತಿವಿನಾಶ ಸಮ್ಮೇಳನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ತೇಜಸ್ವಿ ತಮ್ಮ ವಿಶಿಷ್ಟ ವೈನೋದಿಕ ದರ್ಶನದ ಚಿಕಿತ್ಸಕ ದೃಷ್ಟಿಯನ್ನು ಕಥೆಗಳಲ್ಲಿ ಬೀರಿದವರು.

ಹುಲಿಯೂರಿನ ಸರಹದ್ದು, ಅಬಚೂರಿನ ಪೋಸ್ಟಾಫೀಸು, ಕಿರಗೂರಿನ ಗಯ್ಯಾಳಿಗಳು, ಪರಿಸರದ ಕಥೆ, ಪಾಕಕ್ರಾಂತಿ ಮತ್ತು ಇತರ ಕಥೆಗಳು – ಇವು ತೇಜಸ್ವಿಯವರ ಕಥಾಸಂಕಲನಗಳು, ಸ್ವರೂಪ, ನಿಗೂಢ ಮನುಷ್ಯರು, ಕರ್ವಾಲೋ, ಚಿದಂಬರ ರಹಸ್ಯ, ಜುಗಾರಿಕ್ರಾಸ್, ಮಾಯಾಲೋಕ-೧, ಕಾಡು ಮತ್ತು ಕೌರ – ಇವು ಕಾದಂಬರಿಗಳು. ಇವಲ್ಲದೆ: ಬೃಹನ್ನಳೆ ಸೋಮುವಿನ ಸ್ವಗತಲಹರಿ (ಕವಿತೆ), ಯಮಳ ಪ್ರಶ್ನೆ (ನಾಟಕ), ವ್ಯಕ್ತಿವಿಶಿಷ್ಟ ಸಿದ್ಧಾಂತ (ಸೈದ್ಧಾಂತಿಕ ಬರಹ), ವಿಮರ್ಶೆಯ ವಿಮರ್ಶೆ (ವಿಮರ್ಶೆ), ಅಣ್ಣನ ನೆನಪುಗಳು (ಜೀವನ ಚರಿತ್ರೆ), ಕಿರಿಯರಿಗಾಗಿ ಪರಿಸರ, ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು (ಪರಿಸರ) ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ.

ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ ಎಂಬುದು ತೇಜಸ್ವಿಯವರ ಪ್ರವಾಸಕಥನ, ಕಾಡಿನ ಕಥೆಗಳ ಮಾಲಿಕೆಯ ೫ ಸಂಪುಟಗಳು, ಮಿಲೆನಿಯಂ ಪುಸ್ತಕ ಸರಣಿ, ವೈಜಾನಿಕ ಸಾಹಿತ್ಯ, ಪರಿಸರ ವಿಸ್ಮಯ ಮಾಲಿಕೆ, ಪಕ್ಷಿಲೋಕ ಹೀಗೆ ನಾನಾ ಕೃತಿಗಳನ್ನು ತೇಜಸ್ವಿ ಕನ್ನಡಕ್ಕೆ ನೀಡಿದ್ದಾರೆ.

ಮರಾಠಿ, ಹಿಂದಿ, ಮಲೆಯಾಳಂ, ತಮಿಳು, ಇಂಗ್ಲಿಷ್, ಜಪಾನಿ ಭಾಷೆಗಳಿಗೆ ತೇಜಸ್ವಿಯವರ ಅನೇಕ ಕೃತಿಗಳು ಅನುವಾದಗೊಂಡಿದೆ. ಅಬಚೂರಿನ ಪೋಸ್ಟಾಫೀಸು, ಕುಬಿ ಮತ್ತು ಇಯಾಲ, ತಬರನ ಕತೆ ಚಲನಚಿತ್ರಗಳಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿವೆ. ತಬರನ ಕತೆ, ಕಿರಗೂರಿನ ಗಯ್ಯಾಳಿಗಳು, ಕೃಷ್ಣಗೌಡನ ಆನೆ. ಪರಿಸರದ ಕಥೆಗಳು ರಂಗದ ಮೇಲೆ ಪ್ರಯೋಗಗೊಂಡಿವೆ.

ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶಿವರಾಮಕಾರಂತ ಪ್ರಶಸ್ತಿ, ರಾಷ್ಟ್ರೀಯ ಸ್ವರ್ಣ ಕಮಲ ಪ್ರಶಸ್ತಿಯ ಚಿನ್ನದ ಪದಕ, ರಾಷ್ಟ್ರೀಯ ಕಥಾ ಪ್ರಶಸ್ತಿ, ಭಾರತೀಯ ಭಾಷಾ ಪರಿಷತ್ತಿನ ಪ್ರಶಸ್ತಿ ಮುಂತಾದ ಪುರಸ್ಕಾರಗಳಿಗೆ ತೇಜಸ್ವಿ ಬಾಜನರಾಗಿದ್ದರು.

Click Here to Download Krishna Gowdana Aane PDF Notes
Click Here to Watch Krishna Gowdana Aane Video

 

You cannot copy content of this page