2nd PUC Kannada Chapter 8

2nd PUC Kannada Question and Answer – Mumbai Jataka

Looking for 2nd PUC Kannada textbook answers? You can download Chapter 8: Mumbai Jataka Questions and Answers PDF, Notes, and Summary here. 2nd PUC Kannada Kavyabhaga solutions follow the Karnataka State Board Syllabus, making it easier for students to revise and score higher in exams.

Karnataka 2nd PUC Kannada Textbook Answers—Reflections Chapter 8

Mumbai Jataka Questions and Answers, Notes, and Summary

2nd PUC Kannada Kavyabhaga Chapter 8

ಮುಂಬೈ ಜಾತಕ

Mumbai Jataka

2nd PUC Kannada Chapter 8 Mumbai Jataka
Scroll Down to Download Mumbai Jataka PDF
I. ಒಂದು ವಾಕ್ಯದಲ್ಲಿ ಉತ್ತರಿಸಿ: 

Question 1.
ಮಗು ಹುಟ್ಟಿದ್ದು ಎಲ್ಲಿ?
Answer:
ಮಗು ಹುಟ್ಟಿದ್ದು ಆಸ್ಪತ್ರೆಯಲ್ಲಿ.

Question 2.
ಮುಂಬೈಯಲ್ಲಿ ಬೆಳಗಿನಿಂದ ಸಂಜೆಯ ತನಕ ಕಾಣುವುದೇನು?
Answer:
ಮುಂಬೈಯಲ್ಲಿ ಬೆಳಗಿನಿಂದ ಸಂಜೆಯ ತನಕ ಕಾಣುವುದು ರಸ್ತೆಯಲ್ಲಿ ಉರುಳುವ ಲಕ್ಷಚಕ್ರಗಳು.

Question 3.
ಹೊರಲೋಕವನ್ನು ಪರಿಚಯಿಸಿ ಎಚ್ಚರಿಕೆ ಕೊಟ್ಟವಳು ಯಾರು?
Answer:
ಹೊರಲೋಕವನ್ನು ಪರಿಚಯಿಸಿ ಎಚ್ಚರಿಕೆ ಕೊಟ್ಟವಳು ತಾಯಿ.

Question 4.
ಕೆಮ್ಮುವ ಪ್ರಾಣಿ ಯಾರು?
Answer:
ಕುಳಿತು ಕೆಮ್ಮುವ ಪ್ರಾಣಿ ತಂದೆ.

Question 5.
ತಾನಾಗಿ ಕಲಿತದ್ದು ಏನನು?
Answer:
ಬಸ್ ಸ್ಟಾಪಿನಲ್ಲಿ ನಿಂತ ಬಣ್ಣಗಳ ಕಡೆಗೆ ಕಣ್ಣಾಡಿಸುವುದೊಂದೆ ತಾನಾಗಿ ಕಲಿತದ್ದು,

Question 6.
ಲಕ್ಷದಾರಿಗಳ ಚದುರಂಗದಾಟ ಯಾವುದು?
Answer:
ಮುಂಬೈನಂತಹ ನಗರಜೀವನ ಲಕ್ಷದಾರಿಗಳ ಚದುರಂಗದಾಟ.

Question 7.
ಕನಸು ಬಂಡಿಯ ಕೆಳಗೆ ನಿದ್ರಿಸುವುದು ಹೇಗೆ?
Answer:
ಕನಸು ಬಂಡಿಯ ಕೆಳಗೆ ರೈಲು ಹಳಿಯ ಹಾಗೆ ತತ್ತರಿಸುತ್ತ ನಿದ್ರಿಸಬೇಕು.

II. ಎರಡು ಮೂರುವಾಕ್ಯಗಳಲ್ಲಿ ಉತ್ತರಿಸಿ:

Question1.
ಮಗು ಹುಟ್ಟಿ ಬೆಳೆದದ್ದು ಎಲ್ಲಿ?
Answer:
ಮಗು ಹುಟ್ಟಿದ್ದು ಆಸ್ಪತ್ರೆಯಲ್ಲಿ ಬೆಳೆದದ್ದು ಬಸ್ಸು, ಟ್ರಾಂ, ಕಾರು, ಟ್ಯಾಕ್ಸಿ, ಎಲೆಕ್ಟಿಕ್ ಟ್ರೇನುಗಳಲ್ಲಿ ನಗರದ ಯಾಂತ್ರಿಕ ಬದುಕಿನಲ್ಲಿ.

Question 2.
ಮಗು ಏನನ್ನು ಕುಡಿದು ಬೆಳೆಯುವುದು?
Answer:
ನಗರದಲ್ಲಿ ಬೆಳೆಯುವ ಮಗು ತಾಯಿಯ ಎದೆಹಾಲನ್ನು ಸಹ ಕುಡಿಯುವುದಿಲ್ಲ. ಕಾಣದ ಎಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟ್ಲಿಯ ಹಾಲು, ಗ್ರೆಪ್‌ಸಿರಪ್, ಹಾರ್ಲಿಕ್ಸ್ ಇತ್ಯಾದಿಗಳನ್ನು ಕುಡಿದು ಬೆಳೆಯುತ್ತದೆ.

Question 3.
ಮಗು ಏನೇನು ಕಲಿಯಿತು?
Answer:
ಮಗು ಕ್ಯೂ ನಿಲ್ಲುವುದನ್ನು, ಪುಟ್ ಪಾತಿನಲ್ಲೇ ಸಂಚರಿಸುವುದನ್ನು, ಎಚ್ಚರಿಕೆಯಿಂದ ರಸ್ತೆದಾಟುವುದನ್ನು, ಎಲ್ಲಿಯೂ ನಿಲ್ಲದಂತೆ ಓಡುವುದನ್ನು, ಅವರಿವರನ್ನು ತಳ್ಳಿಕೊಂಡು ಮುನ್ನುಗುವುದನ್ನು ಎಲ್ಲಾದರೂ ಸರಿ ಬೇರೂರುವುದನ್ನು ಹೀರುವುದನ್ನು ಕಲಿಯುತ್ತದೆ.

Question 4.
ಮಗುವಿನ ಪಾಲಿಗೆ ತಾಯಿ ಹೇಗಿದ್ದಾಳೆ?
Answer:
ಮಗುವಿನ ಪಾಲಿಗೆ ತಾಯಿ ಸಾವಿರ ಗಾಲಿ ಉರುಳಿ ಹೊರಳುವ ರಸ್ತೆಯಂಚಿನಲ್ಲಿ ಕೈ ಹಿಡಿದುನಡೆಸಿದವಳು. ಇರುವ ಒಂದಿಂಚು ಕೋಣೆಯಲ್ಲಿ ಹೊರಲೋಕವನ್ನು ಪರಿಚಯಿಸಿ ಎಚ್ಚರಿಕೆ ಕೊಟ್ಟವಳಾಗಿದ್ದಾಳೆ.

Question 5.
ತಂದೆ ಮಗುವಿಗೆ ಕಾಣಿಸಿಕೊಳ್ಳುವ ಬಗೆ ಹೇಗೆ?
Answer:
ತಂದೆ ಮಗುವಿಗೆ ಬೆಳಗಿನಿಂದ ಸಂಜೆಯವರೆಗೆ ಕಾಣಿಸುವುದಿಲ್ಲ. ತಂದೆಯಾದವನು ಬೆಳಿಗ್ಗೆಯಿಂದ ಸಂಜೆಯವರೆಗೆ ಕೆಲಸದ ನೆಪದಲ್ಲಿ ಕಣ್ಮರೆಯಾಗಿ ಹೋಗಿ ಬಿಡುತ್ತಾನೆ. ಮಗು ತಂದೆಯನ್ನು ನೋಡುವ ಸಂದರ್ಭಗಳೇ ಅಪರೂಪ. ಏಕೆಂದರೆ ಮಗು ಏಳುವ ಮೊದಲೇ ಮನೆ ಬಿಟ್ಟು ಕೆಲಸಕ್ಕೆ ತೆರಳಿದವನು ಮತ್ತೆ ಹಿಂದಿರುಗುವುದು ಮಗುಮಲಗಿದ ಮೇಲೆ ತಡರಾತ್ರಿಯಲ್ಲಿ ಕೆಲಸದ ಒತ್ತಡ ಅವನಿಗಿದೆ. ಒಮ್ಮೊಮ್ಮೆ ರಜಾದಿನಗಳಲ್ಲಿ ಕಣ್ಣಿಗೆ ಕಂಡು ಕೆಮ್ಮುತ್ತಾ ಕುಳಿತಿರುವ ಪ್ರಾಣಿಯಂತೆ ಗೋಚರಿಸುತ್ತಾನೆ.

Question 6.
ಮಗು ಕಲಿತ ವಿದ್ಯೆಗಳಾವುವು?
Answer:
ಮಗು ಕಲಿತ ವಿದ್ಯೆಗಳು ಶಾಲೆ ಕಾಲೇಜುಗಳು ಕಲಿಸಿದ್ದು, ದಾರಿ ಬದಿ ನೂರಾರು ಜಾಹೀರಾತುಗಳು ತಲೆಗೆ ತುರುಕಿದ್ದು, ರೇಡಿಯೋ ಸಿಲೋನ್ ವ್ಯಾಪಾರ ವಿಭಾಗ ಶಿಫಾರಸು ಮಾಡಿದ್ದು, ಇದರ ಜೊತೆಗೆ ಬಸ್ ಸ್ಟಾಪಿನಲ್ಲಿ ನಿಂತ ಬಣ್ಣಗಳ ಕಡೆಗೆ ಕಣ್ಣಾಡಿಸುವುದು.

Question 7.
ಮುಂಬೈನ ಅವಸರದ ಜೀವನಚಿತ್ರಕ್ಕೆ ಎರಡು ಉದಾಹರಣೆ ನೀಡಿ,
Answer:
ಬೆಳಿಗ್ಗೆ ಎದ್ದರೆ ಬಟ್ಟೆಯಲ್ಲಿ ಮೈ ತುರುಕಿ ಓಡುವುದು, ರೈಲನ್ನೋ, ಬಸ್ಸನ್ನೋ ಹಿಡಿಯುವುದು, ಯಾರದೋ ಕೈ ಗೊಂಬೆಯಾಗಿ ಬದುಕುವುದು. ಸಾಯಂಕಾಲ ಸುಸ್ತಾಗಿ ಮನೆಗೆ ಬಂದು ತಣ್ಣನೆಯ ಕೂಳನ್ನು ತಿಂದು ಮಲಗುವುದು. ಇದು ಮುಂಬೈನ ಅವಸರದ ಜೀವನ.

III. ಸಂದರ್ಭ ಸಹಿತ ವಿವರಿಸಿ:

Question 1.
ಅವಸರದ ಹೆಜ್ಜೆಯ ಮೇಲೆ ಸರಿವ ಸಾವಿರ ಕೊರಳು.

Answer:
ಆಯ್ಕೆ : ಈ ಸಾಲನ್ನು ಜಿ.ಎಸ್. ಶಿವರುದ್ರಪ್ಪನವರು ಬರೆದ ಮುಂಬೈ ಜಾತಕ ಎನ್ನುವ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ನಗರ ಜೀವನದ ಅವಸರದ ಯಾಂತ್ರಿಕ ಬದುಕನ್ನು ಹೇಳುವ ಸಂದರ್ಭವಿದು.
ವಿವರಣೆ: ಮುಂಬೈ ನಗರದಲ್ಲಿನ ವಾಹನ ಮತ್ತು ಜನದಟ್ಟಣೆಯನ್ನು ಕುರಿತಾಗಿ ಕವಿ ಹೇಳುತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೆ ರಸ್ತೆಯಲ್ಲಿ ಲಕ್ಷ ಲಕ್ಷ ಚಕ್ರಗಳು ಉರುಳುವುದನ್ನು ಕಾಣಬಹುದು.ಜನರು ಅವಸರದಲ್ಲಿ ತಮ್ಮ ಕೆಲಸ ಕಾರ್ಯಗಳಿಗೆ ಹೊರಡುವುದನ್ನು ಕವಿ ಈ ಸಾಲಿನ ಮೂಲಕ ಹೇಳಿದ್ದಾರೆ. ನಗರದ ಯಾಂತ್ರಿಕ ಬದುಕನ್ನು, ಸ್ವಲ್ಪವೂ ಸಮಯವಿಲ್ಲದ ಸ್ಥಿತಿಯನ್ನು, ಜನನಿಬಿಡತೆಯನ್ನು ಕವಿ ಈ ಸಾಲಿನ ಮೂಲಕ ಹೇಳಿದ್ದಾರೆ.

Question 2.
ರಸ್ತೆದಾಟುವಾಗಚ್ಚರಿಕೆ.

Answer:
ಆಯ್ಕೆ : ಈ ಸಾಲನ್ನು ಜಿ.ಎಸ್. ಶಿವರುದ್ರಪ್ಪನವರು ಬರೆದ ಮುಂಬೈ ಜಾತಕ ಎನ್ನುವ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಮುಂಬೈ ನಗರದಲ್ಲಿ ಮಕ್ಕಳು ಕಲಿಯುವ ವಿಷಯ, ನಗರ ಜೀವನದ ಕಲಿಕೆಯ ಕುರಿತಾಗಿ ಹೇಳುವಾಗ ಈ ಮಾತು ಬಂದಿದೆ.
ವಿವರಣೆ: ಬೃಹತ್ ನಗರದಲ್ಲಿ ವಾಸಿಸುವವರು ಕಲಿಯುವ ವಿದ್ಯೆಯನ್ನು ಕುರಿತು ಲೇಖಕರು ಮಾತನಾಡುತ್ತಿದ್ದಾರೆ. ನಗರದ ವಾತಾವರಣದಲ್ಲಿ ಮಗು ಕ್ಯೂ ನಿಲ್ಲುವುದನ್ನು, ಫುಟ್ ಪಾತಿನಲ್ಲೇ ಸಂಚರಿಸುವುದನ್ನು, ಎಚ್ಚರಿಕೆಯಿಂದ ರಸ್ತೆದಾಟುವುದನ್ನು, ಎಲ್ಲಿಯೂ ನಿಲ್ಲದಂತೆ ಓಡುವುದನ್ನು, ಅವರಿವರನ್ನು ತಳ್ಳಿಕೊಂಡು ಮುನ್ನುಗುವುದನ್ನು ಎಲ್ಲಾದರೂ ಸರಿ ಬೇರೂರುವುದನ್ನು ಹೀರುವುದನ್ನು ಕಲಿಯುತ್ತದೆ.

Question 3.
ರಸ್ತೆಯಂಚಿನಲ್ಲೇ ಕೈ ಹಿಡಿದು ನಡೆಸಿದವಳು.

Answer:
ಆಯ್ಕೆ : ಈ ಸಾಲನ್ನು ಜಿ.ಎಸ್. ಶಿವರುದ್ರಪ್ಪನವರು ಬರೆದ ಮುಂಬೈ ಜಾತಕ ಎನ್ನುವ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ನಗರದಲ್ಲಿ ತಾಯಿಯಾದವಳು ಮಕ್ಕಳಿಗೆ ಕಲಿಸಬೇಕಾದ, ಜೀವನಕ್ಕೆ ಅಗತ್ಯವಾದ ಕಲಿಕೆಯ ಕುರಿತಾಗಿ ಹೇಳುವಾಗ ಈ ಮಾತು ಬಂದಿದೆ.
ವಿವರಣೆ: ತಾಯಿಯ ಪ್ರೀತಿ ಮಮತೆಯ ಆರೈಕೆಗಳಲ್ಲೂ ಇರುವ ಕೃತಕವಾದ ಹೊಣೆಗಾರಿಕೆಯನ್ನು ಕವಿ ಇಲ್ಲಿ ಚಿತ್ರಿಸಿದ್ದಾರೆ. ಮಕ್ಕಳೊಂದಿಗೆ ವಾತ್ಸಲ್ಯಭರಿತ ಒಡನಾಟದ ಚಿತ್ರಣವೇ ಇಲ್ಲಿಲ್ಲ. ತಾಯಿ ಇರುವ ಒಂದಿಂಚು ಕೋಣೆಯಲ್ಲಿ ಹೊರಲೋಕವನ್ನು ಪರಿಚಯಿಸುವ, ಎಚ್ಚರಿಕೆ ನೀಡುವ, ಸಾವಿರ ಗಾಲಿಗಳು ಹೊರಳುವ ರಸ್ತೆಯಂಚಿನಲ್ಲಿ ಕೈ ಹಿಡಿದು ನಡೆಸುವ ಕೆಲಸ ಮಾಡುತ್ತಾಳೆ. ಹೀಗೆ ನಗರ ವಾಸಿಯಾದ ತಾಯಿಯೂ ತನ್ನ ಮಗುವಿಗೆ ಯಾಂತ್ರಿಕ ಜೀವನವನ್ನು ಕಲಿಸುತ್ತಾಳೆ.

Question 4.
ಕುಳಿತು ಕೆಮ್ಮುವ ಪ್ರಾಣಿ

Answer:
ಆಯ್ಕೆ : ಈ ಸಾಲನ್ನು ಜಿ.ಎಸ್. ಶಿವರುದ್ರಪ್ಪನವರು ಬರೆದ ಮುಂಬೈ ಜಾತಕ ಎನ್ನುವ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ತಂದೆಯ ಬಿಡುವಿಲ್ಲದ ಯಾಂತ್ರಿಕ ಬದುಕನ್ನು, ಮಗುವಿನ ಜೊತೆಗೆ ತಂದೆಯ ಸಂಬಂಧವನ್ನು ಕುರಿತು ಹೇಳುವಾಗ ಈ ಮಾತು ಬಂದಿದೆ.
ವಿವರಣೆ: ತಂದೆಯಾದವನು ಬೆಳಿಗ್ಗೆಯಿಂದ ಸಂಜೆಯವರೆಗೆ ಕೆಲಸದ ನೆಪದಲ್ಲಿ ಕಣ್ಮರೆಯಾಗಿ ಹೋಗಿ ಬಿಡುತ್ತಾನೆ. ಮಗು ತಂದೆಯನ್ನು ನೋಡುವ ಸಂದರ್ಭಗಳೇ ಅಪರೂಪ ಏಕೆಂದರೆ ಮಗು ಏಳುವ ಮೊದಲೇ ಮನೆ ಬಿಟ್ಟು ಕೆಲಸಕ್ಕೆ ತೆರಳಿದವನು ಮತ್ತೆ ಹಿಂದಿರುಗುವುದು ಮಗು ಮಲಗಿದ ಮೇಲೆ ತಡರಾತ್ರಿಯಲ್ಲಿ. ಕೆಲಸದ ಒತ್ತಡ ಅವನಿಗಿದೆ. ಒಮ್ಮೊಮ್ಮೆ ರಜಾದಿನಗಳಲ್ಲಿ ಕಣ್ಣಿಗೆ ಕಂಡು ಕೆಮ್ಮುತ್ತಾ ಕುಳಿತಿರುವ ಪ್ರಾಣಿಯಂತೆ ಗೋಚರಿಸುತ್ತಾನೆ. ಈ ರೀತಿಯಲ್ಲಿ ತಂದೆ ಮಗುವಿನೊಂದಿಗೆ ಯಾಂತ್ರಿಕ ಕರ್ತವ್ಯ ನಿಭಾಯಿಸುತ್ತಿದ್ದಾನೆ.

Question 5.
ನೂರಾರು ಜಾಹೀರಾತುಗಳು ತಲೆಗೆ ತುರುಕಿದ್ದು

Answer:
ಆಯ್ಕೆ : ಈ ಸಾಲನ್ನು ಜಿ.ಎಸ್. ಶಿವರುದ್ರಪ್ಪನವರು ಬರೆದ ಮುಂಬೈ ಜಾತಕ ಎನ್ನುವ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ನಗರದ ಯಾಂತ್ರಿಕ ಜೀವನದಲ್ಲಿ ಮಗು ಕಲಿಯುವ ವಿದ್ಯೆಯ ಕುರಿತಾಗಿ ಕವಿ ತಿಳಿಸುವಾಗ ಈ ಸಾಲು ಬಂದಿದೆ.
ವಿವರಣೆ : ಮಗು ಕಲಿತ ವಿದ್ಯೆಗಳು ಶಾಲೆ ಕಾಲೇಜುಗಳು ಕಲಿಸಿದ್ದು, ದಾರಿ ಬದಿ ನೂರಾರು ಜಾಹೀರಾತುಗಳನ್ನು ನೋಡಿ ಅವುಗಳನ್ನು ತಲೆಗೆ ತುರುಕಿಸಿಕೊಳ್ಳುತ್ತದೆ. ರೇಡಿಯೋ ಸಿಲೋನ್ ವ್ಯಾಪಾರ ವಿಭಾಗ ಶಿಫಾರಸು ಮಾಡಿದ್ದನ್ನು ಕಲಿಯುತ್ತದೆ. ಇದರ ಜೊತೆಗೆ ತಾನಾಗಿ ಕಲಿತದ್ದು ಬಸ್ ಸ್ಟಾಪಿನಲ್ಲಿ ನಿಂತ ಬಣ್ಣಗಳ ಕಡೆಗೆ ಕಣ್ಣಾಡಿಸುವುದು. ಸ್ವಂತವಾಗಿ ಕಲಿಯುವುದು ಕಡಿಮೆಯೇ. ಇತರರ ಕೈ ಗೊಂಬೆಯಾಗಿ ಬಾಳುತ್ತದೆ. ಜಾಹಿರಾತನ್ನೇ ತಲೆಯಲ್ಲಿ ತುಂಬಿಕೊಂಡು ಅದನ್ನೇ ಜೀವನ ವಿಧಾನವನ್ನಾಗಿ ಮಾಡಿಕೊಳ್ಳುವ ಮಗುವಿನ ಮನಸ್ಥಿತಿಯಲ್ಲಿದೆ.

Question 6.
ಬಟ್ಟೆಯಲಿ ಮೈ ತುರುಕಿ ಓಡುವುದು.

Answer:
ಆಯ್ಕೆ : ಈ ಸಾಲನ್ನು ಜಿ.ಎಸ್. ಶಿವರುದ್ರಪ್ಪನವರು ಬರೆದ ಮುಂಬೈ ಜಾತಕ ಎನ್ನುವ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ನಗರದ ವೇಗದ ಬದುಕಿನ ಕುರಿತಾಗಿ ಹೇಳುವ ಸಂದರ್ಭವಿದು.
ವಿವರಣೆ : ನಗರಜೀವನ ಚದುರಂಗದಾಟ ಇದ್ದಂತೆ. ನಗರ ಜೀವನ ಅವಸರದಲ್ಲೇ ಶುರುವಾಗುತ್ತದೆ. ಬೆಳಿಗ್ಗೆ ಎದ್ದರೆ ಬಟ್ಟೆಯಲ್ಲಿ ಮೈ ತುರುಕಿ ಓಡುವುದು. ನಿಧಾನವಾಗಿ ಬಟ್ಟೆ ಹಾಕುವ ಕ್ರಮವೇ ಇಲ್ಲ. ರೈಲನ್ನೋ, ಬಸ್ಸನ್ನೋ ಹಿಡಿಯುವುದು. ಯಾರದೋ ಕೈ ಗೊಂಬೆಯಾಗಿ ಬದುಕುವುದು. ಸಾಯಂಕಾಲ ಸುಸ್ತಾಗಿ ಮನೆಗೆ ಬಂದು ತಣ್ಣನೆಯ ಕೂಳನ್ನು ತಿಂದು ಮಲಗುವುದು. ಇಲ್ಲೆಲ್ಲೂ ಸತ್ವದಿಂದ ಕೂಡಿದ ಜೀವನವಿಲ್ಲ. ನಗರದ ಸತ್ವರಹಿತದ ಜೀವನದ ಕುರಿತಾಗಿ ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.

IV. ಐದುಆರುವಾಕ್ಯಗಳಲ್ಲಿ ಉತ್ತರಿಸಿ:

Question 1.
ಮುಂಬೈನ ಜಾತಕದಲ್ಲಿ ಮಕ್ಕಳ ಬಾಲ್ಯದ ಚಿತ್ರಣ ಹೇಗೆ ನಿರೂಪಿತವಾಗಿದೆ?

Answer:
ಯಾಂತ್ರಿಕ ಬದುಕಿನ ಅವರಣಕ್ಕೆ ಮಗು ಎಳೆತನದಲ್ಲೇ ಸಿಲುಕಿ ನಲುಗುವ ಧಾರುಣತೆಯನ್ನು ಪ್ರಸ್ತುತ ಕವಿತೆ ಹಿಡಿದಿಟ್ಟಿದೆ. ಜಿ.ಎಸ್.ಶಿವರುದ್ರಪ್ಪನವರು ಮುಂಬೈ ಜಾತಕ ಪದ್ಯದಲ್ಲಿ ನಗರದ ಯಾಂತ್ರಿಕ ಬದುಕನ್ನು ಕುರಿತು ವಿವರಿಸಿದ್ದಾರೆ. ನಗರದ ವೇಗದ ಬದುಕಿನಂತೆ ಮಕ್ಕಳ ಬಾಲ್ಯವೂ ಸಹ ಧಾರುಣ ಸ್ಥಿತಿಯನ್ನು ತಲುಪಿದೆ. ಮಕ್ಕಳು ಬೆಳೆಯುವ ವಿಧಾನವೂ ಸಹ ಕೃತಕತೆಯನ್ನು ಪಡೆದುಕೊಂಡಿದೆ. ಮಗುವು ಆಸ್ಪತ್ರೆಯಲ್ಲಿ ಹುಟ್ಟಿ, ಬಸ್ಸು, ಟ್ರಾಂ, ಕಾರು, ಟ್ಯಾಕ್ಸಿ, ಎಲೆಕ್ಟಿಕ್ ಟ್ರೇನ್‌ಗಳಲ್ಲಿಯೇ ಮಗು ಬೆಳೆಯುತ್ತಾ ಹೋಗುತ್ತದೆ. ತಾಯಿಯ ಎದೆಹಾಲನ್ನೂ ಸಹ ಕುಡಿಯದೆ.

ಎಮ್ಮೆಯ ಹಾಲು, ಬಾಟ್ಲಿಯ ಹಾಲು, ಗ್ರೆಪ್ ವಾಟರ್, ಸಿರಪ್ ಮುಂತಾದವುಗಳಲ್ಲಿಯೇ ಮಗು ಹೊಟ್ಟೆ ತುಂಬಿಸಿಕೊಳ್ಳುತ್ತದೆ. ಬೆಳಗಿನಿಂದ ಸಂಜೆಯ ತನಕ ಲಕ್ಷಚಕ್ರ ಉರುಳುವಲ್ಲಿ ಅವಸರದ ಹೆಜ್ಜೆಯನ್ನು ಹಾಕುತ್ತಾ ಸರಿಯುತ್ತಿರುವ ಸಾವಿರಾರು ಜನಗಳನ್ನು ಕಾಣುತ್ತಾ ಮಗು ಬೆಳೆಯುತ್ತದೆ. ಇದೇ ರೀತಿಯ ವಾತಾವರಣದಲ್ಲಿ ಮಗು ಕ್ಕೂ ನಿಲ್ಲುವುದನ್ನು, ಪುಟ್ ಪಾತಿನಲ್ಲೇ ಸಂಚರಿಸುವುದನ್ನು, ಎಚ್ಚರಿಕೆಯಿಂದ ರಸ್ತೆ ದಾಟುವುದನ್ನು, ಎಲ್ಲಿಯೂ ನಿಲ್ಲದಂತೆ ಓಡುವುದನ್ನು, ಅವರಿವರನ್ನು ತಳ್ಳಿಕೊಂಡು ಮುನ್ನುಗುವುದನ್ನು ಎಲ್ಲಾದರೂ ಸರಿ ಬೇರೂರುವುದನ್ನು ಹೀರುವುದನ್ನು ಕಲಿಯುತ್ತದೆ.

Question 2.
ತಂದೆ-ತಾಯಿಗಳು ಮಗುವಿಗೆ ಗೋಚರಿಸುವ ಬಗೆಯನ್ನು ವಿವರಿಸಿ.

Answer:
ನಗರ ಸಂಸ್ಕೃತಿಯಲ್ಲಿ ಜೀವನದ ರಸಾನುಭವ ಅಸಾಧ್ಯ ತಂದೆ-ತಾಯಿಯರ ಕರುಳಬಳ್ಳಿಯ ಪ್ರೀತಿ ಮಮತೆ ಆರೈಕೆಗಳಲ್ಲೂ ಕೃತಕವಾದ ಹೊಣೆಗಾರಿಕೆಯನ್ನು ಕವಿ ಮುಂಬೈ ಜಾತಕದಲ್ಲಿ ಚಿತ್ರಿಸಿದ್ದಾರೆ. ನಗರದಲ್ಲಿ ಮಕ್ಕಳೊಂದಿಗೆ ಪ್ರೀತಿ ವಿಶ್ವಾಸ, ಕರುಳಬಳ್ಳಿಯ ಸಂಬಂಧಗಳೆಲ್ಲವೂ ಕಡಿಮೆಯಾಗಿ ಮಕ್ಕಳು ಬಾಲ್ಯದಲ್ಲಿಯೇ ಯಾಂತ್ರಿಕ ಬದುಕಿಗೆ ಸಿಕ್ಕಿ ನರಳುತ್ತದೆ. ಮಗುವಿನ ತಂದೆ-ತಾಯಿಯರು ತಮ್ಮಕೃತಕ ಜವಾಬ್ದಾರಿಯನ್ನು ನಿರ್ವಹಿಸುವ ಯಂತ್ರಗಳಂತಿದ್ದಾರೆ. ಮಕ್ಕಳೊಂದಿಗೆ ವಾತ್ಸಲ್ಯಭರಿತ ಒಡನಾಟದ ಚಿತ್ರಣವೇ ಇಲ್ಲಿಲ್ಲ. ತಾಯಿ ಇರುವ ಒಂದಿಂಚು ಕೋಣೆಯಲ್ಲಿ ಹೊರಲೋಕವನ್ನು ಪರಿಚಯಿಸುವ, ಎಚ್ಚರಿಕೆ ನೀಡುವ, ಸಾವಿರ ಗಾಲಿಗಳು ಹೊರಳುವ ರಸ್ತೆಯಂಚಿನಲ್ಲಿ ಕೈ ಹಿಡಿದು ನಡೆಸುವ ಕೆಲಸ ಮಾಡುತ್ತಾಳೆ.

ಇನ್ನು ತಂದೆಯಾದವನು ಬೆಳಿಗ್ಗೆಯಿಂದ ಸಂಜೆಯವರೆಗೆ ಕೆಲಸದ ನೆಪದಲ್ಲಿ ಕಣ್ಮರೆಯಾಗಿ ಹೋಗಿಬಿಡುತ್ತಾನೆ. ಕೆಲಸದ ಒತ್ತಡ ಅವನಿಗಿದೆ. ಒಮ್ಮೊಮ್ಮೆ ರಜಾದಿನಗಳಲ್ಲಿ ಕಣ್ಣಿಗೆ ಕಂಡು ಕೆಮ್ಮುತ್ತಾ ಕುಳಿತಿರುವ ಪ್ರಾಣಿಯಂತೆ ಗೋಚರಿಸುತ್ತಾನೆ. ಈ ರೀತಿಯಲ್ಲಿ ತಂದೆ-ತಾಯಿಗಳು ಮಗುವಿನೊಂದಿಗೆ ಯಾಂತ್ರಿಕ ಕರ್ತವ್ಯ ನಿಭಾಯಿಸುತ್ತಿದ್ದಾರೆ.

Question 3.
ಮಗು ಕಲಿತದ್ದನ್ನು ಮತ್ತು ವಿದ್ಯಾಭ್ಯಾಸ ಮಾಡುವ ವಿವರಗಳನ್ನು ವಿಶ್ಲೇಷಿಸಿ,

Answer:
ಮುಂಬೈಯಲ್ಲಿ ಬೆಳಗಿನಿಂದ ಸಂಜೆಯ ತನಕ ಕಾಣುವುದು ರಸ್ತೆಯಲ್ಲಿ ಉರುಳುವ ಲಕ್ಷಚಕ್ರಗಳು. ಅಂತಹ ವಾಹನಗಳ ಮಧ್ಯೆ ಅವಸರದ ಹೆಜ್ಜೆಯನ್ನು ಹಾಕುತ್ತಾ ಸರಿಯುತ್ತಿರುವ ಸಾವಿರಾರು ಜನಗಳನ್ನು ಕಾಣುತ್ತಾ ಮಗು ಬೆಳೆಯುತ್ತದೆ.

ಈ ವಾತಾವರಣದಲ್ಲಿ ಮಗು ಕ್ಯೂ ನಿಲ್ಲುವುದನ್ನು ಪುಟ್ ಪಾತಿನಲ್ಲೇ ಸಂಚರಿಸುವುದನ್ನು, ಎಚ್ಚರಿಕೆಯಿಂದ ರಸ್ತೆ ದಾಟುವುದನ್ನು, ಎಲ್ಲಿಯೂ ನಿಲ್ಲದಂತೆ ಓಡುವುದನ್ನು, ಅವರಿವರನ್ನು ತಳ್ಳಿಕೊಂಡು ಮುನ್ನುಗುವುದನ್ನು ಎಲ್ಲಾದರೂ ಸರಿ ಬೇರೂರುವುದನ್ನು ಹೀರುವುದನ್ನು ಕಲಿಯುತ್ತದೆ.

ಮಗು ಕಲಿತ ವಿದ್ಯೆಗಳು ಶಾಲೆ ಕಾಲೇಜುಗಳು ಕಲಿಸಿದ್ದು, ದಾರಿ ಬದಿ ನೂರಾರು ಜಾಹೀರಾತುಗಳನ್ನು ನೋಡಿ ಅವುಗಳನ್ನು ತಲೆಗೆ ತುರುಕಿಸಿಕೊಳ್ಳುತ್ತದೆ. ರೇಡಿಯೋ ಸಿಲೋನ್ ವ್ಯಾಪಾರ ವಿಭಾ ಶಿಫಾರಸು ಮಾಡಿದ್ದನ್ನು ಕಲಿಯುತ್ತದೆ. ಇದರ ಜೊತೆಗೆ ತಾನಾಗಿ ಕಲಿತದ್ದು ಬಸ್ ಸ್ಟಾಪಿನಲಿ ನಿಂತ ಬಣ್ಣಗಳ ಕಡೆಗೆ ಕಣ್ಣಾಡಿಸುವುದು. ಸ್ವಂತವಾಗಿ ಕಲಿಯುವುದು ಕಡಿಮೆಯೇ, ಇತರರ ಕೈ ಗೊಂಬೆಯಾಗಿ ಬಾಳುತ್ತದೆ.

Question 4.
ನಗರ ಜೀವನದ ಯಾಂತ್ರಿಕ ವಿವರಗಳು ಕವಿತೆಯಲ್ಲಿ ಹೇಗೆ ಚಿತ್ರಿತಗೊಂಡಿದೆ? ವಿವರಿಸಿ.

Answer:
ನಗರಗಳಲ್ಲಿ ವಾಸಿಸುವವರ ಆತಂತ್ರ ಸ್ಥಿತಿ ಮರುಕ ಹುಟ್ಟಿಸುವಂಥದ್ದು. ಇಂಥಹ ನಗರಗಳಲ್ಲಿ ಹುಟ್ಟುವ ಮಕ್ಕಳು ಕಣ್ಣೆರೆದಾಗ ಕಾಣುವುದು ಅವಸರದಿಂದ ಸರಿಯುವ ವಾಹನಗಳನ್ನು ಮಾತ್ರ ಮಕ್ಕಳು ಹೆತ್ತವರೊಂದಿಗೆ, ಬಾಲ್ಯಾವಸ್ಥೆಯನು ಅವಕಾಶದಿಂದ ವಂಚಿತರು. ಒಡಹುಟ್ಟಿದವರೊಂದಿಗೆ ಸಮೃದ್ಧಗೊಳಿಸಿಕೊಳ್ಳುವ
ತಾಯಿಯ ಎದೆಹಾಲನ್ನೂ ಸಹ ಕುಡಿಯದೆ, ಎಮ್ಮೆಯ ಹಾಲು, ಬಾಟಿಯ ಹಾಲು, ಗ್ರೆಪ್ ವಾಟರ್, ಸಿರಪ್ ಮುಂತಾದವುಗಳಲ್ಲಿಯೇ ಮಗು ಹೊಟ್ಟೆ ತುಂಬಿಸಿಕೊಳ್ಳುತ್ತದೆ.

ಬೆಳಗಿನಿಂದ ಸಂಜೆಯ ತನಕ ಲಕ್ಷಚಕ್ರ ಉರುಳುವಲ್ಲಿ ಅವಸರದ ಹೆಜ್ಜೆಯನ್ನು ಹಾಕುತ್ತಾ ಸರಿಯುತ್ತಿರುವ ಸಾವಿರಾರು ಜನಗಳನ್ನು ಕಾಣುತ್ತಾ ಮಗು ಬೆಳೆಯುತ್ತದೆ. ಈ ವಾತಾವರಣದಲ್ಲಿ ಮಗು ಕ್ಯೂ ನಿಲ್ಲುವುದನ್ನು, ಪುಟ್ ಪಾತಿನಲ್ಲೇ ಸಂಚರಿಸುವುದನ್ನು, ಎಚ್ಚರಿಕೆಯಿಂದ ರಸ್ತೆ ದಾಟುವುದನ್ನು, ಎಲ್ಲಿಯೂ ನಿಲ್ಲದಂತೆ ಓಡುವುದನ್ನು, ಅವರಿವರನ್ನು ತಳ್ಳಿಕೊಂಡು ಮುನ್ನುಗುವುದನ್ನು ಎಲ್ಲಾದರೂ ಸರಿ ಬೇರೂರುವುದನ್ನು ಹೀರುವುದನ್ನು ಕಲಿಯುತ್ತದೆ.

ನಗರ ಸಂಸ್ಕೃತಿಯಲ್ಲಿ ಜೀವನದ ರಸಾನುಭವ ಅಸಾಧ್ಯ-ತಂದೆ-ತಾಯಿಯರ ಕರುಳಬಳ್ಳಿಯ ಪ್ರೀತಿ ಮಮತೆ ಆರೈಕೆಗಳಲ್ಲೂ ಕೃತಕವಾದ ಹೊಣೆಗಾರಿಕೆಯನ್ನು ಕವಿ ಮುಂಬೈ ಜಾತಕದಲ್ಲಿ ಚಿತ್ರಿಸಿದ್ದಾರೆ. ನಗರದಲ್ಲಿ ಮಕ್ಕಳೊಂದಿಗೆ ಪ್ರೀತಿ,ವಿಶ್ವಾಸ, ಕರುಳಬಳ್ಳಿಯ ಸಂಬಂಧಗಳೆಲ್ಲವೂ ಕಡಿಮೆಯಾಗಿ ಮಕ್ಕಳು ಬಾಲ್ಯದಲ್ಲಿಯೇ ಯಾಂತ್ರಿಕ ಬದುಕಿಗೆ ಸಿಕ್ಕಿ ನರಳುತ್ತದೆ. ಮಗುವಿನ ತಂದೆ-ತಾಯಿಯರು ತಮ್ಮ ಕೃತಕ ಜವಾಬ್ದಾರಿಯನ್ನು ನಿರ್ವಹಿಸುವ ಯಂತ್ರಗಳಂತಿದ್ದಾರೆ. ಮಕ್ಕಳೊಂದಿಗೆ ವಾತ್ಸಲ್ಯಭರಿತ ಒಡನಾಟದ ಚಿತ್ರಣವೇ ಇಲ್ಲಿಲ್ಲ. ತಾಯಿ ಇರುವ ಒಂದಿಂಚು ಕೋಣೆಯಲ್ಲಿ ಹೊರಲೋಕವನ್ನು ಪರಿಚಯಿಸುವ, ಎಚ್ಚರಿಕೆ ನೀಡುವ, ಸಾವಿರ ಗಾಲಿಗಳು ಹೊರಳುವ ರಸ್ತೆಯಂಚಿನಲ್ಲಿ ಕೈ ಹಿಡಿದು ನಡೆಸುವ ಕೆಲಸ ಮಾಡುತ್ತಾಳೆ.

ಇನ್ನು ತಂದೆಯಾದವನು ಬೆಳಿಗ್ಗೆಯಿಂದ ಸಂಜೆಯವರೆಗೆ ಕೆಲಸದ ನೆಪದಲ್ಲಿ ಕಣ್ಮರೆಯಾಗಿ ಹೋಗಿ ಬಿಡುತ್ತಾನೆ. ಕೆಲಸದ ಒತ್ತಡ ಅವನಿಗಿದೆ. ಒಮ್ಮೊಮ್ಮೆ ರಜಾದಿನಗಳಲ್ಲಿ ಕಣ್ಣಿಗೆ ಕಂಡು ಕೆಮ್ಮುತ್ತಾ ಕುಳಿತಿರುವ ಪ್ರಾಣಿಯಂತೆ ಗೋಚರಿಸುತ್ತಾನೆ. ಈ ರೀತಿಯಲ್ಲಿ ತಂದೆ-ತಾಯಿಗಳು ಮಗುವಿನೊಂದಿಗೆ ಯಾಂತ್ರಿಕ ಕರ್ತವ್ಯ ನಿಭಾಯಿಸುತ್ತಿದ್ದಾರೆ.

ಮಗು ಕಲಿತ ವಿದ್ಯೆಗಳು ಶಾಲೆ ಕಾಲೇಜುಗಳು ಕಲಿಸಿದ್ದು, ದಾರಿ ಬದಿ ನೂರಾರು ಜಾಹೀರಾತುಗಳನ್ನು ನೋಡಿ ಅವುಗಳನ್ನು ತಲೆಗೆ ತುರುಕಿಸಿಕೊಳ್ಳುತ್ತದೆ.. ರೇಡಿಯೋ ಸಿಲೋನ್ ವ್ಯಾಪಾರ ವಿಭಾಗಶಿಫಾರಸು ಮಾಡಿದ್ದನ್ನು ಕಲಿಯುತ್ತದೆ. ಇದರ ಜೊತೆಗೆ ತಾನಾಗಿ ಕಲಿತದ್ದು ಬಸ್ ಸ್ಟಾಪಿನಲ್ಲಿ ನಿಂತ ಬಣ್ಣಗಳ ಕಡೆಗೆ ಕಣ್ಣಾಡಿಸುವುದು. ಸ್ವಂತವಾಗಿ ಕಲಿಯುವುದು ಕಡಿಮೆಯೇ. ಇತರರ ಕೈ ಗೊಂಬೆಯಾಗಿ ಬಾಳುತ್ತದೆ. ಬೆಳಿಗ್ಗೆ ಎದ್ದರೆ ಬಟ್ಟೆಯಲ್ಲಿ ಮೈ ತುರುಕಿ ಓಡುವುದು, ರೈಲನ್ನೋ, ಬಸ್ಸನ್ನೋ ಹಿಡಿಯುವುದು. ಯಾರದೋ ಕೈ ಗೊಂಬೆಯಾಗಿ ಬದುಕುವುದು. ಸಾಯಂಕಾಲ ಸುಸ್ತಾಗಿ ಮನೆಗೆ ಬಂದು ತಣ್ಣನೆಯ ಕೂಳನ್ನು ತಿಂದು ಮಲಗುವುದು ನಗರ ಜೀವನದ ಯಾಂತ್ರಿಕ ವಿವರಗಳು.

ಮುಂಬೈ ಜಾತಕ Summary

2nd PUC Kannada Chapter 8 Mumbai Jataka
2nd PUC Kannada Chapter 8 Mumbai Jataka

ಸಾರಾಂಶ:

ನಗರಗಳಲ್ಲಿ ವಾಸಿಸುವವರ ಅತ್ಯಂತ ಸ್ಥಿತಿ ಮರುಕ ಹುಟ್ಟಿಸುವಂಥದ್ದು. ಇಂಥಹ ನಗರಗಳಲ್ಲಿ ಹುಟ್ಟುವ ಮಕ್ಕಳು ಕಣ್ಣೆರೆದಾಗ ಕಾಣುವುದು ಅವಸರದಿಂದ ಸರಿಯುವ ವಾಹನಗಳನ್ನು ಮಾತ್ರ. ಮಕ್ಕಳು ಬಾಲ್ಯಾವಸ್ಥೆಯನ್ನು ಹೆತ್ತವರೊಂದಿಗೆ, ಬಡಹುಟ್ಟಿದವರೊಂದಿಗೆ ಸಮೃದ್ಧಗೊಳಿಸಿಕೊಳ್ಳುವ ಅವಕಾಶದಿಂದ ವಂಚಿತರು.

ತಾಯಿಯ ಎದೆಹಾಲನ್ನೂ ಸಹ ಕುಡಿಯದೆ, ಎಮ್ಮೆಯ ಹಾಲು, ಬಾಟ್ಲಿಯ ಹಾಲು, ಗ್ರೆಪ್ ವಾಟರ್, ಸಿರಪ್ ಮುಂತಾದವುಗಳಲ್ಲಿಯೇ ಮಗು ಹೊಟ್ಟೆ ತುಂಬಿಸಿಕೊಳ್ಳುತ್ತದೆ. ಬೆಳಗಿನಿಂದ ಸಂಜೆಯ ತನಕ ಲಕ್ಷಚಕ್ರ ಉರುಳುವಲ್ಲಿ ಅವಸರದ ಹೆಜ್ಜೆಯನ್ನು ಹಾಕುತ್ತಾ ಸರಿಯುತ್ತಿರುವ ಸಾವಿರಾರು ಜನಗಳನ್ನು ಕಾಣುತ್ತಾ ಮಗು ಬೆಳೆಯುತ್ತದೆ.

ಈ ವಾತಾವರಣದಲ್ಲಿ ಮಗು ಕ್ಯೂ ನಿಲ್ಲುವುದನ್ನು ಪುಟ್ ಪಾತಿನಲ್ಲೇ ಸಂಚರಿಸುವುದನ್ನು, ಎಚ್ಚರಿಕೆಯಿಂದ ರಸ್ತೆ ದಾಟುವುದನ್ನು, ಎಲ್ಲಿಯೂ ನಿಲ್ಲದಂತೆ ಓಡುವುದನ್ನು, ಅವರಿವರನ್ನು ತಳ್ಳಿಕೊಂಡು ಮುನ್ನುಗುವುದನ್ನು ಎಲ್ಲಾದರೂ ಸರಿ ಬೇರೂರುವುದನ್ನು, ಹೀರುವುದನ್ನು ಕಲಿಯುತ್ತದೆ.

ನಗರ ಸಂಸ್ಕೃತಿಯಲ್ಲಿ ಜೀವನದ ರಸಾನುಭವ ಅಸಾಧ್ಯ ತಂದೆ-ತಾಯಿಯರ ಕರುಳಬಳ್ಳಿಯ ಪ್ರೀತಿ ಮಮತೆ ಆರೈಕೆಗಳಲ್ಲೂ ಕೃತಕವಾದ ಹೊಣೆಗಾರಿಕೆಯನ್ನು ಕವಿ ಮುಂಬೈ ಜಾತಕದಲ್ಲಿ ಚಿತ್ರಿಸಿದ್ದಾರೆ. ನಗರದಲ್ಲಿ ಮಕ್ಕಳೊಂದಿಗೆ ಪ್ರೀತಿ, ವಿಶ್ವಾಸ, ಕರುಳಬಳ್ಳಿಯ ಸಂಬಂಧಗಳೆಲ್ಲವೂ ಕಡಿಮೆಯಾಗಿ ಮಕ್ಕಳು ಬಾಲ್ಯದಲ್ಲಿಯೇ ಯಾಂತ್ರಿಕ ಬದುಕಿಗೆ ಸಿಕ್ಕಿ ನರಳುತ್ತದೆ. ಮಗುವಿನ ತಂದೆ-ತಾಯಿಯರು ತಮ್ಮಕೃತಕ ಜವಾಬ್ದಾರಿಯನ್ನು ನಿರ್ವಹಿಸುವ ಯಂತ್ರಗಳಂತಿದ್ದಾರೆ. ಮಕ್ಕಳೊಂದಿಗೆ ವಾತ್ಸಲ್ಯಭರಿತ ಒಡನಾಟದ ಚಿತ್ರಣವೇ ಇಲ್ಲಿಲ್ಲ. ತಾಯಿ ಇರುವ ಒಂದಿಂಚು ಕೋಣೆಯಲ್ಲಿ ಹೊರಲೋಕವನ್ನು ಪರಿಚಯಿಸುವ, ಎಚ್ಚರಿಕೆ ನೀಡುವ, ಸಾವಿರ ಗಾಲಿಗಳು ಹೊರಳುವ ರಸ್ತೆಯಂಚಿನಲ್ಲಿ ಕೈ ಹಿಡಿದು ನಡೆಸುವ ಕೆಲಸ ಮಾಡುತ್ತಾಳೆ.ಇನ್ನು ತಂದೆಯಾದವನು ಬೆಳಿಗ್ಗೆಯಿಂದ ಸಂಜೆಯವರೆಗೆ ಕೆಲಸದ ನೆಪದಲ್ಲಿ ಕಣ್ಮರೆಯಾಗಿ ಹೋಗಿ ಬಿಡುತ್ತಾನೆ. ಕೆಲಸದ ಒತ್ತಡ ಅವನಿಗಿದೆ.

ಒಮ್ಮೊಮ್ಮೆ ರಜಾದಿನಗಳಲ್ಲಿ ಕಣ್ಣಿಗೆ ಕಂಡು ಕೆಮ್ಮುತ್ತಾ ಕುಳಿತಿರುವ ಪ್ರಾಣಿಯಂತೆ ಗೋಚರಿಸುತ್ತಾನೆ. ಈ ರೀತಿಯಲ್ಲಿ ತಂದೆ-ತಾಯಿಗಳು ಮಗುವಿನೊಂದಿಗೆ ಯಾಂತ್ರಿಕ ಕರ್ತವ್ಯ ನಿಭಾಯಿಸುತ್ತಿದ್ದಾರೆ.

ಮಗು ಕಲಿತ ವಿದ್ಯೆಗಳು ಶಾಲೆ ಕಾಲೇಜುಗಳು ಕಲಿಸಿದ್ದು. ದಾರಿ ಬದಿ ನೂರಾರು ಜಾಹೀರಾತುಗಳನ್ನು ನೋಡಿ ಅವುಗಳನ್ನು ತಲೆಗೆ ತುರುಕಿಸಿಕೊಳ್ಳುತ್ತದೆ.. ರೇಡಿಯೋ ಸಿಲೋನ್ ವ್ಯಾಪಾರ ವಿಭಾಗ ಶಿಫಾರಸು ಮಾಡಿದ್ದನ್ನು ಕಲಿಯುತ್ತದೆ. ಇದರ ಜೊತೆಗೆ ತಾನಾಗಿ ಕಲಿತದ್ದು ಬಸ್ ಸ್ಟಾಪಿನಲ್ಲಿ ನಿಂತ ಬಣ್ಣಗಳ ಕಡೆಗೆ ಕಣ್ಣಾಡಿಸುವುದು. ಸ್ವಂತವಾಗಿ ಕಲಿಯುವುದು ಕಡಿಮೆಯೇ, ಇತರರ ಕೈ ಗೊಂಬೆಯಾಗಿ ಬಾಳುತ್ತದೆ. ಬೆಳಿಗ್ಗೆ ಎದ್ದರೆ ಬಟ್ಟೆಯಲ್ಲಿ ಮೈ ತುರುಕಿ ಓಡುವುದು, ರೈಲನ್ನೋ, ಬಸ್ಸನ್ನೋ ಹಿಡಿಯುವುದು. ಯಾರದೋ ಕೈ ಗೊಂಬೆಯಾಗಿ ಬದುಕುವುದು. ಸಾಯಂಕಾಲ ಸುಸ್ತಾಗಿ ಮನೆಗೆ ಬಂದು ತಣ್ಣನೆಯ ಕೂಳನ್ನು ತಿಂದು ಮಲಗುವುದು.

Click Here to Download Mumbai Jataka PDF Notes
Click Here to Watch Mumbai Jataka Video 

You cannot copy content of this page