2nd PUC Kannada Chapter 7

2nd PUC Kannada Question and Answer – Belagu Java

Looking for 2nd PUC Kannada textbook answers? You can download Chapter 7: Belagu Java Questions and Answers PDF, Notes, and Summary here. 2nd PUC Kannada Kavyabhaga solutions follow the Karnataka State Board Syllabus, making it easier for students to revise and score higher in exams.

Karnataka 2nd PUC Kannada Textbook Answers—Reflections Chapter 7

Belagu Java Questions and Answers, Notes, and Summary

2nd PUC Kannada Kavyabhaga Chapter 7

ಬೆಳಗು ಜಾವ

Belagu Java

2nd PUC Kannada Chapter 7 Belagu Java
Scroll Down to Download Belagu Java PDF
I. ಒಂದು ಅಂಕದ ಪ್ರಶ್ನೆಗಳು :

Question 1.
ಜೇನ್ನೊಣದ ಹೆದೆಗೆ ಹೂಬಾಣ ಹೂಡಿದವರು ಯಾರು?
Answer:
ಜೇನ್ನೊಣದ ಹೆದೆಗೆ ಹೂಬಾಣ ಹೂಡಿದವರು ಬೆಳಕು ಬೇಟೆಗಾರ (ಮಾರ).

Question 2.
ಬೇಟೆಗಾರ ಯಾರು?
Answer:
ಬೆಳಕು ಬೇಟೆಗಾರ.

Question 3.
ಹುಸಿನಿದ್ದೆ ಸಾಕು ಎಂದು ಕವಿ ಯಾರಿಗೆ ಹೇಳುತ್ತಾರೆ?
Answer:
ಹುಸಿನಿದ್ದೆ ಸಾಕು ಎಂದು ಕವಿ ಮಕ್ಕಳಿಗೆ ಹೇಳುತ್ತಾರೆ.

Question 4.
ಯಾವುದಕ್ಕೆ ಸೆಳವಿದೆಯೆಂದು ಕವಿ ಹೇಳುತ್ತಾರೆ?
Answer:
ಜೀವನದ ನದಿಗೆ ಸೆಳೆವಿದೆಯೆಂದು ಕವಿ ಹೇಳುತ್ತಾರೆ.

Question 5.
ಕವಿಯ ಪ್ರಕಾರ ಯಾವುದು ಮತ್ತೆ ಚಿಗುರುತ್ತದೆ?
Answer:
ಕವಿಯ ಪ್ರಕಾರ ಮರವು ಮತ್ತೆ ಚಿಗುರುತ್ತದೆ.

Question 6.
ಯಾವುದು ಚಿಂತನದಿ ಮುಳುಗಿರಲಿ ಎಂದು ಕವಿ ಆಶಿಸುತ್ತಾರೆ?
Answer:
ಮುಪ್ಪು ಚಿಂತನದಿ ಮುಳುಗಿರಲಿ ಎಂದು ಕವಿ ಆಶಿಸುತ್ತಾರೆ.

II.ಎರಡು ಅಂಕಗಳ ಪ್ರಶ್ನೆಗಳು:

Question 1.
ಬೆಳಕು-ಬೇಟೆಗಾರ ಹೇಗೆ ಬರುತ್ತಾನೆ?
Answer:
ಏಳು ಚಿನ್ನ, ಬೆಳಗಾಯ್ತು ಅಣ್ಣ ಎಂದು ಕವಿ ಬೇಂದ್ರೆಯವರು ಮಲಗಿರುವ ಮನಸ್ಸುಗಳನ್ನು ಎಬ್ಬಿಸುತ್ತಿದ್ದಾರೆ. ಮೂಡಲ ದಿಕ್ಕಿನಲ್ಲಿ ಸೂರ್ಯ ಉದಯಿಸುತ್ತಿದ್ದಾನೆ. ನಕ್ಷತ್ರಗಳು ಜಾರಿ, ಕತ್ತಲೆ ಸೋರಿ ಹೋಗುತ್ತಿದೆ. ಆಗ ಮಾರನು ತನ್ನ ಜೇನ್ನೋಣದ ಹೆದೆಗೆ ಹೂಬಾಣವನ್ನು ಹೂಡುತ್ತಾನೆ. ಆಗ ಬೆಳಕಿನ ಬೇಟೆಗಾರ ಆಗಮಿಸುತ್ತಾನೆ.

Question 2.
ಕವಿ ಬೇಂದ್ರೆ ಮಕ್ಕಳಿಗೆ ಬಾಳಿನ ಬಗ್ಗೆ ಕೊಡುವ ಸಂದೇಶವೇನು?
Answer:
ಕವಿ ಬೇಂದ್ರೆ ಬೆಳಗಿನ ವಿಶೇಷತೆಯನ್ನು ತಿಳಿಸುತ್ತಾ, ಮಕ್ಕಳಲ್ಲಿ ಬೇಗ ನಿಮ್ಮ ಹುಸಿ ನಿದ್ದೆ ಬಿಟ್ಟು ಏನಾದರೂ ಸಾಧಿಸಲು ಏಳಿ ಎದ್ದೇಳಿ ಎನ್ನುತ್ತಿದ್ದಾರೆ. ಬಾಳಿನಲ್ಲಿ ಯೌವನವು ತುಂಬಿರುವವರೆಗೆ ಅದನ್ನು ಸಂಪೂರ್ಣವಾಗಿ ಸಾರ್ಥಕ ಪಡಿಸಿಕೊಳ್ಳಬೇಕು, ಸೋಮಾರಿತನದ ಭಾಗವಾಗಿರುವ ಹುಸಿ ನಿದ್ದೆಯನ್ನು ಬಿಡಬೇಕು ಎಂದು ಬಾಳಿನ ಬಗ್ಗೆ ಸಂದೇಶವನ್ನು ನೀಡುತ್ತಿದ್ದಾರೆ.

Question 3.
ಹುಸಿನಿದ್ದೆ ಸಾಕು, ಎದ್ದೇಳಿ ಎಂದು ಕವಿ ಮಕ್ಕಳಿಗೆ ಹೇಳಲು ಕಾರಣವೇನು?
Answer:
ಕವಿಯ ಪ್ರಕಾರ ಹುಸಿನಿದ್ದೆಯು ಸೋಮಾರಿ ಮನಸ್ಸಿನ ಲಕ್ಷಣವಾಗಿದೆ. ಅಲ್ಲದೆ ಹುಸಿನಿದ್ದೆಯಲ್ಲಿ ತೊಡಗಿದರೆ ಜೀವನದ ಮುಂದಿನ ಮಧುರ ಕ್ಷಣಗಳಿಂದ ದೂರವಾಗಬೇಕಾಗುತ್ತದೆ. ಹಾಗಾಗಿ ಬಾಳಿನಲ್ಲಿ ಹೆಚ್ಚು ಹೆಚ್ಚು ಉತ್ಸಾಹದಿಂದ ಕಾರ್ಯ ಪ್ರವೃತ್ತರಾಗಿ, ತುಂಬಿದ ಜೀವನ ನಡೆಸಲು ಬೇಗ ಎಚ್ಚರಗೊಳ್ಳಿ ಎಂದು ಕವಿ ಮಕ್ಕಳಿಗೆ ಹೇಳುತ್ತಿದ್ದಾರೆ.

Question 4.
ಕವಿಯ ಪ್ರಕಾರ ಮುಪ್ಪು ಮತ್ತು ಹರೆಯದ ನಡುವಿನ ವ್ಯತ್ಯಾಸವೇನು?
Answer:
ಕವಿಯ ಪ್ರಕಾರ ಹರೆಯ(ಯೌವನ)ಜೀವನದ ಬೆಳಗುಜಾವ ಹರೆಯದ ಕಾಲದಲ್ಲಿ ಸಮಯವನ್ನು ವ್ಯರ್ಥವಾಗಿ ಕಳೆಯದೆ, ಕಾರ್ಯಶೀಲರಾಗಿ ಜೀವನವನ್ನು ಸವಿಯಾಗಿಸಿಕೊಳ್ಳಬೇಕು. ಮುಪ್ಪು ಜೀವನದ ಸಂಧ್ಯಾಕಾಲ ಜೊತೆಗೆ ನಾನಾ ರೀತಿಯ ಚಿಂತೆಗಳು ಮನಸ್ಸಿನಲ್ಲಿ ಮೂಡಿ ಮನಸ್ಸು ಘಾಸಿಗೊಳ್ಳುವ ಕಾಲ ಎಂದು ಕವಿ ಹರೆಯ ಮತ್ತು ಮುಪ್ಪಿನ ವ್ಯತ್ಯಾಸವನ್ನು ಹೇಳುತ್ತಾರೆ.

Question 5.
ಬಾನು ಮತ್ತು ಮರದ ನಿತ್ಯನೂತನತೆಯ ಬಗ್ಗೆ ಕವಿ ಏನು ಹೇಳಿದ್ದಾರೆ?
Answer:
ಕವಿಯ ಪ್ರಕಾರ ಬಾನು ಮತ್ತು ಮರ ಎರಡೂ ಕೂಡ ಪ್ರಕೃತಿಯ ಭಾಗವಾಗಿದ್ದು ನಿತ್ಯನೂತನವಾಗಿದೆ. ಬಾನಿನಲ್ಲಿ ಪ್ರತಿನಿತ್ಯ ಕತ್ತಲೆ ಸರಿದು ಬೆಳಕು ಮೂಡುತ್ತಿರುತ್ತವೆ. ಮರವೂ ಕೂಡ ಎಲ್ಲಾ ಕಾಲದಲ್ಲೂ ಚಿಗುರುತ್ತಿರುತ್ತದೆ. ಈ ಎರಡೂ ಕ್ರಿಯೆಗಳು ನಿರಂತರ ಮತ್ತು ನಿತ್ಯ ನೂತನ.

III. ಸಾಂದರ್ಭಿಕ ವಿವರಣೆ ಬಯಸುವ ವಾಕ್ಯಗಳು

Question 1.
ಬಲೆಬೀಸಿ ಬಂದ, ಆಗೋ ಬೆಳಕು-ಬೇಟೆಗಾರ

Answer:
ಆಯ್ಕೆ: ಈ ವಾಕ್ಯವನ್ನು ದ.ರಾ.ಬೇಂದ್ರೆಯವರು ಬರೆದ ಬೆಳಗು ಜಾವ ಎಂಬ ಕವಿತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಕವಿ ಇಲ್ಲಿ ಬೆಳಕು ಬೇಟೆಗಾರನ ಆಗಮನದ ಬಗ್ಗೆ ತಿಳಿಸುತ್ತಿದ್ದಾರೆ.
ಸಾರಸ್ಯ: ಕವಿ ಬೇಂದ್ರೆಯವರು ದಿನ ನಿತ್ಯ ಬೆಳಗು ಹೇಗೆ ಕಾಣಿಸಿಕೊಳ್ಳುತ್ತದೆ ಎನ್ನುವುದನ್ನು ಇಲ್ಲಿ ವಿವರಿಸುತ್ತಿದ್ದಾರೆ. ದಿನ ನಿತ್ಯ ಕತ್ತಲೆಯು ನಿಧಾನಗತಿಯಲ್ಲಿ ಮಾಯವಾಗಿ ಬೆಳಕು ಪ್ರವೇಶಿಸುತ್ತದೆ. ಆದರೆ ಇದನ್ನು ಕಾಣುವ ಹುಮ್ಮಸ್ಸು ಬೇಕು. ಮಾರನು ತನ್ನ ಚೇನ್ನೊಣದ ಬಿಲ್ಲಿನ ಹೆರೆಗೆ ಹೂಬಾಣವನ್ನು ಹೂಡಿ ಪ್ರಯೋಗಿಸುತ್ತಿದ್ದಾನೆ. ಆಗ ಕಾಣಿಸಿಕೊಂಡ ಬೆಳಕಿನ ಬೇಟೆಗಾರ ಎಲ್ಲಾ ಕಡೆಯು ಬೆಳಕನ್ನು ಪಸರಿಸಿದನು ಎನ್ನುವಾಗ ಈ ಮೇಲಿನ ಸಾಲು ಧ್ವನಿಸುತ್ತದೆ.

Question 2.
ತುಂಬಿರುವ ತನಕ ತುಂತುಂಬಿ ಕುಡಿಯಬೇಕು.

Answer:
ಆಯ್ಕೆ: ಈ ವಾಕ್ಯವನ್ನು ದ.ರಾ.ಬೇಂದ್ರೆಯವರು ಬರೆದ ಬೆಳಗು ಜಾವ ಎಂಬ ಕವಿತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಕವಿಯು ನಮಗೆ ದೊರಕಿರುವ ಯೌವನವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂಬ ಕಿವಿಮಾತನ್ನು ಈ ವಾಕ್ಯದಲ್ಲಿ ಹೇಳುತ್ತಿದ್ದಾರೆ.
ಸಾರಸ್ಯ: ಜೀವನದಲ್ಲಿ ಯೌವನ ಬರುವುದು ಒಂದೇ ಬಾರಿ. ಅದನ್ನು ಹುಸಿನಿದ್ದೆ ಮಾಡುತ್ತಾ ವ್ಯರ್ಥವಾಗಿ ಕಳೆಯಬಾರದು. ತುಂಬಿಯ ಹಾಗಿನ ಬಾಳು ನಮ್ಮದಾಗಬೇಕು. ಯಾವ ರೀತಿಯಲ್ಲಿ ದುಂಬಿಯು ಹೂವಿನ ಮಕರಂದವನ್ನು ಸಂಪೂರ್ಣವಾಗಿ ಹೀರಿ ತನ್ನ ಬದುಕನ್ನು ಸಾರ್ಥಕಪಡಿಸಿಕೊಳ್ಳುತ್ತದೋ, ಹಾಗೆ ನಾವು ನಮಗೆ ಸಿಕ್ಕಿರುವ ಯೌವನವನ್ನು ಸದುಪಯೋಗಪಡಿಸಿಕೊಳ್ಳಬೇಕು ಎನ್ನುವುದನ್ನು ಕವಿ ಈ ಮೇಲಿನಂತೆ ಹೇಳುತ್ತಾರೆ.

Question 3.
ಮರಣ ಬಂದೀತು ಕ್ಷಣವು ಉರುಳಿ

Answer:
ಆಯ್ಕೆ : ಈ ವಾಕ್ಯವನ್ನು ದ.ರಾ.ಬೇಂದ್ರೆಯವರು ಬರೆದ ಬೆಳಗು ಜಾವ ಎಂಬ ಕವಿತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಇಲ್ಲಿ ಕವಿಯು ವ್ಯರ್ಥ ಕಾಲಹರಣದಿಂದ ಭವಿಷ್ಯದಲ್ಲಿ ಬರಬಹುದಾದ ಮರಣದ ಬಗ್ಗೆ ಎಚ್ಚರಿಕೆಯನ್ನು ನೀಡುತ್ತಿದ್ದಾರೆ.
ಸಾರಸ್ಯ: ಬೇಂದ್ರೆಯವರುಬೆಳಕು ಕಾಣಿಸಿಕೊಂಡರೂ ಇನ್ನೂ ಮಲಗಿರುವ ಯುವಕರಿಗೆ ಎದ್ದೇಳುವಂತೆ ಕರೆ ನೀಡಿದ್ದಾರೆ. ಆದಾಗಲೇ ಕೋಳಿ ಕೂಗಿದೆ. ಎದ್ದೇಳಿ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಪಾನಕ ಕುಡಿಯಿರಿ, ಅಂಗಡಿಯ ಕದವನ್ನು ತೆರೆಯಲು ಹೇಳಿ ತಡಮಾಡಬೇಡಿ ಎನ್ನುತ್ತಿದ್ದಾರೆ. ಯಾಕೆಂದರೆ ಜೀವನ ಎನ್ನುವ ನದಿಗೆ ರಭಸವಿದೆ. ಯಾವಾಗ ಬೇಕಾದರೂ ಪ್ರವಾಹದ ರೂಪದಲ್ಲಿ ಮರಣ ಕಾಣಿಸಿಕೊಳ್ಳಬಹುದು ಎನ್ನುತ್ತಾ ಈ ಮೇಲಿನಂತೆ ಹೇಳುತ್ತಾರೆ.

Question 4.
ಬರಲುಂಟೆ ಸುಗ್ಗಿ ಮತ್ತೆ?

Answer:
ಆಯ್ಕೆ: ಈ ವಾಕ್ಯವನ್ನು ದ.ರಾ.ಬೇಂದ್ರೆಯವರು ಬರೆದ ಬೆಳಗು ಜಾವ ಎಂಬ ಕವಿತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಕವಿಯು ಯೌವನ ಮತ್ತು ಮುಪ್ಪಿನ ಕುರಿತು ಹೇಳುವ ಸಂದರ್ಭ ಇದಾಗಿದೆ.
ಸಾರಸ್ಯ: ಮುಪ್ಪು, ಮರಣಗಳು ಒಮ್ಮೆ ಆವರಿಸಿದವು ಎಂದರೆ ಮನುಷ್ಯ ಮತ್ತೆ ಯೌವನವನ್ನು ಕನಸಿನಲ್ಲೂ ನಿರೀಕ್ಷಿಸಲು ಸಾಧ್ಯವಿಲ್ಲ. ಪ್ರಕೃತಿಯ ಬದಲಾವಣೆ ಪುನರಾವರ್ತನೆಯಾಗುತ್ತಿರುತ್ತದೆ. ಬಾನು ತನ್ನ ಬೆಳಕನ್ನು ಪ್ರತಿ ನಿತ್ಯವೂ ಪ್ರಕಾಶಿಸುತ್ತದೆ. ಮರ ಪ್ರತಿನಿತ್ಯವೂ ಚಿಗುರುತ್ತಿರುತ್ತದೆ. ಸುಗ್ಗಿಯ ಕಾಲ ಮತ್ತೆ ಬರಬಹುದು ಅಥವಾ ಬರದೇ ಇರಬಹುದು ಆದರೆ ಜೀವನದ ಸುಗ್ಗಿಕಾಲ ಮಾತ್ರ ಒಮ್ಮೆಯೇ ಬರುವುದು. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂಬ ಕಳಕಳಿ ಇಲ್ಲಿದೆ.

Question 5.
ಮುಳುಗಿರಲಿ ಮುಪು ಚಿಂತನದಿ.

Answer:
ಆಯ್ಕೆ: ಈ ವಾಕ್ಯವನ್ನು ದ.ರಾ.ಬೇಂದ್ರೆಯವರು ಬರೆದ ಬೆಳಗು ಜಾವ ಎಂಬ ಕವಿತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಇಲ್ಲಿ ಕವಿ ಯುವ ಮನಸ್ಸುಗಳಿಗೆ ಕಿವಿ ಮಾತು ಹೇಳುತ್ತಿರುವುದನ್ನು ಕಾಣಬಹುದು.
ಸಾರಸ್ಯ: ಆಕಾಶ ಮತ್ತೆ ಮತ್ತೆ ಪ್ರಕಾಶಿಸುತ್ತಾ ಇರುತ್ತದೆ. ಮರ ಮತ್ತೆ ಮತ್ತೆ ಚಿಗುರುತ್ತಾ ಇರುತ್ತದೆ. ಸುಗ್ಗಿಯ ಕಾಲವೂ ಮತ್ತೆ ಬರಬಹುದು ಅಥವಾ ಬರದೇ ಇರಬಹುದು. ಆದರೆ ಯೌವನದ ಕಾಲ ಕಳೆದು ಹೋದರೆ ಮತ್ತೆ ಖಂಡಿತಾ ಬರುವುದಿಲ್ಲ. ಆದ್ದರಿಂದ ಮುಪ್ಪು ಬರುವುದೆಂಬ ಚಿಂತೆಯಿರಲಿ ಯೌವನವು ಮತ್ತೆ ಸಿಗುವುದಿಲ್ಲವೆಂಬ ಎಚ್ಚರವಿರಲಿ ಎನ್ನುತ್ತಾ ಈ ಮೇಲಿನಂತೆ ಹೇಳುತ್ತಾರೆ.

IV. ನಾಲ್ಕು ಅಂಕಗಳ ಪ್ರಶ್ನೆಗಳು :

Question 1.
ಮಾನವನ ಜೀವನದ ಸಾರ್ಥಕತೆ ಎಲ್ಲಿದೆಯೆಂದು ಕವಿ ಬೇಂದ್ರೆ ಹೇಳಿದ್ದಾರೆ?

Answer:
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಪ್ರತಿಯೊಂದು ಬೆಳಗು ಹೊಸ ನಿರೀಕ್ಷೆಯನ್ನು ಮೂಡಿಸಿರುತ್ತದೆ. ಪ್ರತಿ ಬೆಳಗೂ, ನಿಂತುಕೊಂಡ ನಿನ್ನೆಯ ಕೆಲಸಗಳಿಗೆ ಚಾಲನೆಯನ್ನು ಕೊಟ್ಟು ಮುಂದುವರಿಸುತ್ತದೆ. ಹಾಗಾಗಿ ಪ್ರತಿಯೊಬ್ಬ ಮನುಷ್ಯನು ಪ್ರತಿ ಬೆಳಗಿನಲ್ಲಿಯೂ ತಾನು ಕಳೆದುಕೊಂಡದ್ದನ್ನು ಮತ್ತೆ ಪಡೆಯಲು ಮುಂದಾಗಬೇಕೆ ವಿನಃ ದಿನದ ಆರಂಭದಲ್ಲಿಯೇ ಹುಸಿ ನಿದ್ದೆಯನ್ನು ಮಾಡಿಕೊಂಡು ಜೀವನದ ಮಧುರ ಕ್ಷಣಗಳನ್ನು ಹಾಳುಮಾಡಿ ಕೊಳ್ಳಬಾರದೆಂಬುದಾಗಿ ಕವಿ ಆಶಿಸುತ್ತಾರೆ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಬಾಲ್ಯ, ಯೌವನ, ಮುಪ್ಪು ಹಂತಹಂತವಾಗಿ ಬರುವ ಮುಖ್ಯ ಘಟ್ಟಗಳು.

ಇವುಗಳನ್ನು ಅರ್ಥಪೂರ್ಣವಾಗಿ ಕಳೆಯಬೇಕು ಎಂದಿದ್ದಾರೆ. ಯೌವನವೆಂದರೆ ಬರಿ ಮೋಜಿನ ಸಮಯವಲ್ಲ, ಅದುಬೆವರು ಸುರಿಸಿ ದುಡಿಯುವ ಸಮಯ. ಇಂತಹ ಹೊತ್ತಿನಲ್ಲಿ ನಿದ್ದೆ ಮಾಡುತ್ತ ಕನಸು ಕಾಣುತ್ತಾ ವ್ಯರ್ಥ ಕಾಲಹರಣವನ್ನು ಮಾಡುವುದು ಸರಿಯಲ್ಲ. ಬೆಳಗಿನ ಜಾವದ ಪ್ರಕೃತಿಯ ಸೌಂದರ್ಯವನ್ನು ಸರಿಯಾಗಿ ಸವಿದು ಯೌವನವನ್ನು ಸವಿಯಾಗಿಸಿಕೊಳ್ಳಬೇಕು. ಮುಪ್ಪು ವ್ಯಾಪಿಸಿ ಚಿಂತೆ ಮೂಡುವ ಮೊದಲು ದುಡಿದು ದಣಿದು ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದಿದ್ದಾರೆ.

Question 2.
ಜೀವನದ ಉದ್ದೇಶ ಮತ್ತು ಆದರ್ಶಗಳನ್ನು ಹೇಗೆ ಸಫಲಗೊಳಿಸಿಕೊಳ್ಳಬೇಕು ಎಂದು ಬೇಂದ್ರೆ ಕರೆ ಕೊಡುತ್ತಾರೆ?

Answer:
ಜೀವನಕ್ಕೆ ಒಂದು ಗುರಿ, ಒಂದು ಗುರು ಬಹಳ ಮುಖ್ಯ ಗುರಿ ಮುಂದಿದ್ದು ಗುರು ಹಿಂದಿದ್ದರೆ ಉದ್ದೇಶಗಳು ಬಹಳ ಬೇಗ ಈಡೇರುತ್ತದೆ. ಉದ್ದೇಶಗಳು ಸರಿಯಾಗಿದ್ದಾಗ, ಪ್ರತಿ ಬೆಳಗು ಹುಸಿ ನಿದ್ದೆಗೆ ಸೀಮಿತವಾಗಿರದೆ ಅದು ಜೀವನಕ್ಕೆ ಬೆಳಕಾಗುತ್ತದೆ. ಪ್ರತಿ ಬೆಳಗನ್ನು ಸಾರ್ಥಕಪಡಿಸಿಕೊಳ್ಳುವ ಉದ್ದೇಶ ಪ್ರತಿ ಮಾನವಜೀವಿಯದ್ದಾಗಬೇಕು.

ಅದರ ಈಡೇರಿಕೆಗಾಗಿ ಅವಿರತ ಪರಿಶ್ರಮ ಮುಖ್ಯ. ಕೋಳಿ ಕೂಗಿ ಬೆಳಕು ಅವರಿಸಿದಾಗಲೂ ಎದ್ದು ನಮ್ಮ ಕೆಲಸಕ್ಕೆ ತಯಾರಿ ನಡೆಸದೆ ಇದ್ದರೆ ಮುಪ್ಪು ಶರವೇಗದಲ್ಲಿ ವ್ಯಾಪಿಸಿಕೊಳ್ಳುತ್ತದೆ. ಬೆಳಕು ಜ್ಞಾನದ ಸಂಕೇತ, ಜ್ಞಾನದ ಆಕರವಾಗಿರುವ ಈ ಬೆಳಕಿನಲ್ಲಿ ಪ್ರತಿಕ್ಷಣದಲ್ಲೂ ಏನಾದರೊಂದು ತಿಳಿಯುವ ತವಕ ನಮಗಿರಬೇಕು. ಒಡೆದ ಮುತ್ತು ಮತ್ತು ಕಳೆದ ಹೊತ್ತು ಎಂದಿಗೂ ಮರಳ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಜೀವನದಲ್ಲಿ ನಮಗೆ ಪ್ರಾಪ್ತವಾದ ಯೌವನವನ್ನು ವಿನಾ ಕಾರಣ ವ್ಯರ್ಥವಾಗಿ ಹಾಳುಮಾಡದೆ ತುಂಬು ಜೀವನದ ಸಾರ್ಥಕ ಬಾಳು ಬಾಳುವುದು ನಮ್ಮ ಆದರ್ಶವಾಗಬೇಕು. ಅದನ್ನು ಸಫಲಗೊಳಿಸಲು ಅವಿರತ ಹೋರಾಟದಲ್ಲಿ ತೊಡಗಬೇಕು ಆಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂಬುದು ಕವಿಯ ಆಶಯ.

Question 3.
‘ಬೆಳಗು ಜಾವ’ ಕವನದ ಮೂಲಕ ಕವಿ ಬೇಂದ್ರೆ ಹೇಳಿರುವ ವಿಚಾರಗಳಾವುವು?

Answer:
ಕವಿಯು ಆರಂಭದ ಸಾಲುಗಳಲ್ಲಿಯೇ ಬೆಳಕಿನ ಆಗಮನವನ್ನು ಸೊಗಸಾಗಿ ವಿವರಿಸುತ್ತಾ ಯುವ ಮನಸ್ಸುಗಳನ್ನು ಎಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ.ಪೂರ್ವ ದಿಕ್ಕು ಕಣ್ಣುತೆರೆದಿದೆ. ಕತ್ತಲು ದೂರವಾಗುತ್ತಿದೆ. ಬೆಳಕು ಬೇಟೆಗಾರ ಬಂದು ಜೇನ್ನೊಣದ ಹೆದೆಗೆ ಹೂಬಾಣವನ್ನು ಬಿಟ್ಟಿರುವನು. ಏಳಿ-ಎದ್ದೇಳಿ ಎಂದು ಕರೆ ಕೊಡುತ್ತಿದ್ದಾರೆ. ಮುಂಜಾವಿನ ಈ ಸೊಬಗಿಗೆ ಈ ಜಗವು ಸೋತಿದೆ. ಮಕ್ಕಳೇ ಬೇಗ ಎದ್ದು ಪೂರ್ಣವಾದ ಬಾಳನ್ನು ಸಾರ್ಥಕ ಮಾಡಿಕೊಳ್ಳಿ. ನಿದ್ದೆಯಿಂದ ಎಚ್ಚರಗೊಳ್ಳಿ ಎಂದಿದ್ದಾರೆ.

ಜೀವನದ ಅಂಗಡಿಯ ಕದವ ತೆರೆಯುವ ಕ್ಷಣ ಬಂದಾಯಿತು. ಯೌವನದ ರಸಕ್ಷಣಗಳನ್ನು ಪೂರ್ಣವಾಗಿ ಬಳಸಿಕೊಳ್ಳಿ ಕಾರ್ಯ ಪ್ರವೃತ್ತರಾಗಿ ಯಾವ ಕ್ಷಣದಲ್ಲೂ ಮರಣ ಬಂದೀತು. ಮತ್ತೆ ಜೀವನದ ಕಳೆದ ಕ್ಷಣಗಳು ಸಿಗಲಾರವು. ಜೀವನದ ಚೈತ್ರಕಾಲ ಯೌವನ, ಮುಪ್ಪು ಆವರಿಸಿದಾಗ, ಅದರ ಜೊತೆ ಚಿಂತೆಯೂ ಆವರಿಸಿ ಏನೂ ಮಾಡಲಾಗದು. ಹರೆಯವಿದ್ದಾಗಲೇ ಸಾಧನೆ ಮಾಡಿರೆಂದು ಕರೆ ನೀಡುತ್ತಿದ್ದಾರೆ.

Question 4.
ಬಾಳಿನ ಆಶಾಶ್ವತೆ ಮತ್ತು ಪ್ರಕೃತಿಯ ನಿತ್ಯನೂತನತೆಯ ಗುಣವನ್ನು ‘ಬೆಳಗು ಜಾವ’ ಕವನದಲ್ಲಿ ಕವಿ: ಹೇಗೆ ವಿವರಿಸಿದ್ದಾರೆ?

Answer:
ಕವಿ ಬೆಳಕು ಹರಿದಿರುವುದರ ಬಗ್ಗೆ ಎಚ್ಚರಿಕೆ ಮೂಡಿಸುತ್ತಾ, ಕೋಳಿ ಯಾವಾಗಲೋ ಕೂಗಿ ಆಯಿತು ಎದ್ದೇಳಿ ಇನ್ನೂ ಯಾಕೆ ತಡ ಮಾಡುತ್ತಿದ್ದೀರಿ? ಪಾನೀಯ ಕುಡಿಯುವುದಕ್ಕೆ ಏಳಿ ಎಂದಿದ್ದಾರೆ. ಅಂಗಡಿಯ ಬಾಗಿಲನ್ನು ತಡಮಾಡದೇ ಈ ಕ್ಷಣ ತೆರೆಯಲು ಹೇಳಿ ಎಂದಿದ್ದಾರೆ. ಜೀವನವೆಂಬ ನದಿಗೆ ನೂರಾರು ಸೆಳವುಗಳಿವೆ. ಯಾವ ಕ್ಷಣದಲ್ಲೂ ಮರಣವು ಬರಬಹುದು. ಮಡಿದವರು ಮತ್ತೆ ತಿರುಗಿ ಬಂದಾರೆ? ಖಂಡಿತ ಇಲ್ಲ. ಆದುದರಿಂದ ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಜೀವನದ ಆನಂದಮಯ ಕ್ಷಣಗಳನ್ನು ಮನಸಾರೆ ಅನುಭವಿಸಿ. ಆಲಸ್ಯವನ್ನು ದೂರಮಾಡಿ. ಆನಂದವನ್ನು ಹೊಂದಿ ಎನ್ನುತ್ತಿದ್ದಾರೆ.

ಬಾನು ಕಾಂತಿಯನ್ನು ಹೊಂದಬಹುದು. ಮರವು ಚಿಗುರಬಹುದು, ಸುಗ್ಗಿಯ ಕಾಲವೂ ಬರಬಹುದು. ಆದರೆ ಜೀವನದ (ಯೌವನ)ದ ಸುಗ್ಗಿಯ ಕಾಲ ಮತ್ತೆ ಬರಲು ಸಾಧ್ಯವೇ? ಖಂಡಿತಾ ಇಲ್ಲ. ಯೋಗ್ಯವಾದ ಯೋಚನೆಗಳಲ್ಲಿ ಚಿಂತನೆಗಳಲ್ಲಿ ಇಂದೇ ತೊಡಗಿ ಬಾಳನ್ನು ಸಾರ್ಥಕಪಡಿಸಿಕೊಳ್ಳಿ ಎಂದು ಕವಿ ಕಿವಿಮಾತನ್ನು ಹೇಳುವ ಮೂಲಕ ವಾಸ್ತವತೆಯ ಅರಿವು ಮೂಡಿಸುತ್ತಿದ್ದಾರೆ.

ಬೆಳಗು ಜಾವ
Summary

2nd PUC Kannada Chapter 7 Belagu Java
2nd PUC Kannada Chapter 7 Belagu Java

ಸಾರಾಂಶ:

ಕವಿಯು ಆರಂಭದ ಸಾಲುಗಳಲ್ಲಿಯೇ ಬೆಳಕಿನ ಆಗಮನವನ್ನು ಸೊಗಸಾಗಿ ವಿವರಿಸುತ್ತಾ ಯುವ ಮನಸ್ಸುಗಳನ್ನು ಎಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪೂರ್ವ ದಿಕ್ಕು ಕಣ್ಣು ತೆರೆದಿದೆ. ಕತ್ತಲು ದೂರವಾಗುತ್ತಿದೆ. ಬೆಳಕು ಬೇಟೆಗಾರ ಬಂದು ಜೇನ್ನೊಣದ ಹೆದೆಗೆ ಹೂಬಾಣವನ್ನು ಬಿಟ್ಟಿರುವನು, ಎಳಿ-ಎದ್ದೇಳಿ ಎಂದು ಕರೆ ಕೊಡುತ್ತಿದ್ದಾರೆ. ಮುಂಜಾವಿನ ಈ ಸೊಬಗಿಗೆ ಈ ಜಗವು ಸೋತಿದೆ. ಮಕ್ಕಳೇ ಬೇಗ ಎದ್ದು ಪೂರ್ಣವಾದ ಬಾಳನ್ನು ಸಾರ್ಥಕ ಮಾಡಿಕೊಳ್ಳಿ. ನಿದ್ದೆಯಿಂದ ಎಚ್ಚರಗೊಳ್ಳಿ ಎಂದಿದ್ದಾರೆ. ಜೀವನದ ಅಂಗಡಿಯ ಕದವ ತೆರೆಯುವ ಕ್ಷಣ ಬಂದಾಯಿತು. ಯೌವನದ ರಸ ಕ್ಷಣಗಳನ್ನು ಪೂರ್ಣವಾಗಿ ಬಳಸಿಕೊಳ್ಳಿ, ಕಾರ ಪ್ರವೃತ್ತರಾಗಿ. ಯಾವ ಕ್ಷಣದಲ್ಲೂ ಮರಣ ಬಂದೀತು. ಮತ್ತೆ ಜೀವನದ ಕಳೆದ ಕ್ಷಣಗಳು ಸಿಗಲಾರವು. ಜೀವನದ ಚೈತ್ರಕಾಲ ಯೌವನ, ಮುಪ್ಪು ಆವರಿಸಿದಾಗ, ಅದರ ಜೊತೆ ಚಿಂತೆಯೂ ಆವರಿಸಿ ಏನೂ ಮಾಡಲಾಗದು. ಹರೆಯವಿದ್ದಾಗಲೇ ಸಾಧನೆ ಮಾಡಿರೆಂದು ಕರೆ ನೀಡುತ್ತಿದ್ದಾರೆ.

ಕವಿ ಬೆಳಕು ಹರಿದಿರುವುದರ ಬಗ್ಗೆ ಎಚ್ಚರಿಕೆ ಮೂಡಿಸುತ್ತಾ, ಕೋಳಿ ಯಾವಾಗಲೋ ಕೂಗಿ ಆಯಿತು. ಎದ್ದೇಳಿ ಇನ್ನೂ ಯಾಕೆ ತಡ ಮಾಡುತ್ತಿದ್ದೀರಿ? ಪಾನೀಯ ಕುಡಿಯುವುದಕ್ಕೆ ಏಳಿ ಎಂದಿದ್ದಾರೆ. ಅಂಗಡಿಯ ಬಾಗಿಲನ್ನು ತಡಮಾಡದೇ ಈ ಕ್ಷಣ ತೆರೆಯಲು ಹೇಳಿ ಎಂದಿದ್ದಾರೆ. ಜೀವನವೆಂಬ ನದಿಗೆ ನೂರಾರು ಸೆಳವುಗಳಿವೆ. ಯಾವ ಕ್ಷಣದಲ್ಲೂ ಮರಣವು ಬರಬಹುದು. ಮಡಿದವರು ಮತ್ತೆ ತಿರುಗಿ ಬಂದಾರೆ? ಖಂಡಿತ ಇಲ್ಲ. ಆದುದರಿಂದ ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಜೀವನದ ಆನಂದಮಯ ಕ್ಷಣಗಳನ್ನು ಮನಸಾರೆ ಅನುಭವಿಸಿ ಆಲಸ್ಯವನ್ನು ದೂರಮಾಡಿ.

ಆನಂದವನ್ನು ಹೊಂದಿ ಎನ್ನುತ್ತಿದ್ದಾರೆ. ಬಾನು ಕಾಂತಿಯನ್ನು ಹೊಂದಬಹುದು.ಮರವು ಚಿಗುರಬಹುದು. ಸುಗ್ಗಿಯ ಕಾಲವೂ ಬರಬಹುದು. ಆದರೆ ಜೀವನದ (ಯೌವನ) ಸುಗ್ಗಿಯ ಕಾಲ ಮತ್ತೆ ಬರಲು ಸಾಧ್ಯವೇ? ಖಂಡಿತಾ ಇಲ್ಲ. ಯೋಗ್ಯವಾದ ಯೋಚನೆಗಳಲ್ಲಿ ಚಿಂತನೆಗಳಲ್ಲಿ ಇಂದೇ ತೊಡಗಿ ಬಾಳನ್ನು ಸಾರ್ಥಕಪಡಿಸಿಕೊಳ್ಳಿ ಎಂದು ಕವಿ ಕಿವಿಮಾತನ್ನು ಹೇಳುವ ಮೂಲಕ ವಾಸ್ತವತೆಯ ಅರಿವು ಮೂಡಿಸುತ್ತಿದ್ದಾರೆ.

Click Here to Download Belagu Java PDF Notes
Click Here to Watch Belagu Java Video

You cannot copy content of this page