2nd PUC Kannada Question and Answer – Habbali Avara Rasaballi
Looking for 2nd PUC Kannada textbook answers? You can download Chapter 6: Habbali Avara Rasaballi Questions and Answers PDF, Notes, and Summary here. 2nd PUC Kannada Kavyabhaga solutions follow the Karnataka State Board Syllabus, making it easier for students to revise and score higher in exams.
Karnataka 2nd PUC Kannada Textbook Answers—Reflections Chapter 6
Habbali Avara Rasaballi Questions and Answers, Notes, and Summary
2nd PUC Kannada Kavyabhaga Chapter 6
ಹಬ್ಬಲಿ ಅವರ “ರಸಬಳ್ಳಿ”
Habbali Avara Rasaballi

Scroll Down to Download Habbali Avara Rasaballi PDF
I. ಒಂದು ವಾಕ್ಯದಲ್ಲಿ ಉತ್ತರಿಸಿ.
Question 1.
ಉತ್ತಮರ ಗೆಳೆತನ ಹೇಗೆ ಇರಬೇಕು?
Answer:
ಉತ್ತಮರ ಗೆಳೆತನ ಬಂಗಾರದ ಪುತ್ಥಳಿಯಂತೆ ಇರಬೇಕು.
Question 2.
ಮಂದಿ ಮಕ್ಕಳೊಂದಿಗೆ ಹೇಗಿರಬೇಕು?
Answer:
ಮಂದಿ ಮಕ್ಕಳೊಂದಿಗೆ ಭಂದದಿಂದ ಹೊಂದಿಕೊಂಡಿರಬೇಕು.
Question 3.
ಎಂತಹ ನೆರೆಯವರು ಇರಬೇಕು?
Answer:
ಬುದ್ದಿವಂತರಾದ ನೆರೆಯವರು ಇರಬೇಕು.
Question 4.
ಸುಟ್ಟು ಸುಣ್ಣವಾದುದು ಯಾವುದು?
Answer:
ಕಷ್ಟವನ್ನು ಅನುಭವಿಸಿದ ದೇಹವು ಸುಟ್ಟು ಸುಣ್ಣವಾಗಿದೆ.
Question 5.
ವ್ಯಾಸಗಿ ದಿವಸಕ್ಕೆ ಯಾವ ಮರ ತಂಪು?
Answer:
ಬ್ಯಾಸಗಿ ದಿವಸಕ್ಕೆ ಬೇವಿನ ಮರ ತಂಪು.
Question 6.
ತಾಯಿಯನ್ನು ಯಾವುದಕ್ಕೆ ಹೋಲಿಸಲಾಗಿದೆ?
Answer:
ತಾಯಿಯನ್ನು ಜ್ಯೋತಿಗೆ ಹೋಲಿಸಲಾಗಿದೆ.
Question 7.
ಹೆಣ್ಣು ಮಕ್ಕಳ ದುಃಖವನ್ನು ಬಲ್ಲವರು ಯಾರು?
Answer:
ಹೆಣ್ಣು ಮಕ್ಕಳ ದುಃಖವನ್ನು ಬಲ್ಲವರು ಹೆತ್ತ ತಾಯಿ.
Question 8.
ತಾಯಿಯನ್ನು ಯಾವಾಗ ನೆನೆಯಬೇಕು?
Answer:
ಊರೆಲ್ಲ ಉಂಡು ಮಲಗುವಾಗ ಬೆಳ್ಳಿಚಿಕ್ಕಿ ಮೂಡುವಾಗ ತಾಯಿಯನ್ನು ನೆನೆಯಬೇಕು.
Question 9.
ಗರತಿಯು ಹಾಲುಂಡ ತವರಿಗೆ ಏನೆಂದು ಹರಸುತ್ತಾಳೆ?
Answer:
ತವರಿನ ರಸಬಳ್ಳಿ ಹೊಳೆದಂಡೆಯ ಕರಕಿಯ ಕುಡಿಯ ಹಾಗೆ ಹಬ್ಬಲಿ ಎಂದು ಗರತಿಯು ಹಾಲುಂಡ ತವರನ್ನು ಹರಸುತ್ತಾಳೆ.
II. ಎರಡು–ಮೂರು ವಾಕ್ಯಗಳಲ್ಲಿ ಉತ್ತರಿಸಿ.
Question 1.
ಬಡತನ ಹೇಗೆ ಬಯಲಾಯಿತು?
Answer:
ಬಡತನ ಬಂದಾಗ ಮಕ್ಕಳನ್ನು ಹೊಡೆಯಬಾರದು. ಮಕ್ಕಳಲ್ಲಿ ಬಡತನವನ್ನು ಮರೆಸುವ ಶಕ್ತಿ ಇದೆ. ಬಡತನವನ್ನು ಮರೆಸುತ್ತಾರೆ. ಮಕ್ಕಳು ಆಡುತ್ತಾ ಬಂದು ತೊಡೆಯ ಮೇಲೆ ಕುಳಿತುಕೊಂಡರೆ ಬಡತನವೆಲ್ಲ ಬಯಲಾಗುತ್ತದೆ. (ಕಡಿಮೆಯಾಗುತ್ತದೆ)
Question 2.
ಇದ್ದಷ್ಟು ಬುದ್ದಿಯನ್ನು ಹೇಗೆ ಕಳೆದುಕೊಳ್ಳುತ್ತಾರೆ?
Answer:
ನೆರೆಮನೆಯವರು ಬುದ್ದಿವಂತರಾಗಿರಬೇಕು. ಒಳ್ಳೆಯವರಾಗಿರಬೇಕು. ಇದ್ದರೆ ಈ ರೀತಿಯ ಮನೆಯವರು ಇರಬೇಕು.ಗಿಆಜ್ಞಾನಿಗಳು ಕುಲಗೇಡಿಗಳು ನೆರೆಮನೆಯವರಿದ್ದರೆ ಅವರ ಸಹವಾಸದಿಂದ ನಮ್ಮಲ್ಲಿರುವ ಒಳ್ಳೆಯ ಗುಣಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಬುದ್ಧಿಹೀನರಾಗಿ ಬದುಕಬೇಕಾಗುತ್ತದೆ. ಹೀಗೆ ಇದ್ದಷ್ಟು ಬುದ್ದಿಯನ್ನು ಕಳೆದುಕೊಳ್ಳುತ್ತಾರೆ.
Question 3.
ಹಿತ್ತಾಳೆಗಿಂತ ಬಲುಹೀನ ಯಾವುದು?
Answer:
ಉತ್ತಮರ ಗೆಳೆತನ ಪುತ್ಥಳಿ ಬಂಗಾರದಂತೆ. ಒಳ್ಳೆಯವರ ಗೆಳೆತನ ಆಮೂಲ್ಯವಾದುದು. ಹೀನರ ಗೆಳೆತನ ಮಾಡಿದರೆ ಹಿತ್ತಾಳೆಗಿಂತಲೂ ಬಲುಹೀನವಾಗಿರುತ್ತದೆ. ಕೆಟ್ಟವರ ಗೆಳೆತನಕ್ಕೆ ಯಾವ ಬೆಲೆಯೂ ಇರುವುದಿಲ್ಲ. ಆದ್ದರಿಂದ ಒಳ್ಳೆಯವರ ಸಹವಾಸ ಮಾಡಿ ಬಂಗಾರದಂತೆ ಇರಬೇಕು.
Question 4.
ಹಡೆದವ್ವನನ್ನು ಯಾವಾಗ ನೆನೆಯಬೇಕು?
Answer:
ಹಡೆದವ್ವನನ್ನು ಯಾವ ವೇಳೆಯಲ್ಲಾದರೂ, ಯಾವ ಹೊತ್ತಿನಲ್ಲಾದರೂ ನೆನೆಯಬಹುದು. ಎಷ್ಟು ಹೊತ್ತಿನಲ್ಲಾದರೂ ನೆನೆಯಬಹುದು.
ಊರೆಲ್ಲ ಉಂಡು ಮಲಗಿದಾಗ ರಾತ್ರಿಯಲ್ಲಿ ಬೆಳ್ಳಚಿಕ್ಕಿ ಮೂಡಿದಾಗ ತಾಯಿಯನ್ನು ನೆನೆಯಬೇಕು.
Question 5.
ಹಡೆದ ತಂದೆ-ತಾಯಿಯರ ಮಹತ್ವ ತಿಳಿಸಿರಿ.
Answer:
ಉಂಗುರ ಕಳೆದು ಹೋದರೆ ಮಾಡಿಸಬಹುದು. ಸೊಂಟಕ್ಕೆ ಹಾಕುವ ದಾರ ಮುರಿದರೆ ಮಾಡಿಸಬಹುದು. ಹೆಂಡತಿ ಸತ್ತು ಹೋದರೆ ಮತ್ತೊಂದು ಹೆಂಡತಿಯನ್ನು ತರಲು ಸಾಧ್ಯವಿದೆ. ಆದರೆ ನಮ್ಮನ್ನು ಹಡೆದಂಥ, ಸಾಕಿ ಸಲಹಿದಂಥ ತಂದೆ ತಾಯಿ ಎಲ್ಲಿಯೂ ಸಿಗಲು ಸಾಧ್ಯವಿಲ್ಲ. ಇದೇ ಹಡೆದ ತಂದೆ-ತಾಯಿಯರ ಮಹತ್ವ
III. ಸಂದರ್ಭ ಸಹಿತ ವಿವರಿಸಿ.
Question 1.
ಬಂಗಾರ ನಿನಗೆ ಸ್ಥಿರವಲ್ಲ.
Answer:
ಆಯ್ಕೆ: ಈ ಸಾಲನ್ನು ಹಬ್ಬಲಿ ಅವರ ರಸಬಳ್ಳಿ ಎಂಬ ಜನಪದ ಗೀತೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಶ್ರೀಮಂತಿಕೆ ಅಂದರೆ ಬಂಗಾರ ಶಾಶ್ವತವಾದ ವಸ್ತುವಲ್ಲ ಎನ್ನುವ ಸಂದರ್ಭವಿದು.
ವಿವರಣೆ: ಪ್ರಸ್ತುತ ಪದ್ಯದಲ್ಲಿ ಜನಪದರು ಶ್ರೀಮಂತಿಕೆಯು ಶಾಶ್ವತವಲ್ಲ ಎಂದಿದ್ದಾರೆ. ಬಂಗಾರದ ಬಳೆಯುಟ್ಟು ಬಡವರನ್ನು ಬೈಯಬಾರದು. ಬಂಗಾರ ಸ್ಥಿರವಲ್ಲ. ಮಧ್ಯಾಹ್ನದ ಬಿಸಿಲು ಹೊರಳಲು ತಡವಾಗುವುದಿಲ್ಲ. ಹಾಗೆಯೇ ಶ್ರೀಮಂತಿಕೆಯೂ ಕೂಡ ಹೊರಟುಹೋಗಬಹದು. ಶ್ರೀಮಂತಿಕೆಯ ಅಹಂ ಇರಬಾರದು ಎನ್ನುವಾಗ ಈ ಸಾಲು ಬಂದಿದೆ.
Question 2.
ಹಿತ್ತಾಳೆಗಿಂತ ಬಲುಹೀನ
Answer:
ಆಯ್ಕೆ: ಈ ಸಾಲನ್ನು ಹಬ್ಬಲಿ ಅವರ ರಸಬಳ್ಳಿ ಎಂಬ ಜನಪದ ಗೀತೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಹೀನರ ಗೆಳೆತನ ಮಾಡಿದಾಗ ಉಂಟಾಗುವ ಸ್ಥಿತಿಯನ್ನು ಕುರಿತಾಗಿ ಹೇಳುವಾಗ ಈ ಸಾಲು ಬಂದಿದೆ.
ವಿವರಣೆ: ನಾವು ಉತ್ತಮರ ಸ್ನೇಹವನ್ನು ಮಾಡಬೇಕು. ಉತ್ತಮರ ಸ್ನೇಹದಿಂದ ನಮ್ಮ ವ್ಯಕ್ತಿತ್ವ ಪುಟಕ್ಕಿಟ್ಟ ಚಿನ್ನದಂತಾಗುತ್ತದೆ. ಉತ್ತಮರ ಗೆಳೆತನ ಪುತ್ಥಳಿ ಬಂಗಾರದಂತೆ. ಕೆಟ್ಟವರ ಗೆಳೆತನಕ್ಕೆ ಯಾವ ಬೆಲೆಯೂ ಇರುವುದಿಲ್ಲ, ಬಂಗಾರ ಉತ್ತಮ. ಬಂಗಾರಕ್ಕೆ ಹೋಲಿಸಿದರೆ ಹಿತ್ತಾಳೆ ಹೀನ ಎಂಬ ಭಾವನೆ ಇದೆ. ಒಂದು ವೇಳೆ ನಾವು ಹೀನರ ಗೆಳೆತನ ಮಾಡಿದರೆ ಹಿತ್ತಾಳೆಗಿಂತಲೂ ಬಲುಹೀನವಾಗಿರುತ್ತದೆ. ಎನ್ನುವ ಸಂದರ್ಭವಿದು.
Question 3.
ನೀ ತಂಪ ನನ್ನ ತವರೀಗೆ
Answer:
ಆಯ್ಕೆ : ಈ ಸಾಲನ್ನು ಹಬ್ಬಲಿ ಅವರ ರಸಬಳ್ಳಿ ಎಂಬ ಜನಪದ ಗೀತೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಹೆತ್ತ ತಾಯಿ ತವರಿನಲ್ಲಿದ್ದಾಗ ಗರತಿಗೆ ಹಿತವಾದ ತಂಪಿನ ಅನುಭವವಾಗುತ್ತದೆ ಎನ್ನುವಾಗ ಈ ಸಾಲು ಬಂದಿದೆ.
ವಿವರಣೆ : ಗರತಿಗೆ ತವರು ಮನೆಯೇ ಅತ್ಯಂತ ತಂಪಾಗಿರುತ್ತದೆ.ಬೇಸಿಗೆಯಲ್ಲಿ ಬಳಲಿ ಬಂದವರಿಗೆ ಬೇವಿನ ಮರವು ತಂಪನ್ನು ನೀಡುತ್ತದೆ.ಭೀಮಾನದಿಯು ತಂಪನ್ನು ನೀಡುತ್ತದೆ. ಇಲ್ಲಿ ಗರತಿಗೆ ತಾಯಿಯೇ ತಂಪಾಗಿದ್ದಾಳೆ. ತವರಿನಲ್ಲಿ ತಾಯಿಯಿದ್ದರೆ ತವರುಮನೆ ತಂಪಾಗಿರುವುದು ಎಂಬುದು ಇಲ್ಲಿನ ಆಶಯವಾಗಿದೆ.
Question 4.
ಜ್ಯೋತಿ ನಿನ್ನಾರ ಹೋಲಾರ
Answer:
ಆಯ್ಕೆ: ಈ ಸಾಲನ್ನು ಹಬ್ಬಲಿ ಅವರ ರಸಬಳ್ಳಿ ಎಂಬ ಜನಪದ ಗೀತೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ : ತನ್ನ ತಾಯಿಗೆ ಸರಿಸಮವಾಗಿ ಯಾರನ್ನು ಹೋಲಿಸಲು ಆಗುವುದಿಲ್ಲ ಆಕೆಯೇ ಶ್ರೇಷ್ಠ ಎನ್ನುವ ಸಂದರ್ಭವಿದು.
ವಿವರಣೆ : ತನ್ನ ಬದುಕಿನಲ್ಲಿ ಎಷ್ಟು ಜನ ಬಂದು ಹೋದರೂ ಸಹ ಹೆತ್ತ ತಾಯಿಗೆ ಸರಿಸಮಾನರಾದವರು ಯಾರು ಸಿಗಲಾರರು.ಸಾವಿರ ಕೊಳ್ಳಿ ಒಲೆಯಲ್ಲಿ ಉರಿಯುತ್ತಿದ್ದರೂ ಜ್ಯೋತಿಯಷ್ಟು ಪ್ರಕಾಶಮಾನವಾದ ಬೆಳಕನ್ನು ನೀಡುವುದಿಲ್ಲ.ಸಾವಿರಾರು ಮಂದಿ ಇದ್ದರೂ ಅವರೊಳಗೆ ಹೆತ್ತತಾಯಿಯೇ ಜ್ಯೋತಿಯಂತೆ. ಅವಳನ್ನು ಯಾರಿಗೂ ಹೋಲಿಸಲು ಆಗುವುದಿಲ್ಲ ಎಂದು ತಾಯಿಯ ಮಹತ್ವವನ್ನು ಹೇಳಲಾಗಿದೆ.
Question 5.
ಭಾಳ ಮರುಗ್ಯಾಳ ಮನದಾಗ
Answer:
ಆಯ್ಕೆ : ಈ ಸಾಲನ್ನು ಹಬ್ಬಲಿ ಅವರ ರಸಬಳ್ಳಿ ಎಂಬ ಜನಪದ ಗೀತೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಮಕ್ಕಳು ತಾಯಿಯನ್ನು ಬೈದರೆ ತಾಯಿಯ ಅಂತಃಕರಣ ನೊಂದುಕೊಳ್ಳುತ್ತದೆ ಎಂದು ಹೆದ್ದೂಬ್ಬಳು ತನ್ನ ತಮ್ಮನಿಗೆ ಬುದ್ದಿ ಹೇಳುವ ಸಂದರ್ಭವಿದು.
ವಿವರಣೆ: ತಾಯಿಯನ್ನು ನಿಂದಿಸುವ ತನ್ನ ತಮ್ಮನಿಗೆ ಹೆಣ್ಣೂಬ್ಬಳು ಬುದ್ದಿ ಹೇಳುತ್ತಾಳೆ, ತಿಳಿಗೇಡಿ ನನ್ನ ತಮ್ಮ ಹೆತ್ತ ತಾಯಿಯನ್ನು ನಿಂದಿಸಬೇಡ.ಅವಳು ಬಹಳ ದಿನದವಳು.ಹಿರಿಯವಳು. ಹಡೆದವ್ವನನ್ನು ಬೈದರೆ ಮನಸ್ಸಿನಲ್ಲಿ ಬಹಳ ನೊಂದುಕೊಳ್ಳುತ್ತಾಳೆ. ಮನದೊಳಗೆ ನೋವು ಪಡುತ್ತಾಳೆ.ಹಾಗಾಗಿ ನೀನು ಅವಳನ್ನು ಬೈಬೇಡ ಎಂದು ಹೇಳುವ ಸಂದರ್ಭದಲ್ಲಿ ಈ ಸಾಲು ಬರುತ್ತದೆ.
Question 6.
ತಾಯಿ ಇಲ್ಲದ ತವರಿಗೆ ಹೋಗದಿರು ನನಮನವೆ
Answer:
ಆಯ್ಕೆ : ಈ ಸಾಲನ್ನು ಹಬ್ಬಲಿ ಅವರ ರಸಬಳ್ಳಿ ಎಂಬ ಜನಪದ ಗೀತೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ತಾಯಿ ಇಲ್ಲದ ತವರಿಗೆ ಹೋಗಬಾರದು ಎಂದು ಹೆಣ್ಣೂಬ್ಬಳು ತನ್ನ ಮನಸ್ಸಿಗೆ ಹೇಳುವ ಸಂದರ್ಭವಿದು.
ವಿವರಣೆ : ತಾಯಿ ತವರು ಎರಡೂ ಹೆಣ್ಣು ಮಕ್ಕಳಿಗೆ ಇಷ್ಟ, ತಾಯಿ ಇದ್ದಾಗ ತವರಿಗೆ ಒಂದು ಅರ್ಥ. ತಾಯಿ ಇಲ್ಲದ ತವರಿಗೆ ಹೆಣ್ಣು ಹೋಗಬಾರದು. ಹೋದರೆ ಅಲ್ಲಿ ಅವಳಿಗೆ ಸರಿಯಾದ ಸ್ಥಾನಮಾನ ಸಿಗುವುದಿಲ್ಲ. ಹೇಗೆ ನೀರು ಇಲ್ಲದ ಕೆರೆಗೆ ಕರು ನೀರು ಕುಡಿಯಲು ಬಂದು ದುಃಖಪಡುತ್ತದೆಯೋ ಹಾಗೆ ಆಗುತ್ತದೆ. ಗರತಿಗೆ ತಾಯಿ ಇಲ್ಲದ ತವರು ಮನೆಯು ದುಃಖವನ್ನು ಉಂಟು ಮಾಡುತ್ತದೆ. ಹಾಗಾಗಿ ಹೆಣ್ಣೂಬ್ಬಳು ತನ್ನ ಮನಸ್ಸಿಗೆ ಹೀಗೆ ಹೇಳುತ್ತಾಳೆ.
Question 7.
ಹಬ್ಬಲಿ ಅವರ ರಸಬಳ್ಳಿ
Answer:
ಆಯ್ಕೆ : ಈ ಸಾಲನ್ನು ಹಬ್ಬಲಿ ಅವರ ರಸಬಳ್ಳಿ ಎಂಬ ಜನಪದ ಗೀತೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಹೆಣ್ಣು ತನ್ನ ತವರಿಗೆ ಶುಭವನ್ನು ಹಾರೈಸುವ ಸಂದರ್ಭವಿದು.
ವಿವರಣೆ : ಇದು ಪದ್ಯದ ಶೀರ್ಷಿಕೆಯೂ ಕೂಡ ಹೌದು. ಹಾಲು ಕುಡಿದು ಬೆಳೆದ ತವರಿಗೆ ಏನೆಂದು ಹಾಡಲಿ ಎಂದು ಹೆಣ್ಣುಮಗಳು ತನ್ನನ್ನು ಪ್ರಶ್ನಿಸಿಕೊಳ್ಳುತ್ತಾಳೆ. ತನ್ನ ತವರಿನ ಮನೆಯ ವಂಶ ಇನ್ನಷ್ಟು ಬೆಳೆಯಬೇಕು. ಅದು ಹೇಗೆ ಹಬ್ಬಬೇಕು ಎಂದರೆ ಹೊಳೆಯ ದಂಡೆಯಲ್ಲಿರುವ ಕರಕೀಯ ಕುಡಿಯ ಹಾಗೆ ಹಬ್ಬಬೇಕು. ತನ್ನ ತವರಿನ ರಸಬಳ್ಳಿ ಎಲ್ಲಾ ಕಡೆ ಹಬ್ಬಬೇಕು ಎಂದು ಮನದುಂಬಿ ಹಾರೈಸುವ ಸಂದರ್ಭದಲ್ಲಿ ಈ ಸಾಲು ಬರುತ್ತದೆ.
IV. ಐದಾರು ವಾಕ್ಯಗಳಲ್ಲಿ ಉತ್ತರಿಸಿ.
Question 1.
‘ಬಂಗಾರ ನಿನಗೆ ಸ್ಥಿರವಲ್ಲ’ ಎಂಬ ಮಾತಿನ ಸ್ವಾರಸ್ಯವನ್ನು ವಿವರಿಸಿರಿ.
Answer:
ಬಡತನ ಸಿರಿತನ ಯಾವುದೂ ಶಾಶ್ವತವಲ್ಲ ಎಂದು ಜನಪದರು ತಿಳಿಸಿದ್ದಾರೆ. ಮನುಷ್ಯ ಬಂಗಾರವನ್ನು ಮೈ ಮೇಲೆ ಹೇರಿಕೊಂಡು ಬಡವರನ್ನು, ಅವರ ಆಸಹಾಯಕತೆಯನ್ನು ಅಣಕಿಸಿ ಬೀಗುತ್ತಾನೆ. ಆದ್ದರಿಂದಲೆ ಜನಪದರು ‘ಬಂಗಾರ ನಿನಗೆ ಸ್ಥಿರವಲ್ಲ’ ಎಂದಿದ್ದಾರೆ. ಸಿರಿತನ ಬಂಗಾರ ಇವೆಲ್ಲವೂ ದೊರೆತಷ್ಟೇ ವೇಗವಾಗಿ ನಮ್ಮಿಂದ ದೂರವಾಗುತ್ತದೆ. ಬಡತನ ಬರಲೂಬಹುದು. ಬಂಗಾರದ ಬಳೆಯುಟ್ಟು ಬಡವರನ್ನು ಬೈಯಬಾರದು. ಶ್ರೀಮಂತಿಕೆಯ ಮದ ಇರಬಾರದು. ಶ್ರೀಮಂತಿಕೆಯು ಶಾಶ್ವತವಲ್ಲ ಎಂದಿದ್ದಾರೆ. ಮಧ್ಯಾಹ್ನದ ಬಿಸಿಲು ಹೊರಳಲು ತಡವಾಗುವುದಿಲ್ಲ.
ಮಧ್ಯಾಹ್ನದ ಬಿಸಿಲು ಹೊರಳಿದ ಹಾಗೆಯೇ ಶ್ರೀಮಂತಿಕೆಯೂ ಕೂಡ ಹೊರಟು ಹೋಗಬಹುದು. ಶ್ರೀಮಂತಿಕೆಯ ಅಹಂ ಇರಬಾರದು ಎಂದಿದ್ದಾರೆ. ಸಿರಿತನ ಬಂದಾಗ ಬೀಗದೆ ಜಂಭದಿಂದ ವರ್ತಿಸದೆ, ಎಲ್ಲರೊಂದಿಗೆ ಪ್ರೀತಿ-ಸಾಮರಸ್ಯದಿಂದ ಬಾಳುವುದು ಮುಖ್ಯ ಎಂಬುದನ್ನು ‘ಬಂಗಾರ ನಿನಗೆ ಸ್ಥಿರವಲ್ಲ’ ಎಂಬ ಮಾತಿನ ಮೂಲಕ ಹೇಳಿದ್ದಾರೆ.
Question 2.
ಜನಪದರು ಹೇಳುವಂತೆ ನಮ್ಮ ನೆರೆಹೊರೆ ಹೇಗಿರಬೇಕು? ವಿವರಿಸಿರಿ.
Answer:
ಜನಪದ ಗೀತ ಪ್ರಕಾರ ತುಂಬಾ ಜನಪ್ರಿಯವಾದುದು, ತಿಪದಿಯಲ್ಲಿ ನೆರೆಹೊರೆಯ ಸಂಬಂಧದ ಕುರಿತಾಗಿ ಹೇಳಲಾಗಿದೆ. ಮಾನವ ಸಮಾಜ ಜೀವಿ, ಸಮಾಜ ಜೀವಿಯಾದ ಮಾನವ ನೆರೆಹೊರೆಯವರೊಂದಿಗೆ ಸೇರಿ ಬದುಕಬೇಕಾಗುತ್ತದೆ. ನೆರೆಹೊರೆಯವರಿಂದ ಸಹಾಯ ತೆಗೆದುಕೊಂಡು ಒಬ್ಬರನ್ನೊಬ್ಬರು ಪ್ರೀತಿ ವಿಶ್ವಾಸದಿಂದ ಅನ್ನೋನ್ಯತೆಯಿಂದ ಬದುಕಿದರೆ ಬಾಳು ಹಿತಕರವಾಗಿರುತ್ತದೆ.
ನೆರೆಮನೆಯವರು ಬುದ್ಧಿವಂತರಾಗಿರಬೇಕು. ಒಳ್ಳೆಯವರಾಗಿರಬೇಕು. ಇದ್ದರೆ ಈ ರೀತಿಯ ಮನೆಯವರು ಇರಬೇಕು. ಆಜ್ಞಾನಿಗಳು ಕುಲಗೇಡಿಗಳು ನೆರೆಮನೆಯವರಿದ್ದರೆ ಅವರ ಸಹವಾಸದಿಂದ ನಮ್ಮಲ್ಲಿರುವ ಒಳ್ಳೆಯ ಗುಣಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಬುದ್ಧಿಹೀನರಾಗಿ ಬದುಕಬೇಕಾಗುತ್ತದೆ. ಆದ್ದರಿಂದ ನಾವು ವಾಸಿಸುವ ಪರಿಸರದಲ್ಲಿ ಬುದ್ಧಿವಂತರ ನೆರೆಯಿರುವುದು ಮುಖ್ಯವೆಂದು ಜನಪದರು ಹೇಳಿದ್ದಾರೆ.
Question 3 .
ಹೆಣ್ಣುಮಕ್ಕಳ ದುಃಖವನ್ನು ಬಲ್ಲವರು ಯಾರು? ಹೇಗೆ?
Answer:
ಜನಪದ ಸಾಹಿತ್ಯದಲ್ಲಿ ತ್ರಿಪದಿಯು ಪದ್ಯ ಪ್ರಕಾರಕ್ಕೆ ಸಂಬಂದಿಸಿದುದಾಗಿದೆ. ಜನಪದ ಗೀತ ಪ್ರಕಾರ ತುಂಬಾ ಜನಪ್ರಿಯವಾದುದು. ತ್ರಿಪದಿಗಳಲ್ಲಿ ತವರು ಮನೆಯ ತಣ್ಣನೆಯ ನೆನಪಿದೆ. ಇದರೊಳಗೆ ತಾಯಿಯ ರೂಪ-ಸ್ವರೂಪ, ತೋರಿದ ಪ್ರೀತಿಯಿದೆ. ಹೆಣ್ಣುಮಕ್ಕಳ ದುಃಖ ಅರ್ಥವಾಗುವುದು ಹೆತ್ತ ತಾಯಿಗೆ, ಏಕೆಂದರೆ ಆಕೆಯೂ ಒಬ್ಬ ಹೆಣ್ಣು. ತನ್ನ ಮಗಳು ಅನುಭವಿಸುವ ಕಷ್ಟ ನೋವುಗಳನ್ನು ಸ್ವಾನುಭವದಿಂದ ಅರಿಯಬಲ್ಲಳು. ಮತ್ತು ಸಹಾನುಭೂತಿಯಿಂದ ಕಾಣುವ ಕಣ್ಣು ಅವಳದಾಗಿದೆ.
ಹೆಣ್ಣಿನ ಬಗ್ಗೆ ಮನೆಯ ಬೇರೆ ಯಾರಿಗೂ ಅರ್ಥವಾಗದೇ ಇರುವುದು ತಾಯಿಗೆ ಅರ್ಥವಾಗುತ್ತದೆ. ಹಡೆದ ತಾಯಿ ಮಾತ್ರ ಮಗಳ ನೋವನ್ನು ತಿಳಿದುಕೊಳ್ಳಬಲ್ಲಳು. ಹುತ್ತದ ಮೇಲಿರುವ ಸರ್ಪದ ಬೇಗೆ ಅರ್ಥವಾಗುವುದು ಅದನ್ನು ಹೊತ್ತಿರುವ ಶಿವನಿಗೆ ಮಾತ್ರ. ಅದರಂತೆಯೇ ಹೆಣ್ಣನ್ನು ಹೆತ್ತ ತಾಯಿಗೆ ಮಾತ್ರ ಹೆಣ್ಣುಮಕ್ಕಳ ದುಃಖದ ಅರಿವಾಗುತ್ತದೆ. ಹೆಣ್ಣುಮಕ್ಕಳ ದುಃಖವನ್ನು, ಅಂತರಂಗವನ್ನು ಗ್ರಹಿಸುವ ಶಕ್ತಿ ತಾಯಿಗೆ ಮಾತ್ರ ಇರುತ್ತದೆ.
Question 4.
ಗರತಿ ತವರಿಗೆ ಏನೆಂದು ಹರಸುತ್ತಾಳೆ?
Answer:
ಜನಪದಗೀತ ಪ್ರಕಾರ ತುಂಬಾ ಜನಪ್ರಿಯವಾದುದು. ತ್ರಿಪದಿಗಳಲ್ಲಿ ತವರು ಮನೆಯ ತಣ್ಣನೆಯ ನೆನಪಿದೆ. ಇದರೊಳಗೆ ತಾಯಿಯ ರೂಪ-ಸ್ವರೂಪ, ತೋರಿದ ಪ್ರೀತಿಯಿದೆ. ಜನಪದ ಲೋಕದ ಸುತ್ತೆಲ್ಲ ಇಂತಹ ಸಂಸ್ಕೃತಿ ಬಿತ್ತರಿಸುವ ಹಾಡು-ಪಾಡಿನೊಂದಿಗೆ ತಾಯಿ ಮತ್ತು ತವರಿನ ಬಗೆಗಿನ ಪ್ರೀತಿ ಇಲ್ಲಿ ಅಭಿವ್ಯಕ್ತಗೊಂಡಿದೆ. ಗರತಿಗೆ ತವರು ಮನೆಯೆಂದರೆ ಅತ್ಯಂತ ಪ್ರೀತಿ. ಆಕೆ ಗಂಡನ ಮನೆಯಲ್ಲಿದ್ದರೂ ಯಾವಾಗಲೂ ತವರು ಮನೆಯನ್ನು ಹರಸುತ್ತಾಳೆ. ಒಳ್ಳೆಯದನ್ನು ಬಯಸುತ್ತಾಳೆ. ಪಾಲುಂಡ ತವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾಳೆ.
ಹಾಲು ಉಂಡು ಬೆಳೆದು ದೊಡ್ಡವಳಾದ ಗರತಿಯು ಹಾಲುಂಡ ತವರನ್ನು ಎಷ್ಟು ಹೊಗಳಿದರೂ ಸಾಲದು. ಹಾಲು ಕುಡಿದು ಬೆಳೆದ ತವರಿಗೆ ಏನೆಂದು ಹಾಡಲಿ ಎಂದು ಹೆಣ್ಣುಮಗಳು ತನ್ನನ್ನು ಪ್ರಶ್ನಿಸಿಕೊಳ್ಳುತ್ತಾಳೆ. ತನ್ನ ತವರಿನ ಮನೆಯ ವಂಶ ಇನ್ನಷ್ಟು ಬೆಳೆಯಬೇಕು. ಅದು ಹೇಗೆ ಹಬ್ಬಬೇಕು ಎಂದರೆ ಹೊಳೆಯ ದಂಡೆಯಲ್ಲಿರುವ ಕರಕೀಯ ಕುಡಿಯ ಹಾಗೆ ಹಬ್ಬಬೇಕು. ತನ್ನ ತವರಿನ ರಸಬಳ್ಳಿ ಎಲ್ಲಾ ಕಡೆ ಹಬ್ಬಬೇಕು ಎಂದು ಮನದುಂಬಿ ಗರತಿ ಹಾರೈಸುತ್ತಾಳೆ.
ಹಬ್ಬಲಿ ಅವರ “ರಸಬಳ್ಳಿ” – ಜನಪದ
Summary
“ರಸಬಳ್ಳಿ” ಎಂಬ ಕಾವ್ಯದಲ್ಲಿ ಹಬ್ಬಲಿ ಅವರು ಜನಪದ ತ್ರಿಪದಿಗಳ ಮೂಲಕ ತಾಯಿ-ತವರು, ಬಡತನ-ಶ್ರೀಮಂತಿಕೆ, ಸಮಾಜದ ಮೌಲ್ಯಗಳು, ವಾತ್ಸಲ್ಯ, ಮೌಲಿಕ ನೈತಿಕತೆ ಮತ್ತು ಜೀವನದ ತತ್ವಗಳನ್ನು ಅತ್ಯಂತ ಸರಳವಾದ ಭಾಷೆಯಲ್ಲಿ ತುಂಬಾ ಪ್ರಾಮಾಣಿಕವಾಗಿ ಮತ್ತು ಹೃದಯಸ್ಪರ್ಶಿಯಾಗಿ ಅಭಿವ್ಯಕ್ತಿಸಿದ್ದಾರೆ.
ಈ ತ್ರಿಪದಿಗಳಲ್ಲಿ:
- ಶ್ರೀಮಂತಿಕೆ ಅಶಾಶ್ವತ ಎಂಬುದನ್ನು ನೆನಪಿಸುತ್ತಾ, ಬಡವರನ್ನು ನಿಂದಿಸಬಾರದು ಎಂಬ ಬುದ್ಧಿವಾದವಿದೆ.
- ಬಡತನದ ನಡುವೆ ಮಕ್ಕಳ ಮುದ್ದು ವಾತ್ಸಲ್ಯ ಹೇಗೆ ತಾತ್ಕಾಲಿಕವಾಗಿ ನೋವನ್ನು ಮರೆಮಾಡುತ್ತದೆ ಎಂಬುದು ಚಿತ್ರಿಸಲಾಗಿದೆ.
- ಉತ್ತಮರ ಗೆಳೆಯರಾಗಿರಬೇಕು, ದುಷ್ಟರ ಜೊತೆ ಸಹವಾಸದಿಂದ ಬುದ್ಧಿ ಹಾಳಾಗುತ್ತದೆ ಎಂಬ ನೈತಿಕ ಬೋಧನೆ ನೀಡಲಾಗಿದೆ.
- ತಾಯಿಯ ಮಹತ್ವ ಮತ್ತು ವಾತ್ಸಲ್ಯ – ತಾಯಿಯ ಕಣ್ಣೆಂಜಲು, ಬಾಯೆಂಜಲು, ಪ್ರೀತಿ ಎಲ್ಲವನ್ನೂ ಬಣ್ಣಿಸಲಾಗಿದೆ.
- ತಾಯಿಯಿಲ್ಲದ ತವರು ನೀರಿಲ್ಲದ ಕೆರೆಗಿಂತ ದುಃಖಕರವೆಂದು ವರ್ಣಿಸಲಾಗಿದೆ.
- ತಂದೆ-ತಾಯಿಗಳು ಬದಲಾಗದ, ಮಾರಲಾಗದ ವಿಲಕ್ಷಣ ವ್ಯಕ್ತಿತ್ವಗಳೆಂದು ತಿಳಿಸಲಾಗಿದೆ.
- ಅಂತಿಮ ತ್ರಿಪದಿ ತವರಿಗಾಗಿ ಹೃದಯದಿಂದ ಹಾರೈಸುವ ಮಗಳ ಮನೋಭಾವವನ್ನೂ ತೋರಿಸುತ್ತದೆ.
ಮೊತ್ತಮೊದಲಾಗಿ, ಈ ತ್ರಿಪದಿಗಳು ಗ್ರಾಮೀಣ ಜೀವನದ ಸರಳತೆ, ಪ್ರಾಮಾಣಿಕತೆ ಮತ್ತು ದೈವಿಕ ನಂಬಿಕೆಯ ಪ್ರತೀಕವಾಗಿವೆ. ತಾಯಿ, ತವರು, ಮೌಲ್ಯಗಳು, ಸ್ನೇಹ, ಮಾನವೀಯತೆ, ಮತ್ತು ನೈತಿಕ ಜೀವನ ಶೈಲಿಯ ಬಗ್ಗೆ ಜನಪದರು ಹೆಣೆದ ಈ ಕವನಗಳು ಶಾಶ್ವತವಾದ ಜೀವನಪಾಠಗಳನ್ನು ಸಾರುತ್ತವೆ.