2nd PUC Kannada Question and Answer – Jaliya Maradante
Looking for 2nd PUC Kannada textbook answers? You can download Chapter 5: Jaliya Maradante Questions and Answers PDF, Notes, and Summary here. 2nd PUC Kannada Kavyabhaga solutions follow the Karnataka State Board Syllabus, making it easier for students to revise and score higher in exams.
Karnataka 2nd PUC Kannada Textbook Answers—Reflections Chapter 5
Jaliya Maradante Questions and Answers, Notes, and Summary
2nd PUC Kannada Kavyabhaga Chapter 5
ಜಾಲಿಯ ಮರದಂತೆ
Jaliya Maradante

Scroll Down to Download Jaliya Maradante PDF
I. ಒಂದು ವಾಕ್ಯದಲ್ಲಿ ಉತ್ತರಿಸಿ:
Question 1.
ಜಾಲಿಯ ಮರದಂತಿರುವವರು ಯಾರು?
Answer:
ಜಾಲಿಯ ಮರದಂತಿರುವವರು ದುರ್ಜನರು.
Question 2.
ಯಾರಿಗೆ ನೆರಳು ಸಿಗುವುದಿಲ್ಲ?
Answer:
ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳು ಸಿಗುವುದಿಲ್ಲ.
Question 3.
ಜಾಲಿಯ ರಸಸ್ವಾದ ಹೇಗಿರುತ್ತದೆ?
Answer:
ಜಾಲಿಯ ರಸಸ್ವಾದ ವಿಷದಂತಿರುತ್ತದೆ.
Question 4.
ದುರ್ಗಂಧ ಬಿಡದಿರುವುದು ಯಾವುದು?
Answer:
ದುರ್ಗಂಧ ಬಿಡದಿರುವುದು ಊರಹಂದಿ.
Question 5.
ಯಾವ ಮಾತಿಗೆ ಕೊನೆಯಿಲ್ಲವೆಂದು ಪುರಂದರದಾಸರು ಹೇಳಿದ್ದಾರೆ?
Answer:
ಬಿನ್ನಾಣದ ಮಾತಿಗೆ ಕೊನೆಯಿಲ್ಲವೆಂದು ಪುರಂದರದಾಸರು ಹೇಳಿದ್ದಾರೆ.
Question 6.
ಜಾಲಿಯ ಮುಳ್ಳು ಹೇಗೆ ಆವರಿಸಿರುತ್ತದೆ?
Answer:
ಜಾಲಿಯ ಮುಳ್ಳು ಮೂಲಾಗ್ರ ಪರಿಯಂತ ಆವರಿಸಿರುತ್ತದೆ.
Question 7.
ತತ್ವಜ್ಞಾನವನ್ನು ಕೇಳದವರಾರು?
Answer:
ಘೋರಪಾಪಿಗಳು ತತ್ವಜ್ಞಾನವನ್ನು ಕೇಳುವುದಿಲ್ಲ.
II. ಎರಡು–ಮೂರು ವಾಕ್ಯಗಳಲ್ಲಿ ಉತ್ತರಿಸಿ:
Question 1.
ಜಾಲಿಯ ಮರದ ನಿರರ್ಥಕತೆಯನ್ನು ಪುರಂದರದಾಸರು ಹೇಗೆ ತಿಳಿಸಿದ್ದಾರೆ?
Answer:
ಜಾಲಿಯ ಮರವು ಮೂಲಾಗ್ರ ಪರಿಯಂತ ಮುಳ್ಳಿನಿಂದ ಕೂಡಿರುತ್ತದೆ. ಅದು ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳನ್ನು ನೀಡುವುದಿಲ್ಲ. ಹಸಿದು ಬಂದವರಿಗೆ ಹಣ್ಣನ್ನು ಒದಗಿಸುವುದಿಲ್ಲ. ಹೂವಿನಲ್ಲಿ ಸುವಾಸನೆಯಿಲ್ಲ, ಕುಳಿತುಕೊಳ್ಳಲು ಸ್ಥಳವಿಲ್ಲ. ಅದರ ರಸಸ್ವಾದ ಮಾಡಿದರೆ ವಿಷದಂತಿರುತ್ತದೆ ಎಂದು ಪುರಂದರದಾಸರು ಜಾಲಿಯ ಮರದ ನಿರರ್ಥಕತೆಯನ್ನು ತಿಳಿಸಿದ್ದಾರೆ. ಅದೇ ರೀತಿಯಲ್ಲಿ ದುರ್ಜನರು ಕೂಡ ಜಾಲಿಯ ಮರದಂತೆ ನಿಷ್ಟ್ರಯೋಜಕರು ಎಂಬುದು ದಾಸರ ನಿಲುವು.
Question 2.
ಯಾರಿಗೆ ಷಡ್ರಾಸಾನ್ನವನಿಕ್ಕಿ ಉಪಯೋಗವಿಲ್ಲ? ಏಕೆ?
Answer:
ಪುರಂದರದಾಸರು ತಮ್ಮ ಕೀರ್ತನೆಯಲ್ಲಿ, ಊರಹಂದಿಗೆ ಪಡ್ತಾಸಾನವನಿಕ್ಕಿ ಉಪಯೋಗವಿಲ್ಲ ವೆಂದಿದ್ದಾರೆ. ಏಕೆಂದರೆ ಊರಹಂದಿಗೆ, ಆರು ರುಚಿ ಅಡಕವಾಗಿರುವ ಷಡ್ತಾಸಾನ್ನವನ್ನು ನೀಡಿದರೂ ಅದು ತನ್ನ ನಾರುವ ದುರ್ಗಂಧವನ್ನು ಎಂದಿಗೂ ಬಿಡುವುದಿಲ್ಲ.
Question 3.
ಯಾರಿಗೆ ತತ್ವಜ್ಞಾನ ಹೇಳಿ ಪ್ರಯೋಜನವಿಲ್ಲ?
Answer:
ಪುರಂದರದಾಸರು ತಮ್ಮ ಕೀರ್ತನೆಯಲ್ಲಿ ಘೋರಪಾಪಿಗೆ (ದುರ್ಜನರಿಗೆ) ತತ್ವಜ್ಞಾನ ಹೇಳಿ ಪ್ರಯೋಜನವಿಲ್ಲ ಎಂದಿದ್ದಾರೆ. ಏಕೆಂದರೆ, ಘೋರಪಾಪಿಗೆ ತತ್ವಜ್ಞಾನ ಹೇಳಿದರೆ ಆತ ಯಾವತ್ತೂ ತನ್ನ ಕ್ರೂರಕರ್ಮವನ್ನು ಬಿಟ್ಟು ಒಳ್ಳೆಯ ದಾರಿಯಲ್ಲಿ ಸಾಗುವುದಿಲ್ಲ.
Question 4 .
ದುರ್ಜನರ ಕಾರ್ಯ ಯಾವ ಬಗೆಯದು?
Answer:
ದುರ್ಜನರು ಸದಾಕಾಲ ಒಯ್ಯಾರದ ಮಾತುಗಳನ್ನು ಆಡುತ್ತಿರುತ್ತಾರೆ. ಆದರೆ ಅವರಿಂದ ಸ್ವಲ್ಪ ಮಟ್ಟಿನ ಉಪಕಾರವನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ದುರ್ಜನರು ಯಾವಾಗಲೂ ಅನ್ನ ತಿನ್ನಲು ಕಚ್ಚಾಡುವ ನಾಯಿಗಳಂತೆ ತಮ್ಮ ಕಾರ್ಯ ಸಾಧಿಸಿಕೊಳ್ಳಲು ಹೋರಾಡುತ್ತಿರುತ್ತಾರೆ.
III. ಸಂದರ್ಭ ಸಹಿತ ವಿವರಿಸಿ:
Question 1.
ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂತೆ.
Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ‘ಪುರಂದರದಾಸರು’ ರಚಿಸಿರುವ ‘ಜಾಲಿಯ ಮರದಂತೆ’ ಎಂಬ ಕೀರ್ತನೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಪುರಂದರದಾಸರು ಬುಡದಿಂದ ತುದಿಯವರೆಗೆ ಮುಳ್ಳಿನಿಂದ ಕೂಡಿದ. ಜಾಲಿಯ ಮರದಂತಿರುವ ದುರ್ಜನರ ಕುರಿತು ವಿವರಿಸುವ ಸಂದರ್ಭ ಇದಾಗಿದೆ.
ವಿವರಣೆ: ‘ಜಾಲಿಯ ಮರದಂತೆ ಧರೆಯೊಳು ದುರ್ಜನರು’ ಎಂದು, ಕೀರ್ತನೆಯ ಆರಂಭದಲ್ಲಿಯೇ ದಾಸರು ದುರ್ಜನರ ಬಗ್ಗೆ ನೇರವಾಗಿ ಹೇಳಿರುವುದನ್ನು ಕಾಣಬಹುದು.ದುರ್ಜನರು ಜಾಲಿಯ ಮರವಿದ್ದ ಹಾಗೆ. ಜಾಲಿಯ ಮರವು ಹೇಗೆ ಬುಡದಿಂದ ತುದಿಯವರೆಗೆ ಮುಳ್ಳನ್ನು ಹೊಂದಿರುತ್ತದೆಯೋ ಹಾಗೆ ದುರ್ಜನರು ಕೂಡ ತಮ್ಮ ಗುಣದಲ್ಲಿ ಕೆಟ್ಟತನವನ್ನು ಹೊಂದಿದವರಾಗಿದ್ದಾರೆ. ಇವರಿಂದ ಯಾವುದೇ ಉಪಯೋಗ ಇಲ್ಲ ಎನ್ನುವಾಗ ಈ ಮೇಲಿನ ಮಾತು ಬಂದಿದೆ.
Question 2.
ಕುಸುಮ ವಾಸನೆಯಿಲ್ಲ ಕೂಡಲು ಸ್ಥಳವಿಲ್ಲ.
Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ‘ಪುರಂದರದಾಸರು’ ರಚಿಸಿರುವ ‘ಜಾಲಿಯ ಮರದಂತೆ’ ಎಂಬ ಕೀರ್ತನೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಜಾಲಿಯ ಮರದ ಸ್ವರೂಪವನ್ನು ವಿವರಿಸುವ ಸಂದರ್ಭ ಇದಾಗಿದೆ.
ವಿವರಣೆ: ಪುರಂದರದಾಸರು ಜಾಲಿಯ ಮರದ ಒಟ್ಟು ಸ್ವರೂಪದ ಬಗ್ಗೆ ಹೇಳುತ್ತಾ, ಜಾಲಿಯ ಮರವು ಬಿಸಿಲಲ್ಲಿ ಆಯಾಸಗೊಂಡು ಬಂದವರಿಗೆ ನೆರಳನ್ನು ನೀಡುವುದಿಲ್ಲ. ಹಸಿದು ಬಂದವರಿಗೆ ಹಣ್ಣನ್ನು ನೀಡುವುದಿಲ್ಲ. ಅದರ ಹೂವಿನಲ್ಲಿ ಸುವಾಸನೆಯಿಲ್ಲ. ಕುಳಿತುಕೊಳ್ಳಲು ಸ್ಥಳವಿಲ್ಲ. ಅದರ ರಸವನ್ನು ಸವಿಯಲು ಮುಂದಾದರೆ ವಿಷದ ರೀತಿಯಲ್ಲಿ ಇರುವುದು ಎನ್ನುವಾಗ ಈ ಮೇಲಿನಂತೆ ಪುರಂದರದಾಸರು ಹೇಳುತ್ತಾರೆ. ಅದೇ ರೀತಿಯಲ್ಲಿ ದುರ್ಜನರು ಉಪಯೋಗಾರ್ಹರಲ್ಲ ಎನ್ನುವ ಭಾವ ಇಲ್ಲಿದೆ.
Question 3.
ನಾರುವ ದುರ್ಗಂಧ ಬಿಡಬಲ್ಲುದೆ.
Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ‘ಪುರಂದರದಾಸರು’ ರಚಿಸಿರುವ ‘ಜಾಲಿಯ ಮರದಂತೆ’ ಎಂಬ ಕೀರ್ತನೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಹಂದಿಯ ಮೂಲ ಗುಣ ಮತ್ತು ದುರ್ಜನರ ಮೂಲ ಗುಣ ಎರಡು ಒಂದೇ, ಎಂದು ವಿವರಿಸುವ ಸಂದರ್ಭ ಇದಾಗಿದೆ.
ವಿವರಣೆ: ಊರಿನ ಹೊಲಸನ್ನು ತಿಂದು ಜೀವಿಸುವ ಹಂದಿಗೆ ಒಳ್ಳೆಯ ರಸಭರಿತವಾದ (ಷಡ್ರಸಾನ್ನ) ಅನ್ನವನ್ನು ನೀಡಿದರೆ, ಅದು ತನ್ನ ನಾರುವ ಕೆಟ್ಟವಾಸನೆಯನ್ನು ಬಿಡುವುದಿಲ್ಲ. ಅಂತೆಯೇ ಘೋರ ಪಾಪಿಗೆ ತತ್ವಜ್ಞಾನವನ್ನು ಹೇಳಲು ಆತ ಎಂದಿಗೂ ಆದರ ಬಗ್ಗೆ ಅರ್ಥೈಸಿಕೊಳ್ಳಲಾರೆ. ದುರ್ಗುಣಗಳನ್ನು ತನ್ನ ಮೂಲ ಸ್ವಭಾವದಲ್ಲಿ ಹೊಂದಿದವನು ಎಂದಿಗೂ ಒಳ್ಳೆಯವನಾಗಲಾರ ಎನ್ನುವ ಭಾವ ಇಲ್ಲಿದೆ.
Question 4.
ಬಿನ್ನಾಣದ ಮಾತಿಗೆ ಕೊನೆಯಿಲ್ಲ.
Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ‘ಪುರಂದರದಾಸರು’ ರಚಿಸಿರುವ ‘ಜಾಲಿಯ ಮರದಂತೆ’ ಎಂಬ ಕೀರ್ತನೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ದುರ್ಜನರ ಗುಣ-ಸ್ವಭಾವದ ಕುರಿತಾಗಿ ವಿವರಿಸುವ ಸಂದರ್ಭ ಇದಾಗಿದೆ.
ವಿವರಣೆ : ಪುರಂದರದಾಸರು ಹೇಳುವಂತೆ, ದುರ್ಜನರಿಂದ ನಾವು ಒಂದು ಸಣ್ಣ ಉಪಕಾರವನ್ನು ನಿರೀಕ್ಷಿಸುವಂತಿಲ್ಲ. ಆದರೆ ಅವರ ಬಿನ್ನಾಣದ ಮಾತುಗಳು ಮಾತ್ರ ಯಾವುದೇ ಅಡೆತಡೆಯಿಲ್ಲದೆ ಹೊರಗಡೆ ಬರುತ್ತಿರುತ್ತವೆ. ಅವರ ಒಯ್ಯಾರದ ಮಾತುಗಳನ್ನು ಕೇಳುವಾಗ, ತಾನು ದೊಡ್ಡ ಪರೋಪಕಾರಿ ಎನ್ನುವ ಭಾವನೆ ಅವರದ್ದಾಗಿರುತ್ತದೆ. ಇತರರಿಗೆ ಉಪಕಾರಿಯಾಗದ ಇವರು ತಮ್ಮ ಕಾರ್ಯಸಾಧನೆಗಾಗಿ ಅನ್ನತಿನ್ನಲು ಕಚ್ಚಾಡುವ ನಾಯಿಗಳಂತೆ ಮೇಲೆ ಬಿದ್ದು ತಮ್ಮ ಕಾರ್ಯ ಸಾಧಿಸಿಕೊಳ್ಳುತ್ತಾರೆ. ಎನ್ನುವಾಗ ಈ ಮೇಲಿನ ಮಾತು ಬಂದಿದೆ.
IV. ಐದಾರು ವಾಕ್ಯಗಳಲ್ಲಿ ಉತ್ತರಿಸಿ:
Question 1.
ಜಾಲಿಯ ಮರವು ನಿರುಪಯುಕ್ತವೆಂಬುದನ್ನು ಪುರಂದರದಾಸರು ಹೇಗೆ ನಿರೂಪಿಸಿದ್ದಾರೆ?
Answer:
ಪುರಂದರದಾಸರು ರಚಿಸಿರುವ ‘ಜಾಲಿಯ ಮರದಂತೆ’ ಎನ್ನುವ ಕೀರ್ತನೆಯು ಸಮಾಜ ವಿಮರ್ಶೆಯ ಹಿನ್ನಲೆಯಲ್ಲಿ ಬಹಳ ಮುಖ್ಯವಾಗಿದೆ. ಕೀರ್ತನೆಯ ಆರಂಭದಲ್ಲಿಯೇ ದುರ್ಜನರ ಬಗ್ಗೆ ನೇರವಾಗಿ ಹೇಳಿರುವುದನ್ನು ಕಾಣಬಹುದು. ದುರ್ಜನರು ಜಾಲಿಯ ಮರವಿದ್ದ ಹಾಗೆ. ಜಾಲಿಯ ಮರವು ಹೇಗೆ ಬುಡದಿಂದ ತುದಿಯವರೆಗೆ ಮುಳ್ಳನ್ನು ಹೊಂದಿರುತ್ತದೆಯೋ ಹಾಗೆ ದುರ್ಜನರು ಕೂಡ ತಮ್ಮ ಇಡೀ ವ್ಯಕ್ತಿತ್ವದಲ್ಲಿ ಕೆಟ್ಟತನವನ್ನು ಹೊಂದಿದವರಾಗಿದ್ದಾರೆ.
ಕೀರ್ತನೆಯ ಮೊದಲ ಭಾಗದಲ್ಲಿ ಪುರಂದರದಾಸರು, ಜಾಲಿಯ ಮರದ ಒಟ್ಟು ಸ್ವರೂಪದ ಬಗ್ಗೆ ಹೇಳುತ್ತಾ, ಜಾಲಿಯ ಮರವು ಬಿಸಿಲಲ್ಲಿ ಆಯಾಸಗೊಂಡು ಬಂದವರಿಗೆ ನೆರಳನ್ನು ನೀಡುವುದಿಲ್ಲ. ಹಸಿದು ಬಂದವರಿಗೆ ಹಣ್ಣನ್ನು ನೀಡುವುದಿಲ್ಲ. ಅದರ ಹೂವಿನಲ್ಲಿ ಸುವಾಸನೆಯಿಲ್ಲ. ಕುಳಿತುಕೊಳ್ಳಲು ಸ್ಥಳವಿಲ್ಲ. ಅದರ ರಸವನ್ನು ಸವಿಯಲು ಮುಂದಾದರೆ ವಿಷದ ರೀತಿಯಲ್ಲಿ ಇರುವುದು ಎನ್ನುತ್ತಾರೆ. ಹೀಗೆ ಅದರ ಸ್ವರೂಪವನ್ನು ಹೇಳುವುದರ ಜೊತೆಗೆ ಅದು ನಿರುಪಯುಕ್ತ ಎನ್ನುವ ಅಂಶವನ್ನು ಕೀರ್ತನಕಾರರು ವಿವರಿಸುತ್ತಾರೆ. ಅದೇ ರೀತಿಯಲ್ಲಿ ದುರ್ಜನರೂ ಕೂಡ ಸಮಾಜಕ್ಕೆ ಉಪಯೋಗಾರ್ಹರಲ್ಲ ಎಂಬುದನ್ನು ದಾಸರು ಇಲ್ಲಿ ಹೇಳಲಿಕ್ಕೆ ಮುಂದಾಗಿರುವುದನ್ನು ಇಲ್ಲಿ ಗಮನಿಸಬಹುದು.
Question 2.
ಜಾಲಿ ಮರ ಮತ್ತು ದುರ್ಜನರನ್ನು ಸಮೀಕರಿಸುವುದರ ಔಚಿತ್ಯವನ್ನು ಚರ್ಚಿಸಿ.
Answer:
ಪುರಂದರದಾಸರು ಇಲ್ಲಿ ಜಾಲಿಯ ಮರ ಮತ್ತು ದುರ್ಜನರ ವೃಂದ ಎರಡನ್ನು ಸಮೀಕರಿಸಿ ಕೀರ್ತನೆ ರಚಿಸಿರುವುದನ್ನು ನಾವು ಕಾಣಬಹುದು. ಜಾಲಿಯ ಮರದಿಂದ ನಾವು ಯಾವುದೇ ರೀತಿಯ ಸದುಪಯೋಗವನ್ನು ಪಡೆಯಲು ಸಾಧ್ಯವಿಲ್ಲ. ಅದೇ ರೀತಿಯಲ್ಲಿ ದುರ್ಜನರಿಂದಲೂ ಕೂಡ ಸಮಾಜಕ್ಕೆ ಯಾವುದೇ ಒಳಿತನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಜಾಲಿಯ ಮರವು ಬಿಸಿಲಲ್ಲಿ ಆಯಾಸಗೊಂಡು ಬಂದವರಿಗೆ ನೆರಳನ್ನು ನೀಡುವುದಿಲ್ಲ. ಹಸಿದು ಬಂದವರಿಗೆ ಹಣ್ಣನ್ನು ನೀಡುವುದಿಲ್ಲ. ಅದರ ಹೂವಿನಲ್ಲಿ ಸುವಾಸನೆಯಿಲ್ಲ. ಕುಳಿತುಕೊಳ್ಳಲು ಸ್ಥಳವಿಲ್ಲ. ಅದರ ರಸವನ್ನು ಸವಿಯಲು ಮುಂದಾದರೆ ವಿಷದ ರೀತಿಯಲ್ಲಿ ಇರುವುದು. ಅದೇ ರೀತಿಯಲ್ಲಿ ದುರ್ಜನರು.
ದುರ್ಜನರಿಂದ, ಯಾವುದೇ ಸಣ್ಣ ಉಪಕಾರವನ್ನು ನಿರೀಕ್ಷಿಸುವಂತಿಲ್ಲ. ಆದರೆ ಅವರ ಬಿನ್ನಾಣದ ಮಾತುಗಳು ಮಾತ್ರ ಯಾವುದೇ ಅಡೆತಡೆಯಿಲ್ಲದೆ ಹೊರಗಡೆ ಬರುತ್ತಿರುತ್ತವೆ. ಅವರ ಒಯ್ಯಾರದ ಮಾತುಗಳನ್ನು ಕೇಳುವಾಗ, ತಾನು ದೊಡ್ಡ ಪರೋಪಕಾರಿ ಎಂಬಂತೆ ವರ್ತಿಸು ವರ್ತಿಸುತ್ತಾರೆ. ಇತರರಿಗೆ ಉಪಕಾರಿಯಾಗದ ಇವರು ತಮ್ಮ ಕಾರ್ಯಸಾಧನೆಗಾಗಿ ಅನ್ನತಿನ್ನಲು ಕಚ್ಚಾಡುವ ನಾಯಿಗಳಂತೆ ಮೇಲೆ ಬಿದ್ದು ತಮ್ಮ ಕಾರ್ಯ ಸಾಧಿಸಿಕೊಳ್ಳುತ್ತಾರೆ.
Question 3.
ಸಮಾಜ ಕಂಟಕರ ಬಗೆಗೆ ಪುರಂದರದಾಸರ ಅಭಿಪ್ರಾಯಗಳನ್ನು ಸಂಗ್ರಹಿಸಿರಿ.
Answer:
ಸಮಾಜಕ್ಕೆ ಕಂಟಕರಾದವರನ್ನು ಏನು ಮಾಡಿದರೂ ಬದಲಾಯಿಸಲು ಸಾಧ್ಯವಿಲ್ಲವೆನ್ನುತ್ತಾರೆ ಪುರಂದರದಾಸರು, ದುರ್ಜನರ ದುರ್ಗುಣಗಳನ್ನು ವಿವರಿಸುವ ಸಂದರ್ಭದಲ್ಲಿ ಪುರಂದರದಾಸರು ಜಾಲಿಯ ಮರ, ಹಂದಿ, ಕುನ್ನಿಗಳ ಹೋಲಿಕೆಗಳನ್ನು ನೀಡುತ್ತಾರೆ.
ಮುಳ್ಳಿನಿಂದ ಕೂಡಿದ ಜಾಲಿಯ ಮರವು ಬಿಸಿಲಲ್ಲಿ ಆಯಾಸಗೊಂಡು ಬಂದವರಿಗೆ ನೆರಳನ್ನು ನೀಡುವುದಿಲ್ಲ. ಹಸಿದು ಬಂದವರಿಗೆ ಹಣ್ಣನ್ನು ನೀಡುವುದಿಲ್ಲ. ಅದರ ಹೂವಿನಲ್ಲಿ ಸುವಾಸನೆಯಿಲ್ಲ. ಕುಳಿತುಕೊಳ್ಳಲು ಸ್ಥಳವಿಲ್ಲ. ಅದರ ರಸವನ್ನು ಸವಿಯಲು ಮುಂದಾದರೆ ವಿಷದ ರೀತಿಯಲ್ಲಿ ಇರುವುದು. ಹೀಗೆ ಅದರಿಂದ ಯಾವ ರೀತಿಯ ಉಪಯೋಗವನ್ನು ನಿರೀಕ್ಷಿಸುವಂತಿಲ್ಲ. ಹಾಗೆಯೇ ದುರ್ಜನರು ಕೂಡ ಬುಡದಿಂದ ತುದಿಯವರೆಗೆ ಕೆಟ್ಟಗುಣಗಳನ್ನು ಹೊಂದಿರುತ್ತಾರೆ. ಅವರಿಂದಲೂ ಕೂಡ ಯಾವ ರೀತಿಯ ಸಣ್ಣ ಒಳಿತನ್ನು ನಿರೀಕ್ಷಿಸುವಂತಿಲ್ಲ.
ಊರ ಹಂದಿಗೆ ಒಳ್ಳೆಯ ರಸಭರಿತವಾದ (ಷಡ್ರಸಾನ್ನ)ವನ್ನು ನೀಡಿದರೆ, ಅದುತನ್ನ ನಾರುವಕೆಟ್ಟವಾಸನೆಯನ್ನು ಬಿಡುವುದಿಲ್ಲ. ಅದೇ ರೀತಿಯಲ್ಲಿ ಘೋರಪಾಪಿಗೆ ತತ್ವಜ್ಞಾನವನ್ನು ಬೋಧಿಸಿದರೆ ಅದರಿಂದ ಆತನ ಮೂಲ ಗುಣ ಬದಲಾಗುವುದಿಲ್ಲ. ಬೀದಿ ನಾಯಿಗಳು ಅನ್ನಕ್ಕಾಗಿ ತಾ-ಮುಂದು, ತಾ-ಮುಂದುಎಂದು ಹೇಗೆ ಕಚ್ಚಾಡುತ್ತವೆಯೋ ಹಾಗೆ ದುರ್ಜನರು ತಮ್ಮ ಕಾರ್ಯ ಸಾಧನೆಗಾಗಿ ಸದಾ ಹಾತೊರೆಯುತ್ತಿರುತ್ತಾರೆ. ತಮ್ಮ ಕಾರ್ಯ ಸಾಧನೆಯ ಹಿನ್ನಲೆಯಲ್ಲಿ ಯಾರಿಗೆ ತೊಂದರೆಯಾದರೂ ಅವರು ಲೆಕ್ಕಿಸುವವರಲ್ಲ ಎಂದು ಸಮಾಜಕಂಟಕರ ಕುರಿತಂತೆ ತನ್ನ ಅಭಿಪ್ರಾಯಗಳನ್ನು ಕೀರ್ತನೆಯ ಮುಖಾಂತರವಾಗಿ ಪುರಂದರದಾಸರು ವಿವರಿಸುತ್ತಾ ಹೋಗುತ್ತಾರೆ.
ಜಾಲಿಯ ಮರದಂತೆ Summary
ಸಾರಾಂಶ:
ಪುರಂದರದಾಸರ ‘ಜಾಲಿಯ ಮರದಂತೆ’ ಎಂಬ ಕೀರ್ತನೆ ಒಂದು ಪರಿಣಾಮಕಾರಿ ಸಮಾಜ ವಿಮರ್ಶೆಯಾಗಿ ಸೇವೆ ಮಾಡುತ್ತದೆ. ಜಾಲಿಯ ಮರದ ರೂಪಕದ ಮೂಲಕ ಅವರು ದುರ್ಜನರ ನಕಾರಾತ್ಮಕ ಸ್ವಭಾವವನ್ನು ಚಿತ್ರಿಸುತ್ತಾರೆ. ಈ ಮರದಲ್ಲಿ neither ಹೂವು, ಹಣ್ಣು, ನೆರಳು ಅಥವಾ ಸುಗಂಧವಿಲ್ಲ – ಅದು ಸಂಪೂರ್ಣ ನಿರುಪಯುಕ್ತವಾಗಿದೆ. ಅದೇ ರೀತಿ ದುರ್ಜನರು ಸಹ ಉಪಕಾರವಿಲ್ಲದವರು; ಸತ್ಪುರುಷರಿಗೆ ಆಶ್ರಯ ನೀಡದು, ದುರ್ಬಲರಿಗೆ ಸಹಾಯ ಮಾಡದು, ಜ್ಞಾನವೂ ಇಲ್ಲ, ಸ್ನೇಹವೂ ಇಲ್ಲ.
ಕೀರ್ತನೆಯ ಮೊದಲ ಭಾಗದಲ್ಲಿ, ಜಾಲಿಯ ಮರವು ಹೊರತಹ ವಸ್ತುವಾಗಿ ಹೇಗೆ ಯಾರಿಗೂ ಉಪಯೋಗವಾಗದು ಎಂಬುದನ್ನು ವಿವರಿಸುತ್ತಾರೆ. ಹೀಗೆ, ದುರ್ಜನನಿಗೂ ಸಮಾಜಕ್ಕೆ ಉಪಯೋಗವಿಲ್ಲವೆಂಬ ಸಂದೇಶವನ್ನು ಸಾರುತ್ತಾರೆ.
ಎರಡನೆಯ ಭಾಗದಲ್ಲಿ, ಪಾಪಿಯ ನಿಜ ಸ್ವಭಾವವನ್ನು ಹಂದಿಯ ರೂಪಕದ ಮೂಲಕ ಚಿತ್ರಿಸಿದ್ದಾರೆ. ಉತ್ತಮವಾದ ಪದಾರ್ಥವನ್ನು ನೀಡಿದರೂ ಹಂದಿಯು ತನ್ನ ದುರ್ವಾಸನೆಯ ನಾರನ್ನು ಬಿಡದಂತೆ, ಪಾಪಿಯು ತತ್ವಜ್ಞಾನದಿಂದ ಬದಲಾಗಲಾರ. ದುರ್ಜನರ ಮೂಲ ಸ್ವಭಾವವನ್ನೇ ಪರಿವರ್ತಿಸಲು ಸಾಧ್ಯವಿಲ್ಲ ಎನ್ನುವ ಭಾವನೆ ಇಲ್ಲಿ ಇದೆ.
ಮೂರನೇ ಭಾಗದಲ್ಲಿ, ಪುರಂದರದಾಸರು ದುರ್ಜನರ ಕ್ರಿಯಾಶೀಲತೆಯನ್ನು ನಾಯಿಯ ಹೋಲಿಕೆಯಿಂದ ಬಣ್ಣಿಸುತ್ತಾರೆ. ಅವರು ಉಪಕಾರ ಮಾಡದೆ, ಬಿನ್ನಾಣದ ಮಾತುಗಳಿಂದ ಮಾತ್ರ ತಮಗೆ ದೊಡ್ಡದಾಗಿಸಿದಂತೆ ತೋರುತ್ತಾರೆ. ತಮ್ಮ ಗುರಿ ಸಾಧನೆಗಾಗಿ ಏನೇ ಮಾಡಿದರೂ ಕಲಂಕವಿಲ್ಲದೆ ನಡೆದುಕೊಳ್ಳುತ್ತಾರೆ.
ಇಂತು, ಈ ಕೀರ್ತನೆಯಲ್ಲಿ ಪುರಂದರದಾಸರು ಜಾಲಿಯ ಮರ, ಹಂದಿ ಮತ್ತು ನಾಯಿಯ ಹೋಲಿಕೆಗಳ ಮೂಲಕ ದುರ್ಜನರ ಹಾನಿಕಾರಕ ಸ್ವಭಾವ ಮತ್ತು ಸಮಾಜದ ಮೇಲಿನ ಅವರ ಪ್ರಭಾವವನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.