2nd PUC Kannada Question and Answer – Pageyam Balakanembare
Looking for 2nd PUC Kannada textbook answers? You can download Chapter 4: Pageyam Balakanembare Questions and Answers PDF, Notes, and Summary here. 2nd PUC Kannada Kavyabhaga solutions follow the Karnataka State Board Syllabus, making it easier for students to revise and score higher in exams.
Karnataka 2nd PUC Kannada Textbook Answers—Reflections Chapter 4
Pageyam Balakanembare Questions and Answers, Notes, and Summary
2nd PUC Kannada Kavyabhaga Chapter 4
ಪಗೆಯಂ ಬಾಲಕನೆಂಬರೇ
Pageyam Balakanembare

Scroll Down to Download Pageyam Balakanembare PDF
I. ಒಂದು ವಾಕ್ಯದಲ್ಲಿ ಉತ್ತರಿಸಿ:
Question 1.
ಹಲವು ಹಳ್ಳಗಳು ಸೇರಿ ಏನಾಗುತ್ತದೆ?
Answer:
ಹಲವು ಹಳ್ಳಗಳು ಸೇರಿ ಸಮುದ್ರವಾಗುತ್ತದೆ.
Question 2.
ನಿಷ್ಟ್ರಯೋಜಕ ಮಗ ಯಾರು?
Answer:
ಮುಪ್ಪಿನಲ್ಲಿ ತಂದೆ ತಾಯಿಗಳನ್ನು ಸಲಹದೇ ಇರುವ ಮಗ ನಿಷ್ಟ್ರಯೋಜಕ.
Question 3.
ಹಗೆಯನ್ನು ಏನೆಂದು ಉಪೇಕ್ಷಿಸಬಾರದೆಂದು ಸೋಮನಾಥನು ಹೇಳಿದ್ದಾನೆ?
Answer:
ಹಗೆಯನ್ನು ಬಾಲಕನೆಂದು ಉಪೇಕ್ಷಿಸಬಾರದೆಂದು ಸೋಮನಾಥನು ಹೇಳಿದ್ದಾನೆ.
Question 4.
ವೀರನಾದವನು ಏನನ್ನು ಬಲ್ಲವನಾಗಿರಬೇಕೆಂದು ಸೋಮನಾಥನು ಹೇಳಿದ್ದಾನೆ?
Answer:
ವೀರನಾದವನು ಇರಿಯಲು ಬಲ್ಲವನಾಗಿರಬೇಕೆಂದು ಸೋಮನಾಥನು ಹೇಳಿದ್ದಾನೆ.
Question 5.
ಯಾರನ್ನು ಯೋಗಿ ಎನ್ನಬಹುದು?
Answer:
ಅರಿಷಡ್ವರ್ಗಗಳನ್ನು ಗೆದ್ದವನನ್ನು ಯೋಗಿ ಎನ್ನಬಹುದು.
II. ಎರಡು–ಮೂರು ವಾಕ್ಯದಲ್ಲಿ ಉತ್ತರಿಸಿ :
Question 1.
ಯಾರಿಂದ ಯಾವುದನ್ನು ಹೇಗೆ ಕಲಿಯಬೇಕೆಂದು ಸೋಮನಾಥನು ಹೇಳಿದ್ದಾನೆ?
Answer:
ಕವಿ ಪಗೆಯಂ ಬಾಲಕನೆಂಬರೇ ಎಂಬ ಪದ್ಯದಲ್ಲಿ ಮನುಷ್ಯ ಯಾವ ಯಾವ ಮೂಲಗಳಿಂದ ಜ್ಞಾನವನ್ನು ಸಂಪಾದಿಸಿ ಜ್ಞಾನಿಯಾಗಬಹುದೆಂದು ಕೆಲವು ಉದಾಹರಣೆಗಳ ಮೂಲಕ ವಿವರಿಸಿದ್ದಾನೆ. ಕೆಲವನ್ನು ಬಲ್ಲವರಿಂದ, ಕೆಲವನ್ನು ಶಾಸ್ತ್ರ ಕೇಳುವುದರಿಂದ, ಕೆಲವನ್ನು ಆಚರಿಸುವವರಿಂದ ಕಂಡು, ಇನ್ನು ಕೆಲವನ್ನು ಸುಜ್ಞಾನದಿಂದ ನೋಡಿ ಜ್ಞಾನವನ್ನು ಸಂಪಾದಿಸಬೇಕು.ಸಜ್ಜನರ ಸಂಗದಿಂದ ಒಳ್ಳೆಯತನವನ್ನು ಕಲಿಯಬೇಕು. ಅಂತವನು ಮಾತ್ರ ಸರ್ವಜ್ಞನಾಗಲು ಸಾಧ್ಯ. ಹಾಗೆಯೇ ಹಲವು ಹಳ್ಳಗಳು ಕೂಡಿ ಹೇಗೆ ಸಮುದ್ರವಾಗುತ್ತದೆಯೋ ಹಾಗೆಯೇ ಹಲವು ಮೂಲಗಳಿಂದ ಜ್ಞಾನ ಸಂಪಾದಿಸಿ ಸರ್ವಜ್ಞನಾಗಬೇಕು ಎಂದು ಹೇಳಿದ್ದಾನೆ.
Question 2.
ಧನ ಮತ್ತು ಸುತನ ವಿಷಯದಲ್ಲಿ ಸೋಮನಾಥನ ಅಭಿಪ್ರಾಯವೇನು?
Answer:
ಧನವನ್ನು ಕೂಡಿಡಬಾರದು. ತಾನು ಅನುಭೋಗಿಸಲಾಗದ ಧನವಿದ್ದು ಏನೂ ಪ್ರಯೋಜನವಿಲ್ಲ. ಅದೇ ರೀತಿ ಸುತನಾದವನು ವೃದ್ದಾಪ್ಯದಲ್ಲಿ ತಂದೆತಾಯಿಯರ ಸೇವೆ ಮಾಡಬೇಕು. ವೃದ್ದಾಪ್ಯದಲ್ಲಿ ತಂದೆತಾಯಿಯರ ಸೇವೆ ಮಾಡದ ಮಗ ನಿಷ್ಟ್ರಯೋಜಕನಾಗುತ್ತಾನೆ. ಎಂಬ ಅಭಿಪ್ರಾಯವಿದೆ. ಇದು ಧನ ಮತ್ತು ಸುತನ ವಿಷಯದಲ್ಲಿ ಸೋಮನಾಥನ ಅಭಿಪ್ರಾಯವಾಗಿದೆ.
Question 3.
ರಾಜ ಮತ್ತು ಮಂತ್ರಿಗಳಿಗೆ ಯಾವ ಅರ್ಹತೆಗಳಿರಬೇಕೆಂದು ಸೋಮನಾಥನು ಹೇಳಿದ್ದಾನೆ?
Answer:
ರಾಜನು ಪ್ರಜೆಗಳನ್ನು ಕಾಪಾಡುವಂತವನು. ರಾಜನಾಗಬೇಕಾದರೆ ಕೋಪವನ್ನು ತ್ಯಜಿಸಬೇಕು. ಅದೇ ರೀತಿ ಮಂತ್ರಿಯಾದವನು ಚಮತ್ಕಾರಗಳನ್ನು ತಿಳಿದಿರಬೇಕು. ಚಮತ್ಕಾರಗಳನ್ನು ತಿಳಿದವನೇ ಮಂತ್ರಿ, ಈ ಅರ್ಹತೆಗಳು ರಾಜ ಮತ್ತು ಮಂತ್ರಿಗಳಿಗೆ ಇರಬೇಕೆಂದು ಸೋಮನಾಥನು ಹೇಳಿದ್ದಾನೆ.
Question 4.
ಶುಚಿ ಮತ್ತು ಸ್ವಾದಗಳನ್ನು ಕುರಿತು ಸೋಮನಾಥನ ಅಭಿಪ್ರಾಯವೇನು?
Answer:
ಕಡುಪಾಪದ ಕೆಲಸ ಮಾಡಿ ಬಲುವಾಗಿ ಮಿಂದರೆ ಅವನು ಶುಚಿಯಾಗುವನೇ? ಕಾಗೆಗಳ ಗುಂಪು ಸ್ನಾನ ಮಾಡುವುದಿಲ್ಲವೇ? ಬೆಲ್ಲದ ಪಾನಕದೊಳಗೆ ಬೇವಿನ ಫಲವನ್ನು ಅದ್ದಿದರೆ ಅದರ ಕಹಿ ಹೋಗಿ ಸಿಹಿಯಾಗುವುದಿಲ್ಲ. ನಿರ್ಮಲವಾದ ಶುಚಿತ್ವ ಗುಣವೇ ಮನುಷ್ಯನಿಗೆ ಮುಖ್ಯ. ಮತ್ತು ಕಹಿಗುಣ ಯಾವತ್ತೂ ಸಿಹಿಯ ಸ್ವಾದವನ್ನು ಹೊಂದುವುದಿಲ್ಲ ಎಂಬುದು ಸೋಮನಾಥನ ಅಭಿಪ್ರಾಯವಾಗಿದೆ.
III. ಸಂದರ್ಭ ಸಹಿತ ವಿವರಿಸಿ:
Question 1.
ಕೆಲವಂ ಬಲ್ಲವರಿಂದ ಕಲ್ಲು.
Answer:
ಆಯ್ಕೆ: ಪುಲಿಗೆರೆ ಸೋಮನಾಥ ಬರೆದ ಸೋಮೇಶ್ವರ ಶತಕದಿಂದ ಆಯ್ದ ಪಗೆಯಂ ಬಾಲಕನೆಂಬರೇ ಎಂಬ ಪದ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಯಾವ ಯಾವ ಮೂಲಗಳಿಂದ ಜ್ಞಾನವನ್ನು ಸಂಪಾದಿಸಿ ಜ್ಞಾನಿಯಾಗಬಹುದೆಂದು ಕೆಲವು ಉದಾಹರಣೆಗಳ ಮೂಲಕ ವಿವರಿಸುವಾಗ ಈ ಸಾಲು ಬಂದಿದೆ.
ವಿವರಣೆ: ಕೆಲವನ್ನು ಬಲ್ಲವರಿಂದ, ಕೆಲವನ್ನು ಶಾಸ್ತ್ರ ಕೇಳುವುದರಿಂದ, ಕೆಲವನ್ನು ಆಚರಿಸುವವರಿಂದ ಕಂಡು, ಇನ್ನು ಕೆಲವನ್ನು ಸುಜ್ಞಾನದಿಂದ ನೋಡಿ ಜ್ಞಾನವನ್ನು ಸಂಪಾದಿಸಬೇಕು. ಸಜ್ಜನರ ಸಂಗದಿಂದ ಒಳ್ಳೆಯತನವನ್ನು ಕಲಿಯಬೇಕು. ಅಂತವನು ಮಾತ್ರ ಸರ್ವಜ್ಞನಾಗಲು ಸಾಧ್ಯ. ಹಾಗೆಯೇ ಹಲವು ಹಳ್ಳಗಳು ಕೂಡಿ ಹೇಗೆ ಸಮುದ್ರವಾಗುತ್ತದೆಯೋ ಹಲವು ಮೂಲಗಳಿಂದ ಜ್ಞಾನ ಸಂಪಾದಿಸಿ ಸರ್ವಜ್ಞನಾಗಬೇಕು ಎಂದು ಹೇಳಿದ್ದಾನೆ. ಈ ರೀತಿ ಬೇರೆ ಬೇರೆ ಮೂಲಗಳನ್ನು ಹೇಳುವಾಗ ಈ ಮೇಲಿನ ಮಾತು ಬಂದಿದೆ.
Question 2.
ಆಪತ್ತಿನೊಳ್ ಮಣಿದುಂ ನೋಡದ ಬಂಧುವೇತಕೆ
Answer:
ಆಯ್ಕೆ: ಪುಲಿಗೆರೆ ಸೋಮನಾಥ ಬರೆದ ಸೋಮೇಶ್ವರ ಶತಕದಿಂದ ಆಯ್ದ ಪಗೆಯಂ ಬಾಲಕನೆಂಬರೇ ಎಂಬ ಪದ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಬಂಧುಗಳ ಗುಣ ಹೇಗಿರುತ್ತದೆ ಬಂಧುಗಳು ಹೇಗಿರಬೇಕು ಎಂದು ತಿಳಿಸುವಾಗ ಈ ಸಾಲು ಬಂದಿದೆ.
ವಿವರಣೆ: ಕಷ್ಟಕಾಲದಲ್ಲಿ ಕಷ್ಟ ಸುಖಗಳನ್ನು ವಿಚಾರಿಸಿ ಹೋಗುವುದು ಬಂಧುವಿನ ಲಕ್ಷಣ. ಕಷ್ಟಕಾಲದಲ್ಲಿ ನೆರವಿಗೆ ಬರಬೇಕು. ಕೇವಲ ಸುಖವಿರುವಾಗ ಜೊತೆಯಾಗಿದ್ದು ಕಷ್ಟಕಾಲದಲ್ಲಿ ದೂರಹೋಗುವ ಬಂಧು ಬಂಧುವೇ ಅಲ್ಲ. ಬಂಧು ಆಪತ್ತಿನಲ್ಲಿರುವವರ ಕಷ್ಟವನ್ನು ನೋಡಬೇಕು. ಅಂಥವನು ನಿಜವಾದ ಬಂಧು ಎನಿಸಿಕೊಳ್ಳುತ್ತಾನೆ. ಆಪತ್ತಿನಲ್ಲಿ ನೋಡದ ಬಂಧು ಯಾಕಾಗಿ ಬೇಕು. ಎಂದು ಸೋಮನಾಥ ಅಭಿಪ್ರಾಯಪಟ್ಟಿದ್ದಾನೆ.
Question 3.
ತೃಣವೇ ಪರ್ವತವಲ್ಲವೇ
Answer:
ಆಯ್ಕೆ: ಪುಲಿಗೆರೆ ಸೋಮನಾಥ ಬರೆದ ಸೋಮೇಶ್ವರ ಶತಕದಿಂದ ಆಯ್ದ ಪಗೆಯಂ ಬಾಲಕನೆಂಬರೇ ಎಂಬ ಪದ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಕಷ್ಟಕಾಲದಲ್ಲಿ ಚಿಕ್ಕ ಸಹಾಯ ಮಾಡಿದರೂ ಅದು ದೊಡ್ಡ ಸಹಾಯವಾಗುತ್ತದೆ ಎನ್ನುವ ಸಂದರ್ಭವಿದು.
ವಿವರಣೆ: ಸೋತಾಗ ಬಂದು ನೋಡದ ಬಂಧು ಏಕೆ? ಆಪತ್ತಿಗಾದವನೇ ನಿಜವಾದ ನೆಂಟ. ಚಿಕ್ಕದಾದ ಸಹಾಯವೂ ಕಷ್ಟದಲ್ಲಿರುವವನಿಗೆ ದೊಡ್ಡದಾಗಿ ಕಾಣಿಸುತ್ತದೆ. ಸಹಾಯ ಚಿಕ್ಕದಿರಲಿ ದೊಡ್ಡದಿರಲಿ ಅದು ಮುಖ್ಯ ಆಗುವುದಿಲ್ಲ. ಸಕಾಲಕ್ಕೆ ಒದಗುವ ಸಹಾಯ ಎಲ್ಲಕ್ಕಿಂತ ದೊಡ್ಡದು. ಕಷ್ಟಕಾಲದಲ್ಲಿ ಸಮಯಕ್ಕೆ ಸರಿಯಾಗಿ ಬಂದು ಸಹಾಯ ಮಾಡುವ ಒಂದು ಹುಲ್ಲು ಕಡ್ಡಿಯೂ ಸಹ ಕಷ್ಟದಲ್ಲಿರುವವನಿಗೆ ಪರ್ವತದಂತೆ ಕಾಣುತ್ತದೆ ಎಂದು ಕವಿ ಈ ಸಾಲಿನಲ್ಲಿ ಹೇಳಿದ್ದಾನೆ.
Question 4.
ಚೇಳಿ ಚಿಕ್ಕದೆಂದಳ್ಳರಿಂ ತೆಗೆಯಲ್ ಕಚ್ಚದೇ
Answer:
ಆಯ್ಕೆ:ಪುಲಿಗೆರೆ ಸೋಮನಾಥ ಬರೆದ ಸೋಮೇಶ್ವರ ಶತಕದಿಂದ ಆಯ್ದ ಪಗೆಯಂ ಬಾಲಕನೆಂಬರೇ ಎಂಬ ಪದ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಹಗೆಯನ್ನು ಚಿಕ್ಕವನೆಂದು ಬಿಡಬಾರದೆಂದು ಹಗೆತನದಿಂದ ದೂರವಿರಬೇಕೆಂದು ಹೇಳುವ ಸಂದರ್ಭವಿದು.
ವಿವರಣೆ: ದುಷ್ಟರಿಂದ ದೂರವಿರಬೇಕು. ಬೇವಿನ ಮರದ ಚಿಗುರು ಸಹ ತನ್ನ ಸ್ವಾದವನ್ನು ಬಿಡದು ಚಿಕ್ಕದಾಗಿನಿಂದ ಅಕ್ಕರೆಯಿಂದ ಸಾಕಿರುವ ಚೇಳೂ ಸಹ ಕುಟುಕದೇ ಬಿಡಲಾರದು. ಆದುದರಿಂದ ಚಿಕ್ಕದಿರಲಿ, ದೊಡ್ಡದಿರಲಿ ಅಪಾಯ ತರುವ ಸಂಗತಿಗಳಿಂದ ದೂರವಿದ್ದು, ಆ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಈ ಸಾಲಿನ ಮೂಲಕ ಹೇಳಲಾಗಿದೆ.
Question 5.
ಪಗೆಯಂ ಬಾಲಕನೆಂಬರ
Answer:
ಆಯ್ಕೆ: ಪುಲಿಗೆರೆ ಸೋಮನಾಥ ಬರೆದ ಸೋಮೇಶ್ವರ ಶತಕದಿಂದ ಆಯ್ದ ಪಗೆಯಂ ಬಾಲಕನೆಂಬರೇ ಎಂಬ ಪದ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಹಗೆಯನ್ನು ಚಿಕ್ಕವನೆಂದು ಬಿಡಬಾರದೆಂದು ಹಗೆತನದಿಂದ ದೂರವಿರಬೇಕೆಂದು ಹೇಳುವ ಸಂದರ್ಭವಿದು.
ವಿವರಣೆ : ಚಿಕ್ಕವನಿರಲಿ, ದೊಡ್ಡವನಿರಲಿ ಶತ್ರು ಶತ್ರುವೇ. ಶತ್ರು ಚಿಕ್ಕವನೆಂದು ಸುಮ್ಮನಿದ್ದರೆ ಆಪಾಯವನ್ನು ಮೈ ಮೇಲೆ ಎಳೆದುಕೊಂಡಂತೆ, ದುಷ್ಪರಿಂದ ದೂರವಿರಬೇಕು, ಬೇವಿನ ಮರದ ಚಿಗುರು ಸಹ ತನ್ನ ಸ್ವಾದವನ್ನು ಬಿಡದು ಚಿಕ್ಕದಾಗಿನಿಂದ ಅಕ್ಕರೆಯಿಂದ ಸಾಕಿರುವ ಚೇಳೂ ಸಹ ಕುಟುಕದೇ ಬಿಡಲಾರದು. ಆದುದರಿಂದ ಚಿಕ್ಕದಿರಲಿ, ದೊಡ್ಡದಿರಲಿ ಅಪಾಯ ತರುವ ಸಂಗತಿಗಳಿಂದ ದೂರವಿದ್ದು, ಆ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಹಗೆಯನ್ನು ಬಾಲಕನೆಂದು ತಿಳಿಯಬಾರದು ಎಂದು ಈ ಸಾಲಿನ ಮೂಲಕ ಹೇಳಲಾಗಿದೆ.
Question 6.
ಲೋಕದೊಳ್ ಮಡಿಯೇ ನಿರ್ಮಲ ಚಿತ್ರವೈ
Answer:
ಆಯ್ಕೆ: ಪುಲಿಗೆರೆ ಸೋಮನಾಥ ಬರೆದ ಸೋಮೇಶ್ವರ ಶತಕದಿಂದ ಆಯ್ದ ಪಗೆಯಂ ಬಾಲಕನೆಂಬರೇ ಎಂಬ ಪದ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಮಡಿವಂತಿಕೆ ಹೇಗಿರಬೇಕೆಂದು ಹೇಳುವ ಸಂದರ್ಭವಿದು.
ವಿವರಣೆ: ಹೊಟ್ಟೆಯಲ್ಲಿ ಕೆಸರನ್ನು ತುಂಬಿಕೊಂಡು ಮೇಲೆ ತೊಳೆದರೆ ಶುದ್ಧನಾಗಲು ಸಾಧ್ಯವೇ? ಕಡುಪಾಪ ಮಾಡಿ ಬಲುವಾಗಿ ಸ್ನಾನ ಮಾಡಿದರೆ ಶುಚಿಯಾಗುತ್ತಾನೆಯೇ ಹಾಗೆ ನೋಡಿದರೆ ಕಾಗೆಯೂ ಕೂಡ ಸ್ನಾನ ಮಾಡುತ್ತದೆ.ಬೆಲ್ಲದ ಪಾನಕದೊಳಗೆ ಬೇವಿನ ಫಲವನ್ನು ಅದ್ದಿಟ್ಟರೆ ಬೇವಿನ ಫಲ ಸ್ವಾದವಾಗುವುದಿಲ್ಲ. ಮನಸ್ಸಿನ ನೈರ್ಮಲ್ಯ ಕಾಪಾಡಿಕೊಳ್ಳುವುದೇ ನಿಜವಾದ ಮಡಿ ಎನ್ನುವಾಗ ಈ ಮಾತು ಬಂದಿದೆ.
IV. ಐದು-ಆರು ವಾಕ್ಯಗಳಲ್ಲಿ ಉತ್ತರಿಸಿ:
Question 1.
ಜ್ಞಾನವನ್ನು ಹೊಂದುವ ಮಾರ್ಗ ಯಾವುದೆಂಬುದನ್ನು ಕವಿ ಹೇಗೆ ವಿವರಿಸಿದ್ದಾನೆ?
Answer:
ಕವಿ ಪುಲಿಗೆರೆ ಸೋಮನಾಥನು “ಪಗೆಯಂ ಬಾಲಕನೆಂಬರೇ” ಎಂಬ ಪದ್ಯದಲ್ಲಿ ಬದುಕಿನ ನಡೆ ನುಡಿ ಆಚಾರ ವಿಚಾರಗಳನ್ನು ಬದುಕಿನ ಮೌಲ್ಯಗಳನ್ನು ತಿಳಿ ಹೇಳಿದ್ದಾನೆ
ಕವಿ ಈ ಪದ್ಯದಲ್ಲಿ ಮನುಷ್ಯ ಯಾವ ಯಾವ ಮೂಲಗಳಿಂದ ಜ್ಞಾನವನ್ನು ಸಂಪಾದಿಸಿ ಸರ್ವಜ್ಞನಾಗಬಹುದೆಂದು ವಿವರಿಸಿದ್ದಾನೆ. ಜ್ಞಾನವೆಂಬುದು ಹುಟ್ಟಿನಿಂದ ಬರುವುದಿಲ್ಲ. ಅದೊಂದು ಸಮುದ್ರವಿದ್ದಂತೆ ಹಲವು ತೊರೆಗಳು ಒಂದು ಸೇರಿ ಸಮುದ್ರವಾಗುವಂತೆ ಮನುಷ್ಯ ಜ್ಞಾನವನ್ನು ಬೇರೆ ಬೇರೆ ಮೂಲಗಳಿಂದ, ಬೇರೆ ಬೇರೆ ಮೂಲೆಗಳಿಂದ ಸಂಪಾದಿಸಬೇಕಾಗುತ್ತದೆ. ಕೆಲವನ್ನು ಬಲ್ಲವರಿಂದ ಅಂದರೆ ತಿಳಿದ ವಿದ್ವಾಂಸರಿಂದ ತಿಳಿದುಕೊಳ್ಳಬೇಕಾಗುತ್ತದೆ.
ಕೆಲವನ್ನು ಶಾಸ್ತ್ರಗಳನ್ನು ಕೇಳಿ ತಿಳಿದುಕೊಳ್ಳಬೇಕು. ಕೆಲವನ್ನು ಆಚರಿಸುವವರಿಂದ ಕಂಡು ಕಲಿಯಬೇಕು. ಇನ್ನು ಕೆಲವನ್ನು ಸುಜ್ಞಾನದಿಂದ ನೋಡಿ ಜ್ಞಾನವನ್ನು ಸಂಪಾದಿಸಬೇಕು. ಕೆಲವನ್ನು ಸಜ್ಜನರ ಸಂಗದಿಂದ ಅರಿಯಬೇಕು. ಅಂಥವನು ಮಾತ್ರ ಸರ್ವಜ್ಞನಾಗಲು ಸಾಧ್ಯ. ಅದೇ ರೀತಿ ಹಲವು ಹಳ್ಳಗಳು ಕೂಡಿ ಹೇಗೆ ಸಮುದ್ರವಾಗುತ್ತದೆಯೋ ಹಾಗೆಯೇ ಹಲವು ಮೂಲಗಳಿಂದ ಜ್ಞಾನ ಸಂಪಾದಿಸಿ ಸರ್ವಜ್ಞನಾಗಬೇಕು ಎಂದು ಹೇಳಿದ್ದಾನೆ.
Question 2.
ಸಕಾಲಕ್ಕೆ ಒದಗುವ ಸಹಾಯವೇ ಶ್ರೇಷ್ಠ ಎಂಬುದನ್ನು ಕವಿ ಹೇಗೆ ತಿಳಿಸಿದ್ದಾನೆ?
Answer:
ಕವಿ ಪುಲಿಗೆರೆ ಸೋಮನಾಥನು “ಪಗೆಯಂ ಬಾಲಕನೆಂಬರೇ” ಎಂಬ ಪದ್ಯದಲ್ಲಿ ಬದುಕಿನ ನಡೆ ನುಡಿ ಆಚಾರ ವಿಚಾರಗಳನ್ನು, ಬದುಕಿನ ಮೌಲ್ಯಗಳನ್ನು ತಿಳಿ ಹೇಳಿದ್ದಾನೆ. ನಮ್ಮ ಆಚಾರ ವಿಚಾರಗಳಲ್ಲಿ ಮೌಲ್ಯಗಳನ್ನು ಮೇಲೈಸಿಕೊಂಡಾಗಲೇ ಬದುಕಿಗೊಂದು ಅರ್ಥ ಪ್ರಾಪ್ತವಾಗುತ್ತದೆ.
ನಮ್ಮ ಕಷ್ಟಕಾಲದಲ್ಲಿ ಪ್ರಯೋಜನಕ್ಕೆ ಬಾರದ ವಸ್ತು, ಸಂಗತಿ ವ್ಯಕ್ತಿಗಳಿಂದ ಯಾವ ಉಪಯೋಗವೂ ಇಲ್ಲವೆಂಬುದನ್ನು ಸೋಮೇಶ್ವರ ಹಲವು ಉದಾಹರಣೆಗಳ ಮೂಲಕ ವಿವರಿಸಿ ಹೇಳಿದ್ದಾನೆ.
ಒಣಗುವ ಬೆಳೆಗೆ ನೀರು ಧನವನ್ನು ಕೂಡಿಡಬಾರದು.ತಾನು ಅನುಭೋಗಿಸಲಾಗದ ಧನವಿದ್ದು ಏನೂ ಪ್ರಯೋಜನವಿಲ್ಲ. ಅರ್ದೇ ರೀತಿ ಸುತನಾದವನು ವೃದ್ಧಾಪ್ಯದಲ್ಲಿ ತಂದೆತಾಯಿಯರ ಸೇವೆ ಮಾಡಬೇಕು. ವೃದ್ಧಾಪ್ಯದಲ್ಲಿ ತಂದೆತಾಯಿಯರ ಸೇವೆ ಮಾಡದ ಮಗ ನಿಷ್ಟಯೋಜಕನಾಗುತ್ತಾನೆ.
ಕನಿಷ್ಟಯೋಜಕನಾಗುತ್ತಾನೆ. ಅತ್ಯಾವಶ್ಯಕ. ಬೆಳೆಗೆ ನೀರು ಬೇಕಾದಾಗ ಮಳೆ ಬಾರದೇ ಈಗ ಮಳೆ ಬಂದು ಏನು ಪ್ರಯೋಜನ? ಕಷ್ಟಕಾಲದಲ್ಲಿ ಕಷ್ಟ ಸುಖಗಳನ್ನು ವಿಚಾರಿಸಿ ಹೋಗುವುದು ಬಂಧುವಿನ ಲಕ್ಷಣ. ಕೇವಲ ಸುಖವಿರುವಾಗ ಜೊತೆಯಾಗಿದ್ದು ಕಷ್ಟಕಾಲದಲ್ಲಿ ದೂರಹೋಗುವ ಬಂಧು ಬಂಧುವೇ ಅಲ್ಲ,ಬಂಧುಆಪತ್ತಿನಲ್ಲಿರುವವರ ಕಷ್ಟವನ್ನು ನೋಡಬೇಕು.
ಆಪತ್ತಿಗಾದವನೇ ನಿಜವಾದ ನೆಂಟ. ಅಂಥವನು ನಿಜವಾದ ಬಂಧು ಎನಿಸಿಕೊಳ್ಳುತ್ತಾನೆ. ಆಪತ್ತಿನಲ್ಲಿ ನೋಡದ ಬಂಧು ಯಾಕಾಗಿ ಬೇಕು? ಚಿಕ್ಕದಾದ ಸಹಾಯವೂ ಕಷ್ಟದಲ್ಲಿರುವವನಿಗೆ ದೊಡ್ಡದಾಗಿ ಕಾಣಿಸುತ್ತದೆ. ಸಹಾಯ ಚಿಕ್ಕದಿರಲಿ ದೊಡ್ಡದಿರಲಿ ಅದು ಮುಖ್ಯ ಆಗುವುದಿಲ್ಲ. ಸಕಾಲಕ್ಕೆ ಒದಗುವ ಸಹಾಯ ಎಲ್ಲಕ್ಕಿಂತ ದೊಡ್ಡದು. ಕಷ್ಟಕಾಲದಲ್ಲಿ ಸಮಯಕ್ಕೆ ಸರಿಯಾಗಿ ಬಂದು ಸಹಾಯ ಮಾಡುವ ಒಂದು ಹುಲ್ಲು ಕಡ್ಡಿಯೂ ಸಹ ಕಷ್ಟದಲ್ಲಿರುವವನಿಗೆ ಪರ್ವತದಂತೆ ಕಾಣುತ್ತದೆ ಎಂದು ಸೋಮನಾಥ ಅಭಿಪ್ರಾಯಪಟ್ಟಿದ್ದಾನೆ.
Question 3.
ಯಾವ ಯಾವ ಸಂಗತಿಗಳನ್ನು ಉಪೇಕ್ಷಿಸಬಾರದಾಗಿ ಸೋಮನಾಥನು ತಿಳಿಸಿದ್ದಾನೆ?
Answer:
ಪುಲಿಗೆರೆ ಸೋಮನಾಥನ ಶತಕವು ಕನ್ನಡ ನಾಡಿನಲ್ಲಿ ಕವಿವಾಣಿಯಾಗಿ, ಜನವಾಣಿಯಾಗಿ ಹಬ್ಬಿ ಹರಡಿ ನೀತಿಯ ಹಂದರದಲ್ಲಿ ಬದುಕಿನ ತನಿವಣ್ಣುಗಳನ್ನು ತುಂಬಿ ತಂದಿದೆ. ಮೌಲ್ಯಗಳಿಗೆಲ್ಲ ನೀತಿಯೇ ಮೂಲ. ಬೀಜ, ಭಕ್ತಿ,ಜ್ಞಾನ, ವೈರಾಗ್ಯ, ನೀತಿಯನ್ನು ಪ್ರತಿಪಾದಿಸುವ ಪದ್ಯಗಳು ಪುಲಿಗೆರೆ ಸೋಮನಾಥನ ಹೆಸರನ್ನು ಸ್ಥಿರವಾಗಿಸಿದೆ.ಕವಿ ಕೆಲವು ಸಂಗತಿಗಳನ್ನು ಉಪೇಕ್ಷಿಸಬಾರದೆಂದು ಕೆಲವು ಉದಾಹರಣೆಯ ಮೂಲಕ ತಿಳಿಸಿದ್ದಾನೆ.
ಬೇವಿನ ಮರ ಚಿಗುರೆಂದು ತಿನ್ನಲು ಸ್ವಾದವಾಗುವುದಿಲ್ಲ. ಬೇವಿನ ಮರದ ಚಿಗುರು ಸಹ ಬೇವಿನ ಸ್ವಾದವನ್ನು ಹೊಂದಿಕೊಂಡೇ ಬೆಳೆಯುತ್ತದೆ. ಚಿಗುರಾದರೂ ಸಹ ಬೇವಿನ ಸ್ವಾದ ಬಿಡದು. ಬೇವು ಎಂದಿಗೂ ಸಿಹಿಯಾಗುವುದಿಲ್ಲ. ಅದರಂತೆಯೇ ದುಷ್ಟರೆಂದೂ ಒಳ್ಳೆಯ ತೋರುವುದಿಲ್ಲವಾದ್ದರಿಂದ ಅವರ ಬಗ್ಗೆ ಎಚ್ಚರದಿಂದಿರಬೇಕು. ಉಪೇಕ್ಷಿಸಬಾರದೆಂದು ಕವಿ ಹೇಳುತ್ತಾರೆ. ಚೇಳು ಚಿಕ್ಕದೆಂದು ಪ್ರೀತಿಯಿಂದ ಬೆಳೆಸಿ. ಅಕ್ಕರೆಯಿಂದ ತೆಗೆಯಲು ಅದು ಕಚ್ಚದೇ ಇರದು. ಹೆಡೆಯಿರುವ ವಿಷ ಸರ್ಪವನ್ನು ಹಾಲನ್ನು ಉಣಿಸಿ ಸಾಕಲು ಅದು ವಿಶ್ವಾಸಕ್ಕೆ ಯೋಗ್ಯವಲ್ಲ. ಪಕ್ಷಿಯನ್ನು ಸಾಕುವೆನೆಂದು ಗೂಬೆಮರಿಯನ್ನು ಮುದ್ದಿನಿಂದ ಸಲಹುವರೇ. ಹಗೆಯನ್ನು ಬಾಲಕನೆಂದು ಉಪೇಕ್ಷಿಸಬಾರದೆಂದು ಸೋಮನಾಥನು ಹೇಳಿದ್ದಾನೆ.
ಚಿಕ್ಕವನಿರಲಿ, ದೊಡ್ಡವನಿರಲಿ ಶತ್ರು ಶತ್ರುವೇ. ಹಾಗೆಯೇ ಸಣ್ಣ ಹುಡುಗ ನಮಗೇನು ಮಾಡಬಲ್ಲನೆಂದು ಶತ್ರುವಾದವನನ್ನು ಎಂದಿಗೂ ಅಲಕ್ಷ ಮಾಡಬಾರದು. ಶತ್ರು ಚಿಕ್ಕವನೆಂದು ಸುಮ್ಮನಿದ್ದರೆ ಅಪಾಯವನ್ನು ಮೈ ಮೇಲೆ ಎಳೆದುಕೊಂಡಂತೆ.
ದುಷ್ಟರಿಂದ ದೂರವಿರಬೇಕು. ಬೇವಿನ ಮರದ ಚಿಗುರು ಸಹ ತನ್ನ ಸ್ವಾದವನ್ನು ಬಿಡದು ಚಿಕ್ಕದಾಗಿನಿಂದ ಅಕ್ಕರೆಯಿಂದ ಸಾಕಿರುವ ಚೇಳೂ ಸಹ ಕುಟುಕದೇ ಬಿಡಲಾರದು. ಆದುದರಿಂದ ಚಿಕ್ಕದಿರಲಿ, ದೊಡ್ಡದಿರಲಿ ಅಪಾಯ ತರುವ ಸಂಗತಿಗಳಿಂದ ದೂರವಿದ್ದು, ಆ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಹಗೆಯನ್ನು ಬಾಲಕನೆಂದು ತಿಳಿಯಬಾರದು ಎಂದಿದ್ದಾನೆ. ಎಲ್ಲಾ ಸಂಗತಿಗಳನ್ನು ಉಪೇಕ್ಷಿಸಬಾರದಾಗಿ ಸೋಮನಾಥನು ತಿಳಿಸಿದ್ದಾನೆ
Question 4.
ವೀರ.ಮಂತ್ರಿ, ರಾಜ ಮತ್ತು ಯೋಗಿಗಳಿಗೆ ಇರಬೇಕಾದ ಅರ್ಹತೆಗಳೇನು?
Answer:
ಪುಲಿಗೆರೆ ಸೋಮನಾಥನ ‘ಸೋಮೇಶ್ವರ ಶತಕವು’ ಕನ್ನಡದ ಅತ್ಯಂತ ಜನಪ್ರಿಯ ಶತಕ ಗ್ರಂಥವಾಗಿದ್ದು ಹದಿನಾರನೇಶತಮಾನದಲ್ಲಿದ್ದ ಈ ಕವಿಯು ಪುಲಿಗೆರೆಯ ಸೋಮೇಶ್ವರನ ಮಹಾ ಭಕ್ತನಾಗಿದ್ದನು. ಆದ್ದರಿಂದಲೇ ತನ್ನ ಪ್ರತಿಪದ್ಯಗಳ ಕೊನೆಯಲ್ಲಿ ‘ಹರಹರಾ ಶ್ರೀ ಚೆನ್ನ ಸೋಮೇಶ್ವರ ಅಂಕಿತವನ್ನು ಕಾಣಿಸಿದ್ದಾನೆ. ಸ್ವತಂತ್ರ ಲೋಕಾನುಭವ,ಸ್ತೋಪಜ್ಞ ಕವಿತಾ ಶಕ್ತಿ, ಮೊದಲಾದ ಉನ್ನತ ಗುಣಗಳು ಕಂಡು ಬರುತ್ತದೆ.
ಪ್ರತಿಯೊಂದು ಕೆಲಸಕ್ಕೂ ಅದನ್ನು ನಿರ್ವಹಿಸುವ ಸಾಮರ್ಥವಿರುವುದು ಮುಖ್ಯವೆಂಬುದನ್ನು ಕವಿ ಸೋಮನಾಥ ತಿಳಿಸಿದ್ದಾನೆ. ಅವನ ಪ್ರಕಾರ ಯುದ್ಧ ಮಾಡಲು ತಿಳಿದಿರುವವನೇ ಸೈನಿಕ ಶತ್ರುಗಳನ್ನು ಇರಿದು ಕೊಂದ ಸೈನಿಕನು ಭೂಮಿಯಲ್ಲಿ ನಿಜವಾದ ವೀರನೆನಿಸಿಕೊಳ್ಳುವನು. ಕೊಲ್ಲಲು, ಚುಚ್ಚಲು, ತಿವಿಯಲು ಬಲ್ಲವನಾದರೆ ವೀರನಾಗಿರಬೇಕು. ನಾನಾ ರೀತಿಯ ಚಮತ್ಕಾರಗಳನ್ನು ಅರಿತವನೇ ಮಂತ್ರಿ ಭೂಮಿಯಲ್ಲಿ ನಾನಾ ಚಮತ್ಕಾರವನ್ನು ತಿಳಿದುಕೊಳ್ಳಬಲ್ಲವನಾದರೆ ಒಳ್ಳೆಯ ಮಂತ್ರಿಯಾಗುತ್ತಾನೆ. ರಾಜನು ಪ್ರಜೆಗಳನ್ನು ಕಾಪಾಡುವಂತವನು, ರಾಜನಾಗಬೇಕಾದರೆ ಕೋಪವನ್ನು ತ್ಯಜಿಸಬೇಕು.
ಕೋಪವನ್ನು ತ್ಯಜಿಸಬಲ್ಲೊಡೆ ರಾಜನಾಗಬೇಕು. ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಮೋಹ, ಲೋಭ ಮದ, ಮತ್ಸರಗಳನ್ನು ಗೆಲ್ಲಬಲ್ಲವನು ಯೋಗಿಯಾಗಬಹುದು. ಅಂಥವನು ಮಾತ್ರ ತನ್ನ ಹೊಣೆಗಾರಿಕೆಯನ್ನು ಅರಿತುಕೊಂಡು ನಡೆಯುವವನು. ಈ ರೀತಿ ಸೋಮನಾಥನು ವೀರ. ಮಂತ್ರಿ, ರಾಜ ಮತ್ತು ಯೋಗಿಗಳಿಗೆ ಇರಬೇಕಾದ ಅರ್ಹತೆಗಳ ವಿವರ ನೀಡಿದ್ದಾನೆ.
Question 5.
ನಿರ್ಮಲಚಿತ್ತದ ಅಗತ್ಯವನ್ನು ಸೋಮನಾಥ ಹೇಗೆ ನಿರೂಪಿಸಿದ್ದಾನೆ?
Answer:
ಕವಿ ಪುಲಿಗೆರೆ ಸೋಮನಾಥನು ‘ಪಗೆಯಂ ಬಾಲಕನೆಂಬರೇ’ ಪದ್ಯದಲ್ಲಿ ಬದುಕಿನ ಮೌಲ್ಯವನ್ನು ತಿಳಿ ಹೇಳಿದ್ದಾನೆ. ಮೌಲ್ಯ ಗಳಿಗೆಲ್ಲ ನೀತಿಯೇ ಮೂಲ ಬೀಜ. ಲೋಕದ ಡೊಂಕನ್ನುತಿದ್ದುವುದರೊಂದಿಗೆ ತಮ್ಮ ಡೊಂಕನ್ನು ತಿದ್ದಿಕೊಳ್ಳುವ ನೈತಿಕ ಅನುಸಂಧಾನವಿದ್ದವರು ಮಹಾತ್ಮರಾದವರು. ಅವರ ಮಾತು ಮತ್ತು ಕೃತಿಗಳು ಸಮಾಜದಲ್ಲಿ ಆದರ್ಶವಾಗಿ ನೆಲೆನಿಂತು ನೀತಿಯ ಸೂಕ್ತಿಯಾದವು. ಸೋಮನಾಥನ ಪ್ರಕಾರ ನಿರ್ಮಲವಾದ ಮನಸ್ಸನ್ನು ಹೊಂದಿರುವಾತನೇ ನಿಜವಾದ ಮಡಿವಂತನಾಗಿದ್ದಾನೆ.
ಹೊಟ್ಟೆಯಲ್ಲಿ ಕೆಸರನ್ನು ತುಂಬಿಕೊಂಡು ಮೇಲೆ ತೊಳೆದರೆ ಶುದ್ಧನಾಗಲು ಸಾಧ್ಯವೇ? ಕಡುಪಾಪ ಮಾಡಿ ಬಲುವಾಗಿ ಪುಣ್ಯ ತೀರ್ಥಗಳಲ್ಲಿ ಸ್ನಾನ ಮಾಡಿದರೆ ಶುಚಿಯಾಗುತ್ತಾನೆಯೇ ಹಾಗೆ ನೋಡಿದರೆ ಶುಚಿಯಾಗುತ ಕಾಗೆಯೂ ಕೂಡ ಸ್ನಾನ ಮಾಡುತ್ತದೆ. ಬೆಲ್ಲದ ಪಾನಕದೊಳಗೆ ಬೇವಿನ ಫಲವನ್ನು ಅದ್ದಿಟ್ಟರೆ ಬೇವಿನ ಫಲ ಕಹಿ ಗುಣ ಬಿಡುವುದಿಲ್ಲ. ಸ್ವಾದವಾಗುವುದಿಲ್ಲ. ಮನಸ್ಸಿನ ನೈರ್ಮಲ್ಯ ಕಾಪಾಡಿಕೊಳ್ಳುವುದೇ ನಿಜವಾದ ಮಡಿ. ಇದೇ ರೀತಿ ಮನಸ್ಸಿನಲ್ಲಿ ಕೆಟ್ಟ ವಿಚಾರಗಳನ್ನು ಇಟ್ಟುಕೊಂಡು ಮೇಲ್ನೋಟಕ್ಕೆ ಎಷ್ಟೇ ಸ್ವಚ್ಚವಾಗಿ ಕಾಣಿಸಿದರೂ ಆತ ಶುಚಿಯಲ್ಲ.ಶುಭ್ರವಾದ ಒಳ್ಳೆಯ ಮನಸ್ಸನ್ನು ಹೊಂದಿರುವವನೇ ನಿಜವಾದ ಮಡಿವಂತನು. ನಿರ್ಮಲ ಮನಸ್ಸೇ ನಿಜವಾದ ಮಡಿ ಎನ್ನುವುದರ ಮೂಲಕ ನಿರ್ಮಲಚಿತ್ತದ ಅಗತ್ಯವನ್ನು ಸೋಮನಾಥ ಹೇಗೆ ನಿರೂಪಿಸಿದ್ದಾನೆ.
ಪಗೆಯಂ ಬಾಲಕನೆಂಬರೇ
[Summary]
ಪುಲಿಗರ್ ಷಂಸಾಥ್ – ಸಾರಾಂಶ (ಪುನರ್‌ರಚನೆ)
ಜ್ಞಾನವನ್ನು ಸಂಪಾದಿಸಲು ಒಂದೇ ಒಂದು ಮಾರ್ಗವಿಲ್ಲ. ಕೆಲವೊಮ್ಮೆ ಶಾಸ್ತ್ರಗಳನ್ನು ಅಧ್ಯಯನ ಮಾಡುವುದರಿಂದ, ಕೆಲವೊಮ್ಮೆ ಇತರರನ್ನು ಅನುಕರಿಸುವುದರಿಂದ, ಸ್ವಂತ ಅನುಭವದಿಂದ ಮತ್ತು ಸಜ್ಜನರ ಸಂಗದಿಂದ—ಇವನ್ನೆಲ್ಲ ಸೇರಿಸಿ ನಾನಾ ದಿಕ್ಕಿನಿಂದ ಜ್ಞಾನವನ್ನು ಸಂಗ್ರಹಿಸಬೇಕೆಂದು ಕವಿ ಉಪದೇಶಿಸುತ್ತಾರೆ. ಇದೇ ತತ್ವವನ್ನು ಸಮುದ್ರದಲ್ಲಿ ಸೇರುವ ನದಿಗಳಂತೆ ಕವಿ ವಿವರಿಸುತ್ತಾರೆ: ನಾನಾ ನದಿಗಳು ಸೇರಿ ಸಮುದ್ರವಾಗುವಂತೆ, ವಿವಿಧ ಮಾರ್ಗಗಳಿಂದ ಜ್ಞಾನವು ಸಂಪೂರ್ಣವಾಗುತ್ತದೆ.
ಹಾಗೆಯೇ, ತಮ್ಮ ಉಪಯೋಗಕ್ಕೆ ಬಾರದ ಸಂಪತ್ತು, ಅಥವಾ ತಮ್ಮ ಪಾಲಕರನ್ನು ಮುಪ್ಪಿನಲ್ಲಿ ನೋಡಿಕೊಳ್ಳದ ಮಕ್ಕಳು, ಯಾವುದಕ್ಕೂ ಉಪಯೋಗವಿಲ್ಲ. ಬೆಳೆಗೆ ನೀರು ಬೇಕಾಗಿರುವಾಗ ಲಭ್ಯವಾಗದಿದ್ದರೆ ನಂತರ ಬಂದ ಮಳೆಯೂ ವ್ಯರ್ಥ. ಈ ಎಲ್ಲ ಉದಾಹರಣೆಗಳು ಸಮಯಕ್ಕೆ ಸರಿಯಾದ ನೆರವಿನ ಮಹತ್ವವನ್ನು ತೋರಿಸುತ್ತವೆ—ಸಮಯಕ್ಕೆ ಒದಗಿದ ಕೊಂಚ ಸಹಾಯವೂ ಅನೇಕ ಪ್ರಯೋಜನ ನೀಡಬಲ್ಲದು.
ಪ್ರತಿಯೊಂದು ವಸ್ತು ತನ್ನದ್ದೇ ಆದ ಉಪಯೋಗವನ್ನು ಹೊಂದಿರುತ್ತದೆ. ಉಪಯೋಗಕ್ಕೆ ಬಾರದಿರುವಾಗ ಅದು ನಿಷ್ಪ್ರಯೋಜಕ. ಎಳೆಚಿಗುರು ಎಲೆಯನ್ನು ಚೆನ್ನಾಗಿದೆಯೆಂದು ನೆನೆಸಿ ತಿಂದರೆ ರುಚಿಯಾಗುತ್ತದೆಯೇ? ಮರಿಚೇಳನ್ನು ಪ್ರೀತಿಯಿಂದ ಹಿಡಿದರೆ ಅದು ಕಚ್ಚುವುದಿಲ್ಲವೆ? ಹಾವು ಪಾಲನೆಯಿಂದ ವಿಶ್ವಾಸಿಯಾಗುತ್ತದೆಯೆ? ಇಲ್ಲವೆ ಗೂಬೆ ಹಕ್ಕಿಗಳಾಗಿ ಸವಿನಯದಿಂದ ಬಾಳುತ್ತದೆಯೆ? ಈ ಎಲ್ಲಾ ಪ್ರಶ್ನೆಗಳು ತೋರಿಸುತ್ತವೆ—ಸ್ವಭಾವವನ್ನೇ ಮರೆಸಲಾಗದು.
ಶತ್ರು ಚಿಕ್ಕವನೇ ಎಂದು ಅಲಕ್ಷ್ಯ ಮಾಡಿದರೆ ಭಾರಿ ನಷ್ಟವಾಗಬಹುದು. ಬೆಂಕಿಯ ಕಿಡಿಯೇ ಜಗತ್ತನ್ನು ಸುಡಬಲ್ಲದು. ಸಣ್ಣ ಸಾಧನಗಳಿಂದಲೂ ದೊಡ್ಡ ಕಾರ್ಯಗಳು ಸಾಧ್ಯವಾಗಬಹುದು. ಬಂಡೆ ಸೀಳಲು ಪುಟಾಣಿ ಉಳಿ ಬೇಕು, ಬೃಹತ್ ಆನೆ ಅಲ್ಲ. ಭಾರ ಎತ್ತಲು ಮೀಟುಗೋಲು ಉಪಯೋಗವಾಗುತ್ತದೆ, ಮರವಲ್ಲ. ಇದರಿಂದ ಕವಿ ಹೇಳುತ್ತಾರೆ: ಯುಕ್ತಿಯೇ ಶಕ್ತಿ.
ಅನುಕೂಲ ಅನುಸಾರ ಯೋಗ್ಯತೆ ಇರಬೇಕು. ಶತ್ರುಗಳನ್ನು ಜಯಿಸಬಲ್ಲವನು ಸೈನಿಕ, ಬುದ್ಧಿವಂತಿಕೆ ಹೊಂದಿದವನು ಮಂತ್ರಿ, ತಾಳ್ಮೆಯಿಂದ ನಡೆದುಕೊಳ್ಳುವವನು ದೊರೆ, ಕಾಮವಶವಾಗದವನು ಯೋಗಿ. ಕೈಯಿಂದ ದಂಡ ತೆಗೆಯಬಲ್ಲವನು ಮಾತ್ರ ಸಾಲದ ಹೊಣೆಗಾರರಾಗಬೇಕು. ಇದರಿಂದ ಪ್ರತಿಯೊಂದು ಕಾರ್ಯಕ್ಕೂ ಸೂಕ್ತ ಯೋಗ್ಯತೆ ಅಗತ್ಯ.
ಒಬ್ಬನು ಹೊರಗಡೆ ಶುದ್ಧವಾಗಿದ್ದರೆ ಮಾತ್ರ ಸಾಕಾಗದು; ಒಳಗೆ ಮನಸ್ಸು ಸಹ ಶುದ್ಧವಾಗಿರಬೇಕು. ಪಾಪಗಳನ್ನು ಮಾಡಿದವನು ಪುಣ್ಯತೀರ್ಥಗಳಲ್ಲಿ ಸ್ನಾನ ಮಾಡಿದರೆ ಶುದ್ಧನಾಗುತ್ತಾನೆಯೆ? ಕಾಗೆ, ಬೇವು ಹಣ್ಣು ಎಷ್ಟು ಬೇರೆಮಾಡಿದರೂ ಅದರ ಸ್ವಭಾವ ಹೀಗೆಯೇ ಇರುತ್ತದೆ. ಅಂತೆಯೇ ದೇಹ ಶುದ್ಧಿಯಾದರೆ ಮಾತ್ರ ಸಾಕಾಗದು—ಮನಸ್ಸು ಶುದ್ಧವಾಗಬೇಕು. ಅಂತರಂಗ ಮತ್ತು ಬಹಿರಂಗ ಶುದ್ಧತೆಯೇ ನಿಜವಾದ ಪವಿತ್ರತೆ ಎಂದು ಕವಿ ಸಾರುತ್ತಾರೆ.