2nd PUC Kannada Chapter 3

2nd PUC Kannada Question and Answer – Innu Huttadeyirali Nariyarennavolu

Looking for 2nd PUC Kannada textbook answers? You can download Chapter 3: Innu Huttadeyirali Nariyarennavolu Questions and Answers PDF, Notes, and Summary here. 2nd PUC Kannada Kavyabhaga solutions follow the Karnataka State Board Syllabus, making it easier for students to revise and score higher in exams.

Karnataka 2nd PUC Kannada Textbook Answers—Reflections Chapter 3

Innu Huttadeyirali Nariyarennavolu Questions and Answers, Notes, and Summary

2nd PUC Kannada Kavyabhaga Chapter 3

ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು

Innu Huttadeyirali Nariyarennavolu

2nd PUC Kannada Chapter 3 Innu Huttadeyirali Nariyarennavolu
Scroll Down to Download Innu Huttadeyirali Nariyarennavolu PDF
I. ಒಂದು ವಾಕ್ಯದಲ್ಲಿ ಉತ್ತರಿಸಿ.

Question 1.
ಧರ್ಮರಾಯನಿಗೆ ಎಂಥ ಗರ ಹೊಡೆದಿದೆ?
Answer:
ಧರ್ಮರಾಯನಿಗೆ ಧರ್ಮ ಕ್ಷಮೆಯ ಗರ ಹೊಡೆದಿದೆ.

Question 2.
ಅಣ್ಣನಾಜ್ಞೆಯಲ್ಲಿ ಭ್ರಮಿತನಾದವನು ಯಾರು?
Answer:
ಅಣ್ಣನಾಜ್ಞೆಯಲಿ ಭ್ರಮಿತನಾದವನು ಪಾರ್ಥ.

Question 3.
ಪಾಂಚಾಲನಂದನೆ ಯಾರು?
Answer:
ಪಾಂಚಾಲನಂದನೆ ಎಂದರೆ ದೌಪದಿ.

Question 4.
ರಾಜಸಭೆಯೊಳಗೆ ದೌಪದಿಯನ್ನು ಒದೆದವರು ಯಾರು?
Answer:
ರಾಜಸಭೆಯೊಳಗೆ ದೌಪದಿಯನ್ನು ಒದೆದವನು ಕೀಚಕ.

Question 5.
ಯಾರನ್ನು ಯಮಲೋಕಕ್ಕೆ ಕಳಿಸಲು ದೌಪದಿ ಭೀಮನಿಗೆ ಹೇಳುತ್ತಾಳೆ?
Answer:
ಕೀಚಕನನ್ನು ಯಮಲೋಕಕ್ಕೆ ಕಳಿಸಲು ದೌಪದಿ ಭೀಮನಿಗೆ ಹೇಳುತ್ತಾಳೆ.

Question 6.
‘ಗಂಡರೋ ನೀವ್ ಭಂಡರೊ’ ಎಂದು ಕೇಳಿದವರಾರು?
Answer:
‘ಗಂಡರೋ ನೀವ್ ಭಂಡರೊ’ ಎಂದು ದೌಪದಿ ಭೀಮನಲ್ಲಿ ಕೇಳುತ್ತಾಳೆ.

Question 7.
ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ಎಂದವರಾರು?
Answer:
ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ಎಂದು ಹೇಳಿದವಳು ದೌಪದಿ.

Question 8.
ಅರಣ್ಯವಾಸದಲ್ಲಿದ್ದಾಗ ದೌಪದಿಯನ್ನು ಎಳೆದೊಯ್ದದವರಾರು?
Answer:
ಅರಣ್ಯವಾಸದಲ್ಲಿದ್ದಾಗ ದೌಪದಿಯನ್ನು ಎಳೆದೊಯ್ದದವನು ಸೈಂಧವ.

Question 9.
ಮನದೊಳಗೆ ಹಗೆಗಳನ್ನು ಹಿಂಡಿದವರಾರು?
Answer:
ಮನದೊಳಗೆ ಹಗೆಗಳನ್ನು ಹಿಂಡಿದವನು ಭೀಮ.

Question 10.
ಯಾರ ಬಸುರನ್ನು ಬಗೆಯುವುದಾಗಿ ಭೀಮ ಹೇಳುತ್ತಾನೆ?
Answer:
ಕೀಚಕನ ಬಸುರನ್ನು ಬಗೆಯುವುದಾಗಿ ಭೀಮ ಹೇಳುತ್ತಾನೆ.

II. ಎರಡು ಅಂಕಗಳ ಪ್ರಶ್ನೆಗಳು:

Question 1.
ಕೊಲಲಕ್ಷಮರೆಂದು ದೌಪದಿ ಯಾರನ್ನು ಕುರಿತು ಹೇಳಿದ್ದಾಳೆ?
Answer:
ದೌಪದಿ ತನಗೆ ಒದಗಿ ಬಂದ ಸಂಕಷ್ಟವನ್ನು ಇರುವ ಐವರು ಗಂಡದಿರಲ್ಲಿ ಯಾರ ಬಳಿಯಲ್ಲಿ ಹೇಳಿಕೊಳ್ಳುವುದು ಎಂದು ಚಿಂತಿಸುತ್ತಾಳೆ. ಧರ್ಮರಾಯನಲ್ಲಿ ಹೇಳೋಣವೆಂದರೆ ಆತ ಧರ್ಮವನ್ನು ಮೀರಿ ನಡೆಯುವವನಲ್ಲ. ಅರ್ಜುನನಲ್ಲಿ ಹೇಳೋಣವೆಂದರೆ, ಆತ ಅಣ್ಣನ ಮಾತನ್ನು ಮೀರಿ ನಡೆಯುವವನಲ್ಲ. ಇನ್ನು ನಕುಲ-ಸಹದೇವರಿಗೆ ಹೇಳೋಣವೆಂದರೆ ಅವರಿಬ್ಬರು ಕೀಚಕನೆನ್ನುವ ನಾಯಿಯನ್ನು ಕೊಲ್ಲಲು ಅಕ್ಷಮರು ಎನ್ನುತ್ತಾ. ಭೀಮನಲ್ಲಿ ಹೇಳುವ ನಿರ್ಧಾರ ಮಾಡುತ್ತಾಳೆ.

Question 2.
ಮಲಗಿರುವ ಭೀಮನನ್ನು ದೌಪದಿ ಹೇಗೆ ಎಬ್ಬಿಸಿದಳು?
Answer:
ದೌಪದಿಯು ಭೀಮನಲ್ಲಿ ತನಗೆ ಒದಗಿ ಬಂದ ಕಷ್ಟವನ್ನು ಹೇಳಿಕೊಳ್ಳಲು ನಿರ್ಧರಿಸಿ. ನೋಡಿದವರು ಏನು ಅಂದುಕೊಂಡರೂ ಪರವಾಗಿಲ್ಲ ಎಂದು ಭೀಮನನ್ನು ನೋಡಲು ಬರುತ್ತಾಳೆ. ಆದರೆ ಆತ ಆ ವೇಳೆಯಲ್ಲಿ ಗಾಢವಾದ ನಿದ್ರೆಯಲ್ಲಿ ತೊಡಗಿರುತ್ತಾನೆ. ಆಕೆ ಮೆಲ್ಲಮೆಲ್ಲನೆ ಆತನ ಮುಸುಕನ್ನು ಸಡಿಲಿಸುತ್ತಾಳೆ. ಗಲ್ಲವನ್ನು ಹಿಡಿದು ಅಲುಗಾಡಿಸುತ್ತಾಳೆ. ಆಗ ಭೀಮ ಎಚ್ಚರಗೊಳ್ಳುತ್ತಾನೆ.

Question 3.
ತಾನು ಘೋರತರ ವಿಷ ಕುಡಿಯುವುದಾಗಿ ಬ್ರೌಪದಿ ಏಕೆ ಹೇಳುತ್ತಾಳೆ?
Answer:
ದೌಪದಿಯು ಇರುವ ಐವರು ಗಂಡಂದಿರಲ್ಲಿ ಭೀಮನು ತನಗೆ ಬಂದಿರುವ ಕಷ್ಟವನ್ನು ಪರಿಹರಿಸುವವನು ಅಂದುಕೊಳ್ಳುತ್ತಾಳೆ. ಆತ ಪರಾಕ್ರಮಿ, ಅಲ್ಲದೆ ಸ್ವಾಭಿಮಾನಿ ಕೂಡ. ಅವನೊಬ್ಬನೆ ಕೀಚಕನಿಗೆ ಸರಿಯಾದ ಬುದ್ದಿ ಕಲಿಸಬಲ್ಲವನು. ಒಂದು ವೇಳೆ ಆತನಲ್ಲಿಯೂ ಕೀಚಕನನ್ನು ಎದುರಿಸುವ ಸಾಮರ್ಥ್ಯ ಇಲ್ಲದಿದ್ದರೆ ತಾನು ಘೋರತರ ವಿಷ ಕುಡಿಯುವುದಾಗಿ ದೌಪದಿ ಹೇಳುತ್ತಾಳೆ.

Question 4.
ಉಳಿದ ನಾಲ್ವರು ಪಾಂಡವರ ಬಗ್ಗೆ ದೌಪದಿಯ ಅಭಿಪ್ರಾಯವೇನು?
Answer:
ದೌಪದಿಯು ಭೀಮನಲ್ಲಿ ತನ್ನ ಕಷ್ಟಕ್ಕೆ ಕಿವಿಗೊಡುವವನು ನೀನೊಬ್ಬನೆ. ಉಳಿದ ನಾಲ್ವರು ಪತಿಗಳು ಸುಖಕ್ಕಾಗಿ ನನ್ನ ಬಳಿ ಬರುತ್ತಾರೆ. ಆದರೆ ಮರ್ಯಾದೆ ಪ್ರತಿಷ್ಠೆಗಳ ಪ್ರಶ್ನೆ ಬಂದಾಗ ಅವರೆಲ್ಲ ಅಲ್ಲಿ ನಿಲ್ಲದೆ ಹೊರಟು ಹೋಗುತ್ತಾರೆ. ಆದುದರಿಂದ ನೀನು ನನ್ನನ್ನು ಕರುಣೆಯಿಂದ ನೋಡು ಎಂದು ಕೈಮುಗಿದು ಬೇಡುತ್ತಾಳೆ.

Question 5.
ಗಂಡರೈವರು ಮೂರು ಲೋಕದ ಗಂಡರಾರು? ಹೆಸರಿಸಿ.
Answer:
ದೌಪದಿಗೆ ಐದು ಜನ ಗಂಡಂದಿರು ಧರ್ಮರಾಯ, ಭೀಮ, ಅರ್ಜುನ, ನಕುಲ ಮತ್ತು ಸಹದೇವ. ಇವರಲ್ಲಿ ಎಲ್ಲರೂ ಮೂರು ಲೋಕದ ಗಂಡರೆ. ಆದರೆ ದೌಪದಿಯ ಕಷ್ಟದ ಪರಿಹಾರದ ವಿಷಯದಲ್ಲಿ ಇವರೆಲ್ಲರೂ ವೀರರಾಗಿದ್ದು ಪ್ರಯೋಜನವಿಲ್ಲದಂತಾಗಿದೆ.

Question 6.
ಹೆಂಡತಿಯ ಹರಿಬಕ್ಕಾಗಿ ಗಂಡುಗೂಸು ಏನು ಮಾಡುತ್ತಾನೆ?
Answer:
ಹೆಂಡತಿಯ ಹರಿಬ(ಸಂಕಷ್ಟ)ಕ್ಕಾಗಿ ಗಂಡುಗೂಸು ಒಬ್ಬನೇ ಇದ್ದರೂ ಆತ ವೈರಿಯನ್ನು ಕಡಿದು ತುಂಡರಿಸಿ ಬಿಡುತ್ತಾನೆ ಅಥವಾ ತನ್ನೊಡಲನ್ನೇ ಕೊಟ್ಟಾದರೂ ಪತ್ನಿಯ ಮಾನವನ್ನು ಉಳಿಸುತ್ತಾನೆ.

III. ಸಂದರ್ಭ ಸ್ವಾರಸ್ಯ:

Question 1.
ಎನ್ನವೊಲು ಮುನ್ನಾರು ನವೆದವರುಂಟು.

Answer:
ಆಯ್ಕೆ: ಈ ಮಾತನ್ನು ‘ಕುಮಾರವ್ಯಾಸ’ನು ರಚಿಸಿರುವ ‘ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಈ ಮಾತನ್ನು ಬ್ರೌಪದಿಯು ತನ್ನಲ್ಲಿ ಹೇಳಿಕೊಳ್ಳುತ್ತಾಳೆ.
ಸ್ವಾರಸ್ಯ : ಪಾಂಡವರ ಅಜ್ಞಾತವಾಸದ ಅವಧಿಯಲ್ಲಿ. ಸೈರಂದ್ರಿ ವೃತ್ತಿಯಲ್ಲಿದ್ದ ದೌಪದಿಯನ್ನು ಕಂಡ ಕಾಮುಕನಾದ ಕೀಚಕನು, ಬ್ರೌಪದಿಯ ಬೆನ್ನು ಹತ್ತಿರುತ್ತಾನೆ. ಅವನ ಉಪಟಳದ ಕುರಿತಂತೆ ದೂರಿಕೊಂಡರೂ ರಾಜ-ರಾಣಿಯರಾಗಿದ್ದ ವಿರಾಟರಾಜ ಮತ್ತು ಸುದೇಷ್ಟೆಯರು ಸರಿಯಾಗಿ ಸ್ಪಂದಿಸಲಿಲ್ಲ. 

ಹೀಗಿರುವಾಗ ತನ್ನ ಅಸಹಾಯಕ ಸ್ಥಿತಿಗಾಗಿ ವ್ಯಧಿಸುತ್ತ ದೌಪದಿಯು ತನ್ನೊಳಗೆ ಈ ಮಾತನಾಡಿಕೊಳ್ಳುತ್ತಾಳೆ. ಬ್ರೌಪದಿಯಂತಹ ಸಂಕಷ್ಟಕ್ಕೊಳಗಾದವರು ಇನ್ನೊಬ್ಬರಿಲ್ಲ ಎಂಬುದನ್ನು ಆಕೆಯ ಮಾತಿನಲ್ಲೇ ವ್ಯಕ್ತಪಡಿಸಿದ್ದು ಇಲ್ಲಿ ಕಾಣಿಸುತ್ತದೆ.

Question 2.
ಯಮಸುತಂಗರುಹುವೆನೆ ಧರ್ಮಕ್ಷಮೆಯ ಗರ ಹೊಡೆದಿಹುದು.

Answer:
ಆಯ್ಕೆ: ಈ ಮಾತನ್ನು ‘ಕುಮಾರವ್ಯಾಸ’ನು ರಚಿಸಿರುವ ‘ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಈ ಮಾತನ್ನು ಬ್ರೌಪದಿಯು ತನ್ನಲ್ಲಿ ಹೇಳಿಕೊಳ್ಳುತ್ತಾಳೆ.
ಸ್ವಾರಸ್ಯ : ವಿವಾಹಿತಳಾದ ನಾರಿಯೊಬ್ಬಳನ್ನು ಆಕೆಯ ಗಂಡ ರಕ್ಷಿಸಬೇಕಾದುದು ಸಹಜ. ಆದರೆ ಅಜ್ಞಾತವಾಸದ ಅವಧಿಯಲ್ಲಿ ದೌಪದಿಯ ದಯನೀಯ ಸ್ಥಿತಿ ಹೇಗಿತ್ತೆಂದರೆ ಐದು ಮಂದಿ ಗಂಡಂದಿರಿದ್ದರೂ ಅವರಲ್ಲಿ ಯಾರೂ ಆಕೆಯನ್ನು ಕೀಚಕನಿಂದ ರಕ್ಷಿಸಲು ಸಲು ಮುಂದಾಗುವುದಿಲ್ಲ. 

ಹೀಗಿರುವಾಗ ದೌಪದಿಯು ತನ್ನ ಸಂಕಟವನ್ನು ಯಾರಲ್ಲಿ ಹೇಳಿಕೊಳ್ಳಲಿ? ಆಲೋಚಿಸುತ್ತಾಳೆ. ಗಂಡಂದಿರಲ್ಲಿ ಹಿರಿಯನಾದ ಧರ್ಮರಾಜನಿಗೆ ಹೇಳೋಣ. ಎಂದು ಎಂದು ಅಂದುಕೊಂಡರೆ, ಆತನಿಗೆ ಧರ್ಮಕ್ಷಮೆಯೆಂಬ (ನವಗ್ರಹಗಳಲ್ಲಿ ಸೇರದ ಹತ್ತನೆಯ ಗ್ರಹ ಬಡಿದಿದೆ ಎಂದು ತನ್ನೊಳಗೆ ಅಂದುಕೊಳ್ಳುತ್ತಾಳೆ. ತನ್ನ ಮಾನಕ್ಕೆ ಕುಂದು ಬರುವ ಪ್ರಸಂಗವೊದಗಿದಾಗ, ಹೆಣ್ಣೂಬ್ಬಳಿಗೆ ಉಂಟಾಗುವ ಸಾತ್ವಿಕ ಕ್ರೋಧ ಇಲ್ಲಿ ಕಾಣಿಸುತ್ತದೆ.

Question 3.
ಕಲಿಭೀಮನೇ ಮಿಡುಕುಳ್ಳ ಗಂಡನು.

Answer:
ಆಯ್ಕೆ: ಈ ಮಾತನ್ನು ‘ಕುಮಾರವ್ಯಾಸ’ನು ರಚಿಸಿರುವ ‘ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಈ ಮಾತನ್ನು ಬ್ರೌಪದಿಯು ತನ್ನಲ್ಲಿ ಹೇಳಿಕೊಳ್ಳುತ್ತಾಳೆ.
ಸ್ವಾರಸ್ಯ : ಕೀಚಕನಿಂದ ಸಂತ್ರಸ್ತಳಾದ ದೌಪದಿ ತನ್ನ ಸಂಕಷ್ಟವನ್ನು ಪರಿಹರಿಸಬಲ್ಲ ವೀರರಾರೆಂದು ಯೋಚಿಸುತ್ತಾಳೆ. ಪರರಿಂದ ತೊಂದರೆಯಾದಾಗ ಮೊದಲು ತನ್ನ ಗಂಡನಲ್ಲಿ ದೂರಿಕೊಳ್ಳಬೇಕು. ಈಕೆಗೆ ಐವರು ಪತಿಯರಿರುವುದರಿಂದ ಅವರಲ್ಲಿ ಯಾರು ತನ್ನ ಕಷ್ಟವನ್ನು ನಿವಾರಿಸುವ ಸಾಮರ್ಥವುಳ್ಳವರೆಂದು ಯೋಚಿಸುತ್ತಾಳೆ. 

ಧರ್ಮರಾಜನಾಗಲಿ ಅರ್ಜುನನಾಗಲಿ ನಕುಲಸಹದೇವರಾಗಲಿ ಕೀಚಕನನ್ನು ಕೊಂದು ತನ್ನ ಕಷ್ಟವನ್ನು ನಿವಾರಿಸಲಾರರೆಂದು ಯೋಚಿಸಿ, ಕೊನೆಗೆ ಭೀಮನೇ ತಕ್ಕವನೆಂದು ನಿರ್ಣಯಿಸುತ್ತಾಳೆ. ಭೀಮದೇವನು ಎಲ್ಲರಿಗಿಂತ ಶಕ್ತಿಶಾಲಿ ಮಾತ್ರವಲ್ಲ ತನ್ನ ಕಷ್ಟಕ್ಕೆ ಮಿಡಿಯುತ್ತಾನೆ ಎಂಬುದನ್ನು ದೌಪದಿ ಈ ರೀತಿ ಹೇಳಿಕೊಳ್ಳುತ್ತಾಳೆ.

Question 4.
ಹುರುಳಿಲ್ಲದೊಡೆ ಕುಡಿವೆನು ಘೋರತರ ವಿಷವ.

Answer:
ಆಯ್ಕೆ: ಈ ಮಾತನ್ನು ‘ಕುಮಾರವ್ಯಾಸ’ನು ರಚಿಸಿರುವ ‘ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಈ ಮಾತನ್ನು ದೌಪದಿಯು ತನ್ನಲ್ಲಿ ಹೇಳಿಕೊಳ್ಳುತ್ತಾಳೆ.
ಸ್ವಾರಸ್ಯ : ದೌಪದಿಯನ್ನು ಕೀಚಕನು ಬೆಂಬತ್ತಿರಲು, ಆತನಿಂದ ಬಿಡುಗಡೆಗೊಳಿಸಲು ಯಾರಲ್ಲಿ ವಿನಂತಿಸಿಕೊಳ್ಳಲಿ? ಎಂದು ಚಿಂತಿತಳಾಗಿ, ತನ್ನ ಪತಿಯರಲ್ಲಿ ಎರಡನೆಯವನಾದ ಭೀಮಸೇನನೇ ಯೋಗ್ಯನೆಂದುಕೊಳ್ಳುತ್ತಾಳೆ. ಒಂದೊಮ್ಮೆ ಆತನು ತನ್ನನ್ನು ಸಂರಕ್ಷಿಸದೆ ಹೋದಲ್ಲಿ, ತಾನು ಫೋರ ವಿಷವನ್ನು ಕುಡಿಯುತ್ತೇನೆ ಎಂದು ಹೇಳುತ್ತಾಳೆ. ಪ್ರಾಣಕ್ಕಿಂತಲೂ ಮಾನವೇ ಮುಖ್ಯವೆಂದು ಬಲವಾಗಿ ನಂಬಿದ್ದ ದೌಪದಿಯ ಮಾನಸಿಕ ದಾರ್ಢ ಇಲ್ಲಿ ಕಾಣಿಸುತ್ತದೆ.

Question 5.
ನೀನಲ್ಲದುಳಿದವರುಚಿತ ಬಾಹಿರರು.

Answer:
ಆಯ್ಕೆ: ಈ ಮಾತನ್ನು ‘ಕುಮಾರವ್ಯಾಸ’ನು ರಚಿಸಿರುವ ‘ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಈ ಮಾತನ್ನು ದೌಪದಿಯು ಭೀಮನಲ್ಲಿ ಹೇಳುತ್ತಾಳೆ.
ಸ್ವಾರಸ್ಯ : ದೌಪದಿಯು; ಕೀಚಕನಿಂದ ತನ್ನ ಮಾನವನ್ನು ಕಾಯಬೇಕೆಂದು ವಿರಾಟರಾಜ ಸುದೇಷ್ಟೆಯರಲ್ಲಿ ಕೇಳಿಕೊಂಡು ಪ್ರಯೋಜನವಾಗದಿರಲು, ಕೊನೆಯಲ್ಲಿ ತನ್ನ ಗಂಡ ಭೀಮಸೇನನಲ್ಲಿ ಅಂತರಂಗದಲ್ಲಿ ಕೇಳಿಕೊಳ್ಳುತ್ತಾಳೆ. ವಿರಾಟರಾಜ ಮತ್ತು ಆತನ ಪತ್ನಿ ಸುದೇಷ್ಟೆಯರಲ್ಲಿ ಅಧಿಕಾರವಿದ್ದರೂ ಧೈರ್ಯ-ಸಾಮರ್ಥಗಳಿರಲಿಲ್ಲ. 

ಧರ್ಮರಾಜನಿಗೆ, ಕ್ಷಮಾಶೀಲತೆಯೇ ಗುಣವಾಗಿತ್ತಲ್ಲದೆ ಕೀಚಕನನ್ನು ಎದುರಿಸುವ ಧೈರ್ಯ-ಸಾಮರ್ಥಗಳು ಇರಲಿಲ್ಲ. ಧೈರ್ಯ-ಸಾಮರ್ಥ್ಯ ಇವೆರಡೂ ಮೇಲೈಸಿದ್ದುದು ಭೀಮನಲ್ಲಿ ಮಾತ್ರ. ಆದ್ದರಿಂದ ದೌಪದಿಯು, ತನ್ನ ಮಾನವನ್ನು ಉಳಿಸಲು ಭೀಮನಲ್ಲದೆ ಅನ್ಯರು ಯಾರಿಂದಲೂ ಸಾಧ್ಯವಿಲ್ಲ ಎನ್ನುತ್ತಾಳೆ.

Question 6.
ಕೆಲಬರು ಗಳಿಸಿದೊಡೆ ಕೆಲರುಂಡು ಜಾರುವರು.

Answer:
ಆಯ್ಕೆ: ಈ ಮಾತನ್ನು ‘ಕುಮಾರವ್ಯಾಸ’ನು ರಚಿಸಿರುವ ‘ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಈ ಮಾತನ್ನು ಭೀಮನು ದೌಪದಿಯಲ್ಲಿ ಹೇಳುತ್ತಾನೆ.
ಸ್ವಾರಸ್ಯ : ರೂಢಿಯಲ್ಲಿರುವ ಗಾದೆಯಮಾತಿದು. ಕೂಡುಕುಟುಂಬದ ಮನೆಗಳಲ್ಲಿ ದುಡಿಯುವವರು ಬೇರೆ. ಕುಳಿತು ಉಣ್ಣುವವರು ಬೇರೆ. ಕೆಲವರು ಶ್ರಮಪಟ್ಟು ದುಡಿಯುತ್ತಾರೆ. ಇನ್ನು ಕೆಲವರು ಚೆನ್ನಾಗಿ ತಿಂದುಂಡು ಸುಖವಾಗಿದ್ದು ಅಗತ್ಯದ ಕೆಲಸಗಳಿಂದ, ಕರ್ತವ್ಯದಿಂದ ಜಾರಿಕೊಳ್ಳುತ್ತಾರೆ. 

ದ್ರಪದಿಯು ಭೀಮನಲ್ಲಿ, ನೀನಲ್ಲದೆ ಅನ್ಯರು ನನ್ನ ಮಾನವನ್ನು ಉಳಿಸಲು ಅಸಮರ್ಥರು; ಸುಖಕ್ಕಷ್ಟೇ ನನ್ನ ಬಳಿಗೆ ಬರುತ್ತಾರೆ. ಕಷ್ಟಕ್ಕೆ ಒದಗಲಾರರು ಎಂದು ಹೇಳಿದುದಕ್ಕೆ ಪ್ರತಿಯಾಗಿ ಭೀಮ ಹೇಳುವ ಯುಕ್ತಿಯುತ ಮಾತು ಇದಾಗಿದೆ. ಅಣ್ಣನ ಆಜ್ಞೆಯು ತನ್ನ ಸ್ವಾತಂತ್ರ್ಯ ವನ್ನು ಕಸಿಯಿತೆಂಬ ಭೀಮನ ಅಸಹನೆ, ದುಡಿಯುವಾತನಿಗೇ ಮೇಲಿಂದ ಮೇಲೆ ಒದಗುವ ಒತ್ತಡಗಳು ಇಲ್ಲಿ ಪ್ರಕಟಗೊಂಡಿದೆ.

Question 7.
ಒಬ್ಬಳನಾಳಲಾರಿರಿ ಗಂಡರೋ ನೀವ್ ಭಂಡರೋ?

Answer:
ಆಯ್ಕೆ: ಈ ಮಾತನ್ನು ‘ಕುಮಾರವ್ಯಾಸ’ನು ರಚಿಸಿರುವ ‘ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಈ ಮಾತನ್ನು ದೌಪದಿಯು ಭೀಮನಲ್ಲಿ ಹೇಳುತ್ತಾಳೆ.
ಸ್ವಾರಸ್ಯ: ಸಮಾಜ ವ್ಯವಸ್ಥೆಯಲ್ಲಿ ಒಬ್ಬಳು ಹೆಣ್ಣಿಗೆ ಒಬ್ಬ ಗಂಡನಿರುತ್ತಾನೆ. ಒಬ್ಬನೇ ಗಂಡನಾದರೂ ಆತ ತನ್ನ ಹೆಂಡತಿಯ ಮಾನವನ್ನು ಸಂರಕ್ಷಿಸಿಕೊಳ್ಳಲು ಪ್ರಾಣವನ್ನು ಕೊಡುವುದಕ್ಕೂ ಸಿದ್ದನಿರುತ್ತಾನೆ. ಆದರೆ ದೌಪದಿಗೆ ಐವರು ಗಂಡಂದಿರಿದ್ದರೂ ಒಬ್ಬರೂ ಆಕೆಯ ಮಾನವನ್ನು ಕಾಯುವುದಕ್ಕೆ ಮುಂದಾಗುತ್ತಿಲ್ಲ ಎಂಬುದಾಗಿ ದೌಪದಿ ಆರೋಪಿಸುತ್ತಾಳೆ. ತಟಸ್ಥನಾಗಿದ್ದ ಭೀಮನನ್ನು ಕಾರ್ಯೋನ್ಮುಖನನ್ನಾಗಿ ಮಾಡಲು ಬ್ರೌಪದಿ ಛೇಡಿಸುವ ಮಾತಿದಾಗಿದೆ.

Question 8.
ಇನ್ನು ಹುಟ್ಟಿದೆಯಿರಲಿ ನಾರಿಯರೆನ್ನಮೊಲು.

Answer:
ಆಯ್ಕೆ: ಈ ಮಾತನ್ನು ‘ಕುಮಾರವ್ಯಾಸ’ನು ರಚಿಸಿರುವ ‘ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಈ ಮಾತನ್ನು ದೌಪದಿಯು ಭೀಮನಲ್ಲಿ ಹೇಳುತ್ತಾಳೆ.
ಸ್ವಾರಸ್ಯ: ಕೀಚಕನು ದೌಪದಿಯ ಸೌಂದರ್ಯದಿಂದ ಮನಸೋತು ಆಕೆಯನ್ನು ಹೊಂದಬೇಕೆಂದು ನಾನಾ ತೆರನಾಗಿ ತಂತ್ರವನ್ನು ರೂಪಿಸುತ್ತಾನೆ. ಈ ಬಾಧೆಯಿಂದ ಬೇಸತ್ತ ದೌಪದಿಯು, ಭೀಮನಲ್ಲಿಗೆ ಬಂದು ಅಂತರಂಗದಲ್ಲಿ ತನ್ನ ಅಳಲನ್ನು ತೋಡಿಕೊಂಡು, ತಾನು ಪಟ್ಟ ಪಾಡನ್ನು ಈ ರೀತಿ ಹೇಳಿಕೊಳ್ಳುತ್ತಾಳೆ. ದೌಪದಿಯ ದಯನೀಯ ಅವಸ್ಥೆ ಇಲ್ಲಿ ಅನಾವರಣಗೊಂಡಿದೆ

Question 9.
ಕೂಳುಗೇಡಿಂಗೊಡಲ ಹೊರುವಿರಿ.

Answer:
ಆಯ್ಕೆ : ಈ ಮಾತನ್ನು ‘ಕುಮಾರವ್ಯಾಸ’ನು ರಚಿಸಿರುವ ‘ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಈ ಮಾತನ್ನು ದೌಪದಿಯು ಭೀಮನಲ್ಲಿ ಹೇಳುತ್ತಾಳೆ.
ಸ್ವಾರಸ್ಯ : ಕೀಚಕನಿಂದ ಉಪಟಳಕ್ಕೊಳಗಾದ ದೌಪದಿಯು ತನ್ನ ದೌರ್ಭಾಗ್ಯವನ್ನು ಭೀಮನಲ್ಲಿ ಹೇಳಿಕೊಳ್ಳುತ್ತ, ತಾನು ಪಾಂಚಾಲ ದೇಶದ ಅರಸನ ಮನೆಯಲ್ಲಿ ಹುಟ್ಟಿ, ಮನುಷ್ಯ, ಗಂಧರ್ವ, ದೇವತಾವರ್ಗಕ್ಕೂ ಮೀರಿದ ಶೌರ್ಯವುಳ್ಳ ಪಾಂಡವರ ಕೈಹಿಡಿದರೂ ಇನ್ನೊಬ್ಬರ ದಾಸ್ಯವನ್ನನುಭವಿಸುವ ಪ್ರಾರಬ್ಧ ತನ್ನದಾಯಿತೆಂದೂ ಪಾಂಡವರ ಶಕ್ತಿ ಸಾಮರ್ಥ ವ್ಯರ್ಥವೆಂದು ಹೇಳುತ್ತ ಅಣಕಿಸಿ ಭೀಮನು ಕೆರಳುವಂತೆ ಮಾಡುತ್ತಾಳೆ. 

ಈ ಸಂದರ್ಭ, ಬಲಿಷ್ಠವಾದ ತೋಳುಗಳಿದ್ದರೂ ಅದರಿಂದ ಶತ್ರುನಾಶ ಮಾಡಲಾಗದಿದ್ದಲ್ಲಿ ಅದು ವ್ಯರ್ಥ, ಸುಮ್ಮನೆ ಹೊರೆ: ಶರೀರವನ್ನು ಪೋಷಿಸುತ್ತಿರುವುದೂ ಅನ್ನ ದಂಡಕ್ಕೆ ಎಂದು ಅಣಕಿಸುತ್ತಾಳೆ. ದೌಪದಿಯು ಕಾರ್ಯ ಸಾಧನೆಗೆ ಪ್ರಚೋದಿಸಲು ಭೀಮನನ್ನು ಕೆರಳಿಸಬೇಕೆಂದೇ ಆಡುವ ಚುಚ್ಚುಮಾತು ಇದಾಗಿದೆ.

Question 10.
ಹಗೆಗಳನು ಹಿಂಡಿದನು ಮನದೊಳಗೆ.

Answer:
ಆಯ್ಕೆ: ಈ ಮಾತನ್ನು ‘ಕುಮಾರವ್ಯಾಸ’ನು ರಚಿಸಿರುವ ‘ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಈ ಮಾತನ್ನು ಕವಿ ಭೀಮನ ಆಕ್ರೋಶವನ್ನು ಗಮನಿಸುತ್ತಾ ಹೇಳುತ್ತಾನೆ.
ಸ್ವಾರಸ್ಯ: ದೌಪದಿಯು, ತನ್ನ ಮಾನವನ್ನು ರಕ್ಷಿಸಬೇಕೆಂದು ಭೀಮನ ಬಳಿಗೆ ರಾತ್ರಿ ವೇಳೆಯಲ್ಲಿ ಬಂದು. ಅಂತರಂಗದಲ್ಲಿ ತನ್ನ ಅವಸ್ಥೆಯನ್ನು ಹೇಳಿಕೊಂಡು ಭೀಮನು ಕೋಪಗೊಳ್ಳುವಂತೆ ಕೆಣಕಿ ಮಾತನಾಡುತ್ತಾಳೆ. ಇದರಿಂದ ಕೆರಳಿಕೋಪಾವಿಷ್ಟನಾದ ಭೀಮನು, ತನ್ನ ಅಂತರಂಗದಲ್ಲಿ ಶತ್ರುಗಳನ್ನು ಹಿಂಡಿ ಹಿಪ್ಪೆಮಾಡುತ್ತೇನೆಂದು ಬಗೆಯುತ್ತಾನೆ. ತಟಸ್ಥನಾಗಿದ್ದ ಭೀಮನು, ದೌಪದಿಯ ದಯನೀಯ ಸ್ಥಿತಿಯನ್ನು ಕಂಡು ಕನಿಕರಿಸಿ, ಶತ್ರುಗಳ ಬಗೆಗೆ ತಳೆದ ಭಾವ ಇದಾಗಿದೆ. ಭೀಮನ ಕೆಚ್ಚು ಇಲ್ಲಿ ಕಾಣಿಸಿಕೊಂಡಿದೆ.

IV. ನಾಲ್ಕು ಅಂಕಗಳ ಪ್ರಶ್ನೆಗಳು:

Question 1.
ತನಗೊದಗಿದ ಸಂಕಟವನ್ನು ಹೇಳಿಕೊಳ್ಳುವ ದೌಪದಿಯ ಸ್ವಗತದ ನುಡಿಗಳಾವುವು?

Answer:
ದೌಪದಿಯು ವಿರಾಟ ಆಸ್ಥಾನದಲ್ಲಿ ಕೀಚಕನಿಂದ ಪಡುತ್ತಿರುವ ಕಷ್ಟವನ್ನು ನೆನಪಿಸಿಕೊಳ್ಳುತ್ತಾ ಪರಿಹಾರಕ್ಕಾಗಿ ಚಿಂತಿಸುತ್ತಿದ್ದಳು. ತನಗಾದ ಅವಮಾನವನ್ನು ಯಾರ ಬಳಿಯಲ್ಲಿ ಹೇಳಲಿ? ಯಾರ ಬಳಿಗೆ ಹೋಗಲಿ? ಯಾರಲ್ಲಿ ಹೇಳಲಿ? ಯಾರನ್ನು ಬೇಡಿಕೊಳ್ಳಲಿ? ಛಿ! ಹೆಣ್ಣಿನ ಜನ್ಮಕ್ಕೆ ಧಿಕ್ಕಾರವಿರಲಿ. ಮಹಾಪಾಪಿಷ್ಟಳಾದ ನನ್ನಂತೆ ನವೆದವರು ಈ ಹಿಂದೆ ಯಾರಿದ್ದಾರೆ? ಅಯ್ಯೋ ನನಗೆ ಸಾವು ಕೂಡ ಬರುತ್ತಿಲ್ಲವಲ್ಲ. ಎಂದು ತನ್ನ ಹೊಟ್ಟೆಯ ಮೇಲೆ ಹೊಡೆದುಕೊಂಡು ಸಂಕಟ ಪಡುತ್ತಾಳೆ.

ಧರ್ಮರಾಯನಲ್ಲಿ ಹೇಳೋಣ ಎಂದರೆ ಅವನಿಗೆ ಧರ್ಮ ಕ್ಷಮೆಯ ಗರ ಹೊಡೆದಿದೆ. ನನ್ನಲ್ಲಿ ಮಮತೆಯುಳ್ಳ ಅರ್ಜುನನಲ್ಲಿ ಹೇಳೋಣವೆಂದರೆ ಅವನಿಗೆ ಅಣ್ಣನ ಆಜ್ಞೆಯ ಭ್ರಮೆ ಕವಿದಿದೆ. ಉಳಿದ ಇಬ್ಬರು ರಮಣರಾದ ನಕುಲ-ಸಹದೇವರು ಈ ಕೀಚಕ ಎನ್ನುವ ನಾಯಿಯನ್ನು ಕೊಲ್ಲಲು ಅವರು ಸಮರ್ಥರಲ್ಲವೆಂದುಕೊಳ್ಳುತ್ತಾಳೆ.

ಆದರೆ ಐವರು ಪಾಂಡವರಲ್ಲಿ ಪೌರುಷ ಮತ್ತು ಕೆಚ್ಚು ಉಳ್ಳವನೆಂದರೆ ಕಲಿಭೀಮ ಮಾತ್ರ. ನನಗೆ ವಿಪತ್ತು ಬಂದಿದೆ ಎಂದು ತಿಳಿದರೆ ತಡಮಾಡದೆ ಪ್ರತಿಕ್ರಿಯಿಸುತ್ತಾನೆ. ಆದುದರಿಂದ ದುಷ್ಟ ಕೀಚಕನಿಂದ ಆಗುತ್ತಿರುವ ತೊಂದರೆಯನ್ನು ಭೀಮನಿಗೆ ಹೇಳಿಬಿಡುತ್ತೇನೆ. ಒಂದು ವೇಳೆ ಆತನಲ್ಲಿಯೂ ಹುರುಳಿಲ್ಲ ಎಂದು ಗೊತ್ತಾದರೆ ಘೋರವಿಷವನ್ನು ತೆಗೆದುಕೊಂಡು ಪ್ರಾಣ ಬಿಡುತ್ತೇನೆ ಎಂದು ತನ್ನಲ್ಲೆ ತಾನು ಯೋಚಿಸುತ್ತಾಳೆ.

Question 2.
ತನಗಾದ ಅವಮಾನವನ್ನು ದೌಪದಿ ಭೀಮನಿಗೆ ಹೇಳಿಕೊಂಡ ಬಗೆಯನ್ನು ವಿವರಿಸಿ.

Answer:
ದೌಪದಿ ಭೀಮನಲ್ಲಿ ತನಗಾದ ಅವಮಾನವನ್ನು ಬಹಳ ದುಃಖದಿಂದ ಹೇಳಿಕೊಳ್ಳುತ್ತಾಳೆ. ನಿನ್ನೆ ಮಧ್ಯಾಹ್ನ ಕೀಚಕನೆಂಬ ನಾಯಿ ಎಲ್ಲರೆದುರಿಗೆ ರಾಜಸಭೆಯ ಬಳಿ ನನ್ನನ್ನು ಒದೆದ. ನಿನ್ನಂಥ ವೀರ ಗಂಡನಿರುವಾಗ ನನಗೆ ಅವಮಾನವಾದದ್ದು ಸರಿಯೆ? ಅಷ್ಟೆ ಅಲ್ಲ, ಅವನು ನನ್ನನ್ನು ಹಿಂಬಾಲಿಸದೆ ಬಿಡುವುದಿಲ್ಲ. ಆದ್ದರಿಂದ ನಾನು ಬದುಕುವುದಿಲ್ಲ. ನಾನು ಆತ್ಮಹತ್ಯೆ ಮಾಡಿಕೊಂಡರೆ ಆ ಪಾತಕ ನಿನ್ನನ್ನು ಸುತ್ತಿಕೊಳ್ಳುತ್ತದೆ.

ದೌಪದಿ ತನ್ನ ಮಾತನ್ನು ಮುಂದುವರಿಸುತ್ತಾ ಉಳಿದ ನಾಲ್ವರು ಪತಿಗಳು ಸುಖಕ್ಕಾಗಿ ನನ್ನ ಬಳಿ ಬರುತ್ತಾರೆ. ಆದರೆ ಮರ್ಯಾದೆ ಪ್ರತಿಷ್ಠೆಗಳ ಪ್ರಶ್ನೆ ಬಂದಾಗ ಅವರೆಲ್ಲ ಅಲ್ಲಿ ನಿಲ್ಲದೆ ಹೊರಟು ಹೋಗುತ್ತಾರೆ. ನಿನ್ನನ್ನು ಬಿಟ್ಟರೆ, ಉಳಿದವರೆಲ್ಲ ಕಷ್ಟಕ್ಕೆ ಒಗ್ಗದವರಾಗಿದ್ದಾರೆ. ಆದ್ದರಿಂದ ನೀನು ನನ್ನನ್ನು ತುಂಬ ಕರುಣೆಯಿಂದ ನೋಡು ಮನಸ್ಸಿನ ಶಾಂತತೆಯನ್ನು ದೂರವಿಡು. ಆ ಕ್ರೂರಿ ಕೀಚಕನನ್ನು ಕೊಲ್ಲು ನನ್ನ ಮೇಲೆ ಕರುಣೆದೋರು ಎಂದು ತನಗಾದ ಅವಮಾನವನ್ನು ಹೇಳಿಕೊಂಡಳು.

Question 3.
ಭೀಮನು ದೌಪದಿಯನ್ನು ಹೇಗೆ ಸಂತೈಸಿದನು?

Answer:
ದೌಪದಿಯು ತನಗೆ ಒದಗಿ ಬಂದಿರುವ ಕಷ್ಟವನ್ನು ಭೀಮನಲ್ಲಿ ಹೇಳಲು ನಿರ್ಧರಿಸಿ ಆತನಲ್ಲಿ ಹೇಳುತ್ತಾಳೆ. ಆದರೆ ಭೀಮ ತಾನೂ ಕೂಡ ಈ ವಿಷಯದಲ್ಲಿ ಅಸಹಾಯಕ ಎನ್ನುತ್ತಾನೆ. ಇದರಿಂದ ಕೋಪಗೊಂಡ ದೌಪದಿ ನೀವು ಐವರು ಗಂಡಂದಿರು ನನ್ನೊಬ್ಬಳನ್ನು ಕಾಯಲಾರಿರಿ, ‘ನೀವು ಗಂಡರೋ ಭಂಡರೋ’ ಎನ್ನುತ್ತಾಳೆ. ಅಲ್ಲದೆ ನನ್ನಷ್ಟು ಅವಮಾನಕ್ಕೆ ಗುರಿಯಾಗುವ ಹೆಂಗಸರು ಜನಿಸಬಾರದು ಎನ್ನುತ್ತಾಳೆ. ದೌಪದಿಯ ಈ ಮಾತುಗಳನ್ನು ಕೇಳಿದ ಭೀಮನಿಗೆ ದುಃಖವಾಗುತ್ತದೆ. ಜೊತೆಯಲ್ಲಿ ಸಿಟ್ಟೂ ಬರುತ್ತದೆ. ಮನಸ್ಸಿನಲ್ಲಿಯೇ ತನ್ನ ಹಗೆಗಳನ್ನು ಹಿಂಡುತ್ತಾನೆ. ಅಲ್ಲದೆ ಅನುಕಂಪದಿಂದ ದೌಪದಿಯನ್ನು ಮೆಲ್ಲನೆ ಅಪ್ಪಿಕೊಳ್ಳುತ್ತಾನೆ. ತನ್ನ ಉತ್ತರೀಯದಿಂದ ಆಕೆಯ ಕಣ್ಣುಗಳನ್ನು ಒರೆಸಿದನು. 

ಆಕೆಯ ತಲೆಗೂದಲನ್ನು ನೇವರಿಸಿ ಅವಳ ಗಲ್ಲವನ್ನು ಒರೆಸಿ ಮುದ್ದಾಡಿ. ಗಿಂಡಿಯ ನೀರಿನಲ್ಲಿ ಆಕೆಯ ದುಃಖಿತವಾದ ಮುಖವನ್ನು ತೊಳೆಯುತ್ತಾನೆ. ತಮ್ಮ ಅಣ್ಣನ ಆಜ್ಞೆಯನ್ನು ದಾಟಿದೆ ದಾಟಿದೆ. ಕೀಚಕನ ಎದೆಯನ್ನು ಸೀಳಿಹಾಕುತ್ತೇನೆ. ವಿರೋಧಿಸಿದರೆ ವಿರಾಟನ ವಂಶವನ್ನು ಹೇಳಹೆಸರಿಲ್ಲದಂತೆ ಮಾಡುತ್ತೇನೆ. ನಾವು ಇಲ್ಲಿರುವುದು ಗೊತ್ತಾಗಿ ಕೌರವರು ನಮ್ಮ ವಿರುದ್ಧ ಯುದ್ಧಕ್ಕೆ ಬಂದರೆ ಅವರನ್ನು ಕೂಡ ನಾಶ ಮಾಡುತ್ತೇನೆ. ಭೀಮನು ಅಹಿತ ಕೆಲಸವನ್ನು ಮಾಡಿದ ಎಂದು ದೇವತೆಗಳು ಗೊಣಗಿದರೆ ಅವರ ಮುಖವನ್ನು ಮೇರುಪರ್ವತಕ್ಕೆ ಹಾಕಿ ತೇಯುತ್ತೇನೆ ಎಂದು ಭೀಮ ದೌಪದಿಗೆ ಸಮಾಧಾನ ಪಡಿಸಿದನು.

Question 4.
ಬ್ರೌಪದಿ ಅವಮಾನಕ್ಕೊಳಗಾದ ಮೂರು ಪ್ರಸಂಗಗಳನ್ನು ವಿವರಿಸಿ.

Answer:
ದೌಪದಿಯು ತನಗೆ ಬಂದಿರುವ ಕಷ್ಟದ ಪರಿಹಾರಕ್ಕಾಗಿ ಭೀಮನಲ್ಲಿಗೆ ಬರುತ್ತಾಳೆ. ಆದರೆ ಭೀಮ ಆಕೆಯ ಕಷ್ಟಕ್ಕೆ ಪರಿಹಾರವನ್ನು ಸೂಚಿಸದೆ ತನ್ನ ಅಸಹಾಯಕತೆಯನ್ನೇ ತೋಡಿಕೊಳ್ಳುತ್ತಾನೆ. ಆಗ ದೌಪದಿಯು ಭೀಮನಲ್ಲಿ ತಾನು ಈ ವರೆಗೂ ಅನುಭವಿಸದಂತಹ ಕಷ್ಟಗಳನ್ನು ಹೇಳಿಕೊಳ್ಳುತ್ತಾಳೆ. ಈ ಸಂದರ್ಭದಲ್ಲಿ ಆಕೆ ಅವಮನಕ್ಕೊಳಗಾದ ಮೂರು ಸಂದರ್ಭಗಳನ್ನು ನೆನಪಿಸುತ್ತಾಳೆ.

ಅಂದು ಧರ್ಮರಾಯ ಜೂಜಿನ ಮೋಜಿನ ಹುಚ್ಚಿನಿಂದ ಎಲ್ಲವನ್ನೂ ಕಳೆದುಕೊಂಡು ನಂತರ ತನ್ನನ್ನು ಪಣಕ್ಕಿಟ್ಟು ಸೋತ ಪರಿಣಾಮ; ಪಾಪಿ ದುರ್ಯೋಧನ, ತನ್ನ ತಮ್ಮನಾದ ದುಷ್ಯಾಸನನಿಂದ ತುಂಬಿದ ಸಭೆಗೆ ತನ್ನ ಮುಡಿಯನ್ನು ಹಿಡಿದು ಎಳೆದು ತಂದ. ಸಾಲದೆಂಬಂತೆ ವಸ್ತ್ರಾಪಹರಣಕ್ಕೂ ಮುಂದಾದ. ಅನಂತರ ಅರಣ್ಯವಾಸದ ಸಂದರ್ಭದಲ್ಲಿ ದುರ್ಯೋಧನನ ತಂಗಿ, ದುಶ್ಯಳೆಯ ಗಂಡನಾದ ಪಾಪಿ ಸೈಂಧವ ನನ್ನ ಮುಂದಲೆಯನ್ನು ಹಿಡಿದು ನನ್ನನ್ನು ಎಳೆದುಕೊಂಡು ಹೋದ. ವಿರಾಟರಾಜನ ಆಸ್ಥಾನದಲ್ಲಿ ಅಜ್ಞಾತವಾಸದ ಈ ಸಂದರ್ಭದಲ್ಲಿ ಈ ಕೀಚಕ ಎನ್ನುವ ನಾಯಿಯಿಂದ ಒದೆಸಿಕೊಳ್ಳಬೇಕಾಯಿತು. ನಾನು ಎದುರಿಸಿದಂತಹ ಈ ಮೂರು ಕಷ್ಟದ ಸಂದರ್ಭಗಳು ಪಾಂಡವರ ಪತ್ನಿಯಾಗಿ ನನಗೆ ಉಚಿತವಾದುದಲ್ಲ ಎಂದು ದೌಪದಿ ದುಃಖಿಸಿ ಭೀಮನನ್ನು ರೊಚ್ಚಿಗೆಬ್ಬಿಸಲು ಮುಂದಾಗುತ್ತಾಳೆ.

Question 5.
ಈ ಕಾವ್ಯಭಾಗದಲ್ಲಿ ಮೂಡಿಬಂದಿರುವ ಭೀಮ-ದೌಪದಿಯರ ಸಂಭಾಷಣೆಯ ಸ್ವಾರಸ್ಯವನ್ನು ವಿವರಿಸಿ.

Answer:
ಕವಿ ಕುಮಾರವ್ಯಾಸನು ಈ ಕಾವ್ಯಭಾಗದಲ್ಲಿ ಭೀಮ-ದೌಪದಿಯರ ನಡುವೆ ನಡೆಯುವ ಸಂಭಾಷಣೆಯನ್ನು ಬಹಳ ಸೊಗಸಾಗಿ ವಿವರಿಸಿದ್ದಾನೆ. ದೌಪದಿಯು ಮಲಗಿದ್ದ ಭೀಮನನ್ನು ಎಬ್ಬಿಸುತ್ತಾಳೆ. ಆಗ ಭೀಮ ದೌಪದಿಯಲ್ಲಿ ನೀನೇಕೆ ಬಂದೆ ಎಂದು ಕೇಳುತ್ತಾನೆ. ಆಗ ದೌಪದಿಯು ಕೀಚಕನಿಂದ ಆಗುತ್ತಿರುವ ತೊಂದರೆಗಳನ್ನು ವಿವರಿಸುತ್ತಾಳೆ. ನಿನ್ನೆ ಮಧ್ಯಾಹ್ನ ಕೀಚಕನೆಂಬ ನಾಯಿ ಎಲ್ಲರೆದುರಿಗೆ ನನ್ನನ್ನು ಒದ್ದನೆಂದು ಹೇಳುತ್ತಾಳೆ. ಅಲ್ಲದೆ ಆತ ತನ್ನನ್ನು ಬಿಡುವುದಿಲ್ಲ ನಾನು ಆತ್ಮಹತ್ಯೆ ಮಾಡಿಕೊಂಡರೆ ಆ ಪಾತಕ ನಿನ್ನನ್ನು ಸುತ್ತಿಕೊಳ್ಳುತ್ತದೆ ಎನ್ನುತ್ತಾಳೆ.

ಆಕೆ ಮತ್ತೆ ತನ್ನ ಮಾತನ್ನು ಮುಂದುವರಿಸಿ ಉಳಿದ ನಾಲ್ವರು ಪತಿಗಳು ಸುಖಕ್ಕಾಗಿ ನನ್ನ ಬಳಿ ಬರುತ್ತಾರೆ. ಆದರೆ ಮಾನ-ಮರ್ಯಾದೆಗಳ ವಿಚಾರ ಬಂದಾಗ ಹೊರಟು ಹೋಗುತ್ತಾರೆ. ಆದರೆ ನೀನು ನನ್ನನ್ನು ಕರುಣೆಯಿಂದ ಕಾಣಬೇಕು ಎಂದು ಹೇಳುತ್ತಾಳೆ. ಆಗ ಭೀಮನು ಹೋರಾಡುವುದಕ್ಕೆ ನಾನು – ರಮಿಸುವುದಕ್ಕೆ ಅವರು ಚೆನ್ನಾಗಿದೆ ಕೆಲವರು ಸಂಪಾದನೆ ಮಾಡಿ ಗಳಿಸಿದರೆ ಉಳಿದವರು ಆನಂದವಾಗಿ ಉಂಡು ತಿಂದು ತಿರುಗಾಡುತ್ತಾರೆ ಎನ್ನುವ ಗಾದೆಯಂತಾಯಿತು ನನ್ನ ಪರಿಸ್ಥಿತಿ ಎನ್ನುತ್ತಾನೆ. ನೀನು ನಿನಗಾದ ತೊಂದರೆಯನ್ನು ಅವರ ಬಳಿ ಹೇಳು ಕಾರ್ಯ ಪ್ರವೃತ್ತರಾಗುವಂತೆ ಮಾಡು.

ಅಣ್ಣನಲ್ಲಿ ನನಗೆ ಭಯ ಎನ್ನುತ್ತಾನೆ. ಆಗ ದೌಪದಿಯು ವಿಪತ್ತು ಬಂದಾಗ ಒಬ್ಬನೇ ಗಂಡ ಇದ್ದರೂ ಆತ ಒಬ್ಬಂಟಿಯಾಗಿಯೇ ಎದುರಾಳಿಯ ವಿರುದ್ಧ ಹೋರಾಡುತ್ತಾನೆ. ಆದರೆ ನೀವು ಐದು ಜನ ಇದ್ದರೂ ಒಬ್ಬಳನ್ನು ಕಾಯಲಾರಿರಿ. ನೀವು ಗಂಡರೋ ಭಂಡರೋ ಎನ್ನುತ್ತಾಳೆ. ಆಗ ಭೀಮನು ಆಕೆಯ ಮಾತಿಗೆ ಪ್ರತಿಕ್ರಿಯಿಸುತ್ತಾ ತಾನೇನಾದರು ನಿನ್ನ ಮಾತಿಗೆ ಕಟ್ಟುಬಿದ್ದು ಕೀಚಕನನ್ನು ಕೊಲ್ಲಲು ಮುಂದಾದೆ ಎಂದರೆ, ಹೆಣ್ಣೂಬ್ಬಳ ಕಷ್ಟಕ್ಕಾಗಿ ತನ್ನ ಅಣ್ಣನ ಆಜ್ಞೆಯುನ್ನು ಮೀರಿ ಕುಂತಿಯ ಮಗ ಬದುಕಿದನೆಂದು ಕೆಟ್ಟಜನರು ನುಡಿವರು. ನಾನೀಗ ಅಣ್ಣನ ಆಜ್ಞೆ ಎಂಬ ಹಗ್ಗದಿಂದ ಬಂಧಿತರಾಗಿ ಬಿಟ್ಟಿದ್ದೇವೆ ಎನ್ನುತ್ತಾನೆ. ಆಗ ದೌಪದಿಯು ನನ್ನಂತೆ ಅವಮಾನಕ್ಕೆ ಒಳಗಾಗುವ ಹೆಂಗಸರು ಇನ್ನು ಮುಂದೆ ಹುಟ್ಟದಿರಲಿ ಎನ್ನುತ್ತಾಳೆ.

ಅಲ್ಲದೆ ಭೀಮನಂತ ಅಸಹಾಯಕರು ಹುಟ್ಟಬಾರದು ಅಲ್ಲದೆ ನನ್ನ ಹಾಗೆ ಮತ್ತು ಪಾಂಡವರ ಹಾಗೆ ಅತಿಶಯ ಸಂಕಟದಿಂದ ನವೆದವರು ಬೇರೆ ಯಾರಿದ್ದಾರೆ? ಎಂದು ಸಂಕಟ ಪಡುತ್ತಾಳೆ. ದೌಪದಿಯು ಈ ಸಂದರ್ಭದಲ್ಲಿ ತಾನು ಈ ಹಿಂದೆ ಅನುಭವಿಸಿದ ಅವಮಾನದ ಸನ್ನಿವೇಶಗಳನ್ನು ನೆನಪಿಸುತ್ತಾಳೆ. ನೀವು ಯಮನನ್ನೇ ಎದುರಿಸಬಲ್ಲ ಪರಾಕ್ರಮಿಗಳು ಆದರೆ ನನ್ನೊಬ್ಬಳನ್ನು ಆಳಲಾರಿರಿ. ಪಾಪಿಗಳು ನೀವು ಅಪಕೀರ್ತಿಗೂ ಅಂಜದಂತವರು ಎಂದು ಆತನಿಗೆ ರೋಷ ಉಂಟಾಗುವಂತೆ ಮಾಡುತ್ತಾಳೆ. ಇದರಿಂದ ಸಿಟ್ಟುಗೊಂಡ ಭೀಮನು ಕೀಚಕನನ್ನು ಕೊಲ್ಲಲು ಮುಂದಾಗುತ್ತಾನೆ.

ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು
Innu Huttadeyirali Nariyarennavolu
Summary

2nd PUC Kannada Chapter 3 Innu Huttadeyirali Nariyarennavolu
2nd PUC Kannada Chapter 3 Innu Huttadeyirali Nariyarennavolu

ಸಾರಾಂಶ :

ಈ ಪದ್ಯವು ಕುಮಾರವ್ಯಾಸ ಭಾರತದಿಂದ ತೆಗೆದುಕೊಂಡದ್ದು, ಮತ್ತು ಇಲ್ಲಿ ದ್ರೌಪದಿಯ ವಾಗ್ದಂಡೆ, ಆಕ್ರೋಶ ಮತ್ತು ಆಂತರಿಕ ನೋವುಗಳನ್ನು ಚಿತ್ರಿಸಲಾಗಿದೆ. ದ್ರೌಪದಿಯು ಕೀಚಕನ ಅವಮಾನದಿಂದ ನರಳುತ್ತಿದ್ದಾಳೆ. ತನ್ನ ಬದುಕಿನಲ್ಲಿ ಮೂರನೇ ಬಾರಿ ಆಕೆಯ ಸ್ತ್ರೀತ್ವಕ್ಕೆ ಭಂಗವಾಗಿದೆ. ಮೊದಲಿಗೆ ಕೌರವರು ಪಾಂಡವರನ್ನು ಜುಗುಪ್ಸೆಗೆ ಗುರಿಪಡಿಸಿದರು, ನಂತರ ಅರಣ್ಯವಾಸ, ಮತ್ತು ಈಗ ವಿರಾಟರಾಜನ ಅರಣ್ಯವಾಸದ ವೇಳೆ ಕೀಚಕನಿಂದ ಅವಮಾನವಾಗಿದೆ.

ಅವಳು ಸ್ತ್ರೀ ಜನ್ಮವನ್ನು ಶಾಪಿಸುತ್ತಾಳೆ – “ಇನ್ನು ಹೆಣ್ಣು ಹುಟ್ಟದೇ ಇರುವುದು ಉತ್ತಮ,” ಎಂದು. ಈ ಮೂಲಕ ಆಕೆ ತಾನು ಅನುಭವಿಸಿದ ನೋವಿನ ತೀವ್ರತೆಯನ್ನು ವ್ಯಕ್ತಪಡಿಸುತ್ತಾಳೆ. ಹೆಣ್ಣು ಬಹುಮಾನ, ಶಕ್ತಿ, ಧೈರ್ಯ ಮತ್ತು ಬುದ್ಧಿಯ ಪ್ರತೀಕವಾಗಿದ್ದರೂ, ಸಮಾಜದಲ್ಲಿ ಆಕೆಗೆ ದೊರಕುವ ಗೌರವವೇ ಇಲ್ಲ ಎಂಬ ಆಕ್ರೋಶವಿದೆ. ಪತಿ ಭೀಮನನ್ನು ಪ್ರಚೋದಿಸುತ್ತಾಳೆ – ಅವನು ಅವಳ ನೋವನ್ನು ಕೇಳಿ ಕೋಪದಿಂದ ಕಿಚ್ಚನನ್ನು ಕೊಂದು ಆಕೆಗೆ ನ್ಯಾಯ ನೀಡುತ್ತಾನೆ.

ಮುಖ್ಯ ಅಂಶಗಳು:

  1. ದ್ರೌಪದಿಯ ಆಕ್ರೋಶ: ಕೀಚಕ ಅವಮಾನ ಮಾಡಿದ ನಂತರ ದ್ರೌಪದಿಯು ಸಮಾಜದಲ್ಲಿನ ಹೆಣ್ಣಿನ ಸ್ಥಿತಿಯನ್ನು ತೀವ್ರವಾಗಿ ಪ್ರಶ್ನಿಸುತ್ತಾಳೆ.
  2. ಭೀಮನ ಕ್ರೋಧ: ಭೀಮನು ತನ್ನ ಪತ್ನಿಯ ಅಪಮಾನವನ್ನು ಸಹಿಸಲಾಗದೆ ಕೀಚಕನನ್ನು ಕೊಂದು ವೀರತ್ವ ತೋರಿಸುತ್ತಾನೆ.
  3. ಸ್ತ್ರೀಶಕ್ತಿಯ ಪ್ರತಿನಿಧಿ: ದ್ರೌಪದಿ ತನ್ನ ಆಕ್ರೋಶ, ತಾಳ್ಮೆ ಮತ್ತು ನ್ಯಾಯಬುದ್ಧಿಯಿಂದ ಸ್ತ್ರೀಶಕ್ತಿಯ ಪ್ರತಿನಿಧಿಯಾಗುತ್ತಾಳೆ.
  4. ಧೈರ್ಯ ಮತ್ತು ನ್ಯಾಯದ ಗೆಲುವು: ಕೊನೆಗೆ ದ್ರೌಪದಿಗೆ ನ್ಯಾಯ ಸಿಗುತ್ತದೆ ಮತ್ತು ದುಷ್ಠನ ವಧೆಯಿಂದ ಧರ್ಮದ ಜಯವಾಗುತ್ತದೆ.

ಇದು ಕೇವಲ ದ್ರೌಪದಿಯ ನೋವಿನ ಕಥೆಯಲ್ಲ; ಇದು ಹೆಣ್ಣುಮಕ್ಕಳ ಧೈರ್ಯ, ಆತ್ಮಾಭಿಮಾನ ಮತ್ತು ನ್ಯಾಯಕ್ಕಾಗಿ ಮಾಡಿದ ಹೋರಾಟದ ಶಕ್ತಿಶಾಲಿ ಉದಾಹರಣೆಯಾಗಿದೆ.

You cannot copy content of this page