2nd PUC Kannada Chapter 20

2nd PUC Kannada Question and Answer – Halliya Chaha Hotelugalu

Looking for 2nd PUC Kannada textbook answers? You can download Chapter 20: Halliya Chaha Hotelugalu Questions and Answers PDF, Notes, and Summary here. 2nd PUC Kannada Gadyabhaga solutions follow the Karnataka State Board Syllabus, making it easier for students to revise and score higher in exams.

Karnataka 2nd PUC Kannada Textbook Answers—Reflections Chapter 20

Halliya Chaha Hotelugalu Questions and Answers, Notes, and Summary

2nd PUC Gadyabhaga Kannada Chapter 20

ಹಳ್ಳಿಯ ಚಹಾ ಹೋಟೇಲುಗಳು

Halliya Chaha Hotelugalu

2nd PUC Kannada Chapter 20 Halliya Chaha Hotelugalu
Scroll Down to Download Halliya Chaha Hotelugalu PDF
I.ಒಂದು ವಾಕ್ಯದಲ್ಲಿ ಉತ್ತರಿಸಿ:

Question 1.
ಕಲಿಯುಗದ ಅಮೃತ ಯಾವುದು?
Answer:
ಕಲಿಯುಗದ ಅಮೃತ ಚಹಾ.

Question 2.
ಮೂರು ಕಾಲಿನ ಕುರ್ಚಿ ಎಲ್ಲಿದೆ?
Answer:
ಹಳ್ಳಿಯ ಚಹಾ ಫಳಾರದ ಅಂಗಡಿಯಲ್ಲಿ ಮೂರು ಕಾಲಿನ ಕುರ್ಚಿ ಇದೆ.

Question 3.
ಎತ್ತುಗಳು ಗಕ್ಕೆಂದು ಎಲ್ಲಿ ನಿಲ್ಲುತ್ತವೆ?
Answer:
ಫಳಾರದ ಅಂಗಡಿ ಬಂದೊಡನೆ ಎತ್ತುಗಳು ಗಕ್ಕೆಂದು ನಿಲ್ಲುತ್ತವೆ.

Question 4.
ಬಾಯಿಚಪಲ ಯಾರಿಗೆ ಜಾಸ್ತಿ ಇರುತ್ತದೆ?
Answer:
ಬಾಯಿಚಪಲ ವೃದ್ಧರಿಗೆ, ಪೇನ್‌ಶನ್‌ದಾರರಿಗೆ ಜಾಸ್ತಿ ಇರುತ್ತದೆ.

Question 5.
ಲೇಖಕರ ದೃಷ್ಟಿಯಲ್ಲಿ ಹಳ್ಳಿಯ ಚಹಾದ ಅಂಗಡಿ ಹೇಗೆ?
Answer:
ಲೇಖಕರ ದೃಷ್ಟಿಯಲ್ಲಿ ಹಳ್ಳಿಯ ಚಹಾದ ಅಂಗಡಿ ವಾರ್ತಾ ಇಲಾಖೆಯಿದ್ದಂತೆ.

Question 6.
ಯಾರ ಬಗ್ಗೆ ಮೂಕರ್ಜಿಯ ದೂರನ್ನು ಹಳ್ಳಿಗರು ಕೊಡುತ್ತಾರೆ?
Answer:
ಹೆಡ್ ಮಾಸ್ತರರ ಬಗ್ಗೆ ಮೂಕರ್ಜಿಯ ದೂರನ್ನು ಹಳ್ಳಿಗರು ಕೊಡುತ್ತಾರೆ.

Question 7.
ಕಲ್ಲಪ್ಪನವರ ಗೂಢ ಪ್ರಶ್ನೆ ಯಾವುದು?
Answer:
ಆ ಶಿವಶರಣಪ್ಪನಿಗೆ ಅಷ್ಟು ಸುಂದರ ಹೆಂಡತಿ ಯಾಕಿರಬೇಕು? ಎಂಬುದು ಕಲ್ಲಪ್ಪನವರ ಗೂಢ ಪ್ರಶ್ನೆ.

Question 8.
ಲೋಕಲ್ ಸುದ್ದಿಗಳಿಗೆ ಎಲ್ಲಿ ಪ್ರಾಶಸ್ತ್ರವಿದೆ?
Answer:
ಹಳ್ಳಿಯ ಹೊಟೇಲುಗಳಲ್ಲಿ ಲೋಕಲ್ ಸುದ್ದಿಗಳಿಗೆ ಪ್ರಾಶಸ್ತ್ರವಿದೆ.

Question 9.
ಲೇಖಕರು ಹೇಳುವ ಹಳ್ಳಿಯ ಹೋಟೇಲಿನ ಹೆಸರೇನು?
Answer:
ಲೇಖಕರು ಹೇಳುವ ಹಳ್ಳಿಯ ಹೋಟೇಲಿನ ಹೆಸರು ಚಂದ್ರಭವನ.

Question 10.
ಯಾವುದಕ್ಕೆ ಭೇಟಿ ಕೊಡಬೇಕೆಂದು ಲೇಖಕರು ಹೇಳುತ್ತಾರೆ?
Answer:
ಸಮೀಪದ ಹಳ್ಳಿಯ ಚಹಾ ಫಳಾರದ ಅಂಗಡಿಗೆ ಭೇಟಿ ಕೊಡಬೇಕೆಂದು ಲೇಖಕರು ಹೇಳುತ್ತಾರೆ.

II. ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ:

Question 1.
ಪಟ್ಟಣದ ಹೋಟೇಲಿನ ಕಟ್ಟಡ ಹೇಗಿದೆ?
Answer:
ಮನವನ್ನಾಕರ್ಷಿಸುವ ಭವ್ಯ ಕಟ್ಟಡವಿದೆ. ನಡೆದರೆ ಕಾಲು ಜಾರುವ ನಯವಾದ ಫರಸಿಯ ನೆಲವಿದೆ. ಕೂತರೆ ಮಾಸಿ ಹೋದೀತೆನ್ನುವ ಖುರ್ಚಿಯಿದೆ. ತಂಪಾದ ಫ್ಯಾನಿನ ಗಾಳಿಯಿದೆ. ಡೆಕೋಲಮ್‌ನಿಂದ ಅಲಂಕೃತವಾದ ಟೇಬಲ್ಲೂ ಇದೆ.ಟೇಬಲ್ ಮೇಲೆ ಗ್ಲಾಸೂ ಇದೆ. ಗ್ಲಾಸಿನಲ್ಲಿ ನೀರೂ ಇದೆ.

Question 2.
ಹಳ್ಳಿಯ ಚಹಾದ ಅಂಗಡಿಯೆಂದರೆ ಹೇಗಿರುತ್ತದೆ?
Answer:
ಹಳ್ಳಿಯ ಚಹಾದ ಅಂಗಡಿಯಲ್ಲಿ ಮುರುಕು ಬೆಂಚು ಇದೆ. ಮೂರು ಕಾಲಿನ ಕುರ್ಚಿ ಇದೆ. ಗಟ್ಟಿ ಹಾಲಿನ ಹೆಡಸು, ಚಹಾದ ಕಂಪು ಬಣ್ಣ ಎಲ್ಲಾ ಇದೆ. ಜೊತೆಗೆ ಆತ್ಮೀಯತೆ, ಆತಿಥ್ಯವೂ ಇದೆ.

Question 3.
ಭಾವೈಕ್ಯತೆ ಈ ದೇಶದಲ್ಲಿ ಎಲ್ಲಿದೆ?
Answer:
ಹಳ್ಳಿಯ ಹೋಟೇಲುಗಳು ಸಾರ್ವಜನಿಕರ ಕೂಟ. ಸರ್ವ ವಯಸ್ಸಿನ, ಸರ್ವ ಅಭಿರುಚಿ ಹವ್ಯಾಸಗಳ, ಸರ್ವ ಉದ್ಯೋಗದ, ಸರ್ವ ಜಾತಿಗಳ ಜನರಿಗೆ ಇಲ್ಲಿ ಸಮಾನವಾಗಿದೆ. ಹಳ್ಳಿಗಳಲ್ಲಿ ಸಮಾನತೆಯ ಬೀಜವನ್ನು ಬಿತ್ತಿ ಬೆಳೆದ ಸಂಸ್ಥೆಯೆಂದರೆ ಚಹಾ ಫಳಾರದ ಅಂಗಡಿಯೇ ಆಗಿದೆ. ಭಾವೈಕ್ಯತೆ ನಮ್ಮ ದೇಶದಲ್ಲಿ ಎಲ್ಲಿಯಾದರೂ ಇದ್ದಿದ್ದರೆ ಅದು ನಮ್ಮ ಹಳ್ಳಿಯ ಚಹಾ ಫಳಾರದ ಅಂಗಡಿಯಲ್ಲಿ

Question 4.
ರೋಗಿಗಳ ಹಾಗೂ ಪಥ್ಯ ಮಾಡುವವರ ಜಿದ್ದು ಎಂತಹುದು?
Answer:
ಮನೆಯಲ್ಲಿ ಪಥ್ಯ ಮಾಡುತ್ತ ಹೋಟೇಲಿನಲ್ಲಿಕರಿದ ಪದಾರ್ಥಗಳನ್ನು ಜಡಿಯುವ ರೋಗಿಗಳ ಹಾಗೂ ಪಥ್ಯ ಮಾಡುವವರ ಜಡ್ಡೆಂದೂ ನೆಟ್ಟಗಾಗದು. ಹಾಗೂ ಸಾಯುತ್ತೇವೆ. ಹೀಗೂ ಸಾಯುತ್ತೇವೆ. ಕರಿದಿದ್ದನ್ನು ತಿಂದು ಸಾಯುತ್ತೇವೆ ಎನ್ನುವುದು ಇವರ ಜಿದ್ದು.

Question 5.
ಗಿಡ್ಡ ಮಾಸ್ತರು ಶಾಲೆಯಲ್ಲಿ ಹುಡುಗರಿಗೆ ಏಕೆ ಹೊಡೆಯುತ್ತಾರೆ?
Answer:
ಗಿಡ್ಡ ಮಾಸ್ತರು ಶಾಲೆಯಲ್ಲಿ ಹುಡುಗರಿಗೆ ಹೊಡೆಯುತ್ತಾರೆ. ಆ ರೀತಿ ಹೊಡೆಯುವುದಕ್ಕೆ ಮನೆಯಲ್ಲಿ ಅವರ ಹೆಂಡತಿಯ ಕಾಟವೇ ಕಾರಣ.

Question 6.
ಹಳ್ಳಿಗರ ಆಕ್ಷೇಪದ ವಿಷಯ ಯಾವುದು?
Answer:
ಹೊಸದಾಗಿ ವರ್ಗವಾಗಿ ಬಂದ ವೈದ್ಯಾಧಿಕಾರಿ ರೋಗಿಗಳಿಗೆ ಬರೀ ಪ್ರಿಸ್ಟ್‌ಪೈನ್ ಮಾತ ಬರೆದುಕೊಡುತ್ತಿದ್ದಾರೆ. ಇದು ಹಳ್ಳಿಗರ ಆಕ್ಷೇಪದ ವಿಷಯ.

Question 7.
ಸುದ್ದಿಯ ಸೂರಪ್ಪ ಗೊಂಬೆಯನ್ನು ಹೇಗೆ ವರ್ಣಿಸುತ್ತಾನೆ?
Answer:
ಸುದ್ದಿಯ ಸೂರಪ್ಪನವರಿಗೂ ಹಳ್ಳಿಯ ಹೋಟೇಲಿನಲ್ಲಿ ಸ್ಥಾನವಿದೆ. ಆ ಜನ್ಮ ಬ್ರಹ್ಮಚಾರಿ ಹನುಮಾನ್ ಭಕ್ತ ಭರಮಣ್ಣ-ತಾನು ಪಟ್ಟಣಕ್ಕೆ ಹೋದಾಗ ಶೋರೂಂನ ಎದುರಿಗೆ ನಿಲ್ಲಿಸಿದ ಹೆಣ್ಣು ಗೊಂಬೆಯನ್ನು ಎವೆಯಿಕ್ಕದೆ ನೋಡಿ ಬಂದು “ಏನ್ ಹೆಣ್ಣಪ್ಪಾ ಅದು. ಕೈ ತೊಳೆದು ಮುಟ್ಟಬೇಕು ಅದನ್ನು” ಎಂದು ಗೊಂಬೆಯನ್ನು ವರ್ಣಿಸುತ್ತಾನೆ.

III. ಸಂದರ್ಭ ಸಹಿತ ವಿವರಿಸಿ:

Question 1.
ಅದು ಯಾವ ಶಸ್ತ್ರಕ್ಕೂ ಮಣಿಯದು.

Answer:
ಆಯ್ಕೆ: ಈ ಮಾತನ್ನು ವೀರೇಂದ್ರ ಸಿಂಪಿಯವರು ಬರೆದ ಹಳ್ಳಿಯ ಚಹಾ ಹೋಟೇಲುಗಳು ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ: ಪಟ್ಟಣದ ಹೋಟೇಲಿನ ಬಗ್ಗೆ ವಿವರಿಸುವಾಗ ಈ ಮಾತು ಬಂದಿದೆ.
ವಿವರಣೆ: ಪಟ್ಟಣದ ಹೋಟೇಲಿನಲ್ಲಿ ಶುಭ್ರ ವಸ್ತ್ರದ ಮಾಣಿ ಇರುತ್ತಾನೆ. ಏನಿದೆ ಎಂದು ನಾವು ನೀರಸವಾಗಿ ಕೇಳಿದರೆ ಬೋಂಡ, ದೋಸೆ, ಉತ್ತಪ್ಪ, ಉಪಮಾ, ಪೂರಿ, ಭಜಿ ಎಂದು ಪಟಪಟನೆ ಒದರುತ್ತಾನೆ. ಆದರೆ ಅದರಲ್ಲಿ ಬಿಸಿ ಯಾವುದು ಹಸಿ ಯಾವುದು ತಾಜಾ ಯಾವುದು ಹಳಸಿದ್ದು ಯಾವುದು ಎಂದು ಸ್ವತಃ ಮಾಣಿಗೂ ಗೊತ್ತಿಲ್ಲ. ನೂರು ಹೆಸರುಗಳಲ್ಲಿ ಯಾವುದೋ ಹೆಸರಿಗೆ ಜೋತುಬಿದ್ದು ಬೋಂಡ ತರಿಸಿದರೆ ಗಂಟಲಲ್ಲೇ ಇಳಿಯುವುದಿಲ್ಲ. ಅದೇ ರೀತಿ ವಡೆ ತರಿಸಿದರೆ; ಯಾವ ಶಸ್ತ್ರವನ್ನು ಉಪಯೋಗಿಸಿದರೂ ಅದನ್ನು ತಿನ್ನಲಾಗುವುದಿಲ್ಲ ಎನ್ನುವಾಗ ಈ ಮೇಲಿನಂತೆ ಲೇಖಕರು ಹೇಳಿದ್ದಾರೆ.

Question 2.
ಇಂದು ಸ್ಪೆಶಲ್ ಅವಲಕ್ಕಿ ಸೂಸಲ ಮಾಡಿದ್ದೇನೆ.

Answer:
ಆಯ್ಕೆ: ಈ ಮಾತನ್ನು ವೀರೇಂದ್ರ ಸಿಂಪಿಯವರು ಬರೆದ ಹಳ್ಳಿಯ ಚಹಾ ಹೋಟೇಲುಗಳು ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ: ಹಳ್ಳಿ ಹೋಟೇಲಿಗೆ ಹೋಗುವ ಗ್ರಾಹಕರಿಗೆ ಮಾಣಿಗಳಿಂದ ಸಿಗುವ ಆತಿಥ್ಯದ ಕುರಿತಾಗಿ ಹೇಳುವಾಗ ಈ ಮಾತು ಬಂದಿದೆ.
ವಿವರಣೆ: ಹಳ್ಳಿಯ ಹೋಟೇಲುಗಳಲ್ಲಿ ನಮ್ಮ ಬೇಕು ಬೇಡಗಳನ್ನು ಅರಿತ ಮಾಣಿ ಒಂದು ಕೈಯಿಂದ ಬೆವರನ್ನು ಒರೆಸಿಕೊಳ್ಳುತ್ತ ಇನ್ನೊಂದು ಕೈಯಲ್ಲಿ ನಮ್ಮ ನೆಚ್ಚಿನ ಪೂರಿ ಸಾಗುಗಳನ್ನು ತಂದು ಮುಂದೆ ಇಡುತ್ತಾನೆ. ಪೂರಿಯ ಎಣ್ಣೆ ನಮ್ಮ ಪ್ರಕೃತಿಗೆ ಒಗ್ಗದು ಎಂದು ತಿಳಿದು ಅದನ್ನು ಒರೆಸಿ ತೆಗೆಯಲು ರದ್ದಿ ಕಾಗದದ ಚೂರುಗಳನ್ನೂ ತಂದು ಇರಿಸುತ್ತಾನೆ. ಹೆಂಡತಿಯೂ ತೋರಿಸದ ಕಾಳಜಿ ಈ ಮಾಣಿ ತೋರುತ್ತಾನೆ. ಪೂರಿಯ ಪ್ಲೇಟನ್ನು ಸರಿಸುತ್ತಲೇ ಭಜಿಯೂ ಬಂದು ನಮ್ಮೆದುರು ಕೂಡುತ್ತದೆ. ಇಂದು ಸ್ಪೆಶಲ್ ಅವಲಕ್ಕಿ ಸೂಸಲ ಮಾಡಿದ್ದೇನೆ. ತರಲೇನು ಕೇವಲ ನಿಮಗಾಗಿಯೇ ಎಂದು ಕಿವಿಯಲ್ಲಿ ಉಸುರುತ್ತಾನೆ ಎಂದು ಹೇಳುವ ಸಂದರ್ಭವಿದು.

Question 3.
ಅನಕ್ಷರಸ್ಥರ ಪಾರ್ಲಿಮೆಂಟು.

Answer:
ಆಯ್ಕೆ: ಈ ಮಾತನ್ನು ವೀರೇಂದ್ರ ಸಿಂಪಿಯವರು ಬರೆದ ಹಳ್ಳಿಯ ಚಹಾ ಹೋಟೇಲುಗಳು ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ: ಹಳ್ಳಿಯ ಚಹಾ ಹೋಟೇಲುಗಳು ಸಾರ್ವಜನಿಕರ ಕೂಟ ಎಂದು ಲೇಖಕರು ಹೇಳುವ ಸಂದರ್ಭವಿದು.
ವಿವರಣೆ: ಹಳ್ಳಿಯ ಚಹಾ ಹೋಟೇಲುಗಳೆಂದರೆ ಅದೊಂದು ಸಾರ್ವಜನಿಕರ ಕೂಟವಾಗಿದೆ. ಬೇರೆ ಬೇರೆ ರೀತಿಯ ಜನರು ಬಂದು ಅವರ ಅಭಿರುಚಿಗೆ ತಕ್ಕಂತೆ ಹೋಟೇಲಲ್ಲಿ ಕಾಲಕಳೆಯುತ್ತಾರೆ. ಹೋಟೇಲೆಂದರೆ ರಸಿಕರ ಉಂಡಾಡಿಗಳ ನಿವಾಸ, ತರುಣರ ಕ್ಲಬ್ಬು, ಗೃಹಸ್ಥರ ವಿಶ್ರಾಮಗೃಹ . ವೃದ್ಧರ ಬಾಯಚಪಲ ತಣಿಸುವ ಆಕ್ಷಯ ಪಾತ್ರೆ, ಅನಕ್ಷರಸ್ಥರ ಪಾರ್ಲಿಮೆಂಟು, ಸರ್ವ ವಯಸ್ಸಿನ, ಸರ್ವ ಅಭಿರುಚಿ ಹವ್ಯಾಸಗಳ, ಸರ್ವ ಉದ್ಯೋಗದ, ಸರ್ವ ಜಾತಿಗಳ ಜನರಿಗೆ ಇಲ್ಲಿ ಸಮನಾದ ಸ್ಥಾನವಿದೆ. ಎಲ್ಲಾ ರೀತಿಯ ವಿಷಯಗಳು ಅಲ್ಲಿ ಚರ್ಚೆಗೆ ಒಳಗಾಗುತ್ತವೆ ಎಂದು ಲೇಖಕರು ವಿವರಿಸುವಾಗ ಈ ಮಾತು ಬಂದಿದೆ.

Question 4.
ನನ್ನ ದೃಷ್ಟಿಯಲ್ಲಿ ವಾರ್ತಾ ಇಲಾಖೆ ಇದ್ದಂತೆ.

Answer:
ಆಯ್ಕೆ: ಈ ಮಾತನ್ನು ವೀರೇಂದ್ರ ಸಿಂಪಿಯವರು ಬರೆದ ಹಳ್ಳಿಯ ಚಹಾ ಹೋಟೇಲುಗಳು ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ: ಹಳ್ಳಿಯ ಹೋಟೇಲುಗಳನ್ನು ಲೇಖಕರು ವಾರ್ತಾ ಇಲಾಖೆಗೆ ಹೋಲಿಸುವ ಸಂದರ್ಭವಿದು.
ವಿವರಣೆ: ಕಾಲುಬಿಟ್ಟ ಕತ್ತೆಯಂತೆ ಊರಸುತ್ತ ತಿರುಗಾಡುವ ಹಳ್ಳಿಯ ಗಂಡಸರಿಗೆ ಸಾಮಾಜಿಕ ವಿಷಯಗಳ ಬಗ್ಗೆ ಮಾತನಾಡಲು ಹಳ್ಳಿಯ ಹೋಟೇಲ್ ಪ್ರಶಸ್ತವಾದ ಸ್ಥಳ. ತಮ್ಮ ಮನೆಯ ಸಮಾಚಾರ ತಮಗೆ ತಿಳಿದಿರದಿದ್ದರೂ ಊರ ಮೂಲೆ ಮೂಲೆಗಳಲ್ಲಿ ಏನು ನಡೆದಿದೆ. ಯಾರು ಹುಟ್ಟಿದರು. ಯಾರು ಸತ್ತರು, ಯಾರ ಮನೆಯಲ್ಲಿ ಆಕಳು ಈಯಿತು. ಯಾರ ಕೊಟ್ಟಿಗೆಯಲ್ಲಿ ಎಮ್ಮೆ ಸತ್ತಿತು. ಯಾರ ಬಣವೆಗೆ ಬೆಂಕಿ ಹಚ್ಚಿದರು. ಯಾರ ಮನೆ ದರೋಡೆಯಾಯ್ತು ಎಂಬ ಸಣ್ಣ ದೊಡ್ಡ ವಿಷಯಗಳನೆಲ್ಲ ಹೋಟೇಲಿನಲ್ಲಿ ಮಾತನಾಡುತ್ತ ಕಾಲಕಳೆಯುತ್ತಾರೆ. ಹಾಗಾಗಿ ಇದೊಂದು ವಾರ್ತಾ ಇಲಾಖೆ ಇದ್ದಂತೆ ಎಂದು ಲೇಖಕರು ಹೇಳಿದ್ದಾರೆ.

Question 5.
ಇಳಕಲ್ ಸೀರೆ ಉಟ್ಟ ಗುಳೇದಗುಡ್ಡ ಕುಪ್ಪಸ ತೊಟ್ಟ ಹೆಣ್ಣಿದ್ದಂತೆ.

Answer:
ಆಯ್ಕೆ: ಈ ಮಾತನ್ನು ವೀರೇಂದ್ರ ಸಿಂಪಿಯವರು ಬರೆದ ಹಳ್ಳಿಯ ಚಹಾ ಹೋಟೇಲುಗಳು ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ: ಪಟ್ಟಣದ ಹೋಟೇಲಿಗಿಂತ ಹಳ್ಳಿಯ ಹೋಟೇಲುಗಳಲ್ಲಿರುವ ಹೆಚ್ಚುಗಾರಿಕೆಯನ್ನು ಕುರಿತು ಹೇಳುವ ಸಂದರ್ಭವಿದು.
ವಿವರಣೆ: ಪೇಟೆಯ ಹೊಟೇಲು ನೋಡಲು ಅಂದವಾಗಿರುತ್ತದೆ. ಅಲ್ಲಿಯ ಆಹಾರ ಅಷ್ಟು ಚೆನ್ನಾಗಿರುವುದಿಲ್ಲ. ಅದು ನಯನಾಜೂಕಿನ ಹೆಣ್ಣಿದ್ದಂತೆ. ಹಳ್ಳಿಯ ಚಹಾ ಫಳಾರದ ಅಂಗಡಿಯೆಂದರೆ ಇಳಕಲ್ಲ ಸೀರೆ ಉಟ್ಟ ಗುಳೇದಗುಡ್ಡ ಕುಪ್ಪಸ ತೊಟ್ಟ ಹೆಣ್ಣಿದ್ದಂತೆ. ನೋಡಲು ಅಂದವಾಗಿರುವುದಿಲ್ಲ. ಆದರೆ ಸ್ವರ್ಗ ಸುಖ ಕೊಡಬಲ್ಲದು. ಹಳ್ಳಿಯ ಹೋಟೇಲಿನ ವೈಶಿಷ್ಟದ ಕುರಿತಾಗಿ ಲೇಖಕರು ಈ ಮಾತಿನ ಮೂಲಕ ಹೇಳಿದ್ದಾರೆ.

IV. ಐದುಆರು ವಾಕ್ಯಗಳಲ್ಲಿ ಉತ್ತರಿಸಿ:

Question 1.
ಹಳ್ಳಿಯ ಚಹಾದಂಗಡಿಯನ್ನು ಪರಿಚಯಿಸಿ.

Answer:
ಹಳ್ಳಿಯ ಚಹಾದ ಅಂಗಡಿಯನ್ನು ಇಳಕಲ್ಲ ಸೀರೆ ಉಟ್ಟು ಗುಳೇದಗುಡ್ಡದ ಕುಬಸ ತೊಟ್ಟ ಹೆಣ್ಣಿದ್ದಂತೆ. ನೋಡಲು ಅಂದವಾಗಿರದಿದ್ದರೂ ಸ್ವರ್ಗ ಸುಖ ಕೊಡಬಲ್ಲದು. ಹಳ್ಳಿಯ ಚಹಾದ ಅಂಗಡಿಯಲ್ಲಿ ಮುರುಕು ಬೆಂಚು ಇದೆ. ಮೂರು ಕಾಲಿನ ಕುರ್ಚಿ ಇದೆ. ಗಟ್ಟಿ ಹಾಲಿನ ಹೆಡಸು, ಚಹಾದ ಕಂಪು ಬಣ್ಣ ಎಲ್ಲಾ ಇದೆ.ಜೊತೆಗೆ ಆತ್ಮೀಯತೆ, ಆತಿಥ್ಯವೂ ಇದೆ. ಎರಡೂ ಕಾಲುಗಳನ್ನು ಬೆಂಚಿನ ಮೇಲಿರಿಸಿ. ಹೊಟ್ಟೆರಾಯನ ಸೇವೆ ಮಾಡಿ ಪ್ಲೇಟಿನಲ್ಲಿ ಕೈ ತೊಳೆದು. ನಂತರ ಕೈಯನ್ನು ಒರೆಸಿಕೊಂಡು, ಇಂಜಿನ್ ಹೊಗೆಯಂತೆ ಬೀಡಿಯ ಹೊಗೆಯನ್ನು ಬಿಡುತ್ತ ಕೆಮ್ಮುತ್ತ ತಾಸುಗಟ್ಟೆ ಅಲ್ಲಿ ಕೂಡಬಹುದು.

ತಿಂದದಕ್ಕೆ ಹಣ ಕೊಡಬೇಕಾಗಿಲ್ಲ. ಕೌಂಟರ ಮುಂದೆ ನಿಂತು ‘ನನ್ನಹೆಸರಲ್ಲೇ ಹಚ್ಚಿ’ ಎಂದರೆ ಸಾಕು. ಸುಗ್ಗಿಗೊಮ್ಮೆ ನಾಲ್ಕು ಚೀಲ ಜೋಳ ತಂದು ಹೋಟೇಲಿಗೆ ಹಚ್ಚಿದರೆ ಬಾಕಿ ಚುಕ್ತಾ ಆಯಿತು. ಹಳ್ಳಿಯ ಹೋಟೇಲೆಂದರೆ ಸಾರ್ವಜನಿಕರ ಕೂಟ. ರಸಿಕರ ಉಂಡಾಡಿಗಳ ನಿವಾಸ, ತರುಣರ ಕ್ಲಬ್ಬು, ಗೃಹಸ್ಥರ ವಿಶ್ರಾಮಗೃಹ, ವೃದ್ಧರ ಬಾಯ ಚಪಲ ತಣಿಸುವ ಅಕ್ಷಯ ಪಾತ್ರೆ, ಅನಕ್ಷರಸ್ಥರ ಪಾರ್ಲಿಮೆಂಟು. ಸರ್ವ ವಯಸ್ಸಿನ, ಸರ್ವಜಾತಿಗಳ ಜನರಿಗೆ ಇಲ್ಲಿ ಸಮವಾದ ಸ್ಥಾನವಿದೆ. ಭಾವೈಕ್ಯತೆಯನ್ನು ಹಳ್ಳಿಯ ಚಹಾದಂಗಡಿಯಲ್ಲಿ ಕಾಣಬಹುದು.
ಹಳ್ಳಿಯ ಚಹಾದಂಗಡಿ ವಾರ್ತಾ ಇಲಾಖೆಯಿದ್ದಂತೆ. ಹಳ್ಳಿಯ ಸಣ್ಣ ದೊಡ್ಡ ವಿಚಾರಗಳೆಲ್ಲ ಹೋಟೇಲಿನ ಸದಸ್ಯರ ಪಾಲಿಗೆ ಸುದ್ದಿಯ ಸಾಮಾಗ್ರಿಗಳು. ಜನರು ತಮ್ಮ ಹೊಟ್ಟೆಕಿಚ್ಚು. ಸಿಟ್ಟು, ದರ್ಪ, ಧಕ್ಕೆಗೊಂಡ ಗರ್ವ, ಅಳಲುಗಳನ್ನು ಅಭಿವ್ಯಕ್ತಿಸುತ್ತಾರೆ. ದೇಶ ವಿದೇಶಗಳ ಸುದ್ದಿಗಳಿಗೂ ಇಲ್ಲಿ ಪ್ರಾಶಸ್ತ್ರ ಇದೆ. ಹೊರಗಿನ ಸುದ್ದಿಗಿಂತ ಲೋಕಲ್ ಸುದ್ದಿಗೆ ಹೆಚ್ಚಿನ ಮಹತ್ವವಿದೆ.

Question 2.
ಪಟ್ಟಣದ ಚಹಾದಂಗಡಿಗಳು ಹೇಗಿರುತ್ತವೆ?

Answer:
ಪಟ್ಟಣದ ಹೋಟೇಲೆಂದರೆ ನಯನಾಜೂಕಿನ ಹೆಣ್ಣಿದ್ದಂತೆ. ಪಟ್ಟಣದ ಹೋಟೇಲಿನಲ್ಲಿ ಎಲ್ಲವೂ ಇದೆ. ಮನವನ್ನಾಕರ್ಷಿಸುವ ಭವ್ಯ ಕಟ್ಟಡವಿದೆ. ನಡೆದರೆ ಕಾಲು ಜಾರುವ ನಯವಾದ ಫರಸಿಯ ನೆಲವಿದೆ. ಕೂತರೆ ಮಾಸಿಹೋದೀತೆನ್ನುವ ಖುರ್ಚಿಯಿದೆ. ತಂಪಾದ ಫ್ಯಾನಿನ ಗಾಳಿಯಿದೆ. ಡೆಕೋಲಮ್‌ನಿಂದ ಅಲಂಕೃತವಾದ ಟೇಬಲ್ಲೂ ಇದೆ.

ಟೇಬಲ್ ಮೇಲೆ ಗ್ಲಾಸೂ ಇದೆ. ಗ್ಲಾಸಿನಲ್ಲಿ ನೀರೂ ಇದೆ. ಕುಳಿತಾಗ ಏನು ಬೇಕು ಎಂದು ಯಂತ್ರದ ಗೊಂಬೆಯಂತೆ ಮೂಕ ಸನ್ನೆ ಮಾಡಿಕೇಳುವ, ಶುಭ್ರವಸ್ತ್ರದ ಮಾಣಿಯೂ ಇದ್ದಾನೆ. ತಂದು ಕೊಟ್ಟ ತಿಂಡಿಯಲ್ಲಿ ಹಸಿ ಯಾವುದು? ಬಿಸಿ ಯಾವುದು? ತಾಜಾ ಯಾವುದು? ಹಳಸಿದ್ದಾವುದು? ಯಾರಿಗೂ ಸ್ವತಃ ಮಾಣಿಗೂ ಗೊತ್ತಿರುವುದಿಲ್ಲ.

ಪಟ್ಟಣದ ಹೋಟೇಲಿನಲ್ಲಿ ನೆಮ್ಮದಿಯಾಗಿ ಸ್ವಲ್ಪ ಹೊತ್ತು ಕುಳಿತು ತಿಂಡಿ ತಿನ್ನಲು ಅವಕಾಶವಿಲ್ಲ. ಸ್ಥಳವನ್ನಾಕ್ರಮಿಸಲು ನಾ ಮುಂದು ನೀಮುಂದು ಎಂದು ಸ್ಪರ್ಧೆ ನಡೆಸುತ್ತ, ಜನರು ನಮ್ಮ ಎದೆಯ ಮೇಲೆ ನಿಂತಂತೆ ನಿಂತು ಬಿಟ್ಟಿದ್ದರೆ ತಿಂಡಿ ತೀರ್ಥ ತಿನ್ನಲು ಸಾಧ್ಯವಿಲ್ಲ. ಪಟ್ಟಣದ ಹೋಟೇಲುಗಳ ನೂಕುನುಗ್ಗಲುಗಳು, ಗಲಭೆ ಗಲೀಜುಗಳು ಸಾಕಪ್ಪ ಇದರ ಸಹವಾಸ ಎನ್ನಿಸಿಬಿಡುತ್ತದೆ. ತಿಂಡಿ ತಿಂದು ಚಹಾ ಕುಡಿದು ಹೊರಬಿದ್ದರೆ ಅದ್ಭುತ ಸಾಹಸ ಮಾಡಿ ಬಂದ ಅನುಭವ ಆಗುತ್ತದೆ.

Question 3.
ಹಳ್ಳಿ ಮತ್ತು ಪಟ್ಟಣ ಹೋಟೇಲುಗಳ ಮಾಣಿಯ ಕುರಿತು ಬರೆಯಿರಿ.

Answer:
ಹಳ್ಳಿಯ ಹೋಟೇಲುಗಳಲ್ಲಿ ನಮ್ಮ ಬೇಕು ಬೇಡಗಳನ್ನು ಅರಿತ ಮಾಣಿ ಒಂದು ಕೈಯಿಂದ ಬೆವರನ್ನು ಒರೆಸಿಕೊಳ್ಳುತ್ತ ಇನ್ನೊಂದು ಕೈಯಲ್ಲಿ ನಮ್ಮ ನೆಚ್ಚಿನ ಪೂರಿಸಾಗುಗಳನ್ನು ತಂದು ಮುಂದೆ ಇಡುತ್ತಾನೆ. ಪೂರಿಯ ಎಣ್ಣೆ ನಮ್ಮ ಪ್ರಕೃತಿಗೆ ಒಗ್ಗದು ಎಂದು ತಿಳಿದು ಅದನ್ನು ಒರೆಸಿ ತೆಗೆಯಲು ರದ್ದಿ ಕಾಗದದ ಚೂರುಗಳನ್ನೂ ತಂದು ಇರಿಸುತ್ತಾನೆ. ಪೂರಿಯ ಪ್ಲೇಟನ್ನು ಸರಿಸುತ್ತಲೇ ಭಜಿಯೂ ಬಂದು ನಮ್ಮೆದುರು ಕೂಡುತ್ತದೆ. ಇಂದು ಸ್ಪೆಶಲ್ ಅವಲಕ್ಕಿ ಸೂಸಲ ಮಾಡಿದ್ದೇನೆ.

ತರಲೇನು ಕೇವಲ ನಿಮಗಾಗಿಯೇ ಎಂದು ಕಿವಿಯಲ್ಲಿ ಉಸುರುತ್ತಾನೆ. ಆಗ ರೋಮಾಂಚನ ಉಂಟಾಗುತ್ತದೆ.ಪಟ್ಟಣದ ಹೋಟೇಲಿನಲ್ಲಿ ಕುಳಿತಿರೋ ಇಲ್ಲವೋ ಯಂತ್ರದ ಗೊಂಬೆಯಂತೆ ಮೂಕಸನ್ನೆ ಮಾಡಿ ಕೇಳುವ, ಶುಭ್ರ ವಸ್ತ್ರದ ಮಾಣಿ ಇರುತ್ತಾನೆ.

ಏನಿದೆ ಎಂದು ನಾವು ನೀರಸವಾಗಿ ಕೇಳಿದರೆ ಬೋಡ, ದೋಸೆ, ಉತ್ತಪ್ಪ, ಉಪಮಾ, ಪೂರಿ.ಭಜಿ ಎಂದು ನಮಗಿಂತಲೂ ನೀರಸವಾಗಿ ಪಟಪಟನೆ ಒದರುತ್ತಾನೆ. ಆದರೆ ಅದರಲ್ಲಿ ಬಿಸಿ ಯಾವುದು ಹಸಿ ಯಾವುದು ತಾಜಾ ಯಾವುದು ಹಳಸಿದ್ದು ಯಾವುದು ಸ್ವತಃ ಮಾಣಿಗೂ ಗೊತ್ತಿಲ್ಲ. ಕೇಳಿದ್ದನ್ನು ತಂದು ಎದುರಿಗಿಡುವ ಯಂತ್ರದಂತೆ ಕಾರ್ಯ ನಿರ್ವಹಿಸುತ್ತಿದ್ದಾನೆ.

Question 4.
ಹಳ್ಳಿಗರು ಹೊತ್ತನ್ನು ಹೇಗೆ ಕಳೆಯುತ್ತಾರೆ? ವಿವರಿಸಿ.

Answer:
ವೃದ್ಧರು, ಪೇನ್‌ಶನ್‌ದಾರರು ರೋಗಿಗಳು ಹಳಿಯ ಚಹಾ ಹೋಟೇಲ್‌ಗಳಲ್ಲಿರುವುದು ಸಾಮಾನ್ಯ. ತಿನ್ನುವ ಚಪಲ ಮಾತನಾಡುವ ಚಪಲವನ್ನು ತೀರಿಸಿಕೊಳ್ಳುವ ಜನ ಇಲ್ಲಿಗೆ ಬರುತ್ತಾರೆ. ಇನ್ನು ತರುಣರು, ಹೇಳಿ ಕೇಳಿ ಉತ್ಸಾಹಿಗಳು. ಇವರಿಗೆ ಜವಾಬ್ದಾರಿಯಿಲ್ಲ. ಮಾಡಲು ಕೆಲಸವಿಲ್ಲ. ಕೆಲಸವಿದ್ದರೂ ಮಾಡುವ ಮನಸಿಲ್ಲ. ಇವರಿಗೆ ಹೊತ್ತು ಹೋಗದು. ಅದಕ್ಕಾಗಿ ಪಣತೊಟ್ಟು ಇಡೀ ದಿವಸ ಚಹಾದ ಅಂಗಡಿಯಲ್ಲಿ ಚಹಾ ಕುಡಿಯುತ್ತ, ಕೇರಂ ಬೋರ್ಡನ್ನು ಆಡುತ್ತ ಕೂಡುತ್ತಾರೆ.

ಹಳ್ಳಿಯ ಪಟೇಲರು, ಊರಪುಢಾರಿಗಳು, ಸ್ವಯಂಘೋಷಿತ ದಳ್ಳಾಳಿಗಳು, ಪಟ್ಟಣದ ಶಾಲೆ ಕಾಲೇಜು ನರ್ಸರಿಗಳಲ್ಲಿ ಸೀಟು ಕೊಡಿಸುವೆನೆಂದು ಅಡ್ವಾನ್ಸ್ ಎತ್ತುವ ಲೀಡರರು, ಗ್ರಾಮಪಂಚಾಯಿತಿಯ ಸರಪಂಚರು, ಈಗಿನ ಹಾಲಿ ಸದಸ್ಯರು, ಶಾಲೆಗೆ ಆಗಾಗ ಭೆಟ್ಟಿ ಕೊಡುವ ಶಾಲಾ ಶಿಕ್ಷಕರು, ಅಂಗಡಿಯಲ್ಲಿ ಲೋಡಿಗಾನಿಸಿ ಕೂತು ಬೇಸತ್ತ ವ್ಯಾಪಾರಿಗಳು, ದಿನಕ್ಕೆ ಸರಾಸರಿ 5-6 ತಾಸುಗಳನ್ನಾದರೂ ಚಹಾಫಳಾರದ ಅಂಗಡಿಯಲ್ಲಿ ಕಳೆಯುತ್ತಾರೆಂದರೆ ಅದೊಂದು ಆಶ್ಚರ್ಯದ ಮಾತಲ್ಲ.

ಕಾಲುಬಿಟ್ಟ ಕತ್ತೆಯಂತೆ ಊರಸುತ್ತ ತಿರುಗಾಡುವ ಹಳ್ಳಿಯ ಗಂಡಸರಿಗೆ ಸಾಮಾಜಿಕ ವಿಷಯಗಳ ಬಗ್ಗೆ ಮಾತನಾಡಲು ಹೋಟೇಲ್ ಪ್ರಶಸ್ತವಾದ ಸ್ಥಳ. ತಮ್ಮ ಮನೆಯ ಸಮಾಚಾರ ತಮಗೆ ತಿಳಿದಿರದಿದ್ದರೂ ಊರ ಮೂಲೆ ಮೂಲೆಗಳಲ್ಲಿ ಏನು ನಡೆದಿದೆ. ಯಾರು ಹುಟ್ಟಿದರು. ಯಾರು ಸತ್ತರು. ಯಾರ ಮನೆಯಲ್ಲಿ ಆಕಳು ಈಯಿತು. ಯಾರ ಕೊಟ್ಟಿಗೆಯಲ್ಲಿ ಎಮ್ಮೆ ಸತ್ತಿತು. ಯಾರ ಬಣವೆಗೆ ಬೆಂಕಿ ಹಚ್ಚಿದರು. ಯಾರ ಮನೆ ದರೋಡೆಯಾಯ್ತು ಎಂಬ ಸಣ್ಣ ದೊಡ್ಡ ವಿಷಯಗಳೆಲ್ಲ ಹೋಟೇಲಿನಲ್ಲಿ ಮಾತನಾಡುತ್ತ ಕಾಲಕಳೆಯುತ್ತಾರೆ.

Question 5.
ಹಳ್ಳಿಯ ಹೊಟೇಲುಗಳಲ್ಲಿ ಬಂದ ನವೀನತೆಯ ಕುರಿತು ಬರೆಯಿರಿ.

Answer:
ಹಳ್ಳಿಯ ಹೋಟೇಲಿನಲ್ಲಿ ಈಗ ಸಿನೆಮಾ ದೇವತೆಗಳ ದರ್ಶನವೂ ಆಗುತ್ತದೆ. ಒಂದು ಕಡೆ ತಿರುಪತಿ ವೆಂಕಟೇಶ್ವರನ ಫೋಟೋ ನೇತಾಡುತ್ತಿದ್ದರೆ. ಇನ್ನೊಂದು ಕಡೆ ಐಶ್ವರ್ಯ ರೈ, ಹೇಮಾಮಾಲಿನಿ, ಧರ್ಮೇಂದ್ರರ ಕ್ಯಾಲೆಂಡರುಗಳೂ ಶೋಭಿಸುತ್ತವೆ. ಅಷ್ಟರಮಟ್ಟಿಗೆ ನವೀನತೆಯ ಗಾಳಿ ಹಳ್ಳಿಯ ಚಹಾ ಫಳಾರದ ಅಂಗಡಿಯಲ್ಲಿ ಬೀಸಿದೆ.

ಇಪ್ಪತ್ತು ವರ್ಷಗಳ ಹಿಂದೆ ಗ್ರಾಮಾಫೋನದ ರೆಕಾರ್ಡುಗಳು ಜನರನ್ನು ತಣಿಸುತ್ತಿದ್ದಂತೆ. ಇಂದು ಟಿ.ವಿ., ರೇಡಿಯೋ, ಸ್ಟೀರಿಯೋ, ಟೇಪ್‌ರೇಕಾರ್ಡುಗಳಿಂದ ಹಿಡಿದು ಎಫ್.ಎಮ್.ರೇಡಿಯೋ ಶೋತೃಗಳ ಕರ್ಣಪಟಲವನ್ನು ಹರಿದುಬಿಡುವಷ್ಟು ಕೀಸರಿಟ್ಟಿವೆ. ರಾಮಾಯಣ ಮಹಾಭಾರತ ಸೀರಿಯಲ್ ಬರುವಾಗಂತೂ ಟಿ.ವಿ.ಗೆ ಪೂಜೆ ಸಲ್ಲಿಸಿ ಧಾರಾವಾಹಿಗಳನ್ನು ಬಹಳ ಭಯಭಕ್ತಿಯಿಂದ ನೋಡಿದ್ದುಂಟು. ಆದರೂ ತರುಣರು ಆ ಹಾಡುಗಳನ್ನು ಆಸಕ್ತಿಯಿಂದ ಕೇಳುತ್ತ ಗುನುಗುನಿಸುತ್ತಿದ್ದರೆ ವೃದ್ದರೂ ಯಾರೂ ತಮ್ಮನ್ನು ನೋಡದಿರುವುದನ್ನು ಖಾತ್ರಿ ಮಾಡಿಕೊಂಡು ತಲೆದೂಗುತ್ತಾರೆ.

V. ಭಾಷಾಭ್ಯಾಸ

1. ಪಾಠದಲ್ಲಿ ಬಂದಿರುವ ಅನ್ಯದೇಶ ಪದಗಳ ಪಟ್ಟಿ:
ಇಂಗ್ಲಿಷ್ ಮೂಲದ ಪದಗಳು (ಅನ್ಯ ದೇಶ ಪದಗಳು):
ಹೊಟೇಲ್, ಫ್ಯಾನ್, ಡೆಕೋಲಮ್, ಟೇಬಲ್, ಗ್ಲಾಸು, ಪ್ಲೇಟ್, ಮಿನಿ, ಸೈಜ್, ಜೋಕ್, ಬೆಂಚ, ಸ್ಪೆಶಲ್, ಇಂಜಿನ್, ಕೌಂಟರ್, ಕ್ರಿಕೆಟ್, ಗೌಂಡ್, ಚರ್ಚ್, ಕ್ಲಬ್, ಪಾರ್ಲಿಮೆಂಟ್, ಪೆನ್‌ಶನ್, ಕೇರಂ ಬೋರ್ಡ್, ಕಾಲೇಜ್, ನರ್ಸರಿ, ಸೀಟ್, ಅಡ್ವಾನ್ಸ್, ಲೀಡರ್, ಪ್ರಿಸ್ಟ್ಪೈನ್, ಮಿಡಡೇ ಮೀಲ್ಸ್, ಹೆಡ್ ಮಾಸ್ಟರ್, ಪ್ಯಾಂಟ್, ಶರ್ಟ್, ಲೋಕಲ್, ಸ್ಟುಪಿಡ್, ಗ್ರಾಮೋಫೋನ್, ರೆಕಾರ್ಡ್, ರೇಡಿಯೋ, ಸ್ಟೀರಿಯೋ, ಟೇಪ್ ರಿಕಾರ್ಡ್, ಸೀರಿಯಲ್, ಟಿ.ವಿ.

2. ಹಚ್ಚಿ, ಮ್ಯಾಲ, ಹೆಸರ್ಲೆ, ಉದ್ರಿ ಇವುಗಳ ಗ್ರಾಂಥಿಕ ರೂಪಗಳು:

  • ಹಚ್ಚಿ → ಹಚ್ಚಬೇಕು
  • ಮ್ಯಾಲ → ಮೇಳದಲ್ಲಿ
  • ಹೆಸರ್ಲೆ → ಹೆಸರು ಇಟ್ಟುಕೊಳ್ಳಲಿ
  • ಉದ್ರಿ → ಉದಯಿಸಿ / ಬಂದಿರಿ

3. ಪಠ್ಯದಲ್ಲಿ ಬಂದಿರುವ ಹೊಟೇಲು ತಿಂಡಿಗಳ ಪಟ್ಟಿ:

  • ಚಹಾ
  • ಭಜ್ಜಿ
  • ಪೂರಿ
  • ಬೋಂಡ
  • ದೋಸೆ
  • ಉತ್ತಪ್ಪ
  • ಉಪ್ಮಾ
  • ಅವಲಕ್ಕಿ ಸೂಸಲ
  • ಇಡ್ಲಿ
  • ವಡೆ

4. ಪದಗಳ ಕಾಲದ ಸೂಚನೆ:

  • ಹೊಡೆಯುತ್ತ → ವರ್ತಮಾನ ಕಾಲ (Present continuous)
  • ಬರುತ್ತಾರೆ → ವರ್ತಮಾನ ಕಾಲ
  • ಹಬ್ಬಿದೆ → ಭೂತಕಾಲ (Past tense)
  • ಹಾಕುತ್ತಾರೆ → ವರ್ತಮಾನ ಕಾಲ

5. .ಎನ್. ಮೂರ್ತಿರಾವ್ ಮತ್ತು .ರಾ. ಮಿತ್ರರ ಹೊಟೇಲುಗಳುಪ್ರಬಂಧ ಮತ್ತು ಪ್ರಸ್ತುತ ಪ್ರಬಂಧದ ತೌಲನಿಕ ಅಧ್ಯಯನ:

ಅಂಶ

.ಎನ್. ಮೂರ್ತಿರಾವ್ ಮತ್ತು .ರಾ. ಮಿತ್ರರ ಹೊಟೇಲುಗಳು

ಪ್ರಸ್ತುತ ಪ್ರಬಂಧ (ಚಹಾಫಳಾರದ ಅಂಗಡಿ‘)

ವಿಷಯ

ಪಟ್ಟಣದ ಹೊಟೇಲುಗಳ ವೈಶಿಷ್ಟ್ಯತೆ ಮತ್ತು ವೈಭವ

ಹಳ್ಳಿಯ ಚಹಾಫಳಾರದ ಅಂಗಡಿಯ ಸಾಂಸ್ಕೃತಿಕ, ಸಾಮಾಜಿಕ ಪ್ರಭಾವ

ಶೈಲಿ

ವಿವರಣೆ, ವಿಮರ್ಶಾತ್ಮಕ ದೃಷ್ಟಿಕೋನ

ನುಡಿಮುತ್ತುಗಳೊಂದಿಗೆ ಸಾತ್ವಿಕ, ಹಾಸ್ಯಮಿಶ್ರಿತ ಶೈಲಿ

ಸಂದೇಶ

ಪಟ್ಟಣದ ಹೊಟೇಲುಗಳಲ್ಲಿ ಅನುಕೂಲಗಳಿದ್ದರೂ ಆತ್ಮೀಯತೆ ಇಲ್ಲ

ಹಳ್ಳಿಯ ಚಹಾಫಳಾರದ ಅಂಗಡಿಯಲ್ಲಿ ಆತ್ಮೀಯತೆ, ಭಾವೈಕ್ಯತೆ ಹೆಚ್ಚಾಗಿದೆ

ಸಾಮಾಜಿಕ ನೆಲೆ

ನಗರೀಕರಣದ ಪರಿಣಾಮ

ಗ್ರಾಮೀಣ ಬದುಕಿನ ನಿಖರ ಚಿತ್ರಣ

ಪ್ರಭಾವ

ಉಪಯುಕ್ತತೆ, ಆದರೆ ನೈಜತೆ ಇಲ್ಲ

ಹೃದಯಸ್ಪರ್ಶಿ, ಬದುಕಿನ ದೈನಂದಿನ ಅಭಿವ್ಯಕ್ತಿ

ಲೇಖಕರ ಪರಿಚಯ

2nd PUC Kannada Chapter 20 Halliya Chaha Hotelugalu
2nd PUC Kannada Chapter 20 Halliya Chaha Hotelugalu

ವೀರೇಂದ್ರ ಸಿಂಪಿ (೧೯೩೮): ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಡಚಣದಲ್ಲಿ ಜನನ. ತಂದೆ ಡಾ| ಸಿಂಪಿ ಲಿಂಗಣ್ಣ, ತಾಯಿ ಸೋಬಲವ್ವ, ೧೯೬೩ ರಿಂದ ೧೯೯೭ರ ವರೆಗೆ ಬೀದರಿನ ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಈಗ ಬೀದರ್‌ನಲ್ಲಿಯೇ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

ಕಾಗದದ ಚೂರು, ಭಾವ-ಮೈದುನ, ಸ್ವಚ್ಛಂದ ಮನದ ಸುಳಿದಾಟ, ಪರಿಸರ ಸ್ಪಂದನೆ ಇವರ ಪ್ರಮುಖ ಲಲಿತ ಪ್ರಬಂಧ ಸಂಕಲನಗಳಾಗಿವೆ. ವಿಶ್ವಕಲ್ಯಾಣ ಪತ್ರಿಕೆ ಮತ್ತು ದಿಕ್ಕೂಚಿ ಮಾಸಪತ್ರಿಕೆಗೆ ನಿಯಮಿತ ೮೦ಕ್ಕೂ ಮೇಲ್ಪಟ್ಟು ಅಂಕಣಗಳು ಬರೆದಿರುತ್ತಾರೆ. ಜೀವನಚರಿತ್ರೆ, ಅನುವಾದ, ಸಂಪಾದನೆ, ವೈಚಾರಿಕ ಲೇಖನಗಳು ಮುಂತಾಗಿ ಇಲ್ಲಿಯವರೆಗೆ ಇವರು ೩೨ ಕೃತಿಗಳನ್ನು ಪ್ರಕಟಿಸಿದ್ದಾರೆ.

‘ಭಾವ-ಮೈದುನ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಎರಡು ಬಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆಸಲ್ಲಿಸಿರುತ್ತಾರೆ. ಪ್ರಸಕ್ತ ಪ್ರಬಂಧವು ಇವರ ‘ಸಮಗ್ರ ಲಲಿತ ಪ್ರಬಂಧ’ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. ‘ಬಹುಶ್ರುತತ್ವ ಹಾಗೂ ಜೀವನಾನುಭವದ ತಮ್ಮ ಆತ್ಮವೃತ್ತದ ಎಳೆಗಳೊಂದಿಗೆ ಸಮೂಹ ಚಿಂತನೆಯನ್ನು ಜೋಡಿಸುವುದು’ ಇವರ ಪ್ರಬಂಧಗಳ ವೈಶಿಷ್ಟವಾಗಿದೆ.

Click Here to Download Halliya Chaha Hotelugalu PDF Notes
Click Here to Watch Halliya Chaha Hotelugalu Video

You cannot copy content of this page