2nd PUC Kannada Question and Answer – Thirulgannadada belnudi
Looking for 2nd PUC Kannada textbook answers? You can download Chapter 19: Thirulgannadada belnudi Questions and Answers PDF, Notes, and Summary here. 2nd PUC Kannada Gadyabhaga solutions follow the Karnataka State Board Syllabus, making it easier for students to revise and score higher in exams.
Karnataka 2nd PUC Kannada Textbook Answers—Reflections Chapter 19
Thirulgannadada belnudi Questions and Answers, Notes, and Summary
2nd PUC Kannada Gadyabhaga Chapter 19
ತಿರುಳನ್ನಡದ ಬೆಳ್ಳುಡಿ
Thirulgannadada belnudi
Scroll Down to Download Thirulgannadada belnudi PDF
I. ಒಂದು ಅಂಕದ ಪ್ರಶ್ನೆಗಳು:
Question 1.
ಮುದ್ದಣ ಅರಮನೆಯಿಂದ ಬರುತ್ತಿರುವುದನ್ನು ನಿಂತು ನೋಡಿದವರು ಯಾರು?
Answer:
ಮನೋರಮೆಯು ಮುದ್ದಣ ಅರಮನೆಯಿಂದ ಬರುತ್ತಿರುವುದನ್ನು ನಿಂತು ನೋಡಿದಳು.
Question 2.
ಯಾವ ಕತೆ ಹೇಳಬೇಕೆಂದು ಮನೋರಮೆ ಕೇಳಿದಳು?
Answer:
ಉಳಿದರೂ ಆಳಿದರೂ ದಾರಿತೋರಿಸುವಂತಹ ರಸಭರಿತವಾದ ರಾಮಾಯಣದ ಯಾವುದಾದರೊಂದು ಪ್ರಸಂಗ ಹೇಳಬೇಕೆಂದು ಕೇಳಿದಳು.
Question 3.
ಶೇಷನು ರಾಮಾಯಾಣದ ಕತೆಯನ್ನು ಯಾರಿಗೆ ಹೇಳಿದನು?
Answer:
ಶೇಷನು ಮೊದಲು ರಾಮಾಯಾಣದ ಕತೆಯನ್ನು ವಾತ್ಸಾಯನನಿಗೆ ಹೇಳಿದನು.
Question 4.
ಎಂತಹ ಗದ್ಯದಲ್ಲಿ ಕತೆ ಹೇಳೆಂದು ಮನೋರಮೆ ಕೇಳುವಳು?
Answer:
ಹೃದಯಕ್ಕೆ ಆನಂದ ನೀಡುವಂತ ಗದ್ಯದಲ್ಲಿ ಕತೆ ಹೇಳಬೇಕೆಂದು ಮನೋರಮೆ ಕೇಳಿದಳು.
Question 5.
ಮನೋರಮೆ ಬಹುಮಾನವಾಗಿ ಏನನ್ನು ಕೊಡುವೆನೆಂದಳು?
Answer:
ಮನೋರಮೆ ಬಹುಮಾನವಾಗಿ ತನ್ನನ್ನು ತಾನು ಅರ್ಪಿಸಿಕೊಳ್ಳುವೆನೆಂದಳು.
Question 6.
ವಸುಧೆಗೆ ಒಡೆಯನೆನಿಸಿದವನು ಯಾರು?
Answer:
ವಸುಧೆಗೆ ಒಡೆಯನೆನಿಸಿದವನು ಶ್ರೀ ರಾಮಚಂದ್ರ,
Question 7.
ಕನ್ನಡವು ಕಸ್ತೂರಿಯಲ್ಲವೇ! ಎಂದವರಾರು?
Answer:
ಮನೋರಮೆಯು ಕನ್ನಡವು ಕಸ್ತೂರಿಯಲ್ಲವೇ ! ಎಂದು ಹೇಳಿದಳು.
II.ಎರಡು ಅಂಕದ ಪ್ರಶ್ನೆಗಳು:
Question 1.
ಮುದ್ದಣನನ್ನು ಮನೋರಮೆ ಹೇಗೆ ಉಪಚರಿಸಿದಳು?
Answer:
ದೂರದಿಂದಲೇ ಪತಿಬರುವುದನ್ನು ಕಂಡ ಮನೋರಮೆ ಎದ್ದು ಆತನನ್ನು ಎದುರುಗೊಂಡು ಕೈಕಾಲು ತೊಳೆದುಕೊಳ್ಳುವುದಕ್ಕೆ ನೀರು ಕೊಟ್ಟು ಮನೆಯೊಳಗೆ ಕರೆದುಕೊಂಡು ಹೋಗಿ ಮಣೆಯಿತ್ತು, ಕುಡಿಯಲು ಹಾಲನ್ನು, ತಿನ್ನಲು ರುಚಿಕರವಾದ ಹಣ್ಣುಗಳನ್ನು, ಮಾತ್ರವಲ್ಲದೆ ರಸವತ್ತಾದ ಕಂಪುಭರಿತ ತಾಂಬೂಲವನ್ನು ನೀಡಿ ಉಪಚರಿಸಿದಳು.
Question 2.
ಮನೋರಮೆ ಕಥೆ ಹೇಳೆಂದು ಕೇಳಲು ಕಾರಣವೇನು?
Answer:
ಹಗಲಿರುಳು ಒಂದೇ ಸಮನೆ ಸುರಿಯುತ್ತಿರುವ ಈ ಜಡಿಮಳೆಯಿಂದಾಗಿ ಹಗಲು ಬಹಳ ದೀರ್ಘವಾಗಿ ಕಾಣಿಸುತ್ತಿದೆ. ಮನಸ್ಸಿಗೆ ಬೇಸರವಾಗಿದೆ. ಆದ್ದರಿಂದ ಯಾವುದಾದರೂ ನಲ್ಗತೆಯನ್ನು ಹೇಳು ಎಂದು ಕೇಳಿದಳು.
Question 3.
ಕತೆಯನ್ನು ಯಾವ ರಸಗಳಲ್ಲಿ ಹೇಳಲೆಂದು ಮುದ್ದಣ ಕೇಳಿದನು?
Answer:
ಮನೋರಮೆಯು ಹಗಲಿರುಳು ಒಂದೇ ಸಮನೆ ಸುರಿಯುತ್ತಿರುವ ಈ ಜಡಿಮಳೆಯಿಂದಾಗಿ ಮನಸ್ಸಿಗೆ ಬೇಸರವಾಗಿದೆ. ಯಾವುದಾದರೂ ಒಂದು ಕಥೆಯನ್ನು ಹೇಳು ಎಂದಾಗ, ಮುದ್ದಣನು ಅಷ್ಟೇ ತಾನೇ ಯಾವ ಕಥೆ ಹೇಳಲಿ ಭೋಜ ಪ್ರಬಂಧವೋ? ವಿಕ್ರಮ ವಿಜಯವೋ? ಮಹಾವೀರ ಚರಿತೆಯೋ? ಎಂದಾಗ ಇವುಗಳಲ್ಲಿ ನನಗೆ ಆಸಕ್ತಿಯಿಲ್ಲ ಉಳಿದರೂ ಆಳಿದರು ದಾರಿರೋರಿಸುವಂತ ರಸಭರಿವಾದ ಕಥೆ ಹೇಳು ಎನ್ನುತ್ತಾಳೆ. ಆಗ ಮುದ್ದಣನು ನಿನಗೆ ಯಾವ ರಸ ಇಷ್ಟ ಶೃಂಗಾರರಸವೇ? ವೀರರಸವೇ? ಹಾಸ್ಯರಸವೇ? ಎಂದು ಕೇಳಿದನು.
Question 4.
ಯಾವ ಧಾಟಿಯಲ್ಲಿ ಕಥೆಯನ್ನು ಹೇಳೆಂದು ಮನೋರಮೆ ಕೇಳಿದಳು?
Answer:
ಮುದ್ದಣನು ಪದ್ಯದಲ್ಲಿ ಕಥೆ ಹೇಳಲೋ ಗದ್ಯದಲ್ಲಿ ಕಥೆ ಹೇಳಲೋ ಎಂದು ಕೇಳಿದಾಗ, ಪದ್ಯದಲ್ಲಿ ಬೇಡ, ಹೃದಯಕ್ಕೆ ಹತ್ತಿರವಾದ ಗದ್ಯದಲ್ಲೇ ಕಥೆ ಹೇಳು ಎಂದು ಕೇಳಿದಳು.
Question 5.
ಅರಮನೆಯಿಂದ ಎಂತಹ ಬಹುಮಾನ ಸಿಗಬಹುದೆಂದು ಮುದ್ದಣ ಹೇಳಿದನು?
Answer:
ಕಥೆ ಹೇಳಲು ಆರಂಭಿಸುವ ಮುನ್ನ ಮುದ್ದಣನು ಮನೋರಮೆಯಲ್ಲಿ ಇಂಥ ನಲ್ಗತೆಯನ್ನು ಹೇಳಿದರೆ ಅರಮನೆಯಲ್ಲಿ ರತ್ನದ ಕಡಗವನ್ನೋ, ಚಿನ್ನದ ಕಂಠೀಹಾರವನ್ನೋ ಕೊಡುತ್ತಾರೆ. ಆದರೆ ನೀನು ಏನು ಕೊಡುವೆ ಎಂದು ಹೇಳಿದನು.
Question 6.
ನೀರಿಳಿಯದ ಗಂಟಲಲ್ಲಿ ಕಡುಬನ್ನು ತುರಿಕಿದಂತಾಯ್ತು’ಎಂದು ಮನೋರಮೆ ಹೇಳಿದ್ದೇಕೆ ?
Answer:
ಮುದ್ದಣ ಕಥೆಯನ್ನು ಸ್ವಸ್ತಿ ಶ್ರೀಮತ್ಸುರಾಸುರೇಂದ್ರ ನರೇಂದ್ರ ಮುನೀಂದ್ರ… ಎಂದು ಆರಂಭಿಸಿದಾಗ ಮನೋರಮೆಯು ಇದು ಸಂಸ್ಕೃತದ ನುಡಿ, ಕನ್ನಡದ ಸೊಗಸನ್ನೇ ತಿಳಿಯದ ನನಗೆ ಸಂಸ್ಕೃತದ ಸೊಗಸು ಅರ್ಥವಾಗುವುದೇ ಎಂದು ಹೇಳುವಾಗ ನೀರಿಳಿಯದ ಗಂಟಲಲ್ಲಿ ಕಡುಬನ್ನು ತುರಿಕಿದಂತಾಯ್ತು’ ಎಂದು ಹೇಳಿದ್ದಾಳೆ.
Question 7.
ಸಂಸ್ಕೃತ- ಕನ್ನಡಗಳು ಸೇರಿದರೆ ಹೇಗೆ ಸೊಗಯಿಸುತ್ತದೆ?
Answer:
ಸಂಸ್ಕೃತ ಒಂದು ಚಿನ್ನದಲ್ಲಿ ಪೋಣಿಸಿದ ರತ್ನದ ಮಣಿ. ಕರಿಮಣಿ ಸರದಲ್ಲಿ ಕೆಂಪು ಹವಳವನ್ನು ಪೋಣಿಸಿದಂತೆ, ಸಂಸ್ಕೃತ ಮತ್ತು ಕನ್ನಡವನ್ನು ರಸಂ ಒಸರುವಂತೆ, ಕಾವ್ಯ ಲಕ್ಷಣವಿರುವಂತೆ ಅಲ್ಲಲ್ಲಿ ಬೆರೆಸಿ ಹೇಳಿದಾಗ ಚೆನ್ನಾಗಿರುತ್ತದೆ ಎಂದು ಮುದ್ದಣ ಹೇಳುತ್ತಾನೆ.
III.ಸಂದರ್ಭ (ಮೂರು ಅಂಕದ ಪ್ರಶ್ನೆಗಳು)
Question 1.
ಬಲ್ಲೋನೆಯಜಿನುಂಗಿನತ್ತಣಿನೆನ್ನ ಬಗೆಯುಂ ಬೇಸರ್ತುದು.
Answer:
ಆಯ್ಕೆ: ಈ ಮಾತನ್ನು ಮುದ್ದಣ ಕವಿಯು ರಚಿಸಿರುವ ತಿರುಳನ್ನಡದ ಬೆಳ್ಳುಡಿ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಮನೋರಮೆಯು ಮುದ್ದಣನಲ್ಲಿ ಹೇಳುವ ಮಾತು ಇದಾಗಿದೆ.
ವಿವರಣೆ: ಅರಮನೆಯಿಂದ ಒಂದು ಸಂಜೆ ಮನೆಗೆ ಬಂದ ಮುದ್ದಣನಿಗೆ. ಮನೋರಮೆಯು ಹಸಿವು ಬಳಲಿಕೆ ಹೋಗಲು ಹಾಲು ಹಣ್ಣು ತಾಂಬೂಲಗಳನ್ನೆಲ್ಲ ಕೊಟ್ಟು ಉಪಚಾರಮಾಡುತ್ತಾಳೆ. ನಂತರ ತನ್ನ ಬೇಡಿಕೆಯನ್ನು ಮುಂದಿಡುತ್ತಾ, ಹಗಲಿರುಳು ಒಂದೇ ಸಮನೆ ಸುರಿಯುತ್ತಿರುವ ಈ ಜಡಿಮಳೆಯಿಂದಾಗಿ ಹಗಲು ಬಹಳ ದೀರ್ಘವಾಗಿ ಕಾಣಿಸುತ್ತಿದೆ. ಮನಸ್ಸಿಗೆ ಬೇಸರವಾಗಿದೆ ಎನ್ನುವಾಗ ಈ ಮೇಲಿನ ಮಾತು ಬಂದಿದೆ.
Question 2.
ನಿನಗಾವ ರಸದೊಳಿಷ್ಟಂ?
Answer:
ಆಯ್ಕೆ: ಈ ಮಾತನ್ನು ಮುದ್ದಣ ಕವಿಯು ರಚಿಸಿರುವ ತಿರುಳನ್ನಡದ ಬೆಳ್ಳುಡಿ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಮುದ್ದಣ ಮನೋರಮೆಯಲ್ಲಿ ಹೇಳುತ್ತಾನೆ.
ವಿವರಣೆ: ಹಗಳಿರುಳು ಒಂದೇ ಸಮನೆ ಸುರಿಯುತ್ತಿರುವ ಈ ಜಡಿಮಳೆಯಿಂದಾಗಿ ಹಗಲು ಬಹಳ ದೀರ್ಘವಾಗಿ ಕಾಣಿಸುತ್ತಿದೆ, ಮನಸ್ಸಿಗೆ ಬೇಸರವಾಗಿದೆ. ಯಾವುದಾದರೂ ಒಂದು ಕಥೆಯನ್ನು ಹೇಳು: ಎಂದಾಗ ಮುದ್ದಣನು ಅಷ್ಟೇ ತಾನೇ ಯಾವ ಕಥೆ ಹೇಳಲಿ ಭೋಜ ಪ್ರಬಂಧವೋ, ವಿಕ್ರಮ ವಿಜಯವೋ, ಮಹಾವೀರಚರಿತೆಯೋ ಎಂದಾಗ ಇವುಗಳಲ್ಲಿ ನನಗೆ ಆಸಕ್ತಿಯಿಲ್ಲ ಉಳಿದರೂ ಅಳಿದರೂ ದಾರಿತೋರಿಸು ವಂತ ರಸಭರಿತವಾದ ಕಥೆ ಹೇಳು ಎಂದು ಹೇಳುತ್ತಾಳೆ. ನಿನಗೆ ಯಾವ ರಸ ಇಷ್ಟ ಶೃಂಗಾರರಸವೇ? ವೀರರಸವೇ? ಹಾಸ್ಯರಸವೇ? ಎನ್ನುವಾಗ ಈ ಮೇಲಿನ ಮಾತು ಬಂದಿದೆ.
Question 3.
ಸೀತಾಪಹರಣದ ಕಥನದೊಳ್ ಬಯಕೆಯೆ?
Answer:
ಆಯ್ಕೆ: ಈ ಮಾತನ್ನು ಮುದ್ದಣ ಕವಿಯು ರಚಿಸಿರುವ ತಿರುಳನ್ನಡದ ಬೆಳ್ಳುಡಿ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಮುದ್ದಣ ತನ್ನ ಮಡದಿ ಮನೋರಮೆಯಲ್ಲಿ ಕೇಳುವ ಪ್ರಶ್ನೆ ಇದಾಗಿದೆ.
ವಿವರಣೆ: ಮುದ್ದಣ ಮನೋರಮೆಯರು ಸುಖಸಲ್ಲಾಪದಿಂದ ಮಾತನಾಡುತ್ತಿರುವಾಗ ಮನೋರಮೆಯು ರಾಮಾಯಣದ ಯಾವುದಾದರೊಂದು ಕಥೆ ಹೇಳು ಎಂದು ಕೇಳಿದಾಗ, ಮುದ್ದಣನು ಸೀತಾ ಸ್ವಯಂವರದ ಕಥೆ ಹೇಳಲೇ ಎಂದಾಗ ಅದನ್ನು ಮೊದಲೇ ಕೇಳಿದ್ದೇನೆ. ಎನ್ನುತ್ತಾಳೆ. ಹಾಗಾದರೆ ಏನು ಸೀತಾಪಹರಣದ ಕಥೆಯ ಕೇಳುವ ಬಯಕೆಯೇ ಎನ್ನುವಾಗ ಈ ಮೇಲಿನ ಮಾತು ಬಂದಿದೆ.
Question 4.
ಪದ್ಯಂ ವದ್ಯಂ : ಗದ್ಯಂ ಹೃದ್ಯಂ.
Answer:
ಆಯ್ಕೆ: ಈ ಮಾತನ್ನು ಮುದ್ದಣ ಕವಿಯು ರಚಿಸಿರುವ ತಿರುಳನ್ನಡದ ಬೆಳ್ಳುಡಿ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಮನೋರಮೆಯು ಮುದ್ದಣನಲ್ಲಿ ಹೇಳುವ ಮಾತಿದು.
ವಿವರಣೆ: ಮನೋರಮೆಯ ಬಯಕೆಯಂತೆ ಶ್ರೀರಾಮನು ಅಶ್ವಮೇಧ ಮಾಡಿದ ಕಥೆಯನ್ನು ಅಂದರೆ ಶೇಷರಾಮಾಯಣವನ್ನು ಹೇಳಲು ನಿರ್ಧರಿಸಿದ ಮುದ್ದಣ ಪದ್ಯದಲ್ಲಿ ಹೇಳಲೋ ಗದ್ಯದಲ್ಲಿ ಹೇಳಲೋ ಎಂದು ಕೇಳಿದಾಗ ಮನೋರಮೆ ಈ ಮೇಲಿನಂತೆ ಹೇಳುತ್ತಾಳೆ. ಪದ್ಮಧಾಟಿಗಿಂತಲೂ ಹೃದಯಕ್ಕೆ ಗದ್ಯಧಾಟ ಹತ್ತಿರ ಎಂಬುದು ಅವಳ ಭಾವನೆಯಾಗಿದೆ.
Question 5.
ಕಬ್ಬಮಂ ಕಂಡಲೆಕಚ್ಚಳಿಯನಿತ್ತರ್.
Answer:
ಆಯ್ಕೆ: ಈ ಮಾತನ್ನು ಮುದ್ದಣ ಕವಿಯು ರಚಿಸಿರುವ ತಿರುಳನ್ನಡದ ಬೆಳ್ಳುಡಿ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಮನೋರಮೆಯು ಮುದ್ದಣನಲ್ಲಿ ಹೇಳುವ ಮಾತು ಇದಾಗಿದೆ.
ವಿವರಣೆ: ಕಥೆ ಹೇಳಲು ಆರಂಭಿಸುವ ಮುನ್ನ ಮುದ್ದಣನು ಇಂಥ ನಲ್ಗತೆಯನ್ನು ಹೇಳಿದರೆ ಅರಮನೆಯಲ್ಲಿ ರತ್ನದ ಕಡಗವನ್ನೋ, ಚಿನ್ನದ ಕಂಠೀಹಾರವನ್ನೋ ಕೊಡುತ್ತಾರೆ. ನೀನೇನು ಕೊಡುವೆ ಎಂದು ಕೇಳುತ್ತಾನೆ. ಮನೋರಮೆಯು ಅದಕ್ಕೆ ತನ್ನ ಉತ್ತರವಾಗಿ ಎನ್ನನೇ ಆನೀವೆಂ ಎಂದು ಹೇಳುತ್ತಾಳೆ. ಅವನು ಬಿಡದೆ ಮೊದಲೇ ನಿನ್ನ ತಂದೆ-ತಾಯಿಗಳು ನಿನ್ನನ್ನು ನನಗೆ ಅರ್ಪಿಸಿದ್ದಾರೆ. ಬೇರೆ ಏನು ಕೊಡುವೆ ಎಂದು ಕೀಟಲೆ ಮಾಡುತ್ತಾನೆ. ಅವಳೋ ಮಹಾ ಜಾಣೆ. ಅರಮನೆಯವರು ಕಥೆ ಕೇಳಿದ ನಂತರ ಉಡುಗೊರೆ ನೀಡುವರಲ್ಲವೇ ನಾನೂ ಕಥೆ ಕೇಳಿ ಅದರ ಶಕ್ತಿ ಎಷ್ಟಿದೆ ನೋಡಿ ಅದಕ್ಕೆ ತಕ್ಕಂತೆ ಸನ್ಮಾನಿಸುತ್ತೇನೆ ಎನ್ನುವಾಗ ಈ ಮೇಲಿನ ಮಾತು ಬಂದಿದೆ.
Question 6.
ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು.
Answer:
ಆಯ್ಕೆ: ಈ ಮಾತನ್ನು ಮುದ್ದಣ ಕವಿಯು ರಚಿಸಿರುವ ತಿರುಳ್ಳನ್ನಡದ ಬೆಳ್ಳುಡಿ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಮನೋರಮೆಯು ಮುದ್ದಣನಲ್ಲಿ ಹೇಳುವ ಮಾತು ಇದಾಗಿದೆ.
ವಿವರಣೆ : ಮುದ್ದಣ ಕತೆಯನ್ನು ಸ್ವಸ್ತಿ ಶ್ರೀಮತ್ಸುರಾಸುರೇಂದ್ರ ನರೇಂದ್ರ ಮುನೀಂದ್ರ…ಎಂದು ಆರಂಭಿಸಿದಾಗ ಮನೋರಮೆಯು ಓಓ! ತಡೆ! ತಡೆ! ಭೂಮಿಗೆ ಒಡೆಯನಾದ ಶ್ರೀರಾಮಚಂದ್ರನ ಕತೆಯನ್ನು ಹೇಳು ಎಂದರೆ ಜೈನ ಮಹಾಪುರುಷರ ಕತೆಯನ್ನು ಹೇಳುತ್ತಿದ್ದೀಯಾ? ಎಂದು ಪ್ರಶ್ನಿಸುತ್ತಾ, ಸಾಕು ಸಾಕು ಇಂಥ ಎದೆಬಿರಿಯುವ ಕತೆಗೆ ಎಂತಹ ಉಡುಗೊರೆ ನೀಡಲಿ ಎನ್ನುತ್ತಾಳೆ. ಅದಕ್ಕೆ ಮುದ್ದಣನು ಈ ರೀತಿಯಾಗಿ ಕಾವ್ಯವನ್ನು ಪ್ರಾರಂಭಿಸುವುದು ಸಂಸ್ಕೃತದ ಒಂದು ಚೆಲುವು ಎನ್ನುತ್ತಾನೆ. ಆಗ ಮನೋರಮೆಯು ಆತನ ಮಾತಿಗೆ ಉತ್ತರಿಸುತ್ತಾ ಈ ಮೇಲಿನಂತೆ ಹೇಳುತ್ತಾಳೆ.
Question 7.
ಕನ್ನಡಂ ಕತ್ತುರಿಯ.
Answer:
ಆಯ್ಕೆ: ಈ ಮಾತನ್ನು ಮುದ್ದಣ ಕವಿಯು ರಚಿಸಿರುವ ತಿರುಳನ್ನಡದ ಬೆಳ್ಳುಡಿ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಮನೋರಮೆಯು ಮುದ್ದಣನಲ್ಲಿ ಹೇಳುವ ಮಾತು ಇದಾಗಿದೆ.
ವಿವರಣೆ: ಸ್ವಸ್ತಿ ಶ್ರೀ ಮತ್ತುರಾ ಸುರೇಂದ್ರ ನರೇಂದ್ರ ಮುನೀಂದ್ರ ಎಂದು ಆರಂಭಿಸಿದಾಗ ಮನೋರಮೆಯು ಇದು ಸಂಸ್ಕೃತದ ನುಡಿ, ಕನ್ನಡದ ಸೊಗಸನ್ನೇ ಅರಿಯದ ನನಗೆ ಸಂಸ್ಕೃತದ ಸೊಗಸು ಅರ್ಥವಾಗುವುದೇ, ನೀರಿಳಿಯದ ಗಂಟಲಲ್ಲಿ ಕಡುಬನ್ನು ತುರುಕಿದಂತಾಗುತ್ತದೆ. ಹಾಗಾಗಿ ನನಗೆ ತಿರುಳ್ಳನ್ನಡದಲ್ಲಿಯೇ ಕಥೆಯನ್ನು ಹೇಳು ಎಂದು ಹೇಳುವಾಗ ಕನ್ನಡಂ ಕಸ್ತೂರಿಯ ಎಂದಿದ್ದಾಳೆ.
IV. ನಾಲ್ಕು ಅಂಕದ ಪ್ರಶ್ನೆಗಳು:
Question 1.
ಮುದ್ದಣ ಅರಮನೆಯಿಂದ ಬಂದ ಪರಿಯನ್ನೂ ಮನೋರಮೆಯ ಉಪಚಾರವನ್ನೂ ವಿವರಿಸಿ.
Answer:
ಕಾಡು ನಾಡುಗಳೆಲ್ಲ ಸುಂದರವಾಗಿ, ಮನೋಹರವಾಗಿ ಕಾಣಿಸುತ್ತದ್ದಂತಹ ಮಳೆಗಾಲದ ಒಂದು ದಿನ ಸಂಜೆಯ ಹೊತ್ತಿನಲ್ಲಿ ಕವಿಗಳ ವಲ್ಲಭ, ಕವಿಗುರು ಎನಿಸಿಕೊಂಡ ಮುದ್ದಣನು ರಾಜನ ಸಭೆಯನ್ನು ಮುಗಿಸಿಕೊಂಡು, ಆರಮನೆಯಿಂದ ಹೊರಹೊರಟು ನಡೆಯುತ್ತಾ ಪಕ್ಕದ ಬೀದಿಯನ್ನು ಬಳಸಿಕೊಂಡು ಮುನ್ನಡೆಯುತ್ತಾ ತನ್ನ ಮನೆಯ ಕಡೆಗೆ ಬರುತ್ತಾನೆ.
ಆತನ ಬರುವಿಕೆಯನ್ನು ದೂರದಿಂದಲೇ ಗಮನಿಸಿದ ಆತನ ಮಡದಿ ಮನೋರಮೆಯು ತಾನು ಕೂತಲ್ಲಿಂದ ಎದ್ದು ಪತಿಯನ್ನು ಎದುರುಗೊಂಡು ಕಾಲು ತೊಳೆಯಲು ನೀರನ್ನು ಕೊಟ್ಟು, ನಂತರ ಆತನ ಕೈಯನ್ನು ಹಿಡಿದು ಒಳಮನೆಗೆ ಕರೆದುಕೊಂಡು ಬಂದು ಮಣೆಯಿಟ್ಟು ಕುಳ್ಳಿರಿಸಿ ತಿನ್ನಲು ರುಚಿಕರವಾದ ಹಣ್ಣನ್ನು, ಕೆನೆಭರಿತವಾದ ಹಾಲನ್ನು ಕುಡಿಯಲು ಕೊಟ್ಟಳು. ಜೊತೆಯಲ್ಲಿ ರಸವತ್ತಾದ ಕಂಪುಭರಿತ ತಾಂಬೂಲವನ್ನೂ ಕೂಡ ಸವಿಯಲು ಕೊಡುತ್ತಾಳೆ. ಆಕೆಯ ಉಪಚಾರದಿಂದ ಮುದ್ದಣನ ಹಸಿವು, ಬಳಲಿಕೆಯು ನಿವಾರಣೆಯಾಯಿತು. ಹೀಗೆ ಸುಖ ಸಂತೋಷದಿಂದ ಪತಿ-ಪತ್ನಿಯರು ಕಾಲ ಕಳೆಯುತ್ತಿದ್ದರು.
Question 2.
ಒಳ್ಳೆಯದೊಂದು ಕತೆ ಹೇಳಬೇಕೆಂದಾಗ ಮುದ್ದಣನ ಪ್ರತಿಕ್ರಿಯೆಯೇನು?
Answer:
ಮನೋರಮೆಯು ಮುದ್ದಣನನ್ನು ಉಪಚರಿಸುತ್ತಾ ತಾಂಬೂಲವನ್ನು ನೀಡುತ್ತಾ, ಮೊದಲು ಪತಿಯ ಬಳಲಿಕೆಯನ್ನು ನಿವಾರಿಸುತ್ತಾಳೆ. ಆ ಮೇಲೆ ತನ್ನ ಮನದ ಬಯಕೆ ಈಡೇರಿಸಿಕೊಳ್ಳಲು ಮುಂದಾಗುತ್ತಾಳೆ. ಮನೋರಮೆ: ಮುದ್ದಣನಲ್ಲಿ ಹಗಲಿರುಳು ಒಂದೇ ಸಮನೆ ಸುರಿಯುತ್ತಿರುವ ಈ ಜಡಿಮಳೆಯಿಂದಾಗಿ ಮನಸ್ಸಿಗೆ ಬೇಸರವಾಗಿದೆ. ಹಾಗಾಗಿ ಯಾವುದಾದರೂ ಒಂದು ಕತೆಯನ್ನು ಹೇಳು ಎನ್ನುತ್ತಾಳೆ. ಆಕೆಯ ಉಪಚಾರದಿಂದ ಸಂತೃಪ್ತನಾದ ಮುದ್ದಣನು ಅಷ್ಟೇ ತಾನೇ ಯಾವ ಕತೆ ಹೇಳಲಿ ಭೋಜ ಪ್ರಬಂಧವೋ? ವಿಕ್ರಮ ವಿಜಯವೋ? ಮಹಾವೀರಚರಿತೆಯೋ? ಎಂದಾಗ ಇವುಗಳಲ್ಲಿ ನನಗೆ ಆಸಕ್ತಿಯಿಲ್ಲ ಉಳಿದರೂ ಆಳಿದರೂ ದಾರಿತೋರಿಸುವ ರಸಭರಿತವಾದ ಕತೆ ಹೇಳು ಎಂದು ಕೇಳುತ್ತಾಳೆ. ಆಗ ಮುದ್ದಣನು ನಿನಗೆ ಯಾವ ರಸದಲ್ಲಿ ಕತೆ ಹೇಳಲಿ ಶೃಂಗಾರ, ಹಾಸ್ಯ, ವೀರರಸಗಳೇ ಎಂದು ಕೇಳಿದನು. ಅದಕ್ಕೆ ಆಕೆ ಯಾವ ರಸದಲ್ಲಿ ಅಂದರೆ? ನವರಸಗಳು ಒಂದಾಗಿರುವ ಕತೆ ಹೇಳು ಎನ್ನುತ್ತಾಳೆ.
ಹಾಗಾದರೆ ಯಾವ ಕತೆ ಎಂದಾಗ ರಾಮಾಯಣದೊಳ್ ಏನಾನು ಮೊಂದು ಎಂದಾಗ ಹಾಗೆಯೇ ಆಗಲಿ ಎಂದ ಮುದ್ದಣನು ಸೀತಾಸ್ವಯಂವರದ ಕತೆ ಹೇಳಲೇ ಎಂದಾಗ ಅದನ್ನು ಮೊದಲೇ ಕೇಳಿದ್ದೇನೆ ಎನ್ನುತ್ತಾಳೆ. ಹಾಗಾದರೆ ಏನು ಸೀತಾಪಹರಣದ ಕತೆ ಕೇಳುವ ಬಯಕೆಯೇ ಎಂದಾಗ ತಾನು ಒಲ್ಲೆ ಎನ್ನುತ್ತಾಳೆ. ಹಾಗಾದರೆ ಬೇರೆ ಯಾವ ಸುಂದರ ಕತೆಯನ್ನು ಹೇಳಲಿ ಎಂದಾಗ, ಇದೇಕೆ ಹೀಗೆ ಹೇಳುತ್ತಿದ್ದೀರಿ. ನಾಡಿನಲ್ಲಿ ಎಷ್ಟೋ ರಾಮಾಯಣದ ಕಥೆಗಳಿವೆ. ಅದರಲ್ಲಿ ನೀವು ಕೇಳು ಅರಿತಿರುವ ಒಂದು ಒಳ್ಳೆಯ ಕತೆಯನ್ನು ಹೇಳಿ ಎಂದಾಗ ಮುದ್ದಣನು ಯಾವುದಾಗಬಹುದು ಎಂದು ನೀನೇ ಒಂದನ್ನು ಆಯ್ದುಕೊಂಡು ಹೇಳು ಎನ್ನುತ್ತಾನೆ.
ಆಗ ಮನೋರಮೆಯು ಶ್ರೀರಾಮನು ಆಶ್ವಮೇಧಯಾಗವನ್ನು ಕೈಗೊಂಡನಂತಲ್ಲ ಆ ಕತೆಯೇ ಹೇಳಿ ಎಂದಾಗ ಶೇಷ ರಾಮಾಯಣದ ಕತೆಯೇ ಆಗಬಹುದು ಎನ್ನುತ್ತಾ ಮುದ್ದಣನು ಆಕೆಯ ಮಾತಿಗೆ ಉತ್ತರವಾಗಿ ಈ ಕತೆಯನ್ನು ಮೊದಲು ಶೇಷನು ವಾತ್ಸಾಯನನಿಗೆ ಹೇಳಿದನು ಎನ್ನುತ್ತಾನೆ. ಯಾವ ದಾಟಿಯಲ್ಲಿ ಹೇಳಲಿ ಪದ್ಯದಲ್ಲೋ ಅಥವಾ ಗದ್ಯದಲ್ಲೋ ಎಂದಾಗ, ಆಕೆ ಪ್ರತಿಕ್ರಿಯಿಸುತ್ತಾ ಹೃದಯಕ್ಕೆ ಹತ್ತಿರವಾದ ಗದ್ಯದಲ್ಲೇ ಆಗಬಹುದು ಎನ್ನುತ್ತಾಳೆ. ಮುದ್ದಣ ತನ್ನ ಸಲ್ಲಾಪವನ್ನು ಮುಂದುವರೆಸುತ್ತಾ ಅದು ಹಾಗಿರಲಿ ಆರಮನೆಯಲ್ಲಿ ಈ ರೀತಿಯ ನಲ್ಗತೆಯನ್ನು ಹೇಳಿದರೆ ರತ್ನದ ಕಡಗವನ್ನು, ಚಿನ್ನದ ಹಾರವನ್ನು ಉಡುಗೊರೆಯಾಗಿ ನೀಡುತ್ತಾರೆ. ನೀನು ಏನನ್ನು ಕೊಡುತ್ತೀಯಾ ಎಂದು ಆಕೆಯನ್ನು ಕೀಟಲೆಗೈಯುತ್ತಾ ಆತ ಪ್ರತಿಕ್ರಿಯಿಸುತ್ತಾನೆ.
Question 3.
ಎಂತಹ ತಿರುಳು ಕನ್ನಡದಲ್ಲಿ ಕತೆಯನ್ನು ಹೇಳುವುದಾಗಿ ಮುದ್ದಣ ಹೇಳುವನು?
Answer:
ಮುದ್ದಣ ಕಥೆಯನ್ನು ಸ್ವಸ್ತಿ ಶ್ರೀಮತ್ಸುರಾಸುರೇಂದ್ರ ನರೇಂದ್ರ ಮುನೀಂದ್ರ…ಎಂದು ಆರಂಭಿಸಿದಾಗ ಮನೋರಮೆಯು ಓಓ! ತಡೆ! ತಡೆ! ಭೂಮಿಗೆ ಒಡೆಯನಾದ ಶ್ರೀರಾಮಚಂದ್ರನ ಕಥೆಯನ್ನು ಹೇಳು ಎಂದರೆ ಜೈನ ಮಹಾಪುರುಷರ ಕಥೆಯನ್ನು ಹೇಳುತ್ತಿದ್ದೀಯಾ?ಎಂದು ಪ್ರಶ್ನಿಸುತ್ತಾ, ಸಾಕು ಸಾಕು ಇಂಥ ಎದೆ ಬಿರಿಯುವ ಕತೆಗೆ ಎಂತಹ ಉಡುಗೊರೆ ನೀಡಲಿ ಎನ್ನುತ್ತಾಳೆ, ಆಗ ಮುದ್ದಣನು ಪ್ರತಿಕ್ರಿಯಿಸುತ್ತಾ ಈ ರೀತಿಯಾಗಿ ಕಾವ್ಯವನ್ನು ಪ್ರಾರಂಭಿಸುವುದು ಸಂಸ್ಕೃತದ ಒಂದು ಚೆಲುವು ಎನ್ನುತ್ತಾನೆ.
ಆಗ ಮನೋರಮೆಯು ಆತನ ಮಾತಿಗೆ ಉತ್ತರವಾಗಿ ಒಳ್ಳೆದೊಳ್ಳೆದು ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು ಕನ್ನಡದ ಸೊಗಸನ್ನೇ ಅರ್ಥಮಾಡಿಕೊಳ್ಳುವಷ್ಟು ಸಮರ್ಥಳು ನಾನಲ್ಲ. ಅಂತಹದ್ದರಲ್ಲಿ ಸಂಸ್ಕೃತದ ಸೊಗಸನ್ನು ಹೇಳುವುದೇ! ಆಗ ಮುದ್ದಣನು ಹಾಗಾದರೆ ಇನ್ನು ಯಾವ ರೀತಿಯಲ್ಲಿ ಹೇಳಲಿ ಎಂದಾಗ ಮನೋರಮೆಯು ಕನ್ನಡವು ಕಸ್ತೂರಿಯಂತೆ ಅಲ್ಲವೇ ಆದ್ದರಿಂದ ಕತೆಯನ್ನು ತಿರುಳನ್ನಡದ ಬೆಳ್ಳುಡಿಯಲ್ಲಿ ಸಾರವನ್ನು ಮಾತ್ರ ಹೇಳು ಎನ್ನುತ್ತಾಳೆ. ಆಗ ಮುದ್ದಣನು ಸಂಸ್ಕೃತ ಒಂದು ಚಿನ್ನದಲ್ಲಿ ಪೋಣಿಸಿದ ರತ್ನದ ಮಣಿ, ಕರಿಮಣಿ ಸರದಲ್ಲಿ ಕೆಂಪು ಹವಳವನ್ನು ಪೋಣಿಸಿದಂತೆ, ಸಂಸ್ಕೃತ ಮತ್ತು ಕನ್ನಡವನ್ನು ರಸಂ ವಸರುವಂತೆ, ಕಾವ್ಯ ಲಕ್ಷಣವಿರುವಂತೆ ಅಲ್ಲಲ್ಲಿ ಬೆರೆಸಿ ಹೇಳಿದಾಗ ಚೆನ್ನಾಗಿರುತ್ತದೆ ಎಂದು ಮುದ್ದಣ ಹೇಳುತ್ತಾನೆ.
Question 4.
ಮುದ್ದಣ-ಮನೋರಮೆಯರಸಂವಾದದ ಸ್ವಾರಸ್ಯವನ್ನು ವಿವರಿಸಿ.
Answer:
ಕನ್ನಡ ಸಾಹಿತ್ಯ ಸೌರಭದಲ್ಲಿಯೇ ಮುದ್ದಣ-ಮನೋರಮೆಯರ ಸಂವಾದ ಬಹಳ ಸ್ವಾರಸ್ಯಕರವಾದ ಘಟ್ಟವಾಗಿದೆ. ಆರಮನೆಯಿಂದ ಬಂದ ಪತಿಯನ್ನು ಉಪಚರಿಸುತ್ತಾ ಬಗೆಯು ಬೆಸರ್ತುದು ಏನಾನುಂ ಒಂದು ನಲ್ಗತೆಯಂ ಪೇಳಾ ಎಂದರೆ ಪ್ರಾಣೇಶ್ವರಿ ತಡೆಯೇಂ ಇನಿತೊಂದು ಬಯಕೆ ತಲೆದೋರೆ ಆವಗಹನಂ ಎಂದು ಹೇಳುವಾಗ, ಸೀತಾಪಹರಣದ ಕಥೆಯ ಕೇಳುವ ಬಯಕೆಯೇ ಎಂದಾಗ ಉ:! ಆನೊಲ್ಲೆಂ ಎನ್ನುತ್ತಾಳೆ. ಮೇಣ್ ಆವ ನಲ್ಗತೆಯಂ ಪೇಳ್ವೆನೋ ಎಂದು ಗೊಂದಲ ತೋರಿದರೆ ಇಂತೇಕೆ ಉಸಿರ್ವಯ್ ನಾಡೊಳ್ ಎನಿತ್ತೋ ರಾಮಾಯಣಂಗಳ್ ಒಳವು ನೀಂ ಕೇಳುದರೊಳೇ ನಲ್ಲೆದೋರೆ ಕಂಡು ಪೇಳ್ವುದು ಎಂದು ತನ್ನ ಗಂಡ ಜ್ಞಾನಿ ಎಷ್ಟೆಲ್ಲಾ ತಿಳಿದುಕೊಂಡಿದ್ದಾನೆ ಎಂಬ ಭಾವ ವ್ಯಕ್ತಪಡಿಸುತ್ತಾಳೆ.
ಅಂತೆಯೇ ಉಡುಗೊರೆಯ ವಿಚಾರ ಬಂದಾಗ ಆರಮನೆಯಲ್ಲಿ ಈ ರೀತಿಯ ಕಥೆ ಹೇಳಿದರೆ ರತ್ನದ ಕಡಗವನ್ನೋ ಚಿನ್ನದ ಕಂಠೀಹಾರವನ್ನೋ ಕೊಡುತ್ತಾರೆ ನೀನು ಏನು ಕೊಡುವೆ ಎಂದು ಛೇಡಿಸಿದರೆ ಅದಕ್ಕೆ ತಕ್ಕ ಉತ್ತರವಾಗಿ ಎನ್ನನೇ ಆನೀವೆಂ ಎಂದು ಹೇಳುತ್ತಾಳೆ. ಅವನು ಬಿಡದೆ ಮೊದಲೇ ನಿನ್ನ ತಂದೆ-ತಾಯಿಗಳು ನಿನ್ನನ್ನು ನನಗೆ ಅರ್ಪಿಸಿದ್ದಾರೆ. ಬೇರೆ ಏನು ಕೊಡುವೆ ಎಂದು ಕೀಟಲೆ ಮಾಡುತ್ತಾನೆ.
ಅವಳೋ ಮಹಾ ಜಾಣೆ ಅರಮನೆಯವರು ಕಥೆ ಕೇಳಿದ ನಂತರ ಉಡುಗೊರೆ ನೀಡುವರಲ್ಲವೇ ನಾನು ಕಥೆ ಕೇಳಿ ಅದರ ಶಕ್ತಿ ಎಷ್ಟಿದೆ ನೋಡಿ ಅದಕ್ಕೆ ತಕ್ಕಂತೆ ಸನ್ಮಾನಿಸುತ್ತೇನೆ ಎಂಬ ಜಾಣ ಉತ್ತರ ನೀಡುತ್ತಾಳೆ. ಸಂಸ್ಕೃತದಲ್ಲಿ ಕಥೆಯನ್ನು ಆರಂಭಿಸಿದೊಡೆ ಈ ರೀತಿ ಆರಂಭವಾಗುವ ಕಥೆಗೆ ಎಂತು ಉಡುಗೊರೆ ಯೇವೇನೋ ಎಂದು ರೇಗಿಸುತ್ತಾಳೆ. ಅಲ್ಲದೆ ನೀರಿಳಿಯದ ಗಂಟಲಲ್ಲಿ ಕಡುಬನ್ನು ತುರುಕಿದಂತೆ ಆಯಿತು ಸರಳವಾಗಿ ತಿಳಿಕನ್ನಡದಲ್ಲಿ ಕಥೆ ಹೇಳು ಎಂದು ಕನ್ನಡ ಪ್ರೇಮ ವ್ಯಕ್ತಪಡಿಸುತ್ತಾಳೆ. ಇವರಿಬ್ಬರ ಸಂವಾದದಲ್ಲಿ ಪತಿ ಪತ್ನಿಯರ ನಡುವಿನ ಸಲ್ಲಾಪ, ಒಬ್ಬರನೊಬ್ಬರು ರೇಗಿಸುವ, ಕೆಣಕುವ, ಮೆಚ್ಚುವ ಭಾವಗಳು ಕಣ್ಣೆದುರು ತೇಲಿ ಹೋಗುತ್ತದೆ.
IV. ಭಾಷಾಭ್ಯಾಸದ ಉತ್ತರಗಳು:
1. ಕೆನೆವಾಲಂ – ಕೆನೆಹಾಲನ್ನು. ಈ ರೀತಿಯಾಗಿ ಈ ಪದಗಳಿಗೆ ಹೊಸಗನ್ನಡ ರೂಪಗಳು:
ಸಂಸ್ಕೃತನಿಷ್ಠ/ಹಳೆಯ ಪದ | ಹೊಸಗನ್ನಡ ರೂಪ (ಪ್ರಚಲಿತ ರೂಪ) |
ಪಸಿವುಂ | ಹಸಿವನ್ನು |
ಬೇಸರ್ತುದು | ಬೇಸರವಾಯಿತು |
ಪೇಟ್ವೆಂ | ಪಟ್ಟಿಯನ್ನು |
ಆನೊಲ್ಲೆಂ | ನೋವನ್ನೇ |
ಮೆಚ್ಚನೀವರ್ | ಮೆಚ್ಚಿದಿರಿ |
ಪೊಗಟ್ಟು | ಹೊಗೆಯು |
ಕಥೆಯನುಸಿರ್ವೆಂ | ಕಥೆಯನ್ನು ಅನುಸರಿಸಿ |
2. ಈ ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ:
- ಮನೋಜ್ಞಮಾಗೆ → ಮನೋಜ್ಞ + ಮಾಂಗೆ
- ಇದಿರ್ವಂದು → ಇದನ್ನು + ಇರ್ವಂದು
- ತಿನಲಿತ್ತು → ತಿನಲು + ಇತ್ತು
- ಪಗಲುಮಿರುಳಂ → ಪಗಲು + ಮಿರುಳನ್ನು
- ಸೀತಾಪಹರಣ → ಸೀತಾ + ಅಪಹರಣ
- ಒಂದನಾಯ್ತು → ಒಂದು + ಆಗಿತ್ತು
- ಮೆಚ್ಚನೀವರ್ → ಮೆಚ್ಚಿ + ನೀವು + ಅರ್
- ನೀರಿಚೆಯದ → ನೀರಿಗೆ + ಚೆಯದ
3. ಇವುಗಳ ವಿಭಕ್ತಿ ಪ್ರತ್ಯಯಗಳನ್ನು ಹೆಸರಿಸಿ:
ಪದ | ವಿಭಕ್ತಿ |
ಪಿರಿಯವು | ಪ್ರಥಮಾ ವಿಭಕ್ತಿ (ಬಹುವಚನ) |
ನಲ್ಗತೆಯಂ | ಸಪ್ತಮಿ ವಿಭಕ್ತಿ |
ವಾತ್ಸಾಯನಂಗೆ | ಚತುರ್ಥೀ ವಿಭಕ್ತಿ |
ರಾಮಚಂದ್ರನ | ಷಷ್ಠೀ ವಿಭಕ್ತಿ |
ಗದ್ಯದೊಳ್ | ಸಪ್ತಮಿ ವಿಭಕ್ತಿ |
4. ಇವುಗಳಿಗೆ ನಾನಾರ್ಥ (ಬಹುವಚಾರ್ಥ) ಬರೆಯಿರಿ:
ಪದ | ನಾನಾರ್ಥಗಳು |
ಮುಡಿ | ತಲೆಮೇಲೆ ಇಡುವ ಮುಡಿ, ಆಲಿಗೆ ಮುಡಿ, ಪಕ್ಕಕ್ಕೆ ಹಾಕು ಮುಡಿ |
ಬಟ್ಟೆ | ಉಡುಪು, ಹಣ್ಣಿನ ಮೇಲಿನ ತೆಳುವಾದ ಸಪ್ಪೆ, ಮರದ ತೆಳು ತೆಗೆಯು |
ರಸ | ರುಚಿ, ಭಾವ, ಔಷಧೀಯ ಸತ್ವ, ಸಾಹಿತ್ಯದ ರಸ |
ಉಸಿರು | ಶ್ವಾಸ, ಜೀವ, ಬಾಳು |
ಬಗೆ | ರೀತಿ, ಕ್ರಮ, ಪರಿ, ಪ್ರಕಾರ |
5. ಈ ದ್ವಿರುಕ್ತಿಗಳನ್ನು ಬಳಸಿ ಸ್ವಂತ ವಾಕ್ಯ ರಚನೆ:
- ಒಳ್ಳೆತೊಳ್ಳಿತು – ನಿನ್ನ ಅಭಿನಯ ಒಳ್ಳೆತೊಳ್ಳಿತು, ಎಲ್ಲರೂ ಮೆಚ್ಚಿದರು.
- ತಡೆತಡೆ – ಅವನು ತಡೆತಡೆ ನಗುತ್ತಾ ಏನಾದರೂ ಹೇಳುತ್ತಿದ್ದ.
- ಲೇಸುಲೇಸು – ಮಳೆಯಾಗುತ್ತಿದ್ದಾಗ ಲೇಸುಲೇಸು ಗಾಳಿ ಬೀಸುತ್ತಿತ್ತು.
ಲೇಖಕರ ಪರಿಚಯ
‘ಮುದ್ದಣ’ (೧೮೬೯-೧೯೦೧) ಎಂಬುದು ಲಕ್ಷ್ಮೀನಾರಾಯಣಪ್ಪ ಎಂಬ ಕವಿಯ ಕಾವ್ಯನಾಮ. ಉಡುಪಿ ಜಿಲ್ಲೆಯ ನಂದಳಿಕೆ ಎಂಬ ಗ್ರಾಮ ಈತನ ಹುಟ್ಟೂರು. ಪಾಠಾಳಿ ತಿಮ್ಮಪ್ಪಯ್ಯ ಮತ್ತು ಮಹಾಲಕ್ಷ್ಮಮ್ಮ ಈತನ ತಂದೆ-ತಾಯಿಯರು, ಬಡತನ ಮತ್ತು ಕ್ಷಯರೋಗಕ್ಕೆ ಬಲಿಯಾಗಿ ಚಿಕ್ಕವಯಸ್ಸಿನಲ್ಲೇ ತೀರಿಕೊಂಡ ಮುದ್ದಣ ಕವಿಯು ಉಡುಪಿಯ ಹೈಸ್ಕೂಲಿ ನಲ್ಲಿ ವ್ಯಾಯಾಮ ಶಿಕ್ಷಕನಾಗಿಯೂ, ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಕನ್ನಡ ಪಂಡಿತನಾಗಿಯೂ ಕೆಲಸ ನಿರ್ವಹಿಸಿದ್ದನು.
ಪ್ರಯೋಗಶೀಲ ವ್ಯಕ್ತಿತ್ವದ ಮುದ್ದಣನು ಸಾಹಿತ್ಯ, ಸಂಗೀತ, ಯಕ್ಷಗಾನ ಕಲೆಗಳಲ್ಲಿ ವಿಶೇಷ ಆಸಕ್ತಿ ಮತ್ತು ಪರಿಶ್ರಮ ಹೊಂದಿದ್ದನು. ‘ಅದ್ಭುತ ರಾಮಾಯಣ’, ‘ಶ್ರೀರಾಮ ಪಟ್ಟಾಭಿಷೇಕ’, ‘ರಾಮಾಶ್ವಮೇಧ’ ಮುಂತಾದ ಕೃತಿಗಳನ್ನು ಈತ ರಚಿಸಿರುವನು.
‘ರತ್ನಾವತೀ ಕಲ್ಯಾಣ’ ‘ಕುಮಾರ ವಿಜಯ’ ಎಂಬೆರಡು ಯಕ್ಷಗಾನ ಪ್ರಸಂಗಗಳನ್ನೂ ರಚಿಸಿರುವ ಈತ ವಾಲ್ಮೀಕಿ ರಾಮಾಯಣ ಮತ್ತು ಭಗವದ್ಗೀತೆಗಳನ್ನೂ ಕನ್ನಡಕ್ಕೆ ಅನುವಾದಿಸಿದ್ದಾನೆ. ಕಾಮಶಾಸ್ತ್ರ ಕುರಿತ ಗ್ರಂಥವೊಂದು ಈತನ ಹೆಸರಿನಲ್ಲಿದೆ. ‘ಗೋದಾವರಿ’ ಎಂಬ ಅಪೂರ್ಣ ಕಾದಂಬರಿಯನ್ನು ಈತ ರಚಿಸಿದ್ದನು.