2nd PUC Kannada Chapter 18

2nd PUC Kannada Question and Answer – Badakannu Pritisida Santa

Looking for 2nd PUC Kannada textbook answers? You can download Chapter 18: Badakannu Pritisida Santa Questions and Answers PDF, Notes, and Summary here. 2nd PUC Kannada Gadyabhaga solutions follow the Karnataka State Board Syllabus, making it easier for students to revise and score higher in exams.

Karnataka 2nd PUC Kannada Textbook Answers—Reflections Chapter 18

Badakannu Pritisida Santa Questions and Answers, Notes, and Summary

2nd PUC Kannada Gadyabhaga Chapter 18

ಬದುಕನ್ನು ಪ್ರೀತಿಸಿದ ಸಂತ

Badakannu Pritisida Santa

Scroll Down to Download Badakannu Pritisida Santa PDF
I. ಒಂದು ವಾಕ್ಯದಲ್ಲಿ ಉತ್ತರಿಸಿ:

Question 1.
ದೇವರಿಗೆ ಹತ್ತಿರವಾದವರು ಯಾರು?
Answer:
ಭಗವಂತನ ಸೃಷ್ಟಿಯಲ್ಲಿರುವವರೆಲ್ಲ ಆತನ ಬಂಧುಗಳೆ: ಯಾರು ಅವರುಗಳ ಸೇವೆ ಮಾಡುತ್ತಾರೋ ಅವರೇ ದೇವರಿಗೆ ಹತ್ತಿರವಾದವರು.

Question 2.
ಚಿಪ್ ಎಂದರೇನು?
Answer:
ಅಗತ್ಯ ಮಾಹಿತಿಗಳನ್ನು ಕ್ರೋಡೀಕರಿಸಿರುವ ಸೂಕ್ಷ್ಮ ಎಲೆಕ್ಟ್ರಾನಿಕ್ ಸಾಧನವೇ ಜಿಪ್.

Question 3.
ಕಲಾಂ ಅವರ ಆತ್ಮಚರಿತ್ರೆಯ ಹೆಸರೇನು?
Answer:
ಕಲಾಂ ಅವರ ಆತ್ಮಚರಿತ್ರೆಯ ಹೆಸರು “ವಿಂಗ್ಸ್ ಆಫ್ ಫೈರ್”.

Question 4.
ಕಲಾಂ ಅವರ ಕ್ರಿಯಾಶೀಲತೆಗೆ ಸಾಕ್ಷಿ ಯಾವುದು?
Answer:
ಅಂತಾರಾಷ್ಟ್ರೀಯ ಕ್ಷಿಪಣಿ ಕೇಂದ್ರವಾಗಿ ಹೈದರಾಬಾದಿನ ಸಮೀಪದ ಬರಡು ಭೂಮಿಯನ್ನು “ಸಂಶೋಧನಾ ಕೇಂದ್ರ ಇಮಾರತ್” ಎಂಬ ಹೆಸರಿನಲ್ಲಿ ಸ್ಥಾಪಿಸಿದ್ದು ಅವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ.

Question 5.
ವಿಜ್ಞಾನದ ಅಡಿಪಾಯ ಯಾವುದು?
Answer:
ವಿಜ್ಞಾನದ ಅಡಿಪಾಯವೇ ಪ್ರಶ್ನೆ ಕೇಳುವುದು.

Question 6.
ಭೂಮಿಯ ಮೇಲಿನ ಮೊದಲ ವಿಜ್ಞಾನಿ ಯಾರು?
Answer:
ಕೊನೆಯಿಲ್ಲದಷ್ಟು ಪ್ರಶ್ನೆ ಕೇಳುವ ಮಗುವೇ ಭೂಮಿಯ ಮೇಲಿನ ಮೊದಲ ವಿಜ್ಞಾನಿ.

Question 7.
ಕಲಾಂ ಅವರು ರಾಷ್ಟ್ರಪತಿಯ ಸ್ಥಾನಕ್ಕೆ ಆಯ್ಕೆಯಾದ ಸುದ್ದಿ ತಿಳಿದಾಗ ಅವರು ಎಲ್ಲಿದ್ದರು?
Answer:
ಕಲಾಂ ಅವರು ರಾಷ್ಟ್ರಪತಿಯ ಸ್ಥಾನಕ್ಕೆ ಆಯ್ಕೆಯಾದ ಸುದ್ದಿ ತಿಳಿದಾಗ ಅವರು ಚೆನ್ನೈನಲ್ಲಿದ್ದರು.

Question 8.
ಕಲಾಂ ಅವರನ್ನು ಶಾಲೆಗೆ ಕಳಿಸುವಂತೆ ಪ್ರೇರೇಪಿಸಿದವರು ಯಾರು?
Answer:
ಕಲಾಂ ಅವರನ್ನು ಶಾಲೆಗೆ ಕಳಿಸುವಂತೆ ಪ್ರೇರೇಪಿಸಿದವರು ಶಿವಸುಬ್ರಮಣ್ಯ ಅಯ್ಯರ್.

Question 9.
ಕಲಾಂ ಅವರು ಯಾವ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರೊಫೆಸರ್ ಆಗಿದ್ದರು?
Answer:
ಕಲಾಂ ಅವರು ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರೊಫೆಸರ್ ಆಗಿದ್ದರು.

II.ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.

Question 1.
ಕಲಾಂ ಅವರ ಬದುಕಿನ ಮಂತ್ರ ಯಾವುದು?
Answer:
ವಿಜ್ಞಾನ ತಂತ್ರಜ್ಞಾನಗಳ ಸಂಕೀರ್ಣ ಪ್ರಪಂಚದಲ್ಲಿ ಅಬ್ದುಲ್ ಕಲಾಂ ಅವರು ತಮ್ಮನ್ನು ತಾವೇ ತೊಡಗಿಸಿಕೊಂಡದ್ದು ಯಾವುದೋ ಪ್ರಶಸ್ತಿ, ಪುರಸ್ಕಾರ, ಹಣ ಗಳಿಸಲಿಕ್ಕಲ್ಲ. “ಭಗವಂತನ ಸೃಷ್ಟಿಯಲ್ಲಿರುವವರೆಲ್ಲ ಆತನ ಬಂಧುಗಳೆ; ಯಾರು ಅವರುಗಳ ಸೇವೆ ಮಾಡುತ್ತಾರೋ ಅವರೇ ದೇವರಿಗೆ ಹತ್ತಿರವಾದವರು” ಇದು ಕಲಾಂ ಅವರ ಬದುಕಿನ ಮಂತ್ರ.

Question 2.
ಕಲಾಂ ಅವರು ತಾವು ಆತ್ಮಕಥೆ ಬರೆದುದು ಏತಕ್ಕಾಗಿ?
Answer:
“ನನ್ನ ಬದುಕು ಯಾರೊಬ್ಬರಿಗೆ ಅನುಕರಣೆಗೆ ಯೋಗ್ಯವಾದ ಮಾದರಿಯಾಗುತ್ತದೆಂಬ ಭ್ರಮೆ ನನಗಿಲ್ಲ. ಯಾವುದೋ ಮೂಲೆಯಲ್ಲಿನ ಊರಿನಲ್ಲಿ ಹುಟ್ಟಿ, ಸಾಮಾಜಿಕವಾಗಿ ಸೌಲಭ್ಯಗಳಿಂದ ವಂಚಿತವಾಗಿರುವ ಮಗುವಿಗೆ ಅದರಂಥದೆ ಪರಿಸರದಲ್ಲಿದ್ದ ನನ್ನ ಭವಿಷ್ಯ ಅರಳಿದ್ದನ್ನು ಓದಿದಾಗ ಭರವಸೆ ಮೂಡಬಹುದು. ಅಂತಹ ಮಕ್ಕಳಿಗೆ, ತಾವು ಹಿಂದುಳಿದವರು. ಅಸಮರ್ಥರು ಅನ್ನುವ ಭ್ರಮೆಯಿಂದ ಬಿಡುಗಡೆ. ಹೊಂದಲು ನನ್ನ ಬದುಕು ಸ್ಫೂರ್ತಿ ನೀಡಬಹುದೇನೋ” ಎಂಬ ಭಾವನೆಯಿಂದ ಆತ್ಮ ಕಥೆ ಬರೆದಿರುವುದಾಗಿ ಕಲಾಂ ಹೇಳಿಕೊಂಡಿದ್ದಾರೆ.

Question 3.
ಕಲಾಂ ಅವರು ಬಂಡೆಗಳ ಬಸಿರಲ್ಲಿ ಕಂಡದ್ದೇನು?
Answer:
ಕಲಾಂ ಅವರು ಒಬ್ಬ ಶಿಲ್ಪಿ. ಬೇರೆಯವರಿಗೆ ಬಂಡೆಯಾಗಿ ಕಾಣಿಸಿದ್ದು ಅವರಿಗೆ ಅದರೊಳಗೆ ಅಡಗಿರುವ ಶಿವಶಕ್ತಿಯಾಗಿ ಕಾಣಿಸುತ್ತದೆ. ಕುಗ್ರಾಮ ಇಮಾರತ್ ಇಂದು ವಿಶ್ವವಿಖ್ಯಾತ, ಕಗ್ಗಲ್ಲ ಬಂಜರು ನಾಡಿನಲ್ಲಿ, ಬಂಡೆಗಳ ಬಸಿರಲ್ಲಿ “ಶಿವನ ನಿಹಿತ ಶಕ್ತಿ”ಯನ್ನು ಕಲಾಂ ಕಂಡರು. ಕ್ಷಿಪಣಿ ರೂಪದಲ್ಲಿ ಶಕ್ತಿ ಹೊರಬರಲು ಕಂಪಿಸುತ್ತಿರುವುದನ್ನು ಅವರ ಒಳಗಣ್ಣು ನೋಡಿತು.

Question 4.
ವಿ.ಜೆ ಸುಂದರಮ್ ಸಿಕಂದರಾಬಾದ್ ಶಾಲಾ ಬಾಲಕಿ ಬಗೆಗೆ ಹೇಳಿದ ಹೆಮ್ಮೆಯ ಮಾತುಗಳಾವುವು?
Answer:
ಸಿಕಂದರಾಬಾದಿನ ಶಾಲಾ ಬಾಲಕಿಯೊಬ್ಬಳು ತಯಾರಿಸಿದ್ದ ಪೃಥ್ವಿ ಕ್ಷಿಪಣಿಯ ಮಾದರಿಯ ಚಿತ್ರವನ್ನು ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಈ ವಿಷಯವನ್ನು ವಿ.ಜೆ ಸುಂದರಮ್ ಸಿಕಂದರಾಬಾದ್ ಶಾಲಾ ಬಾಲಕಿ ಬಗೆಗೆ ಹೇಳಿದ ಹೆಮ್ಮೆಯ ಮಾತುಗಳು. ಉಪನಿರ್ದೇಶಕ ಸಾರಸ್ವತ “ಈ ಬಾಲಕಿ, ನಮ್ಮ ಕ್ಷಿಪಣಿಯ ಆಕಾರ, ಗಾತ್ರ ಕುರಿತು ಒಂದಷ್ಟು ವಿವರ ಕೇಳಿದ್ದಳು. ನಾನು ಮಾಹಿತಿ ನೀಡಿದ್ದೆ. ನೋಡಿ ಎಂಥ ಅದ್ಭುತ ಮಾದರಿ ತಯಾರಿಸಿದ್ದಾಳೆ.”ಎಂದು ಹೆಮ್ಮೆಯಿಂದ ಹೇಳಿದರು.

Question 5.
ಕಲಾಂ ಅವರ ದೃಷ್ಟಿಯಲ್ಲಿ ಕನಸುಗಳು ಏನಾಗುತ್ತವೆ?
Answer:
ಕಲಾಂ ಅವರ ದೃಷ್ಟಿಯಲ್ಲಿ ಕನಸುಗಳು ಆಲೋಚನೆಗಳಾಗುತ್ತವೆ. ಆಲೋಚನೆಗಳು ಸೃಜನಾತ್ಮಕ ಕ್ರಿಯೆಗಳಾಗಿ ಪರಿವರ್ತನೆಗೊಳ್ಳುತ್ತವೆ.

Question 6.
ಕಲಾಂ ಮೇಷ್ಟ್ರು ಹೇಳಿದ ಯಶಸ್ಸಿನ ಪಂಚಾಕ್ಷರಿ ಮಂತ್ರ ಯಾವುದು?
Answer:
ಕುತೂಹಲ, ಆಲೋಚನಾಶಕ್ತಿ, ಜ್ಞಾನ(ತಿಳಿವು), ಕಷ್ಟಪಟ್ಟು ಕೆಲಸ ಮಾಡುವುದು ಮತ್ತು ಗುರಿ ಸಾಧಿಸುವ ಛಲ ಇವು ಕಲಾಂ ಮೇಷ್ಟ್ರು ಹೇಳಿದ ಯಶಸ್ಸಿನ ಪಂಚಾಕ್ಷರಿ ಮಂತ್ರ,

III. ಸಂದರ್ಭ ಸಹಿತ ವಿವರಿಸಿ:

Question 1.
ಭಗವಂತನ ಸೃಷ್ಟಿಯಲ್ಲಿರುವವರೆಲ್ಲ ಆತನ ಬಂಧುಗಳೆ.

Answer:
ಆಯ್ಕೆ: ಈ ಮಾತನ್ನು ಪ್ರೊ.ಎಚ್.ಆರ್. ರಾಮಕೃಷ್ಣರಾವ್ ಅವರು ಬರೆದ ಬದುಕನ್ನು ಪ್ರೀತಿಸಿದ ಸಂತ ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ: ಅಬ್ದುಲ್ ಕಲಾಂ ಅವರ ವ್ಯಕ್ತಿತ್ವವನ್ನು ಕುರಿತು ವಿವರಿಸುವಾಗ ಈ ಮಾತು ಬಂದಿದೆ.
ವಿವರಣೆ : ವಿಜ್ಞಾನ ತಂತ್ರಜ್ಞಾನಗಳ ಸಂಕೀರ್ಣ ಪ್ರಪಂಚದಲ್ಲಿ ಅಬ್ದುಲ್ ಕಲಾಂ ಅವರು ತಮ್ಮನ್ನು ತಾವೇ ತೊಡಗಿಸಿಕೊಂಡದ್ದು ಯಾವುದೋ ಪ್ರಶಸ್ತಿ, ಪುರಸ್ಕಾರ,ಹಣ ಗಳಿಸಲಿಕ್ಕಲ್ಲ. “ಭಗವಂತನ ಸೃಷ್ಟಿಯಲ್ಲಿರುವವರೆಲ್ಲ ಆತನ ಬಂಧುಗಳೆ: ಯಾರು ಅವರುಗಳ ಸೇವೆ ಮಾಡುತ್ತಾರೋ ಅವರೇ ದೇವರಿಗೆ ಹತ್ತಿರವಾದವರು” ಎಂಬುದೇ ಇವರ ಬದುಕಿನ ಸೂತ್ರವಾಗಿತ್ತು ಎನ್ನುವಾಗ ಈ ಮೇಲಿನ ಮಾತು ಬಂದಿದೆ.

Question 2.
ನೀನು ಯಾವ ಸ್ಕೂಲಿನಲ್ಲಿ ಓದುತ್ತಿದ್ದೀಯೇ?

Answer:
ಆಯ್ಕೆ: ಈ ಮಾತನ್ನು ಪ್ರೊ.ಎಚ್.ಆರ್. ರಾಮಕೃಷ್ಣರಾವ್ ಅವರು ಬರೆದ ಬದುಕನ್ನು ಪ್ರೀತಿಸಿದ ಸಂತ ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ: ಸಿಕಂದರಾಬಾದಿನ ಶಾಲಾ ಬಾಲಕಿಯನ್ನು ಕಲಾಂ ಅವರು ಪ್ರಶ್ನಿಸಿದ ಸಂದರ್ಭವಿದು.
ವಿವರಣೆ: ಸಿಕಂದರಾಬಾದಿನ ಬಾಲಕಿಯೊಬ್ಬಳು ತಯಾರಿಸಿದ್ದ ಪೃಥ್ವಿ ಕ್ಷಿಪಣಿಯ ಮಾದರಿ ಚಿತ್ರವನ್ನು ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಇದನ್ನು ಹೆಮ್ಮೆಯಿಂದ ತಿಳಿಸಿದ ಉಪನಿರ್ದೇಶಕರಿಗೆ ಕಲಾಂ ಅವರು ಆ ಹುಡುಗಿಯನ್ನು ಇಲ್ಲಿಗೇಕೆ ಕರೆ ತರಬಾರದು? ಆ ಮಗು ನಿಜವಾದ ಕ್ಷಿಪಣಿಯನ್ನು ನೋಡಲಿ ಎನ್ನುತ್ತಾರೆ. ಮುಂದೆ ಆ ಹುಡುಗಿಯನ್ನು ಇಲಾಖೆಯ ಕಾರಿನಲ್ಲಿ ಕರೆದುಕೊಂಡು ಹೋಗಿ ಪೃಥ್ವಿಯನ್ನು ತೋರಿಸಿದರು. ಕ್ಯಾಂಟೀನಿನಲ್ಲಿ ತಂತ್ರಜ್ಞರೊಡನೆ ಸಹ ಭೋಜನ, ಮೀಟಿಂಗ್ ಮಧ್ಯದಲ್ಲಿಯೇ ಹೊರಕ್ಕೆ ಬಂದ ಕಲಾಂ ಅವರು ಆ ಹುಡುಗಿಯನ್ನು ಕುರಿತು ಈಮೇಲಿನಂತೆ ಪ್ರಶ್ನಿಸಿ ಮಾತನಾಡುತ್ತಾರೆ.

Question 3.
ವಿಜ್ಞಾನದ ಅಡಿಪಾಯವೇ ಪ್ರಶ್ನೆ ಕೇಳುವುದು.

Answer:
ಆಯ್ಕೆ: ಈ ಮಾತನ್ನು ಪ್ರೊ.ಎಚ್.ಆರ್. ರಾಮಕೃಷ್ಣರಾವ್ ಅವರು ಬರೆದ ಬದುಕನ್ನು ಪ್ರೀತಿಸಿದ ಸಂತ ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ: ಕಲಾಂ ಅವರು ಹುಡುಗನೊಬ್ಬನ ಪ್ರಶ್ನೆಗೆ ಉತ್ತರಿಸುವ ಸಂದರ್ಭವಿದು.
ವಿವರಣೆ: ಹುಡುಗನೊಬ್ಬನು “ಭೂಮಿಯ ಮೇಲಿನ ಮೊದಲ ವಿಜ್ಞಾನಿ ಯಾರಾಗಿರಬಹುದು? ದಯವಿಟ್ಟು ಹೇಳಿ” ಎಂದು ಕಲಾಂ ಅವರನ್ನು ಪ್ರಶ್ನಿಸಿದನು. ಆಗ ಕಲಾಂ ಅವರು “ನನಗನ್ನಿಸುತ್ತೆ ವಿಜ್ಞಾನ ಹುಟ್ಟಿದ್ದು ಮತ್ತು ಈಗಲೂ ಜೀವಂತವಾಗಿರುವುದು ಪ್ರಶ್ನೆಗಳಿಂದ ಎನ್ನುತ್ತಾ ಈ ಮೇಲಿನ ಮಾತನ್ನು ಆ ಹುಡುಗನಿಗೆ ಹೇಳಿದರು.

Question 4.
ಮಗುವೇ ಮೊದಲ ವಿಜ್ಞಾನಿ

Answer:
ಆಯ್ಕೆ: ಈ ಮಾತನ್ನು ಪ್ರೊ.ಎಚ್.ಆರ್. ರಾಮಕೃಷ್ಣರಾವ್ ಅವರು ಬರೆದ ಬದುಕನ್ನು ಪ್ರೀತಿಸಿದ ಸಂತ ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ: ಕಲಾಂ ಅವರು ಹುಡುಗನೊಬ್ಬನ ಪ್ರಶ್ನೆಗೆ ಉತ್ತರಿಸುವ ಸಂದರ್ಭವಿದು.
ವಿವರಣೆ: ಹುಡುಗನೊಬ್ಬನು ಭೂಮಿಯ ಮೇಲಿನ ಮೊದಲ ವಿಜ್ಞಾನಿ ಯಾರಾಗಿರಬಹುದು? ದಯವಿಟ್ಟು ಹೇಳಿ” ಎಂದು ಕಲಾಂ ಅವರನ್ನು ಪ್ರಶ್ನಿಸಿದನು. ಆಗ ಕಲಾಂ ಅವರು “ನನಗನ್ನಿಸುತ್ತೆ ವಿಜ್ಞಾನಹುಟ್ಟಿದ್ದು ಮತ್ತು ಈಗಲೂ ಜೀವಂತವಾಗಿರುವುದು ಪ್ರಶ್ನೆಗಳಿಂದ ಎನ್ನುತ್ತಾರೆ. ವಿಜ್ಞಾನದ ಅಡಿಪಾಯವೇ ಪ್ರಶ್ನೆ ಕೇಳುವುದು. ಕೊನೆಯಿಲ್ಲದಷ್ಟು ಪ್ರಶ್ನೆಗಳನ್ನು ಕೇಳುವವರು ಮಕ್ಕಳೇ. ಹಾಗಾಗಿ ಮಗುವೇ ಮೊದಲ ವಿಜ್ಞಾನಿ ಎನ್ನುತ್ತಾ ಕಲಾಂ ಈ ಮೇಲಿನ ಮಾತನ್ನು ಆ ಹುಡುಗನಿಗೆ ಹೇಳಿದರು.

Question 5.
ವ್ಯಕ್ತಿಗಿಂತ ರಾಷ್ಟ್ರ ದೊಡ್ಡದು.

Answer:
ಆಯ್ಕೆ: ಈ ಮಾತನ್ನು ಪ್ರೊ.ಎಚ್.ಆರ್. ರಾಮಕೃಷ್ಣರಾವ್ ಅವರು ಬರೆದ ಬದುಕನ್ನು ಪ್ರೀತಿಸಿದ ಸಂತ ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ: ಅಬ್ದುಲ್ ಕಲಾಂ ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾದಾಗ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂದರ್ಭವಿದು.
ವಿವರಣೆ: ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾದ ಸುದ್ದಿ ಬಂದಾಗ ಅವರು ಚೆನ್ನೈನಲ್ಲಿದ್ದರು. ಪತ್ರಿಕಾಗೋಷ್ಠಿಯನ್ನು ಮಾಧ್ಯಮದವರು ಏರ್ಪಡಿಸಿದ್ದರು. ತಾವು ಸಂದರ್ಶಿಸುತ್ತಿರುವುದು ಒಬ್ಬ ರಾಜಕಾರಣಿಯನ್ನಲ್ಲವೆಂಬುದನ್ನು ಮಾಧ್ಯಮದವರು ಮರೆತಂತಿತ್ತು. ಆಗ ಅಬ್ದುಲ್ ಕಲಾಂ “ಎಲ್ಲರೂ ಗಮನವಿಟ್ಟು ಕೇಳಿ. ಇದುವರೆಗೆ ಏನಾಗಿದೆಯೋ ಅದೆಲ್ಲ ಒಳ್ಳೆಯದಕ್ಕೆ? ಈಗ ಆಗುತ್ತಿರುವುದೂ ಒಳ್ಳೆಯದಕ್ಕಾಗಿಯೇ ಎನ್ನುತ್ತಾರೆ. ಆ ಸಂದರ್ಭದಲ್ಲಿ ಭಗವದ್ಗೀತೆಯ ಪ್ರಸಿದ್ಧ ಸಾಲುಗಳನ್ನು ಉದ್ಧರಿಸುತ್ತಾ ಈ ಮೇಲಿನ ಮಾತನ್ನು ಹೇಳುತ್ತಾರೆ.

Question 6.
ಮಿ. ಪ್ರೆಸಿಡೆಂಟ್ ನಿಮ್ಮ ಯಶಸ್ಸಿನ ಗುಟ್ಟೇನು?

Answer:
ಆಯ್ಕೆ: ಈ ಮಾತನ್ನು ಪ್ರೊ.ಎಚ್.ಆರ್. ರಾಮಕೃಷ್ಣರಾವ್ ಅವರು ಬರೆದ ಬದುಕನ್ನು ಪ್ರೀತಿಸಿದ ಸಂತ ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ: ಕಲಾಂ ಅವರನ್ನು ಭೇಟಿಯಾದ ಮಕ್ಕಳು ಅವರನ್ನು ಪ್ರಶ್ನಿಸಿದ ಸಂದರ್ಭವಿದು.
ವಿವರಣೆ: ಮಕ್ಕಳು “ಮಿ. ಪ್ರೆಸಿಡೆಂಟ್, ನಿಮ್ಮ ಯಶಸ್ಸಿನ ಗುಟ್ಟೇನು?” ಎಂದು ಕೇಳಿದರು. ಅದಕ್ಕೆ ಕಲಾಂ ಯಶಸ್ಸಿನ ಪಂಚಾಕ್ಷರಿ ಮಂತ್ರವನ್ನು ಹೀಗೆ ಹೇಳುತ್ತಾರೆ. ಕುತೂಹಲ, ಆಲೋಚನಾಶಕ್ತಿ, ಜ್ಞಾನ(ತಿಳಿವು), ಕಷ್ಟಪಟ್ಟು ಕೆಲಸ ಮಾಡುವುದು ಮತ್ತು ಗುರಿ ಸಾಧಿಸುವ ಛಲ.

Question 7.
ಎಲ್ಲ ಮಕ್ಕಳ ಕನಸೂ ಒಂದೇ.

Answer:
ಆಯ್ಕೆ: ಈ ಮಾತನ್ನು ಪ್ರೊ.ಎಚ್.ಆರ್. ರಾಮಕೃಷ್ಣರಾವ್ ಅವರು ಬರೆದ ಬದುಕನ್ನು ಪ್ರೀತಿಸಿದ ಸಂತ ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ: ಅಬ್ದುಲ್ ಕಲಾಂ ಅವರು ಅಧ್ಯಕ್ಷರಾದ ತರುವಾಯ ಮಕ್ಕಳನ್ನು ಕುರಿತು ಮಾತನಾಡಿದ ಸಂದರ್ಭವಿದು.
ವಿವರಣೆ: ಅಧ್ಯಕ್ಷರಾದ ತರುವಾಯ ಲಕ್ಷಾಂತರ ಮಕ್ಕಳನ್ನು ಅಬ್ದುಲ್ ಕಲಾಂ ಭೇಟಿಮಾಡಿದ್ದಾರೆ. ಬಡವರಾಗಿರಲಿ ಅಥವಾ ಶ್ರೀಮಂತರಾಗಿರಲಿ, ಎಲ್ಲ ಮಕ್ಕಳ ಕನಸೂ ಒಂದೆ; “ಅವರೆಲ್ಲರೂ ಶಾಂತಿ, ಸಮೃದ್ಧಿ ಮತ್ತು ಸುಭದ್ರ ಭಾರತದಲ್ಲಿ ಬದುಕಬಯಸುತ್ತಾರೆ.

IV. ಐದುಆರುವಾಕ್ಯಗಳಲ್ಲಿ ಉತ್ತರಿಸಿ:

Question 1.
ಕಲಾಂ ಅವರು ಯಾವಾಗಲೂ ಸಾಧ್ಯತೆಗಳನ್ನು ಅರಸುವ ಆಶಾಜೀವಿ ಹೇಗೆ? ವಿವರಿಸಿರಿ.

Answer:
ರಾಷ್ಟ್ರಪತಿಯಾಗಿ ಆಯ್ಕೆಗೊಳ್ಳುವುದಕ್ಕೆ ಕೆಲವೇ ದಿನಗಳ ಹಿಂದೆ ಅವರು ಹೈದರಾಬಾದಿನ ಒಂದು ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು. ಬುದ್ದಿಮಾಂದ್ಯ ಮಕ್ಕಳ ಮೆದುಳಿನಲ್ಲಿ ‘ಚಿಪ್’ ಅಳವಡಿಸಿ ಗುಣಪಡಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಅಗತ್ಯ ಮಾಹಿತಿಗಳನ್ನು ಕ್ರೋಡೀಕರಿಸಿರುವ ಸೂಕ್ಷ್ಮ ಎಲೆಕ್ಟ್ರಾನಿಕ್ ಸಾಧನವೇ ಚೆಪ್. ಕಂಪ್ಯೂಟರ್ ಸಹಾಯದಿಂದ ಮಿದುಳಿನಲ್ಲಿ ಇದನ್ನು ಅಳವಡಿಸಿ ಬುದ್ದಿಮಾಂದ್ಯತೆ ನಿವಾರಿಸಬಹುದೆ ಎಂದು ಕಲಾಂ ಪ್ರಶ್ನಿಸಿದರು.

ವೈದ್ಯರು ಸಾಧ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ ಕಲಾಂ ಹೇಳಿದರು. ಇದು ಸಾಧ್ಯವಿಲ್ಲ ಎಂದು ಹೇಳುವ ನೂರು ಕಾರಣಗಳ ಬಗ್ಗೆ ನನಗೆ ಸ್ವಲ್ಪವೂ ಆಸಕ್ತಿ ಇಲ್ಲ. ಅದು ಹೇಗೆ ಸಾಧ್ಯವಾಗುತ್ತದೆ ಎಂಬ ಒಂದು ಕಾರಣ ಹೇಳಬಲ್ಲಿರಾ?” ಈ ಘಟನೆಯ ಮೂಲಕ ನಾವು ಕಲಾಂ ಅವರು ಯಾವಾಗಲೂ ಸಾಧ್ಯತೆಗಳನ್ನು ಅರಸುವ ಆಶಾಜೀವಿ, ಎಂದು ತಿಳಿಯಬಹುದು.

Question 2.
ಚೆನ್ನೈನಲ್ಲಿ ನಡೆದ ಪದ್ಮಶೇಷಾದ್ರಿ ಬಾಲಭವನದ ಪ್ರೌಢಶಾಲೆಯಲ್ಲಿ ನಡೆದ ಕ್ವಿಜ್ ಕಾರ್ಯಕ್ರಮದ ಔಚಿತ್ಯವನ್ನು ಕುರಿತು ವಿವರಿಸಿ.

Answer:
ಚೆನ್ನೈನಲ್ಲಿ ನಡೆದ ಪದ್ಮಶೇಷಾದ್ರಿ ಬಾಲಭವನದ ಪ್ರೌಢಶಾಲೆಯಲ್ಲಿ ನಡೆದ ಕ್ವಿಜ್ ಕಾರ್ಯಕ್ರಮ, ಕ್ವಿಜ್ ಮಾಸ್ಟರ್ ಭಾರತರತ್ನ, ಕ್ಷಿಪಣಿ ಮನುಷ್ಯ ಅಬ್ದುಲ್ ಕಲಾಂ. ಏನೆಲ್ಲಾ ಪ್ರಶ್ನೆ ಕೇಳಬಹುದು ಅಂತ ವಿದ್ಯರ್ಥಿಗಳಿಗೆ ಕಾತುರ, ಕಲಾಂ ಅವರ ಪ್ರಶ್ನೆ ಹೀಗಿತ್ತು. “ಭೂಮಿ ಸೂರ್ಯನನ್ನು ಪರಿಭ್ರಮಿಸಲು ಒಂದು ವರ್ಷ ತೆಗೆದುಕೊಳ್ಳುತ್ತದೆ.

ಹಾಗಿದ್ದಲ್ಲಿ ಹದಿನೈದನೇ ಪರಿಭ್ರಮಣ ಪಥದಲ್ಲಿದ್ದ ವ್ಯಕ್ತಿಗೆ ಎಷ್ಟು ವಯಸ್ಸಾಗಿರುತ್ತದೆ?” ಈಪ್ರಶ್ನೆ ಕೇಳಿದ ಅನೇಕ ಮಕ್ಕಳು ತಬ್ಬಿಬ್ಬಾಗಿದ್ದರು. ಅಭಿಷೇಕ್ ಎಂಬ ಹುಡುಗ ಸ್ವಲ್ಪ ಯೋಚಿಸಿ, ‘ಹದಿನಾಲ್ಕು’ ಎಂದು ಉತ್ತರಿಸಿದ. ಉತ್ತರ ಸರಿಯಾಗಿತ್ತು. ಭೂಮಿಯ ಮೇಲೆ ನಿಂತಿದ್ದ ವ್ಯಕ್ತಿ ಹದಿನಾಲ್ಕು ಸುತ್ತು ಮುಗಿಸಿರುತ್ತಾನೆ.

ಕಲಾಂ ಅವರು ತಮ್ಮ ವಯಸನ್ನು ಹೇಳುತ್ತಿದ್ದುದೂ ಹೀಗೆಯೇ. ಕಲಾಂ ಅವರು ಇದ್ದ ಮನೆಯ ಮುಂದೆ ಪುಟ್ಟ ಮಕ್ಕಳ ಹಿಂಡೂ ಯಾವಾಗಲೂ ಇರುತ್ತಿತ್ತು. ಗಹನವಾದ ವಿಷಯಗಳನ್ನು ಪುಟ್ಟಕತೆಗಳ ರೂಪದಲ್ಲಿ ಹೇಳುತ್ತಾ ಕಲಾಂ ಮೇಷ್ಟ್ರು ಬದುಕಿನ ಸಾರ್ಥಕತೆ ಪಡೆಯುತ್ತಿದ್ದರು. ಇದು ಚೆನ್ನೈನಲ್ಲಿ ನಡೆದ ಪದ್ಮಶೇಷಾದ್ರಿ ಬಾಲಭವನದ ಪ್ರೌಢಶಾಲೆಯಲ್ಲಿ ನಡೆದ ಕ್ವಿಜ್ ಕಾರ್ಯಕ್ರಮದ ಔಚಿತ್ಯ.

Question 3.
ತಾಯಿ-ತಂದೆ ಶಿಕ್ಷಕರು ಸೇರಿ ಆದ ತ್ರಿಭುಜವೇ ಉತ್ತಮ ಬದುಕಿಗೆ ಆದರ್ಶ ಮಾದರಿ ಹೇಗೆ? ವಿವರಿಸಿರಿ.

Answer:
ಮಕ್ಕಳನ್ನು ಬುದ್ಧಿವಂತರೂ ಮತ್ತು ಕಷ್ಟಪಟ್ಟು ಕೆಲಸ ಮಾಡುವಂತವರೂ ಆದ ಉತ್ತಮ ಮನುಷ್ಯರನ್ನಾಗಿ ಮಾಡುವುದು ತಂದೆ ತಾಯಿಯರ ಆದ್ಯ ಕರ್ತವ್ಯ ಅಧ್ಯಾಪಕರು ಕಲಿಕೆ ಮತ್ತು ಜ್ಞಾನದ ಬೆಳಕನ್ನು ಮಕ್ಕಳಿಗೆ ನೀಡುವ ಕಿಟಕಿಗಳು. ಮಕ್ಕಳಲ್ಲಿ ಕ್ರೀಯಾಶೀಲತೆ ಮೊಳೆಯುವಂತೆ ಮಾಡುವ ಅದರ್ಶ ವ್ಯಕ್ತಿಗಳು. ತಾಯಿ ತಂದೆ ಶಿಕ್ಷಕರು ಸೇರಿ ಆದ ತ್ರಿಭುಜವೇ ಉತ್ತಮ ಬದುಕಿಗೆ ಆದರ್ಶ ಮಾದರಿ. ಈ ಮೂವರೂ ಶ್ರದ್ಧೆಯಿಂದ ದುಡಿದಾಗ ಮಾತ್ರ ಭಾರತಕ್ಕೆ ಹೊಸ ತಾರುಣ್ಯ ಬರುತ್ತದೆ. ಮಾತಾ ಪಿತೃಗಳ ಹಿಂದೆ ಶಾಲೆ ಮತ್ತು ಶಿಕ್ಷಕರ ಹಿಂದೆ ಮನೆ ಇರುತ್ತದೆ. ವಿದ್ಯಾಭ್ಯಾಸ ಹಾಗೂ ಶಿಕ್ಷಕ ವಿದ್ಯಾರ್ಥಿ ಸಂಬಂಧಗಳನ್ನು ವ್ಯಾಪಾರಿ ಮನೋಭಾವದಿಂದ ನೋಡಬಾರದು.

ರಾಷ್ಟ್ರಾಭಿವೃದ್ಧಿಯೇ ಮುಖ್ಯ ಗುರಿಯಾಗಿರಬೇಕು. ಸರಿಯಾದ ಶಿಕ್ಷಣ ನಮ್ಮ ಯುವಕರಲ್ಲಿ ಆತ್ಮ ಗೌರವ ಮತ್ತು ಘನತೆಗಳನ್ನು ಪೋಷಿಸುತ್ತದೆ. ಯಾವುದೇ ಕಾನೂನು ಒತ್ತಡದಿಂದ ಈ ಗುಣಗಳನ್ನು ಬೆಳೆಸಲಾರದು. ಇವುಗಳನ್ನು ನಾವೇ ಪೋಷಿಸಿಕೊಳ್ಳಬೇಕು.” ತಾಯಿ-ತಂದೆ ಶಿಕ್ಷಕರು ಸೇರಿ ಆದ ತ್ರಿಭುಜವೇ ಉತ್ತಮ ಬದುಕಿಗೆ ಆದರ್ಶ ಮಾದರಿ.

Question 4.
ರಾಷ್ಟ್ರಪತಿಯಾಗಿ ಆಯ್ಕೆಯಾದಾಗ ಚೆನ್ನೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಲಾಂ ಹೇಳಿದ್ದೇನು?

Answer:
ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾದ ಸುದ್ದಿ ಪ್ರಕಟವಾದಾಗ ಚೆನ್ನೈನಲ್ಲಿದ್ದರು. ಮುಖ್ಯಮಂತ್ರಿ ಜಯಲಲಿತ ಅಭಿನಂದಿಸಿದರು. ಕಲಾಂ ಅವರು ಹೇಳಿದರು. “ಕನಸುಗಳು ಆಲೋಚನೆಗಳಾಗುತ್ತವೆ. ಆಲೋಚನೆಗಳು ಸೃಜನಾತಕ ಕ್ರಿಯೆಗಳಾಗಿ ಪರಿವರ್ತನೆಗೊಳ್ಳುತ್ತವೆ.” ಪತ್ರಿಕಾ ಗೋಷ್ಠಿಯನ್ನು ಮಾಧ್ಯಮದವರು ಏರ್ಪಡಿಸಿದ್ದರು. ಆಧುನಿಕ ಎಲೆಕ್ಟ್ರಾನಿಕ್ ಮಾಧ್ಯಮದವರೆಲ್ಲಾ ಜಮಾಯಿಸಿದ್ದ ಸಂತೆ.

ಎಲ್ಲರಿಗೂ ಪ್ರಶ್ನೆ ಕೇಳುವ ಆತುರ. ತಾವು ಸಂದರ್ಶಿಸುತ್ತಿರುವುದು ಒಬ್ಬ ರಾಜಕಾರಣಿಯನ್ನಲ್ಲವೆಂಬುದನ್ನು ಮಾಧ್ಯಮದವರು ಮರೆತಂತಿತ್ತು. ಕಲಾಂ ಮೇಷ್ಟ್ರು ಪರಿಸ್ಥಿತಿಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. “ಎಲ್ಲರೂ ಗಮನವಿಟ್ಟು ಕೇಳಿ. ಇದುವರೆಗೆ ಏನಾಗಿದೆಯೋ ಅದೆಲ್ಲ ಒಳ್ಳೆಯದಕ್ಕೆ, ಈಗ ಆಗುತ್ತಿರುವುದೂ ಒಳ್ಳೆಯದಕ್ಕಾಗಿಯೇ ಮತ್ತು ಮುಂದೆ ಆಗಲಿರುವುದೂ ಒಳ್ಳೆಯದಕ್ಕಾಗಿಯೇ, ಅರ್ಥವಾಯಿತೇ?’ ಎಂದು ಅನೇಕ ಬಾರಿ ಶಾಲಾ ಮಕ್ಕಳನ್ನು ಕೇಳಿದರು.

ಶಿಷ್ಯ ಸಮೂಹ ಹೂಂಗುಟ್ಟಿತು.! ಭಗವದ್ಗೀತೆಯ ಪ್ರಸಿದ್ಧ ಸಾಲುಗಳನ್ನು ಉದ್ಧರಿಸುತ್ತಾ ಜೀವನ ಮೌಲ್ಯಗಳ ಕ್ಲಾಸ್ ತೆಗೆದುಕೊಂಡರು. ಎಲ್ಲರೂ ಒಟ್ಟಿಗೆ ತಾವು ಹೇಳಿದ್ದನ್ನು ಹೇಳುವಂತೆ ಕೋರಿದರು. “ವ್ಯಕ್ತಿಗಿಂತ ರಾಷ್ಟ್ರ ದೊಡ್ಡದು, ವ್ಯಕ್ತಿಗಿಂತ ಎಂದು ವಾಕ್ಯ ಮುಗಿಸುವ ಮೊದಲೇ ಎಲ್ಲರೂ ಒಟ್ಟಿಗೆ ‘ರಾಷ್ಟ್ರ ದೊಡ್ಡದು’ ಎಂದು ದನಿಗೂಡಿಸಿದರು.

Question 5.
ತಮ್ಮನ್ನು ಭೇಟಿಯಾದ ಮಕ್ಕಳಿಗೆ ಕಲಾಂ ಹೇಳಿದ್ದೇನು?

Answer:
ತಮ್ಮನ್ನು ಭೇಟಿಯಾದ ಮಕ್ಕಳು, “ಮಿ. ಪ್ರೆಸಿಡೆಂಟ್, ನಿಮ್ಮ ಯಶಸ್ಸಿನ ಗುಟ್ಟೇನು? ಎಂದು ಕೇಳಿದರು. ಕಲಾಂಮೇಷ್ಟು ಹೇಳಿದರು- “ಯಶಸ್ಸಿನ ಪಂಚಾಕ್ಷರಿ ಮಂತ್ರ ಹೀಗಿದೆ. ಕುತೂಹಲ, ಆಲೋಚನಾ ಶಕ್ತಿ, ಜ್ಞಾನ (ತಿಳಿವು), ಕಷ್ಟಪಟ್ಟು ಕೆಲಸ ಮಾಡುವುದು ಮತ್ತು ಗುರಿ ಸಾಧಿಸುವ ಛಲ.” ಅಧ್ಯಕ್ಷರಾದ ತರುವಾಯ ಲಕ್ಷಾಂತರ ಮಕ್ಕಳನ್ನು ಅಬ್ದುಲ್ ಕಲಾಂ ಭೇಟಿ ಮಾಡಿದ್ದಾರೆ.

ಬಡವರಾಗಿರಲಿ ಅಥವಾ ಶ್ರೀಮಂತರಾಗಿರಲಿ, ಎಲ್ಲ ಮಕ್ಕಳ ಕನಸೂ ಒಂದೆ: “ಅವರೆಲ್ಲರೂ ಸುಭದ್ರ ಭಾರತದಲ್ಲಿ ಬದುಕ ಬಯಸುತ್ತಾರೆ.” ಶಾಂತಿ ಸಮೃದ್ಧಿ ಮತ್ತು

ಮಕ್ಕಳಿಗೆ ಅವರು ಯಾವಾಗಲೂ ಹೇಳುತ್ತಿದ್ದುದು ಒಂದೇ ಮಾತು. “ಎಲ್ಲವನ್ನೂ ಪ್ರಶ್ನಿಸಿ. ಪ್ರಶ್ನೆಗಳಿಂದ ವಿಕಾಸಗೊಂಡದ್ದೇ ವಿಜ್ಞಾನ. ನಾವು ಮೊದಲು ಕ್ಷಿಪಣಿ ತಯಾರಿಸುತ್ತೇವೆಂದಾಗ ಅನೇಕರು ಅದು ಅಸಾಧ್ಯವಾದದ್ದು ಎಂದಿದ್ದರು. ಅವರ ಮಾತಿನಲ್ಲಿದ್ದ ದೃಢತೆ, ಕಳಕಳಿಯಿಂದಾಗಿ ಅವು ಮಕ್ಕಳ ಮನಸ್ಸಿನಲ್ಲಿ ನಾಟುತ್ತಿದ್ದವು.

ಭಾಷಾಭ್ಯಾಸ :

1. ಅನ್ಯದೇಶ ಪದಗಳು (ಅನ್ಯಾಯಿಕ ಪದಗಳುಇಂಗ್ಲಿಷ್ ಮೂಲದ ಪದಗಳು):

ಈ ಪಠ್ಯದಲ್ಲಿ ಬಳಸಲ್ಪಟ್ಟ ಇಂಗ್ಲಿಷ್ ಮೂಲದ ಪದಗಳು:

  • ಎಲೆಕ್ಟ್ರಾನಿಕ್
  • ಕಂಪ್ಯೂಟರ್
  • ಕ್ಯಾಂಟೀನ್
  • ಕ್ವಿಜ್
  • ಕ್ಲಾಸ್
  • ಡಿಜಿಟಲ್
  • ಲೈಬ್ರರಿ
  • ಪ್ರೆಸಿಡೆಂಟ್
  • ಮಾಸ್ಟರ್
  • ಮೀಟಿಂಗ್
  • ಮಾದರಿ
  • ಮಾಧ್ಯಮ
  • ಪ್ರೊಫೆಸರ್

2. ನಾನಾರ್ಥ ಪದಗಳು (ಒಂದೇ ಶಬ್ದದ ವಿಭಿನ್ನ ಅರ್ಥಗಳು):

ಶಬ್ದಅರ್ಥ ೧ಅರ್ಥ ೨
ಪಾದಕಾಲುಆಳತೆ (ಪಾದ ಎಂಬ ಆಯಾಮ)
ಹಿಂಡುಗುಂಪುಹಾಲನ್ನು ಕರೆ (ಹಿಂಡುಹಾಲು)
ತಿಳಿಅರಿತುಕೊಳ್ಳುಗುರುತು
ಗುರುತುಪತ್ತೆಗುರುತಿನ ಚಿಹ್ನೆ
ಯುಗಕಾಲಾವಧಿಯುಗದ ಅರ್ಥ – ದೊಡ್ಡ ತ್ರಿಘಟಕ ಕಾಲ

3. ಭೂತಕಾಲದ ಕ್ರಿಯಾಪದ ರೂಪಗಳು (ಹೇಳಿದರು ಎಂಬಂತೆಯೇ):

ಈ ಪಾಠದಲ್ಲಿ ಭೂತಕಾಲದ ಕ್ರಿಯಾಪದ ರೂಪಗಳು:

ಭೂತಕಾಲದ ರೂಪ ಮೂಲ ಕ್ರಿಯಾಪದ

  • ಹೇಳಿದರು    –     ಹೇಳು
  • ಕಂಡರು –       ಕಾಣು
  • ಹೇಳಿದರು –       ಕೇಳು
  • ನುಡಿಯಿದರು – ನುಡಿ
  • ಬರೆದರು –      ಬರೆ
  • ಹುಟ್ಟಿದರು      –    ಹುಟ್ಟು
  • ಮುಗುಲ್ನಕ್ಕರ –    ನಗು
  • ಪ್ರೇರೇಪಿಸಿದರು –    ಪ್ರೇರೇಪಿಸು
  • ಹೇಳಿದರು      –    ಉತ್ತರಿಸು
  • ಇತ್ತು   –  ಇರು
  • ಕೊಟ್ಟರು     –     ಕೊಡು
  • ಕರೆದರು –   ಕರೆ
  • ಬೆಳೆದರು     –  ಬೆಳೆಯು
  • ನಡೆಯುತ್ತಿದ್ದವು –  ನಡೆಯು
  • ತಯಾರಿಸಿದರು –  ತಯಾರಿಸು

4. “ಕಂಡರು” — ಕ್ರಿಯಾಪ್ರಕೃತಿ ಮತ್ತು ನಿಷೇಧ ರೂಪ:

ಕಂಡರು = ಭೂತಕಾಲದ ಬಹುವಚನ ರೂಪ.

ಕ್ರಿಯಾಪ್ರಕೃತಿ = ಕಾಣು

ನಿಷೇಧ ರೂಪ = ಕಾಣದರು ಅಥವಾ ಕಾಣಲಿಲ್ಲ

ಇದೇ ರೀತಿ ಪಾಠದಲ್ಲಿ ಬಂದಿರುವ ಕೆಲವು ಇನ್ನಷ್ಟು ರೂಪಗಳು:

ರೂಪ

ಕ್ರಿಯಾಪ್ರಕೃತಿ

ನಿಷೇಧ ರೂಪ

ಹೇಳಿದರು

ಹೇಳು

ಹೇಳಲಿಲ್ಲ

ನುಡಿಯಿದರು

ನುಡಿ

ನುಡಿಸಲಿಲ್ಲ

ತಯಾರಿಸಿದರು

ತಯಾರಿಸು

ತಯಾರಿಸಲಿಲ್ಲ

ನೀಡಿದರು

ನೀಡು

ನೀಡಲಿಲ್ಲ

ಬೆಳೆದರು

ಬೆಳೆಯು

ಬೆಳೆಯಲಿಲ್ಲ

ಲೇಖಕರ ಪರಿಚಯ

2nd PUC Kannada Chapter 18 Badakannu Pritisida Santa
2nd PUC Kannada Chapter 18 Badakannu Pritisida Santa

ಪ್ರೊ. ಎಚ್.ಆರ್. ರಾಮಕೃಷ್ಣರಾವ್ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ೩೦.೦೫.೧೯೩೫ರಲ್ಲಿ ಜನಿಸಿದರು. ಶ್ರೀ ಎಚ್.ವಿ. ರಂಗರಾವ್ ಮತ್ತು ರಂಗಮ್ಮ ಎಂಬ ದಂಪತಿಗಳ ಮಗ ಇವರು. ಮೈಸೂರು ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ.

ಕಲಾಂ ಮೇಷ್ಟ್ರು, ಡಾ. ಸುಬ್ರಮಣ್ಯನ್ ಚಂದ್ರಶೇಖರ್, ಸರ್ ಐಸಾಕ್ ನ್ಯೂಟನ್, ಸಂಕ್ಷಿಪ್ತ ಖಗೋಳ ವಿಜ್ಞಾನ ಚರಿತ್ರೆ, ಅಂತರಿಕ್ಷ, ಚಂದ್ರಯಾನ, ಬಿಗ್‌ ಬ್ಯಾಂಗ್, ಪ್ರಳಯ-೨೦೧೨ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ವಿಜ್ಞಾನದ ವಿಚಾರಗಳನ್ನು ಕನ್ನಡದಲ್ಲಿ ಜನಪ್ರಿಯಗೊಳಿಸುವ ಸಲುವಾಗಿ ರಾಜ್ಯದಾದ್ಯಂತ ಉಪನ್ಯಾಸಗಳನ್ನು ನೀಡಿದ್ದಾರೆ. ಆಕಾಶವಾಣಿ. ದೂರದರ್ಶನಗಳಲ್ಲೂ ವಿಜ್ಞಾನ ಸಂಬಂಧಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ನಿವೃತ್ತಿಯ ನಂತರವೂ ಬೆಂಗಳೂರಿನ ವಿವಿಧ ಕಾಲೇಜುಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಶ್ರೀಯುತರು ಕನ್ನಡ ಪುಸ್ತಕಾಭಿವೃದ್ಧಿ ಪ್ರಾಧಿಕಾರಕ್ಕಾಗಿ ರಚಿಸಿಕೊಟ್ಟಿರುವ ‘ಕಲಾಂ ಮೇಷ್ಟ್ರು’ ಕೃತಿಯಿಂದ ಪ್ರಸ್ತುತ ‘ಬದುಕನ್ನು ಪ್ರೀತಿಸಿದ ಸಂತ’ ಎಂಬ ಲೇಖನವನ್ನು ಸ್ವೀಕರಿಸಲಾಗಿದೆ.

Click Here to Downlaod Badakannu Pritisida Santa PDF Notes
Click Here to Watch Badakannu Pritisida Santa Video 

You cannot copy content of this page