2nd PUC Kannada Question and Answer – Dhanigala Bellilota
Looking for 2nd PUC Kannada textbook answers? You can download Chapter 17: Dhanigala Bellilota Questions and Answers PDF, Notes, and Summary here. 2nd PUC Kannada Gadyabhaga solutions follow the Karnataka State Board Syllabus, making it easier for students to revise and score higher in exams.
Karnataka 2nd PUC Kannada Textbook Answers—Reflections Chapter 17
Dhanigala Bellilota Questions and Answers, Notes, and Summary
2nd PUC Kannada Gadyabhaga Chapter 17
ಧಣಿಗಳ ಬೆಳ್ಳಿಲೋಟ
Dhanigala Bellilota

Scroll Down to Download Dhanigala Bellilota PDF
I. ಒಂದು ವಾಕ್ಯದಲ್ಲಿ ಉತ್ತರಿಸಿ:
Question 1.
ಧಣಿಗಳ ಮನೆಯ ಪಕ್ಕದಲ್ಲಿ ಹರಿಯುತ್ತಿದ್ದ ಹೊಳೆ ಯಾವುದು?
Answer:
ಧಣಿಗಳ ಮನೆಯ ಪಕ್ಕದಲ್ಲಿ ಶಾಂಭವಿ ಹೊಳೆ ಹರಿಯುತ್ತಿತ್ತು.
Question 2.
ಗುಡ್ಡ ಹೊಳೆಯಲ್ಲಿ ಯಾವ ಆಟ ಆಡುತ್ತಿದ್ದನು?
Answer:
ಗುಡ್ಡ ಹೊಳೆಯಲ್ಲಿ ಮುಸುರೆ ಪಾತ್ರೆಯಲ್ಲಿ ಮರಿಮೀನುಗಳನ್ನು ಹಿಡಿಯುವ ಆಟ ಆಡುತ್ತಿದ್ದನು.
Question 3.
ಧಣಿಗಳ ಹೆಸರೇನು?
Answer:
ಧಣಿಗಳ ಹೆಸರು ವೆಂಕಪ್ಪಯ್ಯ,
Question 4.
ಬೆಳ್ಳಿಲೋಟ ಲಪಟಾಯಿಸಿದ ಅಪವಾದವನ್ನು ಯಾರ ಮೇಲೆ ಹೊರಿಸಲಾಯಿತು?
Answer:
ಬೆಳ್ಳಿಲೋಟ ಲಪಟಾಯಿಸಿದ ಅಪವಾದವನ್ನು ಕುದುಪನ ಕುಟುಂಬದ ಮೇಲೆ ಹೊರಿಸಲಾಯಿತು.
Question 5.
ಧಣಿ ಎಂದಿಗೂ ಯಾರ ಮಾತನ್ನು ನಂಬುವುದಿಲ್ಲ?
Answer:
ಧಣಿ ಎಂದಿಗೂ ಒಕ್ಕಲ ಮಕ್ಕಳ ಮಾತನ್ನು ನಂಬುವುದಿಲ್ಲ.
Question 6.
ಧಣಿಗಳು ಹೊಳೆಯ ಹೂಳೆತ್ತಲು ಯಾರಿಗೆ ಸೂಚಿಸಿದರು?
Answer:
ಧಣಿಗಳು ಹೊಳೆಯ ಹೂಳೆತ್ತಲು ಕುದುಪನಿಗೆ ಸೂಚಿಸಿದರು.
Question 7.
ಬೆಳ್ಳಿಲೋಟ ಏನನ್ನು ಕಳೆದುಕೊಂಡಿತ್ತು?
Answer:
ಬೆಳ್ಳಿಲೋಟ ಹೊಳೆಯ ಹೂಳೊಳಗೆ ಅವಿತು ತನ್ನ ಬಣ್ಣ ಗಾಂಭೀರವನ್ನು ಕಳೆದುಕೊಂಡಿತ್ತು.
Question 8.
ಧಣಿಗಳ ದಾಂಪತ್ಯಕ್ಕೆ ಯಾವುದು ಮೂಕ ಸಾಕ್ಷಿಯಾಗಿತ್ತು?
Answer:
ಧಣಿಗಳ ದಾಂಪತ್ಯಕ್ಕೆ ಬೆಳ್ಳಿಲೋಟ ಮೂಕ ಸಾಕ್ಷಿಯಾಗಿತ್ತು.
II. ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.
Question 1.
ಮುಂಜಾನೆ ಚಿನ್ನಮ್ಮ ಯಾವ ಕೆಲಸದಲ್ಲಿ ತೊಡಗಿದ್ದಳು?
Answer:
ಮುಂಜಾನೆ ಚಿನ್ನಮ್ಮ ಎಂದಿನಂತೆ ಹೊಳೆಯ ಸೆರಗಲ್ಲಿ ಮುಸುರೆ ಪಾತ್ರೆಗಳನ್ನು ರಾಶಿ ಹಾಕಿ ಕೂತು. ಪಕ್ಕದಲ್ಲಿ ಬೂದಿಯ ಗೆರಟೆಯನ್ನಿರಿಸಿಕೊಂಡು ಹೊಳೆಯ ಗುಣವಾಚನಕ್ಕೆ ತೊಡಗಿದ್ದಳು.
Question 2.
ನದಿಯ ಒಡಲು ಯಾವಾಗ ಪ್ರಕ್ಷುಬ್ಧವಾಗಿರುತ್ತದೆ?
Answer:
ಆಷಾಢ-ಶ್ರಾವಣ-ಬಾದ್ರಪದ ಮಾಸದಲ್ಲಿ ನದಿಯ ಒಡಲು ಕಾವಿಗೆ ಕೂತ ಹೇಂಟೆಯಂತೆ ಯಾವತ್ತೂ ವ್ಯಗ್ರ ಪ್ರಕ್ಷುಬ್ಧ, ಹತ್ತಿರ ಬಂದವರನ್ನು ಕುಕ್ಕಿಮುಕ್ಕುವ ಸಿಡುಕು ಇರುತ್ತದೆ.
Question 3.
ಧಣಿಗಳು ಹೊಳೆಯನ್ನು ಹೇಗೆ ಮೂದಲಿಸುತ್ತಿದ್ದರು?
Answer:
ಮಳೆಗಾಲದಲ್ಲಿ ಶಾಂಭವಿ ಹೊಳೆ ಆಡಿದ್ದೇ ಆಟ. ಹೂಡಿದ್ದೇ ಹೂಟವಾಗಿತ್ತು.ಧಣಿಗಳು ಹೊಳೆಯನ್ನು ‘ಮಳೆಗಾಲ ಬಂದರೆ ಸಾಕು ಈ ಬಿಕನಾಸಿ ಹೊಳೆ ಊರಿಡೀ ತನ್ನ ಸೆರಗನ್ನೇ ಹಾಸಿಬಿಡುತ್ತದೆ….. ಎಷ್ಟಗಲ ಸೆರಗು ಹಾಸಿದರೂ ಇನ್ನಷ್ಟು ದೂರಕ್ಕೆ ಹಾಸಬೇಕೆಂಬ ಚಟ ಇದಕ್ಕೆ….’ಎಂದು ಮೂದಲಿಸುತ್ತಿದ್ದರು.
Question 4.
ಮುಸುರೆ ಪಾತ್ರೆಗಳ ‘ಒಡೆಯ’ ಏನೆಂದು ಯೋಚಿಸಿದನು?
Answer:
ಮುಸುರೆ ಪಾತ್ರೆಗಳ ಒಡೆಯ’ ಗುಡ್ಡನು ತೋರು ಬೆರಳನ್ನು ಬಾಯೊಳಗಿರಿಸಿಕೊಂಡು ಮೌನ ಮುದ್ರೆಯಲ್ಲಿದ್ದಾನೆ. ಹೇಗೂ ಚಡ್ಡಿ ಒದ್ದೆ ನೀರಾಗಿದೆ. ಮತ್ತೊಮ್ಮೆ ತಾನು ಈ ತುಂಬಿದ ಹೊಳೆಯಲ್ಲಿ ಯಾಕೆ ಈಜಬಾರದು? ಅಪ್ಪನಲ್ಲಿ ಕೇಳುವುದೋ…. ಬಿಡುವುದೋ ಎಂದು ಯೋಚಿಸಿದನು.
Question 5.
ಧಣಿಪತ್ನಿ ಬೆಳ್ಳಿಲೋಟವನ್ನು ಹೇಗೆ ಪರಿಚಯಿಸಿದ್ದಾಳೆ?
Answer:
ಧಣಿಪತ್ನಿ ‘ಈ ಬೆಳ್ಳಿ ಲೋಟ ಜಾಗ್ರತೆ ಮಾರಾಯ. ನನ್ನ ಮದುವೆಯಲ್ಲಿ ನನ್ನಪ್ಪ ಕೊಟ್ಟಿದ್ದು…. ಅಪ್ಪಯ್ಯಕುಡ್ಲದ ರಥಬೀದಿಯಲ್ಲಿರುವ ನರಸಿಂಹಾಚಾರಿಯಲ್ಲಿ ಮಾಡಿದ್ದು, ಅದರ ಮೈ ಮೇಲಿನ ಹೂಬಳ್ಳಿಯನ್ನು ಈ ಕಾಲದಲ್ಲಿ ಯಾವ ಆಚಾರಿ ತಾನೆ ಮಾಡಿಯಾನು.. ಎಂದು ಬೆಳ್ಳಿಲೋಟವನ್ನು ಪರಿಚಯಿಸಿದ್ದಾಳೆ.
Question 6.
ಧಣಿಯ ಬಡಿತದಿಂದ ಗುಡ್ಡ ಬಂಧಮುಕ್ತನಾದುದು ಹೇಗೆ?
Answer:
ಧಣಿಗಳು ಗುಡ್ಡನ ಬಾಯಿ ಬಿಡಿಸಲು ಅಂಗಳದ ಹೊಂಗಾರೆ ಮರಕ್ಕೆ ಬಿಗಿದು ತೆಂಗಿನ ಕೊತ್ತಳಿಗೆಯಲ್ಲಿ ಬಡಿದರು. ತಾಯಿ ಚಿನ್ನಮ್ಮ ತಟ್ಟನೆ “ನಮ್ಮ ಊರ ಕೋಡಬ್ಬು ದೈವದ ಆಣೆಯಿದೆ. ಇನ್ನು ನನ್ನ ಮಗನ ಮೇಲೆ ಕೈ ಮಾಡಿದಲ್ಲಿ” ಎಂದು ಅಸಹಾಯಕತೆಯಿಂದ ಧಣಿಗಳ ಕಾಲಿಗೆ ಅಡ್ಡಬಿದ್ದು ತಾನು ಆ ಬೆಳ್ಳಿಲೋಟದ ಹಣವನ್ನು ಪಡಿಯಿಲ್ಲದೆ ದುಡಿದು ತೀರಿಸುತ್ತೇನೆಂದು ಅಳುತ್ತಾ ಬೇಡಿಕೊಂಡಳು. ಮುಂದಿನ ಮೂರು ಬೇಸಿಗೆಯವರೆಗೆ ಚಿನ್ನಮ್ಮನ ದುಡಿತಕ್ಕೆ ಪಡಿಯಿಲ್ಲ ಎಂಬ ಕರಾರಿನನ್ವಯ ಧಣಿಯ ಬಡಿತದಿಂದ ಗುಡ್ಡ ಬಂಧಮುಕ್ತನಾದ.
Question 7.
ಕುದುಪನಿಗೆ ಹನಿಗಣ್ಣಾಗಲು ಕಾರಣವೇನು?
Answer:
ಕುದುಪ ಹೂಳು ತುಂಬಿದ್ದ ಬುಟ್ಟಿಯನ್ನು ಚಿನ್ನಮ್ಮನ ತಲೆಗೇರಿಸುವಷ್ಟರಲ್ಲಿ ನವಮಾಸಗಳ ಕಾಲ ಹೊಳೆಯ ಉದರದಲ್ಲಿ ಅಡಗಿದ್ದ ಧಣಿಗಳ ಬೆಳ್ಳಿಲೋಟದ ಮಂಕುಮೂತಿ ಕಾಣಿಸಿತು. ಇನ್ನೂ ಸೂತಕ ಕಳೆಯದ ಹಸಿ ಮಗುವನ್ನು ಮೀಯಿಸುವಂತೆ ನಿಧಾನಕ್ಕೆ ಹೊಳೆಯ ನೀರಲ್ಲಿ ಆ ಬೆಳ್ಳಿಲೋಟವನ್ನು ತೊಳೆಯತೊಡಗಿದ. ಈ ಲೋಟದಿಂದಾಗಿ ತಾನೆಷ್ಟು ಅಪಮಾನದ ಮಾತುಗಳನ್ನು ಆ ಧಣಿಪತ್ನಿಯವರ ಕೊಳಕು ಬಾಯಿಂದ ಕೇಳಿಬಿಟ್ಟೆ ಎಂದು ಕುದುಪ ಹನಿಗಣ್ಣಾದ.
III. ಸಂದರ್ಭ:
Question 1.
ಅದಕ್ಕೂ ಚೆನ್ನಮ್ಮನ ಪುಟ್ಟ ಸಂಸಾರದ ಬಗ್ಗೆ ಅದೆಷ್ಟು ಪ್ರೀತಿ ವಾತ್ಸಲ್ಯ
Answer:
ಆಯ್ಕೆ: ಎಚ್. ನಾಗವೇಣಿಯವರ ‘ಮೀಯುವ ಆಟ’ ಕೃತಿಯಿಂದ ಆರಿಸಿದ ಧಣಿಗಳ ಬೆಳ್ಳಿಲೋಟ ಎನ್ನುವ ಕತೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಚಿನ್ನಮ್ಮಳ ಕುಟುಂಬಕ್ಕೆ ಶಾಂಭವಿ ಹೊಳೆಯು ಮಾಡಿರುವ ಉಪಕಾರವನ್ನು ವಿವರಿಸುವ ಸಂದರ್ಭವಿದು. ಆ ಕುಟುಂಬ ಮತ್ತು ಹೊಳೆಯ ಅವಿನಾಭಾವ ಸಂಬಂಧದ ಬಗ್ಗೆ ಹೇಳುವಾಗ ಲೇಖಕಿ ಈ ಮಾತನ್ನು ಹೇಳಿದ್ದಾರೆ.
ವಿವರಣೆ: ಚಿನ್ನಮ್ಗಳು ಮುಂಜಾನೆ ಎಂದಿನಂತೆ ಶಾಂಭವಿ ಹೊಳೆಯ ದಡದಲ್ಲಿ ಮುಸುರೆ ಪಾತ್ರೆಗಳನ್ನು ರಾಶಿ ಹಾಕಿ ತಿಕ್ಕುತ್ತಾ ಸಿಟ್ಟಿನಿಂದ ಹೊಳೆಗೆ ಬೈಯುತ್ತಿದ್ದಳು. ಏಕೆಂದರೆ ಆ ಹೊಳೆ ಚಿನ್ನಮ್ಮಳ ಸಂಸಾರಕ್ಕೆ ಅಪವಾದವನ್ನು ತಂದು ಹಾಕಿದೆ. ಆದರೆ ಶಾಂಭವಿ ಹೊಳೆಗೆ ಆ ಸಂಸಾರದ ಬಗ್ಗೆ ಪ್ರೀತಿಯಿದೆ. ಚಿನ್ನಮ್ಗಳ ಗಂಡ ಕುದುಪನ ಗಾಳಕ್ಕೆ ಮೀನುಗಳನ್ನು ಒದಗಿಸುತ್ತಿತ್ತು. ತಾನು ಹರಿದು ಬರುವಾಗ ಸೆರಗಿನಂಚಿನ ತೋಟಗಳಿಂದ ತೆಂಗಿನಕಾಯಿ-ಸೌದೆಗಳನ್ನು ತಂದು ಕುದುಪನ ಕಣ್ಣಿಗೆ ಬೀಳಿಸುತ್ತಿತ್ತು. ಮಳೆಗಾಲದಲ್ಲಿ ಪಾತ್ರೆ-ಪಗಡಿ, ಕೋಳಿ-ಕುರಿ, ಎಣೆ-ದೋಣಿ, ರೀಪು-ಪಕ್ಕಾಸುಗಳನ್ನು ಹೊತ್ತು ತಂದು ಹಾಕುತ್ತಿದ್ದ ಶಾಂಭವಿ ಹೊಳೆಗೆ ಚಿನ್ನಮ್ಮನ ಪುಟ್ಟ ಸಂಸಾರದ ಬಗ್ಗೆ ಪ್ರೀತಿ ವಾತ್ಸಲ್ಯಗಳಿದ್ದವೆಂದು ಲೇಖಕಿ ಈ ಮಾತಿನ ಮೂಲಕ ವಿವರಿಸಿದ್ದಾರೆ.
Question 2.
ಕಾವಿಗೆ ಕೂತ ಹೇಂಟೆಯಂತೆ -ಒಡಲು ಯಾವತ್ತೂ ವ್ಯಗ್ರ-ಪ್ರಕ್ಷುಬ್ಧ,
Answer:
ಆಯ್ಕೆ: ಎಚ್. ನಾಗವೇಣಿಯವರ “ಮೀಯುವ ಆಟ’ ಕೃತಿಯಿಂದ ಆರಿಸಿದ ಧಣಿಗಳ ಬೆಳ್ಳಿಲೋಟ ಎನ್ನುವ ಕತೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಮಳೆಗಾಲದಲ್ಲಿ ಶಾಂಭವಿ ಹೊಳೆಯು ತುಂಬಿ ಹರಿಯುವ ಬಗೆಯನ್ನು ಹೇಳುವ ಸಂದರ್ಭವಿದು.
ವಿವರಣೆ: ಶ್ರಾವಣ ಮಾಸದ ನಾಲ್ಕನೇ ದಿನ ಚಿನ್ನಮ್ಮನ ಮಗ ಗುಡ್ಡ ತುಂಬಿ ಹರಿಯುವ ಶಾಂಭವಿ ಹೊಳೆಯ ದಡದಲ್ಲಿ ಕುಳಿತು ಧಣಿಗಳ ಮನೆಯ ಮುಸುರೆ ಪಾತ್ರೆಗಳನ್ನು ತಿಕ್ಕುತ್ತಿದ್ದ ಅಷಾಢ-ಶ್ರಾವಣ-ಭಾದ್ರಪದ ಮಾಸಗಳಲ್ಲಿ ಹೆಚ್ಚು ಮಳೆ ಸುರಿಯುವ ಕಾರಣಕ್ಕೆ ನದಿಯು ತುಂಬಿ ಹರಿಯುತ್ತದೆ. ಆ ಕಾರಣದಿಂದ ಹರಿಯುವ ಕ್ರಿಯೆಯಲ್ಲಿ ಸಿಡುಕಿದೆ. ಅದರ ಒಡಲು ವ್ಯಗ, ಪ್ರಕ್ಷುಬ್ಧವಾದುದರಿಂದ ಲೇಖಕಿಯು ಅದನ್ನು ಕಾವಿಗೆ ಕೂತೆ ಹೇಂಟೆಯಂತೆ ಎಂದು ಹೇಳಿದ್ದಾರೆ. ಕಾವಿಗೆ ಕೂತ ಹೇಂಟೆಗೆ ಹತ್ತಿರ ಬಂದವರನ್ನು ಕುಕ್ಕಿ ಮುಕ್ಕುವ ಸಿಡುಕಿರುತ್ತದೆ. ಅದೇ ರೀತಿ ಇಲ್ಲಿನ ಶಾಂಭವಿ ಹೊಳೆಗೂ ಇದೆಎನ್ನುವಾಗ ಲೇಖಕಿ ಈ ಮಾತನ್ನು ಹೇಳಿದ್ದಾರೆ.
Question 3.
ಗದ್ದೆಯಲ್ಲಿ ಬಿತ್ತುವುದನ್ನು ಮರಳದನ್ನೆ ಮೇಲೆ ಬಿತ್ತಿದೆಯಲ್ಲವ ಮಾರಾಯ…?
Answer:
ಆಯ್ಕೆ: ಎಚ್. ನಾಗವೇಣಿಯವರ ‘ಮೀಯುವ ಆಟ’ ಕೃತಿಯಿಂದ ಆರಿಸಿದ ಧಣಿಗಳ ಬೆಳ್ಳಿಲೋಟ ಎನ್ನುವ ಕತೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದ ಹೊಳೆಗೆ ತಡೆಯೊಡ್ಡುವ ಧಣಿ ವೆಂಕಪ್ಪಯ್ಯನ ಪ್ರಯತ್ನಕ್ಕೆ ಹೊಳೆ ಪ್ರತಿಕ್ರಿಯಿಸುವ ರೀತಿಯನ್ನು ಲೇಖಕಿ ಈ ಮಾತಿನ ಮೂಲಕ ಹೇಳಿದ್ದಾರೆ.
ವಿವರಣೆ: ಶಾಂಭವಿ ಹೊಳೆಯು ಮಳೆಗಾಲದಲ್ಲಿ ಧಣಿ ವೆಂಕಪ್ಪಯ್ಯನವರ ತೆಂಗಿನ ತೋಟದ ಅಂಚನ್ನು ಹೊಳೆಯು ಕೊಚ್ಚಿ ಹಾಕುತ್ತಿದ್ದರಿಂದ ವೆಂಕಪ್ಪನ್ನು ಹೊಳೆಯನ್ನು ಮೂದಲಿಸುತ್ತಿದ್ದರು. ಹೊಳೆಗೆ ಬಾಯಿ ಬರದಿದ್ದರೂ ಮಳೆಗಾಲ ಬಂದೊಡನೆ ಬರೀ ಕ್ರಿಯೆಯಲ್ಲೇ ತನ್ನ ವ್ಯಾಪ್ತಿ, ತನ್ನ ಪರಿಹಾರ. ತನ್ನ ಬಲ ಎಷ್ಟು ಎಂಬುದನ್ನು ಮನವರಿಕೆ ಮಾಡಿ ಧಣಿಗಳಿಗೆ ಕಿರಿಕಿರಿ ಮೂಡಿಸುತಿತ್ತು. ಹೊಳೆಯು ಈ ಉಪಟಳ ತಾಳಲಾರದೆ ಧಣಿಯವರು ಹೊಳೆ ಸೊರಗುವ ಕಾಲಕ್ಕೆ ತನ್ನ ಮೇಲುಸ್ತುವಾರಿಯಲ್ಲಿ ನದಿ ಸೆರಗನ್ನು ಆಚೆಗೆ ದೂಡುವಂತೆ ಪಾದೆಕಲ್ಲು, ಮುರಕಲ್ಲಿನ ಗಟ್ಟಿ ಪಂಚಾಂಗ ತೋಟಕ್ಕೂ, ನದಿಸೆರಗಿಗೂ ನಡುವೆ ದರೆ ಎಬ್ಬಿಸಿ ಎತ್ತರಿಸುತ್ತಾರೆ.
ಪ್ರತಿ ವರ್ಷ ವೆಂಕಪ್ಪಯ್ಯ ಗದ್ದೆಯಂಚನ್ನು ನಾಲ್ಕು, ಐದು ಅಡಿ ಎತ್ತರಿಸಿದರೂ ಬೇಸಿಗೆಯಲ್ಲಿ ಅದನ್ನು ನೋಡಿಕೊಂಡು ಸುಮ್ಮನಿರುತ್ತಿದ್ದ ಹೊಳೆ, ಗದ್ದೆಯಲ್ಲಿ ಬಿತ್ತುವುದನ್ನು ಮರಳ ದಿನ್ನೆ ಮೇಲೆ ಬಿತ್ತಿದೆಯಲ್ಲವಾ ಮಾರಾಯಾ…? ಎಂದು ಮನಸ್ಸಿನಲ್ಲೇ ವೆಂಕಪ್ಪಯ್ಯನವರ ಪೆದ್ದುತನವನ್ನು ಅಣಕಿಸಿ ಆ ಎತ್ತರವನ್ನು ಕೆಡವಿ ಹಾಕುತ್ತಿತ್ತು ಎಂಬುದನ್ನು ವರ್ಣಿಸುವ ಸಂದರ್ಭವಾಗಿದೆ.
Question 4.
ಆತನ ಈಜಿಗೆ ಮೀನುಗಳೇ ನಾಚಬೇಕು.
Answer:
ಆಯ್ಕೆ: ಎಚ್. ನಾಗವೇಣಿಯವರ ‘ಮೀಯುವ ಆಟ’ ಕೃತಿಯಿಂದ ಆರಿಸಿದ ಧಣಿಗಳ ಬೆಳ್ಳಿಲೋಟ ಎನ್ನುವ ಕತೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಪಾತ್ರೆ ತಿಕ್ಕುತ್ತಿರುವ ಗುಡ್ಡ ನೀರು ಪಾಲಾದಾಗ ಈಜಿ ಬಂದ ರೀತಿಯನ್ನು ಲೇಖಕಿ ವಿವರಿಸುವಾಗ ಈ ಸಾಲು ಬಂದಿದೆ.
ವಿವರಣೆ: ಕುದುಪ ಚಿನ್ನಮ್ಮರ ಮಗ ಗುಡ್ಡ ಶಾಂಭವಿ ಹೊಳೆಯ ಅಂಚಿನಲ್ಲಿ ಧಣಿಗಳ ಮನೆಯ ಮುಸುರೆ ಪಾತ್ರೆಯನ್ನು ತಿಕ್ಕುತ್ತಿದ್ದ. ಶಾಂಭವಿ ಹೊಳೆ ರಭಸವಾಗಿ ಹರಿಯುತ್ತಿದೆ. ಗುಡ್ಡ ಹಿಂದಿನ ದಿನ ರಾತ್ರಿಯ ಹರಿಕಥೆ ಪ್ರಸಂಗವನ್ನು ನೆನಪಿಸಿಕೊಳ್ಳುತ್ತಾ ಪಾತ್ರೆ ತೊಳೆಯುತ್ತಿದ್ದಾಗ ಕಾಲಡಿಯ ಮಣ್ಣು ಕುಸಿದು. ಪಾತ್ರೆಗಳ ಸಮೇತ ನೀರಿಗೆ ಬಿದ್ದನು. ಅವನು ಚಿಕ್ಕವನಾದರೂ ಚೆನ್ನಾಗಿ ಈಜು ಬಲ್ಲವನಾಗಿದ್ದ ಎನ್ನುವಾಗ ಲೇಖಕಿ ಗುಡ್ಡನ ಕುರಿತಾಗಿ ಈ ಮಾತನ್ನು ಹೇಳುತ್ತಾರೆ.
Question 5.
ಧಣಿಯವರು ಎಂದಾದರೂ ಒಕ್ಕಲು ಮಕ್ಕಳನ್ನು ನಂಬಿದ್ದುಂಟೆ?
Answer:
ಆಯ್ಕೆ: ಎಚ್. ನಾಗವೇಣಿಯವರ ‘ಮೀಯುವ ಆಟ’ ಕೃತಿಯಿಂದ ಆರಿಸಿದ ಧಣಿಗಳ ಬೆಳ್ಳಿಲೋಟ ಎನ್ನುವ ಕತೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಹೊಳೆಯಲ್ಲಿ ಬೆಳ್ಳಿ ಲೋಟ ಕಾಣೆಯಾದುದನ್ನು ಧಣಿಗಳ ಹತ್ತಿರ ಕುದುಪ ಬಂದು ಹೇಳಿದಾಗ, ಧಣಿ ನಂಬದೇ ಇರುವ ಸ್ಥಿತಿ ಇದಾಗಿದೆ.
ವಿವರಣೆ: ಗುಡ್ಡ ಮುಸುರೆ ಪಾತ್ರೆಗಳು ಹೊಳೆಯ ಪಾಲಾದುವೆಂದು ಬಂದು ಹೇಳಿದಾಗ ಕುದುಪ ಹೊಳೆಯಲ್ಲಿ ಮುಳುಗಿ ಸಿಕ್ಕ ಪಾತ್ರೆಗಳನ್ನೆಲ್ಲ ಪಾಲಾಡಿ ತಂದನು. ಆದರೆ ಎಷ್ಟೇ ಪ್ರಯತ್ನಿಸಿದರೂ ಧಣಿಗಳ ಮನೆಯ ಬೆಳ್ಳಿಲೋಟ ಸಿಗಲಿಲ್ಲ. ಚಿನ್ನಮ್ಮ, ಕುದುಪ, ಗುಡ್ಡರ ಕಣ್ಣೀರು ಹೊಳೆಯನ್ನು ಸೇರಿತೆ ವಿನಃ ಬೇರೆ ಪ್ರಯೋಜನವಾಗಲಿಲ್ಲ.
ಆಕಾಶ ಭೂಮಿ ಒಂದು ಮಾಡುವಂತೆ ಮಳೆ ಸುರಿಯುತ್ತಿದ್ದುದರಿಂದ ಪ್ರಯತ್ನಿಸಿ ನಿರಾಶನಾದ ಕುದುಪ ಧಣಿಗಳ ಮನೆಯ ಅಂಗಳದಲ್ಲಿ ನಿಂತು ಬೆಳ್ಳಿಲೋಟ ಕಾಣೆಯಾದ ವಿಷಯವನ್ನು ಧಣಿಗೆ ತಿಳಿಸುತ್ತಾನೆ. ಆಗ ಧಣಿಗಳು ಈ ಸಂಸಾರದ ಮೇಲೆಯೇ ಅಪವಾದವನ್ನು ಹಾಕಿದರು. ಈ ಸಂದರ್ಭದಲ್ಲಿ ಆಸಹಾಯಕ ಸ್ಥಿತಿಯಲ್ಲಿರುವ ಒಕ್ಕಲು ಮಕ್ಕಳನ್ನು ಸತ್ಯ ಹೇಳಿದರೂ ಯಜಮಾನರ ಸ್ಥಾನದಲ್ಲಿರುವವರು ನಂಬುವುದಿಲ್ಲ ಎನ್ನುವಾಗ ಲೇಖಕಿ ಈ ಮೇಲಿನ ಮಾತನ್ನು ಹೇಳಿದ್ದಾರೆ.
Question 6.
ಮೂರು ಬೇಸಿಗೆಯವರೆಗೆ ಚಿನ್ನಮ್ಮನ ದುಡಿತಕ್ಕೆ ಪಡಿಯಿಲ್ಲ.
Answer:
ಆಯ್ಕೆ: ಎಚ್. ನಾಗವೇಣಿಯವರ ‘ಮೀಯುವ ಆಟ’ ಕೃತಿಯಿಂದ ಆರಿಸಿದ ಧಣಿಗಳ ಬೆಳ್ಳಿಲೋಟ ಎನ್ನುವ ಕತೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಧಣಿಗಳು ಗುಡ್ಡ ಮಾಡಿದ ತಪ್ಪಿಗೆ ಚಿನ್ನಮ್ಮನಿಗೆ ಶಿಕ್ಷೆ ವಿಧಿಸುವ ಸಂದರ್ಭವಿದು.
ವಿವರಣೆ: ಗುಡ್ಡ ಮುಸುರೆ ಪಾತ್ರೆಗಳು ಹೊಳೆಯ ಪಾಲಾದುವೆಂದು ಬಂದು ಹೇಳಿದಾಗ ಕುದುಪ ಹೊಳೆಯಲ್ಲಿ ಮುಳುಗಿ ಸಿಕ್ಕ ಪಾತ್ರೆಗಳನ್ನೆಲ್ಲ ಜಾಲಾಡಿ ತಂದನು. ಆದರೆ ಎಷ್ಟೇ ಪ್ರಯತ್ನಿಸಿದರೂ ಧಣಿಗಳ ಮನೆಯ ಬೆಳ್ಳಿಲೋಟ ಸಿಗಲಿಲ್ಲ. ಧಣಿಗೆ ತಿಳಿಸುತ್ತಾನೆ. ಆಗ ಧಣಿಗಳು ಅವನ ಸಂಸಾರದ ಮೇಲೆಯೇ ಅಪವಾದವನ್ನು ಹಾಕಿದರು. ಮಾತ್ರವಲ್ಲ ಮುಸುರೆ ಪಾತ್ರೆ ತಿಕ್ಕುತ್ತಿದ್ದ ಗುಡ್ಡನ ಬಾಯಿ ಬಿಡಿಸಲು ಅಂಗಳದ ಹೊಂಗಾರೆ ಮರಕ್ಕೆ ಕಟ್ಟಿ ಹಾಕಿ ತೆಂಗಿನ ಕೊತ್ತಳಿಗೆಯಲ್ಲಿ ಬಡಿದರು. ಇದನ್ನು ನೋಡಲಾಗದ ತಾಯಿ ಚಿನ್ನಮ್ಮ ತಟ್ಟನೆ “ನಮ್ಮ ಊರ ಕೋಡಬ್ಬು ದೈವದ ಆಣೆಯಿದೆ, ಎಂದು ಅಸಹಾಯಕತೆಯಿಂದ ಧಣಿಗಳ ಕಾಲಿಗೆ ಅಡ್ಡಬಿದ್ದು ತಾನು ಆ ಬೆಳ್ಳಿಲೋಟದ ಹಣವನ್ನು ಪಡಿಯಿಲ್ಲದೆ ದುಡಿದು ತೀರಿಸುತ್ತೇನೆಂದು ಅಳುತ್ತಾ ಬೇಡಿಕೊಂಡಳು, ಆಗ ಧಣಿಗಳು ಮೇಲಿನ ತೀರ್ಮಾನಕ್ಕೆ ಬರುತ್ತಾರೆ.
Question 7.
ಪಾವಕ್ಕಿ ಕಮ್ಮಿ ಮಾಡಿದರೆ ಸುಮ್ಮನೆ ಇರಿಯೇನೋ ನೀನು?
Answer:
ಆಯ್ಕೆ: ಎಚ್. ನಾಗವೇಣಿಯವರ ‘ಮೀಯುವ ಆಟ’ ಕೃತಿಯಿಂದ ಆರಿಸಿದ ಧಣಿಗಳ ಬೆಳ್ಳಿಲೋಟ ಎನ್ನುವ ಕತೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಹೂಳೆತ್ತುತ್ತಿದ್ದ ಕುದುಪನಿಗೆ ಧಣಿ ವೆಂಕಪ್ಪಯ್ಯ ಹೇಳುವ ಮಾತಿದು.
ವಿವರಣೆ: ಕುದುಪ ಚಿನ್ನಮ್ಮರು ಧಣಿಗಳ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಹೊಳೆಯಿಂದ ಹೂಳೆತ್ತಿ ತೆಂಗಿನ ಬುಡಕ್ಕೆ ಹಾಕುತ್ತಿದ್ದರು. ಮೂಳೆ ಮುರಿದು ಹೋಗುವಂತ ಈ ಕೆಲಸದ ನಡುವೆ ಸುಸ್ತಾದ ಕುದುಪ ಒಂದರೆ ಕ್ಷಣ ನೀರಲ್ಲಿ ಕುಸಿದು ಕುಳಿತಾಗ ಧಣಿಗಳ ಸಿಟ್ಟು ನೆತ್ತಿಗೇರಿತು. ಧಣಿ ವೆಂಕಪ್ಪಯ್ಯ ಕುದುಪನನ್ನು ಗದರಿಸುತ್ತಾ ಈ ಮೇಲಿನಂತೆ ಹೇಳುತ್ತಾರೆ. ಮೊದಲೇ ಈ ಸಂಸಾರದ ಮೇಲೆ ಆಪಾದನೆಯಿದೆ. ಈಗ ಈ ರೀತಿಯ ಬೈಗುಳಗಳಿಂದ ಆ ಸಂಸಾರ ಇನ್ನಷ್ಟು ನೋವನ್ನು ಅನುಭವಿಸುವಂತಾಯಿತು.
Question 8.
ಇದೇ ಲೋಟವಲ್ಲವೇ ತನ್ನ ಬೆವರಿನ ಬೆಲೆ ಕಳೆದದ್ದು.
Answer:
ಆಯ್ಕೆ: ಎಚ್. ನಾಗವೇಣಿಯವರ ‘ಮೀಯುವ ಆಟ’ ಕೃತಿಯಿಂದ ಆರಿಸಿದ ಧಣಿಗಳ ಬೆಳ್ಳಿಲೋಟ ಎನ್ನುವ ಕತೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಹೊಳೆಯಲ್ಲಿ ಕಳೆದು ಹೋದ ಬೆಳ್ಳಿಲೋಟಿ ಸಿಕ್ಕಿದಾಗ ಅದನ್ನು ಕೈಯಲ್ಲಿ ಹಿಡಿದು ಚಿನ್ನಮ್ಮ ತನಗೆ ತಾನೆ ಹೇಳಿಕೊಳ್ಳುತ್ತಾ ಪ್ರತಿಕ್ರಿಯಿಸಿದ ರೀತಿಯಿದು.
ವಿವರಣೆ: ಹಿಂದೆ ಧಣಿಗಳ ಬೆಳ್ಳಿಲೋಟ ಕಳೆದು ಹೋಗಿ ಆ ಅಪವಾದ ಕುದುಪ ಚಿನ್ನಮ್ಮರ ಕುಟುಂಬದ ಮೇಲೆ ಬಂದಿತ್ತು. ಹೊಳೆಯಲ್ಲಿ ಹೂಳೆತ್ತುವಾಗ ಅದೇ ಬೆಳ್ಳಿ ಲೋಟ ಕುದುಪನಿಗೆ ಸಿಕ್ಕಿತ್ತು. ಚಿನ್ನಮ್ಮ ಕುದುಪನ ಕೈಯಿಂದ ಬೆಳ್ಳಿಲೋಟವನ್ನು ತೆಗೆದುಕೊಂಡು ತಿರುಗಿಸಿ ತಿರುಗಿಸಿ ನೋಡುತ್ತಾಳೆ. ಆ ಲೋಟದ ಪರಿಚಯ ಅವಳಿಗೆ ಚೆನ್ನಾಗಿತ್ತು. ತನ್ನ ಸಂಸಾರಕ್ಕೆ ಅಪವಾದವನ್ನು ತಂದಿದ್ದ. ತನ್ನ ಸಂಸಾರವನ್ನು ಕಷ್ಟಕ್ಕೀಡು ಮಾಡಿದ್ದ ಬೆಳ್ಳಿ ಲೋಟದ ಮೇಲೆ ಕೋಪ ಬಂದಿತ್ತು. ಆಗ ಈ ಮೇಲಿನಂತೆ ಹೇಳುತ್ತಾ ಬೆಳ್ಳಿಲೋಟವನ್ನು ನೀರಿನ ಮಡುವಿಗೆ ಎಸೆದು ಬಿಡುತ್ತಾಳೆ. ಬೆಳ್ಳಿ ಲೋಟದ ಮೇಲೆ ಆಕೆಗೆ ಇರುವ ಸಿಟ್ಟಿನ ತೀವ್ರತೆಯನ್ನು ಇಲ್ಲಿ ಗುರುತಿಸಬಹುದು.
IV. ಐದಾರು ವಾಕ್ಯಗಳಲ್ಲಿ ಉತ್ತರಿಸಿ.
Question 1.
ಚಿನ್ನಮ್ಮನ ಕುಟುಂಬ ಹೊಳೆಯ ಬಗ್ಗೆ ಅಸಹನೆ ಹೊಂದಬಾರದೆಂದು ಲೇಖಕಿ ಬಯಸುವುದೇಕೆ?
Answer:
ಶಾಂಭವಿ ಹೊಳೆಯು ಇಡೀ ಕಥೆಯಲ್ಲಿ ಒಂದು ಜೀವಂತ ಪಾತ್ರವಾಗಿದೆ. ಚಿನ್ನಮ್ಮನ ಕುಟುಂಬಕ್ಕೆ ಹೊಳೆಯು ಧಣಿಗಳ ಬೆಳ್ಳಿಲೋಟವನ್ನು ಮುಳುಗಿಸಿಕೊಂಡಿದೆ ಮತ್ತು ಆ ಆಪಾದನೆಯನ್ನು ತಮ್ಮ ಕುಟುಂಬದ ಮೇಲೆ ಹಾಕಿದೆ ಎನ್ನುವ ಕೋಪವಿದೆ. ಮಗ ಗುಡ್ಡ ಈ ಕಾರಣಕ್ಕಾಗಿ ಪೆಟ್ಟು ತಿಂದಿದ್ದನು. ಚಿನ್ನಮ್ಮನಿಗೆ ಮುಂದಿನ ಮೂರು ವರ್ಷಗಳ ಕಾಲ ಪಡಿಯಿಲ್ಲದೇ ದುಡಿಯಬೇಕಾದ ಪರಿಸ್ಥಿತಿ. ಅಸಹಾಯಕತೆ, ಬಡತನ, ಅಪವಾದ ಈ ಎಲ್ಲಾ ಕಾರಣದಿಂದ ಚಿನ್ನಮ್ಮನ ಕುಟುಂಬ ಹೊಳೆಯ ಬಗ್ಗೆ ಆಸಹನೆ ಹೊಂದಿತ್ತು, ಆದರೆ ಲೇಖಕಿ ಚಿನ್ನಮ್ಮನ ಕುಟುಂಬ ಹೊಳೆಯ ಬಗ್ಗೆ ಅಸಹನೆ ಹೊಂದಬಾರದೆಂದು ಬಯಸುತ್ತಾರೆ. ಏಕೆಂದರೆ ಆ ಹೊಳೆ ಚಿನ್ನಮ್ಮನ ಕುಟುಂಬಕ್ಕೆ ಬೇಕೆಂದೇ ಈ ಆಪವಾದವನ್ನು ತಂದು ಹಾಕಿಲ್ಲ. ಹೊಳೆಗೂ ಚಿನ್ನಮ್ಮನ ಪುಟ್ಟ ಸಂಸಾರದ ಮೇಲೆ ವಾತ್ಸಲ್ಯವಿದೆ.
ಅದು ಆ ಕುಟುಂಬಕ್ಕೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡುತ್ತಿದೆ.ಎಂತಹ ಹೊಡೆಯುವ ಮಳೆಯಲ್ಲಾದರೂ ಕುದುಪನ ಗಾಳದ ಬಾಯಿಗೆ ಮೀನುಗಳನ್ನು ಸಿಲುಕಿಸುತಿತ್ತು. ತಾನು ಹರಿದು ಬರುವಾಗಲೆಲ್ಲ ತನ್ನ ಸೆರಗಿನಂಚಿನಲ್ಲಿರುವ ತೋಟಗಳಿಂದ ಆಗಾಗ ಒಂದಷ್ಟು ಸೌದೆ-ತೆಂಗಿನಕಾಯಿಗಳನ್ನು ಹೊತ್ತು ತಂದು ಕುದುಪನ ಕಣ್ಣಿಗೆ ಬೀಳಿಸುತಿತ್ತು. ಪಾತ್ರೆ ಪಗಡಿ, ಕೋಳಿ-ಕುರಿ, ಎಣಿ-ದೋಣಿ, ರೀಪು ಪಕ್ಕಾಸುಗಳನ್ನು ಹೊತ್ತು ತಂದು ಚಿನ್ನಮ್ಮ ಕುದುಪರ ಮಡಿಲಿಗೆ ಸುರಿಯುತ್ತದೆ. ಈ ಕುಟುಂಬದೊಂದಿಗೆ ಇಷ್ಟೊಂದು ಒಡನಾಟವಿಟ್ಟುಕೊಂಡಿರುವ ಹೊಳೆಯ ಬಗೆಗೆ ಬೆಳ್ಳಿಲೋಟದ ಕಾರಣಕ್ಕಾಗಿ ಆಸಹನೆ ಸಲ್ಲದೆಂದು ಲೇಖಕಿಯ ಅಭಿಪ್ರಾಯ.
Question 2.
ಧಣಿ ಹಾಗೂ ಹೊಳೆಯ ನಡುವಿನ ಸಮರವನ್ನು ಚಿತ್ರಿಸಿ.
Answer:
ನಿಜಕ್ಕೂ ಧಣಿ ವೆಂಕಪ್ಪಯ್ಯನವರ ಮಾತಿನಂತೆ ಹೇಳುವುದಾದರೆ ಗುಡ್ಡ ಪಾತ್ರೆ ಉಜ್ಜುತ್ತಿದ್ದುದು ಹೊಳೆಯ ಸೆರಗಲ್ಲಿ ಅಲ್ಲ. ವೆಂಕಪ್ಪಯ್ಯನವರ ತೆಂಗಿನ ತೋಟದ ಅಂಚಿನಲ್ಲಿ. ಆ ಹೊಳೆ ಆಡಿದ್ದೇ ಆಟ, ಹೂಡಿದ್ದೇ ಹೂಟ. ಮಳೆಗಾಲದಲ್ಲಿ ತೆಂಗಿನ ತೋಟದ ಅಂಚನ್ನು ಹೊಳೆಯು ಕೊಚ್ಚಿ ಹಾಕುತ್ತಿದ್ದರಿಂದ ಧಣಿ ವೆಂಕಪ್ಪಯ್ಯನವರು ಆ ಹೊಳೆಯನ್ನು “ಮಳೆಗಾಲ ಬಂದರೆ ಸಾಕು ಈ ಬಿಕನಾಸಿ ಹೊಳೆ ಊರಿಡೀ ತನ್ನ ಸೆರಗನ್ನೇ ಹಾಸಿ ಬಿಡುತ್ತದೆ… ಎಷ್ಟಗಲ ಸೆರಗು ಹಾಸಿದರೂ ಇನ್ನಷ್ಟು ದೂರಕ್ಕೆ ಹಾಸಬೇಕೆಂಬ ಚಟ ಇದಕ್ಕೆ…. ಎಂದು ಮೂದಲಿಸುತ್ತಿದ್ದರು. ಹೊಳೆಗೆ ಬಾಯಿ ಬರದಿದ್ದರೂ ಮಳೆಗಾಲ ಬಂದೊಡನೆ ಬರೀ ಕ್ರಿಯೆಯಲ್ಲೇ ತನ್ನ ವ್ಯಾಪ್ತಿತನ್ನ ಪರಿಹಾರ, ತನ್ನ ಬಲ ಎಷ್ಟು ಎಂಬುದನ್ನು ಮನವರಿಕೆ ಮಾಡಿ ಧಣಿಗಳಿಗೆ ಕಿರಿಕಿರಿ ಮೂಡಿಸುತಿತ್ತು.
ಹೊಳೆಯ ಈ ಉಪಟಳ ತಾಳಲಾರದೆ ಧಣಿಯವರು ಹೊಳೆ ಸೊರಗುವ ಕಾಲಕ್ಕೆ ತನ್ನ ಮೇಲುಸ್ತುವಾರಿಯಲ್ಲಿ ನದಿ ಸೆರಗನ್ನು ಆಚೆಗೆ ದೂಡುವಂತೆ ಪಾದೆಕಲ್ಲು, ಮುರಕಲ್ಲಿನ ಗಟ್ಟಿ ಪಂಚಾಂಗ ತೋಟಕ್ಕೂ, ನದಿಸೆರಗಿಗೂ ನಡುವೆ ದರೆ ಎಬ್ಬಿಸಿ ಎತ್ತರಿಸುತ್ತಾರೆ. ಪ್ರತಿ ವರ್ಷ ವೆಂಕಪ್ಪಯ್ಯ ಗದ್ದೆಯಂಚನ್ನು ನಾಲ್ಕು, ಐದು ಅಡಿ ಎತ್ತರಿಸಿದರೂ ಬೇಸಿಗೆಯಲ್ಲಿ ಅದನ್ನು ನೋಡಿಕೊಂಡು ಸುಮ್ಮನಿರುತ್ತಿದ್ದ ಹೊಳೆ, ‘ಗದ್ದೆಯಲ್ಲಿ ಬಿತ್ತುವುದನ್ನು ಮರಳ ದಿನ್ನೆ ಮೇಲೆ ಬಿತ್ತಿದೆಯಲ್ಲವಾ ಮಾರಾಯಾ..?’ ಎಂದು ಮನಸ್ಸಿನಲ್ಲೇ ಹೇಳಿಕೊಳ್ಳುವ ಹಾಗೆ ಮಳೆಗಾಲದಲ್ಲಿ ಮತ್ತೆ ಆ (ಅಂಚನ್ನು) ದರೆಯನ್ನು ಕೆಡವುತಿತ್ತು. ಬೇಸಿಗೆಯಲ್ಲಿ ವೆಂಕಪ್ಪಯ್ಯ ಹೊಳೆಗೆ ಅಡ್ಡಲಾಗಿ ದರೆಯನ್ನು ಎತ್ತರಿಸುವುದು, ಮಳೆಗಾಲದಲ್ಲಿ ಹೊಳೆ ಅದನ್ನು ಕೊಚ್ಚಿಕೊಂಡು ಹೋಗುವುದು ಮಾಮೂಲಾಗಿತ್ತು. ಈ ರೀತಿ ಧಣಿ ಹಾಗೂ ಹೊಳೆಯ ನಡುವಿನ ಸಮರ ಮುಂದುವರಿಯುತಿತ್ತು.
Question 3.
ಮುಸುರೆ ಪಾತ್ರೆಗಳು ನೀರು ಪಾಲಾದುದು ಹೇಗೆ?ಅವುಗಳನ್ನು ಮೇಲೆತ್ತಲು ಮಾಡಿದ ಪ್ರಯತ್ನಗಳೇನು?
Answer:
ಕುದುಪ ಚಿನ್ನಮ್ಮರ ಮಗ ಗುಡ್ಡ ಶಾಂಭವಿ ಹೊಳೆಯ ಅಂಚಿನಲ್ಲಿ ಧಣಿಗಳ ಮನೆಯ ಮುಸುರೆ ಪಾತ್ರೆಯನ್ನು ತಿಕ್ಕುತ್ತಿದ್ದ. ಆತನಿಗೆ ಹೊಳೆಯ ಅಂಚು ತುಳುವ ಹಲಸಿನಂತೆ ಮೆತ್ತಗಾಗಿರುವುದು ತಿಳಿದಿರಲಿಲ್ಲ. ಶಾಂಭವಿ ಹೊಳೆ ರಭಸವಾಗಿ ಹರಿಯುತ್ತಿದೆ. ಗುಡ್ಡ ಹಿಂದಿನ ದಿನ ರಾತ್ರಿಯ ಹರಿಕಥೆ ಪ್ರಸಂಗವನ್ನು ನೆನಪಿಸಿಕೊಳ್ಳುತ್ತಾ ಪಾತ್ರೆ ತೊಳೆಯುತ್ತಿದ್ದಾಗ ಕಾಲಡಿಯ ಮಣ್ಣು ಕುಸಿದು, ಪಾತ್ರೆಗಳ ಸಮೇತ ನೀರಿಗೆ ಬಿದ್ದನು. ಎರಡು ಕಂಚಿನ ಕೊಳಗ, ಎರಡು ಹಿತ್ತಾಳೆ ಗಿಂಡೆ, ಹತ್ತು ಹಿತ್ತಾಳೆ ಲೋಟ, ಎರಡು ಚೊಂಬು, ಆರು ಮರದ ಸೌಟು, ಎರಡು ಹಿತ್ತಾಳೆ ಸೌಟು, ಹತ್ತು ಕಂಚಿನ ಬಟ್ಟಲು.
ಎಂಟು ಹಿತ್ತಾಳೆ ತಟ್ಟಿ, ಒಂದು ಬಾಣಲೆ ನೀರು ಪಾಲಾದವು ಹಾಗೂ ಧಣಿಗಳ ಪತ್ನಿಗೆ ಅವರಪ್ಪ ಕೊಟ್ಟ ಒಂದು ಬೆಳ್ಳಿಲೋಟವೂ ಇದರ ಜೊತೆಗೆ ಸೇರಿತ್ತು. ಗುಡ್ಡ ಚಿಕ್ಕವನಾದರೂ ಚೆನ್ನಾಗಿ ಈಜು ಬಲ್ಲವನಾಗಿದ್ದ. ಈಜಿಕೊಂಡು ಮೇಲೆ ಬಂದವನು ಆಳುತ್ತಾ ಅಪ್ಪ ಕುದುಪನತ್ತ ಬಂದ ಧಣಿಗಳ ತೋಟದಲ್ಲಿ ತೆಂಗಿನ ಬುಡ ಬಿಡಿಸುತ್ತಿದ್ದ ಕುದುಪನಿಗೆ ಮಗನ ಮಾತು ಕೇಳಿ ಎದೆ ಬಡಿತ ನಿಂತಂತಾಯಿತು.
ಬಂದು ನೋಡಿದರೆ ಮುಸುರೆ ಪಾತ್ರೆಗಳೆಲ್ಲವೂ ನೀರು ಪಾಲಾಗಿತ್ತು. ಧಣಿಗಳಿಗೇನಾದರೂ ಈ ವಿಷಯ ತಿಳಿದರೆ ಅವರ ಸಿಟ್ಟಿನ ಭರಕ್ಕೆ ತಾವೆಲ್ಲರೂ ಹೊಳೆ ಪಾಲಾಗುವುದು ಖಂಡಿತ ಎಂದು ಆಲೋಚಿಸಿದವನೆ ತಟ್ಟನೆ ಮೈಯ ಬಟ್ಟೆಬರೆಗಳನ್ನೆಲ್ಲ ಜಾರಿಸಿ ಎಸೆದು ಹೊಳೆಯಲ್ಲಿಮುಳುಗಿ ನೆಲಕಚ್ಚಿರುವ ಪಾತ್ರೆಗಳನ್ನು ಹುಡುಕುತ್ತಾನೆ. ಕುಸಿದ ಮಣ್ಣಡಿಯಲ್ಲಿ ಸಿಗುವಷ್ಟು ಪಾತ್ರೆಗಳು ಸಿಕ್ಕವು. ಆದರೆ ಏನು ಮಾಡಿದರೂ ಧಣಿಗಳ ಮನೆಯ ಬೆಳ್ಳಿಲೋಟ ಸಿಗಲಿಲ್ಲ. ಕೊನೆಗೆ ಈ ಕುಟುಂಬವೇ. ಧಣಿಗಳಿಂದ ಅಪವಾದಕ್ಕೆ ಗುರಿಯಾಯಿತು.
Question 4.
ಬೆಳ್ಳಿಲೋಟ ಕಂಡಾಗ ಧಣಿಯಲ್ಲಿ ಆತಂಕ, ಗಾಬರಿ, ಭಯ ಉಂಟಾಗಲು ಕಾರಣವೇನು?
Answer:
ಕುದುಪ ಯಾವುದೋ ಒಂದು ಕುಲಗೆಟ್ಟ ಲೋಟವನ್ನು ನೀರೊಳಗೆ ಅದ್ದಿ ತೆಗೆದು ಚಿನ್ನಮ್ಮನ ಕೈಗೆ ಕೊಡುವುದನ್ನು ಧಣಿಗಳು ಮೌನವಾಗಿಯೇ ದಿಟ್ಟಿಸಿದರು. ಮಾನಗೆಟ್ಟ ಈ ಹುಚ್ಚು ಹೊಳೆ ಯಾವುದೋ ಮಳೆಗಾಲದಲ್ಲಿ ಯಾರದ್ದೋ ಮನೆ, ಮಟ ಮುಳುಗಿಸಿ ಹೊತ್ತು ತಂದಿರುವ ಲೋಟವಿರಬೇಕೆಂದು ಯೋಚಿಸಿದರು. ಈ ಹಾಳುಲೋಟದ ಜಗತ್ತಲ್ಲೇ ಮುಳುಗಿ ಹೋದ ಗಂಡ-ಹೆಂಡಿರ ಚಲನವಲನವನ್ನು ಕಿರಿದು ಕಣ್ಣಿಂದ ಮತ್ತಷ್ಟು ದಿಟ್ಟಿಸಿ ನೋಡಿದರು. ನಿಧಾನಕ್ಕೆ ಕೂತಲ್ಲಿಂದ ಎದ್ದು ಬಂದರು.
ಹಾಗೇ ಸದ್ದಿಲ್ಲದೆ ಬಂದ ಧಣಿಗಳು ನೆರಳಲ್ಲೇ ನಿಂತು ತನ್ನೆದುರು ನಡೆಯುತ್ತಿದ್ದ, ವ್ಯಾಪಾರವನ್ನು ಕಿರುಗಣ್ಣಿನಿಂದ ಗಮನಿಸುತ್ತಿದ್ದಂತೆ ಅವರ ಎದೆ ಬಡಿತದ ಲಯ ತಪ್ಪತೊಡಗಿತು. ಅವರ ಒಡಲ ಸಮಸ್ತ ವ್ಯವಹಾರಗಳು ಒಂದರೆಗಳಿಗೆ ಸ್ತಬ್ದಗೊಂಡಂತಾಯಿತು. ಚೆನ್ನಮ್ಮ ತನ್ನ ಕೈಲಿದ್ದ ಲೋಟ ತಿರುಗಿಸುತ್ತಿದ್ದಂತೆ ಅವರನ್ನೇ ಆಕೆ ತಿರುಗಿಸಿದಂತಾಯಿತು. ಏಕೆಂದರೆ ಆಕೆಯ ಕೈಲಿದ್ದುದು ತಮ್ಮ ಮನೆಯದೇ ಬೆಳ್ಳಿಲೋಟವೆಂಬ ಅರಿವು ಅವರಿಗೆ ಬಂತು. ಅದರ ಕಂಟ ಏಳು ಎಸಳುಗಳ ಹೂವಿನಂತಿರುವುದು. ಕಳೆದ ನಲ್ವತ್ತು ವಸಂತಗಳಿಂದ ತಮ್ಮ ದಾಂಪತ್ಯ ಜೀವನಕ್ಕೆ ಮೂಕ ಸಾಕ್ಷಿಯಾಗಿದ್ದ ಲೋಟವಿದು ಎಂಬ ಅರಿವು ಮೂಡಿ ಭೀತರಾದರು. ಕುದುಪ ಚಿನ್ನಮ್ಮ ಗುಡ್ಡರ ಮೇಲೆ ಕಳ್ಳತನದ ಅಪಾದನೆ ಹೊರಿಸಿದ್ದ ತಮ್ಮ ಬಗ್ಗೆ ಆತಂಕ ಗಾಬರಿ, ಭಯ ಉಂಟಾಯಿತು.
Question 5.
ಚಿನ್ನಮ್ಮ ಬೆಳ್ಳಿಲೋಟವನ್ನು ಮತ್ತೆ ಹೊಳೆಗೆ ಎಸೆಯಲು ಕಾರಣವೇನು? ವಿಶ್ಲೇಷಿಸಿ.
Answer:
ಕುದುಪ ಚಿನ್ನಮ್ಮನ ಕೈಲಿದ್ದ ಬೆಳ್ಳಿಲೋಟವನ್ನೊಮ್ಮೆ ಧಣಿಯವರ ಪರಿಧಿಗೆ ಒಪ್ಪಿಸಿಬಿಡಬೇಕೆಂದು ಕಾತುರನಾಗಿ ಆ ಲೋಟ ಚಿನ್ನಮ್ಮನಿಂದ ತನ್ನ ಕೈಗೆ ಹಸ್ತಾಂತರಗೊಳ್ಳುವ ಕ್ಷಣಕ್ಕಾಗಿ ಕಾಯುತ್ತಿದ್ದ. ಬೆಳ್ಳಿಲೋಟ ಸಿಕ್ಕಿದ್ದು ಆತನಿಗೆ ಅತ್ಯಂತ ಸಂತೋಷವಾಗಿತ್ತು. ಆದರೆ ಚಿನ್ನಮ್ಮ ಅದನ್ನು ತಿರುಗಿಸಿ ನೋಡುತ್ತಿದ್ದಂತೆ ಆಕೆಯ ಒಡಲಲ್ಲಿ ಅದೆಷ್ಟೋ ಭಾವನೆಗಳು ಗಿರಕಿ ಹೊಡೆಯತೊಡಗಿದವು. ತನ್ನ ಬೆವರಿನ ಬೆಲೆ ಕಳೆದ, ಕಳ್ಳತನದ ಕಿರೀಟವನ್ನು ತನ್ನ ಮುರುಕಲು ಗುಡಿಸಲ ಚಾವಣೆಗೆ ಜೋಡಿಸಿದ ಆ ಲೋಟದ ಮೇಲೆ ವಿಪರೀತ ಕೋಪ ಬರುತ್ತದೆ. ಲೋಟ ಬೆಳ್ಳಿಯದ್ದಾದರೇನು ಗುಣ ಮಣ್ಣಿಗಿಂತಲೂ ಬುರ್ನಾಸು, ಮೂರ್ಕಾಸಿನದು ಎಂದು ಯೋಚಿಸುತ್ತಾಳೆ.
ಈ ಬೆಳ್ಳಿಲೋಟದಿಂದಾಗಿ ತನ್ನ ಕುಟುಂಬ ಇದುವರೆಗೆ ಅನುಭವಿಸಿದ ನೋವು, ಅವಮಾನ ಪಟ್ಟ ಪಾಡು, ಪರಿತಾಪಗಳೆಲ್ಲ ಚಿನ್ನಮ್ಮನ ಮನಸ್ಸಿನಲ್ಲಿ ದಿಗಿಣ ತೆಗೆದು ಮೇಲೆದ್ದು ಬಂದು ಆಕೆಯ ಯೋಚನಾಶಕ್ತಿಯನ್ನು ಕ್ಷಣಕಾಲ ಕಸಿದುಕೊಂಡಿತು.ಒಡಲ ಪಿತ್ತ ಒಂದರೆಕ್ಷಣ ಕೆರಳಿದಂತಾಯಿತು. ಪೂರ್ವಾಭಿಮುಖವಾಗಿ ನಡೆದು ದೂರದಲ್ಲಿದ್ದ ಹೊಳೆಯ ಆಳ ಮಡುವಿನತ್ತ ಬೆಳ್ಳಿಲೋಟವನ್ನು ಎಸೆದುಬಿಟ್ಟಳು. ಒಂದು ವೇಳೆ ಬೆಳ್ಳಿಲೋಟವನ್ನು ಧಣಿಗಳಿಗೆ ಹಿಂದಿರುಗಿಸಿದ್ದರೆ ಅವಳ ಕುಟುಂಬ ಆಪಾದನೆಯಿಂದ ಪಾರಾಗಬಹುದಿತ್ತು.
ಆದರೆ ಅದುವರೆಗೆ ಆ ಕುಟುಂಬ ಅನುಭವಿಸಿದ ಸಂಕಟಕ್ಕೆ ಪರಿಹಾರ ಸಿಗಲಾರದು. ಲೋಟ ಕದ್ದ ಆಪಾದನೆಯಿಂದ ಅನುಭವಿಸಿದ ಯಾತನೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.ತನ್ನ ಕುಟುಂಬ ಆಪಾದನೆಯಿಂದ ಹೊರಬರುವುದಕ್ಕಿಂತ ಆ ಲೋಟವನ್ನು ಮತ್ತೆ ನೀರಿಗೆ ಎಸೆಯುವ ಮೂಲಕ ತನ್ನ ಸಿಟ್ಟನ್ನು ಹೊರಹಾಕುತ್ತಾಳೆ. ಈ ಮೂಲಕ ತಮ್ಮ ಕುಟುಂಬದ ಮೇಲಿನ ಅಪವಾದವನ್ನು ನಿವಾರಿಸಿಕೊಳ್ಳುವ ಅವಕಾಶ ಇದ್ದರೂ ಚಿನ್ನಮ್ಮ ಆ ಸಾಧ್ಯತೆಯನ್ನು ನಿರಾಕರಿಸುತ್ತಾಳೆ.
V. ಭಾಷಾಭ್ಯಾಸ ಪ್ರಶ್ನೆಗಳಿಗೆ ಉತ್ತರಗಳು ಹೀಗಿವೆ:
1. ನಿಮ್ಮ ಪ್ರದೇಶದ ಹತ್ತು ಪ್ರಾದೇಶಿಕ ಪದಗಳು (ಉದಾಹರಣೆಗೆ: ಬೆಂಗಳೂರು ಗ್ರಾಮಾಂತರ ಅಥವಾ ಮೈಸೂರು ಭಾಷೆ):
(ಪ್ರಾದೇಶಿಕ ಭಾಷೆ ಪ್ರಕಾರ ಬದಲಾಗಬಹುದು – ಇಲ್ಲಿ ಸಾಮಾನ್ಯ ದಕ್ಷಿಣ ಕನ್ನಡ/ಮಂಡ್ಯ ಭಾಗದ ಪದಗಳನ್ನು ಬಳಸಲಾಗಿದೆ)
- ಗೊಬ್ಬೆ – ಮಳೆಗಾಲದ ಬೂದು ಹೋಲುವ ಆಕಾಶ
- ಕಣ್ಣುಡಿ – ಕಿಟಕಿ
- ಗುಡಗು – ಬಡಿತ ಅಥವಾ ಗಟ್ಟಿ ಶಬ್ದ
- ಚಲ್ಲೆ – ಬಟ್ಟೆ ತುಂಡು
- ಬುದ್ದಿ – ಹೊತ್ತು
- ಕುಂಜ – ಕುಣಿತದ ಸ್ಥಳ
- ತಕಟಕ – ವೇಗದಿಂದ
- ಮುಚುಕು – ಮುಚ್ಚುವುದು
- ತಪಾಳೆ – ಪತ್ರ/ಅಂಚೆ
- ಚಿಕನ – ಚಿಕ್ಕದಾದ
2. ನಿಮ್ಮ ಭಾಗದಲ್ಲಿರುವ ಈ ಬಗೆಯ ದೇಸಿ ಪ್ರಯೋಗಗಳು (ದೇಶಿ ಅಡುಗಾಟದ ಹೇಳಿಕೆಗಳು):
- “ಆ ಬುದ್ಧಿಗೆ ಮಾತು ಹೇಳಿದಂಗೆ, ಗೋಳಿಗೆ ಹರಳು ಹೇಳಿದಂಗೆ!”
(ಅರ್ಥ: ಯಾರಿಗೂ ಪ್ರಯೋಜನವಾಗದ ಸಲಹೆ) - “ಅವನಿಗೆ ಅಮ್ಮ ತಿನ್ನಿಸಿದ್ದಂಗೆ ಅಯ್ಯಾ ತಿಂದ!”
(ಅರ್ಥ: ಇತರರಿಂದ ಎಲ್ಲವನ್ನೂ ಮಾಡಿಸಿಕೊಂಡು ಬರುವ ವ್ಯಕ್ತಿ) - “ಮೆಟ್ಟಿಲ ಮೇಲೆ ದೊಡ್ಡ ಮನಸ್ಸು!”
(ಅರ್ಥ: ಒಬ್ಬ ವ್ಯಕ್ತಿಯ ಮಾನಸಿಕ ಸ್ಥಿತಿ ಪರಿಸ್ಥಿತಿಗೆ ಅನುರೂಪವಿಲ್ಲ) - “ಬಾಲಬಾಲಿಗೆ ಬುದ್ಧಿ ಕೊಡುವ!”
(ಅರ್ಥ: ಸ್ವತಃ ಬುದ್ಧಿಯಿಲ್ಲದವನು ಇತರರಿಗೆ ಬುದ್ಧಿವಾದ ನೀಡುವ)
3. ಭಾಷಿಕ ಬದಲಾವಣೆ ಹೊಂದಿದ ಪದಗಳು:
- ಗಂಡು > ಗರಡು > ಗಡ್ಡು
- ಬೆಳ್ಳೆ > ಬೆರಳೆ > ಬೆದ್ದೆ
- ನೆನೆ > ನೆರೆ > ನೆರೆದು
- ಕಾಡು > ಕಾಡೆ > ಗಡ್ಡೆ
- ಬಣ್ಣ > ಬಳ್ಳೆ > ಬಡ್ಡೆ
4. ವ್ಯಂಗ್ಯ ಸ್ಪಷ್ಟನೆ:
“ಮುಸುರೆ ಪಾತ್ರೆಗಳನ್ನು ನುಂಗದ ಹೊಳೆ ಇವತ್ತು ನನ್ನಪ್ಪ ಮದುವೆಯಲ್ಲಿ ಕೊಟ್ಟ ಬೆಳ್ಳಿಲೋಟವನ್ನು ನುಂಗಿತನಾ“
ಈ ವಾಕ್ಯದಲ್ಲಿ ‘ವ್ಯಂಗ್ಯ’ ಇದೆ. ಇಲ್ಲಿ ಹೊಳೆ ಎಂದರೆ ನದಿಯು, ಸಾಮಾನ್ಯವಾಗಿ ಮಣ್ಣಿನ, ಕಸ ಅಥವಾ ಇತರ ತ್ಯಾಜ್ಯ ವಸ್ತುಗಳನ್ನು ನುಂಗುತ್ತದೆ. ಆದರೆ ‘ಬೆಳ್ಳಿಲೋಟ’ (ಬೆಳ್ಳಿ ಪಾತ್ರೆ) ನುಂಗುತ್ತದೆ ಎಂಬುದು ಅಸಾಧ್ಯ. ಹೀಗಾಗಿ ಈ ಮಾತಿನಲ್ಲಿ ನದಿಯ ಅತಿವ್ಯಾಪನ ಅಥವಾ ವಿಪತ್ತು ಸೂಚಿಸುತ್ತಾ, ದುರಂತವನ್ನು ವ್ಯಂಗ್ಯಾತ್ಮಕವಾಗಿ ಸೂಚಿಸಲಾಗಿದೆ.
5. ಣ > ಳ ಕಾರ ಬದಲಾವಣೆಯ ಉದಾಹರಣೆಗಳು:
- ಕಣ – ಕಳ
- ಗಾಣ – ಗಾಳ
- ಬಣ್ಣ – ಬಳ್ಳ
- ಜಾಣ – ಜಾಳ
- ತಣ – ತಳ
6. ಪ > ಹ ಕಾರ ಬದಲಾವಣೆಯ ನಾಲ್ಕು ಉದಾಹರಣೆಗಳು:
- ಪಸಿರು > ಹಸಿರು
- ಪಟ್ಟಿ > ಹಟ್ಟಿ
- ಪಾಡು > ಹಾಡು
- ಪಾಪ > ಹಾಪ
ಲೇಖಕರ ಪರಿಚಯ
ಡಾ| ಎಚ್. ನಾಗವೇಣಿ (ಜನನ : ೨೯.೧೧.೧೯೬೨): ಆಧುನಿಕ ಕನ್ನಡ ಸಾಹಿತ್ಯದ
ಮಹತ್ವದ ಲೇಖಕಿಯರಲ್ಲಿ ಎಚ್. ನಾಗವೇಣಿ ಒಬ್ಬರು. ನಾಗವೇಣಿಯವರು ಮಂಗಳೂರಿನ ಹೊನ್ನಕಟ್ಟೆ ಎಂಬಲ್ಲಿ ಜನಿಸಿದರು. ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕೊಲ್ಕತ್ತಾದ ರಾಷ್ಟ್ರೀಯ ಗ್ರಂಥಾಲಯದ ಕೇಂದ್ರೀಯ ಪರಾವರ್ತನೆಯಲ್ಲಿ ಸೇವೆ ಸಲ್ಲಿಸಿ ಈಗ ಹಂಪಿ ಕನ್ನಡ ವಿ.ವಿ.ಯಲ್ಲಿ ಮುಖ್ಯ ಗ್ರಂಥಪಾಲಕಿ ಆಗಿದ್ದಾರೆ. ಹೊಸ ಕಥನ ಶೈಲಿಯನ್ನು ರೂಢಿಸಿಕೊಂಡಿರುವ ನಾಗವೇಣಿಯವರು ಕರಾವಳಿಯ ಪರಿಸರವನ್ನು ತಮ್ಮ ಕಥನಗಳಲ್ಲಿ ಆಪ್ತವಾಗಿ ಚಿತ್ರಿಸಿದ್ದಾರೆ.
ಗಾಂಧಿ ಬಂದ ಕಾದಂಬರಿ, ನಾಕನೇ ನೀರು, ಮೀಯುವ ಆಟ ಇವರ ಕಥಾಸಂಕಲನಗಳು, ವಸುಂಧರೆಯ ಗ್ಯಾನ ಪ್ರಬಂಧಗಳ ಸಂಕಲನ, ಸೂರ್ಯನಿಗೊಂದು ವೀಳ್ಯ ಅಂಕಣ ಬರಹಗಳ ಸಂಗ್ರಹ, ನವೋದಯದ ಕತೆಗಾರ್ತಿ ಗೌರಮ್ಮ, ರಂಗಸಂಪನ್ನ ಕಂಬಾರ, ಸಾರ-ವಿಸ್ತಾರ, ತಿರುಳು ತೋರಣ ಇವುಗಳು ಇವರ ಇನ್ನಿತರ ಪ್ರಮುಖ ಕೃತಿಗಳು. ಇವರ ‘ಗಾಂಧಿ ಬಂದ’ ಕಾದಂಬರಿಯು ರಂಗಕೃತಿಯಾಗಿ ರೂಪಾಂತರಗೊಂಡು ಜನಪ್ರೀತಿ ಗಳಿಸಿದೆ. ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಚದುರಂಗ ಪ್ರಶಸ್ತಿ, ಎಸ್.ಎಸ್. ಭೂಸನೂರಮಠ ಪ್ರಶಸ್ತಿ, ಗೀತಾ ದೇಸಾಯಿ ಪ್ರಶಸ್ತಿ ಇನ್ನೂ ಮುಂತಾದ ಪುರಸ್ಕಾರಗಳು ಇವರಿಗೆ ಸಂದಿವೆ.
‘ಧಣಿಗಳ ಬೆಳ್ಳಿಲೋಟ’ ಕತೆಯಲ್ಲಿ ‘ಹೊಳೆ’ ಒಂದು ಪಾತ್ರವಾಗಿ ಬಂದಿದೆ. ಉಳ್ಳವರು ತಮ್ಮ ಸ್ವಾರ್ಥ. ಆಮಿಷಕ್ಕೆ ಬಡವರನ್ನು ಧಾರುಣವಾಗಿ ದುಡಿಸಿಕೊಳ್ಳುವ ರೀತಿ ಅಮಾನುಷವಾದುದು. ಶೋಷಿತರು ತಮ್ಮ ನ್ಯಾಯಕ್ಕೆ, ಜೀವನ ಮೌಲ್ಯಕ್ಕೆ ಭಂಗ ಬಂದಾಗ ಹೇಗೆ ಆಕ್ರೋಶಗೊಳ್ಳುತ್ತಾರೆ ಎಂಬುದು ಈ ಕತೆಯಲ್ಲಿ ಮಾರ್ಮಿಕವಾಗಿ ಚಿತ್ರಣಗೊಂಡಿದೆ.