2nd PUC Kannada Question and Answer – Kannadavannu Kattuva Kelasa
Looking for 2nd PUC Kannada textbook answers? You can download Chapter 16: Kannadavannu Kattuva Kelasa Questions and Answers PDF, Notes, and Summary here. 2nd PUC Kannada Gadyabhaga solutions follow the Karnataka State Board Syllabus, making it easier for students to revise and score higher in exams.
Karnataka 2nd PUC Kannada Textbook Answers—Reflections Chapter 16
Kannadavannu Kattuva Kelasa Questions and Answers, Notes, and Summary
2nd PUC Kannada Gadyabhaga Chapter
ಕನ್ನಡವನ್ನು ಕಟ್ಟುವ ಕೆಲಸ
Kannadavannu Kattuva Kelasa

Scroll Down to Download Kannadavannu Kattuva Kelasa PDF
I.ಒಂದು ವಾಕ್ಯದಲ್ಲಿ ಉತ್ತರಿಸಿ:
Question 1.
ಎ.ಆರ್.ಕೃಷ್ಣಶಾಸ್ತ್ರಿಗಳು ಎಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು?
Answer:
ಎ.ಆರ್.ಕೃಷ್ಣಶಾಸ್ತ್ರಿಗಳು ಹೈದರಾಬಾದ್ ನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
Question 2.
ನಮ್ಮ ದೇಶದಲ್ಲಿ ಖಿಲವಾಗಿ ಹೋದ ಧರ್ಮ ಯಾವುದು?
Answer:
ನಮ್ಮ ದೇಶದಲ್ಲಿ ಖಿಲವಾಗಿ ಹೋದ ಧರ್ಮ ಬೌದ್ಧ ಧರ್ಮ.
Question 3.
ಪ್ರಾಂತೀಯ ಭಾಷೆಗಳ ಸ್ಥಾನವನ್ನು ಆಕ್ರಮಿಸುತ್ತಿರುವ ಭಾಷೆಗಳಾವುವು?
Answer:
ಪ್ರಾಂತೀಯ ಭಾಷೆಗಳ ಸ್ಥಾನವನ್ನು ಆಕ್ರಮಿಸುತ್ತಿರುವ ಭಾಷೆಗಳು ಇಂಗ್ಲೀಷ್ ಮತ್ತು ಹಿಂದಿ.
Question 4.
ಯಾವ ಮರ್ಯಾದೆಯನ್ನು ನಾವು ಮೀರಬಾರದು?
Answer:
ಯಾವ ಯಾವ ಭಾಷೆಗೆ ಯಾವ ಯಾವ ಸ್ಥಾನವಿರಬೇಕೋ ಆ ಮರ್ಯಾದೆಯನ್ನು ನಾವು ಮೀರಬಾರದು
Question 5.
ಸ್ಥಳೀಯ ಭಾಷೆ ಕಲಿಯದ ಅನ್ಯ ಭಾಷಿಕರು ಏನಾಗುತ್ತಾರೆ?
Answer:
ಸ್ಥಳೀಯ ಭಾಷೆ ಕಲಿಯದ ಅನ್ಯ ಭಾಷಿಕರು ದ್ವೀಪ ಜೀವಿಗಳಾಗಿ ಉಳಿಯುತ್ತಾರೆ.
Question 6.
ಯಾವುದು ನಮ್ಮ ಮೈಗೆ ಹತ್ತುವುದು?
Answer:
ನಮ್ಮ ಭಾಷೆಯಲ್ಲಿ ಓದಿದ್ದೇ ನಮ್ಮ ಮೈಗೆ ಹತ್ತುವುದು.
Question 7.
ಕನ್ನಡದ ಮೂಲಕ ಕಲಿತು ಶ್ರೇಷ್ಠ ವಿಜ್ಞಾನಿಯಾದವರು ಯಾರು?
Answer:
ಕನ್ನಡದ ಮೂಲಕ ಕಲಿತು ಶ್ರೇಷ್ಠ ವಿಜ್ಞಾನಿಯಾದವರು ಡಾ||ಸಿ.ಎನ್.ಆರ್.ರಾವ್ (ಚಿಂತಾಮಣಿ ನಾಗೇಶ ರಾಮಚಂದ್ರರಾವ್)
Question 8.
ತಮ್ಮ ರಾಜ್ಯದಲ್ಲಿ ತಾವೇ ತಬ್ಬಲಿಗಳಾಗುತ್ತಿರುವವರು ಯಾರು?
Answer:
ತಮ್ಮ ರಾಜ್ಯದಲ್ಲಿ ತಾವೇ ತಬ್ಬಲಿಗಳಾಗುತ್ತಿರುವವರು ಕನ್ನಡಿಗರು.
Question 9.
ಬದುಕು ಯಾವುದನ್ನು ಬಿಟ್ಟು ಇರುವುದಿಲ್ಲ?
Answer:
ಬದುಕು ಭಾಷೆಯನ್ನು ಬಿಟ್ಟು ಇರುವುದಿಲ್ಲ.
Question 10.
ಕನ್ನಡದ ಸಮಸ್ಯೆಗಳಿಗೆ ಪರಿಹಾರ ದೊರಕಿಸಲು ನಾವು ಏನು ಮಾಡಬೇಕು?
Answer:
ಪ್ರತಿಯೊಬ್ಬ ಕನ್ನಡಿಗನೂ ಪ್ರತಿಯೊಂದು ಅಂಗುಲದಲ್ಲಿಯೂ ಕನ್ನಡಿಗನಾಗಬೇಕು. ಆಗ ಮಾತ್ರ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ.
II. ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ:
Question 1.
ಲೇಖಕರಲ್ಲಿ ಕನ್ನಡ ಪ್ರೀತಿ ಸ್ಪುರಿಸಿದ್ದು ಹೇಗೆ?
Answer:
ಲೇಖಕರಲ್ಲಿ ಮಾಸ್ತಿ, ಕುವೆಂಪು, ತೀನಂಶ್ರೀ ಅವರ ಪದ್ಮಗಳನ್ನು ಪಠ್ಯಪುಸ್ತಕಗಳಲ್ಲಿ ಓದಿದಾಗ ಕನ್ನಡದ ಪ್ರೀತಿ ಸ್ಪುರಿಸಿತು.
Question 2.
ಎ.ಆರ್.ಕೃಷ್ಣಶಾಸ್ತ್ರಿಗಳ ಭಾಷಣ ಓದಿ ಲೇಖಕರಲ್ಲಿ ಮೂಡಿದ ಭಾವನೆಗಳಾವುವು?
Answer:
ಎ.ಆರ್.ಕೃಷ್ಣಶಾಸ್ತ್ರಿಗಳ ಭಾಷಣ ಓದಿ ಲೇಖಕರ ಹದಿಹರೆಯದ ಮನಸ್ಸಿನಲ್ಲಾದ ಖೇದವನ್ನು, ಭಯವನ್ನು, ಅಸಹಾಯಕತೆಯನ್ನು, ಕ್ರೋಧವನ್ನು ಈ ಹೊತ್ತು ಅನುಭವಿಸುತ್ತಿದ್ದಾರೆ. ಅಲ್ಲದೆ ಅಂದೇ ಕನ್ನಡದ ಕಾರಣಕ್ಕಾಗಿ ತಮ್ಮನ್ನು ತಾವು ಒಪ್ಪಿಸಿಕೊಂಡಿದ್ದಾಗಿ ಲೇಖಕರು ಹೇಳಿದ್ದಾರೆ.
Question 3.
ಕರ್ನಾಟಕದಲ್ಲಿ ಕನ್ನಡಕ್ಕೆ ಯಾವ ಸ್ಥಾನವಿರಬೇಕೆಂದು ಹಾಮಾನಾ ಆಪೇಕ್ಷಿಸಿದ್ದಾರೆ?
Answer:
ಯಾವ ಯಾವ ಭಾಷೆಗೆ ಯಾವ ಯಾವ ಸ್ಥಾನವಿರಬೇಕೋ ಆ ಮರ್ಯಾದೆಯನ್ನು ನಾವು ಮೀರಬಾರದು. ಕರ್ನಾಟಕದಲ್ಲಿ ಕನ್ನಡವೇ ಪ್ರಥಮ, ಪ್ರಧಾನ, ರಾಜ, ರಾಣಿ, ರಾಜಕುಮಾರ ಎಲ್ಲ. ಮಿಕ್ಕ ಯಾವ ಭಾಷೆಯಾದರೂ ಇಲ್ಲಿ ಸೇವಕರ ಸ್ಥಾನದಲ್ಲಿರಬೇಕು.
Question 4.
ಕೇಂದ್ರದ ರೈಲು, ಅಂಚೆ ಇಲಾಖೆಗಳು ಯಾವ ಧೋರಣೆ ಬೆಳೆಸಿಕೊಂಡಿವೆ?
Answer:
ರೈಲ್ವೇ, ಅಂಚೆ ಮತ್ತು ತಂತಿ ಇಲಾಖೆಗಳೂ ಪ್ರಾದೇಶಿಕ ಭಾಷೆಗಳ ಮೇಲೆ ಸಾಕಷ್ಟು ಮಲತಾಯಿ ಧೋರಣೆ ಬೆಳೆಸಿಕೊಂಡಿದೆ. ಕನ್ನಡ ಊರಿನ ಸಣ್ಣಪುಟ್ಟ ಊರುಗಳಲ್ಲಿರುವ ರೈಲ್ವೇ ಸ್ಟೇಷನ್ನುಗಳಲ್ಲಿಯೂ ಹಿಂದಿ ಇಂಗ್ಲಿಷ್‌ಗಳೇ ರಾರಾಜಿಸುತ್ತಿದೆ.
Question 5.
ತ್ರಿಭಾಷಾ ಸೂತ್ರದ ಬಳಕೆ ಹೇಗಿರಬೇಕು?
Answer:
ಕೇಂದ್ರ ಸರ್ಕಾರದ ಕಚೇರಿಗಳ ಎಲ್ಲಾ ಸೂಚನೆಗಳು, ಎಲ್ಲಾ ಫಾರಂಗಳು, ಎಲ್ಲಾ ಬರವಣಿಗೆಯ ವ್ಯವಹಾರಗಳು ಕ್ರಮವಾಗಿ ಪ್ರಾದೇಶಿಕ ಭಾಷೆ ಹಿಂದಿ ಮತ್ತು ಇಂಗ್ಲೀಷ್ಗಳಲ್ಲಿರಬೇಕು. ಇದೇ ತ್ರಿಭಾಷಾ ಸೂತ್ರದ ಬಳಕೆ.
Question 6.
ನಮ್ಮ ಸಾರ್ವಜನಿಕರ ಶಾಲೆಗಳ ಬಗ್ಗೆ ಲೇಖಕರ ಅಭಿಪ್ರಾಯವೇನು?
Answer:
ಕುಸಿದು ಬೀಳುತ್ತಿರುವ ಕಟ್ಟಡಗಳು, ದೊಡ್ಡಿಯಾದ ತರಗತಿಗಳು, ಅಧ್ಯಾಪಕರಿಲ್ಲದ ತರಗತಿಗಳು, ಪಾಠ ಹೇಳದ ಅನರ್ಹ ಅಧ್ಯಾಪಕರು, ದಿನ ಬೆಳಗಾದರೆ ರಜೆ, ಶಿಸ್ತಿಲ್ಲದ ವ್ಯವಸ್ಥೆ, ಮೂತ್ರದ ವಾಸನೆಯ ಪರಿಸರ ಇದು ನಮ್ಮ ಸರ್ಕಾರಿ ಶಾಲೆಗಳ ಸ್ಥಿತಿ. ಎಲ್ಲಿಯವರೆಗೆ ನಮ್ಮ ಸಾರ್ವಜನಿಕ ಶಾಲೆಗಳ ಸ್ಥಿತಿಗತಿಗಳು ಉತ್ತಮವಾಗಿರುವುದಿಲ್ಲವೋ ಅಲ್ಲಿಯವರೆಗೆ ಶಿಕ್ಷಣದಲ್ಲಿ ಕನ್ನಡ ಆಕರ್ಷಕವೆನಿಸುವುದಿಲ್ಲ.
Question 7.
ಕನ್ನಡದ ಸಮಸ್ಯೆಗಳು ಎಲ್ಲಿಯವರೆಗೂ ಇದ್ದೇ ಇರುತ್ತದೆ?
Answer:
ಎಲ್ಲಿಯವರೆಗೂ ಕನ್ನಡ ನಮ್ಮ ಆಡಳಿತ, ಶಿಕ್ಷಣದಲ್ಲಿ ಪ್ರಥಮವೂ ಪ್ರಧಾನವೂ ಆಗಿರುವುದಿಲ್ಲವೋ, ಎಲ್ಲಿಯವರೆಗೆ ಅದು ಜನಜೀವನವನ್ನು ತುಂಬಿಕೊಳ್ಳುವುದಿಲ್ಲವೋ, ಎಲ್ಲಿಯವರೆಗೆ ಕನ್ನಡಿಗರು ಸ್ವಾಭಿಮಾನಿಗಳಾಗುವುದಿಲ್ಲವೋ ಅಲ್ಲಿಯವರೆಗೂ ಕನ್ನಡದ ಸಮಸ್ಯೆಗಳು ಇದ್ದೇ ಇರುತ್ತದೆ.
Question 8.
ಕನ್ನಡದ ಬಗ್ಗೆ ಮಾತಾಡಲು ನಾವು ಯೋಗ್ಯತೆ ಗಳಿಸುವುದು ಯಾವಾಗ?
Answer:
ನಮ್ಮ ಮಕ್ಕಳನ್ನು ಯಾವ ಶಾಲೆಗಳಲ್ಲಿ ಓದಿಸುತ್ತಿದ್ದೇವೆ? ನಾವು ಯಾವ ಪತ್ರಿಕೆಯನ್ನು ಓದುತ್ತಿದ್ದೇವೆ? ನಾವು ನೋಡುವುದು ಯಾವ ಸಿನಿಮಾಗಳನ್ನು? ನಮ್ಮ ಮನೆಯ ಬೋರ್ಡು ಯಾವ ಭಾಷೆಯಲ್ಲಿದೆ? ಲಗ್ನ ಪತ್ರಿಕೆ, ಲೆಟರ್‌ಹೆಡ್ ಅಚ್ಚಾಗಿರುವುದು ಯಾವ ಭಾಷೆಯಲ್ಲಿ ಇಂಥಹ ನೂರು ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕು? ಅವುಗಳ ಉತ್ತರ ನಮ್ಮನ್ನು ಚುಚ್ಚದಿದ್ದರೆ ಮಾತ್ರ ಕನ್ನಡದ ಬಗ್ಗೆ ಮಾತಾಡಲು ನಾವು ಯೋಗ್ಯತೆ ಗಳಿಸಿದ್ದೇವೆ ಎಂದು ಅರ್ಥ.
III. ಸಂದರ್ಭ ಸಹಿತ ವಿವರಿಸಿ:
Question 1.
ಒಂದು ಅಂಗೈ ಅಗಲ ಬಿಟ್ಟರೆ ಮತ್ತೆಲ್ಲಿಯೂ ನೋಡಲಾರಿರಿ.
Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ಡಾ| ಹಾ.ಮಾ. ನಾಯಕರವರು ಬರೆದ ಕನ್ನಡವನ್ನು ಕಟ್ಟುವ ಕೆಲಸ ಎನ್ನುವ ಪಾಠದಿಂದ ಆರಿಸಲಾಗಿದೆ.
ಸಂದರ್ಭ: ಎ.ಆರ್ ಕೃಷ್ಣಶಾಸ್ತ್ರಿಗಳ ಹೈದರಾಬಾದ್ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದ ಕುರಿತಾಗಿ ಹಾ.ಮಾ. ನಾಯಕರು ಉಲ್ಲೇಖಿಸುವ ಸಂದರ್ಭವಿದು.
ವಿವರಣೆ: ಎ.ಆರ್ ಕೃಷ್ಣಶಾಸ್ತಿಗಳು ಹೈದರಾಬಾದ್ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡುವಾಗ ನಮ್ಮ ಬೌದ್ಧಧರ್ಮ ಖಿಲವಾಗಿ ಹೋದಂತೆ ಸಂಸ್ಕೃತವೂ ಆಗಿಹೋಗುವುದಾದರೆ ಅದು ಹೊರದೇಶದಲ್ಲಿ ಬದುಕಿರುತ್ತದೆ. ಆದರೆ ಕನ್ನಡವನ್ನು ಇಂಡಿಯ ದೇಶದ ದಕ್ಷಿಣ ಭಾಗದಲ್ಲಿ ಒಂದು ಅಂಗೈ ಅಗಲ ಬಿಟ್ಟರೆ ಮತ್ತೆಲ್ಲಿಯೂ ನೋಡಲಾರಿರಿ. ಹಾಗಾಗಿ ನಾವು ಅಲಕ್ಷ್ಯ ಮಾಡಿದರೆ ಮಿಕ್ಕ ಯಾವ ದೇಶವೂ ಅದನ್ನು ಎತ್ತಿಕೊಳ್ಳಲಾರರು. ಕನ್ನಡಿಗರ ಜವಾಬ್ದಾರಿಯ ಕುರಿತಾಗಿ ಹೇಳುವಾಗ ಈ ಮಾತು. ಬಂದಿದೆ.
Question 2.
ಇಂಗ್ಲಿಷ್ ಹಿಂದಿ ಬಾರದವರು ವಿಮಾನ ಪ್ರಯಾಣ ಮಾಡಬಾರದೇ?
Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ಡಾ। ಹಾ.ಮಾ ನಾಯಕರವರು ಬರೆದ ಕನ್ನಡವನ್ನು ಕಟ್ಟುವ ಕೆಲಸ ಎನ್ನುವ ಪಾಠದಿಂದ ಆರಿಸಲಾಗಿದೆ.
ಸಂದರ್ಭ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡ ಸೂಚನೆಗಳು ಇಲ್ಲ. ಕೇಂದ್ರ ಸರ್ಕಾರ ಕನ್ನಡಕ್ಕೆ ಯಾವ ಸ್ಥಾನವನ್ನು ನೀಡಿದೆ ಎನ್ನುವ ಕುರಿತು ಮಾತನಾಡುವಾಗ ಈ ಮಾತು ಬಂದಿದೆ.
ವಿವರಣೆ: ಲೇಖಕರ ಮಿತ್ರರೊಬ್ಬರು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ “ಇದೇನು ಸಾರ್. ನಾವು ಎಲ್ಲಿದ್ದೇವೆ? ಇಲ್ಲಿ ಒಂದೂ ಕನ್ನಡ ಅಕ್ಷರವೇ ಕಾಣಿಸುವುದಿಲ್ಲವಲ್ಲ!” ಎಂದರು. ಅದಕ್ಕೆ ಲೇಖಕರು “ಕಾಣಿಸದೇ ಏನು? ಅಲ್ಲಿ ನೋಡಿ ಕಕ್ಕಸಿನ ಮೇಲೆ ಕನ್ನಡದಲ್ಲಿ ಗಂಡಸರು ಹೆಂಗಸರು ಎಂದು ಬರೆದಿದ್ದಾರಲ್ಲ!. ಇದು ಕೇಂದ್ರ ಸರ್ಕಾರ ಕನ್ನಡಕ್ಕೆ ತೋರಿಸುವ ಮರ್ಯಾದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡದಲ್ಲಿ ಸೂಚನೆಗಳಿಲ್ಲದಿದ್ದರೆ, ಇನ್ನು ಯಾವ ಕಡೆ ಇರುವುದು ಸಾಧ್ಯ. ವಿಮಾನ ನಿಲ್ದಾಣದ ಎಲ್ಲ ಪ್ರಕಟಣೆಗಳು ಪ್ರಾದೇಶಿಕ ಭಾಷೆಯಲ್ಲಿರುವುದು ಅಗತ್ಯ ಎನ್ನುತ್ತಾ ಕನ್ನಡದ ಮೇಲಿನ ಕಾಳಜಿಯಿಂದ ಲೇಖಕರು ಈ ಮಾತನ್ನು ಹೇಳುತ್ತಾರೆ.
Question 3.
ನಾವು ಪರದೇಶಿಗಳೆಂಬ ಭಾವನೆ ಬರುತ್ತದೆ.
Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ಡಾ| ಹಾ.ಮಾ ನಾಯಕರವರು ಬರೆದ ಕನ್ನಡವನ್ನು ಕಟ್ಟುವ ಕೆಲಸ ಎನ್ನುವ ಪಾಠದಿಂದ ಆರಿಸಲಾಗಿದೆ.
ಸಂದರ್ಭ: ಲೇಖಕರು, ಕೇಂದ್ರ ಸರ್ಕಾರವು ಕನ್ನಡದ ಬಗ್ಗೆ ತೋರಿರುವ ಧೋರಣೆಯನ್ನು ವಿವರಿಸುತ್ತಾ ಈ ಮಾತನ್ನು ಹೇಳಿದ್ದಾರೆ.
ವಿವರಣೆ: ರೈಲ್ವೇ, ಅಂಚೆ ಮತ್ತು ತಂತಿ ಇಲಾಖೆಗಳೂ ಪ್ರಾದೇಶಿಕ ಭಾಷೆಗಳ ಮೇಲೆ ಸಾಕಷ್ಟು ಮಲತಾಯಿ ಧೋರಣೆ ಬೆಳೆಸಿಕೊಂಡಿವೆ. ಕನ್ನಡ ನಾಡಿನ ಸಣ್ಣಪುಟ್ಟ ಊರುಗಳಲ್ಲಿರುವ ರೈಲ್ವೇ ಸ್ಟೇಷನ್ನುಗಳಲ್ಲಿಯೂ ಹಿಂದಿ ಇಂಗ್ಲೀಷ್ ಗಳೇ ರಾರಾಜಿಸಿದರೆ ನಾವು ನಮ್ಮ ದೇಶದಲ್ಲಿದ್ದೇವೆಂಬ ಭಾವನೆ ಯಾರಲ್ಲಾದರೂ ಬರುವುದು ಸಾಧ್ಯವೇ, ಲೈಫ್ ಇನ್‌ಶೂರೆನ್ಸ್ ಕಾರ್ಪೊರೇಷನ್ನಿನ್ನಂಥ ಸಂಸ್ಥೆಗಳು, ಬ್ಯಾಂಕುಗಳು ಹೀಗೆ ಕೇಂದ್ರಾಡಳಿತದ ಯಾವ ಸಂಸ್ಥೆಗಳಿಗೆ ಹೋದರೂ ನಾವು ಪರದೇಶಿಗಳೆಂಬ ಭಾವನೆ ಬರುತ್ತದೆ ಎಂದು ಲೇಖಕರು ತಮ್ಮ ಅನುಭವವನ್ನು ಈ ಮಾತಿನ ಮೂಲಕ ಹೇಳಿದ್ದಾರೆ.
Question 4.
ನಮ್ಮ ಭಾಷೆಯಲ್ಲಿ ಓದಿದ್ದೆ ಮೈಗೆ ಹತ್ತುವುದು.
Answer:
ಆಯ್ಕೆ : ಈ ಮೇಲಿನ ವಾಕ್ಯವನ್ನು ಡಾ| ಹಾ.ಮಾ. ನಾಯಕರವರು ಬರೆದ ಕನ್ನಡವನ್ನು ಕಟ್ಟುವ ಕೆಲಸ ಎನ್ನುವ ಪಾಠದಿಂದ ಆರಿಸಲಾಗಿದೆ.
ಸಂದರ್ಭ: ಕಲಿಕೆ ಯಾವ ಭಾಷೆಯಲ್ಲಿರಬೇಕೆಂದು ಹೇಳುವಾಗ ಈ ಮಾತು ಬಂದಿದೆ.
ವಿವರಣೆ : ಇಂಗ್ಲಿಷನ್ನು ಭಾಷೆಯನ್ನಾಗಿ ಕಲಿಸಿ, ವಿಷಯಗಳನ್ನು ನಮ್ಮ ನಮ್ಮ ಭಾಷೆಗಳಲ್ಲಿಯೇ ಕಲಿಸಬೇಕು. ಮಾಧ್ಯಮದ ಪ್ರಶ್ನೆ ಬಂದಾಗ ನಮ್ಮಲ್ಲಿ ಬಗೆಹರಿಯಲಾರದ ಸಮಸ್ಯೆಯಾಗಿದೆ. ಶಿಕ್ಷಣ ತಜ್ಞರೆನ್ನಿಸಿಕೊಂಡವರಿಗೂ ಆನೇಕ ಸಲ ಭಾಷೆಯನ್ನು ಕಲಿಸುವುದು. ಭಾಷೆಯ ಮೂಲಕ ಕಲಿಸುವುದು ಇವುಗಳ ನಡುವಿನ ಅಂತರ ತಿಳಿದಿರುವುದಿಲ್ಲ. ಕನ್ನಡ ಮಾಧ್ಯಮವಾಗಬೇಕು ಎಂದರೆ ಇಂಗ್ಲೀಷನ್ನು ಕಲಿಸಬಾರದು ಎಂದಲ್ಲ. ಆಧುನಿಕ ವಿಜ್ಞಾನವನ್ನು ಕಲಿಯುವುದು ಕಲಿಸುವುದು ನಮ್ಮ ಭಾಷೆಗಳ ಮೂಲಕ ಸಾಧ್ಯವಾಗುವುದಿಲ್ಲ ಎನ್ನುವುದು ಮೂಢನಂಬಿಕೆ. ಡಾ| ಸಿ.ಎನ್.ಆರ್.ರಾವ್ ಅವರ ಉದಾಹರಣೆಯನ್ನು ನೀಡಿ ಕನ್ನಡದಲ್ಲಿ ಕಲಿತು ಶ್ರೇಷ್ಠ ವಿಜ್ಞಾನಿಯಾಗಬಹುದೆಂದು ತಿಳಿಸಿದ್ದಾರೆ. ಜನರಿಗೆ ಇಂಗ್ಲಿಷಿನ ಮೇಲೆ ಮೋಹ ಬೆಳೆಯಲು ಪ್ರತಿಷ್ಠೆಯೇ ಕಾರಣ ಎನ್ನುವಾಗ ನಮ್ಮ ಭಾಷೆಯಲ್ಲಿ ಓದಿದ್ದೆ ಮೈಗೆ ಹತ್ತುವುದು ಎಂದಿದ್ದಾರೆ.
Question 5.
ಒಂದೊಂದು ಭಾಷೆಯೂ ಒಂದೊಂದು ವರ.
Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ಡಾ| ಹಾ.ಮಾ. ನಾಯಕರವರು ಬರೆದ ಕನ್ನಡವನ್ನು ಕಟ್ಟುವ ಕೆಲಸ ಎನ್ನುವ ಪಾಠದಿಂದ ಆರಿಸಲಾಗಿದೆ.
ಸಂದರ್ಭ: ಲೇಖಕರು ಕನ್ನಡ ಭಾಷೆಯ ಮಹತ್ವವನ್ನು ತಿಳಿಸುತ್ತಾ ಈ ಮಾತನ್ನು ಹೇಳಿದ್ದಾರೆ.
ವಿವರಣೆ: ಕನ್ನಡ ಭಾಷೆಯ ಮಹತ್ವವನ್ನು ತಿಳಿಸುತ್ತಾ ಪೋಷಕರು ಸರ್ಕಾರಿ ಶಾಲೆಗಳ ಕಡೆ ಹೋಗದೇ ಆನಿವಾರ್ಯವಾಗಿ ಖಾಸಗಿ ಉದ್ಯಮವಾದ ಇಂಗ್ಲಿಷ್ ಶಾಲೆಗಳ ಕಡೆಗೆ ಹೋಗುತ್ತಾರೆ. ಎಲ್ಲಿಯವರೆಗೆ ನಮ್ಮ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳು ಉತ್ತಮವಾಗುವುದಿಲ್ಲವೋ ಅಲ್ಲಿಯವರೆಗೂ ಶಿಕ್ಷಣದಲ್ಲಿ ಕನ್ನಡ ಆಕರ್ಷಕವೆನಿಸುವುದಿಲ್ಲ. ಇಂಗ್ಲಿಷ್ ನಮಗೆ ಬೇಕು. ಆದರೆ ಕನ್ನಡದ ಬದಲಿಗೆ ಅಲ್ಲ. ಇಂಗ್ಲಿಷ್ ಒಂದೇ ಅಲ್ಲ.ಇನ್ನೂ ಹಲವು ಭಾಷೆಗಳು ಬೇಕು. ಎನ್ನುವ ಸಂದರ್ಭದಲ್ಲಿ ಡಾ| ಹಾ.ಮಾ ನಾಯಕರು ಈ ಮೇಲಿನಂತೆ ಹೇಳಿದ್ದಾರೆ.
Question 6.
ನಾವು ಯಾವ ಪತ್ರಿಕೆಗಳನ್ನು ಓದುತ್ತಿದ್ದೇವೆ.
Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ಡಾ| ಹಾ.ಮಾ. ನಾಯಕರವರು ಬರೆದ ಕನ್ನಡವನ್ನು ಕಟ್ಟುವ ಕೆಲಸ ಎನ್ನುವ ಪಾಠದಿಂದ ಆರಿಸಲಾಗಿದೆ.
ಸಂದರ್ಭ: ಲೇಖಕರು ನಾವು ಕನ್ನಡಿಗರೆನ್ನಿಸಿಕೊಳ್ಳಲು ಎಷ್ಟು ಅರ್ಹರು ಎನ್ನುವ ಸಂದರ್ಭವಿದು.
ವಿವರಣೆ: ನಾವು ಕನ್ನಡವನ್ನು ಎಷ್ಟು ಅನುಸರಿಸುತ್ತಿದ್ದೇವೆ. ಕನ್ನಡ ಹೇಳುವುದಕ್ಕೆ ಮಾತ್ರವಲ್ಲ. ಆನುಸರಿಸುವುದಕ್ಕೂ ಕೂಡ. ನಮ್ಮ ಮಕ್ಕಳನ್ನು ಯಾವ ಶಾಲೆಗಳಲ್ಲಿ ಓದಿಸುತ್ತಿದ್ದೇವೆ? ನಾವು ಯಾವ ಪತ್ರಿಕೆಯನ್ನು ಓದುತ್ತಿದ್ದೇವೆ? ನಾವು ನೋಡುವುದು ಯಾವ ಸಿನಿಮಾಗಳನ್ನು? ನಮ್ಮ ಮನೆಯ ಬೋರ್ಡು ಯಾವ ಭಾಷೆಯಲ್ಲಿದೆ? ಲಗ್ನ ಪತ್ರಿಕೆ, ಲೆಟರ್ ಹೆಡ್ ಅಚ್ಚಾಗಿರುವುದು ಯಾವ ಭಾಷೆಯಲ್ಲಿ? ಇಂಥಹ ನೂರು ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕು? ಅವುಗಳ ಉತ್ತರ ನಮ್ಮನ್ನು ಚುಚ್ಚದಿದ್ದರೆ ಮಾತ್ರ ನಾವು ಕನ್ನಡದ ಬಗ್ಗೆ ಮಾತಾಡಲು ಯೋಗ್ಯತೆ ಗಳಿಸಿದ್ದೇವೆ ಎಂದು ಅರ್ಥ. ಎನ್ನುವಾಗ ಈ ಮಾತು ಬಂದಿದೆ.
Question 7.
ಕನ್ನಡಿಗರು ಮೊದಲು ಕನ್ನಡಿಗರಾಗಬೇಕು.
Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ಡಾ। ಹಾ.ಮಾ ನಾಯಕರವರು ಬರೆದ ಕನ್ನಡವನ್ನು ಕಟ್ಟುವ ಕೆಲಸ ಎನ್ನುವ ಪಾಠದಿಂದ ಆರಿಸಲಾಗಿದೆ.
ಸಂದರ್ಭ: ಪ್ರತಿಯೊಬ್ಬ ಕನ್ನಡಿಗನೂ ಪ್ರತಿಯೊಂದು ಅಂಗುಲದಲ್ಲಿಯೂ ಕನ್ನಡಿಗನಾಗಬೇಕು ಎನ್ನುವ ಸಂದರ್ಭವಿದು.
ವಿವರಣೆ: ನಾವು ಕನ್ನಡವನ್ನು ಎಷ್ಟು ಅನುಸರಿಸುತ್ತಿದ್ದೇವೆ. ಕನ್ನಡ ಹೇಳುವುದಕ್ಕೆ ಮಾತ್ರವಲ್ಲ. ಅನುಸರಿಸುವುದಕ್ಕೂ ಕೂಡ. ನಮ್ಮ ಮಕ್ಕಳನ್ನು ಯಾವ ಶಾಲೆಗಳಲ್ಲಿ ಓದಿಸುತ್ತಿದ್ದೇವೆ? ನಾವು ಯಾವ ಪತ್ರಿಕೆಯನ್ನು ಓದುತ್ತಿದ್ದೇವೆ? ನಾವು ನೋಡುವುದು ಯಾವ ಸಿನಿಮಾಗಳನ್ನು? ನಮ್ಮ ಮನೆಯ ಬೋರ್ಡು ಯಾವ ಭಾಷೆಯಲ್ಲಿದೆ? ಲಗ್ನ ಪತ್ರಿಕೆ, ಲೆಟರ್‌ಹೆಡ್ ಅಚ್ಚಾಗಿರುವುದು ಯಾವ ಭಾಷೆಯಲ್ಲಿ? ಇಂಥಹ ನೂರು ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕು? ಅವುಗಳ ಉತ್ತರ ನಮ್ಮನ್ನು ಚುಚ್ಚದಿದ್ದರೆ ಮಾತ್ರ ನಾವು ಕನ್ನಡದ ಬಗ್ಗೆ ಮಾತಾಡಲು ಯೋಗ್ಯತೆ ಗಳಿಸಿದ್ದೇವೆ ಎಂದು ಅರ್ಥ ಎನ್ನುವಾಗ ಈ ಮಾತು ಬಂದಿದೆ.
IV. ಐದು ಆರು ವಾಕ್ಯಗಳಲ್ಲಿ ಉತ್ತರಿಸಿ.
Question 1.
ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕನ್ನಡತನವಿಲ್ಲದಿರುವ ಬಗ್ಗೆ ಹಾಮಾನಾ ಹೇಗೆ ಟೀಕಿಸಿದ್ದಾರೆ?
Answer:
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡದಲ್ಲಿ ಸೂಚನೆಗಳಿಲ್ಲದಿದ್ದರೆ. ಇನ್ನು ಯಾವ ಕಡೆ ಇರುವುದು ಸಾಧ್ಯ? ವಿಮಾನ ನಿಲ್ದಾಣದ ಎಲ್ಲ ಪ್ರಕಟಣೆಗಳೂ ಪ್ರಾದೇಶಿಕ ಭಾಷೆಗಳಲ್ಲಿರುವುದು ಆಗತ್ಯ. ಇಂಗ್ಲಿಷ್ ಹಿಂದಿ ಬಾರದವರು ಈ ದೇಶದಲ್ಲಿ ವಿಮಾನ ಪ್ರಯಾಣ ಮಾಡಬಾರದೆ? ಬೆಂಗಳೂರು, ಮಂಗಳೂರು ಬೆಳಗಾವಿ ವಿಮಾನ ನಿಲ್ದಾಣಗಳಿಂದ ಹೊರಡುವ ಮತ್ತು ಅಲ್ಲಿಗೆ ಬರುವ ವಿಮಾನಗಳೊಳಗಿನ ಪ್ರಕಟಣೆಗಳು ಕನ್ನಡದಲ್ಲಿರಬೇಕು. ಇದೇನು ಬಹು ಖರ್ಚಿನ ಭಾರೀ ದೊಡ್ಡ ಕೆಲಸವಲ್ಲ.
ಬಹುಬಾಷೆಗಳ ಈ ರಾಷ್ಟ್ರದಲ್ಲಿ ನಾವು ಒಡೆಯದೆ ಬಾಳಬೇಕಾದರೆ ಎಲ್ಲ ಭಾಷೆಗಳ ಸಮಾನ ಬಳಕೆ, ಎಲ್ಲ ಭಾಷೆಗಳಲ್ಲಿ ಸಮಾನ ಗೌರವ ಅತ್ಯಗತ್ಯ. ಕೇಂದ್ರ ಸರ್ಕಾರದ ಕಚೇರಿ ಯಾವ ರಾಜ್ಯದಲ್ಲಿರುತ್ತದೋ ಆ ರಾಜ್ಯದ ಭಾಷೆಯನ್ನು ಅದು ಅಲ್ಲಿನ ಜನರೊಂದಿಗೆ ಮತ್ತು ಸರ್ಕಾರದೊಂದಿಗೆ ಬಳಸಬೇಕು. ಆ ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ನೌಕರರು ಆ ರಾಜ್ಯದ ಭಾಷೆಯನ್ನು ಬಲ್ಲವರಾಗಿರಬೇಕು ಎಂದು ರಾಜಮನ್ನಾರ್ ಸಮಿತಿಯ ವರದಿ ಹೇಳಿದೆ. ಆದುದರಿಂದ ಈ ಭಾಷೆಯ ಸಮಸ್ಯೆ ಕೇಂದ್ರ-ರಾಜ್ಯಗಳ ಸಂಬಂಧದಲ್ಲಿ ಬಹಳ ಮುಖ್ಯ ವಿಷಯವಾಗಿದೆ.
ರೈಲ್ವೇ, ಅಂಚೆ ಮತ್ತು ತಂತಿ ಇಲಾಖೆಗಳೂ ಪ್ರಾದೇಶಿಕ ಭಾಷೆಗಳ ಮೇಲೆ ಸಾಕಷ್ಟು ಮಲತಾಯಿ ಧೋರಣೆ ಬೆಳೆಸಿಕೊಂಡಿವೆ. ಕನ್ನಡ ನಾಡಿನ ಸಣ್ಣಪುಟ್ಟ ಊರುಗಳಲ್ಲಿರುವ ರೈಲ್ವೇ ಸ್ಟೇಷನ್ನುಗಳಲ್ಲಿಯೂ ಹಿಂದಿ ಇಂಗ್ಲಿಷ್‌ಗಳೇ ರಾರಾಜಿಸಿದರೆ ನಾವು ನಮ್ಮ ದೇಶದಲ್ಲಿದ್ದೇವೆಂಬ ಭಾವನೆ ಯಾರಲ್ಲಾದರೂ ಬರುವುದು ಸಾಧ್ಯವೇ? ಲೈಫ್ ಇನ್‌ಶೂರೆನ್ಸ್ ಕಾರ್ಪೊರೇಷನ್ನಿನಂಥ ಸಂಸ್ಥೆಗಳು, ಬ್ಯಾಂಕುಗಳು ಹೀಗೆ ಕೇಂದ್ರಾಡಳಿತದ ಯಾವ ಸಂಸ್ಥೆಗಳಿಗೆ ಹೋದರೂ ನಾವು ಪರದೇಶಿಗಳೆಂಬ ಭಾವನೆ ಬರುತ್ತದೆ. ಎಲ್ಲಿಯವರೆಗೆ ಈ ಸಂಸ್ಥೆಗಳಲ್ಲಿ ನಮ್ಮದೇ ಭಾಷೆಗಳ ಬಳಕೆಯಾಗುವುದಿಲ್ಲವೋ ಅಲ್ಲಿಯವರೆಗೂ ಈ ಸಂಸ್ಥೆಗಳು ಜನಜೀವನದಿಂದ ಹೊರಗೇ ಉಳಿಯುತ್ತದೆ.
Question 2.
ಹೊರನಾಡಿನಿಂದ ಬಂದು ಕನ್ನಡ ನಾಡಿನಲ್ಲಿ ನೆಲೆಸಿರುವ ಜವಾಬ್ದಾರಿಗಳನ್ನು ಲೇಖಕರು ಹೇಗೆ ವಿವರಿಸಿದ್ದಾರೆ?
Answer:
ಯಾವ ಭಾಷೆಯ ಹೇರಿಕೆಯೂ ಸರಿಯಲ್ಲ. ಯಾವುದೇ ಭಾಷೆಯ ಕಲಿಕೆಯನ್ನು ತಡೆಯುವುದು ಸರಿಯಲ್ಲ. ಆದರೆ ಅದರಲ್ಲಿ ಔಚಿತ್ಯದ ಒಂದು ಪ್ರಶ್ನೆಯಿದೆ. ಒಂದು ಘಟ್ಟದಿಂದ ಮುಂದಕ್ಕೆ ವಿದ್ಯಾರ್ಥಿಗಳು ತಮಗೆ ಬೇಕಾದ ಭಾಷೆಗಳನ್ನು ಆಯ್ದುಕೊಂಡು ಅಭ್ಯಾಸ ಮಾಡುವ ಅವಕಾಶಗಳಿರಬೇಕು. ಆ ಘಟ್ಟದವರೆಗೆ ಮಾತೃ ಭಾಷೆಯ ಹಾಗೂ ಪ್ರಾದೇಶಿಕ ಭಾಷೆಯ ಕಡ್ಡಾಯ ಶಿಕ್ಷಣಕೊಡುವುದು ಸರ್ಕಾರದ ಕರ್ತವ್ಯವಾಗಿರುತ್ತದೆ.ಒಂದು ರಾಜ್ಯದಲ್ಲಿ ನೆಲೆಸಿದವರು ಅಲ್ಲಿನ ಪ್ರಾದೇಶಿಕ ಭಾಷೆಯನ್ನು ಕಲಿಯದೇ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದು.
ಅದು ಅಂಥ ಶಿಕ್ಷಣ ಕ್ರಮವನ್ನು ರೂಪಿಸಬೇಕಾಗುತ್ತದೆ. ಸ್ಥಳೀಯ ಭಾಷೆಯನ್ನು ಕಲಿಯದೇ ಹೋದರೆ ಹೊರಗಿನಿಂದ ಬಂದವರು ದ್ವೀಪಜೀವಿಗಳಾಗಿ ಉಳಿಯಬೇಕಾಗುತ್ತದೆ. ಆ ರಾಜ್ಯದ ಜನರೊಂದಿಗೆ ಬೆಳೆಯುವುದು ಸಾಧ್ಯವಾಗುವುದಿಲ್ಲ. ಒಂದು ರಾಜ್ಯದ ಎಲ್ಲ ಸೌಲಭ್ಯಗಳನ್ನೂ ಬಳಸಿಕೊಂಡು ಬದುಕುವ ಜನ ಅಲ್ಲಿನ ಭಾಷೆಯನ್ನೂ ಬಳಸುವುದು ಅನಿವಾರ್ಯವಾಗುತ್ತದೆ. ಪ್ರದೇಶ ಭಾಷೆಯ ಕಲಿಕೆ ಮಾತೃ ಭಾಷಾ ಕಲಿಕೆಗೆ ವಿರೋಧವಾದುದಲ್ಲ. ಅವೆರಡೂ ಪೂರಕವಾದಾಗಲೇ ವಿದ್ಯಾರ್ಥಿಗಳಿಗೆ ತಮ್ಮ ಮನೆ ಮತ್ತು ಆವರಣಗಳ ಪರಿಚಯ ಸ್ಪಷ್ಟವಾಗುತ್ತದೆ.
Question 3.
ನಮಗೆ ಬೇಕಾಗಿರುವ ಕನ್ನಡ ಮಾಧ್ಯಮ ಶಿಕ್ಷಣ ಮತ್ತು ಇಂಗ್ಲಿಷ್ ಭಾಷೆಯ ಸಂಬಂಧ ಯಾವ ಸ್ವರೂಪದ್ದಾಗಿರಬೇಕೆಂದು ಲೇಖಕರು ಹೇಳಿದ್ದಾರೆ?
Answer:
ಇಂಗ್ಲಿಷ್ ನಮಗೆ ಪ್ರಪಂಚಕ್ಕಿರುವ ಕಿಟಕಿ ಎಂಬುದರಲ್ಲಿ ಸಂದೇಹವಿಲ್ಲ. ಹಾಗೆಂದು ಅದನ್ನು ತಲೆಯ ಮೇಲೆ ಹೇರಿಕೊಳ್ಳಲಾಗುವುದಿಲ್ಲ. ಇಂಗ್ಲಿಷಿನ ದುರ್ದೆವವೆಂದರೆ, ಅದರ ನಿಜವಾದ ಸಾರ್ಥಕವಾದ ಬಳಕೆಯಾಗದೆ ಕೇವಲ ಒಂದು ಪ್ರತಿಷ್ಠೆಯ ವಿಷಯವಾಗಿರುವುದು. ಕಾನ್ವೆಂಟುಗಳ ಶಿಕ್ಷಣದಲ್ಲಿ ಅದು ಗಿಳಿ ಪಾಠವಾಗಿ ನಮ್ಮ ಬಾಲಕ ಬಾಲಕಿಯರಲ್ಲಿ ಒಂದು ಕೃತಕ ವ್ಯಕ್ತಿತ್ವವನ್ನು ಮೂಡಿಸುತ್ತಿದೆ. ಈ ಬಗೆಯ ಶಿಕ್ಷಣವೇ ಪರಮ ಶ್ರೇಷ್ಠವಾದುದೆಂದು ನಮ್ಮಲ್ಲಿ ಅನೇಕರು ಭ್ರಮಿಸಿದ್ದಾರೆ.
ಇಂಗ್ಲಿಷ್ ನಮಗೆ ಬೇಕು ನಿಜ. ಆದರೆ ಎಷ್ಟು ಬೇಕು, ಹೇಗೆ ಬೇಕು ಎನ್ನುವುದನ್ನು ಮಾತ್ರ ಯಾರು ಯೋಚಿಸಿಲ್ಲ. ಶಾಲಾ ಶಿಕ್ಷಣದ ಕೊನೆಯಲ್ಲಿ ಎಷ್ಟೊಂದು ಜನ ಶಿಕ್ಷಣವನ್ನು ಮುಂದುವರಿಸದೇ ಹೋಗುತ್ತಾರೆಂಬುದನ್ನು ಗಮನಿಸಿದರೆ ಇಂಗ್ಲಿಷ್ ಶಿಕ್ಷಣದ ಅಪವ್ಯಯ ನಮಗೆ ತಿಳಿಯುತ್ತದೆ. ಇಂಗ್ಲಿಷನ್ನು ಭಾಷೆಯನ್ನಾಗಿ ಕಲಿಸಿ, ವಿಷಯಗಳನ್ನು ನಮ್ಮ ನಮ್ಮ ಭಾಷೆಗಳಲ್ಲಿಯೇ ಕಲಿಸಬೇಕು. ಮಾಧ್ಯಮದ ಪ್ರಶ್ನೆ ನಮ್ಮಲ್ಲಿ ಬಗೆಹರಿಯಲಾರದ ಸಮಸ್ಯೆಯಾಗಿದೆ. ಶಿಕ್ಷಣತಜ್ಞರೆನ್ನಿಸಿಕೊಂಡವರಿಗೂ ಅನೇಕ ಸಲ ಭಾಷೆಯನ್ನು ಕಲಿಸುವುದು. ಭಾಷೆಯ ಮೂಲಕ ಕಲಿಸುವುದು.
ಇವುಗಳ ನಡುವಿನ ಅಂತರ ತಿಳಿಯುವುದಿಲ್ಲ. ಕನ್ನಡ ಮಾಧ್ಯಮವಾಗಬೇಕು ಎಂದರೆ ಇಂಗ್ಲಿಷನ್ನು ಕಲಿಸಬಾರದು ಎಂದಲ್ಲ. ನಮ್ಮ ಭಾಷೆಯಲ್ಲಿ ಓದಿದ್ದೇ ಮೈಗೆ ಹತ್ತುವುದು. ಆಧುನಿಕ ವಿಜ್ಞಾನವನ್ನು ಕಲಿಯುವುದು ಕಲಿಸುವುದು ನಮ್ಮ ಭಾಷೆಗಳ ಮೂಲಕ ಸಾಧ್ಯವಾಗುವುದಿಲ್ಲ ಎನ್ನುವುದು ಒಂದು ಮೂಢನಂಬಿಕೆ. ಕನ್ನಡದ ಮೂಲಕ ಕಲಿತು ಶ್ರೇಷ್ಠ ವಿಜ್ಞಾನಿಯಾಗಬಹುದು ಎನ್ನುವುದಕ್ಕೆ ನಮ್ಮವರೇ ಆದ ಡಾ| ಸಿ.ಎನ್. ಆರ್.ರಾವ್ ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಜನರಿಗೆ ಇಂಗ್ಲಿಷ್‌ನ ಮೇಲೆ ಮೋಹ ಬೆಳೆಯಲು ಪ್ರತಿಷ್ಠೆಯೇ ಕಾರಣ.
Question 4.
ಪೋಷಕರು ಖಾಸಗಿ ಶಾಲೆಗಳ ಕಡೆ ಹೊರಳಲು ಲೇಖಕರು ಯಾವ ಕಾರಣಗಳನ್ನು ಉದಾಹರಿಸುತ್ತಾರೆ?
Answer:
ಪ್ರತಿಯೊಬ್ಬ ತಂದೆ-ತಾಯಿಗಳೂ ತಮ್ಮ ಮಕ್ಕಳು ಒಳ್ಳೆಯ ಶಾಲೆಗಳಲ್ಲಿ ಓದಬೇಕು. ಒಳ್ಳೆಯ ಶಿಕ್ಷಣ. ಪಡೆಯಬೇಕು. ಅವರ ಭವಿಷ್ಯ ಉಜ್ವಲವಾಗಿರಬೇಕು ಎಂದು ಆಶಿಸುತ್ತಾರೆ. ಅವರು ನ್ಯಾಯವಾಗಿಯೇ ಅಸಹ್ಯ ಎನ್ನಿಸುವ ನಮ್ಮ ಸಾರ್ವಜನಿಕ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸಲು ಇಷ್ಟಪಡುವುದಿಲ್ಲ. ಎಷ್ಟೋ ಕಡೆಗಳಲ್ಲಿರುವ ಶಾಲೆಗಳನ್ನು ಒಮ್ಮೆ ನೋಡಿ: ಕುಸಿದು ಬೀಳುತ್ತಿರುವ ಕಟ್ಟಡಗಳು, ದೊಡ್ಡಿಯಾದ ತರಗತಿಗಳು, ಆಧ್ಯಾಪಕರಿಲ್ಲದ ತರಗತಿಗಳು, ಪಾಠ ಹೇಳದ ಅನರ್ಹ ಅಧ್ಯಾಪಕರುದಿನ ಬೆಳಗಾದರೆ ರಜೆ, ಶಿಸ್ತಿಲ್ಲದ ವ್ಯವಸ್ಥೆ, ಮೂತ್ರದ ವಾಸನೆಯ ಪರಿಸರ- ಇದು ನಮ್ಮ ಬಹಳಷ್ಟು ಶಾಲೆಗಳ ಸ್ಥಿತಿ.. ಆದ್ದರಿಂದ ಸಾರ್ವಜನಿಕರು ಆನಿವಾರ್ಯವಾಗಿ ಖಾಸಗಿ ಉದ್ಯಮವಾದ ಇಂಗ್ಲಿಷ್ ಶಾಲೆಗಳ ಕಡೆಗೆ ಹೋಗುತ್ತಾರೆ.ಇಂಗ್ಲಿಷ್ ನಮಗೆ ಬೇಕು. ಆದರೆ ನಮ್ಮ ಭಾಷೆಯ ಬದಲಿಗೆ ಅಲ್ಲ.
ಇಂಗ್ಲಿಷ್ ಒಂದೇ ಅಲ್ಲ. ಇನ್ನೂ ಹಲವು ಭಾಷೆಗಳು ನಮಗೆ ಬೇಕು. ಒಂದೊಂದು ಭಾಷೆಯೂ ಒಂದೊಂದು ವರ. ಒಂದೊಂದು ಜಗತ್ತು ಆದರೆ ಯಾವ ಭಾಷೆ ಬೇಕು ಎನ್ನುವುದು ನಮ್ಮ ಅಗತ್ಯವನ್ನು ಅನುಸರಿಸಿದ್ದು, ಹೊರಜಗತ್ತಿನ ಸಂಪರ್ಕಕ್ಕಾಗಿ ನಮಗೆ ಇಂಗ್ಲಿಷ್ ಬೇಕು. ಆದರೆ ಅದೇ ಸರ್ವಸ್ವವಾಗಿ ಅಲ್ಲ.ಇಂಗ್ಲಿಷ್ ಮೂಲಕವಾದ ಶಿಕ್ಷಣ, ಕುಂಡದಲ್ಲಿ ನೆಟ್ಟ ಗಿಡಗಳಂತೆ. ಎಲ್ಲಿಯವರೆಗೆ ನಮ್ಮ ಸಾರ್ವಜನಿಕ ಶಾಲೆಗಳ ಸ್ಥಿತಿಗತಿಗಳು ಉತ್ತಮವಾಗುವುದಿಲ್ಲವೋ ಅಲ್ಲಿಯವರೆಗೆ ಶಿಕ್ಷಣದಲ್ಲಿ ಕನ್ನಡ ಆಕರ್ಷಕವಾಗುವುದಿಲ್ಲ.
Question 5.
ಕನ್ನಡಿಗರೆನ್ನಿಸಿಕೊಳ್ಳಲು ಯಾವ ಯೋಗ್ಯತೆಯ ಪ್ರಶ್ನೆಗಳು ನಮ್ಮನ್ನು ಚುಚ್ಚಬೇಕು? ವಿವರಿಸಿ.
Answer:
ಪ್ರತಿಯೊಬ್ಬ ಕನ್ನಡಿಗನೂ ಪ್ರತಿಯೊಂದು ಅಂಗುಲದಲ್ಲಿಯೂ ಕನ್ನಡಿಗನಾಗಬೇಕು. ಆಗ ಮಾತ್ರ ಆನೇಕ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಕನ್ನಡ ಕನ್ನಡ ಎನ್ನುವ ನಾವು ನಮ್ಮನ್ನೇ ಪ್ರಶ್ನಿಸಿಕೊಳ್ಳುವುದು ತೀರ ಆಗತ್ಯ ಕನ್ನಡ ಹೇಳುವುದಕ್ಕೆ ಮಾತ್ರ ಅಲ್ಲ, ಅನುಸರಿಸುವುದಕ್ಕೂ ಕೂಡ ಎಂದು ಎಷ್ಟು ಜನ ತಿಳಿದಿದ್ದೇವೆ? ನಮ್ಮ ಮಕ್ಕಳನ್ನು ಯಾವ ಶಾಲೆಗಳಲ್ಲಿ ಓದಿಸುತ್ತಿದ್ದೇವೆ?. ನಾವು ಯಾವ ಪತ್ರಿಕೆಗಳನ್ನು ಓದುತ್ತಿದ್ದೇವೆ? ನಾವು ನೋಡುವುದು ಯಾವ ಸಿನಿಮಾಗಳನ್ನು ನಮ್ಮ ಮನೆಯ ಬೋರ್ಡು ಯಾವ ಭಾಷೆಯಲ್ಲಿದೆ? ನಮ್ಮ ಲೆಟೆರ್ ಹೆಡ್ ಗಳು ಅಚ್ಚಾಗಿರುವುದು, ನಮ್ಮ ಮನೆಯ ಲಗ್ನ ಪತ್ರಿಕೆಗಳು. ಅಚ್ಚಾಗಿರುವುದು ಯಾವ ಭಾಷೆಯಲ್ಲಿ ನಾವು ಬ್ಯಾಂಕುಗಳಿಗೆ ಚಿಕ್ಕು ಬರೆಯುವುದು ಕನ್ನಡದಲ್ಲೇ? ನಾವು ಬರೆಯುವ ಕಾಗದ ಪತ್ರಗಳಲ್ಲಿ ಎಷ್ಟು ಭಾಗ ಕನ್ನಡ? ಇಂಥ ನೂರು ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕು. ಅವುಗಳ ಉತ್ತರ ನಮ್ಮನ್ನು ಚುಚ್ಚಿದಿದ್ದರೆ ಮಾತ್ರ ನಾವು ಕನ್ನಡವನ್ನು ಕುರಿತು ಮಾತಾಡಲು ಯೋಗ್ಯತೆ ಗಳಿಸಿಕೊಂಡಿದ್ದೇವೆ ಎಂದು ಅರ್ಥ, ಕನ್ನಡಿಗರು ಮೊದಲು ಕನ್ನಡದವರಾಗಬೇಕು.
V ಭಾಷಾಭ್ಯಾಸದ ಪ್ರಕಾರ ಕೆಳಗಿನಂತೆ ಉತ್ತರಗಳನ್ನು ನೀಡಬಹುದು:
1. ಸಮಾನಾರ್ಥಕ ಪದಗಳು (ಸದುಪಯೋಗಿ ಪದಗಳು):
- ಸ್ಪುರಿಸು – ಹೊಮ್ಮು, ಪ್ರಕಾಶಿಸು, ತೋರಿಸು
- ಸಮುದ್ರ- ಸಾಗರ, ಅರಣವ, ಮಹಾಸಮುದ್ರ
- ಕರ್ತವ್ಯ – ಹೊಣೆ, ಧರ್ಮ, ಕೆಲಸ, ಜವಾಬ್ದಾರಿ
- ಭೂಮಿ – ನೆಲ, ಮಣ್ಣು, ಧರೆ, ಭೂಪೃಷ್ಟ
- ತಾಳ್ಮೆ – ಸಹಿಷ್ಣುತೆ, ಸಹನೆ, ಶಾಂತಿ
2. ನಾನಾರ್ಥಕ ಪದಗಳು (ಒಂದು ಪದದ ಹಲವಾರು ಅರ್ಥಗಳು):
- ಎದೆ – ಹೃದಯದ ಭಾಗ, ಧೈರ್ಯ/ಸಾಹಸ
- ಗುಡಿ – ದೇವಾಲಯ, ಜಾಗ ಅಥವಾ ತಂಗುದಾಣ
- ಕಲಿ – ಕಲಿಯು, ಕಲಿಯುಗ
- ಮರ್ಯಾದೆ – ಗೌರವ, ಮಿತಿ ಅಥವಾ ಆಕರ್ಷಣೆಯ ಗಡಿ
- ಕೊನೆ – ಅಂತ್ಯ, ಅಂಚು ಅಥವಾ ಮುಕ್ತಾಯದ ಸಾನ್ನಿಧ್ಯ
3. ವ್ಯತಿರಿಕ್ತ ಪದದ ಜೋಡಿಗಳು (ವಿರುದ್ಧಾರ್ಥ ಪದಗಳು):
- ಖಿಲ – ಅಖಿಲ
- ವ್ಯಯ – ಅಪವ್ಯಯ
- ಸಹ್ಯ – ಅಸಹ್ಯ
4. ನುಡಿಗಟ್ಟುಗಳು ಮತ್ತು ವಾಕ್ಯಗಳು:
ನುಡಿಗಟ್ಟು | ಅರ್ಥ | ವಾಕ್ಯ |
---|---|---|
ಪರದೇಶಿ | ಹೊರದೇಶದವನು | ರಾಮ್ ಪರದೇಶಿಗೆ ಹೋಗಿ ಕೆಲಸ ಹುಡುಕುತ್ತಿದ್ದಾನೆ. |
ಮೈಗೆ ಹತ್ತು | ಸ್ವತಃ ಅನುಭವವಾಗು | ಶಿಕ್ಷಕನ ಮಾತುಗಳು ನನ್ನ ಮೈಗೆ ಹತ್ತಿದವು. |
ತಲೆಮೇಲೆಮೆರಸು | ಅತಿಯಾದ ಗೌರವ ಕೊಡಿಕೊಳ್ಳು | ತಮ್ಮ ಆಸ್ಥಿಯನ್ನು ತಲೆಮೇಲೆಮೆರೆಯುವ ವ್ಯಕ್ತಿಗಳು ಇವರು. |
ಲೇಖಕರ ಪರಿಚಯ
ಹಾಮಾನಾ ಎಂದೇ ಪ್ರಸಿದ್ಧರಾಗಿರುವ ಡಾ|| ಹಾರೋಗದ್ದೆ ಮಾನಪ್ಪ ನಾಯಕ (೧೯೩೧-೨೦೦೧) ನಾಯಕ -ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆಯವರು. ಶ್ರೀನಿವಾಸ ರುಕ್ಕಿಣಿಯಮ್ಮ ದಂಪತಿಗಳ ಸುಪುತ್ರರು. ಮೈಸೂರು ವಿ.ವಿ.ಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ, ಗುಲಬರ್ಗಾ ವಿ.ವಿ.ಯ ಕುಲಪತಿಗಳಾಗಿ ಕರ್ತವ್ಯ ನಿರ್ವಹಿಸಿದವರು. ಕನ್ನಡದ ಕಟ್ಟಾಳು ಎಂದೇ ತಮ್ಮನ್ನು ಗುರುತಿಸಿಕೊಂಡಿದ್ದ ಹಾ.ಮಾ. ನಾಯಕರು ತಮ್ಮ ಅಪಾರ ವಿದ್ವತ್ತಿನಿಂದ, ದಕ್ಷ ಆಡಳಿತದಿಂದ, ಸ್ನೇಹಪರ ಗುಣಪಕ್ಷಪಾತದಿಂದ ಹೆಸರಾಗಿದ್ದರು. ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ಖ್ಯಾತ ಅಂಕಣಕಾರರೆನಿಸಿದ್ದರು.
ತಮ್ಮ ‘ಸಂಪ್ರತಿ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರವನ್ನು ಪಡೆಯುವ ಮೂಲಕ ದೇಶದಲ್ಲೇ ಅಂಕಣ ಬರಹಕ್ಕೆ ಮಾನ್ಯತೆಯನ್ನು ತಂದುಕೊಟ್ಟರು. ೧೯೮೫ರಲ್ಲಿ ಬೀದರಿನಲ್ಲಿ ನಡೆದ ಐವತ್ತೇಳನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಹಾ.ಮಾ. ನಾಯಕರು ಬಾಟಗಳು, ಸಂಪ್ರತಿ, ಸಲ್ಲಾಪ, ಸಂಭ್ರಮ, ಸೂಲಂಗಿ, ಸಂಪಣ, ಭಾರತದ ಧರ್ಮ, ರವೀಂದ್ರನಾಥ ಠಾಕೂರ್, ಸಂಗತಿ. ನಮ್ಮ ಮನೆಯ ದೀಪ ಮುಂತಾದ ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಹಾ.ಮಾ. ನಾಯಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಐಬಿಎಚ್ ಪ್ರಶಸ್ತಿ, ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಇತ್ಯಾದಿ ಪುರಸ್ಕಾರಗಳು ಸಂದಿವೆ. ಬೀದರ್ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣವನ್ನು ಅವರು ‘ಕನ್ನಡವನ್ನು ಕಟ್ಟುವ ಕೆಲಸ’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ್ದರು. ಕನ್ನಡಕ್ಕೆ ಆಗಬೇಕಾಗಿರುವ ಕಾರ್ಯಸ್ವರೂಪದ ಬಹುಸೂಕ್ಷ್ಮ ಸಂಗತಿಗಳತ್ತ ಹಾಮಾನಾ ಇಲ್ಲಿ ಜನರ ಮತ್ತು ಆಳುವವರ ಗಮನ ಸೆಳೆದಿರುವುದನ್ನು ಮನಗಾಣಬಹುದು. ಅವರು ಚರ್ಚಿಸಿರುವ ಅನೇಕ ಸಂಗತಿಗಳಲ್ಲಿ ಕೆಲವನ್ನು ಇಲ್ಲಿ ಸಂಕಲಿಸಲಾಗಿದೆ.