2nd PUC Kannada Question and Answer – Valparai: Abhivrudhi Tanda Duranta
Looking for 2nd PUC Kannada textbook answers? You can download Chapter 14: Valparai: Abhivrudhi Tanda Duranta Questions and Answers PDF, Notes, and Summary here. 2nd PUC Kannada Gadyabhaga solutions follow the Karnataka State Board Syllabus, making it easier for students to revise and score higher in exams.
Karnataka 2nd PUC Kannada Textbook Answers—Reflections Chapter 14
Valparai: Abhivrudhi Tanda Duranta Questions and Answers, Notes, and Summary
2nd PUC Kannada Gadyabhaga Chapter 14
ವಾಲ್‌ಪರೈ : ಅಭಿವೃದ್ಧಿ ತಂದ ದುರಂತ
Valparai: Abhivrudhi Tanda Duranta

Scroll Down to Downlaod Valparai: Abhivrudhi Tanda Duranta PDF
I. ಒಂದು ಅಂಕದ ಪ್ರಶ್ನೆಗಳು:
Question 1.
ಬ್ರಿಟಿಷರಲ್ಲಿ ಹಾಯ್ದು ಬಂದಿರುವ ಆನುಷಂಗಿಕ ಗುಣ ಯಾವುದು?
Answer:
ಹೊಸತನ್ನು ಶೋಧಿಸುವ, ಅನ್ವೇಷಿಸುವ ಪ್ರವೃತ್ತಿ ಬ್ರಿಟಿಷರಿಗೆ ಆನುಷಂಗಿಕವಾಗಿ ಬಂದ ಗುಣ.
Question 2.
ವಾಲ್‌ಪರೈಗೆ ಬಂದ ಬ್ರಿಟಿಷ್ ಪ್ರಜೆ ಯಾರು?
Answer:
ವಾಲ್‌ರೈಗೆ ಬಂದ ಬ್ರಿಟಿಷ್ ಪ್ರಜೆ ಕಾರ್ವೆರ್ ಮಾರ್ಷ್.
Question 3.
ಮಾರ್ಷ್ ವಾಲ್ ರೈಗೆ ಬಂದದ್ದು ಯಾವಾಗ?
Answer:
ಮಾರ್ಷ್ ವಾಲ್‌ಪರೈಗೆ ಬಂದದ್ದು 1890 ರಲ್ಲಿ.
Question 4.
ಮಾರ್ಷನ ಜೊತೆಗಾರನ ಹೆಸರೇನು?
Answer:
ಮಾರ್ಷನ ಜೊತೆಗಾರನ ಹೆಸರು ಪೂಣಚ್ಚಿ.
Question 5.
ಕೆಂಪುಪಟ್ಟಿಗೆ ಸೇರಿದ ಪ್ರಾಣಿ ಯಾವುದು?
Answer:
ಕೆಂಪುಪಟ್ಟಿಗೆ ಸೇರಿದ ಪ್ರಾಣಿ ಸಿಂಹಬಾಲದ ಕೋತಿ.
Question 6.
ವಾಲ್‌ಪಿರೈನ ದುರಂತದ ಮೂಲ ಬೀಜಗಳು ಯಾವ ರೂಪದಲ್ಲಿ ಬಂದವು?
Answer:
ವಾಲ್‌ರೈನ ದುರಂತದ ಮೂಲ ಬೀಜಗಳು ಚಹಾ ಗಿಡಗಳ ರೂಪದಲ್ಲಿ ಬಂದವು.
II.ಎರಡು ಅಂಕದ ಪ್ರಶ್ನೆಗಳು:
Question 1.
ಬ್ರಿಟಿಷರು ಬರುವ ಮೊದಲು ವಾಲ್ ಪರೈ ಹೇಗಿತ್ತು?
Answer:
ಬ್ರಿಟಿಷರು ಬರುವ ಮೊದಲು ವಾಲ್‌ರೈ ಗಗನಚುಂಬಿ ಮರಗಳಿಂದ ಕೂಡಿದ್ದು, ಈ ಮರಗಳಮೇಲ್ಪಾವಣಿಯನ್ನು ಭೇದಿಸಿ ಭೂಸ್ಪರ್ಶ ಮಾಡಲು ಸೂರ್ಯಕಿರಣಗಳು ಸೆಣೆಸುತ್ತಿದ್ದವು. ನಡುನಡುವೆ ಹುಲ್ಲುಗಾವಲುಗಳ ಅನಂತ ಬಯಲು, ಅದರ ಏಕತಾನತೆ ಮುರಿಯುವ ಶೋಲಾ ಕಾಡುಗಳು, ಪರ್ವತ ಶ್ರೇಣಿಗಳ ನಡುವೆ ಆಕ್ಷಾಂಶ ರೇಖಾಂಶಗಳನ್ನು ಬರೆದಂತೆ ಹರಿವ ಹಳ್ಳ-ಕೊಳ್ಳಗಳು, ಕಗ್ಗತ್ತಲ ಖಂಡ ಎಂದು ಹೆಸರಾಗಿದ್ದ ಆಫ್ರಿಕಾದಂತೆ ಅದು ಹೊರಗಿನ ಜನರಿಗೆ ಪರಿಚಯವಿರಲಿಲ್ಲ.
Question 2.
ಮಾರ್ಷನನ್ನು ಕಂಡು ಆದಿವಾಸಿಗಳು ಹೇಗೆ ಪ್ರತಿಕ್ರಿಯಿಸಿದರು?
Answer:
ಆದಿವಾಸಿಗಳು ಮಾರ್ಷನ ಕುದುರೆಯ ಖುರ ಪುಟದ ಸದ್ದಿಗೆ ದಿಗಿಲುಗೊಂಡರು. ಅದು ಅವರು ಆವರೆಗೂ ನೋಡಿರದ ಪ್ರಾಣಿ. ಅದರ ಜೊತೆಯಲ್ಲಿ ಟೋಪಿ ಧರಿಸಿದ ನಾಜೂಕು ಪೋಷಾಕಿನ ಮಾರ್ಷ್. ಎರಡು ವಿಚಿತ್ರಗಳನ್ನು ಒಮ್ಮೆಲೆ ಕಂಡ ಅವರು ಹೆದರಿ ಮಕ್ಕಳನ್ನು ಎಳೆದುಕೊಂಡು ದಟ್ಟಡವಿಯಲ್ಲಿ ಮಿಂಚಿನಂತೆ ಮಾಯವಾದರು.
Question 3.
ಕೈಗಾರಿಕೋದ್ಯಮಿಗಳಿಂದ ಕಾಡು ನಾಶವಾದುದು ಹೇಗೆ?
Answer:
ಕೈಗಾರಿಕೋದ್ಯಮವು ಕಾಡಿನ ಗರ್ಭಪಾತಕ್ಕೆ ಮೊದಲಾಯಿತು. ಪ್ರಭಾವದ ನೆರವಿಲ್ಲದ ಗಗನಚುಂಬಿ ಮರಗಳು ನೆಲಕ್ಕುರುಳಿದವು. ದಿಮ್ಮಿಕೊಳ್ಳಲು ಕಂಟ್ರಾಕ್ಟರ್‌ಗಳು ಬಂದರು. ಫಲವತ್ತಾದ ಭೂಮಿಯಲ್ಲಿ ರಸ್ತೆ ನಿರ್ಮಾಣವಾಯಿತು. ಹೊಗೆಯುಗುಳುವ ಗಡಗಡ ಸದ್ದು ಮಾಡುವ ಲಾರಿ, ಟ್ರಾಕ್ಟರ್‌ಗಳು ಬರತೊಡಗಿದವು. ನೀರವತೆ ನಾಶವಾಯಿತು. ನಿರುದ್ಯೋಗ ಸಮಸ್ಯೆಗೆ ಸಂಜೀವಿನಿಯಂತಿದ್ದ ವಾಲ್‌ರೈ ಆರಣ್ಯದ ಮೇಲಿನ ಅತ್ಯಾಚಾರಕ್ಕೆ ಸರ್ಕಾರ ಉತ್ತೇಜನ ನೀಡಿದ ಪರಿಣಾಮ ನಿಬಿಡ ಅರಣ್ಯಗಳೆಲ್ಲ ತೆರವಾಗಿ ಚಹಾ ತೋಟಗಳ ಅನಂತ ಬಯಲಿನ ಪ್ರದೇಶಗಳೇ ಏಕಸ್ವಾಮ್ಯತೆ ಪಡೆದವು.
Question 4.
ಸಿಂಹ ಬಾಲದ ಕೋತಿಗಳಿಗೆ ಒದಗಿದ ತೊಂದರೆ ಏನು?
Answer:
ವಾಲ್‌ಪರೈ ಅರಣ್ಯ ನಾಶದಿಂದ ಸಿಂಹಬಾಲದ ಕೋತಿಗಳು ಸಂಕಷ್ಟದ ಪರಿಸ್ಥಿಯನ್ನು ಎದುರಿಸಬೇಕಾಯಿತು. ವೃಕ್ಷವಾಸಿಗಳಾದ ಕೋತಿಗಳು ಈಗ ಮರದಿಂದ ಮರಕ್ಕೆ ಹಾರುವಂತಿಲ್ಲ. ಬದಲು ನೆಲಕ್ಕೆ ಇಳಿದು ಡಾಂಬರ್ ರಸ್ತೆ ದಾಟಿ ಮತ್ತೊಂದು ಮರ ಹತ್ತಬೇಕು. ರಸ್ತೆ ದಾಟುವ ನಾಗರಿಕ ಬುದ್ದಿ ಇಲ್ಲದ ಹಲವಾರು ಕೋತಿಗಳು ಈಗಾಗಲೇ ವಾಹನಕ್ಕೆ ಸಿಕ್ಕಿ ಅಂಗವಿಕಲಗೊಂಡಿವೆ. ಅವುಗಳಿಗೆ ಆಹಾರ ನೀಡುತ್ತಿದ್ದ ಮರಗಳು ಕ್ಷೀಣಿಸಿವೆ. ಅವುಗಳಿಗೆ ದಯಾ ಮೃತ್ಯು ಕರುಣಿಸಲೂ ಕಾನೂನಿನಲ್ಲಿ ಅವಕಾಶವಿಲ್ಲ. ಏಕೆಂದರೆ ಅವು ಕೆಂಪು ಪಟ್ಟಿಯಲ್ಲಿರುವ ಜೀವಿಗಳು, ಬದುಕುಳಿಯಲಿಕ್ಕಾಗಿ ಅವು ಊರಿನಂಗಳದ ಕಸದ ತೊಟ್ಟಿಗಳಲ್ಲಿ ಆಹಾರ ಹುಡುಕುತ್ತಾ ಬದುಕು ನೂಕುತ್ತಿವೆ.
III. ಸಂದರ್ಭ ಸಹಿತ ವಿವರಿಸಿ:
Question 1.
ಈ ಪ್ರದೇಶಕ್ಕೆ ಆಗ ಹೆಸರೇ ಇರಲಿಲ್ಲ.
Answer:
ಆಯ್ಕೆ: ಈ ವಾಕ್ಯವನ್ನು ಕೃಪಾಕರ ಸೇನಾನಿ, ಕೆ. ಪುಟ್ಟಸ್ವಾಮಿಯವರು ಬರೆದಿರುವ “ವಾಲ್ ರೈ ಅಭಿವೃದ್ಧಿ ತಂದ ದುರಂತ” ಎಂಬ ಲೇಖನದಿಂದ ಆಯ್ಕೆ ಮಾಡಲಾಗಿದೆ.
ಸಂದರ್ಭ: ಪಶ್ಚಿಮ ಘಟ್ಟ ಶ್ರೇಣಿಯ ನಡುವಿನ ಒಂದು ದಟ್ಟ ಅರಣ್ಯ ಪ್ರದೇಶ ವಾಲ್‌ರೈಯನ್ನು ವರ್ಣಿಸುವಾಗ ಈ ಮಾತು ಬಂದಿದೆ.
ವಿವರಣೆ: ಬ್ರಿಟಿಷರು ರಾಷ್ಟ್ರದೆಲ್ಲೆಡೆ ಅಧಿಪತ್ಯ ಸಾಧಿಸಿದ್ದ ಸಮಯದಲ್ಲಿ ಅನನ್ಯಜೀವ ಸಂಕುಲಗಳಿಂದ ಸಮೃದ್ಧವಾಗಿದ್ದ ಕಾಡು ಪ್ರದೇಶ ವಾಲ್ ಪಲ್ಟಿ. ಇದಕ್ಕೆ ಆಗ ಯಾವ ಹೆಸರೂ ಇರಲಿಲ್ಲ. ಗಗನಚುಂಬಿ ಮರಗಳ ಮೇಲ್ಪಾವಣಿಯನ್ನು ಭೇದಿಸಿ ಭೂಸ್ಪರ್ಶ ಮಾಡಲು ಸೂರ್ಯ ಕಿರಣಗಳು ಸೆಣಸುತ್ತಿದ್ದ ದಟ್ಟವಾದ ಕಾಡನ್ನು ಹೊಂದಿದ ಪ್ರದೇಶ. ಹದಿನೆಂಟನೇ ಶತಮಾನದ ಅಂತ್ಯಭಾಗದಲ್ಲಿ ಆ ಕಾಡು ಹೇಗಿತ್ತು ಎನ್ನುವ ಚಿತ್ರಣವನ್ನು ಲೇಖಕರು ನೀಡುತ್ತಾರೆ. ಆ ಪ್ರದೇಶಕ್ಕೆ ಹೆಸರಿಲ್ಲದಿರುವ ಕಾರಣ ಆ ಪ್ರದೇಶ ಹೊರಗಿನ ಪ್ರಪಂಚಕ್ಕೆ ತಿಳಿದಿರಲಿಲ್ಲ. ಜನರು ಪ್ರವೇಶಿಸಿರಲಿಲ್ಲ ಎನ್ನುವುದನ್ನು ಹೇಳುವಾಗ ಈ ಮಾತು ಬಂದಿದೆ.
Question 2.
ಅದು ಅವರು ಆವರೆಗೂ ನೋಡಿರದ ಪ್ರಾಣಿ.
Answer:
ಆಯ್ಕೆ: ಈ ವಾಕ್ಯವನ್ನು ಕೃಪಾಕರ ಸೇನಾನಿ. ಕೆ. ಪುಟ್ಟಸ್ವಾಮಿಯವರು ಬರೆದಿರುವ “ವಾಲ್ ಪರ್ : ಅಭಿವೃದ್ಧಿ ತಂದ ದುರಂತ” ಎಂಬ ಲೇಖನದಿಂದ ಆಯ್ಕೆ ಮಾಡಲಾಗಿದೆ.
ಸಂದರ್ಭ: ವಾಲ್ ರೈ ಅರಣ್ಯಕ್ಕೆ ಕಾರ್ವೆರ್ ಮಾರ್ಷ್ ಪ್ರವೇಶಿಸಿದಾಗ ಅಲ್ಲಿನ ಅದಿವಾಸಿಗಳು ಪ್ರತಿಕ್ರಿಯಿಸಿದ ರೀತಿಯನ್ನು ಹೇಳುವಾಗ ಈ ಸಾಲು ಬಂದಿದೆ.
ವಿವರಣೆ: ವಾಲ್‌ರೈನ ಕಗ್ಗತ್ತಲ ಆರಣ್ಯ ಪ್ರದೇಶಕ್ಕೆ ಮೊದಲ ಬಾರಿಗೆ ಬ್ರಿಟಿಷಿಗೆ ಕಾರ್ವೆರ್ ಮಾರ್ಷ್ ಕುದುರೆಯೇರಿ ಕೊಯಮತ್ತೂರಿನಿಂದ ದಕ್ಷಿಣಕ್ಕೆ ನೂರು ಕಿ.ಮೀ ದೂರಕ್ಕೆ ಬಂದ. ಅಲ್ಲಿನ ಪಕೃತಿಯನ್ನು ಆನಂದಿಸುತ್ತಾ ವಾಲ್‌ಪರೈನಲ್ಲಿ ಕಗ್ಗತ್ತಲು ಆರಣ್ಯದ ಚಕ್ರವ್ಯೂಹದಲ್ಲಿ ಸಿಕ್ಕಿಬಿದ್ದ. ಅದರಿಂದ ಹೊರಬರಲು ಪ್ರಯತ್ನಿಸುತ್ತಿದ್ದ. ಕಾಲುದಾರಿಯೊಂದು ಕಣ್ಣಿಗೆ ಬಿದ್ದು ಗುಡಿಸಲುಗಳಿದ್ದ ಸ್ಥಳಕ್ಕೆ ಹೋದಾಗ ಅಲ್ಲಿನ ಆದಿವಾಸಿಗಳು ಇವನನ್ನು ನೋಡಿ ದಿಗಿಲುಗೊಂಡರು. ಇವನ ಕುದುರೆಯನ್ನು ನೋಡಿದಾಗ ಅವರಲ್ಲಿ ಆದ ಬದಲಾವಣೆಯನ್ನು ಕುರಿತು ಲೇಖಕರು ಹೇಳುವಾಗ ಈ ಮಾತು ಬಂದಿದೆ.
Question 3.
ದುರಂತದ ಮೂಲ ಬೀಜಗಳು ಚಹಾ ಗಿಡದ ರೂಪದಲ್ಲಿ ಬಂದವು.
Answer:
ಆಯ್ಕೆ: ಈ ವಾಕ್ಯವನ್ನು ಕೃಪಾಕರ ಸೇನಾನಿ. ಕೆ. ಪುಟ್ಟಸ್ವಾಮಿಯವರು ಬರೆದಿರುವ “ವಾಲ್‌ರೈ : ಅಭಿವೃದ್ಧಿ ತಂದ ದುರಂತ” ಎಂಬ ಲೇಖನದಿಂದ ಆಯ್ಕೆ ಮಾಡಲಾಗಿದೆ.
ಸಂದರ್ಭ: ವಾಲ್‌ಪಕ್ಕೆ ಅರಣ್ಯಕ್ಕೆ ಕಾರ್ವೆರ್ ಮಾರ್ಷ್ ಪ್ರವೇಶಿಸಿ ಚಹಾಗಿಡಗಳನ್ನು ನೆಟ್ಟ ಪರಿಣಾಮದ ಕುರಿತು ಹೇಳುವಾಗ ಈ ಮಾತು ಬಂದಿದೆ.
ವಿವರಣೆ: ವಾಲ್‌ಪರೈ ಕಗ್ಗತ್ತಲ ಆರಣ್ಯಕ್ಕೆ ಮೊದಲ ಬಾರಿಗೆ ಬ್ರಿಟಿಷಿಗ ಕಾರ್ವೆರ್ ಮಾರ್ಷ್ ಪ್ರವೇಶಿಸಿದ. ಅಲ್ಲಿ ಆತನಿಗೆ ಪೂಣಚ್ಚಿ ಎಂಬ ಆದಿವಾಸಿ ಪರಿಚಯವಾದನು. ಅವನ ನೆರವಿನಿಂದ ಇಡೀ ಅರಣ್ಯವನ್ನೆಲ್ಲ ಮಾರ್ಷ್ ಅನ್ವೇಷಿಸಿದ. ಪ್ರಕೃತಿಯನ್ನು ಆಸ್ವಾದಿಸುತ್ತಾ ತಾನು ಇಲ್ಲಿಯೇ ನೆಲೆಸಬೇಕೆಂದು ತೀರ್ಮಾನಿಸಿದ. ಪೂಣಚ್ಚಿಯ ಸಹಕಾರದಿಂದ ಸ್ಥಳೀಯರ ವಿಶ್ವಾಸ ಸಂಪಾದಿಸಿ ಇಡೀ ಪ್ರದೇಶದ ನಕ್ಷೆ ತಯಾರಿಸಿ ಅಲ್ಲಿ ಆಗಷ್ಟೇ ಭಾರತ ಪ್ರವೇಶಮಾಡಿದ್ದ ಚಹಾ ಗಿಡಗಳನ್ನು ತಂದು ನೆಟ್ಟ ಎಂದು ಹೇಳುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ.
Question 4.
ಕಾರ್ಮಿಕರು ಕೆಂಪು ಬಾವುಟ ಹಿಡಿದು ಹೋರಾಟಕ್ಕೆ ಸಜ್ಜಾಗಿದ್ದಾರೆ.
Answer:
ಆಯ್ಕೆ: ಈ ವಾಕ್ಯವನ್ನು ಕೃಪಾಕರ ಸೇನಾನಿ, ಕೆ. ಪುಟ್ಟಸ್ವಾಮಿಯವರು ಬರೆದಿರುವ “ವಾಲ್ ಪರ್ : ಅಭಿವೃದ್ಧಿ ತಂದ ದುರಂತ” ಎಂಬ ಲೇಖನದಿಂದ ಆಯ್ಕೆ ಮಾಡಲಾಗಿದೆ.
ಸಂದರ್ಭ: ವಾಲ್‌ರೈನಲ್ಲಿ ಜನರ ಬದಲಿಗೆ ಯಂತ್ರಗಳನ್ನು ಬಳಸಿದ್ದರಿಂದ ಅಲ್ಲಿನ ಕಾರ್ಮಿಕರಿಗೆ ಆದಂತಹ ಸ್ಥಿತಿಯನ್ನು ಕುರಿತಾಗಿ ಹೇಳುವ ಸಂದರ್ಭವಿದು.
ವಿವರಣೆ : ವಾಣಿಜ್ಯ ವ್ಯವಹಾರದ ದೃಷ್ಟಿಯಿಂದ ಶ್ರೀಮಂತ ಪ್ರದೇಶವೆಂದು ಗುರುತಿಸಿಕೊಂಡಿದ್ದ ವಾಲ್‌ರೈ ಈಗ ತತ್ತರಿಸುತ್ತಿದೆ. ಅಂತರಾಷ್ಟ್ರೀಯ ವಿದ್ಯಮಾನಗಳು ಅದರ ಆರ್ಥಿಕ ಸ್ಥಿತಿಗತಿಗೆ ಕುತ್ತುತಂದಿದೆ. ವಿಶ್ವ ಮಾರುಕಟ್ಟೆಯಲ್ಲಿ ಚಹಾ ಬೇಡಿಕೆ ಕುಸಿದಿದೆ. ರಫ್ತು ಇಳಿಮುಖಗೊಂಡು ಚಹಾ ತೋಟಗಳು ನಷ್ಟದಲ್ಲಿವೆ. ಬದುಕುಳಿಯಲು ತೋಟದ ಮಾಲಿಕರು ಉತ್ಪಾದನಾ ವೆಚ್ಚ ಕಡಿತಗೊಳಿಸುವ ಅನಿವಾರ್ಯತೆಯಲ್ಲಿದ್ದಾರೆ. ಜನರ ಬದಲು ಯಂತ್ರಗಳನ್ನು ಬಳಸಲು ಮುಂದಾಗಿದ್ದಾರೆ. ಕಂಗಾಲಾದ ಕಾರ್ಮಿಕರು ಬಾವುಟ ಹಿಡಿದು ಹೋರಾಟಕ್ಕೆ ಸಜ್ಜಾಗಿದ್ದಾರೆ. ಸರ್ಕಾರಕ್ಕೆ ಮನವಿ ಕೊಟ್ಟರೂ ಹಸನಾಗುವ ಭರವಸೆಗಳಿಲ್ಲ ಎನ್ನುವಾಗ ಈ ಮಾತು ಬಂದಿದೆ.
Question 5.
ಹಾಡುವುದು ಅವುಗಳಿಗೆ ಅನಿವಾರ್ಯ: ಅವುಗಳ ಕರ್ಮ!
Answer:
ಆಯ್ಕೆ: ಈ ವಾಕ್ಯವನ್ನು ಕೃಪಾಕರ ಸೇನಾನಿ, ಕೆ. ಪುಟ್ಟಸ್ವಾಮಿಯವರು ಬರೆದಿರುವ “ವಾಲ್ ಪರ್ : ಅಭಿವೃದ್ಧಿ ತಂದ ದುರಂತ” ಎಂಬ ಲೇಖನದಿಂದ ಆಯ್ಕೆ ಮಾಡಲಾಗಿದೆ.
ಸಂದರ್ಭ: ವಾಲ್‌ಪರೈ ಅಭಿವೃದ್ಧಿ ತಂದ ದುರಂತದಲ್ಲಿ ವಿಷಲಿಂಗ್ ಭ್ರಷ್‌ಗಳು ನೆಲೆ ಕಳೆದುಕೊಳ್ಳುವಂತಾಯಿತು ಎನ್ನುವಾಗ ಈ ಮಾತು ಬಂದಿದೆ.
ವಿವರಣೆ: ವಾಲ್‌ಪರೈನ ದಟ್ಟಕಾಡು ಅವನತಿಯಾಗುತ್ತಿದ್ದರೂ ಹಾಡು ಹಕ್ಕಿಗಳಾದ ವಿಷಲಿಂಗ್ ಭ್ರಷ್‌ಗಳು ಬದುಕುಳಿಯುವ ಛಲ ತೊಟ್ಟಿವೆ. ಕಾಡು ಕಣ್ಮರೆಯಾದ ಕಾರಣ ಅವು ಬದುಕುಳಿಯಲು ಕೊಳಚೆ ನೀರು ಇರುವ ಚರಂಡಿಗಳಲ್ಲಿ ವಾಸಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಸ್ವಚ್ಛ ನೀರಿನ ಹಳ್ಳ-ಕೊಳ್ಳಗಳಲ್ಲಿ ವಾಸಿಸುತ್ತಿದ್ದ ಈ ಹಕ್ಕಿಗಳು ಈಗ ಮೆಲ್ಲನೆ ಹರಿಯುತ್ತಿರುವ ಕೊಳಚೆ ನೀರನ್ನು ಆಶ್ರಯಿಸಬೇಕಾಗಿದೆ. ನೆಲೆ ಕಳೆದುಕೊಂಡು ನೋವಿನಲ್ಲೂ ಮುಂಜಾನೆ ಬೇಗನೆ ಎದ್ದು ರಾಗವಾಗಿ ಹಾಡುತ್ತಿವೆ. ಹಾಗೆ ಹಾಡುವುದು ಅವುಗಳಿಗೆ ಅನಿವಾರ್ಯವಾಗಿದೆ ಎನ್ನುವಾಗ ಈ ಮಾತು ಬಂದಿದೆ.
IV. ಐದು–ಆರುವಾಕ್ಯಗಳಲ್ಲಿ ಉತ್ತರಿಸಿ:
Question 1.
ವಾಲ್ ಪರೈಗೆ ಬಂದ ಮಾರ್ಷ್ ಅಲ್ಲಿ ಹೇಗೆ ನೆಲೆಯೂರಿದ ? ವಿವರಿಸಿ.
Answer:
1890ರಲ್ಲಿ ಕಾರ್ವೆರ್ ಮಾರ್ಷ್ ಎಂಬ ಬ್ರಿಟಿಷಿಗ ಕುದುರೆಯೇರಿ ಕೊಯಮತ್ತೂರಿನಿಂದ ದಕ್ಷಿಣಕ್ಕೆ ನೂರು ಕಿ.ಮೀ. ದೂರದ ವಾಲ್ ಪರೈಗೆ ಬಂದ. ಜೀರುಂಡೆಗಳ ಗದ್ದಲದಲ್ಲಿ ತನ್ಮಯವಾಗಿದ್ದ ಕಗ್ಗತ್ತಲು ಅರಣ್ಯವನ್ನು ಪ್ರವೇಶಿಸಿದ. ಕಾಡಿನ ಅನ್ವೇಷಣೆಗೆ ಬಂದ ಮಾರ್ಷ್‌ಗೆ ತಾನೊಂದು ಚಕ್ರವ್ಯೂಹದಲ್ಲಿ ಸಿಕ್ಕಿಬಿದ್ದಿರುವುದು ಅರಿವಾಗುವಾಗ ತಡವಾಗಿತ್ತು. ಹೆಜ್ಜೆ ಹೆಜ್ಜೆಗೂ ಸರಪಳಿಯಂತೆ ಮರದಿಂದ ಮರಕ್ಕೆ ತೂಗು ಬಿದ್ದಿದ್ದ ನೂರಾರು ಬಳ್ಳಿಗಳನ್ನು ಭೇದಿಸುವುದೇ ಸವಾಲಾಯಿತು.
ಎದುರಾದ ಸವಾಲುಗಳಿಗೆ ಕುಗ್ಗದೆ ಮುಂದುವರಿದ ಆತನಿಗೆ ಜನರು ಓಡಾಡಿ ಸವೆಸಿದಂತಿದ್ದ ಕಿರುಹಾದಿಯೊಂದು ಗೋಚರಿಸಿತು. ಅರ್ದೇ ಚಾಡನ್ನು ಹಿಡಿದು ಸಾಗಿದಾಗ ನಾಲ್ಕಾರು ಪುಟ್ಟ ಗುಡಿಸಲುಗಳಿದ್ದ ಹಾಡಿ ಪ್ರತ್ಯಕ್ಷವಾಯಿತು. ಗುಡಿಸಲಿನಲ್ಲಿ ಹತ್ತಾರು ಆದಿವಾಸಿಗಳಿದ್ದರು. ಈತನ ಖುರುಪುಟದ ಸದ್ದಿಗೆ ದಿಗಿಲು ಗೊಂಡರು. ಹೆದರಿ ಮಕ್ಕಳನ್ನು ಎಳೆದುಕೊಂಡು ದಟ್ಟಡವಿಯಲ್ಲಿ ಮಿಂಚಿನಂತೆ ಮಾಯವಾದರು.
ಒಂದು ಗುಡಿಸಲಿನಿಂದ ಸದ್ದು ಬಂದಂತಾಗಿ ಆ ಕಡೆ ನೋಡಿದರೆ ಕಟ್ಟುಮಸ್ತಾದ ಆದಿವಾಸಿಯೊಬ್ಬನಿದ್ದ. ಮಾರ್ಷಗೆ ಪರಿಚಯವಾದ ಈ ಆದಿವಾಸಿ ಪೂಣಚ್ಚಿ. ಪೂಣಚ್ಚಿಯ ನೆರವಿನಿಂದ ಇಡೀ ಅರಣ್ಯವನ್ನೆಲ್ಲ ಮಾರ್ಷ್ ಅನ್ವೇಷಿಸಿದ. ಪ್ರಕೃತಿಯನ್ನು ಅಸ್ವಾದಿಸುತ್ತಾ ತಾನು ಇಲ್ಲಿಯೇ ಇದ್ದು ಬಿಡಬೇಕೆಂದು ತೀರ್ಮಾನಿಸಿದ. ಪೂಣಚ್ಚಿಯ ಸಹಾಯದಿಂದ ಸ್ಥಳೀಯರ ವಿಶ್ವಾಸ ಸಂಪಾದಿಸಿ. ಇಡೀ ಪ್ರದೇಶದ ನಕ್ತ ತಯಾರಿಸಿದ. ಜೊತೆಗೆ ಆಗಷ್ಟೆ ಭಾರತ ಪ್ರದೇಶ ಮಾಡಿದ್ದ ಚಹಾ ಹಿಡಗಳನ್ನು ತಂದು ನೆಟ್ಟು ಮಾರ್ಡ್ ನಿಧಾನವಾಗಿ ಕಾಡು ಕಡಿಯುತ್ತಾ, ಚಹಾ ಗಿಡಗಳನ್ನು ಪಳಗಿಸುತ್ತಾ, ತೋಟವನ್ನು ವಿಸ್ತರಿಸುತ್ತಾ ನಡೆದ. ಸಮೃದ್ಧವಾಗಿ ಬೆಳೆದ ತೋಟವನ್ನು ಆನಂದಿಸುತ್ತಾ 1934 ರಲ್ಲಿ ಅಸುನೀಗಿದ.
Question 2.
ಅಂತರಾಷ್ಟ್ರೀಯ ವಿದ್ಯಾಮಾನಗಳಿಂದಾಗಿ ವಾಲ್ ಪರೈಗೆ ಒದಗಿದ ಸಮಸ್ಯೆಗಳೇನು?
Answer:
ತೋಟದ ಯಶಸ್ಸು ಸ್ವಾತಂತ್ರೋತ್ತರದಲ್ಲಿ ಭಾರತದ ಆಗ್ರಗಣ್ಯ ಕೈಗಾರಿಕೋದ್ಯಮಿಗಳನ್ನು ಕೈ ಬೀಸಿ ಕರೆಯಿತು. ಕಾಡಿನ ಗರ್ಭಪಾತಕ್ಕೆ ಮೊದಲಾಯಿತು. ಪ್ರಭಾವದ ನೆರವಿಲ್ಲದ ಗಗನಚುಂಬಿ ಮರಗಳು ನೆಲಕ್ಕುರುಳಿದವು. ದಿಮ್ಮಿಕೊಳ್ಳಲು ಕಂಟ್ರಾಕ್ಟರುಗಳು ಬಂದರು. ಫಲವತ್ತಾದ ಭೂಮಿಯಲ್ಲಿ ರಸ್ತೆ ನಿರ್ಮಾಣವಾಯಿತು. ಹೊಗೆಯುಗುಳುವ, ಗಡಗಡ ಸದ್ದು ಮಾಡುವ ಲಾರಿ, ಟ್ರಾಕ್ಟರ್‌ಗಳು ಬರತೊಡಗಿದವು. ನೀರವತೆ ನಾಶವಾಯಿತು. ನಿರುದ್ಯೋಗ ಸಮಸ್ಯೆಗೆ ಸಂಜೀವಿನಿಯಂತಿದ್ದ ವಾಲ್ ಪರೈ ಅರಣ್ಯದ ಮೇಲಿನ ಅತ್ಯಾಚಾರಕ್ಕೆ ಸರ್ಕಾರ ಉತ್ತೇಜನ ನೀಡಿತು. ಉದ್ಯಮಿಗಳಿಗೆ ಅನುಕೂಲವಾಗುವಂತೆ ವರ್ತಿಸಿತು. ನಿಬಿಡ ಅರಣ್ಯಗಳೆಲ್ಲ ತೆರವಾಗಿ ಚಹಾ ತೋಟಗಳ ಆನಂತ ಬಯಲಿನ ಪ್ರದೇಶಗಳೇ ಏಕಸ್ವಾಮ್ಯತೆ ಪಡೆದವು.
ಈಗ ಇಡೀ ವಾಲ್‌ಪರೈ ಹಸಿರು ಕಂಬಳಿ ಹೊದ್ದು ಮಲಗಿದಂತಿದೆ.ಕಣ್ಣು ಕಾಣುವವರೆಗೂ ಚಹಾ ತೋಟದ ಆನಂತ ಬಯಲು ಇದು ಮಾನವ ಸಾಮರ್ಥಕ್ಕೆದಕ್ಕಿದ ವಿಜಯ ಪತಾಕೆಯಂತಿದೆ. ಆದರೆ ಈ ಅಭಿವೃದ್ಧಿ ಅಲ್ಲಿನ ಜೀವ ಸಂಕುಲಗಳ ಮೇಲೆ ಬೀರಿರಬಹುದಾದ ದುಷ್ಪರಿಣಾಮದ ಬಗ್ಗೆ ಯಾರಿಗೂ ಅರಿವಿರಲಿಲ್ಲ. ಅಲ್ಲಿ ಆದಿಪತ್ಯ ಸ್ಥಾಪಿಸಿ ಸ್ವಚ್ಛಂದವಾಗಿ ಬದುಕಿದ್ದ ಸಿಂಹಬಾಲದ ಕೋತಿಗಳು ವಂಶನಾಶದ ಅಂಚಿನಲ್ಲಿದೆ. ಅಲ್ಲದೆ ಅನೇಕ ಜೀವ ಸಂಕುಲಗಳು ಕಣ್ಮರೆಯಾದವು.
ಅಂತರಾಷ್ಟ್ರೀಯ ವಿದ್ಯಾಮಾನಗಳು ವಾಲ್‌ಪರೈನ ಆರ್ಥಿಕ ಸ್ಥಿತಿಗತಿಗೆ ಕುತ್ತುತಂದಿವೆ. ಜನರು ನಿರ್ವಹಿಸುತ್ತಿದ್ದ ಕೆಲಸಗಳನ್ನು ಯಾಂತ್ರೀಕರಣ ಮಾಡಲು ಮುಂದಾಗಿದ್ದಾರೆ. ಕಾರ್ಮಿಕರು ಹೋರಾಟಕ್ಕೆ ಮುಂದಾಗಿದ್ದಾರೆ ವಾಲ್ ರೈನಲ್ಲಿ ಹಿಂದಿನ ವೈಭವವಿಲ್ಲ. ಪ್ರಶಾಂತ ನೀರವತೆಯ ಕುರುಹಿಲ್ಲ, ಕಾಡನ್ನು ಸೀಳಿ ಅನುರಣಿಸುತ್ತಿದ್ದ ವಾನರಗಳ ಕೇಕೆಯಿಲ್ಲ ಬದಲು ಯಂತ್ರಗಳ ಸದ್ದು ದಿನನಿತ್ಯ ಕಾರ್ಮಿಕರ ಮೆರವಣಿಗೆ, ಪ್ರತಿಭಟನೆಯ ಘೋಷಣಾ ಧ್ವಜಗಳು ತುಂಬಿದೆ. ಸಿಂಹಬಾಲದ ಕೋತಿಗಳು ಅವನತಿಯ ದಿನಗಳನ್ನು ಎಣಿಸುತ್ತಿದೆ. ಈ ಎಲ್ಲ ಸಮಸ್ಯೆಗಳನ್ನು ಅಂತಾರಾಷ್ಟ್ರೀಯ ವಿದ್ಯಾಮಾನದಿಂದಾಗಿ ವಾಲ್ ರೈ ಎದುರಿಸುತ್ತಿದೆ.
Question 3.
ಸಿಂಹ ಬಾಲದ ಕೋತಿಗಳು ಮತ್ತು ಹಾಡುಹಕ್ಕಿಗಳಿಗಾದ ಅನನುಕೂಲಗಳಾವುವು? ವಿವರಿಸಿ.
Answer:
ಚಹಾತೋಟದ ಯಶಸ್ಸು ಸ್ವಾತಂತ್ರೋತ್ತರದಲ್ಲಿ ಭಾರತದ ಅಗ್ರಗಣ್ಯ ಕೈಗಾರಿಕೋದ್ಯಮಿಗಳನ್ನು ಕೈ ಬೀಸಿ ಕರೆಯಿತು. ವಾಲ್ ಪರೈಗೆ ಲಗ್ಗೆಯಿಟ್ಟರು. ಇವರುಗಳಿಂದ ಕಾಡಿನ ಗರ್ಭಪಾತ ಆರಂಭಗೊಂಡಿತು. ಕಾಲಾಂತರದಿಂದ ಈ ಕಾಡಿನಲ್ಲಿ ಅಧಿಪತ್ಯ ಸ್ಥಾಪಿಸಿಕೊಂಡು ಸ್ವಚ್ಛಂದವಾಗಿ ಬದುಕಿದ್ದ ಸಿಂಹಬಾಲದ ಕೋತಿಗಳ ನೆಲೆ ಧ್ವಂಸವಾಯಿತು. ಕಾಡಿನೆಲ್ಲೆಡೆ ಆವರಿಸಿದ್ದ ಅವುಗಳ ಸಂಖ್ಯೆ ಕ್ಷೀಣಿಸಿ ಕೇವಲ ಎರಡು ಸಾವಿರಕ್ಕೆ ಇಳಿದಾಗ ಇಡೀ ಜಗತ್ತೆ ಬೆಚ್ಚಿಬಿದ್ದತು. ವಾಲ್‌ಪ ಮಧ್ಯದಲ್ಲಿ ಪುದುತೋಟಂ ಎಂಬ ತೋಟವಿದೆ. ವಾಲ್ ಪರೈನ ಅಭಿವೃದ್ಧಿಯಿಂದ ನೆಲೆತಪ್ಪಿದ ಸುಮಾರು 30 ಸಿಂಹಬಾಲದ ಕೋತಿಗಳು ಇಲ್ಲಿ ಆಶ್ರಯ ಪಡೆದಿದೆ.
ವೃಕ್ಷವಾಸಿಗಳಾದ ಕೋತಿಗಳು ಈಗ ಮರದಿಂದ ಮರಕ್ಕೆ ಹಾರದೆ ನೆಲಕ್ಕೆ ಇಳಿದು ಡಾಂಬರ್ ರಸ್ತೆದಾಟಿ ಮತ್ತೊಂದು ಮರ ಹತ್ತಬೇಕು. ರಸ್ತೆದಾಟುವ ನಾಗರಿಕ ಬುದ್ದಿ ಇಲ್ಲದ ಹಲವಾರು ಕೋತಿಗಳು ಈಗಾಗಲೇ ವಾಹನಕ್ಕೆ ಸಿಕ್ಕಿ ಅಂಗವಿಕಲಗೊಂಡಿವೆ. ಅವುಗಳಿಗೆ ಆಹಾರ ನೀಡುತ್ತಿದ್ದ ಮರಗಳು ಕ್ಷೀಣಿಸುತ್ತಿವೆ. ಅವು ಕೆಂಪು ಪಟ್ಟಿಯಲ್ಲಿರುವ ಜೀವಿಯಾದ್ದರಿಂದ ದಯಾಮೃತ್ಯು ಕರುಣಿಸಲೂ ಕಾನೂನಿನಲ್ಲಿ ಅವಕಾಶವಿಲ್ಲ.
ಹಾಡುಹಕ್ಕಿಗಳಾದ ವಿಷಲಿಂಗ್ ಭ್ರಷ್‌ಗಳು ಬದುಕುಳಿಯುವ ಛಲ ತೊಟ್ಟಿದೆ. ಮಿನುಗುವ ಹಸಿರು ಪಾಚಿಗಳನ್ನು ಹೊದ್ದು ಮಲಗಿದ ಕಲ್ಲು ಬಂಡೆಗಳ ನಡುವೆ ನುಸುಳಿ ಹರಿಯುತ್ತಿದ್ದ ಸ್ವಚ್ಛ ನೀರಿನ ಹಳ್ಳ ಕೊಳ್ಳಗಳು ಇವುಗಳ ಬದುಕಿಗೆ ಆಧಾರವಾಗಿದ್ದವು. ಈಗ ಪರಿಸ್ಥಿತಿ ಬದಲಾಗಿದೆ. ಝರಿ ಜಲಪಾತಗಳ ಪಾತ್ರಗಳನ್ನೆಲ್ಲ ಆಕ್ರಮಿಸಿ ಮೆಲ್ಲನೆ ತೆವಳುತ್ತಿರುವ ಕೊಳಚೆ ನೀರಿನ ಚರಂಡಿಗಳ ಈ ಹಾಡು ಹಕ್ಕಿಗಳ ನೆಲೆಯಾಗಿದೆ. ಕೈಗಾರಿಕೋದ್ಯಮದ ಜನರ ಓಡಾಟದ ಕಾರಣದಿಂದ ಕಾಡಿನ ನೀರವತೆ ನಾಶವಾಗಿ ಕಾಡು ಮಣ್ಣುಪಾಲಾದ ಕಾರಣದಿಂದ ಸಿಂಹಬಾಲದ ಕೋತಿಗಳು ಹಾಗೂ ಹಾಡುಹಕ್ಕಿಗಳಿಗೆ ಅನಾನುಕೂಲವುಂಟಾಯಿತು.
Question 4.
ಅಭಿವೃದ್ಧಿ ತರುವ ಪ್ರಾಕೃತಿಕ ನಾಶದ ಸ್ವರೂಪವನ್ನು ಪಠ್ಯದ ಹಿನ್ನೆಲೆಯಲ್ಲಿ ಚರ್ಚಿಸಿ.
Answer:
ಅಭಿವೃದ್ಧಿ ಹೆಸರಿನಲ್ಲಿ ವಾಲ್ ಪರೈನ ಸೊಬಗು, ಅರಣ್ಯ ಸಂಪತ್ತು ನಾಶವಾಗುವುದರ ಜೊತೆಗೆ ಅಲ್ಲಿನ ಜೀವ ಸಂಕುಲಕ್ಕೆ ಅಪಾರ ಹಾನಿಯಾಯಿತು. ಮಾನವನ ಅಭಿವೃದ್ಧಿಯ ಆಸೆಗಳು ಕಾಡನ್ನು ನಾಶಮಾಡುವ ಮೂಲಕ ಜೈವಿಕ ಜಗತ್ತಿನ ಏರುಪೇರುಗಳಿಗೆ ಕಾರಣವಾಗುವ ದುರಂತಗಳನ್ನು ವಾಲ್ ರೈನಲ್ಲಿ ನೋಡಬಹುದು.
ವಾಲ್‌ಪರೈ ಎಂಬ ದಟ್ಟವಾದ ಕಾಡಿನಲ್ಲಿ ಮಾರ್ಪ್ ಎಂಬ ಬ್ರಿಟಿಷ್ ಅಧಿಕಾರಿ ಚಹಾ ಬೀಜಗಳನ್ನು ಬಿತ್ತಿಕಾಡಿನ ನಾಶಕ್ಕೆ ಕಾರಣನಾದ. ಈ ಕಾಡು ಒಂದು ಕಾಲದಲ್ಲಿ ಗಗನಚುಂಬಿ ಮರಗಳ ಮೇಲ್ಟಾವಣಿಯನ್ನು ಭೇದಿಸಿ ಭೂಸ್ಪರ್ಶ ಮಾಡಲು ಸೂರ್ಯಕಿರಣಗಳು ಸೆಣೆಸುತ್ತಿದ್ದ ದಟ್ಟವಾದ ಕಾಡು, ನಡುನಡುವೆ ಹುಲ್ಲುಗಾವಲುಗಳ ಅನಂತ ಬಯಲು, ಅದರ ಏಕತನ ಮುರಿಯುವ ಶೋಲಾಕಾಡುಗಳು, ಪರ್ವತ ಶ್ರೇಣಿಗಳ ನಡುವೆ ಹಳ್ಳಕೊಳ್ಳಗಳು – ಈ ಎಲ್ಲಾ ಅಂಶಗಳಿಂದ ಅರಣ್ಯ ಸುಂದರವಾಗಿತ್ತು.
ನಂತರದ ದಿನಗಳಲ್ಲಿ ಮಾರ್ಷ್ ಆಗಮಿಸುತ್ತಾನೆ. ಜೀರುಂಡೆ ಗದ್ದಲದಲ್ಲಿ ತನ್ಮಯವಾಗಿದ್ದ ಕಗ್ಗತ್ತಲು ಆರಣ್ಯವನ್ನು ಪ್ರವೇಶಿಸಿ ಚಹಾ ತೋಟವನ್ನು ವಿಸ್ತರಿಸಿ, ಅದನ್ನು ಆನಂದಿಸುತ್ತಾ ಅಸುನೀಗುತ್ತಾನೆ. ತದನಂತರ ಚಹಾತೋಟವು ಆಗ್ರಗಣ್ಯ ಕೈಗಾರಿಕೋದ್ಯಮಿಗಳನ್ನು ಕೈಬೀಸಿ ಕರೆಯಿತು. ಪ್ರಭಾವದ ನೆರವಿಲ್ಲದ ಗಗನಚುಂಬಿ ಮರಗಳು ನೆಲಕ್ಕೆ ಉರುಳಿದವು. ಫಲವತ್ತಾದ ಭೂಮಿಯಲಿ ರಸ್ತೆ ನಿರ್ಮಾಣವಾಗಿ ಗಡಗಡ ಸದ್ದು ಮಾಡುವ ಲಾರಿ, ಟ್ರಾಕ್ಟರ್‌ಗಳು ಬರತೊಡಗಿದವು. ನೀರವತೆ ನಾಶವಾಯಿತು. ಅರಣ್ಯದ ಮೇಲಿನ ಅತ್ಯಾಚಾರಕ್ಕೆ ಸರ್ಕಾರ ಉತ್ತೇಜನ ನೀಡಿತು. ಅಂತರರಾಷ್ಟ್ರೀಯ ವಿದ್ಯಾಮಾನದಿಂದಾಗಿ ಕಾರ್ಮಿಕರು ನಿರುದ್ಯೋಗಿಗಳಾದರು.
ಅಭಿವೃದ್ಧಿ ಹೆಸರಿನಲ್ಲಿ ವಾಲ್ ಪರೈನ ನೈಸರ್ಗಿಕ ಸೊಬಗು, ಅರಣ್ಯ ಸಂಪತ್ತು ನಾಶವಾಗುವುದರ ಜೊತೆಗೆ ಅಲ್ಲಿನ ಜೀವ ಸಂಕುಲಕ್ಕೆ ಅಪಾರ ಹಾನಿಯಾಯಿತು. ಕಾಲಾಂತರದಿಂದ ಈ ಕಾಡಿನಲ್ಲಿ ವಾಸಿಸಿ, ಸ್ವಚ್ಛಂದವಾಗಿ ಬದುಕುತ್ತಿದ್ದ ಸಿಂಹಬಾಲದ ಕೋತಿಗಳ ನೆಲೆ ತಪ್ಪಿದಂತಾಯಿತು. ಅವುಗಳು ಈಗ ಮರದಿಂದ ಮರಕ್ಕೆ ಹಾರುವಂತಿಲ್ಲ. ನಡೆದಾಡಿದರೆ ವಾಹನಗಳಿಗೆ ಸಿಲುಕಿ ಅಂಗವೈಕಲ್ಯವನ್ನು ಹೊಂದುತ್ತಿದ್ದವು. ಅವುಗಳ ಸಂಖ್ಯೆ ಕ್ಷೀಣಿಸಿ ಕೆಂಪು ಪಟ್ಟಿಗೆ ಸೇರಲ್ಪಟ್ಟವು. ಸ್ವಚ್ಛ ನೀರಿನಲ್ಲಿ ಬದುಕುತ್ತಿದ್ದ ಹಾಡುಹಕ್ಕಿಗಳು [ವಿಷ್‌ಲಿಂಗ್‌ಡ್ರಷ್) ಕೊಳಚೆ ನೀರಿನ ಚರಂಡಿಗಳಲ್ಲಿ ನೆಲೆಸುವಂತಾಗಿದೆ. ನಾಗರಿಕತೆಯ ಉನ್ನತಿಯ ಆದರ್ಶದೊಡನೆ ಆರುಭವಾದ ಅಭಿವೃದ್ಧಿ ಮನುಕುಲದ ಪತನಕ್ಕೆ ಕಾರಣವಾದಂತಾಯಿತು.
ಲೇಖಕರ ಪರಿಚಯ
ಕೃಪಾಕರ (೦೭೦೭೧೯೫೬) ಮತ್ತು ಸೇನಾನಿ (೦೧.೦೧. ೧೯೬೦) ಇಬ್ಬರೂ ವನ್ಯಜೀವಿ ಛಾಯಾಗ್ರಹಣದಲ್ಲಿ ಖ್ಯಾತನಾಮರು. ಮೈಸೂರಿನವರು. ಏಷ್ಯಾದಲ್ಲಿಯೇ ಮೊಟ್ಟಮೊದಲ ಬಾರಿಗೆ ಕಾಡಿನಲ್ಲಿರುವ ಸೀಳುನಾಯಿಗಳನ್ನು ಕುರಿತ ಸಾಕ್ಷ್ಯ ಚಿತ್ರಕ್ಕಾಗಿ ಪ್ರತಿಷ್ಠಿತ ಗ್ರೀನ್ ಆಸ್ಕರ್ ಪುರಸ್ಕಾರಕ್ಕೆ ಪಾತ್ರರಾದವರು ನಮ್ಮ ಸುತ್ತಮುತ್ತಲಿನ ಜೀವಜಾಲದ ಬಗ್ಗೆ ಅಪಾರ ಕಾಳಜಿಯುಳ್ಳವರು, ಕಾಡುಗಳ್ಳ ವೀರಪ್ಪನ್ ನಿಂದ ಅಪಹರಣಕ್ಕೊಳಗಾಗಿ, ತಮ್ಮ ಸಜ್ಜನಿಕೆಯ ವ್ಯಕ್ತಿತ್ವದಿಂದ ಪಾರಾಗಿ ಬಂದವರು.
ಇವರಿಬ್ಬರೂ ಒಟ್ಟಾಗಿ ತೆಗೆದ ಛಾಯಾಚಿತ್ರಗಳು, ಸಾಕ್ಷಚಿತ್ರಗಳು ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿವೆ. ಮೈಸೂರಿನಲ್ಲಿ ವಾಸವಿರುವ ಇವರು ಕಾಡಿನಲ್ಲಿರುವುದೇ ಹೆಚ್ಚು. ಇವರಿಬ್ಬರೂ ಕೆ. ಪುಟ್ಟಸ್ವಾಮಿಯವರೊಂದಿಗೆ ಸೇರಿ ರಚಿಸಿರುವ ‘ಜೀವಜಾಲ’ ಎಂಬ ಕೃತಿ ಅತ್ಯಂತ ಪ್ರಸಿದ್ಧವಾಗಿದೆ. ಡಾ. ಕೆ. ಪುಟ್ಟಸ್ವಾಮಿ ತಮ್ಮ ‘ಸಿನಿಮಾಯಾನ’ ಕೃತಿಗಾಗಿ ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿ ಪಡೆದ ಪ್ರತಿಭಾವಂತರು. ತಮ್ಮ ಪರಿಸರ ಮತ್ತು ವಿಜ್ಞಾನ ಸಂಬಂಧ ಬರಹಗಳಿಂದ ಪ್ರಸಿದ್ಧರಾಗಿದ್ದಾರೆ.
ಮಾನವನ ಪ್ರವಾಸ ಮತ್ತು ಸಾಹಸ ಪ್ರವೃತ್ತಿಗಳು ಕಾಡನ್ನು ನಾಶಮಾಡುವ ಮೂಲಕ ಜೈವಿಕ ಜಗತ್ತಿನ ವಿರುಪೇರುಗಳಿಗೆ ಕಾರಣವಾಗುವ ದುರಂತಗಳನ್ನು ಕುರಿತು ಪ್ರಸ್ತುತ ಲೇಖನವು ಗಮನ ಸೆಳೆದಿದೆ. ಮಿಲಿಯಾಂತರ ವರ್ಷಗಳಿಂದ ವಿಕಾಸಗೊಂಡು ಆರಳಿದ ಜೈವಿಕ ವೈವಿಧ್ಯ ನಾಶವನ್ನು ಮನುಷ್ಯನ ಸ್ವಾರ್ಥ ಮೂಲ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಸಿಕೊಂಡು ಬಂದಿರುವುದಕ್ಕೆ ‘ವಾಲ್‌ರೈ’ ನೆಪಮಾತ್ರವಾಗಿದೆ.