2nd PUC Kannada Chapter 12

2nd PUC Kannada Question and Answer – Omme Nagutteve

Looking for 2nd PUC Kannada textbook answers? You can download Chapter 12: Omme Nagutteve Questions and Answers PDF, Notes, and Summary here. 2nd PUC Kannada Kavyabhaga solutions follow the Karnataka State Board Syllabus, making it easier for students to revise and score higher in exams.

Karnataka 2nd PUC Kannada Textbook Answers—Reflections Chapter 12

Omme Nagutteve Questions and Answers, Notes, and Summary

2nd PUC Kannada Kavyabhaga Chapter 12

ಒಮ್ಮೆ ನಗುತ್ತೇವೆ

Omme Nagutteve

2nd PUC Kannada Chapter 12 Omme Nagutteve
Scroll Down to Download Omme Nagutteve PDF
I. ಒಂದು ವಾಕ್ಯದಲ್ಲಿ ಉತ್ತರಿಸಿ:

Question 1.
ದನಗಳಿಗೆ ಏನಿಲ್ಲ?
Answer:
ದನಗಳಿಗೆ ಮೇವಿಲ್ಲ.

Question 2.
ಜನರಿಗೆ ಯಾವುದಕ್ಕೆ ಗತಿಯಿಲ್ಲ?
Answer:
ಜನರಿಗೆ ಗಂಜಿಗೂ ಗತಿಯಿಲ್ಲ.

Question 3.
ಕವಯಿತ್ರಿ ಯಾರಲ್ಲಿ ಮೊರೆಯಿಡುತ್ತಾಳೆ?
Answer:
ಕವಯಿತ್ರಿ ತಾನೆಂದೂ ನಂಬಿರದ ದೇವರಲ್ಲಿ ಮೊರೆಯಿಡುತ್ತಾಳೆ.

Question 4.
ಕವಯಿತ್ರಿ ಯಾವುದಕ್ಕೆ ಧಿಕ್ಕಾರವಿರಲಿ ಎನ್ನುತ್ತಾರೆ?
Answer:
ಕವಯಿತ್ರಿ ತನ್ನವರ ದೀನದಲಿತತನಕ್ಕೆ ಧಿಕ್ಕಾರವಿರಲಿ ಎನ್ನುತ್ತಾರೆ.

Question 5.
ಜನರನ್ನು ಯಾವುದರಿಂದ ಪಾರು ಮಾಡುತ್ತೇನೆಂದು ಕವಯಿತ್ರಿ ಹೇಳುವರು?
Answer:
ತಾವು ಬೇಯುತ್ತಿರುವ ಧಗೆಯಿಂದ ಮತ್ತು ಹೊಗೆಯಿಂದ ಜನರನ್ನು ಪಾರು ಮಾಡುತ್ತೇನೆಂದು ಕವಯಿತ್ರಿ ಹೇಳುವರು

II. ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ:

Question 1.
ದನಗಳಿಗೆ ಜನಗಳಿಗೆ ಏನೇನು ಇಲ್ಲ?
Answer:
ದನಗಳಿಗೆ ಮೇವು ಇಲ್ಲ. ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ತಿನ್ನಲು ಗಂಜಿಯೂ ಇಲ್ಲದಂತಾಗಿದೆ. ಅವರು ಹಸಿವಿನಿಂದ ನರಳುತಿದ್ದಾರೆ. ಸತ್ತ ದನಗಳನ್ನು ತಿನ್ನುತ್ತಿದ್ದಾರೆ.

Question 2.
ಕವಯಿತ್ರಿ ಮುಗಿಲತ್ತಕೈ ಚಾಚಿ ಏಕೆ ನಿಂತಿದ್ದಾರೆ?
Answer:
ದನಗಳ ಜನಗಳ ಈ ಸ್ಥಿತಿಯನ್ನು ಕಂಡು ದೇಹ ಧಗಧಗಿಸಿ ಉರಿಯುತ್ತಿದೆ. ನಾನು ಉರಿಯುವ ಜ್ವಾಲಾಮುಖಿಯಾಗಿದ್ದೇನೆ ಎನ್ನುತ್ತಾರೆ ಕವಯಿತ್ರಿ. ದನಗಳ ಜನಗಳ ಕಷ್ಟ ನೋಡಲಾಗದೇ ಕವಯಿತ್ರಿ. ಮಳೆಗಾಗಿ ಮುಗಿಲತ್ತ ಕೈ ಚಾಚಿ ನಿಂತಿದ್ದಾರೆ.

Question 3.
ಜನರನ್ನುಕವಯಿತ್ರಿ ಯಾವ ಯಾವುದರಿಂದ ಪಾರು ಮಾಡುವುದಾಗಿ ಹೇಳಿದ್ದಾರೆ?
Answer:
ಬೆಂಕಿ ನಾಲಗೆಯನ್ನು ಚಾಚಿ ನನ್ನವರ ದಾರಿದ್ರವನ್ನು ನಾಶ ಮಾಡುತ್ತೇನೆ. ಅವರ ನೋವನ್ನೇ ಸರ್ವನಾಶ ಮಾಡುತ್ತೇನೆ. ದುಃಖವನ್ನು ಅಳಿಸಿ ಹಾಕುತ್ತೇನೆ. ನನ್ನ ಪ್ರೀತಿಯ ಜನರನ್ನು ಎಲ್ಲರೂ ನಾನೇ ಆದವರನ್ನು ನಾನು ನಗಿಸುತ್ತೇನೆ. ಸಂತೋಷದಲ್ಲಿ ತೇಲಿಸುತ್ತೇನೆ. ತಾವು ಪಡುತ್ತಿರುವ ಧಗೆಯಿಂದ ಹೊರನುಗಿಸುತ್ತೇನೆ. ಆವರಿಸಿರುವ ಹೊಗೆಯಿಂದ ಪಾರು ಮಾಡುತ್ತೇನೆ. ಅವರನ್ನು ನಗಿಸುತ್ತೇನೆ ಎಂದಿದ್ದಾರೆ.

Question 4.
ಕವಯಿತ್ರಿ ನಗುವ ನಗು ಎಂತಹುದು?
Answer:
ನನ್ನವರನ್ನು ಕಷ್ಟದಿಂದ, ಹಸಿವಿನಿಂದ ಪಾರುಮಾಡಿ ಅವರನ್ನು ನಗಿಸುತ್ತೇನೆ. ಆಗ ಮಾತ್ರ ನಾನು ನಗುತ್ತೇನೆ ಎಂದ ಕವಯಿತ್ರಿ ತಾನು ನಗುವ ನಗು ಕೊನೆಯಿಲ್ಲದ್ದು, ಮೊನೆಯಿಲ್ಲದ್ದು ಎಂದಿದ್ದಾರೆ. ಆಕಾಶದಲ್ಲಿ ಕಾರ್ಮೋಡ ಕವಿಸುವ ನಗು. ಮಳೆ ಸುರಿಸುವ ನಗು, ಹೊಳೆ ಹರಿಸುವ ನಗು, ಬೆಳೆ ಬೆಳೆಸುವ ನಗು, ದನ ಜನ ಎಲ್ಲಕೂಡಿ ನಗುತ್ತೇವೆ. ಒಮ್ಮೆಯಾದರೂ ನಕ್ಕೇ ನಗುತ್ತೇವೆ ಎಂದಿದ್ದಾರೆ.

III. ಸಂದರ್ಭ ಸಹಿತ ವಿವರಿಸಿ:

Question 1.
ಗಂಜಿಗೂ ಗತಿಯಿಲ್ಲ.

Answer:
ಆಯ್ಕೆ : ಈ ಸಾಲನ್ನು ಪ್ರೊ.ಬಿ.ಸುಕನ್ಯಾ ಮಾರುತಿ ಅವರು ಬರೆದ ಒಮ್ಮೆ ನಗುತ್ತೇವೆ ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ: ಬಡವರು ಎದುರಿಸುತ್ತಿರುವ ಕಷ್ಟವನ್ನು ಹೇಳುವ ಸಂದರ್ಭದಲ್ಲಿ ಈ ಸಾಲು ಬಂದಿದೆ.
ವಿವರಣೆ : ದನಗಳಿಗೆ ಮೇವು ಇಲ್ಲ. ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ತಿನ್ನಲು ಗಂಜಿಯೂ ಇಲ್ಲದಂತಾಗಿದೆ. ನನ್ನವರು ಹಸಿವಿನಿಂದ ನರಳುತ್ತಿದ್ದಾರೆ. ಸತ್ತ ದನಗಳನ್ನು ತಿನ್ನುತ್ತಿದ್ದಾರೆ. ಇದನ್ನುನೋಡಿ ಸುಮ್ಮನಿರಲು ಸಾಧ್ಯವಾಗುತ್ತಿಲ್ಲ. ಇದನ್ನೆಲ್ಲಾ ಕಣ್ಣಾರೆ ಕಾಣುತ್ತಾ ಕತಕತನೆ ಕುದಿಯುವ ಅಗ್ನಿಪರ್ವತವಾಗಿದ್ದೇನೆ ಎನ್ನುತ್ತಾರೆ ಕವಯಿತ್ರಿ.

Question 2.
ಧಗಧಗ ಉರಿವ ಜ್ವಾಲಾಮುಖಿಯಾಗಿದ್ದೇನೆ.

Answer:
ಆಯ್ಕೆ : ಈ ಸಾಲನ್ನು ಪ್ರೊ.ಬಿ.ಸುಕನ್ಯಾ ಮಾರುತಿ ಅವರು ಬರೆದ ಒಮ್ಮೆ ನಗುತ್ತೇವೆ ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ: ಬಡವರ ಕಷ್ಟಕ್ಕೆ ಲೇಖಕಿ ಸ್ಪಂದಿಸುವ ಸಂದರ್ಭವಿದು.
ವಿವರಣೆ: ದನಗಳಿಗೆ ಮೇವು ಇಲ್ಲ. ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ತಿನ್ನಲು ಗಂಜಿಯೂ ಇಲ್ಲದಂತಾಗಿದೆ. ನನ್ನವರು ಹಸಿವಿನಿಂದ ನರಳುತ್ತಿದ್ದಾರೆ. ಸತ್ತ ದನಗಳನ್ನು ತಿನ್ನುತ್ತಿದ್ದಾರೆ. ದನಗಳ ಜನಗಳ ಈ ಸ್ಥಿತಿಯನ್ನು ಕಂಡು ಏನೂ ಮಾಡಲಾಗದೇ ಅವರ ಸ್ಥಿತಿ ನೋಡಲಾಗದೇ ಅವರಿಗಾಗಿ ಮುಗಿಲತ್ತ ಕೈ ಚಾಚಿ ನಿಂತಿದ್ದೇನೆ. ದೇಹ ಧಗಧಗಿಸಿ ಉರಿಯುತ್ತಿದೆ. ನಾನು ಉರಿಯುವ ಜ್ವಾಲಾಮುಖಿಯಾಗಿದ್ದೇನೆ ಎನ್ನುತ್ತಾರೆ ಕವಯಿತ್ರಿ.

Question 3.
ದೀನ ದಲಿತತನಕ್ಕೆ ಧಿಕ್ಕಾರವಿರಲಿ!

Answer:
ಆಯ್ಕೆ : ಈ ಸಾಲನ್ನು ಪ್ರೊ.ಬಿ.ಸುಕನ್ಯಾ ಮಾರುತಿ ಅವರು ಬರೆದ ಒಮ್ಮೆ ನಗುತ್ತೇವೆ ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ: ಬಡವರ ಕಷ್ಟಕ್ಕೆ ಸ್ಪಂದಿಸುವ ಲೇಖಕಿಯು ರೋಷವನ್ನು ವ್ಯಕ್ತಪಡಿಸುವ ಸಂದರ್ಭವಿದು.
ವಿವರಣೆ : ನನ್ನ ಕಂಬನಿಯ ಲಾವಾರಸದಲ್ಲಿ ವಿಶ್ವವನ್ನೇ ಮುಳುಗಿಸಿ ಬಿಡುತ್ತೇನೆ. ಬೆಂಕಿ ನಾಲಗೆಯನ್ನು ಚಾಚಿ ನನ್ನವರ ದಾರಿದ್ರವನ್ನು ನಾಶ ಮಾಡುತ್ತೇನೆ. ಅವರ ನೋವನ್ನೇ ಸರ್ವನಾಶ ಮಾಡುತ್ತೇನೆ. ದುಃಖವನ್ನು ಅಳಿಸಿ ಹಾಕುತ್ತೇನೆ. ಅವರ ದೀನ ದಲಿತತನಕ್ಕೆ ಧಿಕ್ಕಾರವಿರಲಿ ಎಂದು ಕವಯಿತ್ರಿ ಈ ಸಾಲಿನಲ್ಲಿ ಹೇಳಿದ್ದಾರೆ.

Question 4.
ಒಮ್ಮೆ ನಕ್ಕೇ ನಗುತ್ತೇವೆ.

Answer:
ಆಯ್ಕೆ : ಈ ಸಾಲನ್ನು ಪ್ರೊ. ಬಿ. ಸುಕನ್ಯಾ ಮಾರುತಿವರು ಬರೆದ ಒಮ್ಮೆ ನಗುತ್ತೇವೆ ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ: ಬಡವರೂ ಸಹ ನಗುವ ಕಾಲ ಬರುತ್ತದೆ ಎನ್ನುವ ಆಶಯವನ್ನು ವ್ಯಕ್ತಪಡಿಸುವ ಸಂದರ್ಭವಿದು.
ವಿವರಣೆ : ಇಲ್ಲಿ ಲೇಖಕಿ ನನ್ನವರನ್ನು ಕಷ್ಟದಿಂದ, ಹಸಿವಿನಿಂದ ಪಾರುಮಾಡಿ ಅವರನ್ನು ನಗಿಸುತ್ತೇನೆ. ಆಗ ಮಾತ್ರ ನಾನು ನಗುತ್ತೇನೆ ಎಂದಿದ್ದಾರೆ. ಕವಯಿತ್ರಿ ತಾನು ನಗುವ ನಗು ಕೊನೆಯಿಲ್ಲದ್ದು, ಮೊನೆಯಿಲ್ಲದ್ದು ಎಂದಿದ್ದಾರೆ. ಆಕಾಶದಲ್ಲಿ ಕಾರ್ಮೋಡ ಕವಿಸುವ ನಗು, ಮಳೆ ಸುರಿಸುವ ನಗು, ಹೊಳೆ ಹರಿಸುವ ನಗು, ಬೆಳೆ ಬೆಳೆಸುವ ನಗು, ದನಜನ ಎಲ್ಲ ಕೂಡಿ ನಗುತ್ತೇವೆ. ಒಮ್ಮೆಯಾದರೂ ನಕ್ಕೇ ನಗುತ್ತೇವೆ ಎಂದಿದ್ದಾರೆ. ಅಂತಹ ಒಳ್ಳೆಯ ಸಮಯ ಬಂದೇ ಬರುತ್ತದೆ ಎನ್ನುವ ಸದಾಶಯ ಲೇಖಕಿಯದು.

IV. ಐದು ಆರು ವಾಕ್ಯಗಳಲ್ಲಿ ಉತ್ತರಿಸಿ :

Question 1.
ಕವಯಿತ್ರಿ ಅಗ್ನಿಪರ್ವತ ಜ್ವಾಲಾಮುಖಿ ಆಗಿದ್ದೇನೆ ಎನ್ನಲು ಕಾರಣಗಳೇನು?

Answer:
ನಮ್ಮದು ಸಮೃದ್ಧ ದೇಶವಾದರೂ ಸಮಾನತೆಗಾಗಿ ಸಮೃದ್ಧತೆಯ ಬದುಕಿಗಾಗಿ ನಿರಂತರ ಹೋರಾಟ ನಡೆದೇ ಇದೆ. ಶ್ರೀಮತಿ ಸುಕನ್ಯಾ ಮಾರುತಿ ಅವರು ಬರೆದಿರುವ ಒಮ್ಮೆ ನಗುತ್ತೇವೆ ಎಂಬ ಕವಿತೆಯು ವ್ಯವಸ್ಥೆಯು ವ್ಯವಸ್ಥೆಯ ವಿರುದ್ಧ ಎತ್ತಿರುವ ಬಂಡಾಯದ ಧ್ವನಿಯಾಗಿದೆ. ಸಾಮಾಜಿಕ ಅಸಮಾನತೆಯು ಬಡವರನ್ನು ಹಸಿವಿನ ಸುಳಿಯಲ್ಲಿ ಸಿಲುಕಿಸಿ ನರಳಿಸುತ್ತಿದೆ. ಶತಶತಮಾನಗಳಿಂದ ಶೋಷಣೆಗೆ ಒಳಗಾದ ಜನ ಸಮಪಾಲು-ಸಮಬಾಳು ಪಡೆಯಲು ಅವಿರತ ಪ್ರಯತ್ನದಲ್ಲಿದ್ದಾರೆ.

ಆದರೂ ಇಲ್ಲಿ ಎಲ್ಲ ಇದ್ದರೂ ಯಾರಿಗುಂಟು ಯಾರಿಗಿಲ್ಲ’ ಎನ್ನುವ ವಾತಾವರಣ ಇದೆ.
ದನಗಳಿಗೆ ಮೇವು ಇಲ್ಲದೇ ಸಾಯುತ್ತಿವೆ. ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ತಿನ್ನಲು ಗಂಜಿಯೂ ಇಲ್ಲದಂತಾಗಿದೆ. ನನ್ನವರು ಹಸಿವಿನಿಂದ ನರಳುತ್ತಿದ್ದಾರೆ. ಸತ್ತ ದನಗಳನ್ನು ತಿನ್ನುತ್ತಿದ್ದಾರೆ. ಇದನ್ನು ನೋಡಿ ಸುಮ್ಮನಿರಲು ಸಾಧ್ಯವಾಗುತ್ತಿಲ್ಲ.

ಇದನ್ನೆಲ್ಲಾ ಕಣ್ಣಾರೆ ಕಾಣುತ್ತಾ ಕತಕತನೆ ಕುದಿಯುವ ಅಗ್ನಿಪರ್ವತವಾಗಿದ್ದೇನೆ ಎನ್ನುತ್ತಾರೆ ಕವಯಿತ್ರಿ. ಏನೂ ಮಾಡಲಾಗದೇ ಅವರ ಸ್ಥಿತಿ ನೋಡಲಾಗದೇ ಅವರಿಗಾಗಿ ಮುಗಿಲತ್ತ ಕೈ ಚಾಚಿ ನಿಂತಿರುವ ಕವಯಿತ್ರಿ ಧಗಧಗಿಸಿ ಉರಿವ ಜ್ವಾಲಾಮುಖಿ ಆಗಿದ್ದೇನೆ ಎಂದಿದ್ದಾರೆ. ಬಡವರ ನಿರ್ಗತಿಕರ ಆರ್ತ ನೋವಿಗೆ ಮನಮಿಡಿಯುವ ಅಂಶ ಈ ಕವಿತೆಯಲ್ಲಿದೆ.

Question 2.
‘ಒಮ್ಮೆ ನಗುತ್ತೇವೆ’ ಎಂಬ ಕವಿತೆಯಲ್ಲಿ ವ್ಯಕ್ತವಾಗುವ ನಗುವಿನ ವೈಶಿಷ್ಟ್ಯ ವಿವರಿಸಿರಿ.

Answer:
ನಮ್ಮದು ಸಮೃದ್ಧದೇಶವಾದರೂ ಸಮಾನತೆಗಾಗಿ ಸಮೃದ್ಧತೆಯ ಬದುಕಿಗಾಗಿ ನಿರಂತರ ಹೋರಾಟನಡೆದೇ ಇದೆ. ಶ್ರೀಮತಿ ಸುಕನ್ಯಾ ಮಾರುತಿ ಅವರು ಬರೆದಿರುವ ಒಮ್ಮೆ ನಗುತ್ತೇವೆ ಎಂಬ ಕವಿತೆಯು ವ್ಯವಸ್ಥೆಯು ವ್ಯವಸ್ಥೆಯ ವಿರುದ್ಧಎತ್ತಿರುವ ಬಂಡಾಯದ ಧ್ವನಿಯಾಗಿದೆ. ಸಾಮಾಜಿಕ ಅಸಮಾನತೆಯು ಬಡವರನ್ನು ಹಸಿವಿನ ಸುಳಿಯಲ್ಲಿ ಸಿಲುಕಿಸಿ ನರಳಿಸುತ್ತಿದೆ. ಶತಶತಮಾನಗಳಿಂದ ಸಮಬಾಳು ಪಡೆಯಲು ಅವಿರತ ಪ್ರಯತ್ನದಲ್ಲಿದ್ದಾರೆ. ಆದರೂ ‘ಇಲ್ಲಿ ಎಲ್ಲ ಇದ್ದರೂ ಯಾರಿಗುಂಟು ಯಾರಿಗಿಲ್ಲ’ಎನ್ನುವ ವಾತಾವರಣ ಇದೆ. ಇಲ್ಲಿನ ನಗು ವಿಶಿಷ್ಟವಾದುದು.

ಇಲ್ಲಿನ ನಗು ವ್ಯಕ್ತಿಯ ಹಿತಕ್ಕಿಂತ ಸಮಷ್ಟಿಯ ಹಿತವನ್ನು ಬಯಸುತ್ತದೆ. ಶೋಷಣೆಗೆ ಒಳಗಾದ ಜನ ಸಮಪಾಲು ದನಗಳಿಗೆ ಮೇವು ಇಲ್ಲದೇ ಸಾಯುತ್ತಿವೆ. ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ತಿನ್ನಲು ಗಂಜಿಯೂ ಇಲ್ಲದಂತಾಗಿದೆ. ನನ್ನವರು ಹಸಿವಿನಿಂದ ನರಳುತ್ತಿದ್ದಾರೆ. ಸತ್ತ ದನಗಳನ್ನು ತಿನ್ನುತ್ತಿದ್ದಾರೆ. ಇಂತವರಲ್ಲಿ ನಗು ಎಲ್ಲಿಂದ ಬರುತ್ತದೆ.ಸಾಮಾಜಿಕ ಅಸಮಾನತೆಯು ಬಡವರನ್ನು ಹಸಿವಿನ ಸುಳಿಯಲ್ಲಿ ಸಿಲುಕಿಸಿ ನರಳಿಸುತ್ತಿದೆ. ಅವರ ಮೊಗದಲ್ಲಿ ನಗು ಅರಳಬೇಕಾದರೆ ಸಾಮಾಜಿಕ ಅಸಮಾನತೆಯು ದೂರಾಗಿ ಸಮಾನತೆ ಬರಬೇಕು. ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಆ ಮೂಲಕ ಹೊಗೆಯಾಗಿರುವ ಅವರ ಬದುಕಿನಲ್ಲಿ ನಗೆ ಮೂಡಿಸಬೇಕು ಎಂಬ ಕಳಕಳಿ ಇಲ್ಲಿದೆ.

ನನ್ನವರನ್ನು ಕಷ್ಟದಿಂದ, ಹಸಿವಿನಿಂದ ಪಾರುಮಾಡಿ ಅವರನ್ನು ನಗಿಸುತ್ತೇನೆ. ಆಗ ಮಾತ್ರ ನಾನು ನಗುತ್ತೇನೆ ಎಂದ ಕವಯಿತ್ರಿ ತಾನು ನಗುವ ನಗು ಕೊನೆಯಿಲ್ಲದ್ದು, ಮೊನೆಯಿಲ್ಲದ್ದು ಎಂದಿದ್ದಾರೆ. ಆಕಾಶದಲ್ಲಿ ಕಾರ್ಮೋಡ ಕವಿಸುವ ನಗು. ಮಳೆ ಸುರಿಸುವ ನಗು, ಹೊಳೆ ಹರಿಸುವ ನಗು, ಬೆಳೆ ಬೆಳೆಸುವ ನಗು, ದನಜನ ಎಲ್ಲ ಕೂಡಿ ನಗುತ್ತೇವೆ. ಒಮ್ಮೆಯಾದರೂ ನಕ್ಕೇ ನಗುತ್ತೇವೆ ಎಂದಿದ್ದಾರೆ.

ಒಮ್ಮೆ ನಗುತ್ತೇವೆ
Summary

2nd PUC Kannada Chapter 12 Omme Nagutteve

ಸಾರಾಂಶ:

ನಮ್ಮದು ಸಮೃದ್ಧ ದೇಶವಾದರೂ ಸಮಾನತೆಗಾಗಿ ಸಮೃದ್ಧತೆಯ ಬದುಕಿಗಾಗಿ ನಿರಂತರ ಹೋರಾಟ ನಡೆದೇ ಇದೆ. ಶ್ರೀಮತಿ ಸುಕನ್ಯಾ ಮಾರುತಿ ಅವರು ಬರೆದಿರುವ ಒಮ್ಮೆ ನಗುತ್ತೇವೆ ಎಂಬ ಕವಿತೆಯು, ವ್ಯವಸ್ಥೆಯು ವ್ಯವಸ್ಥೆಯ ವಿರುದ್ಧ ಎತ್ತಿರುವ ಬಂಡಾಯದ ಧ್ವನಿಯಾಗಿದೆ. ಸಾಮಾಜಿಕ ಅಸಮಾನತೆಯು ಬಡವರನ್ನು ಹಸಿವಿನ ಸುಳಿಯಲ್ಲಿ ಸಿಲುಕಿಸಿ ನರಳಿಸುತ್ತಿದೆ. ಶತಶತಮಾನಗಳಿಂದ ಶೋಷಣೆಗೆ ಒಳಗಾದ ಜನ ಸಮಪಾಲು ಸಮಬಾಳು ಪಡೆಯಲು ಅವಿರತ ಪ್ರಯತ್ನದಲ್ಲಿದ್ದಾರೆ. ಆದರೂ ‘ಇಲ್ಲಿ ಎಲ್ಲ ಇದ್ದರೂ ಯಾರಿಗುಂಟು ಯಾರಿಗಿಲ್ಲ’ ಎನ್ನುವ ವಾತಾವರಣ ಇದೆ. ಇಲ್ಲಿನ ನಗು ವಿಶಿಷ್ಟವಾದುದು. ಇಲ್ಲಿನ ನಗು ವ್ಯಕ್ತಿಯ ಹಿತಕ್ಕಿಂತ ಸಮಷ್ಟಿಯ ಹಿತವನ್ನು ಬಯಸುತ್ತದೆ.

ದನಗಳಿಗೆ ಮೇವು ಇಲ್ಲದೇ ಸಾಯುತ್ತಿವೆ. ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ತಿನ್ನಲು ಗಂಜಿಯೂ ಇಲ್ಲದಂತಾಗಿದೆ. ನನ್ನವರು ಹಸಿವಿನಿಂದ ನರಳುತಿದ್ದಾರೆ. ಸತ್ತ ದನಗಳನ್ನು ತಿನ್ನುತ್ತಿದ್ದಾರೆ. ಇಂತವರಲ್ಲಿ ನಗು ಎಲ್ಲಿಂದ ಬರುತ್ತದೆ. ಇದನ್ನೆಲ್ಲಾ ಕಣ್ಣಾರೆ ಕಾಣುತ್ತಾ ಕತಕತನೆ ಕುದಿಯುವ ಅಗ್ನಿಪರ್ವತವಾಗಿದ್ದೇನೆ ಎನ್ನುತ್ತಾರೆ ಕವಯಿತ್ರಿ.

ಏನೂ ಮಾಡಲಾಗದೇ ಅವರ ಸ್ಥಿತಿ ನೋಡಲಾಗದೇ ಅವರಿಗಾಗಿ ಮುಗಿಲತ್ತ ಕೈ ಚಾಚಿ ನಿಂತಿರುವ ಕವಯಿತ್ರಿ ಧಗಧಗಿಸಿ ಉರಿವ ಜ್ವಾಲಾಮುಖಿ ಆಗಿದ್ದೇನೆ ಎಂದಿದ್ದಾರೆ.

ನನ್ನವರಿಗಾಗಿ ತಾನು ಎಂದೂ ನಂಬಿರದ ದೇವರಲ್ಲಿ ಮೊರೆಯಿಡುತ್ತೇನೆ. ನೋಡದೇ ಇರುವ ದೇವರಲ್ಲಿ ಸಹಾಯ ಬೇಡುತ್ತೇನೆ. ಯಾರೂ ನನ್ನವರ ಕೈ ಹಿಡಿಯದಾದಾಗ ನನ್ನ ಕಂಬನಿಯ ಲಾವಾರಸದಲ್ಲಿ ವಿಶ್ವವನ್ನೇ ಮುಳುಗಿಸಿ ಬಿಡುವ ಛಲ ಮೂಡುತ್ತದೆ. ಬೆಂಕಿ ನಾಲಗೆ ಚಾಚಿ ನನ್ನವರ ದಾರಿದ್ರವನ್ನೇ ಆಪೋಶನ ಮಾಡುತ್ತೇನೆ. ಅವರ ದೀನ ದಲಿತತನಕ್ಕೆ ಧಿಕ್ಕಾರವಿರಲಿ. ಅವರ ನೋವನ್ನೇ ಸರ್ವನಾಶ ಮಾಡುತ್ತೇನೆ ಎಂದು ಲೇಖಕಿ ಹೇಳುತ್ತಾರೆ.

ನನ್ನವರನ್ನು ನನ್ನ ಪ್ರೀತಿಯ ಜನರನ್ನು ಎಲ್ಲರೂ ನಾನೇ ಆದವರನ್ನು ನಾನು ನಗಿಸುತ್ತೇನೆ. ಧಗೆಯಿಂದ ಹೊರನುಗಿಸುತ್ತೇನೆ. ಹೊಗೆಯಿಂದ ಪಾರು ಮಾಡುತ್ತೇನೆ ಅವರನ್ನು ನಗಿಸುತ್ತೇನೆ. ಆಗ ಅವರ ಜೊತೆ ನಾನು ನಗುತ್ತೇನೆ. ಕೊನೆಯಿಲ್ಲದ ನಗು ಮೊನೆಯಿಲ್ಲದ ನಗು ಆಕಾಶದಲ್ಲಿ ಕಾರ್ಮೋಡ ಕವಿಸುವ ನಗು ನನ್ನವರನ್ನು ಕಷ್ಟದಿಂದ, ಹಸಿವಿನಿಂದ ಪಾರುಮಾಡಿ ಅವರನ್ನು ನಗಿಸುತ್ತೇನೆ. ಆಗ ಮಾತ್ರ ನಾನು ನಗುತ್ತೇನೆ ಎಂದ ಕವಯಿತ್ರಿ ತಾನು ನಗುವ ನಗು ಕೊನೆಯಿಲ್ಲದ್ದು, ಮೊನೆಯಿಲ್ಲದ್ದು ಎಂದಿದ್ದಾರೆ.

ಆಕಾಶದಲ್ಲಿ ಕಾರ್ಮೋಡ ಕವಿಸುವ ನಗು. ಮಳೆ ಸುರಿಸುವ ನಗು, ಹೊಳೆ ಹರಿಸುವ ನಗು. ಬೆಳೆ ಬೆಳೆಸುವ ನಗು, ದನ ಜನ ಎಲ್ಲ ಕೂಡಿ ನಗುತ್ತೇವೆ. ಒಮ್ಮೆಯಾದರೂ ನಕ್ಕೇ ನಗುತ್ತೇವೆ ಎಂದಿದ್ದಾರೆ. ಸಾಮಾಜಿಕ ಅಸಮಾನತೆಯು ಬಡವರನ್ನು ಹಸಿವಿನ ಸುಳಿಯಲ್ಲಿ ಸಿಲುಕಿಸಿ ನರಳಿಸುತ್ತಿದೆ. ಅವರ ಮೊಗದಲ್ಲಿ ನಗು ಅರಳಬೇಕಾದರೆ ಸಾಮಾಜಿಕ ಅಸಮಾನತೆಯು ದೂರಾಗಿ ಸಮಾನತೆ ಬರಬೇಕು. ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಆ ಮೂಲಕ ಹೊಗೆಯಾಗಿರುವ ಅವರ ಬದುಕಿನಲ್ಲಿ ನಗೆ ಮೂಡಿಸಬೇಕು ಎಂಬ ಕಳಕಳಿ ಇಲ್ಲಿದೆ.

Click Here to Download Omme Nagutteve PDF Notes
Click Here to Watch Omme Nagutteve Video

You cannot copy content of this page