2nd PUC Kannada Chapter 11

2nd PUC Kannada Question and Answer – Hatti Chitta Mattu

Looking for 2nd PUC Kannada textbook answers? You can download Chapter 11: Hatti Chitta MattuQuestions and Answers PDF, Notes, and Summary here. 2nd PUC Kannada Kavyabhaga solutions follow the Karnataka State Board Syllabus, making it easier for students to revise and score higher in exams.

Karnataka 2nd PUC Kannada Textbook Answers—Reflections Chapter 11

 Hatti Chitta Mattu Questions and Answers, Notes, and Summary

2nd PUC Kannada Kavyabhaga Chapter 11

ಹತ್ತಿಚಿತ್ತಮತ್ತು

 Hatti Chitta Mattu

2nd PUC Kannada Chapter 11 Hatti Chitta Mattu
Scroll Down to Download Hatti Chitta Mattu PDF
I. ಒಂದು ಅಂಕದ ಪ್ರಶ್ನೆಗಳು :

Question 1.
ಎಣ್ಣೆಯಲ್ಲಿ ನೆನೆದ ಬತ್ತಿ ಹೇಗೆ ಕಾಣುತ್ತದೆ?
Answer:
ಎಣ್ಣೆಯಲ್ಲಿ ನೆನೆದ ಬತ್ತಿ ಮಿಂದು ಮಡಿಯುಟ್ಟ ಭಕ್ತನಂತೆ ಕಾಣುತ್ತದೆ.

Question 2.
ಚಿತ್ತವನ್ನು ಯಾವುದಕ್ಕೆ ಹೋಲಿಸಲಾಗಿದೆ?
Answer:
ಚಿತ್ತವನ್ನು ಹತ್ತಿಯ ಬೀಜಕ್ಕೆ ಹೋಲಿಸಲಾಗಿದೆ.

Question 3.
ಅನಾಥ ಭಾವವನ್ನು ಸೂಚಿಸುವ ಪದ ಯಾವುದು?
Answer:
ಆಮ್ಮನಿದ್ದೂ ಬಾಟಲಿನ ಹಾಲಿಗೆ ಬಾಯೊಡ್ಡುವ ಮಗು ಅನಾಥ ಭಾವವನ್ನು ಸೂಚಿಸುತ್ತದೆ.

Question 4.
ಹತ್ತಿಯ ಬೀಜಕ್ಕೆ ಯಾವುದು ತಪ್ಪದ ಕರ್ಮ?
Answer:
ಹತ್ತಿಯ ಬೀಜಕ್ಕೆ ಬೆಣ್ಣೆಯಾಗುವ ಕರ್ಮ ತಪ್ಪಿದ್ದಲ್ಲ.

Question 5.
ವ್ಯರ್ಥವಲ್ಲದ ಕೆಲಸವು ಯಾವುದು?
Answer:
ಎಣ್ಣೆ ತೀರಿರುವ ದೀಪಗಳಿಗೆ ಬತ್ತಿ ಹೊಸೆಯುವ ಕೆಲಸ ವ್ಯರ್ಥವಲ್ಲದ್ದು, 

Question 6.
ತೈಲ ತೀರಿದ್ದು ಹೇಗೆ ತಿಳಿಯುತ್ತದೆ?
Answer:
ತೈಲ ತೀರಿದ್ದು ದೀಪ ಆರಿದ ಮೇಲೆ ತಿಳಿಯುತ್ತದೆ.

II. ಎರಡು ಅಂಕಗಳ ಪ್ರಶ್ನೆಗಳು:

Question 1.
ಎಣ್ಣೆಯಲ್ಲಿ ನೆನೆದು ಉರಿವ ಬತ್ತಿಯನ್ನು ಯಾವ ಯಾವುದಕ್ಕೆ ಹೋಲಿಸಲಾಗಿದೆ?
Answer:
ಎಣ್ಣೆಯಲ್ಲಿ ನೆನೆದು ಉರಿವ ಬತ್ತಿಯನ್ನು ಮಿಂದು ಮಡಿಯುಟ್ಟ ಭಕ್ತನಿಗೆ, ಬೆಳಕ ಬಟ್ಟೆ ತೊಡುವ ಯೋಗಿಗೆ, ತಾನು ಹೆಣೆದ ನೂಲಿನಲ್ಲೇ ತನ್ನ ಪ್ರಾಣ ಕಳೆದುಕೊಳ್ಳುವ ಜೇಡಕ್ಕೆ ಹೋಲಿಸಲಾಗಿದೆ.

Question 2.
ಮಾಗುವ ಜೀವದ ಪಯಣ ಹೇಗೆ ಸಾಗುತ್ತಿದೆ?
Answer:
ಮಾಗುವ ಜೀವದ ಪಯಣ ಹತ್ತಿಯ ಜೀಜದಂತೆ ಸಾಗುತ್ತಿದೆ. ಹತ್ತಿಯ ಬೀಜವು ಗಿಡವಾಗಿ ಬೆಳೆದು, ಅದರ ಹತ್ತಿಯು ಬತ್ತಿಯಾಗಿ, ಬೀಜವು ತೈಲವಾಗಿ, ಹೊತ್ತಿ ಉರಿಯುವ ಬೆಳಕೂ ಆಗುವಂತೆ, ಜೀವವೂ ಕೂಡ ಮೋಹ, ಪಾಷಗಳಿಂದ ಸುತ್ತಿ. ಸೋತು ಒಳಿತಿನ ಕಡೆಗೆ ಪ್ರಯಾಣಿಸಿ ಮುಕ್ತಿ ದೊರೆಯುತ್ತದೆ. ಈ ನೆಲೆಯಲ್ಲಿ ಪಯಣ ಸಾಗುತ್ತಿದೆ.

Question 3.
ಆತ್ಮಕ್ಕೆ ಕಮಟು ಹತ್ತುವುದು ಎಂದರೇನು?
Answer:
ತೈಲ ಮುಗಿದ ಮೇಲೆ ದೀಪ ಆರುತ್ತದೆ ದೀಪ ಮುಗಿದಾಗ ಕಮಟು ವಾಸನೆ ಬರುತ್ತದೆ. ಹಾಗೆಯೇ ಆತ್ಮಕ್ಕೆ ಕಮಟು ಹತ್ತುವುದು ಎಂದರೆ ದೇಹ ನಾಶವಾಗಿ ಆತ್ಮ ಇಲ್ಲದಂತಾಗುವುದಾಗಿದೆ.

Question 4.
ಎಣ್ಣೆ ತೀರಿದ ದೀಪಗಳು ಏನನ್ನು ಸೂಚಿಸುತ್ತವೆ?
Answer:
ಎಣ್ಣೆ ತೀರಿದ ದೀಪಗಳು ಆಯಸ್ಸು ಮುಗಿದ ಜೀವದ ಶರೀರವನ್ನು ಸೂಚಿಸುತ್ತವೆ. ಆದರೆ ಕವಿಯ ಪ್ರಕಾರ ಎಣ್ಣೆ ತೀರಿರುವ ದೀಪಗಳಿಗೆ ಬತ್ತಿ ಹೊಸೆಯುವ ಕೆಲಸ ವ್ಯರ್ಥವೇನಲ್ಲ. ಏಕೆಂದರೆ ಮತ್ತೆ ಬತ್ತಿ ಹೊಸೆದು ದೀಪ ಬೆಳಗುವ ಸಾಧ್ಯತೆ ಇದ್ದೇ ಇರುತ್ತದೆ. ಈ ಸಾಧ್ಯತೆಯೇ ಬದುಕಿನ ಬಗೆಗಿನ ಆಶಾವಾದಿತನವಾಗಿದೆ ಮತ್ತು ಇದು ಬದುಕಿನ ನಿಜವಾದ ಇಂಧನ. ಈ ಬಗೆಯ ಜೀವನ ಪ್ರೇಮವು ಬದುಕನ್ನು ಮತ್ತೆ ಹೊಸದಾಗಿ ಪ್ರಾರಂಭಿಸಬೇಕೆಂಬ ಪ್ರಯತ್ನಕ್ಕೆ ಕಾರಣವಾಗುತ್ತದೆ ಎಂಬುದು ಕವಿಯ ಅಭಿಪ್ರಾಯ.

Question 5.
ಹತ್ತಿಯ ಬೀಜ ಲೋಕದ ಹಿತಕ್ಕೆ ತನ್ನನ್ನು ಹೇಗೆ ಸುಟ್ಟುಕೊಳ್ಳುತ್ತದೆ?
Answer:
ಹತ್ತಿಯ ಬೀಜ ಬೆಳೆದು ಗಿಡವಾಗುತ್ತದೆ. ಅದರಿಂದ ದೊರೆತ ಹತ್ತಿಯು ಉರಿಯುವ ಬತ್ತಿಯಾಗಿ, ಹತ್ತಿಯ ಬೀಜದಿಂದ ತಯಾರಾದ ತೈಲವು ಬತ್ತಿಯನ್ನು ಸುಡುತ್ತಾ, ಹೊತ್ತಿ ಉರಿದು ಬೆಳಕು ನೀಡುತ್ತಾ ಲೋಕದ ಹಿತಕ್ಕಾಗಿ ತನ್ನನ್ನೇ ತಾನು ಸುಟ್ಟುಕೊಳ್ಳುತ್ತದೆ.

III. ಸಾಂದರ್ಭಿಕ ವಿವರಣೆ ಬಯಸುವ ವಾಕ್ಯಗಳು:

Question 1.
ಬೆಳಕ ಬಟ್ಟೆಯ ತೊಡುವ ಯೋಗಿಯಂತೆ!

Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ‘ಪ್ರೊ. ಟಿ. ಯಲ್ಲಪ್ಪರವರು ಬರೆದಿರುವ ‘ಹತ್ತಿ..ಚಿತ್ರ…ಮತ್ತು…’ ಎಂಬ ಕವಿತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಹತ್ತಿಯ ಬದುಕು ಯೋಗಿಯ ಜೀವನದಂತೆ ಎಂದು ವಿವರಿಸುವ ಸಂದರ್ಭ ಇದಾಗಿದೆ.
ವಿವರಣೆ: ಯೋಗಿಯು ಪ್ರಾಪಂಚಿಕ ಸುಖವನ್ನು ತೊರೆದು, ಅಹಂಕಾರಗಳನ್ನು ಸುಟ್ಟುಕೊಂಡು ಜಗತ್ತಿಗೆ ಜ್ಞಾನದ ಮಾರ್ಗವನ್ನು ತೋರುತ್ತಾನೆ. ಅಂತೆಯೇ ಹತ್ತಿಯು, ಬತ್ತಿಯಾಗಿ ತೈಲದಲ್ಲಿ ಮುಳುಗಿ ತನ್ನನ್ನುತಾನೇ ದಹಿಸಿಕೊಳ್ಳುತ್ತಾ ಜಗವನ್ನು ಬೆಳಗುತ್ತದೆ ಎನ್ನುತ್ತಾ ಈ ಮೇಲಿನಂತೆ ಹೇಳುತ್ತಾರೆ.

Question 2.
ಮಾಗುವ ಜೀವದ ಪಯಣ ಸಾಗುತ್ತಿದೆ ಸದ್ದಿಲ್ಲದೆ.

Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ‘ಪ್ರೊ. ಟಿ. ಯಲ್ಲಪ್ಪ ‘ರವರು ಬರೆದಿರುವ ‘ಹತ್ತಿ ಚಿತ್ರ…ಮತ್ತು…’ ಎಂಬ ಕವಿತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಮಾನವನ ಜೀವನ ಮಾಗುತ್ತೆ ಸಾಗುವ ಪರಿಯನ್ನು ಕವಿ ವಿವರಿಸುತ್ತಾರೆ.
ವಿವರಣೆ: ಈ ಜಗತ್ತಿನಲ್ಲಿ ಪರಿಪಕ್ವತೆಯನ್ನು ಸಾಧಿಸಿದ ಜೀವಗಳೆಲ್ಲ ನಿಸ್ವಾರ್ಥದಿಂದ ಸಮಾಜದ ಒಳಿತಿಗಾಗಿ ತಮ್ಮನ್ನು ಸಮರ್ಪಿಸಿಕೊಳ್ಳುತ್ತವೆ. ಯಾರು ಗಮನಹರಿಸಿದರೂ, ಗಮನಹರಿಸದಿದ್ದರೂ ತಾವು ಮಾಡುವ ಕೆಲಸವನ್ನು ನಿಸ್ವಾರ್ಥದಿಂದ ಮಾಡುತ್ತಿರುತ್ತಾರೆ. ಹೇಗೆ ಹತ್ತಿಯು ಗಿಡವಾಗಿ ಬೆಳೆದು. ಬತ್ತಿಯಾಗಿ, ಬೀಜವು ತೈಲವಾಗಿ, ಹೊತ್ತಿ ಉರಿಯುವ ಬೆಳಕನ್ನು ನೀಡುತ್ತದೊ ಹಾಗೆ ಜೀವವೂ ಕೂಡ. ಇದೇ ನೆಲೆಯಲ್ಲಿ ಪಕ್ವಗೊಳ್ಳುತ್ತದೆ ಎನ್ನುವಾಗ ಈ ಮೇಲಿನ ಮಾತು ಧ್ವನಿಸುತ್ತದೆ.

Question 3. ನಿದ್ದೆ ತಿಳಿದೆದ್ದ ಮಗು ಅತ್ತದ್ದು ಹಾಲಿಗೋ ಅಮ್ಮನಿಗೋ.

Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ‘ಪ್ರೊ. ಟಿ. ಯಲ್ಲಪ್ಪ’ರವರು ಬರೆದಿರುವ ‘ಹತ್ತಿ…ಚಿತ್ರ…ಮತ್ತು…’ಎಂಬ ಕವಿತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಎಲ್ಲವೂ ಇದ್ದು ಏನೂ ಇಲ್ಲದ ಅನಾಥಪ್ರಜ್ಞೆಯ ಅನುಭವವನ್ನು ವಿವರಿಸುವ ಸಂದರ್ಭವಿದು.
ವಿವರಣೆ: ನಿದ್ದೆ ತಿಳಿದೆದ್ದ ಮಗು ಆಳಲು ಪ್ರಾರಂಭಿಸಿದೆ. ಆದರೆ ಅದು ಅಳುತ್ತಿರುವುದು ಅಮ್ಮನಿಗೋಬಾಟಲಿಯ ಹಾಲಿಗೋ ಎನ್ನುವುದು ಮುಖ್ಯವಾಗಿ ತಿಳಿಯಬೇಕಾಗಿದೆ. ಮಗು ಅಮ್ಮನಿದ್ದೂ ಬಾಟಲಿಯ ಹಾಲಿಗೆ ಬಾಯೊಡ್ಡುತ್ತದೆಯೆಂದರೆ ಮಗು: ಎಲ್ಲವೂ ಇದ್ದೂ ಇಲ್ಲದಂತ ಸ್ಥಿತಿಯನ್ನು ಅನುಭವಿಸುತ್ತಿದೆ ಎನ್ನುವುದನ್ನು ಈ ಮೇಲಿನಂತೆ ಹೇಳಲಾಗಿದೆ.

Question 4.
ಎಣ್ಣೆ ತೀರಿರುವ ದೀಪಗಳಿಗೆ ಬತ್ತಿ ಹೊಸೆಯುವ ಕೆಲಸ.

Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ‘ಪ್ರೊ. ಟಿ. ಯಲ್ಲಪ್ಪ’ರವರು ಬರೆದಿರುವ ‘ಹತ್ತಿ…ಚಿತ್ರ…ಮತ್ತು…’ಎಂಬ ಕವಿತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ವ್ಯರ್ಥವಲ್ಲದ ಪ್ರಯತ್ನವೊಂದರ ಕಡೆ ಕವಿ ಗಮನ ಸೆಳೆಯುವುದನ್ನು ಕಾಣಬಹುದು.
ವಿವರಣೆ: ಕವಿಯ ಪ್ರಕಾರ ಎಣ್ಣೆ ತೀರಿರುವ ದೀಪಗಳಿಗೆ ಬತ್ತಿ ಹೊಸೆಯುವ ಕೆಲಸ ವ್ಯರ್ಥವೇನಲ್ಲ. ಏಕೆಂದರೆ ಮತ್ತೆ ಬತ್ತಿ ಹೊಸೆದು ದೀಪ ಬೆಳಗುವ ಸಾಧ್ಯತೆ ಇದ್ದೇ ಇರುತ್ತದೆ. ಈ ಸಾಧ್ಯತೆಯೇ ಬದುಕಿನ ಆಶಾವಾದಿತನವಾಗಿದೆ ಮತ್ತು ಇದು ಬದುಕಿನ ನಿಜವಾದ ಇಂಧನ, ಈ ಬಗೆಯ ಜೀವನ ಪ್ರೇಮವು ಬದುಕನ್ನು ಮತ್ತೆ ಹೊಸದಾಗಿ ಪ್ರಾರಂಭಿಸಬೇಕೆಂಬ ಪ್ರಯತ್ನಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ಈ ಮೇಲಿನ ವಾಕ್ಯದ ಮೂಲಕ ತಿಳಿಸುತ್ತಾರೆ.

Question 5.
ಬೆಣ್ಣೆಯಾಗುವ ಕರ್ಮ ತಪ್ಪಿದ್ದಲ್ಲ.

Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ‘ಪ್ರೊ. ಟಿ. ಯಲ್ಲಪ್ಪ’ರವರು ಬರೆದಿರುವ ‘ಹತ್ತಿ..ಚಿತ್ರ…ಮತ್ತು…’ ಎಂಬ ಕವಿತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಮಾನವನ ಜೀವನದ ಸಾರ್ಥಕತೆಯ ಕುರಿತು ಕವಿ ಇಲ್ಲಿ ಹೇಳುತ್ತಾರೆ.
ವಿವರಣೆ: ಹತ್ತಿಗೆ ಮೆತ್ತಿಕೊಂಡಿರುವ ಬೀಜಕ್ಕೆ ಎಣ್ಣೆಯಾಗುವ ಕರ್ಮ ತಪ್ಪಿದ್ದಲ್ಲವೆನ್ನುತ್ತಾರೆ ಕವಿ. ಇಲ್ಲಿ ಎಣ್ಣೆಯು ಹತ್ತಿಯನ್ನು ಸುಡುವುದು ದುರಂತದಂತೆ ಕಂಡರೂ ಅದು ಪ್ರಕೃತಿ ನಿಯಮವಾಗಿದೆ. ಅದು ಬದುಕಿನ ಸಾರ್ಥಕ್ಯದ ಮಾರ್ಗವೂ ಹೌದು. ವ್ಯಕ್ತಿ ತನ್ನನ್ನು ಆವರಿಸಿದ ಮೋಹ, ಪಾಷಗಳು ಆತನನ್ನು ಸರಿಯಾಗಿ ಸುಟ್ಟು ದೂರಾಗಿ ಒಳಿತಿನ ಕಡೆಗೆ ಪ್ರಯಾಣಿಸಿದಾಗ ಮುಕ್ತಿ ದೊರಕಲು ಸಾಧ್ಯ ಆಗ ಪ್ರಾಪ್ತವಾಗುವುದು ಮೋಕ್ಷದ ಮಾರ್ಗ. ಆದರೆ ಈ ಮೋಕ್ಷದ ಮಾರ್ಗ ಕಾಣಸಿಗುವುದು ವ್ಯಕ್ತಿ ತನ್ನನ್ನು ತಾನು ತೊಡಗಿಸಿಕೊಂಡಾಗ ಮಾತ್ರ.

IV. ನಾಲ್ಕು ಅಂಕಗಳ ಪ್ರಶ್ನೆಗಳು:

Question 1.
ಹತ್ತಿಯ ಬೀಜದ ಮತ್ತು ಮಾನವ ಜೀವದ ಪಯಣವನ್ನು ಕವಿ ಹೇಗೆ ಸಮೀಕರಿಸಿದ್ದಾರೆ?

Answer:
ಕವಿ ಪ್ರೊ.ಟಿ.ಯಲ್ಲಪ್ಪರವರು ಈ ಕವಿತೆಯಲ್ಲಿ ಆತ್ಮ ಪರಮಾತ್ಮಗಳ ಆಸ್ತಿತ್ವವನ್ನು ಹತ್ತಿ ಮತ್ತು ಚಿತ್ರಗಳ ಮೂಲಕ ಸಂಕೇತಿಸುತ್ತಿದ್ದಾರೆ. ಜೀವಾತ್ಮದ ಸಾರ್ಥಕತೆಯಿರುವುದು ತನ್ನ ಅಹಂಕಾರವನ್ನು ಸುಟ್ಟುಕೊಂಡು ಬೆಳಕನ್ನು ಜ್ಞಾನವನ್ನು ಹೊಂದುವುದರಲ್ಲಿ. ಇಲ್ಲಿ ಹತ್ತಿಯ ಬೀಜವು ಬೆಳಕಿಗೆ ಜೀವದ್ರವ್ಯವಾಗಿದೆ. ಹತ್ತಿಯ ಬೀಜವು ಗಿಡವಾಗಿ ಬೆಳೆದು. ಅದರ ಹತ್ತಿಯು ಬತ್ತಿಯಾಗಿ, ಹತ್ತಿಯ ಬೀಜವು ತೈಲವಾಗಿ, ಹೊತ್ತಿ ಉರಿಯುವ ಬೆಳಕೂ ಆಗಿ ತನ್ನನ್ನು ತಾನು ಸುಟ್ಟುಕೊಂಡು ಜಗತ್ತಿಗೆ ಬೆಳಕನ್ನು ನೀಡುತ್ತದೆ.

ಈ ಬೆಳಕು ಜ್ಞಾನದ ಸಂಕೇತವಾಗಿದೆ. ಹಾಗೆಯೇ ಮಾನವ ಜೀವದ ಪಯಣ, ವ್ಯಕ್ತಿಯನ್ನು ಆವರಿಸಿದ ಮೋಹ, ಪಾತ್ರಗಳು ಆತನನ್ನು ಸರಿಯಾಗಿ ಸುಟ್ಟು, ನಂತರ ಇವುಗಳಿಂದ ದೂರವಾಗಿ ಒಳಿತಿನ ಕಡೆಗೆ ಪ್ರಯಾಣಿಸಿದಾಗ ಮುಕ್ತಿ ದೊರಕಲು ಸಾಧ್ಯ. ಆಗ ಪ್ರಾಪ್ತವಾಗುವುದು ಮೋಕ್ಷದ ಮಾರ್ಗ. ಆದರೆ ಈ ಮೋಕ್ಷದ ಮಾರ್ಗ ಕಾಣಸಿಗುವುದು ವ್ಯಕ್ತಿ ತನ್ನನ್ನು ತಾನು ತೊಡಗಿಸಿಕೊಂಡಾಗ ಮಾತ್ರ. ಹೀಗೆ ಕವಿ ಹತ್ತಿ ಬೀಜದ ಮತ್ತು ಮಾನವ ಜೀವದ ಪಯಣವನ್ನು ಸಮೀಕರಿಸಿದ್ದಾರೆ.

Question 2.
ಬತ್ತಿ, ಎಣ್ಣೆ, ಭಕ್ತಿ, ಯೋಗಿ, ಜೇಡ- ಇವುಗಳ ಆತ್ಮ ಸಮರ್ಪಣೆಯ ಆಶಯವನ್ನು ಕವಿತೆ ಹೇಗೆ ಚಿತ್ರಿಸಿದೆ?

Answer:
ಕವಿಯು ಇಲ್ಲಿ ಬತ್ತಿ, ಎಣ್ಣೆ, ಭಕ್ತಿ, ಯೋಗಿ, ಜೇಡ – ಇವುಗಳ ಆತ್ಮ ಸಮರ್ಪಣೆಯ ಆಶಯವನ್ನು ಬಹಳ ಸೊಗಸಾಗಿ ವಿವರಿಸಿದ್ದಾರೆ. ಬತ್ತಿಯು ಎಣ್ಣೆಯಲ್ಲಿ ಮಿಂದು ತನ್ನನ್ನು ತಾನೇ ಸುಟ್ಟುಕೊಂಡು ಜಗದ ಕತ್ತಲೆಯನ್ನು ದೂರಮಾಡಲು ಯತ್ನಿಸುತ್ತದೆ. ಎಣ್ಣೆಯು ಬತ್ತಿಗೆ ಹಾಗೂ ಬೆಳಕಿಗೆ ಜೀವದ್ರವ್ಯವಾಗಿದ್ದೂ, ಬತ್ತಿಯ ಮೂಲಕ ಸುಡುತ್ತಾ, ತನ್ನ ಜೀವನದ ಸಾರ್ಥಕತೆಯನ್ನು ಕಾಣುತ್ತದೆ.

ಭಕ್ತನು ಮಿಂದು ಮಡಿಯುಟ್ಟು ಅಂತರಂಗ ಬಹಿರಂಗ ಶುದ್ದಿಯಿಂದ ತನ್ನನ್ನು ತನ್ನ ಇಷ್ಟದೈವಕ್ಕೆ ಸಮರ್ಪಿಸಿಕೊಂಡು ಆತ್ಮ ಸಮರ್ಪಣೆ ಮಾಡಿಕೊಳ್ಳುತ್ತಾನೆ. ಯೋಗಿಯು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಅರಿಷಡ್ವರ್ಗಗಳನ್ನು ಸುಟ್ಟುಕೊಂಡು ಜಗತ್ತಿಗೆ ಜ್ಞಾನದ ಮಾರ್ಗವನ್ನು ತೋರುತ್ತಾನೆ. ಜೇಡವು ತನ್ನ ಒಡಲಿನಿಂದ ಬರುವ ನೂಲಿನಿಂದ ಜಾಲವನ್ನು ನಿರ್ಮಿಸಿ ತಾನೇ ಸುತ್ತಿಕೊಂಡು ಜೀವಾತ್ಮವನ್ನು ಸಮರ್ಪಿಸಿಕೊಳ್ಳುತ್ತದೆ.

Question 3.
‘ಹತ್ತಿ…ಚಿತ್ತ..ಮತ್ತು…’ಕವಿತೆಯ ಸ್ವಾರಸ್ಯವನ್ನು ಚರ್ಚಿಸಿರಿ.

Answer:
‘ಹತ್ತಿ…ಚಿತ್ತ…ಮತ್ತು…’ ಕವಿತೆಯ ಸ್ವಾರಸ್ಯ – ಪುನರ್‌ರಚನೆ:

ಪ್ರೊ. ಟಿ. ಯಲ್ಲಪ್ಪರವರ ‘ಹತ್ತಿ…ಚಿತ್ತ…ಮತ್ತು…’ ಕವಿತೆ ಆತ್ಮ ಮತ್ತು ಪರಮಾತ್ಮದ ಅಸ್ತಿತ್ವ, ಜೀವನದ ಗಂಭೀರ ತತ್ತ್ವಗಳನ್ನು ಪ್ರತೀಕಾತ್ಮಕವಾಗಿ ವಿವರಿಸುತ್ತಿದೆ. ಕವಿ ಇಲ್ಲಿ ಹತ್ತಿಯ ಬೀಜದ ಬದುಕಿನ ರೂಪಾಂತರದ ಮೂಲಕ ಮಾನವ ಆತ್ಮದ ಯಾತ್ರೆಯನ್ನು ಶ್ರದ್ಧಾ ಹಾಗೂ ತತ್ತ್ವಭರಿತವಾಗಿ ಚಿತ್ರಿಸುತ್ತಾರೆ.

ಹತ್ತಿಯ ಬೀಜವು – ಮೊದಲು ಗಿಡವಾಗಿ ಬೆಳೆದು, ನಂತರ ಹತ್ತಿಯಾಗಿ, ತೈಲವಾಗಿ, ಬಳಿಕ ಬತ್ತಿಯಾಗಿ – ಕೊನೆಗೆ ದೀಪವಾಗಿ ಹೊತ್ತಿ ಉರಿದು ಬೆಳಕು ನೀಡುತ್ತದೆ. ಈ ಬೆಳಕು ಜ್ಞಾನವನ್ನು ಸೂಚಿಸುತ್ತದೆ. ಇದು ಆತ್ಮನ ಬೆಳವಣಿಗೆಗೆ ಸಮಾನವಾಗಿದೆ. ತನ್ನ ಅಹಂಕಾರ, ಮೋಹಗಳನ್ನು ಸುಟ್ಟುಕೊಳ್ಳುವ ಮೂಲಕ ಆತ್ಮ ವಿಶ್ವದತ್ತ ಜ್ಞಾನ-ಪ್ರಕಾಶ ಹಂಚುವುದು, ಜೀವಾತ್ಮದ ಸಾರ್ಥಕತೆಯಾಗಿದೆ ಎನ್ನುವುದು ಕವಿಯ ದೃಷ್ಠಿಕೋನ.

ಮಗು ಜಗತ್ತಿನಲ್ಲಿ ಎಚ್ಚರವಾಗುವ ಮೊದಲಿನ ಸ್ಥಿತಿ, ಅಮ್ಮನಿದ್ದೂ ಹಾಲಿನ ಬಾಟಲಿಗೆ ಬಾಯೊಡುವ ದಶೆ, ಜೀವನದಲ್ಲಿನ ಆತ್ಮಸಂಪರ್ಕದ ಕೊರತೆಯನ್ನು ಸೂಚಿಸುತ್ತದೆ.

ದೀಪ ಆರಿದಾಗ ಮಾತ್ರ ಅದರ ಕಮಟು ವಾಸನೆಯಿಂದ ನಮಗೆ ಅದು ಆರಿದುದೆಂದು ಗೊತ್ತಾಗುವಂತೆ, ಆತ್ಮದ ಗತಿ ದೇಹಾಂತ್ಯದ ಮೂಲಕ ಎತ್ತಿ ತೋರಿಸಲಾಗುತ್ತದೆ.

ದೀಪದ ಎಣ್ಣೆ ಮುಗಿದಾಗ ಹೊಸ ಬತ್ತಿ ಹಾಕಿ ಮತ್ತೆ ಬೆಳಗಿಸುವ ಸಾಧ್ಯತೆಯಂತೆ, ಮನುಷ್ಯನ ಜೀವನದಲ್ಲಿಯೂ ಹೊಸ ಪ್ರಾರಂಭದ ಸಾಧ್ಯತೆ ಸದಾ ಇರುತ್ತದೆ ಎಂಬ ಆಶಾವಾದಿತ ನಿಲುವನ್ನು ಕವಿ ಈ ಕವಿತೆಯಲ್ಲಿ ಪ್ರಸ್ತಾಪಿಸುತ್ತಾರೆ.

ಅಂತಿಮವಾಗಿ, ಈ ಕವಿತೆಯು ಪ್ರಕೃತಿಯ ಸರಳ ಘಟಕಗಳ ಮೂಲಕ ಜೀವ-ಆತ್ಮದ ಗಾಢತೆಯುಳ್ಳ ತಾತ್ವಿಕ ಅರಿವನ್ನು ಮೂಡಿಸುತ್ತದೆ. ಇದು ಕೇವಲ ಜೀವನದ ಚಿತ್ರಣವಲ್ಲ, ಬದಲಾಗಿ ಬದುಕಿನ ಗಂಭೀರ ಅಭಿಪ್ರಾಯಗಳ ಸಾರವಾಗಿದೆ.

ಹತ್ತಿಚಿತ್ತಮತ್ತು
Summary

2nd PUC Kannada Chapter 11 Hatti Chitta Mattu
2nd PUC Kannada Chapter 11 Hatti Chitta Mattu

ಕವಿ ಪ್ರೊ. ಟಿ. ಯಲ್ಲಪ್ಪರವರು ಈ ಕವಿತೆಯಲ್ಲಿ ಆತ್ಮ ಪರಮಾತ್ಮಗಳ ಅಸ್ತಿತ್ವವನ್ನು ಹತ್ತಿ ಮತ್ತು ಚಿತ್ರಗಳ ಮೂಲಕ ವಿವರಿಸುತ್ತಿದ್ದಾರೆ. ಜೀವಾತ್ಮದ ಸಾರ್ಥಕತೆಯಿರುವುದು ತನ್ನ ಅಹಂಕಾರವನ್ನು ಸುಟ್ಟುಕೊಂಡು ಬೆಳಕನ್ನು ಜ್ಞಾನವನ್ನು ಹೊಂದುವುದರಲ್ಲಿ ಇಲ್ಲಿ ಹತ್ತಿಯ ಬೀಜವು ಬೆಳಕಿಗೆ ಜೀವದ್ರವ್ಯವಾಗಿದೆ. ಹತ್ತಿಯ ಬೀಜವು ಗಿಡವಾಗಿ ಬೆಳೆದು, ಅದರ ಹತ್ತಿಯು ಬತ್ತಿಯಾಗಿ, ಹತ್ತಿಯ ಬೀಜವು ತೈಲವಾಗಿ, ಹೊತ್ತಿ ಉರಿಯುವ ಬೆಳಕೂ ಆಗಿ ತನ್ನನ್ನು ತಾನು ಸುಟ್ಟುಕೊಂಡು ಜಗತ್ತಿಗೆ ಬೆಳಕನ್ನು ನೀಡುವ ಪರಿ ಬಹಳ ಸೊಗಸಾದುದು ಎನ್ನುವುದು ಕವಿಯ ಅಭಿಮತ.

ಹತ್ತಿಯ ಬೀಜ ತನ್ನಿಂದಲೇ ತಯಾರಾದ ಬತ್ತಿಯಿಂದ, ತನ್ನಿಂದಲೇ ಉದಿಸಿದ ಎಣ್ಣೆಯಿಂದ ಸುಟ್ಟು ಇಲ್ಲವಾಗುತ್ತದೆ. ಅದರಿಂದ ದೊರಕಿದ ಬೆಳಕಿನಿಂದ ಮಾತ್ರ ಲೋಕಕಲ್ಯಾಣವಾಗುತ್ತದೆ. ಅದರಂತೆ ಜೀವ ಹಲವು ಬಯಕೆಗಳಿಂದ ಫಾಸಿಗೊಂಡರೂ, ಆತ್ಮದ ಉನ್ನತಿಗೆ ಕಾರಣವಾಗಿ ಸುಟ್ಟುಕೊಳ್ಳುತ್ತದೆ. ಹೀಗೆ ಮಾಗುವ ಜೀವದ ಪಯಣ ಈ ಪರಿಯಲ್ಲಿ ಸದ್ದಿಲ್ಲದೆ ಸಾಗುತ್ತಿದೆ.

ನಿದ್ದೆಯಿಂದ ಎದ್ದ ಮಗು ಅಳಲು ಪ್ರಾರಂಭಿಸಿದೆ. ಆದರೆ ಅದು ಆಳುತ್ತಿರುವುದು ಅಮ್ಮನಿಗೋ ಬಾಟಲಿಯ ಹಾಲಿಗೋ ಎನ್ನುವುದು ಮೊದಲು ತಿಳಿಯಬೇಕಾಗಿದೆ. ಮಗು ಅಮ್ಮನಿದ್ದೂ ಬಾಟಲಿಯ ಹಾಲಿಗೆ ಬಾಯೊಡ್ಡುತ್ತದೆಯೆಂದರೆ, ಮಗು: ಎಲ್ಲವೂ ಇದ್ದೂ ಇಲ್ಲದಂತ ಅನಾಥ ಸ್ಥಿತಿಯನ್ನು ಅನುಭವಿಸುತ್ತಿರುವುದು ಗಮನಾರ್ಹ.

ದೀಪ ಆರಿದಾಗ ಕಮಟು ವಾಸನೆ ಬರುತ್ತದೆ. ಆಗ ಮಾತ್ರವೇ ನಮಗೆ ದೀಪ ಆರಿದೆಯೆಂದು ತಿಳಿಯುತ್ತದೆ. ಅಂತೆಯೇ ಆತ್ಮಕ್ಕೆ ಕಮಟು ಹತ್ತುವುದು ಎಂದರೆ ದೇಹ ನಾಶವಾಗಿ ಆತ್ಮ ಇಲ್ಲದಂತಾಗುವುದಾಗಿದೆ ಎಂಬುದನ್ನು ಕವಿ ವಿವರಿಸುತ್ತಾರೆ.

ಕವಿಯ ಪ್ರಕಾರ ಎಣ್ಣೆ ತೀರಿರುವ ದೀಪಗಳಿಗೆ ಬತ್ತಿ ಹೊಸೆಯುವ ಕೆಲಸ ವ್ಯರ್ಥವೇನಲ್ಲ. ಏಕೆಂದರೆ ಮತ್ತೆ ಬತ್ತಿ ಹೊಸೆದು ದೀಪ ಬೆಳಗುವ ಸಾಧ್ಯತೆ ಇದ್ದೇ ಇರುತ್ತದೆ. ಈ ಸಾಧ್ಯತೆಯೇ ಬದುಕಿನ ಆಶಾವಾದಿತನವಾಗಿದೆ ಮತ್ತು ಇದು ಬದುಕಿನ ನಿಜವಾದ ಇಂಧನ. ಈ ಬಗೆಯ ಜೀವನ ಪ್ರೇಮವು ಬದುಕನ್ನು ಮತ್ತೆ ಹೊಸದಾಗಿ ಪ್ರಾರಂಭಿಸಬೇಕೆಂಬ ಪ್ರಯತ್ನಕ್ಕೆ ಕಾರಣವಾಗುತ್ತದೆ ಎಂಬುದು ಕವಿಯ ಅಭಿಪ್ರಾಯ.

ಹತ್ತಿಯ ಬೀಜವು ಬೆಳಕಿಗೆ ಜೀವದ್ರವ್ಯವಾಗಿದೆ. ಹತ್ತಿಯ ಬೀಜವು ಗಿಡವಾಗಿ ಬೆಳೆದು. ಅದರ ಹತ್ತಿಯು ಬತ್ತಿಯಾಗಿ, ಹತ್ತಿಯ ಬೀಜವು ತೈಲವಾಗಿ, ಹೊತ್ತಿ ಉರಿಯುವ ಬೆಳಕೂ ಆಗಿ ತನ್ನನ್ನು ತಾನು ಸುಟ್ಟುಕೊಂಡು ಜಗತ್ತಿಗೆ ಬೆಳಕನ್ನು ನೀಡುತ್ತದೆ. ಈ ಬೆಳಕು ಜ್ಞಾನದ ಸಂಕೇತವಾಗಿದೆ. ಹಾಗೆಯೇ ಮಾನವ ಜೀವದ ಪಯಣ. ವ್ಯಕ್ತಿಯನ್ನು ಆವರಿಸಿದ ಮೋಹ, ಪಾಷಗಳು ಆತನನ್ನು ಸರಿಯಾಗಿ ಸುಟ್ಟು ನಂತರ ಅವುಗಳಿಂದ ದೂರಾಗಿ ಒಳಿತಿನ ಕಡೆಗೆ ಪ್ರಯಾಣಿಸಿದಾಗ ಮುಕ್ತಿ ದೊರಕಲು ಸಾಧ್ಯ. ಆಗ ಪ್ರಾಪ್ತವಾಗುವುದು ಮೋಕ್ಷದ ಮಾರ್ಗ.ಆದರೆ ಈ ಮೋಕ್ಷದ ಮಾರ್ಗ ಕಾಣಸಿಗುವುದು ವ್ಯಕ್ತಿ ತನ್ನನ್ನು ತಾನು ತೊಡಗಿಸಿಕೊಂಡಾಗ ಮಾತ್ರ.

Click Here to Download Hatti Chitta Mattu PDF Notes
Click Here to Watch Hatti Chitta Mattu Video

You cannot copy content of this page