2nd PUC Kannada Chapter 10

2nd PUC Kannada Question and Answer -Ondu Hoo Hechige Idutini

Looking for 2nd PUC Kannada textbook answers? You can download Chapter 10: Ondu Hoo Hechige Idutini Questions and Answers PDF, Notes, and Summary here. 2nd PUC Kannada Kavyabhaga solutions follow the Karnataka State Board Syllabus, making it easier for students to revise and score higher in exams.

Karnataka 2nd PUC Kannada Textbook Answers—Reflections Chapter 10

Ondu Hoo Hechige Idutini Questions and Answers, Notes, and Summary

2nd PUC Kannada Kavyabhaga Chapter 10

ಒಂದು ಹೂ ಹೆಚ್ಚಿಗೆ ಇಡುತೀನಿ

Ondu Hoo Hechige Idutini

2nd PUC Kannada Chapter 10 Ondu Hoo Hechige Idutini
Scroll Down to Download Ondu Hoo Hechige Idutini PDF
I. ಒಂದು ವಾಕ್ಯದಲ್ಲಿ ಉತ್ತರಿಸಿ:

Question 1.
ಮುದುಕಿಯ ಭಯಕ್ಕೆ ಕಾರಣವೇನು?
Answer:
ಫೋನು ಝಣಗುಡುತ್ತಿದ್ದರೆ ಅದನ್ನು ಎತ್ತಿಕೊಳ್ಳಲೋ ಬೇಡವೋ, ಸೊಸೆ ಏನೆನ್ನುವಳೋ ಮಗ ಗದರಬಹುದು ಎನ್ನುವ ಭಯ ಮುದುಕಿಯದು.

Question 2.
ಮುದುಕಿಗೆ ಯಾರಿಂದ ಫೋನ್ ಕರೆ ಬಂದಿತ್ತು?
Answer:
ಮುದುಕಿಗೆ ತನ್ನ ಗಂಡನಾದ ಮುದುಕನಿಂದ ಕರೆ ಬಂದಿತ್ತು.

Question 3.
ಮುದುಕ ಇರುವುದೆಲ್ಲಿ?
Answer:
ಮುದುಕ ಇರುವುದು ಕಿರಿಯ ಮಗ ಸೊಸೆಯ ಜೊತೆ ಅಸ್ಸಾಮಿನಲ್ಲಿ.

Question 4.
ಮೊಮ್ಮಗಳು ಏನು ಮಾಡುತ್ತಿದ್ದಳು?
Answer:
ಮೊಮ್ಮಗಳು ಸ್ವಂತ ಕಂಪ್ಯೂಟರಿನಲ್ಲಿ ಮೂಜಗವನ್ನೇ ಆವಾಹಿಸಿ ಕುಳಿತಿದ್ದಾಳೆ.

Question 5.
ಮುದುಕಿಯು ಯಾವ ದೇವರಿಗೆ ಹರಕೆ ಹೊತ್ತಳು?
Answer:
ಮುದುಕಿಯು ಗುಟ್ಟೆಮಲ್ಲಪ್ಪನಿಗೆ ಹರಕೆ ಹೊತ್ತಳು.

Question 6.
ಮುದುಕಿಯು ಏನೆಂದು ಹರಕೆ ಹೊತ್ತಳು?
Answer:
ಮುದುಕಿಯು ಗುಟ್ಟೆಮಲ್ಲಪ್ಪನ ಗಟ್ಟಿಪಾದಕ್ಕೆ ಒಂದು ಹೂ ಹೆಚ್ಚಿಗೆ ಇಡುತೀನಿ ಎಂದು ಹರಕೆ ಹೊತ್ತಳು.

II.ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ:

Question 1.
ಮುದುಕಿಯ ಜೀವ ಎಳೆಯುತ್ತಿರುವುದೇಕೆ?
Answer:
ಮುದುಕಿಯು ದೂರದ ಊರಿನಲ್ಲಿರುವ ಗಂಡನೊಂದಿಗೆ ಮಾತನಾಡಬೇಕು. ಫೋನು ಝಣಗುಡುತ್ತಿದ್ದರೆ ಅದನ್ನು ಎತ್ತಿಕೊಳ್ಳಲೋ ಬೇಡವೋ, ಸೊಸೆ ಏನೆನ್ನುವಳೋ ಮಗ ಗದರಬಹುದು ಎನ್ನುವ ಭಯ ಮುದುಕಿಯದು. ಫೋನು ಇಟ್ಟಿರುವ ಮಣೆಯವರೆಗೂ ಬರುತ್ತಾಳೆ.ಒಂದು ಸಲ ಸೊಸೆ ಏನೆನ್ನುವಳೋ ಎಂದು ಕಿಚನ್ನಿನ ಕಡೆಗೆ ನೋಡುತ್ತಾಳೆ. ಇನ್ನೊಂದು ಸಾರಿ ಸ್ಟಡಿ ರೂಮಿನೆಡೆಗೆ ನೋಡುತ್ತಾಳೆ. ಫೋನು ಝಣಗುಡುವುದು ನಿಲ್ಲುತ್ತದೆಯೋ ಎನ್ನುವ ಭಯ. ಯಾರಾದರೂ ಬಂದು ಫೋನನ್ನು ಎತ್ತಬಾರದೇ? ಆ ಕಡೆ ಮುದುಕನಿರಬಹುದು ಎಂದು ಮುದುಕಿಯ ಜೀವ ಎಳೆಯುತ್ತಿದೆ.

Question 2.
ಮುದುಕ ಏನೆಂದು ಗೋಗರೆಯುತ್ತಾನೆ?
Answer:
ಮುದುಕ ಕಿರಿಯ ಮಗನ ಮನೆಯಲ್ಲಿ ಅಸ್ಸಾಂನಲ್ಲಿದ್ದಾನೆ. ಕಿರಿಯ ಮಗ ಮತ್ತವನ ಹೆಂಡತಿ ಬೆಳಿಗ್ಗೆ ಒಂಭತ್ತಕ್ಕೆ ಕೆಲಸಕ್ಕೆ ಹೋದರೆ ಬರುವುದು ಹೊತ್ತು ಕಳೆದ ಮೇಲೆ. ಹಾಗಾಗಿ ಅಸ್ಸಾಮಿ ಭಾಷೆ ಬರದ ಅವನಿಗೆ ಮಾತನಾಡಲು ಯಾರು ಇಲ್ಲ. ಮುದುಕಿ ಫೋನು ಮಾಡಿದಾಗಲೆಲ್ಲ ಮಾತೇ ಮರೆತು ಹೋಗಿದೆ ಕಣೆ. ಮಾತಾಡು ಮಾತಾಡು ಮಾತಾಡುತ್ತಿರು ಮಾತು ನಿಲ್ಲಿಸಬೇಡ ಎಂದು ಗೋಗರೆಯುತ್ತಾನೆ.

Question 3.
ಮೊಮ್ಮಗಳ ಆತುರಕ್ಕೆ ಮುದುಕಿ ಏನೆಂದುಕೊಂಡಳು?
Answer:
ಮುದುಕಿಯು ಮೊಮ್ಮಗಳನ್ನು ಫೋನು ಎತ್ತಲು ಕರೆಯುತ್ತಾಳೆ. ಕಂಪ್ಯೂಟರಿನ ಮೇಲೆ ಮೂಜಗವನ್ನೇ ಆವಾಹಿಸಿ ಕುಳಿತ ಮೊಮ್ಮಗಳು ಚಿಟುಗುಡುತ್ತಲೇ ಅಟ್ಟವಿಳಿದು ಬಂದು ಧಡ್ಡನೆ ಪೋನೆತ್ತಿ “ರಾಂಗ್ ನಂಬರ್” ಎನ್ನುತ್ತಾಳೆ. ಅದು ಮುದುಕಿಗೆ ಅನುಮಾನ ತಂದಿತು.ಮೊಮ್ಮಗಳ ಆತುರಕ್ಕೆ ಮುದುಕಿ “ಈ ಹುಡುಗಿ ಸರಿಯಾಗಿ ಕೇಳಿಸಿಕೊಂಡಳೋ ಗಡಿಬಿಡಿಯಲ್ಲಿ ಬಿಡುಗಡೆಗೆ ಹಾತೊರೆದು ರೈಟನ್ನೆ ರಾಂಗೆಂದಳೋ” ಎಂದುಕೊಂಡಳು.

Question 4.
ಸೊಸೆಗೆ ಹೊರಗಿನ ಕೆಲಸ ಬರಲೆಂದು ಮುದುಕಿ ಬಯಸಿದ್ದೇಕೆ?
Answer:
ಮಗ ಕೆಲಸಕ್ಕೆ, ಮೊಮ್ಮಗ-ಮೊಮ್ಮಗಳು ಶಾಲೆಗೆ ಹೋಗುತ್ತಾರೆ. ಸೊಸೆ ಮನೆಯಲ್ಲೇ ಇದ್ದಳು. ಸೊಸೆ ಮನೆಯಲ್ಲಿದ್ದರೆ ಪೋನು ಎತ್ತಲಾಗುವುದಿಲ್ಲ. ಮುದುಕನ ಜೊತೆಗೆ ಮಾತನಾಡಲಾಗುವುದಿಲ್ಲ. ಸೊಸೆಗೆ ಹೊರಗಿನ ಕೆಲಸ ಬಂದರೆ ಹೊರಗೆ ಹೋಗುತ್ತಾಳೆ. ಆಗ ನಾನು ನಿರಾತಂಕವಾಗಿ ಮುದುಕನ ಜೊತೆ ಮಾತನಾಡಬಹುದೆಂಬ ಆಸೆಯಿಂದ ಸೊಸೆಗೆ ಹೊರಗಿನ ಕೆಲಸ ಬರಲೆಂದು ಮುದುಕಿ ಬಯಸಿದಳು.

Question 5.
ಮುದುಕಿಯು ಯಾರನ್ನು ಏನೆಂದು ಪ್ರಾರ್ಥಿಸುವಳು?
Answer:
ಸೊಸೆ ಹೊರಗೆ ಕೆಲಸಕ್ಕೆ ಹೋದರೆ ತನಗೆ ಮುದುಕನ ಜೊತೆಯಲ್ಲಿ ಫೋನಿನಲ್ಲಿ ಮಾತನಾಡಬಹುದು ಎಂದು ಮುದುಕಿ ಅಂದುಕೊಳ್ಳುತ್ತಾಳೆ. ಆ ಕಾರಣಕ್ಕಾಗಿ ಮುದುಕಿ ಗುಟ್ಟೆಮಲ್ಲಪ್ಪನನ್ನು ಪ್ರಾರ್ಥಿಸಿ ಹರಕೆ ಹೊತ್ತಳು. ಸೊಸೆಯೊಬ್ಬಳಿಗೆ ಈ ಹೊತ್ತು ದೇವರೇ ಹೊರಗಿನ ಕೆಲಸ ಸಮ್ಮಿಲಿಸಲಿ (ಒಂದುಗೂಡಲಿ). ಗುಟ್ಟೆಮಲ್ಲಪ್ಪನ ಗಟ್ಟಿಪಾದಕ್ಕೆ ಒಂದು ಹೂ ಹೆಚ್ಚಿಗೆ ಇಡುತೀನಿ ಎಂದು ಹರಕೆ ಹೊತ್ತಳು.

III. ಸಂದರ್ಭ ಸಹಿತ ವಿವರಿಸಿ:

Question 1.
ಎಷ್ಟು ಸಲವು ಹೇಳುವುದು ನಿನಗೆ?

Answer:
ಆಯ್ಕೆ : ಈ ಸಾಲನ್ನು ಶ್ರೀಮತಿ ಲಲಿತಾ ಸಿದ್ದಬಸವಯ್ಯ ಅವರು ಬರೆದ ಒಂದು ಹೂ ಹೆಚ್ಚಿಗೆ ಇಡುತೀನಿ ಎನ್ನುವ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ: ಮುದುಕಿ ಮುದುಕನಿಂದ ಫೋನು ಬಂದಿರಬಹುದೆಂದು ತಿಳಿದು ಫೋನು ಎತ್ತಿಕೊಳ್ಳಲೋ. ಬೇಡವೋ ಮಗ ಹೀಗೆನ್ನಬಹುದು ಎನ್ನುವ ಸಂದರ್ಭವಿದು.
ವಿವರಣೆ: ಮುದುಕಿಗೆ ದೂರದ ಊರಿನಲ್ಲಿರುವ ಗಂಡನೊಂದಿಗೆ ಮಾತನಾಡಬೇಕು. ಮುದುಕ ದೂರ ದೂರಿನಿಂದ ಫೋನು ಮಾಡಿರಬಹುದೆಂದು ಭಾವಿಸಿದ ಮುದುಕಿ ಫೋನು ಝಣಗುಡುತ್ತಿದ್ದರೆ ಅದನ್ನು ಯಾರೂ ಎತ್ತಿಕೊಳ್ಳಲು ಬಾರದಿದ್ದಾಗ ತಾನು ಎತ್ತಿಕೊಳ್ಳಲು ಹಿಂಜರಿಯುತ್ತಾಳೆ. ಎತ್ತಿಕೊಳ್ಳಲೋ ಬೇಡವೋ, ಸೊಸೆ ಏನೆನ್ನುವಳೋ, ಮಗ-ಎಷ್ಟು ಸಲವು ಹೇಳುವುದು ನಿನಗೆ ಎಂದು ಗದರಬಹುದು ಎನ್ನುವ ಭಯ ಮುದುಕಿಯದು. ಮಗನ ಮನೆಯಲ್ಲಿರುವ ಆಕೆಗೆ ಸ್ವಾತಂತ್ರ್ಯ ಇಲ್ಲ. ಭಯದಿಂದಲೇ ಬದುಕಬೇಕಾದ ಸ್ಥಿತಿಯಲ್ಲಿ ಮುದುಕಿಯಿರುವುದನ್ನು ಕಾಣಬಹುದು.

Question 2.
ಅಲ್ಲಿಯ ಮಾತು ಅವನಿಗೆ ಸಸೇಮಿರ ಬರದು

Answer:
ಆಯ್ಕೆ: ಈ ಸಾಲನ್ನು ಶ್ರೀಮತಿ ಲಲಿತಾ ಸಿದ್ದಬಸವಯ್ಯ ಅವರು ಬರೆದ ಒಂದು ಹೂ ಹೆಚ್ಚಿಗೆ ಇಡುತೀನಿ ಎನ್ನುವ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ: ಕಿರಿಯ ಮಗನ ಜೊತೆಗೆ ಅಸ್ಲಾಂನಲ್ಲಿದ್ದ ಮುದುಕ ಅಲ್ಲಿಯ ಭಾಷೆ ಬಾರದೇ ಕಷ್ಟಪಡುತ್ತಿರುವುದನ್ನು ಈ ಸಾಲಿನಲ್ಲಿ ತಿಳಿಯಬಹುದು.
ವಿವರಣೆ : ಮುದುಕ ಕಿರಿಯ ಮಗನ ಮನೆಯಲ್ಲಿ ಅಸ್ಸಾಂನಲ್ಲಿದ್ದಾನೆ. ಕಿರಿಯ ಮಗ ಮತ್ತವನ ಹೆಂಡತಿ ಬೆಳಿಗ್ಗೆ ಒಂಭತ್ತಕ್ಕೆ ಕೆಲಸಕ್ಕೆ ಹೋದರೆ ಬರುವುದು ಹೊತ್ತು ಕಳೆದ ಮೇಲೆ. ಹಾಗಾಗಿ ಅಸ್ಸಾಮಿ ಭಾಷೆ ಬರದ ಅವನಿಗೆ ಮಾತನಾಡಲು ಯಾರು ಇಲ್ಲ. ಮುದುಕಿ ಫೋನು ಮಾಡಿದಾಗಲೆಲ್ಲ ಮಾತೇ ಮರೆತು ಹೋಗಿದೆ ಕಣೆ. ಮಾತಾಡು ಮಾತಾಡು ಮಾತಾಡುತ್ತಿರು ಮಾತು ನಿಲ್ಲಿಸಬೇಡ ಎಂದು ಗೋಗರೆಯುತ್ತಾನೆ.

Question 3.
ಮಾತೇ ಮರೆತು ಹೋಗಿದೆ ಕಣೆ

Answer:
ಆಯ್ಕೆ: ಈ ಸಾಲನ್ನು ಶ್ರೀಮತಿ ಲಲಿತಾ ಸಿದ್ಧಬಸವಯ್ಯ ಅವರು ಬರೆದ ಒಂದು ಹೂ ಹೆಚ್ಚಿಗೆ ಇಡುತೀನಿ ಎನ್ನುವ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ: ಮುದುಕ ದೂರದ ಅಸ್ಸಾಂನಲ್ಲಿ ಅನುಭವಿಸುತ್ತಿರುವ ಪಾಡನ್ನು ಹೇಳುವ ಸಂದರ್ಭವಿದು.
ವಿವರಣೆ: ಮುದುಕನಿರುವುದು ದೂರದ ಆಸ್ಸಾಂಮಿನಲ್ಲಿ ಮುದುಕನಿಗೆ ಅಲ್ಲಿನ ಭಾಷೆ ಬರುವುದಿಲ್ಲ. ಕಿರಿಯ ಮಗ ಮತ್ತವನ ಹೆಂಡತಿ ಬೆಳಿಗ್ಗೆ ಒಂಭತ್ತಕ್ಕೆ ಕೆಲಸಕ್ಕೆ ಹೋದರೆ ಬರುವುದು ಹೊತ್ತು ಕಳೆದ ಮೇಲೆ, ಹಾಗಾಗಿ ಆಸ್ಸಾಮಿ ಭಾಷೆ ಬರದ ಅವನಿಗೆ ಮಾತನಾಡಲು ಯಾರು ಇಲ್ಲ. ಮುದುಕಿ ಫೋನು ಮಾಡಿದಾಗಲೆಲ್ಲ ಮಾತೇ ಮರೆತು ಹೋಗಿದೆ ಕಣೆ. ಮಾತಾಡು ಮಾತಾಡು ಮಾತಾಡುತ್ತಿರು ಮಾತು ನಿಲ್ಲಿಸಬೇಡ ಎಂದು ಗೋಗರೆಯುತ್ತಾನೆ. ಆತ ಫೋನು ಗೂಡನ್ನೇ ತಬ್ಬಿಕೊಳ್ಳುವುದರ ಮೂಲಕ ತನ್ನ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾನೆ.

Question 4.
ಬಿಡುಗಡೆಗೆ ಹಾತೊರೆದು ರೈಟನ್ನೆ ರಾಂಗೆದಳೋ

Answer:
ಆಯ್ಕೆ: ಈ ಸಾಲನ್ನು ಶ್ರೀಮತಿ ಲಲಿತಾ ಸಿದ್ದಬಸವಯ್ಯ ಅವರು ಬರೆದ ಒಂದು ಹೂ ಹೆಚ್ಚಿಗೆ ಇಡುತೀನಿ ಎನ್ನುವ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ: ಮೊಮ್ಮಗಳು ಬಂದು ಫೋನನ್ನೆತ್ತಿ ರಾಂಗ್ ನಂಬರ್ ಎಂದಾಗ ಮುದುಕಿ ಅನುಮಾನದಿಂದ ತನ್ನಲ್ಲೇ ಈ ಮಾತನ್ನು ಹೇಳಿಕೊಳ್ಳುತ್ತಾಳೆ.
ವಿವರಣೆ: ಫೋನು ರಿಂಗಣಿಸುತ್ತಾ ಇರುವ ಹಾಗೆಯೇ ಫೋನನ್ನು ಎತ್ತಲು ಮೊಮ್ಮಗಳನ್ನು ಕರೆಯಲು ಹೋಗುತ್ತಾಳೆ. ಮಹಡಿ ಹತ್ತಿ ಮೊಮ್ಮಗಳನ್ನು ಕರೆದರೆ ಅವಳು ಕಂಪ್ಯೂಟರಿನ ಮೇಲೆ ಮೂಜಗವನ್ನೇ ಆವಾಹಿಸಿ ಕುಳಿತಿದ್ದಾಳೆ. ಚಿಟುಗುಡುತ್ತಲೇ ಅಟ್ಟವಿಳಿದು ಬಂದು ಧಡ್ಡನೆ ಫೋನೆತ್ತಿ “ರಾಂಗ್ ನಂಬರ್” ಎನ್ನುತ್ತಾಳೆ. ಅದು ಮುದುಕಿಗೆ ಅನುಮಾನ ತಂದಿತು. ಮೊಮ್ಮಗಳ ಆತುರಕ್ಕೆ ಮುದುಕಿ “ಈ ಹುಡುಗಿ ಸರಿಯಾಗಿ ಕೇಳಿಸಿಕೊಂಡಳೋ ಗಡಿಬಿಡಿಯಲ್ಲಿ ಬಿಡುಗಡೆಗೆ ಹಾತೊರೆದು ರೈಟನ್ನೆ ರಾಂಗ್ಲೆಂದಳೋ” ಎಂದುಕೊಂಡಳು.

Question 5.
ಒಂದು ಹೂ ಹೆಚ್ಚಿಗೆ ಇಡುತೀನಿ ನಿನ್ನ ಗಟ್ಟಿಪಾದಕ್ಕೆ

Answer:
ಆಯ್ಕೆ : ಈ ಸಾಲನ್ನು ಶ್ರೀಮತಿ ಲಲಿತಾ ಸಿದ್ಧಬಸವನ್ನು ಅವರು ಬರೆದ ಒಂದು ಹೂ ಹೆಚ್ಚಿಗೆ ಇಡುತೀನಿ ಎನ್ನುವ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ: ಮುದುಕಿ ದೇವರನ್ನು ಪ್ರಾರ್ಥಿಸುವ ಪರಿ ಈ ಸಾಲಿನಲ್ಲಿದೆ.
ವಿವರಣೆ: ಮುದುಕನಿಂದ ಕರೆ ಬಂದ ಸಮಯದಲ್ಲೇ ಮಗನ ಕಾರೂ, ಮೊಮ್ಮಗಳ ಸ್ಕೂಟಿ, ಮೊಮ್ಮಗನ ಸ್ಕೂಲಿನ ವ್ಯಾನೂ ಬಂದಿರುತ್ತದೆ. ಇನ್ನಿರುವ ಅಡ್ಡಿಯೆಂದರೆ ಸೊಸೆ. ಸೊಸೆ ಹೊರಗೆ ಕೆಲಸಕ್ಕೆ ಹೋದರೆ ತನಗೆ ಮುದುಕನ ಜೊತೆಯಲ್ಲಿ ಫೋನಿನಲ್ಲಿ ಮಾತನಾಡಬಹುದು ಎಂದು ಮುದುಕಿ ಅಂದುಕೊಳ್ಳುತ್ತಾಳೆ. ಆ ಕಾರಣಕ್ಕಾಗಿ ಮುದುಕಿ ಗುಟ್ಟಿಮಲ್ಲಪ್ಪನನ್ನು ಪ್ರಾರ್ಥಿಸಿ ಹರಕೆ ಹೊತ್ತಳು. ಸೊಸೆಯೊಬ್ಬಳಿಗೆ ಈ ಹೊತ್ತು ದೇವರೇ ಹೊರಗಿನ ಕೆಲಸ ಸಮ್ಮಿಲಿಸಲಿ (ಒಂದುಗೂಡಲಿ), ಗುಟೆಮಲ್ಲಪ್ಪನ ಗಟ್ಟಿಪಾದಕ್ಕೆ ಒಂದು ಹೂ ಹೆಚ್ಚಿಗೆ ಇಡುತೀನಿ ಎಂದು ಹರಕೆ ಹೊತ್ತಳು.

Question 6.
ಇನ್ನೊಂದು ಸೇರ್ಪಡೆ ಆ ಲೀಲಾಮಾತ್ರನಿಗೆ

Answer:
ಆಯ್ಕೆ : ಈ ಸಾಲನ್ನು ಶ್ರೀಮತಿ ಲಲಿತಾ ಸಿದ್ಧಬಸವಯ್ಯ ಅವರು ಬರೆದ ಒಂದು ಹೂ ಹೆಚ್ಚಿಗೆ ಇಡುತೀನಿ ಎನ್ನುವ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ: ಮುದುಕಿ ದೇವರನ್ನು ಪ್ರಾರ್ಥಿಸಿದಾಗ ಇನ್ನೊಂದು ಪ್ರಾರ್ಥನೆ ದೇವರಿಗೆ ಸೇರಿತು ಎನ್ನುವ ಸಂದರ್ಭವಿದು.
ವಿವರಣೆ: ಮುದುಕನಿಂದ ಕರೆ ಬಂದ ಸಮಯದಲ್ಲೇ ಮಗನ ಕಾರೂ ಸ್ಟಾರ್ಟಾಯಿತು.ಮೊಮ್ಮಗಳು ಸ್ಕೂಟಿಯಲ್ಲಿ ಹೊರಟಳು. ಮೊಮ್ಮಗನ ಸ್ಕೂಲಿನ ವ್ಯಾನೂ ಬಂದಿರುತ್ತದೆ. ಇನ್ನಿರುವ ಅಡ್ಡಿಯೆಂದರೆ ಸೊಸೆ. ಸೊಸೆ ಹೊರಗೆ ಕೆಲಸಕ್ಕೆ ಹೋದರೆ ನಾನು ಮುದುಕನ ಜೊತೆಗೆ ಮಾತನಾಡಬಹುದೆಂಬ ಆಸೆಯಿಂದ ಸೊಸೆಗೆ ಹೊರಗಿನ ಕೆಲಸ ಬರಲೆಂದು ಮುದುಕಿ ಬಯಸಿದಳು. ಆ ಕಾರಣಕ್ಕಾಗಿ ಮುದುಕಿ ಗುಟ್ಟೆಮಲ್ಲಪ್ಪನನ್ನು ಪ್ರಾರ್ಥಿಸಿ ಹರಕೆ ಹೊತ್ತಳು. ಸೊಸೆಯೊಬ್ಬಳಿಗೆ ಈ ಹೊತ್ತು ದೇವರೇ ಹೊರಗಿನ ಕೆಲಸ ಸಮ್ಮಿಲಿಸಲಿ (ಒಂದುಗೂಡಲಿ). ಗುಟ್ಟೆಮಲ್ಲಪ್ಪನ ಗಟ್ಟಿಪಾದಕ್ಕೆ ಒಂದು ಹೂ ಹೆಚ್ಚಿಗೆ ಇಡುತೀನಿ ಎಂದು ಹರಕೆ ಹೊತ್ತಳು. ಈ ಸಂದರ್ಭದಲ್ಲಿ ಈ ಮೇಲಿನ ಸಾಲು ಬರುತ್ತದೆ.

IV. ಐದುಆರು ವಾಕ್ಯದಲ್ಲಿ ಉತ್ತರಿಸಿ:

Question 1.
ಮಗ, ಸೊಸೆ ಮತ್ತು ಮೊಮ್ಮಗಳು ಮುದುಕಿಯನ್ನು ಹೇಗೆ ನಡೆಸಿಕೊಳ್ಳುವರು?

Answer:
ವಯೋವೃದ್ಧ ತಂದೆ-ತಾಯಿಯರನ್ನು ಮಕ್ಕಳು ಜವಾಬ್ದಾರಿ ನಿಭಾಯಿಸುವ ನೆಪದಲ್ಲಿ ಹಂಚಿಕೊಂಡು, ಹಿರಿಯ ಜೀವಗಳ ತಲ್ಲಣಗಳನ್ನು ಅಲಕ್ಷಿಸುವಷ್ಟು ವ್ಯಾವಹಾರಿಕವಾಗಿದೆ. ಇಂದಿನ ಕೃತಕ ಜೀವನದಲ್ಲಿ ಮೌಲ್ಯಗಳು ನಾಶವಾಗಿದೆ. ಇಲ್ಲಿನ ಮುದುಕಿ ಹಿರಿಯ ಮಗನ ಜೊತೆಗಿದ್ದಾಳೆ. ಕಿರಿಯ ಮಗನ ಜೊತೆಗಿದ್ದ ಮುದುಕನ ಹತ್ತಿರ ಮಾತನಾಡಬೇಕೆಂಬ ಚಡಪಡಿಕೆ ಮುದುಕಿಯದು. ಅಸ್ಸಾಂನಲ್ಲಿದ್ದ ಮುದುಕನಿಗೂ ಹಾಗೆಯೇ.

ಮುದುಕಿಗೆ ದೂರದ ಊರಿನಲ್ಲಿರುವ ಗಂಡನೊಂದಿಗೆ ಮಾತನಾಡಬೇಕು. ಫೋನು ಝಣಗುಡುತ್ತಿದ್ದರೆ ಅದನ್ನು ಎತ್ತಿಕೊಳ್ಳಲೋ ಬೇಡವೋ, ಸೊಸೆ ಏನೆನ್ನುವಳೋ. ಮಗ ಎಷ್ಟು ಸಲವ ಹೇಳುವುದು ನಿನಗೆ ಎಂದು ಗದರಬಹುದು ಎನ್ನುವ ಭಯ ಮುದುಕಿಯದು. ಫೋನು ಇಟ್ಟಿರುವ ಮಣೆಯವರೆಗೂ ಬರುತ್ತಾಳೆ. ಒಂದು ಸಲ ಸೊಸೆ ಏನೆನ್ನುವಳೋ ಎಂದು ಕಿಚಿನ್ನಿನ ಕಡೆಗೆ ನೋಡುತ್ತಾಳೆ. ಇನ್ನೊಂದು ಸಾರಿ ಸ್ಟಡಿ ರೂಮಿನೆಡೆಗೆ ನೋಡುತ್ತಾಳೆ. ಫೋನು ಝಣಗುಡುವುದು ನಿಲ್ಲುತ್ತದೆಯೋ ಎನ್ನುವ ಭಯ.. ಯಾರಾದರೂ ಬಂದು ಫೋನನ್ನು ಎತ್ತಬಾರದೇ? ಆ ಕಡೆ ಮುದುಕನಿರಬಹುದು ಎಂದು ಮುದುಕಿಯ ಜೀವ ಎಳೆಯುತ್ತಿದೆ.

ಮುದುಕಿ ಮುದುಕನ ಜೊತೆ ಮಾತನಾಡುವಾಗ ಅವನ ಭಾವನೆಗೆ ಸ್ಪಂದಿಸಿ ಆಳುವಾಗ ಮಗನಿಗೆ ಕೇಳಿಸಿದರೆ “ಸುಮ್ಮನಿರ “ಸುಮ್ಮನಿರಮ್ಮ ಈಗ ಅಳುವಂಥದ್ದೇನಾಗಿದೆಯಮ್ಮ ನಿನಗೆ ಎಂದು ಗದರಬಹುದೆನ್ನುವ ಆತಂಕ ಮುದುಕಿಗಿದೆ. ಫೋನು ನಿಂತುಬಿಡಬಹುದೆನ್ನುವ ತಳಮಳ ಅವಳಿಗಿದೆ.

ಅದು ರಿಂಗಣಿಸುತ್ತಾ ಇರುವ ಹಾಗೆಯೇ ಫೋನು ಎತ್ತಲು ಮೊಮ್ಮಗಳನ್ನು ಕರೆಯಲು ಹೋಗುತ್ತಾಳೆ. ಮಹಡಿ ಹತ್ತಿ ಮೊಮ್ಮಗಳನ್ನು ಕರೆದರೆ ಅವಳು ಕಂಪ್ಯೂಟರಿನ ಮೇಲೆ ಮೂಜಗವನ್ನೇ ಆವಾಹಿಸಿ ಕುಳಿತಿದ್ದಾಳೆ. ಚಿಟುಗುಟ್ಟುತ್ತಲೇ ಅಟ್ಟವಿಳಿದು ಬಂದು ಧಡ್ಡನೆ ಪೋನೆತ್ತಿ “ರಾಂಗ್ ನಂಬರ್” ಎನ್ನುತ್ತಾಳೆ. ಅದು ಮುದುಕಿಗೆ ಅನುಮಾನ ತಂದಿತು.ಮೊಮ್ಮಗಳ ಆತುರಕ್ಕೆ ಮುದುಕಿ “ಈ ಹುಡುಗಿ ಸರಿಯಾಗಿ ಕೇಳಿಸಿಕೊಂಡಳೋ ಗಡಿಬಿಡಿಯಲ್ಲಿ ಬಿಡುಗಡೆಗೆ ಹಾತೊರೆದು ರೈಟನ್ನೇ ರಾಂಗೆಂದಳೋ” ಎಂದುಕೊಂಡಳು. ಬಚ್ಚಲಿಗೆ ಹೋಗಿ ನಿಮಿಷ ನಿಂತಿದ್ದು ಮತ್ತೆ ಫೋನು ಬರಬಹುದೆಂದು ಫೋನಿನ ಬಳಿಗೆ ಬರುತ್ತಾಳೆ. ಮಗ, ಸೊಸೆ ಮತ್ತು ಮೊಮ್ಮಗಳು ಮುದುಕಿಯನ್ನು ಈ ರೀತಿಯೆಲ್ಲಾ ನಡೆಸಿಕೊಳ್ಳುವರು.

Question 2.
ಮುದುಕನ ಕುರಿತು ಮುದುಕಿಯ ನೆನೆಕೆಗಳೇನು?

Answer:
ವಯೋವೃದ್ಧ ತಂದೆತಾಯಿಯರನ್ನು ಮಕ್ಕಳು ಜವಾಬ್ದಾರಿಯನ್ನು ನಿಭಾಯಿಸುವ ನೆಪದಲ್ಲಿ ಹಂಚಿಕೊಂಡು, ಹಿರಿಯ ಜೀವಗಳ ತಲ್ಲಣಗಳನ್ನು ಅಲಕ್ಷಿಸುವಷ್ಟು ವ್ಯಾವಹಾರಿಕವಾಗಿದೆ. ಇಂದಿನ ಕೃತಕ ಜೀವನದಲ್ಲಿ ಮೌಲ್ಯಗಳು ನಾಶವಾಗಿದೆ. ಇಲ್ಲಿನ ಮುದುಕಿ ಹಿರಿಯ ಮಗನ ಜೊತೆಗಿದ್ದಾಳೆ. ಕಿರಿಯ ಮಗನ ಜೊತೆಗಿದ್ದ ಮುದುಕನ ಹತ್ತಿರ ಮಾತನಾಡಬೇಕೆಂಬ ಚಡಪಡಿಕೆ ಮುದುಕಿಯದು. ಅಸ್ಸಾಂನಲ್ಲಿದ್ದ ಮುದುಕನಿಗೂ ಹಾಗೆಯೇ.

ದೊಡ್ಡ ಮಗ ಮುದುಕಿಯನ್ನು ಕಿರಿಯ ಮಗ ಮುದುಕನನ್ನು ಹಂಚಿಕೊಂಡಿದ್ದಾರೆ. ಮುದುಕಿ ಇದ್ದ ಸ್ಥಳ ಕರ್ನಾಟಕ, ಭಾಷೆ ಕನ್ನಡವಾದ ಕಾರಣ ಸೊಸೆ ಹೊರಗೆ ಹೋದಾಗ ಹೊರಗಿನವರೊಂದಿಗೆ ಮಾತನಾಡಿ ಬಾಯತುರಿಕೆಯನ್ನು ತೀರಿಸಿಕೊಳ್ಳುತ್ತಾಳೆ. ಆದರೆ ಮುದುಕನಿರುವುದು ದೂರದ ಅಸ್ಸಾಂಮಿನಲ್ಲಿ, ಮುದುಕನಿಗೆ ಅಲ್ಲಿನ ಭಾಷೆ ಬರುವುದಿಲ್ಲ. ಕಿರಿಯ ಮಗ ಮತ್ತವನ ಹೆಂಡತಿ ಬೆಳಿಗ್ಗೆ ಒಂಭತ್ತಕ್ಕೆ ಕೆಲಸಕ್ಕೆ ಹೋದರೆ ಬರುವುದು ಹೊತ್ತು ಕಳೆದ ಮೇಲೆ.

ಹಾಗಾಗಿ ಅಸ್ಸಾಮಿ ಭಾಷೆ ಬರದ ಅವನಿಗೆ ಮಾತನಾಡಲು ಯಾರು ಇಲ್ಲ. ಮುದುಕಿ ಫೋನು ಮಾಡಿದಾಗಲೆಲ್ಲ ಮಾತೇ ಮರೆತು ಹೋಗಿದೆ ಕಣೆ. ಮಾತಾಡು ಮಾತಾಡು ಮಾತಾಡುತ್ತಿರು ಮಾತು ನಿಲ್ಲಿಸಬೇಡ. ಎಂದು ಗೋಗರೆಯುತ್ತಾನೆ. ಆತ ಫೋನುಗೂಡನ್ನೇ ತಬ್ಬಿಕೊಂಡಿರುವುದನ್ನು ನೆನೆದು ಮುದುಕಿಗೆ ಕಣ್ಣೀರು ಬಂದರೂ ಮುದುಕನಿಗೆ ತಿಳಿದರೆ, ಕೊರಗಬಹುದೆಂದು ಆತಂಕದಿಂದ ಸುಯ್ದು (ನಿಟ್ಟುಸಿರು) ಸೋರದ ಹಾಗೆ ಕಣ್ಣೀರು ಸುರಿಸುತ್ತಾಳೆ. ತನ್ನ ಸಂಗಾತಿಯ ನೆನಪು ಮುದುಕಿಯನ್ನು ಅವರಿಸಿಕೊಂಡಿದೆ.

Question 3.
ಮುದುಕಿಯ ತಳಮಳ ಕವಿತೆಯಲ್ಲಿ ಹೇಗೆ ವ್ಯಕ್ತವಾಗಿದೆ?

Answer:
ಕವಿತೆಯಲ್ಲಿ ಮುದುಕಿಯ ಮನಸ್ಸಿನ ತಳಮಳವನ್ನು ಕವಯಿತ್ರಿ ಲಲಿತಾ ಸಿದ್ಧಬಸವಯ್ಯ ಅತೀ ಭಾವನಾತ್ಮಕವಾಗಿ ಚಿತ್ರಿಸಿದ್ದಾರೆ. ಈ ವೃದ್ಧ ಮಹಿಳೆ ತನ್ನ ಗಂಡನು ಇರುವ ಅಸ್ಸಾಂನಿಗೆ ಫೋನು ಮಾಡಬೇಕೆಂಬ ಇಚ್ಛೆಯಿಂದ ತುಂಬಿದ್ದಾಳೆ. ಆದರೆ ಮಗ, ಸೊಸೆ, ಮೊಮ್ಮಕ್ಕಳು ಎಲ್ಲರ ವರ್ತನೆ ಮತ್ತು ಮನೆಯ ಪರಿಸ್ಥಿತಿಯಿಂದಾಗಿ ಅವಳ ಮನಸ್ಸು ಆವೇಶದಿಂದ ತೊಂದರೆಗೊಳಗಾಗಿದೆ.

ಫೋನು ಬರೆದರೆ ಅದನ್ನು ಎತ್ತಲೇ ಬೇಕೋ ಅಥವಾ ಬಿಡಬೇಕು ಎಂಬ ಗೊಂದಲ ಅವಳಲ್ಲಿ ಇದೆ. ಸೊಸೆ ಏನೆಂದು ಹಿಗ್ಗಿಸಬಹುದೆಂಬ ಭಯ, ಮಗ ಗದರಬಹುದು ಎಂಬ ಆತಂಕ ಇವೆಲ್ಲವೂ ಅವಳನ್ನು ತೀವ್ರ ಭಾವನಾತ್ಮಕ ಒತ್ತಡಕ್ಕೆ ಒಳಪಡಿಸುತ್ತವೆ. ಫೋನು ನಿಂತುಬಿಡಬಹುದು ಎಂಬ ಆತುರದಿಂದ ಮುದುಕಿ ಫೋನಿನ ಹತ್ತಿರ ಓಡುತ್ತಾಳೆ. ಮೊಮ್ಮಗಳು ನಿರ್ಲಕ್ಷ್ಯದಿಂದ “ರಾಂಗ್ ನಂಬರ್” ಎನ್ನುವುದರಿಂದ ಅವಳಿಗೆ ಮತ್ತಷ್ಟು ಅನುಮಾನ.

ಈ ಎಲ್ಲಾ ಘಟನೆಗಳು ಮುದುಕಿಯ ಅಂತರಂಗದಲ್ಲಿ ನಡೆಯುವ ಭಾವನೆಗಳ – ಆತಂಕ, ನಿರೀಕ್ಷೆ, ನಿಸ್ಸಹಾಯತೆ – ರೂಪದಲ್ಲಿ ತಳಮಳವಾಗಿ ಕವಿತೆಯಲ್ಲಿ ಉಜ್ಜೀವನ ಹೊಂದಿವೆ. ಕೇವಲ ಒಂದು ಫೋನು ಕರೆಗಾಗಿ ಅವಳು ಹೃದಯದಾಳದಿಂದ ಕಾತುರವಾಗಿ ಕಾಯುತ್ತಿರುವುದು ಇಡೀ ಸಮುದಾಯದ ಬದಲಾದ ಮೌಲ್ಯ ವ್ಯವಸ್ಥೆಯ ಸಂಕೇತವಾಗಿ ಚಿತ್ರಿಸಲಾಗಿದೆ.

Question 4.
ವೃದ್ಧರ ತವಕ-ತಲ್ಲಣಗಳನ್ನು ಕವಯಿತ್ರಿ ಹೇಗೆ ಚಿತ್ರಿಸಿದ್ದಾರೆ?

Answer:
ಕವಯಿತ್ರಿ ಲಲಿತಾ ಸಿದ್ಧಬಸವಯ್ಯ ತಮ್ಮ ಕವನದಲ್ಲಿ ವೃದ್ಧ ದಂಪತಿಯ ಭಾವನಾತ್ಮಕ ತವಕ ಮತ್ತು ತಲ್ಲಣವನ್ನು ಅತ್ಯಂತ ಸಾರ್ಥಕವಾಗಿ ಚಿತ್ರಿಸಿದ್ದಾರೆ. ಮಕ್ಕಳಿಗೆ ತಾವು ಹೊತ್ತ ಹೊಣೆಗಾರಿಕೆಯನ್ನು ಹಂಚಿಕೊಂಡಿರುವಂತೆ ತೋರಿ, ಹಿರಿಯರನ್ನು ಬೇರೆಯಾಗಿಸುವ ಪರಿಸ್ಥಿತಿಯಲ್ಲಿ, ಮುದುಕ ಮತ್ತು ಮುದುಕಿ ಪರಸ್ಪರ ದೂರದಲ್ಲಿದ್ದಾರೆ.

ಮದುವೆಯ ನಂತರ ಮಕ್ಕಳ ಮನೆಯಲ್ಲಿ ವಾಸವಿರುವ ಈ ದಂಪತಿಗೆ ಪರಸ್ಪರ ಮಾತನಾಡುವುದು ಕಠಿಣವಾಗಿಬಿಟ್ಟಿದೆ. ಮುದುಕ ಅಸ್ಸಾಂನಲ್ಲಿ, ಮುದುಕಿ ಕರ್ನಾಟಕದಲ್ಲಿ – ಭಾಷಾ ತೊಂದರೆಗಳು, ವಯಸ್ಸು, ದೈಹಿಕ ಒಂಟಿತನ ಇವೆಲ್ಲವೂ ಅವರನ್ನು ಇನ್ನಷ್ಟು ನೊಂದಿಸುತ್ತವೆ. ಫೋನು ಮೂಲಕ ಮಾತನಾಡುವುದೆ ಅವರಿಗೆ ಒಂದುಮಾತ್ರ ತಾಳ್ಮೆಯ ಮೂಲ. ಆದರೆ ಸುತ್ತಲಿನವರು ಅದಕ್ಕೂ ಅವಕಾಶ ನೀಡದೆ, ನಿರ್ಲಕ್ಷ್ಯ, ಅಸಹಾನುಭೂತಿ ತೋರಿಸುತ್ತಾರೆ.

ಮುದುಕನು ಫೋನುಗೂಡನ್ನು ತಬ್ಬಿಕೊಂಡು, “ಮಾತಾಡು, ನಿಲ್ಲಿಸಬೇಡ” ಎಂದು ಕೇಳಿಕೊಳ್ಳುವುದು, ಮುದುಕಿ ಕಣ್ಣೀರು ಹರಿಸುತ್ತಾ ಅದು ಮುದುಕನಿಗೆ ಗೊತ್ತಾಗದಿರಲಿ ಎಂದು ನಿಟ್ಟುಸಿರು ಬಿಡುವುದು – ಈ ದೃಶ್ಯಗಳು ಅವರ ನಡುವಿನ ಆಳವಾದ ಮಾನಸಿಕ ಸಂಬಂಧವನ್ನು ತೋರಿಸುತ್ತವೆ.

ಈ ತವಕ-ತಲ್ಲಣಗಳ ಮೂಲಕ ಕವಯಿತ್ರಿ ನಮ್ಮ ಕಾಲಘಟ್ಟದ ಸಾಮಾಜಿಕ ಬದಲಾವಣೆಯಲ್ಲಿನ ಮಾನವೀಯ ಮೌಲ್ಯಗಳ ಕ್ಷಯವನ್ನು ಬಹಿರಂಗಪಡಿಸಿದ್ದಾರೆ. ವೃದ್ಧರನ್ನು ಆಸರೆ ಇಲ್ಲದೆ ಬಿಟ್ಟಿರುವ ಸಮಾಜದ ಬಿರುಕನ್ನು ಈ ಕವನ ಸ್ಪಷ್ಟವಾಗಿ ತೋರಿಸುತ್ತದೆ.

ಒಂದು ಹೂ ಹೆಚ್ಚಿಗೆ ಇಡುತೀನಿ
Summary

2nd PUC Kannada Chapter 10 Ondu Hoo Hechige Idutini
2nd PUC Kannada Chapter 10 Ondu Hoo Hechige Idutini

ಇಂದಿನ ಜೀವನ ಶೈಲಿ ಕೃತಕವಾಗಿದೆ. ಮಕ್ಕಳು ತಮ್ಮ ವಯೋವೃದ್ಧ ತಂದೆ-ತಾಯಿಯರನ್ನು ಜವಾಬ್ದಾರಿ ನಿಭಾಯಿಸುತ್ತಿರುವ ನೆಪದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಅವರು ತೋರುತ್ತಿರುವ ತಾತ್ಸಾರ, ಹಿರಿಯ ಜೀವಗಳ ತವಕ-ತಲ್ಲಣಗಳನ್ನು ಅವಗಣಿಸುತ್ತಿರುವುದು, ಮೌಲ್ಯಗಳ ನಾಶದ ಸಂಕೇತವಾಗಿದೆ.

ಈ ಕವನದಲ್ಲಿ, ಬಾಳಿನ ಕೊನೆಯ ಹಂತದಲ್ಲಿ ತಮ್ಮ ಜೋತೆಯವರ ಜೊತೆ ಮಾತನಾಡಬೇಕೆಂಬ ಆಸೆ ಇಟ್ಟಿರುವ ಇಬ್ಬರು ವೃದ್ಧರ ಭಾವನೆಗಳನ್ನು ಕವಯಿತ್ರಿ ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಮುದುಕಿ ತನ್ನ ಗಂಡನೊಂದಿಗೆ ಮಾತನಾಡಬೇಕೆಂಬ ತೀವ್ರ ಚಟುವಟಿಕೆಯಲ್ಲಿ ಫೋನು ಝಣಗುಡಿದಾಗ ಅದನ್ನು ಎತ್ತೋಣವೇ ಬೇಡವೇ ಎಂಬ ಗೊಂದಲದಲ್ಲಿ ಕಿಚನ್, ಸ್ಟಡಿರೂಂ ಕಡೆಗೆ ಕಣ್ಣುಹಾಯಿಸುತ್ತಾಳೆ. ಫೋನು ನಿಲ್ಲಬಹುದೆಂಬ ಭಯದಿಂದ ಅವಳಿಗೆ ತೀವ್ರ ಚಿಂತೆ.

ಅವನ ಪತಿಯೂ ಅಸ್ಸಾಂನಲ್ಲಿದ್ದಾನೆ. ತಾನು ಹಿರಿಯ ಮಗನೊಂದಿಗೆ ಕರ್ನಾಟಕದಲ್ಲಿ ಇದ್ದಾಳೆ. ಇಲ್ಲಿ ಭಾಷೆ ಕನ್ನಡವಾದ್ದರಿಂದ ಹೊರಗಿನವರೊಂದಿಗೆ ಮಾತನಾಡಲು ಅವಕಾಶವಿದೆ. ಆದರೆ ಅಸ್ಸಾಂನಲ್ಲಿ ಇರುವ ಮುದುಕನಿಗೆ ಅಲ್ಲಿನ ಭಾಷೆ ಬಾರದ ಕಾರಣ ಯಾರೊಂದಿಗೆ ಮಾತಾಡಲೂ ಸಾಧ್ಯವಿಲ್ಲ. ದಿನವಿಡೀ ಏಕಾಂಗಿ. ಮುದುಕಿಗೆ ಫೋನು ಮಾಡಿದಾಗ ಅವನು ಮಾತು ಮರೆತು ಹೋಗಿದ್ದಾನಂತೆ. ಮಾತಾಡು, ಮಾತಾಡುತ್ತಿರು, ನಿಲ್ಲಿಸಬೇಡ ಎಂದು ಅವನು ಗೋಗರೆಯುತ್ತಾನೆ. ಫೋನುಗೂಡನ್ನು ತಬ್ಬಿಕೊಂಡಿರುವ ಆತನ ಭಾವನೆಗಳನ್ನು ನೆನೆದು ಮುದುಕಿಗೆ ಕಣ್ಣೀರು ಬರುತ್ತದೆ.

ಆದರೆ ಮಗನಿಗೆ ತಿಳಿದರೆ ಗದರಬಹುದು ಎಂಬ ಆತಂಕದಿಂದ ನಿಟ್ಟುಸಿರು ಬಿಡುವಂತೆಯೇ ಅಳುತ್ತಾಳೆ. ಫೋನು ಉಳಿಯಲಿ, ಅದನ್ನು ಎತ್ತಲು ಯಾರನ್ನಾದರೂ ಕರೆಬಲ್ಲೆನೆಂಬ ಆಶಯದಿಂದ ಮೊಮ್ಮಗನನ್ನು ಕರೆಯಲು ಹೋದಳು. ಅವನು ಕಂಪ್ಯೂಟರಿನ ಮುಂದೆ ಆಟವಾಡುತ್ತಿದ್ದ. ಧಡ್ಡನೆ ಪೋನಿಗೆ ಜವಾಬಿಸಿ “ರಾಂಗ್ ನಂಬರ್” ಎಂದ. ಇದು ಮುದುಕಿಗೆ ಸಂಶಯ ಹುಟ್ಟಿಸುತ್ತದೆ – ಈ ಹುಡುಗಿ ಸರಿಯಾಗಿ ಕೇಳಿಕೊಂಡಳೋ? ಬೇರೆ ಯಾರದನ್ನಾದರೂ ರಾಂಗ್ ನಂಬರ್ ಅಂದಿತ್ತೋ?

ಅದರಮೇಲೆ, ಮಗನ ಕಾರು ಬಂದು ನಿಲ್ಲುತ್ತದೆ. ಮೊಮ್ಮಗಳ ಶಾಲಾ ವ್ಯಾನ್ ಬಂದು ಹೋಗುತ್ತದೆ. ಅವಳಿಗೆ ಕಾಟ, ಬಿಕ್ಕಾಟ. ಇನ್ನು ಬಾಕಿಯಿರುವ ಅಡ್ಡಿ ಸೊಸೆ. ಸೊಸೆ ಹೊರಗೆ ಹೋದರೆ ತಾನು ಮನವಿಟ್ಟು ಗಂಡನೊಂದಿಗೆ ಮಾತನಾಡಬಹುದೆಂಬ ಆಶೆ. ಆದ್ದರಿಂದಲೇ ಅವಳು ಗುಟ್ಟೆಮಲ್ಲಪ್ಪನಿಗೆ ಹರಕೆ ಹೊತ್ತಿದ್ದಾಳೆ – “ಸೊಸೆ ಕೆಲಸಕ್ಕೆ ಹೋಗಲಿ, ಇವತ್ತು ಒಳ್ಳೆಯದು ಆಗಲಿ. ನಾಳೆ ನಾನೊಬ್ಬ ಹೂವನ್ನೂ ಹೆಚ್ಚು ಇಡ್ತೀನಿ.”

ಒಂದು ಫೋನು ಕರೆಗಾಗಿ ತವಕದಿಂದ ತಲ್ಲಣವಾಗುತ್ತಿರುವ ಈ ಇಬ್ಬರು ವೃದ್ಧರ ಭಾವನೆಗಳು ಹೃದಯವನ್ನೆ ತಟ್ಟುತ್ತವೆ. ತಾವೆಂಥ ಪ್ರೀತಿಯಿಂದ ಬೆಳೆಸಿದ ಮಕ್ಕಳು ಇಂದು ಅಸಹಾನুভೂತಿಯಿಂದ ತಮಗೆ ತಲೆ ಕೊಡದೆ ಬಿಟ್ಟಿರುವುದು, ನಮ್ಮ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಹೇಗೆ ಕ್ಷೀಣಿಸುತ್ತಿವೆ ಎಂಬುದಕ್ಕೆ ಕವಿತೆ ಕನ್ನಡಿಯಾಗಂತಿದೆ.

Click Here to Download Ondu Hoo Hechige Idutini PDF Notes
Click Here to Watch Ondu Hoo Hechige Idutini Video

You cannot copy content of this page