2nd PUC Kannada Basavanna

2nd PUC Kannada Question and Answer – Basavanna Vachana

Looking for 2nd PUC Kannada textbook answers? You can download Chapter 2: Basavanna Vachana Questions and Answers PDF, Notes, and Summary here. 2nd PUC Kannada Kavyabhaga solutions follow the Karnataka State Board Syllabus, making it easier for students to revise and score higher in exams.

Karnataka 2nd PUC Kannada Textbook Answers—Reflections Chapter 2

Basavanna Vachana Questions and Answers, Notes, and Summary

2nd PUC Kannada Kavyabhaga Chapter 2

ಬಸವಣ್ಣನವರ ವಚನಗಳು

Basavanna Vachana

2nd PUC Kannada Chapter 2 Basavanna Vachana
Scroll Down to Download Basavanna Vachana PDF
I. ಒಂದು ವಾಕ್ಯದಲ್ಲಿ ಉತ್ತರಿಸಿ:

Question 1.
ತನು ಯಾವಾಗ ಕರಗಬೇಕು ?
Answer:
ತನು ಮನಮನ ಬೆರೆತಲ್ಲಿ ಕರಗಬೇಕು.

Question 2.
ಯಾರ ಕೈಯಲ್ಲಿ ದರ್ಪಣವಿದ್ದು ಫಲವಿಲ್ಲ?
Answer:
ಕುರುಡನ ಕೈಯಲ್ಲಿ ದರ್ಪಣವಿದ್ದು ಫಲವಿಲ್ಲ.

Question 3.
ಶಿವಪಥವನ್ನು ಅರಿಯದಿದ್ದರೆ ಏನಾಗುವುದು?
Answer:
ಶಿವಪಥವನ್ನು ಅರಿಯದಿದ್ದರೆ ಲಿಂಗವಿದ್ದರೂ ಫಲವಿಲ್ಲದಂತಾಗ

Question 4.
ಬಸವಣ್ಣನವರ ವಚನಗಳ ಅಂಕಿತ ಯಾವುದು?
Answer:
ಬಸವಣ್ಣನವರ ವಚನಗಳ ಅಂಕಿತ ಕೂಡಲ ಸಂಗಮದೇವ.

II. ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ:

Question 1.
ಯಾವ ಗುಣಗಳಿಲ್ಲದವನು ಡಾಂಭಿಕನೆನಿಸುತ್ತಾನೆ?
Answer:
ಮನ ಮನ ಬೆರಸಿದಲ್ಲಿ ತನುಕರಗಬೇಕು. ಸ್ಪರ್ಶದಿಂದ ರೋಮಾಂಚನ ಹೊರಹೊಮ್ಮಬೇಕು. ದು:ಖಕ್ಕೆ ಕಣ್ಣೀರನ್ನು ಸುರಿಸಬೇಕು. ಮಾತನಾಡುವಾಗ ಗಂಟಲು ತೇವವಾಗಿ ಶಬ್ದ ಹೊರಹೊಮ್ಮಬೇಕು. ಇವೆಲ್ಲಾ ಕೂಡಲ ಸಂಗಮದೇವರ ಭಕ್ತಿಗೆ ಚಿಹ್ನೆಯಾಗಿದೆ. ಈ ಗುಣಗಳಿಲ್ಲದವನನ್ನು ಕೂಡಲ ಸಂಗಮ ದೇವ ಮೆಚ್ಚುವುದಿಲ್ಲ. ಇಂತಹ ಗುಣಗಳಿಲ್ಲದವನು ಡಾಂಭಿಕನೆನಿಸುತ್ತಾನೆ.

Question 2.
ಶಿವಪಥವನ್ನರಿಯದವನನ್ನು ಹೇಗೆ ವಿಡಂಬಿಸಲಾಗಿದೆ?

Answer:
ಕೈಯಲ್ಲಿ ಹಣದರೇಖೆಯೊಂದಿದ್ದರೆ ಸಾಲದು, ಆಯುಷ್ಯರೇಖೆಯೂ ಇರಬೇಕು. ಹೇಡಿಯ ಕೈಯಲ್ಲಿ ಚಂದ್ರಾಯುಧವಿದ್ದರೆ ಫಲವೇನು? ಕುರುಡನ ಕೈಯಲ್ಲಿ ಕನ್ನಡಿಯಿದ್ದು ಫಲವೇನು? ಮಂಗನ ಕೈಯಲ್ಲಿ ಮಾಣಿಕ್ಯವಿದ್ದು ಫಲವೇನು? ಏನೂ ಪ್ರಯೋಜನವಿಲ್ಲ. ಅದೇ ರೀತಿ ಶಿವಪಥವನ್ನು ಅರಿಯದವನ ಕೈಯಲ್ಲಿ ಲಿಂಗವಿದ್ದರೂ ಉಪಯೋಗವಿಲ್ಲ ಎಂದು ವಿಡಂಬಿಸಲಾಗಿದೆ.

Question 3.

ಯಾವಾಗ ನಿಲಬಹುದು? ಯಾವಾಗ ನಿಲಲಾಗದು?
Answer:
ಒಲೆ ಹತ್ತಿ ಉರಿದಾಗ ನಿಲ್ಲಬಹುದು. ಆದರೆ ಧರೆಯೇ ಹತ್ತಿ ಉರಿಯುವಾಗ ಅಲ್ಲಿ ನಿಲ್ಲಲು ಸಾಧ್ಯವಿಲ್ಲ ಒಲೆಯ ತಾಪ ಕಡಿಮೆ. ಧರೆ ಹತ್ತಿ ಉರಿದಾಗ ತಾಪ ಹೆಚ್ಚು. ಅಂದರೆ ನಮ್ಮನ್ನು ರಕ್ಷಿಸಬೇಕಾದವರೇ ಕೊಲ್ಲುವ ಸಂಚು ಹೂಡಿದಾಗ ಯಾರನ್ನೂ ದೂರಲು ಸಾಧ್ಯವಿಲ್ಲವೆಂದು ಬಸವಣ್ಣನವರು ಹೇಳುತ್ತಾರೆ.

III. ಸಾಂದರ್ಭಿಕ ವಿವರಣೆಯನ್ನು ಬಯಸುವ ವಾಕ್ಯಗಳು

Question 1.
ಅರ್ಥರೇಖೆಯಿದ್ದಲ್ಲಿ ಫಲವೇನು, ಆಯುಷ್ಯರೇಖೆ ಇಲ್ಲದನ್ನಕ್ಕರ”

Answer:
ಆಯ್ಕೆ : ಈ ಮೇಲಿನ ವಚನದ ಸಾಲನ್ನು ಬಸವಣ್ಣನವರ ವಚನಗಳಿಂದ ಆರಿಸಲಾಗಿದೆ.
ಸಂದರ್ಭ: ದೇವರನ್ನು ಆರಾಧಿಸಲು ಡಾಂಭಿಕ ಭಕ್ತಿ ಸಾಲದು, ನಿಜವಾದ ಭಕ್ತಿಯನ್ನು ತೋರಬೇಕು ಎನ್ನುವ ಸಂದರ್ಭವಿದು.
ವಿವರಣೆ: ದೇವರನ್ನು ಆರಾಧಿಸಲು ಡಾಂಭಿಕ ಭಕ್ತಿ ಸಾಲದು, ನಿಜವಾದ ಭಕ್ತಿಯನ್ನು ತೋರಬೇಕು. ಲಿಂಗವನ್ನು ಮೈಮೇಲೆ ಧರಿಸಿ, ಶಿವಭಕ್ತನೆಂದು ತೋರಿಕೆಯ ಭಕ್ತಿ ಆಚರಿಸುವುದಕ್ಕಿಂತ ಶಿವ ಪಥದಲ್ಲಿ ನಡೆಯುವುದು ಮುಖ್ಯವೆಂಬುದೆ ಬಸವಣ್ಣನವರ ಅಭಿಪ್ರಾಯವಾಗಿದೆ.
ಕೈಯಲ್ಲಿ ಸಂಪತ್ತಿನ ರೇಖೆಯೊಂದಿದ್ದರೆ ಮಾತ್ರ ಸಾಲದು. ಅದನ್ನು ಅನುಭವಿಸಲು ಆಯುಷ್ಯ ರೇಖೆಯೂ ಇರಬೇಕು, ಅದೇ ರೀತಿ ಕೈಯಲ್ಲಿ ಲಿಂಗವಿದ್ದರೆ ಸಾಲದು ಅದನ್ನು ಅರಿತು ನಿಜಭಕ್ತಿಯಿಂದ ಪೂಜಿಸಬೇಕು.

Question 2.

ಮರ್ಕಟನ ಕೈಯಲ್ಲಿ ಮಾಣಿಕ್ಯವಿದ್ದು ಫಲವೇನು?
Answer:
ಆಯ್ಕೆ : ಈ ಮೇಲಿನ ವಚನದ ಸಾಲನ್ನು ಬಸವಣ್ಣನವರ ವಚನಗಳಿಂದ ಆರಿಸಲಾಗಿದೆ.
ಸಂದರ್ಭ: ಬಸವಣ್ಣನವರು ಮೂಲದಲ್ಲಿ ಸತ್ವವಿರದ ತೋರಿಕೆಯ ಭಕ್ತಿಯ ಕುರಿತಂತೆ ತಿಳಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ.
ವಿವರಣೆ: ಬಸವಣ್ಣನವರು ಭಕ್ತಿಯಕುರಿತಾದ ವಿಚಾರಗಳನ್ನು ಮಾತನಾಡುವಾಗ, ಭಕ್ತಿಯ ಯಾವಾಗಲೂ ದೃಢತೆಯಿಂದ ಕೂಡಿರಬೇಕು, ಸರಳವಾಗಿರಬೇಕು, ಸತ್ವಯುತವಾಗಿರಬೇಕು ಹಾಗಾದಾ ಮಾತ್ರ ಶಿವಪಥದತ್ತ ಸಾಗಲು ಸಾಧ್ಯ ಎನ್ನುವ ಅಭಿಪ್ರಾಯ ಮುಂದಿಡುತ್ತಾರೆ.

ಮೂಲದಲ್ಲಿ ಭಕ್ತಿಯು ಸತ್ವಯುತವಾಗಿರದೇ ಇದ್ದರೆ ಅಂತಹ ಭಕ್ತಿಯು ಆಯುಷ್ಯರೇಖೆ ಇಲ್ಲದವನ” ಅರ್ಥರೇಖೆ ಇದ್ದ ಹಾಗೆ, ಹಂದೆಯ ಕೈಯಲ್ಲಿ ಚಂದ್ರಾಯುಧ ಇದ್ದ ಹಾಗೆ. ಕುರುಡನ ಕೈಯಲ್ಲಿ ಕನ್ನ ಇದ್ದ ಹಾಗೆ ನಿಷ್ಟ್ರಯೋಜಕ ಎನ್ನುತ್ತಾ ಈ ಮೇಲಿನಂತೆ ಹೇಳುತ್ತಾರೆ.

Question 3.
ಧರೆ ಹತ್ತಿ ಉರಿದಡೆ ನಿಲ್ಲಲುಬಾರದು.
Answer:
ಆಯ್ಕೆ : ಈ ಮೇಲಿನ ವಚನದ ಸಾಲನ್ನು ಬಸವಣ್ಣನವರ ವಚನಗಳಿಂದ ಆರಿಸಲಾಗಿದೆ.
ಸಂದರ್ಭ: ನಮ್ಮನ್ನು ಕಾಯಬೇಕಾದವರೇ ಕೊಲ್ಲಲು ಮುಂದಾದರೆ ಇನ್ಯಾರು ಕಾಯಲು ಸಾಧ್ಯವಿಲ್ಲ ಎನ್ನುವ ಸಂದರ್ಭದಲ್ಲಿ ಈ ಮಾತು ಬಂದಿದೆ.
ವಿವರಣೆ : ಬಸವಣ್ಣನವರ ಪ್ರಕಾರ ಭೂಮಿಯ ಮೇಲಿರುವ ಎಲ್ಲಾ ಜೀವಿಗಳನ್ನು ಸಲಹುವವನು ದೇವರು. ನಮ್ಮ ಕಷ್ಟದ ಕಾಲದಲ್ಲಿ ನಾವು ದೇವರ ನೆರವನ್ನು ಬಯಸುತ್ತೇವೆ. ಕಷ್ಟದಲ್ಲಿರುವ ನಮ್ಮನ್ನು ದೇವರು ಸಲಹುತ್ತಾನೆ ಎಂಬುದು ನಮ್ಮ ನಂಬಿಕೆ. ಆದರೆ ಕಾಯಬೇಕಾದವರೇ ಕೊಲ್ಲಲು ಮುಂದಾದರೆ ಕೆಟ್ಟ ಪರಿಣಾಮ ಎದುರಾಗುತ್ತದೆ ಎನ್ನುವುದನ್ನು ಹೀಗೆ ವಿವರಿಸುತ್ತಾರೆ. ಒಲೆಯಿಂದ ಉಂಟಾದ ಉರಿಯನ್ನು ಸ್ವಲ್ಪದೂರದಲ್ಲಿ ನಿಲ್ಲುವುದರಿಂದ ತಾಳಿಕೊಳ್ಳಬಹುದು. ಆದರೆ ಇಡೀ ಭೂಮಿಯೇ ಹೊತ್ತಿ ಉರಿದರೆ ನಿಲ್ಲಲು ಸಾಧ್ಯವಿಲ್ಲ ಎನ್ನುತ್ತಾ ಈ ಮೇಲಿನಂತೆ ಹೇಳುತ್ತಾರೆ.

Question 4.
ತಾಯ ಮೊಲೆವಾಲು ನಂಜಾಗಿ ಕೊಲುವಡೆ
Answer:
ಆಯ್ಕೆ : ಈ ಮೇಲಿನ ವಚನದ ಸಾಲನ್ನು ಬಸವಣ್ಣನವರ ವಚನಗಳಿಂದ ಆರಿಸಲಾಗಿದೆ.

ಸಂದರ್ಭ: ಬಸವಣ್ಣನವರು ತಮಗಾದ ವಿಶಿಷ್ಟ ಅನುಭವದ ಅಭಿವ್ಯಕ್ತಿಯನ್ನು ವಿವರಿಸುವ ಸಂದರ್ಭದಲ್ಲಿ ಈ ಮೇಲಿನಂತೆ ಹೇಳುತ್ತಾರೆ.
ವಿವರಣೆ: ಮಗುವಿಗೆ ತಾಯಿಯ ಎದೆ ಹಾಲು ಇತರ ಎಲ್ಲಾ ಔಷಧಿಗಳಿಗಿಂತ ಶ್ರೇಷ್ಠವಾದುದು. ಅದು ಮಗುವಿಗೆ ಸಂಜೀವಿನಿ ಇದ್ದ ಹಾಗೆ. ಆದರೆ ಅಂತಹಎದೆ ಹಾಲೇ ವಿಷವಾದರೆ ಮಗುವಿನ ಉಳಿವು ಅಸಾಧ್ಯ. ಅದನ್ನೇ ಬಸವಣ್ಣನವರು ತಾಯಿಯಂತೆ ಪೊರೆವ ದೇವರೇ ನಮ್ಮನ್ನು ಶಿಕ್ಷಿಸಲು ಮುಂದಾದರೆ ನಮ್ಮ ಉಳಿವು ಸಾಧ್ಯವಿಲ್ಲ ಎನ್ನುವುದನ್ನು ಈ ಮೇಲಿನ ಮಾತಿನ ಮೂಲಕ ವಿವರಿಸುತ್ತಾರೆ.

III. ಐದು-ಆರು ವಾಕ್ಯಗಳಲ್ಲಿ ಉತ್ತರಿಸಿ:

Question 1.
ಬಸವಣ್ಣನವರ ಪ್ರಕಾರ ನೈಜಭಕ್ತಿಯ ಲಕ್ಷಣಗಳಾವುವು?

Answer:
ಬಸವಣ್ಣನವರ ವಚನಗಳು ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಪ್ರಾಮುಖ್ಯತೆಯನ್ನು ನೀಡಿದೆ. ಬಸವಣ್ಣನವರು ಭಕ್ತನಾದವನಿಗೆ ಸಹಜೀವಿಗಳನ್ನು ತನ್ನಂತೆ ಕಾಣುವ ಹೃದಯ ವೈಶಾಲ್ಯತೆ ಇರುವುದು ಮುಖ್ಯವೆಂದಿದ್ದಾರೆ. ಮನುಷ್ಯರ ನಡುವಿನಲ್ಲಿ ಹೊಮ್ಮಬೇಕಾದ ಮಾನವೀಯತೆ, ಹೃದಯ ವೈಶಾಲತೆಯು ಗೈರು ಹಾಜರಾದಾಗ ನಮ್ಮ ಭಕ್ತಿಗೆ ಅರ್ಥವಿರುವುದಿಲ್ಲ.

ಮನುಷ್ಯ-ಮನುಷ್ಯರು ಒಂದೆಡೆ ಕಲೆತಾಗ ಅಹಂಕಾರ ತಗ್ಗಿ ಪರಸ್ಪರ ಮನ ಬೆರೆತು, ತನುಕರಗಬೇಕು. ಪರಸ್ಪರ ಸೋಂಕಿದಾಗ ಪುಳಕ ಇಬ್ಬರಲ್ಲೂ ಹೊರ ಹೊಮ್ಮಬೇಕು. ಸ್ಪರ್ಶಕ್ಕೆ ಸ್ಪಂದಿಸುವ ಗುಣವಿರಬೇಕು. ದುಃಖವನ್ನು ಕಂಡಾಗ ಕಣ್ಣೀರು ಸುರಿಸಬೇಕು. ಅವರ ದುಃಖಕ್ಕೆ ಭಾಗಿಯಾಗಿ ನಡೆಯುವ ಗುಣವನ್ನು ಬೆಳೆಸಿಕೊಳ್ಳಬೇಕು. ನೋವಿಗೆ ಸ್ಪಂದಿಸಬೇಕು, ಮಾತನಾಡುವಾಗ ಅಂತ:ಕರಣ ತುಂಬಿ ಧ್ವನಿ ಆರ್ದಗೊಳ್ಳಬೇಕು. ಮತ್ತೊಬ್ಬರ ದುಃಖಕ್ಕೆ ಸ್ಪಂದಿಸದೇ ಸಂತೋಷ ವ್ಯಕ್ತಪಡಿಸಬಾರದು. ಅಂತಹ ಚಿಹ್ನೆ ಇರುವವರನ್ನು ಕೂಡಲ ಸಂಗಮ ದೇವ ಮೆಚ್ಚುವುದಿಲ್ಲ.
ಆದ್ದರಿಂದ ಸಹಜೀವಿಗಳಲ್ಲಿ ಮಾನವೀಯತೆಯಿಂದ ವರ್ತಿಸುವುದು ನಿಜಭಕ್ತನ ಆದ್ಯಗುಣವೆಂದು
ಬಸವಣ್ಣನವರು ನಿರೂಪಿಸಿದ್ದಾರೆ.

Question 2.
ಶಿವ ಪಥವನ್ನರಿಯದವನ ಭಕ್ತಿ ನಿರರ್ಥಕ ವೆಂಬುದನ್ನು ಬಸವಣ್ಣ ಯಾವ ಯಾವ ಉದಾಹರಣೆಗಳ ಮೂಲಕ ವಿವರಿಸಿದ್ದಾರೆ?

Answer:
ಸಮಾಜದಲ್ಲಿ ಬದುಕುವ ಜೀವಿಯು ನಡೆ – ನುಡಿಯಲ್ಲಿ ಹೊಂದಬೇಕಾಗಿರುವ ಸತ್ವವನ್ನು, ಅಂತರಂಗದ ಪರಿಶುದ್ಧತೆಯನ್ನು ವಚನಕಾರರು, ಬಲವಾಗಿ ಪ್ರತಿಪಾದಿಸಿದ್ದಾರೆ.

ಶಿವಪಥವನ್ನು ಅರಿಯುವ ಸಂಕಲ್ಪ ಬಲ ನಿಜಭಕ್ತನ ಮೂಲ ಗುಣವಾಗಬೇಕು ಎಂಬುದನ್ನು ಪ್ರತಿಪಾದಿಸುವಲ್ಲಿಯೂ ಎದ್ದು ಕಾಣುವ ಕಾವ್ಯಾತ್ಮಕ ಗುಣ ಬಸವಣ್ಣನವರ ಕವಿ ಹೃದಯವನ್ನು ಬಿಂಬಿಸಿದೆ.

ಶಿವಪಥವನ್ನೇ ಅರಿಯದವನ ಕೈಯಲ್ಲಿ ಲಿಂಗವಿದ್ದರೂ ಉಪಯೋಗವಿಲ್ಲ ಅಂತಹವನ ಭಕ್ತಿಡಾಂಭಿಕ ಭಕ್ತಿಯಾಗುತ್ತದೆ. ಅಂತವನ ಭಕ್ತಿಯು ನಿರರ್ಥಕ ಎನಿಸಿಕೊಳ್ಳುತ್ತದೆ.

ಕೈಯಲ್ಲಿ ಹಣದ ರೇಖೆಯಿದ್ದರೆ ಉಪಯೋಗಕ್ಕೆ ಬಾರದು. ಆಯುಷ್ಯರೇಖೆಯೂ ಇರಬೇಕು.

ಹೇಡಿಯ ಕೈಯಲ್ಲಿ ಚಂದ್ರಾಯುಧವಿದ್ದರೆ ಫಲವೇನು? ಕುರುಡನಿಗೆ ಕಣ್ಣು ಕಾಣುವುದಿಲ್ಲ ಅವನಿಗೆ ಕನ್ನಡಿಯನ್ನು ಕೊಟ್ಟರೆ ಏನು ಫಲ? ಮಂಗನಿಗೆ ಮಾಣಿಕ್ಯದ ಬೆಲೆಯೇ ತಿಳಿದಿಲ್ಲ. ಮಂಗನ ಕೈಗೆ ಮಾಣಿಕ್ಯ ಕೊಟ್ಟರೆ ಫಲವೇನು! ಅದೇ ರೀತಿ ಶಿವಪಥವನ್ನರಿಯದವನ ಕೈಯಲ್ಲಿ ಲಿಂಗವಿದ್ದರೆ ಆ ಭಕ್ತಿ ನಿರರ್ಥಕವೆನಿಸಿ ಕೊಳ್ಳುತ್ತದೆ.

Question 3.
ರಕ್ಷಿಸಬೇಕಾದವರೆ ಭಕ್ಷಕರಾದರೆ ಒದಗುವ ಘಟನೆಯನ್ನು ಬಸವಣ್ಣನವರು ಹೇಗೆ ಚಿತ್ರಿಸಿದ್ದಾರೆ?

Answer:
ಸಮಾಜದಲ್ಲಿ ಬದುಕುವ ಜೀವಿ ನಡೆ-ನುಡಿಯಲ್ಲಿ ಹೊಂದಬೇಕಾಗಿರುವ ಸತ್ವವನ್ನು, ಅಂತರಂಗದ ಪರಿಶುದ್ಧತೆಯನ್ನು ಬಸವಣ್ಣನವರು ಬಲವಾಗಿ ಪ್ರತಿಪಾದಿಸಿದ್ದಾರೆ.

‘ರಕ್ಷಕರೇ ಭಕ್ಷಕರಾದಾಗ’, ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’, ಎಂಬ ಒಂದೇ ಅರ್ಥದ ಗಾದೆ ಮಾತುಗಳು ನಮ್ಮಲ್ಲಿ ಬಳಕೆಯಲ್ಲಿವೆ. ಕಾಯುವವರೇ ಕೊಲ್ಲಲು ತೀರ್ಮಾನಿಸಿದ್ದಾಗ ನಮ್ಮನ್ನು ಇನ್ಯಾರಿಂದಲೂ ರಕ್ಷಿಸಲಾಗುವುದಿಲ್ಲ.

ರಕ್ಷಣೆ ಪಡೆಯುವುದು ಅನಿವಾರ್ಯ, ಆದರೆ ರಕ್ಷಣೆ ಕೊಡಬೇಕಾದವರು ರಕ್ಷಣೆಯ ಕಾರ್ಯವನ್ನು ಮರೆತು ನಡೆದರೆ ರಕ್ಷಣೆ ಪಡೆದುಕೊಳ್ಳುವವನು ಅಸಹಾಯಕತೆಯ ಪರಿಸ್ಥಿತಿಯನ್ನು ತಲುಪುತ್ತಾನೆ. ಇವನ್ನು ಬಸವಣ್ಣ ಹಲವು ನಿದರ್ಶನಗಳೊಂದಿಗೆ ಸೊಗಸಾಗಿ ಚಿತ್ರಿಸಿದ್ದಾರೆ.

ಅಡುಗೆ ಮನೆಯಲ್ಲಿ ಒಲೆ ಉರಿಯುವುದು ಅಗತ್ಯ. ಆಗ ಒಲೆಯೆದುರು ನಿಲ್ಲುವ ಶಕ್ತಿ ನಮಗಿದೆ. ಆದರೆ ನಾವು ವಾಸಿಸುವ ಈ ಧರೆ ಹತ್ತಿ ಉರಿದರೆ ನಾವು ನಿಲ್ಲುವುದಾದರೂ ಎಲ್ಲಿ? ನೀರನ್ನು ತಡೆಯಲು (ಏರಿ) ದಿಣ್ಣೆಯನ್ನು ಕಟ್ಟಿರುತ್ತಾರೆ. ಏರಿಯೇ ನೀರನ್ನು ಹರಿಯಲು ಬಿಟ್ಟರೆ! ಬೇಲಿ ಇರುವುದು ಬೆಳೆಯನ್ನು ರಕ್ಷಿಸಲು. ಅದೇ ಬೇಲಿ ಬೆಳೆಯನ್ನು ಮೇಯ್ದು ಹಾಕಿದರೆ ರಕ್ಷಣೆ ಹೇಗೆ? ಮನೆಯನ್ನು ಕಾಯಬೇಕಾದ ನಾರಿಯೇ ತನ್ನ ಮನೆಯಲ್ಲಿ ಕಳ್ಳತನ ಮಾಡಿದರೆ ತಾಯಿಯ ಮೊಲೆ ಹಾಲು ಮಗುವಿಗೆ ಅಮೃತ, ತಾಯಿಯ ಮೊಲೆಹಾಲೇ ವಿಷವಾಗಿ ಕೊಂದರೆ ಯಾರಿಗೂ ದೂರಲು ಸಾಧ್ಯವಿಲ್ಲ ಈ ಎಲ್ಲ ವಿಘಟನೆಗಳೂ ಕೂಡ ಕಾಯುವ ದೈವದ ಕೊಲ್ಲುವ ಬುದ್ದಿಯ ಸಂಕೇತವಾಗಿದೆ. ಹೀಗಾದಲ್ಲಿ ರಕ್ಷಿಸಲು ಇನ್ನಾರಿಗೂ ಸಾಧ್ಯವಿಲ್ಲ ಎಂಬುದನ್ನು ಬಸವಣ್ಣ ವಿವರಿಸಿದ್ದಾರೆ.

ಬಸವಣ್ಣನವರ ವಚನಗಳು
Basavanna Vachana Summary

2nd PUC Kannada Chapter 2 Basavanna Vachana
2nd PUC Kannada Chapter 2 Basavanna Vachana

ವಚನಗಳ ಸಾರಾಂಶ:

ಬಸವಣ್ಣನವರು ತಮ್ಮ ಈ ಮೂರು ವಚನಗಳಲ್ಲಿ ನಿಜವಾದ ಭಕ್ತನ ಲಕ್ಷಣಗಳು ಏನೆಂಬುದನ್ನು ಹಾಗೂ ಅಸಾರ ಭಕ್ತಿಯ ದುರ್ಫಲವನ್ನು ಸ್ಪಷ್ಟವಾಗಿ ವಿವರಿಸುತ್ತಾರೆ:

  1. ಭಕ್ತಿಯ ಲಕ್ಷಣಗಳು:
    ನಿಜವಾದ ಭಕ್ತನಲ್ಲಿ ಪ್ರೀತಿ, ಭಾವನೆ, ಒಲವು ಇದ್ದೇ ಇರುತ್ತದೆ. ಭಕ್ತರು ಪರಸ್ಪರ ಬೆರೆಯುವಾಗ ದೇಹ Karagabeeku, ಸೋಂಕಿನಿಂದ ಪುಳಕ ಹೊಮ್ಮಬೇಕು, ಕಂಡಾಗ ಕಣ್ಣೀರು ಹರಿಯಬೇಕು, ಮಾತನಾಡುವಾಗ ಧ್ವನಿ ಗದ್ಗದಿತವಾಗಬೇಕು. ಈ ಎಲ್ಲ ಲಕ್ಷಣಗಳು ಭಕ್ತಿಯಲ್ಲಿ ಕಾಣಬೇಕು. ಇವುಗಳಿಲ್ಲದಿರುವ ದಡಂಬಕ (ಛದ್ಮಭಕ್ತ) ಎಂದು ಬಸವಣ್ಣ ತಾವೇ ತಮಗೆ ಪ್ರಶ್ನಿಸುತ್ತಾರೆ.
  2. ಭಕ್ತಿಗೆ ಅಗತ್ಯವಿರುವ ಜ್ಞಾನ:
    ಬಾಹ್ಯ ಪೂಜೆಯು ಫಲಕಾರಿ ಅಲ್ಲ, ಆಂತರಿಕ ಜ್ಞಾನವಿಲ್ಲದೆ. ಲಿಂಗವನ್ನು ಧರಿಸಿ ಪೂಜಿಸಿದರೂ ಶಿವಪಥವನ್ನು ಅರಿಯದಿದ್ದರೆ ಅದರಿಂದ ಏನು ಪ್ರಯೋಜನ? ಹಂದೆಯ ಕೈಯಲ್ಲಿ ಶಸ್ತ್ರ, ಅಂಧನ ಕೈಯಲ್ಲಿ ಕನ್ನಡಿ, ಕೋತಿಯ ಕೈಯಲ್ಲಿ ರತ್ನ — ಇವೆಲ್ಲ ವ್ಯರ್ಥವೇ ಅಲ್ಲವೆ? ಅಂತೆಯೇ ಜ್ಞಾನವಿಲ್ಲದ ಪೂಜೆಯೂ ವ್ಯರ್ಥ.
  3. ಸಮಾಜದ ಅವ್ಯವಸ್ಥೆ:
    ಆಧಾರವಾಗಿ ನಿಂತವರು ಮೋಸಗಾರರಾದರೆ ಎಲ್ಲ ಮುರಿಯುತ್ತದೆ. ಒಲೆಯು ಉರಿದರೆ ದೂರ ನಿಲ್ಲಬಹುದು, ಆದರೆ ಭೂಮಿ ಉರಿದರೆ ಎಲ್ಲಿ ಹೋಗುವುದು? ಬೆರಳಿನಲ್ಲಿ ನಂಬಿದವನೇ ದ್ರೋಹ ಮಾಡಿದರೆ ಯಾರ ಬಳಿ ದೂರು? ಬೇಲಿಯೇ ಹೊಲವನ್ನು ಮೇಯುತ್ತದೆ, ತಾಯಿಯ ಹಾಲೇ ವಿಷವಾಗುತ್ತದೆ, ಅಂದರೆ ನಂಬಿಕೆಯೇ ನಾಶವಾಗುತ್ತದೆ. ಈ ಸ್ಥಿತಿಯನ್ನು ಕಂಡು ಬಸವಣ್ಣ ಕೂಡಲಸಂಗಮದೇವನಿಗೆ ಪ್ರಶ್ನಿಸುತ್ತಾರೆ – “ಇನ್ನಾರಿಗೆ ದೂರುವೋ?”
Click Here to Download Basavanna Vachana PDF Notes
Click Here to Watch Basavanna Vachana Video

You cannot copy content of this page