2nd PUC Kadadida Salilam Tilivandade,

2nd PUC Kannada Question and Answer – Kadadida Salilam Tilivandade

Looking for 2nd PUC Kannada textbook answers? You can download Chapter 1: Kadadida Salilam Tilivandade Questions and Answers PDF, Notes, and Summary here. 2nd PUC Kannada Kavyabhaga solutions follow the Karnataka State Board Syllabus, making it easier for students to revise and score higher in exams.

Karnataka 2nd PUC Kannada Textbook Answers—Reflections Chapter 1

Kadadida Salilam Tilivandade Questions and Answers, Notes, and Summary

2nd PUC Kannada Kavayabhaga Chapter 1

ಕದಡಿದ ಸಲಿಲಂ ತಿಳಿವಂದದೆ

Kadadida Salilam Tilivandade

2nd PUC Kannada Chapter 1 Kadadida Salilam Tilivandade
Scroll Down to Download Kadadida Salilam Tilivandade PDF 
I. ಒಂದು ಅಂಕದ ಪ್ರಶ್ನೆಗಳು :

Question 1.
ರಾವಣನ ಎದುರು ಪ್ರತ್ಯಕ್ಷವಾದ ವಿದ್ಯಾದೇವತೆ ಯಾರು?
Answer:
ಬಹುರೂಪಿಣೀ ವಿದ್ಯೆ – ರಾವಣನ ಎದುರು ಪ್ರತ್ಯಕ್ಷವಾದ ವಿದ್ಯಾದೇವತೆ.

Question 2.
ಯಾರನ್ನು ಕೊಲ್ಲುವುದಿಲ್ಲವೆಂದು ವಿದ್ಯಾದೇವತೆ ಹೇಳಿತು?
Answer:
ರಾಮ-ಲಕ್ಷ್ಮಣರನ್ನು ಕೊಲ್ಲುವುದಿಲ್ಲವೆಂದು ವಿದ್ಯಾದೇವತೆ ಹೇಳಿತು.

Question 3.
ಮಯತನೂಜೆ ಎಂದರೆ ಯಾರು?
Answer:
ಮಯತನೂಜೆ ಎಂದರೆ ಮಂಡೋದರಿ.

Question 4.
ಸೀತೆಯನ್ನು ರಾವಣ ಎಲ್ಲಿರಿಸಿದ್ದನು?
Answer:
ಸೀತೆಯನ್ನು ರಾವಣ ಪ್ರಮದವನದಲ್ಲಿ ಇರಿಸಿದ್ದನು.

Question 5.
ರಾವಣನ ಆಗಮನವನ್ನು ಸೀತೆಗೆ ತೋರಿದವರು ಯಾರು?
Answer:
ರಾವಣನ ಆಗಮನವನ್ನು ಸೀತೆಗೆ ತೋರಿದವರು ಆಕೆಯ ಪಕ್ಕದಲ್ಲಿದ್ದ ರಾಕ್ಷಸ ಸ್ತ್ರೀಯರು

Question 6.
ಸೀತೆ ಯಾವುದನ್ನು ಹುಲ್ಲಿಗೆ ಸಮಾನವೆಂದು ಭಾವಿಸಿದಳು?
Answer:
ಸೀತೆಯು ರಾವಣನ ಅಪ್ರತಿಮವಾದ ರೂಪವನ್ನು ಹುಲ್ಲಿಗೆ ಸಮಾನವೆಂದು ಭಾವಿಸಿದಳು.

Question 7.
ಸೀತೆ ರಾವಣನನ್ನು ಏನೆಂದು ಬೇಡಿಕೊಂಡಳು?
Answer:
“ಕರುಣಿಸುವುದಿದ್ದರೆ ದಶವದನನೇ, ಶ್ರೀರಾಮನ ಆಯುಃಪ್ರಾಣ ತೀರುವ ತನಕ ಇಲ್ಲಿಗೆ ಬರಬೆ ಎಂದು. ಸೀತೆ ರಾವಣನನ್ನು ಬೇಡಿಕೊಂಡಳು.

Question 8.
ರಾವಣನಿಗೆ ಯಾರ ಬಗ್ಗೆ ವೈರಾಗ್ಯ ಮೂಡಿತು?
Answer:
ರಾವಣನಿಗೆ ಸೀತೆಯ ಬಗ್ಗೆ ವೈರಾಗ್ಯ ಮೂಡಿತು.

Question 9.
ವಿಭೀಷಣ ಯಾರು?
Answer:
ವಿಭೀಷಣ ರಾವಣನ ತಮ್ಮ.

Question 10.
ಸೌಮಿತ್ರಿ ಎಂದರೆ ಯಾರು?
Answer:
ಸೌಮಿತಿ ಎಂದರೆ ಲಕ್ಷ ಣ.

II. ಎರಡು ಅಂಕಗಳ ಪ್ರಶ್ನೆಗಳು :

Question 1.
ಬಹುರೂಪಿಣೀ ವಿದ್ಯೆಯು ರಾವಣನಿಗೆ ಏನೆಂದು ಆಶ್ವಾಸನೆಯಿತ್ತಿತು?
Answer:
ಬಹುರೂಪಿಣೀ ವಿದ್ಯೆಯು ರಾವಣನ ಎದುರು ಪ್ರತ್ಯಕ್ಷವಾಗಿ ‘ಚಕ್ರಧಾರಿಯಾದ ಲಕ್ಷ್ಮಣನನ್ನು ಮತ್ತು ಚರಮ ದೇಹಧಾರಿಯಾದ ರಾಮನನ್ನು ಬಿಟ್ಟು ಮಿಕ್ಕವರನ್ನೆಲ್ಲ ನಾಶಗೊಳಿಸುತ್ತೇನೆ’ ಎಂದು ಆಶ್ವಾಸನೆಯಿತ್ತಿತು.

Question 2.
ರಾವಣ ತನ್ನ ಅಂತಃಪುರದ ಸ್ತ್ರೀಯರನ್ನು ಹೇಗೆ ಸಂತೈಸಿದನು?
Answer:
ಮಂಡೋದರಿಯನ್ನು ಮತ್ತು ಸಮಸ್ತ ಅಂತಃಪುರದ ಸ್ತ್ರೀಯರನ್ನು ನೋಡಿದ ರಾವಣನು ಅವರನ್ನುದ್ದೇಶಿಸಿ, “ನಿಮಗಿಷ್ಟು ಅಪಮಾನವನ್ನುಂಟುಮಾಡಿದ ಅಂಗದಾದಿಗಳನ್ನು ಹುಬ್ಬು ಗಂಟಿಕ್ಕುವ ಮಾತ್ರದಿಂದಲೆ ಬಂಧಿಸಿ. ಸೆರೆಹಿಡಿದು ನಿಮ್ಮ ಮುಂದೆ ತಂದು ದಂಡಿಸುವುದರ ಮೂಲಕ ನಿಮಗಾದ ಅಪಮಾನವನ್ನು ಕಳೆಯುತ್ತೇನೆ” – ಎಂದು ಸಂತೈಸಿದನು.

Question 3.
ಸೀತೆಯ ತಲ್ಲಣಕ್ಕೆ ಕಾರಣವೇನು?
Answer:
ರಾವಣನ ಅಪ್ರತಿಮವಾದ ರೂಪವು ಸೀತಾದೇವಿಗೆ ಹುಲ್ಲುಕಡ್ಡಿಗಿಂತಲೂ ಅಲ್ಪವಾಗಿ ತೋರಿತ್ತು. ರಾವಣನು ಸೀತಾದೇವಿಯ ಬಳಿಗೆ ಬರುವಾಗ ಆಕೆಯು ಕಳವಳಕ್ಕೆ ಒಳಗಾಗುತ್ತಾಳೆ. “ರಾಮಲಕ್ಷ್ಮಣರನ್ನು ಸಂಬಂಧಿಸಿದಂತೆ ತಾನು ಇನ್ನೇನು ಕೆಟ್ಟವಾರ್ತೆಯನ್ನು ಕೇಳುವೆನೋ” ಎಂದು ರಾವಣನನ್ನು ಕಂಡೊಡನೆ ಭೀತಿಗೊಂಡು ನಡುಗತೊಡಗಿದಳು.

Question 4.
ರಾವಣನು ಸೊಕ್ಕಿನಿಂದ ಸೀತೆಯನ್ನುದ್ದೇಶಿಸಿ ಆಡಿದ ಮಾತುಗಳಾವುವು?
Answer:
ರಾವಣನು ಸೊಕ್ಕಿನಿಂದ ಸೀತೆಯನ್ನುದ್ದೇಶಿಸಿ “ಬಹುರೂಪಿಣೀ ವಿದ್ಯೆಯನ್ನು ನಾನು ಸಾಧಿಸಿದ್ದೇನೆ. ಇನ್ನು ನನಗೆ ಅಸಾಧ್ಯವಾದ ಕಾರ್ಯ ಯಾವುದೂ ಇಲ್ಲ, ನೀನು ರಾಮನ ಯೋಚನೆಯನ್ನು ಬಿಟ್ಟು, ನನ್ನನ್ನು ಹೊಂದಿ ಸಾಮ್ರಾಜ್ಯ ಸುಖವನ್ನು ಅನುಭವಿಸು” – ಎಂದನು.

Question 5.
ರಾವಣನಿಗೆ ಸೀತೆಯ ಬಗ್ಗೆ ವೈರಾಗ್ಯ ಮೂಡಿದ ಸಂದರ್ಭವನ್ನು ವಿವರಿಸಿ.
Answer:
ಸೀತೆಯು ಮೂರ್ಛಿತೆಯಾಗಲು ರಾವಣನಿಗೆ ಆಕೆಯ ಮೇಲೆ ಅನುಕಂಪ ಹುಟ್ಟಿತು. ಕರುಣೆದೋರುತ್ತಾನೆ. ಅಲ್ಲದೆ ತನ್ನ ಕರ್ಮಾಧೀನತೆಯಿಂದ ಹುಟ್ಟಿದಂತಹ ಕೆಟ್ಟ ಪಾಪದ ಘೋರ ಪರಿಣಾಮವನ್ನು ತಾನೇ ಹಳಿದುಕೊಳ್ಳುತ್ತಾನೆ. ಕದಡಿ ಹೋದ ಕೊಳದ ನೀರು ತನ್ನಷ್ಟಕ್ಕೇ ತಿಳಿಗೊಳ್ಳುವಂತೆ, ರಾವಣನಿಗೆ ತನ್ನೊಳಗೆ ಬದಲಾವಣೆಯಾಗಿ ಸೀತೆಯ ಬಗ್ಗೆ ವೈರಾಗ್ಯ ಮೂಡಿತು.

Question 6.
ರಾವಣನು ತನ್ನ ಆಪ್ತರನ್ನು ಕುರಿತು ಏನೆಂದು ಹೇಳಿದನು?
Answer:
ರಾವಣನು ತನ್ನ ಆಪ್ತರನ್ನು ಕುರಿತು ‘ಸದ್ಗುಣಗಳನ್ನು ಆಚರಣೆಯಲ್ಲಿ ಉಳಿಸಿಕೊಳ್ಳಲೆಂದೇ ಈಕೆ ನನ್ನ ಬಗೆಗೆ ಆಸಕ್ತಿಯನ್ನು ತೋರಲಿಲ್ಲ. ನಾನು ಹೊಂದಿದ್ದ ದಿವ್ಯವಾದ ವಸ್ತ್ರ, ಆಭರಣ, ಅಂಗ ಸುಖದ ಆಮಿಷಗಳನ್ನು ಒಪ್ಪದೆ ಗಂಧರ್ವ ರಾಜ್ಯಲಕ್ಷ್ಮಿಯನ್ನು ಹುಲ್ಲುಕಡ್ಡಿಗಿಂತಲೂ ಕಡೆಯಾಗಿ ಕಂಡ ಈಕೆಯನ್ನು, ಪರಾಕ್ರಮಿಯಾದ ನಾನು ಅಪೇಕ್ಷಿಸಬಹುದೇ? ಹೀಗೆ ಕೆಟ್ಟ ಪಾಪ ಸಂಚಯನ ಮಾಡಿಕೊಳ್ಳಬಹುದೇ?’ ಎಂದನು.

Question 7.
ಈಗಲೇ ಸೀತೆಯನ್ನು ರಾಮನಿಗೊಪ್ಪಿಸಲು ರಾವಣ ಬಯಸಲಿಲ್ಲವೇಕೆ?
Answer:
ಈಗಲೇ ಸೀತೆಯನ್ನು ಕೊಂಡೊಯ್ದು ರಾಘವನಿಗೊಪ್ಪಿಸಿದೆಯೆಂದಾದರೆ, ನನ್ನ ಪರಾಕ್ರಮ, ಹೆಚ್ಚಿನದ ಸಾಮರ್ಥ್ಯ, ವೀರತ್ವ, ಗಳಿಸಿದ ಹೆಸರು-ಬಿರುದುಗಳೆಲ್ಲವೂ ವ್ಯರ್ಥವಾಗಿ ಹೋಗುತ್ತವೆ. ಮುಂದೆಯ ಸರಿಪಡಿಸದಂತೆ ಕೆಟ್ಟು ಹೋಗುತ್ತವೆ ಎಂದು ಸೀತೆಯನ್ನು ರಾಮನಿಗೊಪ್ಪಿಸದೇ ಇರಲು ನಿರ್ಧರಿಸುವ.

Question 8.
ರಾವಣನು ಅಂತಿಮವಾಗಿ ಯಾವ ನಿರ್ಧಾರಕ್ಕೆ ಬರುತ್ತಾನೆ?
Answer:
ರಾವಣನು ಅಂತಿಮವಾಗಿ ತನ್ನ ಬಾಹುಬಲವನ್ನು ಎರಡು ಸೇನೆಗಳೂ ಹೊಗಳುವಂತೆ ಯುದ್ಧ ವ ಯುದ್ಧಾಂತ್ಯದಲ್ಲಿ ರಾಮ ಲಕ್ಷ್ಮಣರನ್ನು ರಥವಿಹೀನರನ್ನಾಗಿ (ರಥ ತ್ಯಜಿಸುವಂತೆ) ಮಾಡಿ. ಸೆರೆಹಿಡಿದ ಬಳಿಕ ಸೀತೆಯನ್ನು ಕೊಡುತ್ತೇನೆ ಎನ್ನುವ ನಿರ್ಧಾರಕ್ಕೆ ಬರುತ್ತಾನೆ.

III. ಸಾಂದರ್ಭಿಕ ವಿವರಣೆ ಬಯಸುವ ವಾಕ್ಯಗಳು.

Question 1.
ಉಳಿದವರಳಿವೆನಗೇವುದೆಂ?
Answer:

ಆಯ್ಕೆ: ಈ ಮೇಲಿನ ವಾಕ್ಯವನ್ನು ‘ಅಭಿನವ ಪಂಪ’ನೆಂದು ಖ್ಯಾತನಾಗಿರುವ, ‘ನಾಗಚಂದ ರಚಿಸಿರುವ ‘ರಾಮಚಂದ್ರಚರಿತ ಪುರಾಣ’ದಿಂದ ಆಯ್ದ, ‘ಕದಡಿದ ಸಲಿಲಂ ತಿಳಿವಂದದೆ ಕಾವ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ರಾವಣನು ಬಹುರೂಪಿಣೀ ವಿದ್ಯೆಯ ಬಳಿ ಪ್ರಶ್ನಿಸುವ ಸಂದರ್ಭ ಇಲ್ಲಿದೆ.
ವಿವರಣೆ : ರಾವಣನ ಎದುರು ಪ್ರತ್ಯಕ್ಷಳಾದ ವಿದ್ಯಾದೇವತೆಯು ರಾವಣನಲ್ಲಿ ಹೀಗೆ ಹೇ” “ಚಕ್ರಧಾರಿಯಾದ ಲಕ್ಷ್ಮಣನನ್ನು ಮತ್ತು ಚರಮದೇಹಧಾರಿಯಾದ ರಾಮ- ಇವರಿಬ್ಬರನ್ನುಳಿದು ಮಿಕ್ಕವರನ್ನೆಲ್ಲ ನಾಶಗೊಳಿಸುತ್ತೇನೆ”-ಎಂದು. ಆಗ ರಾವಣನು,
“ಮಿಕ್ಕವರಸಾವಿನಿಂದನನಗೇನುಪ್ರಯೋಜನ?”- ಎನ್ನುತ್ತಾ ಈ ಮೇಲಿನಂತೆಹೇಳುತ್ತಾನೆ.

Question 2.
ಸಮಧಿಕರ್ರಾ ಜಗತ್ರಯದೊಳಿನ್ನೆನಗೆ?

Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ‘ಅಭಿನವ ಪಂಪ’ನೆಂದು ಖ್ಯಾತನಾಗಿರುವ, ‘ನಾಗಚಂದ್ರ’ ಕವಿಯು ರಚಿಸಿರುವ ‘ರಾಮಚಂದ್ರಚರಿತ ಪುರಾಣ’ದಿಂದ ಆಯ್ದ, ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ರಾವಣ ತನ್ನ ಶಕ್ತಿಯ ಕುರಿತಂತೆ ತಾನೇ ಹೇಳಿಕೊಳ್ಳುವ ಸಂದರ್ಭ ಇದಾಗಿದೆ.
ವಿವರಣೆ: ರಾವಣನು ಮಂಡೋದರಿಯ ಸಮೀಪ ಬಂದು “ನಿಮಗಿಷ್ಟು ಅಪಮಾನವನ್ನುಂಟುಮಾಡಿದ ಅಂಗದಾದಿಗಳನ್ನು ಹುಬ್ಬು ಗಂಟಿಕ್ಕುವ ಮಾತ್ರದಿಂದಲೆ ಬಂಧಿಸಿ. ಸೆರೆಹಿಡಿದು ನಿಮ್ಮ ಮುಂದೆ ತಂದು ದಂಡಿಸುವುದರ ಮೂಲಕ ನಿಮಗಾದ ಅಪಮಾನವನ್ನು ಕಳೆಯುತ್ತೇನೆ” ಎಂದು ಅವರನ್ನು ಸಮಾಧಾನಪಡಿಸಿ, ಶಾಂತಿಜಿನಭವನದಲ್ಲಿ ಮಹಾಪೂಜೆಯನ್ನು ಮಾಡಿಸಿದನು.

ನಿಯಮದಂತೆ ದಿವ್ಯವಾದ ಪ್ರಸಾದ ಭೋಜನವನ್ನುಂಡು, ಆ ಬಳಿಕ ಬಹುರೂಪಿಣೀ ವಿದ್ಯೆಯ ಪ್ರಭಾವವನ್ನು ಪರೀಕ್ಷಿಸಿ ನೋಡಿ. ಸಮಾಧಾನಗೊಂಡುಸಂತೋಷವನ್ನು ಹೊಂದಿದ ರಾವಣನು ತನ್ನ ಬಾಹುಗಳನ್ನು ತಾನೇ ಅಭಿಮಾನದಿಂದ ನೋಡಿಕೊಳ್ಳುತ್ತ. ಇನ್ನು ಮುಂದೆ (ಸ್ವರ್ಗ, ಮರ್ತ್ಯ, ಪಾತಾಳಗಳೆಂಬ) ಮೂರು ಲೋಕಗಳಲ್ಲೂ ನನ್ನನ್ನು ಜಯಿಸಬಲ್ಲವರಾರು? ಯುದ್ಧದಲ್ಲಿ ಎದುರಿಸುವವರಾರು? ಎಂದುಕೊಳ್ಳುವಾಗ ಈ ಮಾತು ಬಂದಿದೆ.

Question 3.
ಏನಂ ಕೇಳಪೆನೋ….ಪೊಲ್ಲವಾರ್ತೆಯನಿನ್.

Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ‘ಅಭಿನವ ಪಂಪ’ನೆಂದು ಖ್ಯಾತನಾಗಿರುವ, ‘ನಾಗಚಂದ್ರ’ ಕವಿಯು ರಚಿಸಿರುವ ‘ರಾಮಚಂದ್ರಚರಿತ ಪುರಾಣ’ದಿಂದ ಆಯ್ದ, ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ತನ್ನನ್ನು ಕಾಣಲು ಬಂದ ರಾವಣನನ್ನು ಗಮನಿಸಿ, ಸೀತೆಯು ತನ್ನಲ್ಲಿ ತಾನು ಹೇಳಿಕೊಳ್ಳುವ, ಸಂದರ್ಭ ಇದಾಗಿದೆ.
ವಿವರಣೆ : ರಾವಣನು ತನ್ನ ಬಾಹುಗಳನ್ನು ತಾನೇ ಅಭಿಮಾನದಿಂದ ನೋಡಿಕೊಳ್ಳುತ್ತ, ಇನ್ನು ಮೂರು ಲೋಕಗಳಲ್ಲೂ ನನ್ನನ್ನು ಜಯಿಸಬಲ್ಲವರಾರು. ಯುದ್ಧದಲ್ಲಿ ಎದುರಿಸುವವರಾರು ಎಂದು ಗರ್ವಪಡುತ್ತಾನೆ. ಆ ನಂತರ ಸೀತಾದೇವಿಯ ವದನಾರವಿಂದವನ್ನು ನೋಡುವ ಕಾತರತೆಯುಳ್ಳವನಾಗಿ ಸೀತೆಯನ್ನು ಇರಿಸಿರುವ ಸ್ಥಳವಾದ ಪ್ರಮದವನಕ್ಕೆ ಬರುತ್ತಾನೆ. ಆದರೆ ರಾವಣನ ರೂಪವು ಸೀತಾದೇವಿಗೆ ಹುಲ್ಲುಕಡ್ಡಿಗಿಂತಲೂ ಅಲ್ಪವಾಗಿ ತೋರಿತು. ರಾವಣನು ಸೀತಾದೇವಿಯ ಬಳಿಗೆ ಧಾವಿಸಿ ಬರುವಾಗ ಆಕೆಯಲ್ಲಿ “ರಾಮಲಕ್ಷ್ಮಣರನ್ನು ಕುರಿತಂತೆ ತಾನು ಇನ್ನೇನು ಕೆಟ್ಟವಾರ್ತೆಯನ್ನು ಕೇಳುವೆನೋ ಎನ್ನುವಾಗ ಈ ಮೇಲಿನಂತೆ ಅಂದುಕೊಳ್ಳುತ್ತಾಳೆ.

Question 4.
ಅಸಾಧ್ಯಮಪ್ಪ ಮರುವಕ್ಕವಿಲ್ಲ.

Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ‘ಅಭಿನವ ಪಂಪ’ನೆಂದು ಖ್ಯಾತನಾಗಿರುವ, ‘ನಾಗಚಂದ್ರ’ ಕವಿಯು ರಚಿಸಿರುವ ‘ರಾಮಚಂದ್ರಚರಿತ ಪುರಾಣ’ದಿಂದ ಆಯ್ದ, ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ : ಬಹುರೂಪಿಣೀ ವಿದ್ಯೆಯನ್ನು ಗಳಿಸಿದ ನಂತರ ರಾವಣನು ಸೀತೆಯ ಬಳಿ ಈ ಮಾತನ್ನು ಹೇಳುತ್ತಾನೆ.
ವಿವರಣೆ: ರಾವಣನು ಸೀತಾದೇವಿಯು ಇರುವ ಸ್ಥಳಕ್ಕೆ ಬರುವಾಗ, ಆಕೆ ತೀರಾ ಕಳವಳಕ್ಕೆ ಒಳಗಾಗುತ್ತಾಳೆ. ರಾಮ-ಲಕ್ಷ್ಮಣರನ್ನು ಕುರಿತಂತೆ ತಾನು ಇನ್ನೇನು ಕೆಟ್ಟವಾರ್ತೆಯನ್ನು ಕೇಳುವೆನೋ ಎಂದು ರಾವಣನನ್ನು ಕಂಡೊಡನೆ ಭೀತಿಗೊಂಡು ನಡುಗತೊಡಗುತ್ತಾಳೆ. ಹಾಗೆ ನಡುಗುತ್ತಿದ್ದ ಸೀತೆಯ ಸಮೀಪಕ್ಕೆ ಬಂದ ರಾವಣನು ಬಹುರೂಪಿಣೀ ವಿದ್ಯೆಯನ್ನು ನಾನು ಸಾಧಿಸಿದ್ದೇನೆ. ಇನ್ನು ನನಗೆ ಅಸಾಧ್ಯವಾದ ಕಾರ್ಯ ಯಾವುದೂ ಇಲ್ಲ, ನೀನು ರಾಮನ ಯೋಚನೆಯನ್ನು ಬಿಟ್ಟು, ನನ್ನನ್ನು ಹೊಂದಿ ಸಾಮ್ರಾಜ್ಯ ಸುಖವನ್ನನುಭವಿಸು ಎನ್ನುವಾಗ ಈ ಮೇಲಿನ ಮಾತು ಬಂದಿದೆ.

Question 5.
ರಘುತನೂಜನಾಯುಃಪ್ರಾಣಂಬರೆಗಂ ಬಾರದಿರು.

Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ‘ಅಭಿನವ ಪಂಪ’ನೆಂದು ಖ್ಯಾತನಾಗಿರುವ, ‘ನಾಗಚಂದ್ರ’ ಕವಿಯು ರಚಿಸಿರುವ ‘ರಾಮಚಂದ್ರಚರಿತ ಪುರಾಣ’ದಿಂದ ಆಯ್ದ, ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಸೀತೆಯು ರಾವಣನಲ್ಲಿ ಹೇಳುತ್ತಾಳೆ.
ವಿವರಣೆ: ಸೀತೆಯ ಸಮೀಪಕ್ಕೆ ಬಂದ ರಾವಣನು ಬಹುರೂಪಿಣೀ ವಿದ್ಯೆಯನ್ನು ನಾನು ಸಾಧಿಸಿದ್ದೇನೆ.
ಇನ್ನು ನನಗೆ ಅಸಾಧ್ಯವಾದ ಕಾರ್ಯ ಯಾವುದೂ ಇಲ್ಲ. ನೀನು ರಾಮನ ಯೋಚನೆಯನ್ನು ಬಿಟ್ಟು, ನನ್ನನ್ನು ಹೊಂದಿ ಸಾಮ್ರಾಜ್ಯ ಸುಖವನ್ನನುಭವಿಸು ಎನ್ನುತ್ತಾನೆ. ಆಗ ಸೀತೆ ಆತನ ಮಾತಿಗೆ ಪ್ರತಿಕ್ರಿಯಿಸುತ್ತಾ, ಕರುಣಿಸುವುದಿದ್ದರೆ ದಶವದನನೇ, ಶ್ರೀರಾಮನ ಆಯುಷ್ಯ ತೀರುವ ತನಕ, ಇಲ್ಲಿಗೆ ಬರಬೇಡ” ಎಂದು ಈ ಮೇಲಿನಂತೆ ಹೇಳುತ್ತಾಳೆ.

Question 6.
ಕದಡಿದ ಸಲಿಲಂ ತಿಳಿವಂದದೆ.

Answer:
ಆಯ್ಕೆ : ಈ ಮೇಲಿನ ವಾಕ್ಯವನ್ನು ‘ಅಭಿನವ ಪಂಪ’ನೆಂದು ಖ್ಯಾತನಾಗಿರುವ, ‘ನಾಗಚಂದ್ರ’ ಕವಿಯು ರಚಿಸಿರುವ ‘ರಾಮಚಂದ್ರಚರಿತ ಪುರಾಣ’ದಿಂದ ಆಯ್ದ, ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ: ರಾವಣನಿಗೆ ಸೀತೆಯ ಬಗ್ಗೆ ಹೊಂದಿರುವ ಕೆಟ್ಟ ಭಾವನೆ ಮರೆಯಾಗಿ, ಮನಃಪರಿವರ್ತನೆಯಾಗುವ ಸಂದರ್ಭ ಇದಾಗಿದೆ.
ವಿವರಣೆ: ರಾವಣನು ತಾನು ಬಹುರೂಪಿಣೀ ವಿದ್ಯೆಯನ್ನು ನಾನು ಸಾಧಿಸಿದ್ದೇನೆ. ಇನ್ನು ನನಗೆ ಅಸಾಧ್ಯವಾದ ಕಾರ್ಯ ಯಾವುದೂ ಇಲ್ಲ, ನೀನು ರಾಮನ ಯೋಚನೆಯನ್ನು ಬಿಟ್ಟು, ನನ್ನನ್ನು ಹೊಂದಿ ಸಾಮ್ರಾಜ್ಯ ಸುಖವನ್ನನುಭವಿಸು”. ಎಂದನು. ಆಗ ಸೀತಾದೇವಿ ಅತೀವವಾಗಿ ದುಃಖ ಪಡುತ್ತಾಳೆ. ರಾವಣನ ಮಾತಿಗೆ ಪ್ರತಿಸ್ಪಂದಿಸುತ್ತಾ ಸೀತೆ ಹೀಗೆ ಹೇಳುತ್ತಾಳೆ. ಕರುಣಿಸುವುದಿದ್ದರೆ ದಶವದನನೇ ಶ್ರೀರಾಮನ ಆಯುಷ್ಯ ತೀರುವ ತನಕ ಇಲ್ಲಿಗೆ ಬರಬೇಡ ಎಂದು. ಹಾಗೆ ಹೇಳಿದವಳೇ ಮೂರ್ಛ ಕಳಕೊಂಡು ಭೂಮಿಯ ಮೇಲೆ ಬೀಳುತ್ತಾಳೆ. ಆಗ ರಾವಣನಿಗೆ ಆಕೆಯ ಬಗೆಗೆ ಅನುಕಂಪ ಹುಟ್ಟುತ್ತದೆ. ಆತ ಕರುಣೆದೋರುತ್ತಾನೆ. ಕದಡಿ ಹೋದ ಕೊಳದ ನೀರು ತನ್ನಷ್ಟಕ್ಕೇ ತಿಳಿಗೊಳ್ಳುವಂತೆ; ರಾವಣನಿಗೆ ತನ್ನೊಳಗೆ ಬದಲಾವಣೆಯಾಯಿತು ಎನ್ನುವಾಗ, ಈ ಮೇಲಿನ ಮಾತು ಬಂದಿದೆ.

Question 7.
ಉದಾತ್ತನೊಳ್ ಪುಟ್ಟದ ನೀಲಿರಾಗಂ

Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ‘ಅಭಿನವ ಪಂಪ’ನೆಂದು ಖ್ಯಾತನಾಗಿರುವ, ‘ನಾಗಚಂದ್ರ’ ಕವಿಯು ರಚಿಸಿರುವ ‘ರಾಮಚಂದ್ರಚರಿತ ಪುರಾಣ’ದಿಂದ ಆಯ್ದ, ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ: ಉದಾತ್ತನಾದ ರಾವಣನ ಮನಃ ಪರಿವರ್ತನೆಯ ಕುರಿತಂತೆ ತಿಳಿಸುವ ಸಂದರ್ಭ ಇದಾಗಿದೆ.
ವಿವರಣೆ: ಜಾನಕಿಯು ಮೂರ್ಛಿತಳಾಗಲು ರಾವಣನಿಗೆ ಆಕೆಯ ಬಗ್ಗೆ ಅನುಕಂಪ ಹುಟ್ಟುತ್ತದೆ. ಆತ ಕರುಣೆದೋರುತ್ತಾನೆ. ಅಲ್ಲದೆ ತನ್ನನ್ನು ತಾನೇ ಬೈದುಕೊಳ್ಳುತ್ತಾನೆ. ಕರ್ಮಾಧೀನನಾಗಿ ತಾನು ಮಾಡಿದ ಹೀನಕರ್ಮದ ಪರಿಣಾಮ ಎಷ್ಟು ಘೋರವಾದುದು ಎಂದು ಅರಿತು ಪರಿತಪಿಸುತ್ತಾನೆ. ಸೀತೆ ಮೂರ್ಛಿತಳಾಗುವವರೆಗೂ ರಾವಣನ ಮನಸ್ಸು ಕಲುಷಿತಗೊಂಡಿತ್ತು. ತನ್ನ ತಪ್ಪಿನ ಅರಿವಿನ ನಂತರ ತಿಳಿಯಾಗ ತೊಡಗಿತು. ಉದಾತ್ತನಾದವನಲ್ಲಿ ದುರಾಸೆಯು ಹೇಗೆ ಸ್ಥಿರವಾಗಿ ನಿಲ್ಲಲಾರದೋ ಹಾಗೆ ರಾವಣನಿಗೆ ಸೀತೆಯಲ್ಲಿ ವೈರಾಗ್ಯ ಹುಟ್ಟಿತು ಎನ್ನುವಾಗ ಈ ಮೇಲಿನ ಮಾತು ಬಂದಿದೆ.

Question 8.
ಕಂದರ್ಪ ವಿಮೋಹದಿಂದಗಲ್ಲಿದೆ.

Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ‘ಅಭಿನವ ಪಂಪ’ನೆಂದು ಖ್ಯಾತನಾಗಿರುವ, ‘ನಾಗಚಂದ್ರ’ ಕವಿಯು ರಚಿಸಿರುವ ‘ರಾಮಚಂದ್ರಚರಿತ ಪುರಾಣ’ದಿಂದ ಆಯ್ದ, ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ: ರಾವಣನು ತಾನು ಗೈದ ಕಾರ್ಯಕ್ಕೆ ಪಶ್ಚಾತ್ತಾಪ ಪಟ್ಟುಕೊಳ್ಳುವ ಸಂದರ್ಭ ಇದಾಗಿದೆ.
ವಿವರಣೆ: ರಾವಣನೇ ಹೇಳುವಂತೆ ಸೀತೆ ಸದ್ಗುಣಿ. ಆ ಸದ್ಗುಣತ್ವವನ್ನು ಆಚರಿಸುವ ಸಲುವಾಗಿಯೇ ನಾನು ಹೊಂದಿದ್ದ ದಿವ್ಯವಾದ ವಸ್ತ್ರ, ಆಭರಣ, ಅಂಗ ಸುಖದ ಆಮಿಷಗಳನ್ನು ಒಪ್ಪದೆ ಗಂಧರ್ವ ರಾಜ್ಯಲಕ್ಷ್ಮಿ ಯನ್ನು ಹುಲ್ಲುಕಡ್ಡಿಗೆ ಸಮನಾಗಿ ಭಾವಿಸಿದಳು ಈ ಸತಿಯು. ಅದೂ ಅಲ್ಲದೆ ನಾನು ಪೌರುಷ ಪ್ರಣಯಿ. ನನ್ನ ಪಾಪದಿಂದ ಹೀಗೆ ಗುಣಹಾನಿಯನ್ನು ಬಯಸುತ್ತೇನೆಯೇ ಎನ್ನುತ್ತಾನೆ. ಪ್ರಾಣ ಪ್ರಿಯರಾದ ರಾಮ ಸೀತೆಯರನ್ನು ದೂರಮಾಡಲು ಯಾವ ಪೂರ್ವ ಯೋಜಿತ ಕಾರಣಗಳಿರಲಿಲ್ಲ. ನನ್ನ ಕರ್ಮವಶದಿಂದ ದೂರ ಮಾಡಿದೆನು. ಮನ್ಮಥನ ಬಾಣಕ್ಕೆ ತುತ್ತಾಗಿ ಅವಿವೇಕತನದಿಂದ, ಕುಲದ ಹಿರಿಮೆಯನ್ನು ನಾನೇ ನಾಶ ಮಾಡುವಂತೆ ಈ ಹೀನ ಕಾರ್ಯವನ್ನು ಮಾಡಿದೆನು ಎನ್ನುವಾಗ ಈ ಮೇಲಿನ ಮಾತು ಬಂದಿದೆ.

Question 9.
ರಣಾಗ್ರದೊಳ್ ಪಿಡಿದು ತಂದಾಂ ಕೊಟ್ಟಪೆಂ.

Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ‘ಅಭಿನವ ಪಂಪ’ನೆಂದು ಖ್ಯಾತನಾಗಿರುವ, ‘ನಾಗಚಂದ್ರ’ ಕವಿಯು ರಚಿಸಿರುವ ‘ರಾಮಚಂದ್ರಚರಿತ ಪುರಾಣ’ದಿಂದ ಆಯ್ದ, ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ: ರಾವಣ ಹೇಳುವ ಮಾತು ಇದಾಗಿದೆ.
ವಿವರಣೆ: ರಾವಣನು ಕೊನೆಯಲ್ಲಿ ಸೀತೆಯ ಮೇಲೆ ವಿರಕ್ತಿಯನ್ನು ಹೊಂದಿದ್ದರೂ, ಆಕೆಯನ್ನು ಸುಮ್ಮನೆ ರಾಮನಿಗೆ ಒಪ್ಪಿಸಲು ಆತನ ಮನಸ್ಸು ಒಪ್ಪದಾಯಿತು. ಸುಮ್ಮನೇ ರಾಘವನಿಗೊಪ್ಪಿಸಿದೆಯೆಂದಾದರೆ… ನನ್ನ ಪರಾಕ್ರಮ, ಹೆಚ್ಚಿನದ್ದಾದ ಸಾಮರ್ಥ್ಯ, ವೀರತ್ವ, ಗಳಿಸಿದ ಹೆಸರು ಬಿರುದುಗಳು ವ್ಯರ್ಥವಾಗಿ ಹೋಗುತ್ತವೆ. ಮುಂದೆಂದೂ ಸರಿಪಡಿಸದಂತೆ ಕೆಟ್ಟು ಹೋಗುತ್ತವೆ. ಆದ ಕಾರಣ ತನ್ನ ಬಾಹುಬಲವನ್ನು ಎರಡು ಸೇನೆಗಳೂ ಹೊಗಳುವಂತೆ ಯುದ್ಧ ಮಾಡಿ, ಯುದ್ಧಾಂತ್ಯದಲ್ಲಿ ರಾಮ ಲಕ್ಷ್ಮಣರನ್ನು ರಥವಿಹೀನರನ್ನಾಗಿ ಮಾಡಿ, ಸೆರೆಹಿಡಿದು ಆ ಬಳಿಕ ಸೀತೆಯನ್ನು ಮರಳಿ ಒಪ್ಪಿಸುತ್ತೇನೆ, ಎನ್ನುವಾಗ ಈ ಮೇಲಿನ ಮಾತು ಬಂದಿದೆ.

IV. ನಾಲ್ಕು ಅಂಕಗಳ ಪ್ರಶ್ನೆಗಳು (ಐದಾರು ವಾಕ್ಯಗಳಲ್ಲಿ ಉತ್ತರಿಸಿ):

Question 1.
ರಾವಣನು ಬಹುರೂಪಿಣೀ ವಿದ್ಯೆಯನ್ನು ಒಲಿಸಿಕೊಂಡ ಸಂದರ್ಭವನ್ನು ವಿವರವಾಗಿ ಬರೆಯಿರಿ.

Answer:
ರಾವಣನು ಧ್ರುವಮಂಡಲದಂತೆ ನಿಶ್ಚಲವಾಗಿ ನಿಂತುಕೊಂಡು ಮನೋನಿಗ್ರಹವನ್ನು ಮಾಡಿ ದಿವ್ಯ ಮಂತ್ರೋಚ್ಚರಣೆಯಿಂದ ಬಹುರೂಪಿಣೀ ವಿದ್ಯೆಯ ಸಾಧನೆಯನ್ನು ಮಾಡುತ್ತಾನೆ. ಆಗ ವಿದ್ಯಾಧಿದೇವತೆಯು ಮುಂಗಾರ ಸಿಡಿಲಿನ ಆರ್ಭಟವನ್ನೂ ಮೀರುವಂತೆ, ಯಮನ ನಾಲಗೆಯು ಕಂಪಿಸಿತೆಂಬಂತೆ ತನ್ನ ಕರಗಳನ್ನು ಹರಡಿಕೊಂಡು, “ಹೇಳು… ಹೇಳು”..ಎಂದು ನುಡಿದು ರಾವಣನ ಎದುರು ಪ್ರತ್ಯಕ್ಷವಾದಳು.

ಹಾಗೆ ಪ್ರತ್ಯಕ್ಷಳಾದ ವಿದ್ಯಾದೇವತೆಯು ರಾವಣನಲ್ಲಿ ಹೀಗೆ ಹೇಳುತ್ತಾಳೆ; “ಚಕ್ರಧಾರಿಯಾದ ಲಕ್ಷ್ಮ ಣನನ್ನು ಮತ್ತು ಕೊನೆಯ ಜನ್ಮದಲ್ಲಿರುವ ರಾಮ ಇವರಿಬ್ಬರನ್ನುಳಿದು ಮಿಕ್ಕವರನ್ನೆಲ್ಲ ನಾಶಗೊಳಿಸುತ್ತೇನೆ” ಎಂದು. ಆಗ ರಾವಣನು, “ಮಿಕ್ಕವರ ಸಾವಿನಿಂದ ನನಗೇನು ಪ್ರಯೋಜನ?” ಎನ್ನುತ್ತ ಆ ವಿದ್ಯಾಧಿದೇವತೆಗೆ ನಮಸ್ಕರಿಸಿ, ಶಾಂತಿ ಜಿನಭವನವನ್ನು ಮೂರುಬಾರಿ ಪ್ರದಕ್ಷಿಣೆ ಮಾಡಿ ಅಲ್ಲಿಂದ ಹೊರ ಬರುತ್ತಾನೆ.

ರಾವಣನಿಗೆ ರಾಮ ಲಕ್ಷ್ಮಣರನ್ನು ಸೋಲಿಸುವುದು ಕಷ್ಟವೆಂದು ತಿಳಿದಿದ್ದರೂ ಅವರನ್ನು ಕೆಣಕಲು ಮುಂದಾಗುವುದು ಅವನಲ್ಲಿನ ವಿವೇಕ ನಾಶವಾಗಿರುವುದನ್ನು ಸಂಕೇತಿಸುತ್ತದೆ.

Question 2.
ಪ್ರಮದವನದಲ್ಲಿ ರಾವಣ ಸೀತೆಯರ ನಡುವೆ ನಡೆದ ಸಂಭಾಷಣೆಯನ್ನು ವಿವರಿಸಿ.

Answer:
ರಾವಣನು ಬಹುರೂಪಿಣೀ ವಿದ್ಯೆಯನ್ನು ಒಲಿಸಿಕೊಂಡ ನಂತರ ಪ್ರಮದವನದಲ್ಲಿರುವ ಸೀತೆಯ ಬಳಿಗೆ ಬರುತ್ತಾನೆ. ಬಂದವನು ಸೀತೆಯನ್ನು ಕಂಡು ಹೀಗೆ ಹೇಳುತ್ತಾನೆ. ಬಹುರೂಪಿಣೀ ವಿದ್ಯೆಯನ್ನು ನಾನು ಸಾಧಿಸಿದ್ದೇನೆ. ಇನ್ನು ನನಗೆ ಅಸಾಧ್ಯವಾದ ಕಾರ್ಯ ಯಾವುದೂ ಇಲ್ಲ, ನೀನು ರಾಮನ ಯೋಚನೆಯನ್ನು ಬಿಟ್ಟು ನನ್ನನ್ನು ಹೊಂದಿ ಸಾಮ್ರಾಜ್ಯಸುಖವನ್ನನುಭವಿಸು ಎನ್ನುತ್ತಾನೆ. ರಾವಣನ ಈ ಮಾತುಗಳನ್ನು ಕೇಳಿ ಆಕೆ ಅತೀವವಾಗಿ ದುಃಖಿಸುತ್ತಾಳೆ.

ನಂತರ ಸೀತೆಯು ರಾವಣನನ್ನು ಉದ್ದೇಶಿಸಿ ಹೀಗೆ ಹೇಳುತ್ತಾಳೆ-ಕರುಣಿಸುವುದಿದ್ದರೆ ಎಲೇ ದಶವದನನೇ, ಶ್ರೀರಾಮನ ಆಯುಷ್ಯ ತೀರುವ ತನಕ, ಇಲ್ಲಿಗೆ ಬರಬೇಡ” ಎಂದು. ಆಕೆಗೆ ಗೊತ್ತು ರಾವಣನಿಂದ ರಾಮನನ್ನು ಏನು ಮಾಡಲು ಸಾಧ್ಯವಿಲ್ಲ ಎಂದು. ಅಲ್ಲದೆ ರಾವಣನು ತನ್ನ ಕಾರಣಕ್ಕಾಗಿ ಬಂದಿರುವುದು ಆಕೆಗೆ ಎಳ್ಳಷ್ಟು ಇಷ್ಟವಿರಲಿಲ್ಲ. ಹಾಗೇ ಹೇಳಿದವಳೇ ಮೂರ್ಛಿಗೊಂಡು ಭೂಮಿಯ ಮೇಲೆ ಬೀಳುತ್ತಾಳೆ. ಆಕೆಯ ಸ್ಥಿತಿಯನ್ನು ಕಂಡ ರಾವಣನಿಗೆ ಅನುಕಂಪ ಹುಟ್ಟುತ್ತದೆ. ಆಕೆಯ ಬಗೆಗಿನ ವ್ಯಾಮೋಹ ದೂರವಾಗಿ, ವೈರಾಗ್ಯವನ್ನು ತಾಳುತ್ತಾನೆ.

Question 3.
ರಾವಣನ ಮನ:ಪರಿವರ್ತನೆಯ ಸಂದರ್ಭವನ್ನು ಕವಿ ಹೇಗೆ ಚಿತ್ರಿಸಿದ್ದಾನೆ? ವಿವರಿಸಿ.

Answer:
ರಾವಣನ ರೂಪವು ಸೀತಾ ದೇವಿಗೆ ತೃಣ ಸಮಾನವೆನಿಸಿತ್ತು. ಆಕೆ ತನ್ನನ್ನು ಕಾಣಲು ಪ್ರಮದವನಕ್ಕೆ ಬರುತ್ತಿರುವ ರಾವಣನು ಇನ್ನೇನು ಕೆಟ್ಟ ಸುದ್ದಿಯನ್ನು ತಂದಿರುವನೋ ಎಂದು ತಲ್ಲಣಗೊಳ್ಳುತ್ತಾಳೆ. ಅಲ್ಲಿಗೆ ಬಂದ ರಾವಣನು ಸೀತೆಯಲ್ಲಿ ನನಗೆ ಬಹೂರೂಪಿಣೀ ವಿದ್ಯೆ ಸಿದ್ದಿಸಿದೆ. ಇನ್ನು ನನಗೆ ಅಸಾಧ್ಯವಾದುದು ಯಾವುದೂ ಇಲ್ಲ, ನೀನು ನನ್ನನ್ನು ಒಪ್ಪಿಕೊಂಡು ಸುಖದಿಂದಿರು ಎಂದಾಗ, ಸೀತೆಯು ರಾವಣನಲ್ಲಿ ರಾಮನ ಆಯುಷ್ಯ ಮುಗಿಯುವ ವರೆಗೆ ಇಲ್ಲಿಗೆ ಬರಬೇಡ ಎನ್ನುವುದಾಗಿ ಹೇಳಿ ಮೂರ್ಛ ಹೋಗುತ್ತಾಳೆ. ಜಾನಕಿಯು ಮೂರ್ಛಿತಳಾಗಲು ರಾವಣನಲ್ಲಿ ಅನುಕಂಪ ಹುಟ್ಟುತ್ತದೆ. ಆತ ಅಕೆಯ ಬಗೆಗೆ ಕರುಣೆಯನ್ನು ತೋರುತ್ತಾನೆ. ಅಲ್ಲದೆ ತನ್ನನ್ನು ತಾನೇ ಬೈದುಕೊಳ್ಳುತ್ತಾನೆ. ಕರ್ಮಾಧೀನನಾಗಿ ತಾನು ಮಾಡಿದ ಹೀನಕರ್ಮದ ಪರಿಣಾಮ ಎಷ್ಟು ಘೋರವಾದುದು ಅರಿತು ಪರಿತಪಿಸುತ್ತಾನೆ.

ಎಂದು ಕದಡಿ ಹೋದ ಕೊಳದ ನೀರು ತನ್ನಷ್ಟಕ್ಕೇ ತಿಳಿಗೊಳ್ಳುವಂತೆ ರಾವಣನೂ ತನ್ನಿಂದ ತಾನೆ ಬದಲಾಗುತ್ತಾನೆ. ಉದಾತ್ತನಾದವನಲ್ಲಿ ದುರಾಸೆಯು ಹೇಗೆ ಸ್ಥಿರವಾಗಿ ನಿಲ್ಲಲಾರದೋ ಹಾಗೆ ರಾವಣನಿಗೆ ಸೀತೆಯಲ್ಲಿ ವೈರಾಗ್ಯ ಹುಟ್ಟಿತು. ತನಗೆ ಅಂಟಿಕೊಂಡ ಸಂಜೆ ಬಣ್ಣವನ್ನು ರವಿಯು ಕಳೆದುಕೊಂಡು ಹೇಗೆ ಮರುದಿನ ಮತ್ತೆ ಕಾಂತಿಯುಕ್ತನಾಗಿ ಕಾಣುತ್ತಾನೆಯೋ, ಹಾಗೆ ರಾವಣನೂ ಕೂಡ ತಾನು ಹೊಂದಿದ್ದ ಕೆಟ್ಟದ್ದನ್ನು ಕಳೆದು ಪರಿಶುದ್ಧನಾಗುತ್ತಾನೆ.

Question 4.
ರಾವಣನಲ್ಲಿ ಕಂಡುಬರುವ ಪಶ್ಚಾತ್ತಾಪವನ್ನು ಕವಿ ಹೇಗೆ ನಿರೂಪಿಸಿದ್ದಾನೆ?

Answer:
ರಾವಣನಿಗೆ ತಾನು ಕೈಗೊಂಡ ಕಾರ್ಯ ತಪ್ಪು ಎಂದು ಅರಿವಿಗೆ ಬಂದಾಗ ಆತ ತುಂಬಾ ಪಶ್ಚಾತ್ತಾಪ ಪಟ್ಟುಕೊಳ್ಳುತ್ತಾನೆ. ಪ್ರಾಣ ಪ್ರಿಯರಾದ ರಾಮ ಸೀತೆಯರನ್ನು ದೂರಮಾಡಲು ಯಾವ ಪೂರ್ವಯೋಜಿತ ಕಾರಣಗಳಿರಲಿಲ್ಲ. ನನ್ನ ಕರ್ಮವಶದಿಂದ ನಾನು ಅವರಿಬ್ಬರನ್ನು ಪರಸ್ಪರ ದೂರ ಮಾಡಿದೆನು. ಮನ್ಮಥನ ಬಾಣಕ್ಕೆ ತುತ್ತಾಗಿ ಅವಿವೇಕತನದಿಂದ, ಕುಲದ ಹಿರಿಮೆಯನ್ನು ನಾನೇ ನಾಶ ಮಾಡುವಂತೆ ಈ ಹೀನ ಕಾರ್ಯವನ್ನು ಮಾಡಿದೆನು. ಸೀತೆಯನ್ನು ರಾಮನಿಂದ ಆಗಲುವಂತೆ ಮಾಡಿ ನಾನು ಈ ಮಾನಿನಿಗೆ ಇಷ್ಟು ದುಃಖವನ್ನು ಕೊಟ್ಟೆನು. ಕಾಮ ವ್ಯಾಮೋಹಕ್ಕೆ ಒಳಗಾದದ್ದರಿಂದಾಗಿಯೇ ಕೆಟ್ಟ ಯಶಸ್ಸು ಎಂಬ ಭೇರಿಯ ನಾದ ಎಲ್ಲೆಡೆ ಹರಡುವಂತಾಯಿತು.

ನನಗೆ ವಿಭೀಷಣನು ಆದರದಿಂದಲೇ ಹಿತನುಡಿಗಳನ್ನು ಹೇಳಿದನು. ಆತನನ್ನು ವಿನಯವಂತನಲ್ಲದ ನಾನು, ದುರ್ವ್ಯಸನಿಯಾದ ನಾನು, ಬೆದರಿಸಿ ಹೆದರಿಸಿ ವಿನಯವಂತನಾದ ನನ್ನ ತಮ್ಮನನ್ನು ಹೊಡೆದೋಡಿಸಿ ಲಂಕೆಯಿಂದ ಹೊರಕ್ಕೆ ಕಳುಹಿಸಿದೆ. ವ್ಯಸನಗಳ ಹಿಡಿತಕ್ಕೆ ಸಿಲುಕಿದ ಯಾವನೂ ಅನುರಾಗದ ಸೆಳೆವಿನಿಂದ ಯಾವುದು ಹಿತ ಯಾವುದು ಅಹಿತ ಎಂಬ ಚಿಂತನೆಯನ್ನು ಏಕೆ ಮಾಡುತ್ತಾನೆ ಎಂದು ತನ್ನಿಂದ ಆದ ತಪ್ಪಿಗೆ ಪರಿತಪಿಸುತ್ತಾನೆ.

ವ್ಯಸನಕ್ಕೆ ಬಲಿಬಿದ್ದ ಮನುಷ್ಯನು ತನ್ನ ಹಿಂದಿನ ಎಲ್ಲಾ ವಿಚಾರಗಳನ್ನು ಮರೆತು, ವಿಷಯ ಸುಖವೆಂಬ ಮದ್ಯದ ಅಮಲಿಗೊಳಗಾಗಿ ವಿವೇಚನೆಯನ್ನು ಕಳಕೊಳ್ಳುತ್ತಾನೆ ಎಂದು ವಿಧವಿಧವಾಗಿ ಪಶ್ಚಾತ್ತಾಪ ಪಡುತ್ತಾನೆ.

Question 5.
ಕದಡಿದ ಸಲಿಲಂ ತಿಳಿವಂದದೆ ಕಾವ್ಯಭಾಗದಲ್ಲಿ ಕಂಡುಬರುವ ರಾವಣನ ವ್ಯಕ್ತಿತ್ವವನ್ನು ವಿಮರ್ಶಿಸಿ ನಿಮ್ಮ ಮಾತುಗಳಲ್ಲಿ ಉತ್ತರಿಸಿ.

Answer:
ಕದಡಿದ ಸಲಿಲಂ ತಿಳಿವಂದದೆ ಎನ್ನುವ ಕಾವ್ಯಭಾಗದಲ್ಲಿ ರಾವಣನು ಉದಾತ್ತ ನಾಯಕನಾಗಿಯೇ ಕಂಡು ಬರುತ್ತಾನೆ. ನಳಕೂಬರನ ಪತ್ನಿ ಉಪರಂಭೆಯು ಈತನನ್ನು ಬಯಸಿ ಬಂದಾಗ ಆಕೆಗೆ ಸದುಪದೇಶ ನೀಡಿ ಮರಳಿ ಕಳುಹಿಸುವ ರಾವಣ, ಖರದೂಷಣರ ನೆರವಿಗೆಂದು ಬಂದವನು ಸೀತೆಯ ರೂಪಕ್ಕೆ ಮಾರುಹೋಗುತ್ತಾನೆ. ಇದು ಕವಿಯ ಪ್ರಕಾರ ರಾವಣನ ವಿಧಿಲಿಖಿತ.

ಬಹುರೂಪಿಣೀ ವಿದ್ಯೆಯನ್ನು ಒಲಿಸಿಕೊಂಡು ರಾಮ-ಲಕ್ಷ್ಮಣರನ್ನು ಸೋಲಿಸಲು ಮುಂದಾಗುವ ರಾವಣನಿಗೆ, ಆ ವಿದ್ಯಾದೇವತೆಯಿಂದ ಅವರನ್ನು ಸೋಲಿಸುವುದು ಅಸಾಧ್ಯ ಎಂದು ತಿಳಿದಾಗ ಹೆದರದೆ ಶಾಂತಿಜಿನಭವನಕ್ಕೆ ಮಹಾಪೂಜೆಯನ್ನು ಸಲ್ಲಿಸಿ, ಸೀತೆಯನ್ನು ಕಾಣಲು ಪ್ರಮದವನಕ್ಕೆ ಹೋಗುತ್ತಾನೆ. ಸೀತೆಯನ್ನು ಕಂಡ ಆತ, ಅಕೆಯಲ್ಲಿ ತನ್ನ ಪರಾಕ್ರಮದ ಬಗ್ಗೆ ಹೇಳಿಕೊಳ್ಳುತ್ತಾನೆ. ಆದರೆ ಸೀತೆ ಮಾತ್ರ ಆತನನ್ನು ನಿರಾಕರಿಸಿ ರಾಮನ ಪ್ರಾಣ ಹೋಗುವ ವರೆಗೆ ನನ್ನನ್ನು ನೋಡಲು ಮರಳಿ ಬರಬೇಡ ಎನ್ನುತ್ತಾ ಮೂರ್ಛ ಹೋಗುತ್ತಾಳೆ.

ರಾವಣ ಒಬ್ಬ ಶ್ರೇಷ್ಠ ನಾಯಕ ಎಂದು ತಿಳಿಯುವುದು ಇಲ್ಲಿಯೇ ಸೀತೆ ಮೂರ್ಛ ಹೋದ ಮರು ಕ್ಷಣದಲ್ಲಿ ರಾವಣನಿಗೆ ತಾನು ಮಾಡುತ್ತಿರುವುದು ತಪ್ಪೆನಿಸುತ್ತದೆ. ಆಕೆಯ ಬಗ್ಗೆ ಅನುಕಂಪ ಹುಟ್ಟುತ್ತದೆ. ಕರುಣೆದೋರುತ್ತಾನೆ. ಅಲ್ಲದೆ ತನ್ನನ್ನು ತಾನೇ ಬೈದುಕೊಳ್ಳುತ್ತಾನೆ. ಕರ್ಮಾಧೀನನಾಗಿ ತಾನು ಮಾಡಿದ

ಹೀನಕರ್ಮದ ಪರಿಣಾಮ ಎಷ್ಟು ಘೋರವಾದುದು ಎಂದು ಅರಿತುಪರಿತಪಿಸುತ್ತಾನೆ. ಕದಡಿ ಹೋದ ಕೊಳದನೀರು ತನ್ನಷ್ಟಕ್ಕೇ ತಿಳಿಗೊಳ್ಳುವಂತೆ; ರಾವಣನಿಗೆ ತನ್ನೊಳಗೆ ಬದಲಾವಣೆಯಗುತ್ತದೆ. ಉದಾತ್ತನಾದವನಲ್ಲಿ ದುರಾಸೆಯುಹೇಗೆಸ್ಥಿರವಾಗಿ ನಿಲ್ಲಲಾರದೋಹಾಗೆ ರಾವಣನಿಗೆ ಸೀತೆಯಲ್ಲಿ ವೈರಾಗ್ಯ ಹುಟ್ಟುತ್ತದೆ.

ಕೊನೆಯಲ್ಲಿ ರಾವಣ, ರಾಮ-ಲಕ್ಷ್ಮಣರಲ್ಲಿ ಯುದ್ಧ ಮಾಡಿ ಅವರನ್ನು ರಥವಿಹೀನರನ್ನಾಗಿಸಿ ಮರಳಿ ಒಪ್ಪಿಸುವ ಆಲೋಚನೆ ಮಾಡುತ್ತಾನೆ. ಇದು ರಾವಣನ ನಿಜ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ.

ಕದಡಿದ ಸಲಿಲಂ ತಿಳಿವಂದದೆ
Kadadida Salilam Tilivandade [Summary]

2nd PUC Kannada Chapter 1 Kadadida Salilam Tilivandade
2nd PUC Kannada Chapter 1 Kadadida Salilam Tilivandade

ರಾವಣನು ತನ್ನ ಚಂಚಲ ಮನಸ್ಸನ್ನು ನಿಗ್ರಹಿಸಿ, ದ್ರುವಮಂಡಲದಂತೆ ನಿಶ್ಚಲ ಚಿತ್ತದಿಂದ ದಿವ್ಯಮಂತ್ರಗಳ ಮೂಲಕ ವಿದ್ಯೆಯ ಸಿದ್ಧಿಯನ್ನು ಸಾಧಿಸುತ್ತಾನೆ. ಆಗ ಆ ವಿದ್ಯೆ ಮಳೆಯ ತೀವ್ರತೆಯಂತೆ ಆರ್ಭಟಿಸುತ್ತಾ ಪ್ರತ್ಯಕ್ಷವಾಗಿ ಬಹುರೂಪಿಣಿಯಾಗಿ ಅವನ ಮುಂದೆ ಪ್ರकटವಾಗುತ್ತದೆ. ಆ ವಿದ್ಯೆ, ಯಮಧರ್ಮನ ನಾಲಿಗೆ ರೂಪದಲ್ಲಿ ಮಾತನಾಡಿ — ರಾಮ ಮತ್ತು ಲಕ್ಷ್ಮಣರನ್ನು ಬಿಟ್ಟು ಉಳಿದವರನ್ನು ಕೊಲ್ಲಲು ಹೇಳುತ್ತದೆ. ಆದರೆ ರಾವಣನು ಆ ಮಾತಿಗೆ ಸ್ಪಂದಿಸಿ, ರಾಮ-ಲಕ್ಷ್ಮಣರನ್ನು ಬಿಟ್ಟು ಉಳಿದವರನ್ನು ಕೊಂದರೆ ಏನು ಉಪಯೋಗ? ಎಂದು ಪ್ರಶ್ನಿಸಿ, ಆ ವಿದ್ಯೆಗೆ ನಮಸ್ಕರಿಸಿ ಶಾಂತಿನಾಥ ಜಿನ ದೇವಾಲಯವನ್ನು ಮೂರು ಬಾರಿ ಪ್ರದಕ್ಷಿಣೆ ಮಾಡಿ ತನ್ನ ಅಂತಃಪುರಕ್ಕೆ ಮರಳುತ್ತಾನೆ.

ಅಲ್ಲಿ ಸ್ತ್ರೀಯರ ಬಾಡಿದ ಮುಖಗಳನ್ನು ನೋಡಿ ಸಿಂಹದಂತೆ ಕೋಪಗೊಂಡ ರಾವಣನು, ನಿಮಗೆ ಈ ದುಃಖವನ್ನು ಉಂಟುಮಾಡಿದ ರಾಮಲಕ್ಷ್ಮಣರನ್ನು ನನ್ನ ಹುಬ್ಬುಗಂಟಿನಲ್ಲಿ ಕಟ್ಟಿಕೊಂಡು ನಿಮ್ಮ ಮುಂದೆ ಅವರೆದುರು ಕಿರುಕುಳ ನೀಡುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಾನೆ. ಮತ್ತೆ ವಿದ್ಯಾಸಿದ್ಧಿಯನ್ನು ಪರೀಕ್ಷಿಸಿಕೊಂಡು, ತನ್ನ ಶಕ್ತಿ ಸಾಮರ್ಥ್ಯಕ್ಕೆ ಮೂವರು ಲೋಕಗಳಲ್ಲಿಯೂ ತಕ್ಕವರಿಲ್ಲವೆಂದು ಅಹಂಕಾರದಿಂದ ಭಾವಿಸುತ್ತಾನೆ. ಯುದ್ಧಕ್ಕೆ ಹೊರಡುವ ಮುನ್ನ ಸೀತೆಯೊಂದಿಗೊಂದು ಬಾರಿ ಮಾತನಾಡಬೇಕು ಎಂಬ ಉದ್ದೇಶದಿಂದ ಮನ್ಮಥನಂತೆ ಹೂವಿನ ಬಿಲ್ಲುಬಾಣಗಳಿಲ್ಲದೆ ಸೀತೆಯ ಬಳಿಗೆ ಹೋಗುತ್ತಾನೆ.

ಅವನ ಈ ಬಗ್ಗುವ ಪರಾಕ್ರಮವನ್ನು ಅಂತಃಪುರದ ಮಹಿಳೆಯರು ಸೀತೆಗೆ ವಿವರಿಸುತ್ತಾರೆ. ಈ ಸುದ್ದಿಯಿಂದ ಸೀತೆ ಮತ್ತೆ ಏನಾದರೂ ಕೆಟ್ಟ ಸಂಗತಿ ಸಂಭವಿಸಬಹುದೆಂಬ ಆತಂಕದಲ್ಲಿ ತಲ್ಲಣಗೊಳ್ಳುತ್ತಾಳೆ. ರಾವಣನು ಸೀತೆಯ ಮುಂದೆ ನಿಂತು, ತನ್ನ ವಿದ್ಯಾಸಿದ್ಧಿ ಮತ್ತು ಪರಾಕ್ರಮದ ಬಗ್ಗೆ ಹೆಮ್ಮೆಪಟ್ಟು, ರಾಮನನ್ನು ತೊರೆದು ತನ್ನನ್ನೇ ಒಪ್ಪಿಕೊಂಡು ಸಾಮ್ರಾಜ್ಯ ಸುಖವನ್ನು ಅನುಭವಿಸಬೇಕೆಂದು ಆಮಂತ್ರಿಸುತ್ತಾನೆ.

ಈ ಮಾತುಗಳನ್ನು ಕೇಳುತ್ತಿದ್ದಂತೆ ಸೀತೆ ಹೆದರಿ, ರಾಮನ ಪ್ರಾಣಹಾನಿಯಾಗದಿರಲಿ ಎಂದು ಕಾಳಜಿಯಿಂದ ಪ್ರಾರ್ಥಿಸುತ್ತಾಳೆ. ಅವಳ ಆ ಸ್ಥಿತಿಯನ್ನು ಕಂಡು ರಾವಣನ ಮನಸ್ಸು ತಾನಾಗಿಯೇ ತಿಳಿವಳಿಕೆಗೆ ಬಂದು, ಈ ಪಾಪಕೃತ್ಯ ನನ್ನಿಂದ ಆಗಿದ್ದು ಕರ್ಮದ ಪರಿಣಾಮವೆಂದು ಭಾವಿಸುತ್ತಾನೆ. ಕವಿಯು ಇದನ್ನು “ಉದಾತ್ತ ವ್ಯಕ್ತಿಗಳಲ್ಲಿ ಈ ರೀತಿಯ ವೈರಾಗ್ಯ ಉಂಟಾಗುವುದು ಸಹಜ” ಎಂದು ಹೇಳುತ್ತಾನೆ.

ಸೂರ್ಯನು ಸಂಧ್ಯೆಯ ಮೇಲಿನ ಆಕರ್ಷಣೆಯನ್ನು ಬಿಟ್ಟುಬಿಡುವಂತೆ, ಉತ್ತಮ ವ್ಯಕ್ತಿಗಳು ಒಂದು ಬಾರಿ ತಪ್ಪು ಮಾಡಿದರೂ, ಅದನ್ನು ತಿದ್ದಿಯೇ ತೊಡಗುತ್ತಾರೆ. ಈ ಕಾರಣದಿಂದ, ಸೀತೆಯ ಮೇಲಿನ ಕರುಣೆಯಿಂದ ರಾವಣನ ಸ್ವಭಾವ ಬದಲಾಗುತ್ತದೆ. ತನ್ನ ಸಜ್ಜನ ಮಂತ್ರಿಗಳಿಗೆ, ನನ್ನ ಎಲ್ಲ ಗುಣ, ಉಡುಪು ತೊಡುಪುಗಳು ಅವಳಿಗೆ ಹುಲ್ಲು ಸಮಾನವಾಗಿವೆ; ಅಂತಹ ಪವಿತ್ರ ಸತಿಯ ಮೇಲೆ ತಪ್ಪು ಮಾಡುವುದು ಪಾಪವೆಂದು ಅರಿಯುತ್ತಾನೆ. ಕೇವಲ ಕಾಮನ ಕಾರಣದಿಂದಲೇ ತನ್ನ ವಂಶದ ಮಾನ ಕಳೆಯುವಂತಹ ಕೃತ್ಯವೆನ್ನಿಸಿ ಪಶ್ಚಾತ್ತಾಪಕ್ಕೆ ಒಳಗಾಗುತ್ತಾನೆ.

ವಿಭೀಷಣನು ಕೊಟ್ಟ ಹಿತವಚನವನ್ನು ಕೇಳದೆ ಅವನನ್ನು ಬೈದು ಹಾಯಿಸಿಕೊಂಡದ್ದು ತನ್ನ ದೋಷವೆಂದು ಅರಿಯುತ್ತಾನೆ. ದುರ್ಬುದ್ಧಿಯಿಂದಾಗುವ ತೊಂದರೆಗಳು, ವಿಷಯಲಾಲಸೆಗಳ ತೀವ್ರತೆ, ಅಭಿಮಾನ, ಯಶಸ್ಸು ಇವೆಲ್ಲವೂ ಮನುಷ್ಯನನ್ನು ವ್ಯಸನಕ್ಕೆ ಒಯ್ಯುತ್ತವೆ ಎಂದು ಆತ್ಮಚಿಂತನೆ ಮಾಡುತ್ತಾನೆ.

ಆದರೂ, ಸೀತೆಯನ್ನು ರಾಮ-ಲಕ್ಷ್ಮಣರಿಗೆ ಯುದ್ಧಕ್ಕೂ ಮುನ್ನ ಒಪ್ಪಿಸಿದರೆ ತನ್ನ ಶೌರ್ಯ, ಸ್ಥೈರ್ಯ ಮತ್ತು ಖ್ಯಾತಿಗೆ ಧಕ್ಕೆಯಾಗುತ್ತದೆ ಎಂಬ ಆತಂಕದಿಂದ, ಯುದ್ಧದ ಅಂಗಳದಲ್ಲಿ ರಾಮ-ಲಕ್ಷ್ಮಣರನ್ನು ಎದುರಿಸಿ, ಅವರಿಗೆ ತಮ್ಮ ಶಕ್ತಿಯನ್ನು ತೋರಿಸಿದ ಬಳಿಕವೇ ಸೀತೆಯನ್ನು ಒಪ್ಪಿಸಬೇಕು ಎಂಬ ಅಂತಿಮ ನಿರ್ಧಾರಕ್ಕೆ ಬರ್ತಾನೆ.

Click Here to Download Kadadida Salilam Tilivandade PDF
Click Here to Watch Kadadida Salilam Tilivandade Video

You cannot copy content of this page