1st PUC Kannada Question and Answer – Shishu Makkaligolida Madeva
Looking for 1st PUC Kannada textbook answers? You can download Chapter 6: Shishu Makkaligolida Madeva Questions and Answers PDF, Notes, and Summary here. 1st PUC Kannada Kavyabhaga solutions follow the Karnataka State Board Syllabus, making it easier for students to revise and score higher in exams.
Karnataka 1st PUC Kannada Textbook Answers—Reflections Chapter 6
Shishu Makkaligolida Madeva Questions and Answers, Notes, and Summary
1st PUC Kannada Chapter 6
ಸಿಸುಮಕ್ಕಳಿಗೊಲಿದ ಮಾದೇವ
Shishu Makkaligolida Madeva
Scroll Down to Download Shishu Makkkaligolida Madeva PDF
I. ಒಂದು ವಾಕ್ಯದಲ್ಲಿ ಉತ್ತರಿಸಿ:
Question 1.
ಮಾದೇವ ಎಲ್ಲಿ ಒರಗಿದ್ದಾನೆ?
Answer:
ಮಾದೇವ ಮೂಡಲ ಮಲೆಯಲ್ಲಿ, ಯೋಗದಲ್ಲಿ ಒರಗಿದ್ದಾನೆ.
Question 2.
ಯಾರ ಮಕ್ಕಳನ್ನು ಮಾದೇವ ದತ್ತುವಾಗಿ ಪಡೆದನು?
Answer:
ಸತ್ಯವಂತೆ ಸಂಕಮ್ಮನ ಮಕ್ಕಳನ್ನು ಮಾದೇವ ದತ್ತುವಾಗಿ ಪಡೆದನು.
Question 3.
ಶಿಶುಮಕ್ಕಳು ಹೂ ತರಲು ಎಲ್ಲಿಗೆ ಹೋಗಿದ್ದರು?
Answer:
ಶಿಶುಮಕ್ಕಳು ಹೂ ತರಲು ಕಡ್ಡಿ ಹಳ್ಳಕ್ಕೆ ಹೋಗಿದ್ದರು.
Question 4.
ಮಾದೇವ ಮಕ್ಕಳ ಸತ್ಯನೋಡಲು ಏನು ಮಾಡಬೇಕೆನ್ನುತ್ತಾನೆ?
Answer:
ಮಾದೇವ ಮಕ್ಕಳು ಸತ್ಯ ನೋಡಲು ಮಾಯಾದ ಮಳೆಯನ್ನು ಸುರಿಸಿ ಮಕ್ಕಳ ಸತ್ಯ ನೋಡಬೇಕೆನ್ನುತ್ತಾನೆ.
Question 5.
ಮಳೆಯನ್ನು ಕಳುಹಿಸು ಎಂದು ಮಾದೇವ ಯಾರನ್ನು ಕೇಳುತ್ತಾನೆ?
Answer:
ಮಳೆಯನ್ನು ಕಳುಹಿಸು ಎಂದು ಮಾದೇವ ದೇವೆಂದ್ರ ಪತಿಯಲ್ಲಿ ಕೇಳುತ್ತಾನೆ.
Question 6.
ವಾಯುದೇವನನ್ನು ಎಂತಹ ಸುಂಟರಗಾಳಿ ಕಳುಹಿಸು ಎಂದು ಮಾದೇವ ಕೇಳುತ್ತಾನೆ?
Answer:
ವಾಯುದೇವನನ್ನು ಜಗವೆಲ್ಲ ಬುಗರಿಯಂತೆ ಗರಗರನೇ ತಿರುಗುವಂತೆ ಸುಂಟರಗಾಳಿ ಕಳುಹಿಸು ಎಂದು ಮಾದೇವ ಕೇಳುತ್ತಾನೆ.
Question 7.
ಕಾರೆಂಬೊ ಕತ್ತಲಲ್ಲಿ ಎಂತಹ ಮಳೆ ಬಂತು?
Answer:
ಕಾರೆಂಬೊ ಕತ್ತಲಲ್ಲಿ ಜೋರೆಂಬ ಮಳೆ ಬಂತು.
Question 8.
ಗಂಗೆ ಸುರಿಯುವ ರಭಸಕ್ಕೆ ಏನೇನು ಒಂದಾದವು?
Answer:
ಗಂಗೆ ಸುರಿಯುವ ರಭಸಕ್ಕೆ ಭೂಮಿ ಮತ್ತು ಆಕಾಶ ಒಂದಾದವು.
Question 9.
ಗಂಗಮ್ಮ ಏನನ್ನು ಹೊತ್ತುಕೊಂಡು ಹೋದಳು?
Answer:
ಗಂಗಮ್ಮ ಆನೆ ಆನೆ ಮದ್ದಾನೆಯ ಹಿಂಡನ್ನು ಹೊತ್ತುಕೊಂಡು ಹೋದಳು.
Question 10.
ನೀರಿನ ಸುಳಿಗೆ ಸಿಲುಕಿದ ಮಾದೇವ ಹೇಗೆ ತಿರುಗಿದನು?
Answer:
ನೀರಿನ ಸುಳಿಗೆ ಸಿಲುಕಿದ ಮಾದೇವ ಗರಗರಗರನೆ ತಿರುಗಿದನು.
Question 11.
ಮಾದೇವ ಶಿಷ್ಯರ ಯಾವ ಗುಣಕ್ಕೆ ಒಲಿದನು?
Answer:
ಮಾದೇವ ಶಿಷ್ಯರ ಪ್ರೇಮಕ್ಕೆ ಒಲಿದನು.
Question 12.
ನಂಬಿದವರ ಮನದಲ್ಲಿ ಮಾದೇವ ಹೇಗಿರುತ್ತಾನೆ?
Answer:
ನಂಬಿದವರ ಮನದಲ್ಲಿ ಮಾದೇವ ತುಂಬಿ ತುಳುಕಾಡುತ್ತಾನೆ.
II. ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ:
Question 1.
ಮಾದೇವನ ಶಿಶುಮಕ್ಕಳ ಹೆಸರೇನು?
Answer:
ಮಾದೇವನ ಮೂರು ಶಿಶು ಮಕ್ಕಳನ್ನು ದತ್ತುವಾಗಿ ಪಡೆದಿದ್ದನು. ಅದರಲ್ಲಿ ಮೊದಲನೆಯವನು ಬೇಡರ ಕನ್ನಯ್ಯ ಇನ್ನಿಬ್ಬರು ಸತ್ಯವಂತೆ ಸಂಕಮ್ಮನ ಮಕ್ಕಳಾದ ಕಾರಯ್ಯ ಮತ್ತು ಬಿಲ್ಲಯ್ಯರು.
Question 2.
ಸಿಡಿಲು ಗುಡುಗುಗಳನ್ನು ಕಳುಹಿಸು ಎಂದು ಮಾದೇವ ಯಾರನ್ನು ಕೇಳುತ್ತಾನೆ?
Answer:
ಶಿಶು ಮಕ್ಕಳ ಭಕ್ತಿಯ ಪರೀಕ್ಷೆಗೆ ಮುಂದಾದ ಮಹಾದೇವನು ಗುಡುಗಾಜಮ್ಮನನ್ನು ಕರೆದು ನೀನೂ ಗುಡುಗ ಬೇಕೆಂದು ಹೇಳುತ್ತಾನೆ. ಮಗ ಬೊಮ್ಮರಾಯನನ್ನು ಕಟ್ಟಿಕೊಂಡು ಮಾಯಾದ ಸಿಡಿಲನ್ನು ಕೊಡಬೇಕೆಂದು ಕೇಳುತ್ತಾನೆ.
Question 3.
ಮಳೆಯನ್ನು ನೋಡಿ ಕನ್ನಯ್ಯ ತನ್ನೊಳಗೆ ಏನೆಂದುಕೊಳ್ಳುತ್ತಾನೆ?
Answer:
ಭೂಮಿ ಮತ್ತು ಆಕಾಶ ಒಂದಾಗುವ ಹಾಗಿನ ಮಳೆಯನ್ನು ಕಂಡ ಬೇಡರ ಕನ್ನಯ್ಯ ಎಂದು ಬಾರದಿರುವ ಮಾರಿ ಮಳೆ ಇಂದು ಬಂದ ಕಾರಣ ತಿಳಿದಿಲ್ಲ ಎಂದು ಕೊಳ್ಳುತ್ತಾನೆ.
Question 4.
ಶಿಶು ಮಕ್ಕಳು ಬಾಯಿಬಾಯಿ ಏಕೆ ಬಡಿದುಕೊಳ್ಳುತ್ತಾರೆ?
Answer:
ಭಾರಿ ಮಳೆಗೆ ಮುಳುಗಿ ಹೋದ ಮಾದೇವ ಗುಡಿಯನ್ನು ಕಂಡು ಶಿಸು ಮಕ್ಕಳು: ಇಂತ ದೊಡ್ಡ ಅಪ್ಪಾನೆ ಮುಳುಗಿ ಹೋದ ಮೇಲೆ ನಾವು ಬಾಳುವುದಕ್ಕೆ ಸಾಧ್ಯವೇ ಎಂದು ಬಾಯಿಬಾಯಿ ಬಡಿದುಕೊಳ್ಳುತ್ತಾರೆ.
Question 5.
ಬಲಿಯ ಕಲ್ಲನ್ನು ಕನ್ನಯ್ಯ ಬಲವಾಗಿ ಹಿಡಿದುಕೊಳ್ಳುವುದು ಏಕೆ?
Answer:
ಮಳೆಯ ರಭಸಕ್ಕೆ ಸಿಲುಕಿ ಮಾದೇವ ಗರಗರನೆ ತಿರುಗುವುದನ್ನು ಕಂಡ ಕನ್ನಯ್ಯನು, ಗಂಗೆಯು ನನ್ನಪ್ಪನನ್ನು ಎಳೆದಂತೆ ನನ್ನನು ಎಳೆದೊಯ್ಯಬಹುದೆಂದು ಬಲಿಯ ಕಲ್ಲನ್ನು ಬಲವಾಗಿ ಹಿಡಿದು ಕೊಳ್ಳುತ್ತಾನೆ.
Question 6.
ಶಿಶುಮಕ್ಕಳು ನಾವು ಸತ್ತರೂ ಚಿಂತಿಲ್ಲ ಎನ್ನಲು ಕಾರಣವೇನು?
Answer:
ಮಾದೇವನ ಮುಳುಗುವಿಕೆಯನ್ನು ಕಂಡ ಶಿಶುಮಕ್ಕಳು ಗುರುವಿಗೆ ಶಿಷ್ಯರಿಲ್ಲ ಶಿಷ್ಯರಿಗೆ ಗುರುವಿಲ್ಲ ಎನ್ನುತ್ತಾರೆ. ಗುರುವಿಲ್ಲದೆ ಬದುಕುವುದಕ್ಕಿಂತ ನಾವು ಸತ್ತರೂ ಚಿಂತಿಲ್ಲ ಎಂದು ಮಾದೇವನನ್ನು ಕಾಪಾಡಲು ಮುಂದಾಗುತ್ತಾರೆ.
Question 7.
ಮಾದೇವ ತನ್ನ ಶಿಶುಮಕ್ಕಳಿಗೆ ಏನೇನು ನೀಡಿ ಸಲಹಿದನು?
Answer:
ಮಾದೇವ ತನ್ನ ಶಿಶುಮಕ್ಕಳಿಗೆ ಗೆಡ್ಡೆಗೆಣಸುಗಳನ್ನು ಕೊಡುವವರಿಲ್ಲದಾಗ ಹಾಲು, ತುಪ್ಪ, ಬೆಣ್ಣೆ ಕೊಟ್ಟು ಹೆತ್ತ ತಾಯಿಯಂತೆ ಸಲಹಿದನು.
Question 8.
ಶಿಶುಮಕ್ಕಳ ಪ್ರೇಮಕ್ಕೆ ಮಾದಪ್ಪ ಹೇಗೆ ಬಂದನು?
Answer:
ಶಿಶುಮಕ್ಕಳ ಪ್ರೇಮಕ್ಕೆ ಮಾದಪ್ಪನು ಮಕ್ಕಳನ್ನು ಎತ್ತಿ ಹೆಗಲ ಮೇಲೆ ಹೊತ್ತು ಕೊಂಡು ಗುಡಿಗೆ ಕರೆದುಕೊಂಡು ಬಂದನು.
III. ಸಂದರ್ಭ ಸೂಚಿಸಿ ವಿವರಿಸಿ:
Question 1.
ಮಾಯಾದ ಮಳೆಯ ಕಳುಗಪ್ಪ,
Answer:
ಪ್ರಸ್ತುತ ಸಾಲನ್ನು “ಮಲೆಯ ಮಾದೇಶ್ವರ” ಜಾನಪದ ಮಹಾಕಾವ್ಯದ ಭಾಗವಾದ ‘ಶಿಶುಮಕ್ಕಳಿಗೊಲಿದ ಮಾದೇವ’ದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಮಾದೇಶ್ವರನಿಗೆ ತನ್ನ ದತ್ತು ಮಕ್ಕಳಾದ ಕನ್ನಯ್ಯ, ಕಾರಯ್ಯ, ಹಾಗೂ ಬಿಲ್ಲಯ್ಯರಿಗೆ ತನ್ನ ಮೇಲಿರುವ ಭಕ್ತಿ ಹಾಗೂ ಪ್ರೀತಿಯ ಸತ್ವವನ್ನು ಪರೀಕ್ಷಿಸಬೇಕೆಂದೆನಿಸಿತು. ಹೂತರಲು ಕಡ್ಡಿ ಹಳ್ಳಕ್ಕೆ ತನ್ನ ಮಕ್ಕಳು ಹೋದ ಸಂದರ್ಭದಲ್ಲಿ ಜೋರಾಗಿ ಮಳೆ ಸುರಿಸಬೇಕೆಂದು ಮಾದೇವನು ನಿರ್ಧರಿಸಿದನು. ದೇವತೆಗಳ ಒಡೆಯನಾದ ದೇವೇಂದ್ರನ ಬಳಿ ಬಂದು ಮಾಯದ ಮಳೆಯನ್ನು ಕಳುಹಿಸಬೇಕೆಂದು ಮಾದೇವನು ಕೇಳಿಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ಈ ಮೇಲಿನ ಮಾತು ಅಭಿವ್ಯಕ್ತಗೊಂಡಿದೆ.
Question 2.
ನೀವೊಪ್ಪುದಂಗೆ ಮಾಡುತೀವಿ.
Answer:
ಈ ಮೇಲಿನ ಸಾಲನ್ನು “ಮಲೆಯ ಮಾದೇಶ್ವರ” ಜಾನಪದ ಮಹಾಕಾವ್ಯದ ಭಾಗವಾದ ‘ಶಿಶುಮಕ್ಕಳಿಗೊಲಿದ ಮಾದೇವ’ದಿಂದ ಆರಿಸಲಾಗಿದೆ.
ಸಂದರ್ಭ : ಮಾದೇವರು ತನ್ನ ದತ್ತು ಮಕ್ಕಳನ್ನು ಪರೀಕ್ಷಿಸಲು ಮಾಯದ ಮಳೆಯನ್ನು ಕರೆತರಲು ನಿರ್ಧರಿಸುತ್ತಾನೆ. ದೇವತೆಗಳ ಒಡೆಯನಾದ ದೇವೇಂದ್ರನ ಬಳಿ ಹೋಗಿ ಮಾಯದ ಮಳೆಯನ್ನು ಕಳುಹಿಸುವಂತೆ ಆಜ್ಞೆಮಾಡುತ್ತಾನೆ.
ವಾಯುದೇವನನ್ನು ಕರೆದು ಇಡೀ ಜಗತ್ತುಬುಗುರಿಯ ಹಾಗೆ ತಿರುಗುವಂತೆ ಭೀಕರವಾದ ಸುಂಟರಗಾಳಿಯನ್ನು ಬೀಸಬೇಕೆಂದು ಕೇಳುತ್ತಾನೆ. ಈ ಕೆಂಡಗಣ್ಣಯ್ಯನ ಮಾತನ್ನು ನಡೆಸಿಕೊಡುವಿರಾ ಎಂದು ಕೇಳಿದಾಗ ದೇವೇಂದ್ರ ಮತ್ತು ವಾಯುದೇವರಿಬ್ಬರೂ ಒಪ್ಪಿಕೊಂಡು ನೀವೊಪ್ಪುದಂಗೆ ಮಾಡುತ್ತೇವೆ ಎಂದು ಹೇಳುತ್ತಾರೆ.
Question 3.
ಒನೊನ್ ಚಂಡುನ ಗಾತ್ರ ಹನಿಗಳು.
Answer:
ಈ ಮೇಲಿನ ಸಾಲನ್ನು “ಮಲೆಯ ಮಾದೇಶ್ವರ” ಜಾನಪದ ಮಹಾಕಾವ್ಯದ ಭಾಗವಾದ ‘ಶಿಶುಮಕ್ಕಳಿಗೊಲಿದ ಮಾದೇವ’ದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ : ಮಲೆಯ ಮಾದೇಶ್ವರನು ತನ್ನ ಮಕ್ಕಳಿಗೆ ತನ್ನ ಮೇಲಿರುವ ಪ್ರೀತಿ, ಭಕ್ತಿಗಳನ್ನು ಪರೀಕ್ಷೆ ಮಾಡುವ ಉದ್ದೇಶದಿಂದ ದೇವೇಂದ್ರನಿಗೆ ಮಾಯದ ಮಳೆಯನ್ನು ಸುರಿಸುವಂತೆ ಆದೇಶ ನೀಡುತ್ತಾನೆ.
ವಾಯುದೇವನಿಗೆ, ಭಯಂಕರವಾದ ಬಿರುಗಾಳಿಯನ್ನು ಬೀಸುವಂತೆಯೂ, ಗುಡುಗಾಜಮ್ಮ ಮತ್ತು ಬೊಮ್ಮರಾಯರಿಗೆ ಗುಡುಗು ಮತ್ತು ಸಿಡಿಲುಗಳನ್ನೂ ತರುವಂತೆಯೂ ಆಜ್ಞಾಪಿಸಿದನು.ಕಾರ್ಗತ್ತಲು ಜೋರಾಗಿ ಸುರಿಯಲಾರಂಭಿಸಿದ ಮಳೆಯ ಒಂದೊಂದು ಹನಿಯೂ ಚೆಂಡಿನ ಗಾತ್ರದಷ್ಟಿತ್ತೆಂದು ಕವಿ ವರ್ಣಿಸುತ್ತಾನೆ.ಈ ಸಂದರ್ಭದಲ್ಲಿ ಬಂದ ಮಾತು ‘ಒನೊನ್ ಚಂಡುನ ಗಾತ್ರ ಹನಿಗಳು’.
Question 4.
ನೀನಿಂತ ಬಂಧಾನ ಕೊಟ್ಯಪ್ಪ.
Answer:
ಪ್ರಸ್ತುತ ವಾಕ್ಯವನ್ನು “ಮಲೆಯ ಮಾದೇಶ್ವರ” ಜಾನಪದ ಮಹಾಕಾವ್ಯದ ಭಾಗವಾದ ‘ಶಿಶುಮಕ್ಕಳಿಗೊಲಿದ ಮಾದೇವ’ದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ : ಮಾಯದ ಮಳೆಯಿಂದ ತೊಂದರೆಗೊಳಗಾದ ಬೇಡರ ಕನ್ನಯ್ಯ, ಕಾರಯ್ಯ ಮತ್ತು ಬಿಲ್ಲಯ್ಯರು ಮಾದೇಶ್ವರನನ್ನು ಕುರಿತು ಹೇಳುವರು.
ಮಾದೇಶ್ವರನನ್ನು ಪೂಜಿಸಲು ಹೂ ಕೊಯ್ಯಲು ಕಡ್ಡಿಹಳ್ಳಕ್ಕೆ ಹೋದಾಗ ಕನ್ನಯ್ಯ, ಕಾರಯ್ಯ ಬಿಲ್ಲಯ್ಯರು ಮಳೆಯ ಪ್ರವಾಹವು ತಮ್ಮನ್ನು ಕೊಚ್ಚಿಕೊಂಡು ಹೋಗಬಹುದೆಂದು ಕೊಳ್ಳುತ್ತಾರೆ. ಬಂಧುಬಳಗ ಇಲ್ಲದ ತಮಗೆ ನೀನಿಂಥ (ಬಂಧನವನ್ನು) ಸ್ಥಿತಿಯನ್ನು ತಂದೊಡ್ಡಬಹುದೇ ಎಂದು ಮಾದೇಶ್ವರನಲ್ಲಿ ಕೇಳುವಾಗ ಈ ಮೇಲಿನ ವಾಕ್ಯ ಬಂದಿದೆ.
Question 5.
ಸತ್ಯವುಳ್ಳ ಬ್ಯಾಡ್ರ ಕನ್ನಯ್ಯ.
Answer:
ಜಾನಪದ ಮಹಾಕಾವ್ಯವಾದ “ಮಲೆಯ ಮಾದೇಶ್ವರ’ದ ಆಯ್ದ ಭಾಗವಾದ್’ಶಿಶುಮಕ್ಕಳಿಗೊಲಿದ ಮಾದೇವ’ದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ : ಶಿವನ ಆದೇಶದಂತೆ ದೇವೇಂದ್ರನು ಸುರಿಸಿದ ಮಳೆಯ ಪ್ರವಾಹದಲ್ಲಿ ಸಿಲುಕಿದ ಬೇಡರ ಕನ್ನಯ್ಯನು, ಮಾದೇಶ್ವರನು ನೀರಿನಲ್ಲಿ ಮುಳುಗಿ ಹೋದುದನ್ನು ಕಂಡು ಬಾಯಿ ಬಾಯಿ ಬಡಿದುಕೊಳ್ಳುತ್ತಾನೆ.
ಸತ್ಯವುಳ್ಳ ಬೇಡರ ಕನ್ನಯ್ಯನು, ಮಾದೇಶ್ವರನು ಬಂದು ಮುಖವನ್ನು ತೋರಿಸದಿದ್ದರೆ ತಾನು ಪ್ರಾಣ ಬಿಡುವೆನೆಂದು ಹೇಳುತ್ತಾನೆ. ಈ ಸಂದರ್ಭದಲ್ಲಿ ಭಕ್ತನಾದಂತಹ ಬೇಡರ ಕನ್ನಯ್ಯನಿಗೆ ಸತ್ಯವುಳ್ಳ ಎನ್ನುವ ವಿಶೇಷಣವನ್ನು ಸೇರಿಸಿ ಹೇಳಿದುದಾಗಿದೆ.
Question 6.
ಕಣ್ಣಲ್ಲಿ ನೀರ ಕೆಡುಗಿದರು.
Answer:
ಪ್ರಸ್ತುತ ಸಾಲನ್ನು “ಮಲೆಯ ಮಾದೇಶ್ವರ” ಜಾನಪದ ಮಹಾಕಾವ್ಯದ ಭಾಗವಾದ ‘ಶಿಶುಮಕ್ಕಳಿಗೊಲಿದ ಮಾದೇವ’ದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಮಾಯದ ಮಳೆಯ ಪ್ರವಾಹಕ್ಕೆ ಸಿಲುಕಿ ಮಾದೇಶ್ವರನು ಮುಳುಗಿದಾಗ ಸತ್ಯವಂತನಾದ ಬೇಡರ ಕನ್ನಯ್ಯನು ಬಾಯಿ ಬಾಯಿ ಬಡಿದುಕೊಂಡು ‘ನನ್ನ ಅಪ್ಪನ್ನ ಎಳೆದುಕೊಂಡಂಗೆ ಈ ಗಂಗೆ ನನ್ನನ್ನೂಎಳೆದುಕೊಂಡುಬಿಡುತ್ತಾಳೆ ಎನ್ನುತ್ತಾನೆ. ಬರಿಯ ಕಲ್ಲನ್ನು ಬಲವಾಗಿ ಹಿಡಿದುಕೊಂಡು ನಿಲ್ಲುತ್ತಾನೆ. ಈ ದ್ರಶ್ಯವನ್ನು ಕಾರಯ್ಯ ಬಿಲ್ಲಯ್ಯ ನೋಡಿ ಕಣ್ಣಲ್ಲಿ ನೀರು ಸುರಿಸುತ್ತಾರೆ.
Question 7.
ಹೆತ್ತವುನಂಗೆ ಸಲುವೀದೆ.
Answer:
ಈ ಮೇಲಿನ ಸಾಲನ್ನು “ಮಲೆಯ ಮಾದೇಶ್ವರ” ಜಾನಪದ ಮಹಾಕಾವ್ಯದ ಭಾಗವಾದ ‘ಶಿಶುಮಕ್ಕಳಿಗೊಲಿದ ಮಾದೇವ’ದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ : ತಮ್ಮ ತಂದೆಯಾದ ಮಾದೇಶ್ವರನು ನೀರಿನ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವುದನ್ನು ಕಂಡ ಕನ್ನಯ್ಯ, ಕಾರಯ್ಯ ಹಾಗೂ ಬಿಲ್ಲಯ್ಯರು ಅತೀವ ವೇದನೆಯನ್ನು ಅನುಭವಿಸುತ್ತಾರೆ. ಹಾಲು, ಬೆಣ್ಣೆ ಕೊಟ್ಟು ತಮ್ಮನ್ನು ಬೆಳೆಸಿದ ಮಾದೇವನ ಉಪಕಾರ ಅವರ ನೆನಪಿಗೆ ಬರುತ್ತದೆ. ಹೆತ್ತ ತಾಯಿಯಂತೆ ತಮ್ಮನ್ನು ಸಲಹಿದ ಮಾದೇವ ಎಂದು ಹೇಳುವಾಗ ಈ ಮೇಲಿನ ಸಾಲು ಬಂದಿದೆ.
Question 8.
ಗುಡಿಗೆ ಬಂದಾರು ಮಾದೇವ.
Answer:
“ಮಲೆಯ ಮಾದೇಶ್ವರ” ಜಾನಪದ ಮಹಾಕಾವ್ಯದ ಭಾಗವಾದ ‘ಶಿಶುಮಕ್ಕಳಿಗೊಲಿದ ಮಾದೇವ’ ಕಾವ್ಯಭಾಗದಿಂದ ಈ ಮೇಲಿನ ಮಾತನ್ನು ಆರಿಸಿಕೊಳ್ಳಲಾಗಿದೆ.
ಸಂದರ್ಭ : ಮಾಯದ ಮಳೆಯನ್ನು ಸುರಿಸಿ ತನ್ನ ಮಕ್ಕಳನ್ನು ಪರೀಕ್ಷಿಸಿದ ಮಾದೇವನು ಅವರಿಗೆ ತನ್ನಲ್ಲಿರುವ ಪ್ರೀತಿ, ಭಕ್ತಿಯನ್ನು ಕಂಡು ಆನಂದವನ್ನು ಹೊಂದುತ್ತಾನೆ. ಮಾಯದ ಮಳೆಯನ್ನು ಸನ್ನೆ ಮಾಡಿ ಮೇಲೋಕಕ್ಕೆ ಕಳುಹಿಸಿದ ಶಿವನು ಮಕ್ಕಳನ್ನು ಪ್ರೀತಿಯಿಂದ ತನ್ನ ಹೆಗಲ ಮೇಲೆ ಕೂರಿಸಿಕೊಂಡು ಗುಡಿಗೆ ಹಿಂದಿರುಗಿದನೆಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.
IV. ಐದು-ಆರು ವಾಕ್ಯಗಳಲ್ಲಿ ಉತ್ತರಿಸಿ:
Question 1.
ಮಾದಪ್ಪ ತನ್ನ ಶಿಶುಮಕ್ಕಳನ್ನು ಪರೀಕ್ಷಿಸಲು ಕಾರಣಗಳೇನು?
Answer:
ಪೂರ್ವ ದಿಕ್ಕಿನಲ್ಲಿರುವ ಬೆಟ್ಟದ ಮೇಲೆ ಯೋಗನಿದ್ದೆಯಲ್ಲಿ ಮಲಗಿರುವ ಮಾದೇಶ್ವರನು ಚಿಂತಿಸುತ್ತಾ ಇದ್ದನು. ನಿಜಸ್ಥಿತಿಯನ್ನು ನೋಡಿ ತನ ಕಣ್ಣನ್ನೇ ಕಿತ್ತು ದಾನ ಮಾಡಿರುವ ಬೇಡರ ಕನ್ನಯ್ಯನನ್ನು ತಾನು ದತ್ತು ಮಗನನ್ನಾಗಿ ಪಡೆದಿದ್ದೇನೆ. ಅಂತೆಯೇ ಸತ್ಯವಂತೆಯಾದ ಸಂಕಮ್ಮನ ಮಕ್ಕಳಾದ ಕಾರಯ್ಯ ಮತ್ತು ಬಿಲ್ಲಯ್ಯರನ್ನು ತಾನು ದತ್ತು ಪುತ್ರರನ್ನಾಗಿ ಪಡೆದಿರುವೆ.
ಈ ಮೂರು ಮಂದಿ ಎಂತಹ ಸಂದರ್ಭ ಒದಗಿ ಬಂದರೂ ತನ್ನನ್ನು ಬಿಟ್ಟು ಹೋಗಲಾರರು ಎಂದು ಅರಿತಿದ್ದರೂ ಶಿವನು ಅವರನ್ನು ಪರೀಕ್ಷಿಸುವುದಕ್ಕೆ ಮುಂದಾದನು. ತನ್ನನ್ನು ಪೂಜಿಸಲು ಹೂ ತರುವುದಕ್ಕೆ ಕಡ್ಡಿಹಳ್ಳಕ್ಕೆ ಹೋದ ಮಕ್ಕಳಿಗೆ ತನ್ನ ಮೇಲಿರುವ ಭಕ್ತಿ ಹಾಗೂ ಪ್ರೀತಿಯ ನಿಷ್ಠೆಯನ್ನು ಪರೀಕ್ಷಿಸಲು ಶಿವನು ಮುಂದಾದನು.
Question 2.
ಮಾದೇವ ತನ್ನ ಶಿಶುಮಕ್ಕಳನ್ನು ಪರೀಕ್ಷಿಸಲು ಯಾರಾರ ಸಹಕಾರವನ್ನು ಹೇಗೆ ಪಡೆದನು?
Answer:
ಮಾಯಾದ ಮಳೆಯನ್ನು ಕರೆದು ಈ ಮೂರು ಮಕ್ಕಳನ್ನು ಪರೀಕ್ಷಿಸಬೇಕೆಂದು ಮಾದೇವ ದೇವತೆಗಳ ಒಡೆಯನಾದ ದೇವೇಂದ್ರನ ಬಳಿಗೆ ಹೋಗುತ್ತಾನೆ. ಮಾಯದ ಮಳೆಯನ್ನು ಕಳುಹಿಸುವಂತೆ ದೇವೇಂದ್ರನಿಗೆ ಆಜ್ಞೆ ಮಾಡಿದ ಶಿವನು, ವಾಯುದೇವನನ್ನು ಕರೆದು ಇಡೀ ಜಗತ್ತು ಬುಗುರಿಯಂತೆ ತಿರುಗುವ ಹಾಗೆ ಭೀಕರವಾದ ಸುಂಟರಗಾಳಿಯನ್ನು ಬೀಸಬೇಕೆಂದು ಆದೇಶ ಮಾಡುತ್ತಾನೆ.
ಅವರಿಬ್ಬರೂ ಮುಕ್ಕಣ್ಣನ ಮಾತನ್ನು ನಡೆಸುತ್ತೇವೆ ಎಂದರು. ಗುಡುಗಿನ ಒಡತಿಯಾದ ಗುಡುಗಾಜಮ್ಮನನ್ನು ಕರೆದು “ನೀನು ಜೋರಾಗಿ ಗುಡುಗಬೇಕು” ಎಂದು. ನಿನ್ನ ಮಗ ಬೊಮ್ಮರಾಯನನ್ನು ಜೊತೆಗೂಡಿಸಿಕೊಂಡು ಜೋರಾಗಿ ಸಿಡಿಲನ್ನು ಉಂಟುಮಾಡಬೇಕೆಂದು ಆಜ್ಞಾಪಿಸಿದನು. ಹೀಗೆ ಮಾದೇವ ತನ್ನ ಶಿಶು ಮಕ್ಕಳನ್ನು ಪರೀಕ್ಷಿಸಲು ಇವರೆಲ್ಲರ ಸಹಕಾರವನ್ನು ಪಡೆದನು.
Question 3.
ಮಳೆ ಉಂಟು ಮಾಡಿದ ಪರಿಣಾಮಗಳನ್ನು ವಿವರಿಸಿ.
Answer:
ಮಾದೇವನ ಆಣತಿಯಂತೆ ಕಾರ್ಗತ್ತಲೆಯು ಆವರಿಸಿ ಜೋರಾದ ಮಳೆಯು ಸುರಿಯಲಾರಂಭಿಸಿತು. ಸುರಿಯುತ್ತಿರುವ ಮಳೆಯ ಒಂದೊಂದು ಹನಿಯು ಒಂದೊಂದು ಚೆಂಡಿನ ಗಾತ್ರದಷ್ಟಿತ್ತು. ಗಂಗೆಯು ಸುರಿಯುವ ರಭಸಕ್ಕೆ ಭೂಮಿ ಆಕಾಶಗಳು ಒಂದಾದವು. ಕಾಡು ಪ್ರಾಣಿಗಳು ನೀರಿನಲ್ಲಿ ತೇಲಿ ಹೋದವು. ದೊಡ್ಡ ದೊಡ್ಡ ಮದ್ದಾನೆಗಳ ಹಿಂಡನ್ನೇ ಗಂಗಮ್ಮ ತಾಯಿ ತೇಲಿಸಿಕೊಂಡು ಮುಂದೆ ಹರಿದಳು. ಗುಡುಗು ಸಿಡಿಲಿನ ಕಾರಣದಿಂದ ನಾಲ್ಕು ಲೋಕಗಳು ನಡುಗಿದವು. ಮಾದಪ್ಪನ ಗುಡಿಯು ಮುಚ್ಚಿಹೋಯಿತು. ಸ್ವತಃ ಮಾದೇವನೆ ನೀರಿನ ಸುಳಿಯಲ್ಲಿ ಸಿಕ್ಕಿ ಗರಗರನೆ ತಿರುಗುತ್ತಿದ್ದಾನೆ. ಈ ರೀತಿಯ ಪರಿಣಾಮವನ್ನು ಮಳೆ ಉಂಟು ಮಾಡಿತು.
Question 4.
ಮಳೆಯಲ್ಲಿ ಸಿಲುಕಿದ ಮಾದೇವನ್ನು ಶಿಷ್ಯರು ಹೇಗೆ ರಕ್ಷಿಸಿದನು?
Answer:
ಮಳೆಯ ಭೀಕರತೆಯನ್ನು ಗಮನಿಸಿದ ಕಾರಯ್ಯ ಬಿಲ್ಲಯ್ಯರು ಕಣ್ಣೀರ್ಗರೆದು “ನಮ್ಮನ್ನು ಬಿಟ್ಟು ನೀನು ಗಂಗೆಯಲ್ಲಿ ಹೋದೆಯಲ್ಲಾ, ಮಾದೇವ” ಎಂದು ಗೋಗರೆದರು. ಗುರುವಿಗೆ ಶಿಷ್ಯರೂ, ಶಿಷ್ಯರಿಗೆ ಗುರುವೂ ಇಲ್ಲದ ಹಾಗಾಯಿತು ಎಂದು ದುಃಖಿಸಿದರು. “ನಾವು ಸತ್ತರೂ ಚಿಂತೆಯಿಲ್ಲ.ನಮ್ಮಪ್ಪನಾದ ಮಾದೇವನನ್ನು ನಾವು ಇವತ್ತು ಹಿಡಿದು ಉಳಿಸೋಣ” ಎಂದು ನಿಶ್ಚಯಿಸಿದರು. ಈ ಜಗತ್ತನ್ನು ಆಳುವ ಗುರುದೇವನ ನಾನು ಹೋಗಿ ಇವತ್ತು ಹಿಡಿಯೋಣ ಎಂದರು. ಹೀಗೆ ಮಳೆಯಲ್ಲಿ ಸಿಲುಕಿದ ಮಾದೇವನನ್ನು ರಕ್ಷಿಸಲು ಶಿಷ್ಯರು ಮುಂದಾದರು.
Question 5.
ಮಾದೇವ ಶಿಷ್ಯರನ್ನು ಹೇಗೆ ಸಲಹಿದನು? ವಿಶ್ಲೇಷಿಸಿ.
Answer:
ಮಾದೇವ ನೀರಿನಲ್ಲಿ ಹೋಗುತ್ತಿರುವುದನ್ನು ನೋಡಿ ಶಿಷ್ಯರು ರಕ್ಷಿಸಲು ಮುಂದಾಗುತ್ತಾರೆ. ಆ ಮಾದೇವ ಬೇಡರ ಕನ್ನಯ್ಯನ್ನು ದತ್ತು ಮಗನಾಗಿ ಪಡೆದಿದ್ದಾನೆ. ಸತ್ಯವಂತೆ ಸಂಕವ್ವನ ಮಕ್ಕಳಾದ ಕಾರಯ್ಯ ಮತ್ತು ಬಿಲ್ಲಯ್ಯರನ್ನು ದತ್ತು ಪುತ್ರರನ್ನಾಗಿ ಪಡೆದಿದ್ದಾನೆ. ಗೆಡ್ಡೆ ಗೆಣಸು ಕೊಡುವವರಿಲ್ಲದ ಸಂದರ್ಭದಲ್ಲಿ ದತ್ತು ಪುತ್ರರಿಗೆ ಹಾಲು ತುಪ್ಪಕೊಟ್ಟು ಸಲಹಿದ್ದಾನೆ. ಎಂತಹ ಸಂದರ್ಭದಲ್ಲೂ ಆ ದತ್ತು ಪುತ್ರರು ಮಾದೇವನನ್ನು ಬಿಟ್ಟು ಹೋಗುತ್ತಿರಲಿಲ್ಲ.
ಅಂತಹ ಮಕ್ಕಳು ಶಿವನ ಮೇಲೆ ಭಕ್ತಿ, ಪ್ರೀತಿಯನ್ನು ತೋರಿಸಿದ್ದರು. ಆ ಕಾರಣಕ್ಕಾಗಿ ಮಾದೇವನು ಮಕ್ಕಳನ್ನು ಎಡಬಲದಲ್ಲಿ ತಬ್ಬಿಕೊಂಡು ಮಕ್ಕಳಿಗೆ (ಕಾರಯ್ಯ, ಬಿಲ್ಲಯ್ಯ) ಒಲಿದನು. ಮಾಯದ ಮಳೆಗೆ ಸನ್ನೆ ಮಾಡಿದ ಶಿವನು ಅದನ್ನು ಮೇಲೋಕಕ್ಕೆ ಕಳುಹಿಸಿದನು. ಕಾರಯ್ಯನನ್ನು ಕಂಡರೆ ಶಿವನಿಗೆ ಕರುಣೆ ಉಕ್ಕಿ ಹರಿಯುತ್ತದೆ. ಬಿಲ್ಲಯ್ಯನನ್ನು ಕಂಡಾಗ ಪ್ರೇಮ ತುಳುಕುತ್ತಿತ್ತು. ಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಂಡು ಮಾದೇವನು ತನ್ನ ಗುಡಿಗೆ ಬಂದನು. ಹೀಗೆ ಮಾದೇವ ಶಿಷ್ಯರನ್ನು ಸಲುಹಿದನು.
V. ಭಾಷಾಭ್ಯಾಸ:
ಗ್ರಾಮ್ಯ – ಗ್ರಾಂಥಿಕ ಪದಗಳು: ಆಡು ಮಾತಿಗೂ, ಬರಹ ಭಾಷೆಗೂ ವ್ಯತ್ಯಾಸವಿರುತ್ತದೆ. ಬರಹದ ಭಾಷೆಗಿಂತ ಆಡುಮಾತಿಗೆ ಹೆಚ್ಚು ಮಹತ್ವವನ್ನು ಆಧುನಿಕ ಭಾಷಾ ಶಾಸ್ತ್ರಜ್ಞರು ನೀಡುತ್ತಾರೆ. ಉದಾ: ಏಗ-ಯೋಗ; ರವುಸು-ರಭಸ. ಈ ಪಠ್ಯದಲ್ಲಿ ಬರುವ ಗ್ರಾಮ್ಯ ಪದಗಳನ್ನು ಪಟ್ಟಿ ಮಾಡಿರಿ.
ಗ್ರಾಮ್ಯ ಪದಗಳು:
- ಓಡಿಸು – ಓಡಿಸಲಾಗು
- ಕಿತ್ತೋಸಿ – ಕಿತ್ತಿಹಾಕು (ಅಥವಾ ಹೊಡೆಹಾಕು)
- ತಿನ್ನೋಣ – ತಿನೋಣ
- ಪಟಕಿಸಿ – ಬೀಸಿ ಹಾಕು
- ಇಟ್ಟ – ಇಟ್ಟನು / ಇಟ್ಟಳು (ಬರಹ ಭಾಷೆಯಲ್ಲಿ “ಇಡಲಾಯಿತು”)
- ನಕ್ಕೋ – ನಕ್ಕನು / ನಕ್ಕಳು
- ಬದ್ಕತ್ತೆ – ಬದುಕುತ್ತಾಳೆ
- ಕೂತ್ಕೊಂಡ – ಕುಳಿತುಕೊಂಡನು
- ಕೊಂಡ – ತೆಗೆದುಕೊಂಡನು
- ಕಾತ್ತಿದ್ದು – ಕಾಯುತ್ತಿತ್ತು
ಜಾನಪದ ಕಾವ್ಯ – ಪರಿಚಯ: Poetry – Introduction
‘ಮಲೆಯ ಮಾದೇಶ್ವರ’ ಮಹಾಕಾವ್ಯದಲ್ಲಿ ೧೪ ಕಥಾ ಭಾಗಗಳಿವೆ. ಒಂದೊಂದು ಕಥಾ ಭಾಗವನ್ನು ಒಂದೊಂದು ಸಾಲು ಎಂದು ಕರೆಯುತ್ತಾರೆ. ಒಂದೊಂದು ಸಾಲಿನಲ್ಲಿ ಅನೇಕ ಭಾಗ ಅಥವಾ ಕವಲುಗಳಿದ್ದು ಅವನ್ನು ‘ಕವಟ್ಟು’ ಎಂದು ಕರೆದಿದ್ದಾರೆ.
ಸಂಕಮ್ಮನ ಮಕ್ಕಳಾದ ಕಾರಯ್ಯ ಬಿಲ್ಲಯ್ಯರನ್ನು ಮಾದೇಶ್ವರ ತನ್ನ ಶಿಶು ಮಕ್ಕಳನ್ನಾಗಿ ಮಾಡಿಕೊಳ್ಳುತ್ತಾನೆ. ಅವರನ್ನು ಪರೀಕ್ಷೆಗೆ ಒಡ್ಡಿದ ಸಂದರ್ಭ ಇದಾಗಿದೆ.
ಡಾ. ಪಿ. ಕೆ. ರಾಜಶೇಖರ (೧೯೪೭) ಪ್ರಸಿದ್ಧ ಜಾನಪದ ತಜ್ಞರು. ಪಿರಿಯಾಪಟ್ಟಣದಲ್ಲಿ ಜನಿಸಿದ ಇವರು ಜನಪದ ಮಹಾಕಾವ್ಯಗಳಾದ ಮಲೆಯ ಮಾದೇಶ್ವರ, ಜನಪದ ಮಹಾಭಾರತ, ಜನಪದ ರಾಮಾಯಣ, ಪಿರಿಯಾಪಟ್ಟಣ ಕಾಳಗ, ಬೆಟ್ಟದ ಚಾಮುಂಡಿ ಮುಂತಾದ ಕೃತಿಗಳನ್ನು ಸಂಪಾದಿಸಿದ್ದಾರೆ.